ಮತ್ತೆ ಹಾಡಿತು ಕೋಗಿಲೆ (ಚಲನಚಿತ್ರ)
ಮತ್ತೆ ಹಾಡಿತು ಕೋಗಿಲೆ (ಚಲನಚಿತ್ರ) | |
---|---|
ಮತ್ತೆ ಹಾಡಿತು ಕೋಗಿಲೆ | |
ನಿರ್ದೇಶನ | ಭಾರ್ಗವ |
ನಿರ್ಮಾಪಕ | ಎಸ್.ಶಂಕರ್ |
ಪಾತ್ರವರ್ಗ | ವಿಷ್ಣುವರ್ಧನ್ ರೂಪಿಣಿ, ಭವ್ಯ ಅನಂತನಾಗ್, ರಮೇಶ್ ಭಟ್ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಡಿ.ವಿ.ರಾಜಾರಾಂ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಶಂಕರಿ ಪ್ರೊಡಕ್ಷನ್ಸ್ |
ಮತ್ತೆ ಹಾಡಿತು ಕೋಗಿಲೆ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಎಚ್. ಆರ್. ಭಾರ್ಗವ ಇದನ್ನು ನಿರ್ದೇಶಿಸಿದ್ದಾರೆ. ಇದನ್ನು ಎಸ್.ಶಂಕರ್ ನಿರ್ಮಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ವಿಷ್ಣುವರ್ಧನ್, ಬೇಬಿ ಶ್ಯಾಮಿಲಿ, ಅನಂತನಾಗ್, ಭವ್ಯ ಮತ್ತು ರೂಪಿಣಿ ಇದ್ದಾರೆ. ಅಂದಿನ ಸೂಪರ್ ಸ್ಟಾರ್ ಗಳಾದ ಅನಂತನಾಗ್ ಮತ್ತು ವಿಷ್ಣುವರ್ಧನ್ ಈ ಚಿತ್ರದಲ್ಲಿ ಮೊದಲ ಬಾರಿಗೆ ಜತೆಯಾಗಿ ಅಭಿನಯಿಸಿದ್ದಾರೆ. (ಕೆಲವು ವರ್ಷಗಳ ನಂತರ ಅವರು ಮತ್ತೆ ಒಟ್ಟಾಗಿ "ನಿಷ್ಕರ್ಷ" ಚಿತ್ರದಲ್ಲಿ ಅಭಿನಯಿಸಿದರು).
ನಿರ್ದೇಶಕ ಭಾರ್ಗವ ಅವರು ತಿಳಿಸಿದಂತೆ, ಅವರು ತಾವು ಕೂಡ ನಿರ್ಮಾಣದಲ್ಲಿ ಭಾಗಿಯಾಗಿದ್ದ "ನಾ ನಿನ್ನ ಮರೆಯಲಾರೆ" ಚಿತ್ರವನ್ನು ಬಹಳ ಇಷ್ಟ ಪಟ್ಟಿದ್ದು , ಚಿ. ಉದಯಶಂಕರ್ ಅವರನ್ನು ಅಂತಹದೇ ಮತ್ತೊಂದು ಚಿತ್ರಕಥೆ ( ಬೈಕ್ ಅನ್ನು ಸದಾ ಸಂಗಾತಿಯಾಗಿ ಹೊಂದಿರುವ ನಾಯಕ ಮತ್ತು ನಾಯಕಿಯರ ದುರಂತ ಪ್ರೇಮಕಥೆ)ಗಾಗಿ ಕೇಳಿಕೊಂಡರು. ಆಗ ಚಿ. ಉದಯಶಂಕರ್ ಅವರು ತಾವು ರಾಜಕುಮಾರ್ ಅವರಿಗಾಗಿ ಬರೆದಿದ್ದ , ಆದರೆ ಅದಾಗಲೇ ಅಂತಹದೊಂದು ಕತೆಯ ಚಿತ್ರ "ದೇವರ ಮಕ್ಕಳು " ಅನ್ನು ಮಾಡಿರುವ ಕಾರಣ ರಾಜಕುಮಾರ್ ಅವರು ತಿರಸ್ಕರಿಸಿದ್ದ ಕಥೆಯನ್ನು ಅವರಿಗೆ ಕೊಟ್ಟರು.[೧]
ಪಾತ್ರವರ್ಗ
[ಬದಲಾಯಿಸಿ]- ವಿಷ್ಣುವರ್ಧನ್ ಆನಂದ್ ಆಗಿ
- ಅನಂತನಾಗ್ ಪ್ರಸನ್ನಕುಮಾರ್ ಆಗಿ
- ಭವ್ಯ ಕವಿತಾ ಆಗಿ
- ರೂಪಿಣಿ ಸಂಗೀತಾ ಆಗಿ
- ಬೇಬಿ ಶ್ಯಾಮಿಲಿ ಪಲ್ಲವಿ ಆಗಿ
- ಸವಿತಾ ಪಾತ್ರದಲ್ಲಿ ಸತ್ಯಶ್ರೀ
- ಮುಖ್ಯಮಂತ್ರಿ ಚಂದ್ರು ಪ್ರದೀಪ್ ಆಗಿ
- ರಮೇಶ್ ಭಟ್ ಗೋಪಾಲ್ ಆಗಿ
- ವಿಶ್ವಪ್ರಸಾದ ಆಗಿ ಅಶೋಕ್ ರಾವ್
- ದೊಡ್ಡಣ್ಣ ಸಂತೋಷ್ ಆಗಿ
ಹಾಡುಗಳು
[ಬದಲಾಯಿಸಿ]ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದವರು ರಾಜನ್-ನಾಗೇಂದ್ರ ಮತ್ತು ಹಾಡುಗಳನ್ನು ಬರೆದವರು ಚಿ.ಉದಯಶಂಕರ್.
ಹಾಡುಗಳ ಪಟ್ಟಿ | |||
---|---|---|---|
ಸಂ. | ಹಾಡು | ಹಾಡಿದವರು | ಸಮಯ |
1. | "ಬಾ ನನ್ನ ಸಂಗೀತ" | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಂದ್ರಿಕಾ ಗುರುರಾಜ್ | |
2. | "ಹಾಡುವ ಆಸೆ" | ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ | |
3. | "ನಾನಿಂದು ನಿನ್ನಿಂದ" | ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ | |
4. | "ನವ ವಸಂತದ" | ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ | |
5. | "ನಿಮ್ಮನ್ನು ಕಂಡಾಗಲೆ" | ಎಸ್. ಪಿ. ಬಾಲಸುಬ್ರಹ್ಮಣ್ಯಂ | |
6. | "ತನನನ ಹಾಡುವೆ" | ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ |
ಉಲ್ಲೇಖನಗಳು
[ಬದಲಾಯಿಸಿ]