ಅನಂತ್ ನಾಗ್
Born ಅನಂತ್ ನಾಗರಕಟ್ಟೆ
ಸೆಪ್ಟೆಂಬರ್-೦೪-೧೯೪೮ಶಿರಾಲಿ, ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ)
Nationality ಭಾರತೀಯ Occupation ನಟ/ರಾಜಕಾರಣಿ Spouse ಗಾಯತ್ರಿ (m. ೧೯೮೭) Children ಅದಿತಿ ಅನಂತ್ ನಾಗ್
ಅನಂತನಾಗ್ (ಅನಂತ್ ನಾಗರಕಟ್ಟೆ) - ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು. ಇವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಹಿಂದೆ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಮತ್ತು ಬಿಜೆಪಿ ಪಕ್ಷದ ಪ್ರಚಾರಕರಾಗಿದ್ದಾರೆ.[ ೧]
ಅನಂತನಾಗ್ ಜನಿಸಿದ್ದು ಸೆಪ್ಟೆಂಬರ್ ೪, ೧೯೪೮ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು. ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಕನ್ನಡ,
ಕೊಂಕಣಿ ಮತ್ತು ಮರಾಠಿ ರಂಗಭೂಮಿಗಳಲ್ಲಿ ಎಂಟು ವರ್ಷಗಳ ಕಾಲ ತೊಡಗಿಸಿಕೊಂಡರು. ಅನಂತನಾಗ್ ಅವರ ಸಹೋದರ ಶಂಕರನಾಗ್ ಮತ್ತು ಪತ್ನಿ ಗಾಯತ್ರಿ ಅನಂತನಾಗ್ ಅವರೂ ಸಹ ಖ್ಯಾತ ಚಿತ್ರ ಕಲಾವಿದರು. [ ೨]
ನಟನಾಗಿ ಅನಂತ್ ಅವರು ಕನ್ನಡ , ಹಿಂದಿ , ಮರಾಠಿ , ತಮಿಳು , ತೆಲುಗು , ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸ್ಮರಣೀಯ ಪಾತ್ರಗಳಲ್ಲಿ ನಟಿಸಿದ್ದಾರೆ. [ ೩]
ಶ್ಯಾಂ ಬೆನೆಗಲ್ ನಿರ್ದೇಶನದ ಹಿಂದಿ ಭಾಷೆಯ ‘ಅಂಕುರ್’ ಅನಂತ್ ಅವರ ಮೊದಲ ಚಿತ್ರ. ಮುಂದೆ "ನಿಶಾಂತ್", "ಕಲಿಯುಗ್", "ಗೆಹ್ರಾಯಿ", "ಭೂಮಿಕಾ", "ಮಂಗಳಸೂತ್ರ್", "ಕೊಂಡುರಾ" ಮತ್ತು "ರಾತ್" ಸೇರಿದಂತೆ ಹಲವಾರು ಹಿಂದಿ ಚಿತ್ರಗಳಲ್ಲಿ ಅನಂತ್ ನಟಿಸಿದ್ದಾರೆ.
ಮರಾಠಿಯ ಅಮೋಲ್ ಪಾಲೇಕರ್ ನಿರ್ದೇಶನದ ‘ಅನಾಹತ್’, ಮಲಯಾಳಂನ ‘ಸ್ವಾತಿ ತಿರುನಾಳ್’, ತೆಲುಗಿನ ‘ಅನುಗ್ರಹಂ’, ಇಂಗ್ಲಿಷಿನ ‘ಸ್ಟಂಬಲ್’ ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಅನಂತನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಬಂದದ್ದು ೧೯೭೩ರಲ್ಲಿ ಮೂಡಿಬಂದ ಪಿ.ವಿ. ನಂಜರಾಜ ಅರಸ್ ಅವರ ‘ಸಂಕಲ್ಪ ’ ಚಿತ್ರದಿಂದ. ‘ಸಂಕಲ್ಪ’ ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ. ೧೯೭೫ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಅವರ ‘ಹಂಸಗೀತೆ ’ ಚಿತ್ರದಲ್ಲಿ ಸಂಗೀತಗಾರ ಭೈರವಿ ವೆಂಕಟಸುಬ್ಬಯ್ಯ ನ ಪಾತ್ರ ನಿರ್ವಹಿಸಿದರು. ೧೯೭೭ರ ದೊರೈ ಭಗವಾನರ ‘ಬಯಲುದಾರಿ ’ ಚಿತ್ರ ಜನಪ್ರಿಯವಾಯಿತು. ‘ಹಂಸಗೀತೆ ’, ‘ಕನ್ನೇಶ್ವರ ರಾಮ ’, ‘ಬರ ’, ‘ಅವಸ್ಥೆ ’, ‘ಉದ್ಭವ ’, ‘ಮಿಂಚಿನ ಓಟ ’, ‘ಆಕ್ಸಿಡೆಂಟ್ ’, ‘ಬೆಳದಿಂಗಳ ಬಾಲೆ ’, ‘ಮತದಾನ ’, ‘ಮೌನಿ ’, ‘ಅನುರೂಪ ’, ‘ರಾಮಾಪುರದ ರಾವಣ ’, ‘ಸಿಂಹಾಸನ ’, ‘ಅನ್ವೇಷಣೆ ’, ‘ಮಾಲ್ಗುಡಿ ಡೇಸ್ ’ ಧಾರಾವಾಹಿ ಸರಣಿ ಮುಂತಾದವು ವಸ್ತು ಮತ್ತು ನಿರೂಪಣೆಗಳಿಂದ ಗಮನ ಸೆಳೆದಿವೆ.
ಅನಂತನಾಗ್ – ಲಕ್ಷ್ಮೀ ತಾರಾಜೋಡಿ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದೆ. ಅವುಗಳಲ್ಲಿ ‘ಬೆಂಕಿಯ ಬಲೆ ’, ‘ಚಂದನದ ಗೊಂಬೆ ’, ‘ಇಬ್ಬನಿ ಕರಗಿತು ’, ಮುದುಡಿದ ತಾವರೆ ಅರಳಿತು ’, ‘ಮಕ್ಕಳಿರಲವ್ವ ಮನೆತುಂಬ ’, ‘ನೋಡಿ ಸ್ವಾಮಿ ನಾವಿರೋದು ಹೀಗೆ ’, ‘ನಾ ನಿನ್ನ ಬಿಡಲಾರೆ ’, ‘ಧೈರ್ಯಲಕ್ಷ್ಮಿ ’, ‘ಬಿಡುಗಡೆಯ ಬೇಡಿ ’ ಮುಂತಾದ 25ಕ್ಕೂ ಹೆಚ್ಚಿನ ಚಿತ್ರಗಳಿವೆ.
‘ಅರುಣರಾಗ ’, ‘ಅನುಪಮ ’, ‘ಮುಳ್ಳಿನಗುಲಾಬಿ ’, ‘ಹೊಸ ನೀರು ’ , ‘ಬಾಡದ ಹೂ ’, ‘ಜನ್ಮಜನ್ಮದ ಅನುಬಂಧ ’, ಮುಂತಾದವು ಅನಂತ್ ಇತರ ನಟಿಯರೊಂದಿಗೆ ನಟಿಸಿದ ಪ್ರಮುಖ ಚಿತ್ರಗಳು.
ನಾಯಕನಾಗಿ ಹಾಸ್ಯಪಾತ್ರಗಳಲ್ಲಿ ಯಶಸ್ವಿಯಾದ ಕನ್ನಡದ ನಟರಲ್ಲಿ ಅನಂತ್ ನಾಗ್ ಮೊದಲಿಗರು.
‘ಚಾಲೆಂಜ್ ಗೋಪಾಲಕೃಷ್ಣ ’, ‘ಗೋಲ್ ಮಾಲ್ ರಾಧಾಕೃಷ್ಣ ’, ‘ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು ’, ‘ಹೆಂಡ್ತೀಗ್ಹೇಳ್ಬೇಡಿ ’, ‘ಗೌರಿ ಗಣೇಶ ’, ‘ಗಣೇಶ ಸುಬ್ರಮಣ್ಯ ’, ‘ಮನೇಲಿ ಇಲಿ ಬೀದೀಲಿ ಹುಲಿ ’, ‘ಧೈರ್ಯಲಕ್ಷ್ಮಿ ’, ‘ನಾರದ ವಿಜಯ ’, ‘ಹಾಸ್ಯರತ್ನ ರಾಮಕೃಷ್ಣ ’, ‘ಯಾರಿಗೂ ಹೇಳ್ಬೇಡಿ ’, ‘ಗಾಯತ್ರಿ ಮದುವೆ’ , ‘ಇನ್ನೊಂದು ಮದುವೆ ’, ‘ಯಾರಿಗೆ ಸಾಲುತ್ತೆ ಸಂಬಳ ’, ‘ಉಂಡು ಹೋದ ಕೊಂಡುಹೋದ ’, ‘ಉದ್ಭವ ’, ‘ಹೆಂಡ್ತಿ ಬೇಕು ಹೆಂಡ್ತಿ ’, ‘ಸಮಯಕ್ಕೊಂದು ಸುಳ್ಳು ’ ಸೇರಿದಂತೆ ಹಲವಾರು ಚಿತ್ರಗಳನ್ನು ಈ ಪಟ್ಟಿಗೆ ಸೇರಿದವು.
ಅನಂತ್ ನಾಗ್ ಅವರು ಇತರ ನಟರೊಂದಿಗೆ ನಟಿಸಿರುವ ಚಿತ್ರಗಳಲ್ಲಿ ರಾಜ್ ಕುಮಾರ್ ಜೊತೆಗಿನ ‘ಕಾಮನಬಿಲ್ಲು ’,ವಿಷ್ಣುವರ್ಧನ್ ಜೊತೆಗಿನ ‘ನಿಷ್ಕರ್ಷ ’, ‘ಮತ್ತೆ ಹಾಡಿತು ಕೋಗಿಲೆ ’, ‘ಜೀವನದಿ ’, ರವಿಚಂದ್ರನ್ ಅವರ ‘ರಣಧೀರ ’, ಶಾಂತಿಕ್ರಾಂತಿ ’ ಪ್ರಮುಖವಾದವು. ‘ಮುಂಗಾರುಮಳೆ ’, ‘ಗಾಳಿಪಟ ’ ಮುಂತಾದ ಚಿತ್ರಗಳಲ್ಲಿ ಅವರು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾರತದ ಜನಪ್ರಿಯ ಧಾರಾವಾಹಿ ಗಳಲ್ಲೊಂದಾದ, ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅಭಿನಯಿಸಿದ್ದಲ್ಲದೆ ಕನ್ನಡದಲ್ಲಿಯೂ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿ ಶಾಸಕರಾದ ಅನಂತನಾಗ್, ನಂತರ ಜೆ.ಹೆಚ್.ಪಟೇಲ್ ಅವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದರು.
ಸಂಖ್ಯೆ
ವರ್ಷ
ಚಿತ್ರದ ಹೆಸರು
ಚಿತ್ರ ನಿರ್ಮಾಣ ಸಂಸ್ಥೆ
ನಿರ್ದೇಶನ
ನಿರ್ಮಾಪಕರು
ಸಂಗೀತ
ಛಾಯಗ್ರಹಣ
೧
1973
ಸಂಕಲ್ಪ
ಪಿ. ವಿ. ನಂಜರಾಜ್ ಅರಸ್
ಪಿ. ವಿ. ನಂಜರಾಜ್ ಅರಸ್
೨
1975
ದೇವರ ಕಣ್ಣು
ಭಗವತಿ ಪ್ರೊಡಕ್ಷನ್ಸ್
ವೈ.ಆರ್.ಸ್ವಾಮಿ
ಎಸ್.ಎನ್.ಪಾಲ್
ಟಿ.ಜಿ.ಲಿಂಗಪ್ಪ
ಚಿಟ್ಟಿಬಾಬು
೩
1975
ಹಂಸಗೀತೆ
ಅನಂತಲಕ್ಷ್ಮಿ ಫಿಲಂಸ್
ಜಿ.ವಿ.ಐಯ್ಯರ್
ಜಿ.ವಿ.ಐಯ್ಯರ್
ಬಾಲಮುರಳಿ ಕೃಷ್ಣ
ನಿಮಾಯ್ ಘೋಶ್
೪
1976
ಬಯಲು ದಾರಿ
ಅನುಪಮ ಮೂವೀಸ್
ದೊರೈ-ಭಗವಾನ್
ದೊರೆ-ಭಗವಾನ್
ರಾಜನ್-ನಾಗೇಂದ್ರ
೫
1977
ಕನ್ನೇಶ್ವರ ರಾಮ
ಶಾರದ ಮೂವೀಸ್
ಎಂ.ಎಸ್.ಸತ್ಯು
ಎಂ.ಭಕ್ತವತ್ಸಲ
ಬಿ.ವಿ.ಕಾರಾಂತ್
ಇಶಾನ್ ಆರ್ಯ
೬
1977
ಅನುರೂಪ
ಲಂಕೇಶ್ ಫಿಲಂಸ್
ಲಂಕೇಶ್
ಪಿ.ಲಂಕೇಶ್
ರಾಜೀವ್ ತಾರನಾಥ್
ಬಿ.ಸಿ.ಗೌರಿಶಂಕರ್
೭
1978
ಕುದುರೆಮುಖ
ಶ್ರೀ ಭಗವತಿ ಪ್ರೊಡಕ್ಷನ್ಸ್
ವೈ.ಆರ್.ಸ್ವಾಮಿ
ವೈ.ಆರ್.ಸ್ವಾಮಿ
ಟಿ.ಜಿ.ಲಿಂಗಪ್ಪ
ಆರ್.ಚಿಟ್ಟಿಬಾಬು
೮
1978
ಮಾತು ತಪ್ಪದ ಮಗ
ಭರತ ಸಿನಿ ಆರ್ಟ್ಸ್
ಪೇಕೇಟಿ ಶಿವರಾಂ
ಕೆ.ಆರ್.ಬಲಾನಿ
ಇಳಯರಾಜ
ಜೆ.ಸತ್ಯನಾರಾಯಣ
೯
1978
ಪ್ರೇಮಾಯಣ
ರೂಪಯನ್
ಗೀತಪ್ರಿಯ
ಎಂ.ಪ್ರಭಾಕರ್
ವಿಜಯಭಾಸ್ಕರ್
ಯು.ಎಮ್.ಎನ್.ಶರೀಫ್
೧೦
1978
ಮಧುರ ಸಂಗಮ
ಡಿ.ವಿ.ಆರ್.ಮೂವೀಸ್
ಟಿ.ಪಿ.ವೇಣುಗೋಪಾಲ್
ವಿ.ವಿಜಯಚಂದರ್
ರಾಜನ್-ನಾಗೇಂದ್ರ
ಎಮ್.ಎ.ರೆಹಮಾನ್
೧೧
1979
ನಾ ನಿನ್ನ ಬಿಡಲಾರೆ
ಸಪ್ತಸ್ವರ ಮೂವಿ ಮೇಕರ್ಸ್
ವಿಜಯ್
ಸಿ.ಜಯರಾಮ್
ರಾಜನ್-ನಾಗೇಂದ್ರ
ಎಸ್.ವಿ.ಶ್ರೀಕಾಂತ್
೧೨
೧೯೭೯
ಮುತ್ತು ಒಂದು ಮುತ್ತು
ಆರ್. ಎನ್. ಜಯಗೋಪಾಲ್
ಆರ್. ಎನ್. ಜಯಗೋಪಾಲ್
೧೩
1979
ಚಂದನದ ಗೊಂಬೆ
ಮಂತ್ರಾಲಯ ಆರ್ಟ್ ಮೂವೀಸ್
ದೊರೈ-ಭಗವಾನ್
ಎನ್.ಭಕ್ತವತ್ಸಲಂ
ರಾಜನ್-ನಾಗೇಂದ್ರ
೧೪
1980
ಮಿಂಚಿನ ಓಟ
ಸಂಕೇತ್
ಶಂಕರನಾಗ್
ಅನಂತನಾಗ್
ಎಲ್.ವೈದ್ಯನಾಥನ್
ಬಿ.ಸಿ.ಗೌರಿಶಂಕರ್
೧೫
1980
ಧೈರ್ಯ ಲಕ್ಷ್ಮಿ
ವಿಜಯವಾಣಿ ಕಂಬೈನ್ಸ್
ಗೋಪು
ಕೆ.ಎಸ್.ಅಶೋಕ್
ಜಿ.ಕೆ.ವೆಂಕಟೇಶ್
ಎಮ್.ಜಿ.ಬೆಂಜಮಿನ್
೧೬
1980
ಒಂದು ಹೆಣ್ಣು ಆರು ಕಣ್ಣು
ಮಹಿಜಾ ಫಿಲಂಸ್
ವಿ.ಮಧುಸೂದನರಾವ್
ಸಿ.ಹೆಚ್.ಪ್ರಕಾಶರಾವ್
ಎಸ್.ರಾಜೇಶ್ವರ ರಾವ್
ಎಸ್.ಎಸ್.ಲಾಲ್
೧೭
1980
ನಾರದ ವಿಜಯ
ಜೈನ್ ಕಂಬೈನ್ಸ್
ಸಿದ್ದಲಿಂಗಯ್ಯ
ಎನ್.ವೀರಸ್ವಾಮಿ
ಅಶ್ವತ್-ವೈದಿ
ಆರ್.ಮಧುಸೂದನ್
೧೮
1980
ಜನ್ಮ ಜನ್ಮದ ಅನುಬಂಧ
ಪುಷ್ಪ ಪ್ರೊಡಕ್ಷನ್ಸ್
ಶಂಕರನಾಗ್
ಎನ್.ಭಕ್ತವತ್ಸಲಂ
ಇಳಯರಾಜ
ಬಿ.ಸಿ.ಗೌರಿಶಂಕರ್
೧೯
1980
ಪ್ರೇಮಜ್ವಾಲೆ
ತುಮಕೂರು ಚಿತ್ರಾಲಯ
ಗೀತಪ್ರಿಯ
ಸಿ.ಪಿ.ಮೂಡಲಗಿರಿಯಪ್ಪ
ಎಮ್.ರಂಗರಾವ್
ಅಣ್ಣಯ್ಯ
೨೦
1981
ಅನುಪಮ
ವಿಜಯ ವಿನಾಯಕ ಮೂವಿ ಮೇಕರ್ಸ್
ರೇಣುಕಾಶರ್ಮ
ಜೆ.ಜಯಮ್ಮ
ಅಶ್ವತ್-ವೈದಿ
೨೧
1981
ಮರೆಯದ ಹಾಡು
ಕೆ.ವಿ.ಎಸ್.ಮೂವೀಸ್
ಆರ್.ಎನ್.ಜಯಗೋಪಾಲ್
ಕೆ.ವಿ.ಎಸ್.ಮೂವೀಸ್
ಜಿ.ಕೆ.ವೆಂಕಟೇಶ್
ಆರ್.ಎನ್.ಕೆ.ಪ್ರಸಾದ್
೨೨
1981
ಶ್ರೀಮಾನ್
ಗುರುಕರ್ ಫಿಲಂಸ್
ಗೀತಪ್ರಿಯ
ಮಂಜುಳ ಶಂಕರ್
ಉಪೇಂದ್ರಕುಮಾರ್
ಚಿಟ್ಟಿಬಾಬು
೨೩
1982
ಅಂದದ ಅರಮನೆ
ವರ್ಣಶ್ರೀ ಫಿಲಂಸ್
ವಿ.ಸೋಮಶೇಖರ್
ಪ್ರಮಿಳ ಶಂಕರ್
ಉಪೇಂದ್ರಕುಮಾರ್
ಬಿ.ಎಸ್.ಬಸವರಾಜ್
೨೪
1982
ಬಾಡದ ಹೂವು
ಕೆ.ಎಸ್.ಎನ್.ಮೂವೀಸ್
ಕೆ.ವಿ.ಜಯರಾಮ್
ಕೆ.ಎಸ್.ನಾರಾಯಣ್
ಅಶ್ವತ್-ವೈದಿ
ಬಿ.ಎಸ್.ಬಸವರಾಜ್
೨೫
1982
ಮುಳ್ಳಿನ ಗುಲಾಬಿ
ನವದುರ್ಗ ಪ್ರೊಡಕ್ಷನ್ಸ್
ವಿಜಯ್
ವಿಜಯರೆಡ್ಡಿ
ಸತ್ಯಂ
ಸಾಯಿ ಪ್ರಸಾದ್
೨೬
1982
ಬರ
ಎಂ.ಎಸ್.ಸತ್ಯು ಪ್ರೊಡಕ್ಷನ್ಸ್
ಎಂ.ಎಸ್.ಸತ್ಯು
ಎಂ.ಎಸ್.ಸತ್ಯು
ಅಶೋಕ್ ಗುಂಜಾಲ್
೨೭
1982
ನನ್ನ ದೇವರು
ರಾಜೇಶ್ವರಿ ಭಾಗ್ಯ ಕಲಾಮಂದಿರ
ಬಿ.ಮಲ್ಲೇಶ್
ಕೆ.ಎಸ್.ಅಶೋಕ್
ರಾಜನ್-ನಾಗೇಂದ್ರ
ಗೌರಿಶಂಕರ್
೨೮
1982
ಹಾಸ್ಯರತ್ನ ರಾಮಕೃಷ್ಣ
ವರ್ಣ ಪ್ರೊಡಕ್ಷನ್ಸ್
ಬಿ.ಎಸ್.ರಂಗ
ಬಿ.ಎಸ್.ರಂಗ
ಟಿ.ಜಿ.ಲಿಂಗಪ್ಪ
ಬಿ.ಎಸ್.ಹರಿದಾಸ್
೨೯
1982
ಬೆತ್ತಲೆ ಸೇವೆ
ಜನಪ್ರಿಯ ಮೂವೀಸ್
ಕೆ.ವಿ.ಜಯರಾಮ್
ಡಿ.ಟಿ.ಜಯಕುಮಾರ್
ರಾಜನ್-ನಾಗೇಂದ್ರ
ಬಿ.ಸಿ.ಗೌರಿಶಂಕರ್
೩೦
1983
ಸಿಂಹಾಸನ
ಅಜಂತ ಕಂಬೈನ್ಸ್
ಸಿ.ಆರ್.ಸಿಂಹ
ಎ.ಆರ್.ರಾಜು
ಅಶ್ವತ್-ವೈದಿ
ಎಸ್.ಯಾದವ್
೩೧
1983
ಅನ್ವೇಷಣೆ
ಸೌಮ್ಯ ಆರ್ಟ್ಸ್
ಟಿ.ಎಸ್.ನಾಗಾಭರಣ
ರಾಜಾ
ವಿಜಯಭಾಸ್ಕರ್
ಎಸ್.ರಾಮಚಂದ್ರ
೩೨
1983
ಬೆಂಕಿಯ ಬಲೆ
ಮಂತ್ರಾಲಯ ಆರ್ಟ್ಸ್ ಕಂಬೈನ್ಸ್
ದೊರೈ-ಭಗವಾನ್
ರಮೇಶ್
ರಾಜನ್-ನಾಗೇಂದ್ರ
೩೩
1983
ಕಾಮನಬಿಲ್ಲು
ಪದ್ಮಾವತಿ ಸಿನಿ ಆರ್ಟ್ಸ್ ಫಿಲಂಸ್
ಚಿ.ದತ್ತರಾಜ್
ಜೆ.ಜಯಮ್ಮ
ಉಪೇಂದ್ರಕುಮಾರ್
ಬಿ.ಸಿ.ಗೌರಿಶಂಕರ್
೩೪
1983
ಭಕ್ತಪ್ರಹ್ಲಾದ
ವೈಷ್ಣವಿ ಮೂವೀಸ್
ವಿಜಯ್
ಎಸ್.ಎ.ಗೋವಿಂದರಾಜ್
ಟಿ.ಜಿ.ಲಿಂಗಪ್ಪ
೩೫
1983
ಇಬ್ಬನಿ ಕರಗಿತು
ವರಲಕ್ಷ್ಮಿ ಮೂವೀಸ್
ಕೆ.ವಿ.ಜಯರಾಮ್
ಮೋಹನ್
ರಾಜನ್-ನಾಗೇಂದ್ರ
ಚಿಟ್ಟಿಬಾಬು
೩೫
1983
ಮುದುಡಿದ ತಾವರೆ ಅರಳಿತು
ಕಲಾನಿಕೇತನ್
ಕೆ.ವಿ.ಜಯರಾಮ್
ಹೆಚ್.ಎಸ್.ಅನಂತ
ಎಮ್.ರಂಗರಾವ್
ಎಸ್.ರಾಮಚಂದ್ರ
೩೬
1983
ಗಾಯತ್ರಿ ಮದುವೆ
ಗಾಯತ್ರಿ ಆರ್ಟ್ಸ್ ಫಿಲಂಸ್
ಬಿ.ಮಲ್ಲೇಶ್
ಲಕ್ಷ್ಮಣ್
ರಾಜನ್-ನಾಗೇಂದ್ರ
ಬಿ.ಸಿ.ಗೌರಿಶಂಕರ್
೩೭
1983
ಮಕ್ಕಳೇ ದೇವರು
ಬಾಲ ತ್ರಿಪುರ ಸುಂದರಿ ಕಂಬೈನ್ಸ್
ಆರ್.ಎನ್.ಜಯಗೋಪಾಲ್
ವೈ.ಯಶೋದಮ್ಮ
ಸತ್ಯಂ
ಪಿ.ಭಾಸ್ಕರರಾವ್
೩೮
1983
ಚಲಿಸದ ಸಾಗರ
ನವದುರ್ಗ ಪ್ರೊಡಕ್ಷನ್ಸ್
ವಿಜಯ್
ವಿಜಯರೆಡ್ಡಿ
ಸತ್ಯಂ
ಅಣ್ಣಯ್ಯ
೩೯
1983
ನೋಡಿ ಸ್ವಾಮಿ ನಾವಿರೋದು ಹೀಗೆ
ಗಾಯತ್ರಿ ಚಿತ್ರಾಲಯ
ಶಂಕರನಾಗ್
ರಮೇಶ್ ಭಟ್
ಜಿ.ಕೆ.ವೆಂಕಟೇಶ್
ಕುಲಶೇಖರ್
೪೦
1984
ಸುಖ ಸಂಸಾರಕ್ಕೆ ೧೨ ಸೂತ್ರಗಳು
ರಾಜಾಚಂದ್ರ
ಹೆಚ್.ಆರ್.ಪ್ರಭಾಕರ್
ಚಕ್ರವರ್ತಿ
ಚಂಗಯ್ಯ
೪೧
1984
ಪ್ರೇಮವೆ ಬಾಳಿನ ಬೆಳಕು
ಭುವನೇಶ್ವರಿ ಆರ್ಟ್ಸ್ ಪ್ರೊಡಕ್ಷನ್ಸ್
ಎ.ವಿ.ಶೇಷಗಿರರಾವ್
ಅಂಕಲಗಿ ಬ್ರದರ್ಸ್
ಎಮ್.ರಂಗರಾವ್
೪೨
1984
ಪ್ರೇಮಸಾಕ್ಷಿ
ಪ್ರಭಾತ್ ಪಿಚ್ಚರ್ಸ್
ಮಲ್ಲೇಶ್
ಹೆಚ್.ವಿ.ನಾಗೇಂದ್ರಪ್ಪ
ರಾಜನ್-ನಾಗೇಂದ್ರ
ಬಿ.ಸಿ.ಗೌರಿಶಂಕರ್
೪೩
1984
ರಾಮಾಪುರದ ರಾವಣ
ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ಸ್
ರಾಜಾಚಂದ್ರ
ಸಿ.ಜಯರಾಮ್
ಉಪೇಂದ್ರಕುಮಾರ್
ಗೌರಿಶಂಕರ್
೪೪
1984
ಒಲವೇ ಬದುಕು
ದುರ್ಗ ದತ್ತ ಎಂಟರ್‌ಪ್ರೈಸಸ್
ಕೆ.ವಿ.ಜಯರಾಮ್
ಕೆ.ವಿ.ಜಯರಾಮ್
ಎಮ್.ರಂಗರಾವ್
ಎಸ್.ರಾಮಚಂದ್ರ
೪೫
1984
ಆಕ್ಸಿಡೆಂಟ್
ಸಂಕೇತ್
ಶಂಕರನಾಗ್
ಸಂಕೇತ್
ಇಳಯರಾಜ
ಶಂಕರ್
೪೬
1984
ಮಕ್ಕಳಿರಲವ್ವ ಮನೆತುಂಬ
ದುರ್ಗ ದತ್ತ ಎಂಟರ್‌ಪ್ರೈಸಸ್
ಟಿ.ಎಸ್.ನಾಗಾಭರಣ
ಶಿವಾನಂದ್ ಸವಣೂರ್
ಜಿ.ಕೆ.ವೆಂಕಟೇಶ್
ಕುಲಶೇಖರ್
೪೭
1985
ಬಿಡುಗಡೆಯ ಬೇಡಿ
ಶ್ರೀ ಮಂತ್ರಾಲಯ ಎಂಟರ್‌ಪ್ರೈಸಸ್
ದೊರೈ-ಭಗವಾನ್
ರಮೇಶ್ ರಿಜ್ವಿ
ರಾಜನ್-ನಾಗೇಂದ್ರ
೪೮
1985
ಪರಮೇಶಿ ಪ್ರೇಮ ಪ್ರಸಂಗ
ಗಾಯತ್ರಿ ಚಿತ್ರಾಲಯ
ರಮೇಶ್ ಭಟ್
ರಮೇಶ್ ಭಟ್
ಜಿ.ಕೆ.ವೆಂಕಟೇಶ್
ಕುಲಶೇಖರ್
೪೯
1985
ಶ್ವೇತಗುಲಾಬಿ
ಜಯದುರ್ಗ ಕಂಬೈನ್ಸ್
ಕೆ.ವಿ.ಜಯರಾಮ್
ಕೆ.ವಿ.ಜಯರಾಮ್
ಕಲ್ಯಾಣ್ ವೆಂಕಟೇಶ್
ಎಸ್.ರಾಮಚಂದ್ರ
೫೦
1985
ಹಾವು ಏಣಿಯಾಟ
ಶ್ರೀ ಸಾಯಿ ಗುರು ಫಿಲಂಸ್
ವಿ.ಆರ್.ಕೆ.ಪ್ರಸಾದ್
ಎಂ.ಎಸ್.ಎಸ್.ಮೂರ್ತಿ
ವಿಜಯಭಾಸ್ಕರ್
ಮಧು ಅಂಬಟ್
೫೧
1985
ಸೇಡಿನ ಹಕ್ಕಿ
ವರಲಕ್ಷ್ಮಿ ಮೂವೀಸ್
ದೊರೈ-ಭಗವಾನ್
ವರಲಕ್ಷ್ಮಿ
ರಾಜನ್-ನಾಗೇಂದ್ರ
ಚಿಟ್ಟಿಬಾಬು
೫೨
1985
ಶಬ್ದಗಳು
ಶ್ರೀ ಬಹದ್ದೂರ್ ಆರ್ಟ್ಸ್
ಸುರೇಶ್ ದಾವಣಗೆರೆ
ಎಂ.ಸುರೇಶ್
ರಾಜನ್-ನಾಗೇಂದ್ರ
ನಿಮಯ್ ಘೋಶ್
೫೩
1985
ಹೆಂಡ್ತಿ ಬೇಕು ಹೆಂಡ್ತಿ
ಪ್ರಭಾತ್ ಪಿಚ್ಚರ್ಸ್
ಅನಿಲ್ ಆನಂದ್
ಹೆಚ್.ವಿ.ನಾಗೇಂದ್ರಪ್ಪ
ಎಮ್.ರಂಗರಾವ್
ದೇವಧರ್
೫೪
1986
ಹೊಸ ನೀರು
ಪಂಚಮ್ ಮೂವಿ ಮೇಕರ್ಸ್
ಕೆ.ವಿ.ಜಯರಾಮ್
ಕೆ.ಎಸ್.ಸಚಿದಾನಂದ್
ಜಿ.ಕೆ.ವೆಂಕಟೇಶ್
ಬಿ.ಎಸ್.ಬಸವರಾಜ್
೫೫
1986
ನೆನಪಿನ ದೋಣಿ
ಸಂತೋಷ್ ಕಂಬೈನ್ಸ್
ಟಿ.ಎಸ್.ನಾಗಾಭರಣ
ವಿ.ವರ್ಗೀಸ್
ವಿಜಯಭಾಸ್ಕರ್
ಬಿ.ಸಿ.ಗೌರಿಶಂಕರ್
೫೬
1986
ಅರುಣರಾಗ
ಜಯದುರ್ಗ ಫಿಲಂಸ್
ಕೆ.ವಿ.ಜಯರಾಮ್
ಮೀನಾಕ್ಷಿ ಜಯರಾಮ್
ಎಮ್.ರಂಗರಾವ್
ಮಾಪಾಕ್ಷಿ
೫೭
1986
ಮನೆಯೇ ಮಂತ್ರಾಲಯ
ರೋಹಿಣಿ ಪಿಚ್ಚರ್ಸ್
ಭಾರ್ಗವ
ರೋಹಿಣಿ ಪಿಚ್ಚರ್ಸ್
ಎಮ್.ರಂಗರಾವ್
ಡಿ.ವಿ.ರಾಜಾರಾಮ್
೫೮
1987
ತಾಯಿ
ಪ್ರಗತಿ ಎಂಟರ್‌ಪ್ರೈಸಸ್
ಪೇರಾಲ
ಕೆ.ಸಿ.ಎನ್.ಚಂದ್ರ
ಸತ್ಯಂ
ಸುಂದರನಾಥ್ ಸುವರ್ಣ
೫೯
1987
ಅಗ್ನಿಪರ್ವ
ಶ್ರೀ ತುಳಸಿ ಪ್ರೊಡಕ್ಷನ್ಸ್
ಕೆ.ಸುಂದರನಾಥ ಸುವರ್ಣ
ಸುಂದರನಾಥ್ ಸುವರ್ಣ
ವೈದ್ಯನಾಥನ್
ಸುಂದರನಾಥ್ ಸುವರ್ಣ
೬೦
1987
ಅವಸ್ಥೆ
ಚಿಗುರು ಮೂವೀಸ್
ಕೃಷ್ಣ ಮಸಡಿ
ಮಹಿಮಾ ಪಟೇಲ್
ವಿಜಯಭಾಸ್ಕರ್
ಎಸ್.ರಾಮಚಂದ್ರ
೬೧
1987
ಕುರುಕ್ಷೇತ್ರ
ರೋಹಿಣಿ ಪಿಚ್ಚರ್ಸ್
ಭಾರ್ಗವ
ಅನುರಾಧ
ಎಮ್.ರಂಗರಾವ್
ಆರ್.ಮಧುಸೂದನ್
೬೨
1987
ಅತಿರಥ ಮಹಾರಥ
ಜ್ಯೋತಿ ಆರ್ಟ್ ಮೂವೀಸ್
ಪೇರಾಲ
ಭೀಮವರಪು
ಚಕ್ರವರ್ತಿ
ಕಬೀರ್ ಲಾಲ್
೬೩
1987
ದೈವಶಕ್ತಿ
ಎ.ಎನ್.ಎಸ್.ಪ್ರೊಡಕ್ಷನ್ಸ್
ರೇಣುಕಾಶರ್ಮ
ಬಿ.ಎನ್.ಗಂಗಾಧರ್
ಹಂಸಲೇಖ
ಪ್ರಸಾದ್ ಬಾಬು
೬೪
1988
ಬ್ರಹ್ಮ ವಿಷ್ಣು ಮಹೇಶ್ವರ
ರೋಹಿಣಿ ಪಿಚ್ಚರ್ಸ್
ರಾಜಾಚಂದ್ರ
ಅಮ್ರತ್ ಸಿಂಗ್
ವಿಜಯಾನಂದ್
೬೫
1988
ರಣಧೀರ
ಈಶ್ವರಿ ಪ್ರೊಡಕ್ಷನ್ಸ್
ವಿ.ರವಿಚಂದ್ರನ್
ವಿ.ರವಿಚಂದ್ರನ್
ಹಂಸಲೇಖ
ಆರ್.ಮಧುಸೂದನ್
೬೬
1988
ಶಾಂತಿನಿವಾಸ
ವಿಜಯ ಸಿನಿ ಪ್ರೊಡಕ್ಷನ್ಸ್
ಭಾರ್ಗವ
ಆರ್.ಎಫ್.ಮಾಣಿಕ್ ಚಂದ್
ಎಮ್.ರಂಗರಾವ್
ಡಿ.ವಿ.ರಾಜಾರಾಮ್
೬೭
1988
ವರ್ಣಚಕ್ರ
ನಾಗೇಶ್ ಇಂಟರ್ನಾಷನಲ್
ಕೆ.ವಿ.ಜಯರಾಮ್
ಕೆ.ಟಿ.ವೆಂಕಟಗಿರಿ
ಕಲ್ಯಾಣ್ ವೆಂಕಟೇಶ್
ಎಸ್.ರಾಮಚಂದ್ರ
೬೮
1988
ಶ್ರೀ.ವೆಂಕಟೇಶ್ವರ ಮಹಿಮೆ
ಎಸ್.ಆರ್.ಸಿನಿ ಅಸೋಷಿಯೇಟ್ಸ್
ಅನಿಲ್ ಬೈಂದೂರು
ಎಸ್.ಆರ್.ಸಿನಿ
ಎಮ್.ಎಸ್.ವಿಶ್ವನಾಥನ್
ಬಿ.ಎಸ್.ಬಸವರಾಜ್
೬೯
1988
ಬಾಳೊಂದು ಭಾವಗೀತೆ
ವಿಜಯೇಶ್ವರಿ
ಗೀತಪ್ರಿಯ
ಗೀತ ಶ್ರೀನಾಥ್
ಹಂಸಲೇಖ
ಬಿ.ಎನ್.ಹರಿದಾಸ್
೭೦
1988
ಮುತ್ತೈದೆ
ಚಿತ್ರ ಪ್ರೊಡಕ್ಷನ್ಸ್
ರೇಣುಕಾಶರ್ಮ
ಕೆ.ಚಿದಂಬರಶೆಟ್ಟಿ
ಎಮ್.ರಂಗರಾವ್
ವಿ.ಪ್ರಭಾಕರ್
೭೧
1989
ಅಮಾನುಷ
ಪೃಥ್ವಿ ಕ್ರಿಯೇಷನ್ಸ್
ನಂಜುಂಡೇಗೌಡ
ಪಾಂಡುರಂಗವಿಠಲ
ಹಂಸಲೇಖ
ಸುಂದರನಾಥ್ ಸುವರ್ಣ
೭೨
1989
ಹೆಂಡ್ತಿಗೇಳ್ಬೇಡಿ
ರಕ್ಷಿತಾ ಫಿಲಂಸ್
ದಿನೇಶ್ ಬಾಬು
ಶೋಭಪ್ರಕಾಶ್
ವಿಜಯಾನಂದ್
ದಿನೇಶ್ ಬಾಬು
೭೩
1989
ಇದು ಸಾಧ್ಯ
ಜೈನ್ ಮೂವೀಸ್
ದಿನೇಶ್ ಬಾಬು
ದಿನೇಶ್ ಬಾಬು
ವಿಜಯಾನಂದ್
ದಿನೇಶ್ ಬಾಬು
೭೪
1989
ಗಗನ
ರವಿಕಿರಣ್ ಕಂಬೈನ್ಸ್
ದೊರೈ-ಭಗವಾನ್
ಎಸ್.ಆರ್.ಕೃಷ್ಣನ್
ರಾಜನ್-ನಾಗೇಂದ್ರ
ಕೃಷ್ಣ
೭೫
1990
ಗೋಲ್‍ಮಾಲ್ ರಾಧಾಕೃಷ್ಣ
ಚಿತ್ರ ಪ್ರೊಡಕ್ಷನ್ಸ್
ಸಾಯಿಪ್ರಕಾಶ್
ಕೆ.ಚಿದಂಬರಶೆಟ್ಟಿ
ಎಮ್.ರಂಗರಾವ್
ಜೆ.ಜಿ.ಕೃಷ್ಣ
೭೬
1990
ರಾಮರಾಜ್ಯದಲ್ಲಿ ರಾಕ್ಷಸರು
ಪ್ರಗತಿ ಎಂಟರ್‌ಪ್ರೈಸಸ್
ಡಿ.ರಾಜೇಂದ್ರಬಾಬು
ಕೆ.ಸಿ.ಎನ್.ಮೋಹನ್
ಎಮ್.ರಂಗರಾವ್
ಬಿ.ಎಸ್.ಬಸವರಾಜ್
೭೭
1990
ಸ್ವರ್ಣ ಸಂಸಾರ
ಶ್ರೀ ದೇವಿ ಪಿಚ್ಚರ್ಸ್
ಸಾಯಿಪ್ರಕಾಶ್
ಸಾಯಿಪ್ರಕಾಶ್
ಉಪೇಂದ್ರಕುಮಾರ್
ಕೃಷ್ಣ
೭೮
1990
ಚಾಲೆಂಜ್ ಗೋಪಾಲಕೃಷ್ಣ
ಚಿತ್ರ ಪ್ರೊಡಕ್ಷನ್ಸ್
ಸಾಯಿಪ್ರಕಾಶ್
ಕೆ.ಚಿದಂಬರಶೆಟ್ಟಿ
ಉಪೇಂದ್ರಕುಮಾರ್
ಆರ್.ಎನ್.ಕೆ.ಪ್ರಸಾದ್
೭೯
1990
ಉದ್ಭವ
ಸ್ಪಂದನ ಕ್ರಿಯೇಷನ್ಸ್
ಕೋಡ್ಲು ರಾಮಕೃಷ್ಣ
ಕೋಡ್ಲು ರಾಮಕೃಷ್ಣ
ಮೈಸೂರು ಗೋಪಿ
ಬಿ.ಎಸ್.ಬಸವರಾಜ್
೮೦
1990
ಅಭಿಮನ್ಯು
ಶ್ರೀ ಸುದರ್ಶನ್ ಪ್ರೊಡಕ್ಷನ್ಸ್
ರವಿರಾಜ
ಬಾಬು
ಹಂಸಲೇಖ
ಲೋಕಸಿಂಗ್
೮೧
1990
ಮತ್ತೆ ಹಾಡಿತು ಕೋಗಿಲೆ
ಶ್ರೀ ಶಂಕರಿ ಪ್ರೊಡಕ್ಷನ್ಸ್
ಭಾರ್ಗವ
ಎಸ್.ಶಂಕರ್
ರಾಜನ್-ನಾಗೇಂದ್ರ
ಡಿ.ವಿ.ರಾಜಾರಾಮ್
೮೨
1990
ಅನಂತ ಪ್ರೇಮ
ನೂರ್ ಜಹಾನ್ ಫಿಲಂಸ್
ಜನಾರ್ಧನ್
ನೂರ್ ಜಹಾನ್
ಹಂಸಲೇಖ
ಟಿ.ಜನಾರ್ಧನ್
೮೩
1990
ಗಣೇಶನ ಮದುವೆ
ಕಲಾಪ್ರಿಯ
ಫಣಿರಾಮಚಂದ್ರ
ಪದ್ಮ ಸುದೀಂದ್ರ
ರಾಜನ್-ನಾಗೇಂದ್ರ
ಆರ್.ಮಂಜುನಾಥ್
೮೪
1990
ಇವಳೆಂಥಾ ಹೆಂಡ್ತಿ
ರೋಹನ್ ಫಿಲಂ ಕಂಬೈನ್ಸ್
ಮುದ್ದುರಾಜ್
ಶ್ಯಾಮ್ ಎನ್.ಶೆಟ್ಟಿ
ಉಪೇಂದ್ರಕುಮಾರ್
ಶ್ರೀರಂಗ
೮೫
1991
ಮನೇಲಿ ಇಲಿ ಬೀದೀಲಿ ಹುಲಿ
ಮಂತ್ರಾಲಯ ಎಂಟರ್‌ಪ್ರೈಸಸ್
ಸಾಯಿಪ್ರಕಾಶ್
ಬಿ.ಹೆಚ್.ಬುಚ್ಚಿರೆಡ್ಡಿ
ಶಂಕರ್-ಗಣೇಶ್
ಜಾನಿಲಾಲ್
೮೬
1991
ಗೋಲ್‍ಮಾಲ್ ಭಾಗ-೨
ಬಿ.ಆರ್.ಪ್ರೊಡಕ್ಷನ್ಸ್
ಸಾಯಿಪ್ರಕಾಶ್
ಕೆ.ಎಸ್.ರಾಮನ್
ಉಪೇಂದ್ರಕುಮಾರ್
ಕಬೀರ್ ಲಾಲ್
೮೭
1991
ರೋಲ್‌ಕಾಲ್ ರಾಮಕೃಷ್ಣ
ಸಂಮೃದ್ದ ಎಂಟರ್‌ಪ್ರೈಸಸ್
ಬಿ.ರಾಮಮೂರ್ತಿ
ಎಸ್.ಆರ್.ರಾಜೇಶ್ವರಿ
ಉಪೇಂದ್ರಕುಮಾರ್
ಕೃಷ್ಣ
೮೮
1991
ಗೌರಿ ಗಣೇಶ
ಕಲಾಸಿಂಧು
ಫಣಿರಾಮಚಂದ್ರ
ಜಿ.ವಿಶ್ವನಾಥ
ರಾಜನ್-ನಾಗೇಂದ್ರ
ಆರ್.ಮಂಜುನಾಥ್
೮೯
1991
ಹೊಸಮನೆ ಅಳಿಯ
ಯಶಸ್ವಿ ಎಂಟರ್‌ಪ್ರೈಸಸ್
ಬಿ.ರಾಮಮೂರ್ತಿ
ಪುಷ್ಪ ಎಸ್.ಮೂರ್ತಿ
ಮನೋರಂಜನ್ ಪ್ರಭಾಕರ್
ಬಿ.ಎಸ್.ಶಾಸ್ತ್ರಿ
೯೦
1991
ನಾಗಿಣಿ
ಶ್ರೀ ಲಕ್ಷ್ಮಿ ಪ್ರೊಡಕ್ಷನ್ಸ್
ಶ್ರೀಪ್ರಿಯ
ಬಿ.ಎನ್.ಗಂಗಾಧರ್
ಶಂಕರ್-ಗಣೇಶ್
ಪ್ರಸಾದ್ ಬಾಬು
೯೧
1992
ಉಂಡು ಹೋದ ಕೊಂಡು ಹೋದ
ಪದ್ಮಾಂಬ ಕಂಬೈನ್ಸ್
ನಾಗತಿಹಳ್ಳಿ ಚಂದ್ರಶೇಖರ್
ಜಿ.ಕುಮಾರಸ್ವಾಮಿ
ವಿಜಯಭಾಸ್ಕರ್
ಎಸ್.ರಾಮಚಂದ್ರ
೯೨
1992
ವಜ್ರಾಯುಧ
ಸಂಮೃದ್ದ ಎಂಟರ್‌ಪ್ರೈಸಸ್
ಬಿ.ರಾಮಮೂರ್ತಿ
ಎಸ್.ಆರ್.ರಾಜೇಶ್ವರಿ
ಹಂಸಲೇಖ
ವಿ.ಕೆ.ಕಣ್ಣನ್
೯೩
1992
ಗಣೇಶ ಸುಬ್ರಹ್ಮಣ್ಯ
ಕಲಾಪ್ರೇಮಿ
ಫಣಿರಾಮಚಂದ್ರ
ವಿಶ್ವಸಾಗರ್
ವಿ.ಮನೋಹರ್
ಆರ್.ಮಂಜುನಾಥ್
೯೪
1992
ಒಂದು ಸಿನಿಮಾ ಕಥೆ
ಗಾಯತ್ರಿ ಸಿನಿ ಕ್ರಿಯೇಷನ್ಸ್
ಫಣಿರಾಮಚಂದ್ರ
ಕೃಷ್ಣ
ರಾಜನ್-ನಾಗೇಂದ್ರ
ಬಿ.ಎಸ್.ಸಿಂಗ್
೯೫
1992
ಶಕ್ತಿ ಯುಕ್ತಿ
ಸಿ.ಕೆ.ಪ್ರೊಡಕ್ಷನ್ಸ್
ಬಿ.ರಾಮಮೂರ್ತಿ
ಎಲ್.ಎನ್.ಚಕ್ರವರ್ತಿ
ಮನೋರಂಜನ್ ಪ್ರಭಾಕರ್
ಬಿ.ಎಸ್.ಶಾಸ್ತ್ರಿ
೯೬
1992
ಮರಣ ಮೃದಂಗ
ಶ್ರೀ ಚಿತ್ರ ಕ್ರಿಯೇಷನ್ಸ್
ಬಿ.ರಾಮಮೂರ್ತಿ
ಕೆ.ಚಿದಂಬರಶೆಟ್ಟಿ
ಹಂಸಲೇಖ
ಮಲ್ಲಿಕಾರ್ಜುನ್
೯೭
1992
ಝೇಂಕಾರ
ತ್ರೀಮೂರ್ತಿ ಎಂಟರ್‌ಪ್ರೈಸಸ್
ರಘುರಾಮ್
ದಿನೇಶ್ ಪಟೇಲ್
ಹಂಸಲೇಖ
ಜೆ.ರಾಬರ್ಟ್
೯೮
1993
ರಾಜಕೀಯ
ಮುತ್ಯಾಲಮ್ಮನ್ ಕ್ರಿಯೇಷನ್ಸ್
ಶಿವಮಣಿ
ಪಿ.ಪಿ.ವರದರಾಜನ್
ಹಂಸಲೇಖ
ಸುಂದರನಾಥ್ ಸುವರ್ಣ
೯೯
1993
ಆತಂಕ
ಎಸ್.ಎಸ್.ಪ್ರೊಡಕ್ಷನ್ಸ್
ಸಾಯಿಪ್ರಕಾಶ್
ಶಾರದ ಶಾಸ್ತ್ರಿ
ಹಂಸಲೇಖ
ಜಾನಿಲಾಲ್
೧೦೦
1993
ಮಾಂಗಲ್ಯ ಬಂಧನ
ಅನುಪಮ ಆರ್ಟ್ಸ್
ದೊರೈ-ಭಗವಾನ್
ಎಸ್.ಕೆ.ಭಗವಾನ್
ಹಂಸಲೇಖ
ಜೆ.ಜಿ.ಕೃಷ್ಣ
೧೦೧
1993
ಕಾದಂಬರಿ
ಕಲಸಂಗಮ
ಕೋಡ್ಲು ರಾಮಕೃಷ್ಣ
ಸಾವಿತ್ರಿ
ಹಂಸಲೇಖ
ಎಸ್.ರಾಮಚಂದ್ರ
೧೦೨
1993
ನಿಷ್ಕರ್ಷ
ಸೃಷ್ಟಿ ಫಿಲಂಸ್
ಸುನಿಲ್ ಕುಮಾರ್ ದೇಸಾಯಿ
ದೊಡ್ಡಬಸವನ
ಗುಣಸಿಂಗ್
ಪಿ.ರಾಜನ್
೧೦೩
1994
ತೂಗುವೆ ಕೃಷ್ಣನ
ಗಾಯತ್ರಿ ಸಿನಿ ಕ್ರಿಯೇಷನ್ಸ್
ವಸಂತ ಕುಣಿಗಲ್
ಬಿ.ಎಸ್.ಕೃಷ್ಣ
ಮನೋರಂಜನ್ ಪ್ರಭಾಕರ್
ಬಿ.ಸತ್ಯನಾರಾಯಣ
೧೦೪
1994
ಯಾರಿಗೂ ಹೇಳ್ಬೇಡಿ
ಶ್ರೀ ಬನಶಂಕರಿ ಕಂಬೈನ್ಸ್
ಕೋಡ್ಲು ರಾಮಕೃಷ್ಣ
ಆಶ ಗುಣಶೇಖರ್
ರಾಜನ್-ನಾಗೇಂದ್ರ
ಎಸ್.ರಾಮಚಂದ್ರ
೧೦೫
1995
ಬೆಳದಿಂಗಳ ಬಾಲೆ
ಸಹನ ಪ್ರೊಡಕ್ಷನ್ಸ್
ಸುನಿಲ್ ಕುಮಾರ್ ದೇಸಾಯಿ
ಬಿ.ಎಸ್.ಮುರಳಿ
ಗುಣಸಿಂಗ್
ಪಿ.ರಾಜನ್
೧೦೬
1995
ನಿಲುಕದ ನಕ್ಷತ್ರ
ಮುಕ್ತ ಮೂವೀಸ್
ಕೋಡ್ಲು ರಾಮಕೃಷ್ಣ
ಎಸ್.ನಾಗರಾಜ್
ಸಂಗೀತ ರಾಜ
ಎಸ್.ರಾಮಚಂದ್ರ
೧೦೭
1996
ಸಮಕ್ಕೊಂದು ಸುಳ್ಳು
ಬಿ.ಆರ್.ಪ್ರೊಡಕ್ಷನ್ಸ್
ಸಾಯಿಪ್ರಕಾಶ್
ಕೆ.ಎಸ್.ರಾಮನ್
ಉಪೇಂದ್ರಕುಮಾರ್
ಭಾಷಲಾಲ್
೧೦೮
1996
ತಾಳಿ ಪೂಜೆ
ವಿಷ್ಣು ಪ್ರೊಡಕ್ಷನ್ಸ್
ವಿ.ಚಂದ್ರಹಾಸ
ಎಸ್.ಎಸ್.ಹೆಗ್ಡೆ
ಹಂಸಲೇಖ
ಸಿ.ಡಿ.ರಾಜು
೧೦೯
1996
ನಿರ್ಬಂಧ
ಸೃಷ್ಟಿ ಫಿಲಂಸ್
ಹೆಚ್.ಎಸ್.ರಾಜಶೇಖರ್
ದೊಡ್ಡಗೌಡ ಪಾಟೀಲ್
ರಾಜೇಶ್ ರಾಮನಾಥ್
ಸುಂದರನಾಥ್ ಸುವರ್ಣ
೧೧೦
1996
ಜೀವನದಿ
ಶ್ರೀ ಧನಲಕ್ಷ್ಮಿ ಕ್ರಿಯೇಷನ್ಸ್
ಡಿ.ರಾಜೇಂದ್ರಬಾಬು
ಪಿ.ಧನರಾಜ್
ಕೋಟಿ
ಪ್ರಸಾದ್ ಬಾಬು
೧೧೧
1997
ಗಣೇಶ ಐ ಲವ್ ಯು
ಜಿ.ಆರ್.ಕೆ.ಕ್ರಿಯೇಷನ್ಸ್
ಹೆಚ್.ಎಸ್.ಫಣಿರಾಮಚಂದ್ರ
ಜಿ.ಆರ್.ಕೆ.ಕ್ರಿಯೇಷನ್ಸ್
ರಾಜೇಶ್ ರಾಮನಾಥ್
ಆರ್.ಮಂಜುನಾಥ್
೧೧೨
1999
ವಿಶ್ವ
ಶಿವಮಣಿ
ಪಿ.ಧನರಾಜ್
ಹಂಸಲೇಖ
ರಮೇಶ್ ಬಾಬು
೧೧೩
1999
ನಾನೇನು ಮಾಡಿಲ್ಲ
ದಿನೇಶ್ ಬಾಬು
ಎನ್.ಚಂದ್ರಕುಮಾರ್
ಕೆ.ಕಲ್ಯಾಣ್
ಪಿ.ಕೆ.ಹೆಚ್.ದಾಸ್
೧೧೪
2000
ಟೈಗರ್ ಪದ್ಮಿನಿ
ರೇಣುಕ ಮೂವೀಸ್
ಬಿ.ಮಲ್ಲೇಶ್
ರೇಣುಕಾದೇವಿ
ಹಂಸಲೇಖ
ಕಣ್ಣನ್
೧೧೫
2000
ಚಾಮುಂಡಿ
ರಾಮು ಎಂಟರ್‌ಪ್ರೈಸಸ್
ಎ.ಮೋಹನ್ ಗಾಂಧಿ
ರಾಮು
ಹಂಸಲೇಖ
ಪ್ರತಾಪ್
೧೧೬
2000
ಕೃಷ್ಣಲೀಲಾ
ರಾಕ್‌ಲೈನ್ ಪ್ರೊಡಕ್ಷನ್ಸ್
ಡಿ.ರಾಜೇಂದ್ರಬಾಬು
ರಾಕಲೈನ್ ವೆಂಕಟೇಶ್
ವಿ.ಮನೋಹರ್
ಬಿ.ಸಿ.ಗೌರಿಶಂಕರ್
೧೧೭
2000
ನನ್ನ್ ಹೆಂಡ್ತಿ ಚೆನ್ನಾಗಿದ್ದಾಳೆ
ಭವಾನಿ ಫಿಲಂಸ್
ದಿನೇಶ್ ಬಾಬು
ದಿನೇಶ್ ಬಾಬು
ರಾಜೇಶ್ ರಾಮನಾಥ್
ಪಿ.ಕೆ.ಹೆಚ್.ದಾಸ್
೧೧೮
2000
ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ
ಶ್ರೀ ಮಂಜುನಾಥ ಎಂಟರ್‌ಪ್ರೈಸಸ್
ಕೋಡ್ಲು ರಾಮಕೃಷ್ಣ
ಕೆ.ಟಿ.ವೀರೇಶ್
ಸಾಧುಕೋಕಿಲ
ಸುಂದರನಾಥ್ ಸುವರ್ಣ
೧೧೯
2001
ಮತದಾನ
ಟಿ.ಎನ್.ಸೀತಾರಾಮ್
ಸಿ.ಅಶ್ವತ್, ವಿ.ಮನೋಹರ್
೧೨೦
2001
ಕುರಿಗಳು ಸಾರ್ ಕುರಿಗಳು
ಎಸ್.ವಿ.ರಾಜೇಂದ್ರಸಿಂಗ್ ಬಾಬು
೧೨೧
2001
ಅಸುರ
ಎಸ್.ಮಹೇಂದರ್
ಗುರುಕಿರಣ್
೧೨೨
2001
ಆಂಟಿಪ್ರೀತ್ಸೆ
ಹೆಚ್.ವಾಸು
ಮುನಿರತ್ನ
ಚೈತನ್ಯ (ಎಲ್.ಎನ್.ಶಾಸ್ತ್ರಿ)
೧೨೩
2001
ಚಿತ್ರ
ಉಷಾಕಿರಣ್ ಮೂವೀಸ್
ದಿನೇಶ್ ಬಾಬು
ರಾಮೋಜಿ ರಾವ್
ಗುರುಕಿರಣ್
ಪಿ.ಆರ್.ಸೌಂದರ್ ರಾಜ್
೧೨೪
2001
ಅಮ್ಮ
ಶ್ರೀ ಸಂಗಮೇಶ್ವರ ಪ್ರೊಡಕ್ಷನ್ಸ್
ಡಿ.ರಾಜೇಂದ್ರಬಾಬು
ಕೆ.ವೆಂಕಟೇಶ್, ಎಸ್.ಸಿ.ಅಂಬರೀಶ್
ಎಮ್.ಎಮ್.ಕೀರವಾಣಿ
ಪ್ರಸಾದ್ ಬಾಬು
೧೨೫
2001
ನೀಲ
ದೃಷ್ಟಿ ಸೃಷ್ಟಿ
ಟಿ.ಎಸ್.ನಾಗಾಭರಣ
ಡಾ.ಅಜಯಕುಮಾರ್, ಟಿ.ಎಸ್.ನಾಗಾಭರಣ
ವಿಜಯಭಾಸ್ಕರ್
ಜಿ.ಎಸ್.ಭಾಸ್ಕರ್
೧೨೬
2002
ಭೂತಯ್ಯನ ಮಕ್ಕಳು
ಶ್ರೀ ರಾಜಮಾತ ಪ್ರೊಡಕ್ಷನ್ಸ್
ಜಿ.ಕೆ.ಮುದ್ದುರಾಜ್
ಆರ್.ಗಿರಿ
೧೨೭
2002
ಮನಸೇ ಓ ಮನಸೇ
ಎಂ.ಎಸ್.ರಾಜಶೇಖರ್
ರಾಮೋಜಿ ರಾವ್
ವಿ.ಮನೋಹರ್
ಪ್ರಸಾದ್ ಬಾಬು
೧೨೮
2002
ನಾನು ನಾನೇ
ಡಿ.ರಾಜೇಂದ್ರಬಾಬು
ಮಡಿಕೊಂಡ ಮುರಳಿಕೃಷ್ಣ
ದೇವ
ಪ್ರಸಾದ್ ಬಾಬು
೧೨೯
2002
ಹಾಲಿವುಡ್
ರಾಮು ಎಂಟರ್‌ಪ್ರೈಸಸ್
ದಿನೇಶ್ ಬಾಬು
ರಾಮು
ಗುರುಕಿರಣ್
ಪಿ.ಕೆ.ಹೆಚ್.ದಾಸ್
೧೩೦
2003
ಆನಂದ
ಉಷಾಕಿರಣ್ ಮೂವೀಸ್
ಮುಳ್ಳಪೂಡಿ
ರಾಮೋಜಿ ರಾವ್
ರಾಜೇಶ್ ರಾಮನಾಥ್
ಪಿ.ಕೆ.ಹೆಚ್.ದಾಸ್
೧೩೧
2003
ಬೆಂಗಳೂರು ಬಂದ್
ಓಂ ಶಕ್ತಿ ಸಿನಿ ಕಂಬೈನ್ಸ್
ತೇಸಿ ವೆಂಕಟೇಶ್
ಎಂ.ವೆಂಕಟೇಶ್, ಆರ್.ಮಂಜುನಾಥ್,
ಹಂಸಲೇಖ
೧೩೨
2003
ಲಂಕೇಶ್ ಪತ್ರಿಕೆ
ಲಕ್ಷ್ಮಿಶ್ರೀ ಕಂಬೈನ್ಸ್
ಇಂದ್ರಜಿತ್ ಲಂಕೇಶ್
ಕೆ.ಮಂಜು
ಬಬ್ಡಿ
ಸುಂದರನಾಥ್ ಸುವರ್ಣ
೧೩೩
2003
ಪ್ರೀತಿ ಪ್ರೇಮ ಪ್ರಣಯ
ಇಂಡೋ-ಹಾಲಿವುಡ್ ಫಿಲಂಸ್
ಕವಿತಾ ಲಂಕೇಶ್
ಮನೋಮೂರ್ತಿ, ರಾಮಪ್ರಸಾದ್, ಸೋಮಶೇಖರ್,
ಮನೋಮೂರ್ತಿ
೧೩೪
2003
ಖುಷಿ
ಶ್ರೀ ಜೈಮಾತ ಕಂಬೈನ್ಸ್
ಪ್ರಕಾಶ್
ಜೆ.ಜಯಮ್ಮ
ಗುರುಕಿರಣ್
ಹೆಚ್.ಸಿ.ಸುರೇಶ್
೧೩೫
2004
ಸಾಗರಿ
ಸ್ನೇಹ ಎಂಟರ್‌ಪ್ರೈಸಸ್
ವಿಕ್ಟರಿ ವಾಸು
ಸಂಜಯ್
ಸಾಧುಕೋಕಿಲ
ಸಿ.ಡಿ.ರಾಜು
೧೩೬
2004
ಬಿಡಲಾರೆ
ಶ್ರೀ ಶಕ್ತಿ ಪ್ರೊಡಕ್ಷನ್ಸ್
ರಮಣ
ಆರ್.ಎಫ್.ಮಾಣಿಕ್ ಚಂದ್, ಕೆ.ಪಿ.ಪ್ರಭುಶಂಕರ್
ಇಂದ್ರ
ಸತೀಶ್ ಬಾಬು
೧೩೭
2004
ಪಕ್ಕದಮನೆ ಹುಡುಗಿ
ಶಿವಕುಮಾರ್ ಪ್ರೊಡಕ್ಷನ್ಸ್
ಎಂ.ಎಸ್.ರಾಜಶೇಖರ್
ರಾಜೇಶ್ ರಾಮನಾಥ್
೧೩೮
2005
ನೆನಪಿರಲಿ
ಕಲ್ಪನ ಶಕ್ತಿ
ರತ್ನಜ
ಅಜಯ್ ಆರ್.ಗೌಡ
ಹಂಸಲೇಖ
ರಾಮಚಂದ್ರ
೧೩೯
2005
ವಿಷ್ಣುಸೇನಾ
ಶ್ರೀ ಹೃದಯೇಶ್ವರಿ ಫಿಲಂಸ್
ಬಿ.ನಾಗಣ್ಣ
ಎಂ.ಗೋವಿಂದ್
ದೇವ
ರಮೇಶ್ ಬಾಬು
೧೪೦
2006
ಶ್ರೀ
ಶ್ರೀ ಚೌಡೇಶ್ವರಿ ಸಿನಿ ಕ್ರಿಯೇಷನ್ಸ್
ಪ್ರಕಾಶ್
ಕೆ.ಎಸ್.ದುಶ್ಯಂತ್, ಕೆ.ಎಸ್.ಸಂತೋಷಕುಮಾರ್
ವಾಲಿಸ ಸಂದೀಪ್
ಕೃಷ್ಣಕುಮಾರ್
೧೪೧
2006
ಉಪ್ಪಿದಾದಾ ಎಂ.ಬಿ.ಬಿ.ಎಸ್
ಜೆಮಿನಿ ಫಿಲಂ ಸರ್ಕ್ಯೂಟ್
ಡಿ.ರಾಜೇಂದ್ರ ಬಾಬು
ಕೆ.ಭೂಪಯ್ಯ
ಆರ್.ಪಿ.ಪಟ್ನಾಯಕ್
ಹೆಚ್.ಎಮ್.ರಾಮಚಂದ್ರ
೧೪೨
2006
ರವಿಶಾಸ್ತ್ರಿ
ಸಂದೇಶ್ ಕಂಬೈನ್ಸ್
ಎಂ.ಎಸ್.ರಾಜಶೇಖರ್
ಸಂದೇಶ್ ನಾಗರಾಜ್
ರಾಜೇಶ್ ರಾಮನಾಥ್
ಸುಂದರನಾಥ್ ಸುವರ್ಣ
ಅಂಕುರ (1974)
ನಿಶಾಂತ (1975)
ಭೂಮಿಕಾ (1977)
ಮಂಥನ್ (1977)
ಕೊಂಡುರಾ (1978)
ಕಲಿಯುಗ್ (1980)
ಮಂಗಲಸೂತ್ರ (1981)
ಗೆಹ್ರಾಯಿ (1982)
ಸೂಖಾ/ಬರ (1983)
ರಾತ್ (1990)
ಯುವಾ (2002)
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
ಅತ್ಯುತ್ತಮ ನಟ - ಮಿಂಚಿನ ಓಟ (1979-80)
ಅತ್ಯುತ್ತಮ ನಟ - ಹೊಸ ನೀರು (1985-86)
ಅತ್ಯುತ್ತಮ ನಟ - ಅವಸ್ಥೆ (1987-88)
ಅತ್ಯುತ್ತಮ ನಟ - ಗಂಗವ್ವ ಗಂಗಾಮಾಯಿ (1994-95)
ಎರಡನೆಯ ಅತ್ಯುತ್ತಮ ಚಲನಚಿತ್ರ - ಮಿಂಚಿನ ಓಟ (1979-80) [ಶಂಕರ ನಾಗ್ ಜೊತೆ]
ವಿಷ್ಣುವರ್ಧನ ಪ್ರಶಸ್ತಿ (2010)
ಫಿಲಂಫೇರ್ ಅವಾರ್ಡ ಕನ್ನಡ
ಅತ್ಯುತ್ತಮ ನಟ - ನಾ ನಿನ್ನ ಬಿಡಲಾರೆ (1979)
ಅತ್ಯುತ್ತಮ ನಟ - ಹೆಂಡ್ತಿಹೇಳ್ಬೇಡಿ (1989)
ಅತ್ಯುತ್ತಮ ನಟ - ಉದ್ಭವ (1990)
ಅತ್ಯುತ್ತಮ ನಟ - ಗೌರಿ ಗಣೇಶ (1991)
ಅತ್ಯುತ್ತಮ ನಟ - ಗೋದಿ ಬಣ್ಣ ಸಾಧಾರಣ ಮೈಕಟ್ಟು (2016)
ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ - "ನನ್ನ ತಮ್ಮ ಶಂಕರ"
ರಾಜ್ಯೋತ್ಸವ ಪ್ರಶಸ್ತಿ (2007)
↑ http://www.frontline.in/arts-and-culture/cinema/films-were-bolder-in-the-past/article5184996.ece
↑ http://kannada.filmibeat.com/celebs/ananth-nag/biography.html
↑ http://timesofindia.indiatimes.com/city/bangalore/About-real-life-and-reel-lives/articleshow/6765949.cms
International National People