ಜ್ಯೋತಿ ಸ್ವರೂಪಿಣಿ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಜ್ಯೋತಿ ಸ್ವರೂಪಿಣಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬8 ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಜ್ಯೋತಿರಾಗಅಥವಾ ಜ್ಯೋತಿ ಎಂದು ಹೆಸರಿಸಿದ್ದಾರೆ.[೧][೨] .
ರಾಗ ಸ್ವರೂಪ ಮತ್ತು ಲಕ್ಷಣ
[ಬದಲಾಯಿಸಿ]ಇದು ಹನ್ನರಡನೆಯ ಆದಿತ್ಯ ಚಕ್ರದ ಎರಡನೆಯ ರಾಗ.ಇದರ ನೆನೆಪಿನ ಹೆಸರು ಆದಿತ್ಯ-ಶ್ರಿ ನೆನಪಿನ ನುಡಿಕಟ್ಟು:ಸ ರು ಗು ಮಿ ಪ ಧ ನಿ [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೩ ಗ೩ ಮ೨ ಪ ದ೧ ನಿ೨ ಸ
ಅವರೋಹಣ ಸ ನಿ೨ ದ೧ ಪ ಮ೨ ಗ೩ ರಿ೩ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಷಟ್‍ಶೃತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕೈಶಿಕಿ ನಿಷಾಧ.ಇದು ೩೨ನೆಯ ಮೇಳಕರ್ತ ರಾಗವಾದ ರಾಗವರ್ಧಿನಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.
ಜನ್ಯ ರಾಗಗಳು
[ಬದಲಾಯಿಸಿ]ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.
ಜನಪ್ರಿಯ ರಚನೆಗಳು
[ಬದಲಾಯಿಸಿ]ಈ ರಾಗದಲ್ಲಿ ಹಲವಾರು ರಚನೆಗಳಿದ್ದು, ಕೆಲವು
- ಆನಂದಮಾಯಮನವೆ- (ವಾಲಾಜಪೇಟೆ ವೆಂಕಟರಮಣ ಭಾಗವತರ್)
- ಗಾನಾಮೃತ ಪಾನಮ್- ಕೋಟೀಶ್ವರ ಅಯ್ಯರ್
- ಜ್ಯೋತಿಸ್ವರೂಪಿಣಿ- ಪೆರಿಯಸಾಮಿ ತೂರನ್
- ಶ್ರೀ ಗಾಯತ್ರಿ ಭಕ್ತ ದುರಿತ- ಎಂ. ಬಾಲಮುರಳಿ ಕೃಷ್ಣ
- ನನ್ನಬ್ರೋವು ಕಾಮಾಕ್ಷಿ
ಸಂಬಂಧಿತ ರಾಗಗಳು
[ಬದಲಾಯಿಸಿ]ಗ್ರಹಭೇದಮ್ ಸೂತ್ರವನ್ನು ಜ್ಯೋತಿ ಸ್ವರೂಪಿಣಿ ರಾಗಕ್ಕೆ ಅನ್ವಯಿಸಿದಾಗ ಯಾವುದೇ ರಾಗಗಳು ದೊರೆಯುವುದಿಲ್ಲ.