ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬
- ಅದ್ಯಕ್ಷ ಅಭ್ಯರ್ಥಿ ಹೆಸರು = ಹಿಲರಿ ಕ್ಲಿಂಟನ್ (ಸಂಭಾವ್ಯ)
- ಜನನ ದಿನಾಂಕ = ೨೬-೧೦-೧೯೪೭
- ದೇಶ = ಯುನೈಟೆಡ್ ಸ್ಟೇಟ್ಸ್
- ಯಾವ ಅಭ್ಯರ್ಥಿ =ಡೆಮಾಕ್ರಟಿಕ್ ಪಾರ್ಟಿ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ, 2016
- ಚುನಾವಣೆ = ನವೆಂಬರ್ 8, 2016
- ಪಕ್ಷ = ಡೆಮಾಕ್ರಟಿಕ್ ಪಾರ್ಟಿ
- ರಾಜ್ಯ = ನ್ಯೂಯಾರ್ಕ್
- upto:19-07-2016
- ಬಹುಮತ ಗಳಿಸಿದ ರಾಜ್ಯಗಳು=34
- ಮತ ನಿರೀಕ್ಷೆ =ಭರವಸೆಯದು 2204
- ನಿರೀಕ್ಷೆಯದು =+560 ಒಟ್ಟು=2764
- ಗೆಲುವಿಗೆ ಅಗತ್ಯ ಮತಗಳು = 2383
- ಬೆಂಬಲಗಳಿಕೆ = 55.20%
- ೫೫೫೫೫೫೫೫೫
- ಅದೇ ಪಕ್ಷದ ಪ್ರತಿಸ್ಪರ್ಧಿ= ಬರ್ನೀ ಸ್ಯಾಂಡರ್ಸ್
- ಮತ ನಿರೀಕ್ಷೆ = 1894 +47
- ರಾಜ್ಯ ಬೆಂಬಲ = 23
- ಬೆಂಬಲಗಳಿಕೆ = 43.1%
ಯು.ಎಸ್.ಎ ಅಧ್ಯಕ್ಷರ ಚುನಾವಣೆ
[ಬದಲಾಯಿಸಿ]- ೫೫೫೫೫೫೫೫೫೫೫೫೫೫೫೫೫೫೫
- ಅದ್ಯಕ್ಷ ಅಭ್ಯರ್ಥಿ ಹೆಸರು = ಡೊನಾಲ್ಡ್ ಟ್ರಂಪ್-(ಸಂಭಾವ್ಯ)
- ಪಕ್ಷ =ರಿಪಬ್ಲಿಕನ್
- ಜನನ ದಿನಾಂಕ = ೧೪-೦೬-೧೯೪೬
- ದೇಶ = ಯುನೈಟೆಡ್ ಸ್ಟೇಟ್ಸ್
- ಅಭ್ಯರ್ಥಿ =ರಿಪಬ್ಲಿಕನ್' ಪಾರ್ಟಿ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ, 2016
- ಚುನಾವಣೆ = ನವೆಂಬರ್ 8, 2016
- ಪಕ್ಷ = ರಿಪಬ್ಲಿಕನ್' ಪಾರ್ಟಿ
- ರಾಜ್ಯ = ನ್ಯೂಯಾರ್ಕ್
- ಬಹುಮತ ಗಳಿಸಿದ ರಾಜ್ಯಗಳು=37
- ಮತ ನಿರೀಕ್ಷೆ =ಭರವಸೆಯದು 1441
- ನಿರೀಕ್ಷೆಯದು =--
- ಗೆಲುವಿಗೆ ಅಗತ್ಯ ಮತಗಳು = 1,237
- ಬೆಂಬಲಗಳಿಕೆ = 44.2%
- ಅದೇ ಪಕ್ಷದ ಪ್ರತಿಸ್ಪರ್ಧಿ= ಟೆಡ್ ಕ್ರೂಜ್, ಟೆಕ್ಷಾಸ್
- ಮತ ನಿರೀಕ್ಷೆ = 551
- ರಾಜ್ಯ ಬೆಂಬಲ = 11
- ಈ ಕೆಳಗಿನ ಮೂರೂ ಲೇಖನಗಳ ಸಾರಾಂಶವನ್ನು ಈ ಲೇಖನದಲ್ಲಿ ಸಂಗ್ರಹಿಸಿ ಹಾಕಿದೆ
- Democratic Party presidential primaries, 2016
- Electoral College (United States)
- Republican Party presidential primaries, 2016
ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ 2016
[ಬದಲಾಯಿಸಿ]2016 ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆಯನ್ನು , 8, ನವೆಂಬರ್ 2016 ಮಂಗಳವಾರ, ನಡೆಸಲು ನಿರ್ಧರಿಸಲಾಗಿದೆ. ಇದು 58 ನೇ ಚತುರ್ವಾರ್ಷಿಕ ಅಮೇರಿಕಾದ ರಾಷ್ಟ್ರಪತಿಯ ಚುನಾವಣೆ ಆಗಿದೆ.. ಮತದಾರರು ‘ಅಧ್ಯಕ್ಷೀಯ ಚುನಾಯಕ’ ರನ್ನು (ಮತದಾರ ಪ್ರತಿನಿಧಿಗಳನ್ನು) ಆಯ್ಕೆ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ‘ಚುನಾವಣಾ ಕಾಲೇಜ್’ ಮೂಲಕ ಮತದಾರ ಪ್ರತಿನಿಧಿಗಳು ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವರು. ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಮೊದಲು ಆ ರಾಷ್ಟ್ರದ ರಾಜಕೀಯ ಪಕ್ಷಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಆಯಾ ಪಕ್ಷದ ನಿಯಮಾವಳಿಯಂತೆ ಆಯ್ಕೆಮಾಡುವರು.
ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಉಪಾಧ್ಯಕ್ಷರನ್ನು ಚುನಾಯಿಸುವ ವಿಧಾನ
[ಬದಲಾಯಿಸಿ]- ಸಂಯುಕ್ತ ಸಂಸ್ಥಾನದ “ಚುನಾಯಿಕರ ಕೂಟ” (ಎಲೆಕ್ಟೋರಲ್ ಕಾಲೇಜು: [[:en:Electoral College|Electoral College) ಪ್ರತಿ ಅಮೇರಿಕಾ ಸಂಯುಕ್ತ ಸಂಸ್ಥಾನದ (ಯುನೈಟೆಡ್ ಸ್ಟೇಟ್ಸ್) ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನಾಲ್ಕು ವರ್ಷಗಳ ಅವಧಿಗೆ ಆಯ್ಕೆ ಮಾಡುವ ಒಂದು ಸಂಸ್ಥೆಯಾಗಿದೆ. ಅಮೇರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರು ನೇರವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ; ಬದಲಿಗೆ, ಮತದಾರರು ನೇರವಾಗಿ ಯಾವಾಗಲೂ ನಿರ್ದಿಷ್ಟ ಅಧ್ಯಕ್ಷೀಯ ಹಾಗು ಉಪಾಧ್ಯಕ್ಷೀಯ ಅಭ್ಯರ್ಥಿಗಳಿಗಾಗಿ ಮತ ವಾಗ್ದಾನ ಮಾಡಿದ ( ಈ ಮತದಾರರ ಪ್ರತಿನಿಧಿಗಳು ಒಂದು ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಲು ವಾಗ್ದಾನ ಮಾಡಿರುತ್ತಾರೆ: ವಾಗ್ದಾನ ವಿಲ್ಲದ /ಮೀರುವ ಚುನಾಯಕರು ಇರಲು ಸಾಧ್ಯ; ಆದರೂ),"ಮತದಾರರ ಪ್ರತಿನಿಧಿಗಳು" ಎಂದರೆ “ಚುನಾಯಕರ” {[[:en:electors|electors,)ನ್ನು ಆರಿಸುವರು.(ಇವರು ಗೊತ್ತುಪಡಿಸಿದ ಮಧ್ಯವರ್ತಿಗಳು) ಅವರನ್ನು ಪ್ರತಿ ರಾಜ್ಯದ ನಿರ್ದಿಷ್ಟ ಕಾನೂನಿನ ಪ್ರಕಾರ ಆಯ್ಕೆ ಮಾಡುತ್ತಾರೆ. ಆ “ಚುನಾಯಕರನ್ನು” 50 ರಾಜ್ಯಗಳು ಮತ್ತು ಕೊಲಂಬಿಯಾ ಜಿಲ್ಲೆ - ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ (ವಾಷಿಂಗ್ಟನ್ ಡಿ.ಸಿ. ಎಂದು ಕರೆಯಲಾಗುತ್ತದೆ)ಗಳಿಂದ ಆರಿಸುವರು. ಪ್ರತಿ ರಾಜ್ಯದಲ್ಲಿ ‘ಚುನಾಯಕ’ರ ಸಂಖ್ಯೆ ಆ ರಾಜ್ಯದಿಂದ ಅಮೇರಿಕಾ ಸಂಸತ್ತಿನ “ಪ್ರತಿನಿಧಿ ಸಭೆ”ಗೆ ಮತ್ತು ಸೆನೆಟಿಗೆ ಆಯ್ಕೆಯಾಗುವ ಪ್ರನಿಧಿಗಳ ಸಂಖ್ಯೆಯಷ್ಟೆ ಇರುತ್ತದೆ.(is equal to the number of members of Congress). ಇಪ್ಪತ್ತಮೂರನೇ ತಿದ್ದುಪಡಿಯು ಕೊಲಂಬಿಯಾ ಜಿಲ್ಲೆಗೆ, ಕನಿಷ್ಠ ಪ್ರತಿನಿಧಿಗಳನ್ನು ಹೊಂದಿದ ರಾಜ್ಯದ ಸಂಖ್ಯೆಯಷ್ಟೇ ಚುನಾಯಕರನ್ನು ಹೊಂದಲು ಅವಕಾಶನೀಡುತ್ತದೆ. ಈ ಸಂದರ್ಭದಲ್ಲಿ ಕನಿಷ್ಟ ಜನಸಂಖ್ಯೆಯ ರಾಜ್ಯವು ಪ್ರಸ್ತುತ ಮೂರು ಕಾಂಗ್ರೆಸ್ ಸದಸ್ಯರನ್ನು ಹೊಂದಿದೆ. ಅದರಂತೆ ಕೊಲಂಬಿಯಾ ಜಿಲ್ಲೆಯು ಮೂರು ಜನ ಚುನಾಯಕರನ್ನು ಆರಿಸಬಹುದು. ಆದ್ದರಿಂದ, ಇಂದು ಒಟ್ಟು ಚುನಾಯಕರ ಸಂಖ್ಯೆ 538 ಆಗುತ್ತದೆ. ಸಂಸತ್ತಿಹ ಪ್ರತಿನಿಧಿ ಸಭೆಯ 435 ಸದಸ್ಯರು ಮತ್ತು 100 ಜನ ಸೆನೆಟರ್ಸ್ ಜೊತೆಗೆ ಕೊಲಂಬಿಯಾ ಜಿಲ್ಲೆಯಿಂದ ಮೂರು ಹೆಚ್ಚುವರಿ 'ಚುನಾಯಕ'ರು ಇದರಲ್ಲಿ ಸೇರುತ್ತಾರೆ. ಸಂವಿಧಾನಬದ್ಧವಾಗಿ ಆಯ್ಕೆಯಾದವರು ಅಥವಾ ನೇಮಕವಾದ ಅಧಿಕಾರಿ ಚುನಾಯಕನಾಗಿ ಆಯ್ಕೆಯಾಗಲು ಸಂವಿಧಾನ ನಿಷೇಧಿಸುತ್ತದೆ. ಆದ್ದರಿಂದ ಗೆಲ್ಲಲು 270 ಚುನಾವಣಾ ಮತಗಳನ್ನು ಪಡೆಯುವ ಅಗತ್ಯವಿದೆ. [೧]
- ಮೈನೆ ಮತ್ತು ನೆಬ್ರಸ್ಕಾ (Maine and Nebraska) ಪ್ರದೇಶದ ಚುನಾಯಕರನ್ನು ಬಿಟ್ಟು, ಚುನಾಯಕರನ್ನು ಒಂದು "ವಿಜೇತನಿಗೆ-ಎಲ್ಲಾ ಮತ" ಎಂಬ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅದೆಂದರೆ, ರಾಜ್ಯದ ಹೆಚ್ಚು ಮತಗಳನ್ನು ಗಳಿಸಿದ ಅಧ್ಯಕ್ಷೀಯ ಅಭ್ಯರ್ಥಿಗೆ ಆ ರಾಜ್ಯದ ಎಲ್ಲಾ ('ಚುನಾಯಕ'ರ) ಮತಗಳೂ ಬಂದಂತೆ,ಎಂಬ ನಿಯಮ. ಆದರೆ ಮೈನೆ ಮತ್ತು ನೆಬ್ರಸ್ಕಾಗಳಲ್ಲಿ ಪ್ರತಿನಿಧಿ ಸಭೆಯ ಪ್ರಾತಿನಿಧಿಕ ಜಿಲ್ಲಿಗೆ ಒಂದರಂತೆ ("ಕಾಂಗ್ರೆಸ್ ಜಿಲ್ಲಾ ವಿಧಾನ" ಬಳಸಿ) ಚುನಾಯಕರನ್ನು ಆಯ್ಕೆ ಮಾಡುವರು ಮತ್ತು ಸೆನೇಟ್``ನ 2 ಪ್ರತಿನಿಧಿಗಳ ಲೆಕ್ಕಕೆ ಇಡೀ ರಾಜ್ಯಾದ್ಯಂತ ಜನಮತದ ಮೂಲಕ ಎರಡು ಚುನಾಯಕರನ್ನು (ಜನಪ್ರಿಯ ಮತದಾನದ ಮೂಲಕ 2 ಮತದಾರ ಪ್ರತಿನಿಧಿಗಳನ್ನು) ಆಯ್ಕೆ ಮಾಡುವರು. 'ಚುನಾಯಕ'ನು ವಾಗ್ದಾನವನ್ನು (ಇದೇ ಪಕ್ಷದ ಅಭ್ಯರ್ತಿಗೆ ಮತನೀಡಬೇಕೆಂಬ ನಿಯಮ) ಪಾಲಿಸಲು ಯಾವುದೇ ಫೆಡರಲ್ ಕಾನೂನು ಇಲ್ಲ. ಚುನಾಯಕನು ವಾಗ್ದಾನಕ್ಕೆ ವಿರುದ್ಧವಾಗಿ ಕೆಲವೇ ಸಂದರ್ಭಗಳಲ್ಲಿ ಮತ ನೀಡಿದ್ದಾನೆ). ಹನ್ನೆರಡನೆಯ ತಿದ್ದುಪಡಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಹೇಗೆ ಆಯ್ಕೆ ಮಾಡಬೇಕೆಂದು ಹೇಳುತ್ತದೆ. ಅದರಂತೆ 'ಚುನಾಯಕ'ನು, ಅಧ್ಯಕ್ಷನಿಗೆ ಆಯ್ಕೆಗೆ ಒಂದು ಮತ ಮತ್ತು ಉಪಾಧ್ಯಕ್ಷನ ಆಯ್ಕೆಗೆ ಮತ್ತೊಂದು ಮತವನ್ನು ನೀಡಬೇಕಾಗುತ್ತದೆ.
ಅಮೇರಿಕಾದ ಅಧ್ಯಕ್ಷರಾಗುವ ಅಭ್ಯರ್ಥಿ ಆಯ್ಕೆ
[ಬದಲಾಯಿಸಿ]- 2016ರ ಪಕ್ಷಗಳ ಅಧ್ಯಕ್ಷೀಯ ಪ್ರಮುಖರು (Party presidential primaries) ಮತ್ತು ಮತದಾರ ಸಭೆಗಳು (caucuses) ಅಮೇರಿಕಾದ ಎಲ್ಲಾ 50 ರಾಜ್ಯಗಳು, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಮತ್ತು ಐದು ಅಮೇರಿಕಾ ಕೇಂದ್ರಾಡಳಿತ ಪ್ರದೇಶಗಳಲ್ಲಿ 2016 ಫೆಬ್ರವರಿ 1 ಮತ್ತು ಜೂನ್ 14, ರ ನಡುವೆ ನಡೆಯುವ/ ನಡೆಯುತ್ತಿರುವ ಚುನಾವಣಾ ಸ್ಪರ್ಧೆಗಳ ಒಂದು ಶ್ರೇಣಿಯಾಗಿದೆ.
- ದ್ವಿಪಕ್ಷೀಯ ಪದ್ಧತಿ ಇರುವ ಅಮೆರಿಕದ ಪ್ರಜಾಪ್ರಭುತ್ವದಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಅಧ್ಯಕ್ಷ ಹುದ್ದೆಗೆ ನೇರ ಹಣಾಹಣಿ ನಡೆಸುತ್ತಾರೆ. ಆದರೆ ಅದಕ್ಕೂ ಮುನ್ನ ಈ ಎರಡೂ ಪಕ್ಷಗಳಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಪಕ್ಷ ಮಟ್ಟದ ಚುನಾವಣೆ ನಡೆಯುತ್ತದೆ. ಅಮೆರಿಕದ ಅಧ್ಯಕ್ಷ ಚುನಾವಣೆ ನಡೆಯಲಿರುವುದು ಈ ನವೆಂಬರ್‌ನಲ್ಲಿ. ಆದರೆ ಅದಕ್ಕೂ ಒಂದು ವರ್ಷ ಮೊದಲೇ ಎರಡೂ ಪಕ್ಷಗಳಲ್ಲಿ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಇದು ಆಯಾ ಪಕ್ಷಗಳ ಪ್ರತಿನಿಧಿಗಳು ಮಾತ್ರ ಭಾಗವಹಿಸುವ ಚುನಾವಣೆ. ಈ ಚುನಾವಣೆಯೂ ಎರಡು ಹಂತಗಳಲ್ಲಿ ನಡೆಯುತ್ತದೆ. ಮೊದಲನೆಯದಾಗಿ ಆಯಾ ರಾಜ್ಯಗಳಲ್ಲಿ ಇರುವ ಪಕ್ಷದ ಪ್ರತಿನಿಧಿಗಳು ನಡೆಸುವ ಆಯ್ಕೆ (ಪ್ರೈಮರಿ). ಎರಡನೆಯದಾಗಿ ಶಾಸನಸಭೆಗಳಲ್ಲಿ ಇರುವ ಪಕ್ಷದ ಪ್ರತಿನಿಧಿಗಳಷ್ಟೇ ಒಟ್ಟು ಸೇರಿ ನಡೆಸುವ ಆಯ್ಕೆ (ಕಾಕಸಸ್). ಇಲ್ಲಿ ಗೆಲುವು ಸಾಧಿಸಿದಾತ ಆಯಾ ಪಕ್ಷದಿಂದ ರಾಷ್ಟ್ರದ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗುತ್ತಾನೆ.
ಸ್ಥಳೀಯ ಚುನಾವಣಾ ಸಭೆ -ಪಕ್ಷದ ಅಭ್ಯರ್ಥಿಯ ಆಯ್ಕೆ
[ಬದಲಾಯಿಸಿ]- ರಾಜಕೀಯ ಪಕ್ಷಗಳು ಸಂಘಟಿಸುವ ಸ್ಥಳೀಯ ಚುನಾವಣಾ ಚರ್ಚಾಕೂಟ ಅಥವಾ ಸಭೆಯಲ್ಲಿ (Caucus) ಭಾಗವಹಿಸುವ ಆಯಾ ಪಕ್ಷದ ಸದಸ್ಯರಾದ ಸಾಮಾನ್ಯ ಮತದಾರರು. ಅಧ್ಯಕ್ಷೀಯ ಅಭ್ಯರ್ಥಿಯನ್ನು ಅವರೇ ಆಯ್ಕೆ ಮಾಡುವುದಿಲ್ಲ. ಆದರೆ ಮುಂದೆ ನಡೆಯುವ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗೆ ಮತದಾನ ಮಾಡುವ ಪ್ರತಿನಿಧಿಗಳನ್ನು (Delegates) ಆಯ್ಕೆ ಮಾಡುವರು. ಈ ಪಕ್ಷದ ನಾಗರೀಕ ಮತದಾರರ ಸಮಾವೇಶ ಆಡಳೀತ ಕೇಂದ್ರವಾದ (ಕಾಂಗ್ರೆಸ್) ಕೌಂಟಿ(ತಾಲ್ಲೂಕು), ಪರ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಈ ಬಗೆಯ ಪ್ರಕ್ರಿಯೆ ನಡೆಯುವುದು. ಈ ಸಭೆಗಳಲ್ಲಿ ಒಂದೇ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳು ತಮ್ಮ ತಮ್ಮ ಆಡಳಿತದ ನಿಲುವನ್ನು ಮಂಡಿಸುವರು ಮತ್ತು ತಮ್ಮದೇ ಪಕ್ಷದ ಇತರ ಅಭ್ಯರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವರು. ರಾಜ್ಯ ಮತ್ತು ಜಿಲ್ಲಾ ಪಕ್ಷದ (ಕಾಂಗ್ರೆಸ್?) ಅಧಿವೇಶನಗಳಲ್ಲಿ ರಾಷ್ಟ್ರೀಯ ಪ್ರತಿನಿಧಿಗಳ ಆಯ್ಕೆ ನಡೆಯುವುದು. ಅವರು ಪ್ರೈಮರಿಗಳು; ಅವರೇ ತಮ್ಮ ಪಕ್ಷದ ಅಭ್ಯರ್ಥಿಗಳಲ್ಲಿ ಒಬ್ಬನನ್ನು/ಒಬ್ಬಳನ್ನು ಆಯ್ಕೆ ಮಾಡುವರು. ಈ ಆಯ್ಕೆ ವಿಧಾನದಲ್ಲಿ ಪ್ರತಿನಿಧಿಗಳನ್ನು ಆರಿಸುವಲ್ಲಿ, ಪಕ್ಷಗಳು ಬೇರೆ ಬೇರೆ ನಿಯಮ ಅನುಸರಿಸುವುವು.
ಪ್ರತಿನಿಧಿಗಳು
[ಬದಲಾಯಿಸಿ]- ಪ್ರತಿನಿಧಿಗಳು ಸಾಮಾನ್ಯವಾಗಿ ಪಕ್ಷದ ಕಾರ್ಯಕರ್ತರು, ಸ್ಥಳೀಯ ರಾಜಕೀಯ ನಾಯಕರು, ಅಥವಾ ಒಂದು ನಿರ್ದಿಷ್ಟ ಅಭ್ಯರ್ಥಿ ಬೆಂಬಲಿಗರು ಆಗಿರುವರು. ಅಧ್ಯಕ್ಷೀಯ ಪ್ರಚಾರಕರು (ಅಭ್ಯರ್ಥಿಗಳು) ಸ್ಥಳೀಯ ಮತ್ತು ರಾಜ್ಯ ರಾಜಕಾರಣಿಗಳನ್ನು, ಪ್ರತಿನಿಧಿಗಳನ್ನು ಓಲೈಸುವರು. ಏಕೆಂದರೆ. ಪ್ರತಿನಿಧಿಗಳು ತಮ್ಮ ಸ್ಥಳೀಯ ಪಕ್ಷದ ರಾಜಕೀಯ ಕ್ಷೇತ್ರಗಳಲ್ಲಿ ಅವರಿಗೆ ಬೆಂಬಲ ತರಲು ಪ್ರಯತ್ನಿಸುವರು. ಈ ಸಂಘಟನೆಯ ಅಭಿಯಾನದಲ್ಲಿ ಸಂಚಾಲಕ ಸಮಿತಿಯ ಸದಸ್ಯರು ಅಥವಾ ದೀರ್ಘಕಾಲದ ಸಕ್ರಿಯ ಸದಸ್ಯರು ಸೇರಿರುತ್ತಾರೆ.
- ಡೆಮೋಕ್ರಟಿಕ್’ಅಭ್ಯರ್ಥಿ ಆಯ್ಕೆ ಕ್ರಮ
- 2016,ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡೆಮೋಕ್ರಟಿಕ್’ಅಭ್ಯರ್ಥಿ, ತಮ್ಮ ಪಕ್ಷದ ಅಭ್ಯರ್ಥಿಯಾಗಲು ಒಟ್ಟು 4.763 ಪ್ರತಿನಿಧಿಗಳಲ್ಲಿ ಕನಿಷ್ಠ 2,382 ಪ್ರತಿನಿಧಿಗಳ ಬೆಂಬಲ ಪಡೆಯಬೇಕು. ಪ್ರತಿ ರಾಜ್ಯಕ್ಕೆ ಮಂಜೂರು ಆದ ಪ್ರತಿನಿಧಿಗಳ ಸಂಖ್ಯೆ, ಹಿಂದಿನ ಮೂರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತು ಚುನಾವಣಾ ಕಾಲೇಜ್ ಮತಗಳ ಅದರ ನಿಗದಿತ ಸಂಖ್ಯೆಯನ್ನು ಮತ್ತು ರಾಜ್ಯದ ಡೆಮಾಕ್ರಟಿಕ್ ಮತಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.
- ರಿಪಬ್ಲಿಕನ್ ಅಭ್ಯರ್ಥಿಯ ಆಯ್ಕೆ ಕ್ರಮ
- ಏತನ್ಮಧ್ಯೆ, ರಿಪಬ್ಲಿಕನ್ ಅಭ್ಯರ್ಥಿಯು ಅಧ್ಯಕ್ಷೀಯ ನಾಮನಿರ್ದೇಶನವನ್ನು ಪಡೆಯಲು, 2,472 ಪಕ್ಷದ ಪ್ರತಿನಿಧಿಗಳಲ್ಲಿ ಕನಿಷ್ಠ 1,237 ಪ್ರತಿನಿಧಿಗಳ ಬೆಂಬಲವನ್ನು ಪಡೆಯಬೇಕು. ರಿಪಬ್ಲಿಕನ್ ಪಕ್ಷವು ಪ್ರತಿ ರಾಜ್ಯಕ್ಕೆ ಹತ್ತು ಪ್ರತಿನಿಧಿಗಳನ್ನೂ, ಜೊತೆಗೆ ಪ್ರತಿ ಕಾಂಗ್ರೆಸ್ ಜಿಲ್ಲಾ ವಿಭಾಗಕ್ಕೆ ಮೂರು, ಪ್ರತಿನಿಧಿಗಳನ್ನೂ ಮತ್ತು ಹಿಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷದ ಚುನಾವಣಾ ಮತಗಳನ್ನು ಕೊಡುಗೆ ಮಾಡಿದ ರಾಜ್ಯಗಳಿಗೆ ಹಾಗೂ ಉನ್ನತ ಹುದ್ದೆಗಳಿಗೆ ರಿಪಬ್ಲಿಕನ್’ ಅಧಿಕಾರಿಗಳನ್ನು ಆಯ್ಕೆ ಮಾಡಿದ ರಾಜ್ಯಗಳಿಗೆ ಬೋನಸ್ ಪ್ರತಿನಿಧಿಗಳನ್ನು ಗೊತ್ತುಪಡಿಸುತ್ತದೆ.
ಹಿಲರಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ
[ಬದಲಾಯಿಸಿ]- ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗದ ಹಿಲರಿ ಕ್ಲಿಂಟನ್ ದಿ.07-06-2016 ಮಂಗಳವಾರದ ಪ್ರಾಥಮಿಕ ಚುನಾವಣೆಗಳಲ್ಲಿ ಅವರು ನ್ಯೂಜೆರ್ಸಿ, ನ್ಯೂ ಮೆಕ್ಸಿಕೊ ಮತ್ತು ಸೌತ್ ಡಕೋಟಾ ರಾಜ್ಯಗಳಲ್ಲಿ ಗೆಲುವು ಕಾಣುವ ಮೂಲಕ ಡೆಮಾಕ್ರಟಿಕ್‌ನ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡು ಇತಿಹಾಸ ಸೃಷ್ಟಿಸಿದ್ದಾರೆ.
- ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಸ್ಥಾನಕ್ಕೆ ನಾಮನಿರ್ದೇಶನಗೊಳ್ಳಲು ಅಗತ್ಯವಾಗಿದ್ದ 2,383 ಪ್ರತಿನಿಧಿಗಳ ಬೆಂಬಲವನ್ನು ಹಿಲರಿ ಪಡೆದಿರುವರು.
- ಹಿಲರಿ ಪ್ರತಿಸ್ಪರ್ಧಿ ಬೆರ್ನಿ ಸ್ಯಾಂಡರ್ಸ್ ತಮ್ಮ ಸೋಲು ಒಪ್ಪಿಕೊಂಡಿಲ್ಲ. ಹಿಲರಿ ಅವರು 2,755 ಪ್ರತಿನಿಧಿಗಳ ಬೆಂಬಲ ಹೊಂದಿದ್ದರೆ, ಸ್ಯಾಂಡರ್ಸ್ ಅವರಿಗೆ 1,852 ಪ್ರತಿನಿಧಿಗಳ ಬೆಂಬಲವಿದೆ.[೫]
- ಇದರಿಂದ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಮತ್ತು ರಿಪಬ್ಲಿಕನ್ ಪಕ್ಷದ ವಿವಾದಿತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ ನಡೆಯುವುದು ನಿಚ್ಚಳವಾಗಿದೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ಆಯ್ಕೆ
[ಬದಲಾಯಿಸಿ]- ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ಆಯ್ಕೆಯಾಗಿದ್ದಾರೆ. ಅವರಿಗೆ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿರುವ 4,764 ಪ್ರತಿನಿಧಿಗಳು ಅಧಿಕೃತವಾಗಿ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಹಿಲರಿ ಅವರು, ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆಯಾದ ಪ್ರಥಮ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.
- ನವೆಂಬರ್ 8ರಂದು ನಡೆಯಲಿರುವ ಚುನಾವಣೆಯಲ್ಲಿ ಹಿಲರಿ ಒಂದು ವೇಳೆ ಗೆಲುವು ಸಾಧಿಸಿದಲ್ಲಿ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
ಚುನಾವಣೆಯ ಬೆಳವಣಿಗೆ
[ಬದಲಾಯಿಸಿ]- ರಿಪಬ್ಲಿಕನ್ ಪಕ್ಷದಿಂದ ತಾವೇ ಅಧ್ಯಕ್ಷೀಯ ಅಭ್ಯರ್ಥಿ ಆಗಬೇಕೆಂದು ಒಟ್ಟು 15 ಮಂದಿ ಸ್ಪರ್ಧಿಸಿದ್ದಾರೆ. ಹಾಗೆಯೇ ಡೆಮಾಕ್ರಟಿಕ್ ಪಕ್ಷದಿಂದ ಆರು ಜನ ಸ್ಪರ್ಧೆಯಲ್ಲಿದ್ದಾರೆ. ಜನವರಿಯಲ್ಲಿ ನ್ಯೂ ಹ್ಯಾಂಪ್‌ಷೈರ್‌ನಲ್ಲಿ ನಡೆದ (ಮೊದಲ) ಪ್ರಾಥಮಿಕ ಹಂತದ ಮೊದಲ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಲ್ಲಿ ಡೊನಾಲ್ಡ್ ಟ್ರಂಪ್ ಮೇಲುಗೈ ಸಾಧಿಸಿದ್ದರೆ,
- ಡೆಮಾಕ್ರಟಿಕ್ ಪಕ್ಷದಲ್ಲಿ ಬೆರ್ನಿ ಸ್ಯಾಂಡರ್ಸ್ ಆರಂಭಿಕ ಮುನ್ನಡೆ ಗಳಿಸಿದ್ದಾರೆ.
- ಮಾಧ್ಯಮಗಳಲ್ಲಿ ಅತ್ಯಂತ ದೊಡ್ಡ ಚರ್ಚೆ ಈಗ ನಡೆಯುತ್ತಿರುವುದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಯಾರಾಗಬಹುದು ಎನ್ನುವ ಬಗ್ಗೆ. ಇಲ್ಲಿ ಆರು ಜನರು ಸ್ಪರ್ಧೆಯಲ್ಲಿದ್ದರೂ ನಿಜಸ್ಪರ್ಧೆ ನಡೆಯುತ್ತಿರುವುದು, ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಮತ್ತು ಬೆರ್ನಿ ಸ್ಯಾಂಡರ್ಸ್ ಮಧ್ಯೆ. ಒಂದು ಕಾಲದಲ್ಲಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿ ಸಾಕಷ್ಟು ಸುದ್ದಿ ಮಾಡಿದ ಬಿಲ್ ಕ್ಲಿಂಟನ್ ಅವರ ಪತ್ನಿ ಹಾಗೂ ಈಗಿನ ಅಧ್ಯಕ್ಷ ಬರಾಕ್ ಒಬಾಮ ಸರ್ಕಾರದ ಹಿಂದಿನ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ಆಗಿದ್ದ 68ರ ‘ಹರೆಯ’ದ ಹಿಲರಿ ಕ್ಲಿಂಟನ್ ಜಗತ್ತಿನಾದ್ಯಂತ ಪರಿಚಿತ ಮುಖ. ನ್ಯೂಯಾರ್ಕ್‌ನ ಮಾಜಿ ಸೆನೆಟರ್.
- ಅವರ ಪ್ರಮುಖ ಪ್ರತಿಸ್ಪರ್ಧಿ ಬೆರ್ನಿ ಸ್ಯಾಂಡರ್ಸ್ ಕೂಡ ಹಳೆ ತಲೆಯೇ. 74 ವರ್ಷ ವಯಸ್ಸಿನ ಅವರು ವೆರ್‌ಮೊಂಟ್‌ನ ಸೆನೆಟರ್. ಕಳೆದ 25 ವರ್ಷಗಳಿಂದಲೂ ಈತ ಸೆನೆಟರ್. ನ್ಯೂ ಹ್ಯಾಂಪ್‌ಷೈರ್‌ನಲ್ಲಿ ಸ್ಯಾಂಡರ್ಸ್, ಹಿಲರಿ ಕ್ಲಿಂಟನ್'ರಿಗಿಂತ ಶೇಕಡ 20ರಷ್ಟು ಹೆಚ್ಚು ಮತಗಳನ್ನು ಗಳಿಸಿ ಗೆದ್ದಿದ್ದಾರಾದರೂ, ಮುಂದಿನ ಕ್ಷೇತ್ರಗಳಲ್ಲಿ ಹಿಲರಿ ಕ್ಲಿಂಟನ್ ತೀವ್ರ ಸ್ಪರ್ಧೆ ಒಡ್ಡುವುದು ಖಚಿತ ಎನ್ನಲಾಗುತ್ತಿದೆ. ಜೂನ್ 8 ರ ಹೊತ್ತಿಗೆ ಕ್ಲಿಂಟನ್ ಸ್ವಲ್ಪ ಮುಂದಿದ್ದಾರೆ.
- . ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವವರು ಕೋಟ್ಯಧಿಪತಿಗಳೇ ಆಗಿರಬೇಕು. ಅಲ್ಲವಾದಲ್ಲಿ ಮಿಲಿಯಾಧಿಪತಿಗಳಾದರೂ ಆಗಿರಬೇಕು. ಆದರೆ ಈ ಬೆರ್ನಿ ಸ್ಯಾಂಡರ್ಸ್ ಇವೆರಡೂ ಅಲ್ಲ; ಒಬ್ಬ ಸಾಮಾನ್ಯ ಸೆನೆಟರ್! ಆತನ ಒಟ್ಟು ನಿವ್ವಳ ಆಸ್ತಿ ಮೌಲ್ಯ ಕೇವಲ 3 ಲಕ್ಷ ಡಾಲರ್! (ಸ್ಪರ್ಧೆಯಲ್ಲಿ ಇನ್ನಿಬ್ಬರು ಈತನಿಗಿಂತಲೂ ಬಡವರು ಇದ್ದಾರೆ. ಒಬ್ಬಾತ ಫ್ಲೋರಿಡಾ ಸೆನೆಟರ್ ಮಾರ್ಕೊ ರುಬಿಯೊ- ಈತನ ನಿವ್ವಳ ಆಸ್ತಿ ಮೊತ್ತ ಕೇವಲ 1 ಲಕ್ಷ ಡಾಲರ್. ಇನ್ನೊಬ್ಬಾತ ಮಾರ್ಟಿಸ್ ಒಮಲ್ಲೇ- ಈತನ ನಿವ್ವಳ ಆಸ್ತಿ ಸೊನ್ನೆ!
- 25 ವರ್ಷಗಳಿಂದಲೂ ಸೆನೆಟ್ ಸದಸ್ಯನಾಗಿದ್ದೂ ಇಷ್ಟೊಂದು ಬಡವನಾಗಿರುವುದನ್ನೇ ‘ಪ್ಲಸ್ ಪಾಯಿಂಟ್’ ಮಾಡಿಕೊಳ್ಳಲು ಸ್ಯಾಂಡರ್ಸ್ ಯತ್ನಿಸುತ್ತಿದ್ದಾರೆ. ‘ಕೋಟ್ಯಧಿಪತಿಗಳೇ ರಾಜಕೀಯ ಪ್ರಕ್ರಿಯೆಯ ಸ್ವಾಮ್ಯ ಹೊಂದಿರುವುದು ಎಳ್ಳಷ್ಟೂ ಸರಿಯಲ್ಲ’ ಎಂದು ಆರಂಭದಲ್ಲೇ ವಾಗ್ದಾಳಿ ಆರಂಭಿಸಿರುವ ಸ್ಯಾಂಡರ್ಸ್, ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಬಯಸಿರುವ ಮೊದಲ ಯಹೂದಿಯೂ ಹೌದು!
ಟ್ರಂಪ್ ಪ್ರಚಾರ
[ಬದಲಾಯಿಸಿ]- 19/07/2016
- ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ ಐಎಸ್ ಉಗ್ರರ ವಿರುದ್ಧ ಯುದ್ಧ ಸಾರುತ್ತೇನೆ. ಆದರೆ, ಯುದ್ಧ ರಂಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಅಮೆರಿಕ ಪಡೆಯನ್ನು ಬಳಸಿಕೊಳ್ಳಲಾಗುವುದು ಎಂದು ರಿಪಬ್ಲಿಕನ್ ಪಕ್ಷದ ಸಂಭವನೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸಿಬಿಎಸ್‌ಗೆ ನ್ಯೂಸ್‌ಗೆ ನೀಡಿದ 60 ನಿಮಿಷಗಳ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.‘ಜನರು ನಮ್ಮನ್ನು ಆಯ್ಕೆ ಮಾಡಿದರೆ ನಾವು ಐಎಸ್ ಉಗ್ರರನ್ನು ನಿರ್ನಾಮ ಮಾಡುತ್ತೇವೆ’ ಎಂದು ಹೇಳಿದ್ದಾರೆ.
- ‘ಕೆಲವೇ ಸೈನಿಕರನ್ನು ಯುದ್ಧ ರಂಗಕ್ಕಿಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಗುಪ್ತಚರರನ್ನು ಬಳಸಿಕೊಳ್ಳುತ್ತೇವೆ. ಇಂದಿನ ಪರಿಸ್ಥಿತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಸೈನಿಕ ರನ್ನು ಯುದ್ಧರಂಗಕ್ಕೆ ಕಳುಹಿಸಲು ನಾವು ಬಯಸುವುದಿಲ್ಲ’ ಎಂದು ಅವರು ವಿವರಿಸಿದರು.
- ‘ಇತರ ದೇಶಗಳು ಏನು ಮಾಡುತ್ತವೆ ಎನ್ನುವುದು ನಮಗೆ ಮುಖ್ಯವಲ್ಲ. ನಾವಂತೂ ಐಎಸ್ ಉಗ್ರರ ದಮನಕ್ಕೆ ಮುಂದಾಗುತ್ತೇವೆ’ ಎಂದರು. ಇತ್ತೀಚೆಗೆ ಧಾಕಾದಲ್ಲಿ ಮತ್ತು ಪ್ರಾನ್ಸ್‍ನಲ್ಲಿ ಭಯೊತ್ಪಅದಕ ಧಾಳಿಯಿಂದ ೨೦ ಮತ್ತು ೮೪ ಜನ ಸತ್ತಿದ್ದರು. ಅದರ ಲಾಭವನ್ನು ಟ್ರಂಪ್ ಪಡೆಯಲು ಪ್ರಯತ್ನಿಸಿದ್ದಾರೆನ್ನಬಹುದು. [೭]
ಟ್ರಂಪ್‍ಗೆ ವಿರೋಧ
[ಬದಲಾಯಿಸಿ]- ಕ್ಲೀವ್ಲ್ಯಾಂಡ್‍ನಲ್ಲಿ ೧೯-೭-೨೦೧೬ ರಂದು ರಿಪಬ್ಲಿಕನ್ ಪಕ್ಷದಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಸೋಮವಾರ ಸುಮಾರು 100 ಮಹಿಳೆಯರು ಬೆತ್ತಲೆ ಪ್ರತಿಭಟನೆ ನಡೆಸಿದರು. ಅಧ್ಯಕ್ಷ ಸ್ಥಾನಕ್ಕೆ ಡೊನಾಲ್ಡ್ ಟ್ರಂಪ್ ಸೂಕ್ತ ವ್ಯಕ್ತಿ ಅಲ್ಲ ಎಂದು ಬಿಂಬಿಸಲು ‘ರಾಜಕೀಯ ಕಲಾ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ’ ಛಾಯಾಚಿತ್ರಗಾರರು ನೀಡಿದ ಕರೆಗೆ ಸ್ಪಂದಿಸಿದ ನೂರಕ್ಕೂ ಅಧಿಕ ಮಹಿಳೆಯರು ಇಂದು ನಗ್ನವಾಗಿ ಕನ್ನಡಿ ಹಿಡಿದುಕೊಂಡು ಪ್ರದರ್ಶನ ನಡೆಸಿದರು. ಪಕ್ಷದ ಅಧ್ಯಕ್ಷ ಸ್ಥಾನದ ಪ್ರಾಥಮಿಕ ಅಭ್ಯರ್ಥಿಯಾಗಿ ಟ್ರಂಪ್ ಅವರನ್ನು ಆಯ್ಕೆ ಮಾಡಲಾದ ರಿಪಬ್ಲಿಕನ್ ಪಕ್ಷದ ಸಭೆಯಲ್ಲಿಯೇ ಮಹಿಳೆಯರು ಈ ನಗ್ನ ಪ್ರತಿಭಟನೆ ನಡೆಸಿದರು.[೮]
ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿ
[ಬದಲಾಯಿಸಿ]- 21/07/2016:
- ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಬುಧವಾರ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಈ ಬಗ್ಗೆ ಔಪಚಾರಿಕ ಘೋಷಣೆ ಮಾಡಲಾಯಿತು. ಅಧ್ಯಕ್ಷರ ಚುನಾವಣೆ ನವೆಂಬರ್ 8 ರಂದು ನಡೆಯಲಿದೆ. ಆಗ ಅವರು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರನ್ನು ಎದುರಿಸಲಿದ್ದಾರೆ.
- 70 ವರ್ಷದ ಟ್ರಂಪ್ ಮೂಲತಃ ಉದ್ಯಮಿ. ಒಂದು ವರ್ಷದ ಹಿಂದೆ ಅವರು ರಾಜಕೀಯ ಪ್ರವೇಶಿಸಿದ್ದರು. ಅನುಭವಿ ರಾಜಕಾರಣಿಗಳಾದ ಜಾನ್ ಕಸಿಚ್ ಮತ್ತು ಜೆಬ್ ಬುಷ್ ಸೇರಿದಂತೆ 16 ಪ್ರಮುಖ ಸ್ಪರ್ಧಿಗಳನ್ನು ಪಕ್ಷದೊಳಗೆ ಎದುರಿಸಿದ್ದರು. ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಲು ಅಗತ್ಯವಿದ್ದ 1,237 ಪ್ರತಿನಿಧಿಗಳ ಮತಗಳನ್ನು ಪಡೆಯುವ ಮೂಲಕ ತಮ್ಮ ಹಾದಿಯನ್ನು ಸುಗಮಗೊಳಿಸಿಕೊಂಡರು.
- ‘ಇದೊಂದು ದೊಡ್ಡ ಗೌರವ. ಇದು ಆಂದೋಲನ. ನಾವು ಕ್ರಮಿಸಬೇಕಾದ ದಾರಿ ಇನ್ನೂ ಇದೆ. ನಾನು ಇನ್ನೂ ಹೆಚ್ಚು ಶ್ರಮಪಡುತ್ತೇನೆ. ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಏನೇ ಆದರೂ ನನಗೆ ನನ್ನ ದೇಶವೇ ಮೊದಲು’ ಎಂದು ಟ್ರಂಪ್ ತಮ್ಮ ಆಯ್ಕೆಗೆ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಅಧ್ಯಕ್ಷನಾಗಿ ಆಯ್ಕೆಯಾಗುವುದು ಖಚಿತ. ಅಮೆರಿಕದಲ್ಲಿ ಬದಲಾವಣೆ ತರುವುದು ಅಗತ್ಯವಿದೆ. ಅಮೆರಿಕನ್ನರಿಗೆ ಉದ್ಯೋಗ ಸೃಷ್ಟಿಸುತ್ತೇನೆ. ಸೇನಾ ಸಾಮರ್ಥ್ಯವನ್ನು ಹೆಚ್ಚಿಸುತ್ತೇನೆ. ಗಡಿ ಪ್ರದೇಶಗಳನ್ನು ಮತ್ತಷ್ಟು ಬಲಪಡಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ.
- ಡೊನಾಲ್ಡ್ ಟ್ರಂಪ್ ಅವರ ‘ವಿಜಯೋತ್ಸವ ನಿಧಿ’ಗೆ ಷಿಕಾಗೊದಲ್ಲಿ ನೆಲೆಸಿರುವ ಭಾರತ ಮೂಲದ ಅಮೆರಿಕ ಪ್ರಜೆಗಳಾದ ಶೆಲ್ಲಿ ಕುಮಾರ್ ದಂಪತಿ 8.98 ಲಕ್ಷ ಡಾಲರ್ (ಸುಮಾರು ರೂ.6 ಕೋಟಿ) ದೇಣಿಗೆ ನೀಡಿದ್ದಾರೆ. ಕುಮಾರ್ ನೀಡಿದ ಮೊತ್ತ 4.49 ಲಕ್ಷ ಡಾಲರ್. ಟ್ರಂಪ್ ಪರ ನಿಧಿಗೆ ವ್ಯಕ್ತಿಯೊಬ್ಬರು ಕೊಡಬಹುದಾದ ಗರಿಷ್ಠ ಮೊತ್ತ ಇದು. ಉಳಿದ ಮೊತ್ತವನ್ನು ಕುಮಾರ್ ಪತ್ನಿ ನೀಡಿದ್ದಾರೆ. ಇಷ್ಟೊಂದು ದೊಡ್ಡ ದೇಣಿಗೆ ಕೊಟ್ಟವರ ಸಂಖ್ಯೆ ಕಡಿಮೆ. ಪಾಕಿಸ್ತಾನ ಮತ್ತು ಮುಸ್ಲಿಮರ ವಿರುದ್ಧ ಟ್ರಂಪ್ ಅವರು ಹೊಂದಿರುವ ನಿಲುವುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕುಮಾರ್, ‘ಅಮೆರಿಕದ ಅಧ್ಯಕ್ಷೀಯ ಇತಿಹಾಸದ 45 ವರ್ಷಗಳಲ್ಲಿ ಅತ್ಯಂತ ಬಲಿಷ್ಠ ವ್ಯಕ್ತಿಯೊಬ್ಬರು ಈಗ ನಮಗೆ ದೊರೆತಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.[೯]
ಚುನಾವಣಾ ನಿಧಿ ಸಂಗ್ರಹ
[ಬದಲಾಯಿಸಿ]- ಹಿಲರಿ ಕ್ಲಿಂಟನ್ ಅವರಿಗೆ ಪ್ರಚಾರಕ್ಕೆ ನಿಧಿ ಒದಗಿಸಲು ಹಲವಾರು ಕೋಟ್ಯಧಿಪತಿಗಳು ಮುಂದೆ ಬಂದಿದ್ದಾರೆ. ಆದರೆ ಪ್ರಚಾರ ಆರಂಭಿಸಿದ 24 ಗಂಟೆಗಳಲ್ಲೇ ಸ್ಯಾಂಡರ್ಸ್‌ಗೆ ಒಂದೂವರೆ ಲಕ್ಷ ಡಾಲರ್ ನಿಧಿ ಸಂಗ್ರಹವಾಗಿದೆ! ಈ ಜನವರಿ ಕೊನೆಯಲ್ಲಿ ಒಟ್ಟು 3.25 ಲಕ್ಷ ಡಾಲರ್ ನಿಧಿ ಶೇಖರಿಸಿದ್ದು, ಅದರಲ್ಲೂ ಉಳಿದೆಲ್ಲ ಅಭ್ಯರ್ಥಿಗಳಿಗಿಂತ (ಹಿಲರಿ ಹೊರತುಪಡಿಸಿ) ಮುಂದಿದ್ದಾರೆ. ಸ್ಯಾಂಡರ್ಸ್ ದೊಡ್ಡ ಉದ್ಯಮಪತಿಗಳಿಗಿಂತ ಜನಸಾಮಾನ್ಯರನ್ನೇ ಹೆಚ್ಚಾಗಿ ನಂಬಿದ್ದಾರೆ.
ಸ್ಯಾಂಡರ್ಸ್ ಪ್ರಚಾರ
[ಬದಲಾಯಿಸಿ]- ಸ್ಯಾಂಡರ್ಸ್ ಉದಾರವಾದಿ ಸೋಷಲಿಸ್ಟ್. ಚಿಕಾಗೊ ವಿಶ್ವವಿದ್ಯಾಲಯದ ಪದವೀಧರ. ಕೋಟ್ಯಧಿಪತಿ ಉದ್ಯಮಿಗಳ ವಿರೋಧಿ.‘ವಾಲ್‌ಸ್ಟ್ರೀಟ್ ಕುಸಿತದಿಂದಾಗಿ ಆಫ್ರಿಕನ್- ಅಮೆರಿಕನ್ನರ ಅರ್ಧಕ್ಕೂ ಹೆಚ್ಚು ಆಸ್ತಿ ಕರಗಿಹೋಗಿದೆ’ ಎಂದು ವಾಗ್ದಾಳಿ ಮಾಡುತ್ತಿದ್ದಾರೆ. ಸಾಮಾನ್ಯ ಜನರಿಗೆ ಅದು ಹಿದಿಸಿದೆ. ಕಾರ್ಪೊರೇಟ್ ದೈತ್ಯರ ಹಿಡಿತದಲ್ಲಿ ಅಮೆರಿಕದ ಮಧ್ಯಮವರ್ಗ ಅವನತಿ ಹೊಂದುತ್ತಿರುವ ಬಗ್ಗೆ ಅವರು ಬರೆದ ‘ದಿ ಸ್ಪೀಚ್’ ಎನ್ನುವ ಪುಸ್ತಕವೂ ಜನಪ್ರಿಯತೆ ಹೆಚ್ಚಿಸಿದೆ.
ಹಿಲರಿ ಕ್ಲಿಂಟನ್
[ಬದಲಾಯಿಸಿ]ಹಿಲರಿ ಕ್ಲಿಂಟನ್ ಅಂತರರಾಷ್ಟ್ರೀಯ ಮಟ್ಟದ ರಾಜಕೀಯದಲ್ಲಿ ಸಾಕಷ್ಟು ಅನುಭವಿ. ಸ್ಯಾಂಡರ್ಸ್ ವಿರುದ್ಧದ ಅಂಶಗಳನ್ನೆಲ್ಲ ಹೆಕ್ಕಿ ತೆಗೆದು ಆಕೆಯ ಬೆಂಬಲಿಗರೂ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ‘ಸ್ಯಾಂಡರ್ಸ್ 25 ವರ್ಷಗಳಿಂದ ಸೆನೆಟರ್ ಆಗಿ ಅಧಿಕಾರದಲ್ಲಿದ್ದೂ ಒಂದೇ ಒಂದು ಮಸೂದೆಯನ್ನು ಪಾಸ್ ಮಾಡಿಸಿಲ್ಲ. ಜೀವನದಲ್ಲಿ ಒಂದು ಉದ್ಯಮವನ್ನೂ ಸ್ಥಾಪಿಸಿ ಗೊತ್ತಿಲ್ಲ. ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಕಟ್ಟುನಿಟ್ಟಾಗಿ ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ. ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಸರ್ಕಾರದ ಸಾಮಾಜಿಕ ಯೋಜನೆಗಳ ಫಲಾನುಭವಿಯಾಗಿ ಬದುಕಿದವರು. ಅವರ ಜೀವನವೇ ಒಂದು ವೈಫಲ್ಯಗಳ ಮೊತ್ತ’ ಎಂಬ ಪ್ರಚಾರ ನಡೆದಿದೆ!
ಡೆಮೊಕ್ರಟಿಕ್ ಪಕ್ಷ ಪ್ರತಿನಿಧಿಗಳ ಮತ
[ಬದಲಾಯಿಸಿ]ದಿ.11-6-2016 ರ ಸ್ಥಿತಿ:
- ಹಿಲರಿಯವರಗೆ ಡೆಮೊಕ್ರಟಿಕ್ ಪಕ್ಷ-ಪ್ರತಿನಿಧಿಗಳ ಮತಗಳು ಬೆರ್ನೀ ಸ್ಯಾಂಡರ್ಸ್'ಗಿಂತ (Bernie Sanders) ಹೆಚ್ಚು ಮತಗಳು ಬಂದಿದ್ದು ಡೆಮೊಕ್ರಟಿಕ್`ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಖಚಿತವಾಗಿದೆ.
- ಡೆಮೊಕ್ರಟಿಕ್ ಪಕ್ಷ-ಪ್ರತಿನಿಧಿ ಮತದಾರರು(ಪ್ರೈಮರಿಗಳು)
ರಿಪಬ್ಲಿಕನ್ ಪಕ್ಷ-ಪ್ರತಿನಿಧಿಗಳ ಮತ
[ಬದಲಾಯಿಸಿ]- ಜೂನ್ 2016 ರ ಸ್ಥಿತಿ:
ರಿಪಬ್ಲಿಕನ್ ಪಕ್ಷ-ಪ್ರತಿನಿಧಿಗಳ ಮತ ವಿವರ
- ರಿಪಬ್ಲಿಕನ್ ಪಕ್ಷದಲ್ಲಿ ಅಧ್ಯಕ್ಷ ಅಭ್ಯರ್ಥಿ ಸ್ಪರ್ಧೆಯಲ್ಲಿ ಟ್ರಂಪ್` ಬಹಳ ಮುಂದಿದ್ದು ಹಿಲರಿಗೆ, 2016ರ ಯು.ಎಸ್.ಅಧ್ಯಕ್ಷರ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗುವುದು ನಿಶ್ಚಿತವಾಗಿದೆ.
ನೋಡಿ
[ಬದಲಾಯಿಸಿ]- ಅಮೇರಿಕಾ ಸಂಯುಕ್ತ ಸಂಸ್ಥಾನಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬;
- ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬
- ಅಮೇರಿಕ ಸಂಯುಕ್ತ ಸಂಸ್ಥಾನದ ಸರ್ಕಾರ
- Federal government of the United States
- Elections in the United States
- Democratic Party presidential primaries, 2016
- Electoral College (United States)
- ಹಿಲರಿ:ಮುತ್ಸದ್ದಿ-ಹಿಲರಿ
- Republican Party presidential primaries, 2016
- United States presidential election, 2016
- United States presidential election
- Democratic Party presidential candidates, 2016
ಉಲ್ಲೇಖ
[ಬದಲಾಯಿಸಿ]- ↑ https://www.law.cornell.edu/uscode/text/3/1
- ↑ http://www.nbcnews.com/politics/2016-election/viewers-guide-next-year-presidential-politics-n455971
- ↑ https://votesmart.org/education/electoral-college#.V1kuc9R974Y
- ↑ "ಆರ್ಕೈವ್ ನಕಲು". Archived from the original on 2016-07-29. Retrieved 2016-07-29.
- ↑ 9-6-2015-ಪ್ರಜಾವಾಣಿw:prajavani.net/article/ಅಮೆರಿಕ-ಇತಿಹಾಸ-ಸೃಷ್ಟಿಸಿದ-ಹಿಲರಿ
- ↑ ಹಿಲರಿ ಮೊದಲ ಮಹಿಳಾ ಅಭ್ಯರ್ಥಿ:28th Jul, 2016:[೧] Archived 2016-11-12 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಅಧ್ಯಕ್ಷರಾಗಿ ಆಯ್ಕೆಯಾದರೆ ಐಎಸ್ ವಿರುದ್ಧ ಯುದ್ಧ ಘೋಷಣೆ: ಟ್ರಂಪ್:19/07/2016:prajavani.
- ↑ ಡೊನಾಲ್ಡ್ ಟ್ರಂಪ್ ವಿರುದ್ಧ 100 ಮಹಿಳೆಯರಿಂದ ಬೆತ್ತಲೆ ಪ್ರತಿಭಟನೆ:18 Jul 2016: [೨] Archived 2016-07-19 ವೇಬ್ಯಾಕ್ ಮೆಷಿನ್ ನಲ್ಲಿ.
- ↑ 21/07/2016:.prajavani:ರಿಪಬ್ಲಿಕನ್ ಅಧಿಕೃತ ಸ್ಪರ್ಧಿ ಟ್ರಂಪ್
- ↑ presidential primaries, 2016