ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬
ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ, 2016
- ಅದ್ಯಕ್ಷ ಅಭ್ಯರ್ಥಿ ಹೆಸರು = ಹಿಲರಿ ರೋಧಾಮ್ ಕ್ಲಿಂಟನ್
- ಜನನ ದಿನಾಂಕ = 26-101947
- ದೇಶ = ಯುನೈಟೆಡ್ ಸ್ಟೇಟ್ಸ್
- ಯಾವ ಅಭ್ಯರ್ಥಿ =ಡೆಮಾಕ್ರಟಿಕ್ ಪಾರ್ಟಿ ಅಧ್ಯಕ್ಷೀಯ ಅಭ್ಯರ್ಥಿ 2016
- ಚುನಾವಣೆ = ನವೆಂಬರ್ 8, 2016
- ಪಕ್ಷ = ಡೆಮಾಕ್ರಟಿಕ್ ಪಾರ್ಟಿ
- ರಾಜ್ಯ = ನ್ಯೂಯಾರ್ಕ್
- upto:19-07-2016
- ಬಹುಮತ ಗಳಿಸಿದ ರಾಜ್ಯಗಳು=34
- ಮತ ನಿರೀಕ್ಷೆ =ಭರವಸೆಯದು 2204
- ನಿರೀಕ್ಷೆಯದು =+560 ಒಟ್ಟು=4,764
- ಗೆಲುವಿಗೆ ಅಗತ್ಯ ಮತಗಳು = 2383
- ಬೆಂಬಲಗಳಿಕೆ = 55.20%+
- ೫೫೫೫೫೫೫೫೫
- ಅದೇ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ= ಟಿಮ್ ಕೈನೆ
- ಸ್ಥಾನ = ಸೆನೆಟರ್ (ವರ್ಜೀನಿಯ)
- ಸೆನೆಟರ್ = 2೦13 ರಿಂದಅ
ಯು.ಎಸ್.ಎ ಅಧ್ಯಕ್ಷರ ಚುನಾವಣೆ
[ಬದಲಾಯಿಸಿ]೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫
- ಅದ್ಯಕ್ಷ ಅಭ್ಯರ್ಥಿ ಹೆಸರು = ಡೊನಾಲ್ಡ್ ಟ್ರಂಪ್
- ಪಕ್ಷ = ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬
- ಜನನ ದಿನಾಂಕ = 14-6-1946
- ದೇಶ = ಯುನೈಟೆಡ್ ಸ್ಟೇಟ್ಸ್
- ಅಭ್ಯರ್ಥಿ =ರಿಪಬ್ಲಿಕನ್' ಪಾರ್ಟಿ ಅಧ್ಯಕ್ಷೀಯ ಅಭ್ಯರ್ಥಿ 2016
- ಚುನಾವಣೆ = ನವೆಂಬರ್ 8, 2016
- ಪಕ್ಷ = ರಿಪಬ್ಲಿಕನ್' ಪಾರ್ಟಿ
- ರಾಜ್ಯ = ನ್ಯೂಯಾರ್ಕ್
- ಬಹುಮತ ಗಳಿಸಿದ ರಾಜ್ಯಗಳು=37
- ಮತ ನಿರೀಕ್ಷೆ =ಭರವಸೆಯದು 1441
- ನಿರೀಕ್ಷೆಯದು = 1,237
- ಗೆಲುವಿಗೆ ಅಗತ್ಯ ಮತಗಳು = 1,237
- ಬೆಂಬಲಗಳಿಕೆ = 44.2%
೫೫೫೫೫೫೫೫೫೫೫೫೫೫೫೫೫೫
- ಅದೇ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ= ಮೈಕ್ ಪೆನ್ಸ್
- ಸ್ಥಾನ = ಗೌರ್ನರ್ (ಇಂಡಿಯಾನ)
- ಗೌರ್ನರ್ = 2೦13 ರಿಂದ.
- ಮುಖ್ಯ ಲೇಖನ:ಅಭ್ಯರ್ಥಿಗಳ ಚುನಾವಣೆ: ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬
2016 ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆಯನ್ನು , 8, ನವೆಂಬರ್ 2016 ಮಂಗಳವಾರ, ನಡೆಸಲು ನಿರ್ಧರಿಸಲಾಯಿತು. ಇದು 58 ನೇ ಚತುರ್ವಾರ್ಷಿಕ ಅಮೇರಿಕಾದ ರಾಷ್ಟ್ರಪತಿಯ ಚುನಾವಣೆ. ಮತದಾರರು ‘ಅಧ್ಯಕ್ಷೀಯ ಚುನಾಯಕ’ ರನ್ನು (ಮತದಾರ ಪ್ರತಿನಿಧಿಗಳನ್ನು) ಆಯ್ಕೆ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ‘ಚುನಾವಣಾ ಕಾಲೇಜ್’ ಮೂಲಕ ಮತದಾರ ಪ್ರತಿನಿಧಿಗಳು ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವರು. ಅಧ್ಯಕ್ಷರ ಅವಧಿಯ ಮಿತಿಯನ್ನು ಅಮೆರಿಕ ಸಂಯುಕ್ತ ಸಂಸ್ಥಾನದ (ಯುನೈಟೆಡ್ ಸ್ಟೇಟ್ಸ್) ಸಂವಿಧಾನದ ಟ್ವೆಂಟಿ ತಿದ್ದುಪಡಿಯಲ್ಲಿ ಇರವಂತೆ ಒಬ್ಭರೇ ಮೂರನೇ ಅವಧಿಗೆ ಚುನಾಯಿತರಾಗುವ ಆವಕಾಶವಿಲ್ಲದೇ ಇರುವುರಿಂದ, ಡೆಮಾಕ್ರಟಿಕ್ ಪಕ್ಷದ ಸ್ಥಾನಿಕ ಅಧ್ಯಕ್ಷ, ಬರಾಕ್ ಒಬಾಮಾ, ಅವರು ಪುನಃ ಸ್ಪರ್ಧೆ ಮಾಡದಂತೆ ಈ ನಿಯಮ ತಡೆಯುತ್ತದೆ. ಅಧ್ಯಕ್ಷೀಯ ‘ಪ್ರಾಥಮಿಕ ಚುನಾವಣೆ’ ಮತ್ತು ಸಭೆಗಳು ಸರಣಿಯಲ್ಲಿ ಫೆಬ್ರವರಿ 1 ಮತ್ತು ಜೂನ್ 14, 2016 ರ ನಡುವೆ ನಡೆದಿದೆ.
ಟ್ರಂಪ್ ಮುಂದಿನ ಅಧ್ಯಕ್ಷ
[ಬದಲಾಯಿಸಿ]ಮಂಗಳವಾರ, ನವೆಂಬರ್ 8, 2016 ರಂದು ನಡೆದ 2016 ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ, ಡೊನಾಲ್ಡ್ ಟ್ರಂಪ್ ಅವರು ಹಿಲರಿ ಕ್ಲಿಂಟನ್ ರನ್ನು ಸೋಲಿಸಿ, ಜನವರಿ 20, 2017 ರಂದು ಅಮೆರಿಕದ 45 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಇದು 58 ನೇ ಮತ್ತು ಅತ್ಯಂತ ಇತ್ತೀಚಿನ ನಾಲ್ಕು ವರ್ಷಕ್ಕೊಮ್ಮೆ ಬರುವ ಅಮೇರಿಕಾ ರಾಷ್ಟ್ರಪತಿ ಚುನಾವಣೆ ಆಗಿತ್ತು.
ಮತದಾರರು ಇದರ ಪ್ರಕಾರ ಅಧ್ಯಕ್ಷೀಯ ಮತದಾರರ ಚುನಾವಣಾ ಕಾಲೇಜ್ ಮೂಲಕ ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆರಿಸಿದರು; ಮತದಾರರು ತಮ್ಮ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಮಾಡಿದ ಮತದಾನವನ್ನು ಫಲಿತಾಂಶಗಳು ಆಧರಿಸಿವೆ.::ಫಲಿತಾಂಶದ ವಿವರ ಕೆಳಗೆ ಕೊಟ್ಟಿದೆ:
|
ಫಲಿತಾಂಶದ ವಿವರ
[ಬದಲಾಯಿಸಿ]ನಾಮಿನಿ→ | ♦ | ಡೊನಾಲ್ಡ್ ಟ್ರಂಪ್ | ♦ ♦ | ಹಿಲರಿ ಕ್ಲಿಂಟನ್ |
---|---|---|---|---|
ಪಕ್ಷ → | ♦ | ರಿಪಬ್ಲಿಕನ್ | ♦ | ಡೆಮೋಕ್ರಾಟಿಕ್ |
ವಾಸದ ರಾಜ್ಯ→ | ♦ | ನ್ಯೂಯಾರ್ಕ್ | ♦ | ನ್ಯೂಯಾರ್ಕ್ |
ಸಂಗಾತಿ-(ಉಪಾಧ್ಯಕ್ಷ)→ | ♦ | ಮೈಕ್ ಪೆನ್ಸ್ | ♦ | ಟಿಮ್ ಕೈನ್ |
ಯೋಜಿತ ಮತ→ | ♦ | 306 | ♦ | 232 |
ಪಡೆದ ಚುನಾವಣಾ ಮತ → | ♦ | 304 | ♦ | 227** |
ಜನಪ್ರಿಯ ಮತ→ | ♦ | 62.980.160 | ♦ | 65.845.063 |
ಶೇಕಡಾವಾರು→ | ♦ | 45.9% | ♦ | 48.0%** |
ಸ್ಟೇಟ್ಸ್ | ♦ | 30 -02 | ♦ | 20 + ಡಿಸಿ |
- ಪುನರ್ವಿಮರ್ಶಿತ:
- ರಾಜ್ಯವಾರು ಮತದಾನದ ವಿವರದ ನಕ್ಷೆ ಕೆಳಗೆ ಕೊಟ್ಟಿದೆ.
ಡೊನಾಲ್ಡ್ ಟ್ರಂಪ್ ಆಯ್ಕೆ ಅಧಿಕೃತ
[ಬದಲಾಯಿಸಿ]- 21 Dec, 2016;ವಾಷಿಂಗ್ಟನ್:
- ಗೆಲುವಿಗೆ ಅಗತ್ಯವಿದ್ದ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆಯುವ ಮೂಲಕ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 45ನೇ ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಆರು ವಾರಗಳ ಬಳಿಕ ಎಲೆಕ್ಟೋರಲ್ ಕಾಲೇಜ್ ಇದಕ್ಕೆ ಅಧಿಕೃತ ಮುದ್ರೆ ಒತ್ತಿದೆ. ಎಲೆಕ್ಟೋರಲ್ ಕಾಲೇಜ್‌ನ ಸದಸ್ಯರು ಅಧ್ಯಕ್ಷರನ್ನು ಅಧಿಕೃತವಾಗಿ ಆಯ್ಕೆ ಮಾಡಲು ತಮ್ಮ ತಮ್ಮ ರಾಜ್ಯಗಳ ರಾಜಧಾನಿಗಳಲ್ಲಿ ಸಭೆ ಸೇರಿದ್ದರು.
- ಹಿಲರಿ 227 ಹಾಗೂ ಟ್ರಂಪ್ 304 ಎಲೆಕ್ಟೋರಲ್ ಮತ ಪಡೆದಿದ್ದಾರೆ.
ಅಭ್ಯರ್ಥಿಗಳ ಚುನಾವಣೆಯ ಖರ್ಚು
[ಬದಲಾಯಿಸಿ]- ಅಮೆರಿಕದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಚುನಾವಣೆ ಸಂದರ್ಭ ಒಟ್ಟು ರೂ.14 ಸಾವಿರ ಕೋಟಿ ಖರ್ಚು ಮಾಡಿದ್ದಾರೆ ಎಂದು ಅಧ್ಯಯನ ತಿಳಿಸಿದೆ.
- ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ ಹಾಗೂ ಬೆಂಬಲಿಗರು ರೂ.5161 ಕೋಟಿ ಖರ್ಚು ಮಾಡಿದ್ದಾರೆ.
- ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಬೆಂಬಲಿಗರು ರೂ.2781 ಕೋಟಿ ಖರ್ಚು ಮಾಡಿದ್ದಾರೆ.
- ಡೆಮಾಕ್ರಟಿಕ್ ಪಕ್ಷ, ರಿಪಬ್ಲಿಕನ್ ಟ್ರಂಪ್ ಅವರಿಗಿಂತ ಸುಮಾರು ರೂ.2,300 ಕೋಟಿಯಷ್ಟು ಅಧಿಕ ಹಣ ವ್ಯಯಿಸಿದ್ದಾರೆ.
- ಡೆಮಾಕ್ರಟಿಕ್ ಪಕ್ಷದ ಬೆರ್ನಿ ಸ್ಯಾಂಡರ್ಸ್ ರೂ.1,577 ಕೋಟಿ ಖರ್ಚು ಮಾಡಿದ್ದಾರೆ.
- ರಿಪಬ್ಲಿಕನ್ ಪಕ್ಷದ ಟೆಡ್ ಕ್ರೂಜ್ ರೂ.1.094 ಕೋಟಿ ಹಣ ವ್ಯಯಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ವಾರ್ಷಿಕ ವೇತನ 1 ಡಾಲರ್!
[ಬದಲಾಯಿಸಿ]- ಅಮೆರಿಕದ ಅಧ್ಯಕ್ಷರಿಗೆ ಸಿಗುವ ವಾರ್ಷಿಕ ವೇತನ 4 ಲಕ್ಷ ಡಾಲರ್ (ಅಂದಾಜು ರೂ.2 ಕೋಟಿ 70 ಲಕ್ಷ). ಆದರೆ, ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೇವಲ ಒಂದು ಡಾಲರ್ (ರೂ.67) ವೇತನ ಪಡೆಯುವುದಾಗಿ ಘೋಷಿಸಿದ್ದಾರೆ.ಅಧ್ಯಕ್ಷ ಗಾದಿಗೆ ಏರಿದರೆ ವೇತನ ಪಡೆಯುವುದಿಲ್ಲ ಎಂದು ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯ ವೇಳೆ ಟ್ರಂಪ್ ಅಮೆರಿಕನ್ನರಿಗೆ ಭರವಸೆ ನೀಡಿದ್ದರು.‘ಕಾನೂನಿನ ಪ್ರಕಾರ ವೇತನ ಪಡೆಯಬೇಕಾಗಿರುವುದರಿಂದ ನಾನು ವಾರ್ಷಿಕ ಒಂದು ಡಾಲರ್ ವೇತನ ಪಡೆಯುತ್ತೇನೆ’ ಎಂದು ಟ್ರಂಪ್ ಭಾನುವಾರ ಪ್ರಸಾರವಾದ ಸಂದರ್ಶನದಲ್ಲಿ ತಿಳಿಸಿದ್ದಾರೆ.[೬]
ಟ್ರಂಪ್ ಅಧಿಕಾರ ಸ್ವೀಕಾರ
[ಬದಲಾಯಿಸಿ]- ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಮಧ್ಯಾಹ್ನ ಅಮೆರಿಕದ 45ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸ್ಥಳೀಯ ಕಾಲಮಾನ ಶುಕ್ರವಾರ ಮಧ್ಯಾಹ್ನ 12ಕ್ಕೆ (ಭಾರತೀಯ ಕಾಲಮಾನ – ಶನಿವಾರ ಬೆಳಿಗ್ಗೆ 10.30 ಗಂಟೆ) ಟ್ರಂಪ್ ಪ್ರಮಾಣವಚನ ಸ್ವೀಕರಿಸಿದ್ದಾರೆ.[೭]
- ಶುಕ್ರವಾರ ಜನವರಿ 20 2017 ರಂದು ಎಂಟು ಲಕ್ಷಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಟ್ರಂಪ್, ‘ಅಧಿಕಾರವನ್ನು ವಾಷಿಂಗ್ಟನ್ ಡಿ.ಸಿಯಿಂದ ದೇಶದ ಇತರ ಭಾಗಗಳ ಜನರ ಕೈಗೆ ಮರಳಿಸುತ್ತಿದ್ದೇವೆ’ ಎಂದು ಹೇಳಿದರು. ಈ ದಿನವನ್ನು ಜನರೇ ಅಮೆರಿಕದ ಆಡಳಿತಗಾರರಾಗಿರುವ ದಿನ ಎಂದು ಮುಂದೆ ನೆನಪಿಸಿಕೊಳ್ಳಲಾಗುತ್ತದೆ’ ಎಂದು ಟ್ರಂಪ್ ಹೇಳಿದರು. ತಮ್ಮ ಅಧ್ಯಕ್ಷತೆಯು ಅಮೆರಿಕಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಹೊಸ ದಿಕ್ಕೊಂದನ್ನು ತೋರಲಿದೆ ಎಂದರು.
ಪದಗ್ರಹಣ ಸಮಾರಂಭ ಯೊಜನೆ
[ಬದಲಾಯಿಸಿ]- ಪದಗ್ರಹಣ ಸಮಾರಂಭ ಗುರುವಾರದಿಂದ ಶನಿವಾರದವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುವವು.
- ಶುಕ್ರವಾರ ಬೆಳಿಗ್ಗೆ 8ಕ್ಕೆ (ಭಾರತೀಯ ಕಾಲಮಾನ ಸಂಜೆ 6.30) ನಿಯೋಜಿತ ಅಧ್ಯಕ್ಷ ಟ್ರಂಪ್ ಒಬಾಮ ಅವರೊಂದಿಗೆ ಕಾಫಿ ಸೇವನೆ ಮಾಡುವರು.
- 10 ಗಂಟೆ – ಅಮೆರಿಕದ ಕ್ಯಾಪಿಟೋಲ್ ಭವನದಲ್ಲಿ ಪ್ರಮಾಣವಚನ ಸಮಾರಂಭ ಆರಂಭವಾಗುವುದು.
- ಮಧ್ಯಾಹ್ನ 12ಗಂಟೆಗೆ ಪ್ರಮಾಣವಚನ ಸ್ವೀಕಾರ.
- 1.30ಕ್ಕೆ – ಕುಟುಂಬದವರೊಂದಿಗೆ ಶ್ವೇತ ಭವನದವರೆಗೆ ಮೆರವಣಿಗೆ.
- ಸಂಜೆ 5.30ಕ್ಕೆ – ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳು.
ಅಧಿಕಾರ ಸ್ವೀಕಾರ ವಿಧಿ-ವಿಧಾನ
[ಬದಲಾಯಿಸಿ]- ಶ್ವೇತ ಭವನ ಪ್ರವೇಶಕ್ಕೂ ಮುನ್ನ:
- ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಬರಾಕ್ ಒಬಾಮ ಮತ್ತು ಮಿಷೆಲ್ ಒಬಾಮರನ್ನು ಡೊನಾಲ್ಡ್ ಟ್ರಂಪ್ ದಂಪತಿ ಭೇಟಿಮಾಡಿದರು;
- ಶ್ವೇತಭವನದ ಮೆಟ್ಟಿಲುಗಳ ಮೇಲಿನ ವೇದಿಕೆಯಲ್ಲಿ ಡೊನಾಲ್ಡ್ ಮತ್ತು ಮೆಲಾನಿಯಾ ಟ್ರಂಪ್ ಅವರಿಗೆ ಒಬಾಮ ದಂಪತಿ ಶುಭ ಕೋರಿದರು;
- ಮಿಷೆಲ್ ಅವರಿಗೆ ದುಬಾರಿ ‘ಟಿಫಾನಿ ಆಭರಣ’ವನ್ನು ಉಡುಗೊರೆಯಾಗಿ ಮೆಲಾನಿಯಾ ನೀಡಿದರು;
- ಉಡುಗೊರೆಯನ್ನು ಸಹಾಯಕರಿಗೆ ಹಸ್ತಾಂತರಿಸಲು ವೇದಿಕೆಯಿಂದ ಸ್ವತಃ ಒಬಾಮ ತಾವೇ ಇಳಿದು ಹೋದರು;
- ವೇದಿಕೆ ಮೇಲೆ ಒಬಾಮ, ಮಿಷೆಲ್, ಮೆಲಾನಿಯಾ ಮತ್ತು ಟ್ರಂಪ್ ಒಟ್ಟಾಗಿ ನಿಂತು ಚಿತ್ರ ತೆಗೆಸಿಕೊಂಡರು;
- ಒಬಾಮ ಮಿಷೆಲ್, ಮೆಲಾನಿಯಾ ಮತ್ತು ಟ್ರಂಪ್ ಶ್ವೇತಭವನದಲ್ಲಿ ಕುಳಿತು ಚಹಾ ಹೀರಿದರು,
- ಹೊಸ ಅಧ್ಯಕ್ಷರಿಗೆ ಬರೆದ ಪತ್ರವನ್ನು ಸಂಪ್ರದಾಯದಂತೆ ಗೃಹ ಕಚೇರಿಯ ‘ರೆಸಲ್ಯೂಟ್’ ಮೇಜಿನ ಮೇಲೆ ಒಬಾಮ ಇರಿಸಿದರು;
- ಒಬಾಮ ಅಮೆರಿಕನ್ನರಿಗೆ ಧನ್ಯವಾದ ಹೇಳಿದರು;
- ನೂತನ ಉಪಾಧ್ಯಕ್ಷರಾಗಿ ಮೈಕ್ ಪೆನ್ಸ್ ಪ್ರಮಾಣ ವಚನ ಸ್ವೀಕರಿಸಿದರು;
- ಡೊನಾಲ್ಡ್ ಟ್ರಂಪ್ ‘ಅಬ್ರಾಹಂ ಲಿಂಕನ್ ಬೈಬಲ್’ ಮೇಲೆ ಕೈಇರಿಸಿ ಪ್ರಮಾಣ ವಚನ ಸ್ವೀಕರಿಸಿದರು;
- ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರಮಾಣ ವಚನ ಭೋದಿಸಿದರು;
- ಸುಮಾರು 8 ಲಕ್ಷ ಜನ ಪ್ರಮಾಣ ವಚನ ಸ್ವೀಕಾರಕ್ಕೆ ಸಾಕ್ಷಿಯಾದರು.[೮]
ಟ್ರಂಪ್ ಅಧಿಕಾರ ಸ್ವೀಕಾರದ ಭಾಷಣ
[ಬದಲಾಯಿಸಿ]- ಅಮೆರಿಕ ಮತ್ತು ಜಗತ್ತಿಗೆ ಹೊಸ ದಿಕ್ಕು ತೋರುವ ಭರವಸೆ.ಅಮೆರಿಕ ಮೊದಲು: ಟ್ರಂಪ್ ನೀತಿ;ಪಿಟಿಐ;21 Jan, 2017
- ಅಧಿಕಾರ ಸ್ವೀಕಾರ:ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರಪ್ರಸಾರ;20 Jan, 2017
ಟ್ರಂಪ್ ವಿರುದ್ಧದ ಪ್ರತಿಭಟನೆ
[ಬದಲಾಯಿಸಿ]- 21 Jan, 2017
- ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ಸ್ವೀಕರಿಸುತ್ತಿರುವುದನ್ನು ವಿರೋಧಿಸಿ ಜನ ಬೀದಿಗಿಳಿದು ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದು, ಈ ಸಂಬಂಧ 217 ಮಂದಿಯನ್ನು ಬಂಧಿಸಲಾಗಿದೆ. ಟ್ರಂಪ್ ಅವರು ಶುಕ್ರವಾರ ಅಧಿಕಾರಿ ಸ್ವೀಕರಿಸುತ್ತಿರುವುದನ್ನು ಖಂಡಿಸಿ ರಾಜಧಾನಿಯಲ್ಲಿ ರಸ್ತೆಗಿಳಿದ ಜನರು ಪ್ರತಿಭಟನೆ ನಡೆಸಿ, ಟ್ರಂಪ್ ವಿರುದ್ಧ ಘೋಷಣೆ ಕೂಗಿ, ಫಲಕಗಳನ್ನು ಪ್ರದರ್ಶಿಸಿದ್ದಾರೆ. ಇಷ್ಟಕ್ಕೆ ಸಮಾಧಾನಗೊಳ್ಳದ ಜನ, ಟ್ರಂಪ್ ಅವರ ಪ್ರತಿಕೃತಿ ಹದಿಸಿದ್ದಾರೆ. ಕಾರು ಇತರ ವಾಹನಗಳಿಗೆ ಬೆಂಕಿಹಚ್ಚಿದ್ದಾರೆ. ಆರಕ್ಕೂ ಹೆಚ್ಚು ಮಳಿಗೆಗಳಿಗೆ ಹಾನಿ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಬಳಿಸಿದ್ದಾರೆ. ಘಟನೆ ಸಂಬಂದ 200ಕ್ಕೂ ಹೆಚ್ಚು ಜನರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಆರು ಪೋಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.[೯]
ಅಧ್ಯಕ್ಷೀಯ ಚುನಾವಣೆ: ಪೀಠಿಕೆ
[ಬದಲಾಯಿಸಿ]ಸಂಯುಕ್ತ ಸಂಸ್ಥಾನವು ಜಗತ್ತಿನ ಅತೀ ಹಳೆಯ ಒಕ್ಕೂಟರಾಷ್ಟ್ರವಾಗಿದೆ. ಇದು ಸಾಂವಿಧಾನಿಕ ಪ್ರಜಾಪ್ರಭುತ್ವವಾಗಿದೆ. ಇದರಲ್ಲಿ ಕಾನೂನಿಂದ ರಕ್ಷಿಸಿಲ್ಪಟ್ಟ ಅಲ್ಪಸಂಖ್ಯಾತರ ಹಕ್ಕುಗಳು, ಬಹುಸಂಖ್ಯಾತರ ಆಡಳಿತವನ್ನು ಮೃದುಗೊಳಿಸುತ್ತವೆ. ಇದು ಮೂಲಭೂತವಾಗಿ ಪ್ರತಿನಿಧಿ ಪ್ರಜಾಪ್ರಭುತ್ವದ ರಚನೆಯನ್ನು ಹೊಂದಿದೆ. ಆದರೂ ಸಂಯುಕ್ತ ಸಂಸ್ಥಾನದ ಭೂಪ್ರದೇಶದಲ್ಲಿ ನೆಲೆಸಿದ ನಾಗರಿಕರು ಸಂಯುಕ್ತ ಸಂಸ್ಥಾನದ (ಫೆಡರಲ್) ಅಧಿಕಾರಿಗಳ ಮತದಾನದಲ್ಲಿ ಭಾಗವಹಿಸುವಂತಿಲ್ಲ. ಸಂಯುಕ್ತ ಸಂಸ್ಥಾನ ಸಂವಿಧಾನದ ವ್ಯಾಖ್ಯಾನದಂತೆ, ಸರ್ಕಾರವು ಚೆಕ್ಸ್ ಮತ್ತು ಬ್ಯಾಲೆನ್ಸ್ ವ್ಯವಸ್ಥೆಯಿಂದ ನಿಯಂತ್ರಿಸಲ್ಪಟ್ಟಿದೆ. ಈ ಸಂವಿಧಾನ ದೇಶದ ಸರ್ವೋಚ್ಛ ಕಾನೂನುಬದ್ಧ ದಾಖಲೆಯಾಗಿದೆ. ಅಮೆರಿಕದ ಸಂಯುಕ್ತ ರಾಜ್ಯಗಳ (ಫೆಡರಲಿಸ್ಟ್) ವ್ಯವಸ್ಥೆಯಲ್ಲಿ ನಾಗರಿಕರು ಫೆಡರಲ್, ರಾಜ್ಯ ಮತ್ತು ಸ್ಥಳೀಯ ಎಂಬ ಮೂರು ಹಂತದ ಸರ್ಕಾರದ ಆಡಳಿತಕ್ಕೆ ಒಳಪಡುತ್ತಾರೆ. ಸ್ಥಳೀಯ ಸರ್ಕಾರದ ಕೆಲಸವು ಸಾಮಾನ್ಯವಾಗಿ ಜಿಲ್ಲೆ (ಕೌಂಟಿ) ಮತ್ತು ಪೌರಸಂಸ್ಥೆಯ ಆಡಳಿತದ ಮಧ್ಯೆ ಹಂಚಲ್ಪಟ್ಟಿರುತ್ತದೆ. ಸಾಮಾನ್ಯವಾಗಿ ಎಲ್ಲ ಸಂದರ್ಭಗಳಲ್ಲಿಯೂ ಕಾರ್ಯಾಂಗ ಮತ್ತು ಶಾಸಕಾಂಗದ ಅಧಿಕಾರಿಗಳು ಚುನಾವಣೆಯಲ್ಲಿ ಜಿಲ್ಲೆಯ (ಡಿಸ್ಟ್ರಿಕ್ಟ್‌ನ) ನಾಗರಿಕರ ಬಹುಮತದಿಂದ ಆರಿಸಿ ಬಂದವರಾಗಿರುತ್ತಾರೆ. ಸಂಯುಕ್ತ ರಾಜ್ಯಗಳ (ಫೆಡರಲ್) ಹಂತದಲ್ಲಿ ಜನರ ನೇರ ಆಯ್ಕೆಯ (ಅನುಪಾತದ) ಪ್ರಾತಿನಿಧಿತ್ವ ಇರುವುದಿಲ್ಲ ಹಾಗೂ ಕೆಳ ಹಂತದಲ್ಲಿ ತುಂಬ ಕಡಿಮೆ ಸಂದರ್ಭಗಳಲ್ಲಿ ಇರುತ್ತದೆ. ಸಂಯುಕ್ತ ರಾಜ್ಯಗಳ ಸಭೆ (ಫೆಡರಲ್) ಮತ್ತು ರಾಜ್ಯ, ನ್ಯಾಯಾಂಗ ಹಾಗೂ ಮಂತ್ರಿಮಂಡಲದ ಅಧಿಕಾರಿಗಳು ಕಾರ್ಯಾಂಗದಿಂದ ನಾಮಾಂಕಿತರಾಗಿರುತ್ತಾರೆ ಮತ್ತು ಶಾಸಕಾಂಗದಿಂದ ಅನುಮೋದಿಸಲ್ಪಟ್ಟವರಾಗಿರುತ್ತಾರೆ. ಹಾಗಿದ್ದರೂ ಕೆಲವು ರಾಜ್ಯ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಜನರಿಂದ ಚುನಾಯಿಸಲ್ಪಟ್ಟವರಾಗಿರುತ್ತಾರೆ.
ಸಂಯುಕ್ತ ಸರ್ಕಾರದ ಮೂರು ಶಾಖೆಗಳು
[ಬದಲಾಯಿಸಿ]- ಶಾಸಕಾಂಗ: ಸೆನೆಟ್ ಮತ್ತು ಪ್ರತಿನಿಧಿಗಳ ಮನೆಯಾದಂತಹ ಉಭಯ ಸದನಗಳ ಸಮ್ಮಿಳನವು ಫೆಡರಲ್ ಕಾನೂನುಗಳ ರಚನೆ, ಸಮರ ಸಾರುವಿಕೆ ಹಾಗೂ ಒಪ್ಪಂದಗಳಿಗೆ ಒಪ್ಪಿಗೆಯನ್ನು ನೀಡುವಂತದ್ದಾಗಿರುತ್ತದೆ. ಅದು ಹಣಕಾಸಿನ ಶಕ್ತಿ ಹಾಗೂ ಸರ್ಕಾರದಲ್ಲಿನ ಸದಸ್ಯರನ್ನು ತೆಗೆದುಹಾಕುವಂತಹ ದೋಷಾರೋಪಿಸುವ ಶಕ್ತಿಯನ್ನೂ ಕೂಡಾ ಹೊಂದಿರುತ್ತದೆ.
- ಕಾರ್ಯಾಂಗ: ಅಧ್ಯಕ್ಷರು ಸೇನೆಯ ಮುಖ್ಯಸ್ಥರಾಗಿರುತ್ತಾರೆ, ಶಾಸಕಾಂಗದ ಮಸೂದೆಗಳು ಕಾನೂನಾಗಿ ಮಾರ್ಪಾಡಾಗುವ ಮುಂಚೆಯೇ ಅದರ ಮೇಲೆ ನಿರಾಕರಣಾಧಿಕಾರವನ್ನು ಹೊಂದಿರುತ್ತಾರೆ, ಹಾಗೂ ಫೆಡರಲ್ ಕಾನೂನು ಮತ್ತು ನಿಯಮಗಳನ್ನು ನಿಯಂತ್ರಿಸುವ, ಸಂಪುಟ ಮತ್ತು ಇತರೆ ಅಧಿಕಾರಿಗಳನ್ನು ನೇಮಿಸುತ್ತಾರೆ.
- ನ್ಯಾಯಾಂಗ: ಕಾನೂನಿನ ಅರ್ಥವಿವರಣೆ ನೀಡುವ ಮತ್ತು ಅಸಾಂವಿಧಾನಿಕ ಎಂದು ಕಂಡುಬಂದವುಗಳನ್ನು ಸರಿತಿರುಗಿಸುವಸರ್ವೋಚ್ಛ ನ್ಯಾಯಾಲಯದ ಮತ್ತು ಕೆಳ ಹಂತದಲ್ಲಿನ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶರು ಅಧ್ಯಕ್ಷ ಮತ್ತು ಸಂಪುಟದಿಂದ ನೇಮಿಸಲ್ಪಟ್ಟವರಾಗಿರುತ್ತಾರೆ.
ಅಮೇರಿಕಾ ಸಂಸತ್ತು
[ಬದಲಾಯಿಸಿ]- ಅಮೇರಿಕಾದ ಸಂಸತ್ತನ್ನು ಕಾಂಗ್ರೆಸ್ ಎಂದು ಕರೆಯುವರು, ನಮ್ಮಲ್ಲಿರುವ ಮೇಲ್ಮನೆ ಹಾಗು ಕೆಳಮನೆಗಳಂತೆ ಸೆನೆಟ್(Senate) ಹಾಗು ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಗಳು(House of Representatives – 'ಹೌಸ್' ಎಂದು ಚಿಕ್ಕದಾಗಿ ಕರೆಯುತ್ತಾರೆ) ಕಾಂಗ್ರೆಸ್‍ನ ಬಾಗಗಳು. ಪ್ರತಿ ರಾಜ್ಯದ ಮಂದಿಯೆಣಿಕೆಯ ಆದಾರದ ಮೇಲೆ ಹಲವು ವಲಯಗಳನ್ನಾಗಿ ಮಾಡಲಾಗಿರುತ್ತದೆ. ಹೀಗಿರುವ ಪ್ರತಿಯೊಂದು ವಲಯದಿಂದ ಹುರಿಯಾಳುಗಳು ಹೌಸ್ ಗೆ ಆಯ್ಕೆಯಾಗಿ ಬಂದಿರುತ್ತಾರೆ. ಈಗ ಅಮೇರಿಕಾದ ಸಂಸತ್ತಿನಲ್ಲಿ ಒಟ್ಟು 435 ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಇದ್ದಾರೆ. ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಅವರ ಅದಿಕಾರದ ಕಾಲಮಿತಿ ಎರೆಡು ವರುಷಗಳಾಗಿರುತ್ತದೆ.
- ಇನ್ನು ಪ್ರತಿಯೊಂದು ರಾಜ್ಯದಿಂದ ಇಬ್ಬರು ಸೆನೆಟರ್ ಗಳು ಆಯ್ಕೆಯಾಗಿ ಬರುತ್ತಾರೆ. ಇದಕ್ಕೆ ಯಾವುದೇ ಮತದಾರರ ಲೆಕ್ಕಚಾರವಿರುವುದಿಲ್ಲ, ಹಾಗಾಗಿ ಒಟ್ಟು 100 ಸೆನೆಟರ್ ಗಳು ಆಯ್ಕೆಯಾಗಿ ಇರುತ್ತಾರೆ. ಸೆನೆಟರ್ ಗಳ ಅದಿಕಾರದ ಕಾಲಮಿತಿ ಆರು ವರುಷಗಳಾಗಿರುತ್ತದೆ. ಪ್ರತಿ ಎರೆಡು ವರುಷಗಳಿಗೊಮ್ಮೆ 1/3 ರಶ್ಟು ಸೆನೆಟರ್ ಗಳ (ಒಟ್ಟು 100 ಮಂದಿ ಸೆನೆಟರ್ ಗಳಲ್ಲಿ ಸುಮಾರು 33 ಮಂದಿ) ಅದಿಕಾರದ ಕಾಲಮಿತಿ ಮುಗಿಯುತ್ತದೆ. ಹಾಗಾಗಿ ಪ್ರತಿ ಎರೆಡು ವರುಷಕ್ಕೆ 1/3 ರಷ್ಟು ಸೆನೆಟ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಸೆನೆಟ್ ಹಾಗು ಹೌಸ್'ಗೆ ಅದರದ್ದೇ ಆದ ವಿಶಿಷ್ಟ ಅದಿಕಾರಗಳಿವೆ.
- ಇನ್ನು ಚುನಾವಣೆಯ ವಿಷಯಕ್ಕೆ ಬರೋಣ, ಅಮೇರಿಕಾದ ಅಧ್ಯಕ್ಷರ ಅದಿಕಾರದ ಕಾಲಮಿತಿ ನಾಲ್ಕು ವರ್ಷಗಳು, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಧ್ಯಕ್ಷೀಯ ಚುನಾವಣೆಯು ನಡೆದು ಅಧ್ಯಕ್ಷರ ಆಯ್ಕೆ ಆಗುತ್ತದೆ. ಈ ನಾಲ್ಕು ವರುಷಗಳ ನಡು ಬಾಗದಲ್ಲಿ ಅಂದರೆ ಎರೆಡು ವರುಷಕ್ಕೆ ಒಂದು ಚುನಾವಣೆ ಆಗುತ್ತದೆ ಅದನ್ನು ನಡುಗಾಲದ ಚುನಾವಣೆ ಎನ್ನಲಾಗುತ್ತದೆ. ಈ ನಡುಗಾಲದ ಚುನಾವಣೆಯಲ್ಲಿ ಅದ್ಯಕ್ಶರ ಚುನಾವಣೆ ಆಗುವುದಿಲ್ಲ.
- ನಡುಗಾಲದ ಚುನಾವಣೆಯೇ ಇರಲಿ ಇಲ್ಲವೇ ನಾಲ್ಕು ವರ್ಷದ ಅದ್ಯಕ್ಶರ ಚುನಾವಣೆಯೇ ಇರಲಿ, ಪ್ರತಿ ಎರೆಡು ವರ್ಷದ ಈ ಚುನಾವಣೆಯಲ್ಲಿ ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ನ ಎಲ್ಲಾ 435 ಸ್ತಾನಗಳಿಗೆ ಮತ್ತು 1/3 ರಷ್ಟು ಸೆನೆಟ್ ಸ್ತಾನಗಳಿಗೆ ಚುನಾವಣೆ ನಡೆಯುತ್ತದೆ. ಇದಲ್ಲದೇ, ಕೆಲವು ಸಂಸತ್ತಿನ ಹುದ್ದೆಗಳು ಮತ್ತು ಗವರ್ನರ್ ಹುದ್ದೆಗಳಿಗೆ ಇದೇ ಹೊತ್ತಿನಲ್ಲಿ ಚುನಾವಣೆ ನಡೆಯುತ್ತದೆ.[೧೩]
ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಉಪಾಧ್ಯಕ್ಷರನ್ನು ಚುನಾಯಿಸುವ ವಿಧಾನ
[ಬದಲಾಯಿಸಿ]- ಸಂಯುಕ್ತ ಸಂಸ್ಥಾನದ “ಚುನಾಯಿಕರ ಕೂಟ” (ಎಲೆಕ್ಟೋರಲ್ ಕಾಲೇಜು: [[:en:Electoral College|Electoral College) ಪ್ರತಿ ಅಮೇರಿಕಾ ಸಂಯುಕ್ತ ಸಂಸ್ಥಾನದ (ಯುನೈಟೆಡ್ ಸ್ಟೇಟ್ಸ್) ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನಾಲ್ಕು ವರ್ಷಗಳ ಅವಧಿಗೆ ಆಯ್ಕೆ ಮಾಡುವ ಒಂದು ಸಂಸ್ಥೆಯಾಗಿದೆ. ಅಮೇರಿಕಾ ಸಂಯುಕ್ತ ಸಂಸ್ಥಾನದ ನಾಗರಿಕರು ನೇರವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ; ಬದಲಿಗೆ, ಮತದಾರರು ನೇರವಾಗಿ ಯಾವಾಗಲೂ ನಿರ್ದಿಷ್ಟ ಅಧ್ಯಕ್ಷೀಯ ಹಾಗು ಉಪಾಧ್ಯಕ್ಷೀಯ ಅಭ್ಯರ್ಥಿಗಳಿಗಾಗಿ ಮತ ವಾಗ್ದಾನ ಮಾಡಿದ ( ಈ ಮತದಾರರ ಪ್ರತಿನಿಧಿಗಳು ಒಂದು ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಲು ವಾಗ್ದಾನ ಮಾಡಿರುತ್ತಾರೆ: ವಾಗ್ದಾನ ವಿಲ್ಲದ /ಮೀರುವ ಚುನಾಯಕರು ಇರಲು ಸಾಧ್ಯ; ಆದರೂ),"ಮತದಾರರ ಪ್ರತಿನಿಧಿಗಳು" ಎಂದರೆ “ಚುನಾಯಕರ” {[[:en:electors|electors,)ನ್ನು ಆರಿಸುವರು.(ಇವರು ಗೊತ್ತುಪಡಿಸಿದ ಮಧ್ಯವರ್ತಿಗಳು) ಅವರನ್ನು ಪ್ರತಿ ರಾಜ್ಯದ ನಿರ್ದಿಷ್ಟ ಕಾನೂನಿನ ಪ್ರಕಾರ ಆಯ್ಕೆ ಮಾಡುತ್ತಾರೆ. ಆ “ಚುನಾಯಕರನ್ನು” 50 ರಾಜ್ಯಗಳು ಮತ್ತು ಕೊಲಂಬಿಯಾ ಜಿಲ್ಲೆ - ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ (ವಾಷಿಂಗ್ಟನ್ ಡಿ.ಸಿ. ಎಂದು ಕರೆಯಲಾಗುತ್ತದೆ)ಗಳಿಂದ ಆರಿಸುವರು. ಪ್ರತಿ ರಾಜ್ಯದಲ್ಲಿ ‘ಚುನಾಯಕ’ರ ಸಂಖ್ಯೆ ಆ ರಾಜ್ಯದಿಂದ ಅಮೇರಿಕಾ ಸಂಸತ್ತಿನ “ಪ್ರತಿನಿಧಿ ಸಭೆ”ಗೆ ಮತ್ತು ಸೆನೆಟಿಗೆ ಆಯ್ಕೆಯಾಗುವ ಪ್ರನಿಧಿಗಳ ಸಂಖ್ಯೆಯಷ್ಟೆ ಇರುತ್ತದೆ.(is equal to the number of members of Congress). ಇಪ್ಪತ್ತಮೂರನೇ ತಿದ್ದುಪಡಿಯು ಕೊಲಂಬಿಯಾ ಜಿಲ್ಲೆಗೆ, ಕನಿಷ್ಠ ಪ್ರತಿನಿಧಿಗಳನ್ನು ಹೊಂದಿದ ರಾಜ್ಯದ ಸಂಖ್ಯೆಯಷ್ಟೇ ಚುನಾಯಕರನ್ನು ಹೊಂದಲು ಅವಕಾಶನೀಡುತ್ತದೆ. ಈ ಸಂದರ್ಭದಲ್ಲಿ ಕನಿಷ್ಟ ಜನಸಂಖ್ಯೆಯ ರಾಜ್ಯವು ಪ್ರಸ್ತುತ ಮೂರು ಕಾಂಗ್ರೆಸ್ ಸದಸ್ಯರನ್ನು ಹೊಂದಿದೆ. ಅದರಂತೆ ಕೊಲಂಬಿಯಾ ಜಿಲ್ಲೆಯು ಮೂರು ಜನ ಚುನಾಯಕರನ್ನು ಆರಿಸಬಹುದು. ಆದ್ದರಿಂದ, ಇಂದು ಒಟ್ಟು ಚುನಾಯಕರ ಸಂಖ್ಯೆ 538 ಆಗುತ್ತದೆ. ಸಂಸತ್ತಿಹ ಪ್ರತಿನಿಧಿ ಸಭೆಯ 435 ಸದಸ್ಯರು ಮತ್ತು 100 ಜನ ಸೆನೆಟರ್ಸ್ ಜೊತೆಗೆ ಕೊಲಂಬಿಯಾ ಜಿಲ್ಲೆಯಿಂದ ಮೂರು ಹೆಚ್ಚುವರಿ 'ಚುನಾಯಕ'ರು ಇದರಲ್ಲಿ ಸೇರುತ್ತಾರೆ. ಸಂವಿಧಾನಬದ್ಧವಾಗಿ ಆಯ್ಕೆಯಾದವರು ಅಥವಾ ನೇಮಕವಾದ ಅಧಿಕಾರಿ ಚುನಾಯಕನಾಗಿ ಆಯ್ಕೆಯಾಗಲು ಸಂವಿಧಾನ ನಿಷೇಧಿಸುತ್ತದೆ. ಆದ್ದರಿಂದ ಗೆಲ್ಲಲು 270 ಚುನಾವಣಾ ಮತಗಳನ್ನು ಪಡೆಯುವ ಅಗತ್ಯವಿದೆ. [೧೭]
- ಮೈನೆ ಮತ್ತು ನೆಬ್ರಸ್ಕಾ (Maine and Nebraska) ಪ್ರದೇಶದ ಚುನಾಯಕರನ್ನು ಬಿಟ್ಟು, ಚುನಾಯಕರನ್ನು ಒಂದು "ವಿಜೇತನಿಗೆ-ಎಲ್ಲಾ ಮತ" ಎಂಬ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅದೆಂದರೆ, ರಾಜ್ಯದ ಹೆಚ್ಚು ಮತಗಳನ್ನು ಗಳಿಸಿದ ಅಧ್ಯಕ್ಷೀಯ ಅಭ್ಯರ್ಥಿಗೆ ಆ ರಾಜ್ಯದ ಎಲ್ಲಾ ('ಚುನಾಯಕ'ರ) ಮತಗಳೂ ಬಂದಂತೆ,ಎಂಬ ನಿಯಮ. ಆದರೆ ಮೈನೆ ಮತ್ತು ನೆಬ್ರಸ್ಕಾಗಳಲ್ಲಿ ಪ್ರತಿನಿಧಿ ಸಭೆಯ ಪ್ರಾತಿನಿಧಿಕ ಜಿಲ್ಲಿಗೆ ಒಂದರಂತೆ ("ಕಾಂಗ್ರೆಸ್ ಜಿಲ್ಲಾ ವಿಧಾನ" ಬಳಸಿ) ಚುನಾಯಕರನ್ನು ಆಯ್ಕೆ ಮಾಡುವರು ಮತ್ತು ಸೆನೇಟ್``ನ 2 ಪ್ರತಿನಿಧಿಗಳ ಲೆಕ್ಕಕೆ ಇಡೀ ರಾಜ್ಯಾದ್ಯಂತ ಜನಮತದ ಮೂಲಕ ಎರಡು ಚುನಾಯಕರನ್ನು (ಜನಪ್ರಿಯ ಮತದಾನದ ಮೂಲಕ 2 ಮತದಾರ ಪ್ರತಿನಿಧಿಗಳನ್ನು) ಆಯ್ಕೆ ಮಾಡುವರು. 'ಚುನಾಯಕ'ನು ವಾಗ್ದಾನವನ್ನು (ಇದೇ ಪಕ್ಷದ ಅಭ್ಯರ್ತಿಗೆ ಮತನೀಡಬೇಕೆಂಬ ನಿಯಮ) ಪಾಲಿಸಲು ಯಾವುದೇ ಫೆಡರಲ್ ಕಾನೂನು ಇಲ್ಲ. ಚುನಾಯಕನು ವಾಗ್ದಾನಕ್ಕೆ ವಿರುದ್ಧವಾಗಿ ಕೆಲವೇ ಸಂದರ್ಭಗಳಲ್ಲಿ ಮತ ನೀಡಿದ್ದಾನೆ). ಹನ್ನೆರಡನೆಯ ತಿದ್ದುಪಡಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಹೇಗೆ ಆಯ್ಕೆ ಮಾಡಬೇಕೆಂದು ಹೇಳುತ್ತದೆ. ಅದರಂತೆ 'ಚುನಾಯಕ'ನು, ಅಧ್ಯಕ್ಷನಿಗೆ ಆಯ್ಕೆಗೆ ಒಂದು ಮತ ಮತ್ತು ಉಪಾಧ್ಯಕ್ಷನ ಆಯ್ಕೆಗೆ ಮತ್ತೊಂದು ಮತವನ್ನು ನೀಡಬೇಕಾಗುತ್ತದೆ.[೧೮]
ಅರ್ಹತೆ ಮತ್ತು ಸಮುದಾಯ
[ಬದಲಾಯಿಸಿ]- ಅಧ್ಯಕ್ಷರಾಗಲು ಅರ್ಹತೆ:
- 1.ಅಮೆರಿಕ ದಲ್ಲಿ ಜನಿಸಿದವರು
- ಅಮೆರಿಕ ಪೌರತ್ವ ಹೊಂದಿದ ದಳಪತಿಯ ಮಗ ಅಥವಾ ಮಗಳಾಗಿರಬೇಕು.
- ಪೋಷಕರಲ್ಲಿ ಒಬ್ಬರು ಅಮೇರಿಕಾದ ಪ್ರಜೆಯಾಗಿರಬೇಕು.
- ಪೋಷಕರಲ್ಲಿ ಒಬ್ಬರು ಅಮೇರಿಕಾದ ಪ್ರಜೆಯಾಗಿದ್ದು , ಅಭ್ಯರ್ಥಿ ಆಕಾಂಕ್ಷಿ ವಿದೇಶದಲ್ಲಿ ಜನಿಸಿದ್ದರೂ ಅಡ್ಡಿಯಿಲ್ಲ.
- 2. 35 ವರ್ಷ ವಯಸ್ಸಾಗಿರಬೇಕು.
- 3..ಅಮೇರಿಕದ ಪ್ರಜೆಯಾದರೂ ಕನಿಷ್ಠ 14 ವರ್ಷ ಅಮೇರಿಕದಲ್ಲಿ ವಾಸವಗಿರಬೇಕು.
ಜನಸಂಕ್ಯೆ ಮತ್ತು ಸಮುದಾಯ
[ಬದಲಾಯಿಸಿ]- 1.ಅಮೆರಿಕದ ಜನಸಂಕ್ಯೆ : 32.2 ಕೋಟಿ
- ಬಿಳಿಯರ ಸಂಖ್ಯೆ 24.6 ಕೋಟಿ,
- ಆಫ್ರಿಕನ್ ಅಮೇರಿಕನ್ನರ ಸಂಖ್ಯೆ :4.1 ಕೋಟಿ
- ಮುಸ್ಲಿಮರ ಸಂಖ್ಯೆ : 27.5 ಲಕ್ಷ.
ಪಾರ್ಟಿ ಲೊಗೊಗಳು
[ಬದಲಾಯಿಸಿ]ರಿಪಬ್ಲಿಕನ್ ಪಾರ್ಟಿ ಚಿನ್ಹೆ | ಡೆಮೊಕ್ರಟಿಕ್ ಪಾರ್ಟಿ ಚಿನ್ಹೆ |
---|---|
ಆನೆ ಮತ್ತು ಜಿ. ಒ . ಪಿ. | ಕತ್ತೆ ಮತ್ತು ಒದೆಯುವ ಕತ್ತೆ |
ಹಿಲರಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ
[ಬದಲಾಯಿಸಿ]- ದಿ.28th Jul, 2016
- ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗದ ಹಿಲರಿ ಕ್ಲಿಂಟನ್ ದಿ.07-06-2016 ಮಂಗಳವಾರದ ಪ್ರಾಥಮಿಕ ಚುನಾವಣೆಗಳಲ್ಲಿ ಅವರು ನ್ಯೂಜೆರ್ಸಿ, ನ್ಯೂ ಮೆಕ್ಸಿಕೊ ಮತ್ತು ಸೌತ್ ಡಕೋಟಾ ರಾಜ್ಯಗಳಲ್ಲಿ ಗೆಲುವು ಕಾಣುವ ಮೂಲಕ ಡೆಮಾಕ್ರಟಿಕ್‌ನ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡು ಇತಿಹಾಸ ಸೃಷ್ಟಿಸಿದ್ದಾರೆ.
- ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಸ್ಥಾನಕ್ಕೆ ನಾಮನಿರ್ದೇಶನಗೊಳ್ಳಲು ಅಗತ್ಯವಾಗಿದ್ದ 2,383 ಪ್ರತಿನಿಧಿಗಳ ಬೆಂಬಲವನ್ನು ಹಿಲರಿ ಪಡೆದಿರುವರು.
- ಹಿಲರಿ ಪ್ರತಿಸ್ಪರ್ಧಿ ಬೆರ್ನಿ ಸ್ಯಾಂಡರ್ಸ್ ತಮ್ಮ ಸೋಲು ಒಪ್ಪಿಕೊಂಡಿಲ್ಲ. ಹಿಲರಿ ಅವರು 2,755 ಪ್ರತಿನಿಧಿಗಳ ಬೆಂಬಲ ಹೊಂದಿದ್ದರೆ, ಸ್ಯಾಂಡರ್ಸ್ ಅವರಿಗೆ 1,852 ಪ್ರತಿನಿಧಿಗಳ ಬೆಂಬಲವಿದೆ.[೨೦]
- ಇದರಿಂದ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಮತ್ತು ರಿಪಬ್ಲಿಕನ್ ಪಕ್ಷದ ವಿವಾದಿತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಸ್ಪರ್ಧೆ ನಡೆಯುವುದು ನಿಚ್ಚಳವಾಗಿದೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ಆಯ್ಕೆ
[ಬದಲಾಯಿಸಿ]- ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ಆಯ್ಕೆಯಾಗಿದ್ದಾರೆ. ಅವರಿಗೆ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿರುವ 4,764 ಪ್ರತಿನಿಧಿಗಳು ಅಧಿಕೃತವಾಗಿ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಹಿಲರಿ ಅವರು, ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆಯಾದ ಪ್ರಥಮ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.
- ನವೆಂಬರ್ 8ರಂದು ನಡೆಯಲಿರುವ ಚುನಾವಣೆಯಲ್ಲಿ ಹಿಲರಿ ಒಂದು ವೇಳೆ ಗೆಲುವು ಸಾಧಿಸಿದಲ್ಲಿ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿ
[ಬದಲಾಯಿಸಿ]- 21/07/2016:
- ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಬುಧವಾರ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಈ ಬಗ್ಗೆ ಔಪಚಾರಿಕ ಘೋಷಣೆ ಮಾಡಲಾಯಿತು. ಅಧ್ಯಕ್ಷರ ಚುನಾವಣೆ ನವೆಂಬರ್ 8 ರಂದು ನಡೆಯಲಿದೆ. ಆಗ ಅವರು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರನ್ನು ಎದುರಿಸಲಿದ್ದಾರೆ.
- 70 ವರ್ಷದ ಟ್ರಂಪ್ ಮೂಲತಃ ಉದ್ಯಮಿ. ಒಂದು ವರ್ಷದ ಹಿಂದೆ ಅವರು ರಾಜಕೀಯ ಪ್ರವೇಶಿಸಿದ್ದರು. ಅನುಭವಿ ರಾಜಕಾರಣಿಗಳಾದ ಜಾನ್ ಕಸಿಚ್ ಮತ್ತು ಜೆಬ್ ಬುಷ್ ಸೇರಿದಂತೆ 16 ಪ್ರಮುಖ ಸ್ಪರ್ಧಿಗಳನ್ನು ಪಕ್ಷದೊಳಗೆ ಎದುರಿಸಿದ್ದರು. ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಲು ಅಗತ್ಯವಿದ್ದ 1,237 ಪ್ರತಿನಿಧಿಗಳ ಮತಗಳನ್ನು ಪಡೆಯುವ ಮೂಲಕ ತಮ್ಮ ಹಾದಿಯನ್ನು ಸುಗಮಗೊಳಿಸಿಕೊಂಡರು.
ಲಿಬರ್ಟೇರಿಯನ್ ಮತ್ತು ಗ್ರೀನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳು
[ಬದಲಾಯಿಸಿ]- ಹಿಲರಿ ಕ್ಲಿಂಟನ್ ಮತ್ತು ಟ್ರಂಪ್ ಅಲ್ಲದೆ ಲಿಬರ್ಟೇರಿಯನ್ ಪಕ್ಷ ಮತ್ತು ಗ್ರೀನ್ ಪೀಸ್ ಪಕ್ಷಗಳಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಿನಿಯಾಗಿ ನ್ಯೂ ಮೆಕ್ಸಿಕೋದ ಗ್ಯಾರಿ ಜಾನ್ಸನ್ ಮತ್ತು ಮ್ಯಾಸಚೂಸೆಟ್ಸ್ ಜಿಲ್ ಸ್ಟೀನ್(ಸಂಭಾವ್ಯ)ಅವರೂ ಸ್ಪರ್ಧಿಸಿದ್ದಾರೆ.
ಅಧ್ಯಕ್ಷ ನಾಮಿನಿ= ಗ್ಯಾರಿ ಜಾನ್ಸನ್ | ಜಿಲ್ ಸ್ಟೀನ್(ಸಂಭಾವ್ಯ) |
ಪಕ್ಷ = ಲಿಬರ್ಟೇರಿಯನ್ | ಪಕ್ಷ =ಗ್ರೀನ್ ಪೀಸ್ |
ಗೃಹ ರಾಜ್ಯ= ನ್ಯೂ ಮೆಕ್ಸಿಕೋ | ಗೃಹ ರಾಜ್ಯ=ಮ್ಯಾಸಚೂಸೆಟ್ಸ್ |
ಅಭ್ಯರ್ಥಿಗಳ ಪ್ರಚಾರ
[ಬದಲಾಯಿಸಿ]{{Quote_box| width=22em|align=|right|quote=
.
- ಯಾವುದೇ ರಾಜ್ಯದ ಎಲೆಕ್ಟೋರಲ್ ಮತಗಳ ಸಂಖ್ಯೆ, ಆ ರಾಜ್ಯದಿಂದ ಅಮೆರಿಕದ ಕಾಂಗ್ರೆಸ್ಸಿನ ಮೇಲ್ಮನೆ ಮತ್ತು ಕೆಳಮನೆಗಳಿಗೆ ಆಯ್ಕೆಯಾದ ಸದಸ್ಯರ ಒಟ್ಟು ಸಂಖ್ಯೆಗೆ ಸಮನಾಗಿರುತ್ತದೆ. ಈ ಸಂಖ್ಯೆ ರಾಜ್ಯದ ಜನಸಂಖ್ಯೆಯ ಮೇಲೆ ನಿರ್ಧರಿತವಾಗಿರುತ್ತದೆ. ಒಟ್ಟಾರೆಯಾಗಿ ಅಮೆರಿಕ ಕಾಂಗ್ರೆಸ್ಸಿನ ಸದಸ್ಯರ ಸಂಖ್ಯೆ 538 ಇದೆ. ಅದರಲ್ಲಿ 100 ಮೇಲ್ಮನೆ ಪ್ರತಿನಿಧಿಗಳು, 435 ಕೆಳಮನೆ ಸದಸ್ಯರು ಮತ್ತು ಕೊಲಂಬಿಯಾದ 3 ಹೆಚ್ಚುವರಿ ಚುನಾಯಿಕರು.
- ಈ 538 ಮತಗಳು ಅಧ್ಯಕ್ಷ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತವೆ. ಹಾಗಂತ ಪ್ರತಿ ಸದಸ್ಯನೂ ತನ್ನ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮುಕ್ತ ಸ್ವಾತಂತ್ರ್ಯ ಹೊಂದಿರುವುದಿಲ್ಲ. ಅದು ಆಯಾ ರಾಜ್ಯದ ಜನಪ್ರಿಯ ಮತಗಳ ಮೇಲೆ ಅವಲಂಬಿತವಾಗಿರುತ್ತದೆ. (?ಉದಾ: ಒಂದು ರಾಜ್ಯದಲ್ಲಿ ಚಲಾವಣೆಯಾದ ಜನ ಮತಗಳಲ್ಲಿ ಶೇಕಡ 51ರಷ್ಟು ಪಡೆದ ಅಭ್ಯರ್ಥಿ, ಆ ರಾಜ್ಯದ ಅಷ್ಟೂ ಎಲೆಕ್ಟೋರಲ್ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾನೆ.?)
- ಹಾಗಾಗಿ ಯಾವುದೇ ರಾಜ್ಯದಲ್ಲಿ ಶೇ 51ರಷ್ಟು ಮತಗಳ ಮೇಲೆ ಕಣ್ಣಿಟ್ಟಿದ್ದರೆ ಸಾಕು. ಹೆಚ್ಚಿನ ಮತಗಳಿಕೆಗೆ ತ್ರಾಸಪಡಬೇಕಿಲ್ಲ. ಹೆಚ್ಚಿನ ಮತ ಬುಟ್ಟಿಗೆ ಬಿದ್ದರೂ ಉಪಯೋಗವಿಲ್ಲ.
- ಮುಖ್ಯವಾಗಿ ಅಮೆರಿಕದ ಆರು ರಾಜ್ಯಗಳು ಜನಸಂಖ್ಯೆಯ ಆಧಾರದಲ್ಲಿ ಹೆಚ್ಚು ಜನಪ್ರತಿನಿಧಿಗಳನ್ನು ಹೊಂದಿವೆ. ಅಮೆರಿಕದ ಒಟ್ಟು ಜನಸಂಖ್ಯೆಯ ಶೇಕಡ 12ರಷ್ಟು ಜನ ಕ್ಯಾಲಿಪೋರ್ನಿಯಾ ಒಂದರಲ್ಲೇ ಇದ್ದಾರೆ. ಹಾಗಾಗಿ ಆ ರಾಜ್ಯದಿಂದ 55 ಪ್ರತಿನಿಧಿಗಳು ಕಾಂಗ್ರೆಸ್ಸಿಗೆ ಆರಿಸಿ ಬರುತ್ತಾರೆ. ಅಂತೆಯೇ ಟೆಕ್ಸಾಸ್ 38, ನ್ಯೂಯಾರ್ಕ್ 29, ಫ್ಲಾರಿಡಾ 29, ಇಲಿನಾಯ್ಸ್ 20, ಪೆನ್ಸಿಲ್ವೇನಿಯಾ 20 ಪ್ರತಿನಿಧಿಗಳನ್ನು ಕಾಂಗ್ರೆಸ್ಸಿಗೆ ಕಳುಹಿಸುತ್ತವೆ.
- ಹೀಗೆ ವಿವಿಧ ರಾಜ್ಯಗಳಲ್ಲಿ ಒಟ್ಟುಗೂಡಿದ 538 ಎಲೆಕ್ಟೋರಲ್ ಮತಗಳ ಪೈಕಿ 270 ಮತಗಳಿಸಿದ ಅಭ್ಯರ್ಥಿ, ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ.[೨೨]
- ಹಿಲರಿ ಕ್ಲಿಂಟನ್:
- ಮುಖ್ಯಾಂಶಗಳು
- ಎಲ್ಲರಿಗೂ ಉದ್ಯೋಗ
- ಸಮಗ್ರ ವಲಸೆ ನೀತಿ
- ವಲಸೆ ಕಾರ್ಮಿಕರಿಗೆ ಪೌರತ್ವ
- ಫಿಲಡೆಲ್ಫಿಯಾದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದಿಂದ ನಾಮನಿರ್ದೇಶನವನ್ನು ಅಧಿಕೃತವಾಗಿ ಸ್ವೀಕರಿಸಿದ ನಂತರ ಹಿಲರಿ ಕ್ಲಿಂಟನ್ ಅವರು ಮಾಡಿದ ಭಾಷಣದಲ್ಲಿ ಹಲವು ಸುಧಾರಣಾ ನೀತಿಗಳನ್ನು ಪ್ರಸ್ತಾಪಿಸಿದರು. ತಮ್ಮ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರ ಒಡೆದು ಆಳುವ ನೀತಿಗಳ ವಿರುದ್ಧ ಅಮೆರಿಕನ್ನರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹಿಲರಿ ಕರೆ ನೀಡಿದರು.
- ಎಲ್ಲ ಅಮೆರಿಕನ್ನರಿಗೂ ಉದ್ಯೋಗ ದೊರಕಿಸುವುದು ಹಾಗೂ ದೇಶದ ಆರ್ಥಿಕತೆಗೆ ನೆರವಾಗಿರುವ ದಾಖಲೆ ಯಿಲ್ಲದ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಪೌರತ್ವ ಪಡೆಯುವ ಅವಕಾಶ ಕಲ್ಪಿಸುವ ಭರವಸೆಯನ್ನು ಅವರು ನೀಡಿದರು.
- ಟ್ರಂಪ್ ಅವರು ರಿಪಬ್ಲಿಕನ್ ಪಕ್ಷವನ್ನು ಅಮೆರಿಕದಿಂದ ಬಹುದೂರ ಕೊಂಡೊಯ್ದಿದ್ದಾರೆ. ಅವರ ಅನಿಯಮಿತ ಭರವಸೆಗಳು ಅಪಾಯ ಒಡ್ಡುವ ಸಾಧ್ಯತೆಗಳೇ ಹೆಚ್ಚು. ಭವಿಷ್ಯವನ್ನು ಭಯದಿಂದ ನೋಡುವುದು, ಪರ ಸ್ಪರರು ಭಯದಿಂದ ಬದುಕುವುದನ್ನು ಅವರು ಬಯಸುತ್ತಿದ್ದಾರೆ’ ಎಂದು ಹಿಲರಿ ಟ್ರಂಪ್‍ರನ್ನು ಟೀಕೆ ಮಾಡಿದರು.
- ಸಮಗ್ರ ವಲಸೆ ನೀತಿ: ‘ಯಾವುದೇ ಧರ್ಮವನ್ನು ನಾವು ನಿಷೇಧಿಸುವುದಿಲ್ಲ. ಎಲ್ಲ ಅಮೆರಿಕನ್ನರ ಜತೆಯಾಗಿ ಕೆಲಸ ಮಾಡುತ್ತೇವೆ. ಭಯೋತ್ಪಾದನೆ ವಿರುದ್ಧ ಮಾತ್ರವೇ ನಮ್ಮ ಹೋರಾಟ’ ಎಂದು ಹಿಲರಿ ಸ್ಪಷ್ಟಪಡಿಸಿದ್ದಾರೆ.
- ದೇಶದ ವಲಸಿಗರನ್ನು ಹೊರದಬ್ಬು ವುದು ಮಾನವೀಯತೆ ಅಲ್ಲ. ಸಮಗ್ರ ವಲಸೆ ಸುಧಾರಣೆ ಜಾರಿಗೊಳಿಸುವ ಮೂಲಕ ಆರ್ಥಿಕತೆ ಬಲಪಡಿಸುವುದು ಮತ್ತು ಅವರ ಕುಟುಂಬ ಜತೆಯಾಗಿರುವಂತೆ ನೋಡಿಕೊಳ್ಳುವ ಭರವಸೆಯನ್ನೂ ಹಿಲರಿ ನೀಡಿದರು.
- ಟ್ರಂಪ್ ಅಮೆರಿಕನ್ ಅಲ್ಲ ಎಂದು ಅವರನ್ನು ಖಂಡಿಸಿದರು. ‘ಟ್ರಂಪ್ ಅಮೆರಿಕಕ್ಕೆ ಅರ್ಹ ವ್ಯಕ್ತಿ ಅಲ್ಲ. ಅವರ ಟೈಗಳು ಚೀನಾದಲ್ಲಿ, ಸೂಟ್‌ಗಳು ಮಿಚಿಗನ್ ಬದಲಾಗಿ ಮೆಕ್ಸಿಕೋದಲ್ಲಿ ಹಾಗೂ ಅವರ ಫೋಟೊ ಫ್ರೇಮ್‌ಗಳು ಭಾರತ ತಯಾರಾಗುತ್ತವೆ. ಅಮೆರಿಕಕ್ಕೆ ಆದ್ಯತೆ ನೀಡಬೇಕು ಎಂಬುದು ಅವರ ಮನಸ್ಸಿನಲ್ಲಿಯೇ ಇಲ್ಲ’ ಎಂದು ಹಿಲರಿ ಟೀಕಿಸಿದರು.
- ಅಮೆರಿಕದಲ್ಲಿ ಯಾವುದೇ ಧರ್ಮವನ್ನು ನಿಷೇಧಿಸಲು ಅನುಮತಿ ನೀಡಬಾರದು. ಜನರ ಮಧ್ಯೆ ಗೋಡೆಗಳನ್ನು ನಿರ್ಮಿಸುವಂಥಾ ರಾಜಕಾರಣ ಒಪ್ಪುವಂಥದ್ದಲ್ಲ.ಎಲ್ಲ ಜನರಿಗೂ ನೀತಿ ಲಭಿಸುವಂತೆ ಮಾಡಲು ನಾನು ಯತ್ನಿಸುತ್ತೇನೆ. ಪುರುಷ ಮತ್ತು ಮಹಿಳೆಯರನ್ನು ಒಂದೇ ರೀತಿ ಗೌರವಿಸಲು ನಾವು ಕಲಿಯಬೇಕಿದೆ ಎಂದಿದ್ದಾರೆ.
- ಅಮೆರಿಕದ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದ ಭಾರತ ಮೂಲದ ಶ್ರುತಿ ಪಳನಿಯಪ್ಪನ್ (18) ಅವರು ಅತಿ ಕಿರಿಯ ವಯಸ್ಸಿನ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡೊನಾಲ್ಡ್ ಟ್ರಂಪ್:
[ಬದಲಾಯಿಸಿ]- ಹಿಲರಿ ಕ್ಲಿಂಟನ್ ಅವರ ನಾಮನಿರ್ದೇಶನ ಸ್ವೀಕಾರ ಸಮಾರಂಭದ ಭಾಷಣವನ್ನು ರಿಪಬ್ಲಿಕನ್ ಪಕ್ಷದ ನಾಮನಿರ್ದೇಶಿತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.
- ಹಿಲರಿ ದೂರದೃಷ್ಟಿಯನ್ನು ಟೀಕಿಸಿದ ಟ್ರಂಪ್, ಅವರು ಉದ್ಯೋಗ ಹಾಗೂ ಸುರಕ್ಷತೆಯಿಲ್ಲದ, ‘ಗಡಿಗಳಿಲ್ಲದ ಜಗತ್ತನ್ನು’ ಕಲ್ಪಿಸಿಕೊಂಡಿದ್ದಾರೆ ಎಂದಿ ದ್ದಾರೆ. ಇಸ್ಲಾಂ ಮೂಲಭೂತವಾದದ ಬಗ್ಗೆ ಹಿಲರಿ ಅವರು ಎಲ್ಲಿಯೂ ಪ್ರಸ್ತಾಪಿ ಸಿಲ್ಲ ಎಂದೂ ಟ್ರಂಪ್ ಹೇಳಿದ್ದಾರೆ.
- ‘ನಮ್ಮ ಜೀವನವು ಇಸ್ಲಾಂ ಮೂಲಭೂತವಾದದ ಭೀತಿಯಲ್ಲಿ ನಡೆಯುತ್ತಿದೆ. ಈ ಮಧ್ಯೆ ನಿರಾಶ್ರಿತರ ಪ್ರಮಾಣವನ್ನು ಶೇ 550ರಷ್ಟು ಹೆಚ್ಚಿಸುವ ಆಲೋಚನೆ ಹೊಂದಿರುವುದು ದೇಶವನ್ನು ಅಪಾಯಕ್ಕೆ ತಳ್ಳುತ್ತದೆ. ಹಿಲರಿ ನಿಜಕ್ಕೂ ದೇಶವನ್ನು ಮುನ್ನಡೆಸಲು ಅರ್ಹ ವ್ಯಕ್ತಿ ಅಲ್ಲ’ ಎಂದು ಟ್ರಂಪ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.
- ‘ಹಿಲರಿಯಿಂದ ವಾಲ್‌ಸ್ಟ್ರೀಟ್ ಸುಧಾರಣೆ ಸಾಧ್ಯವಿಲ್ಲ. ಹಿಲರಿಗಿಂತ ಕೆಟ್ಟ ತೀರ್ಪು ಕೈಗೊಳ್ಳುವವರು ಮತ್ಯಾರೂ ಇರಲಿಕ್ಕಿಲ್ಲ. ಅವರು ಎಲ್ಲಿಯೇ ಹೋದರೂ ಭ್ರಷ್ಟಾಚಾರ ಹಾಗೂ ವಿನಾಶಗಳು ಅವರನ್ನು ಹಿಂಬಾಲಿ ಸುತ್ತವೆ’ ಎಂದು ಟ್ರಂಪ್ ನುಡಿದಿದ್ದಾರೆ.[೨೩]
ಹಿಲರಿ ಕ್ಲಿಂಟನ್ ಗೆ ಮುನ್ನಡೆ
[ಬದಲಾಯಿಸಿ]- 2 Sep, 2016:ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರಿಗಿಂತ ಶೇಕಡ 2ರಷ್ಟು ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಸಮೀಕ್ಷೆಯೊಂದು ಹೇಳಿದೆ.
- ಈ ಕುರಿತು ‘ಫಾಕ್ಸ್ ನ್ಯೂಸ್’ ಸುದ್ದಿಸಂಸ್ಥೆ ರಾಷ್ಟ್ರೀಯ ಮತದಾನದ ವಿವರಗಳನ್ನು ಪ್ರಕಟಿಸಿದೆ. ಕ್ಲಿಂಟನ್ ಅವರು ಶೇಕಡ 41ರಷ್ಟು ಹಾಗೂ ಟ್ರಂಪ್ ಶೇಕಡ 39ರಷ್ಟು ಮತ ಪಡೆದಿದ್ದಾರೆ ಎಂದು ತಿಳಿಸಿದೆ.
- ಲಿಬರೇಷನ್ ಪಕ್ಷದ ಗೆರಿ ಜಾನ್ಸನ್ ಅವರು ಶೇಕಡ 9ರಷ್ಟು ಮತಗಳನ್ನು ಪಡೆದಿದ್ದು, ಗ್ರೀನ್ ಪಕ್ಷದ ಅಭ್ಯರ್ಥಿ ಜಿಲ್ ಸ್ಟೈನ್ ಅವರು ಶೇಕಡ 4ರಷ್ಟು ಮತ ಪಡೆದಿದ್ದಾರೆ. ಶ್ವೇತಭವನದ ಹಾದಿ ತುಂಬ ಕಠಿಣವಾಗಿದ್ದು, ಹಿಲರಿ ಹಾಗೂ ಕ್ಲಿಂಟನ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ವಿವಾದಗಳ ನಡುವೆಯೂ ಟ್ರಂಪ್ ಅವರು, ಮತಗಳನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದ್ದು, ಹಿಲರಿ ಅವರಿಗಿಂತ ಸ್ವಲ್ಪ ಹಿಂದೆ ಇದ್ದಾರೆ.
- ಹಿಲರಿ ಟೀಕೆ: ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ವಿದೇಶಾಂಗ ನೀತಿಯ ಮೊದಲ ಪರೀಕ್ಷೆಯಲ್ಲಿಯೇ ವಿಫಲರಾಗಿದ್ದಾರೆ ಎಂದು ಹಿಲರಿ ಕ್ಲಿಂಟನ್ ವ್ಯಂಗವಾಡಿದ್ದಾರೆ. ಮೆಕ್ಸಿಕೊ ಅಧ್ಯಕ್ಷರನ್ನು ಭೇಟಿ ಮಾಡಿ ಬಂದಿರುವ ಟ್ರಂಪ್ ಅವರ ಮೊದಲ ವಿದೇಶ ಪ್ರವಾಸ ಫಲಪ್ರದವಾಗಿಲ್ಲ ಎಂದಿರುವ ಹಿಲರಿ, ವಿದೇಶಾಂಗ ವ್ಯವಹಾರಗಳನ್ನು ನಿಭಾಯಿಸುವುದು ಸುಲಭವಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಒಬಾಮ ಸರ್ಕಾರದ ಮೊದಲ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಹಿಲರಿಗೆ ಹೋಲಿಸಿದರೆ, ಟ್ರಂಪ್‌ಗೆ ಯಾವುದೇ ಅನುಭವ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮೆಕ್ಸಿಕೊ ಮತ್ತು ಅಮೆರಿಕದ ಗಡಿಯುದ್ದಕ್ಕೂ ತಡೆಗೋಡೆ ನಿರ್ಮಿಸಲಾಗುವುದು ಎಂದು ಟ್ರಂಪ್ ನೀಡಿರುವ ಹೇಳಿಕೆಯನ್ನು ಹಿಲರಿ ಟೀಕಿಸಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.[೨೪]
- ನ್ಯೂಯಾರ್ಕ್‍ನಲ್ಲಿ ದಿ. ಸೆ.8-ರಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತೆ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾಗಿಂತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೆಚ್ಚು ಸಮರ್ಥರು ಎಂದು ಹೇಳಿದ್ದಾರೆ. ನ್ಯೂಯಾರ್ಕ್‍ನಲ್ಲಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಟ್ರಂಪ್, ತಾವು ಅಧಿಕಾರಕ್ಕೆ ಬಂದರೆ ರಷ್ಯಾದ ಬಲಿಷ್ಠ ವ್ಯಕ್ತಿ ಪುಟಿನ್ ಜತೆ ತುಂಬ ಉತ್ತಮ ಸಂಬಂಧ ಹೊಂದುವುದಾಗಿ ಹೇಳಿದ್ದಾರೆ.[೨೫]
ಆಗಸ್ಟ್ 26,2016 ರ ಸಮೀಕ್ಷೆ
[ಬದಲಾಯಿಸಿ]- ಅರ್ಧಕ್ಕಿಂತ ಹೆಚ್ಚು ಹೊಸ ಸಮೀಕ್ಷೆಗೆ ಪ್ರತಿಕ್ರಿಯಿಸಿದವರು ಹಿಲರಿ ಕ್ಲಿಂಟನ್ ಮತ ಹಾಕುವುದಾಗಿ ಹೇಳಿದರು - ಮೊದಲ ಬಾರಿಗೆ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಎಲ್ಲಾ ಪ್ರಮುಖ 50% ರ ಗಡಿಯನ್ನು ದಾಟಿದ್ದಾರೆ. ಎಂದು ಕ್ವಿನಪಿಯಾಕ್ ವಿಶ್ವವಿದ್ಯಾಲಯ ಗುರುವಾರ ಬಿಡುಗಡೆ ಮಾಡಿದ ಸಮೀಕ್ಷೆಯಲ್ಲಿ ಹೇಳಿದೆ. ಅದು ನೇರ ಮುಖಾಮುಖಿಯಲ್ಲಿ ದೇಶದ ಮಾಜಿ ಕಾರ್ಯದರ್ಶಿಯ.51% ಕ್ಕೆ ಟ್ರಂಪ್ 41% ಮತ ಕಂಡುಬಂದಿದೆ ಎಂದಿದೆ. ಕ್ವಿನಪಿಯಾಕ್ ವಿಶ್ವವಿದ್ಯಾಲಯದ ಟಿಮ್ ಮಿಲಾಯಿ , ಪೋಲ್ ಸಹಾಯಕ ನಿರ್ದೇಶಕ "ನಾವು ಹಿಲರಿ ಕ್ಲಿಂಟನ್ ಅವರ 10 ಅಂಕಗಳ ಮುನ್ನಡೆ ಒಂದು ದೊಡ್ಡ ಜಯದ ಸಣ್ಣ ನೆಡೆಯ ಸದ್ದು ಎಂದು ಹೇಳಿದರು. ಡೊನಾಲ್ಡ್ ಟ್ರಂಪ್ ಕೆಳಕ್ಕೆಇಳಿಯುವ ಸುಳಿಯಲ್ಲಿರುವ ಪುರಾವೆ ಇದು ಎಂದು" ಹೇಳಿದ್ದಾರೆ.
- ತೃತೀಯ ಅಭ್ಯರ್ಥಿಗಳ ಸಮೀಕರಣದ ಮಾಡಲಾಗುತ್ತದೆ; ಆ ವೇಳೆ ಕ್ಲಿಂಟನ್ ಬೆಂಬಲ 50% ಗಿಂತ ಕೆಳಗಿನ ಹಂತಕ್ಕೆ ಬರಬಹುದು. ಮಾಜಿ ಪ್ರಥಮ ಮಹಿಳೆ ಲಿಬರ್ಟರೇನ್ ಪಾರ್ಟಿ ಅಭ್ಯರ್ಥಿ ಗ್ಯಾರಿ ಜಾನ್ಸನ್ ಮತ್ತು ಗ್ರೀನ್ ಪಾರ್ಟಿ ಸ್ಪರ್ಧಿಯಾಗಿ ಜಿಲ್ ಸ್ಟೀನ್ ಸೇರಿಸಿ ಲೆಕ್ಕ ಮಾಡಿದಾಗ, ಅವರು 45% ಮತ ಪಡೆಯುತ್ತಾರೆ; ಟ್ರಂಪ್ ಗೆ ಮತದಾನ 38% ರಷ್ಟು.ಬರುವುದು. ಜಾನ್ಸನ್ 10% ಮತ ಪಡೆಯುವರು. ಮತ್ತು ಸ್ಟೀನ್ ಗೆ 4% ಮತ. ಇದು ಕ್ವಿನಪಿಯಾಕ್ ವಿಶ್ವವಿದ್ಯಾಲಯದ ಸಮೀಕ್ಷೆ.[೨೬]
ಟ್ರಂಪ್ – ಹಿಲರಿ ದಾಖಲೆ ಸಂವಾದ
[ಬದಲಾಯಿಸಿ]- 29 Sep, 2016 ರಂದು ನ್ಯೂಯಾರ್ಕ್ ನಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಸೋಮವಾರ ನಡೆದ ಮೊದಲನೇ ಸಂವಾದ ದಾಖಲೆ ನಿರ್ಮಿಸಿದೆ. ಸಂವಾದನ್ನು 8.4 ಕೋಟಿ ಜನ ವೀಕ್ಷಿಸಿದ್ದಾರೆ. ಇದರಿಂದ 36 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಂತಾಗಿದೆ. 1980ರಲ್ಲಿ ಡೆಮೊಕ್ರಾಟ್ ಪಕ್ಷದ ಅಭ್ಯರ್ಥಿ ಜಿಮ್ಮಿ ಕಾರ್ಟರ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ರೊನಾಲ್ಡ್ ರೇಗನ್ ನಡುವೆ ನಡೆದಿದ್ದ ಸಂವಾದವನ್ನು 8.06 ಕೋಟಿ ಜನ ವೀಕ್ಷಿಸಿದ್ದರು.
- ‘ರಿಯಾಲಿಟಿ ಷೋ ಅಲ್ಲ’: ‘ಶ್ವೇತಭವನಕ್ಕಾಗಿನ ತಮ್ಮ ಸ್ಪರ್ಧೆ ನೈಜವಾದದ್ದೇ ವಿನಃ ಟಿವಿ ರಿಯಾಲಿಟಿ ಷೋ ಅಲ್ಲ’ ಎಂದು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹೇಳಿದರು. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಉದ್ದೇಶಿಸಿ ಹಿಲರಿ ಈ ಹೇಳಿಕೆ ನೀಡಿದ್ದಾರೆ.[೨೭]
ಡೊನಾಲ್ಡ್ ಟ್ರಂಪ್ ತಿರಸ್ಕರಿಸಿ ‘ಯುಎಸ್‌ಎ ಟುಡೆ’ ಕರೆ
[ಬದಲಾಯಿಸಿ]- ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಅಪಾಯಕಾರಿ ಪುಡಾರಿ ಎಂದು ಅಮೆರಿಕದ ಪ್ರಮುಖ ಪತ್ರಿಕೆ ‘ಯುಎಸ್‌ಎ ಟುಡೆ’ ಟೀಕಿಸಿದ್ದು, ಅವರಿಗೆ ಮತ ನೀಡದಂತೆ ಓದುಗರಿಗೆ ಸೂಚಿಸಿದೆ.
- ವಾಷಿಂಗ್ಟನ್ (ಎಎಫ್‌ಪಿ): ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಅಪಾಯಕಾರಿ ಪುಡಾರಿ ಎಂದು ಅಮೆರಿಕದ ಪ್ರಮುಖ ಪತ್ರಿಕೆ ‘ಯುಎಸ್‌ಎ ಟುಡೆ’ ಟೀಕಿಸಿದ್ದು, ಅವರಿಗೆ ಮತ ನೀಡದಂತೆ ಓದುಗರಿಗೆ ಸೂಚಿಸಿದೆ.
- ಸಂಪ್ರದಾಯವನ್ನು ಮುರಿದು ಇದೇ ಮೊದಲ ಬಾರಿ ಪತ್ರಿಕೆ ಓದುಗರಿಗೆ ಈ ರೀತಿ ಸೂಚಿಸಿದೆ. 34 ವರ್ಷಗಳ ಇತಿಹಾಸದಲ್ಲಿ ಹಿಂದೆಂದೂ ಯುಎಸ್‌ಎ ಟುಡೆ ಅಧ್ಯಕ್ಷೀಯ ಅಭ್ಯರ್ಥಿಗಳ ವಿರುದ್ಧ ನಿರ್ಣಯ ಕೈಗೊಂಡಿರಲಿಲ್ಲ. ಆದರೆ ಈ ಬಾರಿ, ಟ್ರಂಪ್ ಅಧ್ಯಕ್ಷರಾಗಲು ಅನರ್ಹರು ಎಂದು ಪತ್ರಿಕೆಯ ಸಂಪಾದಕ ಮಂಡಳಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ.[೨೮]
ಟ್ರಂಪ್ ಸಂಕಷ್ಡದಲ್ಲಿ
[ಬದಲಾಯಿಸಿ]- ಮಹಿಳೆಯರ ಬಗೆಗೆ ಲಘುವಾಗಿ ಮಾತನಾಡಿದ್ದು: ಬಹಳ ಜನರ ವಿರೋಧ:
- (ಉದಯವಾಣಿ, Oct 09, 2016:ವಾಷಿಂಗ್ಟನ್:)ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಅವರು ಮಹಿಳೆಯರ ಬಗ್ಗೆ ತೀರಾ ಅಸಭ್ಯ ಮಾತುಗಳನ್ನು ಆಡಿದ್ದ 11 ವರ್ಷಗಳ ಹಳೆಯ ವಿಡಿಯೋವೊಂದು ಇದೀಗ ಪ್ರತ್ಯಕ್ಷವಾಗಿದೆ. ಇದರಿಂದಾಗಿ ಟ್ರಂಪ್ ಅವರಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ಇದು ಅರಿವಾಗುತ್ತಿದ್ದಂತೆ ಅಪರೂಪಕ್ಕೆಂಬಂತೆ ಟ್ರಂಪ್ ಅವರು ಕ್ಷಮೆ ಯಾಚಿಸಿದ್ದಾರೆ.
- "ನಾನು ಮಹಿಳೆಯರಿಗೆ ಮುತ್ತು ಕೊಡುತ್ತೇನೆ. ಅದೊಂದು ರೀತಿ ಅಯಸ್ಕಾಂತ ಇದ್ದಂತೆ. ಅದಕ್ಕೆ ನಾನು ಕಾಯುವುದಿಲ್ಲ. ನೀವು ಸ್ಟಾರ್ ಆಗಿದ್ದರೆ, ಕಿಸ್ ಮಾಡಲು ಮಹಿಳೆಯರೇ ಬಿಡುತ್ತಾರೆ. ಅದರಾಚೆಗೆ ನೀವು ಏನು ಬೇಕಾದರು ಮಾಡಬಹುದು' ಎಂದು 3 ನಿಮಿಷಗಳ ಈ ವಿಡಿಯೋದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಹಿಳೆಯರಿಗೆ ನಾನು ಹೊಡೆಯುತ್ತಿದ್ದೆ. ನಾನು ಶ್ರೀಮಂತ ಹಾಗೂ ಪ್ರಸಿದ್ಧ ವ್ಯಕ್ತಿ ಎಂಬ ಕಾರಣಕ್ಕೆ ಮಹಿಳೆಯರು ಅದಕ್ಕೆಲ್ಲಾ ಅವಕಾಶ ಕೊಡುತ್ತಿದ್ದರು ಎಂದು ಟ್ರಂಪ್ ಹೇಳುವ ವಿಡಿಯೋ ವಾಷಿಂಗ್ಟನ್ ಪೋಸ್ಟ್‌ಗೆ ಲಭ್ಯವಾಗಿದೆ.
- ಈ ಕುರಿತು ಸ್ಪಷ್ಟನೆ ನೀಡಿರುವ ಟ್ರಂಪ್, "ತಮಾಷೆಗಾಗಿ ಖಾಸಗಿಯಾಗಿ ಮಾತನಾಡುತ್ತಾ ಈ ಮಾತುಗಳನ್ನು ಆಡಿದ್ದೇನೆ. ಆದರೆ ಹಿಲರಿ ಕ್ಲಿಂಟನ್‌ರ ಪತಿ ಬಿಲ್ ಕ್ಲಿಂಟನ್ ಅವರು ನನಗಿಂತ ಕೆಟ್ಟ ಮಾತುಗಳನ್ನು ಆಡಿದ್ದಾರೆ. ಒಂದು ವೇಳೆ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ' ಎಂದು ತಿಳಿಸಿದ್ದಾರೆ.
- ಆದರೆ ಈ ಕ್ಷಮೆಯನ್ನು ಟ್ರಂಪ್ ಪಕ್ಷದವರೇ ತಿರಸ್ಕರಿಸಿರುವುದರಿಂದ ಅವರಿಗೆ ಮುಖಭಂಗವಾಗಿದೆ.ಅವರ ಪತ್ನಿಯೂ ವಿರೋಧಿಸಿದ್ದಾರೆ.[೨೯]
ಹಿಲರಿ
[ಬದಲಾಯಿಸಿ]- 19 Oct, 2016
ಸಮೀಕ್ಷೆಯಲ್ಲಿ ಹಿಲರಿ ಮುಂದೆ: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿ ಸಿಬಿಎಸ್ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಶೇ 9 ಮತಗಳ ಮುನ್ನಡೆ ಸಾಧಿಸಿದ್ದಾರೆ. ಕ್ಲಿಂಟನ್ ಪರ ಶೇ 47ರಷ್ಟು ಮತ ಚಲಾವಣೆಯಾಗಿದ್ದರೆ, ಟ್ರಂಪ್ ಪರ ಶೇ 38ರಷ್ಟು ಮತ ಚಲಾವಣೆಯಾಗಿದೆ.[೩೦]
ಟ್ರಂಪ್ ಚರ್ಚೆಯಲ್ಲಿ ಮೇಲುಗೈ
[ಬದಲಾಯಿಸಿ]- 27 Oct, 2016
- ‘ನಾನು ಅಧ್ಯಕ್ಷನಾದರೆ, ನಿಮ್ಮ ಇ-ಮೇಲ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶೇಷ ಫಿರ್ಯಾದಿಯನ್ನು ನೇಮಿಸುತ್ತೇನೆ. ನೀವು ಜೈಲಿಗೆ ಹೋಗಬೇಕಾಗುತ್ತದೆ.’ ಇದು ಎರಡನೆಯ ಸಂವಾದದಲ್ಲಿ ಡೊನಾಲ್ಡ್ ಟ್ರಂಪ್ ಅವರು ಹಿಲರಿ ಕ್ಲಿಂಟನ್ ಕುರಿತು ಆಡಿದ ಮಾತು. ಈ ಮಾತಿನಿಂದಲೇ ಟ್ರಂಪ್ ಚರ್ಚೆಯಲ್ಲಿ ಮೇಲುಗೈ ಸಾಧಿಸಿದರು.[೩೧]
Monday, 24 october 2016
[ಬದಲಾಯಿಸಿ]- ಅಮೇರಿಕಾದ ಅಭಿಪ್ರಾಯಗಳು
- ಯಾರು ಅಮೇರಿಕಾದ ಅಧ್ಯಕ್ಷೀಯ ಚುನಾವಣೆ 2016 ಗೆಲ್ಲುವರು?
- ಹಿಲರಿ ಕ್ಲಿಂಟನ್ - 55.6%
- ಡೊನಾಲ್ಡ್ ಟ್ರಂಪ್ - 44.4%
- ಒಟ್ಟು ಮತಗಳನ್ನು: 602
- [[೫]]
ಟ್ರಂಪ್ ಮುನ್ನೆಡೆ
[ಬದಲಾಯಿಸಿ]Nov 1, 2016,
- ಟ್ರಂಪ್>< ಕ್ಲಿಂಟನ್ ಎಬಿಸಿ ನ್ಯೂಸ್ / ವಾಷಿಂಗ್ಟನ್ ಪೋಸ್ಟ್: ಇದರ ಪ್ರಕಾರ, ಟ್ರ್ಯಾಕಿಂಗ್ ಸಮೀಕ್ಷೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಕ್ಲಿಂಟನ್‍ರಿಗಿಂತ ಮುಂದಿದೆ ರಾಜ್ಯದ ಮಾಜಿ ಕಾರ್ಯದರ್ಶಿ 45 ರಷ್ಟು ಮತದ ವಿರುದ್ಧ, ಟ್ರಂಪ್ ಶೇ 46 ರಷ್ಟು ಮತದಾರರ ಬೆಂಬಲವನ್ನು ಹೊಂದಿದ್ದಾರೆ.
- "ವಿಶೇಷವಾಗಿ ಶುಕ್ರವಾರದಿಂದ ಭಾನುವಾರ ತನಕ, ಟ್ರ್ಯಾಕಿಂಗ್‍ನಲ್ಲಿ ಆರಂಭದಿಂದಲೂ ಕ್ಲಿಂಟನ್ ಏಳು ಅಂಕಗಳನ್ನು ಕಳೆದುಕೊಂಡಿದ್ದಾರೆ. ಈ ಪರಿಣಾಮ ಬಹುಶಃ ರಾಜ್ಯದ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ತನ್ನ ಖಾಸಗಿ ಇಮೇಲ್ ಸರ್ವರ್ ಬಳಕೆ ವಿವಾದದ ವಿಷಯದ ನಂತರ, ಆಗಿದೆ.[೩೨]
ಮಾಧ್ಯಮ ಪಕ್ಷಪಾತದ ಬಗೆಗೆ ಟ್ರಂಪ್
[ಬದಲಾಯಿಸಿ]- ನ್ಯೂಯಾರ್ಕ್ ನಲ್ಲಿ ಆಯೋಜನೆಗೊಂಡಿದ್ದ ಭೋಜನಕೂಟದಲ್ಲಿ, ಹಿಲರಿ ಮತ್ತು ಟ್ರಂಪ್ ಭಾಗವಹಿಸಿದ್ದರು. ಟ್ರಂಪ್ ಮಾತನಾಡುತ್ತಾ, ‘ಇದು ಅಭ್ಯರ್ಥಿಗಳ ಸಮಾಗಮವಷ್ಟೇ ಅಲ್ಲ, ನಮ್ಮ ಗೆಲುವಿಗೆ ಶ್ರಮ ಪಡುತ್ತಿರುವ ಎರಡು ತಂಡಗಳೂ ಇಲ್ಲಿವೆ. ಹಿಲರಿ ಪರ ಸಾಕಷ್ಟು ಕಷ್ಟಪಟ್ಟು ದುಡಿಯುತ್ತಿರುವ NBC, CNN, CBS, ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಮುಖ್ಯಸ್ಥರೂ ಇಲ್ಲಿದ್ದಾರೆ’ ಎಂದು ಚಟಾಕಿ ಹಾರಿಸಿದ್ದರು. ಟ್ರಂಪ್ ಅವರ ಮಾತು ಕೇವಲ ವ್ಯಂಗ್ಯೋಕ್ತಿ ಆಗಿರಲಿಕ್ಕಿಲ್ಲ.[೩೩]
ಹಿಲರಿಗೆ ಶೇಕಡ ಎರಡರಷ್ಟು ಮುನ್ನಡೆ
[ಬದಲಾಯಿಸಿ]- 6 Nov, 2016
- ಶ್ವೇತಭವನಕ್ಕೆ ಪ್ರವೇಶಿಸುವ ಉತ್ಸಾಹದಲ್ಲಿರುವ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವಣ ಪೈಪೋಟಿ ಬಿಗಿಗೊಳ್ಳುವ ಸೂಚನೆ ಕಂಡುಬಂದಿದ್ದು, ಚುನಾವಣಾ ಪೂರ್ವ ಜನಮತ ಸಂಗ್ರಹದಲ್ಲಿ ಹಿಲರಿ ಅವರು ಟ್ರಂಪ್ ಅವರಿಗಿಂತ ಕೇವಲ ಶೇಕಡ 2ರಷ್ಟು ಮುನ್ನಡೆ ಪಡೆದುಕೊಂಡಿದ್ದಾರೆ.ಫಾಕ್ಸ್ ನ್ಯೂಸ್ ಶುಕ್ರವಾರ ಬಿಡುಗಡೆ ಮಾಡಿರುವ ಚುನಾವಣಾ ಸಮೀಕ್ಷೆಯ ವರದಿಯಲ್ಲಿ ಹಿಲರಿ ಅವರು ಶೇಕಡ 45ರಷ್ಟು ಮತಗಳನ್ನು ಪಡೆದಿದ್ದರೆ, ಟ್ರಂಪ್ ಶೇಕಡ 43ರಷ್ಟು ಮತಗಳನ್ನು ಪಡೆದಿದ್ದಾರೆ.[೩೪]
ಹಿಲರಿಗೆ ಮುನ್ನಡೆ
[ಬದಲಾಯಿಸಿ]- 7/8 Nov, 2016
- ಮತದಾನಕ್ಕೆ ಮುನ್ನಾದಿನ ‘ಸಿಬಿಎಸ್ ನ್ಯೂಸ್’ ನಡೆಸಿದ ಸಮೀಕ್ಷೆಯಲ್ಲಿ ಹಿಲರಿ ಅವರು ಟ್ರಂಪ್ ಅವರಿಗಿಂತ ಶೇ ನಾಲ್ಕರಷ್ಟು ಹೆಚ್ಚು ಮತಗಳನ್ನು ಪಡೆದಿದ್ದಾರೆ. ಹಿಲರಿ ಅವರಿಗೆ ಶೇ.45 ಮತ್ತು ಟ್ರಂಪ್ ಅವರಿಗೆ ಶೇ.41ರಷ್ಟು ಮತಗಳು ಬಂದಿವೆ.
- ಕಳೆದ ವಾರದ ಸಮೀಕ್ಷೆಯ ಲ್ಲಿಯೂ ಹಿಲರಿ ಅವರಿಗೆ ಮುನ್ನಡೆ ಇತ್ತು. ಪದವಿಗಿಂತ ಕಡಿಮೆ ವಿದ್ಯಾ ಭ್ಯಾಸದ ಬಿಳಿಯರು ಮತ್ತು ಹಿರಿಯ ನಾಗರಿಕರು ಟ್ರಂಪ್ ಪರವಾಗಿದ್ದಾರೆ. ಮಹಿಳೆಯರು, ಆಫ್ರಿಕಾ–ಅಮೆರಿಕ ನ್ನರು ಮತ್ತು ಯುವ ಜನರ ಬೆಂಬಲ ಹಿಲರಿಗೆ ಅವರಿಗೆ ಹೆಚ್ಚಾಗಿದೆ ಎಂದು ಸಿಬಿಎಸ್ ನ್ಯೂಸ್ ಹೇಳಿದೆ.
- ಮುಖ್ಯಾಂಶಗಳು
- ಈ ಚುನಾವಣೆ 48ನೇ ಉಪಾಧ್ಯಕ್ಷರನ್ನೂ ಆಯ್ಕೆ ಮಾಡಲಿದೆ. ಉಪಾಧ್ಯಕ್ಷ ಹುದ್ದೆಗೆ ರಿಪಬ್ಲಿಕನ್ ಪಕ್ಷದಿಂದ ಮೈಕ್ ಪೆನ್ಸ್ ಹಾಗೂ ಡೆಮಾಕ್ರಟಿಕ್ ಪಕ್ಷದಿಂದ ಟಿಮ್ ಕೇನ್ ಕಣದಲ್ಲಿದ್ದಾರೆ.
ಮತದಾನ
[ಬದಲಾಯಿಸಿ]- ನ್ಯೂಯಾರ್ಕ್‌ನಲ್ಲಿ ಮಂಗಳವಾರ ಬೆಳಿಗ್ಗೆ 6ರಿಂದ 7 ಗಂಟೆ ಒಳಗೆ ಮತದಾನ ಆರಂಭವಾಗಲಿದೆ. (ಭಾರತೀಯ ಕಾಲಮಾನ ಮಂಗಳವಾರ ಸಂಜೆ 4.30 ರಿಂದ 5.30). ಎರಡು ರಾಜ್ಯಗಳಲ್ಲಿ ಮಾತ್ರ ರಾತ್ರಿ 9 ಗಂಟೆವರೆಗೂ ಮತದಾನ (ಅಲ್ಲಿನ ಕಾಲಮಾನ) ಮುಂದುವರಿ ಯಲಿದೆ. ಅಂದಾಜು 12 ಕೋಟಿ ಜನರು ಮತ ಚಲಾಯಿಸುವ ನಿರೀಕ್ಷೆ ಇದೆ.
- ಮಂಗಳವಾರ ಬೆಳಗ್ಗೆ ಮತದಾನ ಆರಂಭ (ಭಾರತೀಯ ಕಾಲಮಾನ ಮಂಗಳವಾರ ಸಂಜೆ 4.30ರ ನಂತರ)
- ಒಟ್ಟು ಮತದಾರರ ಸಂಖ್ಯೆ 20 ಕೋಟಿಗೂ ಹೆಚ್ಚು; 12 ಕೋಟಿ ಜನರಿಂದ ಮತದಾನ ನಿರೀಕ್ಷೆ
ಹಿಲರಿ ದೋಷಮುಕ್ತ
[ಬದಲಾಯಿಸಿ]- ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾಗ ಖಾಸಗಿ ಇ– ಮೇಲ್ ಬಳಕೆ ಮಾಡಿದ ಆರೋಪ ಎದುರಿಸುತ್ತಿದ್ದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಎಫ್‌ಬಿಐ ಸೋಮವಾರ ದೋಷಮುಕ್ತಗೊಳಿಸಿದೆ. [೩೫]
ಫಲಿತಾಂಶ
[ಬದಲಾಯಿಸಿ]- ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ನಡುವಿನ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಗೆಲುವು ಸಾಧಿಸುವ ಮೂಲಕ ಟ್ರಂಪ್ ಅಮೆರಿಕದ ಅಧ್ಯಕ್ಷ ಸ್ಥಾನವನ್ನೇರಿದ್ದಾರೆ.
- ಅಮೆರಿಕದ ಅಧ್ಯಕ್ಷರಾಗಲು 270 ಪ್ರತಿನಿಧಿಗಳ ಬೆಂಬಲ ಬೇಕಿತ್ತು. ಆದರೆ ಇಲ್ಲಿ ಟ್ರಂಪ್ 276 ಮತಗಳನ್ನು ಗಳಿಸಿ ಅಧ್ಯಕ್ಷ ಪಟ್ಟಕ್ಕೇರಿದ್ದಾರೆ. ಅಮೆರಿಕದ 45ನೇ ಅಧ್ಯಕ್ಷರಾಗಿದ್ದಾರೆ ಟ್ರಂಪ್
- 23 ಪ್ರಾಂತ್ಯಗಳಲ್ಲಿ ಗೆಲುವು ಸಾಧಿಸಿದ ಟ್ರಂಪ್ ಒಟ್ಟು 276 ಮತಗಳನ್ನು ಗಳಿಸಿ ಅಮೆರಿಕ ಅಧ್ಯಕ್ಷರಾಗಲು ಅರ್ಹತೆ ಗಿಟ್ಟಿಸಿದ್ದಾರೆ. ಇತ್ತ, 13 ಪ್ರಾಂತ್ಯಗಳಲ್ಲಿ ಗೆಲುವು ಸಾಧಿಸಿದ್ದ ಹಿಲರಿ 218 ಮತಗಳನ್ನು ಗಳಿಸಿದ್ದಾರೆ.[೩೬]
- ಹೊರಗಿನ ಅಭಿಪ್ರಾಯಗಳು ಛಿದ್ರ ಅಭಿಪ್ರಾಯ ಕೊಟ್ಟವು; ರಾಷ್ಟ್ರವ್ಯಾಪಿ ಮಹಿಳೆಯರು ಕ್ಲಿಂಟನ್ ಬೆಂಬಲಿಸಿದರೆ, ಪುರುಷರು ಟ್ರಂಪ್ ರನ್ನು ಬೆಂಬಲಿಸಿದರು. ಗಮನಾರ್ಹವಾಗಿ ಹೆಚ್ಚು ಇದ್ದುದರಿಂದ ಎರಡು ಅಂಕಿಯ ಅಂತರದಿಂದ ಬೆಂಬಲ ಸಿಕ್ಕಿದೆ. ಸುಮಾರು 10 ರಲ್ಲಿ 9 ಕರಿಯರು ಮತ್ತು ಹಿಸ್ಪಾನಿಕ್ಸ್ ಮೂರರಲ್ಲಿ ಎರಡು ಭಾಗದಷ್ಟು ಡೆಮೋಕ್ರಾಟ್ -ಕ್ಲಿಂಟನ್ನರಿಗೆ ಬೆಂಬಲಿಸಿದರೆ, ಅರ್ಧಕ್ಕಿಂತ ಹೆಚ್ಚು ಬಿಳಿ ಮತದಾರರು ರಿಪಬ್ಲಿಕನ್- ಟ್ರಂಪರನ್ನು ಬೆಂಬಲಿಸಿದರು.(Exit polls underscored the fractures: Women nationwide supported Clinton by a double-digit margin, while men were significantly more likely to back Trump. More than half of white voters backed the Republican, while nearly 9 in 10 blacks and two-thirds of Hispanics voted for the Democrat.}[೩೭]
ಟ್ರಂಪ್‍ಗೆ ಅಭನಂದನೆಗಳು
[ಬದಲಾಯಿಸಿ]- ಮಾಸ್ಕೊದಿಂದ, ಅಮೆರಿಕದ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಡೊನಾಲ್ಡ್ ಟ್ರಂಪ್ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಭಿನಂದನೆ ಸಲ್ಲಿಸಿದರು. ರಷ್ಯಾ ಮತ್ತು ಅಮೆರಿಕ ನಡುವಣ ಸಂಬಂಧವನ್ನು ಸುಧಾರಿಸುವ ಭರವಸೆಯನ್ನು ಪುಟಿನ್ ವ್ಯಕ್ತಪಡಿಸಿದರು. ‘ರಷ್ಯಾ ಮತ್ತು ಅಮೆರಿಕ ನಡುವಣ ಸಂಬಂಧ ಈಗ ಚೆನ್ನಾಗಿಲ್ಲ. ಎರಡೂ ದೇಶಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವ, ಅಂತರರಾಷ್ಟ್ರೀಯ ವಿಚಾರ ಗಳಲ್ಲಿ ಹೊಂದಿರುವ ಭಿನ್ನಾಭಿ ಪ್ರಾಯಗಳನ್ನು ಬಗೆಹರಿಸಿಕೊಳ್ಳುವ ವಿಶ್ವಾಸವನ್ನು ಪುಟಿನ್ ವ್ಯಕ್ತಪಡಿಸಿದ್ದಾರೆ’ ಎಂದು ರಷ್ಯಾ ಸರ್ಕಾರದ ಪ್ರಕಟಣೆ ತಿಳಿಸಿದೆ.‘ಅಮೆರಿಕ ಮತ್ತು ರಷ್ಯಾ ನಡುವೆ ಉತ್ತಮ ಸಂಬಂಧ ಸಾಧ್ಯವಾದರೆ, ಎರಡೂ ದೇಶಗಳ ಜನರಿಗೆ ಹಾಗೂ ಇಡೀ ವಿಶ್ವಕ್ಕೆ ಒಳಿತಾಗುತ್ತದೆ ಎಂಬ ಮಾತನ್ನು ಪುಟಿನ್ ಅವರು ಖಚಿತ ದನಿಯಲ್ಲಿ ಹೇಳಿದ್ದಾರೆ’ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
- ಭಾರತ ಮತ್ತು ಅಮೆರಿಕ ನಡುವಣ ಸಂಬಂಧ ಇನ್ನಷ್ಟು ಶಕ್ತಿಯುತಗೊಳ್ಳು ವುದನ್ನು ಎದುರು ನೋಡುತ್ತಿದ್ದೇವೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀವು ಭಾರತದ ಕುರಿತು ತೋರಿದ ಸ್ನೇಹಭಾವವನ್ನು ಶ್ಲಾಘಿಸುತ್ತೇನೆ.–ನರೇಂದ್ರ ಮೋದಿ, ಭಾರತದ ಪ್ರಧಾನಿ.
- ಟ್ರಂಪ್ ಗೆಲವು ಆತಂಕಕಾರಿ: ಟ್ರಂಪ್ ಅವರು ಮುಸ್ಲಿಮರನ್ನು ತಾರತಮ್ಯಕ್ಕೆ ಗುರಿಮಾಡುತ್ತಾರೆ ಎಂಬ ಆತಂಕ ಇದೆ. ಅಮೆರಿಕ ಬಹುಸಂಸ್ಕೃತಿಯ ರಾಷ್ಟ್ರ. ಅಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಟ್ರಂಪ್ ಗೆಲವು ಆತಂಕಕಾರಿ ಎಂದು ಇಂಡೋನೇಷ್ಯಾದ ಪ್ರಾಧ್ಯಾಪಕಿ ದಿಯಾನಿತಾ ಸುಗಿಯೊ ಹೇಳಿದ್ದಾರೆ.
- ಆಶಾಭಾವನೆಯ ಮೇಲೆ ಏಟು ಬಿದ್ದಿದೆ ಎಂದು ಗ್ರೀನ್‌ಪೀಸ್ ಸಂಸ್ಥೆಯ ಆಗ್ನೇಯ ಏಷ್ಯಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಯೆಬ್ ಸ್ಯಾನೊ ಹೇಳಿದ್ದಾರೆ.
- ಟ್ರಂಪ್ ಗೆಲವು ಆತಂಕಕಾರಿ: ಟ್ರಂಪ್ ಅವರು ಮುಸ್ಲಿಮರನ್ನು ತಾರತಮ್ಯಕ್ಕೆ ಗುರಿಮಾಡುತ್ತಾರೆ ಎಂಬ ಆತಂಕ ಇದೆ. ಅಮೆರಿಕ ಬಹುಸಂಸ್ಕೃತಿಯ ರಾಷ್ಟ್ರ. ಅಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಟ್ರಂಪ್ ಗೆಲವು ಆತಂಕಕಾರಿ ಎಂದು ಇಂಡೋನೇಷ್ಯಾದ ಪ್ರಾಧ್ಯಾಪಕಿ ದಿಯಾನಿತಾ ಸುಗಿಯೊ ಹೇಳಿದ್ದಾರೆ.
- ಹವಾಮಾನ ಬದಲಾವಣೆ ತಡೆ ಅಭಿಯಾನಕ್ಕೆ ಇದೊಂದು ಭಾರಿ ಹೊಡೆತ. ಪ್ಯಾರಿಸ್ ಹವಾಮಾನ ಒಪ್ಪಂದ ನಮ್ಮಲ್ಲಿ ಮೂಡಿಸಿದ್ದ ಆಶಾಭಾವನೆಯ ಮೇಲೆ ಏಟು ಬಿದ್ದಿದೆ ಎಂದು ಗ್ರೀನ್‌ಪೀಸ್ ಸಂಸ್ಥೆಯ ಆಗ್ನೇಯ ಏಷ್ಯಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಯೆಬ್ ಸ್ಯಾನೊ ಹೇಳಿದ್ದಾರೆ.
ಟ್ರಂಪ್ ಗೆಲುವಿನ ವಿಮರ್ಶೆ
[ಬದಲಾಯಿಸಿ]- "ಪ್ರಸಕ್ತ ಚುನಾವಣೆಯನ್ನು ಟ್ರಂಪ್ ಅವರ ಗೆಲುವು ಎಂದಷ್ಟೇ ಅಲ್ಲ, ಪಕ್ಷಪಾತಿ ಧೋರಣೆ ತಳೆದ ಮಾಧ್ಯಮಗಳ, ರಾಜಕೀಯ ಪಂಡಿತರ ಸೋಲು ಎಂದೂ ವ್ಯಾಖ್ಯಾನ ಮಾಡಬೇಕಿದೆ.
- ಒಟ್ಟಿನಲ್ಲಿ, ಈ ಫಲಿತಾಂಶದ ಮೂಲಕ ಅಮೆರಿಕನ್ನರು, ಮಹಿಳಾ ಅಧ್ಯಕ್ಷರನ್ನು ಚುನಾಯಿಸಿ ಇತಿಹಾಸ ಬರೆಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಹೊಸ ಮುಖಕ್ಕೆ ಆದ್ಯತೆ ನೀಡಿದ್ದಾರೆ. ಜನಪ್ರಿಯ ಮತಗಳನ್ನು ನೋಡಿದರೆ, ಹಿಲರಿ ಮತ್ತು ಟ್ರಂಪ್ ಅವರ ನಡುವೆ ಹೆಚ್ಚು ಅಂತರವಿಲ್ಲ. ಹಾಗಾಗಿ ರೂಪಿಸಿದ ತಂತ್ರಗಳಷ್ಟೇ ಇಲ್ಲಿ ಗೆದ್ದಿವೆ. ಕಾಂಗ್ರೆಸ್ಸಿನ ಮೇಲ್ಮನೆ ಮತ್ತು ಕೆಳಮನೆಗಳಲ್ಲೂ ರಿಪಬ್ಲಿಕನ್ ಪಕ್ಷ ಬಹುಮತ ಪಡೆದಿರುವುದರಿಂದ, ಟ್ರಂಪ್ ಅವರಿಗೆ ಮತ್ತಷ್ಟು ಶಕ್ತಿ ಬಂದಂತೆ ಆಗಿದೆ.
- ಭಯೋತ್ಪಾದನೆ, ವಲಸೆ, ಹೊರಗುತ್ತಿಗೆ ಬಗ್ಗೆ ಕಠಿಣ ಮಾತುಗಳನ್ನು ಟ್ರಂಪ್ ಅವರು ಆಡಿರುವುದರಿಂದ, ಅಮೆರಿಕದ ವಿದೇಶಾಂಗ ನೀತಿಯಲ್ಲಿ ಸಾಕಷ್ಟು ಬದಲಾವಣೆ ಆಗುವ ಸೂಚನೆ ಇದೆ. ಅಮೆರಿಕದಲ್ಲಿರುವ ಭಾರತೀಯರ ಕೆಲಸಕ್ಕೆ, ಹೊರಗುತ್ತಿಗೆಯ ಮೂಲಕ ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳಿಗೆ ಸಂಚಕಾರ ಬರಲಾರದು. ಭಾರತದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯನ್ನು ಜಾಗತಿಕ ಸನ್ನಿವೇಶ ಸೃಷ್ಟಿಸಿರುವುದರಿಂದ ಅದು ಅಬಾಧಿತ.
- ಒಂದಂತೂ ನಿಜ, ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರವನ್ನು ಜಾಣ್ಮೆಯಿಂದ ಮುನ್ನಡೆಸಿದಂತೆ, ಅಧ್ಯಕ್ಷರಾದ ಬಳಿಕ ದೇಶವನ್ನು ಮುನ್ನಡೆಸಿದರೆ, ಅಮೆರಿಕಕ್ಕೆ ಯಾವುದೇ ಸಮಸ್ಯೆ ಬರುವುದಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ತನ್ನ ಪಕ್ಷದವರೇ ಬೆಂಬಲ ಸೂಚಿಸದಿದ್ದಾಗಲೂ, ಒಂಟಿ ಸಲಗದಂತೆ ಶ್ವೇತಭವನದತ್ತ ನಡೆದ ಟ್ರಂಪ್, ನಾಲ್ಕು ವರ್ಷಗಳ ಕಾಲ ಮದಗಜದಂತೆ ವರ್ತಿಸದಿದ್ದರೆ, ಜಗತ್ತಿನ ಇತರ ರಾಷ್ಟ್ರಗಳಿಗೆ ಕೆಡುಕಿಲ್ಲ."-'ಸುಧೀಂದ್ರ ಬುಧ್ಯ'[೩೮]
ಹೊಸ ಅಧ್ಯಕ್ಷ ಟ್ರಂಪ್ ಆಯ್ಕೆಗೆ ವಿರೋಧ
[ಬದಲಾಯಿಸಿ]- ‘ಸ್ತ್ರೀ ದ್ವೇಷಿ ನಮಗೆ ಬೇಕಿಲ್ಲ’, ‘ಅಮೆರಿಕ ಫ್ಯಾಸಿಸ್ಟ್ ದೇಶವಲ್ಲ’, ‘ಟ್ರಂಪ್ ನಮ್ಮ ಅಧ್ಯಕ್ಷನಲ್ಲ’... ಮಂಗಳವಾರ ನಡೆದ ಮತದಾನದಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಆಯ್ಕೆ ಆಗಿರುವುದನ್ನು ಖಂಡಿಸಿ, ಅಮೆರಿಕದ ವಿವಿಧೆಡೆ ಸಾವಿರಾರು ಜನರು ನಡೆಸಿದ ಪ್ರತಿಭಟನೆಗಳಲ್ಲಿ ಕೇಳಿಬಂದ ಘೋಷಣೆಗಳಿವು.
- ಚುನಾವಣೆಯ ಫಲಿತಾಂಶವನ್ನು ಖಂಡಿಸಿ ‘ಸೋಷಿಯಲಿಸ್ಟ್ ಆಲ್ಟರ್‌ನೇಟಿವ್ಸ್‌್’ ಎಂಬ ಸಂಘಟನೆ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಮಕ್ಕಳಿಂದ ವೃದ್ಧರವರೆಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
- ಫಿಲಡೆಲ್ಫಿಯ, ಬಾಸ್ಟನ್, ಸಿಯಾಟಲ್, ಲಾಸ್ ಏಂಜಲೀಸ್, ಅಟ್ಲಾಂಟ, ಆಸ್ಟಿನ್, ಸ್ಯಾನ್ ಫ್ರಾನ್ಸಿಸ್ಕೊಗಳ ಹಲವೆಡೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಟ್ರಂಪ್ ವಿರುದ್ಧ ಘೋಷಣೆ ಕೂಗಿದರು. ಆ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಗುರುವಾರವೂ ವಾಷಿಂಗ್ಟನ್ ಡಿ.ಸಿಯಲ್ಲಿರುವ ಶ್ವೇತಭವನದ ಎದುರು ಕೆಲವರು ಪ್ರತಿಭಟನೆ ನಡೆಸಿದರು. ಬುಧವಾರ ಇಲ್ಲಿ ಮೇಣದಬತ್ತಿ ಬೆಳಗಿ ಪ್ರತಿಭಟನೆ ನಡೆಸಲಾಗಿತ್ತು. ನ್ಯೂಯಾರ್ಕ್‌ನಲ್ಲಿ ಟ್ರಂಪ್ ಅವರ ಕಚೇರಿ ಇರುವ ಟ್ರಂಪ್ ಟವರ್ ಸಮೀಪ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಇದರಿಂದಾಗಿ ವಹಿವಾಟು ಕೆಲಕಾಲ ಸಂಪೂರ್ಣ ಸ್ಥಗಿತಗೊಂಡಿತ್ತು.
- ಲಾಸ್ ಏಂಜಲೀಸ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಟ್ರಂಪ್ ಪ್ರತಿಕೃತಿಯನ್ನು ಸುಡಲಾಗಿದೆ.
‘ಕ್ಯಾಲ್‌ಎಕ್ಸಿಟ್’ ಅಭಿಯಾನ
[ಬದಲಾಯಿಸಿ]- ಕ್ಯಾಲಿಫೋರ್ನಿಯಾದ 55 ಎಲೆಕ್ಟೋರಲ್ ಮತಗಳನ್ನು ಹಿಲರಿ ಗೆದ್ದಿದ್ದಾರೆ. ಆದರೂ ಚುನಾವಣೆಯಲ್ಲಿ ಟ್ರಂಪ್ ಗೆದ್ದು, ಅಮೆರಿಕದ ಅಧ್ಯಕ್ಷರಾಗುತ್ತಿದ್ದಾರೆ. ತಮ್ಮ ಅಭಿಪ್ರಾಯಕ್ಕೆ ಮನ್ನಣೆಯೇ ಸಿಗುತ್ತಿಲ್ಲ ಎಂಬುದು ಇಲ್ಲಿನ ಜನರ ಆಕ್ರೋಶ.
- ಹೀಗಾಗಿ ಅಮೆರಿಕದಿಂದ ಕ್ಯಾಲಿಪೋರ್ನಿಯಾವನ್ನು ಬೇರ್ಪಡಿಸಿ ಎಂಬ ಕೂಗು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಲ್‌ಎಕ್ಸಿಟ್ (#Calexit) ಅಭಿಯಾನ ಆರಂಭವಾಗಿದೆ.
ಅಮೆರಿಕದ ಸಂಸತ್ತಿನ ಈಗಿನ ಬಲಾಬಲ
[ಬದಲಾಯಿಸಿ]- 09-06-2016 ಯು.ಎಸ್.ಎ. ಸಂಸತ್ತು:
ಸಭೆ | ಒಟ್ಟು ಸ್ಥಾನ | ಬಹುಮತ | ರಿಪಬ್ಲಕನ್ | ಡೆಮೋಕ್ರಟಿಕ್ | ಪಕ್ಷೇತರ | ಖಾಲಿ |
---|---|---|---|---|---|---|
ಸೆನೆಟ್ | 100 | 51 | 45 | 53 | 2 | 9 |
ಜನಪ್ರತಿನಿಧಿ ಸಭೆ | 435 | 218 | 233 | 199 | 0 | 3 |
ಯು.ಎಸ್.ಎ. ಸಂಸತ್ತು ಚುನಾವಣೆ ನವೆಂಬರ್ 2016ರ ನಂತರ:
[ಬದಲಾಯಿಸಿ]- ಬಲಾಬಲ
ಸಭೆ | ಒಟ್ಟು ಸ್ಥಾನ | ಬಹುಮತ | ರಿಪಬ್ಲಕನ್ | ಡೆಮೋಕ್ರಟಿಕ್ | ಪಕ್ಷೇತರ | ಖಾಲಿ |
---|---|---|---|---|---|---|
ಸೆನೆಟ್ | 100 | 51 | R:51 | D:48 | 1 | |
ಜನಪ್ರತಿನಿಧಿ ಸಭೆ | 435 | 218 | 239 | 193 | 0 | 3 |
ಅಮೆರಿಕ ಸಂಸತ್ತಿನ ಸೆನೆಟ್‍ಗೆ ಭಾರತೀಯ ಸಂಜಾತರು
[ಬದಲಾಯಿಸಿ]- 10 Nov, 2016
- ಕಾಂಗ್ರೆಸ್‌ನಲ್ಲಿ ಐವರು ಭಾರತೀಯರು; ಎಲ್ಲರೂ ಡೆಮಾಕ್ರಟಿಕ್ ಪಕ್ಷದ ಸದಸ್ಯರು;
- ಭಾರತ–ಅಮೆರಿಕ ಪ್ರಜೆ ಕಮಲಾ ಹ್ಯಾರಿಸ್ ಅವರು ಅಮೆರಿಕದ ಸೆನೆಟ್ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಈ ಮೂಲಕ ಕ್ಯಾಲಿಫೋರ್ನಿಯಾ ರಾಜ್ಯದಿಂದ ಸೆನೆಟ್‌ಗೆ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ ಹಾಗೂ ಏಷ್ಯಾ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದಾರೆ.
- ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ಅವರು ಭಾರತದ ಚೆನ್ನೈ ಮೂಲದವರಾಗಿದ್ದು, 1960ರಲ್ಲಿ ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ಬಂದಿದ್ದರು. ಕಮಲಾ ತಂದೆ ಡೊನಾಲ್ಡ್ ಗ್ರೀವ್ ಜಮೈಕಾ ಮೂಲದವರು.
- ಕಮಲಾ ಹೆಗ್ಗಳಿಕೆಗಳು
- ಸೆನೆಟ್‌ಗೆ ಆಯ್ಕೆಯಾದ ಎರಡನೇ ಕಪ್ಪು ವರ್ಣೀಯ ಮಹಿಳೆ
- ಕಳೆದ 20 ವರ್ಷಗಳಲ್ಲಿ ಸೆನೆಟ್‌ಗೆ ಆಯ್ಕೆಯಾದ ಏಕೈಕ ಕಪ್ಪು ವರ್ಣೀಯ ಮಹಿಳೆ
- ಸೆನೆಟ್‌ಗೆ ಆಯ್ಕೆಯಾದ ಆರನೇ ಕಪ್ಪು ವರ್ಣೀಯ ವ್ಯಕ್ತಿ
- ಪ್ರಮೀಳಾ ಜಯಪಾಲ್
- ಚೆನ್ನೈ ಮೂಲದವರಾದ ಪ್ರಮೀಳಾ ಜಯಪಾಲ್ (51) ಅವರು ತಮ್ಮ ಐದನೇ ವಯಸ್ಸಿನಲ್ಲಿ ಇಂಡೋನೇಷ್ಯಾಗೆ ತೆರಳಿ, ನಂತರ ಸಿಂಗಪುರಕ್ಕೆ ಹೋದರು. ಅಲ್ಲಿಂದ ಅಮೆರಿಕಕ್ಕೆ ತೆರಳಿದ್ದರು. ಈಗ ಸೆನೆಟ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
- ಅಮಿ ಬೆರಾ
- ಅಮಿ ಬೆರಾ ಅವರು ಈಗಾಗಲೇ ಎರಡು ಬಾರಿ ಜನಪ್ರತಿನಿಧಿಗಳ ಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದು ಅವರಿಗೆ ಮೂರನೇ ಚುನಾವಣೆ.
- ರಾಜಾ ಕೃಷ್ಣಮೂರ್ತಿ
- ನವದೆಹಲಿ ಮೂಲದವರಾದ ರಾಜಾ ಕೃಷ್ಣಮೂರ್ತಿ ಅವರು ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ.
- ರೋಹಿತ್ ಖನ್ನಾ
- ಇವರು ರೋ ಖನ್ನಾ ಎಂದೇ ಪ್ರಸಿದ್ಧರು. ಈ ಬಾರಿ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ.
ನೋಡಿ
[ಬದಲಾಯಿಸಿ]- ಅಮೇರಿಕಾ ಸಂಯುಕ್ತ ಸಂಸ್ಥಾನ
- ಅಮೇರಿಕ ಸಂಯುಕ್ತ ಸಂಸ್ಥಾನದ ಆಧ್ಯಕ್ಷೀಯ ಅಭ್ಯರ್ಥಿಗಳ ಚುನಾವಣೆ ೨೦೧೬
- ಅಮೇರಿಕ ಸಂಯುಕ್ತ ಸಂಸ್ಥಾನದ ಸರ್ಕಾರ
- Federal government of the United States
- Elections in the United States
- Democratic Party presidential primaries, 2016
- Electoral College (United States)
- ಹಿಲರಿ:ಮುತ್ಸದ್ದಿ-ಹಿಲರಿ
- Republican Party presidential primaries, 2016
- United States presidential election, 2016
- United States presidential election
- Democratic Party presidential candidates, 2016
ಹಿಲರಿ ಸೋಲು
[ಬದಲಾಯಿಸಿ]- ಅಮೆರಿಕದ ಅತ್ಯುನ್ನತ ಹುದ್ದೆಗೆ ಮಹಿಳೆ ಆಯ್ಕೆಯಾಗುತ್ತಾಳೆ ಎಂದು ನಂಬುವುದಕ್ಕೆ ಕಾರಣಗಳೂ ಇದ್ದವು.
- ‘ಗಾಜಿನ ಚಾವಣಿ’ಯಲ್ಲಿ ಮೂಡದ ಬಿರುಕು;ಸಿ.ಜಿ. ಮಂಜುಳಾ;15 Nov, 2016 Archived 2016-11-15 ವೇಬ್ಯಾಕ್ ಮೆಷಿನ್ ನಲ್ಲಿ.
ಹೆಚ್ಚಿನ ಓದಿಗೆ
[ಬದಲಾಯಿಸಿ]- ಶ್ವೇತಭವನದ ಉಪ್ಪರಿಗೆಗೆ ಅಯೋವಾ ಮೊದಲ ಮೆಟ್ಟಿಲು:ಸುಧೀಂದ್ರ ಬುಧ್ಯ:7 Oct, 2016:[[೬]]
- ಯಾರು ಹಿತವರು ಈ ನಾಲ್ವರೊಳಗೆ?;ಸುಧೀಂದ್ರ ಬುಧ್ಯ;6 Oct, 2016[[https://web.archive.org/web/20161006133352/http://www.prajavani.net/news/article/2016/10/06/443145.html Archived 2016-10-06 ವೇಬ್ಯಾಕ್ ಮೆಷಿನ್ ನಲ್ಲಿ.]]
- ಶ್ವೇತಭವನದ ಓಟಕ್ಕೊಬ್ಬ ಸಾಥಿ, ‘ರನ್ನಿಂಗ್ ಮೇಟ್’:[[https://web.archive.org/web/20161010185043/http://www.prajavani.net/news/article/2016/10/10/444170.html Archived 2016-10-10 ವೇಬ್ಯಾಕ್ ಮೆಷಿನ್ ನಲ್ಲಿ.]]
- ಮುನಿಸು, ಜಗಳಗಳಾಚೆ ಪಕ್ಷ ಗೆಲ್ಲಿಸುವಾಸೆ!13 Oct,2016[[https://web.archive.org/web/20161013134402/http://www.prajavani.net/news/article/2016/10/13/444583.html Archived 2016-10-13 ವೇಬ್ಯಾಕ್ ಮೆಷಿನ್ ನಲ್ಲಿ.]]
- ಇದು ಆರು ರಾಜ್ಯಗಳು ಬರೆಯುವ ಹಣೆಬರಹ;ಸುಧೀಂದ್ರ ಬುಧ್ಯ; Archived 2016-10-18 ವೇಬ್ಯಾಕ್ ಮೆಷಿನ್ ನಲ್ಲಿ.
- ಅಧ್ಯಕ್ಷೀಯ ಸಂವಾದ: - ಮಾತು ಬರಿದಾಗುವ ಹೊತ್ತು Archived 2016-10-18 ವೇಬ್ಯಾಕ್ ಮೆಷಿನ್ ನಲ್ಲಿ.
- ಚರ್ಚೆ ಎಂದರೆ ಬರಿಯ ಮಾತಲ್ಲೋ ಅಣ್ಣಾ!;17 Oct, 2016
- ಚರ್ಚೆಯ ವೇದಿಕೆಯಲ್ಲಿ ನಟನೆಗೂ ಅವಕಾಶವಿದೆ!18 Oct, 2016 Archived 2016-10-20 ವೇಬ್ಯಾಕ್ ಮೆಷಿನ್ ನಲ್ಲಿ.
- ಹಿಲರಿ, ಟ್ರಂಪ್ ಚರ್ಚೆಯಲ್ಲಿ ಕಂಡಿದ್ದು ಕೇಳಿದ್ದು;ಸುಧೀಂದ್ರ ಬುಧ್ಯ;19 Oct, 2016 Archived 2016-10-20 ವೇಬ್ಯಾಕ್ ಮೆಷಿನ್ ನಲ್ಲಿ.
- ಟ್ರಂಪ್ ಪಾಲಿಗೆ ಮಾತು ವರ ಮತ್ತು ಶಾಪ
- ಶ್ವೇತಭವನ ಕೊನೆಯ ನಿಲ್ದಾಣ, Archived 2016-10-27 ವೇಬ್ಯಾಕ್ ಮೆಷಿನ್ ನಲ್ಲಿ.
- ಹಿಲರಿ ವೇಗಕ್ಕೆ ನಿಯಂತ್ರಣ, ಮಿಂಚಂಚೆ ಪ್ರಕರಣ;ಸುಧೀಂದ್ರ ಬುಧ್ಯ;27 Oct, 2016 Archived 2016-10-27 ವೇಬ್ಯಾಕ್ ಮೆಷಿನ್ ನಲ್ಲಿ.
- ಇದು ಟ್ವಿಟರ್ ಯುಗದ ಹ್ಯಾಶ್ ಟ್ಯಾಗ್ ಕಾಳಗ Archived 2016-10-28 ವೇಬ್ಯಾಕ್ ಮೆಷಿನ್ ನಲ್ಲಿ.
- ಮಾಧ್ಯಮ ಪಕ್ಷಪಾತ;ಸುಧೀಂದ್ರ ಬುಧ್ಯ;29 Oct,2016
- ಇದು ಮೊಗೆದಷ್ಟೂ ಮುಗಿಯದ ರೋಚಕ ಕಥನ;ಸುಧೀಂದ್ರ ಬುಧ್ಯ;1 Nov, 2016 Archived 2016-11-01 ವೇಬ್ಯಾಕ್ ಮೆಷಿನ್ ನಲ್ಲಿ.
- ಉಡಾಫೆಯ,ಅಸಂಬದ್ಧ ಮಾತುಗಳ ಟ್ರಂಪರದಾಟ Archived 2016-11-03 ವೇಬ್ಯಾಕ್ ಮೆಷಿನ್ ನಲ್ಲಿ.
- ಅಮೆರಿಕ ಅಧ್ಯಕ್ಷ ಗಾದಿಯ ಹಾದಿ Archived 2016-11-03 ವೇಬ್ಯಾಕ್ ಮೆಷಿನ್ ನಲ್ಲಿ.
- ಬಿರುಸು ಪಡೆದ ಜಾಹೀರಾತು ಪ್ರಚಾರ;3 Nov, 2016 Archived 2016-11-03 ವೇಬ್ಯಾಕ್ ಮೆಷಿನ್ ನಲ್ಲಿ.
- ಸುಧೀಂದ್ರ ಬುಧ್ಯ;ಟ್ರೂಮನ್ ಗೆದ್ದಾಗ, ‘ಷಿಕಾಗೊ ಟ್ರಿಬ್ಯೂನ್’ ಸೋತಿತ್ತು;4 Nov, 2016 Archived 2016-11-04 ವೇಬ್ಯಾಕ್ ಮೆಷಿನ್ ನಲ್ಲಿ.
- ಒಂಟಿ ಸಲಗ, ಮದ ಏರದಿದ್ದರೆ ವಿಶ್ವಕ್ಕೆ ಕೆಡುಕಿಲ್ಲ;ಸುಧೀಂದ್ರ ಬುಧ್ಯ;10 Nov, 2016
ಉಲ್ಲೇಖ
[ಬದಲಾಯಿಸಿ]- ↑ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ
- ↑ ೨.೦ ೨.೧ US Election Results Complete Coverage
- ↑ How Donald Trump rewrote political playbook to beat Hillary Clinton
- ↑ "ಡೊನಾಲ್ಡ್ ಟ್ರಂಪ್ ಆಯ್ಕೆ ಅಧಿಕೃತ;21 Dec, 2016". Archived from the original on 2016-12-21. Retrieved 2016-12-21.
- ↑ "ಅಮೆರಿಕ ಚುನಾವಣೆ: ಅಭ್ಯರ್ಥಿಗಳು ಖರ್ಚು". Archived from the original on 2016-12-29. Retrieved 2016-12-29.
- ↑ ವಾರ್ಷಿಕ ವೇತನ 1 ಡಾಲರ್15 Nov, 2016
- ↑ http://www.prajavani.net/news/article/2017/01/20/467073.html[ಶಾಶ್ವತವಾಗಿ ಮಡಿದ ಕೊಂಡಿ]
- ↑ ಅಮೆರಿಕ ಮೊದಲು: ಟ್ರಂಪ್ ನೀತಿ;ಪಿಟಿಐ;21 Jan, 2017
- ↑ ಹಿಂಸಾರೂಪ ಪಡೆದ ಟ್ರಂಪ್ ವಿರುದ್ಧದ ಪ್ರತಿಭಟನೆ: 217 ಮಂದಿ ಬಂಧನ;ಪಿಟಿಐ;21 Jan, 2017
- ↑ 'The Legislative Branch'[[೧]]
- ↑ [[೨]]
- ↑ AP count: Clinton has delegates to win Democratic nomination". Associated Press. June 6, 2016. Retrieved June 7, 2016
- ↑ Section 7 of Article 1 of the Constitution of USA
- ↑ Section 2 of Article 1 of the Constitution of USA
- ↑ Article 1, Section 2, and in the 12th Amendment of the Constitution of USA
- ↑ Iowa Democratic caucuses, 2016
- ↑ https://www.law.cornell.edu/uscode/text/3/1
- ↑ http://www.nbcnews.com/politics/2016-election/viewers-guide-next-year-presidential-politics-n455971
- ↑ "ಅಮೆರಿಕ ಅಧ್ಯಕ್ಷ ಗಾದಿಯ ಹಾದಿ". Archived from the original on 2016-11-03. Retrieved 2016-11-03.
- ↑ 9-6-2015-ಪ್ರಜಾವಾಣಿw:prajavani.net/article/ಅಮೆರಿಕ-ಇತಿಹಾಸ-ಸೃಷ್ಟಿಸಿದ-ಹಿಲರಿ
- ↑ ಹಿಲರಿ ಮೊದಲ ಮಹಿಳಾ ಅಭ್ಯರ್ಥಿ:28th Jul, 2016:[[೩]]
- ↑ "ಇದು ಆರು ರಾಜ್ಯಗಳು ಬರೆಯುವ ಹಣೆಬರಹ;ಸುಧೀಂದ್ರ ಬುಧ್ಯ;". Archived from the original on 2016-10-18. Retrieved 2016-10-14.
- ↑ "ಸಮಗ್ರ ಸುಧಾರಣಾ ನೀತಿಗೆ ಒತ್ತು: ಹಿಲರಿ30th Jul, 2016". Archived from the original on 2016-11-12. Retrieved 2016-07-28.
- ↑ "ಆರ್ಕೈವ್ ನಕಲು". Archived from the original on 2016-09-04. Retrieved 2016-09-09.
- ↑ ಒಬಾಮಾಗಿಂತ ಪುಟಿನ್ ಹೆಚ್ಚು ಸಮರ್ಥ: ಟ್ರಂಪ್ ಟೀಕೆ
- ↑ In a first, Clinton tops 50% support from US voters in poll; Trump 41% AFP, Washington:Aug 26, 2016
- ↑ http://www.prajavani.net/news/article/2016/09/29/441380.html
- ↑ "ಯುಎಸ್‌ಎ ಟುಡೆ". Archived from the original on 2016-10-01. Retrieved 2016-10-01.
- ↑ "ಮಹಿಳೆಯರ ಬಗೆಗೆ ಲಘು ಟೀಕೆ". Archived from the original on 2016-10-10. Retrieved 2016-10-11.
- ↑ "ರಿಪಬ್ಲಿಕನ್ ಪಕ್ಷದತ್ತ ಭಾರತೀಯರ ಒಲವು". Archived from the original on 2016-10-20. Retrieved 2016-10-19.
- ↑ "ಟ್ರಂಪ್-ಮೇಲುಗೈ". Archived from the original on 2016-10-27. Retrieved 2016-10-27.
- ↑ ಕ್ಲಿಂಟನ್ ಏಳು ಅಂಕಗಳನ್ನು ಕಳೆದುಕೊಂಡಿದ್ದಾರೆ
- ↑ ಮಾಧ್ಯಮ ಪಕ್ಷಪಾತ
- ↑ ಹಿಲರಿಗೆ ಶೇಕಡ ಎರಡರಷ್ಟು ಮುನ್ನಡೆ
- ↑ ಅಧ್ಯಕ್ಷತೆಗೆ ಇಂದು ಮತದಾನ;8 Nov, 2016
- ↑ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ;ಪ್ರಜಾವಾಣಿ ವಾರ್ತೆ;9 Nov, 2016
- ↑ Trump towers over White House challenge
- ↑ ಒಂಟಿ ಸಲಗ, ಮದ ಏರದಿದ್ದರೆ ವಿಶ್ವಕ್ಕೆ ಕೆಡುಕಿಲ್ಲ
- ↑ ಪ್ರತಿಭಟನೆ;ಅಮೆರಿಕ: ಹೊಸ ಅಧ್ಯಕ್ಷರ ವಿರುದ್ಧ ಬೀದಿಗಿಳಿದ ಜನ;11 Nov, 2016
- ↑ ಹೊಸ ಮೈಲುಗಲ್ಲು ರೂಪಿಸಿದ ಕಮಲಾ ಹ್ಯಾರಿಸ್
- ↑ ಅಮೆರಿಕ ಸೆನೆಟ್‍ಗೆ ಆಯ್ಕೆಯಾದ ಭಾರತೀಯ ಸಂಜಾತರು