ವಿಷಯಕ್ಕೆ ಹೋಗು

ಸ್ಟೆಫಿ ಗ್ರಾಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಟೆಫಿ ಗ್ರಾಫ್
ದೇಶಜರ್ಮನಿ
ವಾಸಸ್ಥಾನಲಾಸ್ ವೇಗಸ್, ನೆವಡ
ಎತ್ತರ1.75 metres (5 ft 9 in)
ಆಟದಲ್ಲಿ ಪರಣಿತಿ ಪಡೆದದ್ದು೧೯೮೨
ನಿವೃತ್ತಿ೧೯೯೯
ಆಟಬಲಗೈ (one-handed backhand)
ವೃತ್ತಿಯ ಬಹುಮಾದನದ ಹಣUS$೨೧,೮೯೧,೩೦೬[]
(೪th in all-time rankings)
ಅಂತರಾಷ್ಟ್ರೀಯ ಟೆನ್ನಿಸ್ ಹಾಲ್ ಆಫ಼್ ಫ಼ೇಮ್೨೦೦೪ (member page)
ಸಿಂಗಲ್ಸ್
ವೃತ್ತಿಯ ದಾಖಲೆ೯೦೦–೧೧೫ (೮೮.೭%)
ವೃತ್ತಿಯ ಶೀರ್ಷಿಕೆಗಳು೧೦೭ (4th all-time)
ಅತ್ಯುನ್ನತ ಶ್ರೇಣಿNo. ೧ (August ೧೭, ೧೯೮೭)
ಗ್ರಾಂಡ್ ಸ್ಲಾಮ್ ಪಲಿತಾಂಶಗಳು
ಆಸ್ಟ್ರೇಲಿಯನ್ ಓಪನ್೪W (1988, 1989, 1990, 1994)
ಫ್ರೆಂಚ್ ಓಪನ್೬W (1987, 1988, 1993, 1995, 1996, 1999)
ವಿಂಬಲ್ಡನ್೭W (1988, 1989, 1991, 1992, 1993, 1995, 1996)
ಯು.ಇಸ್. ಓಪನ್ (ಟೆನಿಸ್)೫W (1988, 1989, 1993, 1995, 1996)
ಇತರ ಪಂದ್ಯಾವಳಿಗಳು
ಚಾಂಪಿಯನ್‌ಷಿಪ್‌ಗಳು೫W (1987, 1989, 1993, 1995, 1996)
ಒಲಂಪಿಕ್ ಆಟಗಳು Gold medal (1988)
ಡಬಲ್ಸ್
ವೃತ್ತಿಯ ದಾಖಲೆ೧೭೩–೭೨
ವೃತ್ತಿಯ ಶೀರ್ಷಿಕೆಗಳು೧೧
ಅತ್ಯುನ್ನತ ಶ್ರೇಣಿNo. ೩ (March ೩, ೧೯೮೭)
ಗ್ರಾಂಡ್ ಸ್ಲಾಮ್ ಪಲಿತಾಂಶಗಳು
ಆಸ್ಟ್ರೇಲಿಯನ್ ಓಪನ್SF (೧೯೮೮, ೧೯೮೯)
ಕಿರಿಯರ ಫ್ರೆಂಚ್ ಓಪನ್F (೧೯೮೬, ೧೯೮೭, ೧೯೮೯)
ವಿಂಬಲ್ಡನ್W (೧೯೮೮)
ಯು.ಇಸ್. ಓಪನ್ (ಟೆನಿಸ್)SF (೧೯೮೬, ೧೯೮೭, ೧೯೮೮, ೧೯೮೯)
Last updated on: N/A.
ಸ್ಟೆಫಿ ಗ್ರಾಫ್
ಪದಕ ದಾಖಲೆ
ಮಹಿಳೆಯರ ಟೆನ್ನಿಸ್
Representing  ಪಶ್ಚಿಮ ಜರ್ಮನಿ
Gold medal – first place 1988 Seoul Singles
Bronze medal – third place 1988 Seoul Doubles
Representing  Germany
Silver medal – second place 1992 Barcelona Singles

ಸ್ಟೆಫಾನಿ ಮಾರಿಯಾ ಗ್ರಾಫ್ (ಪಶ್ಚಿಮ ಜರ್ಮನಿಯ ಬೇಡನ್-ವುರೆಟೆಂಬರ್ಗ್, ಮ್ಯಾನ್‌ಹೇನ್‌ನಲ್ಲಿ ಜೂನ್ ೧೪, ೧೯೬೯ ರಂದು ಜನಿಸಿದರು) ಇವರು ಜರ್ಮನ್ ಮಹಿಳಾ ಟೆನಿಸ್ ಆಟಗಾರ್ತಿಯರಲ್ಲಿ ಮುಂಚಿನ ಜಗತ್ತಿನ ನಂ. ೧ ಶ್ರೇಯಾಂಕದ ಆಟಗಾರ್ತಿಯಾಗಿದ್ದರು.

ಒಟ್ಟಾರೆಯಾಗಿ ಗ್ರಾಫ್ ೨೨ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಅನ್ನು ಗೆದ್ದಿದ್ದಾರೆ, ಮಾರ್ಗರೇಟ್ ಕೋರ್ಟ್ಸ್ ೨೪ಕ್ಕೆ ಪುರುಷರು ಮತ್ತು ಮಹಿಳೆಯರಲ್ಲಿ ಎರಡನೆಯವರಾಗಿದ್ದಾರೆ. ೧೯೮೮ ರಲ್ಲಿ, ಅವರು ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಟೈಟಲ್ ಅನ್ನು ಗೆಲ್ಲುವ ಮೂಲಕ ಕ್ಯಾಲೆಂಡರ್ ಇಯರ್ ಗೋಲ್ಡನ್ ಸ್ಲ್ಯಾಮ್ ಅನ್ನು ಸಾಧಿಸಿದ ಮೊದಲ ಮತ್ತು ಏಕೈಕ ಟೆನಿಸ್ ಆಟಗರ್ತಿಯಾದರು ಮತ್ತು ಅದೇ ವರ್ಷದಲ್ಲಿ ಅವರು ಒಲಿಂಪಿಕ್ ಚಿನ್ನದ ಪದಕವನ್ನೂ ಕೂಡ ತಮ್ಮದಾಗಿಸಿಕೊಂಡರು. ಅವರು, ಪುರುಷರ ವಿಭಾಗದಲ್ಲಿ ಮತ್ತು ಮಹಿಳೆಯರ ವಿಭಾಗದಲ್ಲಿ, ಆ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದ ಕೊನೆಯ ಆಟಗಾರ್ತಿಯಾಗಿದ್ದರು.

ಗ್ರಾಫ್ ಮಹಿಳೆಯರ ಟೆನಿಸ್ ಮಂಡಳಿಯಿಂದ (ವುಮೆನ್ಸ್ ಟೆನಿಸ್ ಅಸೋಸಿಯೇಷನ್, ಡಬ್ಲುಟಿಎ) ೩೭೭ ಒಟ್ಟೂ ವಾರಗಳ ಒಂದು ದಾಖಲೆಗಾಗಿ ಜಗತ್ತಿನ ಅಗ್ರ ಶ್ರೇಯಾಂಕವನ್ನು ನೀಡಲ್ಪಟ್ಟಿದ್ದರು - ಈ ವಾರಗಳು ಯಾವುದೇ ಆಟಗಾರನಿಗಾದರೂ ಕೂಡ, ಪುರುಷರಿಗೆ ಅಥವಾ ಮಹಿಳೆಯರಿಗೆ, ಅತ್ಯಂತ ದೀರ್ಘ ಅವಧಿಯಾಗಿತ್ತು, ಅವರು ಡಬ್ಲುಟಿಎ ಮತ್ತು ಟೆನಿಸ್ ವೃತ್ತಿನಿರತರ ಮಂಡಳಿ (ಅಸೋಸಿಯೇಷನ್ ಆಫ್ ಟೆನಿಸ್ ಪ್ರೊಫೆಷನಲ್ಸ್) ಯು ಶ್ರೇಯಾಂಕಗಳನ್ನು ನೀಡುವುದಕ್ಕೆ ಪ್ರಾರಂಭಿಸಿದಾಗಿನಿಂದ ಅಗ್ರ ಶ್ರೇಯಾಂಕದಲ್ಲಿದ್ದರು. ಅವರು ವರ್ಷದ-ಅತ್ಯಂತ ಜಗತ್ತಿನ ನಂ. ೧ ಆಗಿ ಸಮಾಪ್ತಿಗೊಳ್ಳುವ ಓಪನ್ ಇರಾ ದಾಖಲೆಯನ್ನು ಹೆಚ್ಚಿನ ಬಾರಿ ಪಡೆದುಕೊಂಡರು, ಅವರು ಎರ ಡು ಸಂದರ್ಭಗಳಲ್ಲಿ ಆ ರೀತಿಯ ದಾಖಲೆಯನ್ನು ಪಡೆದಿದ್ದರು.[] ಅವರು ೧೦೭ ಸಿಂಗಲ್ಸ್ ಟೈಟಲ್‌ಗಳನ್ನು ಗೆದ್ದಿದ್ದರು, ಅದು ಮಾರ್ಟಿನಾ ನವ್ರಾಟಿಲೊವಾ (೧೬೭ ಟೈಟಲ್ಸ್) ಮತ್ತು ಕ್ರಿಸ್ ಎವರ್ಟ್ (೧೫೪ ಟೈಟಲ್ಸ್)ರ ನಂತರದ ಡಬ್ಲುಟಿಎ ಯ ಎಲ್ಲಾ-ಅವಧಿಯ ಮೂರನೆಯ ಶ್ರೇಯಾಂಕವಾಗಿತ್ತು.

ಗ್ರಾಫ್‌ರ ಆಟದ ಒಂದು ಪ್ರಮುಖ ಲಕ್ಷಣವೆಂದರೆ ಎಲ್ಲಾ ಆಟಗಳಲ್ಲಿ ಅವರ ಬಹುಮುಖ ಪ್ರತಿಭೆಯಾಗಿತ್ತು, ಪ್ರತಿ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಕನಿಷ್ಠ ಪಕ್ಷ ನಾಲ್ಕು ಬಾರಿ ಗೆದ್ದ ಏಕೈಕ ಆಟಗಾರ್ತಿ ಅವರಾಗಿದ್ದರು. ಅವರು ಆರು ಫ್ರೆಂಚ್ ಓಪನ್ ಸಿಂಗಲ್ಸ್ ಟೈಟಲ್‌ಗಳನ್ನು (ಎವರ್ಟ್‌ನ ನಂತರ ಎರಡನೆಯವರು) ಮತ್ತು ಏಳು ವಿಂಬಲ್ಡನ್ ಸಿಂಗಲ್ಸ್ (ನವ್ರಾಟಿಲೋವಾ ಮತ್ತು ಹೆಲೆನ್ ವಿಲ್ಸ್ ಮೂಡಿ ನಂತರ ಮೂರನೆಯವರು) ಅನ್ನು ಗೆದ್ದಿದ್ದರು. ಅವರು ಎಲ್ಲಾ ಮೂರು ವಿಧದ ಟೆನಿಸ್ ಕೋರ್ಟ್‌ಗಳಲ್ಲಿ (ಹುಲ್ಲಿನ ಕೋರ್ಟ್, ಜೇಡಿಮಣ್ಣೀನ ಕೋರ್ಟ್, ಮತ್ತು ಗಟ್ಟಿಯಾದ ಕೋರ್ಟ್) ಆಡುವಾಗ ಕ್ಯಾಲೆಂಡರ್ ಇಯರ್ ಗ್ರ್ಯಾಂಡ್ ಸ್ಲ್ಯಾಮ್‌ ಅನ್ನು ಸಾಧಿಸಿದ ಏಕೈಕ ಸಿಂಗಲ್ಸ್ ಆಟಗಾರ್ತಿಯಾಗಿದ್ದರು, ಏಕೆಂದರೆ ಅವರಿಗಿಂತಲೂ ಮುಂಚೆ ಇತರ ಆಟಗಾರರಿಂದ ಗೆಲ್ಲಲ್ಪಟ್ಟ ಕ್ಯಾಲೆಂಡರ್ ಇಯರ್ ಗ್ರ್ಯಾಂಡ್ ಸ್ಲ್ಯಾಮ್‌‌ಗಳು ಆಸ್ಟ್ರೇಲಿಯನ್ ಮತ್ತು ಯುಎಸ್ ಓಪನ್‍ಗಳು ಹುಲ್ಲಿನ ಮೇಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಲ್ಪಟ್ಟವು. ೧೯೮೭ ಫ್ರೆಂಚ್ ಓಪನ್‌ ದಿಂದ ೧೯೯೦ ಫ್ರೆಂಚ್ ಓಪನ್‌ ವರೆಗೆ ಅವುಗಳಲ್ಲಿ ಒಂಬತ್ತು ಪಂದ್ಯಗಳನ್ನು ಗೆಲ್ಲುವ ಮೂಲಕ ಗ್ರಾಫ್ ಹದಿಮೂರು ಅನುಕ್ರಮವಾದ ಗ್ರ್ಯಾಂಡ್ ಸ್ಲ್ಯಾಮ್‌ಸಿಂಗಲ್ಸ್ ಫೈನಲ್‌ಗಳನ್ನು ತಲುಪಿದರು. ಅವರು ತಮ್ಮ ಮೊದಲ ಗ್ರ್ಯಾಂಡ್ ಸ್ಲ್ಯಾಮ್‌ ಗೆಲುವಾದ ೧೯೮೭ ಫ್ರೆಂಚ್ ಓಪನ್‌ ನಂತರದಿಂದ ೩೬ ಗ್ರ್ಯಾಂಡ್ ಸ್ಲ್ಯಾಮ್‌ ಸಿಂಗಲ್ಸ್ ಪಂದ್ಯಾವಳಿಗಳನ್ನು ಆಡಿದ್ದರು, ೧೯೯೯ ಫ್ರೆಂಚ್ ಓಪನ್‌ ಅವರ ಕೊನೆಯ ಗ್ರ್ಯಾಂಡ್ ಸ್ಲ್ಯಾಮ್‌ ಗೆಲುವಿನವರೆಗೆ ಫೈನಲ್ ಅನ್ನು ೨೯ ಬಾರಿ ತಲುಪಿದ್ದರು ಮತ್ತು ೨೨ ಟೈಟಲ್‌ಗಳನ್ನು ಗೆದ್ದಿದ್ದರು. ಅವರು ಒಟ್ಟಾರೆಯಾಗಿ ೩೧ ಗ್ರ್ಯಾಂಡ್ ಸ್ಲ್ಯಾಮ್‌ ಸಿಂಗಲ್ಸ್ ಅಂತಿಮ ಪಂದ್ಯವನ್ನು ಆಡಿದ್ದರು, ಈ ನಿಟ್ಟಿನಲ್ಲಿ ಅವರು ಎವರ್ಟ್‌ರ (೩೪ ಫೈನಲ್‌ಗಳು) ಮತ್ತು ನವ್ರಾಟಿಲೋವಾ (೩೨ ಫೈನಲ್‌ಗಳು) ನಂತರ ಮೂರನೆಯ ಸ್ಥಾನದಲ್ಲಿದ್ದರು.[ಸೂಕ್ತ ಉಲ್ಲೇಖನ ಬೇಕು]

ಗ್ರಾಫ್ ಹಲವಾರು ಜನರಿಂದ ಅತ್ಯುತ್ತಮ ಮಹಿಳಾ ಆಟಗಾರ್ತಿ ಎಂಬುದಾಗಿ ಪರಿಗಣಿಸಲ್ಪಟ್ಟಿದ್ದಾರೆ. ಬಿಲ್ಲೀ ಜೀನ್ ಕಿಂಗ್ ೧೯೯೯ ರಲ್ಲಿ ಹೇಳಿದರು, "ಸ್ಟೆಫಿ ಎಲ್ಲಾ ಅವಧಿಯ ಮಹಿಳೆಯರ ಟೆನಿಸ್ ಆಟಗಾರ್ತಿಯರಲ್ಲಿ ಖಂಡಿತವಾಗಿಯೂ ಅತ್ಯುತ್ತಮ ಆಟಗಾರ್ತಿಯಾಗಿದ್ದಾರೆ."[] ಮಾರ್ಟಿನಾ ನವ್ರಾಟಿಲೋವಾ ತಮ್ಮ ಅತ್ಯುತ್ತಮ ಆಟಗಾರರ ಯಾದಿಯಲ್ಲಿ ಗ್ರಾಫ್‌ರನ್ನು ಸೇರಿಸಿಕೊಂಡಿದ್ದರು.[] ಡಿಸೆಂಬರ್ ೧೯೯೯ ರಲ್ಲಿ, ಅಸೋಸಿಯೇಟೆಡ್ ಪ್ರೆಸ್‌ನಿಂದ ಸಂಘಟಿಸಲ್ಪಟ್ಟ ಪರಿಣಿತರ ಒಂದು ಗುಂಪಿನಿಂದ ಗ್ರಾಫ್ ೨೦ನೆಯ ಶತಮಾನದ ಅತ್ಯುತ್ತಮ ಮಹಿಳಾ ಟೆನಿಸ್ ಆಟಗಾರ್ತಿ ಎಂಬುದಾಗಿ ಮನ್ನಣೆಯನ್ನು ಪಡೆದರು.[] ಟೆನಿಸ್ ಬರಹಗಾರ ಸ್ಟೀವ್ ಪ್ಲಿಂಕ್, ತಮ್ಮ ಪುಸ್ತಕ ದ ಗ್ರೇಟ್ ಟೆನಿಸ್ ಮ್ಯಾಚಸ್ ಆಫ್ ದ ಟ್ವೆಂಟಿಯತ್ ಸೆಂಚುರಿ ಯಲ್ಲಿ, ಗ್ರಾಫ್‌ರನ್ನು ೨೦ನೆಯ ಶತಮಾನದ ಅತ್ಯುತ್ತಮ ಮಹಿಳಾ ಟೆನಿಸ್ ಆಟಗಾರ್ತಿ ಎಂಬುದಾಗಿ ಹೆಸರಿಸಿದ್ದಾರೆ.[]

ಗ್ರಾಫ್ ಜಗತ್ತಿನ ನಂ. ೩ ಸ್ಥಾನವನ್ನು ಪಡೆಯಲ್ಪಟ್ಟ ಸಂದರ್ಭದಲ್ಲಿ ಅಂದರೆ ೧೯೯೯ ರಲ್ಲಿ ನಿವೃತ್ತರಾದರು. ಅವರು ಮುಂಚಿನ ಪುರುಷರ ಟೆನಿಸ್‌ನಲ್ಲಿ ಜಗತ್ತಿನ ನಂ. ೧ ಆಟಗಾರರಾದ ಆಂಡ್ರಿ ಅಗಾಸಿ ಅವರನ್ನು ಅಕ್ಟೋಬರ್ ೨೦೦೧ ರಲ್ಲಿ ವಿವಾಹವಾದರು ಮತ್ತು ಅವರು ಜಾಡೆನ್ ಗಿಲ್ ಮತ್ತು ಜಾಜ್ ಎಲ್ಲೆ ಎಂಬ ಎರಡು ಮಕ್ಕರನ್ನು ಹೊಂದಿದ್ದಾರೆ.

ಜೀವನ ವೃತ್ತಾಂತ

[ಬದಲಾಯಿಸಿ]

ಆರಂಭಿಕ ವೃತ್ತಿಜೀವನ

[ಬದಲಾಯಿಸಿ]

ಸ್ಟೆಫಿ ಗ್ರಾಫ್ ಅವರ ತಂದೆ ಪೀಟರ್ ಗ್ರಾಫ್‌ರಿಮ್ದ ಟೆನಿಸ್ ಜಗತ್ತಿಗೆ ಪರಿಚಯಿಸಲ್ಪಟ್ಟಿದ್ದರು, ಕಾರು ಮತ್ತು ವಿಮೆಯ ಮಾರಾಟಗಾರರಾಗಿದ್ದ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ಟೆನಿಸ್ ತರಬೇತುದಾರ ಪೀಟರ್ ಗ್ರಾಫ್ ತಮ್ಮ ಮೂರು-ವರ್ಷ-ವಯಸ್ಸಿನ ಮಗಳಿಗೆ ತಮ್ಮ ಕೋಣೆಯಲ್ಲಿ ಹೇಗೆ ಒಂದು ಮರದ ಟೆನಿಸ್ ಬ್ಯಾಟ್ ಅನ್ನು ಹೇಗೆ ಬಳಸಬೇಕು ಎಂಬುದನ್ನು ಕಲಿಸಿಕೊಟ್ಟರು. ಸ್ಟೆಫಿ ಗ್ರಾಫ್ ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ಕೋರ್ಟ್‌ನಲ್ಲಿ ಆಡುವುದಕ್ಕೆ ಪ್ರಾರಂಭಿಸಿದರು ಮತ್ತು ತಮ್ಮ ಐದನೆಯ ವಯಸ್ಸಿನಲ್ಲಿ ಮೊದಲ ಪಂದ್ಯಾವಳಿಯಲ್ಲಿ ಆಡಿದರು. ಅವರು ನಿಯಮಿತತೆಯ ಜೊತೆಗೆ ಜ್ಯೂನಿಯರ್ ಪಂದ್ಯಾವಳಿಗಳನ್ನು ಗೆಲ್ಲುವುದಕ್ಕೆ ಪ್ರಾರಂಭಿಸಿದರು ಮತ್ತು ೧೯೮೨ ರಲ್ಲಿ ೧೨ರ ಮತ್ತು ೧೮ರ ಯುರೋಪಿಯನ್ ಚಾಂಪಿಯನ್‌ಷಿಪ್‌‌ಗಳನ್ನು ಗೆದ್ದರು.

ಗ್ರಾಫ್ ತಮ್ಮ ಮೊದಲನೆಯ ವೃತ್ತಿಜೀವನ ಪಂದ್ಯಾವಳಿಯನ್ನು ಅಕ್ಟೋಬರ್ ೧೯೮೨ ರಲ್ಲಿ ಜರ್ಮನಿಯ ಸ್ಟುಟ್‌ಗರ್ಟ್‌ನಲ್ಲಿ ಆಡಿದರು. ಅವರು ತಮ್ಮ ಮೊದಲನೆಯ ಸುತ್ತಿನ ಪಂದ್ಯವನ್ನು ಎರಡು-ಬಾರಿಯ ಯುಎಸ್ ಓಪನ್ ಚಾಂಪಿಯನ್ ಮತ್ತು ಜಗತ್ತಿನ ನಂ.೧ ಆಟಗಾರ್ತಿಯಾದ ಟ್ರೇಸಿ ಆಸ್ಟಿನ್‌ರ ವಿರುದ್ಧ ೬–೪, ೬–೦ ರಲ್ಲಿ ಸೋಲನ್ನು ಅನುಭವಿಸಿದರು. (ಹನ್ನೆರಡು ವರ್ಷಗಳ ನಂತರ, ಕ್ಯಾಲಿಫೋರ್ನಿಯಾದ ಇಂಡಿಯನ್ ವೆಲ್ಸ್‌ನಲ್ಲಿ ನಡೆದ ಗ್ರಾಫ್ ಎವರ್ಟ್ ಕಪ್ ಪಂದ್ಯದಲ್ಲಿ ಎರಡನೆಯ ಸುತ್ತಿನ ಪಂದ್ಯದ ಸಮಯದಲ್ಲಿ ಆಸ್ಟಿನ್‌ರನ್ನು ೬–೦, ೬–೦ ದಿಂದ ಪರಾಜಯಗೊಳಿಸಿದರು.)

೧೯೮೩ರಲ್ಲಿ ಮೊದಲ ಸಂಪೂರ್ಣ ವೃತ್ತಿಜೀವನದ ಪ್ರಾರಂಭದಲ್ಲಿ, ೧೩-ವರ್ಷ-ವಯಸ್ಸಿನ ಗ್ರಾಫ್ ಜಗತ್ತಿನ ನಂ. ೧೨೪ ಸ್ಥಾನವನ್ನು ಪಡೆದುಕೊಂಡಿದ್ದರು. ಅವರು ನಂತರದ ಮೂರು ವರ್ಷಗಳ ಅವಧಿಯಲ್ಲಿ ಯಾವುದೇ ಗೆಲುವನ್ನು ಸಾಧಿಸಲಿಲ್ಲ, ಆದರೆ ಅವರ್ ಶ್ರೇಯಾಂಕವು ಸ್ಥಿರವಾಗಿ ಏರಿಕೆಯನ್ನು ಕಂಡಿತು, ಅಂದರೆ ೧೯೮೩ ರಲ್ಲಿ ಜಗತ್ತಿನ ನಂ. ೯೮, ೧೯೮೪ ರಲ್ಲಿ ನಂ. ೨೨ ಮತ್ತು ೧೯೮೫ ರಲ್ಲಿ ನಂ. ೬ನೆಯ ಸ್ಥಾನವನ್ನು ಪಡೆದರು. ೧೯೮೪ ರಲ್ಲಿ, ಅವರು ವಿಂಬಲ್ಡನ್‌ನಲ್ಲಿ ಸೆಂಟರ್ ಕೋರ್ಟ್ ಪಂದ್ಯದ ನಾಲ್ಕೆಯ ಸುತ್ತಿನಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಜೋ ಡೂರಿ ಅವರನ್ನು ಹಿಮ್ಮೆಟ್ಟಿಸಿದ ಸಂದರ್ಭದಲ್ಲಿ ಮೊದಲಬಾರಿಗೆ ಅಂತರಾಷ್ಟ್ರೀಯ ಗಮನವನ್ನು ಪಡೆದುಕೊಂಡರು. ಆಗಸ್ಟ್‌ನಲ್ಲಿ ಪಶ್ಚಿಮ ಜರ್ಮನಿಯನ್ನು ಪ್ರತಿನಿಧಿಸುವ ಒಂದು ೧೫-ವರ್ಷ-ವಯಸ್ಸಿನ (ಮತ್ತು ಅತ್ಯಂತ ಕಿರಿಯ ಹೊಸ ಆಟಗಾರ್ತಿ) ಆಟಗರ್ತಿಯಾಗಿ ಅವರು ಲಾಸ್ ಎಂಜಲೀಸ್‌ನಲ್ಲಿ ೧೯೮೪ ಒಲಿಂಪಿಕ್ ಗೇಮ್ಸ್‌ನಲ್ಲಿ ಟೆನಿಸ್ ಡೆಮನಸ್ಟ್ರೇಷನ್ ಈವೆಂಟ್ ಅನ್ನು ಗೆದ್ದರು.[]

ಗ್ರಾಫ್‌ರ ದಿನಚರಿಯು ಅವರ ತಂದೆಯಿಂದ ನಿಕಟವಾಗಿ ನಿಯಂತ್ರಿಸಲ್ಪಡುತ್ತಿತ್ತು, ಅವರು ಗ್ರಾಫ್ ತಮ್ಮೆಲ್ಲ ಉತ್ಸಾಹವನ್ನು ಕಳೆದುಕೊಳ್ಳಬರದೆಂಬ ಕಾರಣದಿಂದ ಗ್ರಾಫ್‌ರ ಆಟವನ್ನು ನಿರ್ಬಂಧಿತಗೊಳಿಸುತ್ತಿದ್ದರು. ಉದಾಹರಣೆಗೆ, ೧೯೮೫ ರಲ್ಲಿ, ಅವರು ಯುಎಸ್ ಓಪನ್‌ಗೆ ತಲುಪುವುದಕ್ಕೆ ಕೇವಲ ೧೦ ಆಟಗಳನ್ನು ಮಾತ್ರವೇ ಆಡಿದರು, ಹಾಗೆಯೇ ಗ್ರಾಫ್‌ರಿಗಿಂತ ಒಂದು ವರ್ಷ ಚಿಕ್ಕವರಾದ ಮತ್ತೋರ್ವ ಪ್ರಚಲಿತಕ್ಕೆ ಬರುತ್ತಿರುವ ಅರ್ಜೈಂಟೈನಾದ ಆಟಗಾರ್ತಿ ಗ್ಯಾಬ್ರಿಯಿಲಾ ಸಬಾಟಿನಿ ೨೧ ಪಂದ್ಯಗಳನ್ನು ಆಡಿದರು. ಪೀಟರ್ ಗ್ರಾಫ್‌ರ ವೈಯುಕ್ತಿಕ ಜೀವನದಲ್ಲಿಯೂ ಕೂಡ ಒಂದು ಬಿಗಿಯಾದ ನಿಯಂತ್ರಣವನ್ನು ಹೊಂದಿದ್ದರು. ಗ್ರಾಫ್‌ರ ಗುರಿಯು ಅಭ್ಯಾಸ ಮಾಡುವಿಕೆ ಮತ್ತು ಪಂದ್ಯವನ್ನು ಆಡುವುದರ ಮೇಲೆ ಕೇಂದ್ರೀಕೃತವಾಗಿದ್ದ ಕಾರಣದಿಂದ ಪ್ರವಾಸದ ಮೇಲಿನ ಸಾಮಾಜಿಕ ಆಹ್ವಾನಗಳು ಅವರಿಂದ ಅನೇಕ ವೇಳೆ ತಿರಸ್ಕರಿಸಲ್ಪಟ್ಟವು. ಅವರ ತಂದೆಯ ಜೊತೆಗೆ ಮತ್ತು ಆ ಸಮಯದ-ಟೆನಿಸ್ ತರಬೇತುದಾರ ಪಾವೆಲ್ ಸ್ಲಾಜಿಲ್ ಜೊತೆಗೆ ಕಾರ್ಯನಿರ್ವಹಿಸುತ್ತ ಗ್ರಾಫ್ ಒಂದು ದಿನದಲ್ಲಿ ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಅಭ್ಯಾಸವನ್ನು ಮಾಡಿದರು, ಅನೇಕ ವೇಳೆ ವಿಮಾನ ನಿಲ್ದಾಣದಿಂದ ನೇರವಾಗಿ ಟೆನಿಸ್ ಕೋರ್ಟ್‌ಗೆ ಹೋದ ದಾಖಲೆಯೂ ಇದೆ. ಈ ಪರಿಮಿತ ಕೇಂದ್ರೀಕರಣವು ಗ್ರಾಫ್‌ರು ನಾಚಿಕೆಯ ಮತ್ತು ಸ್ವಲ್ಪ ಹಿಂಜರಿಕೆಯ ಸ್ವಭಾವದವರಾಗಿದ್ದರು[ಸೂಕ್ತ ಉಲ್ಲೇಖನ ಬೇಕು], ಅವರು ತಮ್ಮ ಪ್ರವಾಸದ ಮುಂಚಿನ ವರ್ಷಗಳಲ್ಲಿ ಕೆಲವೇ ಸ್ನೇ ಹಿತರನ್ನು ಮಾಡಿಕೊಂಡರು, ಆದರೆ ಇದು ಅವರ ಆಟದಲ್ಲಿ ಒಂದು ಸ್ಥಿರವಾದ ಸುಧಾರಣೆಗೆ ಕಾರಣವಾಯಿತು.

೧೯೮೫ರಲ್ಲಿ ಮತ್ತು ೧೯೮೬ ರ ಪ್ರಾರಂಭದಲ್ಲಿ, ಗ್ರಾಫ್ ಮಾರ್ಟಿನಾ ನವ್ರಾಟಿಲೋವಾ ಮತ್ತು ಕ್ರಿಸ್ ಇವರ್ಟ್‌ರ ಪ್ರಾಬಲ್ಯಗಳಿಗೆ ಅತ್ಯುತ್ತಮ ಸ್ಪರ್ಧಿಯಾಗಿ ಹೊರಹೊಮ್ಮಿದರು. ಆ ಅವಧಿಯಲ್ಲಿ, ಅವರು ಎಲ್ಲಾ ಸ್ಟ್ರೇಟ್ ಪಂದ್ಯಗಳಲ್ಲಿ ಎವರ್ಟ್‌ರಿಗೆ ಆರು ಬಾರಿ ಮತ್ತು ನವ್ರಾಟಿಲೋವಾರಿಗೆ ಮೂರು ಬಾರಿ ಸೋತರು. ಅವರು ಒಂದು ಪಂದ್ಯಾವಳಿಯನ್ನೂ ಗೆಲ್ಲಲಿಲ್ಲ, ಆದರೆ ಪಂದ್ಯಾವಳಿಯ ಫೈನಲ್‌ಗಳನ್ನು ಮತ್ತು ಸೆಮಿಫೈನಲ್‌ಗಳನ್ನು ತಲುಪುವಲ್ಲಿ ಸ್ಥಿರವಾಗಿ ಯಶಸ್ವಿಯಾದರು, ಜೊತೆಗೆ ಯುಎಸ್ ಓಪನ್‌ನಲ್ಲಿ ನವ್ರಾಟಿಲೋವಾಗೆ ಸೆಮಿಫೈನಲ್‌ನಲ್ಲಿ ಸೋತಿದ್ದು ಒಂದು ಮಹತ್ವದ ಸಂಗತಿಯಾಗಿತ್ತು.

ಎಪ್ರಿಲ್ ೧೩, ೧೯೮೬ ರಂದು, ಗ್ರಾಫ್ ತಮಮ್ ಮೊದಲ ಡಬ್ಲುಟಿಎ ಪಂದ್ಯಾವಳಿಯಲ್ಲಿ ಜಯಸಾಧಿಸಿದರು ಮತ್ತು ದಕ್ಷಿಣ ಕ್ಯಾರೋಲಿನಾದ ಹಿಲ್ಟನ್ ಹೆಡ್‌ನಲ್ಲಿ ನಡೆದ ಫ್ಯಾಮಿಲಿ ಸರ್ಕಲ್ ಕಪ್‌ನ ಫೈನಲ್ ಪಂದ್ಯದಲ್ಲಿ ಮೊದಲ ಬಾರಿಗೆ ಎವರ್ಟ್‌ರನ್ನು ಸೋಲಿಸಿದರು. (ಅದರ ನಂತರದಲ್ಲಿ ಗ್ರಾಫ್ ಯಾವತ್ತಿಗೂ ಕೂಡ ಎವರ್ಟ್‌ರಿಂದ ಪರಾಜಯವನ್ನು ಹೊಂದಲಿಲ್ಲ, ನಂತರದ ಮೂರೂವರೆ ವರ್ಷದಲ್ಲಿ ಅವರು ಎವರ್ಟ್‌ರನ್ನು ಏಳು ಬಾರಿ ಪರಾಭವಗೊಳಿಸಿದರು.) ನಂತರದಲ್ಲಿ ಗ್ರಾಫ್ ಅಮೇಲಿಯಾ ದ್ವೀಪ, ಚಾರ್ಲ್ಸ್‌ಟನ್ ಮತ್ತು ಬರ್ಲಿನ್‌ನಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಜಯಗಳಿಸಿದರು, ಬರ್ಲಿನ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ನವ್ರಾಟಿಲೋವಾ ವಿರುದ್ಧ ೬–೨, ೬–೩ ನಲ್ಲಿ ಜಯಗಳಿಸಿದರು. ಫ್ರೆಂಚ್ ಓಪನ್‌‌ನಲ್ಲಿ ಗ್ರಾಫ್ ಮೂರನೆಯ ಕ್ರಮಾಂಕದ ಆಟಗಾರರಾಗಿದ್ದರು ಆದರೆ ಹಲವರಿಂದ ಪಂದ್ಯಾವಳಿಯ ಜನಪ್ರಿಯ ಆಟಗಾರರಾಗಿ ಪರಿಗಣಿಸಲ್ಪಟ್ಟರು. ಆದಾಗ್ಯೂ, ಅವರು ವೈರಸ್ ಸೋಂಕಿಗೊಳಗಾದರು ಮತ್ತು ಕ್ವಾರ್ಟರ್ ಫೈನಲ್‍ನಲ್ಲಿ ೨–೬, ೭–೬, ೬–೧ ರಿಂದ ಹ್ಯಾನಾ ಮ್ಯಾಂಡ್ಲಿಕೋವಾರಿಗೆ ಶರಣಾದರು. ಈ ಅಸ್ವಸ್ಥತೆಯು ಅವರನ್ನು ವಿಂಬಲ್ಡನ್‌ನಲ್ಲಿ ಆಡುವುದರಿಂದ ವಂಚಿತರನ್ನಾಗಿ ಮಾಡಿತು, ಮತ್ತು ಅದರ ಕೆಲವು ವಾರಗಳ ನಂತರ ಒಂದು ದುರ್ಘಟನೆಯಲ್ಲಿ ಅವರು ತಮ್ಮ ಕಾಲ್ಬೆರಳ ಭಾಗವನ್ನು ಮುರಿದುಕೊಂಡಿದ್ದೂ ಕೂಡ ಅವರನ್ನು ಈ ಪಂದ್ಯಾವಳಿಯಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಿತು. ಅವರು ಯುಎಸ್ ಓಪನ್‌ಗಿಂತ ಸ್ವಲ್ಪ ಸಮಯದ ಮುಂಚೆ ಮಾಹ್‌ವಾನಲ್ಲಿ ನಡೆದ ಒಂದು ಸಣ್ಣ ಪಂದ್ಯಾವಳಿಯಲ್ಲಿ ಜಯಗಳಿಸುವುದರ ಮೂಲಕ ಮತ್ತೆ ಆಟಕ್ಕೆ ವಾಪಸಾದರು, ಅಲ್ಲಿ ಆ ವರ್ಷದ ಅತ್ಯಂತ ಅಪೇಕ್ಷಿತ ಪಂದ್ಯದಲ್ಲಿ, ಅವರು ಒಂದು ಸೆಮಿಫೈನಲ್‌ನಲ್ಲಿ ನವ್ರಾಟಿಲೋವಾರಿಗೆ ಎದುರಾಗಿ ಅಟವಾಡಿದರು. ಪಂದ್ಯವು ಎರಡು ದಿನಗಳಿಗೂ ಮೀರಿ ನಡೆಯಲ್ಪಟ್ಟಿತು, ಅಂತಿಮವಾಗಿ ನವ್ರಾಟಿಲೋವಾ ಮೂರು ಮ್ಯಾಚ್ ಪಾಯಿಂಟ್‌೬–೧, ೬–೭, ೭–೬ ಗಳನ್ನು ಉಳಿಸಿಕೊಳ್ಳುವುದರ ಮೂಲಕ ಪಂದ್ಯದಲ್ಲಿ ಜಯಗಳಿಸಿದರು. ಗ್ರಾಫ್ ಟೊಕ್ಯೋ, ಜ್ಯೂರಿಕ್, ಮತ್ತು ಬ್ರೈಟನ್‌ಗಳಲ್ಲಿ ಮೂರು ಅನುಕ್ರಮ ಟೈಟಲ್‌ಗಳನ್ನು ಗೆದ್ದರು, ಅದಕ್ಕೂ ಮುಂಚೆ ಅವರು ನ್ಯೂಯಾರ್ಕ್ ನಗರದಲ್ಲಿ ವರ್ಷದ-ಕೊನೆಯ ವರ್ಜೀನಿಯಾ ಸ್ಲಿಮ್ಸ್ ಚಾಂಪಿಯನ್‌ಷಿಪ್ಸ್‌ನಲ್ಲಿ ಮತ್ತೊಮ್ಮೆ ನವ್ರಾಟಿಲೋವಾರನ್ನು ಎದುರಿಸಿದರು. ಈ ಬಾರಿ ನವ್ರಾಟಿಲೋವಾ ಗ್ರಾಫ್‌ರನ್ನು ೭–೬, ೬–೩, ೬–೨ ಅಂತರದಲ್ಲಿ ಸೋಲಿಸಿದರು.

ಅದ್ಭುತ ಪ್ರಗತಿಯ ವರ್ಷ: ೧೯೮೭

[ಬದಲಾಯಿಸಿ]

ಗ್ರಾಫ್‌ರ ಗ್ರ್ಯಾಂಡ್ ಸ್ಲಾಮ್‌ನಲ್ಲಿನ ಅದ್ಭುತ ಯಶಸ್ಸು ೧೯೮೭ರಲ್ಲಿ ಒದಗಿಬಂದಿತು. ಈ ವರ್ಷವನ್ನು ಪ್ರಭಲವಾಗಿಯೇ ಆರಂಭಿಸಿದ ಈಕೆ ಆರು ಕ್ರೀಡಾಪಂದ್ಯಗಳ ವಿಜಯದೊಂದಿಗೆ ಫ್ರೆಂಚ್ ಓಪನ್‌ನ್ನು ಪ್ರವೇಶಿಸಿ ಮಿಯಾಮಿಯಲ್ಲಿ ನಡೆದ ಪಂದ್ಯದಲ್ಲಿ ಮಾರ್ಟಿನಾ ನವ್ರಾಟಿಲೋವಾರನ್ನು ಅಂತಿಮಪೂರ್ವ (ಸೆಮಿಫೈನಲ್)ಪಂದ್ಯದಲ್ಲೂ, ಕ್ರಿಸ್ ಇವರ್ಟ್‌ನ್ನು ಅಂತಿಮ (ಫೈನಲ್) ಪಂದ್ಯದಲ್ಲಿಯೂ ಸೋಲಿಸಿ ಒಟ್ಟು ಏಳು ಸುತ್ತಿನ ಕ್ರೀಡಾಪಂದ್ಯದಲ್ಲಿ ಕೇವಲ ಇಪ್ಪತ್ತು ಆಟಗಳನ್ನು ಬಿಟ್ಟಿಕೊಟ್ಟಿದ್ದರು. ಮೂರು ಸೆಟ್ಟಿನ ಅಂತಿಮಪೂರ್ವ ಪಂದ್ಯದಲ್ಲಿ (ಥ್ರೀ ಸೆಟ್ ಸೆಮಿಫೈನಲ್) ಗಾಬ್ರಿಯೆಲಾ ಸಬಾಟಿನಿರನ್ನು ಸೋಲಿಸಿದ ಬಳಿಕ ಫ್ರೆಂಚ್ ಓಪನ್‍ನ ಅಂತಿಮ ಪಂದ್ಯದಲ್ಲಿ ಗ್ರಾಫ್ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದ ನವ್ರಾಟಿಲೋವಾರನ್ನು ೬–೪, ೪–೬, ೮–೬ ಅಂಕಗರೊಂದಿಗೆ ಹಿಮ್ಮೆಟ್ಟಿಸಿದರು.

ನಂತರದ ವಿಂಬಲ್ಡನ್ ಅಂತಿಮ ಪಂದ್ಯದಲ್ಲಿ ಗ್ರಾಫ್ ೭–೫, ೬–೩ ಅಂತರದಿಂದ ನವ್ರಾಟಿಲೋವಾಳ ಜೊತೆ ಸೋತರು. ಇದು ಈಕೆಯ ಈ ವರ್ಷದ ಪ್ರಪ್ರಥಮ ಸೋಲಾಗಿತ್ತು. ಆದರೂ, ಮೂರು ವಾರಗಳ ನಂತರ ಕೆನಡಾದ ವ್ಯಾಂಕೋವರ್‌ನಲ್ಲಿ ನಡೆದ ಫೆಡರೇಶನ್ ಕಪ್ ಅಂತಿಮ ಪಂದ್ಯದಲ್ಲಿ ಇವರು ಇವರ್ಟ್‌ರನ್ನು ಅತ್ಯಂತ ಸುಲಭವಾಗಿ ೬–೨, ೬–೧ ಅಂತರದಲ್ಲಿ ಸೋಲಿಸಿದರು. ಯುಎಸ್ ಓಪನ್ ಪಂದ್ಯವು ನವ್ರಾಟಿಲೋವಾ ಗ್ರಾಫ್‌ರನ್ನು ೭–೬, ೬–೧ ಅಂತರದಲ್ಲಿ ಸೋಲಿಸುವದರೊಂದಿಗೆ ತನ್ನ ಯಶಸ್ಸಿನ ಪರಕಾಷ್ಟೆಯನ್ನು ತಲುಪದೇ ಕೊನೆಗೊಂಡಿತು.

೧೯೮೭ರಲ್ಲಿ ನಡೆದ ಮೂರು ಗ್ರಾಂಡ್ ಸ್ಲಾಮ್ ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ನವ್ರಾಟಿಲೋವಾರೊಂದಿಗೆ ಗ್ರಾಫ್ ಕಳೆದುಕೊಂಡಿರುವುದರಿಂದ, ಆದರೆ, ಉಳಿದೆಲ್ಲಾ ಪಂದ್ಯಗಳಲ್ಲಿ (ನವ್ರಾಟಿಲೋವಾಳ ೪ ದಾಖಲೆಗಳೆದುರು ಗ್ರಾಫ್ ೧೦ ದಾಖಲೆಗಳನ್ನು ಹೊಂದಿದ್ದರು) ಅಗ್ರಸ್ಥಾನದ ದಾಖಲೆಗಳನ್ನು ಹೊಂದಿರುವುದರಿಂದ ವರ್ಜೀನಿಯಾ ಸ್ಲಾಮ್ ಚಾಂಪಿಯನ್‌ಶಿಪ್ ನವೆಂಬರ್ ತಿಂಗಳಲ್ಲಿ ವರ್ಷದ ನಂಬರ್ ವನ್ ಪಟ್ಟವನ್ನು ನಿರ್ಧರಿಸುವುದೆಂದು ನಿರೀಕ್ಷಿಸಲಾಗಿತ್ತು. ನವ್ರಾಟಿಲೋವಾ ತಾನು ಅಂತಿಮಪೂರ್ವ ಪಂದ್ಯದ ಹಿಂದಿನ ಸುತ್ತುಗಳಲ್ಲಿ (ಕ್ವಾರ್ಟರ‍್ಫೈನಲ್) ಸಬಾಟಿನಿಯೊಂದಿಗೆ ತಾನು ಪಡೆದ ಸೋಲಿನಿಂದ ಗೊಂದಲಕ್ಕೊಳಗಾದಾಗ ಮತ್ತು ಅಂತಿಮ ಪಂದ್ಯದಲ್ಲಿ ಗ್ರಾಫ್ ಸಬಾಟಿನಿಯನ್ನು ಸೋಲಿಸಿದಾಗ, ಈ ವರ್ಷವನ್ನು ೭೪-೨ ದಾಖಲೆಗರೊಂದಿಗೆ ಮುಗಿಸಿದ ಇವಳೇ ಹಲವಾರು ವೀಕ್ಷಕರ ದೃಷ್ಟಿಯಲ್ಲಿ ಅಗ್ರಸ್ಥಾನವನ್ನು ಬಾಚಿಕೊಂಡಿದ್ದರು.

"ಗೋಲ್ಡನ್ ಸ್ಲಾಮ್": ೧೯೮೮

[ಬದಲಾಯಿಸಿ]
ಸಿಯೋಲ್‌ನಲ್ಲಿ ಒಂದು ಸ್ಕೋರ್‌ಬೋರ್ಡ್ ನಶಿಸುತ್ತಿರುವ ಛಾಯಚಿತ್ರ, ಪಂದ್ಯಾವಳಿ ಆದ ಸುಮಾರು 20 ವರ್ಷದ ನಂತರ ತೆಗೆದ ಚಿತ್ರವಿದು, ಇದು ಗ್ರಾಫ್‌ನ ಅಲ್ಲಿನ ಮಹತ್ಸಾಧನೆಯ ರುಜುವಾತನ್ನು ಮಾಡುತ್ತದೆ.

ಕ್ರಿಸ್ ಇವರ್ಟ್‌ರನ್ನು ೬–೧, ೭–೬ ಅಂತರದಿಂದ ಅಂತಿಮ ಪಂದ್ಯದಲ್ಲಿ ಸೋಲಿಸುವುದರ ಮೂಲಕ ಆಸ್ಟ್ರೇಲಿಯನ್ ಓಪನ್ ಸರಣಿಯನ್ನು ಗೆಲ್ಲುವುದರೊಂದಿಗೆ ಗ್ರಾಫ್ ೧೯೮೮ನೇ ವರ್ಷವನ್ನು ಆರಂಭಿಸಿದರು. ಪಂದ್ಯದ ಸಮಯದಲ್ಲಿ ಯಾವುದೇ ಸೆಟ್‌ಗಳನ್ನು (ಸೆಟ್-ತಂಡ ಗೆಲ್ಲಲು ಆಟಗಾರನೊಬ್ಬನು ಆಡಬೇಕಾದ ನಿರ್ದಿಷ್ಟ ಬಿಡಿಯಾಟಗಳ ತಂಡ) ಕಳೆದುಕೊಳ್ಳದೇ ಒಟ್ಟು ಕೇವಲ ೨೯ ಆಟಗಳಲ್ಲಿ ಮಾತ್ರ ಗ್ರಾಫ್ ಸೋಲನ್ನನುಭವಿಸಿದ್ದರು.‍

ಬೇಸಗೆಯಲ್ಲಿ ನಡೆದ ಪಂದ್ಯಗಳಲ್ಲಿ ಗ್ಯಾಬ್ರಿಯೆಲ್ಲಾ ಸಬಾಟಿನಿಯಿಂದಿಗೆ ಗ್ರಾಫ್ ಎರಡು ಭಾರಿ ಸೋತಿದ್ದು ಇದರಲ್ಲಿ ಒಂದು ಫ್ಲೋರಿಡಾದಲ್ಲಿನ ಬೊಕಾ ರಾಟನ್‌ನ ಗಟ್ಟಿಗೊಳಿಸಿದ ಕಣದಲ್ಲಿ (ಹಾರ್ಡ್ ಕೋರ್ಟ್), ಮತ್ತು ಇನ್ನೊಂದು ಫ್ಲೋರಿಡಾದ ಅಮೇಲಿಯ ಐಲ್ಯಾಂಡ್‌ನ ಜೇಡಿಮಣ್ಣಿನ ಕಣದಲ್ಲಿ (ಕ್ಲೇ ಕೋರ್ಟ್). ಆದರೂ, ಗ್ರಾಫ್ ಸಾನ್ ಆಂಟೋನಿಯೋ, ಟೆಕ್ಸಾಸ್‌ಗಳಲ್ಲಿ ನಡೆದ ಅಂತಿಮ ಪಂದ್ಯಗಳಲ್ಲಿ ಮತ್ತೊಮ್ಮೆ ಇವರ್ಟ್‌ರನ್ನು ಸೋಲಿಸಿ ಮಿಯಾಮಿಯಲ್ಲಿ ತಾನು ಗಳಿಸಿದ ಕೀರ್ತಿಯ ಹಣೆಪಟ್ಟಿಯನ್ನು ಉಳಿಸಿಕೊಂಡರು. ನಂತರ ಬರ್ಲಿನ್‌ನಲ್ಲಿ ನಡೆದ ಪಂದ್ಯವನ್ನೂ ಗೆದ್ದ ಗ್ರಾಫ್ ಐದು ಪಂದ್ಯಗಳಲ್ಲಿ ಕೇವಲ ೧೨ ಆಟಗಳನ್ನು ಮಾತ್ರ ಕಳೆದುಕೊಂಡಿದ್ದರು.

ಫ್ರೆಂಚ್ ಓಪನ್‌ನಲ್ಲಿ ೩೨ ನಿಮಿಷಗಳ ಅಂತಿಮ ಆಟದಲ್ಲಿ ನತಾಷಾ ಝ್ವೆರೆವಾರನ್ನು ೬–೦, ೬–೦ ಅಂತರದಲ್ಲಿ ಸೋಲಿಸುವುದರ ಮೂಲಕ ತನ್ನ ಅಗ್ರಪಟ್ಟವನ್ನು ಯಶಸ್ವಿಯಾಗಿ ಭದ್ರಪಡಿಸಿಕೊಂಡರು.[] ೧೯೧೧ರ ನಂತರದಲ್ಲಿ ಗ್ರಾಂಡ್ ಸ್ಲಾಮ್‌ನಲ್ಲಿ ನಡೆದ ಮೊದಲ ಡಬಲ್ ಬಾಗಲ್.[] ನಾಲ್ಕನೇ ಸುತ್ತಿನಲ್ಲಿ ಮಾರ್ಟಿನಾ ನವ್ರಾಟಿಲೋವಾರನ್ನು ಹೊರದೂಡಿದ ಝ್ವೆರೆವಾ ಇಡೀ ಪಂದ್ಯದಲ್ಲಿ ಕೇವಲ ಹದಿಮೂರು ಅಂಕಗಳನ್ನು ಪಡೆದರು.[]

ನಂತರದಲ್ಲಿ ಬಂದ ವಿಂಬಲ್ಡನ್‌ನಲ್ಲಿ ನವ್ರಾಟಿಲೋವಾ ಆರು ನೇರ ಪಂದ್ಯಗಳನ್ನು ಜಯಿಸಿದರು. ೫–೭, ೬–೨, ೬–೧ ಅಂಕಗರೊಂದಿಗೆ ಗೆಲ್ಲುವ ಮೊದಲು ಗ್ರಾಫ್ ಅಂತಿಮ ಹಂತದಲ್ಲಿ ೭–೫, ೨–೦ ಅಂಕಗರೊಂದಿಗೆ ನವ್ರಾಟಿಲೋವಾಳಿಗಿಂತ ಹಿಂದೆ ಉಳಿದಿದ್ದರು. ನಂತರ ಈಕೆ ಹ್ಯಾಂಬರ್ಗ್‌ ಮತ್ತು ಮ್ಹಾವ್ಹಾಗಳಲ್ಲಿ (ನಡೆದಿರುವ ಎಲ್ಲಾ ಪಂದ್ಯಗಳಲ್ಲಿ ಕೇವಲ ಎಂಟು ಆಟಗಳನ್ನು ಮಾತ್ರ ಈಕೆ ಕಳೆದುಕೊಂಡಿದ್ದರು) ನಡೆದ ಪಂದ್ಯಗಳಲ್ಲಿ ವಿಜಯ ಸಾಧಿಸಿದರು.

ಈ ಹಿಂದೆ ೧೯೫೩ರಲ್ಲಿ ಮೌರೀನ್ ಕೊನ್ನೋಲಿ ಬ್ರಿಂಕರ್ ಮತ್ತು ೧೯೭೦ ರಲ್ಲಿ ಮಾರ್ಗರೆಟ್ ಕೋರ್ಟ್‌ ಎಂಬ ಕೇವಲ ಇಬ್ಬರು ಮಹಿಳೆಯರಿಂದ ಇದುವರೆಗೆ ಸಾಧಿಸಲ್ಪಟ್ಟ ಕ್ಯಾಲೆಂಡರ್ ಇಯರ್ ಗ್ರಾಂಡ್ ಸ್ಲ್ಯಾಮ್‌ ಪ್ರಶಸ್ತಿಯನ್ನು ಪಡೆಯಲು ಯುಎಸ್ ಓಪನ್‌ನಲ್ಲಿ ಗ್ರಾಫ್ ಮೂರು ಸೆಟ್ಟಿನ ಅಂತಿಮ ಪಂದ್ಯದಲ್ಲಿ ಸಬಾಟಿನಿಯನ್ನು ಸೋಲಿಸಿದರು.

ಮಾಧ್ಯಮಗಳು ಯಾವುದನ್ನು "ಗೋಲ್ದನ್ ಸ್ಲಾಮ್" ಎಂಬ ಅಡ್ಡಹೆಸರಿನಿಂದ ಕರೆದರೋ, ಸಿಯೋಲ್‌ನಲ್ಲಿ ನಡೆದ ಅದೇ ಒಲಿಂಪಿಕ್ ಆಟಗಳಲ್ಲಿ ನಡೆದ ಚಿನ್ನದ ಪದಕ ಪಂದ್ಯದಲ್ಲಿ ಗ್ರಾಫ್ ಸಬಾಟಿನಿಯನ್ನು ೬–೩, ೬–೩ ಅಂಕಗಳಿಂದ ಸೋಲಿಸಿ ಆ ಹೆಸರನ್ನು ದೃಢಪಡಿಸುವಲ್ಲಿ ಯಶಸ್ವಿಯಾದರು.

ಅದೇ ವರ್ಷದಲ್ಲಿ ವಿಂಬಲ್ಡನ್‌ನಲ್ಲಿ ಆಡಿದ ಸಬಾಟಿನಿಯೊಂದಿಗಿನ ಜೊತೆಯಾಟದಲ್ಲಿ ಗ್ರಾಫ್ ತನ್ನದೇ ಆದ ಏಕಮಾತ್ರ ಗ್ರಾಂಡ್ ಸ್ಲ್ಯಾಮ್‌ ಡಬಲ್ಸ್ ಎಂಬ ಹಣೆಪಟ್ಟಿಯನ್ನು ಉಳಿಸಿಕೊಂಡು ಮಹಿಳೆಯರ ಡಬಲ್ಸ್‌ನಲ್ಲಿನ ಒಲಿಂಪಿಕ್ ಕಂಚಿನ ಪದಕವನ್ನು ಪಡೆದುಕೊಂಡರು.

ವರ್ಷಾಂತ್ಯದ ವರ್ಜೀನಿಯಾ ಸ್ಲಿಮ್ಸ್ ಚಾಂಪಿಯನ್ ಶಿಪ್‌ನಲ್ಲಿ ಗ್ರಾಫ್ ಪಾಮ್ ಶ್ರಿವರ್‌ಳಿಂದ ಸ್ಥಾನಪಲ್ಲಟಗೊಂಡಿದ್ದು ಇದು ಆ ವರ್ಷದಲ್ಲಿ ಅವರು ಪಡೆದ ಮೂರನೇ ಸೋಲು. ಈಕೆಯು ವರ್ಷದ ೧೯೮೮ ಬಿಬಿಸಿ ಓವರ್ಸೀಸ್ ಕ್ರೀಡಾ ವ್ಯಕ್ತಿ (ಸ್ಪೋರ್ಟ್ಸ್ ಪರ್ಸನಾಲಿಟಿ) ಎಂಬ ಹೆಸರಿಗೆ ಪಾತ್ರಳಾದರು.

ಹೊಸ ಸ್ಪರ್ಧಿಗಳು ಮತ್ತು ವೈಯಕ್ತಿಕ ಸವಾಲುಗಳು

[ಬದಲಾಯಿಸಿ]

೧೯೮೯ರ ಆರಂಭದಲ್ಲಿ ಗ್ರಾಫ್ ಇನ್ನೊಂದು ಗ್ರಾಂಡ್ ಸ್ಲಾಮ್‌ ಪ್ರಶಸ್ತಿಯನ್ನು ಗೆಲ್ಲುತ್ತಾಳೆ ಎಂಬ ಸಾಧ್ಯತೆಯ ಬಗೆಗಿನ ಊಹೆಗಳು ವ್ಯಾಪಕವಾಗಿ ಹರಡಿತ್ತು. ಮಾರ್ಗರೆಟ್ ಕೋರ್ಟ್‌ರಂತಹ ಕೆಲವು ಗಮನಾರ್ಹ ವೀಕ್ಷಕರು ಹತ್ತು ಹಲವು ಭಾರಿ ಈ ಸಾಹಸವನ್ನು ಗ್ರಾಫ್ ಸಾಧಿಸಬಲ್ಲಳು ಎಂಬ ಸಲಹೆಯನ್ನೂ ನೀಡಿದ್ದರು. ಮತ್ತು ಅಂತಿಮ ಪಂದ್ಯದಲ್ಲಿ ಹೆಲೆನಾ ಸುಕೋವಾರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್‌ನ ಐದು ಆಟವಿಶೇಷಗಳಲ್ಲಿ ಎಲ್ಲವನ್ನೂ ಗೆಲ್ಲುವವರೆಗೆ ತನ್ನ ಸಾಮರ್ಥ್ಯವನ್ನು ವಿಸ್ತರಿಸಿದುದರೊಂದಿಗೆ ಗ್ರಾಂಡ್ ಸ್ಲ್ಯಾಮ್‌‌ನ್ನು ಜಯಿಸುವಲ್ಲಿನ ತನ್ನ ಗುರಿಯೆಡೆಗೆ ಮಿಂಚಿನಗತಿಯಲ್ಲಿ ಕ್ರಿಯಾಶೀಲಳಾಗುವುದರೊಂದಿಗೆ ಈ ವರ್ಷವು ನಿರೀಕ್ಷಿಸಿದಂತೆಯೇ ಆರಂಭಗೊಂಡಿತು. ಅಂತಿಮ ಪೂರ್ವ ಪಂದ್ಯದಲ್ಲಿ ಇವಳೊಂದಿಗಿನ ೬–೩, ೬–೦ ಅಂತರದ ಬ್ಯಾಬ್ರಿಯೆಲಾಳ ಸೋಲು ಪರಿಣತ ವೀಕ್ಷಕರಾದ ಟೆಡ್ ಟಿನ್ಲಿಂಗ್‌ರಿಂದ "ಬಹುಶಃ ನಾನು ಕಂಡ ಟೆನಿಸ್ ಆಟಗಳಲ್ಲೇ ಅತ್ಯುತ್ತಮವಾದುದು" ಎಂದು ಶ್ಲಾಘಿಸಲ್ಪಟ್ಟಿದೆ.[]

ವಾಶಿಂಗ್‌ಟನ್, ಡಿ.ಸಿ., ಸಾನ್ ಆಂಟಾನಿಯೋ, ಟೆಕ್ಸಾಸ್, ಬೊಕ ರಾಟಾನ್, ಫ್ಲೋರಿಡಾ ಮತ್ತು ಸೌತ್ ಕೆರೋಲಿನಾದ ಹಿಲ್ಟಾನ್ ಹೆಡ್ ‌ಗಳಲ್ಲಿ ನಡೆದ ನಂತರದ ನಾಲ್ಕು ಪಂದ್ಯಗಳ ಸುಲಭ ವಿಜಯಗಳಲ್ಲೂ ಗ್ರಾಫ್ ಇದನ್ನು ಅನುಸರಿಸಿದರು. ವಾಶಿಂಗ್‌ಟನ್, ಡಿ.ಸಿ. ಪಂದ್ಯಗಳು ಗಮನಾರ್ಹವಾಗಿದ್ದುವು ಯಾಕೆಂದರೆ, ಅಂತಿಮ ಹಂತದಲ್ಲಿ ಝೀನಾ ಗ್ಯಾರಿಸನ್ ಎದುರಿಗೆ ಮೊದಲ ಇಪ್ಪತ್ತು ಅಂಕಗಳನ್ನು ಗ್ರಾಫ್ ಜಯಿಸಿದರು.[೧೦] ಬೊಕಾ ರಾಟನ್‌‌ನ ಅಂತಿಮ ಪಂದ್ಯದಲ್ಲಿ ತಮ್ಮ ಅಂತಿಮ ಏಳು ಪಂದ್ಯಗಳಲ್ಲಿ ಒಂದೇ ಒಂದು ಸೆಟ್ಟನ್ನು ಕ್ರಿಸ್ ಇವರ್ಟ್‌ಗೆ ಬಿಟ್ಟುಕೊಟ್ಟಳು.[೧೧]

ಅನಂತರ ಜೇಡಿಮಣ್ಣಿನ ಕೋರ್ಟ್‌ನಲ್ಲಿ ನಡೆದ ಅಮೇಲಿಯ ಐಲ್ಯಾಂಡ್ ಅಂತಿಮ ಪಂದ್ಯದಲ್ಲಿ ಗ್ರಾಫ್ ಆ ವರ್ಷದ ತನ್ನ ಮೊದಲ ಆಟದಲ್ಲಿ ಸಬಾಟಿನಿಯೊಂದಿಗೆ ಸೋತರು. ಆದರೆ ಹ್ಯಾಂಬರ್ಗ್ ಮತ್ತು ಬರ್ಲಿನ್‌ಗಳಲ್ಲಿ ನಡೆದ ಪಂದ್ಯಗಳಲ್ಲಿ ಸುಲಭ ಜಯ ಗಳಿಸುವುದರ ಮೂಲಕ ಯುರೋಪಿನ ಕಣಕ್ಕೇ ವಾಪಾಸಾದರು.

ಗ್ರಾಫ್‌ರ ಗ್ರ್ಯಾಂಡ್ ಸ್ಲಾಮ್ ವಿಜಯದ ಸರಣಿಯು ಫ್ರೆಂಚ್ ಓಪನ್‌ನಲ್ಲಿ ಕೊನೆಗೊಂಡಿದ್ದು ಇಲ್ಲಿ ಸ್ಪೇನಿನ ಹದಿನೇಳು ವರ್ಷದ ಅರಾಂತ್ಕ್ಸಾ ಸಂಚೆಝ್ ವಿಕಾರಿಯೋ ಮೂರು ಸೆಟ್ಟುಗಳಿಂದ ಗ್ರಾಫ್‌ರನ್ನು ಸೋಲಿಸಿದ್ದರು. ಮೂರನೇ ಸೆಟ್ಟಿನಲ್ಲಿ ಗ್ರಾಫ್ ೫–೩ ಅಂಕಗರೊಂದಿಗೆ ಆಡಿದ್ದು ಆಟವನ್ನು ಸೊನ್ನೆಯೊಂದಿಗೆ ಸೋತರು ಮತ್ತು ಪಂದ್ಯದಲ್ಲಿ ಕೇವಲ ಮೂರು ಹೆಚ್ಚುವರಿ ಅಂಕಗಳನ್ನಷ್ಟೇ ಪಡೆದರು. ತಮ್ಮ ಅಂತಿಮ ಪೂರ್ವ ಪಂದ್ಯದಲ್ಲಿ ೬–೩, ೩–೬, ೬–೩ ಅಂಕಗಳಿಂದ ಮೋನಿಕಾ ಸೆಲೆಸ್‌ರನ್ನು ಸೋಲಿಸಲೂ ಸಹ ಇವರು ಪ್ರಯಾಸಪಟ್ಟಳು.

ಆದರೂ, ಗ್ರಾಫ್ ವಿಂಬಲ್ಡನ್ ಪಂದ್ಯದ ನಾಲ್ಕನೇ ಸುತ್ತಿನಲ್ಲಿ ಸಾಂಚೆಝ್ ವಿಕಾರಿಯೋ ಮತ್ತು ಕ್ರಿಸ್ ಇವರ್ಟ್‌ರನ್ನು ಕ್ವಾರ್ಟರ್ ಫೈನಲ್ ಹಂತದಲ್ಲೇ ಸೋಲಿಸಿ ಅಂತಿಮಪಂದ್ಯದಲ್ಲಿ ಮಾರ್ಟಿನಾ ನವ್ರಾಟಿಲೋವಾರನ್ನು ೬–೨, ೬–೭, ೬–೧ ಅಂಕಗಳಲ್ಲಿ ಸೋಲಿಸುವುದರೊಂದಿಗೆ ಮತ್ತೆ ಚೇತರಿಸಿಕೊಂಡರು.

ಸ್ಯಾನ್‌ಡಿಯಾಗೋ ಮತ್ತು ಮ್ಹಾವ್ಹಾಗಳಲ್ಲಿ ನಡೆದ ಪಂದ್ಯಗಳಲ್ಲಿ ಸುಲಭ ಜಯಗಳಿಸಿದ ಗ್ರಾಫ್ ಯುಎಸ್ ಓಪನ್‌ಗೆ ಸಿದ್ಧಳಾದರು. ಯುಎಸ್ ಓಪನ್‌ನ ಸೆಮಿಫೈನಲ್ ಪಂದ್ಯದಲ್ಲಿ ಗ್ರಾಫ್ ಸಬಾಟಿನಿಯನ್ನು ೩–೬, ೬–೪, ೬–೨ ಅಂತರದಲ್ಲಿ ಸೋಲಿಸಿದರು. ಅಂತಿಮ ಪಂದ್ಯದಲ್ಲಿ ೩–೬, ೭–೫, ೬–೧ ಅಂಕಗಳನ್ನು ಗಳಿಸಿ ತನ್ನ ವರ್ಷದ ಮೂರನೇ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪಟ್ಟವನ್ನು ಗ್ರಾಫ್ ಜಯಿಸುವುದಕ್ಕೆ ಮುನ್ನ ನವ್ರಾಟಿಲೋವಾ ೬–೩, ೪–೨ ಅಂತರದಲ್ಲಿ ಮುಂದಿದ್ದರು.

ಝುರಿಚ್ ಮತ್ತು ಬ್ರಿಗ್ಟಾನ್‌ಗಳಲ್ಲಿ ಗಳಿಸಿದ ವಿಜಯವು ಗ್ರಾಫ್ ನವ್ರಾಟಿಲೋವಾರನ್ನು ಅಂತಿಮ ಪಂದ್ಯದಲ್ಲಿ ೬–೪, ೭–೫, ೨–೬, ೬–೨ ಅಂಕಗಳಿಂದ ಸೋಲಿಸುವ ಮೂಲಕ ತನ್ನ ಅಗ್ರಸ್ಥಾನ ಪಟ್ಟವನ್ನು ಸುಭದ್ರಗೊಳಿಸಿಕೊಂಡ ವರ್ಜೀನಿಯಾ ಸ್ಲಿಮ್ಸ್ ಚಾಂಪಿಯನ್‌ಶಿಪ್‌ಗಿಂತ ಮುಂಚಿನದಾಗಿತ್ತು. ಗ್ರಾಫ್ ೧೯೮೯ ರ ವರ್ಷವನ್ನು ೮೬-೨ ಮ್ಯಾಚ್ ರೆಕಾರ್ಡ್‌ನೊಂದಿಗೆ ವರ್ಷವನ್ನು ಕೊನೆಗೊಳಿಸಿದರು ಮತ್ತು ಕೇವಲ ಹನ್ನೆರೆಡು ಸೆಟ್‌ಗಳಲ್ಲಿ ಸೋತಿದ್ದರು.

ಆಸ್ಟ್ರೇಲಿಯನ್ ಓಪನ್‌ನಲ್ಲಿ ಗ್ರಾಫ್ ಮೇರಿ ಜೋ ಫರ್ನಾಂಡಿಸ್‌ರನ್ನು ಸೋಲಿಸಿದುದು ಅವರು ಕಳೆದ ಒಂಭತ್ತು ಭಾರಿ ಭಾಗವಹಿಸಿದುದರಲ್ಲಿ ಗಳಿಸಿದ ಎಂಟನೇ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪಟ್ಟ. ಅವಳ ವಿಜಯದ ಸರಣಿಯು (೧೯೮೯ರ ಫ್ರೆಂಚ್ ಓಪನ್‌ನಲ್ಲಿ ಅರಾಂಕ್ಸ ಸ್ಯಾಂಚೆಝ್ ವಿಕಾರಿಯೋಗೆ ಸೋತಬಳಿಕ ಎಲ್ಲಿಯೂ ಸೋಲದೇ ಇದ್ದುದು) ಮುಂದುವರಿದು ಟೋಕಿಯೋ, ಅಮೇಲಿಯಾ ಐಲ್ಯಾಂಡ್ ಮತ್ತು ಹ್ಯಾಂಬರ್ಗ್‌‌ಗಳಲ್ಲೂ ಇವರು ವಿಜಯ ಸಾಧಿಸಿದರು. ಬರ್ಲಿನ್‌ನಲ್ಲಿನ ಅಂತಿಮ ಪಂದ್ಯವನ್ನು ಮೋನಿಕಾ ಸೆಲೆಸ್‌ಗೆ ಬಿಟ್ಟುಕೊಡುವುದಕ್ಕಿಂತ ಮುನ್ನ ಈಕೆ ತನ್ನ ವಿಜಯದ ದಾಖಲೆಯನ್ನು ೬೬ ಪಂದ್ಯಗಳಿಗೆ ವಿಸ್ತರಿಸಿದ್ದರು(ಮಾರ್ಟಿನಾ ನವ್ರಾಟಿಲೋವಾಳ ೭೪ ಅಂಕಗಳೆದುರು ಡಬ್ಲ್ಯುಟಿಎ ಇತಿಹಾಸದಲ್ಲಿ ಎರಡನೇ ಸ್ಥಾನ).

ಬರ್ಲಿನ್ ಪಂದ್ಯ ನಡೆಯುತ್ತಿರುವಾಗ ಜನಪ್ರಿಯ ಸಂಗತಿಗಳನ್ನು [ಟಾಬ್ಲಾಯಿಡ್] ಭಿತ್ತರಿಸುವ ಜರ್ಮನಿಯ ವೃತ್ತಪತ್ರಿಕೆ "ಬಿಲ್ಡ್ " ಗ್ರಾಫ್‌ರ ತಂದೆ ಶಾಮೀಲಾದ ಆರೋಪದ ಹಗರಣವೊಂದರ ಕತೆಯನ್ನು ಪ್ರಸಾರ ಮಾಡಿತು. ವಿಂಬಲ್ಡನ್ ಸುದ್ಧಿಗೋಷ್ಟಿಯಲ್ಲಿ ಈ ವಿಷಯದ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸುವ ಸಂಕಷ್ಟ ಗ್ರಾಫ್‌ಗೆ ಬಂದು ಇಲ್ಲಿ ಅವರು ಕಣ್ಣೀರಿನೊಂದಿಗೆ ಭಾವೋದ್ವೇಗಕ್ಕೊಳಗಾದರು. ವಿಂಬಲ್ಡನ್ ಅಧಿಕಾರಿಗಳು ಅಂತಹ ಪ್ರಶ್ನೆಗಳನ್ನು ಕೇಳಬಹುದಾದ ಯಾವುದೇ ಸುದ್ದಿಗೋಷ್ಠಿಯನ್ನು ನಂತರದಲ್ಲಿ ಹಮ್ಮಿಕೊಳ್ಳುವುದನ್ನು ತಕ್ಷಣ ರದ್ದುಪಡಿಸುವಂತೆ ಬೆದರಿಕೆಗೊಳಗಾದರು. ಈ ಹಗರಣದ ಆರೋಪವು ಗ್ರಾಫ್‌ರ ವೃತ್ತಿ-ವರ್ಚಸ್ಸಿನ ಮೇಲೆ ಪರಿಣಾಮ ಬೀರಿದೆಯೇ ಎಂಬುದು ಚರ್ಚೆಗೆ ತೆರೆದಿಟ್ಟ ಅಂಶ. ಜುಲೈ ೧೯೯೦ ರಲ್ಲಿ ಸ್ಟೆರ್ನ್ ಮ್ಯಾಗಜೀನ್‌ನೊಂದಿಗೆ ನಡೆದ ಸಂದರ್ಶನದಲ್ಲಿ ಗ್ರಾಫ್ "ನನಗೆ ಮೊದಲಿನಂತೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ" ಎಂದಿದ್ದಾಳೆ.[೧೨]

ಫ್ರೆಂಚ್ ಓಪನ್‌ನಲ್ಲಿ ಮೊದಲ ಸೆಟ್ಟಿನ ಟೈ ಬ್ರೇಕರ್‌ನಲ್ಲಿ ಸೆಲೆಸ್ ನಾಲ್ಕು ಅನುಕ್ರಮ ಸೆಟ್ ಅಂಕಗಳನ್ನು ಉಳಿಸುವಲ್ಲಿ ಯಶಸ್ವಿಯಾದ ಮೋನಿಕಾ ಸೆಲೆಸ್‌ಗೆ ೭–೬, ೬–೪ ಅಂತರದಲ್ಲಿ ಗ್ರಾಫ್ ಮತ್ತೊಮ್ಮೆ ಸೋತರು. ವಿಂಬಲ್ಡನ್‌ನಲ್ಲಿ ಗ್ರಾಫ್ ಝೀನಾ ಗ್ಯಾರ್ರಿಸನ್ ವಿರುದ್ಧದ ಅಂತಿಮಪೂರ್ವ ಪಂದ್ಯದಲ್ಲಿ ಸೋಲನ್ನನುಭವಿಸಿದರು. ಮಾಂಟ್ರಿಯಲ್ ಮತ್ತು ಸ್ಯಾನ್‌ಡಿಯಾಗೋಗಳಲ್ಲಿನ ವಿಜಯಗರೊಂದಿಗೆ ಗ್ರಾಫ್ ಯುಎಸ್ ಓಪನ್ ಅಂತಿಮ ಪಂದ್ಯದವರೆಗೆ ತಲುಪಿ, ಅಲ್ಲಿ ಸಾಬಾತಿನಿಯೊಂದಿಗೆ ನೇರ ಸೆಟ್ಟಿನಲ್ಲಿ ಸೋಲು ಕಂಡಳು. ಯುಎಸ್ ಓಪನ್ ನಂತರದ ನಾಲ್ಕು ಒಳಾಂಗಣ ಪಂದ್ಯಗಳನ್ನು ಗ್ರಾಫ್ ಜಯಿಸಿದರು. ಆದರೆ ವರ್ಜೀನಿಯಾ ಸ್ಲಿಮ್ಸ್ ಚಾಂಪಿಯನ್‌ಶಿಪ್ ಸೆಮಿಫೈನಲ್‌ನಲ್ಲಿ ಮತ್ತೊಮ್ಮೆ ಸಬಾಟಿನಿಯೊಂದಿಗೆ ಸೋತರು. ೧೯೯೦ರಲ್ಲಿ ಒಂದೇ ಒಂದು ಭಾರಿ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪಟ್ಟವನ್ನು ಜಯಿಸಿದ್ದರೂ, ಗರಿಷ್ಟ ಅಂಕಗಳನ್ನು ಪಡೆದ ಆಟಗಾರ್ತಿಯಾಗಿಯೇ ಅವರು ಆ ವರ್ಷವನ್ನು ಮುಗಿಸಿದರು.

ಗಾಯದ ಸಮಸ್ಯೆ, ವೈಯಕ್ತಿಕ ಸಮಸ್ಯೆಗಳು ಮತ್ತು ತನ್ನ ಸ್ಥಿತಿತ್ವವನ್ನು ಕಳೆದುಕೊಂಡಿರುವುದು ಗ್ರಾಫ್‌ ಅವರ ಜೀವನದಲ್ಲಿ ೧೯೯೧ ಒಂದು ಕಷ್ಟಕರ ವರ್ಷವಾಯಿತು. ಸೆಲೆಸ್‌ ಅವರನ್ನು ಒಬ್ಬ ವರ್ಚಸ್ವಿ ಆಟಗಾರ್ತಿಯನ್ನಾಗಿ ಮಾರ್ಪಡಿಸಿತು,ಮಾರ್ಚ್ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯನ್‌ ಓಪನ್‌‌, ಫ್ರೆಂಚ್‌ ಓಪನ್‌‌, ಯು.ಎಸ್.ಓಪನ್‌‌ ಗೆಲ್ಲುವುದರ ಮೂಲಕ ದಾಳಲೆಯ ೧೮೬ ವಾರಗಳಲ್ಲಿ ೧ನೇ ಅಗ್ರ ಶ್ರೇಯಾಂಕದ ಆಟಗಾರ್ತಿಯಾಗಿ ವಿಜ್ರಂಬಿಸಿದರು. ವಿಂಬಲ್ಡನ್‌ ಗೆಲ್ಲುವುದರ ಮೂಲಕ ಮತ್ತೊಮ್ಮೆ ಅಗ್ರಶ್ರೇಯಾಂಕಕ್ಕೆ ಬಂದಳಾದರೂ ಯು.ಎಸ್‌.ಓಪನ್‌‌ನಲ್ಲಿ ನರ್ವಾಟಿಲೋವಾಳೊಡನೆ ಸೋಲುವುದರೊಡನೆ ತನ್ನ ಸ್ಥಾನವನ್ನು ಕಳೆದುಕೊಂಡರು.

ಗ್ರಾಫ್‌ ಆಸ್ಟ್ರೇಲಿಯನ್‌ ಓಪನ್‌‌ ಟೆನ್ನಿಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಜನಾ ನೊವೊತ್ನಾ ಜೊತೆ ಸೋತರು,ಇದು ೧೯೮೬ರ ಫ್ರೆಂಚ್‌ ಓಪನ್‌‌ ನಂತರ ಸೆಮಿಫೈನಲ್‌ ಹಂತವನ್ನು ತಲುಪದೇ ಇರುವುದು ಮೊದಲ ಸಲವಾಗಿತ್ತು. ಅಮೇರಿಕಾದ ಸ್ಯಾನ್‌ ಅಂಟೋನಿಯೊದಲ್ಲಿ ಹಾರ್ಡ್‌‌ಕೋರ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮೊನಿಕಾ ಸೆಲೆಸ್‌ನ್ನು ಸೋಲಿಸಿ ಗೆಲ್ಲುವುದರೊಳಗೆ ಗೆಬ್ರಿಯೆಲ್ಲಾ ಸಬಾಟಿನಿಯವರಿಂದ ಮೂರುಬಾರಿ ಸೋಲನ್ನ ಅನುಭವಿಸಿದರು. ಐದನೆ ಬಾರಿಗೆ ಸಬಾಟಿನಿಯವರಿಂದ ಪ್ಲೋರಿಡಾದ ಅಮೇಲಿಯಾ ಐ‌ಲ್ಯಾಂಡ್‌‌ನಲ್ಲಿ ಸೋತ ನಂತರ ಗ್ರಾಫ್‌‌ ಮತ್ತೊಮ್ಮೆ ಸೆಲೆಸ್‌ರವರನ್ನು ಹ್ಯಾಂಬರ್ಗ್‌‌ ಫೈನಲ್‌ನಲ್ಲಿ ಸೋಲಿಸಿದರು. ಬರ್ಲಿನ್‌ನಲ್ಲಿನ ಆಟದಲ್ಲಿನ ಗೆಲುವಿನ ನಂತರ ಗ್ರಾಫ್‌‌, ೧೯೮೪ರ ನಂತರ ಪ್ರಪ್ರಥಮ ಬಾರಿಗೆ ಜೀವನದಲ್ಲಿಯೇ ಕಾಣದ ಸೋಲನ್ನನುಭವಿಸಿದರು. ಫ್ರೆಂಚ್‌ ಓಪನ್‌‌ ಟೆನ್ನಿಸ್‌ನ ಸೆಮಿಫೈನಲ್‌ನಲ್ಲಿ ಅರಾಂತಕ್ಸಾ ಸ್ಯಾಂಚೆಸ್ ವಿಕ್ಯಾರಿಯೋ ಇವರ ವಿರುದ್ಧ ಕೇವಲ ಎರಡು ಆಟಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾದರು ಮತ್ತು ಮೊದಲ ಸೆಟ್‌ನಲ್ಲಿ ೬-೦ದಿಂದ ಸೋಲನ್ನನುಭವಿಸಿದರು. ಆದರೆ ಗ್ರಾಫ್‌‌ ಮೂರನೇ ವಿಂಬಲ್ಡನ್‌ನ್ನು ಪೈನಲ್‌ನಲ್ಲಿ ಸಬಾಟಿನಿಯವರನ್ನು ಸೋಲಿಸಿ ಗೆದ್ದುಕೊಂಡರು. ನರ್ವಾಟಿಲೋವಾರವರು ಗ್ರಾಫ್‌ರನ್ನು ೭-೬,೬-೭,೬-೪ ಸೆಟ್‌ಗಳಿಂದ ಯು.ಎಸ್‌.ಓಪನ್‌‌ನ ಸೆಮಿಫೈನಲ್‌ನಲ್ಲಿ ಸೋಲಿಸಿದರು.ಇದರ ಮೂಲಕ ನಾಲ್ಕು ವರ್ಷಗಳಲ್ಲಿ ಗ್ರಾಫ್ ವಿರುದ್ಧ ಪಡೆದ ಗೆಲುವು ಇದಾಗಿತ್ತು. ಗ್ರಾಫ್‌ ತನ್ನ ನಂತರ ಕ್ರೀಡಾ ಜೀವನದ ೫೦೦ನೇ ಗೆಲುವನ್ನು ಕ್ವಾರ್ಟರ್‌ ಫೈನಲ್‌ನಲ್ಲಿ ಜುಡಿತ್‌ ವೈಸ್‌ನರ್‌ ಇವರನ್ನು ಸೋಲಿಸುವುದರೊಂದಿಗೆ ಲೀಪ್‌ಜಿಗ್‌ನಲ್ಲಿ ಗೆಲುವನ್ನು ಸಾಧಿಸಿದರು. ಝುರಿಚ್‌ ಮತ್ತು ಬ್ರಿಗ್‌ಟೊನ್‌ನಲ್ಲಿ ಇನ್ನೆರಡು ಒಳ ಕ್ರಿಡಾಂಗಣದ ಆಟಗಳನ್ನು ಗೆದ್ದ ನಂತರ ವರ್ಜೀನಿಯಾ ಸ್ಲಿಮ್ಸ್‌ ಚಾಂಪಿಯನ್‌ಶಿಪ್‌‌ನಲ್ಲಿ ನೊವೊತ್ನಾರಿಗೆ ಸೋಲುವ ಮೂಲಕ ಮತ್ತೊಮ್ಮೆ ಅಸಫಲತೆಯನ್ನು ಅನುಭವಿಸಿದರು. ಮತ್ತು ಅತ್ಯಂತ ಶೀಘ್ರದಲ್ಲಿ ತನ್ನ ಬಹಳ ಕಾಲದ ಕ್ರಿಡಾಗುರು(ಕೋಚ್‌) ಆದ ಪಾವೆಲ್‌ ಸ್ಲೊಜಿಲ್‌ರಿಂದ ದೂರಾದರು.

ಜರ್ಮನ್‌ನಲ್ಲಿದ್ದ ದಡಾರ ರೋಗವು ೧೯೯೨ರಲ್ಲಿ ಗ್ರಾಫ್‌ರವರನ್ನು ಆಸ್ಟ್ರೇಲಿಯನ್‌ ಓಪನ್‌‌ನ ಬಹುಮುಖ್ಯ ಅವಕಾಶದಿಂದ ವಂಚಿತರಾಗುವಂತೆ ಮಾಡಿತು. ಅವಳ ಮುಂದುವರಿದ ದಿನಗಳು ಆಡಿದ ನಾಲ್ಕರಲ್ಲಿ ಮೂರು ಪಂದ್ಯಾವಳಿಗಳಲ್ಲಿ ಸೋಲುವ ಮೂಲಕ ಒಂದೇ ತೆರನಾಗಿ ಸಾಗಿತು. ಆದಾಗ್ಯೂ ಅವರು ಪ್ಲೋರಿಡಾದ ಬೊಕಾ ರೇಟನ್‌‌ನಲ್ಲಿ ಮನಸ್ಸಿಗೊಪ್ಪದ ರೀತಿಯಲ್ಲಿ ಗೆಲುವನ್ನು ಸಾಧಿಸಿದರು. ಹ್ಯಾಂಬರ್ಗ್‌ ಮತ್ತು ಬರ್ಲಿನ್‌(ಎರಡರಲ್ಲೂ ಫೈನಲ್‌ನಲ್ಲಿ ಅರಾಂತಕ್ಸಾ‌ ಸ್ಯಾಂಚಿಜ್‌ ವಿಕಾರಿಯೋ ಅವರ ವಿರುದ್ಧ )ನಲ್ಲಿ ಸಾಧಿಸಿದ ಗೆಲುವು ಗ್ರಾಫ್‌ರನ್ನು ಫ್ರೆಂಚ್‌ ಓಪನ್‌‌ಗೆ ಸಿದ್ದವಾಗಿಸಿತು. ಸೆಮಿಫೈನಲ್‌ನಲ್ಲಿ ಮೊದಲ ಸುತ್ತನ್ನು ೬-೦ದೊಂದಿಗೆ ಕಳೆದುಕೊಂಡು ಅರಾಂತಕ್ಸಾ‌ ಸ್ಯಾಂಚಿಜ್‌ ವಿಕಾರಿಯೋ ಅವರನ್ನು ಸೋಲಿಸುವುದರೊಂದಿಗೆ ತನ್ನ ಪ್ರತಿಸ್ಪರ್ಧಿಯಾದ ಮೊನಿಕಾ ಸೇಲ್ಸ್‌ರನ್ನು ಮುಖಾಮುಕಿಯಾದರು. ಇದರಲ್ಲಿ ಮೋನಿಕಾ ಸೆಲೆಸ್‌ ಮೂರನೇ ಸೆಟ್‌(ಸುತ್ತು)ನಲ್ಲಿ ೧೦-೮ರಿಂದ ಜಯ ಸಾಧಿಸಿದರು. ಸೆಲೆಸ್‌ ೫ದನೇ ಪಂದ್ಯದ ಅಂಕದೊಂದಿಗೆ ಪಂದ್ಯವನ್ನು ಗೆದ್ದುಕೊಂಡರು. ಗ್ರಾಫ್‌ ಮೊದಲು ಕೆಲವು ಆಟಗಳನ್ನು ಗೆಲ್ಲುವ ಮೂಲಕ ೨ ಅಂಕದ ಒಳಗೆ ಬಂದಿದ್ದರು. ವಿಂಬಲ್ಡನ್‌ನಲ್ಲಿ ಮೊದಲ ಮೂರು ಸುತ್ತುಗಳಲ್ಲಿ ಬಹಳ ಪ್ರಯಾಸದಿಂದ ಕಡಿಮೆ ಶ್ರೇಯಾಂಕದ ಮರಿಯಾನ್‌ ದೆ ಸ್ವಾರ್ಟ್ ಮತ್ತು ಪ್ಯಾಟಿ ಪೆಂಡಿಕ್‌ರ ವಿರುದ್ಧ ಜಯವನ್ನು ಗಳಿಸಿ,ನಂತರ ನತಾಶಾ ಜ್ವೆರೆವಾರನ್ನು ಕ್ಷಾಟರ್‌ ಫೈನಲ್‌ನಲ್ಲಿ ನಿರಾತಂಕದಿಂದ ಸೋಲಿಸಿ, ಸಬಾಟಿನಿಯವರನ್ನು ಸೆಮಿಫೈನಲ್‌ನಲ್ಲೂ ಮತ್ತು ಸೇಲ್ಸ್‌ರನ್ನು ಪೈನಲ್‌ನಲ್ಲಿ ೬-೨,೬-೧ರಿಂದ ಸೋಲಿಸಿ ಜಯ ಸಾಧಿಸಿದರು. ಪ್ರೇಕ್ಷಕರ ಮತ್ತು ಮಾಧ್ಯಮಗಳು ಅವರುಯ ಗುರುಗುಟ್ಟುವಿಕೆಯ ಕುರಿತಾದ ಟೀಕೆಯಿಂದಾಗಿ ಸೆಲೆಸ್‌ ಹೆಚ್ಚುಕಡಿಮೆ ಸಂಪೂರ್ಣ ಮೌನವಾಗಿ ಆಟವಾಡುತ್ತಿದ್ದರು. ಗ್ರಾಫ್‌ ನಂತರ ಎಲ್ಲ ಐದು ಪೆಡ್‌ ಕಪ್‌ ಪಂದ್ಯಗಳಲ್ಲಿ ಜಯ ಸಾಧಿಸಿದರು. ಜರ್ಮನಿಯು ಸ್ಪೇನ್‌ನ ಸ್ಯಾಂಚೆಜ್‌ ವಿಕಾರಿಯೋರನ್ನು ೬-೪, ೬-೨ ರಿಂದ ಸೋಲಿಸಿ ಜಯಗಳಿಸಿತು. ಬಾರ್ಸಿಲೊನಾದಲ್ಲಿ ನಡೆದ ಒಲಂಪಿಕ್‌ ಪಂದ್ಯಾವಳಿಯಲ್ಲಿ ಗ್ರಾಫ್‌‌ ಜೆನ್ನಿಪರ್‌ ಕ್ಯಾಪ್ರೈಟಿಯವರ ವಿರುದ್ಧ ಪೈನಲ್‌ನಲ್ಲಿ ಸೋಲನ್ನನುಭವಿಸಿ ಬೆಳ್ಳಿ ಪದಕವನ್ನು ಪಡೆದರು. ಯು.ಎಸ್‌. ಓಪನ್‌‌ನ ಕ್ವಾಟರ್‌ಫೈನಲ್‌ನಲ್ಲಿ ಗ್ರಾಫ್‌ರು ಸ್ಯಾಂಚಿಜ್ ವಿಕಾರಿಯೋ ಅವರಿಂದ ೭-೬(೫),೬-೩ರಿಂದ ಸೊಲನ್ನುಂಡರು. ಮುಂದಿನ ನಾಲ್ಕು ಒಳಾಂಗಣ ಪಂದ್ಯಗಳಲ್ಲಿ ತಮ್ಮ ಸ್ಥಿತಿಯನ್ನು ಮತ್ತಷ್ಟು ಸುಧಾರಿಸಿಕೊಂಡರು,ಮತ್ತು ಮೂರನೇ ವರ್ಷದಲ್ಲಿ ವರ್ಜೀನಿಯಾ ಸ್ಲಿಮ್ಸ್ ಚಾಂಪಿಯನ್‌ಶಿಪ್‌‌ ನಲ್ಲಿ ಮೊದಲ ಸುತ್ತಿನಲ್ಲಿಯೇ ಲೊರಿ ಮೆಕ್‌ನಿಲ್‌ಗೆ ಸೋಲುವುದರೊಂದಿಗೆ ಗೆಲ್ಲಲು ವಿಫಲರಾದರು.

ಎರಡನೇ ಸುತ್ತಿನ ಪ್ರಾಭಲ್ಯ

[ಬದಲಾಯಿಸಿ]

ಆಸ್ಟ್ರೇಲಿಯನ್‌ ಓಪನ್‌‌ನ ಫೈನಲ್‌ನಲ್ಲಿ ಮೊಲಿಕಾ ಸೆಲೆಸ್‌ ಗ್ರಾಫ್‌ರನ್ನು ಮೂರು ಸೇಟ್‌ಗಳಲ್ಲಿ ಅಂದರೆ ೪-೬,೬-೩,೬-೨ರಿಂದ ಸೋಲಿಸಿದರು. ಇದರೊಂದಿಗೆ ಸ್ವಲ್ಪ ಕಾಲ ಪ್ರತಿಸ್ಪರ್ಧಿತ್ವವು ಕೊನೆಗೊಂಡಿತು. ಕ್ವಾರ್ಟರ್‌ಫೈನಲ್‌ನಲ್ಲಿ ಹ್ಯಾಂಬರ್ಗ್‌‌ನ ಮಾಲಿವಾದಲ್ಲಿ ಸೆಲೆಸ್‌ ಮತ್ತು ಮ್ಯಾಗ್ಡಾಲಿನಾರ ನಡುವಿನ ಪಂದ್ಯದಲ್ಲಿ ಸೆಲೆಸ್‌ರಿಗೆ ಗ್ರಾಫ್ ಇವರ ಅಂಧಾಭಿಮಾನಿಯಾದ ಜರ್ಮನ್‌‍ನ ಪ್ರೇಕ್ಷಕ ಗುಂಟರ್‌ ಪಾರ್ಚಿ ಎನ್ನುವವನು ಚಾಕುವಿನಿಂದ ಬುಜಕ್ಕೆ ಹಲ್ಲೆ ಮಾಡಿದನು. ನಂತರ ಈ ಹಲ್ಲೆಗೆ ಕಾರಣವನ್ನು ವಿಚಾರಿಸಲಾಗಿ ಗ್ರಾಫ್‌ಗೆ ನಂ.೧ ಶ್ರೇಯಾಂಕಕ್ಕೆ ಬರಲು ಸಹಾಯ ಮಾಡುವುದಕ್ಕಾಗಿ ಹೀಗೆ ಮಾಡಿದೆನೆಂದು ಸಮಜಾಯಿಸಿ ನೀಡಿದನು. ಇದರಿಂದಾಗಿ ಎರಡು ವರ್ಷಗಳಿಗೂ ಅಧಿಕ ಕಾಲ ಸೆಲೆಸ್‌ ಆಟವಾಡಲು ಸಾಧ್ಯವಾಗಲಿಲ್ಲ.

ಸೇಲ್ಸ್‌ರ ಅನುಪಸ್ಥಿತಿಯಲ್ಲಿ ಗ್ರಾಫ್‌ ನಾಲ್ಕರಲ್ಲಿ ಮೂರು ಗ್ರಾಂಡ್‌ಸ್ಲಾಮ್‌ಗಳನ್ನು ಗೆದ್ದು ತನ್ನ ವರ್ಚಸನ್ನು ಪುನಃ ಪ್ರತಿಸ್ಠಾಪಿಸಿದರು. ಈ ವಿಜಯವು ಸ್ವಲ್ಪ ದಿನಗಳ ಕಾಲವನ್ನು ತೆಗೆದುಕೊಂಡಿತು ಹೇಗೆಂದರೆ ವರ್ಷದ ಮೊದಲಲ್ಲಿ ಅವರು ಆಡಿದ ಆರು ಪಂದ್ಯಾವಳಿಗಳಲ್ಲಿ ೪ ಪಂದ್ಯಾವಳಿಗಳನ್ನು ಸೋತಿದ್ದರು, ಇದರಲ್ಲಿ ಎರಡನ್ನು ಅರಾನತ್ಸಕಾ ಸ್ಯಾಂಚಿಜ್‌ ವಿಕಾರಿಯೋ ವಿರುದ್ಧ ಮತ್ತು ಒಂದನ್ನು ಸೇಲ್ಸ್‌ ವಿರುದ್ಧ ಮತ್ತು ಒಂದನ್ನು ೩೬ರ ಹರೆಯದ ಮಾರ್ಟಿನಾ ನರ್ವಾಟಿಲೋವಾರ ವಿರುದ್ಧ ಸೋಲನ್ನನುಭವಿಸಿದ್ದರು. ಅವರ ಎಂಟು ವರ್ಷಗಳಲ್ಲಿನ ಎಳು ಮೂರು ಸೆಟ್‌ಗಳ ಪಂದ್ಯವನ್ನು ಗೆಲ್ಲಲು ಅವರು ಮೆರಿ ಜೋಯ್‌ ಫರ್ನಾಂಡಿಸ್‌‌ ಮತ್ತು ಗ್ಯಾಬ್ರಿಯೆಲ್ಲಾ ಸಬಾಟಿನಿಯವರನ್ನು ಸೋಲಿಸುವ ಮುನ್ನ ಬರ್ಲಿನ್ ಆಟದಲ್ಲಿ‌ ಸೆಬಾಹಿನ್‌ ಹ್ಯಾಕ್‌ ವಿರುದ್ಧ ೬-೦ ಅಂತರದಲ್ಲಿ ಸೋಲನ್ನನುಭವಿಸಿದ್ದರು. ಫ್ರೆಂಚ್‌ ಓಪನ್‌‌ನಲ್ಲಿ ಯಾವುದೂ ಅತ್ಯೂತ್ತಮವಾದ ಆಟವಾಗಿರಲಿಲ್ಲ ಆದರೂ ಕೂಡ ಫರ್ನಾಂಡಿಸ್‌‌ರೊಂದಿಗೆ ಮೂರು ಸೆಟ್‌ಗಳ ವಿಜಯ ದಾಖಲಿಸುವುದರೊಂದಿಗೆ ೧೯೮೮ರಿಂದ ಮೊದಲ ಜಯವನ್ನು ಗಳಿಸಿದ್ದರು. ಈ ಗೆಲುವು ೨೨ ತಿಂಗಳ ನಂತರ ಮತ್ತೊಮ್ಮೆ ಗ್ರಾಫ್‌ ಅವರನ್ನು ವಿಶ್ವದ ನಂ.೧ ಅಗ್ರ ಶ್ರೇಯಾಂಕದ ಆಟಗಾರ್ತಿ ಪಟ್ಟವನ್ನು ಮತ್ತೊಮ್ಮೆ ಅಲಂಕರಿಸಲು ಸಹಕರಿಸಿತು. ಅವಳ ಐದನೇ ವಿಂಬಲ್ಡನ್‌ ಕೂಡ ಅಂತಿಮ ಸುತ್ತಿನಲ್ಲಿ ಜನಾ ನೊವೊತ್ನಾರೊಂದಿಗೆ ಸೋಲುವ ಮೂಲಕ ನೋವಿಗೆ ಮತ್ತೊಂದು ಜೊತೆಯಾದಂತಾಯಿತು.ಜನಾ ನೊವೊತಾರವರು ಮೊದಲ ಸರ್ವ್‌ನಲ್ಲೇ ೫-೧ರಿಂದ ಮುಂದಿನ ಐದು ಆಟಗಳನ್ನು ಸೋಲಿಸುವ ಸೂಚನೆಯಾಗಿ ಮುನ್ನಡೆದರು. ಆ ಪಂದ್ಯಾವಳಿಯಲ್ಲಿ ಗ್ರಾಫ್‌‌ ಬಲ ಕಾಲು ಪೆಟ್ಟಿನಿಂದ ನರಳುತ್ತಿದ್ದರು(ಮತ್ತು ಮುಂದಿನ ಕೆಲವು ತಿಂಗಳ ವರೆಗೆ ನೋವು ಅವರನ್ನು ಕಾಡಿತು).ಮತ್ತು ಕೊನೆಯದಾಗಿ ಅಕ್ಟೋಬರ್‌ ೪ರಂದು ಶಸ್ತ್ರಚಿಕಿತ್ಸೆಗೂ ಒಳಪಡಬೇಕಾಯಿತು.

ಇದೇ ಸಂದರ್ಭದಲ್ಲಿ ಆಶ್ಚರ್ಯಕರರೀತಿಯಲ್ಲಿ ಗ್ರಾಫ್‌‌ ಸ್ಯಾನ್ ಡಿಯಾಗೊದಲ್ಲಿನ ಪಂದ್ಯಾವಳಿಯಲ್ಲಿ ಮತ್ತು ಯು.ಎಸ್.ಓಪನ್‌‌ಗಾಗಿನ ತಯಾರಿ ಪಂದ್ಯಗಳಲ್ಲಿ ಗೆಲ್ಲುವ ಪೂರ್ವದಲ್ಲಿ ಆಸ್ಟ್ರೇಲಿಯಾದ ನಿಕೋಲೆ ಬ್ರಾಡ್ಕ್ತೆ ಇವರಿಂದ ಸೋಲನ್ನನುಭವಿಸಿದರು. ಅವರು ಮೂರು ಸೆಟ್‌ಗಳ ಕ್ವಾರ್ಟರ್‌ ಫೈನಲ್‌ನಲ್ಲಿ ಸಬಾಟಿನಿಯವರನ್ನು ಸೋಲಿಸಿ ಪೈನಲ್‌ನಲ್ಲಿ ಹೆಲೆನಾ ಸುಕೋವಾರವರನ್ನು ನಿರಾತಂಕವಾಗಿ ಸೋಲಿಸುವುದರೊಂದಿಗೆ ಪಂದ್ಯಾವಳಿಯನ್ನು ಗೆದ್ದುಕೊಂಡರು. ಅವರ ಕಾಲು ಶಸ್ತ್ರಚಿಕಿತ್ಸೆಯ ಮೊದಲ ದಿನ ಲಿಫ್‌ಜಿಗ್‌ ಪಂದ್ಯಾವಳಿಯಲ್ಲಿ ನೊವೊತ್ನಾರೊಂದಿಗೆ ಫೈನಲ್‌ನಲ್ಲಿ ಕೇವಲ ಎರಡು ಆಟಗಳಲ್ಲಿ ಸೋಲುವುದರೊಂದಿಗೆ ಪಂದ್ಯಾವಳಿಯನ್ನು ಮತ್ತೊಮ್ಮೆ ಗೆದ್ದರು. ಮುಂದಿನ ಪಂದ್ಯಾವಳಿಯಲ್ಲಿ ಫಿಲಾಡೆಲ್ಪಿಯಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಕೊಂಚಿತಾ ಮಾರ್ಟಿನೇಜ್‌ರ ವಿರುದ್ಧ ಸೋಲನ್ನನುಭವಿಸಿದರು. ಬೆನ್ನು ನೋವಿಗಾಗಿ ನೋವಿನ ಮಾತ್ರೆಗಳನ್ನು ತೆಗೆದುಕೊಂಡು ವರ್ಜೀನಿಯಾ ಸ್ಲಿಮ್ಸ್‌ ಚಾಂಪಿಯನ್‌ಶಿಪ್‌‌ನ್ನು ೧೯೮೯ರಿಂದ ಮೊದಲ ಬಾರಿಗೆ ಸ್ಯಾಂಚೆಜ್‌ ವಿಕಾರಿಯೋರವರನ್ನು ಸೋಲಿಸುವುದರೊಂದಿಗೆ ಅವಳ ಆಟದ ಜೀವನದ ಪ್ರಮುಖಾಂಶಗಳು ಮುಗಿದವು.

ವರ್ಷದ ಮೊದಲ ಭಾಗದಲ್ಲಿ ಗಾಯಗಳಿಂದ ಗುಣಹೊಂದಿದ್ದರಿಂದ ಗ್ರಾಪ್ ರವರು ಆಸ್ಟ್ರೇಲಿಯನ್ ಓಪನ್ ಗೆಲ್ಲುವುದರ ಮೂಲಕ ಈ ವರ್ಷದ ಪಂದ್ಯವನ್ನು ಪ್ರಾರಂಭಿಸಿದರು. ಅದರಲ್ಲಿ ಸ್ಯಾಂಚೆಜ್‌ ವಿಕಾರಿಯೋ ಅವರನ್ನು ಅಂತಿಮ ಹಣಾಹಣಿಯಲ್ಲಿ ಸೋಲಿಸಿದರು. ನಂತರದ ನಾಲ್ಕು ಅವರು ಪಂದ್ಯಗಳನ್ನು ಸುಲಭವಾಗಿ ಗೆದ್ದರು. ೫೪ ನಿರಂತರ ಪಂದ್ಯದಲ್ಲಿ ಜಯಗಳಿಸಿದ ನಂತರ ಮಿಯಾಮಿ ಫೈನಲ್ ನಲ್ಲಿ ನತಾಶಾ ಜ್ವೆರೇವಾ ಅವರೊಂದಿಗಿನ ಈ ವರ್ಷದ ಮೊದಲ ಸೆಟ್ ಪಂದ್ಯದಲ್ಲಿ ಸೋತರು. ಹ್ಯಾಂಬರ್ಗ್ ಪೈನಲ್ ನಲ್ಲಿ ೩೬ ನಿರಂತರ ಪಂದ್ಯದಲಲ್ಲಿ ‍ಜಯಗಳಿಸಿದ ನಂತರ ೧೯೯೪ ರಲ್ಲಿ ಮೊದಲ ಬಾರಿಗೆ ಸಾಂಕೆಝ್ ವಿಕಾರಿಯೋ ಅವರೊಂದಿಗೆ ಮೂರು ಸೆಟ್‌ಗಳಲ್ಲಿ ಪರಾಭವ ಹೊಂದಿದರು. ನಂತರ ಅವರು ಎಂಟನೇ ಜರ್ಮನ್ ಓಪನ್ ಟೆನ್ನಿಸ್ ಪಂದ್ಯದಲ್ಲಿ ಗೆಲುವು ಸಾಧಿಸಿದರು. ಆದರೆ ಅವರು ಪ್ರಸ್ತುತ ಫಾರ್ಮ ಕಳೆದುಕೊಂಡಿದ್ದಾರೆಂಬುದಕ್ಕೆ ಸಂಕೇತದಂತೆ ಜೂಲೀ ಹಲಾರ್ಡ್‌ಗೆ ಹೆಚ್ಚುಕಡಿಮೆ ಎಲ್ಲಾ ಕ್ವಾರ್ಟರ್‍ ಫೈನಲ್ ಪಂದ್ಯಗಳನ್ನು ಸೋತರು. ಗ್ರಾಫ್ ಅವರು ನಂತರ ಮೇರಿ ಪಿಯರ್ಸ್‌ ರೊಂದಿಗೆ ಫ್ರೆಂಚ್ ಓಪನ್ ಸೆಮಿಫೈನಲ್ ನಲ್ಲಿ ಸೋತರು ಮತ್ತು ಇದೇ ರೀತಿ ಲೋರಿ ಮ್ಯಾಕ್‌ನೀಲ್‌ ರೊಂದಿಗೆ ಮೊದಲ ಸುತ್ತಿನ ವಿಂಬಲ್ಡನ್ ಪಂದ್ಯದಲ್ಲಿ ಸೋಲನುಭವಿಸಿದರು. ಇದು ಕಳೆದ ಹತ್ತು ವರ್ಷದ ಇತಿಹಾಸದಲ್ಲೇ ಮೊದಲ ಸುತ್ತಿನ ಗ್ರಾಂಡ್ ಸ್ಲಾಮ್ ಪಂದ್ಯದ ಮೊದಲ ಸೋಲಾಗಿತ್ತು. ಇದಾಗಿಯೂ ಗ್ರಾಫ್‌ ಸ್ಯಾನ್ ಡಿಯಾಗೋ ಪಂದ್ಯದಲ್ಲಿ ಗೆಲುವಿನಲ್ಲಿ ಮುಂದುವರಿದರು ಆದರೆ ದೀರ್ಘಕಾಲದಿಂದ ಬೆನ್ನುನೋವಿನಿಂದ ಬಳಲಿದ್ದರಿಂದ ಫೈನಲ್ ಪಂದ್ಯದಲ್ಲಿ ಸಾಂಕೆಝ್ ವಿಕಾರಿಯೋ ಅವರೊಂದಿಗೆ ಸೆಣಸಾಡುವುದು ಕಷ್ಟವಾಯಿತು.‍ ನಂತರ ಅವರು ಬೆನ್ನಿಗೆ ಬಿಗಿಪಟ್ಟಿಯನ್ನು ಧರಿಸಲು ಪ್ರಾರಂಭಿಸಿದರು ಮತ್ತು ಚಿಕಿತ್ಸೆ ಪಡೆಯುತ್ತಿರುವ ಅವಧಿಯಲ್ಲಿ ಯುಎಸ್ ಓಪನ್ ಪಂದ್ಯದಲ್ಲಿ ಆಡಲು ಆಯ್ಕೆ ಹೊಂದಿ ಪ್ರತಿ ಪಂದ್ಯದ ಎರಡು ಘಂಟೆ ಮೊದಲು ಮತ್ತೆ ಚಿಕಿತ್ಸೆ ನೀಡಿದರೂ ಆಟದಲ್ಲಿ ಭಾಗವಹಿಸುವುದು ಅನುಮಾನಾಸ್ಪದವಾಗಿತ್ತು. ಅವರು ಈ ಪಂದ್ಯವನ್ನು ಕೊನೆಯ ಪಂದ್ಯವಾಗಿ ತೆಗೆದುಕೊಂಡರು ಮತ್ತು ಸಾಂಕೆಝ್ ವಿಕಾರಿಯೋ ಅವರೊಂದಿಗಿನ ಮೊದಲ ಮೂರು ಸೆಟ್ ಪಂದ್ಯಗಳನ್ನು ಆಯ್ಕೆಮಾಡಿಕೊಂಡರು. ಇದು ಗ್ರಾಫ್ ರವರೊಂದಿಗೆ ಸಾಂಕೆಝ್ ವಿಕಾರಿಯೋ ರವರ ಕೊನೆಯ ಗೆಲುವಾಯಿತು. ಅವಳ ಬೆನ್ನುನೋವು ನಂತರದಲ್ಲಿ ಉಲ್ಬಣಗೊಂಡು ನಂತರದ ಎರಡು ಸೆಟ್ ಗಳನ್ನು ಸೋತರು. ನಂತರ ಒಂಬತ್ತು ವಾರಗಳ ವಿಶ್ರಾಂತಿಯ ನಂತರ ಕೇವಲ ವರ್ಜೀನಿಯಾ ಸ್ಲಿಮ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಮಾತ್ರ ಬಾಗವಹಿಸಿ ಕ್ವಾರ್ಟರ್‍ ಫೈನಲ್‌‍ನಲ್ಲಿ ಪಿಯರ್ಸ್‌‌‍ರವರೊಂದಿಗೆ ಸೋತರು.

ಗಾಯದ ಸಮಸ್ಯೆಯು ಗ್ರಾಫ್ ಅವರನ್ನು ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯದಿಂದ ಹೊರಗಿಟ್ಟಿತು. ಫ್ರೆಂಚ್ ಓಪನ್ ಮತ್ತು ವ್ಹಿಂಬಲ್ಡನ್ ಎರಡೂ ಪಂದ್ಯಗಳ ಫೈನಲ್‌ನಲ್ಲಿ ಅರಾಂತಕ್ಸಾ ವಿಕಾರಿಯೋ ಅವರೊಂದಿಗೆ ಸೆಣಸಲು ಗ್ರಾಫ್ ಅವರು ಪುನಃ ಕಣಕ್ಕಿಳಿದರು. ೧೯೯೩ ರ ದಾಳಿಯವರೆಗೆ ಯುಎಸ್ ಓಪನ್ ಪಂದ್ಯವು ಮೋನಿಕಾ ಸೆಲೆಸ್ ರವರ ಮೊದಲ ಗ್ರಾಂಡ್ ಸ್ಲಾಮ್ ಪಂದ್ಯವಾಗಿತ್ತು. ಗ್ರಾಫ್‌ ೭-೬,೦-೬,೬-೩ ಸೆಟ್ ಗಳಿಂದ ಜಯಗಳಿಸುವುದರ ಮೂಲಕ ಫೈನಲ್ ನಲ್ಲಿ ಸೆಲೆಸ್ ರವರೊಂದಿಗೆ ಮುಖಾಮುಖಿಯಾದರು. ನಂತರದ ವರ್ಷದಲ್ಲಿ ಗ್ರಾಫ್ ಅವರು ಕೊನೆಯ ೨ ಘಂಟೆ ೪೬ ನಿಮಿಷಗಳಲ್ಲಿ ಹಳ್ಳಿಯವರಾದ ಆಂಕೆ ಹ್ಯೂಬರ್ ನ ಐದು ಸೆಟ್ ಫೈನಲ್ ಪಂದ್ಯವನ್ನು ಸೆಣಸಿ ೬-೧,೨-೬,೬-೧,೪-೬,೬-೩ ಸೆಟ್ ಗಳಲ್ಲಿ ಜಯಗೊಳಿಸಿದರು. ಡಬ್ಲ್ಯು ಟಿ ಎ ಪ್ರವಾಸ ಪಂದ್ಯಗಳು..

ವ್ಯಕ್ತಿಗತವಾಗಿ ೧೯೯೫ ನೇ ವರ್ಷವು ಪ್ರಾಫ್ ಅವರಿಗೆ ಕಷ್ಟದಾಯಕ ವರ್ಷವಾಗಿತ್ತು. ಕಾರಣ ಜರ್ಮನ್ ಅಧಿಕಾರಿಗಳು ಹಿಂದಿನ ಹಲವು ವರ್ಷಗಳಿಂದ ವೃತ್ತಿ ಮತ್ತು ಆದಾಯದ ತೆರಿಗೆ ವಂಚನೆ ಮಾಡಿರುವ ಆರೋಪವನ್ನು ಹೊರಿಸಿದರು. ತನ್ನ ರಕ್ಷಣೆಗಾಗಿ ಅವರು ತನ್ನ ತಂದೆ ಪೀಟರ್‍ ರವರು ತನ್ನ ಅರ್ಥ ವ್ಯವಸ್ಥಾಪಕರಾಗಿದ್ದರು ಮತ್ತು ತನ್ನ ಗಳಿಕೆಗೆ ಸಂಬಂಧಿಸಿದ ಎಲ್ಲಾ ಆರ್ಥಿಕ ವ್ಯವಹಾರಗಳು ಅವರ ನಿಯಂತ್ರಣದಲ್ಲಿದ್ದವೆಂದು ಹೇಳಿಕೆ ನೀಡಿದರು. ಇದರ ಪರಿಣಾಮವಾಗಿ ೪೫ ತಿಂಗಳುಗಳ ಕಾಲ ಪೀಟರ್‍ ರವರನ್ನು ಜೈಲು ಶಿಕ್ಷೆಗೆ ಒಳಪಡಿಸಲಾಯಿತು. ಕೊನೆಯದಾಗಿ ಅವರು ೨೫ ತಿಂಗಳ ಜೈಲುವಾಸದ ನಂತರ ಬಿಡುಗಡೆ ಹೊಂದಿದನು. ಸ್ಟೆಫಿ ಗ್ರಾಫ್ ಅವರು ೧.೩ ಮಿಲಿಯನ್ ’ಡಚ್ ಮಾರ್ಕ್’ ಗಳಷ್ಟು ದಂಡ ಮತ್ತು ಅನಿರ್ಧಿಷ್ಟ ಮೊತ್ತದ ಚಾರಿಟಿ ಹಣವನ್ನು ಸರ್ಕಾರಕ್ಕೆ ಪಾವತಿಸಲು ಒಪ್ಪಿದ್ದರಿಂದ ೧೯೯೭ ರಲ್ಲಿ ಸಾರ್ವಜನಿಕ ಅಭಿಯೋಜಕರು ಅವರ ವಿರುದ್ಧದ ಮೊಕದ್ದಮೆಯನ್ನು ಕೈಬಿಟ್ಟರು.

ಗ್ರಾಫ್ ಅವರು ಪುನಃ ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯನ್ ಓಪನ್‌ ಪಂದ್ಯವನ್ನು ತಪ್ಪಿಸಿಕೊಂಡರು ಹಾಗೆಯೇ ಒಂದು ವರ್ಷದ ಮೊದಲು ಜಯಗಳಿಸಿದ್ದ ಗ್ರಾಂಡ್ ಸ್ಲಾಮ್ ಟೈಟಲ್ ಪಂದ್ಯವನ್ನು ಯಶಸ್ವಿಯಾಗಿ ಕಾಪಾಡಿಕೊಂಡರು. ಕ್ಲೋಸ್ ಫ್ರೆಂಚ್ ಓಪನ್‌ ಫೈನಲ್ ನಲ್ಲಿ ಗ್ರಾಫ್ ಪುನಃ ಅರಾಂತ್ಕ್ಸಾ ಸಾಂಕೆಝ್ ವಿಕಾರಿಯೋ ಅವರೊಂದಿಗೆ ೧೦-೮ರ ಮೂರನೇ ಸರಣಿಯಲ್ಲಿ ಮೇಲುಗೈ ಸಾಧಿಸಿದರು. ತದನಂತರ ನೇರ ಸೆಟ್ ಗಳಲ್ಲಿ ಸಾಂಕೆಝ್ ವಿಕಾರಿಯೋ ಅವರೊಂದಿಗೆ ವಿಂಬಲ್ಡನ್ ಫೈನಲ್ ನಲ್ಲಿ ಮತ್ತು ಮೋನಿಕಾ ಸೆಲೆಸ್ ರೊಂದಿಗೆ ಯುಎಸ್ ಓಪನ್‌ ಫೈನಲ್ ನಲ್ಲಿ ವಿಜಯಿಯಾದರು. ಗ್ರಾಫ್ ಅವರು ಐದನೇ ಮತ್ತು ಕೊನೆಯ ಚೇಸ್ ಛಾಂಪಿಯನ್‌ಶಿಪ್‌ನಲ್ಲಿ ಕೂಡಾ ಐದು ಸೆಟ್ ಗಳಿಂದ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ವಿಜಯಗಳಿಸಿದರು. ಎಡ ಮೊಣಕಾಲು ಗಾಯದ ಕಾರಣದಿಂದ ಅವರು ೧೯೯೬ ರಲ್ಲಿ ಅಟ್ಲಾಂಟಾದಲ್ಲಿ ಜರುಗಿದ ಬೇಸಿಗೆ ಓಲಂಪಿಕ್ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.[೧೩]

ಪ್ರವಾಸದ ಕೊನೆಯ ವರ್ಷ : ೧೯೯೭-೯೯

[ಬದಲಾಯಿಸಿ]

ಗ್ರಾಫ್ ರವರ ಕಳೆದ ಕೆಲವು ವೃತ್ತಿ ವರ್ಷಗಳು ಗಾಯಗಳಿಂದ ಅದರಲ್ಲೂ ಮುಖ್ಯವಾಗಿ ಬೆನ್ನು ಮತ್ತು ಮೊಣಕಾಲುಗಳ ಗಾಯದ ಸಮಸ್ಯೆಯಿಂದ ಮುಸುಕಿಹೋಗಿತ್ತು. ಅವರು ಮಾರ್ಟಿನಾ ಹಿಂಗಿಸ್ ರವರಿಂದ ಜಗತ್ತಿನ ಮೊದಲನೇ ಶ್ರೇಣಿ ಪದವಿಯನ್ನು ಕಳೆದುಕೊಂಡರು ಮತ್ತು ಹತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಗ್ರಾಂಡ್ ಸ್ಲಾಮ್ ಟೈಟಲ್ ಪ್ರಶಸ್ತಿ ಗಳಿಸಲು ವಿಫಲರಾದರು.[೧೪] ೧೯೯೭ ರಲ್ಲಿ ಗ್ರಾಫ್‌ ನಾಲ್ಕನೇ ಸುತ್ತಿನ ಆಸ್ಟ್ರೇಲಿಯನ್ ಓಪನ್ ಪಂದ್ಯವನ್ನು ೨-೬,೫-೭ ರ ನೇರ ಸರಣಿಗಳಿಂದ ಅಮಾಂದಾ ಕೋಟ್ಜರ್‍ ರವರಿಂದ ಪರಾಭವಗೊಂಡರು. ಹಲವು ತಿಂಗಳುಗಳ ಗಾಯದ ವಿಶ್ರಾಂತಿಯ ನಂತರ ಗ್ರಾಫ್ ಅವರು ಬರ್ಲಿನ್ ನಲ್ಲಿ ನಡೆದ ಜರ್ಮನ್ ಓಪನ್ ಟೆನ್ನಿಸ್ ಪಂದ್ಯದಲ್ಲಿ ಭಾಗವಹಿಸಲು ವಾಪಸ್ಸಾದರು ಮತ್ತು ಕ್ವಾರ್ಟರ್‍ ಫೈನಲ್ ನಲ್ಲಿ ತಾಯ್ನಾಡಿನ ಪ್ರೇಕ್ಷಕರೆದುರು ’ಅಮಾಂಡಾ ಕೋಟ್ಜರ್’ ರವರೊಂದಿಗೆ ಕೇವಲ ೫೬ ನಿಮಿಷದಲ್ಲಿ ೬-೦,೬-೧ ಸೆಟ್ ಗಳಿಂದ ತನ್ನ ಆಟದ ಇತಿಹಾಸದಲ್ಲೇ ಅತಿಹೆಚ್ಚು ಹೀನಾಯವಾಗಿ ಸೋಲನುಭವಿಸಿದರು.[೧೪][೧೫] ಪ್ರೆಂಚ್ ಓಪನ್ ಪಂದ್ಯದಲ್ಲಿ ಪುನಃ ಗ್ರಾಫ್‌ ’ಅಮಾಂಡಾ ಕೋಟ್ಜರ್’ ರೊಂದಿಗೆ ೬-೧,೬-೪ ರ ನೇರ ಸರಣಿಗಳಿಂದ ಸೋತರು.[೧೬] ನಂತರ ಗಾಯದ ಕಾರಣದಿಂದ ವ್ಹಿಂಬಲ್ಡನ್ ಪಂದ್ಯದಲ್ಲಿ ಬಾಗವಹಿಸಲು ನಿರಾಕರಿಸಿದರು.

೧೯೯೮ ರಲ್ಲಿ ಹೆಚ್ಚುಕಡಿಮೆ ಅರ್ಧ ಪ್ರವಾಸವನ್ನು ತಪ್ಪಿಸಿಕೊಂಡ ಬಳಿಕ ಗ್ರಾಫ್ ಅವರು ಜಗತ್ತಿನ ಎರಡನೇ ಶ್ರೇಣಿಯ ಆಟಗಾರ್ತಿ ಹಿಂಗಿಸ್ ಮತ್ತು ಮೊದಲನೇ ಶ್ರೇಣಿಯ ಲಿಂಡ್ಸೆ ‌ಡ್ಯಾವನ್‌ಪೋರ್ಟ್‌ ರವರನ್ನು ಫಿಲಿಡೆಲ್ಫಿಯಾ ಟೈಟಲ್ ಪಂದ್ಯದಲ್ಲಿ ಸೋಲಿಸಿದರು. ಚೇಸ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನ ಅಂತ್ಯದಲ್ಲಿ ಗ್ರಾಫ್‌ ವಿಶ್ವದ ಮೂರನೇ ಶ್ರೇಷ್ಟ ಆಟಗಾರ ಜನಾ ನೊವೊಟ್ನಾ ಅವರನ್ನು ಸೋಲಿಸಿದರು.

೧೯೯೯ ರ ಪ್ರಾರಂಭದಲ್ಲಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಅಬ್ಯಾಸ ಪಂದ್ಯದಲ್ಲಿ ಆಡಿದರು ಮತ್ತು ಸೆಮಿ ಫೈನಲ್‌‍ನಲ್ಲಿ ಲಿಂಡ್ಸೆ ‌ಡ್ಯಾವನ್‌ಪೋರ್ಟ್‌ ಅವರೊಂದಿಗೆ ಸೋಲುವ ಮೊದಲು ಎರಡನೇ ಸುತ್ತಿನಲ್ಲಿ ಸೆರೆನಾ ವ್ಹಿಲಿಯಮ್ಸ್ ಮತ್ತು ಕ್ವಾಟ್ರ್‍ ಫೈನಲ್‌‍ನಲ್ಲಿ ವೀನಸ್ ವ್ಹಿಲಿಯಮ್ಸ್ ಅವರನ್ನು ಸೋಲಿಸಿದರು. ನಂತರ ಗ್ರಾಫ್ ಅವರು ಆಸ್ಟ್ರೇಲಿಯಾ ಓಪನ್ ನಲ್ಲಿ ಮೋನಿಕಾ ಸೆಲೆಸ್ ಅವರೊಂದಿಗೆ ೭-೫,೬-೧ ರ ಅಂತರದಲ್ಲಿ ಸೋಲುವ ಮೊದಲು ಕ್ವಾರ್ಟರ್‍ ಪೈನಲ್ ಹಂತ ಪ್ರವೇಶಿಸಿದರು. ಪಂದ್ಯದ ನಂತರದ ಹೇಳಿಕೆಯಲ್ಲಿ ಗ್ರಾಫ್ ಅವರು ತಾನು ಆಟದ ಪ್ರಾರಂಭದಲ್ಲಿ ೧೯೯೮ ರ ಕೋರೆಲ್ ಡಬ್ಲ್ಯು ಟಿ ಎ ಚಾಂಪಿಯನ್ ಶಿಪ್ ಪೂರ್ವದ ಪಂದ್ಯದಲ್ಲಿ ಸೆಲೆಸ್ ರವರು ಹೇಗೆ ಸಮರ್ಥವಾಗಿ ಸೆಣೆಸಿದ್ದರು ಎಂಬ ನೆನಪು ಧೈರ್ಯಗುಂದಿಸಿತು ಎಂದು ತಿಳಿಸಿದರು.

೧೯೯೯ ರ ಫ್ರೆಂಚ್ ಓಪನ್ ನಲ್ಲಿ ಗ್ರಾಫ್ ಅವರು ಮೂರು ವರ್ಷಗಳಲ್ಲಿ ತಮ್ಮ ಮೊದಲ ಗ್ರಾಂಡ್ ಸ್ಲಾಮ್ ಫೈನಲ್ ಪ್ರವೇಶಿಸಿದರು ಮತ್ತು ಸರಣಿಗಳ ಮೂಲಕ ಪುನಃ ಹೋರಾಟಕ್ಕಿಳಿದರು. ಎಂದೂ ನೆನಪಿರುವ ಜಯ ಗಳಿಸುವ ಸಲುವಾಗಿ ಮೂರು ಸೆಟ್ ಗಳಲ್ಲಿ ಮೊದಲ ಶ್ರೇಣಿಯ ಆಟಗಾರ್ತಿ ಹಿಂಗಿಸ್ ಅವರನ್ನು ಸೋಲಿಸುವ ಉದ್ದೇಶದಿಂದ ಎರಡನೇ ಸರಣಿಯನ್ನು ಪುಡಿಗಟ್ಟಿದರು. ಗ್ರಾಫ್ ಕೂಡಾ ಓಪನ್‌ನ ಆರಂಭದ ದಿನಗಳಲ್ಲಿ ಗ್ರಾಂಡ್ ಸ್ಲಾಮ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಡವನ್ ಪೋರ್ಟರನ್ನು ಕ್ವಾರ್ಟರ್‍ ಫೈನಲ್ ನಲ್ಲಿ ಮತ್ತು ಮೂರನೇ ಶ್ರೇಯಾಂಕದ ಮೋನಿಕಾ ಸೆಲೆನ್ ರವರನ್ನು ಸೆಮಿಫೈನಲ್ ನಲ್ಲಿ ಸೋಲಿಸಿ ಮೊದಲ, ಎರಡನೇ ಮತ್ತು ಮೂರನೇ ಶ್ರೇಯಾಂಕದ ಆಟಗಾರರನ್ನು ಸೋಲಿಸಿದ ಮೊದಲ ಆಟಗಾರ್ತಿಯಾದರು. ಗ್ರಾಫ್ ಫೈನಲ್ ಪಂದ್ಯದ ನಂತರ ಇದು ತನ್ನ ನಿವೃತ್ತಿಯ ಬಗ್ಗೆ ಜೂಜು ಕಟ್ಟಿದವರಿಗೆ ಪುಷ್ಟಿದಾಯಕವಾದ ಕೊನೆಯ ಫ್ರೆಂಚ್ ಓಪನ್ ಪಂದ್ಯ ಎಂದು ಹೇಳಿದರು.[೧೭]

ಗ್ರಾಫ್ ಅವರು ಮಿಕ್ಸಡ್ ಡಬಲ್ಸನಲ್ಲಿ ಡವೆನ್ ಪೋರ್ಟ ರವರನ್ನು ೬-೪,೭-೫ ರ ಅಂತರದಿಂದ ಸೋಲಿಸಿ ತಮ್ಮ ಒಂಬತ್ತನೇ ವಿಂಬಲ್ಡನ್ ಸಿಂಗಲ್ಸ್ ಪಂದ್ಯಕ್ಕೆ ಪ್ರವೇಶಿಸಿದರು. ಜಾನ್ ಮ್ಯಾಕ್‌ಎನ್ರೋ ಅವರೊಂದಿಗೆ ಗ್ರಾಫ್ ಅವರು ಪಾಲುದಾರಿಕೆ ಹೊಂದಿದರು, ಆದರೆ ಸೆಮಿಫೈನಲ್ ಹಂತದಲ್ಲಿ ಮುಂಬರುವ ಸಿಂಗಲ್ಸ್ ಫೈನಲ್ ನಲ್ಲಿ ಆಟವಾಡಲು ತನ್ನ ಮೊಣಕಾಲುಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಡಬಲ್ಸ್ ನಿಂದ ಹಿಂದಕ್ಕೆ ಸರಿದರು.[೧೮]

ಅಗಸ್ಟ್ ೧೯೯೯ ರಲ್ಲಿ ಸಾನ್ ಡಿಗೋ ದಲ್ಲಿನ ಪಂದ್ಯದಿಂದ ನಿವೃತ್ತಿಯಾದ ನಂತರ ಗ್ರಾಫ್ ಅವರು ಮಹಿಳೆಯರ ವಿಭಾಗದ ಪ್ರವಾಸದಿಂದ ನಿವೃತ್ತಿ ಘೋಷಿಸಿದರು. ಆ ಸಮಯದಲ್ಲಿ ಅವರು ವಿಶ್ವದ ಮೂರನೇ ಶ್ರೇಯಾಂಕದ ಆಟಗಾರ್ತಿಯಾಗಿದ್ದರು. ಗ್ರಾಫ್ ಹೇಳುತ್ತಾರೆ, "ನಾನು ಟೆನ್ನಿಸ್‌‍ನಲ್ಲಿ ಏನು ಮಾಡಬೇಕೆಂದುಕೊಂಡಿದ್ದೆನೋ ಅದೆಲ್ಲವನ್ನೂ ಮಾಡಿದ್ದೇನೆ. ನಾನು ಇನ್ನೇನೂ ಸಾಧಿಸುವುದು ಉಳಿದಿಲ್ಲ. ೧೯೯೯ರ ವ್ಹಿಂಬಲ್ಡನ್ ಪಂದ್ಯ ಪೂರ್ವದ ವಾರವು ನನಗೆ ಸುಲುಭವಾದ ದಿನಗಳಾಗಿರಲಿಲ್ಲ. ನಾನು ಎಲ್ಲೂ ಹೆಚ್ಚಾಗಿ ವಿನೋದದಿಂದ ಇರಲಿಲ್ಲ. ವ್ಹಿಂಬಲ್ಡನ್ ನಂತರ ನನ್ನ ವೃತ್ತಿಯಲ್ಲಿಯೇ ಮೊದಲ ಬಾರಿಗೆ, ಪಂದ್ಯಗಳಿಗೆ ಹೋಗುತ್ತಿದ್ದೇನೆಂದು ಅಂದುಕೊಂಡಿರಲಿಲ್ಲ. ಇದು ಹಿಂದೆ ಹೇಗಿತ್ತು ಎನ್ನುವುದು ನನಗೆ ಸ್ಪೂರ್ತಿದಾಯಕ ವಿಷಯವಾಗಿರಲಿಲ್ಲ".[೧೯]

ನಿವೃತ್ತಿ ನಂತರದ ಚಟುವಟಿಕೆಗಳು

[ಬದಲಾಯಿಸಿ]

ಗ್ರಾಫ್ ಹೌಸ್ಟನ್ ರಾಂಗ್ಲರ್ಸ್ ತಂಡದ ವಲ್ಡ್ ಟೀಮ್ ಟೆನಿಸ್‌ನ ಒಂದು ಟೈನಲ್ಲಿ ಭಾಗವಹಿಸಿದರು. ಅದರಲ್ಲಿ ಮೂರು ಆಟಗಳಲ್ಲಿ ಎರಡರಲ್ಲಿ ಸೋಲಿಸಲ್ಪಟ್ಟರು. ಪ್ರತೀ ಮ್ಯಾಚ್ ಒಂದು ಸೆಟ್‌ನದಾಗಿತ್ತು. ಗ್ರಾಫ್ ಸಿಂಗಲ್ಸ್ ಮ್ಯಾಚಿನಲ್ಲಿ ಎಲೆನಾ ಲಿಖೊವ್ತ್‌ಸೇವಾ ರಿಂದ ೫-೪ ರಿಂದ ಸೋತರು. ಆಕೆ ಅನ್ಸ್‌ಲೇ ಕಾರ್ಗಿಲ್‌ ಜೊತೆಯಾಗಿ ಮಹಿಳೆಯರ ಡಬಲ್ಸ್‌‍ನಲ್ಲಿ ಅನ್ನಾ ಕಾರ್ನಿಕೋವಾ ಮತ್ತು ಲಿಖೋವ್‌ತ್ಸೇವಾ ಜೊತೆ ಆಡಿ ೫-೨ ರಿಂದ ಸೋತರು. ಆದರೂ, ಆಕೆ ಮಿಶ್ರ ಡಬಲ್ಸ್‌ನಲ್ಲಿ ಗೆದ್ದರು. ನಂತರದಲ್ಲಿ ಆಕೆ ಮತ್ತೆ ಟೆನಿಸ್‌ಗೆ ಮರಳುವುದಿಲ್ಲ ಎಂದು ಹೇಳಿಕೊಂಡರು. "ಈವರೆಗೆ ಎಲ್ಲವೂ ತುಂಬಾ ಆನಂದದಾಯಕವಾಗಿತ್ತು. ಆದರೆ ಅದು ನಾನಂದುಕೊಂಡಂತಿರಲಿಲ್ಲ."[ಸೂಕ್ತ ಉಲ್ಲೇಖನ ಬೇಕು]

ಗ್ರಾಫ್ ಸಿಂಗಲ್ಸ್ ಪ್ರದರ್ಶನ ಪಂದ್ಯವನ್ನು ಕಿಮ್ ಕ್ಲಿಸ್ಟರ್ಸ್‌ ಮತ್ತು ಒಂದು ಮಿಶ್ರ ಡಬಲ್ಸ್‌ನಲ್ಲಿ ತನ್ನ ಪತಿಯಾದ ಆ‍ಯ್‌೦ಡ್ರೆ ಅಗಾಸ್ಸಿಯೊಂದಿಗೆ ಟಿಮ್ ಹೆನ್‌ಮನ್‌ ಮತ್ತು ಕ್ಲಿಸ್ಟರ್ಸ್ ಜೊತೆಗೆ ಆಟವಾಡಿದರು. ಇದು ಒಂದು ಟೆಸ್ಟ್ ಕಾರ್ಯಕ್ರಮ ಮತ್ತು ವಿಂಬಲ್ಡನ್‌ನ ಸೆಂಟರ್ ಕೋರ್ಟ್‌ನಲ್ಲಿ ಹೊಸ ಮೇಲ್ಚಾವಣಿ ಹಾಕಿದ ಆಚರಣೆಗಾಗಿ ಆಡಿಸಲ್ಪಟ್ಟಿತು. ಆಕೆ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಸೋತರು.

ಗ್ರಾಫ್ ವಾಷಿಂಗ್‌ಟನ್, ಡಿ.ಸಿ.ಯಲ್ಲಿ ನಡೆದ ವಲ್ಡ್ ಟೀಮ್ ಟೆನಿಸ್‌ ಸ್ಮ್ಯಾಶ್ ಹಿಟ್ಸ್ ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸಿದ್ದರು. ಇದು ಎಲ್ಟನ್ ಜಾನ್ ಏಡ್ಸ್ ಫೌಂಡೇಶನ್ ಸಹಾಯಾರ್ಥ ಪಂದ್ಯವಾಗಿತ್ತು. ಆಕೆ ಮತ್ತು ಗಂಡ ಆ‍ಯ್‌೦ಡ್ರೆ ಅಗಾಸ್ಸಿ ಟೀಮ್ ಎಲ್ಟನ್ ಜಾನ್‌ ತಂಡದಲ್ಲಿದ್ದು ಬಿಲ್ಲಿ ಜೀನ್ ಕಿಂಗ್ ತಂಡದ ವಿರುದ್ಧ ಆಡಿದರು‌. ಗ್ರಾಫ್ ಸೆಲೆಬ್ರಿಟಿ ಡಬಲ್ಸ್‌, ಮಹಿಳೆಯರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಆಡಿದರು ಮತ್ತು ನಂತರ ಆಕೆಯ ಮೀನಖಂಡದ ಸೆಳೆತದಿಂದಾಗಿ ಅವರ ಬದಲು ಅನ್ನಾ ಕಾರ್ನಿಕೋವಾ ಆಡಿದರು.

ಕ್ರೀಡಾ ಜೀವನದ ಸಾರಾಂಶ

[ಬದಲಾಯಿಸಿ]

ಗ್ರಾಫ್ ಅವರು ಏಳು ಸಿಂಗಲ್ ಟೈಟಲ್‌ಗಳನ್ನು ವಿಂಬಲ್ಡನ್‌ನಲ್ಲಿ, ಫ್ರೆಂಚ್ ಓಪನ್‌ನಲ್ಲಿ ಆರು ಸಿಂಗಲ್ ಟೈಟಲ್‌ಗಳನ್ನು, ಯುಎಸ್ ಓಪನ್‌ನಲ್ಲಿ ಐದು ಸಿಂಗಲ್ ಟೈಟಲ್‌ಗಳನ್ನು, ಮತ್ತು ಆಸ್ಟ್ರೇಲಿಯನ್ ಓಪನ್‌ನಲ್ಲಿ ನಾಲ್ಕು ಸಿಂಗಲ್ ಟೈಟಲ್‌ಗಳನ್ನು ಗೆದ್ದಿದ್ದಾರೆ. ಒಟ್ಟು ೫೬ ಗ್ರ್ಯಾಂಡ್ ಸ್ಲ್ಯಾಮ್‌ ಕ್ರೀಡಾವಳಿಗಳಲ್ಲಿ ಅವರ ದಾಖಲೆಯು ೨೮೨-೩೪ (ಶೇಕಡಾ ೮೯) (ಫ್ರೆಂಚ್ ಓಪನ್‌ ೮೭-೧೦, ವಿಂಬಲ್ಡನ್ನಲ್ಲಿ‌ ೭೫-೮, ಯುಎಸ್ ಓಪನ್‌ ೭೩-೧೦, ಮತ್ತು ಆಸ್ಟ್ರೇಲಿಯನ್ ಓಪನ್‌ನಲ್ಲಿ ೪೭-೬). ಆಕೆಯ ಕ್ರೀಡಾ ಅವಧಿಯಲ್ಲಿ ಒಟ್ಟು ಗಳಿಕೆಯು ಯುಎಸ್$೨೧,೮೯೫,೨೭೭ (ಲಿಂಡ್ಸೆ ಡ್ಯಾವನ್‌ಪೋರ್ಟ್‌ ಈ ಮೊತ್ತವನ್ನು ಜನವರಿ ೨೦೦೮ರಲ್ಲಿ ದಾಟಿದರು). ಆಕೆಯ ಸಿಂಗಲ್ಸ್ ಗೆಲುವು-ಸೋಲು ದಾಖಲೆಯು ೯೦೦-೧೧೫ (ಶೇಕಡಾ ೮೮.೭).[೨೦] ಆಕೆ ನಿರಂತರ ೧೮೬ ವಾರಗಳವರೆಗೆ ಜಗತ್ತಿನ ನಂ. ೧ ಆಗಿದ್ದರು (ಆಗಸ್ಟ್ ೧೯೮೭ ರಿಂದ ಮಾರ್ಚ್ ೧೯೯೧ರ ವರೆಗೆ, ಮಹಿಳೆಯರ ಟೆನಿಸ್‌ನಲ್ಲಿ ಈ ದಾಖಲೆ ಇನ್ನೂ ಇದೆ) ಮತ್ತು ಒಟ್ಟಾರೆ ೩೭೭ ವಾರಗಳವರೆಗೆ. ಅಷ್ಟಲ್ಲದೇ ಗ್ರಾಫ್ ೧೧ ಡಬಲ್ ಟೈಟಲ್‌ಗಳನ್ನು ಕೂಡಾ ಗೆದ್ದಿದ್ದಾರೆ.

ದಾಖಲೆಗಳು

[ಬದಲಾಯಿಸಿ]
  • ಈ ದಾಖಲೆಗಳು ಓಪನ್ ಟೆನ್ನಿಸ್‌ನ ಯುಗದಲ್ಲಿ ಸಾಧಿಸಲ್ಪಟ್ಟವು.
ಕ್ರೀಡೆ(ಗಳು) ಸಾಧಿಸಿದ ದಾಖಲೆ ಜೊತೆಗಾರ ಆಟಗಾರ
1988 ಗೋಲ್ಡನ್ ಸ್ಲ್ಯಾಮ್‌ ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಮತ್ತು ಓಲಂಪಿಕ್ ಗೋಲ್ಡ್ ಮೆಡಲ್ ಗೆದ್ದರು ಅದ್ವಿತೀಯ
1999 ಫ್ರೆಂಚ್ ಓಪನ್‌ (1987–1999) 22 ಗ್ರ್ಯಾಂಡ್ ಸ್ಲ್ಯಾಮ್‌ ಗೆಲುವುಗಳು ಅದ್ವಿತೀಯ
1988 ಫ್ರೆಂಚ್ ಓಪನ್‌ ಗ್ರ್ಯಾಂಡ್ ಸ್ಲ್ಯಾಮ್‌ ಅಂತಿಮ ಹಣಾಹಣಿಯಲ್ಲಿ ಡಬಲ್ ಬ್ಯಾಬೆಲ್‌ ಗೆಲುವು ಅದ್ವಿತೀಯ
1995 ಯುಎಸ್ ಓಪನ್‌ ಪ್ರತೀ ಗ್ರ್ಯಾಂಡ್ ಸ್ಲ್ಯಾಮ್‌ ಟೈಟಲ್‌ನೂ ಕನಿಷ್ಟ ನಾಲ್ಕುಬಾರಿಯಂತೆ ಗೆದ್ದಿರುವುದು ಅದ್ವಿತೀಯ
ಫ್ರೆಂಚ್ ಓಪನ್‌ (1987) – ಫ್ರೆಂಚ್ ಓಪನ್‌ (1990) 13 ಬಾರಿ ಕ್ರಮಾನುಗತವಾಗಿ ಗೆಲುವು
ಗ್ರ್ಯಾಂಡ್ ಸ್ಲ್ಯಾಮ್ ಅಂತಿಮ ಪಂದ್ಯಗಳು
ಅದ್ವಿತೀಯ
ಆಸ್ಟ್ರೇಲಿಯನ್ ಓಪನ್‌ (1988–1990) 3 ಬಾರಿ ಕ್ರಮಾನುಗತವಾಗಿ ಗೆಲುವು ಮಾರ್ಗರೇಟ್ ಕೋರ್ಟ್ ಇವಾನೆ ಗೂಲಗಾಂಗ್ ಕಾವ್ಲೇ ಮೋನಿಕಾ ಸೆಲೆಸ್ ಮಾರ್ಟಿನಾ ಹಿಂಗಿಸ್
ಆಸ್ಟ್ರೇಲಿಯನ್ ಓಪನ್‌ (1988, 89, 94) ಮೂರು ಬಾರಿ ಆಸ್ಟ್ರೇಲಿಯನ್ ಓಪನ್‌‌ನಲ್ಲಿ ನೇರ ಸೆಟ್ಟುಗಳಿಂದ ಗೆಲುವು ಇವಾನೆ ಗೂಲಗಾಂಗ್‌
ಫ್ರೆಂಚ್ ಓಪನ್‌ (1987–1999) ಒಟ್ಟು 9 ಬಾರಿ ಅಂತಿಮ ಹಣಾಹಣಿಗೆ ಕ್ರಿಸ್ ಇವರ್ಟ್‌‌
ಫ್ರೆಂಚ್ ಓಪನ್‌ (1987–1990) 4 ಬಾರಿ ಕ್ರಮಾನುಗತವಾಗಿ ಅಂತಿಮ ಹಣಾಹಣಿಗೆ ಕ್ರಿಸ್ ಇವರ್ಟ್‌‌
ಮಾರ್ಟಿನಾ ನವ್ರಾಟಿಲೋವಾ
1987, 1989 ಒಂದು ಕ್ಯಾಲೆಂಡರ್ ವರ್ಷದಲ್ಲಿ ನಡೆದ ಎಲ್ಲಾ ಟೂರ್ನಿಮೆಂಟುಗಳಲ್ಲಿ ಫೈನಲ್ ತಲುಪಿದ್ದು. ಅದ್ವಿತೀಯ
ಗ್ರಾಂಡ್‌ ಸ್ಲ್ಯಾಮ್‌ (6) ಕ್ಯಾಲೆಂಡರ್ ವರ್ಷ ಗ್ರ್ಯಾಂಡ್ ಸ್ಲ್ಯಾಮ್‌ ಮಾರ್ಗರೇಟ್ ಕೋರ್ಟ್‌ ಮೌರೀನ್ ಕೊನೊಲ್ಲಿ ಬ್ರಿಂಕರ್‌
ಆಸ್ಟ್ರೇಲಿಯನ್ ಓಪನ್‌ (1988), ಫ್ರೆಂಚ್ ಓಪನ್‌ (1988), ಯುಎಸ್ ಓಪನ್‌ (1996) ಮೂರು ವಿಭಿನ್ನ ಗ್ರ್ಯಾಂಡ್ ಸ್ಲ್ಯಾಮ್‌‌ಗಳನ್ನು ನೇರ ಸೆಟ್‌ಗಳಲ್ಲಿ ಗೆದ್ದಿದ್ದು ಕ್ರಿಸ್ ಇವರ್ಟ್‌‌ ಲಿಂಡ್ಸೆ ಡ್ಯಾವನ್‌ಪೋರ್ಟ್‌
ಆಸ್ಟ್ರೇಲಿಯನ್ ಓಪನ್‌ (1988), ಫ್ರೆಂಚ್ ಓಪನ್‌ (1988) ಎರಡು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ನೇರ ಸೆಟ್‌ಗಳಿಂದ ಗೆದ್ದದ್ದು. ಬಿಲ್ಲಿ ಜೀನ್ ಕಿಂಗ್‌ ಮಾರ್ಟಿನಾ ನವ್ರಾಟಿಲೋವಾ ಮಾರ್ಟಿನಾ ಹಿಂಗಿಸ್‌ ಸೆರೆನಾ ವಿಲಿಯಮ್ಸ್‌ ಜಸ್ಟಿನ್ ಹೆನಿನ್‌

ವೃತ್ತಿಜೀವನದ ಅಂಕಿಅಂಶಗಳು

[ಬದಲಾಯಿಸಿ]

ಆಡುವ ಶೈಲಿ

[ಬದಲಾಯಿಸಿ]

ಗ್ರಾಫ್ ಅವರ ಪ್ರಮುಖ ಅಸ್ತ್ರವೆಂದರೆ ಆಕೆಯ ಕಾಲಿನ ವೇಗ ಮತ್ತು ಪ್ರಭಲವಾದ ಇನ್‌ಸೈಡ್-ಔಟ್ ಫೋರ್‌ಹ್ಯಾಂಡ್ ಡ್ರೈವ್. ಇದರಿಂದಾಗಿ ಆಕೆಯನ್ನು ಮೊನಿಕರ್ "ಫ್ರಾಲಿನ್ ಫೋರ್‌ಹ್ಯಾಂಡ್," ಎಂದು ಕರೆಯಲಾಯಿತು.[೨೧] ಆಕೆ ಹೆಚ್ಚಾಗಿ ತಾನು ಬ್ಯಾಕ್‌ಹ್ಯಾಂಡ್ ಕಾರ್ನರಿನಲ್ಲಿ ನಿಲ್ಲುತ್ತಿದ್ದರು, ಮತ್ತು ಇದರಿಂದಾಗಿ ಆಕೆಯ ಫೋರ್‌ಹ್ಯಾಂಡ್ ಸ್ಥಳವು ಖಾಲಿಯಿದ್ದು, ದಾಳಿಗೆ ಅವಕಾಶ ನೀಡುತ್ತಿದ್ದರೂ, ಆಕೆಯ ವೇಗವು ಹೇಗಿತ್ತೆಂದರೆ, ಫೋರ್‌ಹ್ಯಾಂಡ್ ಸ್ಥಳಕ್ಕೆ ಕೇವಲ ತುಂಬ ನಿಖರವಾದ ಹೊಡೆತಗಳು ಮಾತ್ರ ಆಕೆಯನ್ನು ಕೈ ತಪ್ಪಿಸಬಹುದಾಗಿತ್ತು.

ಗ್ರಾಫ್ ತುಂಬ ಶಕ್ತಿಯುತವಾದ ಬ್ಯಾಕ್‌ಹ್ಯಾಂಡ್ ಡ್ರೈವ್ ಮಾಡುತ್ತಿದ್ದರಾದರೂ ಕ್ರೀಡೆಯಲ್ಲಿ ವರ್ಷಗಳು ಕಳೆದಂತೆ ಆ ಪ್ರಕಾರವನ್ನು ಆಕೆ ತುಂಬ ಕಡಿಮೆ ಬಳಸಲು ಆರಂಭಿಸಿದರು ಮತ್ತು ಬ್ಯಾಕ್‌ಹ್ಯಾಂಡ್ ಸ್ಲೈಸ್ ಅನ್ನು ಹೆಚ್ಚಾಗಿ ಬಳಸಲಾರಂಭಿಸಿದರು. ಬೇಸ್‌ಲೈನ್ ರೇಲಿಗಳಲ್ಲಿ ಆಕೆ ಈ ಸ್ಲೈಸ್ ಹೊಡೆತವನ್ನು ಅತ್ಯಂತ ವಿಶೇಷವಾಗಿ ನಡೆಸುತ್ತಿದ್ದರು. ಕೋರ್ಟ್‌ನ ಒಳಗೆ ಮತ್ತು ಪರಿಧಿಯ ಬಳಿಯಲ್ಲಿ ಸ್ಲೈಸ್ ಹೊಡೆತದಲ್ಲಿ ಆಕೆಯ ನಿಖರತೆ ಮತ್ತು ಚೆಂಡನ್ನು ತೇಲಿಸಿ ಅದರ ವೇಗವನ್ನು ಕಡಿಮೆಗೊಳಿಸುವ ಹಾಗೂ ಕೆಳಮಟ್ಟಕ್ಕಿಳಿಸುವ ಸಾಮರ್ಥ್ಯವು ಯಾವಾಗಲೂ ಚೆಂಡನ್ನು ಎದುರಾಳಿಯ ಫೋರ್‌ಹ್ಯಾಂಡ್ ಸ್ಥಳದಲ್ಲಿಯೇ ಬೀಳಿಸುವಂತೆ ಮಾಡುವುದನ್ನು ಸಾಧ್ಯವಾಗಿಸುತ್ತಿತ್ತು.

ಆಕೆಯ ಶಕ್ತಿಯುತ ಮತ್ತು ನಿಖರವಾದ ಸರ್ವ್ 180 km/h (110 mph) ವರೆಗಿತ್ತು, ಮತ್ತು ಮಹಿಳಾ ಟೆನಿಸ್‌ನಲ್ಲಿಯೇ ಆಕೆ ಅತ್ಯಂತ ವೇಗದ ಸರ್ವ್‌ಗಳನ್ನು ಮಾಡುತ್ತಿದ್ದರು ಮತ್ತು ಆಕೆ ಅತ್ಯಂತ ಸಮರ್ಥ ವಾಲಿಯರ್ ಆಗಿದ್ದರು.

ವೈಯಕ್ತಿಕ ಜೀವನ

[ಬದಲಾಯಿಸಿ]

೧೯೯೦ರ ದಶಕದಲ್ಲಿ, ಆಕೆ ರೇಸಿಂಗ್ ಕಾರ್ ಡ್ರೈವರ್ ಮೈಖೆಲ್ ಬಾರ್ಟೆಲ್ಸ್ ಜೊತೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದರು.[೨೨]

ನಂತರ ಅವರು ಆ‍ಯ್‌೦ಡ್ರೆ ಅಗಾಸ್ಸಿ ಯನ್ನು ಅಕ್ಟೋಬರ್ ೨೨, ೨೦೦೧ ರಂದು ಮದುವೆಯಾಗಿದ್ದು, ಆಗ ಸಾಕ್ಷಿಗಾಗಿ ಅವರ ತಾಯಂದಿರು ಮಾತ್ರ ಇದ್ದರು.[೨೩] ಆನಂತರ ನಾಲ್ಕು ದಿನಗಳಲ್ಲಿ, ನಿರ್ದಿಷ್ಟ ದಿನಕ್ಕಿಂತ ಆರು ವಾರಕ್ಕೆ ಮೊದಲು, ಆಕೆ ಮಗ ಜೇಡೆನ್ ಗಿಲ್‌ಗೆ ಜನ್ಮ ನೀಡುತ್ತಾರೆ. ಅವರ ಮಗಳು, ಜಾಜ್ ಎಲ್ಲೆ, ಅಕ್ಟೋಬರ್ ೩, ೨೦೦೩ ರಂದು ಜನಿಸಿದರು.

೧೯೯೧ರಲ್ಲಿ ಲೀಪ್‌ಜಿಗ್‌ನಲ್ಲಿ ಸ್ಟೆಫಿ ಗ್ರಾಫ್‌ ಯೂತ್ ಟೆನಿಸ್ ಸೆಂಟರ್ ಸಾರ್ವಜನಿಕ ಬಳಕೆಗೆ ಬಿಡುಗಡೆಯಾಗುತ್ತದೆ.[೨೪] ಆಕೆ "ಚಿಲ್ಡ್ರನ್ ಫಾರ್ ಟುಮಾರೊ" ಎಂಬ ಲಾಭರಹಿತ ಸಂಸ್ಥೆಗೆ ಪ್ರವರ್ತಕಿ ಮತ್ತು ಮುಖ್ಯಸ್ಥೆಯಾಗಿದ್ದು, ಇದು ಯುದ್ಧ ಮತ್ತು ಇತರೆ ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ನರಳಿದ ಮಕ್ಕಳ ಅಭಿವೃದ್ಧಿಗಾಗಿ ಇರುವ ಸಂಸ್ಥೆಯಾಗಿದೆ.[೨೪]

ಟಿಪ್ಪಣಿಗಳು ಮತ್ತು ಆಕರಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on ಜನವರಿ 8, 2010. Retrieved ಫೆಬ್ರವರಿ 28, 2011. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. "ಸ್ಟೆಫಿ ಗ್ರಾಫ್". Archived from the original on ಡಿಸೆಂಬರ್ 30, 1996. Retrieved ಫೆಬ್ರವರಿ 28, 2011.
  3. ಆನ್ ಟೆನ್ನಿಸ್; ಗ್ರಾಫ್ ಇಸ್ ಬೆಸ್ಟ್, ರೈಟ್?ಜಸ್ಟ್ ಡೊಂಟ್ ಆಸ್ಕ್ ಹರ್
  4. ಆನ್ ಟೆನ್ನಿಸ್; ಗ್ರಾಫ್ ಇಸ್ ಬೆಸ್ಟ್, ರೈಟ್?ಜಸ್ಟ್ ಡೊಂಟ್ ಆಸ್ಕ್ ಹರ್
  5. "Tennis Players of the Century". AugustaSports.com. Archived from the original on ಮೇ 21, 2007. Retrieved ಏಪ್ರಿಲ್ 24, 2007. {{cite web}}: Italic or bold markup not allowed in: |publisher= (help); More than one of |archivedate= and |archive-date= specified (help); More than one of |archiveurl= and |archive-url= specified (help)
  6. "Exclusive Interview with Steve Flink about the career of Chris Evert". ChrisEvert.net. Retrieved ಏಪ್ರಿಲ್ 23, 2007. {{cite web}}: Italic or bold markup not allowed in: |publisher= (help)
  7. ಸ್ಟೆಫಿ ಗ್ರಾಫ್: ದಿ ಗೊಲ್ಡನ್ ಸ್ಲ್ಯಾಮ್
  8. ೮.೦ ೮.೧ ೮.೨ ಟೆನ್ನಿಸ್; ಗ್ರಾಫ್ ಶಟ್ಸ್ ಅವುಟ್ ಜ್ವೆರೆವ ಟು ಗೇನ್ ಫ್ರೆಂಚ್ ಓಪನ್‌ ಟೈಟಲ್
  9. "ಆಸ್ಟ್ರೇಲಿಯನ್ ಟೆನ್ನಿಸ್", ಮಾರ್ಚ್, ೧೯೮೯, p. ೨೮
  10. ಗ್ರಾಫ್ ಟ್ರೌಂಸಸ್ ಗ್ಯಾರಿಸನ್
  11. "ಹೆಡ್ ಟು ಹೆಡ್". Archived from the original on ಡಿಸೆಂಬರ್ 26, 2008. Retrieved ಫೆಬ್ರವರಿ 9, 2023. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  12. ಟೆನ್ನಿಸ್; ಗ್ರಾಫ್‌ರ ಅತಿ ಬಲವಾದ ವೈರಿ: ದಿ ಪ್ರೆಸ್
  13. ಒಲಂಪಿಕ್ಸ್; ಗಾಯಗಳ ಕಾರಣ ಸ್ಯಾಂಪ್ರಾಸ್ ಹಾಗೂ ಗ್ರಾಫ್ ಆಟಗಳನ್ನು ಮಧ್ಯೆ ಬಿಟ್ಟುಬಿಡಬೇಕಾಯಿತು
  14. ೧೪.೦ ೧೪.೧ http://amandacoetzer.tripod.com/sked97.htm
  15. http://www.quotesquotations.com/biography/amanda-coetzer-biography/
  16. http://www.sporting-heroes.net/tennis-heroes/displayhero.asp?HeroID=೧೯೪೦
  17. "ಗ್ರಾಫ್ ಹಿಂಗಿಸ್ ಅನ್ನು ಅಂಚಿನಿಂದ ಸೋಲಿಸಿ, ಆರನೇಯ ಹಾಗೂ 'ಕೊನೆಯ' ಫ್ರೆಂಚ್ ಪಧವಿಯನ್ನು ಗೆಲ್ಲಿದರು". Archived from the original on ಜನವರಿ 22, 2012. Retrieved ಫೆಬ್ರವರಿ 28, 2011.
  18. "ಟೆನ್ನಿಸ್: ವಿಂಬಲ್ಡನ್ 99 - ಮ್ಯಾಖ್‌ಎನ್ರೊ ಹಾಗೂ ಗ್ರಾಫ್‌ರ ಮ್ಯಾಜಿಕ್ ಮಿಕ್ಸಚರ್". Archived from the original on ಜನವರಿ 4, 2009. Retrieved ಫೆಬ್ರವರಿ 28, 2011.
  19. ಸ್ಟೆಫಿ ಗ್ರಾಫ್ ನಿವೃತ್ತಿಯನ್ನು ಘೋಷಿಸುತ್ತಾರೆ
  20. "ಸ್ಟೆಫಿ ಗ್ರಾಫ್‌ನ WTA ಪ್ರೊಫೈಲ್". Archived from the original on ಜನವರಿ 8, 2010. Retrieved ಫೆಬ್ರವರಿ 28, 2011. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  21. "Wimbledon legends: Steffi Graf". BBC News. ಮೇ 31, 2004. Retrieved ಏಪ್ರಿಲ್ 1, 2010.
  22. ಕ್ರೀಡಾಂಗಣದ ಅಧಿಪತಿಯಿಂದ ಮುದ್ದಾದ ತಾಯಿ, ಎಲ್ಲ ಗ್ರಾಫ್‍ನ ಲಾವಣ್ಯತೆ
  23. ಆಂಡ್ರೆ ಅಗಾಸ್ಸಿ ಹಾಗೂ ಸ್ಟೆಫಿ ಗ್ರಾಫ್ ವಿವಾಹ
  24. ೨೪.೦ ೨೪.೧ "ಸ್ಟೆಫಿ ಗ್ರಾಫ್ WTA ಬೈಯೊ". Archived from the original on ಸೆಪ್ಟೆಂಬರ್ 21, 2021. Retrieved ಫೆಬ್ರವರಿ 28, 2011. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)


ಇವನ್ನೂ ನೋಡಿ

[ಬದಲಾಯಿಸಿ]
  • ಗ್ರಾಫ್-ನವ್ರಾಟಿಲೊವಾ ವೈರತ್ವ
  • ಗ್ರಾಫ್-ಸಬಾಟಿನಿ ವೈರತ್ವ

ಬಾಹ್ಯ ಕೊಂಡಿಗಳು

[ಬದಲಾಯಿಸಿ]