ವಿಷಯಕ್ಕೆ ಹೋಗು

ವೆಸ್ಟ್‌ಮಿನಿಸ್ಟರ್‌ ಅರಮನೆ

Coordinates: 51°29′57.5″N 00°07′29.1″W / 51.499306°N 0.124750°W / 51.499306; -0.124750
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯುನೆಸ್ಕೊ ವಿಶ್ವ ಪರಂಪರೆಯ ತಾಣ
Westminster Palace, Westminster Abbey and Saint Margaret's Church
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು
Photograph
The Palace of Westminster and Westminster Bridge viewed from across the River Thames

ಪ್ರಕಾರCultural
ಮಾನದಂಡಗಳುi, ii, iv
ಉಲ್ಲೇಖ426
ಯುನೆಸ್ಕೊ ಪ್ರದೇಶEurope and North America
ದಾಖಲೆಯ ಇತಿಹಾಸ
Inscription1987 (11th ಸಮಾವೇಶ)

ವೆಸ್ಟ್‌ಮಿನಿಸ್ಟರ್‌ ಅರಮನೆ ಯನ್ನು ಸಂಸತ್ತು ಭವನಗಳು ಅಥವಾ ವೆಸ್ಟ್‌ಮಿನಿಸ್ಟರ್‌ ಅರಮನೆ ಎಂದೂ ಸಹ ಕರೆಯಲಾಗುತ್ತದೆ. ಇದು ಯುನೈಟೆಡ್ ಕಿಂಗ್ಡಮ್ ಸಂಸತ್ತಿನ ಎರಡೂ ಸದನಗಳು ಸಭೆ ಸೇರುವ ಕೇಂದ್ರ ಸ್ಥಳವಾಗಿದೆ— ಹೌಸ್ ಆಫ್ ಲಾರ್ಡ್ಸ್ ಹಾಗು ಹೌಸ್ ಆಫ್ ಕಾಮನ್ಸ್. ಇದು ವೆಸ್ಟ್‌ಮಿನಿಸ್ಟರ್ ನಗರದಲ್ಲಿರುವ ಲಂಡನ್ ಬರೋನ ಪೌರಾಡಳಿತ ಪ್ರದೇಶದ ಹೃದಯಭಾಗದಲ್ಲಿದ್ದು ಥೇಮ್ಸ್ ನದಿಯ [note ೧]ಉತ್ತರ ದಂಡೆಯಲ್ಲಿ ಸ್ಥಿತವಾಗಿದೆ. ಇದು ಐತಿಹಾಸಿಕ ವೆಸ್ಟ್‌ಮಿನಿಸ್ಟರ್ ಅಬ್ಬೆಗೆ ಸಮೀಪದಲ್ಲಿರುವುದರ ಜೊತೆಗೆ, ವೈಟ್ ಹಾಲ್ ಹಾಗು ಡೌನಿಂಗ್ ಸ್ಟ್ರೀಟ್ ನ ಸರ್ಕಾರಿ ಕಟ್ಟಡಗಳಿಗೆ ನಿಕಟವಾಗಿದೆ. ಈ ಹೆಸರು ಅರಮನೆಯ ಎರಡು ವಿನ್ಯಾಸಗಳಲ್ಲಿ ಯಾವುದಕ್ಕೆ ಬೇಕಾದರೂ ಉಲ್ಲೇಖಿತವಾಗಬಹುದು: ಹಳೆಯ ಅರಮನೆ , ಮಧ್ಯಕಾಲೀನ ಕಟ್ಟಡ ಸಂಕೀರ್ಣವು ಬಹುತೇಕವಾಗಿ ೧೮೩೪ರಲ್ಲಿ ನಾಶವಾಯಿತು, ಹಾಗು ನಾವು ಇಂದು ಕಾಣುವುದು ಮರುವಿನ್ಯಾಸವಾದ ಹೊಸ ಅರಮನೆ ; ಇದು ವಿಧ್ಯುಕ್ತವಾದ ಸಮಾರಂಭಗಳಿಗೆ ರಾಜವಂಶದ ನೆಲೆಯಾಗಿ ತನ್ನ ಮೂಲ ಶೈಲಿ ಹಾಗು ಸ್ಥಾನಮಾನಗಳನ್ನು ಹಾಗೆ ಉಳಿಸಿಕೊಂಡಿದೆ.

ಈ ಸ್ಥಳದಲ್ಲಿ ಮೊದಲ ರಾಜವಂಶದ ಅರಮನೆಯನ್ನು ಹನ್ನೊಂದನೇ ಶತಮಾನದಲ್ಲಿ ನಿರ್ಮಿಸಲಾಯಿತು;ಹಾಗು ವೆಸ್ಟ್‌ಮಿನಿಸ್ಟರ್ ಅರಮನೆ ಸಂಕೀರ್ಣವು ೧೫೧೨ರಲ್ಲಿ ಬೆಂಕಿಗಾಹುತಿಯಾಗುವ ಮುನ್ನ ಇಂಗ್ಲೆಂಡ್ ರಾಜರುಗಳಿಗೆ ಪ್ರಮುಖ ಲಂಡನ್ ನಿವಾಸವಾಗಿತ್ತು. ಇದರ ನಂತರ, ಇದನ್ನು ಸಂಸತ್ತಿನ ಭವನವಾಗಿ ಬಳಸಿಕೊಳ್ಳಲಾಗುತ್ತಿತ್ತು. ಅಲ್ಲಿಂದೀಚೆಗೆ ಹದಿಮೂರನೇ ಶತಮಾನದಿಂದ ಶಾಸನ ಸಭೆಗಳು ಇಲ್ಲಿಯೇ ನಡೆಯುತ್ತವೆ, ಹಾಗು ರಾಯಲ್ ಕೋರ್ಟ್ ಆಫ್ ಜಸ್ಟಿಸ್ ನ ಪೀಠವು, ವೆಸ್ಟ್‌ಮಿನಿಸ್ಟರ್ ಹಾಲ್ ನ ಒಳಗೆ ಹಾಗು ಸುತ್ತಮುತ್ತ ನೆಲೆಯಾಗಿದೆ. ಆಗ ೧೮೩೪ರಲ್ಲಿ, ಸಂಸತ್ತು ಭವನಗಳ ಮೇಲೆ ಭೀಕರ ಬೆಂಕಿ ಅನಾಹುತ ಸಂಭವಿಸಿತು.ಈ ಸಂದರ್ಭದಲ್ಲಿನ ಈ ಅನಾಹುತದಲ್ಲಿ ಉಳಿದ ಮಹತ್ವದ ವಿನ್ಯಾಸಗಳೆಂದರೆ ವೆಸ್ಟ್‌ಮಿನಿಸ್ಟರ್ ಹಾಲ್, ಸೆಂಟ್ ಸ್ಟೀಫನ್ಸ್ ನ ಸನ್ಯಾಸಿಗೃಹ, ಚ್ಯಾಪಲ್ ಆಫ್ ಸೆಂಟ್ ಮೇರಿ ಅಂಡರ್ಕ್ರಾಫ್ಟ್ ಹಾಗು ಜ್ಯುವೆಲ್ ಟವರ್.

ತರುವಾಯ ಅರಮನೆಯ ಮರುನಿರ್ಮಿಸುವ ವಿನ್ಯಾಸಕ್ಕಾಗಿ ನಡೆದ ಹರಾಜು ಪೈಪೋಟಿಯಲ್ಲಿ ವಿನ್ಯಾಸಕಾರ ಚಾರ್ಲ್ಸ್ ಬ್ಯಾರಿ ವಿಜಯಿಯಾದರು; ಹೀಗೆ ಈ ಕಟ್ಟಡವನ್ನು ಪರ್ಪೆಂಡಿಕ್ಯುಲರ್ ಗೋಥಿಕ್(ದೊಡ್ಡ ಕಿಟಕಿಗಳ ತಲೆಭಾಗದಲ್ಲಿ ಲಂಬ ಕೆತ್ತನೆ ಅಲಂಕಾರವಿರುವ ಇಂಗ್ಲೀಷ್ ಗೋಥಿಕ್ ಶೈಲಿ) ಶೈಲಿಯಲ್ಲಿ ವಿನ್ಯಾಸಗೊಳಿಸಲಾಯಿತು. ಹಳೆ ಅರಮನೆಯ ಅವಶೇಷಗಳನ್ನು(ಬೇರ್ಪಟ್ಟ ಜ್ಯುವೆಲ್ ಟವರ್ ನ್ನು ಹೊರತುಪಡಿಸಿ) ಇನ್ನು ಹೆಚ್ಚಿನ ಬದಲಾವಣೆಯೊಂದಿಗೆ ಸಂಘಟಿಸಲಾಯಿತು. ಇದು ಅರಮನೆ ಅಂಗಳದ ಎರಡು ಸರಣಿಗಳ ಸುತ್ತಲೂ ಸಮ್ಮಿತೀಯವಾಗಿ ವ್ಯವಸ್ಥೆಗೊಳಿಸಿದ ೧,೧೦೦ಕ್ಕೂ ಅಧಿಕ ಕೊಠಡಿಗಳನ್ನು ಹೊಂದಿದೆ. ಹೊಸ ಅರಮನೆ ಪ್ರದೇಶದ ಸ್ವಲ್ಪ ಸ್ಥಳಾವಕಾಶವನ್ನು3.24 hectares (8 acres) ಥೇಮ್ಸ್ ನಿಂದ ತೆಗೆದುಕೊಳ್ಳಲಾಯಿತು, ಇದು ಪ್ರಮುಖ ಮುಂಭಾಗವಾಗಿದ್ದು, ನದಿಯ ಸಮ್ಮುಖದಲ್ಲಿ 265.8-metre (872 ft)ನಿರ್ಮಾಣಗೊಂಡಿದೆ. ವಿನ್ಯಾಸಕಾರ ಬ್ಯಾರಿಗೆ ಅಗಸ್ಟಸ್ W.N. ಪುಗಿನ್ ,ನಿರ್ಮಾಣಕಾರ್ಯದಲ್ಲಿ ನೆರವು ನೀಡಿದರು.ಇವರು ಗೋಥಿಕ್ ವಿನ್ಯಾಸ ಹಾಗು ಶೈಲಿಯ ಒಬ್ಬ ಮುಂಚೂಣಿ ವಿನ್ಯಾಸಕಾರನಾಗಿದ್ದರು, ಅಲ್ಲದೇ ಅರಮನೆಯ ಅಲಂಕರಣ ಹಾಗು ಪೀಠೋಪಕರಣಗಳ ವಿನ್ಯಾಸಗಳನ್ನೂ ಒದಗಿಸಿದರು. ನಿರ್ಮಾಣಕಾರ್ಯವು ೧೮೪೦ರಲ್ಲಿ ಆರಂಭಗೊಂಡು, ಮೂವತ್ತು ವರ್ಷಗಳ ಕಾಲ ನಡೆಯಿತು, ನಿರ್ಮಾಣಕಾರ್ಯದಲ್ಲಿ ವಿಳಂಬ ಹಾಗು ಹೆಚ್ಚಿನ ವೆಚ್ಚಗಳು ತಗುಲಿದವು. ಜೊತೆಗೆ ಈ ವೇಳೆಯಲ್ಲಿಯೇ ಇಬ್ಬರು ಪ್ರಮುಖ ವಿನ್ಯಾಸಕಾರರು ನಿಧನರಾದರು; ಒಳಾಂಗಣ ವಿನ್ಯಾಸವು ಇಪ್ಪತ್ತನೆ ಶತಮಾನದವರೆಗೂ ಅಷ್ಟಿಷ್ಟಾಗಿ ನಡೆಯಿತು. ಅಲ್ಲಿಂದೀಚೆಗೆ ಪ್ರಮುಖ ಸಂರಕ್ಷಣಾ ಕಾರ್ಯ ನಡೆಯುತ್ತಿದೆ, ಏಕೆಂದರೆ ಲಂಡನ್ ನಲ್ಲಿ ಉಂಟಾಗುತ್ತಿರುವ ವಾಯು ಮಾಲಿನ್ಯ, ಹಾಗು ಎರಡನೇ ವಿಶ್ವ ಸಮರದ ನಂತರ ವ್ಯಾಪಕವಾಗಿ ದುರಸ್ತಿ ಕೆಲಸಗಳು ನಡೆಯುತ್ತಿವೆ. ಇದರಲ್ಲಿ ೧೯೪೧ರಲ್ಲಿ ನಡೆದ ಬಾಂಬ್ ದಾಳಿಯ ನಂತರದ ಕಾಮನ್ಸ್ ಚೇಂಬರ್ ನ ಮರುನಿರ್ಮಾಣ ಕಾರ್ಯವೂ ಸೇರಿದೆ.

ಅರಮನೆಯು, ಯುನೈಟೆಡ್ ಕಿಂಗ್ಡಂನ ರಾಜಕೀಯ ಜೀವನದ ಕೇಂದ್ರಬಿಂದುವಾಗಿದೆ; "ವೆಸ್ಟ್‌ಮಿನಿಸ್ಟರ್" UK ಸಂಸತ್ತಿಗೆ ಒಂದು ಲಾಕ್ಷಣಿಕ ಪದವಾಗಿ ಪರಿಣಮಿಸಿದೆ. ಅಲ್ಲದೇ ವೆಸ್ಟ್‌ಮಿನಿಸ್ಟರ್ ಆಡಳಿತ ವ್ಯವಸ್ಥೆಯು ಇದರಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಇದರ ಗಡಿಯಾರ ಗೋಪುರವು, ತನ್ನ ಪ್ರಮುಖ ಗಂಟೆಯಿಂದ "ಬಿಗ್ ಬೆನ್" ಎಂಬ ಹೆಸರಿನಿಂದ ಪರಿಚಿತವಾಗಿದೆ. ಇದು ಲಂಡನ್ ನ ಹಾಗು ಒಟ್ಟಾರೆಯಾಗಿ ಯುನೈಟೆಡ್ ಕಿಂಗ್ಡಂನ ಒಂದು ಪ್ರತಿಮಾರೂಪದ ಹೆಗ್ಗುರುತಾಗಿದೆ.ಇದು ನಗರದ ಒಂದು ಅತ್ಯಂತ ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾಗಿರುವುದರ ಜೊತೆಗೆ ಸಂಸತ್ತಿನ ಪ್ರಜಾಸತ್ತೆಯ ಒಂದು ಲಾಂಛನವಾಗಿದೆ. ವೆಸ್ಟ್‌ಮಿನಿಸ್ಟರ್ ಅರಮನೆಯು, ೧೯೭೦ರಿಂದಲೂ ಗ್ರೇಡ್ I ಪಟ್ಟಿಯಲ್ಲಿರುವ ಕಟ್ಟಡವಾಗಿದೆ; ಹಾಗು ೧೯೮೭ರಿಂದ UNESCO ವರ್ಲ್ಡ್ ಹೆರಿಟೇಜ್ ಸೈಟ್ ನ(ವಿಶ್ವ ಪರಂಪರೆಯ ಸ್ಮಾರಕ) ಭಾಗವಾಗಿದೆ.

ಇತಿಹಾಸ

[ಬದಲಾಯಿಸಿ]

ಪುರಾತನ ಅರಮನೆ

[ಬದಲಾಯಿಸಿ]
[] 1884 ರಲ್ಲಿ ದಿ ಬಿಲ್ಡರ್ ನಲ್ಲಿ ಪ್ರಕಟಿಸಲಾದ ಪಕ್ಷಿ ನೋಟ,

ವೆಸ್ಟ್‌ಮಿನಿಸ್ಟರ್ ಅರಮನೆ ಪ್ರದೇಶವು, ಮಧ್ಯ ಯುಗದಲ್ಲಿ ಪ್ರಮುಖ ಕಾರ್ಯತಂತ್ರ ನೀತಿ ರೂಪಿಸುವ ಪ್ರದೇಶವಾಗಿತ್ತು.ಏಕೆಂದರೆ ಇದು ಥೇಮ್ಸ್ ನದಿಯ ದಂಡೆಯಲ್ಲಿ ಸ್ಥಿತವಾಗಿತ್ತು. ಥಾರ್ನಿ ದ್ವೀಪವೆಂದು ಮಧ್ಯ ಯುಗದಲ್ಲಿ ಪರಿಚಿತವಾಗಿದ್ದ ಈ ಪ್ರದೇಶವನ್ನು ೧೦೧೬ರಿಂದ ೧೦೩೫ರವರೆಗೂ ಆಳ್ವಿಕೆ ನಡೆಸಿದ್ದ ಕಾನುಟೆ ದಿ ಗ್ರೇಟ್ ತನ್ನ ನಿವಾಸವನ್ನಾಗಿ ಮೊದಲ ಬಾರಿಗೆ ಬಳಕೆ ಮಾಡಿಕೊಂಡಿದ್ದ. ಇಂಗ್ಲೆಂಡ್ ನ ಸ್ಯಾಕ್ಸನ್ ಉಪಾಂತ ದೊರೆಯಾಗಿದ್ದ ಸೆಂಟ್ ಎಡ್ವರ್ಡ್ ದಿ ಕನ್ಫೆಸರ್, ಥಾರ್ನಿ ದ್ವೀಪದಲ್ಲಿ ಅರಮನೆಯನ್ನು ನಿರ್ಮಿಸಿದ. ಇದು ಲಂಡನ್ ನಗರದ ಪಶ್ಚಿಮ ದಿಕ್ಕಿನಲ್ಲಿ ಸ್ಥಿತವಾಗಿದೆ, ಈ ಅರಮನೆಯು ಆತ ನಿರ್ಮಿಸಿದ ವೆಸ್ಟ್‌ಮಿನಿಸ್ಟರ್ ಅಬ್ಬೆ ನಿರ್ಮಾಣದ ಸಮಯದಲ್ಲೇ ರೂಪ ತಾಳಿತು.(೧೦೪೫–೫೦) ಥಾರ್ನಿ ದ್ವೀಪ ಹಾಗು ಅದರ ಸುತ್ತಮುತ್ತಲಿನ ಪ್ರದೇಶವು ಶೀಘ್ರದಲ್ಲಿ ವೆಸ್ಟ್‌ಮಿನಿಸ್ಟರ್ ಎಂದು ಪರಿಚಿತವಾಯಿತು.(ವೆಸ್ಟ್ ಮಿನ್ಸ್ಟರ್ ಪದಗಳ ಸಂಕ್ಷಿಪ್ತ ರೂಪ) ಸ್ಯಾಕ್ಸನ್ ಗಳು ಬಳಸಿದ್ದ ಕಟ್ಟಡಗಳು ಅಥವಾ ವಿಲ್ಲಿಯಮ್ I ಬಳಸಿದ ಕಟ್ಟಡಗಳಾಗಲೀ ಇಂದು ಅಸ್ತಿತ್ವದಲ್ಲಿಲ್ಲ. ಅಸ್ತಿತ್ವದಲ್ಲಿರುವ ಅರಮನೆಯ ಹಳೆಯ ಭಾಗವು(ವೆಸ್ಟ್‌ಮಿನಿಸ್ಟರ್ ಹಾಲ್) ವಿಲ್ಲಿಯಮ್ Iನ ಉತ್ತರಾಧಿಕಾರಿ ರಾಜ ವಿಲ್ಲಿಯಮ್ IIನ ಆಳ್ವಿಕೆಯಷ್ಟು ಹಿಂದಿನದು.

ವೆಸ್ಟ್‌ಮಿನಿಸ್ಟರ್ ಅರಮನೆಯು ಮಧ್ಯಕಾಲೀನ ಯುಗದ ಉತ್ತಾರರ್ಧದಲ್ಲಿ ರಾಜನ ಪ್ರಮುಖ ನಿವಾಸವಾಗಿತ್ತು.

ಸಂಸತ್ತಿನ ಪೂರ್ವಾಧಿಕಾರಿಗಳಾಗಿದ್ದ ಕ್ಯುರಿಯಾ ರೆಗಿಸ್ (ರಾಜವಂಶದ ಮಂಡಳಿ), ವೆಸ್ಟ್‌ಮಿನಿಸ್ಟರ್ ಹಾಲ್ ನಲ್ಲಿ ಸಂಧಿಸುತ್ತಿದ್ದವು.(ಆದಾಗ್ಯೂ ರಾಜನು ಇತರ ಸ್ಥಳಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾಗ ಮಂಡಳಿಯು ಆತನನ್ನು ಅನುಸರಿಸುತ್ತಿತ್ತು). ಇಂಗ್ಲೆಂಡ್ ನ ಮೊದಲ ಅಧಿಕೃತ ಸಂಸತ್ತು-ಮಾದರಿ ಸಂಸತ್ತು ೧೨೯೫ರಲ್ಲಿ ಅರಮನೆಯಲ್ಲಿ ಸಭೆ ಸೇರಿತ್ತು; [] ತರುವಾಯದ ಎಲ್ಲ ಸಂಸತ್ತುಗಳು ಬಹುತೇಕ ಇಲ್ಲೇ ಸಭೆ ಸೇರಿವೆ.

ಆಗ ೧೫೩೦ರಲ್ಲಿ, ರಾಜ ಹೆನ್ರಿ VIII, ಪೋಪ್ ಮಂತ್ರಿ ಥಾಮಸ್ ವೋಲ್ಸೆಯ್ ಯಿಂದ ಯಾರ್ಕ್ ಅರಮನೆಯನ್ನು ವಶಪಡಿಸಿಕೊಂಡಂತಹ[] ಒಬ್ಬ ಪ್ರಭಾವಿ ಮಂತ್ರಿಯಾಗಿದ್ದ, ಈತ ರಾಜನ ಅವಕೃಪೆಗೆ ಒಳಗಾಗಿದ್ದ. ವೈಟ್ ಹಾಲ್ ಅರಮನೆಯೆಂದು ಮರುನಾಮಕರಣಗೊಂಡು, ಹೆನ್ರಿ ಇದನ್ನು ತನ್ನ ಮುಖ್ಯ ನಿವಾಸವನ್ನಾಗಿ ಮಾಡಿಕೊಂಡ. ಆದಾಗ್ಯೂ, ವೆಸ್ಟ್‌ಮಿನಿಸ್ಟರ್ ಅಧಿಕೃತವಾಗಿ ಒಂದು ರಾಜನ ಅರಮನೆಯಾಗಿ ಉಳಿದರೂ, ಇದನ್ನು ಸಂಸತ್ತಿನ ಎರಡೂ ಸದನಗಳು ಹಾಗು ಹಲವಾರು ರಾಜಮನೆತನದ ಕಾನೂನು ನ್ಯಾಯಾಲಯಗಳು ಬಳಸಿಕೊಳ್ಳುತ್ತವೆ.

The Old Palace of Westminster was a complex of buildings, separated from the River Thames in the east by a series of gardens. The largest and northernmost building is Westminster Hall, which lies parallel to the river. Several buildings adjoin it on the east side, south of those and perpendicular to the Hall is the mediaeval House of Commons, further south and parallel to the river is the Court of Requests, with an eastwards extension at its south end, and at the south end of the complex lie the House of Lords and another chamber. The Palace was bounded by St Margaret's Street to the west and Old Palace Yard to the south-west; another street, New Palace Yard, is just visible to the north.
ಜಾನ್ ರಾಕ್ಯೂ ರವರ ಲಂಡನ್ನಿನ 1746 ನಕ್ಷೆಯಿಂದ ತೆಗೆದುಕೊಳ್ಳಲಾದ ವಿವರಗಳು.ಸೆಂಟ್ ಸ್ಟೆಫೆನ್ ನ ಚಾಪೆಲ್ ಅನ್ನು "H of Comm" (ಹೌಸ್ ಆಫ್ ಕಾಮನ್ಸ್), ಎಂದು ಕರೆಯಲಾಗುತ್ತದೆ. ಇದು ವೆಸ್ಟ್‌ಮಿನಿಸ್ಟರ್ ಹಾಲ್ ನ ಪಕ್ಕದಲ್ಲಿದೆ; ಪಾರ್ಲಿಮೆಂಟ್ ಚೆಂಬರ್—"H of L" (ಹೌಸ್ ಆಫ್ ಲಾರ್ಡ್)— ಮತ್ತು ಪ್ರಿನ್ಸ್ ಚೆಂಬರ್ ಗಳು ದೂರದ ದಕ್ಷಿಣಕ್ಕಿವೆ.ಈ ಎರಡು ಹೌಸ್ ಗಳ ನಡುವೆಯಿರುವ ಕೋರ್ಟ್ ಆಫ್ ರೆಕ್ವೆಸ್ಟ್ 1801 ರಲ್ಲಿ ಲಾರ್ಡ್ಸ್ ನ ಹೊಸ ಮನೆಯಾಯಿತು.ನದಿಯ ಈಶಾನ್ಯದಿಕ್ಕಿಗೆ ಸ್ಪೀಕರ್‌ ರ ಮನೆಯಿದೆ.

ಇದು ಮೂಲತಃ ಒಂದು ರಾಜನ ನಿವಾಸವಾಗಿದ್ದ ಕಾರಣ, ಅರಮನೆಯು ಎರಡೂ ಮನೆಗಳಿಗೆಂದೇ ಉದ್ದೇಶಪೂರ್ವಕವಾಗಿ ಯಾವುದೇ ಕೊಠಡಿಗಳನ್ನು ನಿರ್ಮಿಸಿರಲಿಲ್ಲ. ರಾಜ್ಯದ ಪ್ರಮುಖ ಸಮಾರಂಭಗಳನ್ನು ಪೈನ್ಟೆಡ್ ಚೇಂಬರ್ ನಲ್ಲಿ ನಡೆಸಲಾಗುತ್ತಿತ್ತು. ಹೌಸ್ ಆಫ್ ಲಾರ್ಡ್ಸ್ ಮೂಲತಃ ರಾಣಿವಾಸದಲ್ಲಿ ಸಭೆ ಸೇರುತ್ತಿತ್ತು, ಇದು ಸಂಕೀರ್ಣದ ದಕ್ಷಿಣ ತುದಿಯಲ್ಲಿದ್ದ ಸಾಮಾನ್ಯವಾದ ಮಧ್ಯಯುಗದ ಸಭಾಂಗಣವಾಗಿತ್ತು. ಆಗ ೧೮೦೧ರಲ್ಲಿ ಸಂಸತ್ತಿನ ಮೇಲ್ಮನೆಯು ದೊಡ್ಡದಾದ ವೈಟ್ ಚೇಂಬರ್ ಗೆ ಸ್ಥಳಾಂತರಗೊಂಡಿತು. ಈ ಮೊದಲು ಇಲ್ಲಿ ಕೋರ್ಟ್ ಆಫ್ ರಿಕ್ವೆಸ್ಟ್ಸ್ ಕಾರ್ಯ ನಿರ್ವಹಿಸುತ್ತಿತ್ತು; ೧೮ನೇ ಶತಮಾನದಲ್ಲಿ ರಾಜ ಜಾರ್ಜ್ IIIರಿಂದ ವಿಸ್ತರಿಸಲ್ಪಟ್ಟ ವರಿಷ್ಠರ ವರ್ಗದ ಜೊತೆಯಲ್ಲಿ ಸನ್ನಿಹಿತ ಐರ್ಲೆಂಡ್ ನೊಂದಿಗೆ ಮೈತ್ರಿ ಒಪ್ಪಂದದ ಜೊತೆಯಲ್ಲಿ, ವರಿಷ್ಠರ ವರ್ಗವು ಅಧಿಕಗೊಂಡು ಸಭಾಂಗಣದಲ್ಲಿ ಸ್ಥಳದ ಕೊರತೆ ಉಂಟಾದಾಗ ಇದನ್ನು ಪ್ರಧಾನ ಕಚೇರಿಯನ್ನಾಗಿ ಮಾಡಿಕೊಳ್ಳಬೇಕೆಂಬ ಉದ್ದೇಶ ಈಡೇರಲಿಲ್ಲ.

ತನ್ನದೇ ಆದ ಕೊಠಡಿಯನ್ನು ಹೊಂದಿರದಿದ್ದ ಹೌಸ್ ಆಫ್ ಕಾಮನ್ಸ್, ಕೆಲವೊಂದು ಬಾರಿ ತನ್ನ ಚರ್ಚೆಗಳನ್ನು ವೆಸ್ಟ್‌ಮಿನಿಸ್ಟರ್ ಅಬ್ಬೆಯ ಚ್ಯಾಪ್ಟರ್ ಹೌಸ್ ನಲ್ಲಿ ನಡೆಸುತ್ತಿತ್ತು. ಕಾಮನ್ಸ್ ಗಳು, ಸೆಂಟ್ ಸ್ಟೀಫನ್ಸ್ ಚ್ಯಾಪಲ್ ನ ರೂಪದಲ್ಲಿ ಅರಮನೆಯಲ್ಲಿ ಒಂದು ಶಾಶ್ವತ ಕೊಠಡಿಯನ್ನು ಪಡೆದರು. ಇದು ಎಡ್ವರ್ಡ್ VIನ ಆಳ್ವಿಕೆಯಲ್ಲಿ ರಾಜಮನೆತನದ ಆಗಿನ ಖಾಸಗಿ ಪೂಜಾಮಂದಿರವಾಗಿತ್ತು. ಬಳಿಕ ೧೫೪೭ರಲ್ಲಿ ಸೆಂಟ್ ಸ್ಟೀಫನ್ಸ್ ಕಾಲೇಜು ವಿಸರ್ಜನೆಯಾದ ನಂತರ ಕಟ್ಟಡವು ಕಾಮನ್ಸ್ ಗಳ ಬಳಕೆಗೆ ತೆರವುಗೊಂಡಿತು. ಕೆಳಮನೆಯ ಅನುಕೂಲಕ್ಕೆ ತಕ್ಕಂತೆ ಮೂರು ಶತಮಾನಗಳ ನಂತರ ಸೆಂಟ್ ಸ್ಟೀಫನ್ಸ್ ಚ್ಯಾಪಲ್ ನ್ನು ನವೀಕರಣ ಮಾಡಲಾಯಿತು.ಇದು ಕ್ರಮೇಣ ಅದರ ಮೂಲವಾದ ಮಧ್ಯಯುಗದ ರೂಪ ಕಳೆದುಕೊಂಡಿತು.

ಒಟ್ಟಾರೆಯಾಗಿ ವೆಸ್ಟ್‌ಮಿನಿಸ್ಟರ್ ಅರಮನೆಯು ೧೮ನೇ ಶತಮಾನದಿಂದ ಮಹತ್ವದ ನವೀಕರಣಗಳಿಗೆ ಒಳಪಡತೊಡಗಿತು, ಸಂಸತ್ತು, ಸೀಮಿತ ಜಾಗ ಹಾಗು ಹಳೆಯದಾಗುತ್ತಿರುವ ಕಟ್ಟಡಗಳ ನವೀಕರಣಕ್ಕೆ ಭಾರಿ ಪ್ರಯತ್ನ ನಡೆಸಿತು.

ಸಂಪೂರ್ಣವಾಗಿ ಹೊಸ ಅರಮನೆಯನ್ನು ನಿರ್ಮಿಸಬೇಕೆಂಬ ಸೂಚನೆಗೆ ಹೆಚ್ಚಿನ ಲಕ್ಷ್ಯ ನೀಡದೇ ಬದಲಿಗೆ ಹೆಚ್ಚಿನ ಕಟ್ಟಡಗಳನ್ನು ನಿರ್ಮಿಸಲಾಯಿತು. ಸೆಂಟ್ ಮಾರ್ಗರೆಟ್ ರಸ್ತೆಗೆ ಅಭಿಮುಖವಾಗಿ ಪಶ್ಚಿಮಕ್ಕೆ ಮುಖ ಮಾಡಿರುವ ಒಂದು ಹೊಸ ಕಟ್ಟಡವನ್ನು ೧೭೫೫ರಿಂದ ೧೭೭೦ರ ನಡುವೆ ಪಲ್ಲಡಿಯನ್ ಶೈಲಿಯಲ್ಲಿ ನಿರ್ಮಿಸಲಾಯಿತು. ಇದು ದಾಖಲೆಗಳ ಸಂಗ್ರಹಕ್ಕೆ ಹಾಗು ಮಂಡಳಿಯ ಕೊಠಡಿಗಳಿಗೆ ಹೆಚ್ಚಿನ ಸ್ಥಳಾವಕಾಶ ಒದಗಿಸಿತು. ಹೌಸ್ ಆಫ್ ಕಾಮನ್ಸ್ ನ ಸ್ಪೀಕರ್ ಗೆ ಒಂದು ಹೊಸತಾದ ಅಧಿಕೃತ ನಿವಾಸವನ್ನು ಸೆಂಟ್ ಸ್ಟೀಫನ್ಸ್ ಚ್ಯಾಪಲ್ ಗೆ ಹೊಂದಿಕೊಂಡಂತೆ ನಿರ್ಮಿಸಲಾಯಿತು, ಇದರ ನಿರ್ಮಾಣ ಕಾರ್ಯವು ೧೭೯೫ರಲ್ಲಿ ಪೂರ್ಣಗೊಂಡಿತು. ನವ್ಯ-ಗೋಥಿಕ್ ಶೈಲಿಯ ವಿನ್ಯಾಸಕಾರ ಜೇಮ್ಸ್ ವ್ಯಾಟ್ಟ್ ಸಹ ೧೭೯೯ ಹಾಗು ೧೮೦೧ರ ನಡುವೆ ಹೌಸ್ ಆಫ್ ಲಾರ್ಡ್ಸ್ ಹಾಗು ಕಾಮನ್ಸ್ ನ್ನು ವಿನ್ಯಾಸಗೊಳಿಸಲು ಕಾರ್ಯ ನಿರ್ವಹಿಸಿದರು.

ತರುವಾಯ ಅರಮನೆ ಸಂಕೀರ್ಣವನ್ನು ಮತ್ತೊಮ್ಮೆ ಮರುವಿನ್ಯಾಸಗೊಳಿಸಲಾಯಿತು. ಈ ಬಾರಿ ಇದರ ವಿನ್ಯಾಸವನ್ನು ೧೮೨೪ ಹಾಗು ೧೮೨೭ರ ನಡುವೆ ಸರ್ ಜಾನ್ ಸೋಯನೆ ಮಾಡಿದರು. ಹೌಸ್ ಆಫ್ ಲಾರ್ಡ್ಸ್ ನ ಮಧ್ಯಕಾಲೀನ ಸದನದ ಕೊಠಡಿಯು ೧೬೦೫ರ ವಿಫಲ ಗನ್ಪೌಡರ್ ಪ್ಲಾಟ್ ಗೆ ಗುರಿಯಾಯಿತು. ಇದನ್ನು ಹೊಸತಾದ ರಾಯಲ್ ಗ್ಯಾಲರಿ ನಿರ್ಮಿಸುವ ಸಲುವಾಗಿ ನೆಲಸಮ ಮಾಡಲಾಯಿತು; ಹಾಗು ಅರಮನೆಯ ದಕ್ಷಿಣ ತುದಿಯಲ್ಲಿ ವಿಧ್ಯುಕ್ತವಾದ ಪ್ರವೇಶ ಕಲ್ಪಿಸಲಾಯಿತು. ಸೋಯನೆಯವರ ಅರಮನೆ ವಿನ್ಯಾಸವು, ಎರಡು ಸದನಗಳಿಗೆ ಹೊಸತಾದ ಗ್ರಂಥಾಲಯ ಸೌಲಭ್ಯ ಹಾಗು ಚ್ಯಾನ್ಸರಿ ಹಾಗು ಕಿಂಗ್ಸ್ ಬೆಂಚ್ ಗೆ ಹೊಸದಾದ ಕಾನೂನು ನ್ಯಾಯಾಲಯಗಳನ್ನು ಒಳಗೊಂಡಿತ್ತು. ಸೋಯನೆಯವರ ನವೀಕರಣಗಳು ವಿವಾದಗಳನ್ನು ಹುಟ್ಟುಹಾಕಿದವು, ಏಕೆಂದರೆ ಇವರು ನವ್ಯ ಕ್ಲ್ಯಾಸಿಕ್ ಶೈಲಿಯ ವಾಸ್ತು ವಿನ್ಯಾಸವನ್ನು ಬಳಕೆ ಮಾಡಿಕೊಂಡಿದ್ದರು; ಇದು ಮೂಲ ಕಟ್ಟಡಗಳ ಗೋಥಿಕ್ ಶೈಲಿಗೆ ವಿರುದ್ಧವಾಗಿತ್ತು.

ಬೆಂಕಿ ಅನಾಹುತ ಹಾಗು ಮರುನಿರ್ಮಾಣ

[ಬದಲಾಯಿಸಿ]
Painting
ಜೆ.ಎಮ್. ಡಬ್ಲ್ಯೂ.ಟರ್ನರ್ 1834 ರ ಬೆಂಕಿ ಅನಾಹುತವನ್ನು ಗಮನಿಸಿದರು. ಅಲ್ಲದೇ ಸುಟ್ಟುಹೋಗುತ್ತಿದ್ದ ಹೌಸ್ ಆಫ್ ಲಾರ್ಡ್ಸ್ ಮತ್ತು ಕಾಮನ್ಸ್ ಗಳನ್ನು(1835) ಒಳಗೊಂಡಂತೆ ಇದನ್ನು ಚಿತ್ರಿಸುವ ಅನೇಕ ತೈಲಚಿತ್ರಗಳನ್ನು ಬಿಡಿಸಿದರು.

ಆಗ ೧೬ ಅಕ್ಟೋಬರ್ ೧೮೩೪ರಲ್ಲಿ, ರಾಜಭಂಡಾರದಲ್ಲಿದ್ದ ಎಣಿಕೆ ಕೋಲುಗಳ ಸಂಚಯವನ್ನು ನಾಶಪಡಿಸಲು ಇದ್ದಂತಹ ಒಲೆಯು ಹೆಚ್ಚು ಬಿಸಿಯಾಗಿ ಅರಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದು ಹೌಸ್ ಆಫ್ ಲಾರ್ಡ್ಸ್ ನ ಕೊಠಡಿಯನ್ನು ಸಂಪೂರ್ಣವಾಗಿ ನಾಶಪಡಿಸಿತು. ದಳ್ಳುರಿಯ ಪರಿಣಾಮವಾಗಿ ಅರಮನೆ ಸಂಕೀರ್ಣದಲ್ಲಿದ್ದ ಇತರ ಬಹುತೇಕ ಕಟ್ಟಡಗಳ ಜೊತೆಯಲ್ಲಿ ಸಂಸತ್ತಿನ ಎರಡೂ ಭವನಗಳು ನಾಶವಾದವು. ವೆಸ್ಟ್‌ಮಿನಿಸ್ಟರ್ ಹಾಲ್ ಇದರಿಂದ ಪಾರಾಯಿತು, ಇದಕ್ಕೆ ಕಾರಣವೆಂದರೆ ಬೆಂಕಿಯನ್ನು ನಂದಿಸಲು ಮಾಡಿದಂತಹ ವೀರೋಚಿತ ಪ್ರಯತ್ನ ಹಾಗು ಗಾಳಿಯ ದಿಕ್ಕು ಬದಲಾದ ಪರಿಣಾಮವಾಗಿತ್ತು. ಜ್ಯುವೆಲ್ ಟವರ್, ಅಂಡರ್ಕ್ರಾಫ್ಟ್ ಚ್ಯಾಪೆಲ್ ಹಾಗು ಸನ್ಯಾಸಿ ಗೃಹಗಳು ಹಾಗು ಸೆಂಟ್ ಸ್ಟೀಫನ್ಸ್ ನ ಚ್ಯಾಪ್ಟರ್ ಭವನಗಳು ಮಾತ್ರ ಬೆಂಕಿಗಾಹುತಿಯಾದ ಅರಮನೆಯಲ್ಲಿ ಉಳಿದ ಭಾಗಗಳಾಗಿದ್ದವು.[]

ಬೆಂಕಿ ಹೊತ್ತಿಕೊಂಡ ತಕ್ಷಣವೇ, ರಾಜ ವಿಲ್ಲಿಯಮ್ VI, ಬಹುತೇಕವಾಗಿ ಪೂರ್ಣಗೊಂಡಿದ್ದ ಬಕಿಂಗ್ಹ್ಯಾಮ್ ಅರಮನೆಗೆ ಸ್ಥಳಾಂತರಗೊಳ್ಳುವ ಪ್ರಸ್ತಾಪವನ್ನು ಸಂಸತ್ತಿನ ಮುಂದಿಟ್ಟ, ಆತ ತನಗೆ ಇಷ್ಟವಿಲ್ಲದ ನಿವಾಸವನ್ನು ಅವರಿಗೆ ನೀಡಲು ಕಾತರನಾಗಿದ್ದ. ಈ ಕಟ್ಟಡವು ಸಂಸತ್ತಿನ ಬಳಕೆಗೆ ಅನರ್ಹವೆಂದು ಪರಿಗಣಿಸಲಾಯಿತು, ಆದಾಗ್ಯೂ ಈತನ ಕೊಡುಗೆಯನ್ನು ತಿರಸ್ಕರಿಸಲಾಯಿತು.[] ಚಾರಿಂಗ್ ಕ್ರಾಸ್ ಅಥವಾ ಸೆಂಟ್ ಜೇಮ್ಸ್ ಪಾರ್ಕ್ ಗೆ ಸಂಸತ್ತನ್ನು ಸ್ಥಳಾಂತರಗೊಳಿಸುವ ಪ್ರಸ್ತಾಪಗಳೂ ಸಹ ಇದೇ ರೀತಿಯಾಗಿ ತಿರಸ್ಕೃತಗೊಂಡವು; ಸಂಪ್ರದಾಯದ ಸೆಳೆತ ಹಾಗು ವೆಸ್ಟ್‌ಮಿನಿಸ್ಟರ್ ನ ಐತಿಹಾಸಿಕ ಹಾಗು ರಾಜಕೀಯ ಸಂಯೋಜನೆಗಳು, ಆ ಪ್ರದೇಶದಲ್ಲಿದ್ದ ಕೊರತೆಗಳ ಹೊರತಾಗಿಯೂ ಮರು ಸ್ಥಳಾಂತರಕ್ಕೆ ಬಹಳ ಪ್ರಬಲವಾದುವೆಂದು ರುಜುವಾತಾಯಿತು.[] ಅದೇ ಸಮಯದಲ್ಲಿ, ತಕ್ಷಣಕ್ಕೆ ಗಮನ ನೀಡಬೇಕಿದ್ದ ಆದ್ಯ ವಿಷಯವೆಂದರೆ ಮುಂದಿನ ಸಂಸತ್ತಿಗೆ ವಸತಿಯನ್ನು ಕಲ್ಪಿಸುವುದು, ಹಾಗು ಪೈನ್ಟೆಡ್ ಚೇಂಬರ್ ಹಾಗು ವೈಟ್ ಚೇಂಬರ್ ನ್ನು ತರಾತುರಿಯಲ್ಲಿ ಹೌಸ್ ಆಫ್ ಲಾರ್ಡ್ಸ್ ಹಾಗು ಕಾಮನ್ಸ್ ಗಳ ತಾತ್ಕಾಲಿಕ ಬಳಕೆಗೆ ದುರಸ್ತಿ ಮಾಡಲಾಯಿತು.ಇದನ್ನು ವಿನ್ಯಾಸಗಾರ ಮಂಡಳಿಯಲ್ಲಿ ಜೀವಿತವಾಗಿದ್ದ ಏಕೈಕ ವಾಸ್ತುಶಿಲ್ಪಿ ಸರ್ ರಾಬರ್ಟ್ ಸ್ಮಿರ್ಕೆಯವರ ಮಾರ್ಗದರ್ಶನದಲ್ಲಿ ಮಾಡಲಾಯಿತು. ನಿರ್ಮಾಣಕಾರ್ಯವು ತ್ವರಿತ ಗತಿಯಲ್ಲಿ ಸಾಗಿತು, ಹಾಗು ಕೊಠಡಿಗಳು ಫೆಬ್ರವರಿ ೧೮೩೫ರ ಹೊತ್ತಿಗೆ ಬಳಕೆಗೆ ಸಿದ್ಧವಾದವು.[]

ಒಂದು ರಾಜವಂಶದ ನಿಯೋಗವನ್ನು ಅರಮನೆಯ ಮರುನಿರ್ಮಾಣದ ಬಗ್ಗೆ ಅಧ್ಯಯನ ನಡೆಸಲು ನಿಯೋಜಿಸಲಾಗಿತ್ತು; ಹಾಗು ಪ್ರಸ್ತಾಪನೆಯಾದ ಶೈಲಿಗಳ ಬಗ್ಗೆ ಸಾರ್ವಜನಿಕವಾಗಿ ಬಿಸಿಬಿಸಿ ಚರ್ಚೆಗಳೂ ನಡೆದವು. ಅಮೆರಿಕ ಸಂಯುಕ್ತ ಸಂಸ್ಥಾನದ ಶ್ವೇತ ಭವನ ಹಾಗು ಫೆಡರಲ್ ಕ್ಯಾಪಿಟಲ್ ನ ಮಾದರಿಯಾದ ನವ್ಯ-ಕ್ಲ್ಯಾಸಿಕಲ್ ಪ್ರಸ್ತಾಪವು, ಆ ಅವಧಿಯಲ್ಲಿ ಬಹಳ ಜನಪ್ರಿಯವಾಗಿತ್ತು, ಹಾಗು ಸೋಯನೆ ಹಳೆ ಅರಮನೆಯ ವಿನ್ಯಾಸದಲ್ಲಿ ಇದನ್ನು ಈಗಾಗಲೇ ಬಳಸಿದ್ದರು.ಆದರೆ ಕ್ರಾಂತಿ ಹಾಗು ಗಣತಂತ್ರವಾದದ ಬಗ್ಗೆ ಸೂಚಿತಾರ್ಥವನ್ನು ನೀಡಿದವು.ಆದರೆ ಇದು ಗೋಥಿಕ್ ಶೈಲಿಯು ಸಾಂಪ್ರದಾಯಿಕ ಮೌಲ್ಯಗಳನ್ನು ಒಳಗೊಂಡಿತ್ತು. ನಿಯೋಗವು ಜೂನ್ ೧೮೩೫ರಲ್ಲಿ "ಕಟ್ಟಡದ ಶೈಲಿಯು ಗೋಥಿಕ್ ಅಥವಾ ಎಲಿಜಬಥನ್" ಆಗಿರುತ್ತದೆಂದು ಪ್ರಕಟಿಸಿತು.[] ರಾಜವಂಶದ ಆಯೋಗವು, ವಿನ್ಯಾಸಕಾರರು ಈ ಮೂಲ ಮಾನದಂಡಗಳನ್ನು ಆಧರಿಸಿ ಪ್ರಸ್ತಾವನೆಗಳನ್ನು ಸಲ್ಲಿಸಲು ಅವಕಾಶ ನೀಡಲು ನಿರ್ಧರಿಸಿತು.

Portrait of Sir Charles Barry
ಸರ್ ಚಾರ್ಲ್ಸ್ ಬ್ಯಾರಿ ಹೊಸ ಹೌಸ್ ಆಫ್ ಪಾರ್ಲಿಮೆಂಟ್ ನ ಯಶಸ್ವಿ ಮಾದರಿಯನ್ನು ಯೋಜಿಸಿದರು. ಅಲ್ಲದೇ 1860 ರಲ್ಲಿ ಅವರು ಸಾವನಪ್ಪುವವರೆಗೂ ನಿರ್ಮಾಣದ ಮೇಲ್ವಿಚಾರಣೆಯನ್ನು ನೋಡಿಕೊಂಡರು.

ಹೀಗೆ ೧೮೩೬ರಲ್ಲಿ, ೯೭ ಪ್ರತಿಸ್ಪರ್ಧಿ ಪ್ರಸ್ತಾಪಗಳ ಅಧ್ಯಯನ ನಡೆಸಿದ ನಂತರ, ರಾಜವಂಶದ ಆಯೋಗವು ಚಾರ್ಲ್ಸ್ ಬ್ಯಾರಿಯವರ ಗೋಥಿಕ್-ಶೈಲಿಯ ಅರಮನೆ ವಿನ್ಯಾಸವನ್ನು ಆಯ್ಕೆ ಮಾಡಿತು. ಕಟ್ಟಡಕ್ಕೆ ೧೮೪೦ರಲ್ಲಿ ಶಂಕುಸ್ಥಾಪನೆಯನ್ನು ಮಾಡಲಾಯಿತು; []ಲಾರ್ಡ್ಸ್ ಗಳ ಕೊಠಡಿನಿರ್ಮಾಣವನ್ನು ೧೮೪೭ರಲ್ಲಿ ಪೂರ್ಣಗೊಳಿಸಲಾಯಿತು; ಹಾಗು ಕಾಮನ್ಸ್ ಗಳ ಕೊಠಡಿಯನ್ನು ೧೮೫೨ರಲ್ಲಿ ಪೂರ್ಣಗೊಳಿಸಲಾಯಿತು.(ಈ ಹಂತದಲ್ಲಿ ಬ್ಯಾರಿ ನೈಟ್ ಹುಡ್ ಬಿರುದಿಗೆ ಭಾಜನರಾದರು). ಆದಾಗ್ಯೂ ೧೮೬೦ರ ಹೊತ್ತಿಗೆ ಬಹುತೇಕ ಕಟ್ಟಡದ ಕೆಲಸವು ಪೂರ್ಣಗೊಂಡಿತು, ಆದರೆ ನಿರ್ಮಾಣಕಾರ್ಯವು ಒಂದು ದಶಕದ ನಂತರದವರೆಗೂ ಪೂರ್ಣಗೊಳ್ಳಲಿಲ್ಲ. ಬ್ಯಾರಿಯವರ ವಾಸ್ತುಶೈಲಿಯು ಗೋಥಿಕ್ ಶೈಲಿಗಿಂತ ಹೆಚ್ಚು ನವೀನ,ಕ್ಲ್ಯಾಸಿಕಲ್ ಆಗಿತ್ತು, ಇವರು ಹೊಸ ಅರಮನೆಯನ್ನು ಸಮಸೂತ್ರತೆಯ ನವ್ಯ-ಕ್ಲ್ಯಾಸಿಕಲ್ ಸೈದ್ಧಾಂತಿಕ ತತ್ವದ ಆಧಾರದ ಮೇಲೆ ನಿರ್ಮಿಸಿದ್ದರು. ಅದ್ಧೂರಿಯಾದ ಹಾಗು ವಿಶಿಷ್ಟವಾದ ಗೋಥಿಕ್ ಒಳಾಂಗಣ ವಿನ್ಯಾಸಕ್ಕೆ ಅವರು ಅಗಸ್ಟಸ್ ಪುಗಿನ್ ರನ್ನು ಹೆಚ್ಚು ಅವಲಂಬಿಸಿದ್ದರು. ಇದರಲ್ಲಿ ಭಿತ್ತಿಚಿತ್ರಗಳು, ಕೆತ್ತನೆಗಳು, ಬಣ್ಣಲೇಪಿತ ಗಾಜುಗಳು, ನೆಲದ ಟೈಲ್ಸ್,(ನೆಲದ ಕಲ್ಲುಹಾಸುಗಳು) ಲೋಹದ ಕೆಲಸ ಹಾಗು ಮರಗೆಲಸಗಳು ಸೇರಿವೆ.

ಇತ್ತೀಚಿನ ಇತಿಹಾಸ

[ಬದಲಾಯಿಸಿ]

ಎರಡನೇ ವಿಶ್ವ ಸಮರದ ಸಮಯದಲ್ಲಿ ಲಂಡನ್ ಮೇಲೆ ಜರ್ಮನ್ನರು ನಡೆಸಿದ ಬಾಂಬ್ ದಾಳಿಯ ನಡುವೆ (ದಿ ಬ್ಲಿಟ್ಜ್ ವಿಭಾಗವನ್ನು ನೋಡಿ ), ವೆಸ್ಟ್‌ಮಿನಿಸ್ಟರ್ ಅರಮನೆಯ ಮೇಲೆ ಪ್ರತ್ಯೇಕ ಸಂದರ್ಭಗಳಲ್ಲಿ ಹದಿನಾಲ್ಕು ಬಾಂಬ್ ದಾಳಿ ನಡೆಯಿತು. ಒಂದು ಬಾಂಬ್ ಹಳೆ ಅರಮನೆಯ ಅಂಗಳದಲ್ಲಿ ೨೬ ಸೆಪ್ಟೆಂಬರ್ ೧೯೪೦ರಲ್ಲಿ ನಡೆಯಿತು, ಹಾಗು ಇದು ಸೆಂಟ್ ಸ್ಟೀಫನ್ಸ್ ದ್ವಾರಮಂಟಪದ ದಕ್ಷಿಣ ದಿಕ್ಕಿನ ಗೋಡೆಗೆ ಹಾಗು ಪಶ್ಚಿಮ ಮುಂಭಾಗಕ್ಕೆ ತೀವ್ರತರ ಹಾನಿಯನ್ನುಂಟುಮಾಡಿತು.[೧೦] ರಿಚರ್ಡ್ ದಿ ಲಯನ್ ಹಾರ್ಟ್ ನ ಪ್ರತಿಮೆಯು ಬಾಂಬ್ ಬಿದ್ದ ರಭಸಕ್ಕೆ ಅದರ ತಳಪಾಯದಿಂದ ಕಿತ್ತು ಬಂತು, ಹಾಗು ಇದರ ಮೇಲೆಕ್ಕೆತ್ತಿದ್ದ ಕತ್ತಿಯು ಬಾಗಿ ತಲೆಕೆಳಗಾಯಿತು, ಈ ಪ್ರತಿಮೆಯನ್ನು ಪ್ರಜಾಪ್ರಭುತ್ವದ ಬಲದ ಸಂಕೇತವಾಗಿ ಬಳಸಲಾಗುತ್ತಿತ್ತು, "ಇದು ಆಕ್ರಮಣದ ವೇಳೆಯಲ್ಲಿ ಬಾಗಿತ್ತೇ ಹೊರತು ಛಿದ್ರಗೊಂಡಿರಲಿಲ್ಲ".[೧೧] ಮತ್ತೊಂದು ಬಾಂಬ್ ಬಹುತೇಕ ಸನ್ಯಾಸಿ ಗೃಹಗಳನ್ನು ಡಿಸೆಂಬರ್ ೮ರಂದು ನಾಶಮಾಡಿತು.[೧೦]

ಅತ್ಯಂತ ವಿನಾಶಕಾರಿ ಬಾಂಬ್ ದಾಳಿಯು ೧೯೪೧ರ ಮೇ ೧೦/೧೧ರ ರಾತ್ರಿ ನಡೆಯಿತು. ಈ ಬಾರಿ ಅರಮನೆಗೆ ಕಡೆ ಪಕ್ಷ ಹನ್ನೆರಡು ಬಾಂಬ್ ಗಳು ಬಿದ್ದವಲ್ಲದೇ ಮೂವರು ಸಾವನ್ನಪ್ಪಿದರು.[೧೨] ಅಗ್ನಿಸ್ಪರ್ಶ ಮಾಡುವ ಒಂದು ಬಾಂಬ್ ಹೌಸ್ ಆಫ್ ಕಾಮನ್ಸ್ ನ ಕೊಠಡಿಗೆ ಬಿದ್ದು ಅದು ಬೆಂಕಿಗಾಹುತಿಯಾಯಿತು; ಮತ್ತೊಂದು ಬಾಂಬ್ ವೆಸ್ಟ್‌ಮಿನಿಸ್ಟರ್ ಹಾಲ್ ನ ಮೇಲ್ಚಾವಣಿಗೆ ಬಿದ್ದು ಅದು ಹೊತ್ತಿ ಉರಿಯಿತು. ಎರಡನ್ನೂ ನಂದಿಸುವ ಅಗ್ನಿಶಾಮಕ ದಳದ ಪ್ರಯತ್ನ ವಿಫಲವಾಯಿತು, ಹೀಗೆ ಭವನವನ್ನು ಉಳಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.[೧೩] ಈ ಹಂತದಲ್ಲಿ ಅಗ್ನಿಶಾಮಕ ದಳವು ಯಶಸ್ವಿಯಾಯಿತು; ಮತ್ತೊಂದು ಕಡೆಯಲ್ಲಿ ಸಂಪೂರ್ಣವಾಗಿ ಕೈಬಿಡಲಾಗಿದ್ದ ಕಾಮನ್ಸ್ ಕೊಠಡಿಯು ನಾಶಗೊಂಡಿತು, ಏಕೆಂದರೆ ಇದರ ಸದಸ್ಯರು ಹೆಚ್ಚಿನ ಭಾಗ ಕೇವಲ ಲಾಬಿಯಲ್ಲಿ ತೊಡಗಿದ್ದರು.[೧೪] ಒಂದು ಬಾಂಬ್ ಲಾರ್ಡ್ಸ್ ಕೊಠಡಿಗೂ ಸಹ ಬಿದ್ದಿತು, ಆದರೆ ನೆಲದ ಮೂಲಕ ಹಾದು ಹೋಗಿ ಬಿತ್ತೇ ಹೊರತು ಸ್ಫೋಟಗೊಳ್ಳಲಿಲ್ಲ. ಗಡಿಯಾರದ ಗೋಪುರಕ್ಕೆ ಒಂದು ಸಣ್ಣ ಬಾಂಬ್ ಅಥವಾ ವಿಮಾನನಿರೋಧಕ ಚಿಕ್ಕ ಬಾಂಬ್ ನ್ನು ಮೇಲ್ಭಾಗದ ಸೂರಿನ ಮೇಲೆ ಎಸೆಯಲಾಗಿತ್ತು, ಈ ಭಾಗಕ್ಕೆ ಹೆಚ್ಚಿನ ಹಾನಿ ಉಂಟಾಯಿತು. ದಕ್ಷಿಣ ದಿಕ್ಕಿನಲ್ಲಿದ್ದ ಗಡಿಯಾರದ ಮುಖಬಿಲ್ಲೆಯ ಎಲ್ಲ ಗಾಜುಗಳು ಪುಡಿಪುಡಿಯಾದವು, ಆದರೆ ಮುಳ್ಳುಗಳು ಹಾಗು ಗಂಟೆಗಳಿಗೆ ಯಾವುದೇ ಹಾನಿ ಉಂಟಾಗಿರಲಿಲ್ಲ.ಅಲ್ಲದೇ ಬೃಹತ್ ಗಡಿಯಾರವು ನಿಖರ ಸಮಯ ತೋರುವುದನ್ನು ಮುಂದುವರೆಸಿತು.[೧೨]

ಕಾಮನ್ಸ್ ಕೊಠಡಿಯ ಹಾನಿಯ ನಂತರ, ಲಾರ್ಡ್ಸ್ ಗಳು ತಾವು ಸಭೆಗೆ ಬಳಸುತ್ತಿದ್ದ ಕೊಠಡಿಯನ್ನೇ ಉಪಯೋಗಿಸಬೇಕೆಂದು ಅವರಿಗೆ ಆಹ್ವಾನವಿತ್ತರು; ತಾವುಗಳು ನಡೆಸುವ ಸಭೆಗಾಗಿ ರಾಣಿಯ ವಸ್ತ್ರಾಲಂಕಾರ ಕೋಣೆಯನ್ನು ತಾತ್ಕಾಲಿಕ ಕೊಠಡಿಯನ್ನಾಗಿ ಮಾರ್ಪಡಿಸಿಕೊಂಡರು. ಕಾಮನ್ಸ್ ಗಳ ಕೊಠಡಿಯನ್ನು ವಿನ್ಯಾಸಕಾರ ಸರ್ ಗೈಲ್ಸ್ ಗಿಲ್ಬರ್ಟ್ ಸ್ಕಾಟ್ ರ ಮಾರ್ಗದರ್ಶನದಡಿ, ಹಳೆ ಕೊಠಡಿಯ ಶೈಲಿಯಲ್ಲೇ ಮತ್ತಷ್ಟು ಸರಳವಾಗಿ, ಯುದ್ಧದ ನಂತರ ಮತ್ತೆ ನಿರ್ಮಾಣ ಮಾಡಲಾಯಿತು. ನಿರ್ಮಾಣ ಕಾರ್ಯವು ೧೯೫೦ರಲ್ಲಿ ಪೂರ್ಣಗೊಂಡಿತು, ಅದಾದ ಕೂಡಲೇ ಎರಡೂ ಸದನಗಳು ತಮ್ಮ ತಮ್ಮ ಕೊಠಡಿಗಳಿಗೆ ಹಿಂದಿರುಗಿದವು.[೧೫]

ಅರಮನೆಯಲ್ಲಿ ಕಚೇರಿಗಾಗಿ ಸ್ಥಳದ ಅವಶ್ಯಕತೆ ಹೆಚ್ಚಿದಾಗ, ಸಂಸತ್ತು ೧೯೭೫ರಲ್ಲಿ ಅಲ್ಲೇ ಸಮೀಪದಲ್ಲಿದ್ದ ನಾರ್ಮನ್ ಷಾ ಕಟ್ಟಡವನ್ನು ಬಾಡಿಗೆಗೆ ಪಡೆಯಿತು.[೧೬] ಅದಲ್ಲದೇ ತೀರ ಇತ್ತೀಚಿಗೆ ಸಂಸತ್ತಿನ ಆದೇಶಾನುಸಾರವಾಗಿ ೨೦೦೦ದಲ್ಲಿ ನಿರ್ಮಾಣಕಾರ್ಯವು ಪೂರ್ಣಗೊಂಡ ಪೋರ್ಟ್ಕುಲ್ಲಿಸ್ ಹೌಸ್ ಗೆ ಸ್ಥಳಾಂತರಗೊಂಡಿತು. ಈ ಅಧಿಕತೆಯು, ಎಲ್ಲ MPಗಳು ತಮ್ಮದೇ ಆದ ಕಚೇರಿ ಸೌಲಭ್ಯಗಳನ್ನು ಹೊಂದಲು ಈಗ ಅವಕಾಶ ಮಾಡಿಕೊಟ್ಟಿದೆ.[]

ಹೊರಾಂಗಣ

[ಬದಲಾಯಿಸಿ]
River front of the Palace of Westminster
Photograph
View from across the Thames in the morning...
Photograph
...and at dusk. Portcullis House is visible on the right.

ಸರ್ ಚಾರ್ಲ್ಸ್ ಬ್ಯಾರಿಯವರ ಸಹಯೋಗದ ವಿನ್ಯಾಸದೊಂದಿಗೆ ನಿರ್ಮಾಣಗೊಂಡ ವೆಸ್ಟ್‌ಮಿನಿಸ್ಟರ್ ಅರಮನೆಯು ಪೆರ್ಪೆಂಡಿಕ್ಯುಲರ್ ಗೋಥಿಕ್ ಶೈಲಿಯನ್ನು ಬಳಸಿಕೊಂಡಿದೆ.ಇದು ೧೫ನೇ ಶತಮಾನದ ಸಮಯದಲ್ಲಿ ಬಹಳ ಜನಪ್ರಿಯವಾಗಿತ್ತು, ಹಾಗು ೧೯ನೇ ಶತಮಾನದ ಗೋಥಿಕ್ ಪುನರುಜ್ಜೀವನದೊಂದಿಗೆ ಮತ್ತೆ ಹಿಂದಿರುಗಿತು. ಬ್ಯಾರಿ ಒಬ್ಬ ಸರ್ವಶ್ರೇಷ್ಠ ವಾಸ್ತುಶಿಲ್ಪಿಯಾಗಿದ್ದರು, ಆದರೆ ಇವರ ಬೆಂಬಲಕ್ಕೆ ನಿಂತಿದ್ದು ಗೋಥಿಕ್ ಶೈಲಿಯ ವಿನ್ಯಾಸಕಾರ ಅಗಸ್ಟಸ್ ಪುಗಿನ್. ಆಗ ೧೧ನೇ ಶತಮಾನದಲ್ಲಿ ನಿರ್ಮಾಣಗೊಂಡ ವೆಸ್ಟ್‌ಮಿನಿಸ್ಟರ್ ಹಾಲ್ ೧೮೩೪ರಲ್ಲಿ ಬೆಂಕಿಗಾಹುತಿಯಾಯಿತು, ಇದು ಬ್ಯಾರಿಯವರ ವಿನ್ಯಾಸವನ್ನು ಒಳಗೊಂಡಿತ್ತು. ನಿರ್ಮಾಣ ಕಾರ್ಯದಿಂದ ಪುಗಿನ್ ಬಹಳ ಅಸಂತುಷ್ಟರಾಗಿದ್ದರು, ಅದರಲ್ಲೂ ವಿಶೇಷವಾಗಿ ಬ್ಯಾರಿಯವರ ಸಮ್ಮಿತೀಯ ರಚನೆಯಿಂದ ಅಸಮಾಧಾನ ಹೊಂದಿದ್ದರು. ಅವರು ಈ ರೀತಿ ಟೀಕಿಸಿದ್ದು ಇಂದಿಗೂ ಪ್ರಸಿದ್ದ ವಾಕ್ಯವಾಗಿದೆ "ಇದು ಸಂಪೂರ್ಣ ಗ್ರೀಸ್ ಶೈಲಿಯಲ್ಲಿದೆ, ಸರ್; ಆದರೆ ಅತ್ಯುತ್ತಮವಾದ ಹೊರಾಂಗಣದ ಮೇಲೆ ಟ್ಯುಡರ್ ವಾಸ್ತುಶೈಲಿಯ ವಿವರಣೆಯಿದೆ".[೧೭]

ಕಲ್ಲುಕಟ್ಟಡದ ಕಾರ್ಯ

[ಬದಲಾಯಿಸಿ]

ಕಟ್ಟಡದ ಕಲ್ಲಿನ ಭಾಗಗಳು ಮೂಲತಃ ಆನ್ಸ್ಟನ್ ಶಿಲ್ಪದಿಂದ ನಿರ್ಮಾಣಗೊಂಡಿವೆ. ಇದು ಮಣ್ಣಿನ ಬಣ್ಣದ ಮೆಗ್ನಿಶಿಯನ್ ಸುಣ್ಣದಕಲ್ಲಾಗಿತ್ತು. ಇದನ್ನು ಸೌತ್ ಯಾರ್ಕ್ ಶೈರ್ ನಲ್ಲಿರುವ ಆನ್ಸ್ಟನ್ ಎಂಬ ಹಳ್ಳಿಯಲ್ಲಿನ ಗಣಿಗಾರಿಕೆಯಿಂದ ತೆಗೆಯಲಾಗಿತ್ತು.[೧೮] ಆದಾಗ್ಯೂ, ಈ ಕಲ್ಲು, ಮಾಲಿನ್ಯ ಹಾಗು ಬಳಸಲಾದ ಕಳಪೆ ಮಟ್ಟದ ಸೀಳು ಕಲ್ಲಿನ ಕಾರಣದಿಂದಾಗಿ ಬಹಳ ಬೇಗನೆ ನಾಶ ಹೊಂದಲು ಆರಂಭಿಸಿತು. ಆದಾಗ್ಯೂ ಇಂತಹ ದೋಷಗಳನ್ನು ೧೮೪೯ರ ಆರಂಭದ ಹೊತ್ತಿಗೆ ಗುರಿತಿಸಲಾಯಿತಾದರೂ, ೧೯ನೇ ಶತಮಾನದಲ್ಲಿ ಉಳಿದ ಅವಶೇಷದ ಕಾರ್ಯಗಳಿಗೆ ಹೆಚ್ಚಿನ ಗಮನ ವಹಿಸಲಾಗಲಿಲ್ಲ. ಆದಾಗ್ಯೂ, ೧೯೧೦ರ ಸುಮಾರಿಗೆ, ಕೆಲವು ಕಲ್ಲುನಿರ್ಮಿತಿಗಳನ್ನು ಬದಲಾಯಿಸುವ ಅವಶ್ಯಕತೆ ಕಂಡುಬಂತು. ಹೀಗೆ ೧೯೨೮ರಲ್ಲಿ, ಕ್ಲಿಪ್ಶಾಮ್ ಗಣಿಗಾರಿಕೆ ಕಂಪನಿಯ ಪ್ರಸಿದ್ದ ಕಲ್ಲಿನ ಬಳಕೆಯನ್ನು ಪರಿಗಣಿಸಲಾಯಿತು, ಇದು ರುಟ್ಲ್ಯಾಂಡ್ ನಲ್ಲಿ ದೊರೆಯುತ್ತಿದ್ದ ಜೇನುತುಪ್ಪದ-ಬಣ್ಣದ ಸುಣ್ಣದಕಲ್ಲಾಗಿತ್ತು, ಇದನ್ನು ನಾಶವಾಗುತ್ತಿರುವ ಆನ್ಸ್ಟನ್ ಸುಣ್ಣದ ಕಲ್ಲಿಗೆ ಬದಲಾಗಿ ಬಳಸಲು ಯೋಜಿಸಲಾಯಿತು. ಈ ಯೋಜನೆಯು ೧೯೩೦ರಲ್ಲಿ ಆರಂಭಗೊಂಡಿತಾದರೂ ಎರಡನೇ ವಿಶ್ವ ಸಮರದ ಕಾರಣದಿಂದ ಸ್ಥಗಿತಗೊಂಡಿತು.ಹೀಗಾಗಿ ೧೯೫೦ರ ಸುಮಾರಿಗೆ ಪೂರ್ಣಗೊಳ್ಳಬೇಕಾಯಿತು. ಮಾಲಿನ್ಯ ಪ್ರಮಾಣವು ಮತ್ತೊಮ್ಮೆ ೧೯೬೦ರ ಹೊತ್ತಿಗೆ ಅಧಿಕವಾಗತೊಡಗಿತು. ಕಲ್ಲಿನ ಕಟ್ಟಡದ ಸಂರಕ್ಷಣೆ ಹಾಗು ಕಟ್ಟಡ ಹಾಗು ಗೋಪುರವನ್ನು ಮತ್ತಷ್ಟು ಎತ್ತರಿಸುವ ಉದ್ದೇಶದಿಂದ ಪುನರುಜ್ಜೀವನದ ಕಾರ್ಯಕ್ರಮಗಳು ೧೯೮೧ರಲ್ಲಿ ಆರಂಭಗೊಂಡು, ೧೯೯೪ರಲ್ಲಿ ಕೊನೆಗೊಂಡವು.[೧೯] ಹೌಸ್ ಅಥಾರಿಟೀಸ್ ಅಲ್ಲಿಂದೀಚೆಗೆ ಹಲವು ಒಳಾಂಗಣ ಅಂಗಳಗಳನ್ನು ಬಾಹ್ಯವಾಗಿ ಪುನರುತ್ಥಾನ ಮಾಡುವ ಕಾರ್ಯದಲ್ಲಿ ತೊಡಗಿದೆ. ಈ ಯೋಜನೆಯು ಸರಿಸುಮಾರು ೨೦೧೧ರ ಕೊನೆವರೆಗೂ ಮುಂದುವರೆಯಬಹುದೆಂದು ಅಂದಾಜಿಸಲಾಗಿದೆ.

ಗೋಪುರಗಳು

[ಬದಲಾಯಿಸಿ]
Photograph
ವಿಕ್ಟೋರಿಯ ಗೋಪುರವು ಹೊಸ ವೆಸ್ಟ್‌ಮಿನಿಸ್ಟರ್ ಅರಮನೆಗೆ ಚಾರ್ಲ್ಸ್ ಬ್ಯಾರಿಯವರು ಮಾಡಿದ ವಿನ್ಯಾಸದಲ್ಲೇ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದೆ.ಅದು ಪೂರ್ಣಗೊಂಡ ಸಮಯದಲ್ಲಿ ಅದು ವಿಶ್ವದಲ್ಲೇ ಅತ್ಯಂತ ಉದ್ದವಾದ ಆ ಶತಮಾನದ ಕಟ್ಟಡವಾಗಿತ್ತು.

ವೆಸ್ಟ್‌ಮಿನಿಸ್ಟರ್ ಅರಮನೆಯು ಮೂರು ಪ್ರಮುಖ ಗೋಪುರಗಳನ್ನು ಒಳಗೊಂಡಿದೆ. ಇವುಗಳಲ್ಲಿ, ಬಹಳ ದೊಡ್ಡದಾದ ಹಾಗು ಅತಿ ಎತ್ತರದ ಗೋಪುರವೆಂದರ 98.5-metre (323 ft)[೧೮]ವಿಕ್ಟೋರಿಯಾ ಗೋಪುರ, ಇದು ಅರಮನೆಯ ನೈಋತ್ಯ ದಿಕ್ಕನ್ನು ಆಕ್ರಮಿಸುತ್ತದೆ. ಆ ಅವಧಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ ವಿಲ್ಲಿಯಮ್ IV ಅವರ ಗೌರವಾರ್ಥವಾಗಿ ಇದನ್ನು "ರಾಜನ ಗೋಪುರವೆಂದು" ಕರೆಯಲಾಗುತ್ತಿತ್ತು. ಈ ಗೋಪುರವು ವಿನ್ಯಾಸಕಾರ ಬ್ಯಾರಿಯವರ ಮೂಲ ವಿನ್ಯಾಸದ ಅವಿಭಾಜ್ಯ ಅಂಗವಾಗಿತ್ತು, ಇದನ್ನು ಅವರು ಮುಂದೆ ಅತ್ಯಂತ ಸ್ಮರಣಾರ್ಹ ಕಟ್ಟಡವಾಗಬಹುದೆಂಬ ಉದ್ದೇಶ ಹೊಂದಿದ್ದರು. ವಿನ್ಯಾಸಕಾರನು, ಚೌಕಟ್ಟಾದ ಬೃಹತ್ ಗೋಪುರವನ್ನು ಶಾಸನ ರಚನೆಯ " ಕೋಟೆಯ" ಸುಭದ್ರ ನೆಲೆಯಾಗಬಹುದೆಂದು ಉದ್ದೇಶಿಸಿ ರಚಿಸಿದ್ದ.(ವಿನ್ಯಾಸರಚನೆಯ ಸ್ಪರ್ಧೆಯಲ್ಲಿ ಪೋರ್ಟ್ಕುಲ್ಲಿಸ್ ನ ಆಯ್ಕೆಯು ಅಭಿನ್ನವಾದ ಗುರುತೆಂದು ಗಾಢವಾದ ಅನುಕರಣವನ್ನು ಹೊಂದಿದೆ), ಹಾಗು ಇದನ್ನು ಅರಮನೆಯ ರಾಜವಂಶದ ಪ್ರವೇಶದ್ವಾರವಾಗಿ ಬಳಕೆ ಮಾಡಿದ, ಹಾಗು ಬೆಂಕಿ ನಿರೋಧಕ ಅಳವಡಿಸಿ ಸಂಸತ್ತಿನ ದಸ್ತಾವೇಜಿಗೆ ಬೆಂಕಿಯಿಂದ ರಕ್ಷಣೆ ನೀಡುವ ಭಂಡಾರವನ್ನಾಗಿ ಬಳಸಿಕೊಂಡ.[೨೦] ವಿಕ್ಟೋರಿಯಾ ಗೋಪುರವು ಹಲವು ಬಾರಿ ಮರು ವಿನ್ಯಾಸಗೊಂಡಿತು, ಹಾಗು ಕ್ರಮೇಣ ಅದರ ಎತ್ತರವು ಹೆಚ್ಚುತ್ತಾ ಹೋಯಿತು.[೨೧] ಹೀಗೆ ೧೮೫೮ರಲ್ಲಿ ಇದರ ನಿರ್ಮಾಣಕಾರ್ಯವು ಪೂರ್ಣಗೊಂಡ ನಂತರ, ಇದು ಈ ಶತಮಾನದ ವಿಶ್ವದ ಅತ್ಯಂತ ಎತ್ತರದ ಗೋಪುರವೆನಿಸಿತು.[೨೨]

ಗೋಪುರದ ಕೆಳಭಾಗದಲ್ಲಿ ಸಾವರಿನ್ಸ್ ಎಂಟ್ರೆನ್ಸ್(ರಾಜ ದ್ವಾರ) ಇದೆ, ಇದನ್ನು ರಾಜರುಗಳು ಸಂಸತ್ತನ್ನು ವಿಧ್ಯುಕ್ತವಾಗಿ ಆರಂಭಿಸುವ ಸಂದರ್ಭದಲ್ಲಿ ಅರಮನೆಗೆ ಪ್ರವೇಶಿಸುವಾಗ ಅಥವಾ ರಾಜ್ಯಕ್ಕೆ ಸಂಬಂಧಿಸಿದ ಇತರ ಸಂದರ್ಭಗಳಲ್ಲಿ ಈ ದ್ವಾರವನ್ನು ಬಳಸುತ್ತಾರೆ. ಎತ್ತರದ 15.2-metre (50 ft)ಕಮಾನುದಾರಿಯು ಶಿಲ್ಪಕಲೆಗಳಿಂದ ಸಂಪೂರ್ಣವಾಗಿ ಅಲಂಕೃತಗೊಂಡಿದೆ. ಇದರಲ್ಲಿ ಸೈಂಟ್ಸ್ ಜಾರ್ಜ್, ಆಂಡ್ರ್ಯೂ ಹಾಗು ಪ್ಯಾಟ್ರಿಕ್, ಜೊತೆಗೆ ಸ್ವತಃ ರಾಣಿ ವಿಕ್ಟೋರಿಯಾಳ ಮೂರ್ತಿಗಳು ಸೇರಿವೆ.[೨೩] ವಿಕ್ಟೋರಿಯಾ ಗೋಪುರದ ಮುಖ್ಯ ಭಾಗದ ೧೨ ಮಹಡಿಗಳಲ್ಲಿ ಇರಿಸಲಾಗಿರುವ 8.8 kilometres (5.5 mi)ಉಕ್ಕಿನ ಕಪಾಟುಗಳಲ್ಲಿ ಮೂರು ದಶಲಕ್ಷ ಸಂಸತ್ತಿನ ದಸ್ತಾವೇಜುಗಳ ದಾಖಲೆಗಳಿವೆ; ಇದರಲ್ಲಿ ೧೪೯೭ರಿಂದೀಚೆಗೆ ನಡೆದ ಎಲ್ಲ ಸಂಸತ್ತಿನ ಒಪ್ಪಂದಗಳ ಮೂಲ ಪ್ರತಿಗಳ ದಾಖಲೆಗಳಿವೆ; ಹಾಗು ಮುಖ್ಯ ಹಸ್ತಪ್ರತಿಗಳ ಮೂಲ ಹಕ್ಕು ಮಸೂದೆಗಳು ಹಾಗು ರಾಜ ಚಾರ್ಲ್ಸ್ I ನ ಮರಣದಂಡನೆಯ ಆಧಾರದ ಸಮರ್ಥನೆಯ ಕಾಗದಪತ್ರಗಳ ಪ್ರತಿಗಳಿವೆ.[೨೪] ಪಿರಮಿಡ್ ಆಕಾರದ ಬೀಡುಕಬ್ಬಿಣದ ತಾರಸಿಯ ಮೇಲೆ22.3-metre (73 ft)[೧೮] ಧ್ವಜಸ್ತಂಭವಿದೆ. ಅರಮನೆಯಲ್ಲಿ ರಾಜನ ಉಪಸ್ಥಿತಿ ಸಂದರ್ಭದಲ್ಲಿ ಇಲ್ಲಿಂದ ರಾಯಲ್ ಸ್ಟ್ಯಾಂಡರ್ಡ್(ರಾಜನ ಖಾಸಗಿ ಧ್ವಜ) ಹಾರಾಡುತ್ತದೆ. ಸಂಸತ್ತಿನ ಯಾವುದೇ ಸದನವು ಇಲ್ಲಿ ಸಭೆ ಸೇರಿದಾಗ ಹಾಗು ನಿಯುಕ್ತವಾದ ಧ್ವಜಾಚರಣೆಯ ದಿನಗಳಂದು,ಯುನಿಯನ್ ಫ್ಲ್ಯಾಗ್ಸ್,ರಾಷ್ಟ್ರಧ್ವಜಗಳು ಧ್ವಜಸ್ತಂಭದಿಂದ ಹಾರಾಡುತ್ತವೆ.[೨೫][೨೬]

Photograph
ಕ್ಲಾಕ್ ಗೋಪುರದ ಖ್ಯಾತಿಯು ಅರಮನೆಯನ್ನು ಮೀರಿಸಿದೆ.ಇದರ ರಚನೆಯು ಹೆಚ್ಚಾಗಿ ಬಿಗ್ ಬೆನ್ ಅನ್ನು ಹೋಲುತ್ತದೆ, ಐದು ಗಂಟೆಗಳಲ್ಲಿ ಅತ್ಯಂತ ಭಾರವಾದದ್ದನ್ನು ಇದು ಒಳಗೊಂಡಿದೆ.

ಅರಮನೆಯ ಉತ್ತರ ದಿಕ್ಕಿನ ಕೊನೆಯಲ್ಲಿ, ಗೋಪುರಗಳಲ್ಲೇ ಅತ್ಯಂತ ಪ್ರಸಿದ್ದವಾದ ಗಡಿಯಾರ ಗೋಪುರವು ಕಂಡುಬರುತ್ತದೆ.ಇದನ್ನು ಸಾಮಾನ್ಯವಾಗಿ ಬಿಗ್ ಬೆನ್ ಎಂದು ಕರೆಯಲಾಗುತ್ತದೆ. 96.3 metres (316 ft), ಇದು ವಿಕ್ಟೋರಿಯಾ ಗೋಪುರಕ್ಕಿಂತ ಸ್ವಲ್ಪ ಕಡಿಮೆ ಎತ್ತರದಲ್ಲಿದ್ದು ಸ್ವಲ್ಪಮಟ್ಟಿಗೆ ತೆಳುವಾದ ರಚನೆ ಹೊಂದಿದೆ.[೧೮] ಇದು ವೆಸ್ಟ್‌ಮಿನಿಸ್ಟರ್ ನ ಬೃಹತ್ ಗಡಿಯಾರವನ್ನು ಒಳಗೊಂಡಿದೆ.ಇದನ್ನು ಹವ್ಯಾಸಿ ಗಡಿಯಾರ ತಯಾರಕ ಎಡ್ಮಂಡ್ ಬೆಕೆಟ್ ಡೆನಿಸನ್ ರ ವಿನ್ಯಾಸವನ್ನು ಆಧರಿಸಿ ಎಡ್ವರ್ಡ್ ಜಾನ್ ಡೆಂಟ್ ತಯಾರಿಸಿದ್ದಾರೆ.[೨೭] ಸೆಕೆಂಡುಗಳೊಳಗೇ ತಾಸಿನ ಗಂಟೆ ಬಾರಿಸುವ ಬೃಹತ್ ಗಡಿಯಾರವು, ೧೯ನೇ ಶತಮಾನದಲ್ಲಿ ಗಡಿಯಾರ ತಯಾರಿಕರಿಗೆ ಅಸಾಧ್ಯವೆನಿಸಿದ್ದ ನಿಖರತೆಯ ಗುಣಮಟ್ಟವನ್ನು ಸಾಧಿಸಿ ತೋರಿಸಿದೆ. ಅಲ್ಲದೇ ೧೮೫೯ರಲ್ಲಿ ಚಾಲನೆಗೊಂಡು ಇದು ಅಂದಿನಿಂದಲೂ ಹಾಗೆಯೇ ಸತತವಾಗಿ ವಿಶ್ವಾಸಾರ್ಹತೆ ಉಳಿಸಿಕೊಂಡು ಬಂದಿದೆ.[೨೮]

ವ್ಯಾಸದಲ್ಲಿರುವ ನಾಲ್ಕು ಮುಖಬಿಲ್ಲೆಗಳು7 metres (23 ft) ಸಮಯವನ್ನು ಸೂಚಿಸುತ್ತವೆ. ಇದನ್ನು ಅರೆಪಾರದರ್ಶಕ ಬಿಳಿಗಾಜಿನಲ್ಲಿ ತಯಾರಿಸಲಾಗಿದೆ, ಹಾಗು ರಾತ್ರಿಯ ಸಮಯದಲ್ಲಿ ಇದಕ್ಕೆ ಹಿಂಬದಿಯಿಂದ ಬೆಳಕು ನೀಡಲಾಗುತ್ತದೆ, ಗಂಟೆ ಸೂಚಕ ಮುಳ್ಳು 2.7 metres (8 ft 10 in)ರಷ್ಟು ಉದ್ದವಿದ್ದು, ನಿಮಿಷದ ಮುಳ್ಳು 4.3 metres (14 ft)ರಷ್ಟು ಉದ್ದವಿದೆ.[೨೯]

ಗಡಿಯಾರದ ಮೇಲ್ಭಾಗದಲ್ಲಿರುವ ಗಂಟೆಗೂಡಿಗೆ ಐದು ಗಂಟೆಗಳು ತೂಗಾಡುತ್ತವೆ. ನಾಲ್ಕು ಕ್ವಾರ್ಟರ್ ಬೆಲ್ ಗಳು ಪ್ರತಿ ಕಾಲು ಗಂಟೆಗೊಮ್ಮೆ ವೆಸ್ಟ್‌ಮಿನಿಸ್ಟರ್ ಗಡಿಯಾರಕ್ಕೆ ಬಡಿದು ಸಮಯ ಸೂಚಿಸುತ್ತವೆ.[೩೦] ಅತ್ಯಂತ ದೊಡ್ಡದಾದ ಗಂಟೆಯು ಸಮಯವನ್ನು ಸೂಚಿಸುತ್ತದೆ; ಇದನ್ನು ಅಧಿಕೃತವಾಗಿ ದಿ ಗ್ರೇಟ್ ಬೆಲ್ ಆಫ್ ವೆಸ್ಟ್‌ಮಿನಿಸ್ಟರ್ ಎಂದು ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಬಿಗ್ ಬೆನ್ ಎಂದು ಸೂಚಿಸಲಾಗುತ್ತದೆ.ಇದು ಅನಿರ್ದಿಷ್ಟ ಮೂಲದಿಂದ ಹುಟ್ಟಿಕೊಂಡಂತಹ ಅಡ್ಡಹೆಸರು, ಕಾಲಾನುಕ್ರಮದಲ್ಲಿ, ಇದನ್ನು ಆಡುಮಾತಿನಲ್ಲಿ ಸಂಪೂರ್ಣ ಗೋಪುರಕ್ಕೆ ಅನ್ವಯವಾಗುವಂತೆ ಬಳಸಲಾಗುತ್ತಿದೆ. ಈ ಹೆಸರನ್ನು ಪಡೆದ ಮೊದಲ ಗಂಟೆಯು, ಅದನ್ನು ಪರಿಶೀಲಿಸುವ ಸಮಯದಲ್ಲಿ ಬಿರುಕು ಬಿಟ್ಟಿತು ಹಾಗು ಅದನ್ನು ಮತ್ತೆ ವಿನ್ಯಾಸಗೊಳಿಸಲಾಯಿತು;[೩೧] ಪ್ರಸಕ್ತದಲ್ಲಿರುವ ಗಂಟೆಯು ತನ್ನದೇ ಆದ ರೀತಿಯಲ್ಲಿ ಬಿರುಕುಬಿಟ್ಟು, ವಿಶಿಷ್ಟವಾದ ಸದ್ದು ಮೊಳಗಿಸುತ್ತದೆ.[೩೨] 13.8 tonnes (13.6 long tons)ರಷ್ಟು ತೂಕದ ಅತ್ಯಂತ ಭಾರವಿರುವ ಈ ಗಂಟೆಯು ಬ್ರಿಟನ್ ನಲ್ಲಿ ದೊಡ್ಡ ಗಾತ್ರದ ಮೂರನೇ ಗಂಟೆಯೆಂದು ಖ್ಯಾತಿ ಪಡೆದಿದೆ.[೩೩][೩೪] ಗಡಿಯಾರ ಗೋಪುರದ ಮೇಲ್ಭಾಗದಲ್ಲಿರುವ ಲಾಂದ್ರವು, ಅಯ್ರ್ಟನ್ ದೀಪವಾಗಿದೆ, ಇದನ್ನು ಸಂಸತ್ತಿನ ಯಾವುದೇ ಸದನಗಳು ಇಲ್ಲಿ ರಾತ್ರಿಯಲ್ಲಿ ಸಭೆ ಸೇರುವಾಗ ಉರಿಸಲಾಗುತ್ತದೆ. ಇದನ್ನು ರಾಣಿ ವಿಕ್ಟೋರಿಯಾಳ ಕೋರಿಕೆಯ ಮೇರೆಗೆ ೧೮೮೫ರಲ್ಲಿ ಅಳವಡಿಸಲಾಯಿತು—ಈ ರೀತಿಯಾಗಿ ಆಕೆ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕೆಲಸಗಾರರು "ಕೆಲಸ ಮಾಡುತ್ತಿರುವರೇ" ಎಂಬುದರ ಮೇಲ್ವಿಚಾರಣೆ ನಡೆಸಲು ಅಳವಡಿಸಬೇಕೆಂದು ಕೋರಿಕೊಂಡಿದ್ದರು—ಇದಕ್ಕೆ ೧೮೭೦ರಲ್ಲಿ ಫಸ್ಟ್ ಕಮಿಷನರ್ ಆಫ್ ವರ್ಕ್ಸ್ ಆಗಿದ್ದ ಅಕ್ಟನ್ ಸ್ಮೀ ಅಯ್ರ್ಟನ್ ರ ಹೆಸರನ್ನು ನೀಡಲಾಗಿದೆ.[೩೫][೩೬]

Photograph
ಶೃಂಗದಂತೆ ವಿನ್ಯಾಸಗೊಳಿಸಲಾದ ಮಧ್ಯ ಗೋಪುರದ ತೆಳು ಕಂಬಗಳು ಅರಮನೆಯ ಕೊನೆಯಲ್ಲಿರುವ ಅತ್ಯಂತ ದೊಡ್ಡ ಚೌಕಾಕಾರದ ಗೋಪುರಗಳಿಗೆ ವೈದೃಶ್ಯವಾಗಿದೆ.

ಅರಮನೆಯ ಮೂರು ಮುಖ್ಯ ಗೋಪುರಗಳಲ್ಲಿ ಕಡಿಮೆ ಎತ್ತರದಲ್ಲಿರುವ ಗೋಪುರವೆಂದರೆ (91.4 metres (300 ft)[೧೮]ರಷ್ಟು ಎತ್ತರ) ಅಷ್ಟಕೋನೀಯ ಆಕಾರದಲ್ಲಿರುವ ಸೆಂಟ್ರಲ್ ಟವರ್, ಇದು ಕಟ್ಟಡ ಮಧ್ಯಭಾಗದಲ್ಲಿ, ಮಧ್ಯ ಪ್ರವೇಶಾಂಗಣದ ಮೇಲ್ಭಾಗದಲ್ಲಿದೆ. ಇದನ್ನು ಡಾ ಡೇವಿಡ್ ಬೋಸ್ವೇಲ್ ರೆಯಿಡ್ ರ ಒತ್ತಾಯದ ಮೇರೆಗೆ ಯೋಜನೆಗೆ ಅಳವಡಿಸಲಾಯಿತು. ಇವರು ಹೊಸ ಸಂಸತ್ತು ಭವನಗಳಲ್ಲಿ ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆಯ ಬಗ್ಗೆ ಮೇಲ್ವಿಚಾರಣೆ ವಹಿಸಿದ್ದರು.ಅವರ ಯೋಜನೆಯ ಪ್ರಕಾರ ಮಧ್ಯಭಾಗದಲ್ಲಿ ಒಂದು ದೊಡ್ಡದಾದ ಚಿಮಣಿಯನ್ನು ನಿರ್ಮಿಸಬೇಕಿತ್ತು, ಇದರಿಂದ "ಕಲುಷಿತ ಗಾಳಿಯು" ಅರಮನೆಯ ಸುತ್ತಲೂ ಇರುವ ನಾನೂರು ವಿವಿಧ ಬಗೆಯ ಕೃತಕ ಶಾಖಗಳಿಂದ ಉಂಟಾಗುವ ತಾಪ ಹಾಗು ಹೊಗೆಯು ಕಟ್ಟಡದಿಂದ ಹೊರಕ್ಕೆ ಹೋಗುವ ವ್ಯವಸ್ಥೆಯಾಗುತ್ತಿತ್ತು.[೩೭] ಗೋಪುರದಲ್ಲಿ ಎಲ್ಲರಿಗೂ ಸ್ಥಳಾವಕಾಶ ಕಲ್ಪಿಸಲು, ಬ್ಯಾರಿಯವರು ಸೆಂಟ್ರಲ್ ಲಾಬಿಗೆ ಯೋಜಿಸಿದ್ದ ಮೇಲೇರುತ್ತಾ ಹೋಗುವ ತಾರಸಿಯ ಎತ್ತರವನ್ನು ಕಡಿಮೆ ಮಾಡಲು ಹಾಗು ಕಿಟಕಿಗಳ ಎತ್ತರವನ್ನು ತಗ್ಗಿಸಲು ಒತ್ತಡ ಬೀಳುವಂತೆ ನಿರ್ಮಿಸಿದ್ದರು;[೩೮] ಆದಾಗ್ಯೂ, ಈ ಗೋಪುರವೇ ಅರಮನೆಯ ಬಾಹ್ಯ ವಿನ್ಯಾಸದಲ್ಲಿ ಸುಧಾರಣೆ ತರುವ ಅವಕಾಶ ಒದಗಿಸಿತು,[೩೯] ಅದಲ್ಲದೇ ಬ್ಯಾರಿ, ಬೃಹತ್ತಾದ ಪಾರ್ಶ್ವಕ ಗೋಪುರಗಳನ್ನು ಸಮತೋಲನ ಮಾಡಲು ಇದಕ್ಕಾಗಿ ಶಿಖರದ ಮಾದರಿ ವಿನ್ಯಾಸಕ್ಕೆ ಹೆಚ್ಚು ಒತ್ತು ನೀಡಿದರು.[೪೦] ಅಂತಿಮವಾಗಿ, ಸೆಂಟ್ರಲ್ ಟವರ್ ಸಂಪೂರ್ಣವಾಗಿ ತನ್ನ ನಿಗದಿತ ಉದ್ದೇಶವನ್ನು ಸಫಲಗೊಳಿಸುವಲ್ಲಿ ವಿಫಲವಾಯಿತು. ಆದರೆ "ವಾಸ್ತುವಿನ್ಯಾಸದ ಮೇಲೆ ಯಂತ್ರದ ಸೇವೆಗಳು ನಿಜವಾದ ಪ್ರಭಾವ ಬೀರಿದ ಮೊದಲ ಸಂದರ್ಭವೆಂಬುದು" ಬಹಳ ಗಮನಾರ್ಹವಾಗಿದೆ.[೪೧]

ಅರಮನೆಯ ಮುಮ್ಭಾಗದುದ್ದಕ್ಕೂ ಕಿಟಕಿಯ ಹೊರಚಾಚಿನ ನಡುವೆ ಮೇಲಕ್ಕೇರುವ ಶಿಖರಗಳ ಹೊರತಾಗಿಯೂ, ಅಸಂಖ್ಯಾತ ಸಣ್ಣ ಗೋಪುರಗಳು ಕಟ್ಟಡದ ಉನ್ನತ ಸೌಧಗಳನ್ನು ಜೀವಂತಗೊಳಿಸಿವೆ. ಸೆಂಟ್ರಲ್ ಟವರ್ ನ ಮಾದರಿ, ಇವುಗಳನ್ನು ಕೆಲವು ಕಾರ್ಯತಃ ಕಾರಣಗಳಿಗೆ, ಹಾಗು ಅಲ್ಲಿನ ಗಾಳಿ ಬೆಳಕಿನ ಕೊಳವೆಗಂಬಗಳಿಗಾಗಿ ಸೇರ್ಪಡೆ ಮಾಡಲಾಗಿದೆ.[೩೯]

ವೆಸ್ಟ್‌ಮಿನಿಸ್ಟರ್ ಅರಮನೆಯ ಕೆಲ ಇತರ ವಿಶಿಷ್ಟ ಲಕ್ಷಣಗಳನ್ನೂ ಸಹ ಗೋಪುರಗಳು ಎಂದು ಕರೆಯಲಾಗುತ್ತದೆ. ಸೆಂಟ್ ಸ್ಟೀಫನ್ಸ್ ಟವರ್, ಅರಮನೆಯ ಪಶ್ಚಿಮ ದ್ವಾರದ ಮಧ್ಯದಲ್ಲಿ ನೆಲೆಯಾಗಿದೆ, ಇದು ವೆಸ್ಟ್‌ಮಿನಿಸ್ಟರ್ ಹಾಲ್ ಹಾಗು ಹಳೆ ಅರಮನೆ ಅಂಗಳದ ನಡುವೆಯಿದೆ. ಇದು ಸೆಂಟ್ ಸ್ಟೀಫನ್ಸ್ ದ್ವಾರ ವೆಂಬ ಹೆಸರಿನಿಂದ ಸಂಸತ್ತು ಭವನಗಳಿಗೆ ಸಾರ್ವಜನಿಕ ಪ್ರವೇಶವಕಾಶ ಒದಗಿಸುತ್ತದೆ.[೪೨] ನದಿಗೆ ಅಭಿಮುಖ ವಾಗಿರುವ ಉತ್ತರ ಹಾಗು ದಕ್ಷಿಣದ ತುದಿಗಳ ಆವರಣ ಕಟ್ಟುಗಳನ್ನು ಕ್ರಮವಾಗಿ ಸ್ಪೀಕರ್ಸ್ ಟವರ್ ಹಾಗು ಚ್ಯಾನ್ಸಲರ್ಸ್ ಟವರ್ ಎಂದು ಕರೆಯಲಾಗುತ್ತದೆ.[೧೯] ಇವುಗಳು ಅರಮನೆಯ ಮರು ನಿರ್ಮಾಣದ ಸಮಯದಲ್ಲಿ ಎರಡೂ ಸದನಗಳ ಅಧಿಕಾರವನ್ನು ವಹಿಸಿಕೊಂಡಿದ್ದ ಸಭಾಧ್ಯಕ್ಷರ ಗೌರವಾರ್ಥವಾಗಿ ಇಟ್ಟಿರುವ ಹೆಸರುಗಳಾಗಿವೆ—ಸ್ಪೀಕರ್ ಆಫ್ ದಿ ಹೌಸ್ ಆಫ್ ಕಾಮನ್ಸ್ ಹಾಗು ಲಾರ್ಡ್ ಹೈ ಚ್ಯಾನ್ಸಲರ್. ಸ್ಪೀಕರ್ಸ್ ಟವರ್, ಸ್ಪೀಕರ್ಸ್ ಅವರ ನಿವಾಸವನ್ನು ಒಳಗೊಂಡಿದೆ; ಇದು ಕಾಮನ್ಸ್ ನ ಸ್ಪೀಕರ್ ರ ಅಧಿಕೃತ ನಿವಾಸವಾಗಿದೆ.[೪೩]

ನೆಲದ ಮೇಲಣದ ಸೌಂದರ್ಯ

[ಬದಲಾಯಿಸಿ]
Photograph
ವೆಸ್ಟ್‌ಮಿನಿಸ್ಟರ್ ಸಭಾಂಗಣದ ಹೊರಗಿರುವ ಕ್ರಾಮ್ ವೆಲ್ ಗ್ರೀನ್, ಆಲಿವರ್ ಕ್ರಾಮ್ ವೆಲ್ ರ ಹ್ಯಾಮೊ ಥ್ರೋನಿಕ್ರಾಫ್ಟ್ ರ ಕಂಚಿನ ಮೂರ್ತಿ ಇರುವಂತಹ ಸ್ಥಳವಾಗಿದೆ. ಇದನ್ನು 1899ರಲ್ಲಿ ವಿವಾದಗಳ ನಡುವೆ ಇದನ್ನು ಸ್ಥಾಪಿಸಲಾಯಿತು.[೪೪]

ವೆಸ್ಟ್‌ಮಿನಿಸ್ಟರ್ ಅರಮನೆಯ ಸುತ್ತಮುತ್ತಲೂ ಹಲವಾರು ಸಣ್ಣ ಉದ್ಯಾನವನಗಳಿವೆ. ವಿಕ್ಟೋರಿಯಾ ಟವರ್ ಗಾರ್ಡನ್ಸ್, ಸಾರ್ವಜನಿಕರಿಗಾಗಿ ಮುಕ್ತ ಉದ್ಯಾನವನವಾಗಿದ್ದು, ಅರಮನೆಯ ದಕ್ಷಿಣ ಭಾಗದಲ್ಲಿರುವ ನದಿಯ ಪಕ್ಕದಲ್ಲಿದೆ. ಬ್ಲ್ಯಾಕ್ ರಾಡ್'ಸ್ ಉದ್ಯಾನವನವು (ಇದು ಬ್ಲ್ಯಾಕ್ ರಾಡ್ ನ ಜೆಂಟಲ್ಮ್ಯಾನ್ ಅಶರ್ ಕಚೇರಿಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ ರಾಜಭವನಗಳಲ್ಲಿ ಕಾರ್ಯನಿರ್ವಹಿಸುವವರಿಗೆ ನೀಡುವ ಹುದ್ದೆ ಬಿರುದು.) ಸಾರ್ವಜನಿಕರ ಪ್ರವೇಶಕ್ಕೆ ನಿಷಿದ್ಧವಾಗಿದೆ; ಹಾಗು ಇದನ್ನು ಸಾಮಾನ್ಯವಾಗಿ ಖಾಸಗಿ ದ್ವಾರವಾಗಿ ಬಳಸಲಾಗುತ್ತದೆ. ಅರಮನೆಯ ಮುಂಭಾಗದಲ್ಲಿರುವ ಹಳೆ ಅರಮನೆ ಅಂಗಳವನ್ನು ಹೆಂಚಿನಿಂದ ಹೊದೆಸಿ ನೆಲೆಗಟ್ಟು ಮಾಡಲಾಗಿದೆ;ಹಾಗು ಕಾಂಕ್ರೀಟ್ ಭದ್ರತಾ ಇಟ್ಟಿಗೆಗಳಿಂದ ಮುಚ್ಚಲಾಗಿದೆ.(ಕೆಳಗೆ ಉಲ್ಲೇಖಿಸಿರುವ ಭದ್ರತಾ ವಿಭಾಗವನ್ನು ನೋಡಿ ). ಕ್ರಾಮ್ವೆಲ್ ಗ್ರೀನ್(ಇದೂ ಸಹ ಮುಂಭಾಗದಲ್ಲಿವೆ, ಹಾಗು ೨೦೦೬ರಲ್ಲಿ ಹೊಸತಾದ ಪ್ರವಾಸಿ ಕೇಂದ್ರವನ್ನಾಗಿ ನಿರ್ಮಿಸಲು ಹಲಗೆ ಬೇಲಿಯಿಂದ ಮುಚ್ಚಲಾಗಿದೆ), ಹೊಸ ಅರಮನೆ ಅಂಗಳ(ಉತ್ತರ ದಿಕ್ಕು) ಹಾಗು ಸ್ಪೀಕರ್ಸ್ ಗ್ರೀನ್(ನೇರವಾಗಿ ಅರಮನೆಯ ಉತ್ತರ ದಿಕ್ಕಿನಲ್ಲಿದೆ.) ಇದೆಲ್ಲವೂ ಖಾಸಗಿಯಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ. ಕಾಲೇಜ್ ಗ್ರೀನ್, ಹೌಸ್ ಆಫ್ ಲಾರ್ಡ್ಸ್ ನ ಎದುರು ಭಾಗದಲ್ಲಿದೆ, ಇದು ಒಂದು ಸಣ್ಣದಾದ ತ್ರಿಕೋನಾಕಾರದ ಹಸಿರು ಉದ್ಯಾನವನವಾಗಿದ್ದು, ಸಾಮಾನ್ಯವಾಗಿ ರಾಜಕಾರಣಿಗಳೊಂದಿಗೆ ದೂರದರ್ಶನಕ್ಕಾಗಿ ನಡೆಸುವ ಸಂದರ್ಶನಗಳನ್ನು ಇಲ್ಲಿ ಚಿತ್ರೀಕರಿಸಲಾಗುತ್ತದೆ.

ಒಳಾಂಗಣ

[ಬದಲಾಯಿಸಿ]

ವೆಸ್ಟ್‌ಮಿನಿಸ್ಟರ್ ಅರಮನೆಯು ೧,೧೦೦ಕ್ಕೂ ಅಧಿಕ ಕೊಠಡಿಗಳು, ೧೦೦ ಮೆಟ್ಟಿಲ ಸಾಲುಗಳು ಹಾಗು 4.8 kilometres (3 mi)ರಷ್ಟು ನಡುವಂಕಣಗಳು,[೧೮] ನಾಲ್ಕು ಸಭಾಂಗಣಗಳಿಗೂ ಮೀರಿ ಹೆಚ್ಚಿನ ಭಾಗದಲ್ಲಿ ಆವೃತವಾಗಿದೆ. ನೆಲ ಅಂತಸ್ತಿನಲ್ಲಿ ಕಛೇರಿಗಳು, ಊಟದ ಕೊಠಡಿಗಳು ಹಾಗು ಬಾರ್ ಗಳಿವೆ; ಮೊದಲ ಅಂತಸ್ತು(ಪ್ರಧಾನ ಅಂತಸ್ತು ಎಂದು ಕರೆಯಲ್ಪಡುತ್ತದೆ.) ಅರಮನೆಯ ಮುಖ್ಯ ಕೊಠಡಿಗಳನ್ನು ಹೊಂದಿದೆ, ಇದರಲ್ಲಿ ಚರ್ಚಾ ಕೊಠಡಿಗಳು, ಲಾಬಿಗಳು ಹಾಗು ಗ್ರಂಥಾಲಯಗಳು ಸೇರಿವೆ. ಮೇಲ್ಭಾಗದ ಎರಡು ಅಂತಸ್ತುಗಳನ್ನು ಸಮಿತಿ ಸಭಾ ಕೊಠಡಿಗಳು ಹಾಗು ಕಛೇರಿಗಳಿಗಾಗಿ ಬಳಸಿಕೊಳ್ಳಲಾಗುತ್ತವೆ.

ವಿನ್ಯಾಸರಚನೆ

[ಬದಲಾಯಿಸಿ]
ಮುಖ್ಯ ಮಹಡಿಯ ವಿನ್ಯಾಸ (ಉತ್ತರಭಾಗವು ಬಲಭಾಗದಲ್ಲಿದೆ). ಎರಡು ಹೌಸ್ ಗಳ ಚರ್ಚಾ ಕೊಠಡಿಗಳು ಮತ್ತು ಕೇಂದ್ರ ಲಾಬಿಯ ವಿರುದ್ಧ ದಿಕ್ಕಿನಲ್ಲಿದ್ದ ಮತ್ತು ಅರಮನೆಯ ಮಧ್ಯಭಾಗದ ಭಾಗವಾಗಿರುವ ಅವರ ಮುಂಚಿನ ಕೊಠಡಿಗಳು. ಇವುಗಳು ದಕ್ಷಿಣಕ್ಕಿರುವ ಔಪಚಾರಿಕ ಕೊಠಡಿಗಳ ಪೀಠೋಪಕರಣಗಳನ್ನು ಒಳಗೊಂಡಿದೆ.ವಿಕ್ಟೋರಿಯ ಗೋಪುರವು ನೈಖುತ್ಯ ಮೂಲೆಯನ್ನು ಆವರಿಸಿದರೆ ಸ್ಪೀಕರ್‌ ರ ಮನೆಯು ಈಶಾನ್ಯ ಮೂಲೆಯನ್ನು ಆವರಿಸಿದೆ; ಕ್ಲಾಕ್ ಗೋಪುರವು ಉತ್ತರಕ್ಕೆ ದೂರದಲ್ಲಿದ್ದರೆ, ವೆಸ್ಟ್‌ಮಿನಿಸ್ಟರ್ ಸಭಾಂಗಣ ಪಶ್ಚಿಮಕ್ಕಿದೆ.

ಒಂದೇ ಒಂದು ಮುಖ್ಯ ದ್ವಾರದ ಬದಲಿಗೆ, ಅರಮನೆಯು, ವಿವಿಧ ಸಮೂಹಗಳ ಬಳಕೆಗೆ ಪ್ರತ್ಯೇಕ ಪ್ರವೇಶದ್ವಾರಗಳನ್ನು ಹೊಂದಿದೆ. ರಾಜ ದ್ವಾರವು, ಸಾವೆರಿನ್ಸ್ ಎಂಟ್ರನ್ಸ್ ವಿಕ್ಟೋರಿಯಾ ಗೋಪುರದ ನೆಲ ಅಂತಸ್ತಿನಲ್ಲಿದೆ, ಇದು ಅರಮನೆಯ ನೈಋತ್ಯ ಮೂಲೆಯಲ್ಲಿ ಸ್ಥಿತವಾಗಿದೆ, ಹಾಗು ಇದು ರಾಜವಂಶದಲ್ಲಿ ನಡೆಯುವ ಮೆರವಣಿಗೆಗಳ ಆರಂಭಿಕ ಸ್ಥಳವಾಗಿದೆ. ಇದನ್ನು ರಾಜರುಗಳು ಸಂಸತ್ತಿನ ಅಧಿವೇಶನದ ಆರಂಭಗಳಲ್ಲಿ ಇರುವ ಔಪಚಾರಿಕ ಕೊಠಡಿಗಳ ಸಮೂಹ ಎನ್ನಲಾಗಿದೆ. ಇದು ರಾಜರಿಗಾಗಿ ಮೆಟ್ಟಿಲ ಸಾಲು, ನಾರ್ಮನ್ ದ್ವಾರಮಂಟಪ, ವಸ್ತ್ರಾಲಂಕಾರ ಕೊಠಡಿ, ರಾಜರಿಗಾಗಿ ಗ್ಯಾಲರಿ ಹಾಗು ಯುವರಾಜನ ಕೊಠಡಿಯನ್ನು ಒಳಗೊಂಡಿರುತ್ತದೆ. ಇವೆಲ್ಲವೂ ಸಮಾರಂಭವು ನಡೆಯುವ ಲಾರ್ಡ್ಸ್ ಕೊಠಡಿಯೊಂದಿಗೆ ತುದಿಮುಟ್ಟುತ್ತವೆ. ಹೌಸ್ ಆಫ್ ಲಾರ್ಡ್ಸ್ ನ ಸದಸ್ಯರು, ಹಳೆ ಅರಮನೆಯ ಆವರಣದ ಮಧ್ಯಭಾಗದಲ್ಲಿರುವ ವರಿಷ್ಠವರ್ಗದ ದ್ವಾರವನ್ನು ಬಳಕೆಮಾಡುತ್ತಾರೆ.ಇದು ಕಲ್ಲಿನ ಸಾರೋಟು ದ್ವಾರಮಂಟಪದಿಂದ ಮುಚ್ಚಲ್ಪಟ್ಟಿದೆ ಹಾಗು ಇದು ಸಭಾಂಗಣದ ಪ್ರವೇಶಕ್ಕೆ ದಾರಿ ಮಾಡಿಕೊಡುತ್ತದೆ. ಅಲ್ಲಿಂದ ಒಂದು ಮೆಟ್ಟಿಲ ಸಾಲು, ಕಾರಿಡಾರ್ ನ ಮೂಲಕ ಯುವರಾಜನ ಕೊಠಡಿಗೆ ಕೊಂಡೊಯ್ಯುತ್ತದೆ.[೪೫]

ಸಂಸತ್ತಿನ ಸದಸ್ಯರು ತಮ್ಮ ತಮ್ಮ ಕೊಠಡಿಗಳಿಗೆ, ದಕ್ಷಿಣ ಭಾಗದಲ್ಲಿರುವ ಹೊಸ ಅರಮನೆ ಆವರಣದಲ್ಲಿರುವ ಸದಸ್ಯರ ಪ್ರವೇಶ ದ್ವಾರದ ಮೂಲಕ ಪ್ರವೇಶಿಸುತ್ತಾರೆ. ಅವರ ಮಾರ್ಗವು ಸನ್ಯಾಸಿ ಗೃಹಗಳ ನೆಲಮಟ್ಟದ ಉಡುಪು ಕೋಣೆಯ ಮೂಲಕ ಹಾದು ಹೋಗುತ್ತದೆ, ಹಾಗು ಅಂತಿಮವಾಗಿ ದಕ್ಷಿಣದಲ್ಲಿರುವ ಕಾಮನ್ಸ್ ಕೊಠಡಿಗೆ ನೇರವಾಗಿ ಸದಸ್ಯರ ಲಾಬಿಗೆ ಸಂಪರ್ಕ ಕಲ್ಪಿಸುತ್ತದೆ. ಹೊಸ ಅರಮನೆ ಅಂಗಳದಿಂದ, ಸ್ಪೀಕರ್ಸ್ ಕೋರ್ಟ್ ಹಾಗು ಸ್ಪೀಕರ್ ನಿವಾಸದ ಮುಖ್ಯ ದ್ವಾರಕ್ಕೆ ಪ್ರವೇಶವನ್ನು ಪಡೆಯಬಹುದು, ಇದು ಅರಮನೆಯ ಈಶಾನ್ಯ ಮೂಲೆಯ ಆವರಣ ಕಟ್ಟಿನಲ್ಲಿ ಸ್ಥಿತವಾಗಿದೆ.

ಸೆಂಟ್ ಸ್ಟೀಫನ್ಸ್ ದ್ವಾರ, ಸರಿಸುಮಾರು ಕಟ್ಟಡದ ಪಶ್ಚಿಮ ದಿಕ್ಕಿನ ಮುಂಭಾಗದಲ್ಲಿ ಮಧ್ಯಭಾಗಕ್ಕೆ ಕಂಡುಬರುತ್ತದೆ, ಇಲ್ಲಿ ಸಾರ್ವಜನಿಕ ಸದಸ್ಯರಿಗೆ ಪ್ರವೇಶ ದೊರಕುತ್ತದೆ. ಅಲ್ಲಿಂದ, ಅರಮನೆಗೆ ಭೇಟಿ ನೀಡುವವರು ಸರಣಿ ಪ್ರವೇಶಾಂಗಣಗಳ ಹಾಗು ಸಾಲು ಮೆಟ್ಟಿಲುಗಳ ಮೂಲಕ ಹಾದು ಹೋಗುತ್ತಾರೆ, ಇದು ಅವರಿಗೆ ಪ್ರಧಾನ ಅಂತಸ್ತಿನ ಮಟ್ಟಕ್ಕೆ ಹಾಗು ಅರಮನೆಯ ಕೇಂದ್ರಬಿಂದುವಾದ ಅಷ್ಟಕೋನೀಯ ಆಕಾರದ ಸೆಂಟ್ರಲ್ ಲಾಬಿಗೆ ಕರೆತರುತ್ತದೆ. ಈ ಸಭಾಂಗಣವು, ಗಾರೆ ಹಸಿಯಾಗಿರುವಾಗಲೇ ಬರೆದ ಚಿತ್ರಗಳಿಂದ ಅಲಂಕೃತಗೊಂಡ ಸಮ್ಮಿತೀಯ ಕಾರಿಡಾರ್ ನ ಪಕ್ಕದಲ್ಲಿದೆ. ಇದು ಹೊರ ಕೋಣೆಗಳು ಹಾಗು ಎರಡೂ ಸದನಗಳ ಚರ್ಚಾ ಕೊಠಡಿಗಳಿಗೆ ದಾರಿ ಮಾಡಿಕೊಡುತ್ತದೆ; ಸದಸ್ಯರ ಲಾಬಿ ಹಾಗು ಉತ್ತರದಲ್ಲಿರುವ ಕಾಮನ್ಸ್ ಚೇಂಬರ್ ಹಾಗು ವರಿಷ್ಠ ವರ್ಗದ ಹೊರಾಂಗಣ ಲಾಬಿ ಹಾಗು ದಕ್ಷಿಣಕ್ಕೆ ಲಾರ್ಡ್ಸ್ ಕೊಠಡಿಯಿದೆ. ಮತ್ತೊಂದು ಗೋಡೆಯ ಸಾಲಿನ ಕಾರಿಡಾರ್ ಪೂರ್ವ ಭಾಗವನ್ನು ಕೆಳಭಾಗದ ನಿರೀಕ್ಷಣಾ ಸಭಾಂಗಣಕ್ಕೆ ಹಾಗು ಮೊದಲ ಅಂತಸ್ತಿನ ಮೆಟ್ಟಿಲ ಸಾಲಿಗೆ ದಾರಿ ಕಲ್ಪಿಸಿಕೊಡುತ್ತದೆ. ಇಲ್ಲಿ ನದಿಗೆ ಅಭಿಮುಖವಾಗಿ ಸಾಲಾಗಿ ೧೬ ಕಮಿಟಿ ಕೊಠಡಿಗಳು ಆಕ್ರಮಿಸಿಕೊಂಡಿವೆ. ಇದಕ್ಕೆ ನೇರವಾಗಿ ಕೆಳ ಭಾಗದಲ್ಲಿ, ಎರಡು ಮನೆಗಳ ಗ್ರಂಥಾಲಯಗಳು, ಪ್ರಧಾನ ಅಂತಸ್ತಿನಿಂದ ಥೇಮ್ಸ್ ನದಿಯನ್ನು ಕಾಣಬಹುದು.

ನಾರ್ಮನ್ ದ್ವಾರಮಂಟಪ

[ಬದಲಾಯಿಸಿ]

ವೆಸ್ಟ್‌ಮಿನಿಸ್ಟರ್ ಅರಮನೆಗೆ ಅತ್ಯಂತ ಬೃಹತ್ತಾದ ಪ್ರವೇಶ ದ್ವಾರವೆಂದರೆ ವಿಕ್ಟೋರಿಯಾ ಗೋಪುರದ ಕೆಳಗಿರುವ ರಾಜ ದ್ವಾರ. ಇದನ್ನು ರಾಜರ ಬಳಕೆಗಾಗಿ ವಿನ್ಯಾಸಗೊಳಿಸಲಾಗಿತ್ತು, ಇವರುಗಳು ಪ್ರತಿ ವರ್ಷವೂ ಸಂಸತ್ತಿನ ಅಧಿವೇಶನದ ಆರಂಭಕ್ಕೆ ಸಾರೋಟಿನ ಮೂಲಕ ಬಕಿಂಗ್ಹ್ಯಾಮ್ ಅರಮನೆಗೆ ಪ್ರಯಾಣ ಬೆಳೆಸುತ್ತಿದ್ದರು.[೪೬] ಸಾಮ್ರಾಜ್ಯಶಾಹಿ ರಾಜನ ಕಿರೀಟವನ್ನು, ರಾಜನು ಸಮಾರಂಭದಲ್ಲಿ ಧರಿಸುತ್ತಿದ್ದನು, ಜೊತೆಯಲ್ಲಿ ನಿರ್ವಹಣಾ ಟೋಪಿ ಹಾಗು ರಾಜ್ಯದ ಕತ್ತಿಯನ್ನು ಬಳಸುತ್ತಿದ್ದನು. ಇವೆಲ್ಲವೂ ರಾಜನ ಅಧಿಕಾರದ ಸಂಕೇತಗಳಾಗಿದ್ದವು ಹಾಗು ಇದನ್ನು ಮೆರವಣಿಗೆ ಮುನ್ನ ವಂಶಲಾಂಛನವಾಗಿ ರಾಜನು ಧರಿಸುತ್ತಿದ್ದನು. ಅಲ್ಲದೆ ಅರಮನೆಗೆ ಸಾರೋಟಿನಲ್ಲಿ ಪ್ರಯಾಣಿಸುತ್ತಿದ್ದನು,ಈತನನ್ನು ಇತರ ರಾಜ ವಂಶಸ್ಥರು ಜೊತೆಗೂಡುತ್ತಿದ್ದರು; ಇವರನ್ನು ಒಟ್ಟಾರೆಯಾಗಿ ರೆಗಾಲಿಯ(ವಿಶಿಷ್ಟ ರಾಜಲಾಂಛನಗಳು) ಎಂದು ಕರೆಯಲಾಗುತ್ತಿತ್ತು, ಇವರುಗಳು ರಾಜನು ಬರುವ ಸ್ವಲ್ಪ ಮೊದಲು ಬಂದಿರುತ್ತಿದ್ದರು, ಹಾಗು ಅವುಗಳ ಅಗತ್ಯ ಬೀಳುವವರೆಗೂ ರಾಜನ ಗ್ಯಾಲರಿಯಲ್ಲಿ ಪ್ರದರ್ಶನಕ್ಕಾಗಿ ಇರಿಸಲಾಗಿರುತ್ತಿತ್ತು. ರಾಜನ ದ್ವಾರವು, ಅರಮನೆಗೆ ಭೇಟಿ ನೀಡುವ ಇತರ ಪ್ರತಿಷ್ಠಿತರೂ ಸಹ ಬಳಸಬಹುದಾದ ಅಧಿಕೃತ ಪ್ರವೇಶ ದ್ವಾರವಾಗಿತ್ತು,[೪೭][೪೮] ಅಲ್ಲದೇ ಅರಮನೆಯನ್ನು ಸುತ್ತು ಹಾಕುವ ಸಾರ್ವಜನಿಕರಿಗೆ ಆರಂಭಿಕ ಸ್ಥಳವಾಗಿತ್ತು.[೪೯]

ಅಲ್ಲಿಂದ, ರಾಜರು ಬಳಸುತ್ತಿದ್ದ ಮೆಟ್ಟಿಲ ಸಾಲು ಪ್ರಧಾನ ಅಂತಸ್ತಿಗೆ ದಾರಿ ಮಾಡಿಕೊಡುತ್ತಿತ್ತು. ಇದು ಕಂದು ಬಣ್ಣದ ಗ್ರಾನೈಟ್ ನಿಂದ ನಿರ್ಮಿಸಲಾದ ೨೬ ಮೆಟ್ಟಿಲುಗಳ ವಿಶಾಲವಾದ, ಒಡೆಯದ ಸಾಲುಮೆಟ್ಟಿಲುಗಳಾಗಿವೆ.[೫೦] ರಾಜವಂಶದ ಅಶ್ವದಳದ ಎರಡು ತುಕಡಿಗಳಾದ ಲೈಫ್ ಗಾರ್ಡ್ಸ್ ಹಾಗು ಬ್ಲ್ಯೂಸ್ ಅಂಡ್ ರಾಯಲ್ಸ್ ನ ಕತ್ತಿಯನ್ನು ಹಿಡಿದ ಸೈನಿಕರು ರಾಜ್ಯದಲ್ಲಿ ನಡೆಯುವ ವಿಶೇಷ ಸಮಾರಂಭಗಳಲ್ಲಿ ಈ ಮೆಟ್ಟಿಲುಗಳ ಮೇಲೆ ಸಾಲಾಗಿ ನಿಂತಿರುತ್ತಾರೆ.[೫೧]

ಮೆಟ್ಟಿಲಸಾಲಿನ ನಂತರ ನಾರ್ಮನ್ ದ್ವಾರ ಮಂಟಪವು ಸಿಗುತ್ತದೆ, ಇದು ಚೌಕಾಕಾರವಾಗಿದ್ದು, ಮಧ್ಯದಲ್ಲಿ ಜೊಂಪೆಯಾದ ಎತ್ತರವಾದ ದುಂಡುಗಂಬದಿಂದ ಹಾಗು ಅದಕ್ಕೆ ಆಧಾರವಾಗಿರುವ ಸಂಕೀರ್ಣವಾದ ಮೇಲ್ಚಾವಣಿಯಿಂದ ವಿಶಿಷ್ಟವಾಗಿತ್ತು. ಇದು ನಾಲ್ಕು ಕೂಡಂಚು ಕಮಾನುಗಳ ಜೊತೆಯಲ್ಲಿ ಲಿಯರ್ನ್(ಗಾಥಿಕ್ ಕಟ್ಟಡದ ಕಮಾನುಪಟ್ಟಿಗಳನ್ನು ಕೂಡಿಸುವ ಕಿರುಪಟ್ಟಿ) ಏಣುಗಳು ಹಾಗು ಕೆತ್ತಲ್ಪಟ್ಟ ಉಬ್ಬುಶಿಲ್ಪಗಳಿಂದ ಮಾಡಲ್ಪಟ್ಟಿತ್ತು. ದ್ವಾರ ಮಂಟಪವು ನಾರ್ಮನ್ ಇತಿಹಾಸವನ್ನು ಆಧರಿಸಿ ತನ್ನ ಉದ್ದೇಶಿತ ಅಲಂಕಾರಿಕ ಯೋಜನೆಗೆ ಹೆಸರುವಾಸಿಯಾಗಿದೆ.[೫೨] ಈ ಸಂದರ್ಭದಲ್ಲಿ, ಯೋಜಿಸಲಾದಂತೆ ನಾರ್ಮನ್ ರಾಜರುಗಳ ಮೂರ್ತಿಗಳಾಗಲೀ ಅಥವಾ ಚಿತ್ರಾಲಂಕಾರಗಳಾಗಲೀ ಕಾರ್ಯರೂಪಕ್ಕೆ ಬರಲಿಲ್ಲ; ಹಾಗು ಕೇವಲ ಬಣ್ಣದ ಗಾಜಿನ ಮೇಲೆ ಚಿತ್ರಿಸಲಾದಂತಹ ವಿಲ್ಲಿಯಮ್ ದಿ ಕಾಂಕ್ವರರ್ ನ ಚಿತ್ರವು ಈ ವಿಷಯ ವಸ್ತುವಿನ ಬಗ್ಗೆ ಸುಳುಹು ನೀಡುತ್ತದೆ. ಕೊಠಡಿಯಲ್ಲಿ ರಾಣಿ ವಿಕ್ಟೋರಿಯಾಳ ಎರಡು ಚಿತ್ರಗಳು ಕಂಡುಬರುತ್ತದೆ; ಒಂದರಲ್ಲಿ ಬಣ್ಣದ ಗಾಜ್ನಿನ ಮೇಲೆ ಚಿತ್ರಿಸಲಾದ ಯುವತಿ ವಿಕ್ಟೋರಿಯಾ,[೫೩] ಹಾಗು ಆಕೆಯ ಜೀವಿತಾವಧಿಯ ಕೊನೆಯಲ್ಲಿ ಚಿತ್ರಿಸಲಾದ ಮತ್ತೊಂದು ಚಿತ್ರಣ, ಇದರಲ್ಲಿ ಆಕೆ ಹೌಸ್ ಆಫ್ ಲಾರ್ಡ್ಸ್ ಗಳ ಸಿಂಹಾಸನದ ಮೇಲೆ ಆಸೀನಳಾಗಿದ್ದಾಳೆ, ೧೯೦೦ರಲ್ಲಿ ಈ ಚಿತ್ರವನ್ನು ಜೀನ್-ಜೋಸೆಫ್ ಬೆಂಜಮಿನ್-ಕಾನ್ಸ್ಟೆಂಟ್ [೫೪]ಎಂಬ ಕಲಾವಿದನು ರಚಿಸಿದ್ದಾರೆ. ಮೂರ್ತಿಗಳಿಗೆಂದು ಉದ್ದೇಶಿಸಲಾಗಿದ್ದ ಹದಿನಾರು ಕಂಬದ ಪೀಠಗಳು, ಹೌಸ್ ಆಫ್ ಲಾರ್ಡ್ಸ್ ನಿಂದ ಆಯ್ಕೆಯಾಗುವ ಪ್ರಧಾನ ಮಂತ್ರಿಗಳ ಪ್ರತಿಮೆಗಳನ್ನು ಒಳಗೊಂಡಿರುತ್ತದೆ; ಉದಾಹರಣೆಗೆ ಅರ್ಲ್ ಗ್ರೇ ಹಾಗು ಮಾರ್ಕ್ವೆಸ್ಸ್ ಆಫ್ ಸಾಲಿಸ್ಬರಿ ಮೆಟ್ಟಿಲ ಸಾಲಿನ ಎದುರಿರುವ ಎರಡು ದ್ವಾರಗಳು ರಾಯಲ್ ಗ್ಯಾಲರಿಗೆ ದಾರಿ ಮಾಡಿಕೊಡುತ್ತವೆ, ಹಾಗು ಬಲಭಾಗದಲ್ಲಿರುವ ಮತ್ತೊಂದು ದ್ವಾರವು ವಸ್ತ್ರಾಲಂಕಾರ ಕೊಠಡಿಗೆ ಹೋಗುವ ಮಾರ್ಗವಾಗಿದೆ.[೪೬]

ರಾಣಿಯ ವಸ್ತ್ರಾಲಂಕಾರ ಕೊಠಡಿ

[ಬದಲಾಯಿಸಿ]
See adjacent text.
ಅಲಂಕರಣದ ಕೊಠಡಿಗಳಲ್ಲಿ ಚೇರ್ ಆಫ್ ಸ್ಟೇಟ್ ನ ಮೇಲೆ ಸಂಸತ್ತಿನ ಆರಂಭಕ್ಕೆ ರಾಜನ ತಯಾರಿಗಳು

ರಾಣಿಯ ವಸ್ತ್ರಾಲಂಕಾರ ಕೊಠಡಿಯು, ಅರಮನೆಯ ವಿಧ್ಯುಕ್ತ ಕೂಟವು ನಡೆಯುವ ದಕ್ಷಿಣ ತುದಿಯಲ್ಲಿ ಸ್ಥಿತವಾಗಿದೆ, ಹಾಗು ಇದು ಕಟ್ಟಡದ ದಕ್ಷಿಣ ಮುಖಭಾಗದ ಮಧ್ಯದಲ್ಲಿ, ಇಲ್ಲಿಂದ ವಿಕ್ಟೋರಿಯಾ ಟವರ್ ಉದ್ಯಾನವನವನ್ನು ವೀಕ್ಷಿಸಬಹುದು.[೫೫] ಹೆಸರೇ ಸೂಚಿಸುವಂತೆ, ಇಲ್ಲಿ ರಾಜನು ಸಂಸತ್ತಿನ ಅಧಿವೇಶನದ ಆರಂಭಕ್ಕೆ ಮುನ್ನ ಅಧಿಕೃತ ವಸ್ತ್ರಾಭರಣ ಹಾಗು ಸಾಮ್ರಾಜ್ಯಶಾಹಿ ರಾಜನ ಕಿರೀಟವನ್ನು ಧರಿಸುತ್ತಾನೆ.[೫೬] ವೈಭವೋಪೇತವಾಗಿ ಅಲಂಕೃತವಾದ ಈ ಕೊಠಡಿಯ ಮುಖ್ಯ ಆಕರ್ಷಣೆಯೆಂದರೆ ರಾಜನು ಬಳಸುವ ಅಧಿಕಾರದ ಕೇಂದ್ರ ಸ್ಥಳ; ಇದನ್ನು ಮೂರು ಮೆಟ್ಟಿಲುಗಳ ವೇದಿಕೆಯ ಮೇಲೆ ಇರಿಸಲಾಗಿರುತ್ತದೆ.ಇದರ ಕೆಳಭಾಗದಲ್ಲಿ ಇಂಗ್ಲೆಂಡ್, ಸ್ಕಾಟ್ಲ್ಯಾಂಡ್ ಹಾಗು ಐರ್ಲೆಂಡ್ ನ ಹೂವಿನ ಲಾಂಛನಗಳು ಹಾಗು ವಿವಿಧ ಶಸ್ತ್ರಾಸ್ತ್ರಗಳ ಮೂಲಕ ಅಲಂಕರಿಸಲಾಗಿರುತ್ತದೆ. ಕುರ್ಚಿಯ ಹಿಂಭಾಗದಲ್ಲಿ ನೇರಳೆ ಬಣ್ಣದ ವೆಲ್ವೆಟ್ ಬಟ್ಟೆಯನ್ನು ಹಾಕಲಾಗಿರುತ್ತದೆ, ರಾಜವಂಶದ ಶಸ್ತ್ರಾಸ್ತ್ರಗಳೊಂದಿಗೆ ರಾಯಲ್ ಸ್ಕೂಲ್ ಆಫ್ ನೀಡಲ್ವರ್ಕ್ ಇದರ ಕಸೂತಿಯನ್ನು ಮಾಡಿರುತ್ತದೆ, ಇದರ ಸುತ್ತ ನಕ್ಷತ್ರಗಳು ಹಾಗು VR ಎಂಬ ಸಂಯುಕ್ತಾಕ್ಷರಗಳಿರುತ್ತವೆ.[೪೬] ಎಡ್ವರ್ಡ್ ಬ್ಯಾರಿ ಎರಡೂ ಕುರ್ಚಿಯನ್ನು ವಿನ್ಯಾಸಗೊಳಿಸಿದ್ದಾರೆ—ಒರಗಿಕೊಳ್ಳುವ ಮೆತ್ತೆಯನ್ನೂ ಸಹ ಕಸೂತಿಯಿಂದ ಅಲಂಕರಿಸಲಾಗಿದೆ—ಹಾಗು ಕೊಠಡಿಯ ಸುತ್ತಲೂ ಅಲಂಕೃತ ಅಮೃತಶಿಲೆಯ ಬೆಂಕಿಗೂಡಿದೆ, ಇದು ಸೆಂಟ್ ಜಾರ್ಜ್ ಹಾಗು ಸೆಂಟ್ ಮೈಕಲ್ ರ ಚಿನ್ನ ಬಣ್ಣ ಲೇಪಿತ ಮೂರ್ತಿಗಳನ್ನು ಒಳಗೊಂಡಿದೆ.[೫೫]

ಕೊಠಡಿಯ ಅಲಂಕೃತ ವಿಷಯವಸ್ತುವು ದಂತಕಥೆ ರಾಜ ಆರ್ಥರ್ ನದ್ದಾಗಿದೆ, ಇವನನ್ನು ಹಲವು ವಿಕ್ಟೋರಿಯನ್ನರು ತಮ್ಮ ರಾಷ್ಟ್ರತ್ವಕ್ಕೆ ಮೂಲವೆಂದು ಭಾವಿಸುತ್ತಾರೆ.[೫೭] ೧೮೪೮ ಹಾಗು ೧೮೬೪ರ ನಡುವೆ ವಿಲ್ಲಿಯಮ್ ಡೈಸೆ ಚಿತ್ರಿಸಿದ ಐದು ವರ್ಣಚಿತ್ರಗಳು ಭಿತ್ತಿಗಳ ಮೇಲೆ ಅಲಂಕೃತವಾಗಿವೆ, ಇದು ಪುರಾಣದ ಅನ್ಯೋಕ್ತಿಯ ವಿಷಯಗಳನ್ನು ನಿರೂಪಿಸುತ್ತವೆ. ಪ್ರತಿಯೊಂದು ದೃಶ್ಯವು ಒಂದು ಧೀರನ ಸದ್ಗುಣವನ್ನು ಪ್ರತಿನಿಧಿಸುತ್ತದೆ; ಇದರಲ್ಲಿ ಅತ್ಯಂತ ದೊಡ್ಡದಾದ ವರ್ನಚಿತ್ರವು ಎರಡು ಬಾಗಿಲುಗಳಷ್ಟಿದೆ, ಇದನ್ನು ಅಡ್ಮಿಶನ್ ಆಫ್ ಸರ್ ಟ್ರಿಸ್ಟ್ರ್ಯಾಮ್ ಟು ದಿ ರೌಂಡ್ ಟೇಬಲ್ ಎಂದು ಕರೆಯಲಾಗುತ್ತದೆ ಹಾಗು ಇದು ಆತಿಥೇಯ ನೀಡುವ ಗುಣವನ್ನು ಸ್ಪಷ್ಟಪಡಿಸುತ್ತದೆ.[೪೬] ಮೂಲತಃ ಏಳು ಚಿತ್ರಗಳ ರಚನೆಗೆ ಯೋಜಿಸಲಾಗಿತ್ತು ಆದರೆ ಕಲಾವಿದನ ನಿಧನದಿಂದಾಗಿ ಬಾಕಿ ಉಳಿದ ಎರಡು ಚಿತ್ರಗಳ ರಚನೆ ಸಾಧ್ಯವಾಗಲಿಲ್ಲ, ಹಾಗು ರಾಜನ ಆಡಳಿತ ಕುರ್ಚಿಯ ಪಕ್ಕದಲ್ಲಿರುವ ಗೋಡೆಕಾಗದದ ಅಂಕಣಫಲಕಗಳಲ್ಲಿ ಫ್ರಾನ್ಜ್ ಜೇವರ್ ವಿಂಟರ್ಹಾಲ್ಟರ್ ರಚಿಸಿದ ರಾಣಿ ವಿಕ್ಟೋರಿಯಾ ಹಾಗು ಯುವರಾಜ ಆಲ್ಬರ್ಟ್ ರ ತೈಲ ವರ್ಣಚಿತ್ರಗಳಿವೆ.[೫೫][note ೨] ಕೊಠಡಿಯಲ್ಲಿರುವ ಇತರ ಅಲಂಕರಣಗಳೂ ಸಹ ಆರ್ಥರಿಯನ್ ಪುರಾಣದಿಂದ ಪ್ರೇರೇಪಿತವಾಗಿವೆ; ಉದಾಹರಣೆಗೆ ವರ್ಣಚಿತ್ರಗಳ ಅಡಿಯಲ್ಲಿ ೧೮ ಅರೆಯುಬ್ಬು ಶಿಲ್ಪಗಳ ಸರಣಿಯಿದೆ. ಇದನ್ನು ಹೆನ್ರಿ ಹಗ್ ಹ್ಯಾಮ್ಸ್ಟೆಡ್ ಓಕ್ ಮರದಲ್ಲಿ ಕೆತ್ತಿದ್ದಾರೆ,[೪೬] ಹಾಗು ಮೇಲ್ಚಾವಣಿಯ ಕೆಳಗಡೆ ಅಲಂಕರಣಪಟ್ಟಿಯಿದೆ. ಇದು ರೌಂಡ್ ಟೇಬಲ್ ನೈಟ್ಸ್ ಗಳ ವಂಶಲಾಂಛನದ ಗುರುತನ್ನು ಪ್ರದರ್ಶಿಸುತ್ತದೆ.[೫೮] ಸ್ವತಃ ಮೇಲ್ಚಾವಣಿಯು ವಂಶಲಾಂಛನಗಳ ಚಿಹ್ನೆಗಳಿಂದ ಅಲಂಕೃತಗೊಂಡಿವೆ, ಇದೇ ರೀತಿಯಾಗಿ ಮರದ ನೆಲದ ಅಂಚುಗಳೂ ಸಹ[೪೫]—ಇದು ಬಿಂಬದಲ್ಲಿ ಬಲ ಭಾಗಕ್ಕೆ ಕಂಡರೆ, ಎಡ ಭಾಗದಲ್ಲಿ ಜಮಖಾನೆಗಳು ಹಾಸಲ್ಪಟ್ಟಿರುತ್ತವೆ.

ರಾಜವಂಶದ ಗ್ಯಾಲರಿ

[ಬದಲಾಯಿಸಿ]

ವಸ್ತ್ರಾಲಂಕರಣ ಕೊಠಡಿಯ ನೇರಕ್ಕೆ ಉತ್ತರದಿಕ್ಕಿಗೆ ರಾಜವಂಶದ ಗ್ಯಾಲರಿಯಿದೆ. 33.5 by 13.7 metres (110 by 45 ft)ನಲ್ಲಿ, ಇದು ಅರಮನೆಯ ಅತ್ಯಂತ ದೊಡ್ಡ ಕೊಠಡಿಗಳಲ್ಲಿ ಒಂದಾಗಿದೆ.[೧೮] ಇದರ ಮುಖ್ಯ ಉದ್ದೇಶವೆಂದರೆ, ಸಂಸತ್ತಿನ ಅಧಿವೇಶನದ ಆರಂಭದಲ್ಲಿ ನಡೆಯುವ ರಾಜವಂಶದ ಮೆರವಣಿಗೆಗೆ ವೇದಿಕೆಯಾಗಿ ನೆರವಾಗುವುದು. ಇದನ್ನು ಪ್ರೇಕ್ಷಕರು ಮಾರ್ಗದ ಎರಡೂ ಬದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ಮೆಟ್ಟಿಲ ಸಾಲಿನ ಆಸನಗಳಿಂದ ವೀಕ್ಷಿಸಬಹುದು.[೬೦] ಇದನ್ನು, ಸಂಸತ್ತಿನ ಎರಡೂ ಭವನಗಳನ್ನು ಉದ್ದೇಶಿಸಿ ಮಾತನಾಡಲು ಬರುವ ವಿದೇಶದ ಹಿರಿಯ ರಾಜಕಾರಣಿಗಳ ಭೇಟಿಯ ಸಂದರ್ಭದಲ್ಲಿಯೂ ಸಹ ಬಳಸಲಾಗುತ್ತದೆ. ಅಲ್ಲದೇ ಇದನ್ನು ವಿದೇಶಿ ಉನ್ನತಾಧಿಕಾರಿಗಳಿಗೆ ಗೌರವಾರ್ಥವಾಗಿ ನೀಡುವ ಸ್ವಾಗತ ಸಮಾರಂಭಗಳಿಗೆ,[೬೧] ಹಾಗು ಸಾಮಾನ್ಯವಾಗಿ ಲಾರ್ಡ್ಸ್ ಚ್ಯಾನ್ಸಲರ್ ಬೆಳಗಿನ ಉಪಹಾರ ಮಾಡಲು;[೬೨] ಈ ಹಿಂದೆ ಈ ಕೊಠಡಿಯು ಹೌಸ್ ಆಫ್ ಲಾರ್ಡ್ಸ್ ಹಲವಾರು ವರಿಷ್ಠವರ್ಗದ ಮೇಲೆ ನಡೆಸುತ್ತಿದ್ದ ವಿಚಾರಣೆಗಳಿಗೆ ಸಭಾಂಗಣವಾಗಿತ್ತು.[೬೧][೬೩] ಸಂಸತ್ತಿನ ದಸ್ತಾವೇಜುಗಳ ದಾಖಲೆಗಳನ್ನು ರಾಜವಂಶದ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.(ಇದರಲ್ಲಿ ಚಾರ್ಲ್ಸ್ Iರ ಮರಣದಂಡನೆ ಪತ್ರದ ಯಥಾಪ್ರತಿ), ಹಾಗು ಮೇಜುಗಳು ಹಾಗು ಆಸನಗಳು ಲಾರ್ಡ್ಸ್ ನ ಸದಸ್ಯರಿಗೆ ಕೆಲಸ ಮಾಡಲು ಅವಕಾಶ ನೀಡುವುದರ ಜೊತೆಗೆ ಇದು ಅವರ ಚರ್ಚಾ ಕೊಠಡಿಗೆ ತೀರ ಸಮೀಪದಲ್ಲಿದೆ.[೪೬]

ಚಿತ್ರ:Royal Gallery, Palace of Westminster.jpg
ಮ್ಯಾಕ್ ಲೈಸ್ ರ ಹಸಿಚಿತ್ರಗಳು ಹಾಳಾದ ನಂತರ ರಾಯಲ್ ಗ್ಯಾಲರಿಯ ಉಳಿದ ಗೋಡೆಗಳನ್ನು ಚಿತ್ರಿಸದೆಯೇ ಹಾಗೇ ಬಿಡಲಾಯಿತು.

ರಾಜವಂಶದ ಗ್ಯಾಲರಿಯ ಅಲಂಕರಣ ಯೋಜನೆಯು ಬ್ರಿಟಿಶ್ ಮಿಲಿಟರಿ ಇತಿಹಾಸದ ಮುಖ್ಯ ಘಟನಾವಳಿಗಳನ್ನು ಪ್ರದರ್ಶಿಸುವ ಉದ್ದೇಶ ಹೊಂದಿತ್ತು, ಹಾಗು ಇದರ ಭಿತ್ತಿಗಳು ಡೆನಿಯಲ್ ಮಕ್ಲಿಸೆಯವರ ಎರಡು ದೊಡ್ಡ ವರ್ಣಚಿತ್ರಗಳಿಂದ ಅಲಂಕೃತವಾಗಿವೆ. ಇದರಲ್ಲಿ ಒಂದೊಂದು13.7 by 3.7 metres (45 by 12 ft) ರಷ್ಟು ಅಳತೆಯಲ್ಲಿವೆ: ದಿ ಡೆತ್ ಆಫ್ ನೆಲ್ಸನ್ (ಇದು ೧೮೦೫ರ ಟ್ರಫಾಲ್ಗರ್ ಯುದ್ಧದಲ್ಲಿ ಮರಣವನ್ನಪ್ಪಿದ ಲಾರ್ಡ್ ನೆಲ್ಸನ್ ಬಗ್ಗೆ ನಿರೂಪಿಸುತ್ತದೆ.) ಹಾಗು ದಿ ಮೀಟಿಂಗ್ ಆಫ್ ವೆಲ್ಲಿಂಗ್ಟನ್ ಅಂಡ್ ಬ್ಲುಚೆರ್(೧೮೧೫ರಲ್ಲಿ ವಾಟರ್ ಲೂ ಯುದ್ಧದಲ್ಲಿ ಡ್ಯೂಕ್ ಆಫ್ ವೆಲ್ಲಿಂಗ್ಟನ್ ಹಾಗು ಗೆಬಾರ್ಡ್ ಲೆಬೆರೆಚ್ಟ್ ವೊನ್ ಬ್ಲುಚೆರ್ ಸಂಧಿಸಿದ್ದರ ಬಗ್ಗೆ ನಿರೂಪಿಸುತ್ತದೆ.[೪೬] ಭಿತ್ತಿ ಚಿತ್ರಗಳು,ಅವುಗಳು ಪೂರ್ಣಗೊಂಡ ಸ್ವಲ್ಪದಿನದಲ್ಲಿ ಹಲವಾರು ಕಾರಣಗಳಿಂದ ನಾಶವಾದವು.ಇದಕ್ಕೆ ಬಹುಮುಖ್ಯ ಕಾರಣವೆಂದರೆ ವಾತಾವರಣದಲ್ಲಿನ ಮಾಲಿನ್ಯತೆ, ಹಾಗು ಇಂದು ಅದು ಬಹುತೇಕವಾಗಿ ಏಕವರ್ಣೀಯ ಚಿತ್ರವಾಗಿದೆ.[೫೭] ಯೋಜಿಸಲಾದಂತಹ ಉಳಿದ ಹಸಿಚಿತ್ರಗಳ ರಚನೆಯನ್ನು ರದ್ದುಪಡಿಸಲಾಯಿತು; ಹಾಗು ಗೋಡೆಗಳು ಜಾರ್ಜ್ I ನಂತರ ಬಂದ ರಾಜರುಗಳು ಹಾಗು ರಾಣಿಯರ ವರ್ಣಚಿತ್ರಗಳಿಂದ ಭರ್ತಿಯಾಗಿದೆ.[೬೪] ಮಿಲಿಟರಿ ಲಕ್ಷಣದಲ್ಲಿರುವ ಮತ್ತೊಂದು ಅಲಂಕೃತ ಅಂಶವೆಂದರೆ ಕಾಯೆನ್ ಕಲ್ಲಿಗೆ ಚಿನ್ನದ ಲೇಪನ ಮಾಡಲಾದ ಎಂಟು ಮೂರ್ತಿಗಳು, ಇದು ಮೂರು ಬಾಗಿಲ ದಾರಿಯಿಂದ ಸುತ್ತುವರೆದಿದೆ, ಹಾಗು ಗ್ಯಾಲರಿಯ ಚಾಚು ಕಿಟಕಿಯನ್ನು ಜಾನ್ ಬರ್ನಿ ಫಿಲಿಫ್ ಕೆತ್ತನೆ ಮಾಡಿದ್ದಾರೆ. ಪ್ರತಿಯೊಂದೂ ಒಬ್ಬ ರಾಜನ ವಿವರಣೆಯನ್ನು ನೀಡುವುದರ ಜೊತೆಗೆ ಆತನ ಆಳ್ವಿಕೆಯಲ್ಲಿ ನಡೆದಂತಹ ಪ್ರಮುಖ ಯುದ್ಧ ಅಥವಾ ಕದನದ ಬಗ್ಗೆ ನಿರೂಪಿಸುತ್ತದೆ.[೪೬] ನೆಲದ ಮೇಲ್ಭಾಗದಲ್ಲಿರುವ13.7 metres (45 ft) ಅಂಕಣಫಲಕಗಳು,[೧೮] ಟ್ಯೂಡರ್ ಗುಲಾಬಿಗಳು ಹಾಗು ಸಿಂಹಗಳ ಚಿತ್ರಗಳನ್ನು ಒಳಗೊಂಡಿವೆ; ಹಾಗು ಬಣ್ಣ ಲೇಪಿತ ಕಿಟಕಿಗಳು, ಇಂಗ್ಲೆಂಡ್ ಹಾಗು ಸ್ಕಾಟ್ಲ್ಯಾಂಡ್ ನ ರಾಜರುಗಳ ವಂಶಲಾಂಛನವನ್ನು ಪ್ರದರ್ಶಿಸುತ್ತವೆ.[೬೧]

ಯುವರಾಜನ ಕೊಠಡಿ

[ಬದಲಾಯಿಸಿ]

ಯುವರಾಜನ ಕೊಠಡಿಯು, ರಾಜವಂಶದ ಗ್ಯಾಲರಿ ಹಾಗು ಲಾರ್ಡ್ಸ್ ಕೊಠಡಿಯ ನಡುವೆಯಿರುವ ಒಂದು ಸಣ್ಣ ಹೊರಕೊಣೆಯಾಗಿದೆ. ಇದು ಹಳೆ ವೆಸ್ಟ್‌ಮಿನಿಸ್ಟರ್ ಅರಮನೆಯ ಸಂಸತ್ತಿನ ಕೊಠಡಿಗೆ ಹೊಂದಿಕೊಂಡಂತೆ ಇರುವ ಕೋಣೆಗೆ ಈ ಹೆಸರಿಡಲಾಗಿದೆ. ಇದು ನಿರ್ಮಿತವಾಗಿರುವ ಸ್ಥಳದ ಕಾರಣದಿಂದಾಗಿ, ಇಲ್ಲಿ ಲಾರ್ಡ್ಸ್ ಗಳ ಸದಸ್ಯರು ಭೇಟಿಯಾಗಿ ಸಂಸತ್ತಿನ ವ್ಯವಹಾರಗಳ ಬಗ್ಗೆ ಮಾತುಕತೆ ನಡೆಸುತ್ತಾರೆ. ಈ ಕೊಠಡಿಗೆ ಹೋಗಲು ಹಲವಾರು ಬಾಗಿಲುಗಳಿವೆಯಲ್ಲದೇ, ಹೌಸ್ ಆಫ್ ಲಾರ್ಡ್ಸ್ ಗಳ ಲಾಬಿಯ ವಿಭಾಗ ಹಾಗು ಹಲವಾರು ಪ್ರಮುಖ ಕಚೇರಿಗಳಿಗೆ ದಾರಿ ಮಾಡಿಕೊಡುತ್ತದೆ.[೪೬]

ಯುವರಾಜನ ಕೊಠಡಿಯ ವಿಷಯವಸ್ತುವೆಂದರೆ ಟ್ಯೂಡರ್ ಇತಿಹಾಸ, ಹಾಗು ಕೋಣೆಯ ಸುತ್ತಲೂ ಅಂಕಣಫಲಕಗಳ ಮೇಲೆ ಚಿತ್ರಿಸಲಾದ ೨೮ ತೈಲ ವರ್ಣಚಿತ್ರಗಳು, ಟ್ಯೂಡರ್ ಸಾಮ್ರಾಜ್ಯದ ಸದಸ್ಯರುಗಳ ಬಗ್ಗೆ ನಿರೂಪಣೆ ನೀಡುತ್ತವೆ. ಇವುಗಳು ರಿಚರ್ಡ್ ಬರ್ಚೆಟ್ಟ್ ಹಾಗು ಅವರ ಶಿಷ್ಯರುಗಳು ರಚಿಸಿದ ಚಿತ್ರಗಳಾಗಿವೆ; ಹಾಗು ಅವರ ರಚನೆಯು ವ್ಯಾಪಕವಾದ ಸಂಶೋಧನೆಯಿಂದ ಪರಭಾರೆ ಮಾಡಿಕೊಳ್ಳಲಾಗಿದೆ. ಇದು ೧೮೫೬ರಲ್ಲಿ ನ್ಯಾಷನಲ್ ಪೋರ್ಟ್ರೈಟ್ ಗ್ಯಾಲರಿಯ ಸ್ಥಾಪನೆಗೆ ಕಾರಣವಾಯಿತು, ೧೨ ಕಂಚಿನ ಅರೆಯುಬ್ಬು ಶಿಲ್ಪಗಳು ಈ ಭಿತ್ತಿಚಿತ್ರಗಳ ಕೆಳಗೆ ಇರಿಸಲಾಗಿದೆ, ಇವುಗಳನ್ನು ೧೮೫೫-೫೭ರ ನಡುವೆ ವಿಲ್ಲಿಯಮ್ ತೀಡ್ ರಚನೆ ಮಾಡಿದರು.[೪೬] ಇದರ ದೃಶ್ಯಾವಳಿಗಳಲ್ಲಿ ದಿ ಫೀಲ್ಡ್ ಆಫ್ ದಿ ಕ್ಲಾತ್ ಆಫ್ ಗೋಲ್ಡ್ , ದಿ ಎಸ್ಕೇಪ್ ಆಫ್ ಮೇರಿ, ಕ್ವೀನ್ ಆಫ್ ಸ್ಕಾಟ್ಸ್ ಹಾಗು ರಾಲಿಗ್ ಸ್ಪ್ರೆಡಿಂಗ್ ಹಿಸ್ ಕ್ಲೋಕ್ ಆಸ್ ಏ ಕಾರ್ಪೆಟ್ ಫಾರ್ ದಿ ಕ್ವೀನ್ ಗಳು ಸೇರಿವೆ.[೬೫] ವರ್ಣಚಿತ್ರಗಳ ಮೇಲೆ, ಕಿಟಕಿಯ ಮಟ್ಟದಲ್ಲಿ ಅಂಕಣಗಳಿವೆ, ಇದು ಹತ್ತು ಅರ್ಮಾಡ ಚಿತ್ರ ನೇಯ್ದ ಬಟ್ಟೆಗಳಲ್ಲಿ ಆರನ್ನು ನೇತುಹಾಕಲು ಉದ್ದೇಶಿಸಲಾಗಿತ್ತು. ಇವುಗಳು ೧೮೩೪ರಲ್ಲಿ ಬೆಂಕಿಗಾಹುತಿಯಾಗುವವರೆಗೂ ಹೌಸ್ ಆಫ್ ಲಾರ್ಡ್ಸ್ ನ ಕೊಠಡಿಯಲ್ಲಿ ತೂಗುಹಾಕಲಾಗಿತ್ತು, ಹಾಗು ಇವುಗಳು ೧೫೮೮ರಲ್ಲಿ ಸೋತು ಹೋದ ಸ್ಪಾನಿಶ್ ಅರ್ಮಾಡನ್ನು ನಿರೂಪಿಸುತ್ತವೆ. ಈ ಯೋಜನೆಯನ್ನು ೧೮೬೧ರವರೆಗೂ ಸ್ಥಗಿತಗೊಳಿಸಲಾಗಿತ್ತು.(ಈ ಅವಧಿಯಲ್ಲಿ ಕೇವಲ ಒಂದೇ ಒಂದು ವರ್ಣಚಿತ್ರವು ಪೂರ್ಣಗೊಂಡಿತ್ತು), ಅಲ್ಲದೇ ಇದನ್ನು ೨೦೦೭ರವರೆಗೂ ಮತ್ತೆ ಆರಂಭಿಸಲಾಗಲಿಲ್ಲ;as of ಆಗಸ್ಟ್ 2010 ಎಲ್ಲ ಆರು ವರ್ಣಚಿತ್ರಗಳು ಪೂರ್ಣಗೊಂಡಿದ್ದು, ಇವುಗಳನ್ನು ರಾಜವಂಶದ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಇವುಗಳನ್ನು ಯುವರಾಜನ ಕೊಠಡಿಯಲ್ಲಿ ತೂಗುಹಾಕಲು ಉದ್ದೇಶಿಸಲಾಗಿದೆ.[೬೬][೬೭][೬೮]

ಕೊಠಡಿಯಲ್ಲಿ ರಾಣಿ ವಿಕ್ಟೋರಿಯಾ ಸಿಂಹಾಸನದ ಮೇಲೆ ಆಸೀನಳಾಗಿರುವಂತ ಪ್ರತಿಮೆಯೂ ಸಹ ಇದೆ.(ಸ್ವತಃ ಇದನ್ನು ಪೀಠದ ಮೇಲೆ ಇರಿಸಲಾಗಿದೆ) ಆಕೆಯು ತನ್ನ ಕೈಯಲ್ಲಿ ರಾಜದಂಡ ಹಾಗು ಲಾರೆಲ್ ಕಿರೀಟ ಧರಿಸಿದ್ದಾಳೆ. ಇದು ಈಕೆ ಮೇಲ್ವಿಚಾರಣೆ ನಡೆಸುವುದರ ಜೊತೆಗೆ ಆಳ್ವಿಕೆಯನ್ನೂ ನಡೆಸುತ್ತಿದ್ದಳು ಎಂಬುದನ್ನು ಸೂಚಿಸುತ್ತದೆ.[೪೬] ಈ ಪ್ರತಿಮೆಯು, ನ್ಯಾಯ ಹಾಗು ಸೌಮ್ಯತೆಯ ಅನ್ಯೋಕ್ತಿಯ ಮೂರ್ತಿಗಳಿಂದ ಸುತ್ತುವರೆದಿದೆ—ಮೊದಲಿನದ್ದು ಬರಿ ಕತ್ತಿ ಹಾಗು ಒಂದು ಅನಮ್ಯವಾದ ಮುಖಭಾವವನ್ನು ತೋರಿದರೆ, ಮತ್ತೊಂದು ಅನುಕಂಪ ಹಾಗು ಆಲಿವ್ ಕೊಂಬೆಯನ್ನು ನೀಡುತ್ತಿರುವಂತೆ ಕಂಡುಬರುತ್ತದೆ.[೬೯] ಬಿಳಿ ಅಮೃತಶಿಲೆಯಿಂದ ಕೆತ್ತಲಾದ ಶಿಲ್ಪೀಯ ಸಮಷ್ಟಿಯನ್ನು ೧೮೫೫ರಲ್ಲಿ ಜಾನ್ ಗಿಬ್ಸನ್ ಕೆತ್ತಿದ್ದಾರೆ. ಇದು 2.44 metres (8 ft)ರಷ್ಟು ಎತ್ತರ ಹೊಂದಿದೆ; ಇದರ ಗಾತ್ರವು, ಯುವರಾಜನ ಕೊಠಡಿಗೆ ಹೊಂದಿಕೆಯಾಗದಂತಹ ಗಾತ್ರ ಹೊಂದಿದೆಯೆಂದು ಪರಿಗಣಿಸಲಾಗಿದೆ, ಹಾಗು ಸುತ್ತುವರಿದ ಪ್ರತಿಮೆಗಳು ೧೯೫೫ ಹಾಗು ೧೯೭೬ರ ನಡುವೆ ಸಂಗ್ರಹಿಸಲಾಯಿತು. ಆದಾಗ್ಯೂ, ಗುಂಪಿನ ಗಾತ್ರ ಹಾಗು ಸ್ಥಳವು, ರಾಜವಂಶದ ಗ್ಯಾಲರಿಯ ಬಾಗಿಲುಗಳಿಗೆ ವಿರುದ್ಧವಾಗಿರುವ ಕಮಾನು(ಇದನ್ನು ಸಂಸತ್ತಿನ ಅಧಿವೇಶನದ ಆರಂಭದಲ್ಲಿ ರಾಜವಂಶದ ಮೆರವಣಿಗೆಗೆ ಅನುಕೂಲವಾಗುವಂತೆ ಅಲ್ಲಿಂದ ಸ್ಥಳಾಂತರಗೊಳಿಸಲಾಗುತ್ತದೆ.)ಇದನ್ನು ದೂರದಿಂದ ವೀಕ್ಷಿಸಬೇಕೆಂಬುದನ್ನು ಇದು ಸೂಚಿಸುತ್ತದೆ, ಹಾಗು ಸಾಂಕೇತಿಕವಾಗಿ ರಾಜರುಗಳು ರಾಜವಂಶದ ಗ್ಯಾಲರಿಯಿಂದ ಭಾಷಣ ನೀಡಲು ಇಳಿದು ಬರುವಾಗ ರಾಜವಂಶದ ಸದಸ್ಯರಿಗೆ ಕರ್ತವ್ಯಗಳನ್ನು ಅವರಿಗೆ ನೆನಪು ಮಾಡಿಕೊಡುತ್ತದೆ.[೪೬][೭೦]

ಲಾರ್ಡ್ಸ್ ಕೊಠಡಿ

[ಬದಲಾಯಿಸಿ]
Photograph
ರಾಜನ ಸಿಂಹಾಸನ ಮತ್ತು ಅದರ ಚಿನ್ನದ ಲೇಪನ ಮಾಡಲಾದ ಮೇಲಾವರಣವು ಆರ್ನೆಟ್ ಲಾರ್ಡ್ಸ್ ಕೊಠಡಿಯನ್ನು ಮೀರಿಸುತ್ತದೆ.

ಹೌಸ್ ಆಫ್ ಲಾರ್ಡ್ಸ್ ನ ಕೊಠಡಿಯು, ವೆಸ್ಟ್‌ಮಿನಿಸ್ಟರ್ ಅರಮನೆಯ ದಕ್ಷಿಣ ಭಾಗದಲ್ಲಿ ಸ್ಥಿತವಾಗಿದೆ. ಅದ್ಧೂರಿಯಾಗಿ ಅಲಂಕೃತವಾದ ಕೊಠಡಿಯು13.7 by 24.4 metres (45 by 80 ft)ರಷ್ಟು ಅಳತೆಯದ್ದಾಗಿದೆ.[೧೮] ಕೊಠಡಿಯಲ್ಲಿರುವ ಬೆಂಚುಗಳು, ಹಾಗು ಅರಮನೆಯ ಲಾರ್ಡ್ಸ್ ಗಳ ವಿಭಾಗದ ಕೊಠಡಿಯ ಇತರ ಪೀಠೋಪಕರಣಗಳಿಗೆ ಕೆಂಪು ಬಣ್ಣ ಬಳಿಯಲಾಗಿದೆ. ಕೊಠಡಿಯ ಮೇಲ್ಭಾಗಕ್ಕೆ ಬಣ್ಣ ಲೇಪಿತ ಗಾಜಿನ ಕಿಟಕಿಗಳಿಂದ ಅಲಂಕರಿಸಲಾಗಿದೆ, ಹಾಗು ಆರು ಅನ್ಯೋಕ್ತಿಯ ಹಸಿಚಿತ್ರಗಳು ಧರ್ಮ, ವೀರಸಂಪ್ರದಾಯ ಹಾಗು ಕಾನೂನನ್ನು ಪ್ರತಿನಿಧಿಸುತ್ತವೆ.

ಕೊಠಡಿಯ ದಕ್ಷಿಣ ತುದಿಯಲ್ಲಿ ಸ್ವರ್ಣಾಲಂಕೃತ ಮೇಲ್ಕಟ್ಟು ಹಾಗು ಸಿಂಹಾಸನವಿದೆ; ಆದಾಗ್ಯೂ ಸಾರ್ವಭೌಮನು ಸೈದ್ಧಾಂತಿಕವಾಗಿ ಯಾವುದೇ ಅಧಿವೇಶನದಲ್ಲಿ ಸಿಂಹಾಸನವನ್ನು ಅಲಂಕರಿಸಬಹುದು.ಆತ ಅಥವಾ ಆಕೆ ಕೇವಲ ಸಂಸತ್ತಿನ ಆರಂಭಿಕ ಅಧಿವೇಶನಕ್ಕೆ ಮಾತ್ರ ಹಾಜರಿರುತ್ತಾರೆ. ಆರಂಭಿಕ ಅಧಿವೇಶನದಲ್ಲಿ ಪಾಲ್ಗೊಳ್ಳುವ ರಾಜವಂಶದ ಇತರ ಸದಸ್ಯರು ಸಿಂಹಾಸನದ ಪಕ್ಕದಲ್ಲಿರುವ ಅಧಿಕಾರ ಪೀಠವನ್ನು ಬಳಸುತ್ತಾರೆ, ಹಾಗು ವರಿಷ್ಠವರ್ಗದವರ ಪುತ್ರರು ಯಾವಾಗಲೂ ಸಿಂಹಾಸನದ ಕೆಳಗಿರುವ ಮೆಟ್ಟಿಲುಗಳ ಮೇಲೆ ಕೂರುವ ಹಕ್ಕನ್ನು ಪಡೆದಿರುತ್ತಾರೆ. ಸಿಂಹಾಸನದ ಮುಂಭಾಗದಲ್ಲಿ ಉಣ್ಣೆಯ ಮೆತ್ತೆಯಿರುತ್ತದೆ, ಹಿಂಬದಿಯಲ್ಲಿ ಒರಗಿಕೊಳ್ಳಲು ಹಾಗು ಬಾಹುರಹಿತ ಕೆಂಪು ಮೆತ್ತೆಗಳು ಉಣ್ಣೆಯಿಂದ ತುಂಬಿರುತ್ತವೆ. ಇದು ಉಣ್ಣೆಯ ವ್ಯಾಪಾರದ ಬಗೆಗಿನ ಐತಿಹಾಸಿಕ ಪ್ರಾಮುಖ್ಯತೆಯನ್ನು ಪ್ರತಿನಿಧಿಸುತ್ತದೆ; ಹಾಗು ಇದನ್ನು ಅಧಿಕಾರದಲ್ಲಿರುವ ಸದನದ ಅಧಿಕಾರಿಯು ಬಳಸುತ್ತಾರೆ.( ಇತ್ತೀಚಿಗೆ ೨೦೦೬ರಿಂದೀಚೆಗೆ ಲಾರ್ಡ್ ಸ್ಪೀಕರ್, ಆದರೆ ಐತಿಹಾಸಿಕವಾಗಿ ಲಾರ್ಡ್ ಚ್ಯಾನ್ಸಲರ್ ಅಥವಾ ಒಬ್ಬ ಡೆಪ್ಯುಟಿಯು ಇದರಲ್ಲಿ ಆಸೀನರಾಗುತ್ತಾರೆ). ರಾಜವಂಶದ ಅಧಿಕಾರವನ್ನು ಪ್ರತಿನಿಧಿಸುವ ಸದನದ ರಾಜದಂಡವನ್ನು ಉಣ್ಣೆಮೆತ್ತೆಯ ಹಿಂಭಾಗದಲ್ಲಿ ಇರಿಸಲಾಗಿರುತ್ತದೆ. ಉಣ್ಣೆಮೆತ್ತೆಯ ಮುಂಭಾಗದಲ್ಲಿ ನ್ಯಾಯಾಧೀಶರ ಉಣ್ಣೆಮೆತ್ತೆಯಿರುತ್ತದೆ, ದೊಡ್ಡದಾದ ಕೆಂಪು ಬಣ್ಣದ ದಿಂಬಿನಂತಿರುವ ಇದರ ಮೇಲೆ ಈ ಹಿಂದೆ ಆರಂಭಿಕ ಅಧಿವೇಶನದ ವೇಳೆ ಲಾ ಲಾರ್ಡ್ಸ್ ಗಳು ಆಸೀನರಾಗುತ್ತಿದ್ದರು.(ಇವರು ಹೌಸ್ ಆಫ್ ಲಾರ್ಡ್ಸ್ ನ ಸದಸ್ಯರುಗಳಾಗಿರುತ್ತಿದ್ದರು), ಹಾಗು ಭವಿಷ್ಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳು ಹಾಗು ಇತರ ನ್ಯಾಯಾಧೀಶರುಗಳು(ಸದಸ್ಯರುಗಳು ಆಗಿರಲಿ ಬಿಡಲಿ), ಸರ್ಕಾರದ ನ್ಯಾಯಾಂಗವನ್ನು ಪ್ರತಿನಿಧಿಸುತ್ತಿದ್ದರು. ಗುಮಾಸ್ತರು ಕುಳಿತುಕೊಳ್ಳುವ ಸದನದ ಮೇಜು ಇದರ ಮುಂಭಾಗದಲ್ಲಿದೆ.

ಸದನದ ಸದಸ್ಯರು, ಕೊಠಡಿಯ ಮೂರು ಕಡೆಗಳಲ್ಲೂ ಇರುವ ಕೆಂಪು ಬೆಂಚುಗಳ ಮೇಲೆ ಆಸೀನರಾಗುತ್ತಾರೆ. ಲಾರ್ಡ್ಸ್ ಸ್ಪೀಕರ್ ನ ಬಲಭಾಗದ ಬೆಂಚನ್ನು ಧಾರ್ಮಿಕ ಭಾಗವು ರೂಪಿಸಿದರೆ, ಅವರ ಎಡಭಾಗಕ್ಕಿರುವ ಬೆಂಚುಗಳು ಅಲ್ಪ ಕಾಲಿಕ ಭಾಗವನ್ನು ರೂಪಿಸುತ್ತವೆ. ಲಾರ್ಡ್ಸ್ ಸ್ಪಿರಿಚ್ಯುವಲ್ (ಚರ್ಚ್ ಆಫ್ ಇಂಗ್ಲೆಂಡ್ ನಿಂದ ನೇಮಕಗೊಂಡ ಆರ್ಚ್ ಬಿಷಪ್ ಗಳು(ಪ್ರಧಾನ ಅರ್ಚಕರು) ಹಾಗು ಬಿಷಪ್ ಗಳು) ಎಲ್ಲರೂ ಧಾರ್ಮಿಕ ವಿಭಾಗದಲ್ಲಿ ಆಸೀನರಾಗುತ್ತಾರೆ. ಲಾರ್ಡ್ಸ್ ಟೆಂಪೋರಲ್(ಶ್ರೀಮಂತ ವರ್ಗದವರು) ಪಕ್ಷದ ಸದಸ್ಯತ್ವದ ಪ್ರಕಾರವಾಗಿ ಆಸೀನರಾಗುತ್ತಾರೆ: ಸರ್ಕಾರದ ಪಕ್ಷದ ಸದಸ್ಯರು ಧಾರ್ಮಿಕ ವರಿಷ್ಠರ ಭಾಗದಲ್ಲಿ ಕುಳಿತರೆ, ವಿರೋಧ ಪಕ್ಷದವರು ಟೆಂಪೊರಲ್ ಭಾಗದಲ್ಲಿ ಕುಳಿತುಕೊಳ್ಳುತ್ತಾರೆ. ವರಿಷ್ಠವರ್ಗದ ಕೆಲವರು, ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿರುವುದಿಲ್ಲ, ಇವರುಗಳು ಸದನದ ಮಧ್ಯಭಾಗದಲ್ಲಿರುವ ಉಣ್ಣೆಮೆತ್ತೆಗೆ ಎದುರಿನಲ್ಲಿರುವ ಬೆಂಚುಗಳಲ್ಲಿ ಕುಳಿತುಕೊಳ್ಳುತ್ತಿದ್ದರು; ಈ ಪ್ರಕಾರವಾಗಿ ಇವರುಗಳನ್ನು ಎದುರು ಸಾಲಿನ ಪ್ರತಿಪಕ್ಷದವರು ಅಥವಾ ಪಕ್ಷೇತರರು ಎಂದು ಕರೆಯಲಾಗುತ್ತಿತ್ತು.

Drawing
1911ರ ಸಂಸತ್ತಿನ ಕಾಯ್ದೆಯ ಅಂಗೀಕಾರಸಂಸತ್ತಿನ ಎರಡು ಸದನಗಳಲ್ಲಿನ ಮತಚಲಾವಣೆಗಳನ್ನು ವಿಭಜಿತ ರೂಪದಲ್ಲಿ ನಡೆಸಲಾಗುವುದು.

ಲಾರ್ಡ್ಸ್ ಕೊಠಡಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರಸಾರವಾಗುವ ಸಮಾರಂಭಗಳಲ್ಲಿ ತೋರಿಸಲಾಗುತ್ತದೆ.ಇದರಲ್ಲಿ ಬಹು ಮುಖ್ಯವಾದುದೆಂದರೆ ಸಂಸತ್ತಿನ ಅಧಿವೇಶನದ ಆರಂಭ; ಇದನ್ನು ಪ್ರತಿ ವಾರ್ಷಿಕ ಸಂಸತ್ತಿನ ಅಧಿವೇಶನ ಆರಂಭಿಸಲು ವಿಧ್ಯುಕ್ತವಾಗಿ ಏರ್ಪಡಿಸಲಾಗುತ್ತದೆ, ಇದನ್ನು ಸಾರ್ವತ್ರಿಕ ಚುನಾವಣಾ ಅಥವಾ ಶರತ್ಕಾಲದ ನಂತರ ಹಮ್ಮಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ಪ್ರತಿಯೊಂದು ಸಾಂವಿಧಾನಿಕ ಅಂಶವನ್ನು ಪ್ರತಿನಿಧಿಸಲಾಗುತ್ತದೆ: ಕಿರೀಟ(ಅಕ್ಷರಶಃ, ಹಾಗು ವೈಯಕ್ತಿಕವಾಗಿ ಸಾರ್ವಭೌಮನನ್ನು ಸಂಕೇತಿಸುತ್ತದೆ), ದಿ ಲಾರ್ಡ್ಸ್ ಸ್ಪಿರಿಚ್ಯುವಲ್ ಹಾಗು ಟೆಂಪೋರಲ್, ಹಾಗು ದಿ ಕಾಮನ್ಸ್(ಇವರೆಲ್ಲರೂ ಒಟ್ಟಾಗಿ ಶಾಸಕಾಂಗವನ್ನು ರೂಪಿಸುತ್ತಾರೆ), ನ್ಯಾಯಾಂಗ(ಆದಾಗ್ಯೂ ಹೆಚ್ಚಿನ ನ್ಯಾಯಾಧೀಶರುಗಳು ಸಂಸತ್ತಿನ ಎರಡೂ ಸದನಗಳ ಸದಸ್ಯರುಗಳಾಗಿರುವುದಿಲ್ಲ), ಹಾಗು ಕಾರ್ಯಾಂಗ(ಎರಡೂ ಪಕ್ಷಗಳ ಸರ್ಕಾರಿ ಮಂತ್ರಿಗಳು, ಹಾಗು ರಾಜನ ಜೊತೆಯಲ್ಲಿರುವ ವಿಧ್ಯುಕ್ತವಾದ ಮಿಲಿಟರಿ ದಳಗಳು); ಹಾಗು ಕೊಠಡಿಯ ಹೊರಭಾಗದಲ್ಲೇ ಇರುವ ದೊಡ್ಡದಾದ ರಾಜವಂಶದ ಗ್ಯಾಲರಿಯಲ್ಲಿ ಕುಳಿತು ಸಮಾರಂಭಕ್ಕೆ ಆಹ್ವಾನಿತರಾದ ದೊಡ್ಡ ಸಂಖ್ಯೆಯ ಅತಿಥಿಗಳು ವೀಕ್ಷಿಸಬಹುದು. ಸಿಂಹಾಸನಾರೂಢರಾದ ಸಾರ್ವಭೌಮರು, ಸಿಂಹಾಸನದಿಂದ ಭಾಷಣ ಮಾಡುತ್ತಾರೆ, ಆ ವರ್ಷದ ಸರ್ಕಾರದ ಯೋಜನೆ ಹಾಗು ಮುಂಬರುವ ಸಂಸತ್ತಿನ ಅಧಿವೇಶನಕ್ಕೆ ವಿಧಾಯಕದ ಕಾರ್ಯಸೂಚಿಯನ್ನು ಸ್ಥೂಲವಾಗಿ ವಿವರಿಸುತ್ತಾರೆ. ಕಾಮನ್ಸ್ ಗಳು ಲಾರ್ಡ್ಸ್ ಗಳ ಚರ್ಚಾ ಸಭಾಂಗಣಕ್ಕೆ ಪ್ರವೇಶಿಸದಿರಬಹುದು, ಇದರ ಬದಲಿಗೆ, ಬಾಗಿಲಿನ ಒಳಭಾಗದಲ್ಲೇ ಇರುವ ಸದನದ ಅಡ್ಡಗಟ್ಟೆಯ ಹಿಂಭಾಗದಿಂದ ಕಾರ್ಯಕಲಾಪಗಳನ್ನು ವೀಕ್ಷಿಸಬಹುದು. ಸಾರ್ವಭೌಮನು ಕೇವಲ ಲಾರ್ಡ್ಸ್ ಕಮಿಷನರ್ಸ್ ನ ಗುಂಪಿನಿಂದ ಪ್ರತಿನಿಧಿಸಲ್ಪಟ್ಟಿದ್ದಾಗ, ಪ್ರತಿ ಸಂಸತ್ತಿನ ಅಧಿವೇಶನದ ಕೊನೆಯಲ್ಲಿ ಒಂದು ಸಣ್ಣ ಮಟ್ಟದ ಔಪಚಾರಿಕ ವಿಧ್ಯುಕ್ತ ಸಮಾರಂಭ ಏರ್ಪಡಿಸಲಾಗುತ್ತದೆ.

ವರಿಷ್ಠ ವರ್ಗದ ಲಾಬಿ

[ಬದಲಾಯಿಸಿ]

ಲಾರ್ಡ್ಸ್ ಕೊಠಡಿಗೆ ನೇರವಾಗಿ ಉತ್ತರ ಭಾಗದಲ್ಲಿರುವುದು ವರಿಷ್ಠ ವರ್ಗದ ಲಾಬಿ; ಇದೊಂದು ಮುಂಗೋಣೆಯಾಗಿದ್ದು ಇದರಲ್ಲಿ ಲಾರ್ಡ್ಸ್ ನಿವಾಸದಲ್ಲಿರುವಾಗ ವಿಷಯಗಳನ್ನು ಅನೌಪಚಾರಿಕವಾಗಿ ಚರ್ಚಿಸುತ್ತಾರೆ ಅಥವಾ ಸಂಧಾನದ ಮೂಲಕ ತೀರ್ಮಾನಿಸುತ್ತಾರೆ.ಅಲ್ಲದೇ ಈ ಕೊಠಡಿಗೆ ಪ್ರವೇಶ ನಿಯಂತ್ರಿಸುವ ದ್ವಾರಪಾಲಕರಿಂದ ಸಂದೇಶಗಳನ್ನು ಸಂಗ್ರಹಿಸುತ್ತಾರೆ. ಲಾಬಿಯು ಪ್ರತಿಯೊಂದು ಬದಿಯಲ್ಲಿ 11.9 metres (39 ft)ನಷ್ಟು ಅಳತೆಯಿರುವ ಮತ್ತು 10 metres (33 ft)ನಷ್ಟು ಎತ್ತರವಿರುವ ಒಂದು ಚೌಕ ಕೊಠಡಿಯಾಗಿದೆ.[೧೮] ಇದರ ನೆಲದ ನಡುಭಾಗದಲ್ಲಿರುವ ಅಲಂಕರಣ ವಸ್ತುವು ಇದರ ಪ್ರಮುಖ ಲಕ್ಷಣವಾಗಿದೆ, ಆ ಅಲಂಕರಣ ವಸ್ತುವೆಂದರೆ ಡಾರ್ಬಿ ಮಾರ್ಬಲ್‌ಗಳಿಂದ ಮಾಡಲ್ಪಟ್ಟ ಮತ್ತು ಅಷ್ಟಭುಜ ಆಕಾರದ ಕೆತ್ತನೆ ಕೆಲಸ ಮಾಡಿದ ಹಿತ್ತಾಳೆ ಫಲಕಗಳಲ್ಲಿ ಜೋಡಿಸಿದ ಒಂದು ಪ್ರಕಾಶಮಾನವಾದ ಪಂಚದಳ ಗುಲಾಬಿಯಾಗಿದೆ.[೭೧] ನೆಲದ ಉಳಿದ ಭಾಗಕ್ಕೆ ವಂಶಲಾಂಛನಗಳ ವಿನ್ಯಾಸಗಳು ಮತ್ತು ಲ್ಯಾಟಿನ್ ಸೂಕ್ತಿಗಳನ್ನೊಳಗೊಂಡ ಬಣ್ಣದ ಹೆಂಚುಗಳನ್ನು ಹಾಸಲಾಗಿದೆ. ಗೋಡೆಗಳಿಗೆ ಬಿಳಿ ಶಿಲೆಗಳಿಂದ ಹೊರಹೊದಿಕೆ ಹೊದಿಸಲಾಗಿದೆ; ಮತ್ತು ಪ್ರತಿಯೊಂದಕ್ಕೂ ಬಾಗಿಲ ಪ್ರವೇಶ ದಾರಿ ಇರಿಸಲಾಗಿದೆ; ಕಮಾನು ಚಾವಣಿಯ ಮೇಲೆ ರಾಣಿ ವಿಕ್ಟೋರಿಯಾರ ಅಧಿಪತ್ಯದವರೆಗೆ ಇಂಗ್ಲೆಂಡ್ಅನ್ನು ಆಳಿದ ಆರು ರಾಜ-ವಂಶಗಳನ್ನು ಸೂಚಿಸುವ ಲಾಂಛನಗಳಿವೆ. (ಸ್ಯಾಕ್ಸನ್, ನಾರ್ಮನ್, ಪ್ಲಾಂಟಗೆನೆಟ್, ಟ್ಯೂಡರ್, ಸ್ಟ್ವಾರ್ಟ್ ಮತ್ತು ಹ್ಯಾನೋವೆರಿಯನ್) ಹಾಗೂ ಅವುಗಳ ಮಧ್ಯೆ ಇಂಗ್ಲೆಂಡ್‌ನ ಆರಂಭಿಕ ಶ್ರೀಮಂತವರ್ಗದವರ ಲಾಂಛನಗಳನ್ನು ಬಣ್ಣಗಳಲ್ಲಿ ಚಿತ್ರಿಸಿದ ಕಿಟಕಿಗಳಿವೆ.[೭೨]

ಬಾಗಿಲು ದಾರಿಗಳಲ್ಲಿ ದಕ್ಷಿಣಕ್ಕಿರುವ ಲಾರ್ಡ್ಸ್ ಕೊಠಡಿಗೆ ಪ್ರವೇಶ ಕಲ್ಪಿಸುವ ಬಾಗಿಲು ದಾರಿಯು ಭಾರೀ ಭವ್ಯವಾಗಿದೆ.ಅಲ್ಲದೇ ಸಂಪೂರ್ಣ ರಾಜವಂಶದ ಲಾಂಛನಗಳನ್ನೂ ಒಳಗೊಂಡಂತೆ ಹೆಚ್ಚು ಚಿನ್ನದ ಲೇಪನದಿಂದ ಅಲಂಕರಿಸಲ್ಪಟ್ಟಿದೆ. ಇದು ಹಿತ್ತಾಳೆ ಮಹಾದ್ವಾರಗಳಿಂದ ಆವರಿಸಲ್ಪಟ್ಟಿದೆ, ಸೂಕ್ಷ್ಮವಾಗಿ ಕೊರೆದ ಮತ್ತು ಗುಬ್ಬಿ-ಮೊಳೆಗಳನ್ನು ಹಾಕಿದ ಈ ಬಾಗಿಲುಗಳು ಒಟ್ಟಿಗೆ 1.5 tonnes (1.7 short tons) ನಷ್ಟು ತೂಕ ಹೊಂದಿವೆ.[೭೩] ಪಕ್ಕದ ಬಾಗಿಲುಗಳು ಗಡಿಯಾರಗಳನ್ನು ಹೊಂದಿದ್ದು ಕಾರಿಡಾರ್‌ಗಳಿಗೆ ತೆರೆದುಕೊಳ್ಳುತ್ತವೆ: ಪೂರ್ವದಲ್ಲಿ ಗ್ರಂಥಾಲಯಕ್ಕೆ ಪ್ರವೇಶ ಕಲ್ಪಿಸುವ ಲಾ ಲಾರ್ಡ್ಸ್ ಕಾರಿಡಾರ್‌ಗೆ ವಿಸ್ತರಿಸುತ್ತದೆ; ಮತ್ತು ಹತ್ತಿರದಲ್ಲಿರುವ ಪಶ್ಚಿಮದಲ್ಲಿನ ಗ್ರ್ಯಾಂಡ್ ಕಮಿಟಿಗಳಿಗೆ ಬಳಸಲಾಗುವ ಮೋಸಸ್ ಕೊಠಡಿಯಿದೆ.

ಉತ್ತರದಲ್ಲಿ ಕಮಾನು ಚಾವಣಿಯನ್ನು ಒದಗಿಸುವ ವರಿಷ್ಠ ವರ್ಗದ ಕಾರಿಡಾರ್ ಇದೆ. ಇದು ಚಾರ್ಲ್ಸ್ ವೆಸ್ಟ್ ಕೋಪ್‌ನಿಂದ ಇಂಗ್ಲಿಷ್ ನಾಗರಿಕ ಕದನದ ಸಂದರ್ಭದ ಐತಿಹಾಸಿಕ ದೃಶ್ಯಗಳನ್ನು ಚಿತ್ರಿಸುವ ಎಂಟು ಭಿತ್ತಿ ಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ.[೭೪] ಈ ಚಿತ್ರಗಳನ್ನು ೧೮೫೬ ಮತ್ತು ೧೮೬೬ರ ಸಂದರ್ಭದಲ್ಲಿ ಬಿಡಿಸಲಾಗಿದೆ;[೭೫][೭೬] ಹಾಗೂ ಪ್ರತಿಯೊಂದು ದೃಶ್ಯವನ್ನು 'ವಿಶೇಷವಾಗಿ ರಾಷ್ಟ್ರಕ್ಕೆ ಸ್ವಾತಂತ್ರ್ಯ ತರಲು ಮಾಡಿದ ಹೋರಾಟಗಳನ್ನು ನಿರೂಪಿಸಲು ಚಿತ್ರಿಸಲಾಗಿದೆ'.[೭೪] ಉದಾಹರಣೆಗಳೆಂದರೆ ಐದು ಸದಸ್ಯರನ್ನು ಸುಪರ್ದಿಗೆ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಚಾರ್ಲ್ಸ್ I ಇವರ ವಿರುದ್ಧ ಸ್ಪೀಕರ್ ಲೆಂತಾಲ್ ಕಾಮನ್ಸ್‌ನ ಹಕ್ಕುಗಳನ್ನು ಒತ್ತಿಹೇಳುತ್ತಿರುವ ಚಿತ್ರ . ಇದು ನಿರಂಕುಶ ಪ್ರಭುತ್ವದ ವಿರುದ್ಧ ಪ್ರತಿರೋಧವನ್ನು ಸೂಚಿಸುತ್ತದೆ; ಮತ್ತು ನ್ಯೂ ಇಂಗ್ಲೆಂಡ್‌ಗೆ ಯಾತ್ರಿಕಪಿತೃಗಳ ನೌಕಾರೋಹಣ ಚಿತ್ರ, ಇದು ಧಾರ್ಮಿಕ ಸ್ವಾತಂತ್ರವನ್ನು ಸ್ಪಷ್ಟಪಡಿಸುತ್ತದೆ.

ಕೇಂದ್ರ ಲಾಬಿ

[ಬದಲಾಯಿಸಿ]
The Central Lobby
ರಾಬರ್ಟ್ ಅನ್ನಿಂಗ್ ಬೆಲ್ ರವರಿಂದ ಐರ್ಲೆಂಡ್ ಗೆ ಸೆಂಟ್ ಪ್ಯಾಟ್ರಿಕ್ (1924) ಹಾಗು ಎಡ್ವರ್ಡ್ ಪಾಯ್ಟನ್ ರವರಿಂದ ವೇಲ್ಸ್ ಗೆ ಸೆಂಟ್ ಡೇವಿಡ್(1898) ಗಳು ಸೆಂಟ್ರಲ್ ಲಾಬಿಯಲ್ಲಿ ಅಲಂಕರಿಸಲಾದ ನಾಲ್ಕು ಬೆರಕೆಗಲ್ಲಿನ ಚಿತ್ತಾರಗಳಲ್ಲಿ ಎರಡಾಗಿವೆ.

ಮೂಲತಃ ಆಕಾರದಿಂದಾಗಿ 'ಅಷ್ಟಭುಜಾಕೃತಿಯ ಸಭಾಂಗಣ'ವೆಂದು ಕರೆಯಲ್ಪಡುತ್ತಿದ್ದ ಕೇಂದ್ರ ಲಾಬಿಯು ವೆಸ್ಟ್‌ಮಿನಿಸ್ಟರ್ ಅರಮನೆಯ ಕೇಂದ್ರ-ಬಿಂದುವಾಗಿದೆ. ಇದು ಕೇಂದ್ರ ಗೋಪುರಕ್ಕೆ ನೇರವಾಗಿ ಕೆಳ ಭಾಗದಲ್ಲಿದೆ, ಹಾಗೂ ದಕ್ಷಿಣದಲ್ಲಿ ಹೌಸ್ ಆಫ್ ಲಾರ್ಡ್ಸ್, ಉತ್ತರದಲ್ಲಿ ಹೌಸ್ ಆಫ್ ಕಾಮನ್ಸ್, ಪಶ್ಚಿಮದಲ್ಲಿ ಸೇಂಟ್ ಸ್ಟೀಫನ್ಸ್ ಸಭಾಂಗಣ ಮತ್ತು ಸಾರ್ವಜನಿಕ ಪ್ರವೇಶ ಮತ್ತು ಪೂರ್ವದಲ್ಲಿ ಕೆಳಗಿನ ನಿರೀಕ್ಷಣಾ ಸಭಾಂಗಣ ಹಾಗು ಗ್ರಂಥಾಲಯಗಳ ಮಧ್ಯೆ ಒಂದು ಜನನಿಬಿಡ ಅಡ್ಡ-ಹಾದಿಯಾಗಿ ರೂಪುಗೊಂಡಿದೆ. ಎರಡು ಚರ್ಚಾ ಕೋಣೆಗಳ ನಡುವಿನ ಇದರ ಸ್ಥಾನವು ಸಂವಿಧಾನಾತ್ಮಕ ತಾತ್ತ್ವಿಕ ಸಿದ್ಧಾಂತವಾದಿ ಎರ್ಸ್ಕಿನ್ ಮೇ ಈ ಲಾಬಿಯನ್ನು 'ಬ್ರಿಟಿಷ್ ಸಾಮ್ರಾಜ್ಯದ ರಾಜಕೀಯ ಕೇಂದ್ರ'ವೆಂದು ವಿವರಿಸಲು ಅನುವು ಮಾಡಿದೆ;[೭೭] ಮತ್ತು ನಡುವೆ ಬರುವ ಎಲ್ಲಾ ಬಾಗಿಲುಗಳನ್ನು ತೆರೆದಿಟ್ಟರೆ ಭವ್ಯವಾದ ತೂಗುವ ಗೊಂಚಲುದೀಪದ ಕೆಳಗಡೆ ನಿಂತ ವ್ಯಕ್ತಿಯು ರಾಜವಂಶದ ಸಿಂಹಾಸನ ಮತ್ತು ಸ್ಪೀಕರ್‌ನ ಅಧಿಕಾರ ಸ್ಥಾನ ಎರಡನ್ನೂ ನೋಡಲು ಅವಕಾಶ ಮಾಡಿಕೊಡುತ್ತದೆ. ಇಲ್ಲಿ ಪೂರ್ವ ಭೇಟಿಯನ್ನು ನಿಗದಿಪಡಿಸದೆಯೇ ಆಯಾ ಕ್ಷೇತ್ರದ ಮತದಾರ ಸದಸ್ಯರು ತಮ್ಮ ಸಂಸತ್ ಸದಸ್ಯರನ್ನು ಭೇಟಿ ಮಾಡಬಹುದು;[೭೮] ಮತ್ತು ಈ ರೂಢಿಯು ಲಾಬಿಂಗ್(ಪ್ರಭಾವ ಬೀರುವಿಕೆ) ಎಂಬ ಪದದ ಉಗಮದ ಸಂಭಾವ್ಯ ಕಾರಣಗಳಲ್ಲಿ ಒಂದಾಗಿದೆ.[೭೯] ಆ ಸಭಾಂಗಣವು ಪ್ರತಿ ಅಧಿವೇಶನಕ್ಕಿಂತ ಮೊದಲು ಇಲ್ಲಿಂದ ಕಾಮನ್ಸ್ ಕೊಠಡಿಗೆ ಸಾಗುವ ಸ್ಪೀಕರ್‌ನ ಮೆರವಣಿಗೆಯ ಸ್ಥಾನವೂ ಆಗಿದೆ.

ಕೇಂದ್ರ ಲಾಬಿಯು ಸಂಪೂರ್ಣವಾಗಿ 18.3 metres (60 ft)ನಷ್ಟು ಮತ್ತು ನೆಲದಿಂದ ಕಮಾನು ಚಾವಣಿಯ ಕೇಂದ್ರದವರೆಗೆ 22.9 metres (75 ft)ನಷ್ಟು ಅಳತೆ ಹೊಂದಿದೆ.[೧೮] ಕಮಾನು ಚಾವಣಿಗೆ ಆಧಾರವಾದ ಕಮಾನುಗಳ ನಡುವಿನ ಫಲಕಗಳನ್ನು ಪುಷ್ಪಾಲಂಕೃತ ಲಾಂಛನಗಳು ಮತ್ತು ವಂಶಲಾಂಛನಗಳ ವಿಶಿಷ್ಟ ಚಿಹ್ನೆಗಳನ್ನು ಪ್ರದರ್ಶಿಸುವ ವೆನೀಷನ್ ಗಾಜಿನ ಮೊಸೇಯಿಕ್ ಚಿತ್ರಕಲೆಗಳಿಂದ ಸಿಂಗರಿಸಲಾಗಿದೆ; ಹಾಗೂ ಈ ಕಮಾನುಗಳ ಛೇದಕಗಳಲ್ಲಿನ ಉಬ್ಬುಕೆತ್ತನೆಗಳಲ್ಲೂ ಸಹ ಪಾರಂಪರಿಕ ಲಾಂಛನಗಳನ್ನು ಕೊರೆಯಲಾಗಿದೆ.[೮೦] ಲಾಬಿಯ ಪ್ರತಿಯೊಂದು ಗೋಡೆಯು ಇಂಗ್ಲಿಷ್ ಮತ್ತು ಸ್ಕಾಟಿಶ್ ರಾಜರ ಪ್ರತಿಮೆಗಳಿಂದ ಅಲಂಕರಿಸಲಾದ ಒಂದು ಕಮಾನನ್ನು ಹೊಂದಿದೆ; ನಾಲ್ಕೂ ಬದಿಗಳಲ್ಲಿ ಬಾಗಿಲು-ದಾರಿಗಳಿವೆ, ಮತ್ತು ಅವುಗಳ ಮೇಲಿನ ಚೌಕಟ್ಟಿನ ಫಲಕದ ಪುಟೀಪನ್ನು ಯುನೈಟೆಡ್ ಕಿಂಗ್ಡಮ್‌ನ ಸಂವಿಧಾನರಚಕ ರಾಷ್ಟ್ರಗಳ ಆಶ್ರಯದಾತ ಸಂತ(ಸೇಂಟ್)ರನ್ನು ಸೂಚಿಸುವ ಮೊಸೇಯಿಕ್ ಚಿತ್ರಕಲೆಗಳಿಂದ ಅಂದಗೊಳಿಸಲಾಗಿದೆ: ಇಂಗ್ಲೆಂಡ್‌ನ ಸೇಂಟ್ ಜಾರ್ಜ್, ಸ್ಕಾಟ್‌ಲ್ಯಾಂಡ್‌ನ ಸೇಂಟ್ ಆಂಡ್ರಿವ್, ವೇಲ್ಸ್‌ನ ಸೇಂಟ್ ಡೇವಿಡ್ ಮತ್ತು ಐರ್ಲೆಂಡ್‌ನ ಸೇಂಟ್ ಪ್ಯಾಟ್ರಿಕ್.[note ೩] ಇತರ ನಾಲ್ಕು ಕಮಾನು ಚಾವಣಿಗಳಲ್ಲಿ ಎತ್ತರದಲ್ಲಿ ಕಿಟಕಿಗಳಿವೆ. ಅವುಗಳ ಕೆಳಗೆ ಶಿಲಾ ಪರದೆಗಳಿವೆ. ಅರಮನೆಯಲ್ಲಿರುವ ಎರಡಲ್ಲಿ ಒಂದು ಸಭಾಂಗಣದ ಅಂಚೆ-ಕಛೇರಿಯು ಈ ಪರದೆಗಳ ಹಿಂದೆ ಇದೆ. ಅವುಗಳ ಮುಂದೆ ೧೯ನೇ ಶತಮಾನದ ರಾಜ್ಯನೀತಿಜ್ಞರ ಸಹಜಗಾತ್ರಕ್ಕಿಂತಲೂ ದೊಡ್ಡ ನಾಲ್ಕು ಪ್ರತಿಮೆಗಳಿವೆ; ಅವುಗಳಲ್ಲಿ ಒಂದು ನಾಲ್ಕು-ಬಾರಿ ಪ್ರಧಾನ-ಮಂತ್ರಿಯಾದ ವಿಲಿಯಂ ಎವರ್ಟ್ ಗ್ಲ್ಯಾಡ್‌ಸ್ಟೋನ್.[೭೪] ಈ ಪ್ರತಿಮೆಗಳನ್ನು ನಿಲ್ಲಿಸಿದ ನೆಲವನ್ನು ಮಿಂಟನ್ ಬಣ್ಣದ-ಹೆಂಚುಗಳಿಂದ ಸಿಕ್ಕುಸಿಕ್ಕಾಗಿ ಮುಚ್ಚಲಾಗಿದೆ, ಮತ್ತು ಇದು ಲ್ಯಾಟಿನ್‌ನಲ್ಲಿ ಬರೆದ ಪವಿತ್ರಗೀತೆ 127ರ ಒಂದು ನಿರ್ದಿಷ್ಟಭಾಗವನ್ನು ಒಳಗೊಂಡಿದೆ. ಆ ಭಾಗವು ಈ ಕೆಳಗಿನಂತೆ ಅರ್ಥ ವಿವರಣೆ ನೀಡುತ್ತದೆ: "ಲಾರ್ಡ್‌ನ ಹೊರತು ಅವರ ಕಾರ್ಮಿಕರಿಗೆ ಇದನ್ನು ನಿರ್ಮಿಸಲು ಸಾಧ್ಯವಾಗಿಲ್ಲ".[೮೧]

ಕೇಂದ್ರ ಲಾಬಿಯಿಂದ ಕೆಳಗಿನ ಕಾಯುವ ಸಭಾಂಗಣಕ್ಕೆ ಪ್ರವೇಶ ಕಲ್ಪಿಸುವ ಪೂರ್ವದ ಕಾರಿಡಾರ್ ಮತ್ತು ಅದರ ಆರು ಪ್ರತ್ಯೇಕ ಅಂಕಣಗಳು ೧೯೧೦ರವರೆಗೆ ಖಾಲಿಯಾಗಿಯೇ ಇದ್ದವು, ಅನಂತರ ಅವನ್ನು ಟ್ಯೂಡರ್ ಸಂತತಿಯ ಇತಿಹಾಸದ ದೃಶ್ಯಗಳಿಂದ ತುಂಬಿಸಲಾಯಿತು.[೮೨] ಆ ಎಲ್ಲಾ ಕಾರ್ಯಗಳಿಗೆ ಲಿಬರಲ್ ವರಿಷ್ಠ ವರ್ಗದವರಿಂದ ಕೂಲಿ ಪಾವತಿಸಲಾಯಿತು, ಮತ್ತು ಪ್ರತಿಯೊಂದು ಚಿತ್ರವನ್ನು ವಿವಿಧ ಕಲಾವಿದರ ಬಿಡಿಸಿದ್ದರು. ಆದರೆ ಒಂದೇ ರೀತಿಯ ಕೆಂಪು, ಕಪ್ಪು ಮತ್ತು ಚಿನ್ನದ ಬಣ್ಣದ ವರ್ಣಫಲಕಗಳು ಹಾಗೂ ಒಂದೇ ರೀತಿಯ ಎತ್ತರದ ಪ್ರತಿಮೆಗಳೊಂದಿಗೆ ಎಲ್ಲಾ ಚಿತ್ರಗಳ ನಡುವೆ ಏಕರೂಪತೆಯಿತ್ತು. ಅವುಗಳಲ್ಲಿ ಒಂದು ದೃಶ್ಯವು ಬಹುಶಃ ಚಾರಿತ್ರಿಕವಾಗಿಲ್ಲ: ಹಳೆಯ ದೇವಸ್ಥಾನದ ಉದ್ಯಾನಗಳಲ್ಲಿ ಕೆಂಪು ಮತ್ತು ಬಿಳಿ ಗುಲಾಬಿ ಹೂಗಳನ್ನು ಕೀಳುತ್ತಿರುವುದು , ಇದು ಈ ಹೂಗಳ ಮೂಲವು ಅನುಕ್ರಮವಾಗಿ ಹೌಸಸ್ ಆಫ್ ಲ್ಯಾಂಕಸ್ಟರ್ ಮತ್ತು ಯೋರ್ಕ್‌ನ ಲಾಂಛನಗಳಾಗಿವೆಯೆಂಬುದನ್ನು ಸೂಚಿಸುತ್ತದೆ, ಇದನ್ನು ಶೇಕ್ಸ್‌ಪಿಯರ್‌ನ ಹೆನ್ರಿ VI, ಭಾಗ ೧ ರಿಂದ ತೆಗೆದುಕೊಳ್ಳಲಾಗಿದೆ.[೮೩]

ಸದಸ್ಯರ ಲಾಬಿ

[ಬದಲಾಯಿಸಿ]

ಕೇಂದ್ರ ಲಾಬಿಯಿಂದ ಉತ್ತರ ದಿಕ್ಕಿಗೆ ಮುಂದುವರಿದಾಗ ಕಾಮನ್ಸ್ ಕಾರಿಡಾರ್ ಸಿಗುತ್ತದೆ. ಇದು ಹೆಚ್ಚುಕಡಿಮೆ ದಕ್ಷಿಣದಲ್ಲಿರುವ ಅದರ ಪ್ರತಿರೂಪ ಕಾರಿಡಾರ್‌ನಂತಹುದೇ ವಿನ್ಯಾಸ ಹೊಂದಿದೆ. ಅಂತಃಕಲಹ ಮತ್ತು ಸುಪ್ರಸಿದ್ಧ ಕ್ರಾಂತಿಯ ನಡುವಿನ ೧೭ನೇ ಶತಮಾನದ ರಾಜಕೀಯ ಇತಿಹಾಸದ ದೃಶ್ಯಗಳಿಂದ ಅಲಂಕರಿಸಲ್ಪಟ್ಟಿದೆ. ಆ ದೃಶ್ಯಗಳಿಗೆ ಎಡ್ವರ್ಡ್ ಮ್ಯಾಥಿವ್ ವಾರ್ಡ್ ಬಣ್ಣ ಬಳಿದಿದ್ದಾರೆ. ಅವು ಸಂನ್ಯಾಸಿಯು ಸ್ವತಂತ್ರ ಸಂಸತ್ತಿಗಾಗಿ ಘೋಷಿಸುವುದು ಹಾಗೂ ಔತಣ-ಕೂಟದ ಸಭಾಂಗಣದಲ್ಲಿ ವಿಲಿಯಂ ಮತ್ತು ಮೇರಿಗೆ ಲಾರ್ಡ್ಸ್ ಮತ್ತು ಕಾಮನ್ಸ್ ಪಟ್ಟಾಭಿಷೇಕ ಮಾಡುವುದು ಮೊದಲಾದ ವಿಷಯಗಳನ್ನು ಒಳಗೊಂಡಿದೆ.[೭೪] ಅರಮನೆಯ ಲಾರ್ಡ್ಸ್ ವಿಭಾಗದ ವ್ಯವಸ್ಥೆಯನ್ನು ಹೋಲುವ ಮತ್ತೊಂದು ಮುಂಗೋಣೆಯು ಸದಸ್ಯರ ಲಾಬಿಯಾಗಿದೆ. ಈ ಕೊಠಡಿಯಲ್ಲಿ ಸಂಸತ್ತಿನ ಸದಸ್ಯರು ಚರ್ಚೆಗಳನ್ನು ಅಥವಾ ಮಾತುಕತೆಗಳನ್ನು ನಡೆಸುತ್ತಾರೆ, ಮತ್ತು ಒಟ್ಟಾಗಿ "ದಿ ಲಾಬಿ" ಎಂದು ಕರೆಯುವ ಮಾನ್ಯತೆ ಪಡೆದ ಪತ್ರಿಕೋದ್ಯಮಿಗಳು ಹೆಚ್ಚಾಗಿ ಸಂದರ್ಶನಗಳನ್ನು ಮಾಡುತ್ತಾರೆ.[೮೪]

ಈ ಕೊಠಡಿಯು ವರಿಷ್ಠ ವರ್ಗದ ಲಾಬಿಯಂತೆಯೇ ಇದೆ, ಆದರೆ ವಿನ್ಯಾಸದಲ್ಲಿ ಸರಳವಾಗಿದೆ, ಮತ್ತು ಸ್ವಲ್ಪ ಮಟ್ಟಿಗೆ ದೊಡ್ಡದಾಗಿದ್ದು ಎಲ್ಲಾ ಬದಿಗಳಲ್ಲೂ 13.7 metres (45 ft)ನಷ್ಟು ಅಳತೆಯ ಘನಾಕೃತಿಯನ್ನು ಉಂಟುಮಾಡುತ್ತದೆ.[೧೮] ಆಗ ೧೯೪೧ರ ಬಾಂಬ್ ದಾಳಿಯಿಂದ ಭಾರಿ ಹಾನಿಗೊಳಗಾದ ನಂತರ ಇದನ್ನು ಸರಳ ಶೈಲಿಯಲ್ಲಿ ಮರುನಿರ್ಮಿಸಲಾಯಿತು. ಕೆಲವು ಕಡೆ ಹೆಚ್ಚುಕಡಿಮೆ ಸಂಪೂರ್ಣವಾಗಿ ಅನಲಂಕೃತವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಾಮನ್ಸ್ ಕೊಠಡಿಗೆ ಪ್ರವೇಶ ಕಲ್ಪಿಸುವ ಬಾಗಿಲಿನ ಕಮಾನು-ಹಾದಿಯನ್ನು ಯುದ್ಧದ ದುಷ್ಕೃತ್ಯಗಳ ಉಳಿಕೆಯಾಗಿ ದುರಸ್ತಿ ಮಾಡದೇ ಹಾಗೆಯೇ ಉಳಿಸಲಾಗಿದೆ; ಮತ್ತು ಇದನ್ನು ಈಗ ರಬಲ್ ಆರ್ಚ್ ಅಥವಾ ಚರ್ಚಿಲ್ ಆರ್ಚ್ ಎಂದು ಕರೆಯಲಾಗುತ್ತದೆ. ಇದರ ಪಕ್ಕದಲ್ಲಿ ವಿಂಸ್ಟನ್ ಚರ್ಚಿಲ್ ಮತ್ತು ಡೇವಿಡ್ ಲಾಯ್ಡ್ ಜಾರ್ಜ್‌ರ ಹಿತ್ತಾಳೆ ಪ್ರತಿಮೆಗಳಿವೆ. ಇವರು ಅನುಕ್ರಮವಾಗಿ ಎರಡನೇ ಮತ್ತು ಮೊದಲನೇ ವಿಶ್ವ ಸಮರದ ಸಂದರ್ಭದಲ್ಲಿ ಬ್ರಿಟನ್‌ನ ಮುಖಂಡತ್ವ ವಹಿಸಿದ್ದ ಪ್ರಧಾನ ಮಂತ್ರಿಗಳಾಗಿದ್ದಾರೆ; MP ಗಳು ತಮ್ಮ ಮೊದಲನೇ ಭಾಷಣ ಮಾಡುವುದಕ್ಕಿಂತ ಮೊದಲು ಒಳ್ಳೆಯದಾಗಲಿಯೆಂದು ಪ್ರತಿಮೆಯ ಪಾದವನ್ನು ಉಜ್ಜುವ ಸಂಪ್ರದಾಯವು ಬಹುಹಿಂದಿನಿಂದಲೂ ಇರುವುದರಿಂದ ಇವುಗಳ ಪಾದವು ಹೊಳೆಯುತ್ತದೆ. ಲಾಬಿಯು ೨೦ನೇ ಶತಮಾನದ ಪ್ರಧಾನ ಮಂತ್ರಿಗಳ ಪ್ರತಿಮೆಗಳು ಮತ್ತು ಎದೆಮಟ್ಟದ-ವಿಗ್ರಹಗಳನ್ನು ಮಾತ್ರವಲ್ಲದೆ ಎರಡು ದೊಡ್ಡ ರಂಗಭೂಮಿಗಳನ್ನು ಹೊಂದಿದೆ. ಇಲ್ಲಿ MP ಗಳು ತಮ್ಮ ಅಂಚೆ ಮತ್ತು ದೂರವಾಣಿ ಸಂದೇಶಗಳನ್ನು ಪಡೆಯುತ್ತಾರೆ. ಹೌಸ್‌ನ ಬಳಕೆಗಾಗಿ ವಿನ್ಯಾಸಗೊಳಿಸಲಾದ ಈ ರಂಗಭೂಮಿಗಳನ್ನು ೧೯೬೦ರ ದಶಕದ ಆರಂಭದಲ್ಲಿ ಸ್ಥಾಪಿಸಲಾಗಿತ್ತು.[೮೫]

ಕಾಮನ್ಸ್ ಕೊಠಡಿ

[ಬದಲಾಯಿಸಿ]

ಹೌಸ್ ಆಫ್ ಕಾಮನ್ಸ್ ಕೊಠಡಿಯು ವೆಸ್ಟ್‌ಮಿನಿಸ್ಟರ್ ಅರಮನೆಯ ಉತ್ತರದ ಕೊನೆಯಲ್ಲಿದೆ; ಇದನ್ನು ೧೯೪೧ರಲ್ಲಿ ವಿಕ್ಟೋರಿಯನ್ ಚೇಂಬರ್ ನಾಶಗೊಂಡ ನಂತರ ೧೯೫೦ರಲ್ಲಿ ಸ್ಥಾಪಿಸಲಾಯಿತು. ಅಲ್ಲದೇ ವಾಸ್ತುಶಿಲ್ಪಿ ಗೈಲ್ಸ್ ಗಿಲ್ಬರ್ಟ್ ಸ್ಕಾಟ್‌ನ ನಿರ್ದೇಶನದಡಿ ಪುನಃರೂಪಿಸಲಾಯಿತು. ಈ ಕೊಠಡಿಯು 14 by 20.7 metres (46 by 68 ft) ನಷ್ಟು ಉದ್ದಳತೆ ಹೊಂದಿದೆ,[೧೮] ಮತ್ತು ಲಾರ್ಡ್ಸ್ ಕೊಠಡಿಗಿಂತ ತುಂಬಾ ಸರಳವಾಗಿದೆ; ಅರಮನೆಯ ಕಾಮನ್ಸ್ ಬದಿಯ ಬೆಂಚುಗಳು ಮತ್ತು ಇತರ ಪೀಠೋಪಕರಣಗಳಿಗೆ ಹಸಿರು ಬಣ್ಣವನ್ನು ನೀಡಲಾಗಿದೆ. ಹೌಸ್ ಆಫ್ ಲಾರ್ಡ್ಸ್‌ನ ಸದಸ್ಯರಿಗೆ ಮೀಸಲಾದ ಕೆಂಪು ಬೆಂಚುಗಳಲ್ಲಿ ಸಾರ್ವಜನಿಕ ಸದಸ್ಯರು ಕೂರುವುದನ್ನು ನಿಷೇಧಿಸಲಾಗಿದೆ. ಭಾರತ, ಕೆನಡಾ ಮತ್ತು ಆಸ್ಟ್ರೇಲಿಯಾ ಮೊದಲಾದ ಕಾಮನ್‌ವೆಲ್ತ್ ರಾಷ್ಟ್ರಗಳ ಇತರ ಸಂಸತ್ತುಗಳು ಈ ಬಣ್ಣದ ವ್ಯವಸ್ಥೆಯನ್ನು ನಕಲು ಮಾಡಿವೆ.ಅದರ ಪ್ರಕಾರ ಕೆಳ-ಮನೆಯು ಹಸಿರು ಬಣ್ಣ ಮತ್ತು ಮೇಲ್ಮನೆಯು ಕೆಂಪು ಬಣ್ಣದೊಂದಿಗೆ ಸಮ್ಮಿಳಿತಗೊಂಡಿದೆ.

The Commons Chamber
ಅದರ ಪೂರ್ವವರ್ತಿಗಳಂತೆ ಹೌಸ್ ಆಫ್ ಕಾಮನ್ಸ್ ನ ಯುದ್ಧ ನಂತರದ ಕೊಠಡಿ ಅದರ ಹಸಿರು ಬೆಂಚುಗಳ ಮೇಲೆ ಕೇವಲ ಮೂರನೆ ಎರಡು ಭಾಗದಷ್ಟು ಸಂಸತ್ತಿನ ಸದಸ್ಯರಿಗೆ ಸ್ಥಳಾವಕಾಶ ನೀಡಬಲ್ಲದು.

ಈ ಕೊಠಡಿಯ ಉತ್ತರದ ಕೊನೆಯಲ್ಲಿ ಆಸ್ಟ್ರೇಲಿಯಾದ ಕಾಮನ್‌ವೆಲ್ತ್ ಈ ಸಂಸತ್ತಿಗೆ ಕೊಡುಗೆಯಾಗಿ ನೀಡಿದ ಸ್ಪೀಕರ್‌ ಅವರ ಕುರ್ಚಿಯಿದೆ. ಪ್ರಸ್ತುತದ ಬ್ರಿಟಿಷ್ ಸ್ಪೀಕರ್‍ನ ಕುರ್ಚಿಯು ಆಸ್ಟ್ರೇಲಿಯಾದ ಸಂಸತ್ತಿನ ಉದ್ಘಾಟನಾ ಸಮಾರಂಭದಂದು ಹೌಸ್ ಆಫ್ ಕಾಮನ್ಸ್ ಆಸ್ಟ್ರೇಲಿಯಾಕ್ಕೆ ನೀಡಿದ ಸ್ಪೀಕರ್ ಕುರ್ಚಿಯ ನಿಷ್ಕೃಷ್ಟವಾದ ನಕಲಾಗಿದೆ. ಸ್ಪೀಕರ್‌ನ ಕುರ್ಚಿಯ ಮುಂದೆ ಹೌಸ್‌ನ ಮೇಜಿದೆ, ಅದರಲ್ಲಿ ಹಿರಿಯ ಅಧಿಕಾರಿಗಳು ಕುಳಿತುಕೊಳ್ಳುತ್ತಾರೆ, ಮತ್ತು ಅದರ ಮೇಲೆ ಕಾಮನ್ಸ್‌ನ ವಿಧ್ಯುಕ್ತವಾದ ಅಧಿಕಾರ ದಂಡವನ್ನು ಇರಿಸಲಾಗಿದೆ. ವಿತರಣಾ ಮೂಲದ ಟಪಾಲು-ಪೆಟ್ಟಿಗೆಗಳು ನ್ಯೂಜಿಲೆಂಡ್‌ನ ಕೊಡುಗೆಯಾಗಿವೆ. ಅವುಗಳ ಮೇಲೆ ಮುಂದಿನ-ಬೆಂಚಿನ ಸಂಸತ್ತಿನ ಸದಸ್ಯರು (MP ಗಳು) ಪ್ರಶ್ನಾವಳಿ ಮತ್ತು ಭಾಷಣಗಳ ಸಂದರ್ಭದಲ್ಲಿ ಇವನ್ನು ಒದಗಿಸುತ್ತಾರೆ ಅಥವಾ ಅಭಿಪ್ರಾಯಗಳ ಪಟ್ಟಿಯನ್ನು ಇರಿಸುತ್ತಾರೆ. ಹೌಸ್‌ನ ಎರಡು ಬದಿಯಲ್ಲೂ ಹಸಿರು ಬೆಂಚುಗಳಿರುತ್ತವೆ; ಆಡಳಿತ ಪಕ್ಷದ ಸದಸ್ಯರು ಸ್ಪೀಕರ್‌ನ ಬಲಭಾಗದ ಬೆಂಚುಗಳಲ್ಲಿ ಕೂರುತ್ತಾರೆ.ಅದೇ ವಿರೋಧ ಪಕ್ಷದ ಸದಸ್ಯರು ಸ್ಪೀಕರ್‌ನ ಎಡಭಾಗದ ಬೆಂಚುಗಳಲ್ಲಿ ಆಸೀನರಾಗುತ್ತಾರೆ. ಹೌಸ್ ಆಫ್ ಲಾರ್ಡ್ಸ್‌ನಲ್ಲಿರುವಂತೆ ಇಲ್ಲಿ ಯಾವುದೇ ಪ್ರತಿಯಾಗಿ ಎದುರು-ಬೆಂಚುಗಳಿಲ್ಲ. ಈ ಕೊಠಡಿಯು ಸಣ್ಣದಾಗಿದೆ ಮತ್ತು ಸಂಸತ್ತಿನ ೬೫೦ ಸದಸ್ಯರಲ್ಲಿ ಕೇವಲ ೪೨೭ ಮಂದಿಗೆ ಮಾತ್ರ ಸರಿಹೊಂದುತ್ತದೆ,[೧೫] ಪ್ರಧಾನ ಮಂತ್ರಿಯ ಪ್ರಶ್ನಾವಳಿಗಳು ಮತ್ತು ಪ್ರಮುಖ ವಾಗ್ವಾದದ ಸಂದರ್ಭಗಳಲ್ಲಿ MPಗಳು ಹೌಸ್‌ನ ಎರಡೂ ಕೊನೆಯಲ್ಲಿ ನಿಂತುಕೊಳ್ಳುತ್ತಾರೆ.

ಸಂಪ್ರದಾಯದಂತೆ ಬ್ರಿಟಿಷ್ ರಾಜನು ಹೌಸ್ ಆಫ್ ಕಾಮನ್ಸ್ ಕೊಠಡಿಯನ್ನು ಪ್ರವೇಶಿಸುವುದಿಲ್ಲ. ಆದರೆ ೧೬೪೨ರಲ್ಲಿ ರಾಜ ಚಾರ್ಲ್ಸ್ I ಅದನ್ನು ಕೊನೆಯದಾಗಿ ಪ್ರವೇಶಿಸಿದರು. ರಾಜನು ರಾಜದ್ರೋಹದ ಆಪಾದನೆಯಲ್ಲಿ ಸಂಸತ್ತಿನ ಐದು ಸದಸ್ಯರನ್ನು ಬಂಧಿಸಲು ಪ್ರಯತ್ನಿಸಿದನು. ಆದರೆ ರಾಜ ಸ್ಪೀಕರ್ ವಿಲಿಯಂ ಲೆಂತಾಲ್‌ನಲ್ಲಿ ಇವರಿರುವ ಸ್ಥಳದ ಬಗ್ಗೆ ಏನಾದರೂ ತಿಳಿದಿದೆಯಾ ಎಂದು ಕೇಳಿದಾಗ, ಲೆಂತಾಲ್ ಹೀಗೆಂದು ಉತ್ತರಿಸಿದರು: "ನಿಮಗೆ ಒಪ್ಪಿಗೆಯಾದರೆ, ನನಗೆ ಈ ಅರಮನೆಯಲ್ಲಿ ನೋಡುವ ಅಥವಾ ಮಾತನಾಡುವ ಯಾವುದೇ ಹಕ್ಕಿಲ್ಲ, ಆದರೆ ನಾನು ಸೇವಕನಾಗಿರುವ ಹೌಸ್‌ ಆಜ್ಞಾಪಿಸಿದಂತೆ ಹೇಳುತ್ತಿದ್ದೇನೆ."[೮೬]

ಹೌಸ್ ಆಫ್ ಕಾಮನ್ಸ್‌ನ ನೆಲದ ಮೇಲಿನ ಎರಡು ಕೆಂಪು ಗೆರೆಗಳು 2.5 metres (8 ft 2 in)[೧೮] ಅಂತರದಲ್ಲಿವೆ, ಅದು ಅಪಾಕ್ರಿಫದ ಬರಹದ ಉಲ್ಲೇಖಿತ ಹೇಳಿಕೆಗಳ ಪದ್ಧತಿಯಂತೆ ಎರಡು ಖಡ್ಗಗಳ-ಉದ್ದದಷ್ಟಿರಬೇಕೆಂದು ಉದ್ದೇಶಿಸಲಾಗಿತ್ತು. ಇದರ ಮೂಲ ಉದ್ದೇಶವು ಹೌಸ್‌ನ ವಿವಾದಗಳು ಘರ್ಷಣೆಯಾಗಿ ಬೆಳೆಯದಂತೆ ತಡೆಗಟ್ಟುವುದಾಗಿತ್ತೆಂದು ಹೇಳಲಾಗಿದೆ. ಆದರೆ ಸಂಸತ್ತಿನ ಸದಸ್ಯರಿಗೆ ಈ ಕೊಠಡಿಗೆ ಖಡ್ಗಗಳನ್ನು ತರಲು ಅವಕಾಶವಿತ್ತೇ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ; ಐತಿಹಾಸಿಕವಾಗಿ, ಕೇವಲ ಸೈನ್ಯದಲ್ಲಿನ ಸಾರ್ಜೆಂಟ್‌ರಿಗೆ ಮಾತ್ರ ಸಂಸತ್ತಿನಲ್ಲಿನ ಅವರ ಪಾತ್ರದ ಸಂಕೇತವಾಗಿ ಖಡ್ಗವನ್ನು ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ; ಮತ್ತು ಕೊಠಡಿಯನ್ನು ಪ್ರವೇಶಿಸುವುದಕ್ಕಿಂತ ಮೊದಲು ತಮ್ಮ ಖಡ್ಗಗಳನ್ನು ತೂಗುಹಾಕಲು MP ಗಳಿಗೆ ಸದಸ್ಯರ ಉಡುಪು-ಕೋಣೆಯಲ್ಲಿ ಗುಲಾಬಿ ಬಣ್ಣದ ರಿಬ್ಬನ್‌ನ ಕುಣಿಕೆಗಳಿವೆ. ಅನುಚರರು ಖಡ್ಗಗಳನ್ನು ತೆಗೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಕೊಠಡಿಯಲ್ಲಿ ಯಾವುದೇ ಸಾಲಿನ ಗೆರೆಗಳಿರಲಿಲ್ಲ.[೮೭][೮೮] MPಗಳು ಭಾಷಣ ಮಾಡುವಾಗ ಆ ಗೆರೆಗಳನ್ನು ದಾಟಬಾರದೆಂದು ನಿಯಮಾವಳಿಗಳು ಸೂಚಿಸುತ್ತವೆ; ಈ ನಿಯಮವನ್ನು ಉಲ್ಲಂಘಿಸುವ ಸಂಸತ್ತಿನ ಸದಸ್ಯರು ವಿರೋಧ ಪಕ್ಷದ ಸದಸ್ಯರಿಂದ ತೀವ್ರವಾಗಿ ಖಂಡಿಸಲ್ಪಡುತ್ತಾರೆ. ಇತ್ತೀಚೆಗೆ ತಪ್ಪಾಗಿ ಹೆಚ್ಚುವರಿ ಗೆರೆಗಳನ್ನು ನೀಡಿದ ಇದನ್ನು "ಪಕ್ಷದ ನೀತಿಯನ್ನು ಅನುಸರಿಸಿ" ಎಂಬುದರ ಸಂಭಾವ್ಯ ಮೂಲವೆಂದು ಪರಿಗಣಿಸಲಾಗುತ್ತದೆ.

ವೆಸ್ಟ್‌ಮಿನಿಸ್ಟರ್ ಸಭಾಂಗಣದ ಆವರಣ

[ಬದಲಾಯಿಸಿ]
Engraving
19 ನೇ ಶತಮಾನದ ಆರಂಭದಲ್ಲಿ ವೆಸ್ಟ್‌ಮಿನಿಸ್ಟರ್

ವೆಸ್ಟ್‌ಮಿನಿಸ್ಟರ್ ಅರಮನೆಯ, ಈಗಲೂ ಇರುವ ಹಳೆಯ ಭಾಗ ವೆಸ್ಟ್‌ಮಿನಿಸ್ಟರ್ ಸಭಾಂಗಣವನ್ನು ೧೦೯೭ರಲ್ಲಿ ನಿರ್ಮಿಸಲಾಯಿತು,[೮೯] ಆ ಸಂದರ್ಭದಲ್ಲಿ ಇದು ಯುರೋಪಿನಲ್ಲೇ ಅತ್ಯಂತ ದೊಡ್ಡ ಸಭಾಂಗಣವಾಗಿತ್ತು. ಮೂರು ಹಜಾರಗಳನ್ನು ರಚಿಸುವಂತೆ ಚಾವಣಿಗೆ ಮೂಲತಃ ಸ್ತಂಭಗಳಿಂದ ಆಧಾರ ನೀಡಲಾಗಿತ್ತು. ಆದರೆ ರಾಜ ರಿಚರ್ಡ್ IIರ ಆಳ್ವಿಕೆಯ ಸಂದರ್ಭದಲ್ಲಿ, ಇದನ್ನು ರಾಜವಂಶದ ಬಡಗಿ ಹಘ್ ಹರ್ಲ್ಯಾಂಡ್ ಚಾಚು-ತೊಲೆಯ ಚಾವಣಿಯಾಗಿ ಬದಲಿಸಿದರು, 'ಮಧ್ಯಕಾಲೀನ ಮರದ-ವಾಸ್ತುಶಿಲ್ಪದ ಅತ್ಯಂತ ಶ್ರೇಷ್ಠ ರಚನೆ'ಯಾದ ಇದು ಆರಂಭದಲ್ಲಿದ್ದ ಮೂರು ಹಜಾರಗಳು ಕೊನೆಯಲ್ಲಿ ಒಂದು ವೇದಿಕೆಯೊಂದಿಗೆ ವಿಶಾಲವಾದ ತೆರೆದ ಸಭಾಂಗಣವಾಗಿ ಬದಲಾಗುವಂತೆ ಮಾಡಿತು. ಹೊಸ ಚಾವಣಿಯನ್ನು ೧೩೯೩ರಲ್ಲಿ ಸಿದ್ಧಗೊಳಿಸಿ ಸಮರ್ಪಿಸಲಾಯಿತು.[೯೦] ರಿಚರ್ಡ್‌ರ ವಾಸ್ತುಶಿಲ್ಪಿ ಹೆನ್ರಿ ಯೆವೆಲೆಯು ಮೂಲತಃ ಆಯಾಮಗಳನ್ನು ಬಿಟ್ಟು, ಗೂಡಿನ ಪೀಠದಲ್ಲಿ ಇಟ್ಟ ರಾಜರ ಸಹಜಗಾತ್ರದ ಹದಿನೈದು ಬೃಹತ್ ಪ್ರತಿಮೆಗಳಿಂದ ಗೋಡೆಗಳಿಗೆ ಹೊಸರೂಪಕೊಟ್ಟರು.[೯೧] ಪುನರ್ವ್ಯವಸ್ಥೆಗೊಳಿಸುವ ಕಾರ್ಯವನ್ನು ೧೨೪೫ರಲ್ಲಿ ರಾಜ ಹೆನ್ರಿ III ಆರಂಭಿಸಿದರು, ಆದರೆ ಇದು ರಿಚರ್ಡ್‌ರ ಆಳ್ವಿಕೆಯ ಅವಧಿಯವರೆಗೆ ಸುಮಾರು ಒಂದು ಶತಮಾನದಷ್ಟು ಕಾಲ ನಿಷ್ಕ್ರಿಯವಾಗಿತ್ತು.

ವೆಸ್ಟ್‌ಮಿನಿಸ್ಟರ್ ಸಭಾಂಗಣವು 20.7 by 73.2 metres (68 by 240 ft) ಅಳತೆಯ, ಇಂಗ್ಲೆಂಡ್‌ನಲ್ಲೇ ಅತ್ಯಂತ ದೊಡ್ಡ ಮಧ್ಯಕಾಲೀನ ಅಗಲಳತೆಯ ವಿಸ್ತಾರದ ಚಾವಣಿ ಹೊಂದಿದೆ.[೧೮] ಈ ಚಾವಣಿಗೆ ಬಳಸಿದ ಓಕ್ ಮರಗಳನ್ನು ಹ್ಯಾಂಪ್ಶೈರ್‌ನ ರಾಜರ ಕಾಲದ ಅರಣ್ಯಗಳಿಂದ, ಹರ್ಟ್‌ಫೋರ್ಡ್ಶೈರ್ ಮತ್ತು ಸುರ್ರೆಯ ಪಾರ್ಕ್‌ಗಳಿಂದ ಮತ್ತು ಇತರ ಮೂಲಗಳಿಂದ ತೆಗೆದುಕೊಂಡುಬರಲಾಗಿದೆ; ಅವನ್ನು 56 kilometres (35 mi) ದೂರದಲ್ಲಿ ಸುರ್ರೆಯ ಫರ್ನ್ಹ್ಯಾಮ್‌ನ ಹತ್ತಿರ ಒಟ್ಟುಗೂಡಿಸಲಾಗಿತ್ತು.[೯೨] ಹೆಚ್ಚಿನ ಪ್ರಮಾಣದ ಹೊರೆಗಾಡಿಗಳು ಮತ್ತು ಸರಕು-ದೋಣಿಗಳು ವೆಸ್ಟ್‌ಮಿನಿಸ್ಟರ್‌ಗೆ ಜೋಡಿಸಿದ ದಿಮ್ಮಿಗಳನ್ನು ಸಾಗಿಸಿದವೆಂದು ದಾಖಲೆಗಳು ಹೇಳುತ್ತವೆ.[೯೩]

ವೆಸ್ಟ್‌ಮಿನಿಸ್ಟರ್ ಸಭಾಂಗಣದಲ್ಲಿ ಅಸಂಖ್ಯಾತ ಕಾರ್ಯಕ್ರಮಗಳು ನಡೆಯುತ್ತವೆ. ಇದನ್ನು ಆರಂಭದಲ್ಲಿ ನ್ಯಾಯಸ್ಥಾನದ ಉದ್ದೇಶಗಳಿಗೆ ಬಳಸಲಾಗುತ್ತಿತ್ತು, ಇಲ್ಲಿ ಪ್ರಮುಖ ಮೂರು ನ್ಯಾಯಸಭೆಗಳನ್ನು ನಡೆಸಲಾಗುತ್ತಿತ್ತು: ಕೋರ್ಟ್ ಆಫ್ ಕಿಂಗ್ಸ್ ಬೆಂಚ್, ಕೋರ್ಟ್ ಆಫ್ ಕಾಮನ್ ಪ್ಲೀಯ್ಜ್ ಮತ್ತು ಕೋರ್ಟ್ ಆಫ್ ಚಾನ್ಸೆರಿ. ಈ ನ್ಯಾಯಸಭೆಗಳು ೧೮೭೫ರಲ್ಲಿ ಹೈಕೋರ್ಟ್ ಆಫ್ ಜಸ್ಟಿಸ್ ಒಂದಿಗೆ ಸೇರಿದವು. ಇದು ೧೮೮೨ರಲ್ಲಿ ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್‌ಗೆ ಸರಿಯುವರೆಗೆ ವೆಸ್ಟ್‌ಮಿನಿಸ್ಟರ್ ಸಭಾಂಗಣದಲ್ಲಿಯೇ ಸೇರುವುದನ್ನು ಮುಂದುವರಿಸಿತು.[೯೪] ನಿಯತ ನ್ಯಾಯಸಭೆಗಳಿಗೆ ಹೆಚ್ಚುವರಿಯಾಗಿ, ವೆಸ್ಟ್‌ಮಿನಿಸ್ಟರ್ ಸಭಾಂಗಣವು ಪ್ರಮುಖ ನ್ಯಾಯಾಂಗ ವಿಚಾರಣೆಗಳನ್ನೂ ನಡೆಸಿತು, ಅವುಗಳೆಂದರೆ ಇಂಗ್ಲಿಷ್ ನಾಗರಿಕ ಕದನದ ಅಂತ್ಯದಲ್ಲಿನ ರಾಜ ಚಾರ್ಲ್ಸ್ I, ಸರ್ ವಿಲಿಯಂ ವ್ಯಾಲ್ಲೇಸ್, ಸರ್ ಥೋಮಸ್ ಮೋರ್, ಕಾರ್ಡಿನಲ್ ಜಾನ್ ಫಿಶರ್, ಗೇ ಫೇಕ್ಸ್, ಅರ್ಲ್ ಆಫ್ ಸ್ಟ್ರಾಫರ್ಡ್, ೧೭೧೫ರ ದಂಗೆಕೋರ ಸ್ಕಾಟಿಶ್ ಲಾರ್ಡ್ಸ್‌ರ ದೋಷಾರೋಪಣೆ ನ್ಯಾಯಾಂಗ ವಿಚಾರಣೆ ಮತ್ತು ರಾಜ್ಯ ನ್ಯಾಯಾಂಗ ವಿಚಾರಣೆಗಳು ಮತ್ತು ೧೭೪೫ರ ದಂಗೆಗಳು ಹಾಗೂ ವಾರೆನ್ ಹೇಸ್ಟಿಂಗ್ಸ್.

Painting
1821 ರಲ್ಲಿ ವೆಸ್ಟ್‌ಮಿನಿಸ್ಟರ್ ಸಭಾಂಗಣದಲ್ಲಿ ನಡೆದ ಜಾರ್ಜ್ IV ರ ಪಟ್ಟಾಭಿಷೇಕದ ಕೊನೆಯ ಔತಣಕೂಟ.

ವೆಸ್ಟ್‌ಮಿನಿಸ್ಟರ್ ಸಭಾಂಗಣದಲ್ಲಿ ಔಪಚಾರಿಕ ಉತ್ಸವ ಮತ್ತು ಸಮಾರಂಭಗಳನ್ನೂ ನಡೆಸಲಾಗಿದೆ. ಹನ್ನೆರಡರಿಂದ ಹತ್ತೊಂಭತ್ತನೇ ಶತಮಾನದವರೆಗೆ, ಇಲ್ಲಿ ಹೊಸ ರಾಜರನ್ನು ಗೌರವಿಸುವ ಪಟ್ಟಾಭಿಷೇಕದ ಔತಣ-ಕೂಟಗಳನ್ನು ನಡೆಸಲಾಗಿತ್ತು. ಆಗ ೧೮೨೧ರಲ್ಲಿ ನೆರವೇರಿದ ರಾಜ ಜಾರ್ಜ್ IVರ ಪಟ್ಟಾಭಿಷೇಕದ ಔತಣ-ಕೂಟವೇ ಕೊನೆಯದಾಗಿದೆ;[೯೫] ಆತನ ಉತ್ತರಾಧಿಕಾರಿ ವಿಲಿಯಂ IV ಇದು ತುಂಬಾ ದುಬಾರಿಯಾದುದೆಂದು ಭಾವಿಸಿದ್ದರಿಂದ ರದ್ದುಗೊಳಿಸಿದರು. ಈ ಸಭಾಂಗಣವನ್ನು ಸರ್ಕಾರಿ ಮತ್ತು ಕರ್ಮಾಚರಣೆಗಳಿಂದ ಕೂಡಿದ ಶವಸಂಸ್ಕಾರಗಳ ಸಂದರ್ಭದಲ್ಲಿ ಅಂತಿಮ-ದರ್ಶನಕ್ಕಾಗಿ ಬಳಸಲಾಗುತ್ತದೆ. ಅಂತಹ ಗೌರವವು ಸಾಮಾನ್ಯವಾಗಿ ರಾಜರು ಮತ್ತು ಅವರ ಸಂಗಾತಿಗಳಿಗೆ ಮೀಸಲಾಗಿರುತ್ತದೆ; ಇಪ್ಪತ್ತನೇ ಶತಮಾನದಲ್ಲಿ ಇದನ್ನು ಸ್ವೀಕರಿಸಿದ ರಾಜವಂಶಕ್ಕೆ ಸೇರದವರೆಂದರೆ ಫ್ರೆಡೆರಿಕ್ ಸ್ಲೈಗ್ ರಾಬರ್ಟ್ಸ್, ೧ನೇ ಅರ್ಲ್ ರಾಬರ್ಟ್ಸ್ (೧೯೧೪) ಮತ್ತು ಸರ್ ವಿಂಸ್ಟನ್ ಚರ್ಚಿಲ್ (೧೯೬೫). ಈ ಹಿಂದೆ ೨೦೦೨ರಲ್ಲಿ ನಡೆದ ರಾಣಿ ಎಲಿಜಬೆತ್, ದಿ ಕ್ವೀನ್ ಮದರ್‌ರ ಅಂತಿಮ-ದರ್ಶನವು ಇತ್ತೀಚಿನದಾಗಿದೆ.

ಎರಡು ಸದನಗಳು ಪ್ರಮುಖ ಸಾರ್ವಜನಿಕ ಸಮಾರಂಭಗಳಂದು ವೆಸ್ಟ್‌ಮಿನಿಸ್ಟರ್ ಸಭಾಂಗಣದಲ್ಲಿ ರಾಜರನ್ನು ಉದ್ದೇಶಿಸಿ ಔಪಚಾರಿಕ ಭಾಷಣಗಳನ್ನು ಪ್ರದರ್ಶಿಸಿದವು. ಉದಾಹರಣೆಗಾಗಿ, ಎಲಿಜಬೆತ್ IIರ ರಜತ ಮಹೋತ್ಸವ (೧೯೭೭) ಮತ್ತು ಚಿನ್ನದ ಮಹೋತ್ಸವ (೨೦೦೨), ಪ್ರಸಿದ್ಧ ಕ್ರಾಂತಿಯ ೩೦೦ನೇ ವಾರ್ಷಿಕೋತ್ಸವ (೧೯೮೮) ಮತ್ತು ಎರಡನೇ ವಿಶ್ವ ಸಮರದ ಅಂತ್ಯದ ಹದಿನೈದನೇ ವಾರ್ಷಿಕೋತ್ಸವದ (೧೯೯೫) ಸಂದರ್ಭದಲ್ಲಿ ನಡೆದ ಭಾಷಣಗಳು.

ಆಗ ೧೯೯೯ರಲ್ಲಿ ಮಾಡಿದ ಸುಧಾರಣೆಗಳಡಿಯಲ್ಲಿ, ಹೌಸ್ ಆಫ್ ಕಾಮನ್ಸ್ ವೆಸ್ಟ್‌ಮಿನಿಸ್ಟರ್ ಸಭಾಂಗಣದ ಪಕ್ಕದಲ್ಲಿರುವ ಗ್ರ್ಯಾಂಡ್ ಕಮಿಟಿ ಕೊಠಡಿಯನ್ನು ಹೆಚ್ಚುವರಿ ಚರ್ಚಾ ಕೋಣೆಯಾಗಿ ಬಳಸುತ್ತದೆ. (ಮುಖ್ಯ ಸಭಾಂಗಣದ ಭಾಗವಲ್ಲದಿದ್ದರೂ, ಈ ಕೊಠಡಿಯನ್ನು ಸಾಮಾನ್ಯವಾಗಿ ಅದರ ಭಾಗವೆಂದೇ ಹೇಳಲಾಗುತ್ತದೆ). ಇಲ್ಲಿನ ಆಸನ-ವ್ಯವಸ್ಥೆಯನ್ನು ಯು-ಆಕಾರದಲ್ಲಿ ವ್ಯವಸ್ಥೆಗೊಳಿಸಲಾಗಿದೆ, ಇದು ಬೆಂಚುಗಳನ್ನು ಪರಸ್ಪರ ವಿರುದ್ಧವಾಗಿ ಇರಿಸಲಾದ ಮುಖ್ಯ ಕೊಠಡಿಗಿಂತ ಭಿನ್ನವಾಗಿದೆ. ವೆಸ್ಟ್‌ಮಿನಿಸ್ಟರ್ ಸಭಾಂಗಣದಲ್ಲಿ ನಡೆಯುವ ಚರ್ಚೆಗಳ ನಿಷ್ಪಕ್ಷಪಾತ ತೆಯ ಲಕ್ಷಣವನ್ನು ಪ್ರತಿಬಿಂಬಿಸಲು ಈ ರೀತಿ ಮಾಡಲಾಗಿದೆ. ವೆಸ್ಟ್‌ಮಿನಿಸ್ಟರ್ ಸಭಾಂಗಣದ ಅಧಿವೇಶನವು ಪ್ರತಿ ವಾರಕ್ಕೆ ಮೂರು ಬಾರಿ ನಡೆಯುತ್ತದೆ; ವಿವಾದಾತ್ಮಕ ವಿಷಯಗಳನ್ನು ಸಾಮಾನ್ಯವಾಗಿ ಚರ್ಚಿಸಲಾಗುವುದಿಲ್ಲ.

ಇತರ ಕೊಠಡಿಗಳು

[ಬದಲಾಯಿಸಿ]

ನದಿಯ ಆಯಕಟ್ಟಿನ ಜಾಗದಲ್ಲಿ ಪ್ರಧಾನ ಅಂತಸ್ತಿನಲ್ಲಿ ಎರಡು ಗ್ರಂಥಾಲಯಗಳಿವೆ; ಅವುಗಳೆಂದರೆ ಹೌಸ್ ಆಫ್ ಲಾರ್ಡ್ಸ್ ಗ್ರಂಥಾಲಯ ಮತ್ತು ಹೌಸ್ ಆಫ್ ಕಾಮನ್ಸ್ ಗ್ರಂಥಾಲಯ.

ವೆಸ್ಟ್‌ಮಿನಿಸ್ಟರ್ ಅರಮನೆಯು ಎರಡು ಹೌಸ್‌ಗಳ ಮೇಲ್ವಿಚಾರಣೆ ನೋಡಿಕೊಳ್ಳುವ ಅಧಿಕಾರಿಗಳ ವೈಭವದ ವಸತಿ ವಿಭಾಗಗಳನ್ನೂ ಒಳಗೊಳ್ಳುತ್ತದೆ. ಸ್ಪೀಕರ್‌ರ ಅಧಿಕೃತ ನಿವಾಸವು ಅರಮನೆಯ ಉತ್ತರದ ಕೊನೆಯಲ್ಲಿದೆ; ಲಾರ್ಡ್ ಚಾನ್ಸಲರ್‌ನ ನಿವಾಸಗಳ ವಿಭಾಗವು ದಕ್ಷಿಣದ ಕೊನೆಯಲ್ಲಿದೆ. ಪ್ರತಿ ದಿನ ಸ್ಪೀಕರ್ ಮತ್ತು ಲಾರ್ಡ್ ಸ್ಪೀಕರ್ ಅವರ ವಿಭಾಗದಿಂದ ಅವರ ಅನುಕ್ರಮ ಕೊಠಡಿಗಳವರೆಗೆ ನಡೆಯುವ ಸಾಂಪ್ರದಾಯಿಕ ಮೆರವಣಿಗೆಗಳಲ್ಲಿ ಭಾಗವಹಿಸುತ್ತಾರೆ.[೯೬][೯೭]

ವೆಸ್ಟ್‌ಮಿನಿಸ್ಟರ್ ಅರಮನೆಯಲ್ಲಿ ಹಲವಾರು ಬಾರ್‌ಗಳು, ಸ್ವ ಸಹಾಯದ ಕ್ಯಾಫಿಟೀರಿಯಗಳು ಮತ್ತು ರೆಸ್ಟಾರೆಂಟುಗಳಿವೆ. ಅವುಗಳ ಸೌಕರ್ಯಗಳನ್ನು ಬಳಸಲು ಅನುಮತಿ ಪಡೆಯುವವರ ಆಧಾರದಲ್ಲಿ ನಿಯಮಗಳು ಬದಲಾಗುತ್ತವೆ; ಇವುಗಳಲ್ಲಿ ಹೆಚ್ಚಿನವು ಹೌಸ್‍‌ನ ಅಧಿವೇಶನ ನಡೆಯುತ್ತಿರುವಾಗ ಮುಚ್ಚುವುದಿಲ್ಲ.[೯೮] ಅಲ್ಲಿ ಒಂದು ವ್ಯಾಯಾಮಶಾಲೆ ಮತ್ತು ಕೇಶ ವಿನ್ಯಾಸದ ಸಲೂನು ಸಹ ಇದೆ; ಅಲ್ಲಿದ್ದ ಬಂದೂಕು ಶಿಕ್ಷಣ ವಲಯದ ಕೇಂದ್ರವು ೧೯೯೦ರ ದಶಕದಲ್ಲಿ ಮುಚ್ಚಲ್ಪಟ್ಟಿತು.[೯೯] ಸಂಸತ್ತು ಒಂದು ಸ್ಮರಣ ಸಂಚಿಕೆಗಳ ಮಾರಾಟದ ಅಂಗಡಿ ವಿಭಾಗವನ್ನೂ ಹೊಂದಿದೆ.ಅಲ್ಲಿ ಹೌಸ್ ಆಫ್ ಕಾಮನ್ಸ್ ಕೀಲಿಕೈ-ಉಂಗುರ ಮತ್ತು ಪಿಂಗಾಣಿ ಸರಕುಗಳಿಂದ ಹಿಡಿದು ಹೌಸ್ ಆಫ್ ಕಾಮನ್ಸ್ ಷಾಂಪೇನಿನವರೆಗೆ ಎಲ್ಲಾ ವಸ್ತುಗಳು ಮಾರಾಟವಾಗುತ್ತವೆ.

ಭದ್ರತೆ

[ಬದಲಾಯಿಸಿ]
Photograph
ಹಳೆಯ ಅರಮನೆ ಅಂಗಳಕ್ಕೆ ಪ್ರವೇಶಿಸದಂತೆ ತಡೆಯುವ ಕಾಂಕ್ರೀಟ್ ಪ್ರತಿಬಂಧಕಗಳು

ಹೌಸ್ ಆಫ್ ಲಾರ್ಡ್ಸ್ ಗಾಗಿ ಇರುವ ಜೆಂಟಲ್ಮೆನ್ ಅಷರ್ ಆಫ್ ದಿ ಬ್ಲ್ಯಾಕ್ ರಾಡ್ ಮೇಲ್ವಿಚಾರಣೆಯ ಭದ್ರತೆ ಮತ್ತು ಸಾರ್ಜಂಟ್ ಅಟ್ ಆರ್ಮ್ಸ್(ವ್ಯವಸ್ಥೆಯನ್ನು ಕಾಪಾಡುವ ಕರ್ತವ್ಯ ಭಾರವಿರುವ, ವಿಧಾನಸಭೆಯ ಅಧಿಕಾರಿ) ಹೌಸ್ ಆಫ್ ಕಾಮನ್ಸ್ ಗಾಗಿಯೂ ಅದೇ ಭದ್ರತಾ ಕಾರ್ಯ ಮಾಡುತ್ತಾರೆ. ಈ ಅಧಿಕಾರಿಗಳು ಮೂಲತಃ ಅವರವರ ಹೌಸ್ ನ ಸಭಾಂಗಣಗಳ ಹೊರಗೆ ಔಪಚಾರಿಕ ನಿಯಮಗಳನ್ನು ಹೊಂದಿರುತ್ತಾರೆ. ಭದ್ರತೆಯು, ಮೆಟ್ರಪಾಲಿಟನ್ ಪೋಲಿಸ್ ಪಡೆಯ ವೆಸ್ಟ್‌ಮಿನಿಸ್ಟರ್ ಅರಮನೆಯ ವಿಭಾಗದ ಜವಾಬ್ದಾರಿಯಾಗಿರುತ್ತದೆ. ಇದು ಗ್ರೇಟರ್ ಲಂಡನ್ ಕ್ಷೇತ್ರಕ್ಕಿರುವ ಪೋಲಿಸ್ ಪಡೆಯಾಗಿದೆ. ಸಂಪ್ರದಾಯವು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಕಾಮನ್ಸ್ ಕೊಠಡಿಯನ್ನು, ಕೇವಲ ಸಾರ್ಜಂಟ್ ಅಟ್ ಆರ್ಮ್ಸ್ ಅಧಿಕಾರಿ ಮಾತ್ರ ಪ್ರವೇಶಿಸಬಹುದಾಗಿದೆ ಎಂದು ನಿರ್ದೇಶಿಸುತ್ತದೆ.

ಪೂರ್ತಿಯಾಗಿ ಸ್ಫೋಟಕಗಳನ್ನು ತುಂಬಿಕೊಂಡ ಲಾರಿಯನ್ನು ಕಟ್ಟಡದ ಕಡೆಗೆ ಕೊಂಡೊಯ್ಯಬಹುದಾದ ಸಾಧ್ಯತೆಯ ಬಗ್ಗೆ ಉಂಟಾದ ಆತಂಕದೊಂದಿಗೆ, ೨೦೦೩ ರಲ್ಲಿ ಸಂಚಾರ ಮಾರ್ಗದಲ್ಲಿ ಕಾಂಕ್ರೀಟ್ ಕಲ್ಲುಗಳನ್ನು ಹಾಕಲಾಯಿತು.[೧೦೦] ನದಿಯ ಮೇಲೆ, ತೀರದ ನಿರ್ಗಮನಗಳಿಂದ 70 metres (77 yd) ವರೆಗೆ ಚಾಚಿರುವ ಹೊರ ವಲಯವದಲ್ಲಿ ಯಾವುದೇ ಹಡಗು-ದೋಣಿಗಳನ್ನು ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ.[೧೦೧]

ಇತ್ತೀಚಿನ ಭದ್ರತಾ ವಿಫಲತೆಗಳ ಹೊರತಾಗಿಯೂ, ಸಾರ್ವಜನಿಕ ಸದಸ್ಯರು, ಹೌಸ್ ಆಫ್ ಕಾಮನ್ಸ್ ನಲ್ಲಿ ಅಪರಿಚಿತರ ಗ್ಯಾಲರಿಗೆ ಪ್ರವೇಶಿಸುವುದನ್ನು ಮುಂದುವರೆಸಿದ್ದಾರೆ. ಲೋಹ ಪತ್ತೆಗಳ ಮೂಲಕ ಸಂದರ್ಶಕರು ಸಾಗಿಹೋಗುತ್ತಾರೆ, ಹಾಗು ಅವರಲ್ಲಿದ್ದ ವಸ್ತುಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ.[೧೦೨] ಮೆಟ್ರಪಾಲಿಟನ್ ಪೋಲಿಸ್ ಪಡೆಯ ವೆಸ್ಟ್‌ಮಿನಿಸ್ಟರ್ ಅರಮನೆ ವಿಭಾಗದಿಂದ ಬಂದಂತಹ ಪೋಲಿಸ್ ಗೆ, ಡಿಪ್ಲೋಮ್ಯಾಟಿಕ್ ಪ್ರೊಟೆಕ್ಷನ್ ಗ್ರೂಪ್ ನ ಶಸ್ತ್ರಸಜ್ಜಿತ ಪೋಲಿಸ್ ನಿಂದ ಬೆಂಬಲ ದೊರೆಯುತ್ತದೆ. ಇವರು ಅರಮನೆಯ ಹೊರಗೆ ಮತ್ತು ಒಳಗೆ ಯಾವಾಗಲೂ ಕಾರ್ಯಪ್ರವೃತ್ತರಾಗಿರುತ್ತಾರೆ.

ಸಿರಿಯಸ್ ಆರ್ಗನೈಸ್ಡ್ ಕ್ರೈಮ್ ಅಂಡ್ ಪೋಲಿಸ್ ಆಕ್ಟ್ ೨೦೦೫ ರ ಅಡಿಯಲ್ಲಿ, ೨೦೦೫ ರ ಆಗಸ್ಟ್ ೧ ರಿಂದ ಮೆಟ್ರಪಾಲಿಟನ್ ಪೋಲಿಸ್ ಪಡೆಯಿಂದ ಮೊದಲೇ ಅನುಮತಿ ಪಡೆಯದೇ, ಅರಮನೆಯ ಸುತ್ತ ಸರಿಸುಮಾರು 1 kilometre (0.6 mi) ಕಿಲೋಮೀಟರ್ ವರೆಗೆ ವ್ಯಾಪಿಸಿರುವ ಉದ್ದೇಶಿತ ಪ್ರದೇಶದೊಳಗೆ ಪ್ರತಿಭಟನೆ ಮಾಡಿದಲ್ಲಿ, ಅದು ಕಾನೂನು ಬಾಹಿರವಾಗುವುದು.[೧೦೩]

ಘಟನೆಗಳು

[ಬದಲಾಯಿಸಿ]

ವೆಸ್ಟ್‌ಮಿನಿಸ್ಟರ್ ಅರಮನೆಯ ಭದ್ರತೆಯನ್ನು ಒಡೆಯಲು ಮಾಡಿದ ಪ್ರಸಿದ್ಧ ಪ್ರಯತ್ನವೆಂದರೆ, ೧೬೦೫ ರಲ್ಲಿ ಮಾಡಲಾದ ವಿಫಲ ಯತ್ನದ ಕೋವಿಮದ್ದಿನ ಪ್ರದೇಶದ ಮೂಲಕವಾಗಿದೆ. ಪ್ರೊಟೆಸ್ಟೆಂಟ್ ರಾಜ ಜೇಮ್ಸ್I ನನ್ನು ಕೊಂದು ಆ ಸ್ಥಾನದಲ್ಲಿ ಕ್ಯಾಥೊಲಿಕ್ ರಾಜನನ್ನು ಕೂರಿಸುವ ಮೂಲಕ ಕ್ಯಾಥೊಲಿಕ್ ಸಿದ್ಧಾಂತವನ್ನು ಇಂಗ್ಲೆಂಡ್ ನಲ್ಲಿ ಪುನಃ ಸ್ಥಾಪಿಸಲೆಂದು ಕೆಳವರ್ಗದ ರೋಮನ್ ಕ್ಯಾಥೋಲಿಕ್ ಗುಂಪಿನವರು ಈ ಪಿತೂರಿ ನಡೆಸಿದ್ದರು. ಹೌಸ್ ಆಫ್ ಲಾರ್ಡ್ಸ್ ನ ಕೆಳಗೆ ದೊಡ್ಡ ಮಟ್ಟದ ಕೋವಿಮದ್ದನ್ನು ಇರಿಸಿ, ಇದನ್ನು ಪಿತೂರಿಗಾರರಲ್ಲಿ ಒಬ್ಬನಾದ ಗೈ ಫ್ಯಾವ್ಕೆಸ್ ಎಂಬಾತ ೧೬೦೫ ರ ನವೆಂಬರ್ ೫ ರಂದು ನಡೆಯಲಿದ್ದ ಸಂಸತ್ತಿನ ಅಧಿವೇಶನದ ಆರಂಭದ ಸಂದರ್ಭದಲ್ಲಿ ಆಸ್ಫೋಟಿಸಲೆಂದು ಯೋಜಿಸಿದ್ದ. ಈ ಪ್ರಯತ್ನ ಯಶಸ್ವಿಯಾಗಿದ್ದಿದ್ದರೆ ಸ್ಫೋಟವು ರಾಜ, ಅವರ ಕುಟುಂಬ ಮತ್ತು ಬಹುಪಾಲು ಉತ್ತಮ ಪ್ರತಿನಿಧಿಗಳನ್ನು ಕೊಂದು ಅರಮನೆಯನ್ನು ನಾಶಮಾಡಿಬಿಟ್ಟಿರುತ್ತಿತ್ತು. ಅದೇನೇ ಆದರೂ, ಈ ಪಿತೂರಿಯನ್ನು ಪತ್ತೆಹಚ್ಚಲಾಯಿತು. ಅಲ್ಲದೇ ಬಹುಪಾಲು ಪಿತೂರಿಗಾರರನ್ನು ತಪ್ಪಿಸಿಕೊಳ್ಳುವಾಗ ಸೆರೆಹಿಡಿಯುವ ಪ್ರಯತ್ನದಲ್ಲಿ ಕೊಲ್ಲಲಾಯಿತು ಅಥವಾ ಬಂಧಿಸಲಾಯಿತು. ಉಳಿದುಕೊಂಡವರು ವೆಸ್ಟ್‌ಮಿನಿಸ್ಟರ್ ಸಭಾಂಗಣದಲ್ಲಿ ರಾಜದ್ರೋಹವನ್ನು ಎಸೆಗಲು ಪ್ರಯತ್ನಿಸಿದ್ದರು. ಅವರನ್ನು ತಪ್ಪಿತಸ್ಥರೆಂದು ನಿರ್ಣಯಿಸಿ ನೇಣುಹಾಕುವ, ಎಳೆಯುವ ಮತ್ತು ತುಂಡರಿಸುವ ಮೂಲಕ ಅವರಿಗೆ ಮರಣದಂಡನೆ ವಿಧಿಸಲಾಯಿತು. ಅಲ್ಲಿಂದ ಸಂಸತ್ತಿನ ಪ್ರತಿ ಅಧಿವೇಶನದ ಆರಂಭದ ಮೊದಲು ಅರಮನೆಯ ನೆಲಮಾಳಿಗೆಗಳನ್ನು ಯೆಮೆನ್ ಆಫ್ ದಿ ಗಾರ್ಡ್ ತಪಾಸಣೆ ಮಾಡುತ್ತಿದ್ದರು. ಇದು ರಾಜನ ಆಳ್ವಿಕೆಯ ವಿರುದ್ಧ ಮಾಡಲಾದ ಪ್ರಯತ್ನಗಳು ನಡೆಯದಂತೆ ತಡೆಯಲು ನಡೆಸಿಕೊಂಡು ಬಂದ ಸಾಂಪ್ರದಾಯಿಕ ಮುಂಜಾಗ್ರತಾ ಕ್ರಮವಾಗಿದೆ.[೧೦೪]

1812 ರಲ್ಲಿ ಹೌಸ್ ಆಫ್ ಕಾಮನ್ಸ್ ನ ಲಾಬಿಯಲ್ಲಿ ಪ್ರಧಾನ ಮಂತ್ರಿ ಸ್ಪೆನ್ಸರ್ ಪರ್ಸೆವಲ್ ರವರ ಹತ್ಯೆ ನಡೆದಿರುವುದು

ಹಿಂದಿನ ವೆಸ್ಟ್‌ಮಿನಿಸ್ಟರ್ ಅರಮನೆ ಕೂಡ ೧೮೧೨ರಲ್ಲಿ ನಡೆದ ಪ್ರಧಾನ ಮಂತ್ರಿಯ ಹತ್ಯಾ ಸ್ಥಳವಾಗಿತ್ತು. ಹೌಸ್ ಆಫ್ ಕಾಮನ್ಸ್ ನ ಲಾಬಿಯ ಸಂದರ್ಭದಲ್ಲಿ, ಸಂಸದೀಯ ತಪಾಸಣೆಗೆಂದು ತೆರಳುತ್ತಿರುವಾಗ ಸ್ಪೆನ್ಸರ್ ಪರ್ಸೆವಲ್ ರವರನ್ನು, ಲಿವರ್ ಪೂಲ್ ನ ವ್ಯಾಪಾರಿ, ಹುಚ್ಚು ಸಾಹಸಿಗ ಜಾನ್ ಬೆಲ್ಲಿಂಗ್ಯಾಮ್ ಎಂಬಾತ ಗುಂಡು ಹಾರಿಸಿ ಕೊಲ್ಲುತ್ತಾನೆ. ಪರ್ಸೆವಲ್ ಹತ್ಯೆಗೀಡಾದ ಏಕ ಮಾತ್ರ ಬ್ರಿಟಿಷ್ ಪ್ರಧಾನ ಮಂತ್ರಿಯಾಗಿ ಚರಿತ್ರೆಯಲ್ಲಿ ಉಳಿದುಕೊಂಡರು.[೧೦೫]

ಹೊಸ ಅರಮನೆಯು ಲಂಡನ್ ಗೋಪುರದೊಂದಿಗೆ ೧೮೮೫ ರ ಜನವರಿ ೨೪ ರಂದು ಫೀನ್ಯಿನ್ ಕ್ರಾಂತಿಕಾರರು ಎಸೆದ ಬಾಂಬುಗಳಿಗೆ ಗುರಿಯಾಯಿತು. ಮೊದಲ ಬಾಂಬನ್ನು, ಸೆಂಟ್ ಮೇರಿ ನೆಲಮಾಳಿಗೆಯ ಪೂಜಾ ಮಂದಿರದ ಮೆಟ್ಟಿಲುಗಳ ಮೇಲೆ, ಡೈನಮೈಟ್ ಅನ್ನು ಒಳಗೊಂಡಿದ್ದ ಕಪ್ಪು ಚೀಲವನ್ನು ಸಂದರ್ಶಕನೊಬ್ಬ ಪತ್ತೆಹಚ್ಚಿದನು. ವಿಲಿಯಂ ಕೋಲೆ ಎಂಬ ಪೋಲಿಸ್ ಪೇದೆ (PC) ಈ ಚೀಲವನ್ನು ಹೊಸ ಅರಮನೆಯ ಅಂಗಳಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದ , ಆದರೆ ಚೀಲವು ಹೆಚ್ಚು ಬಿಸಿಯಾದಾಗ ಕೋಲೆ ಅದನ್ನು ಬಿಟ್ಟುಬಿಟ್ಟ, ನಂತರ ಅದು ಸ್ಫೋಟಿಸಿತು.[೧೦೬] ಈ ಸ್ಫೋಟವು ನೆಲದ ಮೇಲೆ 1 metre (3 ft) ವ್ಯಾಸದಷ್ಟು ಗುಳಿಯನ್ನು ಉಂಟುಮಾಡಿತು, ಪೂಜಾಮಂದಿರದ ಚಾವಣಿಯನ್ನು ಹಾಳುಮಾಡಿತಲ್ಲದೇ, ಸೆಂಟ್ ಸ್ಟೆಫೆನ್ ನ ಮುಖಮಂಟಪದಲ್ಲಿದ್ದ ಬಣ್ಣದ ಗಾಜಿನ ದಕ್ಷಿಣ ಕಿಟಕಿಗಳನ್ನು ಒಳಗೊಂಡಂತೆ ಎಲ್ಲಾ ಕಿಟಕಿಗಳನ್ನು ಚೂರು ಚೂರು ಮಾಡಿತು.[೧೦೭] ಕೋಲೆ ಮತ್ತು ಅವರಿಗೆ ನೆರವು ನೀಡಲು ಬಂದಿದ್ದ PC ಕಾಕ್ಸ್ ಇಬ್ಬರಿಗೂ ತೀವ್ರವಾಗಿ ಗಾಯವಾಯಿತು.[೧೦೬] ಇದಾದ ತಕ್ಷಣವೇ ಅಪಾರ ಹಾನಿಯನ್ನುಂಟು ಮಾಡುವ ಮೂಲಕ ಕಾಮನ್ಸ್ ಕೊಠಡಿಯಲ್ಲಿ ಎರಡನೆಯ ಬಾಂಬ್ ಸ್ಫೋಟಿಸಿತು—ಅದರಲ್ಲೂ ಹೆಚ್ಚಾಗಿ ಇದರ ದಕ್ಷಿಣದ ತುದಿಗೆ— ಆದರೆ ಯಾವುದೇ ಅಪಾಯಗಳಾಗಲಿಲ್ಲ, ಏಕೆಂದರೆ ಸ್ಫೋಟವಾದಾಗ ಕೊಠಡಿಯು ಖಾಲಿಯಾಗಿತ್ತು.[೧೦೮] ಈ ಘಟನೆಯಿಂದಾಗಿ ಅನೇಕ ವರ್ಷಗಳ ವರೆಗೆ ವೆಸ್ಟ್‌ಮಿನಿಸ್ಟರ್ ಸಭಾಂಗಣ ಪ್ರವೇಶವನ್ನು ನಿಷೇಧಿಸಲಾಯಿತು; ಸಂದರ್ಶಕರು ೧೮೮೯ ರಲ್ಲಿ ಪುನಃ ಪ್ರವೇಶಾವಕಾಶ ಪಡೆದಾಗ ಅವರಿಗೆ ಕೆಲವೊಂದು ಪರಿಮಿತಿಗಳ ಮೇಲೆ ಅವಕಾಶ ನೀಡಲಾಯಿತು. ಅಂದರೆ ಎರಡೂ ಹೌಸ್ ಗಳ ಸದಸ್ಯರು ಅಧಿವೇಶನದಲ್ಲಿದ್ದಾಗ ಪ್ರವೇಶ ನಿರ್ಬಂಧಿಸಲಾಯಿತು.[೧೦೯]

ಪ್ರಾವಿಷನಲ್ IRA ಯವರು ಅಡಗಿಸಿಟ್ಟ 9-kilogram (20 lb) ಬಾಂಬ್ ೧೯೭೪ ರ ಜೂನ್ ೧೭ ರಂದು ವೆಸ್ಟ್‌ಮಿನಿಸ್ಟರ್ ಸಭಾಂಗಣದಲ್ಲಿ ಸ್ಫೋಟಿಸಿತು.[೧೧೦] ಆಗ ೧೯೭೯ ರ ಮಾರ್ಚ್ ೩೦ ರಂದು ಮತ್ತೊಂದು ದಾಳಿ ನಡೆಸಲಾಯಿತು. ಕನ್ಸರ್ವೇಟಿವ್ ಪಕ್ಷದ ಪ್ರಮುಖ ರಾಜಕಾರಣಿ ಏರೆ ನಿವೆ ಅರಮನೆಯ ಹೊಸ ಕಾರು ಪಾರ್ಕ್ ನ ಹೊರಗೆ ಬಂದ ಕೂಡಲೇ ಅವರನ್ನು ಕಾರ್ ಬಾಂಬ್ ಸ್ಪೋಟಿಸಿ ಹತ್ಯೆ ಮಾಡಲಾಯಿತು.[೧೧೧] ಐರಿಶ್ ನ್ಯಾಷನಲ್ ಲಿಬರೇಷನ್ ಆರ್ಮಿ ಮತ್ತು ಪ್ರಾವಿಷನಲ್ IRA ಎರಡೂ, ಈ ಹತ್ಯೆಗೆ ತಾವು ಕಾರಣವೆಂಬುದನ್ನು ಬಹಿರಂಗಪಡಿಸಿದವು; ಭದ್ರತಾ ಪಡೆಗಳು ಮಾತ್ರ ಈ ಹತ್ಯೆಗೆ ಮೊದಲಿನ ಸಂಘಟನೆಯೇ ಹೊಣೆಯೆಂದು ನಂಬಿದವು.

ಅರಮನೆಯು ರಾಜಕೀಯ ಪ್ರೇರಣೆಯಿಂದ ನಡೆಸಿದ "ಡೈರೆಕ್ಟ್ ಆಕ್ಷನ್" ನ ಅನೇಕ ದಾಳಿಗಳಿಗೆ ಸಾಕ್ಷಿಯಾಗಿದೆ. ಉತ್ತರ ಐರ್ಲೆಂಡ್ ನಲ್ಲಿದ್ದ ಪರಿಸ್ಥಿಗಳ ವಿರುದ್ಧ ಪ್ರತಿಭಟಿಸಲು ೧೯೭೦ರ ಜುಲೈನಲ್ಲಿ ಅಶ್ರುವಾಯುವನ್ನು ಒಳಗೊಂಡ ಡಬ್ಬಿಯೊಂದನ್ನು ಹೌಸ್ ಆಫ್ ಕಾಮನ್ಸ್ ನ ಕೊಠಡಿಯ ಮೇಲೆ ಎಸೆಯಲಾಯಿತು. ಆಗ ೧೯೭೮ ರಲ್ಲಿ ಯಾನ ಮಿನ್ ಟಾಫ್ ಮತ್ತು ಭಿನ್ನಮತೀಯನೊಬ್ಬ ಕುದುರೆ ಲದ್ದಿ ತುಂಬಿದ್ದ ಚೀಲಗಳನ್ನು ಎಸೆದಿದ್ದರು.[೧೧೨] ಬಳಿಕ ನಡೆದ ಘಟನೆಯಲ್ಲಿ ೧೯೯೬ ರ ಜೂನ್ ನಲ್ಲಿ ಪ್ರದರ್ಶಕರು ಕರಪತ್ರಗಳನ್ನು ಹಂಚಿದರು.[೧೧೩] ಇಂತಹ ದಾಳಿಗಳ ಆತಂಕದ ಕಾರಣದಿಂದಾಗಿ ಮತ್ತು ರಾಸಾಯನಿಕ ಅಥವಾ ಜೈವಿಕ ದಾಳಿಗಳನ್ನು ನಡೆಸುವ ಸಾಧ್ಯತೆಯಿಂದಾಗಿ ೨೦೦೪ ರಲ್ಲಿ ಅಪರಿಚಿತ ವಿದೇಶಿಗರ ಗ್ಯಾಲರಿಯಾದ್ಯಂತ ಗಾಜಿನ ಪರದೆಯನ್ನು ನಿರ್ಮಿಸಲಾಯಿತು.

ಹೊಸ ಪ್ರತಿಬಂಧಕವು, ವಿದೇಶಿಗರ ಗ್ಯಾಲರಿಯ ಮುಂದಿನ ಗ್ಯಾಲರಿಯನ್ನು ಆವರಿಸಿಲ್ಲ. ಇದನ್ನು ರಾಯಭಾರಿಗಳಿಗೆ, ಹೌಸ್ ಆಫ್ ಲಾರ್ಡ್ಸ್ ನ ಸದಸ್ಯರಿಗೆ, MP ಗಳ ಮತ್ತು ಇತರ ಪ್ರತಿಷ್ಠಿತ ಅಧಿಕಾರಿಗಳ ಅತಿಥಿಗಳಿಗೆಂದು ಕಾಯ್ದಿರಿಸಲಾಗಿದೆ,[೧೧೪] ಅಲ್ಲದೇ ೨೦೦೪ ರ ಮೇ ತಿಂಗಳಿನಲ್ಲಿ ಈ ಭಾಗದಿಂದ ಪ್ರಧಾನ ಮಂತ್ರಿ ಟೋನಿ ಬ್ಲೇರ್ ರ ಮೇಲೆ ಪುಡಿಹಿಟ್ಟಿನ ಬಾಂಬುಗಳೊಂದಿಗೆ ಫಾದರ್ಸ್ ೪ ಜಸ್ಟೀಸ್ ನ ಪ್ರತಿಭಟನಕಾರರು ದಾಳಿನಡೆಸಿದರು. ದತ್ತಿಸಂಸ್ಥೆಗೆಂದು ನಡೆಸಲಾದ ಹರಾಜಿನಲ್ಲಿ ಪಾಲ್ಗೊಳ್ಳಲು ಸಂದರ್ಶಕರು ಗ್ಯಾಲರಿಗೆ ಪ್ರವೇಶಿಸಿದ ನಂತರ ಈ ದಾಳಿ ಮಾಡಲಾಯಿತು.[೧೧೫] ಅನಂತರ ಸಂದರ್ಶಕರ ಗ್ಯಾಲರಿಗೆ ಪ್ರವೇಶ ಪಡೆಯಲು ವಿಧಿಸಲಾಗುವ ನಿಯಮಗಳು ಬದಲಾದವು. ಅಲ್ಲದೇ ಈಗ ಅಲ್ಲಿನ ಸಂದರ್ಶಕರ ಗ್ಯಾಲರಿಯಲ್ಲಿ ಕೂರಲು ಬಯಸುವವರು, ಮೊದಲು ಸದಸ್ಯನಿಂದ ಲಿಖಿತ ಪಾಸ್ ಅನ್ನು ಪಡೆದುಕೊಂಡಿರಬೇಕು.ಈ ಪಾಸ್ ನಲ್ಲಿ ಆ ವ್ಯಕ್ತಿಯು ಸದಸ್ಯನಿಗೆ ವೈಯಕ್ತಿಕವಾಗಿ ಪರಿಚಿತನೆಂದು ದೃಢೀಕರಿಸಲಾಗಿರುತ್ತದೆ. ಅದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ, ಐದು ಜನ ಪ್ರತಿಭಟನಕಾರರು ಕೊಠಡಿಗೆ ಧಾವಿಸಿ ಬರುವ ಮೂಲಕ ಹೌಸ್ ಆಫ್ ಕಾಮನ್ಸ್ ನ ಕಾರ್ಯ ಕಲಾಪಗಳಿಗೆ ಭಂಗಮಾಡುವುದರೊಂದಿಗೆ, ನರಿ ಬೇಟೆಯ ಮೇಲೆ ಹೇರಲಾದ ನಿಷೇಧವನ್ನು ವಿರೋಧಿಸಿದರು.[೧೧೬]

ಹೌಸ್ ಆಫ್ ಲಾರ್ಡ್ಸ್ ಇಂತಹ ಪ್ರಸಂಗಳು ನಡೆಯದಂತೆ ತಡೆದರೂ ಕೂಡ ೧೯೮೮ ರಲ್ಲಿ ಈ ರೀತಿಯ ಘಟನೆಗೆ ಅರಮನೆ ಗುರಿಯಾಗಿತ್ತು. ಶಾಲೆಗಳಲ್ಲಿ ಸಲಿಂಗಕಾಮವನ್ನು ಪ್ರೋತ್ಸಾಹಿಸದಂತೆ ನಿಷೇಧವನ್ನು ಹೇರುವುದರ ಬಗ್ಗೆ ರಚಿಸಲಾದ ವಿವಾದಾತ್ಮಕ ವಿಧಿ ೨೮ ರ ಮೇಲೆ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ, ಮೂರು ಸಲಿಂಗಕಾಮಿ ಸಹಾಯಕಿಯರು, ಸಾರ್ವಜನಿಕ ಗ್ಯಾಲರಿಯಿಂದ ಕೊಠಡಿಗೆ ನೇರವಾಗಿ ಹಗ್ಗದೊಂದಿಗೆ ಇಳಿಯುವ ಮೂಲಕ ಪ್ರತಿಭಟಿಸಿ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ್ದರು. [೧೧೩]

ವೆಸ್ಟ್‌ಮಿನಿಸ್ಟರ್ ಅರಮನೆಯ ಚಾವಣಿಯ ಮೇಲಿರುವ ಕಾರ್ಯಕರ್ತರು

ಈ ಪ್ರತಿಭಟನೆಗಳು ಕೇವಲ ಅರಮನೆಯ ಒಳಾಂಗಣಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬಳಿಕ ೨೦೦೪ ರ ಮಾರ್ಚ್ ೨೦ ರಂದು ಬೆಳಗ್ಗೆ, ಗ್ರೀನ್ ಪೀಸ್ ನ ಇಬ್ಬರು ಸದಸ್ಯರು, ಅಂತಹ ದೊಡ್ಡ ದಾಳಿಯ ಸುತ್ತಲೂ ನೀಡಿದ್ದ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಇರಾಕ್ ಯುದ್ಧದ ವಿರುದ್ಧ ವಿರೋಧ ವ್ಯಕ್ತಪಡಿಸಲು ಗಡಿಯಾರದ ಗೋಪುರವನ್ನು ಹತ್ತಿದ್ದರು.[೧೧೭] ಅದಲ್ಲದೇ ೨೦೦೭ರ ಮಾರ್ಚ್ ನಲ್ಲಿ ಗ್ರೀನ್ ಪೀಸ್ ನ ಇತರ ನಾಲ್ಕುಜನ ಸದಸ್ಯರು, ಸಮೀಪದಲ್ಲಿದ್ದ ಕ್ರೇನ್ ನ ಮೂಲಕ ಅರಮನೆಯ ಚಾವಣಿ ಮೇಲೆ ಹತ್ತಿದ್ದರು. ಈ ಯಂತ್ರವನ್ನು ವೆಸ್ಟ್‌ಮಿನಿಸ್ಟರ್ ಸೇತುವೆಯ ದುರಸ್ತಿಗಳಿಗಾಗಿ ಬಳಸಲಾಗುತ್ತಿತ್ತು. ಒಮ್ಮೆ, ಟ್ರೈಡೆಂಟ್ ನ್ಯೂಕ್ಲಿಯರ್ ವೆಪನ್ಸ್ ಪ್ರೋಗ್ರಾಂ ಅನ್ನು ಪರಿಷ್ಕರಿಸಲು ಮಾಡಲಾದ ಬ್ರಿಟಿಷ್ ಸರ್ಕಾರದ ಯೋಜನೆಗಳನ್ನು ವಿರೋಧಿಸಿ, 15-metre (50 ft) ಮೀಟರ್ ಗಳಷ್ಟು ದೊಡ್ಡ ಬ್ಯಾನರ್ ಅನ್ನು ಅವರು ಬಿಚ್ಚಿ ಪ್ರದರ್ಶಿಸಿದ್ದರು.[೧೧೮] ಇತ್ತೀಚಿಗೆ ೨೦೦೮ರ ಫೆಬ್ರವರಿಯಲ್ಲಿ ಪ್ಲೇನ್ ಸ್ಟುಪಿಡ್ ಗುಂಪಿನ ಐದು ಜನ ಆಂದೋಲನಗಾರರು, ಹಿತ್ರೊ ವಿಮಾನನಿಲ್ದಾಣದ ವಿಸ್ತರಣೆಯನ್ನು ವಿರೋಧಿಸಲೆಂದು ಕಟ್ಟಡದ ಚಾವಣಿಯ ಮೇಲೆ ಹತ್ತಿದ್ದರು. ಪ್ರತಿಭಟನಾಗಾರರು ಬಿಗಿ ಭದ್ರತಾ ವ್ಯವಸ್ಥೆಯ ಹೊರತಾಗಿಯೂ ಚಾವವಣಿಗಳ ಮೇಲೆ ಹತ್ತಿದ್ದನ್ನು ಕಂಡು MPಗಳು ಮತ್ತು ಭದ್ರತಾ ವ್ಯವಸ್ಥೆಯ ಪರಿಣಿತರು ಚಿಂತೆಗೊಳಗಾದರು. ಅಲ್ಲದೇ ಅವರು ಒಳಗಿನಿಂದಲೇ ಸಹಾಯ ಪಡೆದಿರಬಹುದೆಂದು ಪೋಲಿಸರು ನಂಬಿದರು.[೧೧೯] ಇತ್ತೀಚಿಗೆ ೨೦೦೯ ರ ಅಕ್ಟೋಬರ್ ನಲ್ಲಿ ಗ್ರೀನ್ ಪೀಸ್ ನ ೪೫ ಜನ ಕಾರ್ಯಕರ್ತರು ಪರಿಸರಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳಿಗೆ ಕರೆ ನೀಡಲೆಂದು ವೆಸ್ಟ್‌ಮಿನಿಸ್ಟರ್ ಸಭಾಂಗಣದ ಚಾವಣಿಯ ಮೇಲೆ ಹತ್ತಿದ್ದರು. ಐದು ಗಂಟೆಗಳ ನಂತರ ಅವರಲ್ಲಿ ಇಪ್ಪತ್ತು ಜನ ಕೆಳಗಿಳಿದರು, ಉಳಿದವರು ರಾತ್ರಿಯನ್ನು ಚಾವಣಿಯ ಮೇಲೆಯೇ ಕಳೆದರು.[೧೨೦][೧೨೧][note ೪]

ನಿಯಮಗಳು ಮತ್ತು ಸಂಪ್ರದಾಯಗಳು

[ಬದಲಾಯಿಸಿ]

ತಿನ್ನುವುದು, ಮದ್ಯಪಾನ ಮತ್ತು ಧೂಮಪಾನ

[ಬದಲಾಯಿಸಿ]

ಅರಮನೆಯು ಶತಮಾನಗಳಿಂದ ಅನೇಕ ನಿಯಮಗಳು ಮತ್ತು ಸಂಪ್ರದಾಯಗಳನ್ನು ಹೊಂದಿದೆ. ಹೀಗೆ ೧೭ ನೇ ಶತಮಾನದಿಂದ ಹೌಸ್ ಆಫ್ ಕಾಮನ್ಸ್ ನ ಕೊಠಡಿಯಲ್ಲಿ ಧೂಮಪಾನ ನಿಷೇಧಿಸಲಾಗಿದೆ.[೧೨೪] ಇದರ ಫಲಿತಾಂಶವೆಂಬಂತೆ, ಇದರ ಬದಲಿಗೆ ಸದಸ್ಯರು ನಶ್ಯವನ್ನು ಸೇವಿಸಬಹುದಾಗಿತ್ತು. ಅಲ್ಲದೇ ಈ ಉದ್ದೇಶಕ್ಕಾಗಿ ಬಾಗಿಲು ಕಾಯುವವರು ನಶ್ಯೆ ಡಬ್ಬಿಯನ್ನು ಇನ್ನೂ ಇಟ್ಟುಕೊಂಡಿರುತ್ತಾರೆ. ಮಾಧ್ಯಮದ ನಿರಂತರ ವದಂತಿಗಳ ಹೊರತಾಗಿಯೂ, ೨೦೦೫ ರಿಂದ ಅರಮನೆಯ ಒಳಗೆ ಎಲ್ಲೂ ಧೂಮಪಾನ ಮಾಡಲು ಸಾಧ್ಯವಿಲ್ಲ.[೧೨೫] ಸದಸ್ಯರು ಕೊಠಡಿಯಲ್ಲಿ ತಿನ್ನದಿರಬಹುದು ಅಥವಾ ಕುಡಿಯದಿರಬಹುದು;ಚಾನ್ಸಲರ್ ಆಫ್ ದಿ ಎಕ್ಸ್ ಚೆಕರ್ ಗೆ ಈ ನಿಯಮದಲ್ಲಿ ವಿನಾಯಿತಿ ನೀಡಲಾಗಿದೆ. ಇವರು ಆಯವ್ಯಯದ ಪ್ರಕಟನೆ ನೀಡುವಾಗ ಮದ್ಯಪಾನ ಮಾಡಬಹುದಾಗಿದೆ.[೧೨೬]

ಉಡುಪು ನಿಯಮಾವಳಿ

[ಬದಲಾಯಿಸಿ]
ಪಾರ್ಲಿಮೆಂಟ್ ನ ಹೊಸ ಸದಸ್ಯನ ಪರಿಚಯ, 1858. ಹೌಸ್ ಆಫ್ ಕಾಮನ್ಸ್ ನಲ್ಲಿ ಟೋಪಿ ಹಾಕಿಕೊಳ್ಳುವುದನ್ನು ಯಾವಾಲೂ ಒಂದೇ ರೀತಿಯಲ್ಲಿ ನಡೆಸಿಕೊಳ್ಳುತ್ತಿರಲಿಲ್ಲ .

ಟೋಪಿಗಳನ್ನು ಧರಿಸುವಂತಿಲ್ಲ, (ಪಾಯಿಂಟ್ ಆಫ್ ಆರ್ಡರ್ ಅನ್ನು ಜಾರಿಗೆ ತರುವ ಮೊದಲು ಅವುಗಳನ್ನು ಧರಿಸಲಾಗುತ್ತಿದ್ದರೂ ಕೂಡ),[೧೨೭] ಹಾಗು ಸದಸ್ಯರು ಸೈನಿಕ ಉಡುಗೆ ತೊಡುಗೆಗಳನ್ನು ಅಥವಾ ಪದಕಗಳನ್ನು ತೊಡುವಂತಿಲ್ಲ. ಸದಸ್ಯರು ಕೈಯಿಗಳನ್ನು ಅವರ ಜೇಬಿನಲ್ಲಿ ಹಾಕಿಕೊಳ್ಳುವಂತಿಲ್ಲ — ೧೯೯೪ ರ ಡಿಸೆಂಬರ್ ೧೯ ರಂದು ಹೀಗೆ ನಡೆದುಕೊಳ್ಳಲು ನಿರಾಕರಿಸುವು ಮೂಲಕ MP ಗಳು ಆಂಡ್ರೀವ್ ರೊಬಾತನ್ ರವರನ್ನು ಈ ವಿಷಯದಲ್ಲಿ ಪೀಡಿಸಿದರು.[೧೨೮] ಅಲ್ಲದೇ ಅರಮನೆಯಲ್ಲಿ ಕತ್ತಿಗಳನ್ನು ಇಟ್ಟುಕೊಳ್ಳುವಂತಿಲ್ಲ, ಹಾಗು ಉಡುಪು ಕೋಣೆಯಲ್ಲಿ ಆಯುಧಗಳನ್ನು ಇಟ್ಟುಕೊಳ್ಳಲು ಪ್ರತಿ MP ರಿಬ್ಬನ್ನಿನ ಕುಣಿಕೆಯನ್ನು ಹೊಂದಿರುತ್ತಾನೆ.

ಇತರ ಸಂಪ್ರದಾಯಗಳು

[ಬದಲಾಯಿಸಿ]

ಅಂಧರಿಗಿರುವ ಮಾರ್ಗದರ್ಶಕ ನಾಯಿಗಳನ್ನು ಹೊರತುಪಡಿಸಿ ಬೇರಾವುದೇ ಪ್ರಾಣಿಗಳು ವೆಸ್ಟ್‌ಮಿನಿಸ್ಟರ್ ಅರಮನೆಯೊಳಗೆ ಪ್ರವೇಶಿಸುವಂತಿಲ್ಲ;[೧೨೪] ಅಲ್ಲದೇ ಮೂಸು ನಾಯಿಗಳು, ಪೋಲಿಸ್ ಕುದುರೆಗಳು.[೧೨೯] ಮತ್ತು ರಾಜಮನೆತನದ ಅಶ್ವಶಾಲೆಗೆ ಸೇರಿದ ಕುದುರೆಗಳನ್ನು ಹೊರತುಪಡಿಸಿ ಬೇರೆ ಯಾವ ಪ್ರಾಣಿಗಳಿಗೂ ಪ್ರವೇಶವಿಲ್ಲ.

ಹೌಸ್ ಆಫ್ ಕಾಮನ್ಸ್ ನ ಚರ್ಚೆಯ ಸಂದರ್ಭದಲ್ಲಿ ಟಿಪ್ಪಣಿಗಳನ್ನು ಉಲ್ಲೇಖಿಸಿದರೂ ಕೂಡ ಭಾಷಣಗಳನ್ನು ಓದುವುದಿಲ್ಲ. ಇದೇ ರೀತಿ ಸಮಾಚಾರ ಪತ್ರಿಕೆಗಳನ್ನು ಕೂಡ ಓದಲು ಅನುಮತಿ ಇಲ್ಲ. ವೀಕ್ಷಣಾ ಸಾಧನಗಳನ್ನು ಕೊಠಡಿಯಲ್ಲಿ ಅನುಮತಿಸುವುದಿಲ್ಲ.[೧೩೦] ಕಾಮನ್ಸ್ ನಲ್ಲಿ ಸಾಮಾನ್ಯವಾಗಿ ಚಪ್ಪಾಳೆ ಮೂಲಕ ಸಮ್ಮತಿಸಲು ಅವಕಾಶ ನೀಡುವುದಿಲ್ಲ. ಇವುಗಳಿಗೆ ಇದ್ದಂತಹ ಕೆಲವು ಗಮನಾರ್ಹ ವಿನಾಯಿತಿಗಳೆಂದರೆ; ರಾಬಿನ್ ಕುಕ್ ೨೦೦೩ ರಲ್ಲಿ ಅವರ ರಾಜೀನಾಮೆ ಭಾಷಣವನ್ನು ಮಾಡಿದರು,[೧೩೧] ೨೦೦೯ ರ ಜೂನ್ ೧೭ ರಂದು ಕಳೆದ ಪ್ರೈಮ್ ಮಿನಿಸ್ಟರ್ ಕ್ವೇಷನ್ಸ್[೧೩೨] ಸಭೆಗೆ ಟೋನಿ ಬ್ಲೇರ್ ರವರು ಆಗಮಿಸಿದ್ದ ಸಂದರ್ಭದಲ್ಲಿ, ಸ್ಪೀಕರ್‌ ಮೈಕೆಲ್ ಮಾರ್ಟೀನ್ ಅವರ ರಾಜೀನಾಮೆ ಭಾಷಣ ನೀಡಿದ್ದರು.[೧೩೩]

ಸಂಸ್ಕೃತಿ ಮತ್ತು ಪ್ರವಾಸೋದ್ಯಮ

[ಬದಲಾಯಿಸಿ]
The Houses of Parliament, sunset (೧೯೦೩), National Gallery of Art, Washington, D.C.
London, Houses of Parliament. The Sun Shining through the Fog (೧೯೦೪), Musée d'Orsay, Paris
During three trips to London between 1899 and 1901, Impressionist painter Claude Monet worked on a series of canvasses depicting the Houses of Parliament under various light and weather conditions, often obscured by the smog prevalent in the city in Victorian times. The paintings share the same vantage point—a terrace at St Thomas's Hospital—and many of the works were finished in Monet's studio in France during the following years.[೧೩೪]

ವೆಸ್ಟ್‌ಮಿನಿಸ್ಟರ್ ಅರಮನೆಯ ಹೊರಾಂಗಣವು—ಅದರಲ್ಲೂ ವಿಶೇಷವಾಗಿ ಕ್ಲಾಕ್ ಗೋಪುರ— ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ. ಅಲ್ಲದೇ ಇದು ಲಂಡನ್ ನಲ್ಲಿ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿಕೊಡುವ ಆಕರ್ಷಣೆಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಯುನೈಟೆಡ್ ನೇಷನ್ಸ್ ಎಜುಕೇಷನ್, ಸೈಂಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಸೇಷನ್ (UNESCO), ವೆಸ್ಟ್‌ಮಿನಿಸ್ಟರ್ ಅರಮನೆಯನ್ನು ಪಕ್ಕದ ವೆಸ್ಟ್‌ಮಿನಿಸ್ಟರ್ ಅಬೆ ಮತ್ತು ಸೆಂಟ್ ಮಾರ್ಗರೇಟ್ ನೊಂದಿಗೆ ವಿಶ್ವ ಪರಂಪರೆಯ ತಾಣವಾಗಿ ವಿಂಗಡಿಸಿದೆ. ಇದು ಗ್ರೇಡ್ I ರ ಪಟ್ಟಿಯಲ್ಲಿರುವ ಕಟ್ಟಡವಾಗಿದೆ.

ಅರಮನೆಯ ಒಳಭಾಗಕ್ಕೆಸುಲಭವಾಗಿ ಪ್ರವೇಶಿಸಲು ಸಾಧ್ಯವಿಲ್ಲದಿದ್ದರೂ ಕೂಡ ಪ್ರವೇಶಾವಕಾಶ ಪಡೆಯಲು ಅನೇಕ ಮಾರ್ಗಗಳಿವೆ. ಹೌಸ್ ಆಫ್ ಕಾಮನ್ಸ್ ನ ವೀಕ್ಷಣಾ ಗ್ಯಾಲರಿಯನ್ನು ಪ್ರವೇಶಿಸಲು UK ನ ನಿವಾಸಿಗಳು ಸ್ಥಳೀಯ MP ಯಿಂದ ಟಿಕೇಟ್ ತೆಗೆದುಕೊಳ್ಳಬಹುದು, ಅಥವಾ ಹೌಸ್ ಆಫ್ ಲಾರ್ಡ್ಸ್ ನ ಗ್ಯಾಲರಿಯಲ್ಲಿ ಸ್ಥಳಾವಕಾಶಕ್ಕಾಗಿ ಲಾರ್ಡ್ ನಿಂದ ಟಿಕೇಟ್ ಗಳನ್ನು ಪಡೆದುಕೊಳ್ಳಬಹುದು. UK ನಿವಾಸಿಗಳು ಮತ್ತು ವಿದೇಶಿ ಸಂದರ್ಶಕರು, ಇಬ್ಬರೂ ಪ್ರವೇಶಾವಕಾಶಕ್ಕಾಗಿ ದಿನಗಟ್ಟಲೇ ಕಾಯುವುದು ಕೂಡ ಇದೆ. ಆದರೆ ಪ್ರವೇಶಾವಕಾಶ ನೀಡುವ ಸಾಮರ್ಥ್ಯವು ಸೀಮಿತವಾಗಿದ್ದು, ಅಲ್ಲಿ ಪ್ರವೇಶದ ಯಾವುದೇ ಖಾತರಿ ಇರುವುದಿಲ್ಲ. ಯಾವುದೇ ಹೌಸ್ ಖಾಸಗಿಯಾಗಿ ಸೇರಲು ಬಯಸಿದರೆ "ವಿದೇಶಿಯರನ್ನು" ಅಥವಾ ಅಪರಿಚಿತರನ್ನು ಹೊರಗಿಡಬಹುದು.[೧೩೫] ಸಮಿತಿಯ ಅಧಿವೇಶನದಲ್ಲಿ ಸ್ಥಳಾವಕಾಶಕ್ಕಾಗಿ ಪ್ರವೇಶ ಉಚಿತವಾಗಿರುವ ಮತ್ತು ಸ್ಥಳಗಳನ್ನು ಕಾಯ್ದಿರಿಸಲಾಗದ ಸ್ಥಳಗಳಲ್ಲಿ ಸಾರ್ವಜನಿಕರ ಸದಸ್ಯರು ಸಾಲಿನಲ್ಲಿ ನಿಂತು ಅನುಮತಿ ಪಡೆಯಬಹುದು,[೧೩೬] ಅಥವಾ ಅವರು ಸಂಶೋಧನ ಉದ್ದೇಶಗಳಿಗಾಗಿ ಪಾರ್ಲಿಮೆಂಟರಿ ದಫ್ತರಖಾನೆಗೆ ಭೇಟಿನೀಡಬಹುದು. ಅನಂತರದ ಪ್ರಸಂಗದಲ್ಲಿ ಗುರುತಿಗೆ ಪುರಾವೆಯ ಅಗತ್ಯವಿರುತ್ತದೆ. ಆದರೆ ಪಾರ್ಲಿಮೆಂಟ್ ಸದಸ್ಯರನ್ನು ಮೊದಲೇ ಸಂಪರ್ಕಿಸುವ ಅಗತ್ಯವಿಲ್ಲ.[೧೩೭]

UK ನಿವಾಸಿಗಳಿಗೆ ಸಂಸತ್ತಿನ ಅಧಿವೇಶನದುದ್ದಕ್ಕೂ ಅರಮನೆಯ ಉಚಿತ ಮಾರ್ಗದರ್ಶನದ ಪ್ರವಾಸವಿರುತ್ತದೆ.ಇದರಲ್ಲಿ ಸ್ಥಳಾವಕಾಶ ಪಡೆಯಲು ಅವರ MPಯ ಮೂಲಕ ಅಥವಾ ಹೌಸ್ ಆಫ್ ಲಾರ್ಡ್ಸ್ ನ ಸದಸ್ಯರ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರವಾಸವು ಸುಮಾರು ೭೫ ನಿಮಿಷಗಳವರೆಗಿರುತ್ತದೆ. ಅಲ್ಲದೇ ಇದು ವೈಭವದ ಕೋಣೆಗಳನ್ನು, ಎರಡು ಹೌಸ್ ಗಳ ಕೊಠಡಿಗಳನ್ನು ವೆಸ್ಟ್‌ಮಿನಿಸ್ಟರ್ ಸಭಾಂಗಣವನ್ನು ಒಳಗೊಂಡಿರುತ್ತದೆ. ಬೇಸಿಗೆಯ ಬಿಡುವು ಕಾಲದಲ್ಲಿ UK ಯ ಮತ್ತು ವಿದೇಶಿ ಮಾರ್ಗದರ್ಶಿಗಳ ಪ್ರವಾಸಕ್ಕೆ ಪಾವತಿಸಬೇಕಾಗುತ್ತದೆ. (ಲಂಡನ್ ಬ್ಲ್ಯೂ ಬ್ಯಾಡ್ಜ್ ಟೂರಿಸ್ಟ್ ಗೈಡ್ಸ್ ಗಳು ಈ ಕಾರ್ಯ ನಿರ್ವಹಿಸುತ್ತಾರೆ[ಸೂಕ್ತ ಉಲ್ಲೇಖನ ಬೇಕು]).[೧೩೮] UK ನಿವಾಸಿಗಳು ಪಾರ್ಲಿಮೆಂಟ್ ನ ಅವರ ಸ್ಥಳೀಯ ಸದಸ್ಯರ ಮೂಲಕ ಪ್ರವೇಶಾವಕಾಶ ಕೋರುವುದರೊಂದಿಗೆ ಕ್ಲಾಕ್ ಗೋಪುರವನ್ನು ವೀಕ್ಷಿಸಬಹುದಾಗಿದೆ; ಇಲ್ಲಿ ವಿದೇಶಿ ಭೇಟಿಗಾರರಿಗೆ ಮತ್ತು ಎಳೆಯ ಮಕ್ಕಳಿಗೆ ಪ್ರವೇಶವಿಲ್ಲ.[೧೩೯]

ಹೀಗೆ ೨೦೦೬ರ ಬಿಬಿಸಿ ಕಿರುತೆರೆ ಸಾಕ್ಷ್ಯಚಿತ್ರ ಸರಣಿ ಬ್ರಿಟನ್ಸ್‌ ಬೆಸ್ಟ್ ಬಿಲ್ಡಿಂಗ್ಸ್‌ ಗಾಗಿ ತಮ್ಮ ನಾಲ್ಕು ಆಯ್ಕೆಗಳ ಪೈಕಿ ಗೋಪುರ ಸೇತುವೆಯೂ ಒಂದು ಎಂದು ವಾಸ್ತುಶೈಲಿಯ ಇತಿಹಾಸಜ್ಞ ಡ್ಯಾನ್‌ ಕ್ರುಯಿಕ್ಷಾಂಕ್‌ ಅಭಿಪ್ರಾಯಪಟ್ಟಿದ್ದರು.[೧೪೦] ಡಿಸ್ಟ್ರಿಕ್ಟ್, ಸರ್ಕಲ್ ಮತ್ತು ಜುಬ್ಲೀ ಲೈನ್ ಗಳ ಮೇಲೆರುವ ಹತ್ತಿರದ ಲಂಡನ ನೆಲಡದಿಯಲ್ಲಿರುವ ನಿಲ್ದಾಣವೆಂದರೆ ವೆಸ್ಟ್‌ಮಿನಿಸ್ಟರ್ ಆಗಿದೆ.

ಟಿಪ್ಪಣಿಗಳು

[ಬದಲಾಯಿಸಿ]
  1. At this point of its course, the Thames flows from south to north instead of its general west–east direction, so the Palace is effectively situated on the west bank of the river.
  2. Depicted (clockwise) are the virtues of Courtesy, Religion, Generosity, Hospitality and Mercy. The two missing frescoes were meant to depict Fidelity and Courage.[೫೮] Queen Victoria's portrait can be seen in the Parliamentary website.[೫೯]
  3. Ireland was part of the United Kingdom in its entirety from 1801 until the secession of the Irish Free State in 1922. Decorative references to Ireland exist throughout the Palace of Westminster and include symbols like the harp and the shamrock.
  4. According to the BBC, the protesters who spent the night on the roof were more than thirty,[೧೨೨] and ೫೪ people were later charged with trespassing on land designated a protected site.[೧೨೩]

ಉಲ್ಲೇಖಗಳು

[ಬದಲಾಯಿಸಿ]
ಅಡಿ ಟಿಪ್ಪಣಿಗಳು
  1. http://www.parliament.uk ನ ಪ್ರಕಾರ ಹೆಚ್. ಜೆ, ಬ್ರೆವರ್ ರಿಂದ ಮಾಡಲಾದ ವೆಸ್ಟ್ ಮಿನಿಸ್ಟರ್ ನ ಊಹಾತ್ಮಕ ನವೀಕರಣ 1884
  2. ೨.೦ ೨.೧ "A Brief Chronology of the House of Commons" (PDF). House of Commons Information Office. 2009. Retrieved 5 ಆಗಸ್ಟ್ 2010. {{cite web}}: Unknown parameter |month= ignored (help)
  3. Fraser, Antonia (1992). The Wives of Henry VIII. New York: Alfred A Knopf. ISBN 0394585380.
  4. "Architecture of the Palace: The Great Fire of 1834". UK Parliament. Retrieved 5 ಆಗಸ್ಟ್ 2010.
  5. ಜೋನ್ಸ್ (೧೯೮೩), p. ೭೭; ರೈಡಿಂಗ್ ಅಂಡ್ ರೈಡಿಂಗ್ (೨೦೦೦), p. ೧೦೦; ಪೋರ್ಟ್(೧೯೭೬), p. ೨೦.r
  6. ರೈಡಿಂಗ್ ಅಂಡ್ ರೈಡಿಂಗ್ (೨೦೦೦), pp. ೧೦೮, ೧೧೧.
  7. ಜೋನ್ಸ್ (೧೯೮೩), pp. ೭೭–೭೮; ಪೋರ್ಟ್ (೧೯೭೬), p. ೨೦.
  8. Watkin, David (Summer 1998). "An Eloquent Sermon in Stone". City Journal. 8 (3). ISSN 1060-8540. Archived from the original on 4 ಜನವರಿ 2011. Retrieved 25 ಅಕ್ಟೋಬರ್ 2010.
  9. Riding, Christine (7 ಫೆಬ್ರವರಿ 2005). "Westminster: A New Palace for a New Age". BBC. Retrieved 27 ಡಿಸೆಂಬರ್ 2009.
  10. ೧೦.೦ ೧೦.೧ "Architecture of the Palace: Bomb damage". UK Parliament. Retrieved 5 ಆಗಸ್ಟ್ 2010.
  11. "Richard I statue: Second World War damage". UK Parliament. Retrieved 27 ಡಿಸೆಂಬರ್ 2009.
  12. ೧೨.೦ ೧೨.೧ ಫೆಲ್ ಅಂಡ ಮೆಕೆಂಜೆ(೧೯೯೪), p. ೨೭.
  13. ಫೀಲ್ಡ್ (೨೦೦೨), p. ೨೫೯.
  14. UK Parliament. "Bombed House of Commons 1941". Flickr. Retrieved 5 ಆಗಸ್ಟ್ 2010.
  15. ೧೫.೦ ೧೫.೧ "Architecture of the Palace: Churchill and the Commons Chamber". UK Parliament. Retrieved 14 ಮೇ 2010.
  16. "The Norman Shaw Buildings" (PDF). House of Commons Information Office. 2007. Retrieved 5 ಆಗಸ್ಟ್ 2010. {{cite web}}: Unknown parameter |month= ignored (help)
  17. Devey, Peter (2001). "Commons Sense". The Architectural Review. Archived from the original on 8 ಜುಲೈ 2012. Retrieved 3 ಡಿಸೆಂಬರ್ 2009. {{cite web}}: Unknown parameter |month= ignored (help)
  18. ೧೮.೦೦ ೧೮.೦೧ ೧೮.೦೨ ೧೮.೦೩ ೧೮.೦೪ ೧೮.೦೫ ೧೮.೦೬ ೧೮.೦೭ ೧೮.೦೮ ೧೮.೦೯ ೧೮.೧೦ ೧೮.೧೧ ೧೮.೧೨ ೧೮.೧೩ ೧೮.೧೪ "The Palace of Westminster" (PDF). House of Commons Information Office. 2009. Retrieved 5 ಆಗಸ್ಟ್ 2010. {{cite web}}: Unknown parameter |month= ignored (help)
  19. ೧೯.೦ ೧೯.೧ "Restoration of the Palace of Westminster: 1981–94" (PDF). House of Commons Information Office. 2003. Retrieved 5 ಆಗಸ್ಟ್ 2010. {{cite web}}: Unknown parameter |month= ignored (help)
  20. ಕ್ವೀನ್ ಅಲ್ಟ್(೧೯೯೧), p. ೮೧; ಜೋನ್ಸ್(೧೯೮೩), p. ೧೧೩.
  21. ಪೋರ್ಟ್(೧೯೭೬), pp. ೭೬, ೧೦೯; ರೈಡಿಂಗ್ ಅಂಡ್ ರೈಡಿಂಗ್ (೨೦೦೦), p. ೧೧೬.
  22. ಕ್ವೀನ್ ಅಲ್ಟ್(೧೯೯೧), p. ೮೧.
  23. ಫೆಲ್ ಅಂಡ್ ಮ್ಯಾಕೆಂಜೆ (೧೯೯೪), p. ೩೦.
  24. ಫೆಲ್ ಅಂಡ್ ಮ್ಯಾಕೆಂಜೆ(೧೯೯೪), p. ೪೪.
  25. "10 January 2007". Parliamentary Debates (Hansard). House of Commons. col. 582W–583W. {{cite journal}}: Cite has empty unknown parameters: |laydate=, |separator=, |trans_title=, |laysource=, and |layurl= (help).
  26. Williams, Kevin; Walpole, Jennifer (3 ಜೂನ್ 2008). "The Union Flag and Flags of the United Kingdom" (PDF). House of Commons Library. Archived from the original (PDF) on 28 ಫೆಬ್ರವರಿ 2010. Retrieved 26 ಏಪ್ರಿಲ್ 2010.
  27. "Building the Great Clock". UK Parliament. Archived from the original on 15 ಮೇ 2010. Retrieved 14 ಮೇ 2010.
  28. ಮ್ಯಾಕ್ ಡೋನಾಲ್ಡ್ (೨೦೦೪), pp. xiii–xiv.
  29. "Great Clock facts". UK Parliament. Retrieved 14 ಮೇ 2010.
  30. ಫೆಲ್ ಅಂಡ್ ಮ್ಯಾಕೆಂಜೆ (೧೯೯೪), pp. ೨೪, ೨೬.
  31. "The Great Bell – Big Ben". UK Parliament. Archived from the original on 15 ಮೇ 2010. Retrieved 14 ಮೇ 2010.
  32. ಮ್ಯಾಕ್ ಡೋನಾಲ್ಡ್ (೨೦೦೪), pp. xvi–xvii, ೫೦.
  33. "The Great Bell and the quarter bells". UK Parliament. Retrieved 14 ಮೇ 2010.
  34. ಮ್ಯಾಕ್ ಡೋನಾಲ್ಡ್ (೨೦೦೪) ೧೯೮೬, ಪುಟ. ೯೮.
  35. ಜೋನ್ಸ್(೧೯೮೩), pp. ೧೧೨–೧೧೩.
  36. "Clock Tower virtual tour". UK Parliament. Archived from the original on 14 ಮೇ 2010. Retrieved 15 ಮೇ 2010.
  37. ಪೋರ್ಟ್(೧೯೭೬), p. ೨೨೧; ಜೋನ್ಸ್(೧೯೮೩), p. ೧೧೯.
  38. ಜೋನ್ಸ್ (೧೯೮೩), pp. ೧೦೮–೧೦೯; ಫೀಲ್ಡ್ (೨೦೦೨), p. ೧೮೯.
  39. ೩೯.೦ ೩೯.೧ ರೈಡಿಂಗ್ ಅಂಡ್ ರೈಡಿಂಗ್ (೨೦೦೦), p. ೧೨೦.
  40. ಪೋರ್ಟ್(೧೯೭೬), p. ೧೦೩.
  41. Collins, Peter (1965). Changing Ideals in Modern Architecture 1750–1950. p. 238. ಪೋರ್ಟ್(೧೯೭೬) ನಲ್ಲಿ ನೀಡಲಾಗಿದೆ, p. ೨೦೬.
  42. "Department of the Serjeant at Arms Annual Report 2001–02". House of Commons Commission. 2 ಜುಲೈ 2002. Retrieved 28 ಏಪ್ರಿಲ್ 2010. St Stephen's Tower: This project involved the renovation and re-modelling of offices on four floors above St Stephen's Entrance.
  43. ವಿಲ್ಸನ್ (೨೦೦೫), p. ೩೨.
  44. ರೈಡಿಂಗ್ ಅಂಡ್ ರೈಡಿಂಗ್ (2000), p. 268.
  45. ೪೫.೦ ೪೫.೧ ಗೈಡ್ ಟು ದಿ ಪ್ಯಾಲೆಸ್ ಆಫ್ ವೆಸ್ಟ್‌ಮಿನಿಸ್ಟರ್ , p. ೨೮.
  46. ೪೬.೦೦ ೪೬.೦೧ ೪೬.೦೨ ೪೬.೦೩ ೪೬.೦೪ ೪೬.೦೫ ೪೬.೦೬ ೪೬.೦೭ ೪೬.೦೮ ೪೬.೦೯ ೪೬.೧೦ ೪೬.೧೧ "Lords Route virtual tour". UK Parliament. Archived from the original on 16 ಆಗಸ್ಟ್ 2010. Retrieved 5 ಆಗಸ್ಟ್ 2010.
  47. UK Parliament (2 ಏಪ್ರಿಲ್ 2009). "President of France arrives at Parliament". Flickr. Retrieved 29 ಜನವರಿ 2010.
  48. UK Parliament (2 ಏಪ್ರಿಲ್ 2009). "President of Mexico and the Mexican First Lady arrive at Parliament". Flickr. Retrieved 29 ಜನವರಿ 2010.
  49. ವಿಲ್ಸನ್ (೨೦೦೫), ಮುಖಪುಟದ ಒಳಗೆ.
  50. ಫೆಲ್ ಅಂಡ್ ಮ್ಯಾಕೆನ್ಸೈ (೧೯೯೪), p. ೩೦; ವಿಲ್ಸನ್ (೨೦೦೫), p. ೮.
  51. "The State Opening of Parliament". British Army. Retrieved 12 ಮೇ 2010.
  52. ಗೈಡ್ ಟು ದಿ ಪ್ಯಾಲೆಸ್ ಆಫ್ ವೆಸ್ಟ್‌ಮಿನಿಸ್ಟರ್ , p. ೨೫.
  53. ಫೆಲ್ ಅಂಡ್ ಮ್ಯಾಕೆನ್ಸೈ (೧೯೯೪), p. ೩೧.
  54. ರೈಡಿಂಗ್ ಅಂಡ್ ರೈಡಿಂಗ್ (೨೦೦೦), p. ೧೯೦.
  55. ೫೫.೦ ೫೫.೧ ೫೫.೨ ವಿಲ್ಸನ್ (೨೦೦೫), pp. ೮–೯.
  56. "Architecture of the Palace: The Robing Room". UK Parliament. Retrieved 5 ಆಗಸ್ಟ್ 2010.
  57. ೫೭.೦ ೫೭.೧ ಫೀಲ್ಡ್ (೨೦೦೨), p. ೧೯೨.
  58. ೫೮.೦ ೫೮.೧ Guide to the Palace of Westminster, p. 26.
  59. "Queen Victoria (1819–1901)". UK Parliament. Retrieved 5 ಆಗಸ್ಟ್ 2010.
  60. ಕ್ವೀನ್ ಅಲ್ಟ್(೧೯೯೨), pp. ೮೪–೮೫.
  61. "Lord Chancellor's breakfast". UK Parliament. Retrieved 5 ಆಗಸ್ಟ್ 2010.
  62. ಗೈಡ್ ಟು ದಿ ಪ್ಯಾಲೆಸ್ ಆಫ್ ವೆಸ್ಟ್‌ಮಿನಿಸ್ಟರ್ , p. ೨೯.
  63. ವಿಲ್ಸನ್ (೨೦೦೫), pp. ೮, ೧೦–೧೧.
  64. ಗೈಡ್ ಟು ದಿ ಪ್ಯಾಲೆಸ್ ಆಫ್ ವೆಸ್ಟ್‌ಮಿನಿಸ್ಟರ್ , pp. ೩೨–೩೩.
  65. ಫೆಲ್ ಅಂಡ್ ಮ್ಯಾಕೆನ್ಸೈ (೧೯೯೪), p. ೩೮.
  66. "Raising The Armada". BBC News. 9 ಏಪ್ರಿಲ್ 2010. Retrieved 12 ಮೇ 2010.
  67. "Painting the Armada exhibition". UK Parliament. Archived from the original on 15 ಜುಲೈ 2010. Retrieved 1 ಜುಲೈ 2010.
  68. ಫೆಲ್ ಅಂಡ್ ಮ್ಯಾಕೆನ್ಸೈ(೧೯೯೪), p. ೩೮; ರೈಡಿಂಗ್ ಅಂಡ್ ರೈಡಿಂಗ್ (೨೦೦೦), p. ೨೬೨.
  69. ರೈಡಿಂಗ್ ಅಂಡ್ ರೈಡಿಂಗ್ (೨೦೦೦), p. ೨೫೩.
  70. ವಿಲ್ಸನ್ (೨೦೦೫), p. ೧೬.
  71. ಗೈಡ್ ಟು ದಿ ಪ್ಯಾಲೆಸ್ ಆಫ್ ವೆಸ್ಟ್‌ಮಿನಿಸ್ಟರ್ , pp. ೪೭–೪೯.
  72. ಗೈಡ್ ಟು ದಿ ಪ್ಯಾಲೆಸ್ ಆಫ್ ವೆಸ್ಟ್‌ಮಿನಿಸ್ಟರ್ , pp. ೫೦–೫೧.
  73. ೭೪.೦ ೭೪.೧ ೭೪.೨ ೭೪.೩ "Central Lobby virtual tour". UK Parliament. Archived from the original on 16 ಜುಲೈ 2010. Retrieved 5 ಆಗಸ್ಟ್ 2010.
  74. ವಿಲ್ಸನ್ (೨೦೦೫), p. ೨೧.
  75. ಗೈಡ್ ಟು ದಿ ಪ್ಯಾಲೆಸ್ ಆಫ್ ವೆಸ್ಟ್‌ಮಿನಿಸ್ಟರ್ , p. ೫೩.
  76. ಕ್ವೀನ್ ಅಲ್ಟ್(೧೯೯೨), p. ೯೩.
  77. "Architecture of the Palace: Central Lobby". UK Parliament. Retrieved 5 ಆಗಸ್ಟ್ 2010.
  78. "Lobbying". BBC News. 1 ಅಕ್ಟೋಬರ್ 2008. Retrieved 21 ಜನವರಿ 2010.
  79. ಗೈಡ್ ಟು ದಿ ಪ್ಯಾಲೆಸ್ ಆಫ್ ವೆಸ್ಟ್‌ಮಿನಿಸ್ಟರ್ , pp. ೫೩–೫೪.
  80. ವಿಲ್ಸನ್ (೨೦೦೫), p. ೧೯.
  81. ವಿಲ್ಸನ್ (೨೦೦೫), p. ೨೦.
  82. "Plucking the Red and White Roses in the Old Temple Gardens". UK Parliament. Retrieved 5 ಆಗಸ್ಟ್ 2010.
  83. "Architecture of the Palace: The Members' Lobby and the Churchill Arch". UK Parliament. Retrieved 5 ಆಗಸ್ಟ್ 2010.
  84. "House of Commons Chamber virtual tour". UK Parliament. Archived from the original on 16 ಜುಲೈ 2010. Retrieved 5 ಆಗಸ್ಟ್ 2010.
  85. Sparrow, Andrew (18 ಅಕ್ಟೋಬರ್ 2000). "Some predecessors kept their nerve, others lost their heads". The Daily Telegraph. London. Retrieved 3 ಡಿಸೆಂಬರ್ 2009.
  86. Rogers, Robert; Walters, Rhodri (2006). How Parliament Works (6th ed.). Longman. p. 14. ISBN 978-1405832557.
  87. Rogers, Robert (2009). Order! Order! A Parliamentary Miscellany. London: JR Books. p. 27. ISBN 978-1906779283.
  88. Cescinsky, Herbert; Gribble, Ernest R. (1922). "Westminster Hall and Its Roof". The Burlington Magazine for Connoisseurs. 40 (227): 76–84. JSTOR 861585. {{cite journal}}: Unknown parameter |month= ignored (help) (subscription required)
  89. [೧]
  90. ಜೊನಾತನ್ ಅಲೆಗ್ಸಾಂಡರ್ ಅಂಡ್ ಪೌಲ್ ಬಿನ್ಸ್ಕಿ (eds), ಏಜ್ ಆಫ್ ಷಿವಲ್ರಿ, ಆರ್ಟ್ ಇನ್ ಪ್ಲ್ಯಾಂಟೆಗ್ನೆಟ್ ಇಂಗ್ಲೆಂಡ್, ೧೨೦೦–೧೪೦೦ , pp. ೫೦೬–೫೦೭, ರಾಯಲ್ ಅಕಾಡಮಿ/ವೈಡೆನ್ ಫೆಲ್ಡ್ ಅಂಡ್ ನಿಕೊಲಸನ, ಲಂಡನ್೧೯೮೭. ಅದರೊಳಗಿನ ಕೇವಲ ಆರು ಮೂರ್ತಿಗಳು ಮಾತ್ರ ಹಾನಿಗೊಳಗಾಗಿವೆ, ಹಾಗು ಉಳಿದಿರುವವುನ್ನು ಮತ್ತು ಡೈಸ್ ಅನ್ನು ಹೊಸದಾಗಿ ರೂಪಿಸಲಾಗಿದೆ, ಆದರೆ ಇದನ್ನು ಹೊರತುಪಡಿಸಿ ಸಭಾಂಗಣವು ರಿಚರ್ಡ್ ಮತ್ತು ಆತನ ವಾಸ್ತುಯೋಜಕ ಹೆನ್ರಿ ಯೆವೆಲೆ ಬಿಟ್ಟುಹೋದಂತೆಯೇ ಉಳಿದುಕೊಂಡಿದೆ.
  91. ಗೆರ್ ಹೋಲ್ಡ್ (೧೯೯೯), pp. ೧೯–೨೦.
  92. Salzman, LF (1992). Building in England down to 1540. Oxford University Press, USA. ISBN 978-0198171584.
  93. "Royal Courts of Justice visitors guide". Her Majesty's Courts Service. Retrieved 16 ಮೇ 2010.
  94. "Westminster Hall: Coronation Banquets". UK Parliament. Retrieved 5 ಆಗಸ್ಟ್ 2010.
  95. "Speaker's procession". BBC News. 30 ಅಕ್ಟೋಬರ್ 2008. Retrieved 21 ಮೇ 2010.
  96. "Companion to the Standing Orders and guide to the Proceedings of the House of Lords". UK Parliament. 19 ಫೆಬ್ರವರಿ 2007. Retrieved 21 ಮೇ 2010.
  97. "The House of Commons Refreshment Department" (PDF). House of Commons Information Office. 2003. Retrieved 5 ಆಗಸ್ಟ್ 2010. {{cite web}}: Unknown parameter |month= ignored (help)
  98. "National Rifle Association of the UK – Death of Lord Swansea". 9 ಜುಲೈ 2005. Archived from the original on 15 ಜನವರಿ 2009. Retrieved 15 ಜನವರಿ 2010.
  99. "Security tightens at Parliament". BBC News. 23 ಮೇ 2003. Retrieved 3 ಡಿಸೆಂಬರ್ 2009.
  100. "Permanent Notice to Mariners P27". Port of London Authority. Archived from the original on 4 ಅಕ್ಟೋಬರ್ 2011. Retrieved 3 ಡಿಸೆಂಬರ್ 2009.
  101. "Security information". UK Parliament. Retrieved 5 ಆಗಸ್ಟ್ 2010.
  102. "The Serious Organised Crime and Police Act 2005 (Designated Area) Order 2005". Office of Public Sector Information. 8 ಜೂನ್ 2005. Archived from the original on 18 ಜೂನ್ 2008. Retrieved 21 ಮೇ 2010.
  103. "The Gunpowder Plot" (PDF). House of Commons Information Office. 2006. Retrieved 5 ಆಗಸ್ಟ್ 2010. {{cite web}}: Unknown parameter |month= ignored (help)
  104. "Prime Ministers and Politics Timeline". BBC. Retrieved 16 ಮೇ 2010.
  105. ೧೦೬.೦ ೧೦೬.೧ "The Albert medal: The story behind the medal in the collection". UK Parliament. Retrieved 5 ಆಗಸ್ಟ್ 2010.
  106. "All England Frightened; the Damage to the Parliament Buildings Enormous" (PDF). The New York Times. 26 ಜನವರಿ 1885. Retrieved 21 ಡಿಸೆಂಬರ್ 2009.
  107. Sullivan, T. D. (1905). Recollections of Troubled Times in Irish Politics. Dublin: Sealy, Bryers & Walker; M. H. Gill & Son. pp. 172–173. OCLC 3808618. OL 23335082M.
  108. ಗೆರ್ ಹೋಲ್ಡ್(೧೯೯೯), p. ೭೭.
  109. "On This Day 17 June – 1974: IRA bombs parliament". BBC News. 17 ಜೂನ್ 1974. Retrieved 29 ಮೇ 2008.
  110. "On This day 30 March – 1979: Car bomb kills Airey Neave". BBC News. 30 ಮಾರ್ಚ್ 1979. Retrieved 29 ಮೇ 2008.
  111. "Northern Ireland: Ten Years Later: Coping and Hoping". Time. 17 ಜುಲೈ 1978. Archived from the original on 14 ಅಕ್ಟೋಬರ್ 2010. Retrieved 17 ಮೇ 2010.
  112. ೧೧೩.೦ ೧೧೩.೧ "Parliament's previous protests". BBC News. 27 ಫೆಬ್ರವರಿ 2008. Retrieved 22 ಜನವರಿ 2010.
  113. ಚೆಂಬರ್ ಗ್ಯಾಲರಿ ಮಟ್ಟದ ರೇಖಾಚಿತ್ರವನ್ನು ನೋಡಿ Peele, Gillian (2004). Governing the UK (4th ed.). Blackwell Publishing. p. 203. ISBN 978-0631226819.
  114. "Blair hit during Commons protest". BBC News. 19 ಮೇ 2004. Retrieved 3 ಡಿಸೆಂಬರ್ 2009.
  115. "Pro-hunt protesters storm Commons". BBC News. 15 ಸೆಪ್ಟೆಂಬರ್ 2004. Retrieved 3 ಡಿಸೆಂಬರ್ 2009.
  116. "Big Ben breach 'immensely worrying'". BBC News. 20 ಮಾರ್ಚ್ 2004. Retrieved 22 ಜನವರಿ 2010.
  117. "Commons crane protest at Trident". BBC News. 13 ಮಾರ್ಚ್ 2007. Retrieved 22 ಜನವರಿ 2010.
  118. "Parliament rooftop protest ends". BBC News. 27 ಫೆಬ್ರವರಿ 2008. Retrieved 22 ಜನವರಿ 2010.
  119. "Greenpeace protesters refuse to leave roof of Palace of Westminster". The Daily Telegraph. London. 12 ಅಕ್ಟೋಬರ್ 2009. Archived from the original on 7 ಸೆಪ್ಟೆಂಬರ್ 2010. Retrieved 13 ಮೇ 2010.
  120. Sinclair, Joe; Hutt, Rosamond (12 ಅಕ್ಟೋಬರ್ 2009). "Rooftop protest continues as MPs return". The Independent. London. Retrieved 13 ಮೇ 2010.
  121. "Parliament rooftop protest ends". BBC News. 12 ಅಕ್ಟೋಬರ್ 2009. Retrieved 13 ಮೇ 2010.
  122. "Parliament rooftop protest leads to 55 charges". BBC News. 12 ಮಾರ್ಚ್ 2010. Retrieved 13 ಮೇ 2010.
  123. ೧೨೪.೦ ೧೨೪.೧ "Some Traditions and Customs of the House" (PDF). House of Commons Information Office. 2009. Retrieved 5 ಆಗಸ್ಟ್ 2010. {{cite web}}: Unknown parameter |month= ignored (help)
  124. "11 June 2007". Parliamentary Debates (Hansard). House of Commons. col. 736W. Retrieved 31 ಮೇ 2008. {{cite journal}}: Cite has empty unknown parameters: |laydate=, |separator=, |trans_title=, |laysource=, and |layurl= (help).
  125. "Frequently Asked Questions: The Budget". UK Parliament. Archived from the original on 9 ಜೂನ್ 2010. Retrieved 5 ಆಗಸ್ಟ್ 2010.
  126. "Points of Order". BBC News. 22 ಸೆಪ್ಟೆಂಬರ್ 2009. Retrieved 22 ಜನವರಿ 2010.
  127. "19 December 1994". Parliamentary Debates (Hansard). House of Commons. col. 1380. Retrieved 31 ಮೇ 2008. {{cite journal}}: Cite has empty unknown parameters: |laydate=, |separator=, |trans_title=, |laysource=, and |layurl= (help).
  128. "MP's Commons cow protest banned". BBC News. 3 ಜೂನ್ 2008. Retrieved 22 ಜನವರಿ 2010.
  129. "12 February 1992". Parliamentary Debates (Hansard). House of Commons. col. 983. Retrieved 31 ಮೇ 2008. {{cite journal}}: Cite has empty unknown parameters: |laydate=, |separator=, |trans_title=, |laysource=, and |layurl= (help).
  130. "Cook's resignation speech". BBC News. 18 ಮಾರ್ಚ್ 2003. Retrieved 3 ಡಿಸೆಂಬರ್ 2009.
  131. "Blair resigns, Brown takes power". The Age. Melbourne. 27 ಜೂನ್ 2007. Retrieved 17 ಮೇ 2010.
  132. "Martin's parting shot on expenses". BBC News. 17 ಜೂನ್ 2009. Retrieved 13 ಮೇ 2010.
  133. "Paintings reveal pollution clues". BBC News. 9 ಆಗಸ್ಟ್ 2006. Retrieved 30 ಅಕ್ಟೋಬರ್ 2010.
  134. "Attend debates". UK Parliament. Archived from the original on 23 ಅಕ್ಟೋಬರ್ 2011. Retrieved 16 ಆಗಸ್ಟ್ 2010.
  135. "Watch committees". UK Parliament. Archived from the original on 23 ಅಕ್ಟೋಬರ್ 2011. Retrieved 16 ಆಗಸ್ಟ್ 2010.
  136. "Visit the Parliamentary Archives". UK Parliament. Archived from the original on 29 ಅಕ್ಟೋಬರ್ 2011. Retrieved 16 ಆಗಸ್ಟ್ 2010.
  137. "Arrange a tour". UK Parliament. Retrieved 16 ಆಗಸ್ಟ್ 2010.
  138. "Clock Tower tour". UK Parliament. Archived from the original on 28 ಜುಲೈ 2010. Retrieved 16 ಆಗಸ್ಟ್ 2010.
  139. "Britain's Best Buildings: Palace of Westminster". BBC Four. Retrieved 30 ಅಕ್ಟೋಬರ್ 2010.
ಗ್ರಂಥಸೂಚಿ
  • Cooke, Sir Robert (1987). The Palace of Westminster. London: Burton Skira. ISBN 978-0333459232.
  • Fell, Sir Bryan H.; Mackenzie, K. R. (1994). Natzler, D. L (ed.). The Houses of Parliament: A Guide to the Palace of Westminster (15th ed.). London: Her Majesty's Stationery Office. ISBN 978-0117015791.
  • Field, John (2002). The Story of Parliament in the Palace of Westminster. London: Politico's Publishing; James & James Publishers. ISBN 978-1904022145.
  • Gerhold, Dorian (1999). Westminster Hall: Nine Hundred Years of History. London: James & James Publishers. ISBN 978-0907383888.
  • Guide to the Palace of Westminster. London: Warrington. 1911(?). OCLC 5081639. OL 13507081M. {{cite book}}: Check date values in: |year= (help)
  • Jones, Christopher (1983). The Great Palace: The Story of Parliament. London: British Broadcasting Corporation. ISBN 978-0563201786.
  • Macdonald, Peter (2004). Big Ben: The Bell, the Clock and the Tower. Stroud: Sutton Publishing. ISBN 978-0750938280.
  • Port, M. H., ed. (1976). The Houses of Parliament. New Haven, Connecticut; London: Yale University Press. ISBN 978-0300020229.
  • Quinault, Roland (1992). "Westminster and the Victorian Constitution". Transactions of the Royal Historical Society. 6. 2: 79–104. doi:10.2307/3679100. (subscription required)
  • Riding, Christine; Riding, Jacqueline, eds. (2000). The Houses of Parliament: History, Art, Architecture. London: Merrell Publishers. ISBN 978-1858941127.
  • Wilson, Robert (2005). The Houses of Parliament. Norwich: Jarrold Publishing. ISBN 978-1841650999.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • Tanfield, Jennifer (1991). In Parliament 1939–50: The Effect of the War on the Palace of Westminster. London: Her Majesty's Stationery Office. ISBN 978-0108506406.

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]

ಟೆಂಪ್ಲೇಟು:Portal box Media related to ವೆಸ್ಟ್‌ಮಿನಿಸ್ಟರ್‌ ಅರಮನೆ at Wikimedia Commons

51°29′57.5″N 00°07′29.1″W / 51.499306°N 0.124750°W / 51.499306; -0.124750