ವಿಷಯಕ್ಕೆ ಹೋಗು

ವಿದ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿದ್ಯೆ
ಸರಸ್ವತಿ, ವಿದ್ಯೆ (ಜ್ಞಾನ)ದ ದೇವತೆ
ಲಿಂಗಏಕಲಿಂಗ
ಮೂಲ
ಶಬ್ದ/ಹೆಸರುಭಾರತ
ಅರ್ಥಸ್ಪಷ್ಟತೆ, ನಿಜವಾದ ಜ್ಞಾನ
ಮೂಲದ ಪ್ರದೇಶಭಾರತ

ಸಂಸ್ಕೃತ, ಪಾಲಿ ಮತ್ತು ಸಿಂಹಲ ಭಾಷೆಯಂತಹ ಹಲವಾರು ದಕ್ಷಿಣ ಏಷ್ಯಾದ ಭಾಷೆಗಳಲ್ಲಿ, ವಿದ್ಯೆ ಎಂದರೆ "ಸರಿಯಾದ ಜ್ಞಾನ" ಅಥವಾ "ಸ್ಪಷ್ಟತೆ". ವಿದ್ಯಾ ಒಂದು ಜನಪ್ರಿಯ ಭಾರತೀಯ ಏಕಲಿಂಗ ಹೆಸರು ಕೂಡ.

ಹಿಂದೂ ಧರ್ಮದಲ್ಲಿ, ಅದನ್ನು ಆಗಾಗ್ಗೆ ಜ್ಞಾನ ಮತ್ತು ಕಲಿಕೆಯ ಪೌರಾಣಿಕ ಕಲ್ಪನೆಯನ್ನು ಸೂಚಿಸುವ ಒಂದು ಗೌರವಸೂಚಕವಾಗಿ ಬಳಸಲಾಗುತ್ತದೆ. ವಿದ್ಯೆಯ ವಿರುದ್ಧ ಪದ ಅವಿದ್ಯೆ (ಅಜ್ಞಾನ ಅಥವಾ ತಪ್ಪುಮಾಹಿತಿ). ವಿದ್ಯಾ ಎನ್ನುವುದು (ಹಿಂದೂ ನಂಬಿಕೆಗಳ ಪ್ರಕಾರ) ಬ್ರಹ್ಮನ ಪತ್ನಿಯಾದ ಹಿಂದೂ ದೇವತೆ ಸರಸ್ವತಿಯ ಒಂದು ಗುಣವಾಚಕ. ಅವಳು ವ್ಯಕ್ತಿಯನ್ನು ಶುದ್ಧೀಕರಿಸುವ, ಅಳವೀಯುವ, ಮತ್ತು ಉದ್ಧಾರ ಮಾಡುವ ಉನ್ನತ ಆಧ್ಯಾತ್ಮಿಕ ಸ್ತ್ರೀ ಶಕ್ತಿ —ಪರಮ ಪ್ರಕೃತಿಯನ್ನು— ಹೊಂದಿದ್ದಾಳೆ. ಹಾಗಾಗಿ, ಅವಳನ್ನು ಜ್ಞಾನದ ದೇವತೆಯೆಂದು ಕರೆಯಲಾಗುತ್ತದೆ.