ವಿಷಯಕ್ಕೆ ಹೋಗು

ಮಾತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಮಾನ್ಯ ಬಿಲ್ಲೆ ಆಕಾರದ ಮಾತ್ರೆಗಳು

ಮಾತ್ರೆಯು (ಗುಳಿಗೆ) ಬಾಯಿಮೂಲಕ ತೆಗೆದುಕೊಳ್ಳುವ ನಿರ್ದಿಷ್ಟ ಪ್ರಮಾಣದ ಔಷಧದ ರೂಪ. ಮಾತ್ರೆಗಳನ್ನು ಸೂಕ್ತ ಘಟಕಾಂಶಗಳಿರುವ ಔಷಧ/ಔಷಧಗಳ ಘನ ಘಟಕ ನಿರ್ದಿಷ್ಟ ಪ್ರಮಾಣದ ರೂಪ ಎಂದು ವ್ಯಾಖ್ಯಾನಿಸಬಹುದು. ಇವುಗಳನ್ನು ಅಚ್ಚೊತ್ತುವಿಕೆ ಅಥವಾ ಸಂಕೋಚನದ ಮೂಲಕ ತಯಾರಿಸಬಹುದು. ಇದು ಸಕ್ರಿಯ ಪದಾರ್ಥಗಳು ಮತ್ತು ಔಷಧವಲ್ಲದ ಘಟಕಾಂಶಗಳ ಮಿಶ್ರಣವನ್ನು ಸಾಮಾನ್ಯವಾಗು ಪುಡಿ ರೂಪದಲ್ಲಿ ಹೊಂದಿರುತ್ತದೆ. ಒತ್ತುವ ಮೂಲಕ ಪುಡಿಯಿಂದ ಘನ ಪದಾರ್ಥವಾಗಿ ಪರಿವರ್ತಿಸಲಾಗುತ್ತದೆ. ಔಷಧವಲ್ಲದ ಪದಾರ್ಥಗಳಲ್ಲಿ ತನೂಕಾರಕಗಳು, ಬಂಧಕಗಳು ಅಥವಾ ಕಣಕಾರಕಗಳು, ಪರಿಣಾಮಕಾರಿ ತಯಾರಿಕೆಯನ್ನು ಖಚಿತಗೊಳಿಸಲು ಹರಿವು ಸಹಾಯಕಗಳು ಮತ್ತು ಮೃದುಚಾಲಕಗಳು; ಜೀರ್ಣಾಂಗದಲ್ಲಿ ಮಾತ್ರೆಯ ವಿಯೋಜನೆಯನ್ನು ಉತ್ತೇಜಿಸುವ ವಿಘಟಕಗಳು; ರುಚಿಯನ್ನು ಹೆಚ್ಚಿಸಲು ಸಿಹಿಕಾರಕಗಳು ಅಥವಾ ಸ್ವಾದಗಳು; ಮಾತ್ರೆಗಳನ್ನು ನೋಡಲು ಆಕರ್ಷಕವಾಗಿ ಮಾಡುವ ಅಥವಾ ಅಪರಿಚಿತ ಮಾತ್ರೆಯನ್ನು ನೋಡಿ ಗುರುತಿಸಲು ನೆರವಾಗುವ ವರ್ಣದ್ರವ್ಯಗಳು ಸೇರಿರಬಹುದು.

ಹೆಚ್ಚಿನ ವಾಚನ

[ಬದಲಾಯಿಸಿ]
  • Kibbe, A.H., ed. Handbook of Pharmaceutical Excipients. 3rd Edition ed. 2000, American Pharmaceutical Association & Pharmaceutical Press: Washington, DC & London, UK.
  • Hiestand, E.N., 2003. Mechanics and physical principles for powders and compacts, SSCI Inc., West Lafayette, In, USA.
  • United States Pharmacopeia, United States Pharmacopeia / National Formulary (USP25/NF20). 2002, Rockville, MD: United States Pharmacopeia Convention Inc.