ಪ್ರೋಟೀನ್
ಪ್ರೋಟೀನ್ಗಳು (ಬಹುಪೆಪ್ಟೈಡ್ಗಳು ಎಂದೂ ಪರಿಚಿತವಾಗಿವೆ) ರೇಖಾತ್ಮಕ ಸರಣಿಯಲ್ಲಿರುವ ಮತ್ತು ಗೋಳಾಕಾರದಲ್ಲಿ ಸುತ್ತಿರುವ ಅಮೀನೋ ಆಮ್ಲಗಳಿಂದ ರಚಿತವಾಗಿರುವ ಸಾವಯವ ಸಂಯುಕ್ತಗಳು. ಒಂದು ಪಾಲಮರ್ನಲ್ಲಿನ ಅಮೀನೋ ಆಮ್ಲಗಳು ಪಕ್ಕದ ಅಮೀನೋ ಆಮ್ಲ ಅವಶೇಷಗಳ ಕಾರ್ಬಾಕ್ಸಿಲ್ ಮತ್ತು ಅಮೀನೋ ಗುಂಪುಗಳ ನಡುವಿನ ಪೆಪ್ಟೈಡ್ ಬಂಧಗಳಿಂದ ಒಟ್ಟಾಗಿ ಸೇರಿಸಲ್ಪಟ್ಟಿರುತ್ತವೆ. ಒಂದು ಪ್ರೋಟೀನ್ನ ಅಮೀನೋ ಆಮ್ಲಗಳ ಸರಣಿಯು ವಂಶವಾಹಿ ಸಂಕೇತದಲ್ಲಿ ಸಂಕೇತೀಕರಿಸಲಾದ ಒಂದು ವಂಶವಾಹಿಯ ಸರಣಿಯಿಂದ ನಿರೂಪಿಸಲ್ಪಡುತ್ತದೆ.
ಸಸ್ಯಹಾರಿಗಳು ಸೇವಿಸಬಹುದಾದ ಪ್ರೋಟಿನ್ ಆಹಾರಗಳು
[ಬದಲಾಯಿಸಿ]ಸಸ್ಯಾಹಾರಕ್ಕಿ೦ತ ಮಾ೦ಸಹಾರದಲ್ಲಿ ಹೆಚ್ಚಿನ ಪ್ರೋಟೀನ್ ಇದೆ ಎನ್ನುವ ವಾದವಿದೆ.ಆದರೆ ಮಾಂಸಹಾರಿಗಳು ತಾವು ತಿನ್ನುವ ಆಹಾರದಲ್ಲಿ ಹೆಚ್ಚಿನ ಪೋಶಕಾಂಶಗಳು ಇದೆ ಎಂದು ಹೇಳಿದರ ಸಸ್ಯಹಾರಿಗಳು ತಾವು ಸೇವಿಸುವುದೇ ಅಧಿಕ ಪೋಶಕಾಂಶಗಳು ಇರುವ ಆಹಾರವೆನ್ನುತ್ತಾರೆ. ಇಂತಹ ಪ್ರೋಟೀನ್ ಸಸ್ಯಾಹಾರಿಗಳಿಗೆ ಲಭ್ಯವಾಗಬೇಕಾದರೆ ಏನು ಮಾಡಬೇಕು?
ಲವಲವಿಕೆಯ ಜೀವನಶೈಲಿಗೆ ಪ್ರೋಟೀನ್ಯುಕ್ತ ಆಹಾರಗಳು
[ಬದಲಾಯಿಸಿ]here are some health tips and tricks intermittent fastin Archived 2020-03-22 ವೇಬ್ಯಾಕ್ ಮೆಷಿನ್ ನಲ್ಲಿ.
ಬೀಜಗಳು
[ಬದಲಾಯಿಸಿ]ಉನ್ನತ ಮಟ್ಟದ ಪ್ರೋಟೀನ್ ಇರುವಂತಹ ಬೀಜಗಳನ್ನುಯಾವುದೇ ಸಮಯದಲ್ಲಿ ಸೇವಿಸಬಹುದಾಗಿದೆ.ತುಂಬಾ ರುಚಿಕರವಾಗಿರುವ ಒಂದು ಔನ್ಸ್ ಬಾದಾಮಿಯಲ್ಲಿ ೬ ಗ್ರಾಂನಷ್ಟು ಪ್ರೋಟೀನ್ ಲಭ್ಯವಿದೆ.[೧] ಒಂದು ಔನ್ಸ್ ಗೋಡಂಬಿಯಲ್ಲಿ ೪ಗ್ರಾಂನಷ್ಟು ಪ್ರೋಟೀನ್ ಲಭ್ಯವಿದೆ.
ಪಾಲಕ್ ಸೊಪ್ಪು
[ಬದಲಾಯಿಸಿ]ಒಂದು ಕಪ್ ಪಾಲಕ್ ಸೊಪ್ಪಿನಲ್ಲಿ ೫.೩೫ ಗ್ರಾಂನಷ್ಟು ಪ್ರೋಟೀನ್ ಲಭ್ಯವಿದೆ [೨].ಇದರಲ್ಲಿ ಬೇಯಿಸಿದ ಮೊಟ್ಟೆಯಲ್ಲಿ ಸಿಗುವ ಪ್ರೋಟೀನ್ಗಿಂತ ಹೆಚ್ಚಿನ ಪ್ರೋಟೀನ್ ಲಭ್ಯವಿದೆ.ವಿಟಮಿನ್ ಮತ್ತು ಕ್ಯಾಲ್ಶಿಯಂ ಹೀರುವಿಕೆಯನ್ನು ಇದು ತಡೆಯುವುದು.
ಹಾಲಿನ ಉತ್ಫನ್ನಗಳು
[ಬದಲಾಯಿಸಿ]ಹಾಲು,ಮೊಸರು,ಗಿಣ್ಣು ಅಥವಾ ಪನೀರ್ ಇವುಗಳಲ್ಲಿ ಉತ್ತಮ ಮಟ್ಟದ ಪ್ರೋಟೀನ್ ಲಭ್ಯವಿದೆ.ಒಂದು ಔನ್ಸ್ ನಲ್ಲಿ ೭ ರಿಂದ ೧೩ ಗ್ರಾಂನಷ್ಟು ಪ್ರೋಟೀನ್ ಲಭ್ಯವಾಗುತ್ತದೆ.ಒಂದು ಟೇಬಲ್ ಚಮಚ ಬೆಣ್ಣೆಯಲ್ಲಿ೦.೧ಗ್ರಾಂ ರಷ್ಟು ಪ್ರೋಟೀನ್ ಲಭ್ಯವಿದೆ.[೩]
ಕ್ವಿನೊ
[ಬದಲಾಯಿಸಿ]ಕ್ವಿನೊದಲ್ಲಿ ಒಂದು ಕಪ್ ಗೆ ೮ಗ್ರಾಂನಷ್ಟು ಪ್ರೋಟೀನ್ ಲಭ್ಯವಿದೆ.ಇತರೆ ಧಾನ್ಯಗಳಿಗೆ ಹೋಲಿಸಿದರೆ ಇದು ತುಂಬಾ ಭಿನ್ನವಾಗಿರುವಂತದ್ದಾಗಿದೆ.ದೇಹದ ಬೆಳವಣಿಗೆಗೆ ಬೇಕಾಗಿರುವ ೯ ಪ್ರಮುಖ ಅಮಿನೋ ಆಮ್ಲವು ಇದರಲ್ಲಿದೆ.ಇದನ್ನು ಬೆಳಿಗ್ಗೆ ಉಪಹಾರಕ್ಕೆ ಸೇವಿಸಬಹುದು ಅಥವಾ ತರಕಾರಿಗಳೊಂದಿಗೆ ಸಲಾಡ್ ರೂಪದಲ್ಲಿಸೇವಿಸಬಹುದು.
ಉಲ್ಲೇಖಗಳು
[ಬದಲಾಯಿಸಿ]