ಪ್ರೀತಂ ರಾಣಿ ಸಿವಾಚ್
ವೈಯುಕ್ತಿಕ ಮಾಹಿತಿ | ||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|
ಜನನ | ಝಾರ್ಸಾ,ಗುರ್ಗಾಂವ್ | ೨ ಅಕ್ಟೋಬರ್ ೧೯೭೪|||||||||||||||||||
ಪದಕ ದಾಖಲೆ
|
ಪ್ರೀತಂ ರಾಣಿ ಸಿವಾಚ್ (೨ ಅಕ್ಟೋಬರ್ ೧೯೭೪) ಭಾರತದ ಮಹಿಳಾ ಹಾಕಿ ತಂಡದ ಮಾಜಿ ನಾಯಕರಾಗಿದ್ದಾರೆ. ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿದಿಸಿದ್ದಾರೆ.
ಜನನ
[ಬದಲಾಯಿಸಿ]ಪ್ರೀತಮ್ ರಾಣಿ ಸಿವಾಚ್ ರವರು ೧೯೭೪,೨ನೇ ಅಕ್ಟೋಬರಂದು ಗುರ್ಗಾಂವ್ ನ ಝಾರ್ಸಾ ಗ್ರಾಮದಲ್ಲಿ ಜನಿಸಿದರು.
ಬಾಲ್ಯ
[ಬದಲಾಯಿಸಿ]ತಮ್ಮ ೯ನೇ ವರ್ಷದಿಂದಲೇ ಪ್ರಿತಮ್ ರಾಣಿರವರು ಹಾಕಿ ಅಭ್ಯಾಸ ಮಾಡುತಿದ್ದರು.ಪ್ರೀತಮ್ ಅವರಿಗೆ ಹಾಕಿಯಲ್ಲಿ ಆಸಕ್ತಿ ಬೆಳೆಯಲು ಕಾರಣ ಅವರ ಗುರುಗಳಾದ ತಾರಾ ಛಂದ್. ಹಾಕಿಯಲ್ಲಿ ಉತ್ತಮ ಆಟಗಾರ್ತಿಯಾಗುವುದು ಇವರ ಕನಸಾಗಿತ್ತು. ಕನಸನ್ನು ಬೆನ್ನಟ್ಟಿ ಹಾಕಿ ತರಬೇತಿ ಪಡೆಯಲು ಶುರು ಮಾಡಿದರು.
ವೃತ್ತಿ ಜೀವನ
[ಬದಲಾಯಿಸಿ]ಇವರಿಗಿದ್ದ ನೈಪುಣ್ಯ ಮತ್ತು ಅನುಭವದಿಂದಾಗಿ ೨೦೦೮ ರಲ್ಲಿ ಒಲಂಪಿಕ್ಸ್ಗೆ ಆಯ್ಕೆಯಾದರು.ಹಾಕಿಯ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾದ ವಿಷಯ ತಿಳಿದಾಗ, ಪ್ರೀತಮ್ ಅವರು ಪರಿಸ್ಥಿತಿಯನ್ನು ತಮ್ಮ ಹತೋಟಿಗೆ ತೆಗೆದುಕೊಂಡು ತಮ್ಮ ಸಾಮರ್ಥ್ಯವನ್ನು ತೋರಿಸಲು ಸಿದ್ದರಾದರು. ಪ್ರೀತಮ್ ಮತ್ತು ಸುರೀಂದರ್ ಕೌರ್ ರವರ ಉತ್ತಮ ಕ್ರೀಡಾಪ್ರದರ್ಶನದಿಂದ ಜನಸಾಗರದ ಎದುರು, ಪ್ರೇಕ್ಷಕರ ಪ್ರೋತ್ಸಾಹ ಎಲ್ಲದರ ನಡುವೆಯೂ ಹರ್ಯಾಣ ತಂಡ ಎದುರಾಳಿ ತಂಡವನ್ನು ನೆಲಸಮ ಮಾಡಿತು.ತಂಡದಲ್ಲಿ ೧೦ ಮಹಿಳೆಯರು ಮಾತ್ರವೇ ಇದ್ದರು, ಸಂಖ್ಯೆಯನ್ನು ಲೆಕ್ಕಿಸದೆ ಉತ್ತಮ ಪ್ರದರ್ಶನ ನೀಡಿದರು. ಮಹಾರಾಷ್ತ್ರ ತಂಡದ ಆಟದ ಬಗೆಯನ್ನು ಅರಿತಿದ್ದ ಪ್ರೀತಮ್, ಆ ತಂಡವನ್ನು ವಿರೋದಿಸುತಿದ್ದರು. ಹರ್ಯಾಣ ತಂಡವು ಮುಂದಿನ ದಿನಗಳಲ್ಲಿ ಪರಿಶ್ರಮದಿಂದ ಅಭ್ಯಾಸ ಮಾಡುವುದನ್ನು ನಿಲ್ಲಿಸಲಿಲ್ಲ.ಝಾರ್ಖಂಡ್ ತಂಡವನ್ನು ಹಿಂದಿಕ್ಕಿದುದರ ಬಗ್ಗೆ ಪ್ರೀತಮ್ ಸಂತಸ ವ್ಯಕ್ತಪಡಿಸಿದರು. ಆ ಪಂದ್ಯಾವಳಿಯಲ್ಲಿ ಪ್ಂಜಾಬ್ ೩ನೇ ಸ್ಥಾನ ಪಡೆದರೆ, ಮಹಾರಾಷ್ಟ್ರ ೨ನೇ ಸ್ಥಾನ ಪಡೆಯಿತು. ಪ್ರೀತಮ್ ಅವರ ಉತ್ತಮ ಆಟದ ವೈಖರಿಯಿಂದ ಹರ್ಯಾಣ ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ವಿಜೇತವಾಯಿತು. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುತಿದ್ದ ಪ್ರೀತಮ್, ಸೋತ ಮಾತ್ರಕ್ಕೆ ಸಾಮರ್ಥ್ಯ ಕುಂದುವುದಿಲ್ಲ ಎಂದು ನಂಬಿದ್ದರು.[೧]
ಸಾಧನೆಗಳು
[ಬದಲಾಯಿಸಿ]ಪ್ರೀತಮ್ ಅವರ ಸತತ ಪರಿಶ್ರಮ, ಶ್ರದ್ಧೆ, ಏಕಾಗ್ರತೆ, ಆಸಕ್ತಿ, ಹುಮ್ಮಸು, ಅವರ ಅಪಾರ ಕೊಡುಗೆಗೆ ಪ್ರತಿಫಲವಾಗಿ, ೧೯೯೮ರಲ್ಲಿ ಅರ್ಜುನ ಪ್ರಶಸ್ತಿ ದೊರಕಿತು. ಪ್ರೀತಮ್ ಅವರು ಮಹಿಳಾ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿರುವುದು ಮಾತ್ರವಲ್ಲದೆ, ಕಾಮನ್ ವೆಲ್ತ್ ಕ್ರೀಡೆ (೨೦೦೨) ಹಾಗು ಚಾಂಪಿಯನ್ಸ್ ಚಾಲೆಂಜ್ ನಲ್ಲಿ ಪಾಲ್ಗೊಂಡಿರು[೨]. ಪ್ರೀತಮ್ ರವರು ಭಾರತದ ಮಹಿಳಾ ಹಾಕಿ ತಂಡದ ನಾಯಕಿಯಾಗಿ, ಭಾರತ ಮಾತೆಗೆ ಕೀರ್ತಿ ತಂದರು. ಕ್ರೀಡಾ ಲೋಕದಲ್ಲೂ ಸಾಧನೆ ಮಾಡಿ, ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಪ್ರೀತಮ್ ತೋರಿಸಿಕೊಟ್ಟಿದ್ದಾರೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬ ಮಹಿಳೆಗೂ, ಪ್ರೀತಮ್ ಮಾದರಿಯಾಗಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ http://www.bharatiyahockey.org/khiladi/stree/preetamrani.htm
- ↑ https://deccanchronicle.com/videos/our-womenrsquos-team-has-the-potential-to-be-in-top-four-pritam-rani-siwach.htmlhttps://deccanchronicle.com/videos/our-womenrsquos-team-has-the-potential-to-be-in-top-four-pritam-rani-siwach.html