ನಿರಾಶಾವಾದ
ನಿರಾಶಾವಾದ ವು ಜೀವನವನ್ನು ನಕಾರಾತ್ಮಕವಾಗಿ ಗ್ರಹಿಸುವ ಮನಸ್ಸಿನ ಸ್ಥಿತಿಯಾಗಿದೆ, ಇದನ್ನು ಲ್ಯಾಟಿನ್ ಪದ ಪೆಸ್ಸಿಮಸ್ ನಿಂದ (ಕೆಟ್ಟದ್ದು) ಪಡೆಯಲಾಗಿದೆ. ನೈಜತೆಯ ನಿರ್ಣಯಗಳು ನಿಸ್ಸಂಶಯವಾಗಿದ್ದರೂ, ಮೌಲ್ಯ ನಿರ್ಣಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಗಮನಾರ್ಹವಾಗಿ ವ್ಯತ್ಯಾಸಗೊಳ್ಳಬಹುದು. ಇದಕ್ಕೆ ಹೆಚ್ಚು ಸಾಮಾನ್ಯವಾದ ಉದಾಹರಣೆಯೆಂದರೆ "ಲೋಟವು ಅರ್ಧ ಖಾಲಿಯಿದೆಯೇ ಅಥವಾ ಅರ್ಧ ತುಂಬಿದೆಯೇ?" ಎಂಬ ಸ್ಥಿತಿ. ಇಂತಹ ಪರಿಸ್ಥಿತಿಗಳನ್ನು ಉತ್ತಮವಾದುದೆಂದು ಅಥವಾ ಕೆಟ್ಟದೆಂದು ನಿರ್ಣಯಿಸುವ ಮಾನವನ್ನು ಅನುಕ್ರಮವಾಗಿ ವ್ಯಕ್ತಿಯ ಆಶಾವಾದ ಅಥವಾ ನಿರಾಶಾವಾದದಿಂದ ವಿವರಿಸಬಹುದು. ಇತಿಹಾಸದಾದ್ಯಂತ, ನಿರಾಶಾವಾದ ಸ್ವಭಾವವು ಯೋಚನೆಯ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ಪ್ರಭಾವವನ್ನು ಬೀರಿದೆ.[೧]
ತತ್ತ್ವಶಾಸ್ತ್ರದ ನಿರಾಶಾವಾದ ವು ಜೀವನವು ನಕಾರಾತ್ಮಕ ಮೌಲ್ಯವನ್ನು ಹೊಂದಿದೆ ಅಥವಾ ಈ ಪ್ರಪಂಚವು ಎಷ್ಟು ಸಾಧ್ಯವೊ ಅಷ್ಟು ಕೆಟ್ಟದಾಗಿದೆಯೆಂಬ ಕಲ್ಪನೆಗೆ ಹೋಲಿಕೆಯನ್ನು ಹೊಂದಿದೆ ಆದರೆ ಅದೇ ಅಲ್ಲ. ಪದವು ಸಾಮಾನ್ಯವಾಗಿ ಸೂಚಿಸುವಂತೆ ನಿರಾಶಾವಾದವು ಒಂದು ಸ್ವಭಾವವಲ್ಲವೆಂದು ಅನೇಕ ತತ್ತ್ವಜ್ಞಾನಿಗಳು ಹೇಳಿದ್ದಾರೆ. ಬದಲಿಗೆ, ಇದು ಪ್ರಗತಿಯ ಕಲ್ಪನೆಯನ್ನು ಮತ್ತು ಆಶಾವಾದದ ನಂಬಿಕೆ-ಆಧಾರಿತ ಸಮರ್ಥನೆಯೆಂದು ಪರಿಗಣಿಸಿದುದನ್ನು ನೇರವಾಗಿ ಆಕ್ಷೇಪಿಸುವ ಒಂದು ಬಲವಾದ ತತ್ತ್ವಚಿಂತನೆಯಾಗಿದೆ.
ಪ್ರಮುಖ ಪ್ರತಿಪಾದಕರು
[ಬದಲಾಯಿಸಿ]This section needs attention from an expert in philosophy.(May 2010) |
ಆರ್ಥರ್ ಸ್ಕೋಪೆನ್ಹಾರ್
[ಬದಲಾಯಿಸಿ]ಆರ್ಥರ್ ಸ್ಕೋಪೆನ್ಹಾರ್‌ರ ನಿರಾಶಾವಾದವು ಇಚ್ಛೆಯನ್ನು ಮಾನವನ ಯೋಚನೆ ಮತ್ತು ವರ್ತನೆಯ ಪ್ರಧಾನ ಪ್ರಚೋದನೆಯಾಗಿ ವಿವೇಚನೆಗಿಂತ ಮೇಲಕ್ಕೆ ಎತ್ತರಿಸುವುದರಿಂದ ಬರುತ್ತದೆ. ಹಸಿವು, ಲೈಂಗಿಕತೆ, ಮಕ್ಕಳ ಬಗ್ಗೆ ಕಾಳಜಿವಹಿಸುವ ಅಗತ್ಯತೆ ಹಾಗೂ ಆಶ್ರಯ ಮತ್ತು ವೈಯಕ್ತಿಕ ಭದ್ರತೆಯ ಅವಶ್ಯಕತೆ ಮೊದಲಾದವು ಮಾನವ ಪ್ರಚೋದನೆಯ ನೈಜ ಮೂಲಗಳೆಂದು ಸ್ಕೋಪೆನ್ಹಾರ್ ಸೂಚಿಸಿದ್ದಾರೆ. ಈ ಅಂಶಗಳಿಗೆ ಹೋಲಿಸಿದರೆ ವಿವೇಚನೆಯು ಮಾನವ ಚಿಂತನೆಗಳ ಚತುರ ಪ್ರದರ್ಶನವಾಗಿದೆ; ಇದು ನಮ್ಮ ನಗ್ನ-ಹೆಬ್ಬಯಕೆಗಳು ಸಾರ್ವಜನಿಕವಾಗಿ ಪ್ರದರ್ಶಿತವಾಗುವಾಗ ಬಳಸಿಕೊಳ್ಳುವ ಪೋಷಾಕು ಆಗಿದೆ. ಇಚ್ಛೆಗೆ ಹೋಲಿಸಿದರೆ ವಿವೇಚನೆಯು ದುರ್ಬಲ ಮತ್ತು ಅಮುಖ್ಯವೆಂದು ಸ್ಕೋಪೆನ್ಹಾರ್ ಹೇಳುತ್ತಾರೆ; ಒಂದು ರೂಪಕಾಲಂಕಾರದಲ್ಲಿ, ಸ್ಕೋಪೆನ್ಹಾರ್ ಮಾನವನ ಬುದ್ಧಿಶಕ್ತಿಯನ್ನು ನೋಡಬಹುದಾದ, ಆದರೆ ಇಚ್ಛೆಯೆಂಬ ಕುರುಡು ರಾಕ್ಷಸನ ಬಾಹುಗಳಲ್ಲಿ ಸವಾರಿ ಮಾಡುವ ಒಬ್ಬ ಊನ ಮನುಷ್ಯನಿಗೆ ಹೋಲಿಸುತ್ತಾರೆ.[೨]
ಮಾನವನ ಜೀವನವನ್ನು ಇತರ ಪ್ರಾಣಿಗಳ ಜೀವನಕ್ಕೆ ಹೋಲಿಸುತ್ತಾ, ಆತ ಪುನರುತ್ಪಾದಕ ಚಕ್ರವು ಗುರಿಯಿಲ್ಲದೆ ಮತ್ತು ಅನಿಶ್ಚಿತವಾಗಿ ಮುಂದುವರಿಯುವ ಒಂದು ಆವರ್ತ ಕ್ರಿಯೆಯಾಗಿದೆಯೆಂದು ಹೇಳಿದ್ದಾರೆ, ಸರಪಣಿಯು ಸೀಮಿತ ಸಂಪನ್ಮೂಲಗಳಿಂದ ಮುರಿಯಲ್ಪಟ್ಟರೆ ಇದು ಅಳಿವಿನಿಂದ ಅಂತ್ಯಗೊಳ್ಳುತ್ತದೆ. ಜೀವನ ಚಕ್ರವನ್ನು ಗುರಿಯಿಲ್ಲದೆ ಮುಂದುವರಿಸುವ ಅಥವಾ ಅಳಿವನ್ನು ಎದುರಿಸುವ ಪೂರ್ವಸೂಚನೆಯು ಸ್ಕೋಪೆನ್ಹಾರ್‌ರ ನಿರಾಶಾವಾದದ ಒಂದು ಪ್ರಮುಖ ಆಧಾರವಾಗಿದೆ.[೨]
ಸ್ಕೋಪೆನ್ಹಾರ್ ಇಚ್ಛೆಯ ಕೋರಿಕೆಯು ದುಃಖಕ್ಕೆ ಗುರಿಮಾಡುತ್ತದೆ: ಏಕೆಂದರೆ ಈ ಸ್ವಾರ್ಥಪಕ ಅಪೇಕ್ಷೆಗಳು ಪ್ರಪಂಚದಲ್ಲಿ ನಿರಂತರ ಸಂಘರ್ಷವನ್ನು ಉಂಟುಮಾಡುತ್ತವೆ. ಜೈವಿಕ ಜೀವನದ ಕಾರ್ಯವು ಎಲ್ಲದರ ವಿರುದ್ಧದ ಒಂದು ಯುದ್ಧವಾಗಿದೆ. ವಿವೇಚನೆಯು ಜೈವಿಕ ಕಾರ್ಯವೆಂದರೆ ಬರಿಯ ನಾವು ಆರಿಸಿಕೊಂಡದ್ದು ಮಾತ್ರವಲ್ಲ ಹಾಗೂ ಅದು ಅದರ ಚೋದಕದ ಇರಿತದಿಂದ ತಪ್ಪಿಸಿಕೊಳ್ಳಲು ಅಥವಾ ಅದನ್ನು ಮಾಡದಂತೆ ತಡಗೆಟ್ಟಲು ಅಂತಿಮವಾಗಿ ಅಸಹಾಯಕವಾಗಿದೆ ಎಂಬುದನ್ನು ನಮಗೆ ಅರಿತುಕೊಳ್ಳಲು ಅನುವು ಮಾಡಿಕೊಡುವ ಮೂಲಕ ದುಃಖದಿಂದ ಮುಕ್ತಗೊಳಿಸುತ್ತದೆ.[೨]
ರುಜುವಾತು
[ಬದಲಾಯಿಸಿ]ಲೋಟವು ಅರ್ಧ ತುಂಬಿದೆ ಅಥವಾ ಅರ್ಧ ಖಾಲಿಯಿದೆ ಎಂಬಂತಹ, ಈ ಪ್ರಪಂಚವು ಎಷ್ಟು ಸಾಧ್ಯವೊ ಅಷ್ಟು ಕೆಟ್ಟದಾಗಿದೆ ಎಂಬ ಬಗೆಗಿನ ವೈಯಕ್ತಿಕ ಅಭಿಪ್ರಾಯ ಅಥವಾ ದೃಷ್ಟಿಕೋನವನ್ನು ಸಮರ್ಥಿಸುವ ಬದಲಿಗೆ ಸ್ಕೋಪೆನ್ಹಾರ್ ನಿರಾಶಾವಾದದ ಕಲ್ಪನೆಯನ್ನು ವಿಶ್ಲೇಷಿಸುವ ಮೂಲಕ ಇದನ್ನು ತಾರ್ಕಿಕವಾಗಿ ರುಜುವಾತುಪಡಿಸಲು ಪ್ರಯತ್ನಿಸಿದರು.
But against the palpably sophistical proofs of Leibniz that this is the best of all possible worlds, we may even oppose seriously and honestly the proof that it is the worst of all possible worlds. For possible means not what we may picture in our imagination, but what can actually exist and last. Now this world is arranged as it had to be if it were to be capable of continuing with great difficulty to exist; if it were a little worse, it would be no longer capable of continuing to exist. Consequently, since a worse world could not continue to exist, it is absolutely impossible; and so this world itself is the worst of all possible worlds.
— Schopenhauer, The World as Will and Representation, Vol. II, Ch. 46.
ಗೃಹದ ಕಕ್ಷೆಯ ಅಲ್ಪ ಮಟ್ಟಿನ ಪರಿವರ್ತನೆ, ಪ್ರಾಣಿಯ ಅಂಗವೊಂದು ಉಪಯೋಗವನ್ನು ಕಳೆದುಕೊಳ್ಳುವುದು ಮತ್ತು ಇತ್ಯಾದಿ ಸ್ಥಿತಿಗಳ ಸಣ್ಣ ಪ್ರಮಾಣದ ಕೆಡಿಸುವಿಕೆಯು ಹಾನಿಯನ್ನು ಉಂಟುಮಾಡಬಹುದೆಂದು ಆತ ವಾದಿಸಿದ್ದಾರೆ. ಪ್ರಪಂಚವು ಮೂಲಭೂತವಾಗಿ ಕೆಟ್ಟದಾಗಿದೆ ಮತ್ತು 'ಅದು ಹಾಗಾಗಬಾರದಿತ್ತು'.[೩]
Thus throughout, for the continuance of the whole as well as for that of every individual being, the conditions are sparingly and scantily given, and nothing beyond these. Therefore the individual life is a ceaseless struggle for existence itself, while at every step it is threatened with destruction. Just because this threat is so often carried out, provision had to be made, by the incredibly great surplus of seed, that the destruction of individuals should not bring about that of the races, since about these alone is nature seriously concerned. Consequently, the world is as bad as it can possibly be, if it is to exist at all. Q.E.D.
— Ibid.
ಗಿಯಾಕೊಮೊ ಲೆಪಾರ್ಡಿ
[ಬದಲಾಯಿಸಿ]ವಿಧಗಳು
[ಬದಲಾಯಿಸಿ]ನೀತಿಶಾಸ್ತ್ರ
[ಬದಲಾಯಿಸಿ]ನೀತಿಶಾಸ್ತ್ರದಲ್ಲಿ ನಿರಾಕರಣೆಯ ನಿರೂಪಣೆಗಳನ್ನು ಗುರುತಿಸಬಹುದು: ಫ್ರೆಡ್ರಿಚ್ ನೈಜ್‌ಸ್ಕೆಯ ನಿರ್ನೈತಿಕತೆ, ಫ್ರೂಡ್‌ರ ಆದರ್ಶೀಕರಣವಾಗಿ ಸಹಕಾರದ ವಿವರಣೆ, ಸ್ಟ್ಯಾನ್ಲಿ ಮಿಲ್‌ಗ್ರ್ಯಾಮ್ ಆಘಾತ ಪ್ರಯೋಗಗಳು, ಜಾಗತಿಕ ಅನ್ಯೋನ್ಯ ಸಂಪರ್ಕದ ಹೊರತಾಗಿಯೂ ಯುದ್ಧ ಮತ್ತು ಜನಹತ್ಯೆಯ ಮುಂದುವರಿಕೆ ಹಾಗೂ ಮಾರುಕಟ್ಟೆ ಫಂಡಮೆಂಟಲಿಸಮ್ ಅಥವಾ ರಾಜ್ಯನಿಯಂತ್ರಣದ ಶೋಷಣೆ.
ಬೌದ್ಧಿಕ
[ಬದಲಾಯಿಸಿ]ಸುಮಾರು ೪೦೦ BCE ರಲ್ಲಿ, ಸಾಕ್ರಟಿಸ್‌ಗಿಂತ ಹಿಂದಿನ ತತ್ತ್ವಜ್ಞಾನಿ ಗೋರ್ಗಿಯಸ್ ಆನ್ ನೇಚರ್ ಆರ್ ದಿ ನಾನ್-ಎಕ್ಸಿಸ್ಟೆಂಟ್ ಕೃತಿಯಲ್ಲಿ ಹೀಗೆಂದು ವಾದಿಸಿದ್ದಾರೆ:
- ಏನೂ ಇಲ್ಲ;
- ಏನಾದರೂ ಇದ್ದರೂ, ಅದರ ಬಗ್ಗೆ ಏನೂ ತಿಳಿದಿಲ್ಲ.
- ಏನೂದರೂ ತಿಳಿದರೂ, ಅದರ ಬಗೆಗಿನ ಜ್ಞಾನವನ್ನು ಇತರರಿಗೆ ತಿಳಿಸಲು ಸಾಧ್ಯವಿಲ್ಲ.
ಪ್ರೆಡ್ರಿಚ್ ಹೈನ್ರಿಚ್ ಜಾಕೋಬಿ (೧೭೪೩–೧೮೧೯) ಅರ್ಥಶೂನ್ಯತೆಗೆ ಇಳಿಸುವಿಕೆಯನ್ನು ನಿರ್ವಹಿಸಲು ವಿಚಾರವಾದ ಮತ್ತು ನಿರ್ದಿಷ್ಟವಾಗಿ ಇಮಾನ್ಯುವೆಲ್ ಕಾಂಟ್‌ರ "ವಿಮರ್ಶಾತ್ಮಕ" ತತ್ತ್ವಚಿಂತನೆಯನ್ನು ನಿರೂಪಿಸಿದರು. ಇದರ ಪ್ರಕಾರ ಎಲ್ಲಾ ವಿಚಾರವಾದವು (ಟೀಕೆಯಾಗಿ ತತ್ವ್ವಚಿಂತನೆ) ನಿರಾಕರಣಾವಾದವನ್ನು ಉಂಟುಮಾಡುತ್ತದೆ ಮತ್ತು ಆದ್ದರಿಂದ ಇದನ್ನು ತೊರೆಯಬೇಕು ಮತ್ತು ಕೆಲವು ರೀತಿಯ ನಂಬಿಕೆ ಮತ್ತು ಜ್ಞಾನದಿಂದ ಬದಲಿಸಬೇಕು.
ರಿಚಾರ್ಡ್ ರೋರ್ಟಿ, ಕಿರ್ಕೆಗಾರ್ಡ್ ಮತ್ತು ವಿಟ್ಗೆಂಸ್ಟೈನ್ ನಮ್ಮ ವಿಶೇಷ ಕಲ್ಪನೆಗಳು ಪ್ರಪಂಚಕ್ಕೆ ಸೂಕ್ತವಾದ ರೀತಿಯಲ್ಲಿ ಸಂಬಂಧಿಸಿದೆಯೇ, ಪ್ರಪಂಚವನ್ನು ವಿವರಿಸುವ ನಮ್ಮ ಮಾರ್ಗವನ್ನು ಇತರ ಮಾರ್ಗಗಳೊಂದಿಗೆ ಹೋಲಿಸಿ ಸಮರ್ಥಿಸಬಹುದೇ ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಸಾಮಾನ್ಯವಾಗಿ, ಸತ್ಯವೆಂದರೆ ಸರಿಯಾದುದನ್ನು ಪಡೆಯುವುದು ಅಥವಾ ನೈಜತೆಯನ್ನು ಸೂಚಿಸುವುದಾಗಿರದೆ, ಅದು ನಮ್ಮ ಸಂಕಲ್ಪಗಳನ್ನು ನಿರ್ದಿಷ್ಟ ಸಮಯದಲ್ಲಿ ಪೂರೈಸಿದ ಭಾಷೆ ಮತ್ತು ಸಾಮಾಜಿಕ ನಡವಳಿಕೆಯ ಭಾಗವಾಗಿದೆ ಎಂದು ಈ ತತ್ತ್ವಜ್ಞಾನಿಗಳು ವಾದಿಸುತ್ತಾರೆ; ಇದರ ಪ್ರಕಾರ ಪೋಸ್ಟ್‌ಸ್ಟ್ರಕ್ಚರಲಿಸಮ್ ಪ್ರಪಂಚದ ಬಗ್ಗೆ ಕಂಡುಹಿಡಿದ ಅಪ್ಪಟ 'ನಿಜಸಂಗತಿಗಳನ್ನು' ಹೊಂದುವಂತೆ ಹೇಳುವ ಯಾವುದೇ ನಿರೂಪಣೆಗಳನ್ನು ನಿರಾಕರಿಸುತ್ತದೆ.
ರಾಜಕೀಯ
[ಬದಲಾಯಿಸಿ]ಯಾವುದೇ ರಾಜಕೀಯ ಪಕ್ಷವು ನಿರಾಶಾವಾದವಾಗಿರುವುದು ವಿಶೇಷ ಲಕ್ಷಣವಲ್ಲ. ಸಂಪ್ರದಾಯವಾದಿ ಚಿಂತಕರು, ವಿಶೇಷವಾಗಿ ಸಾಮಾಜಿಕ ಸಂಪ್ರದಾಯವಾದಿಗಳು, ಹೆಚ್ಚಾಗಿ ರಾಜಕಾರಣವನ್ನು ನಿರಾಶಾವಾದಿ ಮಾರ್ಗದಲ್ಲಿ ಗ್ರಹಿಸುತ್ತಾರೆ. ವಿಲಿಯಂ ಎಫ್. ಬಕ್ಲಿ ಪ್ರಸಿದ್ಧವಾಗಿ ಹೀಗೆಂದು ಟೀಕಿಸಿದ್ದಾರೆ - ನಿಲ್ಲಿಸಬೇಕೆಂದು' ಹೇಳುವ ಇತಿಹಾಸಕ್ಕೆ ನಾನು ವಿರುದ್ಧವಾಗಿದ್ದೇನೆ'. ವಿಟ್ಟಾಕರ್ ಚೇಂಬರ್ಸ್ ತೀವ್ರವಾಗಿ ಕಮ್ಯೂನಿಸ್ಟ್-ವಿರೋಧಿಯಾಗಿದ್ದರೂ ಬಂಡವಾಳಶಾಹಿಯು ಖಂಡಿತವಾಗಿ ಕಮ್ಯೂನಿಸಮ್‌ನ ಎದುರು ಪತನಗೊಳ್ಳುತ್ತದೆ ಎಂದು ಮನವರಿಕೆ ಮಾಡಿದರು. ಕ್ರೈಸ್ತಧರ್ಮ ಮತ್ತು/ಅಥವಾ ಗ್ರೀಕ್ ತತ್ತ್ವಚಿಂತನೆಯಲ್ಲಿ ಮೂಲವನ್ನು ತೊರೆದ ಪಾಶ್ಚಾತ್ಯ ನಾಗರಿಕತೆಯನ್ನು ಅವನತಿಯ ಮತ್ತು ಶೂನ್ಯ ಸೈದ್ಧಾಂತಿಕ ನಾಗರಿಕತೆಯೆಂದು ಸಾಮಾಜಿಕ ಸಂಪ್ರದಾಯವಾದಿಗಳು ಹೇಳುತ್ತಾರೆ, ಇದು ಇದನ್ನು ನೈತಿಕ ಮತ್ತು ರಾಜಕೀಯ ಅವನತಿಗೆ ಬೀಳುವಂತೆ ಮಾಡಿತು. ರಾಬರ್ಟ್ ಬೋರ್ಕ್‌ರ ಸ್ಲೌಚಿಂಗ್ ಟುವರ್ಡ್ ಗೊಮ್ಮೊರಾಹ್ ಮತ್ತು ಅಲ್ಲನ್ ಬ್ಲೂಮ್‌ರ ದಿ ಕ್ಲೋಸಿಂಗ್ ಆಫ್ ದಿ ಅಮೇರಿಕನ್ ಮೈಂಡ್ ಮೊದಲಾದವು ಈ ದೃಷ್ಟಿಕೋನದ ಪ್ರಸಿದ್ಧ ಪ್ರಕಟಣೆಯಾಗಿವೆ.
ಸಮಾಜದಲ್ಲಿನ ಸರ್ಕಾರದ ಪಾತ್ರ ಮತ್ತು ರಾಜ್ಯದ ವಿಸ್ತರಣೆಯು ಅನಿವಾರ್ಯವಾದುದಾಗಿದೆ ಎಂದು ಹೆಚ್ಚಿನ ಆರ್ಥಿಕ ಸಂಪ್ರದಾಯವಾದಿಗಳು ಮತ್ತು ಬಲ-ಸ್ವಾತಂತ್ರ್ಯಾವಾದಿಗಳು ನಂಬುತ್ತಾರೆ ಹಾಗೂ ಇದರ ವಿರುದ್ಧ ಕಾರ್ಯವನ್ನು ನಿರ್ವಹಿಸುವುದರಲ್ಲಿ ಇವರೇ ಅತ್ಯುತ್ತಮವಾಗಿದ್ದಾರೆ. ಜನರ ಸಹಜ ಪ್ರವೃತ್ತಿಯನ್ನು ನಿಗ್ರಹಿಸಬೇಕು ಮತ್ತು ಸ್ವಾತಂತ್ರ್ಯವು ಸಾಮಾಜಿಕ ವಿಷಯಗಳ ಅಸಾಧಾರಣ ಸ್ಥಿತಿಯಾಗಿದೆ, ಇದನ್ನು ಪ್ರಜಾಕಲ್ಯಾಣ ರಾಜ್ಯವು ಒದಗಿಸಿದ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗಾಗಿ ತ್ಯಜಿಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ. ರಾಜಕೀಯ ನಿರಾಶಾವಾದವು ಕೆಲವೊಮ್ಮೆ ಜಾರ್ಜ್ ಓರ್ವೆಲ್‌ರ ನೈನ್ಟೀನ್ ಎಯ್ಟಿ-ಫೋರ್ ಮೊದಲಾದ ಡಿಸ್ಟೋಪಿಯನ್ ಕಾದಂಬರಿಗಳಲ್ಲಿ ಅಭಿವ್ಯಕ್ತಿಯನ್ನು ಪಡೆಯುತ್ತವೆ.[೪] ಒಂದು ರಾಷ್ಟ್ರದ ಬಗೆಗಿನ ರಾಜಕೀಯ ನಿರಾಶಾವಾದವು ಹೆಚ್ಚಾಗಿ ದೇಶ ಬಿಟ್ಟು ಹೋಗುವ ಅಪೇಕ್ಷೆಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ.[೫]
ಪರಿಸರೀಯ
[ಬದಲಾಯಿಸಿ]ಭೂಮಿಯ ಪರಿಸರವಿಜ್ಞಾನವು ಅದಾಗಲೇ ಪೂಜ್ಯಭಾವವಿಲ್ಲದೆ ಹಾನಿಗೊಳಗಾಗಿದೆ ಮತ್ತು ರಾಜಕಾರಣದಲ್ಲಿನ ಅವಾಸ್ತವಿಕ ಬದಲಾವಣೆಗೂ ಸಹ ಇದನ್ನು ಉಳಿಸಲಾಗುವುದಿಲ್ಲವೆಂದು ಕೆಲವು ಪರಿಸರವಾದಿಗಳು ನಂಬುತ್ತಾರೆ. ಈ ದೃಷ್ಟಿಕೋನದ ಪ್ರಕಾರ, ಶತಕೋಟಿಯಷ್ಟು ಮಾನವರ ಅಸ್ತಿತ್ವವು ಗೃಹದ ಪರಿಸರವಿಜ್ಞಾನದ ಮೇಲೆ ಅತಿ ಒತ್ತಡ ಹೇರುತ್ತದೆ, ಅಂತಿಮವಾಗಿ ಮಾಲ್ಥ್ಯೂಸಿಯನ್ ವೈಫಲ್ಯವನ್ನು ಉಂಟುಮಾಡುತ್ತದೆ. ಈ ವೈಫಲ್ಯವು ಭವಿಷ್ಯದಲ್ಲಿ ದೀರ್ಘಕಾಲದವರೆಗೆ ಅಸಂಖ್ಯಾತ ಮಾನವರಿಗೆ ಆಸರೆಯನ್ನು ನೀಡುವ ಭೂಮಿಯ ಸಾಮರ್ಥ್ಯವನ್ನು ಕ್ಷೀಣಿಸುತ್ತದೆ. [ಸೂಕ್ತ ಉಲ್ಲೇಖನ ಬೇಕು]
ಸಾಂಸ್ಕೃತಿಕ
[ಬದಲಾಯಿಸಿ]ಸ್ವರ್ಣಯುಗವು ಆಗಿಹೋಗಿದೆ ಹಾಗೂ ಪ್ರಸ್ತುತದ ಪೀಳಿಗೆಯು ಮೂಢರಾಗಲು ಮತ್ತು ಸಾಂಸ್ಕೃತಿಕ ಅಭ್ಯಾಸಕ್ಕೆ ಸೂಕ್ತವಾಗಿದೆ ಎಂದು ಸಾಂಸ್ಕೃತಿಕ ನಿರಾಶಾವಾದಿಗಳು ಭಾವಿಸುತ್ತಾರೆ. ಆಲಿವರ್ ಜೇಮ್ಸ್ ಮೊದಲಾದ ಬುದ್ಧಿಜೀವಿಗಳು ಆರ್ಥಿಕ ಪ್ರಗತಿಯನ್ನು ಆರ್ಥಿಕ ಅಸಮತೆ, ಕೃತಕ ಅವಶ್ಯಕತೆಗಳ ಉತ್ತೇಜನೆ ಮತ್ತು ಅಫ್ಲುಯೆಂಜದೊಂದಿಗೆ ಸಂಬಂಧ ಕಲ್ಪಿಸುತ್ತಾರೆ. ಗಿರಾಕಿರಕ್ಷಕ-ವಿರೋಧಿಗಳು ಸಂಸ್ಕೃತಿಯಲ್ಲಿ ಸುವ್ಯಕ್ತ ಭೋಗ ಮತ್ತು ಸ್ವಾರ್ಥಪರ, ಪ್ರತಿಷ್ಠೆ-ಪ್ರಜ್ಞೆಯ ವರ್ತನೆಯು ಬೆಳೆಯುತ್ತಿರುವುದನ್ನು ಗುರುತಿಸಿದ್ದಾರೆ. ಜೀನ್ ಬಾಡ್ರಿಲ್ಲಾರ್ಡ್ ಮೊದಲಾದ ಆಧುನಿಕತಾವಾದಿಗಳು ಸಂಸ್ಕೃತಿಯು (ಮತ್ತು ಆದ್ದರಿಂದ ನಮ್ಮ ಜೀವನವು) ಈಗ ನೈಜತೆಯಲ್ಲಿ ಯಾವುದೇ ಆಧಾರವನ್ನು ಹೊಂದಿಲ್ಲವೆಂದು ವಾದಿಸಿದ್ದಾರೆ.[೧]
ಕೆಲವು ಪ್ರಮುಖ ಕ್ರಮಬದ್ಧವಾದ ಪ್ರತಿಪಾದನೆಗಳು ಇದನ್ನು ಮೀರಿಸಿವೆ, ಅವು ಸಾರ್ವತ್ರಿಕವಾಗಿ-ಅನ್ವಯಿಸುವ ಇತಿಹಾಸದ ಆವರ್ತ ಮಾದರಿಯೊಂದನ್ನು ಪ್ರಸ್ತಾಪಿಸುತ್ತವೆ — ಮುಖ್ಯವಾಗಿ ಗಿಯಾಂಬಟ್ಟಿಸ್ಟ ವಿಕೊರ ಬರಹಗಳಲ್ಲಿ.
ಕಾನೂನು
[ಬದಲಾಯಿಸಿ]ಕೆಲವು ಅಪರಾಧ ಸಮರ್ಥನೆಯ ನ್ಯಾಯವಾದಿಗಳು ನಿರಾಶಾವಾದವು ಸಂಭವಿಸಬಹುದಾದ ಹೆಚ್ಚು ಅಪಾಯದ ಪ್ರಮಾದಗಳನ್ನು ದೂರಮಾಡುತ್ತದೆಂದು ಹೇಳುತ್ತಾರೆಂದು ಬಿಬಾಸ್ ಬರೆಯುತ್ತಾರೆ: ನಿರಾಶಾವಾದಿ ಮುಂದಾಲೋಚನೆಯ ಅಪಾಯವು ವಿಪತ್ಕಾರಕವಾಗಿ ತಪ್ಪೆಂದು ಪರೀಕ್ಷೆಯಲ್ಲಿ ಸಾಬೀತಪಡಿಸಲಾಗಿದೆ, ಈ ಕಸಿವಿಸಿಗೊಳಿಸುವ ಫಲಿತಾಂಶವು ಕಕ್ಷಿದಾರರನ್ನು ಕೋಪಗೊಳಿಸುತ್ತದೆ. ಮತ್ತೊಂದು ರೀತಿಯಲ್ಲಿ, ಕಕ್ಷಿದಾರರು ಅವರ ವಕೀಲರ ನಿರಾಶಾವಾದಿ ಸಲಹೆಯ ಆಧಾರದಲ್ಲಿ ವಾದಿಸಿದರೆ, ಕೇಸುಗಳು ಪರೀಕ್ಷೆಗೆ ಹೋಗುವುದಿಲ್ಲ ಮತ್ತು ಕಕ್ಷಿದಾರರು ಬುದ್ಧಿವಂತರಾಗುವುದಿಲ್ಲ.[೬]
ಮನೋವಿಜ್ಞಾನ
[ಬದಲಾಯಿಸಿ]ನಿರಾಶಾವಾದದ ಅಧ್ಯಯನವು ಖಿನ್ನತೆಯ ಅಧ್ಯಯನದೊಂದಿಗೆ ಹೋಲಿಕೆಯನ್ನು ಹೊಂದಿದೆ. ಮನಶ್ಶಾಸ್ತ್ರಜ್ಞರು ನಿರಾಶಾವಾದಿ ವರ್ತನೆಗಳನ್ನು ಭಾವನಾತ್ಮಕ ವೇದನೆಯೆಂದು ನಿರೂಪಿಸುತ್ತಾರೆ. ಖಿನ್ನತೆಯು ಪ್ರಪಂಚದ ಬಗ್ಗೆ ಅವಾಸ್ತವಿಕ ನಕಾರಾತ್ಮಕ ಅಭಿಪ್ರಾಯಗಳನ್ನು ಹೊಂದುವುದರಿಂದ ಉಂಟಾಗುತ್ತದೆಂದು ಆರನ್ ಬೆಕ್ ವಾದಿಸುತ್ತಾರೆ. ಬೆಕ್ ರೋಗಿಗಳೊಂದಿಗೆ ಅವರ ನಕಾರಾತ್ಮಕ ಚಿಂತನೆಗಳ ಬಗ್ಗೆ ಚರ್ಚಿಸುವ ಮೂಲಕ ಚಿಕಿತ್ಸೆಯನ್ನು ಆರಂಭಿಸುತ್ತಾರೆ. ಆದರೆ ನಿರಾಶಾವಾದಿಗಳು ಅವರ ನೈಜತೆಯ ತಿಳುವಳಿಕೆಯು ಸಮರ್ಥನೀಯವಾದುದೆಂಬ ಹೇಳಿಕೆಗಳನ್ನು ನೀಡುತ್ತಾರೆ; ಖಿನ್ನವಾದ ವಾಸ್ತವಿಕತೆ ಅಥವಾ ನಿರಾಶಾವಾದಿ ವಾಸ್ತವಿಕತೆಯಲ್ಲಿರುವಂತೆ.[೧] ಬೆಕ್ ಡಿಪ್ರೆಶನ್ ಇನ್ವೆಂಟರಿಯಲ್ಲಿನ ನಿರಾಶವಾದ ಅಂಶವು ಆತ್ಮಹತ್ಯೆಗಳ ಬಗ್ಗೆ ಭವಿಷ್ಯ ನುಡಿಯುವಲ್ಲಿ ಉಪಯುಕ್ತವಾಗಿದೆಯೆಂದು ನಿರ್ಣಯಿಸಲಾಗಿದೆ.[೭] ಬೆಕ್ ಹೋಪ್ಲೆಸ್ನೆಸ್ ಸ್ಕೇಲ್ಅನ್ನೂ ಸಹ ನಿರಾಶಾವಾದದ ಮಾಪನವೆಂದು ಹೇಳಲಾಗಿದೆ.[೮]
ನಿರಾಶಾವಾದವು ಕೆಲವು ಸಂದರ್ಭಗಳಲ್ಲಿ ಪ್ರಯೋಜನಕಾರಿಯಾಗಿರುತ್ತದೆಂದು ವೆಂಡರ್ ಮತ್ತು ಕ್ಲೈನ್ ಸೂಚಿಸುತ್ತಾರೆ: ಒಬ್ಬ ವ್ಯಕ್ತಿಯು ಹಲವಾರು ಸೋಲುಗಳಿಗೆ ಗುರಿಯಾಗಿದ್ದರೆ, ನಿರಾಶಾವಾದವು ಆತನಿಗೆ ಹಿಂದಕ್ಕೆ ಸರಿದು, ನಿರೀಕ್ಷೆಯೊಂದಿಗೆ ಇತರರಿಗೆ ಭಾಗವಹಿಸಲು ಅವಕಾಶ ಕೊಡಲು ಚಿಂತಿಸುವಂತೆ ಮಾಡುತ್ತದೆ. ಅಂತಹ ನಿರೀಕ್ಷೆಯು ನಿರಾಶಾವಾದಿ ದೃಷ್ಟಿಕೋನದಿಂದ ಪ್ರೋತ್ಸಾಹಿಸಲ್ಪಡಬಹುದು. ಅದೇ ರೀತಿ ಒಬ್ಬ ವ್ಯಕ್ತಿಯು ಜೀವನದಲ್ಲಿ ಹೆಚ್ಚೆಚ್ಚು ಹಣವನ್ನು ಸಂಗ್ರಹಿಸುತ್ತಿದ್ದರೆ, ಇದು ವ್ಯಾಪಕ ಅಪಾಯವಿರುವ ಸಾಧನೆಯನ್ನು ಮಾಡುವಂತೆ ಪ್ರೇರೇಪಿಸುತ್ತದೆ, ಆ ಮೂಲಕ ವಿರಳ ಮೂಲಗಳು ಲಭಿಸುವ ಅವಕಾಶವನ್ನು ಹೆಚ್ಚಿಸುತ್ತದೆ.[೯]
ಟೀಕೆ
[ಬದಲಾಯಿಸಿ]ಸ್ವಾರ್ಥತೆಯನ್ನು ಈಡೇರಿಸುವ ಭವಿಷ್ಯವಾಣಿ
[ಬದಲಾಯಿಸಿ]ನಿರಾಶಾವಾದವನ್ನು ಕೆಲವೊಮ್ಮೆ ಸ್ವಾರ್ಥತೆಯನ್ನು ಈಡೇರಿಸುವ ಭವಿಷ್ಯವಾಣಿಯೆಂದು ತಿಳಿಯಲಾಗುತ್ತದೆ; ಏಕೆಂದರೆ ಒಬ್ಬ ವ್ಯಕ್ತಿಯು ಏನೂದರೂ ಕೆಟ್ಟದೆಂದು ಭಾವಿಸಿದರೆ, ಇದು ಅದನ್ನು ಇನ್ನಷ್ಟು ಕೆಟ್ಟದ್ದಾಗಿಸುತ್ತದೆ.[೧೦]
ಪ್ರಾಯೋಗಿಕ ವಿಮರ್ಶೆ
[ಬದಲಾಯಿಸಿ]ಇತಿಹಾಸದಾದ್ಯಂತ ಕೆಲವರು, ಸಮರ್ಥಿನೀಯವಾಗಿದ್ದರೂ ನಿರಾಶಾವಾದಿ ವರ್ತನೆಯನ್ನು ಅದಕ್ಕೆ ಒಳಗಾಗದಂತೆ ತಡೆಯಲು ಬಿಟ್ಟುಬಿಡಬೇಕೆಂದು ತರ್ಕಿಸಿದ್ದಾರೆ. ಆಶಾವಾದಿ ವರ್ತನೆಗಳು ಉತ್ತಮವಾದವು ಮತ್ತು ಭಾವನಾತ್ಮಕ ಪ್ರಾಮುಖ್ಯತೆಯನ್ನು ಹೊಂದಿವೆ.[೧೧] ಆಲ್-ಗಜಾಲಿ ಮತ್ತು ವಿಲಿಯಂ ಜೇಮ್ಸ್ ಮಾನಸಿಕ ಅಥವಾ ಮನೋದೈಹಿಕ ಅಸ್ವಸ್ಥತೆಯ ನಂತರ ತಮ್ಮ ನಿರಾಶಾವಾದವನ್ನು ಬಿಟ್ಟುಬಿಟ್ಟರು. ಆದರೆ ಈ ರೀತಿಯ ಟೀಕೆಗಳು ನಿರಾಶಾವಾದವು ಅನಿವಾರ್ಯವಾಗಿ ಅಜ್ಞಾನ ಮತ್ತು ಸಂಪೂರ್ಣ ಖಿನ್ನತೆಯ ಮನೋಭಾವಕ್ಕೆ ಒಳಗಾಗಿಸುತ್ತದೆಂದು ಊಹಿಸುತ್ತವೆ. ಹೆಚ್ಚಿನ ತತ್ತ್ವಜ್ಞಾನಿಗಳು ಇದನ್ನು ಒಪ್ಪದೆ, 'ನಿರಾಶಾವಾದ' ಪದವನ್ನು ದುರುಪಯೋದ ಮಾಡಲಾಗುತ್ತಿದೆಯೆಂದು ಹೇಳುತ್ತಾರೆ. ನಿರಾಶಾವಾದ ಮತ್ತು ನಿರಾಕರಣಾವಾದದ ನಡುವೆ ಸಂಬಂಧವಿದೆ, ಆದರೆ ಆಲ್ಬರ್ಟ್ ಕ್ಯಾಮಸ್ ಮೊದಲಾದ ತತ್ತ್ವಜ್ಞಾನಿಗಳು ಭಾವಿಸಿದಂತೆ ನಿರಾಶಾವಾದವು ಅನಿವಾರ್ಯವಾಗಿ ನಿರಾಕರಣಾವಾದವನ್ನು ಉಂಟುಮಾಡುವುದಿಲ್ಲ. ಸಂತೋಷವು ಆಶಾವಾದದೊಂದಿಗೆ ಸಂಬಂಧಿಸಿಲ್ಲ, ಹಾಗೆಯೇ ನಿರಾಶಾವಾದವೂ ಸಹ ದುಃಖದೊಂದಿಗೆ ಸಂಬಂಧಿಸಿಲ್ಲ. ಸಂತೋಷವಾಗಿರದ ಆಶಾವಾದಿ ಮತ್ತು ಸಂತೋಷದಿಂದಿರುವ ನಿರಾಶಾವಾದಿಯನ್ನು ಸುಲಭವಾಗಿ ಕಾಣಬಹುದು. ನಿರಾಶಾವಾದದ ಆಪಾದನೆಗಳನ್ನು ಯುಕ್ತ ಟೀಕೆಯನ್ನು ಅಡಗಿಸಲು ಬಳಸಬಹುದು. ಅರ್ಥಶಾಸ್ತ್ರಜ್ಞ ನೌರಿಯಲ್ ರೌಬಿನಿಯನ್ನು ೨೦೦೬ರಲ್ಲಿ ಜಾಗತಿಕ ಹಣಕಾಸಿನ ಬಿಕ್ಕಟ್ಟು ಸಂಭವಿಸುತ್ತದೆಂಬ ಆತನ ಅಶುಭಸೂಚಕ ಆದರೆ ನಿಖರವಾದ ಊಹೆಗಳಿಗಾಗಿ ಒಬ್ಬ ನಿರಾಶಾವಾದಿಯೆಂದು ಸಾರಲಾಗಿದೆ. ಸಮಸ್ಯೆಗಳಿಗೆ ಹೆಚ್ಚು ಆಶಾವಾದಿ ಮನೋಭಾವನೆಗಳನ್ನು (ಉದಾ, ಸಿಡುಕು ಸ್ವಭಾವ ಮತ್ತು ಉತ್ಸಾಹ) ಹೊಂದಿರುವವರು ಪಡೆಯದ ಪರಿಹಾರವನ್ನು ನಿರಾಶಾವಾದಿಗಳು ನಿರಾಶಾವಾದಿ-ಮನೋಧರ್ಮಗಳಿಂದ (ಉದಾ, ಖಿನ್ನ ಸ್ವಭಾವ ಮತ್ತು ಭಾವಶೂನ್ಯತೆ) ಪಡೆಯುತ್ತಾರೆಂದು ಪರ್ಸನಾಲಿಟಿ ಪ್ಲಸ್ ಅಭಿಪ್ರಾಯ ಪಡುತ್ತದೆ.
ಅವನತಿ
[ಬದಲಾಯಿಸಿ]ಪ್ರಾಚೀನ ಗ್ರೀಕರು ಅವರ ನಿರಾಶಾವಾದದಿಂದ ವಿಷಾದದ ಸಂಗತಿಯನ್ನು ಸೃಷ್ಟಿಸಿದರೆಂದು ನೈಜ್‌ಸ್ಚೆ ಭಾವಿಸಿದ್ದಾರೆ. 'ನಿರಾಶಾವಾದವು ಅನಿವಾರ್ಯವಾಗಿ ಪತನ, ಅವನತಿ, ಹೀನಸ್ಥಿತಿ, ಬೇಸರಪಡಿಸುವ ಮತ್ತು ದುರ್ಬಲ ಸ್ವಭಾವವದ ಸಂಕೇತವಾಗಿದೆಯೇ? ಪ್ರಬಲ ವಾದ ನಿರಾಶಾವಾದವಿದೆಯೇ? ಕ್ಲಿಷ್ಟ, ಭಯಂಕರ, ಘೋರ, ಸಮಸ್ಯಾತ್ಮಕ ಅಂಶ ಬೌದ್ಧಿಕ ಒಲವು ಯೋಗಕ್ಷೇಮ, ಉತ್ತಮ ಆರೋಗ್ಯ ಮತ್ತು ಅಸ್ತಿತ್ವದ ಪೂರ್ಣತೆ ಯಿಂದ ಪ್ರಚೋದಿಸಲ್ಪಡುತ್ತದೆಯೇ?'[೧೨]
ನೈಜ್‌ಸ್ಚೆಯ ನಿರಾಶಾವಾದದ ಪ್ರತಿಕ್ರಿಯೆಯು ಸ್ಕೋಪೆನ್ಹಾರ್‌ರ ಅಭಿಪ್ರಾಯಕ್ಕೆ ವಿರುದ್ಧವಾಗಿತ್ತು. ಸ್ಕೋಪೆನ್ಹಾರ್ ದಿ ವರ್ಲ್ಡ್ ಆಸ್ ವಿಲ್ ಆಂಡ್ ರೆಪ್ರೆಸೆಂಟೇಶನ್ , ಸಂಪುಟ II, ಪುಟ ೪೯೫ ರಲ್ಲಿ ಹೀಗೆಂದು ಹೇಳುತ್ತಾರೆ - 'ಪ್ರಪಂಚವು ಅಂದರೆ ಜೀವನವು ನೈಜ ತೃಪ್ತಿಯನ್ನು ನೀಡುವುದಿಲ್ಲ, ಆದ್ದರಿಂದ ಇದು ನಮ್ಮ ಮನೋಭಾವಕ್ಕೆ ಮೌಲ್ಯವನ್ನು ಹೊಂದಿಲ್ಲ ವೆಂಬ ಭಾವನೆ ಉಂಟಾಗುತ್ತದೆ: ಇದರಿಂದಾಗಿ ವಿರಕ್ತಿ ಮನೋಭಾವವು ಹುಟ್ಟಿಕೊಳ್ಳುತ್ತದೆ. ಡಿಯೋನಿಸಸ್ ಎಷ್ಟು ಭಿನ್ನವಾಗಿ ನನ್ನೊಂದಿಗೆ ಮಾತನಾಡಿದರು! ನಾನು ಬಹು ಹಿಂದೆಯೇ ಈ ವಿರಕ್ತಿ ಭಾವದಿಂದ ಹೊರಬಂದಿದ್ದೇನೆ!'[೧೩]
ಇವನ್ನೂ ಗಮನಿಸಿ
[ಬದಲಾಯಿಸಿ]- ಸಿನಿಕತೆ
- ವಿಗ್ ಇತಿಹಾಸ
- ನಿರಾಕರಣವಾದ
- ಚಿತ್ತಸ್ಥಿತಿ
- ಆಶಾವಾದ
- ಆಶಾವಾದ ಒಲವು
- ನಿರಾಶಾವಾದ ಒಲವು
- ದುಷ್ಟ ತೊಂದರೆಗಳು
- ಥಿಯೋಡಿಸಿ
- ಬ್ಲೂಸ್
ಟಿಪ್ಪಣಿಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ಬೆನ್ನೆಟ್ಟ್, ಆಲಿವರ್. ಕಲ್ಚರಲ್ ಪೆಸ್ಸಿಮಿಸಮ್. ಎಡಿನ್‌ಬರ್ಗ್ ಯೂನಿವರ್ಸಿಟಿ ಪ್ರೆಸ್. ೨೦೦೧.
- ↑ ೨.೦ ೨.೧ ೨.೨ Schopenhauer, Arthur (2007). Studies in Pessimism. Cosimo, Inc. ISBN 1602063494.
- ↑ Herbermann, Charles, ed. (1913). . Catholic Encyclopedia. New York: Robert Appleton Company.
{{cite encyclopedia}}
: Cite has empty unknown parameters:|HIDE_PARAMETER4=
,|HIDE_PARAMETER2=
,|HIDE_PARAMETERq=
,|HIDE_PARAMETER20=
,|HIDE_PARAMETER5=
,|HIDE_PARAMETER8=
,|HIDE_PARAMETER7=
,|HIDE_PARAMETER6=
,|HIDE_PARAMETER9=
,|HIDE_PARAMETER1=
, and|HIDE_PARAMETER3=
(help) - ↑ D Lowenthal (1969), Orwell's Political Pessimism in'1984', Polity
- ↑ RJ Brym (1992), The emigration potential of Czechoslovakia, Hungary, Lithuania, Poland and Russia: recent survey results (PDF), International Sociology[permanent dead link]
- ↑ Stephanos Bibas (Jun., 2004), Plea Bargaining outside the Shadow of Trial, vol. 117, Harvard Law Review, pp. 2463–2547
{{citation}}
: Check date values in:|date=
(help) - ↑ AT Beck, RA Steer, M Kovacs (1985), Hopelessness and eventual suicide: a 10-year prospective study of patients hospitalized with suicidal ideation, American Journal, archived from the original on 2011-08-12, retrieved 2011-05-23
{{citation}}
: CS1 maint: multiple names: authors list (link) - ↑ AT Beck, A Weissman, D Lester, L Trexler (1974), The measurement of pessimism: the hopelessness scale, Journal of Consulting and Clinical
{{citation}}
: CS1 maint: multiple names: authors list (link) - ↑ Wender PH, Klein DF (1982), Mind, Mood and Medicine, New American Library
- ↑ ಆಪ್ಟಿಸಮ್/ಪೆಸ್ಸಿಮಿಸಮ್. ಜಾನ್ ಡಿ. ಆಂಡ್ ಕ್ಯಾಥೆರಿನ್ ಟಿ. ಮ್ಯಾಕ್‌ಅರ್ಥುರ್ ರಿಸರ್ಚ್. http://www.macses.ucsf.edu/Research/Psychosocial/notebook/optimism.html#Health Archived 2009-12-07 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಮೈಕೆಲ್ ಆರ್. ಮಿಚುವ. "ಡೂಯಿಂಗ್, ಸಫರಿಂಗ್ ಆಂಡ್ ಕ್ರಿಯೇಟಿಂಗ್": ವಿಲಿಯಂ ಜೇಮ್ಸ್ ಆಂಡ್ ಡಿಪ್ರೆಶನ್. http://web.ics.purdue.edu/~mmichau/james-and-depression.pdf Archived 2009-02-26 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ನೈಜ್‌ಸ್ಚೆ, ಫ್ರೈಡ್ರಿಚ್, ದಿ ಬರ್ತ್ ಆಫ್ ಟ್ರಾಜೆಡಿ ಆರ್: ಹೆಲ್ಲೆನಿಸಮ್ ಆಂಡ್ ಪೆಸ್ಸಿಮಿಸಮ್ , "ಅಟೆಂಪ್ಟ್ ಅಟ್ ಎ ಸೆಲ್ಫ್-ಕ್ರಿಟಿಸಿಸಮ್," §೧
- ↑ ನೈಜ್‌ಸ್ಚೆ, ಫ್ರೈಡ್ರಿಚ್, ದಿ ಬರ್ತ್ ಆಫ್ ಟ್ರಾಜೆಡಿ: ಹೆಲ್ಲೆನಿಸಮ್ ಆಂಡ್ ಪೆಸ್ಸಿಮಿಸಮ್ , "ಅಟೆಂಪ್ಟ್ ಅಟ್ ಎ ಸೆಲ್ಫ್-ಕ್ರಿಟಿಸಿಸಮ್," §೬
ಉಲ್ಲೇಖಗಳು
[ಬದಲಾಯಿಸಿ]- ಡೈಂಸ್ಟ್ಯಾಗ್, ಜೋಶುವ ಫೋಯ, ಪೆಸ್ಸಿಮಿಸಮ್: ಫಿಲೋಸಫಿ, ಎಥಿಕ್, ಸ್ಪಿರಿಟ್ , ಪ್ರಿನ್ಸೆಟನ್ ಯೂನಿವರ್ಸಿಟಿ ಪ್ರೆಸ್, ೨೦೦೬, ISBN ೦-೬೯೧-೧೨೫೫೨-X
- ನೈಜ್‌ಸ್ಚೆ, ಫ್ರೈಡ್ರಿಚ್, ದಿ ಬರ್ತ್ ಆಫ್ ಟ್ರಾಜೆಡಿ ಆಂಡ್ ದಿ ಕೇಸ್ ಆಫ್ ವ್ಯಾಗ್ನರ್ , ನ್ಯೂಯಾರ್ಕ್: ವಿಂಟೇಜ್ ಬುಕ್ಸ್, ೧೯೬೭, ISBN ೦-೩೯೪-೭೦೩೬೯-೩
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಸಿ-ಥಿಯರಿ ಪೇಜ್ Archived 2011-05-25 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- CS1 errors: empty unknown parameters
- Articles incorporating a citation from the 1913 Catholic Encyclopedia with Wikisource reference
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- CS1 errors: dates
- CS1 maint: multiple names: authors list
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles needing expert attention with no reason or talk parameter
- Articles needing expert attention from May 2010
- All articles needing expert attention
- Articles with unsourced statements from May 2010
- Articles with hatnote templates targeting a nonexistent page
- ಜ್ಞಾನಮೀಮಾಂಸೆ
- ಪ್ರಚೋದನೆ
- ನೈತಿಕ ಸಿದ್ಧಾಂತಗಳು
- ಜೀವನ ತತ್ವಜ್ಞಾನ