ವಿಷಯಕ್ಕೆ ಹೋಗು

ಚಳಿಗಾಲದ ಒಲಿಂಪಿಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಳಿಗಾಲದ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ದೇಶಗಳು
೨೦೧೮ನೇ ಚಳಿಗಾಲದ ಒಲಿಂಪಿಕ್ಸ್ನಜ್ಯೋತಿ

ಒಲಿಂಪಿಕ್ ವಿಂಟರ್ ಗೇಮ್ಸ್ ಹಿಮ ಮತ್ತು ಮಂಜಿನಿಂದ ಆಚರಿಸಲಾಗುವ ಕ್ರೀಡೆಗಳಿಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಂದು ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟವಾಗಿದೆ. ೧೯೨೪ರಲ್ಲಿ ಮೊದಲ ಚಳಿಗಾಲದ ಒಲಿಂಪಿಕ್ಸ್ ಫ್ರಾನ್ಸ್ನ ಚಮೋನಿಕ್ಸ್ನಲ್ಲಿ ನಡೆಯಿತು. ಒಲಿಂಪಿಕ್ ಕ್ರೀಡಾಕೂಟವು ಪ್ರಾಚೀನ ಒಲಂಪಿಕ್ ಕ್ರೀಡಾಕೂಟಗಳಿಂದ ಸ್ಫೂರ್ತಿ ಪಡೆದಿದೆ. ಇವುಗಳನ್ನು ಗ್ರೀಸ್ನ ಒಲಂಪಿಯಾದಲ್ಲಿ ಕ್ರಿ.ಪೂ ೮ನೇ ಶತಮಾನದಿಂದ ಕ್ರಿ.ಶ.೪ನೇ ಶತಮಾನದ ವರೆಗೆ ನಡೆಸಲಾಗಿತ್ತು.೧೮೯೪ ರಲ್ಲಿ ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿಯನ್ನು (ಐಓಸಿ) ಸ್ಥಾಪಿಸಿದ ಬ್ಯಾರನ್ ೧೮೯೬ಪಿಯೆರ್ ಡಿ ಕೊಬೆರ್ಟಿನ್ 1896 ರಲ್ಲಿ ಅಥೆನ್ಸ್ನಲ್ಲಿ ನಡೆದ ಮೊದಲ ಆಧುನಿಕ ಆಟಕ್ಕೆ ಕಾರಣವಾಯಿತು. ಒಲಿಂಪಿಕ್ ಚಳುವಳಿಯ ಆಡಳಿತ ಮಂಡಳಿ ಐಒಸಿ ಇದರ ರಚನೆ ಮತ್ತು ಅಧಿಕಾರವನ್ನು ವ್ಯಾಖ್ಯಾನಿಸುವ ಒಲಿಂಪಿಕ್ ಚಾರ್ಟರ್ ಹೊಂದಿದೆ. ಮೂಲ ಐದು ಕ್ರೀಡಾಕೂಟಗಳು ಬಾಬ್ಬ್ಲೇಸ್, ಕರ್ಲಿಂಗ್, ಐಸ್ ಹಾಕಿ, ನಾರ್ಡಿಕ್ ಸ್ಕೀಯಿಂಗ್ ಮತ್ತು ಸ್ಕೇಟಿಂಗ್ ವಿಭಾಗಗಳು. ೧೯೨೪ ರಿಂದ ೧೯೩೬ ರವರೆಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಪಂದ್ಯಗಳನ್ನು ಆಯೋಜಿಸಲಾಯಿತು. ೧೯೪೦ ಮತ್ತು ೧೯೪೪ ರಲ್ಲಿ ಎರಡನೇ ಮಹಾಯುದ್ಧದಿಂದ ಕ್ರೀಡೆಗೆ ಅಡಚಣೆಯಾಯಿತು. ಮತ್ತು ೧೯೪೮ ರಲ್ಲಿ ಪುನರಾರಂಭವಾಯಿತು. ಆಲ್ಪೈನ್ ಸ್ಕೀಯಿಂಗ್, ಲೂಜ್, ಸಣ್ಣ ಟ್ರ್ಯಾಕ್ ವೇಗ ಸ್ಕೇಟಿಂಗ್, ಫ್ರೀಸ್ಟೈಲ್ ಸ್ಕೀಯಿಂಗ್, ಅಸ್ಥಿಪಂಜರ, ಮತ್ತು ಸ್ನೋಬೋರ್ಡಿಂಗ್ ಇವು ಇನ್ನಿತರ ಪ್ರಮುಖ ಆಟಗಳಾಗಿವೆ.[][]

ಕ್ರೀಡೆ

[ಬದಲಾಯಿಸಿ]

೧೯೯೨ರಿಂದ ಈಚೆಗೆ ಒಲಂಪಿಕ್ ಕಾರ್ಯಕ್ರಮಕ್ಕೆ ಹಲವಾರು ಹೊಸ ಕ್ರೀಡೆಗಳನ್ನು ಸೇರಿಸಲಾಗಿದೆ. ಇದರಲ್ಲಿ ಸಣ್ಣ ಟ್ರ್ಯಾಕ್ ವೇಗ ಸ್ಕೇಟಿಂಗ್, ಸ್ನೋಬೋರ್ಡಿಂಗ್, ಫ್ರೀಸ್ಟೈಲ್ ಮತ್ತು ಮೊಗಲ್ ಸ್ಕೀಯಿಂಗ್ ಸೇರಿವೆ. ಈ ಕ್ರೀಡೆಗಳ ಜೊತೆಗೆ ಯುರೋಪ್ ಮತ್ತು ಉತ್ತರ ಅಮೇರಿಕದ ಆಚೆಗೆ ವಿಂಟರ್ ಒಲಂಪಿಕ್ಸ್ನ ಮನವಿಯನ್ನು ವಿಸ್ತರಿಸಿದೆ. ನಾರ್ವೆ ಮತ್ತು ಜರ್ಮನಿ ಮುಂತಾದ ಐರೋಪ್ಯ ಶಕ್ತಿಗಳು ಸಾಂಪ್ರದಾಯಿಕ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಈಗಲೂ ಪ್ರಾಬಲ್ಯ ಹೊಂದಿದ್ದು, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ಕೆನಡಾದಂತಹ ದೇಶಗಳು ಹೊಸ ಕ್ರೀಡೆಗಳಲ್ಲಿ ಯಶಸ್ಸನ್ನು ಕಂಡಿದೆ.

ಫಲಿತಾಂಶಗಳು

[ಬದಲಾಯಿಸಿ]
  • ರಾಷ್ಟ್ರೀಯ ಪದಕ ಕೋಷ್ಟಕಗಳಲ್ಲಿ ಹೆಚ್ಚು ಸಮಾನತೆ
  • ವಿಂಟರ್ ಒಲಿಂಪಿಕ್ಸ್ನಲ್ಲಿ ಹೆಚ್ಚು ಆಸಕ್ತಿ
  • ಉನ್ನತ ಜಾಗತಿಕ ದೂರದರ್ಶನ ರೇಟಿಂಗ್ಗಳು.

ಪ್ರಸ್ತುತ ಕ್ರೀಡೆಗಳು

[ಬದಲಾಯಿಸಿ]
  • ಆಲ್ಪೈನ್ ಸ್ಕೀಯಿಂಗ್
  • ಬಯಾಥ್ಲಾನ್
  • ಬಾಬ್ಸ್ಲೀಘ್
  • ಕ್ರಾಸ್ ಕಂಟ್ರಿ
  • ಸ್ಕೀಯಿಂಗ್
  • ಫಿಗರ್ ಸ್ಕೇಟಿಂಗ್
  • ಲೂಜ್
  • ಸ್ಪೀಡ್ ಸ್ಕೇಟಿಂಗ್
  • ಸ್ಕೀ ಜಂಪಿಂಗ್[]

ಭಾರತೀಯ ಪದಕ ವಿಜೇತರು

[ಬದಲಾಯಿಸಿ]
ಪದಕ ಹೆಸರು ಒಲಿಂಪಿಕ್ ಕೂಟ ಕ್ರೀಡೆ ಸ್ಪರ್ಧೆ
2 ಬೆಳ್ಳಿ ನಾರ್ಮನ್ ಪ್ರಿಚರ್ಡ್ ೧೯೦೦ ಪ್ಯಾರಿಸ್ ಅಥ್ಲೆಟಿಕ್ಸ್ ಪುರುಷರ ೨೦೦ ಮೀಟರ್ ಓಟ
2 ಬೆಳ್ಳಿ ನಾರ್ಮನ್ ಪ್ರಿಚರ್ಡ್ ೧೯೦೦ ಪ್ಯಾರಿಸ್ ಅಥ್ಲೆಟಿಕ್ಸ್ ಪುರುಷರ ೨೦೦ ಮೀಟರ್‍ ಹರ್ಡಲ್ಸ್
1 ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೨೮ ಆಮ್‍ಸ್ಟರ್‍ಡ್ಯಾಮ್ ಹಾಕಿ ಪುರುಷರ ವಿಭಾಗ
1 ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೩೨ ಲಾಸ್ ಏಂಜಲಿಸ್ ಹಾಕಿ ಪುರುಷರ ವಿಭಾಗ
1 ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೩೬ ಬರ್ಲಿನ್ ಹಾಕಿ ಪುರುಷರ ವಿಭಾಗ
1 ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೪೮ ಲಂಡನ್ ಹಾಕಿ ಪುರುಷರ ವಿಭಾಗ
1 ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೫೨ ಹೆಲ್ಸಿಂಕಿ ಹಾಕಿ ಪುರುಷರ ವಿಭಾಗ
3 ಕಂಚು ಕೆ.ಡಿ.ಜಾಧವ್ ೧೯೫೨ ಹೆಲ್ಸಿಂಕಿ ಕುಸ್ತಿ ಪುರುಷರ ಫ್ರೀಸ್ಟೈಲ್ ಬಾಂಟಮ್‌ವೆಯ್ಟ್
1 ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೫೬ ಮೆಲ್ಬರ್ನ್ ಹಾಕಿ ಪುರುಷರ ವಿಭಾಗ
2 ಬೆಳ್ಳಿ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೬೦ ರೋಮ್ ಹಾಕಿ ಪುರುಷರ ವಿಭಾಗ
1 ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೬೪ ಟೋಕಿಯೋ ಹಾಕಿ ಪುರುಷರ ವಿಭಾಗ
3 ಕಂಚು ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೬೮ ಮೆಕ್ಸಿಕೋ ಹಾಕಿ ಪುರುಷರ ವಿಭಾಗ
3 ಕಂಚು [ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೭೨ ಮ್ಯೂನಿಚ್ ಹಾಕಿ ಪುರುಷರ ವಿಭಾಗ
1 ಚಿನ್ನ ಭಾರತದ ರಾಷ್ಟ್ರೀಯ ಹಾಕಿ ತಂಡ ೧೯೮೦ ಮಾಸ್ಕೋ ಹಾಕಿ ಪುರುಷರ ವಿಭಾಗ
3 ಕಂಚು ಲಿಯಾಂಡರ್ ಪೇಸ್ ೧೯೯೬ ಅಟ್ಲಾಂಟಾ ಟೆನ್ನಿಸ್ ಪುರುಷರ ಸಿಂಗಲ್ಸ್
3 ಕಂಚು ಕರ್ಣಂ ಮಲ್ಲೇಶ್ವರಿ ೨೦೦೦ ಸಿಡ್ನಿ ಭಾರ ಎತ್ತುವಿಕೆ ಮಹಿಳೆಯರ ೬೯ ಕೆ.ಜಿ. ವಿಭಾಗ
2 ಬೆಳ್ಳಿ ರಾಜ್ಯವರ್ಧನ್ ಸಿಂಗ್ ರಾಥೋಡ್ ೨೦೦೪ ಅಥೆನ್ಸ್ ಶೂಟಿಂಗ್ ಪುರುಷರ ಡಬಲ್ ಟ್ರ್ಯಾಪ್
1 ಚಿನ್ನ ಅಭಿನವ್ ಬಿಂದ್ರಾ ೨೦೦೮ ಬೀಜಿಂಗ್ ಶೂಟಿಂಗ್ ಪುರುಷರ ೧೦ ಮೀ. ಏರ್ ರೈಫಲ್
3 ಕಂಚು ಸುಶೀಲ್ ಕುಮಾರ್ ೨೦೦೮ ಬೀಜಿಂಗ್ ಕುಸ್ತಿ ಪುರುಷರ ಫ್ರೀಸ್ಟೈಲ್ ೬೬ ಕೆ.ಜಿ. ವಿಭಾಗ
3 ಕಂಚು ವಿಜೇಂದರ್ ಕುಮಾರ್ ೨೦೦೮ ಬೀಜಿಂಗ್ ಬಾಕ್ಸಿಂಗ್ ಪುರುಷರ ೭೫ ಕೆ.ಜಿ. ವಿಭಾಗ
ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಭಾರತ
2 ಬೆಳ್ಳಿ ವಿಜಯ್ ಕುಮಾರ್ 3 ಆಗಸ್ಟ್ 2012 ಶೂಟಿಂಗ್ ಪುರುಷರ 25 ಮೀ ವೇಗ ಫೈರ್ ಪಿಸ್ತೋಲ್
2 ಬೆಳ್ಳಿ ಸುಶೀಲ್ ಕುಮಾರ್ 12 ಆಗಸ್ಟ್ 2012 ರೆಸ್ಲಿಂಗ್ ಪುರುಷರ ಫ್ರೀಸ್ಟೈಲ್
2 ಬೆಳ್ಳಿ ಯೋಗೇಶ್ವರ್ ದತ್ 11 ಆಗಸ್ಟ್ 2012 ರೆಸ್ಲಿಂಗ್ ಪುರುಷರ ಫ್ರೀಸ್ಟೈಲ್ 60 ಕೆಜಿ
3 ಕಂಚು ಗಗನ್ ನಾರಂಗ್ 30 ಜುಲೈ2012 ಶೂಟಿಂಗ್ ಪುರುಷರ 10 ಮೀ ಏರ್ ರೈಫಲ್
3 ಕಂಚು ಸೈನಾ ನೆಹವಾಲ್ 4 ಆಗಸ್ಟ್ 2012 ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್
3 ಕಂಚು ಮೇರಿ ಕೋಮ್ 8 ಆಗಸ್ಟ್ 2012 ಬಾಕ್ಸಿಂಗ್ ಮಹಿಳೆಯರ ಫ್ಲೈತೂಕ
೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತ (9 ಚಿನ್ನ+8 ಬೆಳ್ಳಿ+11 ಕಂಚು= ಒಟ್ಟು28)
2 ಬೆಳ್ಳಿ ಪಿ.ವಿ. ಸಿಂಧು 19 ಆಗಸ್ಟ್ 2016 ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್
3 ಕಂಚು ಸಾಕ್ಷಿ ಮಲಿಕ್ 17 ಆಗಸ್ಟ್ 2016 ಕುಸ್ತಿ ಮಹಿಳೆಯರ ಫ್ರೀಸ್ಟೈಲ್,58 ಕೆಜಿ

[]

ಒಲಿಂಪಿಕ್ಸ್ ನಕಾಶೆ

[ಬದಲಾಯಿಸಿ]

https://upload.wikimedia.org/wikipedia/commons/b/b4/Winter_olympics_all_cities.PNG

ಉಲ್ಲೇಖ

[ಬದಲಾಯಿಸಿ]