ವಿಷಯಕ್ಕೆ ಹೋಗು

ಖಜುರಾಹೊ ಸ್ಮಾರಕಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯುನೆಸ್ಕೊ ವಿಶ್ವ ಪರಂಪರೆಯ ತಾಣ
Khajuraho Group of Monuments
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು
A typical temple at Khajuraho with divine couples. Note lace-like ornamentation on the major and the minor shikharas.
ಪ್ರಕಾರCultural
ಮಾನದಂಡಗಳುi, iii
ಉಲ್ಲೇಖ240
ಯುನೆಸ್ಕೊ ಪ್ರದೇಶAsia-Pacific
ದಾಖಲೆಯ ಇತಿಹಾಸ
Inscription1986 (10th ಸಮಾವೇಶ)

ಭಾರತದ ಮಧ್ಯಪ್ರದೇಶದ ಚತಾರ‍್ಪುರ್‌ ಜಿಲ್ಲೆಯಲ್ಲಿರುವ, ಆಗ್ನೆಯ ನವ ದೆಹಲಿಗೆ 620 kilometres (385 miles) ದೂರದಲ್ಲಿರುವ ಖಜುರಾಹೊದಲ್ಲಿರುವಹಿಂದಿ:खजुराहो ಖಜುರಾಹೊ ಸ್ಮಾರಕಗಳು ಭಾರತದ ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಮಧ್ಯಯುಗ ಭಾರತದ ಹಿಂದೂ ಮತ್ತು ಜೈನ ದೇವಸ್ಥಾನಗಳನ್ನು ಹೊಂದಿದೆ. ಅಲ್ಲದೆ ಇದು ಕಾಮ ಪ್ರಚೋಧಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊ ಸ್ಮಾರಕಗಳು ಯುನೆಸ್ಕೋ ಜಾಗತಿಕ ಸ್ಮಾರಕ ಪ್ರದೇಶದ ಪಟ್ಟಿಯಲ್ಲಿ ಸೇರಿದೆ. ಅಲ್ಲದೆ ಭಾರತದ "ಏಳು ಅಚ್ಚರಿಗಳ"ಲ್ಲಿ ಒಂದು ಪರಿಗಣಿಸಲ್ಪಟ್ಟಿದೆ.

ಖಜುರಾಹೊ ಎಂಬ ಹೆಸರು ಪುರಾತನ ಕಾಲದ "ಖರ್ಜೂರವಾಹಕ", ಇದು ಸಂಸ್ಕೃತದ ಶಬ್ದಗಳಾದ ಖರ್ಜೂರ = ಡೇಟ್ ಪಾಮ್ ಮರ ಮತ್ತು ವಾಹಕ = "ಹೊತ್ತೊಯ್ಯುವವ" ಇವುಗಳಿಂದ ಹುಟ್ಟಿದೆ.

ಪಟ್ಟಣ

[ಬದಲಾಯಿಸಿ]
ಖಜುರಾಹೊ ಸ್ಮಾರಕಗಳು
Khajuraho
city
Population
 (2001)
 • Total೧೯,೨೮೨

ಖಜುರಾಹೊ (ಹಿಂದಿ:खजुराहो) ಭಾರತದ ಮಧ್ಯಪ್ರದೇಶದ ಚತಾರ‍್ಪುರ್‌ ಜಿಲ್ಲೆಯಲ್ಲಿ ಇರುವ ಒಂದು ಪಟ್ಟಣವಾಗಿದ್ದು, ಭಾರತದ ರಾಜಧಾನಿ ನಗರವಾದ ನವ ದೆಹಲಿಯ 620 kilometres (385 miles) ಆಗ್ನೆಯ ಭಾಗದ ಮಧ್ಯದಲ್ಲಿದೆ.

ಭಾರತದ ಪ್ರವಾಸಿ ತಾಣಗಳಲ್ಲಿ ಅತ್ಯಂತ ಜನಪ್ರಿಯವಾದ ಖಜುರಾಹೊವು ಅತ್ಯಂತ ದೊಡ್ಡ ಪ್ರಮಾಣದ ಮಧ್ಯಯುಗದ ಹಿಂದೂ ಹಾಗೂ ಜೈನ ದೇವಸ್ಥಾನಗಳನ್ನು ಹೊಂದಿದ್ದು, ಅವುಗಳ ಕಾಮಪ್ರಚೋದಕ ಶಿಲ್ಪಕೃತಿಗಳಿಗೆ ಜನಪ್ರಿಯವಾಗಿವೆ. ಖಜುರಾಹೊ ಸ್ಮಾರಕಗಳು ಯುನೆಸ್ಕೋ ಜಾಗತಿಕ ಸ್ಮಾರಕ ಪ್ರದೇಶದ ಪಟ್ಟಿಯಲ್ಲಿ ಸೇರಿದೆ, ಮತ್ತು ಭಾರತದ "ಏಳು ಅಚ್ಚರಿಗಳ"ಲ್ಲಿ ಒಂದು ಪರಿಗಣಿಸಲ್ಪಟ್ಟಿದೆ.

ಖಜುರಾಹೊ ಹೆಸರು ಪುರಾತನವಾದ "ಖರ್ಜೂರವಾಹಕ" ದಿಂದ ಬಂದಿದ್ದು, ಸಂಸ್ಕೃತ ಶಬ್ದವಾದ ಡೇಟ್ ಪಾಮ್ ಅರ್ಥದ ಖರ್ಜೂರ ಶಬ್ದದಿಂದ ಬಂದಿದೆ.

ಭೌಗೋಳಿಕತೆ

[ಬದಲಾಯಿಸಿ]

ಖಜುರಾಹೊ 24°51′N 79°56′E / 24.85°N 79.93°E / 24.85; 79.93.[] ರಲ್ಲಿದ್ದು ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ 295 ಮೀಟರ್ (967 ಅಡಿ) ಎತ್ತರದಲ್ಲಿದೆ.

ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]

As of 2001ಭಾರತದ ಜನಗಣತಿಯ [] ಪ್ರಕಾರ 160,245ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಈ ಜನಸಂಖ್ಯೆಯಲ್ಲಿ ಶೇಕಡಾ 52ರಷ್ಟು ಪುರುಷರು ಮತ್ತು ಶೇಕಡಾ 48ರಷ್ಟು ಸ್ತ್ರೀಯರು ಇದ್ದಾರೆ. ಖಜುರಾಹೊ ಶೇಕಡ 53ರಷ್ಟು ಸಾಕ್ಷರತೆಯನ್ನು ಹೊಂದಿದ್ದು, ಒಟ್ಟಾರೆ ರಾಷ್ಟ್ರದ ಶೇಕಡಾ 5.5ರಷ್ಟಕ್ಕಿಂತ ಕಡಿಮೆ ಇದೆ. ಶೇಕಡಾ 62ರಷ್ಟು ಪುರುಷರು ಮತ್ತು ಶೇಕಡಾ 43ರಷ್ಟು ಮಹಿಳೆಯರು ಸಾಕ್ಷರತೆಯನ್ನು ಹೊಂದಿದ್ದಾರೆ. ಖಜುರಾಹೊದ ಜನಸಂಖ್ಯೆಯಲ್ಲಿ ಶೇಕಡಾ 10ರಷ್ಟು ಆರು ವರ್ಷದ ಕೆಳಗಿನ ಮಕ್ಕಳು.

ಇತಿಹಾಸ

[ಬದಲಾಯಿಸಿ]

27ನೇ ಶತಮಾನದ ಕಲಿಯುಗದಲ್ಲಿ (500-400 ಬಿಸಿಇ)[when?] ಮ್ಲೆಚ್ಛ ದಾಳಿಕೋರರು ಅಥವಾ ದರೋಡೆಕೋರರು ಉತ್ತರ ಭಾರತದತ್ತ ದಾಳಿ ಮಾಡಿದರು.[ಸಾಕ್ಷ್ಯಾಧಾರ ಬೇಕಾಗಿದೆ] ಈ ಸಂದರ್ಭದಲ್ಲಿ ಪೂರ್ವಭಾಗದಲ್ಲಿದ್ದ ಕೆಲ ಬರ್ಗುಜಾರ್ ರಜಪೂಥರು ಮಧ್ಯಭಾರತದತ್ತ ವಲಸೆ ಬಂದರು. ಇವರು ರಾಜಸ್ಥಾನ ಈಶಾನ್ಯ ಭಾಗಗಳನ್ನು ಆಳಿದರು. ಅವರ ಆಡಳಿತಾವಧಿಯಲ್ಲಿದ್ದಾಗ ಇದನ್ನು ಧುಂಧಾರ್ ಎಂದು ಕರೆಯಾಗಿತ್ತು. ಮತ್ತು ಇದನ್ನು ಹಳೆಕಾಲದಲ್ಲಿ ಧುಂಧೇಲ್ ಅಥವಾ ಧುಂಧೇಲಾ ಎಂದು ಕರೆಯಲಾಗುತ್ತಿತ್ತು. ಬುಂದೇಲರು ಅಥವಾ ಚಂಡೇಲರು ಎಂದು ನಂತರ ಅವರು ತಮ್ಮನ್ನು ತಾವೇ ಕರೆದುಕೊಂಡರು. ಅಧಿಕಾರ ವರ್ಗದಲ್ಲಿದ್ದವರ ಗೋತ್ರವು ಕಾಶ್ಯಪವಾಗಿದ್ದರೆ, ಅವರನ್ನು ನಿಖರವಾಗಿ ಬರ್ಗುಜಾರ್‌‍ಗಳೆಂದು ಹೇಳಬಹುದಾಗಿತ್ತು. ಅವರು ಉತ್ತರ ಭಾರತದ ಗುಜಾರಾ-ಪ್ರತಿಹರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದರು. ಕ್ರಿ.ಶ. 500ರಿಂದ 1300ರ ವರೆಗೆ ಆಳ್ವಿಕೆ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಸ್ಮಾರಕಗಳನ್ನು ಅವರು ನಿರ್ಮಿಸಿದರು. ಬರ್ಗುಜಾ‌ರ್‌ರರು ಕಲಿಂಜರ್ ಕೋಟೆ ಮತ್ತು ನೀಲಕಂಠ ಮಹಾದೇವ್ ದೇವಸ್ಥಾನವನ್ನು ಸಹ ಕಟ್ಟಿದರು. ಇದನ್ನು ಶಿವನ ಭಕ್ತರಾಗಿ ಸಾರಿಸ್ಕಾ ರಾಷ್ಟ್ರೀಯ ಉದ್ಯಾನ ಮತ್ತು ಬರೋಲಿಯಲ್ಲಿರುವ ದೇವಸ್ಥಾನಗಳಂತೆಯೇ ಕಟ್ಟಿಸಿದರು.

ಈ ನಗರವು ಚಂಡೇಲಾ ರಜಪೂತರ ಸಾಂಸ್ಕೃತಿಕ ರಾಜಧಾನಿಯಾಗಿತ್ತು. 10-12ನೇ ಶತಮಾನದವರೆಗೆ ಈ ಭಾಗವನ್ನು ಹಿಂದೂ ರಾಜಮನೆತನದವರು ಆಳಿದ್ದರು. ಕಲಿಂಜರ್‌ ಇದು ಚಂಡೇಲಾರ ರಾಜಕೀಯ ರಾಜಧಾನಿಯಾಗಿತ್ತು. ಕ್ರಿ.ಶ, ನಿರ್ಮಾಣಕ್ಕೆ 200 ವರ್ಷಗಳ ಕಾಲ ಸಮಯ ತೆಗೆದುಕೊಂಡ ಕಜುರಾಹೋ ದೇವಸ್ಥಾನವು ಕ್ರಿ.ಶ. 950ರಿಂದ 1150ರ ಕಾಲದಲ್ಲಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಚಂಡೇಲಾ ರಾಜಧಾನಿಯು ಮಹೋಬಾಕ್ಕೆ ವರ್ಗಾಯಿಸಲ್ಪಟ್ಟಿತು. ಆದರೆ ಕಜರಾಹೋ ಸ್ವಲ್ಪದಿನದ ಮಟ್ಟಿಗೆ ಅಲ್ಲಿಯೇ ತನ್ನ ವೈಭವನ್ನು ಮುಂದುವರಿಸಿತು. ಕಜರಾಹೋದಲ್ಲಿ ಕೋಟೆ ಇರಲಿಲ್ಲ. ಏಕೆಂದರೆ ಚಂಡೇಲಾ ರಾಜರು ಈ ಸಾಂಸ್ಕೃತಿಕ ರಾಜದಾನಿಯಲ್ಲಿ ಉಳಿಯಲಿಲ್ಲ.

ಈ ಎಲ್ಲ ಪ್ರದೇಶದ ಸುತ್ತಲೂ ಗೋಡೆಗಳಿಂದ ಆವೃತ್ತವಾಗಿದ್ದು, ಎಂಟು ಬಾಗಿಲನ್ನು ಹೊಂದಿದೆ. ಎರಡೂ ಪಕ್ಕದಲ್ಲಿ ತಾಳೆ ಜಾತಿಯ ಚಿನ್ನದ ಗಿಡಗಳನ್ನು ಇಡಲಾಗಿತ್ತು. ಅವರು ಈ ಮೊದಲು ಸುಮಾರು 80 ಹಿಂದೂ ದೇವಸ್ಥಾನಗಳನ್ನು ಹೊಂದಿದ್ದರು. ಅವುಗಳಲ್ಲಿ ಈಗ 25 ದೇವಸ್ಥಾನಗಳು ಈಗ ಕಾಪಾಡುವ ಸ್ಥಿತಿಯಲ್ಲಿವೆ. ಇವು ಈ ಪ್ರದೇಶಗಳಲ್ಲಿ ಕಾಣಸಿಗುತ್ತಿವೆ.20 square kilometres (8 sq mi)

ಈಗ ಈ ದೇವಸ್ಥಾನಗಳು ಭಾರತೀಯ ಶಿಲ್ಪಕಲೆಗೆ ಉತ್ತಮ ಉದಾಹರೆಯಾಗಿದ್ದು, ಇವುಗಳಲ್ಲಿ ಲೈಂಗಿಕ ಜೀವನದ ಬಗ್ಗೆ ಕೆತ್ತನೆ ಮಾಡಲಾಗಿದೆ. ಇದು ಮಧ್ಯಯುಗದ ಕಾಲದಲ್ಲಿ ತುಂಬ ಜನಪ್ರಿಯತೆ ಪಡೆದಿತ್ತು. ಕಜರಾಹೋ ಗ್ರಾಮದಲ್ಲಿ ವಾಸಿಸುವ ಸ್ಥಳೀಯರಿಗೆ ಈ ದೇವಾಸ್ಥಾನಗಳ ಬಗ್ಗೆ ಉತ್ತಮ ಅರಿವಿದ್ದು, ಅದರ ನಿರ್ವಣಗೂ ಸಹಕರಿಸಿದ್ದರು. 19ನೇ ಶತಮಾನದಲ್ಲಿ ಅವರು ಬ್ರಿಟಿಷ್ ರಿಂದ ಗುರುತಿಸಲ್ಪಟ್ಟರು. ಏಕೆಂದರೆ ಇಲ್ಲಿರುವ ಕಾಡು ಈ ದೇವಸ್ಥಾನಕ್ಕೆ ಸಂಬಂಧಪಟ್ಟದ್ದಾಗಿತ್ತು.

ಶಿಲ್ಪಕಲೆ

[ಬದಲಾಯಿಸಿ]

ಈ ದೇವಸ್ಥಾನಗಳು ಮೂರು ಭೌಗೋಳಿಕ ಗುಂಪುಗಳಾಗಿ ವಿಭಾಗಸಲ್ಪಟ್ಟಿದೆ: ಅವುಗಳೆಂದರೆ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಭಾಗಗಳಾಗಿವೆ.

ಕಜುರಾಹೋ ದೇವಸ್ಥಾನವು ಮರಳು ಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಕಟ್ಟಡ ವಿನ್ಯಾಸಗಾರರು ಇದಕ್ಕೆ ಗಾರೆಯನ್ನು ಮಾಡದೇ ಕಲ್ಲುಗಳನ್ನು ಸಂದುಗಳಲ್ಲಿ ಸೇರಿಸಿ ಕೂರಿಸಲಾಗಿದೆ. ಅವರು ಈ ಮೂಲಕ ಈ ಪ್ರದೇಶದ ಘನತೆಯನ್ನು ಹೆಚ್ಚಿಸಿದರು. ಈ ರೀತಿಯಾದ ಕಟ್ಟಡ ನಿರ್ಮಾಣಕ್ಕೆ ನಿಖರವಾದ ಕೊಂಡಿ ಬೇಕಾಗುತ್ತದೆ. ಆಧಾರಸ್ತಂಭ ಮತ್ತು ತೊಲೆಗಳ ನಿರ್ಮಾಣಕ್ಕಾಗಿ 20 ಟನ್ ತೂಕದ ಬೃಹತ್ ಶಿಲೆಯನ್ನು ಉಪಯೋಗಿಸಲಾಗಿತ್ತು.[]

ಖಜುರಾಹೊದಲ್ಲಿಯ ಲಕ್ಷ್ಮಣ ದೇವಸ್ಥಾನ, ಪಂಚಾಯತನ ದೇವಸ್ಥಾನನಾಲ್ಕು ದೇವಸ್ಥಾನಗಳಲ್ಲಿ ಎರಡನ್ನು ಕಾಣಬಹುದಾಗಿದೆ.ಇನ್ನೊಂದು ನೋಟ

ಈ ಕಜುರಾಹೋ ದೇವಸ್ಥಾನಗಳ ಶಿಲ್ಪಕಲೆಗಳು ನೈಜತೆಯನ್ನು ಹೊಂದಿದೆ ಮತ್ತು ಇಂದಿಗೂ ಇವುಗಳ ಕುರಿತಾದ ಅಧ್ಯಯನ ನಡೆಯುತ್ತಿದೆ.

ಭಾರತದ ಪಿಲಾನಿಯಲ್ಲಿರುವ ಬಿರ್ಲಾ ಇನ್‌‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್‌‍ನ ಆವರಣದಲ್ಲಿರುವ ಸರಸ್ವತಿ ದೇವಸ್ಥಾನವನ್ನು ಕಜುರಾಹೋ ದೇವಸ್ಥಾನದ ಶೈಲಿಯಲ್ಲೇ ಕಟ್ಟಲಾಗಿದೆ.

ಕಾಲಘಟ್ಟ

[ಬದಲಾಯಿಸಿ]

ಈ ಮೇಲಿನ ದೇವಸ್ಥಾನಗಳ ಐತಿಹಾಸಿಕ ಘಟನಾವಳಿಗಳನ್ನು ಡಾ. ಕನ್ಹೈಯಲಾಲ್ ಅಗರ್ ವಾಲ್ ಅವರ ಬರವಣಿಗೆಯಂತೆ ತೋರಿಸಲಾಗಿದೆ.[]

ಆಧುನಿಕ ಹೆಸರುಗಳು ೧ 3 5
ಮೂಲ ದೇವರು ಟಿಪ್ಪಣಿಗಳು
ಚೌಸತ್‌‍ ಯೋಗಿನಿ 64 ಯೋಗಿನಿಯರು ಪೂರ್ವ 9ನೇ ಶತಮಾನ.
2 ಬ್ರಹ್ಮಾ ಬ್ರಹ್ಮಾ ಪೂರ್ವ ಗುಂಪು
ಲಾಲ್‌ಗುಣ್ ಮಹಾದೇವ ಶಿವಾ ಆರೋಪಿತ 2ನೇ
4 ಮಾತಂಗೇಶ್ವರ ಶಿವಾ ಕ್ರಿಯಾಶೀಲ ಆರಾಧನೆ
ವರಾಹ ವರಾಹ
6 ಲಕ್ಷ್ಮಣ ವೈಕುಂಠ ವಿಷ್ಣು ಲಕ್ಷವರ್ಮಾ ಶಾಸನ
7 ಪಾರ್ಶ್ವನಾಥ ಆದಿನಾಥ 954 ಕ್ರಿ.ಶ ಪಾಹಿಲಿ ಶಾಸನ, ಜೈನ ಮೂಲ
8 ವಿಶ್ವನಾಥ ಶಿವಾ 1059ರ ದಂಗೆಯ ಶಾಸನ
9 ದೇವಿ ಜಗದಂಬೆ ಪ್ರಾರಂಭದಲ್ಲಿ ವಿಷ್ಣು ಆದರೆ ಈಗ ಪಾರ್ವತಿ
10 ಚಿತ್ರಗುಪ್ತ ಸೂರ್ಯ
11 ಕಂಡರಿಯ ಮಹಾದೇವ ಶಿವಾ ಅತೀ ದೊಡ್ಡ ಪ್ರಾಂತ
12 ವಾಮನ ವಾಮನ ಪೂರ್ವ ಗುಂಪು
13 ಆದಿನಾಥ ಜಿನಾ ಜೈನ ಮೂಲ
14 ಜಾವರಿ ವಿಷ್ಣು ಪೂರ್ವ ಗುಂಪು
15 ಚತುರ್ಭುಜ ವಿಷ್ಣು ದಕ್ಷಿಣದ
16 ದೂಲದೇವ್ ಶಿವಾ ದಕ್ಷಿಣ ಕೊನೆ
17 ಗಂಟೆ ಜಿನಾ ಕೇವಲ ಕೆಲವು ಕಾಲಮ್‌ಗಳು ಮಾತ್ರ ಉಳಿದುಕೊಂಡಿವೆ.

ಶಿಲ್ಪಗಳು ಹಾಗೂ ಕೆತ್ತನೆಗಳು

[ಬದಲಾಯಿಸಿ]

ಖಜುರಾಹೊ ದೇವಾಲಯಗಳು ದೇವಾಲಯದ ಒಳಗೆ ಅಥವಾ ದೇವರ ವಿಗ್ರಹಗಳ ಸಮೀಪದಲ್ಲಿ ಯಾವುದೇ ಲೈಂಗಿಕ ಸಂಬಂಧೀ ಅಥವಾ ಶೃಂಗಾರಕ್ಕೆ ಸಂಬಂಧಿಸಿದ ಕೆತ್ತನೆಗಳನ್ನು ಹೊಂದಿಲ್ಲವಾದರೂ ಕೆಲವು ಕೆತ್ತನೆಗಳು ಮಾತ್ರ ಶೃಂಗಾರ ಕಲೆಗಳನ್ನೊಳಗೊಂಡಿವೆ. ಅಲ್ಲದೇ, ಈ ದೇವಾಲಯಗಳಲ್ಲಿ ಎರಡು ಸ್ತರಗಳ ಗೋಡೆಗಳನ್ನು ಹೊಂದಿರುವ ಕೆಲವು ದೇವಾಲಯಗಳು ತನ್ನ ಒಳಗೋಡೆಯ ಹೊರ ಮೇಲ್ಮೈಯಲ್ಲಿ ಸಣ್ಣ ಸಣ್ಣ ಶೃಂಗಾರಮಯ ಕೆತ್ತನೆಗಳನ್ನು ಹೊಂದಿವೆ. ಇಂತಹ ಶೃಂಗಾರಮಯ ಕೆತ್ತನೆಗಳ ಹಲವು ವ್ಯಾಖ್ಯಾನಗಳು ಇಲ್ಲಿವೆ. ದೇವರನ್ನು ನೋಡಬಯಸುವವರು ತಮ್ಮ ಲೈಂಗಿಕ ಕಾಮನೆಗಳನ್ನು ಮತ್ತು ದೈಹಿಕ ಶರೀರದ ಇತರ ಗುಣಸ್ವಭಾವಗಳನ್ನು ದೇವಾಲಯದ ಹೊರಗೇ ಬಿಟ್ಟು ಒಳಬರಬೇಕು ಎಂಬುದನ್ನು ಈ ಕೆತ್ತನೆಗಳು ಅರ್ಥವತ್ತಾಗಿ ವರ್ಣಿಸಿವೆ. ದೈವತ್ವವನ್ನು ಹೊತ್ತ ಈ ದೇವಾಲಯದ ದೇವರ ಮೂರ್ತಿಗಳು ಲೈಂಗಿಕ ಕಾಮನೆಗಳು ಮತ್ತು ಇತರ ಶಾರೀರಿಕ ಗುಣಧರ್ಮಗಳ ಯಾವುದೇ ಪ್ರಭಾವವನ್ನು ಹೊಂದಿರದ "ಆತ್ಮ" ದಷ್ಟೇ ಪರಿಶುದ್ಧವಾಗಿವೆ ಎಂಬುದನ್ನೂ ಸಹ ತೋರಿಸುತ್ತವೆ. ಇಲ್ಲಿರುವ ಶಿಲ್ಪಗಳು ತಾಂತ್ರಿಕ ಲೈಂಗಿಕ ತಂತ್ರವನ್ನು ಹೇಳುತ್ತವೆ ಎಂದೂ ಕೂಡ ಹೇಳಲಾಗಿದೆ. ಇದೇ ವೇಳೆ, ದೇವಾಲಯದ ಹೊರಭಾಗದ ಬಾಗುವಿಕೆ ಮತ್ತು ಕೆತ್ತನೆ ಕಲೆಗಳು ಮಾನವರನ್ನು, ಮಾನವ ದೇಹಗಳನ್ನು ಮತ್ತು ಮನುಷ್ಯ ದೇಹದಲ್ಲಿ ಉಂಟಾಗುವ ಬದಲಾವಣೆಗಳನ್ನು ಅಲ್ಲದೆ, ಜೀವನದ ವಾಸ್ತವವನ್ನು ಚೆನ್ನಾಗಿ ಚಿತ್ರಿಸುವ ಅದ್ಭುತ ಕೆತ್ತನೆಗಳನ್ನೊಳಗೊಂಡಿವೆ. ಕೆಲವು 10% ರಷ್ಟು ಕೆತ್ತನೆಗಳು ದೇವರನ್ನು ತೋರಿಸದೇ ಕೇವಲ ಜನರ ನಡುವಿನ ಲೈಂಗಿಕ ಚಟುವಟಿಕೆಗಳನ್ನೇ ವರ್ಣಿಸಿದ್ದು ಲೈಂಗಿಕತೆಯನ್ನೇ ವಸ್ತುವನ್ನಾಗಿ ಚಿತ್ರಿಸಲ್ಪಟ್ಟಿವೆ. ಉಳಿದವುಗಳು ಆಗಿನ ಕಾಲದ ಸಾಮಾನ್ಯ ಭಾರತೀಯನ ದೈನಂದಿನ ಜೀವನದ ಚಿತ್ರಣವನ್ನು ಮತ್ತು ಇತರ ಜೀವಿಗಳ ಹಲವು ಚಟುವಟಿಕೆಗಳನ್ನು ವಿವರಿಸುತ್ತವೆ. ಉದಾಹರಣೆಗೆ, ಅಲಂಕರಿಸಿಕೊಳ್ಳುತ್ತಿರುವ ಮಹಿಳೆಯರು, ಸಂಗೀತಗಾರರು, ಕುಂಬಾರರು, ರೈತರು ಮತ್ತು ಇತರ ಜನಪದರನ್ನು ಚಿತ್ರಿಸಿವೆ. ಆ ಲೌಕಿಕ ಚಿತ್ರಣಗಳು ದೇವರ ವಿಗ್ರಹಗಳಿಗಿಂತ ತುಸು ದೂರದಲ್ಲಿವೆ. ಒಂದು ಸಾಮಾನ್ಯ ತಪ್ಪು ಕಲ್ಪನೆಯೆಂದರೆ, ಹಳೆಯ ರಚನೆಗಳು ಮತ್ತು ಕೆತ್ತನೆಗಳಿರುವ ಖಜುರಾಹೊ ಒಂದು "ದೇವಾಲಯ"ವಾಗಿರುವುದರಿಂದ ಈ ಕೆತ್ತನೆಗಳು ದೇವರುಗಳ ನಡುವಿನ ಲೈಂಗಿಕತೆಯನ್ನು ವರ್ಣಿಸಿವೆ ಎಂಬುದು.[]

ಈ ಕೆತ್ತನೆಗಳ ಬಗ್ಗೆ ಇನ್ನೊಂದು ದೃಷ್ಟಿಕೋನವನ್ನು ಜೇಮ್ಸ್ ಮ್ಯಾಕ್‌ಕನ್ನಾಷ್‌‍ ನೀಡಿದ್ದಾರೆ. ತಮ್ಮ ಕಾಮಸೂತ್ರ ದ ಚರಿತ್ರೆಯಲ್ಲಿ ಮ್ಯಾಕ್‌ಕನ್ನಾಷ್ "ತೀವ್ರ ಆಸಕ್ತಿ ಹುಟ್ಟಿಸುವ ಮಧುರವಾದ ಕೆತ್ತನೆಗಳಲ್ಲಿ ಶೇಕಡಾ 10ರಷ್ಟು ಖಜುರಾಹೊ ಶಿಲ್ಪಗಳು ಶೃಂಗಾರಕಲೆಯ ಪರಮಾವಧಿಯಾಗಿವೆ" ಎಂದು ವಿವರಿಸಿದ್ದಾರೆ : "ಮನಮೋಹಕವಾಗಿ ರಚಿಸಿದ ಗೋಡೆಯ ಹೊರಭಾಗದ ಅಂಕಣದಲ್ಲಿ ಬಳುಕುವ, ತುಂಬಿದ ನಿತಂಬ ಮತ್ತು ಎತ್ತರವಾದ ಸ್ತನಗಳುಳ್ಳ ಸುಂದರ ತರುಣಿಯರು ತಮ್ಮ ಸಮೃದ್ಧ ಸುಂದರ ಆಕೃತಿಯ ಆಭರಣಾಲಂಕೃತ ಶರೀರವನ್ನು ಅಮೋಘವಾಗಿ ಪ್ರದರ್ಶಿಸಿದ್ದಾರೆ. ಈ ತುಂಬು ಮೈಯ ಅಪ್ಸರೆಯರು ಶಿಲೆಯ ಮೇಲ್ಮೈ ಮೇಲೆಲ್ಲಾ ತಮ್ಮ ಮುಖಕ್ಕೆ ಪ್ರಸಾದನಗಳನ್ನು ಲೇಪಿಸುತ್ತಿರುವ, ತಮ್ಮ ಕೇಶರಾಶಿಯನ್ನು ಶುಚಿಗೊಳಿಸುತ್ತಿರುವ, ಆಟವಾಡುತ್ತಿರುವ, ನರ್ತಿಸುತ್ತಿರುವ ಮತ್ತು ತಮ್ಮ ನಡುಕಟ್ಟನ್ನು ಎಡೆಬಿಡದೆ ನಿರಂತರವಾಗಿ ತೆರೆದು ಮತ್ತೆ ಕಟ್ಟುತ್ತಿರುವ ವಿವಿಧ ಭಂಗಿಗಳ ಮೂಲಕ ಭೋಗವಿಲಾಸೀ ಸ್ವೇಚ್ಛಾಜೀವನವನ್ನು ನಡೆಸುತ್ತಿದ್ದಾರೆ.ಈ ಸ್ವರ್ಗಸದೃಶ ಸುಂದರ ಅಪ್ಸರೆಯರ ಪಕ್ಕದಲ್ಲೇ ಒತ್ತೊತ್ತಾಗಿ ದಟ್ಟವಾದ ಗೃಧ್ರ ಸಿಂಹಗಳ ಸಾಲು, ಕಾಪಾಡುವ ದೇವರ ಮೂರ್ತಿಗಳು ಮತ್ತು ಸುಪ್ರಸಿದ್ಧವಾದ, ಬೆಸೆಯಲ್ಪಟ್ಟ ಮೈಥುನ ಗಳ ಅಥವಾ ಪ್ರೇಮಿಸುತ್ತಿರುವ ಜೋಡಿಗಳೂ ರಾರಾಜಿಸುತ್ತಿವೆ"

ಈ ಕೆತ್ತನೆಗಳ ಲೈಂಗಿಕ ಸ್ವರೂಪವು ಪ್ರಸ್ತುತ ಕ್ಷೇತ್ರವನ್ನು "ಕಾಮಸೂತ್ರ ದೇವಾಲಯ" ಎಂದು ಗುರುತಿಸುವಂತೆ ಪ್ರೇರೇಪಿಸಿದೆ. ಇವುಗಳು ಅತೀ ಸೂಕ್ಷ್ಮವಾಗಿ ವಿವರಿಸಿದ ಭಂಗಿಗಳನ್ನು ಸಚಿತ್ರವಾಗಿ ಉಲ್ಲೇಖಿಸುವುದಿಲ್ಲ. ಅಲ್ಲದೇ ಇವುಗಳು ವಾತ್ಸಾಯನನ ಪ್ರಸಿದ್ಧ ಕಾಮಸೂತ್ರಗಳ ತತ್ವಚಿಂತನೆಗಳನ್ನೂ ಪ್ರದರ್ಶಿಸುವುದಿಲ್ಲ. "ಭಾರೀ ಪ್ರಮಾಣದ ಅನಿವರ್ಚನೀಯ ಮೋಹಕತೆಯೊಂದಿಗೆ ದೈವಿಕ ತಂತ್ರಶಾಸ್ತ್ರ ಮತ್ತು ಫಲವತ್ತತೆ, ಸಮೃದ್ಧತೆಯ ಅಧ್ಬುತ ಸಂಯೋಗದ ಕಲಾಕೃತಿ"ಗಳಾಗಿ ಈ ಕೆತ್ತನೆಗಳು ಮಾನವರ ಜನ್ಮ ನೀಡುವ (ಸಂತಾನೋತ್ಪತ್ತಿ) ಪ್ರಕ್ರಿಯೆಯನ್ನು ಮಾತ್ರ ನಿರೂಪಿಸುವುದಕ್ಕಿಂತ ಹೆಚ್ಚಾಗಿ ಭೋಗಾಸಕ್ತ ಜೀವನವನ್ನು ನಿರೂಪಿಸುತ್ತವೆ ಎಂಬ ಸಾಕ್ಷ್ಯಸಹಿತ ಆಧಾರವನ್ನು ಹುಸಿಗೊಳಿಸಿದೆ.

ಭವಿಷ್ಯೋದ್ಧೇಶದಿಂದ ಕಡೆದ ಈ ಕೆತ್ತನೆಗಳು ಇತರರಿಗೆ ಕೇಡನ್ನೆಣಿಸುವ ಸ್ವಭಾವವನ್ನು ಶಮನಗೊಳಿಸಲು ವಿನ್ಯಾಸಗೊಳಿಸಲಾದ "ಸಾಂಕೇತಿಕ-ಮನೋಜ್ಞ ರೇಖಾಕೃತಿಗಳು ಅಥವಾ ಯಂತ್ರಗಳು ". ಸ್ವಭಾವ ಸಹಜ ನೈಸರ್ಗಿಕ ನಿಯಮಕ್ಕಿಂತ ಹೆಚ್ಚಾಗಿ ಸುಸಂಸ್ಕೃತ ಕಲಾತ್ಮಕ ಇಂದ್ರಿಯಾತೀತ ಪುರುಷತ್ವವನ್ನು ಒಳಗೊಂಡ ಲೈಂಗಿಕ ಚಿತ್ರಗಳು ಪುರುಷತ್ವವನ್ನು ಪ್ರತಿನಿಧಿಸಿದ್ದು ಪುರುಷನು ಲೋಕದಲ್ಲಿ ಶಕ್ತಿಶಾಲಿ ಪ್ರಭುವಾಗಿದ್ದಾನೆ ಎಂಬುದನ್ನು ಈ ಅಲಂಕಾರ ವ್ಯಕ್ತಪಡಿಸುತ್ತವೆ.[]

ದೈವಿಕ ತಂತ್ರಶಾಸ್ತ್ರದ ಸಂಪ್ರದಾಯಗಳು ಸ್ವೀಕರಿಸಲ್ಪಟ್ಟ 950 ಮತ್ತು 1150ರ ಮಧ್ಯಭಾಗದಲ್ಲಿ ಚಾಂದೇಲ ಸಾರ್ವಭೌಮರು ಈ ದೇವಾಲಯಗಳನ್ನು ನಿರ್ಮಿಸಿದರು. ಹಿಂದಿನ ಕಾಲದಲ್ಲಿ ಮುಘಲರ ವಿಜಯೋತ್ಸವಕ್ಕಿಂತ ಮೊದಲು ಆಶ್ರಮಗಳಲ್ಲಿ ವಾಸಿಸುತ್ತಿರುವ ಹುಡುಗರು ತಾವು ಪುರುಷತ್ವ ಪಡೆಯುವವರೆಗೆ ಬ್ರಹ್ಮಚರ್ಯ ವನ್ನು ಪಾಲಿಸುತ್ತಿದ್ದರು. ಇಲ್ಲಿ ಇವರಿಗೆ ಪ್ರಪಂಚದ ಬಗೆಗಿನ ಜ್ಞಾನವನ್ನು ಪಡೆಯುವಂತೆ ಅವಕಾಶ ಒದಗಿಸಲಾಗುತ್ತಿದ್ದು ಈ ಕೆತ್ತನೆಗಳನ್ನು ಪರೀಕ್ಷಿಸುವ ಮೂಲಕ ಮತ್ತು ಇವುಗಳಲ್ಲಿ ಚಿತ್ರಿಸಿದ ಪ್ರಾಪಂಚಿಕ ಭೋಗಾಸಕ್ತಿಯನ್ನು ಅಭ್ಯಸಿಸುವ ಮೂಲಕ ಇವರನ್ನು ಪರಿಪೂರ್ಣ ಗೃಹಸ್ಥರನ್ನಾಗಿ ತಯಾರುಗೊಳಿಸಲಾಗುತ್ತಿತ್ತು.

ಖಜುರಾಹೊ ಅಲೆಕ್ಸ್ ಈವನ್ಸ್‌ನಲ್ಲಿನ ಐತಿಹಾಸಿಕ ದೂರದರ್ಶನ ವಾಹಿನಿಗಾಗಿ "ಕಣ್ಮರೆಯಾದ ಜಗತ್ತುಗಳು" ಎಂಬ ಕಾರ್ಯಕ್ರಮವನ್ನು ಧ್ವನಿ ಮುದ್ರಿಸುತ್ತಿರುವ ಸಂದರ್ಭದಲ್ಲಿ ಸಮಕಾಲೀನ ಕಲ್ಲುಕುಟಿಗ ಮತ್ತು ಶಿಲ್ಪಿಯೋರ್ವನು ತನ್ನ ವ್ಯವಹಾರಕ್ಕನುಗುಣವಾಗಿ ಸಲಕರಣೆಗಳ ಗುರುತುಗಳು ಮತ್ತು ಇಂತಹ ಅದ್ಭುತವಾದ ಶಿಲ್ಪಕಲಾನೈಪುಣ್ಯತೆಯನ್ನು ಹೊಂದಿದ ಈ ಕೆತ್ತನೆಗಳ ರಚನಾ ತಂತ್ರಗಳನ್ನು ಪರೀಕ್ಷಿಸಿ ತನ್ನ ಪರಿಣತ ಅಭಿಪ್ರಾಯವನ್ನು ನೀಡಿದನು. ಇದಕ್ಕಾಗಿ ಅದೆಷ್ಟು ಕೆಲಸ ಪ್ರಮಾಣದ ನಡೆದಿರಬಹುದು ಎಂಬುದರ ಬಗ್ಗೆ ಒಂದು ಕರಡು ಕಲ್ಪನೆಯನ್ನು ಅಭಿವೃದ್ಧಿಪಡಿಸಲು ಇವನು ಸುಮಾರು ನಾಲ್ಕು ಅಡಿ ಎತ್ತರದ ಕಲ್ಲಿನಲ್ಲಿ ಒಂದು ಶಿಲ್ಪವನ್ನು ಸಹಾ ರಚಿಸಿದ್ದನು.[] ಇದನ್ನು ನಿರ್ಮಿಸಲು ಈತನಿಗೆ ಸುಮಾರು 60 ದಿನಗಳು ಬೇಕಾಗಿದ್ದವು. ರೋಜರ್ ಹಾಪ್ಕಿನ್ಸ್ ಮತ್ತು ಮಾರ್ಕ್ ಲೆನ್ಹರ್ ಕೂಡಾ ಕಲ್ಲುಗಣಿಗಳಲ್ಲಿನ ಜಲಜಶಿಲೆಗಳ ಮೇಲೆ ಪರೀಕ್ಷೆ ನಡೆಸಿದ್ದು, ಸುಮಾರು 400 ಟನ್ನುಗಳಷ್ಟು ಶಿಲೆಗಳನ್ನು ಗಣಿಗಳಿಂದ ಹೊರತೆಗೆಯಲು ಇವರು 12 ಗಣಿಕಾರ್ಮಿಕರನ್ನು 22 ದಿನಗಳ ಕಾಲ ಬಳಸಿದ್ದರು.[] ಈ ದೇವಸ್ಥಾನಗಳ ನಿರ್ಮಾಣಕ್ಕೆ ನೂರಾರು ನುರಿತ ಶಿಲ್ಪಕಾರರನ್ನು ಬಳಸಿಕೊಳ್ಳಲಾಗಿದೆ.

ಭೌಗೋಳಿಕತೆ

[ಬದಲಾಯಿಸಿ]

ಖಜುರಾಹೊ ದೇವಾಲಯಗಳು ಇಂದು ಉದ್ಯಾನ ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟಿವೆ. 1947ರಲ್ಲಿ ಬ್ರಿಟಿಷರಿಂದ ತನ್ನ ಸ್ವಾತಂತ್ರ್ಯವನ್ನು ಭಾರತವು ಪಡೆದಾಗ ಈ ಭೂದೃಶ್ಯವು ಅರೆ-ಮರುಭೂಮಿ ಮತ್ತು ಕುರುಚಲು ಪೊದೆಗಳನ್ನು ಹೊಂದಿದ್ದ ಭೂಮಿಯಾಗಿತ್ತು. ಪ್ರಾಚೀನ ವಸ್ತು ಸಂಶೋಧನೆಗೆ ಸಂಬಂಧಿಸುವಂತಿದ್ದ ಈ ಉದ್ಯಾನವನವು ಈಗ ಹುಲ್ಲುಮೆದೆಗಳಿಂದ ಕೂಡಿದ್ದು ದಟ್ಟವಾದ ಗುಲಾಬಿಹೂವುಗಳು ಮತ್ತು ಅಲಂಕಾರಿಕ ವೃಕ್ಷಗಳನ್ನು ಹೊಂದಿದ್ದು ಇಂಗ್ಲಿಷರ ಸಾರ್ವಜನಿಕ ಉದ್ಯಾನವನದ ಲಕ್ಷಣಗಳನ್ನು ಹೊಂದಿವೆ. ಸಂದರ್ಶಕರಿಂದ ಇದು ಪ್ರಸಿದ್ಧವಾಗಿರಬಹುದು ಆದರೆ ಇದು ದೇವಾಲಯಗಳು ನಿರ್ಮಿಸಲ್ಪಟ್ಟ ಆ ಕಾಲದ ಚಾರಿತ್ರಿಕ ಭೂದೃಶ್ಯಗಳೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ.

ಪುರಾತನ ಕುರುಹುಳ್ಳ ಭೂಪ್ರದೇಶಗಳ ಸಂಗ್ರಹಶಾಸ್ತ್ರವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಪಠ್ಯಕ್ರಮವನ್ನಾಗಿ ಅಳವಡಿಸಿ ಅದನ್ನು ಅಭಿವೃದ್ಧಿಗೊಳಿಸಿರುವುದರಿಂದ ಹಿಂದಿನ ಖಜುರಾಹೊ ಭೂಪ್ರದೇಶಗಳ ಮತ್ತು ದೇವಾಲಯ ಸಂಕೀರ್ಣಗಳು ಮತ್ತು ಅದರ ಸುತ್ತಮುತ್ತಲ ಪ್ರದೇಶಗಳ ನಡುವಿನ ಸಂಬಂಧದ ಬಗ್ಗೆ ಹಲವಾರು ಪ್ರಶ್ನೆಗಳು ಉದಯಿಸಿವೆ. ಮೂಲ ಭೂಪ್ರದೇಶಗಳ ಚಿತ್ರಣ ಯಾವುದಿರಬಹುದ್ ಎಂಬುದರ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದರೂ ಹಲವು ಪರಿವಾರಗಳ ಪುರೋಹಿತ ವರ್ಗಗಳು ಈ ದೇವಾಲಯ ಸಂಕೀರ್ಣಗಳನ್ನು ಬಳಸಿದ್ದು ಹತ್ತನೇ ಶತಮಾನದ ಭಾರತೀಯ ಉದ್ಯಾನವನಗಳು ಬಹುತೇಕ ವೃಕ್ಷೋದ್ಯಾನವನಗಳಾಗಿದ್ದುವು. ಇವುಗಳು ಹುಲ್ಲುಹಾಸುಗಳನ್ನಾಗಲೀ, ಹೂಬಿಡುವ ಗಿಡಮೂಲಿಕೆಯಂತಹ ಸಸ್ಯಗಳನ್ನು ಹೊಂದಿರಲಿಲ್ಲ.

ಪ್ರವಾಸೋದ್ಯಮ

[ಬದಲಾಯಿಸಿ]

ಖಜುರಾಹೊ ದೇವಾಲಯ ಸಂಕೀರ್ಣಗಳು ಪ್ರತೀ ದಿನ ಸಂಜೆಯ ಸಮಯದಲ್ಲಿ ಸುಂದರವಾಗಿ ಸೃಷ್ಟಿಸಿದ ಬೆಳಕು ಮತ್ತು ಧ್ವನಿವರ್ಧಕಗಳ ಪ್ರದರ್ಶನವನ್ನು ನೀಡುತ್ತಿವೆ. ಮೊದಲ ಪ್ರದರ್ಶನವು ಇಂಗ್ಲಿಷ್ ಭಾಷೆಯಲ್ಲಿ ನೀಡಲಾಗಿದ್ದು ಎರಡನೇ ಪ್ರದರ್ಶನವನ್ನು ಹಿಂದಿಯಲ್ಲಿ ನೀಡಲಾಗಿದೆ. ಈ ಪ್ರದರ್ಶನವು ಸುಮಾರು ಒಂದು ಗಂಟೆಯ ಅವಧಿಯದ್ದಾಗಿದ್ದು ಚರಿತ್ರೆ, ತತ್ವಶಾಸ್ತ್ರ ಮತ್ತು ಈ ದೇವಾಲಯಗಳ ನಿರ್ಮಾಣದಲ್ಲಿ ಬಳಸಲಾಗಿದ್ದ ಕಲೆಯಬಗ್ಗೆ ವಿವರವಾಗಿ ವರ್ಣಿಸಿವೆ. ಈ ಪ್ರದರ್ಶನವನ್ನು ದೇವಲಯ ಸಂಕೀರ್ಣದ ಹೊರವಲಯದ ತೆರೆದ ಹುಲ್ಲುಹಾಸಿನಲ್ಲಿ ನಡೆಸಲಾಗಿತ್ತು.

ಖಜುರಾಹೊ ನೃತ್ಯ ಸ್ಪರ್ಧೆಯನ್ನು ಪ್ರತೀವರ್ಷ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನಡೆಸಲಾಗುತ್ತಿದ್ದು, ಚಿತ್ರಗುಪ್ತ ಅಥವಾ ವಿಶ್ವನಾಥ ದೇವಾಲಯಗಳ ಹಿನ್ನೆಲೆಯ ವಿರುದ್ಧ ಈ ನೃತ್ಯ ಸ್ಪರ್ಧೆಯು ಸಂದರ್ಶಕರಿಗೆ ವಿವಿಧ ಪ್ರಕಾರಗಳ ಭಾರತೀಯ ಸಾಂಪ್ರದಾಯಿಕ ನೃತ್ಯಗಳನ್ನು ವೀಕ್ಷಿಸುವ ಸುವರ್ಣಾವಕಾಶವನ್ನು ಒದಗಿಸುತ್ತದೆ.[]

ಇತ್ತೀಚೆಗಿನ ಅವಿಷ್ಕಾರ

[ಬದಲಾಯಿಸಿ]

ಇತ್ತೀಚೆಗೆ ಭಾರತದ ಪುರಾತನ ವಸ್ತು ಸಂಶೋಧನಾ ಸಮೀಕ್ಷೆಯು ಖಜುರಾಹೊದಲ್ಲಿ ಅತೀ ದೊಡ್ಡ ಭೂಗತ ದೇವಾಲಯವನ್ನು ಹೊರಗೆಡಹಿದ ದಿಬ್ಬವನ್ನು ಮತ್ತೆ ಅಗೆಯಲು ಆರಂಭಿಸಿತು.[when?] ಈ ಅಗೆತವು ಕೊನೆಗೊಳ್ಳಲು ಕೆಲವು ವರ್ಷಗಳನ್ನಾದರೂ ತೆಗೆದುಕೊಳ್ಳುತ್ತದೆ.[೧೦]

ಇವನ್ನೂ ನೋಡಿ

[ಬದಲಾಯಿಸಿ]
  • ಬಂಬಾರ್ ಬೈನಿ- ಲೌಂಡಿ ಪ್ರದೇಶದ ಪರ್ವತ ಪ್ರದೇಶದಲ್ಲಿರುವ ಪ್ರಸಿದ್ಧ ದೇವಸ್ಥಾನ.
  • ಕಂದಾರಿಯ ಮಹಾದೇವ
  • ಹೇಮಾವತಿ
  • ಕಲಿಂಜರ್‌
  • ಬೀಜಮಂಡಲ್‌
  • ಖಜುರಾಹೊ ಜೈನ ಮಂದಿರಗಳು
  • ಶಿಲಾಯುಗದ ಸ್ಥಳಗಳ ಪಟ್ಟಿ
  • ಮಧ್ಯ ಪ್ರದೇಶ
  • ಬಾಂಧವ್‌ಗಡ್ ರಾಷ್ಟ್ರೀಯ ಉಧ್ಯಾನವನ

ಉಲ್ಲೇಖಗಳು

[ಬದಲಾಯಿಸಿ]
  1. ಫಾಲಿಂಗ್‌ ರೇನ್ ಜಿಯೊನೊಮಿಕ್ಸ್, ಇಂಕ್, -ಖಜುರಾಹೊ
  2. GRIndia
  3. "ಲೊಸ್ಟ್‌ ವರ್ಲ್ಡ್ಸ್‌‍ ಆಫ್ ದಿ ಕಾಮಸೂತ್ರ" ಹಿಸ್ಟರಿ ಚಾನೆಲ್
  4. ಖಜುರಾಹೊ, ಕನ್ನಯ್ಯಾ ಲಾಲ್ ಅಗರ್‌ವಾಲ್, ಮ್ಯಾಕ್‌ಮಿಲನ್ ಇಂಡಿಯಾ, 1980 (ಹಿಂದಿ ಭಾಷೆಯಲ್ಲಿ)
  5. "ಖಜುರಾಹೊ", liveindia.com
  6. McConnachie, James (2005). The Book of Love, the Story of the Kamasutra. Metropolitan Press. pp. 46–47.
  7. "ಲೊಸ್ಟ್‌ ವರ್ಲ್ಡ್ಸ್‌‌‍ ಆಫ್‌ ದಿ ಕಾಮ ಸೂತ್ರ" ಹಿಸ್ಟರಿ ಚಾನೆಲ್‌
  8. ಲೆಹನರ್‌, ಮಾರ್ಕ್‌ ದಿ ಕಂಪ್ಲೀಟ್‌ ಪಿರಾಮಿಡ್ಸ್‌‍, ಲಂಡನ್‌: ಥೇಮ್ಸ್‌ ಆಂಡ್‌ ಹಡ್ಸನ್‌ (1997)p.202-225 ISBN 0-500-05084-8.
  9. http://www.easytoursofindia.com/khajuraho_festival.htm
  10. http://www.iloveindia.com/indian-monuments/khajuraho-temples.html

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಫಾನಿ ಕಾಂತ್‌ ಮಿಶ್ರಾ, ಕಜುರಾಹೊ:ವಿತ್ ಲೆಟೆಸ್ಟ್‌‍ ಡಿಸ್ಕವರೀಸ್, ಸಂದೀಪ್ ಪ್ರಕಾಶನ (2001) ISBN 8175741015
  • ದೇವಾಂಗಣ ದೇಸಾಯಿ, ದಿ ರಿಲಿಜಿಯಸ್ ಇಮೇಜರಿ ಆಫ್‌ ಖಜುರಾಹೊ , ಪ್ರಾನ್ಸೊ-ಇಂಡಿಯನ್ ರಿಸರ್ಚ್‌ ಪ್ರೈ.ಲಿ(1996) ISBN 81-900184-1-8
  • ದೆವಾಂಗಣ ದೇಸಾಯಿ, ಖಜುರಾಹೊ , ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್ (ಆರನೇ ಮುದ್ರಣ 2005) ISBN 978-0-19-565643-5

ಬಾಹ್ಯ ಕೊಂಡಿಗಳು

[ಬದಲಾಯಿಸಿ]