ವಿಷಯಕ್ಕೆ ಹೋಗು

ಆಕಾಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಕಾಶದಲ್ಲಿ ಮೋಡಗಳ ಮೂಲಕ ಹೊಳೆಯುತ್ತಿರುವ ಬೆಳಕಿನ ಮುಸ್ಸಂಜೆಯ ಕಿರಣಗಳು
ನೀಲಾಕಾಶ

ಆಕಾಶವು, ಬಾಹ್ಯಾಕಾಶದ ಗುಮ್ಮಟ ಎಂದೂ ಪರಿಚಿತವಿರುವ, ಸಾಮಾನ್ಯವಾಗಿ, ವಾತಾವರಣ ಮತ್ತು ಉಳಿದ ಬಾಹ್ಯಾಕಾಶವನ್ನು ಒಳಗೊಂಡಂತೆ, ಭೂಮಿಯ ಮೇಲ್ಮೈಯ ಮೇಲೆ ಒಂದು ನಿರ್ದಿಷ್ಟ ದೂರದಲ್ಲಿ ಸ್ಥಿತವಾಗಿರುವ ಎಲ್ಲವನ್ನೂ ನಿರ್ದೇಶಿಸುತ್ತದೆ. ಖಗೋಳಶಾಸ್ತ್ರದ ಕ್ಷೇತ್ರದಲ್ಲಿ, ಆಕಾಶವನ್ನು ಬಾಹ್ಯಾಕಾಶ ಗೋಳ ಎಂದೂ ಕರೆಯಲಾಗುತ್ತದೆ. ಇದು ಸೂರ್ಯ, ನಕ್ಷತ್ರಗಳು, ಗ್ರಹಗಳು, ಮತ್ತು ಚಂದ್ರ ಸಾಗುತ್ತಿರುವಂತೆ ಕಾಣುವ ಒಂದು ಕಾಲ್ಪನಿಕ ಗುಮ್ಮಟ.

ಖಗೋಳ ಶಾಸ್ತ್ರದಲ್ಲಿ

[ಬದಲಾಯಿಸಿ]

ಭೂಮಿಯ ಮೇಲೆ ಕವಿಚಿಟ್ಟಂತೆ ಕಾಣುವ ನೀಲವರ್ಣದ ಅರ್ಧಗೋಳ; ಗಗನ, ಬಾನು, ವ್ಯೋಮ, ಖಗೋಳ-ಇವು ಪರ್ಯಾಯ ಪದಗಳು (ಸ್ಕೈ, ಹೆವೆನ್, ಫರ್ಮಮೆಂಟ್, ಸೆಲೆಸ್ಟಿಯಲ್ ಸ್ಪಿಯರ್). ಪ್ರತಿಯೊಬ್ಬ ಮನುಷ್ಯನಿಗೂ ಎಲ್ಲಿಯೇ ಯಾವ ಹೊತ್ತಿನಲ್ಲಿಯೇ ನಿಂತು ನೋಡಿದರೂ ತಾನೇ ಈ ಗೋಳದ ಕೇಂದ್ರ ಎಂಬ ಭಾವನೆ ಮೂಡುತ್ತದೆ. ಆಕಾಶದ ಆಳ ಊಹೆಗೆ ನಿಲುಕದು. ವಸ್ತುಗಳ ದೂರಗಳು ಒಂದು ಮಿತಿಯಲ್ಲಿ ಇರುವವರೆಗೆ ಅಂತರಗಳನ್ನು ಕಣ್ಣು ಗುರುತಿಸಬಲ್ಲದು. ಅಲ್ಲಿಂದ ಮುಂದೆ ಎಲ್ಲ ವಸ್ತುಗಳು ಅತಿ ದೂರದ ಒಂದು ಪರದೆಯ ಮೇಲೆ ಪ್ರಕ್ಷೇಪಿತವಾದಂತೆ ಕಾಣುತ್ತದೆ. ಚಂದ್ರ, ಗ್ರಹಗಳು, ಸೂರ್ಯ, ನಕ್ಷತ್ರಗಳು ಇತ್ಯಾದಿ (ಒಟ್ಟಾಗಿ ಆಕಾಶಕಾಯಗಳು) ಆಕಾಶದ ಮೈಗೆ ಅಂಟಿರುವಂತೆ ಕಾಣುವುದು ಈ ಕಾರಣದಿಂದ. ಸರಿಸುಮಾರು ಗೋಳಾಕಾರದಲ್ಲಿರುವ ಭೂಮಿಯನ್ನು ಆವರಿಸಿ ವಾಯುಮಂಡಲವಿದೆ. ಇದರಲ್ಲಿ ಬೇರೆ ಬೇರೆ ಎತ್ತರಗಳಲ್ಲಿ ಮೋಡಗಳು ತೇಲುತ್ತಿವೆ; ಅಸಂಖ್ಯಾತ ದೂಳಿನ ಕಣಗಳು, ನೀರಿನ ತೇವ, ಗಾಳಿಯ ಅಣುಗಳು ಲೀನಗೊಂಡು ನಿರಂತರ ಕ್ಷೋಭೆಯಲ್ಲಿವೆ. ಪ್ರತಿಯೊಂದು ಆಕಾಶಕಾಯದ ಬೆಳಕೂ ವಾಯುಮಂಡಲದ ಕವಚವನ್ನು ದಾಟಿ ವೀಕ್ಷಕನೆಡೆಗೆ ಬರಬೇಕು. ಸೂರ್ಯಕಿರಣಗಳು ಹೀಗೆ ಬರುವಾಗ ಅವುಗಳಿಗೂ ವಾಯುಕಣಗಳಿಗೂ ಭೌತಿಕದ ಪ್ರಕ್ರಿಯೆ ಉಂಟಾಗಿ ಕಣಗಳು ನೀಲವರ್ಣವನ್ನು ಚದರಿಸುವುದರಿಂದ ವಾಯುಮಂಡಲಕ್ಕೆ (ಆದ್ದರಿಂದ ಆಕಾಶಕ್ಕೆ) ಈ ಬಣ್ಣ ಬಂದಿದೆ. ವಾಯುಮಂಡಲದ ಮೂಲಕ ಆಕಾಶಕಾಯಗಳನ್ನು ನಾವು ನೋಡುವುದರಿಂದ ಅವೆಲ್ಲವೂ ನೀಲಗೋಳದ ಮೈಗೆ ಅಂಟಿಕೊಂಡಿರುವಂತೆ ಭಾಸವಾಗುವುದು. ಹೀಗೆ ಆಕಾಶ ಎಂಬ ವಸ್ತು ಅಥವಾ ಪದಾರ್ಥ ಇರದಿದ್ದರೂ ಭೂಮಿ ವಾಯುಮಂಡಲಗಳ ಅಸ್ತಿತ್ವದಿಂದಲೂ ಬೆಳಕು ಮತ್ತು ನಮ್ಮ ಕಣ್ಣುಗಳ ರಚನೆಯಿಂದಲೂ ಅದೊಂದು ನೀಲ ಅರ್ಧಗೋಳವಾಗಿ ಭಾಸವಾಗುತ್ತದೆ. ಆಕಾಶ ಭೂಮಿ ಅತಿ ದೂರದಲ್ಲಿ ಒಂದು ಮಹಾವೃತ್ತದಲ್ಲಿ ಸಂಧಿಸಿದಂತೆ ಭಾಸವಾಗುವುದು. ಇದರ ಕೇಂದ್ರ ವೀಕ್ಷಕ. ಈ ವೃತ್ತದಿಂದ ಕೆಳಗೆ ಅವನಿಗೇನೂ ಕಾಣಿಸದು. ವೃತ್ತದ ಹೆಸರು ಕ್ಷಿತಿಜ (ದಿಗಂತ). ವೀಕ್ಷಕನ ಸ್ಥಾನವನ್ನು ಅನುಸರಿಸಿ ಕ್ಷಿತಿಜ ವ್ಯತ್ಯಾಸಗೊಳ್ಳುತ್ತದೆ. ಪ್ರತಿಯೊಂದು ಆಕಾಶಕಾಯವೂ ಕ್ಷಿತಿಜದ ಪೂರ್ವವಲಯದಲ್ಲಿ ಮೂಡಿ, ಮೇಲೇರಿ, ಪಶ್ಚಿಮ ವಲಯದಲ್ಲಿ ಮುಳುಗಿದಂತೆ ನಮಗೆ ಭಾಸವಾಗುವುದು. ಆಕಾಶಕಾಯವೂ ಒಂದೊಂದು ಕಾಯದ ಪಥವೂ ಒಂದೊಂದು ವೃತ್ತ. ಉತ್ತರ ದಿಕ್ಕಿನೆಡೆಗೆ ಸರಿದಂತೆ ಅಲ್ಲಿರುವ ನಕ್ಷತ್ರ ಪಥಗಳು ಕ್ರಮೇಣ ಸಂಕೋಚಗೊಂಡು ಒಂದು ಸ್ಥಾನದಲ್ಲಿರುವ ನಕ್ಷತ್ರ ಪೂರ್ಣ ನಿಶ್ಚಲವಾಗಿರುವಂತೆಯೇ ತೋರುವುದು. ಇದು ಧ್ರುವನಕ್ಷತ್ರ . ಆಕಾಶದಲ್ಲಿ ಪ್ರತಿ ಕಾಯದ ದೈನಂದಿನ ಪಥ ಧ್ರುವನಕ್ಷತ್ರ ಕೇಂದ್ರವಾಗಿ ಅದರಿಂದ ಆಯಾ ನಕ್ಷತ್ರದ ದೂರ ತ್ರಿಜ್ಯವಾಗಿರುವ ವೃತ್ತ. ಉತ್ತರದಲ್ಲಿರುವಂತೆಯೇ ದಕ್ಷಿಣದಲ್ಲಿಯೂ (ಭೂಮಿಯ ಉತ್ತರಾರ್ಧವಲಯದಲ್ಲಿರುವ ನಮಗೆ ಕಾಣಿಸದ) ಒಂದು ನಿಶ್ಚಲ ಬಿಂದುವಿದೆ. ಅದು ದಕ್ಷಿಣ ಧ್ರುವ. ಆಕಾಶಗೋಳ ಈ ಎರಡು ಧ್ರುವಬಿಂದುಗಳನ್ನು ಜೋಡಿಸುವ ವ್ಯಾಸದ (ಇದರ ಕೇಂದ್ರ ವೀಕ್ಷಕ) ಸುತ್ತಲೂ ದಿವಸಕ್ಕೊಂದು ಸಲ ಆವರ್ತಿಸುವುದು. ಭೂಮಿ ಪಶ್ವಿಮದಿಂದ ಪೂರ್ವಕ್ಕೆ ದಿವಸಕ್ಕೊಂದು ಸಲ ಆವರ್ತಿಸಿದಂತೆ ನಮಗೆ ಭಾಸವಾಗುತ್ತದೆ.

ಛಾಯಾಂಕಣ

[ಬದಲಾಯಿಸಿ]
Massive clouds sweeping across the Mojave Desert.
Massive clouds sweeping across the Mojave Desert
Split sky just after sunset, High Desert, California
Split sky just after sunset, High Desert, California 
Summer sunset High Desert, California
Summer sunset High Desert, California 
Violent sky during Electric storm at twilight in the California Mojave Desert.
Violent sky during Electric storm at twilight in the California Mojave Desert
The clouds reflect shadows at sunset, and fan them throughout the sky.
The clouds reflect shadows at sunset, and fan them throughout the sky. 
Sky with clouds in Lithuania, Dūdos (Village), Lithuania.
Sky with clouds in Lithuania, Dūdos (Village), Lithuania

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: