img
img Supported by img
img
  • 15 ವಿಭಾಗಗಳಲ್ಲಿ ಅಸಾಧಾರಣ ಪ್ರತಿಭೆಗಳ ಗುರುತಿಸುವಿಕೆ
  • ಮೂರು ಹಂತಗಳ ತೀರ್ಪುಗಾರರ ಮಂಡಳಿ
  • ಕನ್ನಡ ಚಿತ್ರರಂಗದ ದಿಗ್ಗಜರಿಗೇ ಮುಖ್ಯ ತೀರ್ಪುಗಾರರ ಹೊಣೆ
  • 2023 ರಲ್ಲಿ ಬಿಡುಗಡೆಯಾದ ಎಲ್ಲ ಚಲನಚಿತ್ರಗಳಿಂದ ಅತ್ಯುತ್ತಮವಾದವುಗಳ ಆಯ್ಕೆ
  • ಜಾಗತಿಕ ಮಟ್ಟದ ಸಂಸ್ಥೆಯಿಂದ ಪರಿಶೀಲನೆಗೆ ಒಳಪಡುವ ಅತ್ಯಂತ ವಿಶ್ವಾಸಾರ್ಹ ಮೌಲ್ಯಮಾಪನ ಪ್ರಕ್ರಿಯೆ
  • ಚಿತ್ರರಂಗದ ಸಾವಿರಕ್ಕೂ ಹೆಚ್ಚು ಮಂದಿಯಿಂದ ಮತದಾನದ ಮೂಲಕ ಪ್ರಶಸ್ತಿ ಪುರಸ್ಕೃತರ ಆಯ್ಕೆ

ಪ್ರಸ್ತಾವನೆ

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಎರಡನೇ ಆವೃತ್ತಿ

‘ಪ್ರಜಾವಾಣಿ’ ದಿನಪತ್ರಿಕೆ ಮತ್ತು ಕನ್ನಡ ಚಿತ್ರರಂಗದ ಒಡನಾಟ ಆರು ದಶಕದಿಂದಲೂ ಗಾಢವಾಗಿದೆ. ಇತಿಹಾಸದ ಪುಟಗಳನ್ನು ತಿರುವಿದರೆ ಹತ್ತಾರು ನಿದರ್ಶನಗಳು ಸಿಕ್ಕುತ್ತವೆ. ಚಿತ್ರೋದ್ಯಮದ ನಾಡಿಮಿಡಿತವನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳುತ್ತಾ, ಅಲ್ಲಿನ ಪಲ್ಲಟಗಳನ್ನು ಹೊಣೆಗಾರಿಕೆಯಿಂದ ದಾಟಿಸುತ್ತಾ, ಸಾಂಸ್ಕೃತಿಕ ದೃಷ್ಟಿಯಲ್ಲಿಯೂ ಸಿನಿಮಾಗಳನ್ನು ನೋಡುವಂತಹ ಗಾಂಭೀರ್ಯವನ್ನು ‘ಪ್ರಜಾವಾಣಿ’ ಉಳಿಸಿಕೊಂಡಿದೆ. ಹೀಗಾಗಿಯೇ ಕರ್ನಾಟಕದ ಶ್ರೀಮಂತ ಸಿನಿಮಾ ಪರಂಪರೆಯನ್ನು ಸಂಭ್ರಮಿಸುವ, ಬೆಸೆಯುವ ವೇದಿಕೆಯೊಂದನ್ನು 2023ರಲ್ಲಿ ‘ಪ್ರಜಾವಾಣಿ’ ಸೃಷ್ಟಿಸಿತು. ತನ್ನ ‘ಅಮೃತ ಸಂಭ್ರಮ’ದ ಸಂದರ್ಭದಲ್ಲಿ ಪ್ರಾರಂಭಿಸಿದ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕನ್ನಡ ಚಿತ್ರರಂಗದ ಪ್ರೀತಿಗೆ ಪಾತ್ರವಾಗಿದೆ. ಚೊಚ್ಚಲ ಆವೃತ್ತಿಯಲ್ಲೇ ಮೆಚ್ಚುವಂತಹ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದ ‘ಪ್ರಜಾವಾಣಿ’ ಇದೀಗ ಎರಡನೇ ಆವೃತ್ತಿಗೆ ಸಜ್ಜಾಗುತ್ತಿದೆ.

ಮುಖ್ಯ ತೀರ್ಪುಗಾರರು

  • ಟಿ.ಎಸ್‌. ನಾಗಾಭರಣ ನಿರ್ದೇಶಕ
  • ಸುಧಾರಾಣಿ ನಟಿ
  • ಎನ್. ವಿದ್ಯಾಶಂಕರ್ ಚಲನಚಿತ್ರ ವಿಮರ್ಶಕ
  • ಸುಮನಾ ಕಿತ್ತೂರು ನಿರ್ದೇಶಕಿ
  • ವಿ.ಮನೋಹರ್‌ ಸಂಗೀತ ನಿರ್ದೇಶಕ
  • ಶ್ರುತಿ ಹರಿಹರನ್‌ ನಟಿ–ನಿರ್ಮಾಪಕಿ
  • ದಿನೇಶ್ ಬಾಬು ನಿರ್ದೇಶಕ