Signal ಅನ್ನು ನಿಮಗಾಗಿ ನಿರ್ಮಿಸಲಾಗಿದೆ; ನಿಮ್ಮ ಡೇಟಾ ಮತ್ತು ಲಾಭಕ್ಕಾಗಿ ಅಲ್ಲ. ಓಪನ್ ಸೋರ್ಸ್ ಗೌಪ್ಯತೆ ತಂತ್ರಜ್ಞಾನದ ಮೂಲಕ ಮುಕ್ತ ಅಭಿವ್ಯಕ್ತಿಯನ್ನು ರಕ್ಷಿಸಲು ಮತ್ತು ಸುರಕ್ಷಿತ ಜಾಗತಿಕ ಸಂವಹನವನ್ನು ಸಶಕ್ತಗೊಳಿಸಲು ನಿಮ್ಮ ಬೆಂಬಲದೊಂದಿಗೆ ನಾವು ನಮ್ಮ ಧ್ಯೇಯವನ್ನು ಮುಂದುವರಿಸುತ್ತೇವೆ. ಖಾಸಗಿ ಮೆಸೇಜ್ ಮಾಡುವಿಕೆ. ಜಾಹೀರಾತುಗಳಿಲ್ಲ, ಟ್ರ್ಯಾಕರ್ಗಳಿಲ್ಲ, ಕಣ್ಗಾವಲಿಲ್ಲ.
ನಿಮ್ಮ ದೇಣಿಗೆಗಳು, Signal ಮೇಲೆ ಅವಲಂಬಿತರಾಗಿರುವ ಜಗತ್ತಿನಾದ್ಯಂತದ ಲಕ್ಷಾಂತರ ಜನರಿಗೆ ಇದನ್ನು ಲಭ್ಯಗೊಳಿಸಲು ಅಗತ್ಯವಾಗಿರುವ ಸರ್ವರ್ಗಳು ಮತ್ತು ಬ್ಯಾಂಡ್ವಿಡ್ತ್ ಸೇರಿದಂತೆ Signal ನ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಪಾವತಿಸಲು ನೆರವಾಗುತ್ತವೆ.
ನಿಮ್ಮ ದೇಣಿಗೆಯೊಂದಿಗೆ ನೀವು ಇಮೇಲ್ ಅನ್ನು ಒದಗಿಸಿದರೆ, ನಿಮ್ಮ ತೆರಿಗೆ ದಾಖಲೆಗಳಿಗಾಗಿ ನೀವು ಇಮೇಲ್ ದೃಢೀಕರಣವನ್ನು ಸ್ವೀಕರಿಸುತ್ತೀರಿ. Signal ಟೆಕ್ನಾಲಜಿ ಫೌಂಡೇಶನ್ ಒಂದು ಸ್ವತಂತ್ರ ಲಾಭರಹಿತ ದತ್ತಿಸಂಸ್ಥೆಯಾಗಿದೆ ಹಾಗೂ ಆಂತರಿಕ ರೆವೆನ್ಯೂ ಕೋಡ್ನ ಸೆಕ್ಷನ್ 501c3 ಅಡಿಯಲ್ಲಿ ತೆರಿಗೆ ವಿನಾಯ್ತಿ ಹೊಂದಿದೆ. ನಮ್ಮ ಫೆಡರಲ್ ಟ್ಯಾಕ್ಸ್ ಐಡಿ ಸಂಖ್ಯೆ 82-4506840.
ಗಮನಿಸಿ: Signal ಆ್ಯಪ್ನ ಒಳಗೆ ನೀವು ದೇಣಿಗೆ ನೀಡಿದರೆ ಮಾತ್ರ ನಿಮ್ಮ Signal ಖಾತೆಯಲ್ಲಿ ನೀವು ಬ್ಯಾಡ್ಜ್ ಅನ್ನು ಪಡೆಯುತ್ತೀರಿ.
ಕ್ರಿಪ್ಟೋಕರೆನ್ಸಿ, ಸ್ಟಾಕ್ನ ದೇಣಿಗೆಗಳು ಮತ್ತು ಡೋಾನರ್ ಅಡ್ವೈಸ್ಡ್ ಫಂಡ್ಸ್ (DAF ಗಳು) ನಿಂದ ಉಡುಗೊರೆಗಳನ್ನು Signal ಸ್ವೀಕರಿಸುತ್ತದೆ. ಈ ದೇಣಿಗೆಗಳನ್ನು ’ದಿ ಗೀವಿಂಗ್ ಬ್ಲಾಕ್’ ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ.
ನಿಮ್ಮ ದೇಣಿಗೆಗೆ ನ್ಯಾಯಸಮ್ಮತ ಮಾರುಕಟ್ಟೆ ಮೌಲ್ಯಕ್ಕಾಗಿ ಯುಎಸ್ನಲ್ಲಿ ತೆರಿಗೆ ಕಡಿತವನ್ನು ಪಡೆಯಲು ನೀವು ಬಯಸಿದರೆ, ತೆರಿಗೆ ರಸೀದಿಯನ್ನು ಪಡೆಯಲು ನೀವು ಇಮೇಲ್ ವಿಳಾಸವನ್ನು ಒದಗಿಸಬಹುದು. ಕ್ರಿಪ್ಟೋಕರೆನ್ಸಿ ಮತ್ತು DAF ಗಳಿಂದ ಅನಾಮಧೇಯ ದೇಣಿಗೆಗಳನ್ನು ಕೂಡಾ ’ದಿ ಗೀವಿಂಗ್ ಬ್ಲಾಕ್’ ಬೆಂಬಲಿಸುತ್ತದೆ.
ಗಮನಿಸಿ: Signal ಆ್ಯಪ್ನ ಒಳಗೆ ನೀವು ದೇಣಿಗೆ ನೀಡಿದರೆ ಮಾತ್ರ ನಿಮ್ಮ Signal ಖಾತೆಯಲ್ಲಿ ನೀವು ಬ್ಯಾಡ್ಜ್ ಅನ್ನು ಪಡೆಯುತ್ತೀರಿ.