ಹುನಗುಂದ ಶ್ರೀ ಸಂಗಮೇಶ್ವರ ದೇವಾಲಯ ಹಾಗೂ ಬಸವ ಮಂಟಪ.
ಶ್ರೀ ಸಂಗಮೇಶ್ವರ ದೇವಾಲಯ ೧೯೨೦ ರಲ್ಲಿ ವೀರಶೈವ ಸಮಾಜದವರಿಂದ ನಿರ್ಮಾಣವಾಯಿತು.[೧] ಈ ದೇವಾಲಯವೂ ಮೊದಮೊದಲು ಮಹಾಂತೆಶ ಮಠದ ಆಡಳಿತದಲ್ಲಿತ್ತು, ನಂತರ ಇದನ್ನು ಟ್ರಸ್ಟ್ ಮಾಡಿದ್ದಾರೆ. ಈ ದೇವಾಲಯವು ಹುನಗುಂದದ ಸಂಗಮೇಶ್ವರ ಒಣೆಯಲ್ಲಿದೆ. ಸಂಗಮೇಶ್ವರ ದೇವಾಲಯವು ಹುನಗುಂದಲ್ಲಿ ಎರಡು ಜಾಗದಲ್ಲಿದೆ. ಒಂದು ಊರಿನೊಳಗೆ, ಅಲ್ಲಿ ತೇರು ಇದೆ, ಇನ್ನೊಂದು ಬೆಟ್ಟದ ಮೇಲೆ. ಜಾತ್ರ ಮಹೋತ್ಸವದ ದಿನ ಊರಿನೊಳಗೆ ಇರುವ ತೇರು ಬೆಟ್ಟದ ದೇವಾಲಯಕ್ಕೆ ಹೋಗುತ್ತದೆ.
ಜಾತ್ರ ಮಹೋತ್ಸವ
[ಬದಲಾಯಿಸಿ]ಪ್ರತಿ ವರ್ಷವೂ ಶ್ರೀ ಸಂಗಮೇಶ್ವರ ಜಾತ್ರ ಮಹೋತ್ಸವವು ಶ್ರಾವಣ ಮಾಸದ[೨] ಕೊನೆಯ ಸೋಮವಾರ ಸಾಯಂಕಾಲ ಐದು ಘಂಟೆಗೆ ವಿಜೃಂಭಣೆಯಿಂದ ನಡೆಯುತ್ತದೆ. ಪೂಜ್ಯ ಡಾ. ಮಹಾತೆಂಶ ಚಿತ್ತರ್ಗಿ ಸಂಸ್ತಾನ ಮಠ ಅವರ ಅಪ್ಪಣೆಯ ಮೇರೆಗೆ ಈ ಜಾತ್ರ ಮಹೋತ್ಸವವು ಜರಗುವುದು. ಜಾತ್ರೆಗಿಂತ ಐದು ದಿನ ಮೊದಲು ಬಸವ ಪಠ ಯೋಜಿಸಲಾಗುವುದು. ಮಧ್ಯಾನ ಮೂರು ಘಂಟೆಗೆ ಶ್ರೀ ವಿಜಯ ಮಹಾಂತೆಶ ಮಠದಿಂದ ದೇವರ ಮೆರೆವಣಿಗೆಯು ಬೃಹತ್ ಮೆರೆವಣೆಯೊಂದಿಗೆ ಸಂಗಮೇಶ್ವರನ ಪಾದಘತ್ತೆಗೆ ಬರುವುದು. ಒಟ್ಟು ಐದು ದಿನ ಜಾತ್ರಾ ಕಾರ್ಯಕ್ರಮಗಳು ಇರುವವು. ರಥಕ್ಕೆ ಒಟ್ಟು ಒಂಬತ್ತು ಕಲಶಗಳು ಆ ಕಲಶಗಳು ಒಂದೊಂದು ಒಣೆಯಿಂದ ಬರುವುದು. ಒಂದು ಒಣೆಯವರಿಗೆ ಹಜ ಮತ್ತು ಇನ್ನೊಂದು ಒಣೆಯವರಿಗೆ ಬಸವ ಪಠ ಎರಿಸುವ ಕೆಲಸ. ಹೀಗೆ ಹುನಗುಂದದಲ್ಲಿ ೧೧ ಒಣೆಗಳಿಗೆ ಸಮನಾದ ಜಾತ್ರೆ ಕೆಲಸ ಹಂಚಿಕೆ ಮಾಡಲಾಗಿದೆ. ಜಾತ್ರೆಮಹೊತ್ಸವ ದಿನದಂದು ಸಾಮೂಹಿಕ ವಿವಾಹ ಹಾಗು ಐನಾಛಾರ ಜರಗುವುವು. ವಿಶೇಷ ಏನೆಂದರೆ ವಿವಾಹದಲ್ಲಿ ಜಾತಿ ನಿರ್ಬಂಧವಿಲ್ಲ, ಮರುಮದುವೆಗೆ ಅವಕಾಶವೂ ಇಲ್ಲ. ಶ್ರಾವಣ ಮಾಸದ ಕೊನೆಯ ಸೋಮವಾರದ ಹಿಂದಿನ ರಾತ್ರಿ ಶ್ರೀ ಸಂಗಮೇಶ್ವರ ತೆರಿನ ಕಲಶವು ಸುಮಾರು ಎಂಟೂವರೆ ಗಂಟೆಗೆ ಶ್ರೀ ನೀಲಗಂಗ ದೇವಸ್ಥಾನದಲ್ಲಿ ಪೂಜೆ ನೆರೆವೆರಿಸಿಕೊಂಡು ರಾತ್ರಿ ಸುಮಾರು ಒಂಬತ್ತು ಗಂಟೆಗೆ ಲಿಂಗದ ಕಟ್ಟಿಗೆ ಬರುವುದು. ಅಲ್ಲೇ ಬೇರೆ ಬೇರೆ ಒಣೆಯ ಒಂಬತ್ತು ಕಲಶಗಳು ಸೇರುವವು. ರಾತ್ರಿ ಭಜನಪದಗಳು ಇರುವವು, ಮರುದಿನ ಮೆರವಣಿಗೆ ಮೂಲಕ ಶ್ರೀ ಸಂಗಮೇಶ್ವರ ದೇವಾಲಯಕ್ಕೆ ಬಂದು, ಸಾಯಂಕಾಲ ತೇರನ್ನು ಎಳೆಯುವಾಗ ಸರ್ವಧರ್ಮೀಯರು[೩] ಇದರಲ್ಲಿ ಭಾಗವಹಿಸುವರು. ರಾತ್ರಿ ಸಂಗೀತರ ಸಮಜರೀ ಕಾರ್ಯಕ್ರಮ, ನಾಟಕ ನಡೆಯುವವು. ಮರುದಿನ ಮಂಗಳವಾರ ಹೊಂಡದ ಕೆರೆಯಲ್ಲಿ ಜಂಗೀ ಕುಸ್ತೀ[೪] ಏರ್ಪಡಿಸಲಾಗಿರುತ್ತದೆ, ಇನ್ನೂ ಅನೇಕ ಕಾರ್ಯಕ್ರಮಗಳ ಜೊತೆಗೆ ಈ ಜಾತ್ರ ಮಾಹೊತ್ಸವ ನಡೆಯುತ್ತದೆ.
ಬಸವ ಮಂಟಪ, ಹುನಗುಂದ
[ಬದಲಾಯಿಸಿ]ಹುನಗುಂದದ ವಿಜಯ ಮಹಾಂತೆಶ ಶಾಲೆಯ ಮುಂದೆ ಇರುವ ಬಸವ ಮಂಟಪ ಈ ಪಟ್ಟಣದ ಎರಡನೆಯ ವಾರ್ಡಿಗೆ ಸೇರುತ್ತದೆ. ಬಸವ ಮಂಟಪಕ್ಕೆ ವಿಜಯ ಮಹಾಂತೆಶ ಮಠ ಎಂದೂ ಕರೆಯುತ್ತಾರೆ. ಬಸವ ಮಂಟಪದಲ್ಲಿ ಹುಣ್ಣಿಮೆಯ ರಾತ್ರಿ ಭಜನೆ ಹಾಗು ಇತರೆ ಕಾರ್ಯಾಕ್ರಮಗಳು ನಡೆಯುತ್ತದೆ. ಅಲ್ಲದೆ ಈ ಮಂಟಪದಲ್ಲಿ ಹುನಗುಂದ ಪಟ್ಟಣ[೫]ದ ಮತ್ತು ಸುತ್ತಮುತ್ತಲಿನ ಊರಿನ ಜನರು ವಿವಾಹ ಕಾರ್ಯಕ್ರಮಗಳು, ಹಾಗು ಹಲವಾರು ಕಾರ್ಯಕ್ರಮವನ್ನು ನಡೆಸುತ್ತಾರೆ. ಈ ಮಂಟಪದಲ್ಲಿ ತೆರೆದ ಜಾಗ ಇರುವುದರಿಂದ ಹಲವಾರು ನಿರಾಶ್ರಿತರು ಮಲಗಲು ವ್ಯವಸ್ಥಿತವಾಗಿದೆ.
ಗಮನಾರ್ಹ ಸ್ಥಳಗಳು
[ಬದಲಾಯಿಸಿ]ಹುನಗುಂದ ತಾಲೂಕು ಹಲವಾರು ಗಮನಾರ್ಹ ಸ್ಥಳಗಳಿಗೆ ಹತ್ತಿರವಾಗುತ್ತದೆ. ಅವುಗಳಲ್ಲಿ ಕೆಲುವು ಬಾದಾಮಿ ಗುಹೆಗಳು,[೬][೭] ಐಹೊಳೆ,[೮] ಪಟ್ಟದಕಲ್ಲು,[೯] ಮಹಕುಟಾ, ಕೂಡಲ ಸಂಗಮ ಕ್ಷೇತ್ರ,[೧೦][೧೧] ಅಲಮಟ್ಟಿ ಡ್ಯಾಮ್[೧೨] ಹಾಗು ಮುಂತಾದವು.
ಉಲ್ಲೇಖಗಳು
[ಬದಲಾಯಿಸಿ]- ↑ https://www.udayavani.com/district-news/bagalkot-news/veerashaiva-lingayata-society#google_vignette
- ↑ https://vistaranews.com/horoscope-religion/religious/shravana-masa-2023-festivals-auspicious-dates-and-time/430261.html
- ↑ https://vijaykarnataka.com/news/uttara-kannada/bhatkal-chennapattna-hanumantha-rathotsava-jatre/videoshow/99140081.cms
- ↑ https://kannada.news18.com/news/vijayapura/siddeshwar-jatra-mahotsava-vijayapura-starts-from-january-12th-1520193.html
- ↑ https://www.justdial.com/Bagalkot/Kalyana-Mandapams-in-Hungund/nct-10284707
- ↑ https://bagalkot.nic.in/tourist-place/%E0%B2%AC%E0%B2%BE%E0%B2%A6%E0%B2%BE%E0%B2%AE%E0%B2%BF-%E0%B2%97%E0%B3%81%E0%B2%B9%E0%B3%86%E0%B2%97%E0%B2%B3%E0%B3%81/
- ↑ https://vijaykarnataka.com/travel/weekend-getaways/must-visit-tourist-attractions-in-badami/articleshow/110608864.cms
- ↑ https://tv9kannada.com/photo-gallery/karnataka-budget-highlights-major-annoucements-for-karnataka-tourism-and-tourist-places-in-cm-bommai-budget-2022-sct-348275.html
- ↑ https://kn.wikipedia.org/s/c5
- ↑ https://kn.wikipedia.org/s/6up
- ↑ https://kannada.news18.com/news/vijayapura/kudala-sangama-temple-history-location-darshan-timings-seva-details-lc18-947794.html
- ↑ https://kannada.news18.com/news/vijayapura/good-news-for-the-farmers-continuous-water-for-the-canals-of-almatti-1417478.html