ವಿಷಯಕ್ಕೆ ಹೋಗು

ಸನ್ನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿಲಿಟರಿ ವಾಯು ಮಾರ್ಗದರ್ಶಕರು ವಿಮಾನ ವಾಹಕಗಳ ಮೇಲೆ ವಿಮಾನ ಕಾರ್ಯಾಚರಣೆಗಳಿಗೆ ದಾರಿ ತೋರಿಸಲು ಕೈ ಮತ್ತು ಶರೀರ ಸನ್ನೆಗಳನ್ನು ಬಳಸುತ್ತಾರೆ.

ಸನ್ನೆ ಒಂದು ಬಗೆಯ ಪದರಹಿತ ಸಂವಹನ ಅಥವಾ ಧ್ವನಿರಹಿತ ಸಂವಹನ ಮತ್ತು ಇದರಲ್ಲಿ ಗೋಚರ ಶಾರೀರಿಕ ಕ್ರಿಯೆಗಳು ಮಾತಿನ ಬದಲಾಗಿ ಅಥವಾ ಮಾತಿನ ಜೊತೆಯಲ್ಲಿ ನಿರ್ದಿಷ್ಟ ಸಂದೇಶಗಳನ್ನು ತಿಳಿಸುತ್ತವೆ. ಸನ್ನೆಗಳು ಕೈಗಳು, ಮುಖ, ಅಥವಾ ಶರೀರದ ಇತರ ಭಾಗಗಳ ಚಲನೆಯನ್ನು ಒಳಗೊಂಡಿರುತ್ತವೆ. ಸನ್ನೆಗಳು ಸಂಪೂರ್ಣವಾಗಿ ಹೊರಗೆಡಹುವ ಪ್ರದರ್ಶನಗಳು, ಸಾಮೀಪ್ಯ ಶಾಸ್ತ್ರ, ಅಥವಾ ಜಂಟಿ ಗಮನದ ಪ್ರದರ್ಶನಗಳಂತಹ ನಿರ್ದಿಷ್ಟ ಸಂದೇಶಗಳನ್ನು ತಿಳಿಸದ ಶಾರೀರಿಕ ಪದರಹಿತ ಸಂವಹನದಿಂದ ಭಿನ್ನವಾಗಿವೆ.[] ಸನ್ನೆಗಳು ವ್ಯಕ್ತಿಗಳಿಗೆ, ಹಲವುವೇಳೆ ಆಂಗಿಕ ಭಾಷೆ ಮತ್ತು ಅವರು ಮಾತನಾಡಿದಾಗಿನ ಶಬ್ದಗಳ ಜೊತೆಗೆ, ತಿರಸ್ಕಾರ ಮತ್ತು ಶತ್ರುತ್ವದಿಂದ ಹಿಡಿದು ಅನುಮೋದನೆ ಮತ್ತು ವಾತ್ಸಲ್ಯದವರೆಗಿನ ವಿವಿಧ ಅನಿಸಿಕೆಗಳು ಮತ್ತು ಯೋಚನೆಗಳನ್ನು ತಿಳಿಸಲು ಅನುಮತಿಸುತ್ತವೆ.

ಸನ್ನೆಯ ಸಂಸ್ಕರಣೆಯು ಮಾತು ಮತ್ತು ಸಂಕೇತ ಭಾಷೆಗಾಗಿ ಬಳಸಲ್ಪಡುವ, ಬ್ರೋಕಾ ಮತ್ತು ವರ್ನಿಕಿಯ ಪ್ರದೇಶಗಳಂತಹ ಮಿದುಳಿನ ಪ್ರದೇಶಗಳಲ್ಲಿ ನಡೆಯುತ್ತದೆ. ವಾಸ್ತವವಾಗಿ, ಮಾನವರಲ್ಲಿ ಭಾಷೆಯು ಶಾರೀರಿಕ ಸನ್ನೆಗಳಿರುವ ಒಂದು ಮುಂಚಿನ ವ್ಯವಸ್ಥೆಯಿಂದ ವಿಕಸನಗೊಂಡಿದೆ ಎಂದು ಕೆಲವು ವಿದ್ವಾಂಸರು ಭಾವಿಸುತ್ತಾರೆ. ಈ ಸಿದ್ಧಾಂತಕ್ಕೆ ಸನ್ನೆ ಸಿದ್ಧಾಂತ ಎಂದು ಕರೆಯಲಾಗುತ್ತದೆ ಮತ್ತು ಇದು ೧೮ನೇ ಶತಮಾನದ ತತ್ವಶಾಸ್ತ್ರಜ್ಞ ಮತ್ತು ಪಾದ್ರಿ ಏಟ್ಯೆನ್ ಬಾನಾ ಡ ಕಾಂಡಿಯಾಕ್‍ನ ಕೆಲಸದ ಕಾಲದಿಂದಲೂ ಇದೆ, ಮತ್ತು ಇದನ್ನು ಭಾಷೆಯ ಮೂಲದ ಮೇಲಿನ ಚರ್ಚೆಯ ಭಾಗವಾಗಿ ಸಮಕಾಲೀನ ಮಾನವಶಾಸ್ತ್ರಜ್ಞ ಗಾರ್ಡನ್ ಹ್ಯೂವೆಸ್ ೧೯೭೩ರಲ್ಲಿ ಪುನರೂರ್ಜಿತಗೊಳಿಸಿದನು.

ಸನ್ನೆಯ ವರ್ಗಗಳ ನಡುವೆ ವ್ಯತ್ಯಾಸ ಮಾಡುವ ಮೊದಲ ಬಗೆಯೆಂದರೆ ಅಭಿವ್ಯಕ್ತಿಶೀಲ ಸನ್ನೆ ಮತ್ತು ಮಾಹಿತಿಯುಳ್ಳ ಸನ್ನೆ ನಡುವೆ ಪ್ರತ್ಯೇಕಿಸುವುದು. ಸಂಭಾವ್ಯವಾಗಿ ಆಡಿದ ಹೇಳಿಕೆಗಳ ಅವಧಿಯಲ್ಲಿ ನಡೆಯುವಂತಹವು ಎಂದು ಬಹುತೇಕ ಸನ್ನೆಗಳನ್ನು ವ್ಯಾಖ್ಯಾನಿಸಬಹುದಾದರೂ, ಮಾಹಿತಿಯುಳ್ಳ-ಅಭಿವ್ಯಕ್ತಿಶೀಲ ಇಬ್ಭಾಗವು ಅರ್ಥದ ಉದ್ದೇಶ ಮತ್ತು ಸಹ ಮಾತು ಸನ್ನೆಯಲ್ಲಿ ಸಂವಹನದ ಮೇಲೆ ಕೇಂದ್ರೀಕರಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Kendon, Adam. (2004) Gesture: Visible Action as Utterance. Cambridge: Cambridge University Press. ISBN 0-521-83525-9