ವರ್ಡ್ ಪ್ರೆಸ್
ಅಭಿವೃದ್ಧಿಪಡಿಸಿದವರು | ವರ್ಡ್ಪ್ರೆಸ್ ಫೌಂಡೇಶನ್ |
---|---|
ಮೊದಲು ಬಿಡುಗಡೆ | May 27, 2003[೧] |
Stable release | 3.5.1
/ ಜನವರಿ 24, 2013 |
Repository | |
ಕಾರ್ಯಾಚರಣಾ ವ್ಯವಸ್ಥೆ | Cross-platform |
ಗಣಕಯಂತ್ರದಲ್ಲಿ | PHP |
ವಿಧ | Weblog software |
ಪರವಾನಗಿ | GPLv2[೨] |
ಅಧೀಕೃತ ಜಾಲತಾಣ | http://wordpress.org/ |
'ವರ್ಡ್‍ಪ್ರೆಸ್ ಎಂಬುದು ಒಂದು ಮುಕ್ತ ಮೂಲದ ಪಠ್ಯವಿಷಯ ನಿರ್ವಹಣಾ ವ್ಯವಸ್ಥೆಯಾಗಿದ್ದು (ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ-CMS), PHP ಮತ್ತು MySQLನಿಂದ ಚಾಲಿಸಲ್ಪಡುವ ಒಂದು ಬ್ಲಾಗ್ ಪ್ರಕಟಣಾ ಅನ್ವಯಿಕೆಯಾಗಿ ಇದು ಅನೇಕವೇಳೆ ಬಳಸಲ್ಪಡುತ್ತದೆ. ಒಂದು ಪ್ಲಗ್-ಇನ್ ವಿನ್ಯಾಸ ಮತ್ತು ಒಂದು ಪಡಿಯಚ್ಚು ವ್ಯವಸ್ಥೆಯನ್ನು ಒಳಗೊಂಡಂತೆ ಇದು ಅನೇಕ ವೈಶಿಷ್ಟ್ಯಪೂರ್ಣ ಲಕ್ಷಣಗಳನ್ನು ಹೊಂದಿದೆ. ೧,೦೦೦,೦೦೦ದಷ್ಟಿರುವ ಅತಿದೊಡ್ಡ ವೆಬ್‌ಸೈಟ್‌ಗಳ ಪೈಕಿ ೧೩%ಗೂ ಹೆಚ್ಚಿನವುಗಳಿಂದ ವರ್ಡ್‌ಪ್ರೆಸ್ ಬಳಸಲ್ಪಡುತ್ತದೆ.[೩]
ಬಿ೨/ಕೆಫೆಲಾಗ್‌ನ ಒಂದು ಕವಲೊಡೆತವಾಗಿ ಮ್ಯಾಟ್ ಮುಲ್ಲೆನ್‌ವೆಗ್‌ನಿಂದ[೧] ೨೦೦೩ರ ಮೇ ೨೭ರಂದು ಇದು ಮೊದಲು ಬಿಡುಗಡೆಯಾಯಿತು. ೨೦೧೩ರ ಏಪ್ರಿಲ್ ವೇಳೆಗೆ ಇದ್ದಂತೆ, ಇದರ 3.5 ಆವೃತ್ತಿ ಯು 18 ದಶಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲ್ಪಟ್ಟಿದೆ.[೪]
ವಿಶಿಷ್ಟ ಲಕ್ಷಣಗಳು
[ಬದಲಾಯಿಸಿ]ಒಂದು ಪಡಿಯಚ್ಚು ಸಂಸ್ಕಾರಕವೊಂದನ್ನು ಬಳಸಿಕೊಳ್ಳುವ ಮೂಲಕ ವೆಬ್ ಪಡಿಯಚ್ಚು ವ್ಯವಸ್ಥೆಯೊಂದನ್ನು ವರ್ಡ್‌ಪ್ರೆಸ್ ಹೊಂದಿದೆ. PHP ಅಥವಾ HTML ಸಂಕೇತವನ್ನು ಪರಿಷ್ಕರಿಸದೆಯೇ ಬಳಕೆದಾರರು ಸಲಕರಣೆಗಳನ್ನು ಮರು-ವ್ಯವಸ್ಥೆಗೊಳಿಸಲು ಇಲ್ಲಿ ಸಾಧ್ಯವಿದೆ; ವಿಷಯ-ವಸ್ತುಗಳನ್ನು ಅಳವಡಿಸಲು ಮತ್ತು ಅವುಗಳ ನಡುವೆ ಬದಲಾಯಿಸಿಕೊಳ್ಳಲೂ ಸಹ ಬಳಕೆದಾರರಿಗೆ ಇಲ್ಲಿ ಅವಕಾಶವಿದೆ. ಹೆಚ್ಚು ಮುಂದುವರಿದ ಅಗತ್ಯಾನುಸಾರದ ರೂಪಿಸುವಿಕೆಗಳಿಗೆ ಸಂಬಂಧಿಸಿದಂತೆ ವಿಷಯ-ವಸ್ತುಗಳಲ್ಲಿನ PHP ಮತ್ತು HTML ಸಂಕೇತಗಳನ್ನೂ ಸಹ ಪರಿಷ್ಕರಿಸಲು ಇಲ್ಲಿ ಅವಕಾಶವಿದೆ. ಅನೇಕ ವೈಶಿಷ್ಟ್ಯತೆಗಳನ್ನೂ ಸಹ ವರ್ಡ್‌ಪ್ರೆಸ್ ಒಳಗೊಳ್ಳುತ್ತದೆ. ಸಂಯೋಜಿತ ಕೊಂಡಿಯ ನಿರ್ವಹಣೆ, ಒಂದು ಶೋಧಕ ಎಂಜಿನು-ಸ್ನೇಹಿ, ಚೊಕ್ಕನಾದ ಕಾಯಂಕೊಂಡಿಯ ರಚನೆ, ಒಂದರೊಳಗೆ ಒಂದನ್ನಿಟ್ಟು ಅಡಕಿಸಿದ ಬಹು ವರ್ಗಗಳನ್ನು ಲೇಖನಗಳಿಗೆ ನಿಯೋಜಿಸುವಲ್ಲಿನ ಸಾಮರ್ಥ್ಯ, ಮತ್ತು ಪ್ರಕಟಣೆಗಳು ಮತ್ತು ಲೇಖನಗಳ ಲಗತ್ತಿಸುವಿಕೆಗೆ ಸಂಬಂಧಿಸಿದಂತಿರುವ ಬೆಂಬಲ ಇವೆಲ್ಲವೂ ಇದರಲ್ಲಿ ಕಂಡುಬರುವ ವೈಶಿಷ್ಟ್ಯತೆಗಳಾಗಿವೆ. ಸ್ವಯಂಚಾಲಿತ ಸೋಸುಗಗಳೂ ಸಹ ಇದರಲ್ಲಿ ಸೇರಿಸಲ್ಪಟ್ಟಿದ್ದು, ಇದರಿಂದಾಗಿ ಲೇಖನಗಳಲ್ಲಿನ ಪಠ್ಯಕ್ಕೆ ಪ್ರಮಾಣಕವಾಗಿಸಲ್ಪಟ್ಟ ಫಾರ್ಮ್ಯಾಟ್ ಮಾಡುವಿಕೆ ಮತ್ತು ಶೈಲೀಕರಣವು ಒದಗಿಸಲ್ಪಡುತ್ತದೆ (ಉದಾಹರಣೆಗೆ, ಎಂದಿನ ನಿಯತಶೈಲಿಯ ಸೂಕ್ತಿಗಳನ್ನು ಚೆಂದದ ಸೂಕ್ತಿಗಳಾಗಿ ಪರಿವರ್ತಿಸುವಿಕೆ). ಒಂದು ಪ್ರಕಟಣೆ ಅಥವಾ ಲೇಖನಕ್ಕೆ ಸ್ವತಃ ತಾವೇ ಸಂಪರ್ಕಿಸಲ್ಪಟ್ಟ ಇತರ ತಾಣಗಳಿಗಿರುವ ಪ್ರದರ್ಶಕ ಕೊಂಡಿಗಳಿಗೆ ಸಂಬಂಧಿಸಿದ ಮಾನದಂಡಗಳ ಮರುಜಾಡು ಹಿಡಿಯುವಿಕೆ ಮತ್ತು ಮರುಪತ್ತೆಹಚ್ಚುವಿಕೆಯಂಥ ಪ್ರಕ್ರಿಯೆಗಳಿಗೂ ಸಹ ವರ್ಡ್‌ಪ್ರೆಸ್ ಬೆಂಬಲ ನೀಡುತ್ತದೆ. ಅಂತಿಮವಾಗಿ ಹೇಳುವುದಾದರೆ, ಒಂದು ಸಮೃದ್ಧ ಪ್ಲಗ್‌ಇನ್ ವಿನ್ಯಾಸವನ್ನು ವರ್ಡ್‌ಪ್ರೆಸ್ ಹೊಂದಿದ್ದು, ಮೂಲಭೂತ ಅಳವಡಿಕೆಯ ಭಾಗವಾಗಿ ಬರುವ ಲಕ್ಷಣಗಳಿಗಿಂತ ಆಚೆಗಿನ ಇದರ ಕಾರ್ಯಾತ್ಮಕತೆಯನ್ನು ಬಳಕೆದಾರರು ಮತ್ತು ಅಭಿವರ್ಧಕರು ವಿಸ್ತರಿಸುವಲ್ಲಿ ಈ ವಿನ್ಯಾಸವು ಅವಕಾಶ ಕಲ್ಪಿಸುತ್ತದೆ.[೫]
ಆಂಡ್ರಾಯ್ಡ್,[೬] ಐಫೋನ್/ಐಪಾಡ್ ಟಚ್,[೭] ಮತ್ತು ಬ್ಲ್ಯಾಕ್‌ಬೆರಿ[೮] ಇವುಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಅನ್ವಯಿಕೆಗಳು ಅಸ್ತಿತ್ವದಲ್ಲಿದ್ದು, ವರ್ಡ್‌ಪ್ರೆಸ್ ನಿರ್ವಹಣಾ ಪಟ್ಟಿಯಲ್ಲಿನ ಕೆಲವೊಂದು ವೈಶಿಷ್ಟ್ಯಪೂರ್ಣ ಲಕ್ಷಣಗಳಿಗೆ ಅವು ಸಂಪರ್ಕ ಒದಗಿಸುತ್ತವೆ; ಅಷ್ಟೇ ಅಲ್ಲ, WordPress.comನೊಂದಿಗೆ ಮತ್ತು WordPress.orgನ ಅನೇಕ ಬ್ಲಾಗ್‌ಗಳೊಂದಿಗೆ ಅವು ಕಾರ್ಯನಿರ್ವಹಿಸುತ್ತವೆ.
ನಿಯೋಜನೆ
[ಬದಲಾಯಿಸಿ]ಆಯೋಜಿಸುವ ಪರಿಸರವೊಂದರ (ಹೋಸ್ಟಿಂಗ್ ಎನ್ವಿರಾನ್ಮೆಂಟ್) ಮೇಲೆ ಹಲವಾರು ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ ವರ್ಡ್ ಪ್ರೆಸ್ ಅನ್ನು ಸಜ್ಜುಗೊಳಿಸಲು ಸಾಧ್ಯವಿದೆ. WordPress.org ನಿಂದ ವರ್ಡ್ ಪ್ರೆಸ್ ನ ಪ್ರಸಕ್ತ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲುವ, ಆಯ್ಕೆಯನ್ನು ಬಳಕೆದಾರರು ಹೊಂದಿರುತ್ತಾರೆ. ಅಲ್ಲಿಂದ, ಅವರು ತಮ್ಮ ವೆಬ್ ಆಯೋಜಕ ಪರಿಸರಕ್ಕೆ ಮೂಲ ಸಂಕೇತ ಮತ್ತು ಅದರ ಆಧಾರವಾಗಿರುವ ಸಾಧನಗಳನ್ನು ಅಪ್‌ಲೋಡ್ ಮಾಡಲು ಅವಕಾಶವಿರುತ್ತದೆ.
ಬಹುಉದ್ದೇಶಿತ ತಂತ್ರಾಂಶ ನಿರ್ವಹಣಾ ವ್ಯವಸ್ಥೆಯ ಮೂಲಕ ಅಥವಾ ಕೈಯಿಂದ ನಡೆಸುವ ಯಾವುದೇ ಸಜ್ಜಿಕೆ ಅಥವಾ ರೂಪರೇಖೆಯನ್ನು ಬಯಸದ, ಬಳಕೆಗೆ ಸಿದ್ಧವಿರುವ ಟರ್ನ್‌ಕೀ ವರ್ಡ್‌ಪ್ರೆಸ್ ಸಾಧನವೊಂದನ್ನು ಸಜ್ಜುಗೊಳಿಸುವ ಮೂಲಕ ವರ್ಡ್‌ಪ್ರೆಸ್‌ನ್ನು ಅಳವಡಿಸಲು ಸಾಧ್ಯವಿದೆ.[೯]
ವಿಂಡೋಸ್ ಮತ್ತು IIS ಮೇಲೆ ವರ್ಡ್ ಪ್ರೆಸ್ ಅನ್ನು ಅಳವಡಿಸುವ ಮೈಕ್ರೋಸಾಫ್ಟ್ ವೆಬ್ ವೇದಿಕೆ ಪ್ರತಿಷ್ಠಾಪಕವನ್ನು (ಮೈಕ್ರೋಸಾಫ್ಟ್ ವೆಬ್ ಪ್ಲಾಟ್‌ಫಾರಂ ಇನ್‌ಸ್ಟಾಲರ್‌ನ್ನು) ಬಳಸುವ ಮೂಲಕವೂ ವರ್ಡ್‌ಪ್ರೆಸ್‌ನ್ನು ಅಳವಡಿಸಲು ಸಾಧ್ಯವಿದೆ. PHP ಅಥವಾ MySQLನಂತಹ ಯಾವುದೇ ತಪ್ಪಿಹೋಗಿರುವ ಆಧಾರ-ಸಾಧನಗಳನ್ನು ವೆಬ್ PI ಸ್ವಯಂಚಾಲಿತವಾಗಿ ಪತ್ತೆಹಚ್ಚುತ್ತದೆ ಮತ್ತು ವರ್ಡ್‌ಪ್ರೆಸ್‌ನ್ನು ಅಳವಡಿಸುವುದಕ್ಕೆ ಮುಂಚಿತವಾಗಿ ಅವುಗಳ[೧೦] ವಿನ್ಯಾಸವನ್ನು ರಚಿಸುತ್ತದೆ.
ಬಹಳಷ್ಟು ವೆಬ್ ಆಯೋಜಕ ಸಂಸ್ಥೆಗಳು ತಮ್ಮ ಬಹುಉದ್ದೇಶಿತ ತಂತ್ರಾಂಶಗಳಲ್ಲಿ ಫೆಂಟಾಸ್ಟಿಕೊದಂಥ ಏಕ-ಕ್ಲಿಕ್ ಲಿಪಿಯ ಸ್ವಯಂ ಪ್ರತಿಷ್ಠಾಪಕ ಕಾರ್ಯಸೂಚಿಯನ್ನು ನೀಡುತ್ತವೆ. ಇಂಥ ಕಾರ್ಯಸೂಚಿಯ ಮೂಲಕ ವರ್ಡ್‌ಪ್ರೆಸ್‌ನ್ನು ಬಳಕೆದಾರರು ಸರಳವಾಗಿ ಅಳವಡಿಸಬಹುದಾಗಿರುತ್ತದೆ.
ಮುಂದುವರಿದ ಅಥವಾ ಪ್ರಗತಿಶೀಲ ಬಳಕೆದಾರರು ತಮ್ಮದೇ ಸರ್ವರ್‌ಗೆ ವರ್ಡ್ ಪ್ರೆಸ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮತ್ತು SVNನ್ನು ಬಳಸಿಕೊಂಡು ಅದನ್ನು ಸುಸಂಗತವಾಗಿ ಪರಿಷ್ಕರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಸುಲಭವಾಗಿ ಪರಿಷ್ಕರಣಕ್ಕೆ ಒಳಗಾಗುವಲ್ಲಿ ಇದು ಬಳಕೆದಾರರಿಗೆ ಅವಕಾಶ ಕಲ್ಪಿಸುತ್ತದೆ.[೧೧]
ಬಳಕೆದಾರರು ತಮ್ಮದೇ ಆದ ವೆಬ್ ಸರ್ವರ್‌ನಲ್ಲಿ ವರ್ಡ್‌ಪ್ರೆಸ್‌ನ್ನು ಅಳವಡಿಸುವ ಗೋಜಿಗೆ ಹೋಗದೆಯೇ, ಆನ್‌ಲೈನ್ ಮೂಲಕ ವರ್ಡ್‌ಪ್ರೆಸ್ ಬ್ಲಾಗ್ ಒಂದನ್ನು ಸಜ್ಜುಗೊಳಿಸಲು ಸಾಧ್ಯವಾಗುವಂತಹ ಸುಲಭ ಮಾರ್ಗವೊಂದನ್ನು WordPress.comನಂಥ ಉಚಿತವಾದ ಆಯೋಜಕ ಸೇವೆಗಳು ನೀಡುತ್ತವೆ. ಉಚಿತವಾದ ಆಯೋಜಕ ಸೇವೆಗೆ ದಾಖಲಾದ ನಂತರ ಉಪವ್ಯಾಪ್ತಿಯ ಖಾತೆಯೊಂದು (ಉದಾಹರಣೆಗೆ yourname.WordPress.com) ಸೃಷ್ಟಿಸಲ್ಪಡುತ್ತದೆ. ಹಂಚಿಕೆಗೆ ಒಳಗಾಗಿರುವ ಅನೇಕ ವೆಬ್ ಆಯೋಜಕ ಸೇವೆಗಳೂ ಸಹ ತಮ್ಮ ನಿಯಂತ್ರಣಾ ಪಟ್ಟಿಯ ಮೂಲಕ ಸ್ವಯಂಚಾಲಿತ ವರ್ಡ್‌ಪ್ರೆಸ್ ಅಳವಡಿಕೆಯನ್ನು ನೀಡುತ್ತವೆ.
ಇತಿಹಾಸ
[ಬದಲಾಯಿಸಿ]ಸರಳವಾಗಿ b೨ ಅಥವಾ ಕೆಫೆಲಾಗ್ ಎಂಬುದಾಗಿ ಹೆಚ್ಚು ಸಾಮಾನ್ಯವಾಗಿ ಪರಿಚಿತವಾಗಿರುವ ಬಿ೨/ಕೆಫೆಲಾಗ್ , ವರ್ಡ್ ಪ್ರೆಸ್ ಗೆ[೧೨] ಇದ್ದ ಪೂರ್ವವರ್ತಿಯಾಗಿತ್ತು. ೨೦೦೩ರ ಮೇ ತಿಂಗಳ ವೇಳೆಗೆ ಇದ್ದಂತೆ, ಸರಿಸುಮಾರಾಗಿ ೨,೦೦೦ ಬ್ಲಾಗ್‌ಗಳಲ್ಲಿ ಬಿ೨/ಕೆಫೆಲಾಗ್ ಬಳಸಲ್ಪಟ್ಟಿದೆ ಎಂದು ಅಂದಾಜಿಸಲ್ಪಟ್ಟಿದೆ. MySQLನೊಂದಿಗೆ ಬಳಸಲ್ಪಡಲು ಅನುವಾಗುವಂತೆ ಇದು ಮೈಕೇಲ್ ವಾಲ್ಡ್ರೈಘಿಯಿಂದ PHPಯಲ್ಲಿ ಬರೆಯಲ್ಪಟ್ಟಿತು. ಈತ ವರ್ಡ್‌ಪ್ರೆಸ್‌ಗೆ ಈಗ ಲೇಖನ ನೀಡುತ್ತಿರುವ ಓರ್ವ ಅಭಿವರ್ಧಕನಾಗಿದ್ದಾನೆ. ವರ್ಡ್‌ಪ್ರೆಸ್ ಎಂಬುದು ಅಧಿಕೃತ ಉತ್ತರಾಧಿಕಾರಿಯಾಗಿದ್ದರೂ ಸಹ, ಬಿ೨ಎವಲ್ಯೂಷನ್ ಎಂಬ ಮತ್ತೊಂದು ಯೋಜನೆಯೂ ಸಕ್ರಿಯ ಅಭಿವೃದ್ಧಿಯಲ್ಲಿದೆ.
b೨ವಿನ ಒಂದು ಕವಲೊಡೆತವನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿದಂತೆ ಮ್ಯಾಟ್ ಮುಲ್ಲೆನ್‌ವೆಗ್ ಮತ್ತು ಮೈಕ್ ಲಿಟ್ಲ್ ನಡುವೆ ನಡೆದ ಒಂದು ಜಂಟಿ ಪ್ರಯತ್ನವಾಗಿ ೨೦೦೩ರಲ್ಲಿ ವರ್ಡ್‌ಪ್ರೆಸ್ ಮೊದಲು ಕಾಣಿಸಿಕೊಂಡಿತು.[೧೩] ಮುಲ್ಲೆನ್‌ವೆಗ್‌ನ ಓರ್ವ ಸ್ನೇಹಿತೆಯಾದ ಕ್ರಿಸ್ಟೀನ್ ಸೆಲ್ಲೆಕ್ ಎಂಬಾಕೆಯಿಂದ ವರ್ಡ್‌ಪ್ರೆಸ್ ಎಂಬ ಹೆಸರು ಸೂಚಿಸಲ್ಪಟ್ಟಿತು.[೧೪]
ಸ್ಪರ್ಧಾಶೀಲ ಮೂವಬಲ್ ಟೈಪ್ ಬಹುಉದ್ದೇಶಿತ ತಂತ್ರಾಂಶಕ್ಕೆ ಸಂಬಂಧಿಸಿದ್ದ ಪರವಾನಗಿಯ ಷರತ್ತುಗಳು ೨೦೦೪ರಲ್ಲಿ ಸಿಕ್ಸ್ ಅಪಾರ್ಟ್‌ನಿಂದ ಬದಲಾಯಿಸಲ್ಪಟ್ಟವು ಮತ್ತು ಅದರ ಅತ್ಯಂತ ಪ್ರಭಾವಶಾಲಿ ಬಳಕೆದಾರರಲ್ಲಿ ಅನೇಕರು ವರ್ಡ್‌ಪ್ರೆಸ್‌ಗೆ ವಲಸೆ ಹೋದರು.[೧೫][೧೬] ೨೦೦೯ರ ಅಕ್ಟೋಬರ್ ವೇಳೆಗೆ, ಮುಕ್ತ ಮೂಲದ CMSನ ಮಾರುಕಟ್ಟೆ ಪಾಲಿನ ವರದಿಯು ತಳೆದ ನಿರ್ಣಯವೊಂದರ ಅನುಸಾರ, ಬೇರಾವುದೇ ಮುಕ್ತ ಮೂಲ ಪಠ್ಯವಿಷಯ ನಿರ್ವಹಣಾ ವ್ಯವಸ್ಥೆಗಳು ಹೊಂದಿದ್ದಕ್ಕಿಂತ ಮಹತ್ತರವಾದ ಬ್ರಾಂಡ್ ಶಕ್ತಿಯನ್ನು ವರ್ಡ್‌ಪ್ರೆಸ್ ಹೊಂದಿತ್ತು ಎಂದು ಕಂಡುಬಂತು.[೧೭]
ಪ್ರಶಸ್ತಿಗಳು
[ಬದಲಾಯಿಸಿ]೨೦೦೭ರಲ್ಲಿ ಪ್ಯಾಕ್ಟ್ ಮುಕ್ತ ಮೂಲದ CMS ಪ್ರಶಸ್ತಿಯೊಂದನ್ನು ವರ್ಡ್ ಪ್ರೆಸ್ ಗೆದ್ದಿತು.[೧೮]
೨೦೦೯ರಲ್ಲಿ ಅತ್ಯುತ್ತಮ ಮುಕ್ತ ಮೂಲದ CMS ಪ್ರಶಸ್ತಿಯನ್ನು ವರ್ಡ್‌ಪ್ರೆಸ್ ಗೆದ್ದಿತು.[೧೯]
ಪ್ರಾಯೋಜಿತ ವಿಷಯ-ವಸ್ತುಗಳನ್ನು ತೆಗೆದುಹಾಕುವಿಕೆ
[ಬದಲಾಯಿಸಿ]ವರ್ಡ್ ಪ್ರೆಸ್ ಪರಿಕಲ್ಪನೆಗಳ ವೇದಿಕೆಯಲ್ಲಿ[೨೦] ನಡೆದ ಚರ್ಚೆಯೊಂದನ್ನು ಅನುಸರಿಸಿ ಮತ್ತು ಮಾರ್ಕ್ ಘೋಷ್ ತನ್ನ ವೆಬ್ಲಾಗ್ ಟೂಲ್ಸ್ ಕಲೆಕ್ಷನ್[೨೧] ಎಂಬ ಬ್ಲಾಗ್‌ನಲ್ಲಿ ನೀಡಿದ ಪ್ರಕಟಣೆಯೊಂದನ್ನು ಅನುಸರಿಸಿ, ೨೦೦೭ರ ಜುಲೈ ೧೦ರಂದು ಮ್ಯಾಟ್ ಮುಲ್ಲೆನ್‌ವೆಗ್ ಪ್ರಕಟಣೆಯೊಂದನ್ನು ನೀಡಿದ; http://themes.wordpress.netನಲ್ಲಿ ಲಭ್ಯವಿರುವ ವರ್ಡ್‌ಪ್ರೆಸ್ ವಿಷಯ-ವಸ್ತುವಿನ ಅಧಿಕೃತ ನಿರ್ದೇಶಿಕೆಯು ಪ್ರಾಯೋಜಿತ ಕೊಂಡಿಗಳನ್ನು ಹೊಂದಿರುವ ವಿಷಯ-ವಸ್ತುಗಳನ್ನು ಇನ್ನುಮುಂದೆ ಆಯೋಜಿಸುವುದಿಲ್ಲ ಎಂಬುದೇ ಆ ಪ್ರಕಟಣೆಯಾಗಿತ್ತು.[೨೨][೨೩] ಪ್ರಾಯೋಜಿತ ವಿಷಯ-ವಸ್ತುಗಳ[ಸೂಕ್ತ ಉಲ್ಲೇಖನ ಬೇಕು] ವಿನ್ಯಾಸಕಾರರು ಮತ್ತು ಬಳಕೆದಾರರಿಂದ ಈ ಕ್ರಮವು ಟೀಕಿಸಲ್ಪಟ್ಟಿತಾದರೂ, ಇಂಥ ವಿಷಯ-ವಸ್ತುಗಳನ್ನು ಸ್ಪ್ಯಾಮ್ ಅಥವಾ ಕಳಪೆ ವಸ್ತುಗಳು ಎಂಬುದಾಗಿ ಪರಿಗಣಿಸುವ ವರ್ಡ್‌ಪ್ರೆಸ್ ಬಳಕೆದಾರರಿಂದ ಈ ಕ್ರಮವು ಶ್ಲಾಘಿಸಲ್ಪಟ್ಟಿತು.[ಸೂಕ್ತ ಉಲ್ಲೇಖನ ಬೇಕು] ಸದರಿ ಪ್ರಕಟಣೆಯನ್ನು ಮಾಡಿದ ಕೆಲಕಾಲದ ನಂತರ, ಪ್ರಾಯೋಜಿತ ಕೊಂಡಿಗಳಿರದ ವಿಷಯ-ವಸ್ತುಗಳೂ ಸೇರಿದಂತೆ ಯಾವುದೇ ಹೊಸ ವಿಷಯ-ವಸ್ತುಗಳನ್ನು ಸ್ವೀಕರಿಸುವುದನ್ನು ವರ್ಡ್‌ಪ್ರೆಸ್ ವಿಷಯ-ವಸ್ತುವಿನ ಅಧಿಕೃತ ನಿರ್ದೇಶಿಕೆಯು ನಿಲ್ಲಿಸಿತು. ಪ್ರಾಯೋಜಿತ ವಿಷಯ-ವಸ್ತುಗಳು ಈಗಲೂ ಎಲ್ಲೆಡೆ ಲಭ್ಯವಿವೆ; ಅಷ್ಟೇ ಅಲ್ಲ, ಮೂರನೇ ಪಕ್ಷಸ್ಥರಿಂದ ಸೇರ್ಪಡೆ ಮಾಡಲ್ಪಟ್ಟಿರುವ ಹೆಚ್ಚುವರಿ ಪ್ರಾಯೋಜಿತ ಕೊಂಡಿಗಳೊಂದಿಗಿನ ಉಚಿತವಾದ ವಿಷಯ-ವಸ್ತುಗಳು ಕೂಡಾ ಲಭ್ಯವಿವೆ.[೨೪][೨೫]
೨೦೦೮ರ ಜುಲೈ ೧೮ರಂದು http://wordpress.org/extend/themes/ನಲ್ಲಿ ವಿಷಯ-ವಸ್ತುವಿನ ಹೊಸ ನಿರ್ದೇಶಿಕೆಯೊಂದು ಪ್ರಾರಂಭವಾಯಿತು. ಪ್ಲಗ್-ಇನ್‌ಗಳ ನಿರ್ದೇಶಿಕೆಯ[೨೬] ಮಾದರಿಯಲ್ಲಿಯೇ ಇದು ವಿನ್ಯಾಸಗೊಳಿಸಲ್ಪಟ್ಟಿತ್ತು; ಇದಕ್ಕೆ ಅಪ್‌ಲೋಡ್ ಮಾಡಲಾದ ಯಾವುದೇ ವಿಷಯ-ವಸ್ತುವೂ ಕೂಲಂಕಷವಾಗಿ ಪರಿಶೀಲಿಸಲ್ಪಡುತ್ತದೆ. ಅಂದರೆ, ಸ್ವಯಂಚಾಲನಗೊಳಿಸಲ್ಪಟ್ಟ ಕಾರ್ಯಸೂಚಿಯೊಂದರಿಂದ ಮೊದಲಿಗೆ ಹಾಗೂ ಮಾನವ ಹಸ್ತಕ್ಷೇಪವೊಂದರ ಮೂಲಕ ನಂತರದಲ್ಲಿ ಈ ಪ್ರಕ್ರಿಯೆಯು ನಡೆಯುತ್ತದೆ.
೨೦೦೮ರ ಡಿಸೆಂಬರ್ ೧೨ರಂದು, ೨೦೦ಕ್ಕೂ ಹೆಚ್ಚಿನ ವಿಷಯ-ವಸ್ತುಗಳನ್ನು ವರ್ಡ್‌ಪ್ರೆಸ್‌ನ ವಿಷಯ-ವಸ್ತು ನಿರ್ದೇಶಿಕೆಯಿಂದ ತೆಗೆದುಹಾಕಲಾಯಿತು; ಅವು GPL ಪರವಾನಗಿಯ ಅವಶ್ಯಕತೆಗಳೊಂದಿಗೆ ಸರಿಹೊಂದಿಕೊಳ್ಳದಿದ್ದುದೇ ಇದಕ್ಕೆ ಕಾರಣವಾಗಿತ್ತು.[೨೭] ಇಂದು ಪ್ರತಿಯೊಂದು ವಿಷಯ-ವಸ್ತುವಿನಲ್ಲಿಯೂ ಲೇಖಕ ನಮೂದುಗಳಿಗೆ ಅನುಮತಿಸಲಾಗಿದೆಯಾದರೂ, GPLಗೆ ಹೊಂದಿಕೆಯಾಗದ ವಿಷಯ-ವಸ್ತುಗಳನ್ನು ವಿತರಿಸುವ ತಾಣಗಳಿಗೆ ಇರುವ ಪ್ರಾಯೋಜಕತೆಗಳು ಅಥವಾ ಕೊಂಡಿಗಳಿಗೆ ಸಂಬಂಧಿಸಿದಂತೆ ಅಧಿಕೃತ ಕಾರ್ಯನೀತಿಯು ಅವಕಾಶ ನೀಡುವುದಿಲ್ಲ. GPL ಅನುವರ್ತನಶೀಲವಲ್ಲದ ವಿಷಯ-ವಸ್ತುಗಳು ಈಗ ಇತರ ವಿಷಯ-ವಸ್ತು ನಿರ್ದೇಶಿಕೆಗಳ ತಾಣದ ವಲಯದಲ್ಲಿ ಆಯೋಜಿಸಲ್ಪಡುತ್ತಿವೆ.
ಬಿಡುಗಡೆಗಳು
[ಬದಲಾಯಿಸಿ]೧.೦ರ ಆವೃತ್ತಿಯ ನಂತರ ಆರಂಭವಾಗುವ ಬಹುಪಾಲು ವರ್ಡ್‌ಪ್ರೆಸ್ ಬಿಡುಗಡೆಗಳು ಸುಪರಿಚಿತ ಜಾಝ್ ಸಂಗೀತಗಾರರ ಹೆಸರಿನಲ್ಲಿ ಸಂಕೇತದ ಹೆಸರನ್ನಿಟ್ಟುಕೊಂಡಿವೆ.[೨೮]
ಆವೃತ್ತಿ | ಸಂಕೇತನಾಮ | ಬಿಡುಗಡೆ ದಿನಾಂಕ | ಟಿಪ್ಪಣಿಗಳು |
---|---|---|---|
0.70 | 2003ರ ಮೇ 27 | ತನ್ನ ಪೂರ್ವವರ್ತಿಯಾದ ಬಿ2/ಕೆಫೆಲಾಗ್ ರೀತಿಯಲ್ಲಿಯೇ, ಅದೇ ರೀತಿಯ ಕಡತ ರಚನೆಯನ್ನು ಇದು ಒಳಗೊಂಡಿತ್ತು. ವರ್ಡ್‌ಪ್ರೆಸ್ ಬಿಡುಗಡೆಯ ಅಧಿಕೃತ ದಾಖಲೆ ಸಂಗ್ರಹ ಪುಟದಲ್ಲಿ ಡೌನ್‌ಲೋಡ್‌ಗಾಗಿ ಕೇವಲ 0.71-ಗೋಲ್ಡ್ ಲಭ್ಯವಿದೆ. | |
1.2 | ಮಿಂಗಸ್ | 2004ರ ಮೇ 22 | ಪ್ಲಗ್‌ಇನ್‌ಗಳ ಬೆಂಬಲದ ಅಂಶಗಳನ್ನು ಒಳಗೊಂಡಿರುವುದಕ್ಕೆ ಸಂಬಂಧಿಸಿದಂತೆ ಇದು ಗಮನಾರ್ಹವಾಗಿದೆ. ವಿನೂತನ ವರ್ಡ್‌ಪ್ರೆಸ್ ಬಿಡುಗಡೆಗಳಲ್ಲಿ ಪ್ಲಗ್‌ಇನ್‌ನ ಅದೇ ಗುರುತಿನ ಮೇಲ್ಬರಹಗಳು ಬದಲಾವಣೆ ಮಾಡಲ್ಪಡದೆಯೇ ಈಗಲೂ ಬಳಸಲ್ಪಡುತ್ತಿವೆ. |
1.5 | ಸ್ಟ್ರೇಹಾರ್ನ್ | 2005ರ ಫೆಬ್ರುವರಿ 17 | ಸ್ಥಿರ ಪುಟಗಳನ್ನು ಮತ್ತು ಪಡಿಯಚ್ಚಿನ/ವಿಷಯ-ವಸ್ತುವಿನ ವ್ಯವಸ್ಥೆಯೊಂದನ್ನು ನಿರ್ವಹಿಸುವ ಸಾಮರ್ಥ್ಯದಂಥ, ಒಂದು ವ್ಯಾಪಕವಾದ ಅತಿಮುಖ್ಯವಾದ ಲಕ್ಷಣಗಳನ್ನು ಸ್ಟ್ರೇಹಾರ್ನ್ ಸೇರ್ಪಡೆ ಮಾಡಿತು. ಮೈಕೇಲ್ ಹೀಲ್‌ಮನ್‌ನಿಂದ ವಿನ್ಯಾಸಗೊಳಿಸಲ್ಪಟ್ಟ (ಕ್ಯುಬ್ರಿಕ್ [೨೯] ಎಂಬ ಸಂಕೇತನಾಮನ್ನಿಟ್ಟುಕೊಂಡಿರುವ) ಒಂದು ಹೊಸ ಪೂರ್ವನಿಶ್ಚಿತ ಪಡಿಯಚ್ಚಿನೊಂದಿಗೂ ಇದು ಸಜ್ಜುಗೊಂಡಿತ್ತು. |
೨.೦ | ಡ್ಯೂಕ್ | ೨೦೦೫ರ ಡಿಸೆಂಬರ್ ೩೧ | ಸಮೃದ್ಧ ಪರಿಷ್ಕರಣೆ, ಅತ್ಯುತ್ತಮವಾದ ನಿರ್ವಹಣಾ ಸಾಧನಗಳು, ಚಿತ್ರಿಕೆಯನ್ನು ಅಪ್‌ಲೋಡ್ ಮಾಡುವ ವ್ಯವಸ್ಥೆ, ಅತಿವೇಗದ ಪ್ರಕಟಗೊಳ್ಳುವಿಕೆ, ಒಂದು ಸುಧಾರಿತ ತಂದುಕೊಳ್ಳುವ ವ್ಯವಸ್ಥೆ ಮೊದಲಾದವುಗಳನ್ನು ಈ ಆವೃತ್ತಿಯು ಸೇರ್ಪಡೆ ಮಾಡಿತು ಮತ್ತು ಹಿಂತುದಿಯನ್ನು ಸಂಪೂರ್ಣವಾಗಿ ಕೂಲಂಕಷವಾಗಿ ಪರೀಕ್ಷಿಸಿತು. ಪ್ಲಗ್‌ಇನ್ ಅಭಿವರ್ಧಕರಿಗೆ ಅಗತ್ಯವಿರುವ ಹಲವಾರು ಸುಧಾರಣೆಗಳನ್ನೂ ಸಹ ವರ್ಡ್‌ಪ್ರೆಸ್ ೨.೦ ಆವೃತ್ತಿಯು ಮುಂದುಮಾಡಿತು.[೩೦] |
೨.೧ | ಎಲ್ಲಾ | ೨೦೦೭ರ ಜನವರಿ ೨೨ | ಭದ್ರತಾ ಸಮಸ್ಯೆಗಳನ್ನು ಸರಿಪಡಿಸುವುದರ ಜೊತೆಗೆ ೨.೧ರ ಆವೃತ್ತಿಯು ಒಂದು ಮರು-ವಿನ್ಯಾಸಗೊಳಿಸಲ್ಪಟ್ಟ ಇಂಟರ್‌ಫೇಸ್, ವರ್ಧಿಸಲ್ಪಟ್ಟ ಪರಿಷ್ಕರಣಾ ಸಾಧನಗಳು (ಸಂಯೋಜಿತ ಕಾಗುಣಿತ ತಪಾಸಣೆ ಮತ್ತು ಸ್ವಯಂ ಉಳಿಸುವಿಕೆಯನ್ನು ಒಳಗೊಂಡಂತೆ), ಮತ್ತು ಸುಧಾರಿತ ವಿಷಯ ನಿರ್ವಹಣಾ ಆಯ್ಕೆಗಳನ್ನು ಒಳಗೊಂಡಿತ್ತು.[೩೧] |
೨-೨ | ಗೆಟ್ಜ್ | ೨೦೦೭ರ ಮೇ ೧೬ | ಪಡಿಯಚ್ಚುಗಳಿಗೆ ಮೀಸಲಾದ ಸಲಕರಣೆಯ ಬೆಂಬಲ, ಪರಿಷ್ಕರಿಸಲ್ಪಟ್ಟ ಆಟಂ ಪೂರೈಕೆಯ ಬೆಂಬಲ, ಮತ್ತು ವೇಗದ ಅತ್ಯುತ್ತಮವಾಗಿಸುವಿಕೆಯಂಥ ಲಕ್ಷಣಗಳನ್ನು ೨.೨ರ ಆವೃತ್ತಿಯು ಒಳಗೊಂಡಿತ್ತು.[೩೨] |
೨.೩ | ಡೆಕ್ಸ್‌ಟರ್ | ೨೦೦೭ರ ಸೆಪ್ಟೆಂಬರ್ ೨೪ | ಸ್ಥಳೀಯ ಲಗತ್ತಿಸುವಿಕೆಯ ಬೆಂಬಲ, ವರ್ಗಗಳಿಗಾಗಿರುವ ಹೊಸ ವರ್ಗೀಕರಣ ವ್ಯವಸ್ಥೆ ಹಾಗೂ ಪರಿಷ್ಕರಣೆಗಳ ಸುಲಭದ ಪ್ರಕಟಣೆಯಂಥ ಲಕ್ಷಣಗಳನ್ನು ೨.೩ರ ಆವೃತ್ತಿ ಒಳಗೊಂಡಿತ್ತು. ಪ್ರಕಟಣಾ ವಿಧ್ಯುಕ್ತ ಸೂತ್ರಗಳ ಜೊತೆಜೊತೆಗೆ ಆಟಂ ೧.೦ನ್ನೂ ಸಹ ೨.೩ರ ಆವೃತ್ತಿಯು ಸಂಪೂರ್ಣವಾಗಿ ಬೆಂಬಲಿಸುತ್ತದೆ, ಮತ್ತು ಸಾಕಷ್ಟು ಅಗತ್ಯವಿರುವ ಕೆಲವೊಂದು ಭದ್ರತಾ ನಿರ್ಧಾರಕಗಳನ್ನು ಇದು ಒಳಗೊಂಡಿದೆ.[೩೩] |
೨.೫ | ಬ್ರೆಕರ್ | ೨೦೦೮ರ ಮಾರ್ಚ್ ೨೯ | ೨.೪ರ ಆವೃತ್ತಿಯ ಬಿಡುಗಡೆಯನ್ನು ಅಭಿವರ್ಧಕರು ಕೈಬಿಟ್ಟರು. ಆದ್ದರಿಂದ ಹೊಸ ಸಂಕೇತಕ್ಕೆ ಅರ್ಹವಾಗಿದ್ದ ಎರಡು ಬಿಡುಗಡೆಗಳನ್ನು ೨.೫ರ ಆವೃತ್ತಿ ಒಳಗೊಂಡಿತ್ತು. ವರ್ಡ್‌ಪ್ರೆಸ್ ೨.೫ರ ಆವೃತ್ತಿಯು ನಿರ್ವಹಣಾ ಇಂಟರ್‌ಫೇಸ್‌ನ ಒಂದು ಸಂಪೂರ್ಣ ಕೂಲಂಕಷ ಪರೀಕ್ಷೆಯನ್ನು ಕಂಡಿತು ಮತ್ತು ಹೊಸ ಶೈಲಿಗೆ ಹೊಂದಿಸುವ ಸಲುವಾಗಿ ವರ್ಡ್‌ಪ್ರೆಸ್ ವೆಬ್‌ಸೈಟ್ ಕೂಡಾ ಮರು-ವಿನ್ಯಾಸಗೊಳಿಸಲ್ಪಟ್ಟಿತು.[೩೪] |
೨.೬ | ಟೈನರ್ | ೨೦೦೮ರ ಜುಲೈ ೧೫ | ವರ್ಡ್‌ಪ್ರೆಸ್ ಒಂದು ಹೆಚ್ಚು ಶಕ್ತಿಯುತ CMS ಆಗುವಲ್ಲಿ ಕಾರಣವಾದ ಹೊಸ ಲಕ್ಷಣಗಳನ್ನು ಟೈನರ್ ಒಳಗೊಂಡಿತ್ತು: ಈಗ ನೀವು ಪ್ರತಿಯೊಂದು ಪ್ರಕಟಣೆ ಮತ್ತು ಪುಟದ ಪಥ ಬದಲಾವಣೆಗಳನ್ನು ಮಾಡಬಹುದು; ಅಷ್ಟೇ ಅಲ್ಲ, ವೆಬ್‌ನಲ್ಲಿ ನೀವು ಎಲ್ಲಿದ್ದರೂ ಸಹ ಅಲ್ಲಿಂದಲೇ ಸುಲಭವಾಗಿ ಪ್ರಕಟಣೆ ಮಾಡಬಹುದು.[೩೫] |
೨.೭ | ಕೊಲ್‌ಟ್ರೇನ್ | ೨೦೦೮ರ ಡಿಸೆಂಬರ್ ೧೧ | ನಿರ್ವಹಣಾ ಇಂಟರ್‌ಫೇಸ್ ಸಂಪೂರ್ಣವಾಗಿ ಮರು-ವಿನ್ಯಾಸಗೊಳಿಸಲ್ಪಟ್ಟಿದ್ದನ್ನು ಇದು ಮತ್ತೊಮ್ಮೆ ಕಂಡಿತು. ಒಂದು ಸ್ವಯಂಚಾಲಿತ ಉನ್ನತೀಕರಣ ಲಕ್ಷಣ, ಹಾಗೂ ನಿರ್ವಹಣಾ ಇಂಟರ್‌ಫೇಸ್‌ನ ವ್ಯಾಪ್ತಿಯೊಳಗಿನಿಂದಲೇ ಪ್ಲಗ್‌ಇನ್‌ಗಳ ಸ್ವಯಂಚಾಲಿತ ಅಳವಡಿಸುವಿಕೆಯನ್ನು ಕೂಡಾ ಇದು ಪರಿಚಯಿಸುತ್ತದೆ.[೩೬] |
೨.೮ | ಬೇಕರ್ | ೨೦೦೯ರ ಜೂನ್ ೧೦ | ವೇಗದಲ್ಲಿನ ಸುಧಾರಣೆಗಳು, ಹಾಗೂ ನಿರ್ವಹಣಾ ಇಂಟರ್‌ಫೇಸ್‌ನ ವ್ಯಾಪ್ತಿಯೊಳಗಿನಿಂದಲೇ ವಿಷಯ-ವಸ್ತುಗಳ ಸ್ವಯಂಚಾಲಿತ ಅಳವಡಿಸುವಿಕೆಯಾಗುವುದನ್ನು ಬೇಕರ್ ಮುಂದುಮಾಡಿತು. ವಾಕ್ಯರಚನೆಯ ಎದ್ದುಕಾಣಿಸುವಿಕೆಗೆ ಸಂಬಂಧಿಸಿದ ಒಂದು ಕೋಡ್‌ಪ್ರೆಸ್ ಪರಿಷ್ಕಾರಕವನ್ನೂ ಇದು ಪರಿಚಯಿಸುತ್ತದೆ ಮತ್ತು ಒಂದು ಮರು-ವಿನ್ಯಾಸಗೊಳಿಸಲ್ಪಟ್ಟ ಸಲಕರಣೆಯ ಇಂಟರ್‌ಫೇಸ್‌ನ್ನು ಇದು ಒಳಗೊಂಡಿದೆ.[೩೭] |
೨.೯ | ಕಾರ್ಮೆನ್ | ೨೦೦೯ರ ಡಿಸೆಂಬರ್ ೧೯ | ಒಂದು ಸಮಗ್ರವಾದ ರದ್ದುಗೊಳಿಸುವ ಲಕ್ಷಣ, ಒಂದು ಅಂತರ್‌ನಿರ್ಮಿತ ಚಿತ್ರಿಕೆಯ ಪರಿಷ್ಕಾರಕ, ವರ್ಗದ ಪ್ಲಗ್‌ಇನ್ ಪರಿಷ್ಕರಣ, ಮತ್ತು ಆವರಣದೊಳಗಿನ ಹಲವಾರು ಸೂಕ್ಷ್ಮ-ಹೊಂದಾಣಿಕೆಗಳನ್ನು ಕಾರ್ಮೆನ್ ನೀಡುತ್ತದೆ.[೩೮] |
೩.೦ | ಥೆಲೋನಿಯಸ್ | ೨೦೧೦ರ ಜೂನ್ ೧೭ | ವಿಷಯ-ವಸ್ತುವಿನ ಹೊಸ APIಗಳ ಜೊತೆಗೆ "ಟ್ವೆಂಟಿ ಟೆನ್" ಎಂದು ಕರೆಯಲ್ಪಡುವ ಒಂದು ಹೊಸ ಪೂರ್ವನಿಶ್ಚಿತ ವಿಷಯ-ವಸ್ತುವನ್ನು ಥೆಲೋನಿಯಸ್ ನೀಡುತ್ತದೆ; ಬಹು-ತಾಣದ ಹೊಸ ಕಾರ್ಯಾತ್ಮಕತೆಯನ್ನು ಸೃಷ್ಟಿಸುವ ವರ್ಡ್‌ಪ್ರೆಸ್ ಮತ್ತು ವರ್ಡ್‌ಪ್ರೆಸ್ MUನ ವಿಲೀನ, ಮತ್ತು ಆವರಣದೊಳಗಿನ ಹಲವಾರು ಸೂಕ್ಷ್ಮ-ಹೊಂದಾಣಿಕೆಗಳು ಇದರ ಲಕ್ಷಣಗಳಾಗಿವೆ.[೩೯] |
೩.೧ | ರೀನ್‌ಹಾರ್ಟ್ | ೨೦೧೧ರ ಫೆಬ್ರುವರಿ ೨೩ | ನಿರ್ವಹಣಾ ಪಟ್ಟಿಯನ್ನು ಸೇರಿಸಲಾಯಿತು. |
೩.೨ | ಗರ್ಷ್ವಿನ್ | ೨೦೧೧ರ ಜುಲೈ ೪ | ವರ್ಡ್ ಪ್ರೆಸ್ ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಯಿತು. |
೩.೩ | ಸಾನ್ನಿ | ೨೦೧೧ರ ಡಿಸೆಂಬರ್ ೧೨ | ಹೊಸಬರಿಗೆ ಹಾಗೂ ಟ್ಯಾಬ್ಲೆಟ್ ಗಣಕ ಬಳಕೆದಾರರಿಗೆ ಉಪಯೋಗಿಸಲು ಸುಲಭವಾಗುವಂತೆ ಮಾಡಲಾಯಿತು. |
೩.೪ | "ಗ್ರೀನ್" | ೨೦೧೨ರ ಜೂನ್ ೧೩ | ಥೀಮ್ ಕಸ್ಟಮೈಸೇಷನ್ನೊಂದಿಗೆ, ಟ್ವಿಟರ್ ಸಂಯೋಜನೆ ಮತ್ತು ಹಲವಾರು ಸಣ್ಣ ಸುಧಾರಣೆಗಳಿಗೆ ಒತ್ತು ನೀಡಲಾಯಿತು. |
೩.೫ | "ಎಲ್ವಿನ್" | ೨೦೧೨ನೇ ಡಿಸೆಂಬರ್ ೧೧ | ರೆಟಿನಾ ಪರದೆ ಬೆಂಬಲ, ಟ್ವೆಂಟಿ ಟ್ವೆಲ್ವ್ ಹೊಸ ಥೀಮ್, ಹೊಸ ಬಣ್ಣ ಆರಿಸುವ ಸಲಕರಣೆ, ಸುಧಾರಿತ ಚಿತ್ರ ಕಾರ್ಯ ಪ್ರಗತಿ. |
ಭವಿಷ್ಯ
[ಬದಲಾಯಿಸಿ]ವರ್ಡ್‌ಪ್ರೆಸ್ ೩.೦ರ ಆವೃತ್ತಿಯ ಬಿಡುಗಡೆಯ ನಂತರ, ವರ್ಡ್‌ಪ್ರೆಸ್ ಬ್ಲಾಗ್‌ನ್ನು ಮ್ಯಾಟ್ ಮುಲ್ಲೆನ್‌ವೆಗ್ ಪರಿಷ್ಕರಿಸಿದ. ವರ್ಡ್‌ಪ್ರೆಸ್ ಸಮುದಾಯವನ್ನು ವಿಸ್ತರಿಸುವುದರ ಮತ್ತು ಸುಧಾರಿಸುವುದರ ಕುರಿತಾಗಿ ಗಮನ ಹರಿಸುವ ದೃಷ್ಟಿಯಿಂದ ಅವನ ತಂಡವು ವರ್ಡ್‌ಪ್ರೆಸ್ ತಂತ್ರಾಂಶದಿಂದ ಬಿಡುಗಡೆಯ ಆವರ್ತನವೊಂದನ್ನು ದೂರಸರಿಸುತ್ತಿದೆ ಎಂಬುದನ್ನು ಸಮುದಾಯವು ಅರಿಯಲು ಇದು ಅವಕಾಶ ಕಲ್ಪಿಸಿತು.[೪೦][೪೧] ವರ್ಡ್‌ಪ್ರೆಸ್ ೩.೧ ಮತ್ತು ೩.೨ರ ಆವೃತ್ತಿಗಳ ಬಿಡುಗಡೆಯು ೨೦೧೧ರ ಆರಂಭದಲ್ಲಿ ಮತ್ತು ೨೦೧೧ರ ಪ್ರಥಮಾರ್ಧದಲ್ಲಿ ಕ್ರಮವಾಗಿ ಆಗಲಿದೆ. ೩.೨ರ ಆವೃತ್ತಿಯ ಬಿಡುಗಡೆಯ ನಂತರ, ಕನಿಷ್ಟ ಅವಶ್ಯಕತೆಯ PHP ಆವೃತ್ತಿ ಮತ್ತು MySQLನ್ನೂ ಸಹ ಉನ್ನತೀಕರಿಸಲಾಗುವುದು.[೪೨]
ಭೇದ್ಯಗಳು
[ಬದಲಾಯಿಸಿ]ತಂತ್ರಾಂಶದಲ್ಲಿನ ಅನೇಕ ಭದ್ರತಾ ಸಮಸ್ಯೆಗಳು[೪೩][೪೪], ನಿರ್ದಿಷ್ಟವಾಗಿ ೨೦೦೭ ಮತ್ತು ೨೦೦೮ರಲ್ಲಿ, ಬಹಿರಂಗವಾದವು. ಸೆಕ್ಯುನಿಯಾದ ಅನುಸಾರ, ೨೦೦೯ರ ಏಪ್ರಿಲ್‌ನಲ್ಲಿ ಸರಿಹೊಂದಿಸಿರದ ೭ ಭದ್ರತಾ ಸಲಹಾ ವ್ಯವಸ್ಥೆಗಳನ್ನು (ಒಟ್ಟು ೩೨ ವ್ಯವಸ್ಥೆಗಳ ಪೈಕಿ) ವರ್ಡ್‌ಪ್ರೆಸ್ ಹೊಂದಿತ್ತು ಮತ್ತು ಅವು "ಕಡಿಮೆ ನಿರ್ಣಾಯಕ" ಎಂಬ ಒಂದು ಗರಿಷ್ಟ ಶ್ರೇಯಾಂಕವನ್ನು ಹೊಂದಿದ್ದವು.[೪೫] ಸದ್ಯೋಚಿತವಾಗಿರುವ ವರ್ಡ್‌ಪ್ರೆಸ್ ಭೇದ್ಯಗಳ ಪಟ್ಟಿಯೊಂದನ್ನು ಸೆಕ್ಯುನಿಯಾ ಕಾಯ್ದುಕೊಂಡಿದೆ.[೪೬][೪೭]
ಉನ್ನತ-ಮಟ್ಟದ ಅಥವಾ ಗಮನ ಸೆಳೆಯುವ ಶೋಧಕ ಎಂಜಿನು ಅತ್ಯುತ್ತಮವಾಗಿಸುವಿಕೆಯ (ಸರ್ಚ್ ಎಂಜಿನ್ ಆಪ್ಟಿಮೈಸೇಷನ್-SEO) ಅನೇಕ ಬ್ಲಾಗ್‌ಗಳಷ್ಟೇ ಅಲ್ಲದೇ, ಆಡ್‌ಸೆನ್ಸ್‌ನ್ನು ಒಳಗೊಂಡಿರುವ ಗಮನ ಸೆಳೆಯದಿರುವ ಅನೇಕ ವಾಣಿಜ್ಯ ಬ್ಲಾಗ್‌ಗಳ ಮೇಲೆ ಗುರಿಯಿಟ್ಟುಕೊಂಡು ೨೦೦೭ರ ಜನವರಿಯಲ್ಲಿ, ವರ್ಡ್‌ಪ್ರೆಸ್ ಸಾಹಸಕಾರ್ಯದ ಯಶಸ್ವೀ ದಾಳಿಮಾಡಲಾಯಿತು.[೪೮] ಯೋಜನಾ ತಾಣದ ವೆಬ್ ಸರ್ವರ್‌ಗಳ ಪೈಕಿ ಒಂದರ ಮೇಲಿನ ಪ್ರತ್ಯೇಕ ಭೇದ್ಯತೆಯೊಂದು, ವರ್ಡ್‌ಪ್ರೆಸ್ ೨.೧.೧ರ ಆವೃತ್ತಿಯ ಕೆಲವೊಂದು ಡೌನ್‌ಲೋಡ್‌ಗಳಿಗಿರುವ ಹಿಂಬಾಗಿಲಿನ ಸ್ವರೂಪವೊಂದರಲ್ಲಿ ಉಪಯೋಗಕ್ಕೆ ಬರುವ ಸಂಕೇತವನ್ನು ಪರಿಚಯಿಸುವುದಕ್ಕೆ ದಾಳಿಕಾರನೊಬ್ಬನಿಗೆ ಅವಕಾಶಮಾಡಿಕೊಟ್ಟಿತು. ೨.೧.೨ರ ಬಿಡುಗಡೆಯು ಈ ಸಮಸ್ಯೆಯನ್ನು ಸರಿಪಡಿಸಿತು; ಈ ಸಮಯದಲ್ಲಿ ಬಿಡುಗಡೆಯಾದ ಸಲಹಾ ವ್ಯವಸ್ಥೆಯೊಂದು ತತ್‌ಕ್ಷಣದಲ್ಲಿ ಉನ್ನತೀಕರಿಸುವುದರ ಕುರಿತು ಎಲ್ಲಾ ಬಳಕೆದಾರರಿಗೆ ಸಲಹೆ ನೀಡಿತು.[೪೯]
ಚಾಲಿಸಲ್ಪಡುತ್ತಿರುವ ವರ್ಡ್‌ಪ್ರೆಸ್ ಬ್ಲಾಗ್‌ಗಳ ಪೈಕಿ ೯೮%ನಷ್ಟು ಬ್ಲಾಗ್‌ಗಳು ಉಪಯೋಗಕ್ಕೆ ಬರುವ ರೀತಿಯಲ್ಲಿದ್ದವು ಎಂಬ ಅಂಶವನ್ನು ೨೦೦೭ರ ಮೇ ತಿಂಗಳಲ್ಲಿ ಅಧ್ಯಯನವೊಂದು ಹೊರಗೆಡವಿತು; ಏಕೆಂದರೆ ತಂತ್ರಾಂಶದ ಹಳತಾದ ಮತ್ತು ಬೆಂಬಲವಿಲ್ಲದ ಆವೃತ್ತಿಗಳನ್ನು ಓಡಿಸುತ್ತಿದ್ದವು.[೫೦]
PHP ಭದ್ರತಾ ಪ್ರತಿಕ್ರಿಯಾ ತಂಡದ ಸಂಸ್ಥಾಪಕನಾದ ಸ್ಟೆಫೆನ್ ಎಸ್ಸರ್ ಎಂಬಾತ ೨೦೦೭ರ ಜೂನ್‌ನಲ್ಲಿ ಬಂದ ಸಂದರ್ಶನವೊಂದರಲ್ಲಿ ವರ್ಡ್‌ಪ್ರೆಸ್‌ನ ಭದ್ರತಾ ಪಥದ ದಾಖಲೆಯ ಕುರಿತಾಗಿ ನಿರ್ಣಾಯಕವಾಗಿ ಮಾತನಾಡಿದ; ಅನ್ವಯಿಕೆಯ ವಿನ್ಯಾಸದೊಂದಿಗಿರುವ ಸಮಸ್ಯೆಗಳನ್ನು ಆತ ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಾ, SQL ಒಳಹೊಗಿಸುವಿಕೆಯ ಭೇದ್ಯಗಳಷ್ಟೇ ಅಲ್ಲದೇ ಕೆಲವೊಂದು ಇತರ ಸಮಸ್ಯೆಗಳಿಂದ ದುರ್ಭೇಧ್ಯವಾಗಿರುವ ಸಂಕೇತದ ಬರೆಯುವಿಕೆಯನ್ನು ಸದರಿ ವಿನ್ಯಾಸವು ಅನವಶ್ಯಕವಾಗಿ ಕಷ್ಟಕರವಾಗಿಸಿದೆ ಎಂದು ತಿಳಿಸಿದ.[೫೧]
ಬಹು-ಬ್ಲಾಗಿಂಗ್
[ಬದಲಾಯಿಸಿ]ವರ್ಡ್‌ಪ್ರೆಸ್ ೩.೦ರ ಆವೃತ್ತಿಗೆ ಮುಂಚಿತವಾಗಿ, ತಲಾ ಅಳವಡಿಸುವಿಕೆಗೆ ಸಂಬಂಧಿಸಿ ಒಂದು ಬ್ಲಾಗ್‌ಗೆ ವರ್ಡ್‌ಪ್ರೆಸ್ ಬೆಂಬಲಿಸುತ್ತಿತ್ತಾದರೂ, ದತ್ತಾಂಶ ಸಂಗ್ರಹದ ಪ್ರತ್ಯೇಕ ಕೋಷ್ಟಕಗಳನ್ನು ಬಳಸಲು ಅನುವಾಗುವಂತೆ ಒಂದು ವೇಳೆ ವಿನ್ಯಾಸಗೊಳಿಸಲಾಗಿದ್ದರೆ, ವಿಭಿನ್ನ ನಿರ್ದೇಶಿಕೆಗಳಿಂದ ಬಹು ಸಹವರ್ತಿ ಪ್ರತಿಗಳನ್ನು ಚಾಲಿಸಲು ಇಲ್ಲಿ ಸಾಧ್ಯವಿತ್ತು. ವರ್ಡ್‌ಪ್ರೆಸ್ ಮಲ್ಟಿ-ಯೂಸರ್ (ವರ್ಡ್‌ಪ್ರೆಸ್ MU, ಅಥವಾ ಕೇವಲ WPMU) ಎಂಬುದು ವರ್ಡ್‌ಪ್ರೆಸ್‌ನ ಒಂದು ಕವಲೊಡೆತವಾಗಿದ್ದು, ಒಂದು ಕೇಂದ್ರೀಕೃತ ನಿರ್ವಾಹಕನಿಂದ ನಿರ್ವಹಿಸಲ್ಪಡಲು ಸಮರ್ಥವಾಗಿರುವ ಒಂದೇ ಅಳವಡಿಕೆಯ ವ್ಯಾಪ್ತಿಯೊಳಗೆ ಅನೇಕ ಬ್ಲಾಗ್‌ಗಳು ಅಸ್ತಿತ್ವ ಕಂಡುಕೊಳ್ಳುವುದಕ್ಕೆ ಅವಕಾಶ ನೀಡಲೆಂದು ಇದು ಸೃಷ್ಟಿಸಲ್ಪಟ್ಟಿದೆ. ವೆಬ್‌ಸೈಟ್ ಒಂದನ್ನು ಹೊಂದಿರುವವರು ತಮ್ಮದೇ ಆದ ಬ್ಲಾಗಿಂಗ್ ಸಮುದಾಯವನ್ನು ಆಯೋಜಿಸಲು ಅವಕಾಶ ನೀಡುವುದೇ ಅಲ್ಲದೇ, ಒಂದು ಸಲಕರಣೆಯ ಗೂಡಿನಿಂದ ಎಲ್ಲಾ ಬ್ಲಾಗ್‌ಗಳನ್ನೂ ನಿಯಂತ್ರಿಸುವ ಹಾಗೂ ಮಧ್ಯಸ್ಥಿಕೆ ವಹಿಸುವ ಪ್ರಕ್ರಿಯೆಯನ್ನು ವರ್ಡ್‌ಪ್ರೆಸ್ MU ಕಾರ್ಯಸಾಧ್ಯವಾಗಿಸುತ್ತದೆ. ಪ್ರತಿ ಬ್ಲಾಗ್‌ಗೆ ಸಂಬಂಧಿಸಿದಂತೆ ಎಂಟು ಹೊಸ ದತ್ತಾಂಶ ಕೋಷ್ಟಕಗಳನ್ನು ವರ್ಡ್‌ಪ್ರೆಸ್ MU ಸೇರ್ಪಡೆ ಮಾಡುತ್ತದೆ.
೩.೦ರ ಆವೃತ್ತಿಯ ಬಿಡುಗಡೆಯ ಭಾಗವಾಗಿ ವರ್ಡ್‌ಪ್ರೆಸ್‌ನೊಂದಿಗೆ ವರ್ಡ್‌ಪ್ರೆಸ್ MU ವಿಲೀನಗೊಂಡಿತು.[೫೨]
ಅತಿ ಮಹತ್ವದ ಅಭಿವರ್ಧಕರು
[ಬದಲಾಯಿಸಿ]ಮ್ಯಾಟ್ ಮುಲ್ಲೆನ್‌ವೆಗ್ ಮತ್ತು ಮೈಕ್ ಲಿಟ್ಲ್ ಎಂಬಿಬ್ಬರು ಸದರಿ ಯೋಜನೆಯ ಸಹ-ಸಂಸ್ಥಾಪಕರಾಗಿದ್ದರು. ಲೇಖನ ನೀಡುತ್ತಿರುವ ಪ್ರಮುಖ ಅಭಿವರ್ಧಕರಲ್ಲಿ ರೈಯಾನ್ ಬೋರೆನ್, ಮಾರ್ಕ್ ಜಾಕ್ವಿತ್, ಮ್ಯಾಟ್ ಮುಲ್ಲೆನ್‌ವೆಗ್, ಆಂಡ್ರ್ಯೂ ಓಜ್, ಮತ್ತು ಪೀಟರ್ ವೆಸ್ಟ್‌ವುಡ್ ಸೇರಿದ್ದಾರೆ.[೫೩]
ಪ್ರತಿ ಬಿಡುಗಡೆಯನ್ನು ಪರೀಕ್ಷಿಸುವ ಸ್ವಯಂಸೇವಕರ ಒಂದು ಗುಂಪಾದ WP ಟೆಸ್ಟರ್ಸ್ ನ್ನು ಒಳಗೊಂಡಂತೆ, ವರ್ಡ್‌ಪ್ರೆಸ್ ತನ್ನ ಸಮುದಾಯದಿಂದಲೂ ಅಭಿವೃದ್ಧಿಪಡಿಸಲ್ಪಡುತ್ತದೆ. ರಾತ್ರಿಯಲ್ಲಿ ನಡೆಯುವ ನಿರ್ಮಾಣಗಳು, ಬೀಟಾ ಆವೃತ್ತಿಗಳು ಮತ್ತು ಬಿಡುಗಡೆಯ ಪರೀಕ್ಷಾರ್ಥಿಗಳಿಗೆ ಅವರು ಆರಂಭಿಕ ಸಂಪರ್ಕವನ್ನು ಹೊಂದಿರುತ್ತಾರೆ. ವಿಶೇಷ ಅಂಚೆ ಪಟ್ಟಿಯಲ್ಲಿ, ಅಥವಾ ಯೋಜನೆಯ ಟ್ರಾಕ್ ಸಾಧನದಲ್ಲಿ ದೋಷಗಳು ದಾಖಲಿಸಲ್ಪಡುತ್ತವೆ.
ವರ್ಡ್‌ಪ್ರೆಸ್ ತನ್ನನ್ನು ಸುತ್ತುವರೆದಿರುವ ಸಮುದಾಯದಿಂದ ಬಹುತೇಕವಾಗಿ ಅಭಿವೃದ್ಧಿಪಡಿಸಲ್ಪಡುತ್ತದೆಯಾದರೂ, ಮ್ಯಾಟ್ ಮುಲ್ಲೆನ್‌ವೆಗ್‌ನಿಂದ ಸಂಸ್ಥಾಪಿಸಲ್ಪಟ್ಟ ಕಂಪನಿಯಾದ ಆಟೋಮ್ಯಾಟಿಕ್ ಜೊತೆಯಲ್ಲಿ ಅದು ನಿಕಟವಾದ ಸಂಬಂಧವನ್ನು ಹೊಂದಿದೆ.
ಇವನ್ನೂ ನೋಡಿ
[ಬದಲಾಯಿಸಿ]- ಪಠ್ಯವಿಷಯದ ನಿರ್ವಹಣಾ ವ್ಯವಸ್ಥೆಗಳ ಪಟ್ಟಿ
- ಐಕ್ಯಾಲೆಂಡರ್ ಬೆಂಬಲದೊಂದಿಗಿನ ಅನ್ವಯಿಕೆಗಳ ಪಟ್ಟಿ
- ಬಡ್ಡಿಪ್ರೆಸ್
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Mullenweg, Matt. "WordPress Now Available". WordPress. Retrieved 2010-07-22.
- ↑ "WordPress › About » GPL". WordPress.org. Archived from the original on 2013-06-19. Retrieved 2010-06-15.
- ↑ "Usage of content management systems for websites". W3Techs. Retrieved 2011-01-18.
- ↑ "WordPress Download Counter". wordpress.org. Retrieved 2013-05-31.
- ↑ "WordPress Plugins". Linksku. Archived from the original on 2011-01-26. Retrieved 2011-01-27.
- ↑ "WordPress publishes native Android application". Android and Me. 2010-02-02. Retrieved 2010-06-15.
- ↑ "Idea: WordPress App For iPhone and iPod Touch". WordPress iPhone & iPod Touch. Archived from the original on 2016-03-14. Retrieved 2008-07-12.
- ↑ "WordPress for BlackBerry". WordPress. Archived from the original on 2011-04-26. Retrieved 2009-12-27.
- ↑ "WordPress Appliance". TurnKey Linux Virtual Appliance Library. Retrieved 2009-12-11.
- ↑ "The Easy Way To Install PHP on Windows". SitePoint. Retrieved 2009-11-20.
- ↑ "Installing and Updating WordPress with SVN". WordPress. Retrieved 2009-12-28.
- ↑ Andrew Warner, Matt Mullenweg (2009-09-10). The Biography Of WordPress – With Matt Mullenweg (MPEG-4 Part 14) (Podcast). Mixergy. Event occurs at 10:57. Retrieved 2009-09-28.
b2 had actually, through a series of circumstances, essentially become abandoned.
- ↑ "WordPress › About". wordpress.org. Retrieved 2007-03-04.
WordPress started in 2003 (...)
- ↑ "Big Pink Cookie". Archived from the original on 2009-05-04. Retrieved 2009-03-10.
- ↑ "ಬ್ಲಾಗಿಂಗ್ ಗ್ರೋಸ್ ಅಪ್" Archived 2011-02-03 ವೇಬ್ಯಾಕ್ ಮೆಷಿನ್ ನಲ್ಲಿ., Salon.com
- ↑ "ಫ್ರೀಡಮ್ 0 " Archived 2006-04-10 ವೇಬ್ಯಾಕ್ ಮೆಷಿನ್ ನಲ್ಲಿ., ಮಾರ್ಕ್ ಪಿಲ್‌ಗ್ರಿಮ್ ವತಿಯಿಂದ ಬಂದಿರುವ ಒಂದು ಪ್ರಭಾವಶಾಲಿ ಪ್ರಕಟಣೆ
- ↑ ""2009 Open Source CMS Market Share Report," page 57, by water&stone and CMSWire Oct, 2009". Cmswire.com. 2009-12-17. Retrieved 2010-06-15.
- ↑ "Open Source CMS Award Previous Winners". Packt Publishing Technical & IT Book Store. Archived from the original on 2009-07-07. Retrieved 2010-06-15.
- ↑ "Open Source CMS Awards". Archived from the original on 2008-03-05. Retrieved 2009-10-10.
- ↑ "Idea: Remove Sponsored Themes from WordPress.org". WordPress Ideas. Archived from the original on 2009-08-22. Retrieved 2007-08-20.
- ↑ Mark Ghosh (2007-07-10). "No Sponsored themes on WeblogToolsCollection". Archived from the original on 2021-11-30. Retrieved 2007-07-18.
- ↑ Matt Mullenweg (2007-07-10). "WLTC High Ground". Retrieved 2007-07-18.
- ↑ Lorelle van Fossen (2007-07-11). "It's Official. Sponsored WordPress Themes Are Out". Lorelle on WordPress. Retrieved 2007-07-25.
- ↑ Mark Ghosh (2007-08-04). "WARNING: TemplatesBrowser dot com". Weblog Tools Collection. Archived from the original on 2021-04-21. Retrieved 2008-05-18.
- ↑ Mark Ghosh (2007-11-09). "Blogstheme.com WARNING". Weblog Tools Collection. Archived from the original on 2021-04-20. Retrieved 2008-05-18.
- ↑ Joseph Scott (2008-07-18). "Theme Directory". WordPress Blog. Retrieved 2007-08-20.
- ↑ "200 Themes Removed From WordPress.org – Matt Explains Why". Blogherald.com. 2008-12-12. Retrieved 2010-06-15.
- ↑ "Roadmap". Blog. Wordpress.org. Retrieved 2010-06-15.
- ↑ "Kubrick at Binary Bonsai". Binarybonsai.com. Archived from the original on 2012-03-11. Retrieved 2010-06-15.
- ↑ "WordPress › Blog » WordPress 2". Wordpress.org. Retrieved 2010-06-15.
- ↑ "WordPress 2.1 - codex". Codex.wordpress.org. 2007-01-22. Retrieved 2010-06-15.
- ↑ "WordPress › Blog » WordPress 2.2". Wordpress.org. Retrieved 2010-06-15.
- ↑ "WordPress › Blog » WordPress 2.3". Wordpress.org. Retrieved 2010-06-15.
- ↑ "WordPress › Blog » WordPress 2.5". Wordpress.org. Retrieved 2010-06-15.
- ↑ "WordPress › Blog » WordPress 2.6". Wordpress.org. Retrieved 2010-06-15.
- ↑ "WordPress › Blog » WordPress 2.7 "Coltrane"". Wordpress.org. Retrieved 2010-06-15.
- ↑ "WordPress › Blog » 2.8 Release Jazzes Themes and Widgets". WordPress.org. Retrieved 2010-06-15.
- ↑ "WordPress › Blog » WordPress 2.9, oh so fine". Wordpress.org. Retrieved 2010-06-15.
- ↑ "WordPress › Blog » WordPress 3.0 "Thelonious"". Wordpress.org. Retrieved 2010-06-17.
- ↑ http://www.webmaster-source.com/೨೦೧೦/೦೬/೧೮/wordpress-೩-೦-now-available/
- ↑ "WordPress 3.0 Released, Adding Multi-User and Streamlined User Interface".
- ↑ PHP ೪ ಮತ್ತು MySQL ೪ ಎಂಡ್ ಆಫ್ ಲೈಫ್ ಪ್ರಕಟಣೆ. ವರ್ಡ್‌ಪ್ರೆಸ್. ಜುಲೈ ೨೩, ೨೦೧೦. ೨೦೧೦ರ ಅಕ್ಟೋಬರ್ ೬ರಂದು ಮರುಸಂಪಾದಿಸಲಾಯಿತು.[೧]
- ↑ "Wincent Colaiuta". 2007-06-21. Archived from the original on 2020-10-26. Retrieved 2011-01-27.
- ↑ "David Kierznowski". 2007-06-28. Archived from the original on 2012-10-13. Retrieved 2011-01-27.
- ↑ "Secunia Advisories for WordPress 2.x". 2009-04-07.
- ↑ "Secunia WordPress 2.x Vulnerability Report". Secunia.com. Retrieved 2010-06-15.
- ↑ "Secunia WordPress 3.x Vulnerability Report". Secunia.com. Retrieved 2010-12-27.
- ↑ "ವರ್ಡ್‌ಪ್ರೆಸ್ ಎಕ್ಸ್‌ಪ್ಲಾಯ್ಟ್ ನೇಲ್ಸ್ ಬಿಗ್ ನೇಮ್ ಸಿಯೋ ಬ್ಲಾಗರ್ಸ್ | Threadwatch.org". Archived from the original on 2018-10-06. Retrieved 2011-01-27.
- ↑ "WordPress 2.1.1 dangerous, Upgrade to 2.1.2". WordPress.org. 2 March 2007. Retrieved 2007-03-04.
- ↑ "Survey Finds Most WordPress Blogs Vulnerable". Blog Security. 2007-05-23. Archived from the original on 2012-03-15. Retrieved 2010-06-15.
- ↑ "Blog Archive » Interview with Stefan Esser". BlogSecurity. 2007-06-28. Archived from the original on 2012-10-13. Retrieved 2010-06-15.
- ↑ ವರ್ಡ್‌ಪ್ರೆಸ್ 3.0 "ಥೆಲೋನಿಯಸ್"
- ↑ "About WordPress". wordpress.org. Retrieved 2010-10-05.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website
- ವರ್ಡ್ ಪ್ರೆಸ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- How to Install and Use Wordpress to create Blogs – Step by Step Video Guide Archived 2014-12-22 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using Infobox software with unknown parameters
- Articles with unsourced statements from December 2009
- Official website different in Wikidata and Wikipedia
- Articles with Open Directory Project links
- ಮುಕ್ತ ಮೂಲ ಪಠ್ಯವಿಷಯದ ನಿರ್ವಹಣಾ ವ್ಯವಸ್ಥೆಗಳು
- PHP ಕಾರ್ಯಸೂಚಿ ರಚನೆಯ ಭಾಷೆ
- ಬ್ಲಾಗ್ ತಂತ್ರಾಂಶ
- ವರ್ಡ್ಪ್ರೆಸ್
- ಮುಕ್ತ IDಯನ್ನು ಬೆಂಬಲಿಸುವ ಅಂತರಜಾಲ ಸೇವೆಗಳು
- ಪಠ್ಯವಿಷಯ ನಿರ್ವಹಣಾ ವ್ಯವಸ್ಥೆಗಳು
- ವೆಬ್‌ಸೈಟ್ ನಿರ್ವಹಣೆ
- PHPಯಲ್ಲಿನ ಕಾರ್ಯಸೂಚಿಯಿಂದ ರೂಪಿತಗೊಂಡಿರುವ ಉಚಿತವಾದ ತಂತ್ರಾಂಶ
- 2003ರ ತಂತ್ರಾಂಶ
- ಸಮೂಹ ಮಾಧ್ಯಮ
- ಅಂತರ ಜಾಲ ತಾಣಗಳು