ರ್ಯಾಕೂನ್
ರ್ಯಾಕೂನ್ Temporal range:
| |
---|---|
ಪೂರ್ವದ ರ್‍ಯಾಕೂನ್ (ಪಿ. ಐ. ಲೋಟೊರ್), ನ್ಯೂ ಯಾರ್ಕ್ ನಗರದ ಸೆಂಟ್ರಲ್ ಪಾರ್ಕ್‌ನಲ್ಲಿ | |
Conservation status | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಕಾರ್ಡೇಟಾ |
ವರ್ಗ: | Mammalia |
ಗಣ: | ಕಾರ್ನಿವೋರಾ |
ಕುಟುಂಬ: | ಪ್ರೋಸೈಯಾನಿಡೇ |
ಕುಲ: | ಪ್ರೋಸೈಯಾನ್ |
ಪ್ರಜಾತಿ: | P. lotor
|
Binomial name | |
Procyon lotor (Linnaeus, 1758)
| |
Native range in red, introduced range in blue | |
Synonyms | |
|
ರ್‍ಯಾಕೂನ್ ಉತ್ತರ ಅಮೆರಿಕದಲ್ಲಿ ಕಾಣದೊರೆಯುವ ಮಾಂಸಾಹಾರಿ ಸ್ತನಿ. ಕಾರ್ನಿವೊರ ಗಣದ ಪ್ರೋಸೈಯಾನಿಡೀ ಕುಟುಂಬಕ್ಕೆ ಸೇರಿದೆ. ಪ್ರೋಸೈಯಾನ್ ಜಾತಿಯ ಸುಮಾರು 7 ಪ್ರಭೇದಗಳಿಗೆ ಸಾಮಾನ್ಯವಾಗಿ ಈ ಹೆಸರು ಅನ್ವಯವಾಗುವುದಾದರೂ ಪ್ರಮುಖವಾಗಿ ಈ ಹೆಸರಿನಿಂದ ಪ್ರಸಿದ್ಧವಾಗಿರುವುದು ಪ್ರೋಸೈಯಾನ್ ಲೋಟೊರ್ ಎಂಬುದು ಮಾತ್ರ.
ದೇಹರಚನೆ
[ಬದಲಾಯಿಸಿ]ದೇಹದ ಉದ್ದ ಸುಮಾರು 40-60 ಸೆಂಮೀ. ಭುಜದ ಬಳಿಯ ಎತ್ತರ 20-30 ಸೆಂಮೀ.[೩] ತೂಕ 1.5-2.5 ಕೆಜಿ. ಮೈಬಣ್ಣ ಬೂದು. 20-40 ಸೆಂಮೀ ಉದ್ದದ ಬಾಲವುಂಟು.[೪][೫][೬] ಮೈಮೇಲೂ ಬಾಲದಲ್ಲೂ ಹುಲುಸಾದ, ಮೃದುವಾದ ತುಪ್ಪಳಿನಂಥ ಕೂದಲುಗಳಿವೆ. ಬಾಲದಲ್ಲಿ ಕಪ್ಪುಬಣ್ಣದ 5-10 ಪಟ್ಟೆಗಳಿವೆ. ಮುಸುಡಿ ನಾಯಿ ಮುಸುಡಿಯಂತೆ ಮುಂಚಾಚಿದೆ. ಮುಖದ ಮೇಲೆ ಕಪ್ಪುಬಣ್ಣದ ಅಡ್ಡ ಪಟ್ಟೆಯುಂಟು. ಕಾಲುಗಳಲ್ಲಿ ಉದ್ದ ಬೆರಳುಗಳೂ ಚೂಪು ನಖಗಳೂ ಇವೆ. ಕೈಗಳನ್ನು ಕೋತಿಗಳು ಬಳಸುವಂತೆಯೇ ಬಲು ಸಮರ್ಥವಾಗಿ ಬಳಸಬಲ್ಲುದು.
ನಡವಳಿಕೆ
[ಬದಲಾಯಿಸಿ]ರ‍್ಯಾಕೂನ್ ನಿಶಾಚರಿ. ಸಾಮಾನ್ಯವಾಗಿ ಹಗಲಿನಲ್ಲಿ ಮರದ ಪೊಟರೆಗಳಲ್ಲೊ ಕಲ್ಲುಬಂಡೆಗಳ ಸಂದುಗಳಲ್ಲೊ ಮಲಗಿದ್ದು ರಾತ್ರಿವೇಳೆ ಬೇಟೆ ಅರಸಿ ಹೊರಡುತ್ತದೆ. ಮರ ಹತ್ತುವುದರಲ್ಲಿ ಅಂತೆಯೇ ನೀರಿನ ಮೇಲೆ ಈಸುವುದರಲ್ಲಿ ನಿಷ್ಣಾತ.[೭][೮]
ಆಹಾರ
[ಬದಲಾಯಿಸಿ]ಇದು ಎಲ್ಲ ಬಗೆಯ ಆಹಾರವನ್ನು ತಿನ್ನುತ್ತದಾದರೂ ಜಲಜೀವಿಗಳಾದ ಕಪ್ಪೆ, ಮೀನು, ಸಣ್ಣಪುಟ್ಟ ನೆಲಪ್ರಾಣಿಗಳನ್ನೂ ಇಷ್ಟಪಡುತ್ತದೆ.[೯] ಹಲವಾರು ಬಗೆಯ ಕಾಯಿ, ಬೀಜ, ಕಾಳುಗಳನ್ನೂ ತಿನ್ನುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ದಕ್ಷಿಣ ಪ್ರಾಂತ್ಯಗಳಲ್ಲಿ ಕಾಣಸಿಗುವ ರ‍್ಯಾಕೂನ್ ವರ್ಷವಿಡೀ ಚಟುವಟಿಕೆಯಿಂದ ಇರುತ್ತದೆ ಆದರೆ ಉತ್ತರ ಭಾಗದಲ್ಲಿ ಜೀವಿಸುವ ರ‍್ಯಾಕೂನ್ ಜಾತಿ ಚಳಿಗಾಲದಲ್ಲಿ ಶಿಶಿರ ನಿದ್ರಾವಶವಾಗುತ್ತದೆ.
ಸಂತಾನೋತ್ಪತ್ತಿ
[ಬದಲಾಯಿಸಿ]ಇದರ ಸಂತಾನವೃದ್ಧಿಯ ಕಾಲ ಜನವರಿಯಿಂದ ಜೂನ್.[೧೦][೧೧][೧೨] ಗರ್ಭಾವಸ್ಥೆಯ ಅವಧಿ ಸುಮಾರು 65 ದಿವಸಗಳು. ಒಂದು ಸೂಲಿಗೆ 1-7 ಮರಿ ಹುಟ್ಟುತ್ತವೆ.[೧೩][೧೪] ಮರಿಗಳು ಸುಮಾರು 10 ವಾರಗಳ ಕಾಲ ತಾಯಿಯೊಡನೆಯೇ ಇದ್ದು ನಿಧಾನವಾಗಿ, ಅಂದರೆ ಒಂದು ವರ್ಷ ವಯಸ್ಸಿನವಾಗುವ ವೇಳೆಗೆ ಸ್ವತಂತ್ರವಾಗಿ ಜೀವಿಸತೊಡಗುತ್ತವೆ. ರ‍್ಯಾಕೂನಿನ ಆಯಸ್ಸು ಸುಮಾರು 10-15 ವರ್ಷಗಳು.
ಉಲ್ಲೇಖಗಳು
[ಬದಲಾಯಿಸಿ]- ↑ "Fossilworks: Procyon lotor". fossilworks.org. Archived from the original on 2022-09-22. Retrieved 2023-10-10.
- ↑ Timm, R.; Cuarón, A.D.; Reid, F.; Helgen, K. & González-Maya, J.F. (2016). "Procyon lotor". IUCN Red List of Threatened Species. 2016: e.T41686A45216638. doi:10.2305/IUCN.UK.2016-1.RLTS.T41686A45216638.en. Retrieved 19 February 2022.
- ↑ Lagoni-Hansen 1981, p. 16.
- ↑ Hohmann, Bartussek & Böer 2001, p. 77.
- ↑ Lagoni-Hansen 1981, p. 15.
- ↑ Zeveloff 2002, p. 58.
- ↑ MacClintock 1981, p. 33.
- ↑ Zeveloff 2002, p. 72.
- ↑ Hohmann, Bartussek & Böer 2001, p. 83.
- ↑ Hohmann, Bartussek & Böer 2001, p. 150.
- ↑ MacClintock 1981, p. 81.
- ↑ Zeveloff 2002, p. 122.
- ↑ Hohmann, Bartussek & Böer 2001, p. 131.
- ↑ Zeveloff 2002, pp. 121, 126.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Raccoon Tracks – general information about raccoons
- Raccoons – Living with Wildlife – information about dealing with urban raccoons from the Washington Department of Fish and Wildlife
- "Raccoon Nation". Nature. PBS. 2012.
- The Biology and Management of the Raccoon, c. 1970, Archives of Ontario YouTube Channel