ಯಮ
ಗೋಚರ
ಹಿಂದೂ ಪುರಾಣಗಳ ಪ್ರಕಾರ ಸಾವಿಗೆ ಕಾರಣನಾಗುವ ದೇವತೆ. ಮೃತ್ಯುದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ದಕ್ಷಿಣ ದಿಕ್ಕಿನ ಅಧಿಪತಿ. ಇವನು ಸೂರ್ಯನ ಮಗ. ಶನಿಯಇವನ ತಮ್ಮ. ಇವನ ತಂಗಿ ಯಮಿ. ಇವನು ಧರ್ಮ ದೇವತೆ ಅದರಿಂದ ಧರ್ಮ, ಯಮಧರ್ಮ ಎಂಬ ಹೆಸರೂ ಇದೆ. ಇತರ ಹೆಸರುಗಳು ಮೃತ್ಯು, ಅಂತಕ, ಕಾಲ, ವೈವಸ್ವತ, ಧರ್ಮರಾಜ, ಔದಂಬರ, ನೀಲ, ಪರಮೇಷ್ಠಿ, ವೃಕೋದರ ಇತ್ಯಾದಿ.
- ಯಮಧರ್ಮನ ಒಂದು ಸ್ತೋತ್ರ ಹೀಗಿದೆ:
- ಓಂ ಯಮಾಯ ಧರ್ಮರಾಜಾಯ | ಮೃತ್ಯವೇ ಚಾಂತ್ತಕಾಯ ಚ |
- ವೈವಸ್ವತಾಯ ಕಾಲಾಯ | ಸರ್ವ ಭೂತ ಕ್ಷಯಾಯಚ ||
- ಔದಂಬರಾಯ ದದ್ನಾಯ | ನೀಲಾಯ ಪರಮೇಷ್ಠಿನೇ |
- ವೃಕೋದರಾಯ ಚಿತ್ರಾಯ | ಚಿತ್ರ ಭುಕ್ತಾಯ ವೈ ನಮೋ ನಮಃ||
ವೇದದಲ್ಲಿ
[ಬದಲಾಯಿಸಿ]- ಯಮ ಮಾನವಕುಲಕ್ಕೆ ಮೊದಲಿಗೆ ಯಮನೆಂದು ಕೆಲವು ಋಗ್ವೇದ ಮಂತ್ರಗಳಲ್ಲಿ ತೋರುತ್ತದೆ. (ಮನುಷ್ಯ ಸೃಷ್ಟಿಗೆ ಮೊದಲ ತಾಯ್ತಂದೆಗಳೆಂದರೆ ಯಮ ಮತ್ತು ಈತನ ಅವಳಿ ಸೋದರಿ ಯಮಿ. ಸೋದರ ಸೋದರಿಯರ ಸಂಯೋಗದಿಂದ ಮನುಕುಲ ಉತ್ಪನ್ನವಾಯಿತೆನ್ನುವ ಸೂಕ್ತಗಳಿವೆ (?)). ಯಮವೆಂದರೆ ಹಗಲು ಯಮಿಯೆಂದರೆ ರಾತ್ರಿ; ಇವರೇ ಅವಳಿಜವಳಿಗಳು ಎಂದು ಮುಂತಾಗಿ ಸಾಂಕೇತಿಕಾರ್ಥವನ್ನು ವಿವರಿಸಿರುವ ವಿದ್ವಾಂಸರೂ ಉಂಟು. ಪುರಾಣಗಳ ಕಾಲದಲ್ಲಿ ಇವನನ್ನು ನರಕದ ಅಧಿಪತಿಯೆಮದು ಪರಿಗಣಿಸಲಾಗಿದೆ. ಮನುಷ್ಯನ ಆದಿಸೃಷ್ಟಿಯ ಬಗ್ಗೆ ಆರ್ಯರ ನಂಬಿಕೆಯನ್ನು ಯಮನ ಕಲ್ಪನೆಯಲ್ಲಿ ಕಾಣಬಹುದು.
ಯಮಿ
[ಬದಲಾಯಿಸಿ]- ಯಮಿಯು ತನ್ನ ಅಣ್ಣ ಯಮನನ್ನು ಮೋಹಿಸಿದಾಗ ಅದು ಅಧರ್ಮವೆಂದು ಅವನು ತಿರಸ್ಕರಿಸಲು ಅವಳು ಯಮುನಾ ನದಿಯಾಗಿ ಭೂಮಿಯಲ್ಲಿ ಹರಿದಳು ಎಂಬ ಕಥೆಯೂ ಇದೆ. ಅವನು ವರ್ಷಕ್ಕೊಂದು ಬಾರಿ ತಂಗಿಯ ಮನೆಗೆ ಬಿದಿಗೆಯ ದಿನ ಬರುವನೇಂಬ ನಂಬುಗೆಯೂ ಇದೆ.(ದೀಪಾವಳಿಯ ಮರುದಿನ -ಯಮದ್ವಿತೀಯ)[೧]
ಸೂರ್ಯನ ಮಗ
[ಬದಲಾಯಿಸಿ]- ಪುರಾಣಶಾಸ್ತ್ರಗಳ ಪ್ರಕಾರ ಸೂರ್ಯನ (ವಿವಸ್ವಂತ) ಮಗ, ತಾಯಿ ಸಂಜ್ಞಾದೇವಿ (ಸೂರ್ಯನ ಪತ್ನಿ ಸಂಧ್ಯಾದೇವಿ), ಶನಿ ಬಲತಾಯಿ ಛಾಯಾದೇವಿಯ ಮಗ. ಯಮಿ ಅಥವಾ ಯಮುನೆ ಇವನ ತಂಗಿ, ಛಾಯಾದೇವಿಯ ಮಗಳು;ಸೂರ್ಯನ ಮಗ ವೈವಸ್ವತ ಮನು ತಮ್ಮ. ಯಮ ದಕ್ಷಿಣ ದಿಕ್ಕಿನ ಅಧಿಪತಿ. ಸಂಯಮಿನಿ ಅಥವಾ ಶೈಮಿನಿ ಇವನ ರಾಜಧಾನಿ. ಯಮ ಅಷ್ಟದಿಕ್ಪಾಲಕರಲ್ಲಿ ಒಬ್ಬ. ಇವನ ಪತ್ನಿ ಊರ್ಮಿಳಾ ಅಥವಾ ಶ್ಯಾಮಲಾ (ಅವಳು ಕಪ್ಪಗಿರುವುದರಿಂದ ಆ ಹೆಸರು ಇರಬಹುದು). ಅವನ ಪತ್ನಿಯ ಇನ್ನೊಂದು ಹೆಸರು ಧೂಮೋರ್ಣ.[೨] [೩][೪]
ಪುರಾಣಗಳಲ್ಲಿ
[ಬದಲಾಯಿಸಿ]- ಅಣಿಮಾಂಡವ್ಯ ಮುನಿಯನ್ನು ಶಿಕ್ಷಿಸುವುದರಿಂದ ಶಾಪಗ್ರಸ್ತವಾಗಿ ವಿದುರನಾಗಿ ಜನಿಸಿದ. ದುರ್ವಾಸ ಮುನಿಯ ವರದಂತೆ ಕುಂತಿ ಯಮನಿಂದ ಯುಧಿಷ್ಠಿರನನ್ನು ಮಗನಾಗಿ ಪಡೆದಳು. ಸತ್ಯವಾನನ ಜೀವವನ್ನು ಕೊಂಡೊಯ್ಯುವಾಗ ಸಾವಿತ್ರಿಯ ಪತಿಭಕ್ತಿ ಮತ್ತು ತಿಳಿವಳಿಕೆಗೆ ಮೆಚ್ಚಿ ವರಗಳನ್ನಿತ್ತು ಅದರಂತ ಸತ್ಯವಾನನನ್ನು ಬದುಕಿಸಿ ಬರಿಗ್ಯಯಲ್ಲಿ ಹಿಂದಿರುಗಿದ ಯಮ ಬಲತಾಯಿ ಛಾಯಾದೇವಿಗೆ ಕಾಲು ತೋರಿಸಿದ್ದರಿಂದ ಅವಳಿಂದ ಶಾಪಗ್ರಸ್ತನಾಗಿ ತರುವಾಯ ಸೂರ್ಯನ ಅನುಗ್ರಹದಿಂದ ಶಾಪವಿಮುಕ್ತವಾಗಿ ಶಿವನ ಅನುಗ್ರಹದಿಂದ, ಲೋಕಪಾಲಕತ್ವ ಮತ್ತು ಪಿತೃ ಲೋಕಾಧಿಪತ್ಯವನ್ನು ಪಡೆದ ಮಾರ್ಕಾಂಡೇಯನ ಜೀವಾಪಹರಣ ಯತ್ನದಲ್ಲಿ ಶಿವನ ಮೂಲಕ ಭಂಗಗೊಂಡು ಮಾರ್ಕಂಡೇಯ ಚಿರಾಯುವಾಗುವಂತೆ ಒಪ್ಪಿಕೊಂಡ.[೫][೬]
ಉಲ್ಲೇಖ
[ಬದಲಾಯಿಸಿ]- ↑ Yama Yami Samvada (यम यमि सम्वादः)
- ↑ (Vishnu Purana Book 1 Chapter 8 lists Yama's wife as Dhumorna.)
- ↑ Who are Ashta Dikpalakas? what is their job?
- ↑ What is the name of YamRaj's wife ?
- ↑ https://kn.wikisource.org/s/1u8k ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯಮ
- ↑ Yama