ವಿಷಯಕ್ಕೆ ಹೋಗು

ಮೇರಿ ಸಿಡ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Portrait of Mary Herbert née Sidney, by Nicholas Hilliard, c. 1590

ಮೇರಿ ಸಿಡ್ನಿ ಅತೀ ಮುಖ್ಯವಾದ ಮಹಿಳಾ ಬರಹಗಾರ್ತಿ ಮತ್ತು ಎಲಿಜಬೆತ್ ಕಾಲದಲ್ಲಿ ಆಶ್ರಯದಾತಳಾಗಿದ್ದಳು. ಅವಳು ಸಾಹಿತ್ಯದಲ್ಲಿ ಮೂಲ ಪದ್ಯಗಳಲ್ಲಿ ರಾಣಿ ಎಲಿಜಬೆತ್ ಮತ್ತು ಅವಳ ಅಣ್ಣ ಫಿಲಿಪ್ ನನ್ನು ಹೊಗಳಿ ಬರೆದಿದ್ದಾಳೆ.ಅವಳು ಪವಿತ್ರ ಗೀತೆಗಳನ್ನು ಅನುವಾದ ಮಾಡುವುದರ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಮೊದಲ ಮಹಿಳ ಬರಹಗಾರ್ತಿಯಾಗಿ ಖ್ಯಾತಿ ಪಡೆದಿದ್ದಾಳೆ.

ಬಾಲ್ಯ ಮತ್ತು ಜೀವನ

[ಬದಲಾಯಿಸಿ]

ಸರ್ ಹೆನ್ರಿ ಸಿಡ್ನಿ ಮತ್ತು ಲೇಡಿ ಮೇರಿ ಡ್ಯುಡ್ಲಿ ದಂಪತಿಗಳ ಮೂರನೇ ಮಗಳಾಗಿ ಜನಿಸಿದಳು.ಮೇರಿ ಸಿಡ್ನಿ ಅಕ್ಟೋಬರ್ ೨೭ ೧೫೬೧ ರಂದು ಟೆಕೆನ್ ಹಾಲ್ ಹತ್ತಿರದ ಬೆವಡ್ಲೆ ಯಲ್ಲಿ ಜನಿಸಿದಳು.ಅವಳ ತಂದೆ ದಿ ಮರ್ಚಸ್ ಆಫ್ ವೇಲ್ಸ್ ನಲ್ಲಿ ಗೌರ್ನರಾಗಿ ಸೇವೆ ಸಲ್ಲಿಸುತ್ತಿದ್ದರು. ಲೇಡಿ ಸಿಡ್ನಿ ಸಿಡುಬು ರೋಗದಿಂದ ಗಾಬರಿಗೊಂಡು ರಾಣಿಗೆ ಚಿಕಿತ್ಸೆ ಕೊಟ್ಟ ನಂತರ ವಿರಳವಾಗಿ ರಾಜಗೃಹದಲ್ಲಿ ಕಾಣಿಸಿಕೊಂಡಳು.

ಮೇರಿಯ ಸಹೋದರರಾದ ಫಿಲಿಪ್,ರಾಬರ್ಟ್,ಮತ್ತು ಥಾಮಸ್ ಉನ್ನತ ಶಿಕ್ಷಣಕ್ಕಾಗಿ ವಿಶ್ವ ವಿದ್ಯಾನಿಲಯಕ್ಕೆ ಸೇರಿಕೊಂಡರು , ಅವಳು ಮತ್ತು ಕಿರಿಯ ಸಹೋದರಿಯಾದ ಅಂಬ್ರ್ಯಾಸಿಯೊ ಆ ಕಾಲದಲ್ಲಿ ಉನ್ನತ ಶಿಕ್ಷಣ ಪಡೆಯುವುದರ ಜೊತೆಗೆ ಲ್ಯಾಟಿನ್ ,ಫ್ರೆಂಚ್,ಇಟಾಲಿಯನ್,ಭಾಷೆಗಳನ್ನು ಮತ್ತು ಸಾಹಿತ್ಯವನ್ನು ಕಲಿತರು ಅದಾದ ನಂತರ ಬಹಳ ಕಷ್ಟ ವಾದ ಸ್ತ್ರೀಯರ ವಿಷಯಗಳಾದ ಸೂಜಿ ಕೆಲಸ ,ಗಿಟಾರ್ ನುಡಿಸುವುದು,ಹಾಡುವುದನ್ನು ಕಲಿತರು.

ಮೇರಿ ಹದಿನೈದು ವರ್ಷದವಳಾಗಿದ್ದಾಗ ಹೆನ್ರಿ ಹರ್ಬರ್ಟ್ ನನ್ನು ವಿವಾಹವಾದಳು,"ಅರ್ಲ್ ಆಫ್ ಪೆಂಬ್ರೋಕ್" ,ಇಂಗ್ಲೇಂಡಿನ ಶ್ರೀಮಂತರಲ್ಲಿ ಒಬ್ಬನಾಗಿದ್ದಾನೆ.ಮೇರಿ ಸಿಡ್ನಿ ಅವಳ ಬರವಣಿಗೆ ವೃತ್ತಿಯನ್ನು ೧೫೮೦ರಲ್ಲಿ ಪ್ರಾರಂಭಿಸಿದಳು.ಅವಳ ತಂದೆ ೧೫೮೬ರ ಮೇನಲ್ಲಿ ಸಾವನ್ನಪ್ಪಿದ ನಂತರ ಆಗಸ್ಟ್ ನಲ್ಲಿ ಅವಳ ತಾಯಿ ಕೂಡ ಮರಣ ಹೊಂದಿದಳು.ನಂತರ ಅವಳ ಮೂರು ಜನ ಸಹೋದರರು ಇಂಗ್ಲೀಷ್ ಸೇನೆಯಲ್ಲಿ ಪ್ರೊಟೆಸ್ಟೇಂಟ್ ಹಾಲೆಂಡನ್ನು ಕ್ಯಾಥೋಲಿಕ್ ಸ್ಪೈನ್ ನಿಂದ ವಶಪಡಿಸಿಕೊಳ್ಳಲು ಇಂಗ್ಲೀಷ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಆದ್ದರಿಂದ ಅವರ ತಂದೆ ತಾಯಿಗಳ ಅಂತ್ಯ ಕ್ರಿಯೆಯನ್ನು ಅವಳು ಒಬ್ಬಳೇ ನೆರವೇರಿಸಿದಳು.ಈ ಮಧ್ಯೆ ಗಂಭೀರ ಅನಾರೋಗ್ಯಕ್ಕೆ ತುತ್ತಾದಳು. ವಿದ್ವಾಂಸನಾದ ಅವಳ ಸಹೋದರನಾದ ಫಿಲಿಪ್ ಸಿಡ್ನಿ ಅಕ್ಟೋಬರ್ ೧೭ರಂದು ಅಂಟು ರೋಗದಿಂದ ಗಾಯಗೊಂಡು ಜಡ್ಪೆನ್ನಲ್ಲಿ ಸಾವನ್ನಪ್ಪಿದನು. ಇಂಗ್ಲೆಂಡ್ ,ಮತ್ತು ಹಾಲೆಂಡಿನ ಎಲ್ಲಾ ಜನತೆ ಅವನ ಸಾವನ್ನು ಕಂಡು ದುಃಖಿತರಾದರು ಅವನ ಅಂತ್ಯ ಕ್ರಿಯೆಯ ಸಂದರ್ಭದಲ್ಲಿ ದುಃಖಿತ ಗೀತೆಗಳನ್ನು ಹಾಡಿದರು ಅನಾರೋಗ್ಯ ಮತ್ತು ಕೊರಗಿನಿಂದ, ಸ್ಪೈನಿನ ನೌಕಾಪಡೆಯ ದಾಳಿಯಿಂದ ಹೆದರಿದ,ಮೇರಿ ಸಿಡ್ನಿ ಎರಡು ವರ್ಷಗಳ ಕಾಲ ದೇಶದಲ್ಲಿಯೇ ಉಳಿದಳು.

ಬರವಣಿಗೆ

[ಬದಲಾಯಿಸಿ]

ನವೆಂಬರ್ ೧೫೮೮ರಲ್ಲಿ ,ಅವಳು ಭವ್ಯ ಮೆರವಣಿಗೆಯಲ್ಲಿ ಲಂಡನ್ನಿಗೆ ಹಿಂದಿರುಗಿದಳು ಮತ್ತು ಅವಳ ಸಹೋದರನ ಕಾರ್ಯಕ್ಷೇತ್ರಗಳಾದ ಆಶ್ರಯದಾತ, ತರ್ಜುಮೆ ಮತ್ತು ಬರವಣಿಗೆಯನ್ನು ಮುಂದುವರೆಸಿದಳು. ಅವಳ ಮೊದಲ ಸಾಹಿತ್ಯದ ಕೆಲಸ" ದಿ ಡೋಲ್ ಫುಲ್ ಲೆ ಆಫ್ ಕ್ಲೋರಿಂನ್ಡ" ಜೊತೆಗೆ ಸ್ಪೆನ್ಸರನ " ಆ ಸ್ಟ್ರೋಫೆಲ್ "ನಲ್ಲಿ ದುಃಖಿತ ಪದ್ಯಗಳನ್ನು ೧೫೯೫ ರಲ್ಲಿ ಪ್ರಕಟಿಸಿದರು. ಸಿಡ್ನಿ ನಂತರ ಪುರುಷ ಸಂಬಂದಿ ದುಃಖಿತ ಪದ್ಯಗಳನ್ನು ನಿರ್ದಿಷ್ಟವಾಗಿ ಸ್ರ್ತೀಯರಿಗೆ ಸಂಬಂದಿಸಿದಂತೆ ಪದ್ಯಗಳನ್ನು ತರ್ಜುಮೆ ಮಾಡಿದ್ದಾಳೆ. ಅವಳು ತನ್ನ ಹೆಸರಿನಡಿ ಪ್ರಕಟಿಸಿದ್ದಾಳೆ,ಬಹು ಅಸಾಧರಣ ಅಭಿನಯದಿಂದಾಗಿ ವ್ಯೆಭವದಿಂದಾಗಿ ಮಹಿಳೆಯಾಗಿದ್ದಾಳೆ.ಅವಳ ಸಹೋದರ ಫಿಲಿಪ್ ಮತ್ತು ಯೂರೋಪಿನ ಸಮಕಾಲಿನ ಬರಹಗಾರರಿಂದ ಪ್ರಭಾವಿತಗೊಂಡಿದ್ದಳು ಪ್ರ್ಂಚ್ ಭಾಷೆಯಿಂದ ಎರಡು ಕೃತಿಗಳನ್ನು ಅನುವಾದ ಮಾಡಿದ್ದಾಳೆ ' ಡಿಸ್ಕೋರ್ಸ್ ಆಫ್ ಲ್ಯೆಫ್ ಅಂಡ್ ಡೆತ್ "ಮತ್ತು ಆಂಟೋನಿಯ ೧೫೯೨ರಲ್ಲಿ ಪ್ರಕಟಿಸಿದಳು ಸಿಡ್ನಿಯು ರಾಬರ್ಟ್ ಗಾರ್ನಿಯರ್ ನ ಮಾರ್ಕ್ ಆಂಟೋನಿ ೧೫೭೮ ರಲ್ಲಿ ತರ್ಜುಮೆ ಮಾಡಿದಳು. ಇದು ಮೊದಲ ಐತಿಹಾಸಿಕ ನಾಟಕ ಇದರಲ್ಲಿ ಯೂರೋಪಿನ ಸಮಕಾಲಿನ ರಾಜಕೀಯವನ್ನು ಟೀಕೆ ಮಾಡಿದ್ದಾಳೆ. ಸಾಮ್ಯುಯಲ್ ಡೇನಿಯಲ್ "ಕ್ಲಿಯೋಪಾತ್ರ "ಎಂಬ ಕೃತಿಯನ್ನು ೧೫೬೬ರಲ್ಲಿ ತರ್ಜುಮೆ ಮಾಡಿದಳು.ಷೇಕ್ಸ್ ಪಿಯರನ ಆಂತೋನಿ ಮತ್ತು ಕ್ಲಿಯೋಪಾತ್ರ ನೇರವಾಗಿ ಅವಳ ಆಂಟೋನಿಯಸ್ ಮೇಲೆ ಪ್ರಭಾವ ಬೀರಿದೆ ಜೊತೆಗೆ ಫಿಲಿಪ್ಪೆ ಡಿ ಮೋರ್ನೆಯ " ಡಿಸ್ಕೋರ್ಸ್ ಡಿ ಲ ವ್ಯೈಡೆ ಲಾ ಮೋರ್ಟ್" ಕೃತಿಯನ್ನು ಮೇರಿ ಸಿಡ್ನಿ ತರ್ಜುಮೆ ಮಾಡಿದಳು. ಫಿಲಿಪ್ ಸಿಡ್ನಿ ಮತ್ತು ಅವನ ಸ್ನೇಹಿತರಾದ ಮಾರ್ನೆ ಮತ್ತು ಹ್ಯುಗೋನಾಟ್ ಕಾಸ್ ಮೇರಿ ಸಿಡ್ನಿಗೆ ಉತ್ತೇಜನ ನೀಡಿದರು.ದಿ ಕೌಂಟೆಸ್ ಆಫ್ ಫೆಂಬ್ರೋಕ್ ಪೆಟ್ರಾರ್ಕ್ ನ" ದಿ ಟ್ರಿಂಪ್ ಆಫ್ ಡೆತ್ " ಕೃತಿಯನ್ನು ಇಟಾಲಿಯನ್ ಭಾಷೆಯಿಂದ ತರ್ಜುಮೆ ಮಾಡಿದಳು.ಬಹುಶಃ ಇದರ ತರ್ಜುಮೆ ೧೫೯೦ರಲ್ಲಿ ಮುಕ್ತಾಯ ಮಾಡಿದಳು.

ಅವಳು ೪೪-೧೫೦ ಪವಿತ್ರ ಗೀತೆಗಳ ತರ್ಜುಮೆಯನ್ನು ಅವಳ ಸಹೋದರ ಫಿಲಿಪ್ ತನ್ನ ಕೊನೆಯ ವರ್ಷಗಳಲ್ಲಿ ಪ್ರಾರಂಭಿಸಿದ ಕಾರ್ಯವನ್ನು ಸಿಡ್ನಿ ಮುಂದುವರೆಸಿದಳು ಮತ್ತು ಪರಿಷ್ಕರಿಸಿದಳು. ಆದಾಗ್ಯೂ ಈ ಪವಿತ್ರ ಗೀತೆಗಳು ಯಾವಾಗಲು ಜೂಡಿಯೋ ಕ್ರಿಶ್ಚಿಯನ್ ಪೂಜೆಯಲ್ಲಿ ಪ್ರಮುಖ ಭಾಗವಾಗಿವೆ. ನಿರ್ದಿಷ್ಟವಾಗಿ ೧೬ನೇ ಪ್ರೊಟೆಸ್ಟೆಂಟ್ ಚಟುವಟಿಕೆಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಖಾಸಗಿ ಚಿಂತನೆ ಮತ್ತು ಸಾರ್ವಜನಿಕ ಹಾಡುಗಳಲ್ಲಿ ತರ್ಜುಮೆ ಮಾಡಿದಳು. ದಿ ಕೌಂಟೆಸ್ ತನ್ನ್ನ ಪವಿತ್ರ ಗೀತೆಗಳಲ್ಲಿ ಸಮಕಾಲೀನ ರಾಜಕೀಯದ ಬಗ್ಗೆ ಟೀಕೆ ಮಾಡಿದ್ದಾಳೆ, ನಿರ್ದಿಷ್ಟವಾಗಿ ಹಿಂಸೆಯ ಧಾರ್ಮಿಕತೆ ಎಂದು ಪ್ರೊಟೆಸ್ಟೆಂಟರು ತಮ್ಮಷ್ಟಕ್ಕೆ ತಾವೆ ಕರೆದುಕೊಂದಿದ್ದಾರೆ.ರೂಪಕಾಲಂಕಾರ ಮತ್ತು ವಿವರಣಾ ಶೈಲಿಯನ್ನು ಹಿಬ್ರು ಭಾಷೆಯಲ್ಲಿ ವಿಸ್ತರಿಸಿ ಬರೆದಿದ್ದಾಳೆ. ಸಿಡ್ನಿ ಎಲಿಜಬೆತಳ ರಾಜಗೃಹದಲ್ಲಿನ ಅವಳ ಅನುಭವವನ್ನು ಹಾಗೂ ಬಾಲ್ಯ ಜೀವನ ಮತ್ತು ಮದುವೆಯ ಅನುಬವವನ್ನು ಸಂಯೋಜಿಸಿ ಬರೆದಿದ್ದಾಳೆ. ಅವಳು ೧೫೯೯ರಲ್ಲಿ ತನ್ನ ಪವಿತ್ರ ಗೀತೆಗಳ ತರ್ಜುಮೆ ಕಾರ್ಯ ಪೂರ್ಣಗೊಂಡ ಆ ದಿನಾಂಕ ಡಾ.ಬೆಂತ್ ಜ್ಯೂಲ್ ಜೆನ್ಸೆನ್ ನ ಸ್ವಂತ ಟಿಕ್ಸೆಲ್ ಹಸ್ತಪ್ರತಿಯಲ್ಲಿ ದಾಖಲಾಗಿದೆ. ಈ ಹಸ್ತಪ್ರತಿ ಎರಡು ಅದ್ವಿತೀಯ ಪದ್ಯಗಳನ್ನು ಒಳಗೊಂಡಿದೆ . ಈವನ್ ನೌ ದಟ್ ಕೇರ್ ರಾಣಿ ಎಲಿಜಬೆತಳಿಗೆ ಮತ್ತು ಫಿಲಿಪ್ ಸಿಡ್ನಿಗೆ ಅರ್ಪಿಸುವ ಪದ್ಯವಾಗಿದೆ. ಏಂಜಲ್ ಸ್ಪಿರಿಟ್ ನಲ್ಲಿ ಕೌಂಟೆಸ್ ಸಾಂಪ್ರದಾಯಿಕ ವಿನಯತೆಯನ್ನು ಬರೆದಿದ್ದಾಳೆ, ಇದರಲ್ಲಿ ಅವಳ ಸಹೋದರನ ಹೊಗಳಿಕೆಯ ಕೆಲಸ ಅವಳ ಸಾಮರ್ಥ್ಯಕ್ಕೆ ಸಮವಾಗಿಲ್ಲ ಎಂದು ಬೇರೆ ಬರಹಗಾರರು ಹೇಳಿದ್ದಾರೆ. ಅವಳು ಪವಿತ್ರ ಗೀತೆಗಳ ಅನುವಾದವನ್ನು ಅರ್ಧ ಶಾಶ್ವತ ಅನ್ಯಾಯದ ಮಾದರಿ ಎಂದು ಕರೆದಿದ್ದಾಳೆ.

ಮೇರಿ ಸಿಡ್ನಿ ಸಿಡುಬು ರೋಗದಿಂದ ಸೆಪ್ಟಂಬರ್ ೨೫ ೧೬೨೧ ರಲ್ಲಿ ಲಂಡನ್ನಿನಲ್ಲಿ ಸಾವನ್ನಪ್ಪಿದಳು. ಸಿಡ್ನಿಯ ಮಗನಾದ ವಿಲಿಯಂನಿಣ್ದ ಆಶ್ರಯ ಪಡೆದ ವಿಲಿಯಂ ಬ್ರೌನ್ ತನ್ನ ಭಾಷಣದಲ್ಲಿ 'ಸಿಡ್ನಿಯ ತಂಗಿ , ಪೆಮ್ಬ್ರೋಕ್ ತಾಯಿ' ಎಂದು ಹೊಗಳಿದ್ದಾನೆ. ಅವಳು ಹಲವು ಕ್ಷೇತ್ರಗಳಲ್ಲಿ ತನ್ನ ಪಾತ್ರವನ್ನು ನಿಭಾಯಿಸಿದ್ದಾಳೆ , ಅಂದರೆ ಅವಳು ಕೂಡ ಒಬ್ಬ ಬರಹಗಾರ್ತಿ, ಅನುವಾದಗಾರ್ತಿ, ಸಂಪಾದಕಿ, ಆಶ್ರಯದಾತಳು, ಆಡಳಿಗಾರ್ತಿ ಮತ್ತು ಪ್ರೊಟೆಸ್ಟಂಟ್ ಆಕ್ಟಿವಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದಾಳೆ. ಅವಳು ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಅಂದರೆ ಅವಳ ಗಂಡನ ಸಂಪತ್ತು , ಸಿಡ್ನಿಯಾಗಿ ಅವಳ ಸ್ಥಾನ, ಮತ್ತು ಅವಳ ಅಣ್ಣನ ಸ್ಥಾನ ಹೀಗೆ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಹದಿನೇಳನೇ ಶತಮಾನದ ಮಾದರಿ ಮಹಿಳಾ ಬರಹಗಾರ್ತಿಯಾಗಿ ಗುರ್ತಿಸಿಕೊಂಡಿದ್ದಾಳೆ, ಇದರ ಜೊತೆಗೆ ಅಮೀಲಿಯ ಲೆನ್ಯಾರ್ ಮತ್ತು ಲೇಡಿ ವರ್ತ್ ಸೇರಿಕೊಂಡಿದ್ದಾರೆ. ಮೇರಿ ಸಿಡ್ನಿ ಅವಳ ಕಾಲದಲ್ಲಿ ಬಹಳ ಪ್ರಖ್ಯಾತ ಮಹಿಳೆ ಎಂದು ಗುರ್ತಿಸಿಕೊಂಡಿದ್ದಾಳೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]