ಫ್ಯಾಷನ್ ವಿನ್ಯಾಸಕ(ರೂಪದರ್ಶಿಗಳ ಉಡುಪಿನ ವಿನ್ಯಾಸಕ)
ಫ್ಯಾಷನ್ ವಿನ್ಯಾಸ ವು ಉಡುಪು ಮತ್ತು ಪರಿಕರಗಳ ವಿನ್ಯಾಸ ಮತ್ತು ಸೌಂದರ್ಯಮೀಮಾಂಸೆಯ ಕಲಾತ್ಮಕ ಬಳಕೆಯಾಗಿದೆ. ಫ್ಯಾಷನ್ ವಿನ್ಯಾಸವು ಸಂಸ್ಕೃತಿ ಮತ್ತು ಸಾಮಾಜಿಕ ಅಂಶಗಳಿಂದ ಪ್ರಭಾವಕ್ಕೊಳಗಾಗುತ್ತದೆ ಹಾಗೂ ಸಮಯ ಮತ್ತು ಸ್ಥಳಕ್ಕನುಗುಣವಾಗಿ ವ್ಯತ್ಯಾಸಗೊಳ್ಳುತ್ತದೆ. ಫ್ಯಾಷನ್ ವಿನ್ಯಾಸಕರು ಉಡುಪು ಮತ್ತು ಪರಿಕರಗಳನ್ನು ವಿನ್ಯಾಸಗೊಳಿಸಲು ಹಲವಾರು ವಿಧಾನಗಳಲ್ಲಿ ಕೆಲಸ ಮಾಡುತ್ತಾರೆ. ಕೆಲವು ಏಕಾಂಗಿಗಳಾಗಿ ಅಥವಾ ತಂಡವೊಂದರ ಭಾಗವಾಗಿ ಕಾರ್ಯ ನಿರ್ವಹಿಸುತ್ತಾರೆ. ಅವರು ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಉಡುಪಿಗಾಗಿ ಗ್ರಾಹಕರು ಮಾಡುವ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಾರೆ; ಹಾಗೂ ಒಂದು ಉಡುಪನ್ನು ಮಾರುಕಟ್ಟೆಗೆ ತರಲು ಸಾಕಷ್ಟು ಸಮಯಾವಕಾಶ ಬೇಕಾಗುವುದರಿಂದ, ಆ ಸಮಯದಲ್ಲಿ ಗ್ರಾಹಕರ ಅಭಿರುಚಿಗಳು ಬದಲಾಗುತ್ತಿರುತ್ತವೆ. ಕೆಲವು ವಿನ್ಯಾಸಕರು ನಿಜವಾಗಿ ಪ್ರಸಿದ್ಧಿಯನ್ನು ಹೊಂದಿರುತ್ತಾರೆ. ಈ ಪ್ರಸಿದ್ಧಿಯು ಅವರು ಫ್ಯಾಷನ್ ಪ್ರವೃತ್ತಿಯಲ್ಲಿ ಸಕ್ರಿಯಗೊಳ್ಳುವಂತೆ ಮಾಡುತ್ತದೆ.
ಫ್ಯಾಷನ್ ವಿನ್ಯಾಸಕರು ಉಪಯುಕ್ತ ಮತ್ತು ಕಲಾತ್ಮಕ ಉಡುಪುಗಳನ್ನು ವಿನ್ಯಾಸಗೊಳಿಸಲು ಪ್ರಯತ್ನಿಸುತ್ತಾರೆ. ಅವರು ಉಡುಪನ್ನು ಯಾರು ಧರಿಸುತ್ತಾರೆ ಮತ್ತು ಯಾವ ಸಂದರ್ಭದಲ್ಲಿ ಧರಿಸಲಾಗುತ್ತದೆ ಎಂಬುದನ್ನು ಪರಿಗಣಿಸಬೇಕು. ಅಂತಹ ಉಡುಪುಗಳನ್ನು ತಯಾರಿಸಲು ಅವರು ಅನೇಕ ರೀತಿಯ ಮತ್ತು ಸಂಯೋಜನೆಯ ಬಟ್ಟೆಗಳನ್ನು ಹೊಂದಿರುತ್ತಾರೆ. ಆ ಬಟ್ಟೆಗಳಲ್ಲಿ ಅನೇಕ ಬಣ್ಣಗಳು, ಚಿತ್ರ ನಮೂನೆಗಳು ಮತ್ತು ಶೈಲಿಗಳಿರುತ್ತವೆ. ಹೆಚ್ಚಿನ ಉಡುಪುಗಳನ್ನು ಸಾಂಪ್ರದಾಯಿಕ ಶೈಲಿಯ ದಿನನಿತ್ಯದ ಉಡುಗೆಯಾಗಿ ಧರಿಸಲಾದರೂ, ವಿಶೇಷ ಉಡುಪುಗಳನ್ನು ಸಾಮಾನ್ಯವಾಗಿ ಸಂಜೆಯುಡುಪು ಅಥವಾ ಪಾರ್ಟಿ ಉಡುಪುಗಳಂತಹ ವಿಶೇಷ ಸಂದರ್ಭಗಳಿಗಾಗಿ ತಯಾರಿಸಲಾಗುತ್ತದೆ.
ಓಟ್ ಕ್ಯೂಟ್ಯುವರ್(ಉತ್ತಮ ಫ್ಯಾಷನ್‌ನ ಉಡುಪು ಅಥವಾ ಆಫ್-ದಿ-ರಾಕ್(ಸಿದ್ಧ ಉಡುಪು)ನಲ್ಲಿರುವಂತೆ ಕೆಲವು ಉಡುಪುಗಳನ್ನು ವಿಶೇಷವಾಗಿ ಒಬ್ಬ ವ್ಯಕ್ತಿಗೆ ತಯಾರಿಸಲಾಗುತ್ತದೆ. ಇಂದು ಹೆಚ್ಚಿನ ಉಡುಪುಗಳನ್ನು ಸಮೂಹ ಮಾರುಕಟ್ಟೆಗಾಗಿ, ವಿಶೇಷವಾಗಿ ಸಾಂದರ್ಭಿಕ ಮತ್ತು ದಿನನಿತ್ಯದ ಉಡುಗೆಗಾಗಿ ವಿನ್ಯಾಸಗೊಳಿಸಲಾಗುತ್ತದೆ.
ರಚನೆ
[ಬದಲಾಯಿಸಿ]ಫ್ಯಾಷನ್ ವಿನ್ಯಾಸಕರು ಅನೇಕ ವಿಧಾನಗಳಲ್ಲಿ ಕೆಲಸ ಮಾಡುತ್ತಾರೆ. ಫ್ಯಾಷನ್ ವಿನ್ಯಾಸಕರು ವಿನ್ಯಾಸಗಳನ್ನು ಹೊಂದಿರುವ ಒಂದು ಫ್ಯಾಷನ್ ಕಂಪನಿಗೆ ಪೂರ್ಣಾವಧಿಯಲ್ಲಿ ಕೆಲಸ ಮಾಡಬಹುದು, ಅವರನ್ನು 'ಆಂತರಿಕ ವಿನ್ಯಾಸಕರೆಂದು' ಕರೆಯಲಾಗುತ್ತದೆ. ಅವರು ಏಕಾಂಗಿಯಾಗಿ ಅಥವಾ ತಂಡವೊಂದರ ಭಾಗವಾಗಿ ಕೆಲಸ ಮಾಡಬಹುದು. ಸ್ವತಂತ್ರ ವಿನ್ಯಾಸಕರು ತಮಗಾಗಿ ಕೆಲಸ ಮಾಡುತ್ತಾರೆ, ಅವರ ವಿನ್ಯಾಸಗಳನ್ನು ಫ್ಯಾಷನ್ ಸಂಸ್ಥೆಗಳಿಗೆ, ನೇರವಾಗಿ ಅಂಗಡಿಗಳಿಗೆ ಅಥವಾ ಬಟ್ಟೆ ತಯಾರಕರಿಗೆ ಮಾರಾಟ ಮಾಡುತ್ತಾರೆ. ಉಡುಪುಗಳು ಕೊಳ್ಳುಗರ ಹೆಸರು ಪಟ್ಟಿಯನ್ನು ಹೊಂದಿರುತ್ತವೆ. ಕೆಲವು ಫ್ಯಾಷನ್ ವಿನ್ಯಾಸಕರು ತಮ್ಮದೇ ಸ್ವಂತ ಹೆಸರು ಪಟ್ಟಿಗಳನ್ನು ಮಾಡಿಕೊಂಡಿರುತ್ತಾರೆ, ಅದರಡಿಯಲ್ಲಿ ತಮ್ಮ ವಿನ್ಯಾಸಗಳನ್ನು ಮಾರಾಟ ಮಾಡುತ್ತಾರೆ. ಕೆಲವು ಫ್ಯಾಷನ್ ವಿನ್ಯಾಸಕರು ಸ್ವಯಮುದ್ಯೋಗಿಯಾಗಿರುತ್ತಾರೆ ಮತ್ತು ಅವರು ವೈಯಕ್ತಿಕ ಗ್ರಾಹಕರಿಗೆ ವಿನ್ಯಾಸ ಮಾಡಿಕೊಡುತ್ತಾರೆ. ಇತರ ಉತ್ತಮ-ಫ್ಯಾಷನ್‌ನ ಉಡುಪು (ಹೈ-ಫ್ಯಾಶನ್) ವಿನ್ಯಾಸಕರು ವಿಶೇಷ ಅಂಗಡಿಗಳಿಗೆ ಅಥವಾ ಉತ್ತಮ-ಫ್ಯಾಷನ್‌ನ ಉಡುಪಿನ ವಿವಿಧ ಸರಕಿನ ಮಳಿಗೆಗಳಿಗೆ ನೆರವು ನೀಡುತ್ತಾರೆ. ಈ ವಿನ್ಯಾಸಕರು ಮೂಲ ಉಡುಪುಗಳನ್ನು ಮಾತ್ರವಲ್ಲದೆ ಪ್ರಖ್ಯಾತ ಫ್ಯಾಷನ್ ಶೈಲಿಗಳನ್ನು ಅನುಸರಿಸುವ ಉಡುಪುಗಳನ್ನು ತಯಾರಿಸುತ್ತಾರೆ. ಹೆಚ್ಚಿನ ಫ್ಯಾಷನ್ ವಿನ್ಯಾಸಕರು ಉಡುಪಿನ ತಯಾರಕರಿಗಾಗಿ ಕೆಲಸ ಮಾಡುತ್ತಾರೆ. ಅವರು ಪುರುಷರ, ಮಹಿಳೆಯರ ಮತ್ತು ಮಕ್ಕಳ ಫ್ಯಾಷನ್‌ಗಳ ವಿನ್ಯಾಸಗಳನ್ನು ಸಮೂಹ ಮಾರುಕಟ್ಟೆಗಾಗಿ ತಯಾರಿಸುತ್ತಾರೆ. ಹೆಸರನ್ನು ಅವುಗಳ ಬ್ರ್ಯಾಂಡ್ಆಗಿ ಹೊಂದಿರುವ ಹೆಚ್ಚು ವಿನ್ಯಾಸ ಮಾಡುವ ಬ್ರ್ಯಾಂಡ್‌ಗಳೆಂದರೆ - ಕ್ಯಾಲ್ವಿನ್ ಕ್ಲೈನ್, ಗುಕ್ಕಿ ಅಥವಾ ಚಾನೆಲ್. ಇವು ವಿನ್ಯಾಸ ನಿರ್ದೇಶಕರ ನಿರ್ದೇಶನದಡಿಯಲ್ಲಿ ವೈಯಕ್ತಿಕ ವಿನ್ಯಾಸಕರ ತಂಡದ ಮೂಲಕ ಕೆಲಸ ಮಾಡುತ್ತವೆ.
ಸಂಗ್ರಹವನ್ನು ವಿನ್ಯಾಸಗೊಳಿಸುವುದು
[ಬದಲಾಯಿಸಿ]ಫ್ಯಾಷನ್ ಸಂಗ್ರಹವೆಂದರೆ ವಿನ್ಯಾಸಕರು ಉತ್ತಮ ಫ್ಯಾಷನ್ ಉಡುಪುಗಳ ವಲಯ ಮತ್ತು ಸಮೂಹ ಮಾರುಕಟ್ಟೆಯ ವಲಯಗಳೆರಡರಲ್ಲೂ ಅವರ ಹೊಸ ಶೈಲಿಗಳ ಕಲ್ಪನೆಗಳನ್ನು ಪ್ರದರ್ಶಿಸಲು ಪ್ರತಿ ಅವಧಿಯಲ್ಲೂ ಒಟ್ಟಿಗೆ ಸೇರುವುದೆಂದರ್ಥ. ಇದನ್ನು ಸಾಮಾನ್ಯವಾಗಿ ಒಂದರಿಂದ ಎರಡು ಅವಧಿಗಳ ಯೋಜಿತ ಬಳಕೆ-ತಪ್ಪುತ್ತಿರುವಿಕೆಯೆಂದು ಪರಿಗಣಿಸಲಾಗುತ್ತದೆ. ಒಂದು ಅವಧಿಯನ್ನು ಶರತ್ಕಾಲ/ಚಳಿಗಾಲ ಅಥವಾ ವಸಂತಕಾಲ/ಬೇಸಿಗೆಯಾಗಿ ನಿರೂಪಿಸಲಾಗುತ್ತದೆ.
ಉಡುಪಿನ ವಿನ್ಯಾಸ
[ಬದಲಾಯಿಸಿ]ಫ್ಯಾಷನ್ ವಿನ್ಯಾಸಕರು ವಿವಿಧ ವಿಧಾನಗಳಲ್ಲಿ ಕೆಲಸ ಮಾಡುತ್ತಾರೆ. ಕೆಲವರು ಅವರ ಕಲ್ಪನೆಗಳನ್ನು ಕಾಗದಲ್ಲಿ ಬರೆಯುತ್ತಾರೆ, ಮತ್ತೆ ಕೆಲವರು ನೇಯ್ದ ಬಟ್ಟೆಯನ್ನು ಉಡುಪಿನ ರೀತಿಯಲ್ಲಿ ಅಲಂಕರಿಸುತ್ತಾರೆ. ವಿನ್ಯಾಸಕರು ಅರೆಪಾರದರ್ಶಕ ಬಟ್ಟೆ (ಅಥವಾ ಮಸ್ಲಿನ್ ಬಟ್ಟೆ)ಯ ಜೋಡಣೆಯಲ್ಲಿ ಸಂಪೂರ್ಣವಾಗಿ ತೃಪ್ತನಾದ ನಂತರ ಅವರು ವೃತ್ತಿಪರ ಮಾದರಿಯಂತೆ-ರಚಿಸುವವರನ್ನು ಭೇಟಿಯಾಗುತ್ತಾರೆ. ಅವರು ಆ ಮಾದರಿಯಂತೆ ಉಡುಪನ್ನು ತಯಾರಿಸುತ್ತಾರೆ. ಮಾದರಿಯಂತೆ-ರಚಿಸುವವರ ಕೆಲಸವು ತುಂಬಾ ಕರಾರುವಾಕ್ಕಾಗಿರುತ್ತದೆ ಮತ್ತು ಹೆಚ್ಚು ಎಚ್ಚರಿಕೆಯ ಕಾರ್ಯವಾಗಿರುತ್ತದೆ. ಪೂರ್ಣಗೊಂಡ ಉಡುಪಿನ ಜೋಡಣೆಯು ಅವರ ನಿಖರತೆಯನ್ನು ಅವಲಂಬಿಸಿರುತ್ತದೆ. ಅಂತಿಮವಾಗಿ, ಮಾದರಿ ಉಡುಪನ್ನು ತಯಾರಿಸಲಾಗುತ್ತದೆ ಮತ್ತು ಅದನ್ನು ರೂಪದರ್ಶಿಗೆ ತೊಡಿಸಿ ಪರಿಶೀಲಿಸಲಾಗುತ್ತದೆ.
ಇತಿಹಾಸ
[ಬದಲಾಯಿಸಿ]ಫ್ಯಾಷನ್ ವಿನ್ಯಾಸವು 19ನೇ ಶತಮಾನದಲ್ಲಿ ಚಾರ್ಲ್ಸ್ ಫ್ರೆಡೆರಿಕ್ ವರ್ತ್‌ನಿಂದ ಆರಂಭವಾಗಿತ್ತೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ, ಇವನು ತನ್ನದೇ ಹೆಸರು ಪಟ್ಟಿಯಲ್ಲಿ ಉಡುಪುಗಳನ್ನು ವಿನ್ಯಾಸಗೊಳಿಸಿದ ಮೊದಲ ವಿನ್ಯಾಸಕನಾಗಿದ್ದಾನೆ. ಆ ಬಟ್ಟೆ ವ್ಯಾಪಾರಿಯು ಅವನ ಮೈಸನ್ ಕ್ಯೂಟ್ಯುವರ್ (ಫ್ಯಾಷನ್ ಭವನ)ಅನ್ನು ಪ್ಯಾರಿಸ್‌ನಲ್ಲಿ ಸ್ಥಾಪಿಸುವುದಕ್ಕಿಂತ ಮೊದಲು, ಉಡುಪಿನ ವಿನ್ಯಾಸ ಮತ್ತು ತಯಾರಿಕೆಯನ್ನು ಹೆಚ್ಚಾಗಿ ಅನಾಮಿಕ ಹೊಲಿಗೆಗಾರ್ತಿಯರು ನಿರ್ವಹಿಸುತ್ತಿದ್ದರು. ರಾಜ ಭವನಗಳಲ್ಲಿ ಉತ್ತಮ ಫ್ಯಾಷನ್ ಶೈಲಿಯು ಆ ಉಡುಪುಗಳಿಂದ ಬಳಕೆಗೆ ಬಂದಿತು. ಗ್ರಾಹಕರು ಹೇಳಿದಂತೆ ವಿನ್ಯಾಸ ಮಾಡುತ್ತಿದ್ದ ಆರಂಭಿಕ ಉಡುಪು-ತಯಾರಕರಂತೆ ಮಾಡದೆ ವರ್ತ್ ತನ್ನ ಗ್ರಾಹಕರು ಏನನ್ನು ಧರಿಸಬೇಕೆಂಬ ಸೂಚನೆಗಳನ್ನು ನೀಡುತ್ತಿದ್ದನು, ಆದ್ದರಿಂದ ಅವನು ಆ ಉದ್ಯಮದಲ್ಲಿ ಯಶಸ್ಸು ಗಳಿಸಿದನು. ವಾಸ್ತವವಾಗಿ ಕ್ಯೂಟ್ಯುವರ್ ಪದವನ್ನು ಅವನನ್ನು ಸೂಚಿಸುವುದಕ್ಕಾಗಿ ಮೊದಲು ಬಳಕೆ ತರಲಾಯಿತು. ತಾತ್ತ್ವಿಕ ವಾದದಲ್ಲಿ ಅಧ್ಯಯನ ಮಾಡಲಾದ ಯಾವುದೇ ಕಾಲದ ಉಡುಪಿನ ಬಗೆಗಿನ ಎಲ್ಲಾ ಲೇಖನಗಳಲ್ಲಿ ಉಡುಪಿನ ವಿನ್ಯಾಸವೆಂದು ಸೂಚಿಸಲಾಗಿದೆ. 1858ರ ನಂತರ ತಯಾರಿಸಲಾದ ಉಡುಪುಗಳನ್ನು ಮಾತ್ರ ಫ್ಯಾಷನ್ ವಿನ್ಯಾಸವೆಂದು ಪರಿಗಣಿಸಲಾಗುತ್ತದೆ.
ಈ ಸಂದರ್ಭದಲ್ಲಿ ಹೆಚ್ಚಿನ ವಿನ್ಯಾಸ ಭವನಗಳು ಉಡುಪುಗಳಿಗೆ ವಿನ್ಯಾಸಗಳನ್ನು ಚಿತ್ರಿಸಲು ಅಥವಾ ರೇಖಾಚಿತ್ರ ಬಿಡಿಸಲು ಕಲಾವಿದರನ್ನು ನೇಮಕ ಮಾಡಿಕೊಳ್ಳಲು ಆರಂಭಿಸಿದವು. ಆ ಚಿತ್ರಗಳನ್ನು ಗ್ರಾಹಕರಿಗೆ ತೋರಿಸಲಾಗುತ್ತಿತ್ತು. ಇದು ನಿಜವಾದ ಮಾದರಿ ಉಡುಪನ್ನು ತಯಾರಿಸುವುದಕ್ಕಿಂತ ಹೆಚ್ಚು ಅಗ್ಗವಾಗಿತ್ತು. ಗ್ರಾಹಕರು ಅವರ ವಿನ್ಯಾಸವನ್ನು ಇಷ್ಟಪಟ್ಟರೆ ಅದರ ತಯಾರಿಕೆಗೆ ಆದೇಶಿಲಾಗುತ್ತಿತ್ತು. ಹಾಗೆ ತಯಾರಾದ ಉಡುಪು ಆ ಭವನಕ್ಕೆ ಹಣಮಾಡಿಕೊಡುತ್ತಿತ್ತು. ಆದ್ದರಿಂದ ಪೂರ್ಣಗೊಂಡ ಉಡುಪನ್ನು ರೂಪದರ್ಶಿಗಳಿಗೆ ತೊಡಿಸಿ ಗ್ರಾಹಕರಿಗೆ ಪ್ರದರ್ಶಿಸುವ ಬದಲಿಗೆ ಉಡುಪಿನ ವಿನ್ಯಾಸಗಳ ರೇಖಾಚಿತ್ರ ಬಿಡಿಸುವ ವಿನ್ಯಾಸಕರ ರೂಢಿಯು ಒಂದು ಆರ್ಥಿಕ ಉದ್ಯಮವಾಗಿ ಬೆಳೆಯಿತು.
ಫ್ಯಾಷನ್‌ನ ಪ್ರಕಾರಗಳು
[ಬದಲಾಯಿಸಿ]ಬಟ್ಟೆ ತಯಾರಕರು ಉತ್ಪಾದಿಸುವ ಉಡುಪುಗಳಲ್ಲಿ ಮೂರು ವರ್ಗಗಳಿವೆ, ಆದರೂ ಇವು ಹೆಚ್ಚುವರಿ, ಹೆಚ್ಚು ವಿಶೇಷ ವರ್ಗಗಳಾಗಿ ವಿಂಗಡಿಸಲ್ಪಡಬಹುದು:
ಉತ್ತಮ ಫ್ಯಾಷನ್‌ನ ಉಡುಪು
[ಬದಲಾಯಿಸಿ]1950ರವರೆಗೆ ಫ್ಯಾಷನ್ ಉಡುಪನ್ನು ಮುಖ್ಯವಾಗಿ ಮೇಡ್-ಟು-ಮೆಜರ್(ಅಚ್ಚುಕಟ್ಟಾಗಿ) ಅಥವಾ ಓಟ್ ಕ್ಯೂಟ್ಯುವರ್ (ಉತ್ತಮ ಫ್ಯಾಷನ್‌ನ ಉಡುಪಿಗೆ ಫ್ರೆಂಚ್‌ನಲ್ಲಿ) ಆಧಾರದಲ್ಲಿ ವಿನ್ಯಾಸಗೊಳಿಸಲಾಗುತ್ತಿತ್ತು ಮತ್ತು ತಯಾರಿಸಲಾಗುತ್ತಿತ್ತು. ಪ್ರತಿಯೊಂದು ಉಡುಪನ್ನು ನಿರ್ದಿಷ್ಟ ಗ್ರಾಹಕನಿಗೆ ಸಿದ್ಧಪಡಿಸಲಾಗುತ್ತಿತ್ತು. ಉತ್ತಮ ಫ್ಯಾಷನ್‌ನ ಉಡುಪನ್ನು ವೈಯಕ್ತಿಕ ಗ್ರಾಹಕನ ಆದೇಶಕ್ಕನುಗುಣವಾಗಿ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಉತ್ತಮ-ಗುಣಮಟ್ಟ, ದುಬಾರಿ ಬಟ್ಟೆಯಿಂದ ತಯಾರಿಸಲಾಗುತ್ತದೆ, ವಿನ್ಯಾಸಕ್ಕೆ ಹೆಚ್ಚು ಒತ್ತುಕೊಟ್ಟು ನೇಯಲಾಗುತ್ತದೆ. ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಕರಕುಶಲ ವಿಧಾನಗಳನ್ನು ಬಳಸಿಕೊಳ್ಳುತ್ತದೆ. ಉಡುಪಿಗೆ ಹೆಚ್ಚು ಚಂದವು ನೀಡಲು ಮತ್ತು ಜೋಡಣೆಯನ್ನು ಉತ್ತಮವಾಗಿಸಲು ದುಬಾರಿ ಬಟ್ಟೆಯನ್ನು ಬಳಸಬೇಕಾಗುತ್ತದೆ ಮತ್ತು ಹೆಚ್ಚು ಸಮಯಾವಕಾಶ ಬೇಕಾಗುತ್ತದೆ.
ಸಿದ್ಧ ಉಡುಪು
[ಬದಲಾಯಿಸಿ]ಸಿದ್ಧ ಉಡುಪುಗಳು ಉತ್ತಮ ಫ್ಯಾಷನ್‌ನ ಉಡುಪು ಮತ್ತು ಸಮೂಹ ಮಾರುಕಟ್ಟೆಯ ನಡುವಿನ ವ್ಯತ್ಯಾಸವಾಗಿದೆ. ಅವುಗಳನ್ನು ವೈಯಕ್ತಿಕ ಗ್ರಾಹಕರಿಗಾಗಿ ತಯಾರಿಸುಲಾಗುತ್ತದೆ. ಆದರೆ ಬಟ್ಟೆಯ ಆಯ್ಕೆಯಲ್ಲಿ ಮತ್ತು ಕತ್ತರಿಸುವುದರಲ್ಲಿ ಹೆಚ್ಚು ಜಾಗೃತೆ ವಹಿಸಲಾಗುತ್ತದೆ. ಈ ಉಡುಪುಗಳನ್ನು ಅವುಗಳ ಪ್ರತ್ಯೇಕತೆಯನ್ನು ಉಳಿಸುವುದಕ್ಕಾಗಿ ಸಣ್ಣ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ, ಆದ್ದರಿಂದ ಅವು ಸ್ವಲ್ಪ ದುಬಾರಿಯಾಗಿರುತ್ತವೆ. ಸಿದ್ಧ ಉಡುಪುಗಳ ಸಂಗ್ರಹಗಳನ್ನು ಸಾಮಾನ್ಯವಾಗಿ ಫ್ಯಾಷನ್ ವೀಕ್ ಎನ್ನುವ ಅವಧಿಯಲ್ಲಿ ಫ್ಯಾಷನ್ ಭವನಗಳು ಪ್ರದರ್ಶಿಸುತ್ತವೆ. ಇದು ನಗರದಾದ್ಯಂತ ನಡೆಯುತ್ತದೆ ಮತ್ತು ವರ್ಷವೊಂದಕ್ಕೆ ಎರಡು ಬಾರಿ ಕಂಡುಬರುತ್ತದೆ.
ಸಮೂಹ ಮಾರುಕಟ್ಟೆ
[ಬದಲಾಯಿಸಿ]ಪ್ರಸ್ತುತ ಫ್ಯಾಷನ್ ಉದ್ಯಮವು ಸಮೂಹ ಮಾರುಕಟ್ಟೆ ಮಾರಾಟಗಳನ್ನು ಹೆಚ್ಚಾಗಿ ಅವಲಂಬಿಸಿದೆ. ಸಮೂಹ ಮಾರುಕಟ್ಟೆಯು ಸಿದ್ಧ ಉಡುಪುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಪ್ರಮಾಣಿತ ಮಟ್ಟದಲ್ಲಿ ತಯಾರಿಸುವ ಮೂಲಕ ಅಸಂಖ್ಯಾತ ಗ್ರಾಹಕರಿಗೆ ಉಡುಪುಗಳನ್ನು ಒದಗಿಸುತ್ತದೆ. ಅಗ್ಗ ದರದ ಬಟ್ಟೆಗಳ ಸೃಜನಾತ್ಮಕ ಬಳಕೆಯು ಸಮರ್ಥ ಫ್ಯಾಷನ್‌ಅನ್ನು ತಯಾರಿಸುತ್ತದೆ. ಸಮೂಹ ಮಾರುಕಟ್ಟೆ ವಿನ್ಯಾಸಕರು ಸಾಮಾನ್ಯವಾಗಿ ಫ್ಯಾಷನ್‌ನಲ್ಲಿ ಉತ್ತಮ ಹೆಸರು ಗಳಿಸಿದವರಿಂದ ಶೈಲಿಗಳನ್ನು ಬಳಸಿಕೊಳ್ಳುತ್ತಾರೆ. ಅವರ ಮೂಲ ವಿನ್ಯಾಸದ ಉಡುಪನ್ನು ತಯಾರಿಸುವುದಕ್ಕಿಂತ ಮೊದಲು ಆ ಶೈಲಿಯು ನಿಜವಾಗಿಯೂ ಜನಪ್ರಿಯವಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವಧಿಯಾದ್ಯಂತ ಕಾಯುತ್ತಾರೆ. ಹಣ ಮತ್ತು ಸಮಯವನ್ನು ಉಳಿಸುವುದಕ್ಕಾಗಿ, ಅಗ್ಗದ ಬಟ್ಟೆಗಳನ್ನು ಮತ್ತು ಯಂತ್ರದಿಂದ ಸುಲಭವಾಗಿ ಮಾಡಬಹುದಾದ ಸರಳ ತಯಾರಿಕಾ ವಿಧಾನಗಳನ್ನು ಬಳಸುತ್ತಾರೆ. ಆದ್ದರಿಂದ ಹಾಗೆ ತಯಾರಾದ ಉತ್ಪನ್ನವು ಇನ್ನಷ್ಟು ಅಗ್ಗದಲ್ಲಿ ಮಾರಾಟವಾಗುತ್ತದೆ.
"ಕಿಟ್ಸ್ಚ್" ವಿನ್ಯಾಸ ಎಂಬ ಹೆಸರಿನ ಒಂದು ರೀತಿಯ ವಿನ್ಯಾಸವಿದೆ, ಈ ಹೆಸರನ್ನು ಕೆಟ್ಟ ಅಥವಾ ಕಲಾತ್ಮಕವಾಗಿಲ್ಲದ ಎಂಬರ್ಥವಿರುವ ಜರ್ಮನ್ ಪದ "ಕಿಟ್ಸ್ಚೆನ್"ನಿಂದ ಪಡೆಯಲಾಗಿದೆ. "ಕಿಟ್ಸ್ಚ್" ಪದವನ್ನು ಮತ್ತೊಂದು ರೀತಿಯಿಂದ ವಿವರಿಸುವುದಾದರೆ ಫ್ಯಾಷನ್ ದಿನಾಂಕವನ್ನು ಮೀರಿದ, ಆದ್ದರಿಂದ ಫ್ಯಾಷನ್‌ನಲ್ಲಿಲ್ಲದ ಏನಾದರೊಂದನ್ನು ಧರಿಸುವುದು ಅಥವಾ ಪ್ರದರ್ಶಿಸುವುದು. ಆದ್ದರಿಂದ ಯಾರಾದರೂ 80ರ ದಶಕದಲ್ಲಿ ಧರಿಸಲಾದ ಒಂದು ಜೊತೆ ಪ್ಯಾಂಟುಗಳನ್ನು ಧರಿಸಿದರೆ ಅದನ್ನು "ಕಿಟ್ಸ್ಚ್" ಫ್ಯಾಷನ್ ಎಂದು ಕರೆಯಲಾಗುತ್ತದೆ.[೧]
ಆದಾಯ
[ಬದಲಾಯಿಸಿ]The examples and perspective in this article may not represent a worldwide view of the subject. |
2008ರ ಮೇ ತಿಂಗಳ ದಾಖಲೆಯ ಪ್ರಕಾರ, ಸಂಬಳ ಪಡೆಯುವ ಫ್ಯಾಷನ್ ವಿನ್ಯಾಸಕರ ಸರಾಸರಿ ವಾರ್ಷಿಕ ಸಂಬಳವು $61,160 ಆಗಿತ್ತು. ಮಧ್ಯಮ ಪ್ರಮಾಣದಲ್ಲಿ ಸಂಬಂಳ ಪಡೆಯುವ ಶೇಕಡಾ 50 ಮಂದಿ $42,150ರಿಂದ $87,120ನಷ್ಟು ಸಂಪಾದಿಸುತ್ತಾರೆ. ಕನಿಷ್ಠ ಸಂಬಳ ಪಡೆಯುವ ಶೇಕಡಾ 10 ಮಂದಿ $32,150ಗಿಂತಲೂ ಕಡಿಮೆ ಗಳಿಸುತ್ತಾರೆ ಹಾಗೂ ಗರಿಷ್ಠ ಸಂಬಳ ಪಡೆಯುವ ಶೇಕಡಾ 10 ಮಂದಿ $124,780ಗಿಂತಲೂ ಹೆಚ್ಚು ಸಂಪಾದಿಸುತ್ತಾರೆ. ಉಡುಪು, ಸಣ್ಣ ಸರಕುಗಳು ಮತ್ತು ಸಣ್ಣಪುಟ್ಟ ವಸ್ತುಗಳಿಂದ ಬರುವ ಸರಾಸರಿ ವಾರ್ಷಿಕ ಗಳಿಕೆಯೆಂದರೆ $52,860 (£28,340, ಇದು ಅತ್ಯಂತ ಹೆಚ್ಚಿನ ಸಂಖ್ಯೆಯ ಫ್ಯಾಷನ್ ವಿನ್ಯಾಸಕರಿಗೆ ಉದ್ಯೋಗ ನೀಡಿದ ಉದ್ಯಮವಾಗಿದೆ.[೨]
ಫ್ಯಾಷನ್ ಶಿಕ್ಷಣ
[ಬದಲಾಯಿಸಿ]ಪ್ರಪಂಚದಾದ್ಯಂತ ಫ್ಯಾಷನ್ ವಿನ್ಯಾಸದಲ್ಲಿ ಪದವಿಗಳನ್ನು ನೀಡುವ ಅಸಂಖ್ಯಾತ ಪ್ರಸಿದ್ಧ ಕಲಾ ಶಾಲೆಗಳು ಮತ್ತು ವಿನ್ಯಾಸ ಶಾಲೆಗಳಿವೆ. ಹೆಚ್ಚು ಗಮನಾರ್ಹ ವಿನ್ಯಾಸ ಶಾಲೆಗಳೆಂದರೆ - ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಆಂಡ್ ಮರ್ಕೈಂಡೈಸಿಂಗ್, ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಸ್ಟಿಟ್ಯೂಟೊ ಮರಾಂಗನಿ, ಸೆಂಟ್ರಲ್ ಸೇಂಟ್ ಮಾರ್ಟಿನ್ಸ್ ಕಾಲೇಜ್ ಆಫ್ ಆರ್ಟ್ ಆಂಡ್ ಡಿಸೈನ್, ಸವನ್ನಾ ಕಾಲೇಜ್ ಆಫ್ ಆರ್ಟ್ ಆಂಡ್ ಡಿಸೈನ್, ಪ್ರ್ಯಾಟ್ ಇನ್‌ಸ್ಟಿಟ್ಯೂಟ್, ಲಂಡನ್‌ನ ಲಂಡನ್ ಕಾಲೇಜ್ ಆಫ್ ಫ್ಯಾಷನ್ ಮತ್ತು ಯೂನಿವರ್ಸಿಟಿ ಆಫ್ ವೆಸ್ಟ್‌ಮಿಂಸ್ಟರ್, ನ್ಯೂಯಾರ್ಕ್ ನಗರದ ಪಾರ್ಸನ್ಸ್ ದಿ ನ್ಯೂ ಸ್ಕೂಲ್ ಫಾರ್ ಡಿಸೈನ್, ಪಾಕಿಸ್ತಾನದ ಪಾಲಿಟೆಕ್ನಿಕೊ ಆಫ್ ಮಿಲನ್, ಕೊಲಂಬಿಯಾ ಕಾಲೇಜ್ ಚಿಕಾಗೊ, ಮತ್ತು ನ್ಯಾಷನಲ್ ಕಾಲೇಜ್ ಆಫ್ ಆರ್ಟ್ಸ್ (NCA), ಥೈವಾನ್‌ನ ಶಿಹ್ ಚೈನ್ ಯೂನಿವರ್ಸಿಟಿ, ಮೆಲ್ಬರ್ನ್‌ನ RMIT ಯೂನಿವರ್ಸಿಟಿ ಮತ್ತು ಫು ಜೆನ್ ಕ್ಯಾಥೋಲಿಕ್ ಯೂನಿವರ್ಸಿಟಿ ಹಾಗೂ ಏಷ್ಯಾದ ಹೆಚ್ಚಿನ ಭಾಗಗಳಲ್ಲಿರುವ ರಾಫ್ಲೆಸ್ ಡಿಸೈನ್.
ಫ್ಯಾಷನ್ ವಿನ್ಯಾಸದ ಕ್ಷೇತ್ರಗಳು
[ಬದಲಾಯಿಸಿ]ಹೆಚ್ಚಿನ ವೃತ್ತಿಪರ ಫ್ಯಾಷನ್ ವಿನ್ಯಾಸಕರು ಫ್ಯಾಷನ್‌ನ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದುಕೊಂಡು ತಮ್ಮ ವೃತ್ತಿಜೀವನವನ್ನು ಆರಂಭಿಸುತ್ತಾರೆ. ಸಣ್ಣ ಮತ್ತು ಹೆಚ್ಚು ವಿಶೇಷವಾದ ಮಾರುಕಟ್ಟೆಯು, ಕಂಪನಿಯೊಂದು ಅದರ ಉಡುಪುಗಳಿಗೆ ಸೂಕ್ತವಾದ ಗೋಚರತೆ ಮತ್ತು ವಿಶಿಷ್ಟತೆಯನ್ನು ಪಡೆಯುವಂತೆ ಮಾಡುತ್ತದೆ. ಕಂಪನಿಯೊಂದು ಅನೇಕ ಉತ್ಪನ್ನಗಳ ಬದಲಿಗೆ ಒಂದು ರೀತಿಯ ಉತ್ಪನ್ನಕ್ಕೆ ಪ್ರಸಿದ್ಧವಾಗಿದ್ದರೆ ಫ್ಯಾಷನ್ ಉದ್ಯಮದಲ್ಲಿ ಹೆಸರುಗಳಿಸಲು ಸುಲಭವಾಗುತ್ತದೆ. ಒಮ್ಮೆ ಫ್ಯಾಷನ್ ಕಂಪನಿಯು ಪ್ರಸಿದ್ಧವಾದರೆ (ಅಂದರೆ ಅದು ನಿಯಮಿತ ಕೊಳ್ಳುಗರನ್ನು ಹೊಂದಿದ್ದು, ಮಾರಾಟಿದಿಂದ ಮತ್ತು ಸಾರ್ವಜನಿಕವಾಗಿ ಹೆಸರುವಾಸಿಯಾಗಿದ್ದರೆ), ಅದು ಹೊಸ ಕ್ಷೇತ್ರಕ್ಕೆ ವಿಸ್ತರಿಸಲು ನಿರ್ಧರಿಸಬಹುದು. ಕಂಪನಿಯೊಂದು ಅದಾಗಲೇ ತಯಾರಿಸುತ್ತಿರುವ ಉಡುಪುಗಳಿಗೆ ಹೆಸರುವಾಸಿಯಾಗಿದ್ದರೆ, ಈ ನಿರ್ಧಾರವು ಹೊಸದನ್ನು ಮಾರಾಟ ಮಾಡಲು ಸಹಾಯ ಮಾಡುತ್ತದೆ. ಕಂಪನಿಯು ತಿಳಿದಿರುವ ವಲಯಕ್ಕೆ ತನ್ನ ಉದ್ಯಮವನ್ನು ವಿಸ್ತರಿಸುವುದು ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತದೆ. ಉದಾಹರಣೆಗಾಗಿ, ಮಹಿಳೆಯರ ಕ್ರೀಡಾ-ಉಡುಪಿನ ವಿನ್ಯಾಸಕರು ತಮ್ಮ ಉದ್ಯಮವನ್ನು ಪುರುಷರ ಕ್ರೀಡಾ-ಉಡುಪಿನ ವಿನ್ಯಾಸಕ್ಕೆ ವಿಸ್ತರಿಸಬಹುದು. ಈ ಕೆಳಗಿನ ಕೋಷ್ಟಕವು ಹೆಚ್ಚಿನ ವಿನ್ಯಾಸಕರು ಪರಿಣತಿ ಪಡೆಯಲು ಆರಿಸುವ ಕ್ಷೇತ್ರಗಳನ್ನು ತೋರಿಸುತ್ತದೆ.
ಕ್ಷೇತ್ರ | ವಿವರಣೆ | ಮಾರುಕಟ್ಟೆ |
---|---|---|
ಮಹಿಳೆಯರ ದೈನಂದಿನ ಉಡುಪು | ಕಾರ್ಯೋಪಯೋಗಿ, ಆರಾಮದಾಯಕ, ಫ್ಯಾಷನ್‌ಗಾರಿಕೆಯ | ಉತ್ತಮ ಫ್ಯಾಷನ್ ಉಡುಪು, ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಮಹಿಳೆಯರ ಸಂಜೆ ಉಡುಪು | ಮನಮೋಹಕ, ಅತ್ಯಾಧುನಿಕ, ಸಮಾರಂಭಗಳಿಗೆ ಸೂಕ್ತವಾದುದು | ಉತ್ತಮ ಫ್ಯಾಷನ್ ಉಡುಪು, ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಮಹಿಳೆಯರ ಒಳ ಉಡುಪುಗಳು ಮತ್ತು ರಾತ್ರಿ ಉಡುಪುಗಳು | ಮನಮೋಹಕ, ಆರಾಮದಾಯಕ, ತೊಳೆಯಬಹುದಾದ | ಉತ್ತಮ ಫ್ಯಾಷನ್ ಉಡುಪು, ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಪುರುಷರ ದೈನಂದಿನ ಉಡುಪು | ಸಾಂದರ್ಭಿಕ, ಕಾರ್ಯೋಪಯೋಗಿ, ಆರಾಮದಾಯಕ | ಹೊಲಿಗೆ, ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಪುರುಷರ ಸಂಜೆಯುಡುಪು | ನಾಜೂಕಿನ, ಸದಭಿರುಚಿಯ, ಸಾಂಪ್ರದಾಯಿಕ, ಸಮಾರಂಭಗಳಿಗೆ ಸೂಕ್ತವಾದುದು | ಹೊಲಿಗೆ, ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಮಕ್ಕಳ ಉಡುಪು | ಹೊಸ ಫ್ಯಾಷನ್ನಿನ ಅಥವಾ ಸೊಗಸುಗಾರಿಕೆಯ, ಕಾರ್ಯೋಪಯೋಗಿ, ತೊಳೆಯಬಹುದಾದ, ಉಪಯುಕ್ತ | ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಹೆಣ್ಣುಮಕ್ಕಳ ಉಡುಪು | ಆಕರ್ಷಕ, ವರ್ಣಯುಕ್ತ, ಕಾರ್ಯೋಪಯೋಗಿ, ತೊಳೆಯಬಹುದಾದ, ಅಗ್ಗದ | ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಹದಿಹರೆಯದ ಹೆಣ್ಣುಮಕ್ಕಳ ಉಡುಗೆ | ವರ್ಣಯುಕ್ತ, ಆರಾಮದಾಯಕ, ಮನಮೋಹಕ, ಆಕರ್ಷಕ | ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಕ್ರೀಡಾ-ಉಡುಪು | ಆರಾಮದಾಯಕ, ಕಾರ್ಯೋಪಯೋಗಿ, ಚೆನ್ನಾಗಿ ಗಾಳಿ-ಬೆಳಕು ಆಡುವ, ತೊಳೆಯಬಹುದಾದ, ಉಪಯುಕ್ತ | ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಹೆಣೆದ ಉಡುಪು | ಆ ಅವಧಿಗೆ ಸೂಕ್ತವಾದ ತೂಕ ಮತ್ತು ಬಣ್ಣದ | ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಹೊರ-ಉಡುಪು | ಸೊಗುಸುಗಾರಿಕೆಯ, ಬೆಚ್ಚಗಿನ, ಆ ಅವಧಿಗೆ ಸೂಕ್ತವಾದ ತೂಕ ಮತ್ತು ಬಣ್ಣದ | ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಮದುವೆಯ ಉಡುಪು | ಭಾರಿ ಬೆಲೆಯ, ಆಕರ್ಷಕ, ಸಾಂಪ್ರದಾಯಿಕ | ಉತ್ತಮ ಫ್ಯಾಷನ್ ಉಡುಪು, ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಪರಿಕರಗಳು | ಕಣ್ಸೆಳೆಯುವ, ಫ್ಯಾಷನ್‌ಗಾರಿಕೆಯ | ಉತ್ತಮ ಫ್ಯಾಷನ್ ಉಡುಪು, ಸಿದ್ಧ ಉಡುಪು, ಸಮೂಹ ಮಾರುಕಟ್ಟೆ |
ಪ್ರಪಂಚದ ಫ್ಯಾಷನ್ ಉದ್ಯಮ
[ಬದಲಾಯಿಸಿ]ಫ್ಯಾಷನ್ ಇಂದು ಒಂದು ಜಾಗತಿಕ ಉದ್ಯಮವಾಗಿದೆ. ಹೆಚ್ಚಿನ ಪ್ರಮುಖ ರಾಷ್ಟ್ರಗಳು ಫ್ಯಾಷನ್ ಉದ್ಯಮವನ್ನು ಹೊಂದಿವೆ. ಕೆಲವು ರಾಷ್ಟ್ರಗಳು ಪ್ರಮುಖ ತಯಾರಿಕಾ ಕೇಂದ್ರಗಳಾಗಿವೆ, ಗಮನಾರ್ಹವಾಗಿ ಚೀನಾ, ದಕ್ಷಿಣ ಕೊರಿಯಾ, ಸ್ಪೇನ್, ಜರ್ಮನಿ, ಬ್ರೆಜಿಲ್ ಮತ್ತು ಭಾರತ. ಐದು ರಾಷ್ಟ್ರಗಳು ಫ್ಯಾಷನ್ ವಿನ್ಯಾಸದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿವೆ. ಆ ರಾಷ್ಟ್ರಗಳೆಂದರೆ - ಫ್ರಾನ್ಸ್, ಇಟಲಿ, ಯುನೈಟೆಡ್ ಕಿಂಗ್ಡಮ್, ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಜಪಾನ್.
ಅಮೆರಿಕಾದ ಫ್ಯಾಷನ್ ವಿನ್ಯಾಸಕರು
[ಬದಲಾಯಿಸಿ]ಅಮೆರಿಕಾದ ಹೆಚ್ಚಿನ ಫ್ಯಾಷನ್ ಭವನಗಳು ನ್ಯೂಯಾರ್ಕ್‌ನಲ್ಲಿ ನೆಲೆಯಾಗಿವೆ. ಆದರೂ ಗಮನಾರ್ಹ ಸಂಖ್ಯೆಯ ಫ್ಯಾಷನ್ ಭವನಗಳು ಲಾಸ್ ಏಂಜಲೀಸ್‌ನಲ್ಲೂ ಇವೆ, USನಲ್ಲಿ ತಯಾರಾಗುವ ಗಣನೀಯ ಪ್ರಮಾಣದ ಉಡುಪು ವಾಸ್ತವವಾಗಿ ಇಲ್ಲಿ ತಯಾರಾಗುತ್ತದೆ. ಶೀಘ್ರವಾಗಿ ಬೆಳೆಯುತ್ತಿರುವ ಉದ್ಯಮಗಳು ಮಿಯಾಮಿ ಮತ್ತು ಚಿಕಾಗೊದಲ್ಲಿವೆ, ಇವು ಒಮ್ಮೆ ಅಮೆರಿಕಾದ ಫ್ಯಾಷನ್‌ಗೆ ಕೇಂದ್ರಗಳಾಗಿದ್ದವು. ಅಮೆರಿಕಾದ ಫ್ಯಾಷನ್ ವಿನ್ಯಾಸವು ಮುಖ್ಯವಾಗಿ ಸ್ಪಷ್ಟ, ಸಾಂದರ್ಭಿಕ ಶೈಲಿಯನ್ನು ಹೊಂದಿರುತ್ತದೆ. ಅಲ್ಲದೇ ಕೆಲವು ಅಮೆರಿಕಾದ ನಗರ-ನಿವಾಸಿಗರ ಅಂಗಸಾಧನೆಯ, ಆರೋಗ್ಯ-ಪ್ರಜ್ಞೆಯುಳ್ಳ ಜೀವನಶೈಲಿಗಳನ್ನು ಪ್ರತಿಬಿಂಬಿಸುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 1940ರಿಂದ 50ರ ದಶಕದವರೆಗೆ ಕ್ರೀಡಾ-ಪ್ರಭಾವಿತ ದೈನಂದಿನ ಉಡುಪಿನ ಶೈಲಿಯನ್ನು ಬಳಕೆಗೆ ತಂದ ವಿನ್ಯಾಸಕಿಯೆಂದರೆ ಕ್ಲೈರ್ ಮ್ಯಾಕ್‌ಕಾರ್ಡೆಲ್. ಆಕೆಯ ಹೆಚ್ಚಿನ ವಿನ್ಯಾಸಗಳು ಇತ್ತೀಚಿನ ದಶಕಗಳಲ್ಲಿ ಮತ್ತೆ ಬಳಕೆಗೆ ಬಂದಿವೆ. ಅಮೆರಿಕಾದ ಫ್ಯಾಷನ್ ವಿನ್ಯಾಸದ ಮೇಲೆ ಆಧುನಿಕ ಪ್ರಭಾವ ಬೀರಿದ ವಿನ್ಯಾಸಕರೆಂದರೆ - ಕ್ಯಾಲ್ವಿನ್ ಕ್ಲೈನ್, ರಾಲ್ಫ್ ಲಾರೆನ್, ಅನ್ನಾ ಸ್ಯು, ಡೊನ್ನ ಕರಣ್, ಟಾಮ್ ಫೋರ್ಡ್, ಕೆನ್ನೆತ್ ಕೋಲೆ, ಮಾರ್ಕ್ ಜೇಕಬ್ಸ್, ಎಲೈ ತಹಾರಿ, ಕಿಮೋರ ಲೀ ಸೈಮನ್ಸ್, ಮೈಕೆಲ್ ಕೋರ್ಸ್, ವೀರ ವಾಂಗ್, ಬೆಟ್ಸಿ ಜಾನ್ಸನ್ ಮತ್ತು ಟಾಮಿ ಹಿಲ್ಫಿಗರ್.
ಬ್ರಿಟಿಷ್ ಫ್ಯಾಷನ್ ವಿನ್ಯಾಸ
[ಬದಲಾಯಿಸಿ]ಲಂಡನ್ ದೀರ್ಘಕಾಲದಿಂದ UKಫ್ಯಾಷನ್ ಉದ್ಯಮದ ರಾಜಧಾನಿಯಾಗಿದೆ. ಆಧುನಿಕ ಬ್ರಿಟಿಷ್ ಶೈಲಿಗಳಿಂದ ಸಂಯೋಜಿತವಾದ ವಿಶಾಲ ವ್ಯಾಪ್ತಿಯ ವಿದೇಶಿ ವಿನ್ಯಾಸಗಳನ್ನು ಅದು ಒಳಗೊಂಡಿದೆ. ಒಂದು ಮಾದರಿಯ ಬ್ರಿಟಿಷ್ ವಿನ್ಯಾಸವು ಲಕ್ಷಣವಾಗಿದ್ದು, ನಾವೀನ್ಯದಿಂದ ಕೂಡಿದೆ. ಆದರೂ ಇತ್ತೀಚೆಗೆ ಹೆಚ್ಚೆಚ್ಚು ಅಸಂಪ್ರದಾಯಿಕವಾಗಿದ್ದು, ಸಾಂಪ್ರದಾಯಿಕ ಶೈಲಿಗಳನ್ನು ಆಧುನಿಕ ತಂತ್ರಗಳೊಂದಿಗೆ ಸಂಯೋಜನೆ ಮಾಡಿದೆ. ಅತ್ಯಂತ ಹೆಸರಾಂತ UK ಫ್ಯಾಷನ್ ವಿನ್ಯಾಸಕರು ಬರ್ಬರಿ, ಪಾಲ್ ಸ್ಮಿತ್, ವಿವಿಯೇನ್ ವೆಸ್ಟ್‌ವುಡ್ , ಸ್ಟೆಲ್ಲಾ ಮೆಕಾರ್ಟ್ನಿ, ಜಾನ್ ಗ್ಯಾಲಿಯಾನೊ, ಜಾಸ್ಪರ್ ಕೋನ್ರಾನ್ ಮತ್ತು ಅಲೆಕ್ಸಾಂಡರ್ ಮೆಕ್ವೀನ್ ಕೊನೆಯ ಬ್ರಿಟಿಷ್ ಓಟ್ ಕ್ಯೂಟುವರ್ ಹೌಸ್ ಸೇಂಟ್-ಹಿಲ್ & ವಾನ್ ಬೇಸ್‌ಡೊಎನ್ನಲಾಗಿದೆ.
ಫ್ರೆಂಚ್ ಫ್ಯಾಷನ್ ವಿನ್ಯಾಸ
[ಬದಲಾಯಿಸಿ]ಬಹುತೇಕ ಫ್ರೆಂಚ್ ಫ್ಯಾಷನ್ ಭವನಗಳು(ಹೌಸ್‌ಗಳು)ಪ್ಯಾರಿಸ್‌ನಲ್ಲಿದ್ದು, ಇದು ಫ್ರೆಂಚ್ ಫ್ಯಾಷನ್ ರಾಜಧಾನಿಯಾಗಿದೆ. ಸಾಂಪ್ರದಾಯಿಕವಾಗಿ, ಫ್ರೆಂಚ್ ಫ್ಯಾಷನ್ ನಾಜೂಕು(ಚಿಕ್) ಮತ್ತು ಸೊಗಸುಗಾರಿಕೆಯಿಂದ ಕೂಡಿದೆ. ಅದು ಸೂಕ್ಷ್ಮಾಭಿರುಚಿ, ತಯಾರಿಕೆಯ ವೈಖರಿ(ಕತ್ತರಿಸುವಿಕೆ) ಮತ್ತು ಸೊಗಸಾದ ಪರಿಕರಗಳಿಂದ ವ್ಯಾಖ್ಯಾನಿತವಾಗಿದೆ. ಪ್ಯಾರಿಸ್‌ನ ಅನೇಕ ಕ್ಯೂಟುವರ್ ಹೌಸ್‌ಗಳಲ್ಲಿಬಾಲ್ಮೇನ್, ಲೂವಿಸ್ ವುಯಿಟನ್, ಚಾನೆಲ್, ಯೆವೆಸ್ ಸೇಂಟ್ ಲಾರೆಂಟ್, ಕ್ರಿಶ್ಚಿಯನ್ ಡಿಯರ್, ಗಿವೆಂಚಿ, ಬಾಲೆನ್ಸಿಯಾಗ ಮತ್ತು ಕ್ಲೊಯಿ, ವರ್ಷಕ್ಕೆ ಎರಡು ಬಾರಿ ನಡೆಯುವ ವಿನ್ಯಾಸ ಸಂಗ್ರಹಗಳಲ್ಲಿ ಅವು ತಮ್ಮ ವಿನ್ಯಾಸಗಳನ್ನು ಪ್ರದರ್ಶಿಸುತ್ತವೆ. ಗ್ಲೋಬಲ್ ಲಾಂಗ್ವೇಜ್ ಮಾನಿಟರ್ ಮಿಲಾನ್ ಮತ್ತು ನ್ಯೂಯಾರ್ಕ್‌ನಂತರ ಇದನ್ನು ಮಾಧ್ಯಮದಲ್ಲಿ 3ನೇ ಸ್ಥಾನದಲ್ಲಿರಿಸಿದರೂ, ಫ್ರೆಂಚ್ ಫ್ಯಾಷನ್ ಅಂತಾರಾಷ್ಟ್ರೀಯ ಪ್ರಶಂಸೆಗೆ ಒಳಗಾಗಿದ್ದು,ಪ್ಯಾರಿಸ್, ಫ್ಯಾಷನ್‌ನ ಸಾಂಕೇತಿಕ ನೆಲೆಯಾಗಿ ಉಳಿದಿದೆ.
ಇಟಲಿ ಫ್ಯಾಷನ್ ವಿನ್ಯಾಸ
[ಬದಲಾಯಿಸಿ]ಇಟಲಿ ಪ್ರಸಕ್ತ ಫ್ಯಾಷನ್‌ನಲ್ಲಿ ಪ್ರಪಂಚದಲ್ಲೇ ಮುಂಚೂಣಿಯಲ್ಲಿದ್ದು,ಮಿಲನ್ ಫ್ಯಾಷನ್‌ನ ರಾಜಧಾನಿಯೆನಿಸಿದೆ. ಬಹುತೇಕ ಪ್ರಾಚೀನ(ಫ್ಯಾಶನ್ ವಿನ್ಯಾಸದ ಕಲೆಗಾರರು) ಕ್ಯೂಟ್ಯುವರ್‌ಗಳು ರೋಮ್‌ನಲ್ಲಿವೆ. ಆದಾಗ್ಯೂ {0ಮಿಲನ್{/0} ಮತ್ತು ಫ್ಲೋರೆನ್ಸ್ಇಟಲಿಯ ಫ್ಯಾಷನ್ ರಾಜಧಾನಿಗಳಾಗಿದ್ದು,ಅವುಗಳ ಸಂಗ್ರಹಗಳಿಗೆ ಇದು ಪ್ರದರ್ಶನ ಸ್ಥಳವಾಗಿದೆ. ಇಟಲಿಯ ಫ್ಯಾಷನ್ ಅಂದಚಂದದ ಮತ್ತು ಐಷಾರಾಮಿ(ದುಬಾರಿ)ಬಟ್ಟೆಗಳಿಂದ ಕೂಡಿದೆ. ಮೊದಲ ಇಟಲಿ ಐಷಾರಾಮಿ ಬ್ರಾಂಡ್ ಫ್ಲೋರೆಂಟೈನ್ ಸಾಲ್ವಟೋರ್ ಫೆರಾಗಾಮೊ (1920ರ ದಶಕದಿಂದ ಅತ್ಯುತ್ಕೃಷ್ಟ ಕೈಯಿಂದ ತಯಾರಿಸಿದ ಬೂಟುಗಳನ್ನು ರಫ್ತು ಮಾಡಿದೆ); ಅತ್ಯಂತ ಹೆಸರಾಂತ, ವಿಶೇಷ ಫ್ಯಾಷನ್ ಹೆಸರುಗಳ ಪೈಕಿ ಒಂದಾಗಿದೆ. ಇನ್ನೊಂದು ಫ್ಲೋರೆಂಟಾನ್ ಗುಸ್ಸಿಅತ್ಯಂತ ಮಾರಾಟವಾಗುವ ಇಟಲಿಯ ಫ್ಯಾಷನ್ ಬ್ರಾಂಡ್ ಆಗಿದ್ದು, ಪ್ರಪಂಚದಲ್ಲೇ ಮೂರನೇ ಅತೀ ಹೆಚ್ಚು ಮಾರಾಟವಾಗುವ ಬ್ರಾಂಡ್, ಇದರ ವಿಶ್ವವ್ಯಾಪಿ ಮಾರಾಟ $7.158 ಶತಕೋಟಿ ಡಾಲರ್‌ಗಳಾಗಿದೆ.[೩] ಇತರ ಪ್ರಖ್ಯಾತ ಇಟಲಿ ಫ್ಯಾಷನ್ ವಿನ್ಯಾಸಕರೆಂದರೆ - ವ್ಯಾಲೆಂಟಿನೊ ಗರವಾನಿ, ಡೋಲ್ಸೆ ಆಂಡ್ ಗಬ್ಬಾನಾ, ಎಟ್ರೊ, ಎಮಿಲಿಯೊ ಪಕ್ಕಿ, ರಾಬರ್ಟೊ ಕವಾಲ್ಲಿ, ವರ್ಸೇಸ್, ಜಿಯೋರ್ಜಿಯೊ ಅರ್ಮಾನಿ, ಫೆಂಡಿ, ಬಾರ್ಬೋನೀಸ್, ಪ್ರಾಡಾ, ಲೋರೊ ಪಿಯಾನ, ಬಿಬ್ಲೋಸ್, ಆಲ್ಬರ್ಟಾ ಫೆರೆಟ್ಟಿ, ಮಾಶ್ಚಿನೊ, ಎರ್ಮನೆಗಿಲ್ಡೊ ಜೆಗ್ನಾ , ಲಾ ಪೆರ್ಲಾ, ಅಗ್ನೋನಾ, ಲಾರಾ ಬಿಯಾಗಿಯೊಟ್ಟಿ, ಲಾನ್ಸೆಟ್ಟಿ, ಐಸ್‌ಬರ್ಗ್, ಕಾರ್ಲೊ ಪಿಗ್ನಾಟೆಲ್ಲಿ, ನಿಕ್ ಬರುವಾ, ಮೆಲ್ಲಾ ಸ್ಕಾನ್, ರಾಬರ್ಟಾ ಡಿ ಕ್ಯಾಮರಿನೊ, ಸಾಲಿಡಿಯ, ಕ್ರಿಜಿಯ, ಟ್ರುಸಾರ್ಡಿ ಮತ್ತು ಮಿಸ್ಸೋನಿ. ಮಿಲನ್ ಫ್ಯಾಷನ್‌ನ ರಾಷ್ಟ್ರೀಯ ಮತ್ತು ವಿಶ್ವವ್ಯಾಪಿ ರಾಜಧಾನಿಯಾಗಿದ್ದರೂ ರೋಮ್, ಫ್ಲೋರೆನ್ಸ್, ಟುರಿನ್, ನೇಪಲ್ಸ್ ಮತ್ತು ವೆನಿಸ್ ಕೂಡ ಅನೇಕ ತ್ಯುತ್ತಮ ಫ್ಯಾಷನ್ ಬೂಟೀಕ್‌ಗಳನ್ನು(ಮಾರಾಟದ ಅಂಗಡಿ) ಹೊಂದಿದ್ದು, ಅಂತಾರಾಷ್ಟ್ರೀಯ ರಾಜಧಾನಿಗಳಾಗಿವೆ. ಆದಾಗ್ಯೂ, ಅಷ್ಟೊಂದು ಪ್ರಖ್ಯಾತರಾಗಿರದ... ಅಥವಾ ಮುಂಚೆ ನಾಮಾಂಕಿತರಾದ ವಿನ್ಯಾಸಕರಿಗೆ '"ಸರಿಸಮಾನರಲ್ಲದ" ಅನೇಕ ವಿನ್ಯಾಸಕರಿದ್ದಾರೆ. ಇವರಲ್ಲಿ ಕೆಲವು ಶೈಲಿ ವಿನ್ಯಾಸಕರು ಆರ್ಮಾಂಡೊ ಸೌಜುಲ್ಲೊ, ಅರಿಯಾನ ಮೊರೆಲ್ಲಿ ಅಥವಾ ಕಾರ್ಮೆಂಟಿಯ ಸ್ಪರಾಪುಲೋಸ್.
ಸ್ವಿಸ್ ಫ್ಯಾಷನ್ ವಿನ್ಯಾಸ
[ಬದಲಾಯಿಸಿ]ಬಹುತೇಕ ಸ್ವಿಸ್ ಫ್ಯಾಷನ್ ಭವನಗಳು ಚೂರಿಚ್‌ನಲ್ಲಿವೆ. ಸ್ವಿಸ್ ಫ್ಯಾಷನ್ ನೋಟವು ಅಂದಚೆಂದ ಮತ್ತು ಅದ್ಧೂರಿಯಿಂದ ಕೂಡಿದೆ. ಸೇಂಟ್ ಗ್ಯಾಲನ್‌ನಲ್ಲಿ ತಯಾರಾಗುವ ಉಡುಪುಗಳು ಪ್ರಪಂಚದಾದ್ಯಂತ ಎಲ್ಲ ಮುಖ್ಯ ಫ್ಯಾಷನ್ ಭವನಗಳಿಗೆ ರಫ್ತಾಗುತ್ತಿದೆ (ಪ್ಯಾರಿಸ್ / ನ್ಯೂಯಾರ್ಕ್/ ಲಂಡನ್ / ಮಿಲನ್/ ಟೋಕಿಯೊ). ಮೊದಲ ಸ್ವಿಸ್ ಐಷಾರಾಮಿ ಬ್ರಾಂಡ್ ಅಲ್ವೋನಿಯಾಗಿದ್ದು, ಇಟಲಿ/ಸ್ವಿಸ್ ವಿನ್ಯಾಸಕ ಮಾರಿಯನ್ ಅಲ್ವೋನಿ ವಿನ್ಯಾಸಗೊಳಿಸಿದ್ದಾನೆ.
ಜಪಾನ್ ಫ್ಯಾಷನ್ ವಿನ್ಯಾಸ
[ಬದಲಾಯಿಸಿ]ಬಹುತೇಕ ಜಪಾನ್ ಫ್ಯಾಷನ್ ಭವನಗಳು ಟೋಕಿಯೊದಲ್ಲಿದೆ. ಜಪಾನಿನ ಫ್ಯಾಷನ್ ನೋಟವು ಸಡಿಲ ಮತ್ತು ರಚನೆರಹಿತವಾಗಿದೆ(ಜಟಿಲ ಕತ್ತರಿಸುವಿಕೆಯ ಫಲವಾಗಿದೆ).ಬಣ್ಣವು ಮಬ್ಬಾಗಿದ್ದು,ನವಿರಾಗಿದೆ ಹಾಗೂ ಸಮೃದ್ಧ ವಿನ್ಯಾಸಕಲ್ಪಿಸಿದ ಬಟ್ಟೆಗಳಾಗಿವೆ. ಪ್ರಖ್ಯಾತ ಜಪಾನಿನ ವಿನ್ಯಾಸಕರೆಂದರೆ - ಯೋಜಿ ಯಮಾಮಾಟೊ, ಕೆಂಜೊ, ಐಸಿ ಮಿಯಾಕೆ (ಪರಿಣತ ಅಲಂಕಾರ ಮತ್ತು ಕತ್ತರಿಸುವಿಕೆ(ತಯಾರಿಕೆ ವೈಖರಿ) ಮತ್ತು ಕಾಮೆ ಡೆಸ್ ಜಾರ್ಕಾನ್ಸ್‌ನ ರೈ ಕವಾಕುಬೊ, ಹೊಸ ರೀತಿಯ ಕತ್ತರಿಸುವಿಕೆಯ ವೈಖರಿಯನ್ನು ಅಭಿವೃದ್ಧಿಪಡಿಸಿದರು (1930ರ ದಶಕದ ಮಡೆಲೈನ್ ವಯೋನೆಟ್ ನಾವೀನ್ಯಕ್ಕೆ ತುಲನಾತ್ಮಕ).
ಫ್ಯಾಷನ್ ವಿನ್ಯಾಸ ಪದಗಳು
[ಬದಲಾಯಿಸಿ]- ಫ್ಯಾಷನ್ ವಿನ್ಯಾಸಕ ನು ಗೆರೆ, ಪ್ರಮಾಣ, ಬಣ್ಣ ಮತ್ತು ವಿನ್ಯಾಸದ ಸಂಯೋಜನೆಗಳನ್ನು ಗ್ರಹಿಸುತ್ತಾನೆ. ಹೊಲಿಯುವುದು ಮತ್ತು ಮಾದರಿ ತಯಾರಿಕೆ ಪರಿಣತಿಗಳು ಅನುಕೂಲವಾಗಿದ್ದರೂ, ಯಶಸ್ವಿ ಫ್ಯಾಷನ್ ವಿನ್ಯಾಸಕ್ಕೆ ಅವು ಪೂರ್ವ ಅಗತ್ಯವಲ್ಲ. ಬಹುತೇಕ ಫ್ಯಾಷನ್ ವಿನ್ಯಾಸಕರು ಔಪಚಾರಿಕ ತರಬೇತಿ ಪಡೆದಿರುತ್ತಾರೆ ಅಥವಾ ಅಪ್ರೆಂಟಿಸ್ ತರಬೇತಿ ಪಡೆಯುತ್ತಾರೆ.
- ಮಾದರಿ ತಯಾರಕ (ಅಥವಾ ಮಾದರಿ ಕಟ್ಟರ್ ) ಉಡುಪಿನ ತುಂಡುಗಳ ಆಕಾರ ಮತ್ತು ಗಾತ್ರಗಳನ್ನು ರೂಪಿಸುತ್ತಾನೆ. ಇದನ್ನು ಕೈಯಿಂದ ಅಥವಾ ಕಾಗದ ಅಥವಾ ಅಳತೆಯ ಸಾಧನಗಳಿಂದ ಅಥವಾ ಆಟೋ CAD ಕಂಪ್ಯೂಟರ್ ಸಾಫ್ಟ್‌ವೇರ್ ಪ್ರೋಗ್ರಾಂ ಬಳಸಿ ಮಾಡಬಹುದು. ಇನ್ನೊಂದು ವಿಧಾನ ಉಡುಪಿನ ಸ್ವರೂಪದಲ್ಲಿ ಬಟ್ಟೆಯನ್ನು ನೇರವಾಗಿ ಅಲಂಕರಿಸುವುದು. ಇದರ ಫಲವಾದ ಮಾದರಿ ತುಂಡುಗಳನ್ನು ಉಡುಪು ಮತ್ತು ಅಗತ್ಯ ಗಾತ್ರದ ಇಚ್ಛಿತ ವಿನ್ಯಾಸ ಉತ್ಪಾದಿಸಲು ರಚನೆ ಮಾಡಬಹುದು. ಮಾದರಿ ತಯಾರಕರಾಗಿ ಕೆಲಸ ಮಾಡಲು ಔಪಚಾರಿಕ ತರಬೇತಿಯು ಸಾಮಾನ್ಯವಾಗಿ ಅಗತ್ಯವಿರುತ್ತದೆ.
- ದರ್ಜಿ ಯು ಗ್ರಾಹಕರ ಅಳತೆಗೆ ಸರಿಹೊಂದುವ ಆದೇಶದನುಸಾರ ವಿನ್ಯಾಸದ ಉಡುಪುಗಳನ್ನು ತಯಾರಿಸುತ್ತಾನೆ. ವಿಶೇಷವಾಗಿ ಸೂಟುಗಳು (ಕೋಟು ಮತ್ತು ಪ್ಯಾಂಟು,ನಡುವಂಗಿ, ಲಂಗ ಇತ್ಯಾದಿ). ದರ್ಜಿಗಳು ಸಾಮಾನ್ಯವಾಗಿ ಅಂಪ್ರೆಂಟಿಸ್(ಕಲಿಕೆಯ)ಅಥವಾ ಇತರೆ ಔಪಚಾರಿಕ ತರಬೇತಿ ಪಡೆಯುತ್ತಾರೆ.
- ವಸ್ತ್ರ ವಿನ್ಯಾಸಕ ನು ಬಟ್ಟೆಗಳು ಮತ್ತು ಫರ್ನಿಷಿಂಗ್(ಕರ್ಟನ್, ರಗ್ ಅಲಂಕಾರ)ಗಳಿಗೆ ಹೊಲಿಯುವ ಬಟ್ಟೆಗೆ ವಿನ್ಯಾಸ ರೂಪಿಸುತ್ತಾರೆ. ಬಹುತೇಕ ಬಟ್ಟೆಯ ವಿನ್ಯಾಸಕರು ಅಂಪ್ರೆಟಿಸ್(ಕಲಿಕೆ)ಗಳಾಗಿ ಅಥವಾ ಶಾಲೆಯಲ್ಲಿ ತರಬೇತಿ ಪಡೆಯುತ್ತಾರೆ.
- ಶೈಲಿಗಾರ ಫ್ಯಾಷನ್ ಛಾಯಾಚಿತ್ರಗ್ರಹಣ ಮತ್ತು ಕ್ಯಾಟ್‌ವಾಕ್ ಪ್ರದರ್ಶನಗಳಲ್ಲಿ ಬಳಸುವ ಬಟ್ಟೆಗಳು,ಆಭರಣಗಳು ಮತ್ತು ಪರಿಕರಗಳನ್ನು ಸಂಘಟಿಸುತ್ತಾನೆ. ಶೈಲಿಗಾರ ಬಟ್ಟೆಗಳ ಸಂಘಟಿತ ವಾರ್ಡ್‌ರೋಬ್ ವಿನ್ಯಾಸಕ್ಕೆ ಗ್ರಾಹಕನ ಜತೆ ಕೂಡ ಕೆಲಸ ಮಾಡಬಹುದು. ಅನೇಕ ಶೈಲಿಗಾರರು ಫ್ಯಾಷನ್ ವಿನ್ಯಾಸದಲ್ಲಿ, ಫ್ಯಾಷನ್ ಇತಿಹಾಸದಲ್ಲಿ ಮತ್ತು ಐತಿಹಾಸಿಕ ಉಡುಗೆ ತೊಡುಗೆಗಳ ಬಗ್ಗೆ ತರಬೇತಿ ಪಡೆದಿರುತ್ತಾರೆ ಮತ್ತು ಪ್ರಸ್ತುತ ಫ್ಯಾಷನ್ ಮಾರುಕಟ್ಟೆ ಮತ್ತು ಮುಂದಿನ ಫ್ಯಾಷನ್ ಮಾರುಕಟ್ಟೆ ಪ್ರವೃತ್ತಿಗಳ ಬಗ್ಗೆ ಉನ್ನತ ಮಟ್ಟದ ಪರಿಣತಿ ಹೊಂದಿರುತ್ತಾರೆ.
ಆದಾಗ್ಯೂ, ಕೆಲವರಿಗೆ ಗಾಢವಾದ ಸೌಂದರ್ಯ ಪ್ರಜ್ಞೆಯಿದ್ದು, ಉತ್ತಮ ನೋಟವನ್ನು ಒದಗಿಸುತ್ತಾರೆ.
- ಖರೀದಿದಾರ ಚಿಲ್ಲರೆ ಅಂಗಡಿಗಳಲ್ಲಿ, ಮಳಿಗೆಗಳಲ್ಲಿ ಮತ್ತು ಸರಪಣಿ ಮಳಿಗೆಯಲ್ಲಿ ಲಭ್ಯವಿರುವ ಬಟ್ಟೆಗಳ ಮಿಶ್ರಣವನ್ನು ಆಯ್ಕೆ ಮಾಡಿ ಖರೀದಿ ಮಾಡುತ್ತಾನೆ. ಬಹುತೇಕ ಫ್ಯಾಷನ್ ಖರೀದಿದಾರರು ವ್ಯವಹಾರ ಮ್ತತು ಫ್ಯಾಷನ್ ಅಧ್ಯಯನಗಳಲ್ಲಿ ತರಬೇತಿ ಪಡೆದಿರುತ್ತಾರೆ.
- ಸಿಂಪಿಗಿತ್ತಿ ಧರಿಸಲು ಸಿದ್ಧವಾಗಿರುವ ಅಥವಾ ಸಮೂಹ ತಯಾರಿಕೆಯ ಉಡುಪನ್ನು ಕೈಯಲ್ಲಿ ಅಥವಾ ಹೊಲಿಗೆ ಯಂತ್ರದಲ್ಲಿ ಹೊಲಿಯುತ್ತಾರೆ. ಬಟ್ಟೆಯ ಅಂಗಡಿಯಲ್ಲಿ ಅಥವಾ ಕಾರ್ಖಾನೆಯಲ್ಲಿ ಹೊಲಿಗೆ ಯಂತ್ರದ ನಿರ್ವಾಹಕರಾಗಿ ಈ ಕೆಲಸ ನಿರ್ವಹಿಸುತ್ತಾರೆ. ಅವಳಿಗೆ (ಅಥವಾ ಅವನಿಗೆ) ಉಡುಪುಗಳನ್ನು ತಯಾರಿಸುವ (ವಿನ್ಯಾಸ ಮತ್ತು ಕತ್ತರಿಸುವ ವೈಖರಿ) ಅಥವಾ ರೂಪದರ್ಶಿಗೆ ಹೊಂದಿಕೆಯಾಗುವಂತೆ ಮಾಡುವ ಪರಿಣತಿ ಇಲ್ಲದಿರಬಹುದು.
- ಓರ್ವ ಫ್ಯಾಷನ್ ವಿನ್ಯಾಸದ ಶಿಕ್ಷಕ ಫ್ಯಾಷನ್ ವಿನ್ಯಾಸದ ಕಲೆ ಮತ್ತು ಕೌಶಲವನ್ನು ಕಲಾ ಅಥವಾ ಫ್ಯಾಷನ್ ಶಾಲೆಯಲ್ಲಿ ಕಲಿಸುತ್ತಾನೆ.
- ಓರ್ವ ಗಿರಾಕಿ ಉಡುಪು ಹೊಲಿಯುವ ದರ್ಜಿ ಗೊತ್ತಾದ ಗಿರಾಕಿಗೆ ಅವನ ಆದೇಶಾನುಸಾರ ಉಡುಪುಗಳನ್ನು ತಯಾರಿಸುತ್ತಾನೆ.
- ಡ್ರೆಸ್‌ಮೇಕರ್ (ಮಹಿಳೆಯರ ಉಡುಪು ಹೊಲಿಯುವ ದರ್ಜಿ) ಆದೇಶಾನುಸಾರ ಮಹಿಳೆಯರ ಉಡುಪುಗಳನ್ನು ಹೊಲಿಯುವುದರಲ್ಲಿ ಪರಿಣತಿ ಹೊಂದಿರುತ್ತಾನೆ: ಹಗಲಿನ ಉಡುಪು, ಕಾಕ್‌ಟೇಲ್ ಮತ್ತು ಸಂಜೆ ಉಡುಪುಗಳು,ವ್ಯವಹಾರ ಉಡುಪುಗಳು ಮತ್ತು ಸೂಟುಗಳು, ಪ್ಯಾಂಟುಗಳು, ಕ್ರೀಡಾ ಉಡುಪುಗಳು ಮತ್ತು ಒಳಉಡುಪುಗಳು, ರಾತ್ರಿಉಡುಪುಗಳು.
- ಸಚಿತ್ರಕಾರ ವಾಣಿಜ್ಯ ಬಳಕೆಗಾಗಿ ಉಡುಪಿನ ವಿನ್ಯಾಸಗಳನ್ನು ರಚಿಸುತ್ತಾನೆ ಮತ್ತು ವರ್ಣ ವಿನ್ಯಾಸ ಮಾಡುತ್ತಾನೆ.
- ಫ್ಯಾಷನ್ ಮುನ್ಸೂಚಕ ಅಂಗಡಿಗಲ್ಲಿ ಉಡುಪುಗಳನ್ನು ಮಾರಾಟಕ್ಕಿಡುವ ಮುಂಚೆ ಯಾವ ಬಣ್ಣಗಳು,ಶೈಲಿಗಳು ಮತ್ತು ಆಕಾರಗಳು ಜನಪ್ರಿಯವಾಗಿರುತ್ತದೆ(ಪ್ರವತ್ತಿಯಲ್ಲಿ) ಎಂದು ಮುನ್ಸೂಚನೆ ನೀಡುತ್ತಾನೆ
- ರೂಪದರ್ಶಿ ಫ್ಯಾಷನ್ ಪ್ರದರ್ಶನಗಳಲ್ಲಿ ಮತ್ತು ಛಾಯಾಚಿತ್ರಗಳಲ್ಲಿ ಬಟ್ಟೆಗಳನ್ನು ಧರಿಸಿ,ಪ್ರದರ್ಶಿಸುತ್ತಾಳೆ.
- ಫಿಟ್ ಮಾಡೆಲ್ (ಉಡುಪು ಹೊಂದಿಕೆ ಪರೀಕ್ಷಿಸುವ ಮಾಡೆಲ್) ಉಡುಪಿನ ವಿನ್ಯಾಸ ಮತ್ತು ತಯಾರಿಕೆ ಪೂರ್ವ ಅವಧಿಯಲ್ಲಿ ಉಡುಪನ್ನು ಧರಿಸಿ ಅದರ ಅಳತೆ ಹೊಂದಿಕೊಳ್ಳುವ ಬಗ್ಗೆ ಪ್ರತಿಕ್ರಿಯಿಸುತ್ತಾನೆ. ಫಿಟ್ ಮಾಡೆಲ್‌ಗಳು ಈ ಉದ್ದೇಶಕ್ಕಾಗಿ ನಿರ್ದಿಷ್ಟ ಗಾತ್ರವನ್ನು ಹೊಂದಿರಬೇಕಾಗುತ್ತದೆ.
- ಫ್ಯಾಷನ್ ಪತ್ರಕರ್ತ ಫ್ಯಾಷನ್ ಲೇಖನಗಳಲ್ಲಿ ಉಪಸ್ಥಿತವಿರುವ ಉಡುಪುಗಳ ಬಗ್ಗೆ, ಫ್ಯಾಷನ್ ಪ್ರವೃತ್ತಿಗಳ ಬಗ್ಗೆ ನಿಯತಕಾಲಿಕೆಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ವರ್ಣನೆ ಮಾಡುತ್ತಾನೆ.
- ಉಡುಪು ಮಾರ್ಪಾಡು ತಜ್ಞ (ಮಾರ್ಪಾಡುಗಾರ ) ಪೂರ್ಣಗೊಂಡ, ಸಾಮಾನ್ಯವಾಗಿ ಧರಿಸಲು ಸಿದ್ಧವಾದ ಉಡುಪುಗಳ ಅಳತೆಯನ್ನು ಸರಿಹೊಂದಿಸುತ್ತಾನೆ. ಕೆಲವು ಬಾರಿ ಹೊಸ ಶೈಲಿ ನೀಡುತ್ತಾನೆ. ಟಿಪ್ಪಣಿ: ಗ್ರಾಹಕನಿಗೆ ಸರಿಹೊಂದುವಂತೆ ದರ್ಜಿ ಉಡುಪುಗಳನ್ನು ಮಾರ್ಪಾಡು ಮಾಡಿದರೂ, ಎಲ್ಲ ಮಾರ್ಪಾಡುಗಾರರೂ ದರ್ಜಿಗಳಲ್ಲ.
- ಓರ್ವ ಇಮೇಜ್ ಕನ್ಸಲ್ಟೆಂಟ್ (ಮೆಚ್ಚುಗೆಯ ಉಡುಪಿನ ಸಮಾಲೋಚಕ) ವಾರ್ಡ್‌ರೋಬ್ ಕನ್ಸಲ್ಟೆಂಟ್ ಅಥವಾ ಫ್ಯಾಷನ್ ಸಲಹೆಗಾರ ಗ್ರಾಹಕನಿಗೆ ತೃಪ್ತಿಯಾಗುವ ಶೈಲಿಗಳು ಮತ್ತು ಬಣ್ಣಗಳ ಬಗ್ಗೆ ಶಿಫಾರಸು ಮಾಡುತ್ತಾನೆ.
ಆಕರಗಳು
[ಬದಲಾಯಿಸಿ]- ↑ ಬ್ಯೂರೊ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್, U.S. ಡಿಪಾರ್ಟ್ಮೆಂಟ್ ಆಫ್ ಲೇಬರ್, ಆಕ್ಯುಪೇಷನಲ್ ಔಟ್‌ಲುಕ್ ಹ್ಯಾಂಡ್‌ಬುಕ್, 2010-11 ಆವೃತ್ತಿ, ಫ್ಯಾಷನ್ ಡಿಸೈನರ್ಸ್, ಇಂಟರ್ನೆಟ್‌ನಲ್ಲಿ - http://www.bls.gov/oco/ocos291.htm Archived 2012-01-21 ವೇಬ್ಯಾಕ್ ಮೆಷಿನ್ ನಲ್ಲಿ. (2010ರ ಮಾರ್ಚ್ 9ರಂದು ಭೇಟಿನೀಡಲಾಗಿದೆ).
- ↑ [7] ^ [6]
- ↑ "ಬೆಸ್ಟ್ ಗ್ಲೋಬಲ್ ಬ್ರ್ಯಾಂಡ್ಸ್: ದಿ 100 ಮೋಸ್ಟ್ ವ್ಯಾಲ್ಯುಯೇಬಲ್ ಬ್ರ್ಯಾಂಡ್ಸ್", ವೀರ ಬ್ರಾಡ್ಲಿ ಬ್ಯುಸಿನೆಸ್‌ವೀಕ್