ನರೇನ್ ಕಾರ್ತಿಕೇಯನ್
Formula One World Championship career | |
---|---|
Nationality | Indian |
Active years | 2005 |
Teams | Jordan |
Entries | 19 |
Championships | 0 |
Wins | 0 |
Podiums | 0 |
Career points | 5 |
Pole positions | 0 |
Fastest laps | 0 |
First entry | 2005 Australian Grand Prix |
Last entry | 2005 Chinese Grand Prix |
2005 position | 18th (5 pts) |
ನರೇನ್ ಕಾರ್ತಿಕೇಯನ್ | |
---|---|
Awards | 2010 NASCAR's Camping World Truck Series Most Popular Driver Award |
NASCAR Camping World Truck Series career | |
Truck no., team |
|
First race | 2010 Kroger 250 (Martinsville) |
ಟೆಂಪ್ಲೇಟು:Le Mans drivers ಕುಮಾರ್ ರಾಮ್ ನರೇನ್ ಕಾರ್ತಿಕೇಯನ್ (ತಮಿಳು:குமார் ராம் நரேன் கார்த்திகேயன்; (ತಮಿಳು:குமார் ராம் நரேன் கார்த்திகேயன்; 14 ನೇ ಜನವರಿ 1977 ರಂದು ಭಾರತದ ಕೊಯಮತ್ತೂರಿನಲ್ಲಿ ಜನನ,[೧]) ಇವರು ಭಾರತದಿಂದ ಮೊದಲ ಫಾರ್ಮ್ಯುಲಾ ಒನ್ ಮೋಟಾರ್ ರೇಸಿಂಗ್ ಚಾಲಕರಾಗಿದ್ದಾರೆ.[೨] ಇವರು ಈ ಹಿಂದೆ ಫಾರ್ಮ್ಯುಲಾ ಒನ್, ಎ1ಜಿಪಿ, ಮತ್ತು ಲೀ ಮಾನ್ಸ್ ಸರಣಿಯಲ್ಲಿ ಸ್ಪರ್ಧಿಸಿದ್ದರು. ಇವರು ತಮ್ಮ ಫಾರ್ಮ್ಯುಲಾ ಒನ್ ಪಾದಾರ್ಪಣೆಯನ್ನು 2005 ನಲ್ಲಿ ಜೋರ್ಡಾನ್ ತಂಡದೊಂದಿಗೆ ಮಾಡಿದರು ಮತ್ತು ಇವರು 2006 ಮತ್ತು 2007 ರಲ್ಲಿ ವಿಲಿಯಮ್ಸ್ ಎಫ್1 ಪರೀಕ್ಷಾರ್ಥ ಚಾಲಕರಾಗಿದ್ದರು. ಇತರ ಹಿಂದಿನ ಎಫ್1 ಚಾಲಕರಂತೆ, ಕಾರ್ತಿಕೇಯನ್ ಅವರು ಸ್ಟಾಕ್ ಕಾರು ರೇಸಿಂಗ್ಗೆ ತೆರಳಿದರು ಮತ್ತು ಎನ್ಎಎಸ್‌ಸಿಎಆರ್ ಕ್ಯಾಂಪಿಂಗ್ ವರ್ಲ್ಡ್ ಟ್ರಕ್ ಸಿರೀಸ್ ನಲ್ಲಿ ವೈಲರ್ ರೇಸಿಂಗ್ ಗಾಗಿ #60 ಸೇಫ್ ಆಟೋ ಇನ್ಶೂರೆನ್ಸ್ ಕಂಪನಿಯ ಟೊಯೋಟೋ ಟುಂಡ್ರಾವನ್ನು ಚಾಲನೆ ಮಾಡುತ್ತಿದ್ದರು.
ಆರಂಭಿಕ ವೃತ್ತಿಜೀವನ
[ಬದಲಾಯಿಸಿ]ಕಾರ್ತಿಕೇಯನ್ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಜನಿಸಿದರು. ಕಾರ್ತಿಕೇಯನ್ ಅವರು ತಮ್ಮ ಶಿಕ್ಷಣವನ್ನು ಸ್ಟೇನ್ಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕಂಡರಿ ಸ್ಕೂಲ್, ಕೊಯಮತ್ತೂರು ಇಲ್ಲಿ ಪೂರ್ಣಗೊಳಿಸಿದರು. ಇವರ ತಂದೆಯವರು ಮಾಜಿ ಭಾರತೀಯ ರಾಷ್ಟ್ರೀಯ ರ‌್ಯಾಲಿ ಚಾಂಪಿಯನ್ ಆಗಿದ್ದು ದಕ್ಷಿಣ ಭಾರತೀಯ ರ‌್ಯಾಲಿಯನ್ನು ಏಳು ಬಾರಿ ಜಯಗಳಿಸಿದ್ದರು ಮತ್ತು ಈ ಹಿನ್ನೆಲೆಯ ಕಾರಣದಿಂದ ಕಾರ್ತಿಕೇಯನ್ ಅವರ ವಾಹನ ಕ್ರೀಡೆಯಲ್ಲಿನ ಆಸಕ್ತಿಯು ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಯಿತು. ಕಾರ್ತಿಕೇಯನ್ ಅವರು ಪ್ರವರ್ಧಮಾನಕ್ಕೆ ಬರುವವರೆಗೆ ಭಾರತದ ಅತೀ ಪ್ರಸಿದ್ಧ ರೇಸಿಂಗ್ ಚಾಲಕರಾಗಿದ್ದ ದಿವಂಗತ ಎಸ್. ಕರಿವರ್ಧನ್ ಅವರಿಗೂ ಸಹ ಕಾರ್ತಿಕೇಯನ್ ಅವರನ್ನು ಹೋಲಿಸಲಾಗುತ್ತದೆ. ಭಾರತದ ಮೊದಲ ಫಾರ್ಮ್ಯುಲಾ ಒನ್ ಚಾಲಕನಾಗುವ ಗುರಿಯೊಂದಿಗೆ, ಶ್ರೀಪೆರಂಬದೂರಿನ ಫಾರ್ಮ್ಯುಲಾ ಮಾರುತಿ (ಎ.ಕೆ.ಎ. ಎಫ್‌ಐಎಸ್ಎಸ್‌ಎಮ್‌ಇ)ಯಲ್ಲಿ ನಡೆದ ಅವರ ಪ್ರಥಮ ರೇಸ್‌ನಲ್ಲಿಯೇ ಕಾರ್ತಿಕೇಯನ್ ಅವರು ಪೋಡಿಯಂನಲ್ಲಿ ಪೂರ್ಣಗೊಳಿಸಿದರು. ನಂತರ ಇವರು ಫ್ರಾನ್ಸ್ನಲ್ಲಿನ ಎಲ್ಫ್ ವಿನ್‌ಫೀಲ್ಡ್ ರೇಸಿಂಗ್ ಸ್ಕೂಲ್‌ಗೆ ತೆರಳಿದರು, ಅಲ್ಲಿ 1992 ರಲ್ಲಿ ಫಾರ್ಮ್ಯುಲಾ ರೆನಾಲ್ಟ್ ಕಾರುಗಳಿಗಾಗಿ ನಡೆದ ಪೈಲೋಟ್ ಎಲ್ಫ್ ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದರು. 1993 ರ ಋತುವಿಗಾಗಿ ಫಾರ್ಮ್ಯುಲಾ ಮಾರುತಿ ಪಂದ್ಯಾಟದಲ್ಲಿ ಭಾಗವಹಿಸಲು ಅವರು ಭಾರತಕ್ಕೆ ಮರಳಿದರು ಮತ್ತು ಅದೇ ವರ್ಷ ಅವರು ಗ್ರೇಟ್ ಬ್ರಿಟನ್ನಲ್ಲಿ ಫಾರ್ಮ್ಯುಲಾ ವಾಕ್ಸ್‌ಹಾಲ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಸಹ ಸ್ಪರ್ಧಿಸಿದರು. ಇದು ಅವರಿಗೆ ಯುರೋಪಿಯನ್ ಪಂದ್ಯಾಟದಲ್ಲಿ ಮೌಲ್ಯಯುತ ಅನುಭವನ್ನು ನೀಡಿತು ಮತ್ತು ಅವರು ಮುಂದಿನ ವರ್ಷ ಮರಳಲು ಕಾತುರರಾಗಿದ್ದರು.
1994 ರಲ್ಲಿ, ಅವರು ಯುಕೆಗೆ ಮರಳಿದರು, ಫೌಂಡೇಶನ್ ರೇಸಿಂಗ್ ತಂಡಕ್ಕಾಗಿ ಎರಡನೆಯ ಕಾರ್ಯನಿರತ ವೆಕ್ಟರ್ ಚಾಲಕರಾಗಿ ಫಾರ್ಮ್ಯುಲಾ ಫೋರ್ಡ್ ಜೆಡೆಕ್ ಸರಣಿಯಲ್ಲಿ ಸ್ಪರ್ಧಿಸಿದರು. ಎಸ್ಟೋರಿಲ್ನಲ್ಲಿ ಪೋರ್ಚುಗೀಸ್ ಗ್ರಾಂಡ್ ಪ್ರಿಕ್ಸ್ಗಾಗಿ ಜರುಗಿದ ಬೆಂಬಲ ಪಂದ್ಯಾಟದಲ್ಲಿ ಪೋಡಿಯಂ ಅಂತ್ಯಗೊಳಿಸಿದ್ದು ಋತುವಿನ ವಿಶೇಷತೆಯಾಗಿತ್ತು. ಕಾರ್ತಿಕೇಯನ್ ಅವರು ಬ್ರಿಟಿಷ್ ಫಾರ್ಮ್ಯುಲಾ ಫೋರ್ಡ್ ವಿಂಟರ್ ಸರಣಿಯಲ್ಲೂ ಸಹ ಭಾಗವಹಿಸಿದರು ಮತ್ತು ಯುರೋಪಿನಲ್ಲಿ ಯಾವುದೇ ಪಂದ್ಯಾವಳಿಯಲ್ಲಿ ಗೆದ್ದ ಪ್ರಥಮ ಭಾರತೀಯ ಎನಿಸಿಕೊಂಡರು.
1995 ರಲ್ಲಿ, ನಾಲ್ಕು ಪಂದ್ಯಾಟಗಳಿಗೆ ಮಾತ್ರ ಫಾರ್ಮ್ಯುಲಾ ಏಷ್ಯಾ ಪಂದ್ಯಾವಳಿಗೆ ಕಾರ್ತಿಕೇಯನ್ ಅವರು ಅರ್ಹತೆ ಗಳಿಸಿದರು. ಆದರೆ, ಅವರು ತಕ್ಷಣವೇ ಲಯವನ್ನು ಕಂಡುಕೊಂಡರು ಮತ್ತು ಮಲೇಶಿಯಾದ ಶಾಹ್ ಆಲಮ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡನೆಯವರಾಗಿ ಸ್ಪರ್ಧೆ ಪೂರ್ಣಗೊಳಿಸಿದರು. 1996 ರಲ್ಲಿ, ಸರಣಿಯಲ್ಲಿ ಪೂರ್ಣ ಋತುವನ್ನು ಹೊಂದಿದ್ದರು ಮತ್ತು ಫಾರ್ಮ್ಯುಲಾ ಏಷ್ಯಾ ಅಂತರಾಷ್ಟ್ರೀಯ ಸರಣಿಯನ್ನು ಜಯಿಸಿದ ಮೊದಲ ಭಾರತೀಯ ಮತ್ತು ಮೊದಲ ಏಷ್ಯಾದ ವ್ಯಕ್ತಿಯಾದರು. ಬ್ರಿಟಿಷ್ ಫಾರ್ಮ್ಯುಲಾ ಒಪೆಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವರು 1997 ರಲ್ಲಿ ಬ್ರಿಟನ್ನಿಗೆ ಮರಳಿದರು ಮತ್ತು ಪೋಲ್ ಸ್ಥಾನವನ್ನು ಪಡೆಯುವುದರ ಜೊತೆಗೆ ಡಾನಿಂಗ್ಟನ್ ಪಾರ್ಕ್ನಲ್ಲಿ ಜಯಗಳಿಸಿದರು ಮತ್ತು ಒಟ್ಟಾರೆ ಅಂಕಗಳ ಪಟ್ಟಿಯಲ್ಲಿ ಆರನೆಯವರಾಗಿ ಪೂರ್ಣಗೊಳಿಸಿದರು.
1998 ರಲ್ಲಿ, ಕಾರ್ತಿಕೇಯನ್ ಅವರು ಕಾರ್ಲಿನ್ ಮೋಟಾರ್‌ಸ್ಪೋರ್ಟ್ ತಂಡದೊಂದಿಗೆ ಬ್ರಿಟಿಷ್ ಫಾರ್ಮ್ಯುಲಾ ತ್ರೀ ಪಂದ್ಯಾವಳಿಯಲ್ಲಿ ಪಾದಾರ್ಪಣೆ ಮಾಡಿದರು. ಕೇವಲ 10 ಸುತ್ತುಗಳಲ್ಲಿ ಸ್ಪರ್ಧಿಸುವ ಮೂಲಕ, ಅವರು ಮೂರನೇ ಎರಡು ಸ್ಥಾನಗಳಿಸಲು ಸಫಲರಾದರು, ಸ್ಪಾ-ಫ್ರಾಂಕೋರ್‌ಚಾಂಪ್ಸ್ ಮತ್ತು ಸಿಲ್ವರ್‌ಸ್ಟೋನ್ ನಲ್ಲಿನ ಋತುವಿನ ಅಂತಿಮ ಎರಡು ಪಂದ್ಯಾಟಗಳನ್ನು ಮುಕ್ತಾಯಗೊಳಿಸುವ ಮೂಲಕ ಒಟ್ಟಾರೆಯಾಗಿ 12 ನೇಯವರಾಗಿ ಮುಕ್ತಾಯಗೊಳಿಸಿದರು. ಅವರು ಪಂದ್ಯಾವಳಿಯಲ್ಲಿ 1999 ಕ್ಕೂ ಮುಂದುವರಿಸಿದರು ಮತ್ತು ಬ್ರಾಂಡ್ಸ್ ಹ್ಯಾಚ್ನಲ್ಲಿ ಎರಡು ಗೆಲುವುಗಳನ್ನು ಒಳಗೊಂಡು ಪೋಡಿಯಂನಲ್ಲಿ ಐದು ಬಾರಿ ಮುಕ್ತಾಯಗೊಳಿಸಿದರು. ಅವರ ಋತುವು ಎರಡು ಪೋಲ್ ಸ್ಥಿತಿಗಳು, ಮೂರು ಅತಿವೇಗದ ಲ್ಯಾಪ್‌ಗಳು ಮತ್ತು ಎರಡು ಲ್ಯಾಪ್ ದಾಖಲೆಗಳನ್ನು ಒಳಗೊಂಡಿದ್ದು, ಅವರಿಗೆ ಪಂದ್ಯಾವಳಿಯಲ್ಲಿ ಆರನೇ ಸ್ಥಾನ ಪಡೆಯಲು ಸಹಕರಿಸಿತು. ಅವರು ಮಕಾವೋ ಗ್ರಾಂಡ್ ಪ್ರಿಕ್ಸ್ನಲ್ಲೂ ಸಹ ಸ್ಪರ್ಧಿಸಿದರು ಮತ್ತು ಆರನೇ ಸುತ್ತಿನಲ್ಲಿ ಅರ್ಹತೆ ಪಡೆದು ಎರಡನೇ ರೇಸ್‌ನಲ್ಲಿ ಆರನೆಯವರಾಗಿ ಮುಕ್ತಾಯಗೊಳಿಸಿದರು. 2000 ರಲ್ಲಿ ಬ್ರಿಟಿಷ್ ಎಫ್3 ಪಂದ್ಯಾವಳಿಯಲ್ಲಿ ತಮ್ಮ ಚಾಲನೆಯನ್ನು ಮುಂದುವರಿಸಿದ ಅವರು ಒಟ್ಟಾರೆಯಾಗಿ ನಾಲ್ಕನೆಯವರಾಗಿ ಮುಕ್ತಾಯಗೊಳಿಸಿದರು ಮತ್ತು ಮಕಾವೋ ಗ್ರಾಂಡ್ ಪ್ರಿಕ್ಸ್‌ನಲ್ಲಿ ಪೋಲ್ ಸ್ಥಿತಿಯನ್ನು ಮತ್ತು ಅತೀವೇಗದ ಲ್ಯಾಪ್‌ಗಳನ್ನು ಪಡೆದರು. ಅವರು ಸ್ಪಾ-ಫ್ರಾಂಕೋರ್‌ಚಾಂಪ್ಸ್ ಮತ್ತು ಕೊರಿಯಾ ಸೂಪರ್ ಪ್ರಿಕ್ಸ್ ಎರಡರಲ್ಲೂ ಸಹ ಅಂತರಾಷ್ಟ್ರೀಯ ಎಫ್3 ರೇಸ್‌ನಲ್ಲಿ ಜಯ ಸಾಧಿಸಿದರು.
ಕಾರ್ತಿಕೇಯನ್ ಅವರು 2001 ನೇ ವರ್ಷವನ್ನು ಫಾರ್ಮ್ಯುಲಾ ನಿಪ್ಪೋನ್ ಎಫ್3000 ಪಂದ್ಯಾವಳಿಯಲ್ಲಿ ಪ್ರಾರಂಭಿಸಿದರು ಮತ್ತು ಆ ವರ್ಷದಲ್ಲಿ ಅಗ್ರ ಹತ್ತನೇ ಸ್ಥಾನದೊಳಗೆ ಮುಕ್ತಾಯಗೊಳಿಸಿದರು. ಅದೇ ವರ್ಷದ 14 ನೇ ಜೂನ್‌ರಂದು ಸಿಲ್ವರ್‌ಸ್ಟೋನ್‌ನಲ್ಲಿ ಜಾಗ್ವರ್ ರೇಸಿಂಗ್ ತಂಡಕ್ಕಾಗಿ ಪರೀಕ್ಷಾರ್ಥ ಚಾಲನೆ ಮಾಡಿದ ಅವರು ಫಾರ್ಮ್ಯುಲಾ ಒನ್ ಕಾರನ್ನು ಚಾಲನೆ ಮಾಡಿದ ಪ್ರಥಮ ಭಾರತೀಯರಾದರು. ಅವರ ಸಾಧನೆಯಿಂದ ಪ್ರಭಾವಿತರಾಗಿ ಅವರಿಗೆ ಸೆಪ್ಪೆಂಬರ್‌ನಲ್ಲಿ ಸಿಲ್ವರ್‌ಸ್ಟೋನ್‌ನಲ್ಲಿನ, ಜೋರ್ಡಾನ್-ಹೊಂಡಾ ಇಜೆ11 ರಲ್ಲಿ ಪರೀಕ್ಷಾರ್ಥ ಚಾಲನೆಗೆ ಅವಕಾಶ ನೀಡಲಾಯಿತು. ಕಾರ್ತಿಕೇಯನ್ ಅವರು ಮತ್ತೆ ಅಕ್ಟೋಬರ್ 5 ರಂದು ಇಟಲಿಯಲ್ಲಿನ ಮುಗೆಲ್ಲೋನಲ್ಲಿ ಜೋರ್ಡಾನ್ ಪರವಾಗಿ ಚಾಲನೆ ಮಾಡಿದರು ಮತ್ತು ಜೋರ್ಡಾನ್‌ನ ಪ್ರಮುಖ ಚಾಲಕ ಜೀನ್ ಅಲೆಸಿ ಅವರಿಗಿಂತ ಕೇವಲ ಅರ್ಧ ಸೆಕೆಂಡು ಕಡಿಮೆ ಅಂತರದಲ್ಲಿ ಪೂರ್ಣಗೊಳಿಸಿದರು.
2002 ರಲ್ಲಿ, ಅವರು ಟಾಟಾ ಆರ್‌ಸಿ ಮೋಟಾರ್‌ಸ್ಪೋರ್ಟ್ ತಂಡದೊಂದಿಗೆ ಟೆಲಿಫೋನಿಕಾ ವಿಶ್ವ ಸರಣಿಯಲ್ಲಿ ಭಾಗವಹಿಸಿದರು, ಅಲ್ಲಿ ಅವರು ಪೋಲ್ ಸ್ಥಾನವನ್ನು ಪಡೆದರು ಮತ್ತು ಬ್ರೆಜಿಲ್ನಲ್ಲಿನ ಇಂಟರ್‌ಲಾಗೋಸ್ ನಲ್ಲಿ ಅತೀವೇಗದ ಫಾರ್ಮ್ಯುಲಾ ಒನ್ ರಹಿತ ಲ್ಯಾಪ್ ಸಮಯವನ್ನು ಸಾಧಿಸಿದರು. 2003 ರಲ್ಲಿ ಮರುನಾಮಾಂಕಿತ ಸೂಪರ್‌ಫಂಡ್ ವಿಶ್ವ ಸರಣಿಯಲ್ಲಿ ಪ್ರದರ್ಶನವನ್ನು ಮುಂದುವರಿಸಿದ ಕಾರ್ತಿಕೇಯನ್ ಅವರು ಎರಡು ರೇಸ್‌ಗಳಲ್ಲಿ ಜಯ ಸಾಧಿಸಿದರು ಮತ್ತು ಪಂದ್ಯಾವಳಿಯಲ್ಲಿ ಒಟ್ಟಾರೆಯಾಗಿ ನಾಲ್ಕನೇ ಸ್ಥಾನವನ್ನು ಪಡೆಯುವ ಮುನ್ನ ಮೂರು ಇತರ ಪೋಡಿಯಂ ಸ್ಥಾನಗಳನ್ನು ಪಡೆದರು. ಈ ಫಲಿತಾಂಶವು ಅವರಿಗೆ ಮಿನಾರ್ಡಿ ತಂಡದೊಂದಿಗೆ ಮತ್ತೊಂದು ಫಾರ್ಮ್ಯುಲಾ ಒನ್ ಪರೀಕ್ಷಾರ್ಥ ಚಾಲನೆಯನ್ನು ಮಾಡುವ ಅವಕಾಶವನ್ನು ತಂದುಕೊಟ್ಟಿತು. 2004 ನೇ ಋತುವಿಗಾಗಿ ಅವರಿಗೆ ರೇಸ್ ಚಾಲನೆಯನ್ನು ನೀಡಲಾಯಿತು, ಆದರೆ ಒಪ್ಪಂದವನ್ನು ಪೂರ್ಣಮಾಡಲು ಅಗತ್ಯ ಪ್ರಾಯೋಜಕರ ನಿಧಿಯನ್ನು ಸಂಗ್ರಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಈ ವರ್ಷವೇ ಅವರು ಪವರ್ಣ ಅವರನ್ನು ಮದುವೆಯಾದರು.
2004 ರಲ್ಲಿ ಅವರು ನಿಸ್ಸಾನ್ ವಿಶ್ವ ಸರಣಿಯ ಮರು ನಾಮಾಂಕಿತ "ನಿಸ್ಸಾನ್‌ನಿಂದ ವಿಶ್ವ ಸರಣಿ"ಯಲ್ಲಿ ಪ್ರದರ್ಶನವನ್ನು ಮುಂದುವರಿಸಿ ಸ್ಪೇನ್ನ ವ್ಯಾಲೆನ್ಸಿಯಾ ಮತ್ತು ಫ್ರಾನ್ಸ್ನ ಮ್ಯಾಗ್ನೇ-ಕೋರ್ಸ್ನಲ್ಲಿ ಜಯಗಳಿಸಿದರು.
ತಂಡಗಳು: ಕಾರ್ಲಿನ್ ಮೋಟಾರ್‌ಸ್ಪೋರ್ಟ್, ಆರ್‌ಸಿ ಮೋಟಾರ್‌ಸ್ಪೋರ್ಟ್ Archived 2011-07-22 ವೇಬ್ಯಾಕ್ ಮೆಷಿನ್ ನಲ್ಲಿ., ಟೀಮ್ ಇಂಪುಲ್, ವಿಲಿಯಮ್ಸ್ ಎಫ್1 ಟೀಮ್, ಜೋರ್ಡಾನ್ ಟೊಯೋಟಾ
ಪಂದ್ಯಾವಳಿಗಳು: ಬ್ರಿಟಿಷ್ ಫಾರ್ಮ್ಯುಲಾ 3, ಫಾರ್ಮ್ಯುಲಾ ನಿಪ್ಪೋನ್, ಫಾರ್ಮ್ಯುಲಾ ನಿಸ್ಸಾನ್ (ಇದೀಗ ಫಾರ್ಮ್ಯುಲಾ ರೆನಾಲ್ಟ್ ಆಗಿ ವಿಲೀನಗೊಂಡಿದೆ)
ಫಾರ್ಮ್ಯುಲಾ ಒನ್ ವೃತ್ತಿಜೀವನ
[ಬದಲಾಯಿಸಿ]2005 ರ ಫೆಬ್ರವರಿ 1 ರಂದು, ತಾವು ಜೋರ್ಡಾನ್ ಫಾರ್ಮ್ಯುಲಾ ಒನ್ ತಂಡದೊಂದಿಗೆ ಪೂರ್ವಭಾವಿ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಮತ್ತು 2005 ಫಾರ್ಮ್ಯುಲಾ ಒನ್ ಋತುವಿಗಾಗಿ ತಾವು ಅವರ ಪ್ರಮುಖ ಚಾಲಕನಾಗಿರುವುದಾಗಿ ಕಾರ್ತಿಕೇಯನ್ ಅವರು ಘೋಷಿಸಿದರು ಮತ್ತು ಈ ಮೂಲಕ ಅವರು ಭಾರತದ ಪ್ರಥಮ ಫಾರ್ಮ್ಯುಲಾ ಒನ್ ರೇಸಿಂಗ್ ಚಾಲಕರಾದರು. ಅವರ ಸಹಯೋಗಿಯು ಪೋರ್ಚುಗೀಸ್‌ನ ಟಿಯಾಗೋ ಮೊಂಟೇರೋ ಅವರಾಗಿದ್ದರು. ಸಿಲ್ವರ್‌ಸ್ಟೋನ್ ಸರ್ಕ್ಯೂಟ್ನಲ್ಲಿ ಸೂಪರ್‌ಲೈಸೆನ್ಸ್ ಅನ್ನು ಪಡೆಯವ ಕಾರಣಕ್ಕಾಗಿ ಕಾರ್ತಿಕೇಯನ್ ಅವರು ಎಫ್1 ಕಾರಿನಲ್ಲಿ ಫೆಬ್ರವರಿ 10 ರಂದು ಅಗತ್ಯವಾದ ಪರೀಕ್ಷಾರ್ಥ 300 ಕಿಮೀ ದೂರವನ್ನು ಪೂರ್ಣಗೊಳಿಸಿದರು.
ಅವರ ಮೊದಲ ರೇಸ್ ಆದ ಆಸ್ಟ್ರೇಲಿಯನ್ ಗ್ರಾಂಡ್ ಪ್ರಿಕ್ಸ್ನಲ್ಲಿ ಕಾರ್ತಿಕೇಯನ್ ಅವರು 12 ನೇ ಸ್ಥಾನದಲ್ಲಿ ಅರ್ಹತೆ ಪಡೆದರು. ಕಳಪೆ ಪ್ರಾರಂಭದ ಕಾರಣದಿಂದ ಮೊದಲ ಲ್ಯಾಪ್‌ನ ಕೊನೆಯಲ್ಲಿ 18 ನೇ ಸ್ಥಾನಕ್ಕೆ ತಳ್ಳಲ್ಪಟ್ಟ ಕಾರ್ತಿಕೇಯನ್ ಅವರು ವಿಜಯಶಾಲಿಯಾದ ಜಿಯಾನ್‌ಕಾರ್ಲೋ ಫಿಸಿಶೆಲ್ಲಾ ಅವರಿಗಿಂತ ಎರಡು ಲ್ಯಾಪ್‌ಗಳ ಹಿಂದೆ 15 ನೇಯವರಾಗಿ ಪೂರ್ಣಗೊಳಿಸಿದರು. ಚಕ್ರದ ಸುರಕ್ಷತೆಯ ಕುರಿತಂತೆ ನಡೆದ ಚರ್ಚೆಯ ಕಾರಣದಿಂದ ಹಾಸ್ಯಾಸ್ಪದ ಪರಿಸ್ಥಿತಿಯಲ್ಲಿ ಮೂರು ತಂಡಗಳು ಹಿಂದೆ ಸರಿದ ಹಿನ್ನೆಲೆಯಲ್ಲಿ ನಡೆದ 2005 ಯುನೈಟೆಡ್ ಸ್ಟೇಟ್ಸ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಅವರು ತಮ್ಮ ಮೊದಲ ಅಂಕಗಳನ್ನು ಗಳಿಸಿದರು. ಕಾರ್ತಿಕೇಯನ್ ಅವರು ಎರಡು ಮಿನಾರ್ಡಿ ಚಾಲಕರಿಗಿಂತ ಮುಂದೆ ಆದರೆ ತಮ್ಮ ತಂಡದ ಸಹಯೋಗಿ ಮೊಂಟೆರೋ ಅವರಿಗಿಂತ ಹಿಂದೆ ನಾಲ್ಕನೆಯವರಾಗಿ ಸ್ಪರ್ಧೆಯನ್ನು ಪೂರ್ಣಗೊಳಿಸಿದರು. ಯುಎಸ್‌ಜಿಪಿ ಅನ್ನು ಹೊರತುಪಡಿಸಿ, ಕಾರ್ತಿಕೇಯನ್ ಅವರ ಗರಿಷ್ಠ ಅಂತ್ಯವು 11 ನೇ ಸ್ಥಾನದಲ್ಲಾಗಿತ್ತು. 2005 ಜಪಾನೀಸ್ ಗ್ರಾಂಡ್ ಪ್ರಿಕ್ಸ್ ಮುಕ್ತ ಅಭ್ಯಾಸದಲ್ಲಿ, ಬಹು ಕಾಲದವರೆಗೆ ಅವರು ಅತೀ ವೇಗವಾಗಿ ಮುಂದಿದ್ದರು ಮತ್ತು ಅಂತಿಮವಾಗಿ 11 ನೇಯವರಾಗಿ ಅರ್ಹತೆ ಪಡೆದರು. 2005 ಚೈನೀಸ್ ಗ್ರಾಂಡ್ ಪ್ರಿಕ್ಸ್ನಲ್ಲಿ ಅವರು ಹಲವು ಅಗ್ರ ತಂಡಗಳಿಗೆ ಅತೀ ಸಮೀಪದ ಸಮಯಾವಧಿಯಲ್ಲಿ 15 ನೇ ಸ್ಥಾನದಲ್ಲಿ ಅರ್ಹತೆ ಪಡೆದರು. 2005 ರ ದುರದೃಷ್ಟಕರ ಅಂತ್ಯವಾಗಿ, ಚೈನೀಸ್ ರೇಸ್‌ನಲ್ಲಿ ಕಾರ್ತಿಕೇಯನ್ ಅವರು ತಮ್ಮ ಜೋರ್ಡಾನ್ ಅನ್ನು ಗೋಡೆಗೆ ಗುದ್ದಿದರು, ಆದರೆ ಯಾವುದೇ ಗಾಯಗೊಳ್ಳಲಿಲ್ಲ ಮತ್ತು ನಂತರದಲ್ಲಿ ಸಂದರ್ಶನವನ್ನು ನೀಡಲು ಸಮರ್ಥರಾಗಿದ್ದರು.
ಜೋರ್ಡಾನ್ ತಂಡದ ಮಾಲೀಕತ್ವದ ಬದಲಾವಣೆಯ ಮತ್ತು 2006 ರ ಋತುವಿಗಾಗಿ ಮಿಡ್‌ಲ್ಯಾಂಡ್ ಎಂದು ಬದಲಿಸಲಾದ ಕಾರಣದಿಂದ, ಆಡಳಿತ ಮಂಡಳಿಯ ಬದಲಾವಣಎಯು ತಂಡದಲ್ಲಿ ಕಾರ್ತಿಕೇಯನ್ ಅವರ ಉಪಸ್ಥಿತಿಯ ಬಗ್ಗೆ ಸಂದೇಹವನ್ನು ಉಂಟು ಮಾಡಿತು. 2005 ರ ಕೊನೆಯ ಸಂದರ್ಭದಲ್ಲಿ, ತಂಡದಲ್ಲಿ ಅವರು ಸ್ಥಾನ ಪಡೆಯಲು USD 11.7 ಮಿಲಿಯನ್‌ಗಳಷ್ಟು ಅವರು ಪಾವತಿಸಬೇಕಾದ ಬೇಡಿಕೆಯ ಕಾರಣದಿಂದ ತಾವು ಮುಂದಿನ ವರ್ಷ ಮಿಡ್‌ಲ್ಯಾಂಡ್ ಪರವಾಗಿ ಚಾಲನೆ ಮಾಡುವುದಿಲ್ಲವೆಂದು ಕಾರ್ತಿಕೇಯನ್ ಅವರು ಘೋಷಿಸಿದರು. "ಆದರೂ, ಉತ್ತಮ ಕಾರಿನಲ್ಲಿ ಪರೀಕ್ಷಾರ್ಥ ಚಾಲಕರಾಗಿರುವುದು ನನ್ನ ಕೌಶಲ್ಯಗಳನ್ನು ಉತ್ತಮವಾಗಿ ಪ್ರದರ್ಶಿಸಲು ಅವಕಾಶ ನೀಡುತ್ತದೆ" ಎಂದು ಅವರು ಹೇಳಿದರು. 2005 ರ ಡಿಸೆಂಬರ್ 8 ರಂದು, ಕಾರ್ತಿಕೇಯನ್ ಅವರು ಸ್ಪೇನ್‌ನಲ್ಲಿ ವಿಲಿಯಮ್ಸ್ ಅನ್ನು ಪರೀಕ್ಷಾರ್ಥ ಚಾಲನೆ ಮಾಡಿದರು ಮತ್ತು FW27C ಚಾಸಿಯಲ್ಲಿ ಚಾಲನೆ ಮಾಡಿ ಒಂಬತ್ತನೆಯವರಾಗಿ ಸ್ಪರ್ಧೆ ಮುಗಿಸಿದ ವಿಲಿಯಮ್ಸ್‌ನ ಖಾತ್ರಿ ಚಾಲಕ ನಿಕೋ ರೋಸ್‌ಬರ್ಗ್ ಅವರನ್ನು ಹಿಂದಿಕ್ಕಿ ಗೌರವಯುತ ಐದನೇ ಸ್ಥಾನದಲ್ಲಿ ಸ್ಪರ್ಧೆ ಪೂರ್ಣಗೊಳಿಸಿದರು. 2006 ರ ಜನವರಿ 27 ರಂದು, ಕಾರ್ತಿಕೇಯನ್ ಅವರನ್ನು ವಿಲಿಯಮ್ಸ್ ತಮ್ಮ ನಾಲ್ಕನೇ ಚಾಲಕರೆಂದು ದೃಢೀಕರಿಸಿತು.[೩] ಅವರು ಈ ಹಿಂದೆ ತಂಡದ ಮೂರನೇ ಚಾಲಕರಾಗಿ ದೃಢೀಕರಿಸಲ್ಪಟ್ಟ ಅಲೆಕ್ಸಾಂಡರ್ ವುರ್ಜ್ ಅವರೊಂದಿಗೆ ತಂಡಕ್ಕಾಗಿ ಪರೀಕ್ಷಾರ್ಥ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿತ್ತು. 2007 ರಲ್ಲಿ ಕಜುಕೀ ನಾಕಾಜಿಮಾ ಅವರೊಂದಿಗೆ ಕಾರ್ತಿಕೇಯನ್ ಅವರನ್ನು ಕಾದಿರಿಸಿದ ಚಾಲಕರಾಗಿ ಉಳಿಸಿಕೊಳ್ಳಲಾಯಿತು.[೪] ಫಾರ್ಮ್ಯುಲಾ ಒನ್‌ನ ಸ್ಪರ್ಧಿಗಳು ಮತ್ತು ಪ್ರಮುಖ ಸಂಚಾರಿ ತಂಡದ ನಡುವಿನ ವಿರಸದಿಂದ ತಾವು ಹೊರಗುಳಿಯಬೇಕಾಯಿತು ಎಂದು ಕಾರ್ತಿಕೇಯನ್ ಹೇಳಿದರು.[೫]
ನಂತರ 2007 ರಲ್ಲಿ, ಸ್ಪೈಕರ್ (ಹಿಂದಿನ ಜೋರ್ಡಾನ್) ಫಾರ್ಮ್ಯುಲಾ ಒನ್ ತಂಡದ ಚಾಲಕ ಕ್ರಿಸ್ಟಿಜಾನ್ ಆಲ್ಬರ್ಸ್ ಅವರನ್ನು ಹೊರಹಾಕಿದ ನಂತರ ಕಾರ್ತಿಕೇಯನ್ ಅವರು ಇದರೊಂದಿಗೆ ಗುರುತಿಸಿಕೊಂಡರು, ಆದರೂ ಸ್ಯಾಕೋನ್ ಯಾಮಾಮೋಟೋ ಅವರಿಗೆ ಚಾಲನೆಯ ಅವಕಾಶ ಸಿಕ್ಕಿತು. ಟಾಟಾ (ಕಾರ್ತಿಕೇಯನ್ ಅವರ ಮುಖ್ಯ ಪ್ರಾಯೋಜಕರು) ರವರು ವಿಲಿಯಮ್ಸ್ಎಫ್1 ನಿಂದ ಬೆಂಬಲವನ್ನು ಹಿಂತೆಗೆದುಕೊಂಡ ಕಾರಣದಿಂದ, ನಾಕಾಜಿಮಾ ಅವರಿಗೆ ಪರೀಕ್ಷಾರ್ಥ ಕರ್ತವ್ಯಗಳ ಮುಖ್ಯ ಹೊಣೆಗಾರಿಕೆಯನ್ನು ನೀಡಲಾಯಿತು ಮತ್ತು ಕಾರ್ತಿಕೇಯನ್ ಅವರನ್ನು ಮೂಲೆಗುಂಪು ಮಾಡಲಾಯಿತು.
2007 ರ ಕೊನೆಯಲ್ಲಿ ವಿಜಯ್ ಮಲ್ಯರವರು ಸ್ಪೈಕರ್ ಎಫ್1 ತಂಡವನ್ನು ಕೊಂಡುಕೊಂಡಾಗ, 2008 ರಲ್ಲಿ ಹೊಸ ಫೋರ್ಸ್ ಇಂಡಿಯಾ ಫಾರ್ಮ್ಯುಲಾ ಒನ್ ತಂಡದೊಂದಿಗೆ ಚಾಲನೆಯ ಕುರಿತಂತೆ ಕಾರ್ತಿಕೇಯೇನ್ ಅವರು ಸಂಪರ್ಕ್ ಹೊಂದಿದ್ದರು. ಆದರೆ, ಕಾರ್ತಿಕೇಯನ್ ಅವರು ತಂಡಕ್ಕಾಗಿನ ಪರೀಕ್ಷೆಗಾಗಿಯೂ ಅವಕಾಶ ಪಡೆಯಲಿಲ್ಲ. ಜನವರಿ 2008 ರಲ್ಲಿ ಸೂಪರ್ ಅಗುರಿ ತಂಡದೊಂದಿಗೆ, ತಂಡದಲ್ಲಿ ಬಂಡವಾಳ ಹೂಡಿರುವ ಭಾರತೀಯ ಒಕ್ಕೂಟದ ಒಂದು ನಿಯಮವಾಗಿ ಚಾಲನೆ ಮಾಡಲು ಸಹ ಕಾರ್ತಿಕೇಯನ್ ಅವರು ಗುರುತಿಸಿಕೊಂಡಿದ್ದರು. ಒಪ್ಪಂದವು ಸ್ವೀಕೃತವಾಗಲಿಲ್ಲ ಮತ್ತು ಅವರು ಎ1 ಟೀಮ್ ಇಂಡಿಯಾಗೆ ಚಾಲನೆ ಮಾಡುವುದನ್ನು ಮುಂದುವರಿಸಿದರು. ಕರಣ್ ಚಾಂದೋಕ್ ಅವರು ಹಿಸ್ಪಾನಿಯಾ ಎಫ್1 ಟೀಮ್ಗೆ ಚಾಲನೆ ಮಾಡಲು ಸಹಿ ಮಾಡುವ ತನಕ 2010 ಋತುವಿನವರೆಗೆ ಕಾರ್ತಿಕೇಯನ್ ಅವರು ಭಾರತದ ಏಕೈಕ ಫಾರ್ಮ್ಯುಲಾ ಒನ್ ಚಾಲಕರಾಗಿದ್ದರು.[೬]
ಇತರ ಸ್ಪರ್ಧೆಗಳು ಮತ್ತು ರೇಸ್‌ಗಳು
[ಬದಲಾಯಿಸಿ]ಐಆರ್ಎಲ್ ಪರೀಕ್ಷೆ
[ಬದಲಾಯಿಸಿ]2005 ರಲ್ಲಿ, ಕಾರ್ತಿಕೇಯನ್ ಅವರು ಇಂಡಿಯಾನಾಪೋಲಿಸ್ 500 ರೇಸ್‌ಗಾಗಿ ರೆಡ್ ಬುಲ್ ಚೀವರ್ ರೇಸಿಂಗ್ ತಂಡಕ್ಕಾಗಿ ಇಂಡಿ ರೇಸಿಂಗ್ ಲೀಗ್ (ಐಆರ್ಎಲ್) ಕಾರನ್ನು ಪರೀಕ್ಷಿಸಿದರು ಮತ್ತು ಪ್ರಾರಂಭಿಕ ಶುಲ್ಕವಾಗಿ ಅವರಿಗೆ ಅರ್ಧ ಮಿಲಿಯನ್ ಯುಎಸ್ ಡಾಲರ್‌ಗಳನ್ನು ನೀಡಲಾಯಿತು ಆದರೆ ಒಪ್ಪಂದವು ಪೂರ್ಣಗೊಳ್ಳಲಿಲ್ಲ.[ಸೂಕ್ತ ಉಲ್ಲೇಖನ ಬೇಕು]
ಎ1 ಜಿಪಿ
[ಬದಲಾಯಿಸಿ]೨೦೦೭ ರ ಋತುವಿನಲ್ಲಿ ಕಾರ್ತಿಕೇಯನ್ ಅವರು ಎ೧ ಟೀಮ್ ಇಂಡಿಯಾ ದ ಪರವಾಗಿಯೂ ಚಾಲನೆ ಮಾಡಿದರು. ಅವರು ತಮ್ಮ ಎ1 ಜಿಪಿ ಪಾದಾರ್ಪಣೆಯನ್ನು ನ್ಯೂಜಿಲೆಂಡಿನಲ್ಲಿ ಮಾಡಿದರು ಮತ್ತು ಅವರು ಸ್ಪ್ರಿಂಟ್ ರೇಸ್‌ನಲ್ಲಿ 10 ನೇ ಯವರಾಗಿ ಮತ್ತು ಫೀಚರ್ ರೇಸ್‌ನಲ್ಲಿ 7 ನೇ ಯವರಾಗಿ ಸ್ಪರ್ಧೆಯನ್ನು ಪೂರ್ಣಗೊಳಿಸಿದರು.[೭]
ಕಾರ್ತಿಕೇಯನ್ ಅವರು 2007 ರ ಡಿಸೆಂಬರ್ 16 ರಂದು ಟೀಮ್ ಇಂಡಿಯಾ ಪರವಾಗಿ ಜುಹಾಯಿ (ಚೀನಾ)ದಲ್ಲಿ ಎ1 ಜಿಪಿ ನಲ್ಲಿ ಜಯಗಳಿಸಿದರು. ಇದು ಭಾರತದ ಪ್ರಥಮ ಎ1 ಜಿಪಿ ವಿಜಯವಾಗಿತ್ತು.[೮] ಕಾರ್ತಿಕೇಯನ್ ಅವರು ಭಾರತದ ಪರವಾಗಿ ಎ1 ಜಿಪಿನಲ್ಲಿ ಪೋಲ್ ಸ್ಥಿತಿಯನ್ನು ಪಡೆದ ಮೊದಲಿಗರೂ ಆಗಿದ್ದಾರೆ. ಇವರು 2008 ರಲ್ಲಿ ಬ್ರಾಂಡ್ಸ್ ಹ್ಯಾಚ್‌ನಲ್ಲಿನ ಫೀಚರ್ ರೇಸ್‌ನಲ್ಲಿ ಪೋಲ್ ಅನ್ನು ಗಳಿಸಿದರು. ಕಾರ್ತಿಕೇಯನ್ ಅವರು ಪೋಲ್ ಸ್ಥಿತಿಯಿಂದ ಪ್ರಾರಂಭಗೊಂಡ ಬ್ರಾಂಡ್ಸ್ ಹ್ಯಾಚ್‌ನಲ್ಲಿನ ಋತುವಿನ ಫೈನಲ್ ಒಳಗೊಂಡು 2007-2008 ರಲ್ಲಿ ಎರಡು ಫೀಚರ್ ರೇಸ್‌ಗಳಲ್ಲಿ ಜಯಗಳಿಸಿದರು. ಇದು ಆಸ್ಟ್ರೇಲಿಯ, ಬ್ರೆಜಿಲ್ ,ಚೀನಾ ಮತ್ತು ಇಟಲಿಯಂತಹ ದೇಶಗಳಿಗಿಂತ ಮೊದಲು ಅಗ್ರ ಹತ್ತರಲ್ಲಿ ಭಾರತವು ಸ್ಥಾನಗಳಿಸಲು ಸಹಾಯ ಮಾಡಿತು.
ಭಾರತ ತಂಡವು ತಂಡದ ಪ್ರಾಯೋಜಕರನ್ನು ಕಳೆದುಕೊಂಡ ಕಾರಣದಿಂದಾಗಿ 4ನೇ ಋತುವು ಅದರ ಪಾಲಿಗೆ ವಿಪತ್ತುಕಾರಿಯಾಗಿತ್ತು. 2009 ರ ಮೇ 3 ರಂದು ಬ್ರಾಂಡ್ಸ್ ಹ್ಯಾಚ್‌ನಲ್ಲಿನ ಸ್ಪ್ರಿಂಟ್ ರೇಸ್‌ನಲ್ಲಿ ಭಾರತವು ಪೋಡಿಯಂ ಅಂತ್ಯಗೊಳಿಸುವಿಕೆಯೊಂದಿಗೆ ಋತುವನ್ನು ಪೂರ್ಣಗೊಳಿಸಿತು. ರೇಸಿಗಾಗಿನ ಪ್ರಾರಂಭಿಕ ಗ್ರಿಡ್‌ನಲ್ಲಿ ಕಾರ್ತಿಕೇಯನ್ ಅವರು ಎ1 ಟೀಮ್ ಇಂಡಿಯಾ ಕಾರಿನಲ್ಲಿ 7 ನೇ ಸ್ಥಾನದಲ್ಲಿ ಅರ್ಹತೆಗಳಿಸಿದರು. ಮೊದಲ ಲ್ಯಾಪ್‌ನ ಮೊದಲ ತುದಿಯಲ್ಲಿ ಕಾರ್ತಿಕೇಯನ್ ಅವರ ಎದುರಿಗೆ ಎ1 ಟೀಮ್ ಚೀನಾದ ಸ್ಪಿನ್ನಿಂಗ್ ಕಾರಿನಿಂದ ಅವರನ್ನು ಹಿಂತೆಗೆದುಕೊಂಡಿದ್ದರಿಂದ ಹಠಾತ್ತನೇ ಕಾರ್ತಿಕೇಯನ್ ಅವರಿಗೆ ಫೀಚರ್ ರೇಸ್ ಕೊನೆಗೊಳ್ಳುವಂತಾಯಿತು.[೯]
2008-09 ನೇ ಋತುವಿನಲ್ಲಿ ತಂಡವು ಒಟ್ಟಾರೆಯಾಗಿ 12 ನೆಯದಾಗಿ ಪೂರ್ಣಗೊಳಿಸಿತು.[೧೦]
ಲೇ ಮ್ಯಾನ್ಸ್‌ನ 24 ಗಂಟೆಗಳು
[ಬದಲಾಯಿಸಿ]2009 ರ ಮಾರ್ಚ್ ಎರಡನೇ ವಾರದಲ್ಲಿ ಕಾರ್ತಿಕೇಯನ್ ಅವರು ಕೊಲ್ಲೇಸ್ ಲೇ ಮ್ಯಾನ್ಸ್ ತಂಡಕ್ಕಾಗಿ ಪರೀಕ್ಷಾರ್ಥ ಚಾಲನೆ ಮಾಡಿದರು. 2009 ನೇ ಋತುವಿಗಾಗಿ ಅವರು ಕ್ರಿಸ್ಟಿಜಾನ್ ಆಲ್ಬರ್ಸ್ ಅವರೊಂದಿಗೆ ಸಹಯೋಗಿಯಾಗಿರುತ್ತಾರೆಂದು ನಂತರ ದೃಢೀಕರಿಸಲಾಯಿತು. ಮಾಜಿ ಫೋರ್ಸ್ ಇಂಡಿಯಾ ತಂಡದ ಮುಖ್ಯಸ್ಥರಾದ ಕೋಲಿನ್ ಕೊಲ್ಲೇಸ್ ಅವರ ನೈತೃತ್ವದ ಟೀಮ್ ಕೊಲ್ಲೇಸ್ ತಂಡವು ಪಂದ್ಯಾವಳಿಯಲ್ಲಿ ಎರಡು ಔಡಿ ಆರ್10 ಟರ್ಬೋ ಡೀಸೆಲ್ ಯಂತ್ರಗಳೊಂದಿಗೆ ಭಾಗವಹಿಸುತ್ತಿತ್ತು. ಮೂರು ಲೇ ಮ್ಯಾನ್ಸ್ 24 ನೇ ವಿಜಯ ಮತ್ತು 22 ವೈಯಕ್ತಿಕ ರೇಸ್ ಜಯಗಳೊಂದಿಗೆ ಯಶಸ್ವಿ ರೇಸಿಂಗ್ ಇತಿಹಾಸವನ್ನು ಕಾರು ಹೊಂದಿತ್ತು. 2009 ರಲ್ಲಿ ಪ್ರಥಮ ಬಾರಿಗೆ ಟೀಮ್ ಕೊಲ್ಲೇಸ್ ಪಂದ್ಯಾವಳಿಯಲ್ಲಿ ಸೇರ್ಪಡೆಯಾಯಿತು.[೧೧][೧೨] [೧೩]
2009 ರ ಮೇ 11 ರಂದು, ಬೆಲ್ಜಿಯಂನ ಸ್ಪಾ-ಫ್ರಾಕೋರ್‌ಚಾಂಪ್ಸ್‌ನಲ್ಲಿ ಜರುಗಿದ 2009 ರ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಕೊಲ್ಲೇಸ್ ಔಡಿ ತಂಡಕ್ಕಾಗಿ ಚಾಲನೆ ಮಾಡಿದ ಕಾರ್ತಿಕೇಯನ್ ಅವರು ತಮ್ಮ ಮೊದಲ ಲೇ ಮ್ಯಾನ್ಸ್ ಸರಣಿಯಲ್ಲಿ ಆರನೇ ಸ್ಥಾನವನ್ನು ಪಡೆದರು.[೧೪]
2009 ರ ಜೂನ್ 14 ರಂದು ರೇಸ್‌ನ ಪ್ರಾರಂಭಕ್ಕೂ ಮೊದಲು ಬಿದ್ದು ಗಾಯಗೊಂಡು ತಮ್ಮ ಭುಜದ ಸ್ಥಾನಪಲ್ಲಟಕ್ಕೆ ಒಳಗಾದರು. ಅವರು ಅಭ್ಯಾಸ ಮತ್ತು ಅರ್ಹತಾ ಸುತ್ತಿನ ಪ್ರದರ್ಶನದಲ್ಲಿ ಅಮೋಘ ನಿರ್ವಹಣೆಯೊಂದಿಗೆ ಮರಳಿದರು ಮತ್ತು ಅವರು ಪ್ರಾರಂಭಿಕ ದ್ವಿಗುಣ ಕಾರ್ಯವನ್ನು ಮಾಡಲು ನಿಗದಿಯಾಗಿತ್ತು. ಔಡಿ ವೈದ್ಯರುಗಳು ಕಾರ್ತಿಕೇಯನ್ ಅವರು ಸಮರ್ಥರೆಂದು ಅನುಮೋದಿಸಿದ್ದರೂ ಬೆಳಗ್ಗಿನ 1 ಗಂಟೆಗೆ ಎಸಿಓ ಸಂಘಟನೆಯು ಅವರನ್ನು ಚಾಲನೆ ಮಾಡಲು ತಕ್ಕುದಾಗಿಲ್ಲವೆಂದು ಘೋಷಿಸಿದರು.[೧೫]
ಎನ್‌ಎಎಸ್‌ಸಿಎಆರ್
[ಬದಲಾಯಿಸಿ]ವೈಲರ್ ರೇಸಿಂಗ್ ಗಾಗಿ #60 ಸೇಫ್ ಆಟೋ ಇನ್ಶೂರೆನ್ಸ್ ಕಂಪನಿಯ ಚೆವರ್‌ಲೆಟ್ ಸಿಲ್ವರಾಡೋನಲ್ಲಿ ಕ್ರೋಜರ್ 250 ಕ್ಯಾಂಪಿಂಗ್ ವರ್ಲ್ಡ್ ಟ್ರಕ್ ಸರಣಿ ಅನ್ನು ಚಾಲನೆ ಮಾಡುವ ಮೂಲಕ ಮಾರ್ಚ್ 2007 ರಲ್ಲಿ ಕಾರ್ತಿಕೇಯನ್ ಅವರು ತಮ್ಮ ಎನ್ಎಎಸ್‌ಸಿಎಆರ್ ಪಾದಾರ್ಪಣೆಯನ್ನು ಮಾರ್ಟಿನ್ಸ್‌ವಿಲ್ಲೆ ಸ್ಪೀಡ್‌ವೇ ನಲ್ಲಿ ಮಾಡಿದರು. ಅರ್ಹತಾ ಸುತ್ತು ಮಳೆಯಲ್ಲಿ ರದ್ದು ಗೊಂಡಿತು ಮತ್ತು 2009 ಮಾಲೀಕರ ಅಂಕಗಳ ಮೂಲಕ ನಿಗದಿಪಡಿಸಲಾಯಿತು, ಈ ಮೂಲಕ 11 ನೇ ಪ್ರಾರಂಭಿಕ ಸ್ಥಾನದಲ್ಲಿ ಎನ್ಎಎಸ್‌ಸಿಎಆರ್ ನಲ್ಲಿ ಮೊದಲ ಭಾರತೀಯ ಮೂಲದ ಚಾಲಕನೊಬ್ಬನು ಸ್ಪರ್ಧಿಸಿದಂತಾಯಿತು. ನಿಧಾನಗತಿಯ ಪ್ರಾರಂಭ ಮತ್ತು ರೇಸ್ ಟ್ರಕ್ ಚಾಲನೆಯ ಮಾಡುವಲ್ಲಿ ಹಿಡಿತ ಸಾಧಿಸಿದ ಬಳಿಕ ಜೊತೆಗೆ ಮೊದಲ ಬಾರಿಗೆ ಅಮೇರಿಕನ್ ಅಂಡಾಕೃತಿಯ ಚಿಕ್ಕ ಟ್ರಾಕ್‌ನಲ್ಲಿ ಸ್ಪರ್ಧಿಸುತ್ತಿದ್ದರೂ, ಕಾರ್ತಿಕೇಯನ್ ಅವರು ಗೌರವಪೂರ್ಣ ಪ್ರಯತ್ನವನ್ನು ಮಾಡಿದರು ಮತ್ತು ಪ್ರಾರಂಭಿಕ ಲ್ಯಾಪ್‌ನಲ್ಲಿ 13 ನೇ ಸ್ಥಾನದಲ್ಲಿ ಪೂರ್ಣಗೊಳಿಸಿದರು. ಕಾರ್ತಿಕೇಯನ್ ಅವರು ಎನ್ಎಎಸ್‌ಸಿಎಆರ್ ಕ್ಯಾಂಪಿಂಗ್ ವರ್ಲ್ಡ್ ಟ್ರಕ್ ಸರಣಿ 2010 ನೇ ಋತುವಿಗಾಗಿ ಅಭಿಮಾನಿಗಳು ಮತ ಚಲಾಯಿಸುವುದರ ಆಧಾರದ ಮೇಲೆ ಹೆಚ್ಚು ಜನಪ್ರಿಯ ಚಾಲಕ ಪ್ರಶಸ್ತಿಯನ್ನು ಜಯಿಸಿದರು.
ಸೂಪರ್ ಲೀಗ್ ಫಾರ್ಮ್ಯುಲಾ
[ಬದಲಾಯಿಸಿ]2010 ನೇ ಋತುವಿಗಾಗಿ ನರೇನ್ ಅವರು ಎಸ್ಎಫ್ಎಲ್‌ನಲ್ಲಿ ಪಿಎಸ್‌ವಿ ತಂಡಕ್ಕೆ ಚಾಲನೆ ಮಾಡುತ್ತಿದ್ದಾರೆ. ಇವರು ಗ್ರೇಟ್ ಬ್ರಿಟನ್‌ನ ಬ್ರಾಂಡ್ಸ್ ಹ್ಯಾಚ್‌ನಲ್ಲಿ ಎರಡನೇ ರೇಸ್‌ನಲ್ಲಿ ಜಯಗಳಿಸಿದರು. ಈ ಮೂಲಕ ಅವರು ಸ್ಪರ್ಧಿಸಿದ ಪ್ರತಿ ಪಂದ್ಯಾವಳಿಯಲ್ಲೂ ಜಯಗಳಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.
ರೇಸಿಂಗ್ ದಾಖಲೆ
[ಬದಲಾಯಿಸಿ]ವೃತ್ತಿಜೀವನ ಸಾರಾಂಶ
[ಬದಲಾಯಿಸಿ]- 2010: ಸೂಪರ್‌ಲೀಗ್ ಫಾರ್ಮುಲಾ - ಪಿಎಸ್‌ವಿ ಇಂದೋವೆನ್, ಎನ್ಎಎಸ್‌ಸಿಎಆರ್ ಕ್ಯಾಂಪಿಂಗ್ ವರ್ಲ್ಡ್ ಟ್ರಕ್ ಸಿರೀಸ್ - ಸ್ಟಾರ್ಟ್‌ಬೀಸ್ಟ್ ಮೋಟಾರ್ ಸ್ಪೋರ್ಟ್ಸ್, ವೇಲರ್ ರೇಸಿಂಗ್
- 2009: ಎ1ಜಿಪಿ ವಿಶ್ವ ಚಾಂಪಿಯನ್‌ಶಿಪ್ ಎ1 ಟೀಮ್ ಇಂಡಿಯಾ, ಬ್ರಾಂಡ್ಸ್ ಹ್ಯಾಚ್ನಲ್ಲಿ ಬ್ರಿಟಿಷ್ ಜಿಪಿನಲ್ಲಿ ಎರಡನೆಯ ಸ್ಥಾನ
- 2009: ೨೪ ಹವರ್ಸ್ ಆಫ್ ಲೇ ಮ್ಯಾನ್ಸ್ ಮತ್ತು ಲೇ ಮ್ಯಾನ್ಸ್ ಸಿರೀಸ್ ಮತ್ತು ಲೇ ಮ್ಯಾನ್ಸ್ ಸಿರೀಸ್, ಕೊಲ್ಲೇಸ್ ಔಡಿ ಆರ್10 ಟಿಡಿಐ
- 2008: ಎ1ಜಿಪಿ ವಿಶ್ವ ಚಾಂಪಿಯನ್‌ಶಿಪ್ ಎ1 ಟೀಮ್ ಇಂಡಿಯಾ, ಬ್ರಿಟಿಷ್ ಜಿಪಿಯ ಜಯಶಾಲಿ, ಬ್ರಾಂಡ್ಸ್ ಹ್ಯಾಚ್.
- 2007: ಎ1ಜಿಪಿ ವಿಶ್ವ ಚಾಂಪಿಯನ್‌ಶಿಪ್ ಎ1 ಟೀಮ್ ಇಂಡಿಯಾ,ಚೈನೀಸ್ ಜಿಪಿ ಜಯಶಾಲಿ
- 2007: ಫಾರ್ಮ್ಯುಲಾ ಒನ್ ವಿಶ್ವ ಚಾಂಪಿಯನ್‌ಶಿಪ್ವಿಲಿಯಮ್ಸ್ ಎಫ್1 ತಂಡ, ಪರೀಕ್ಷಾರ್ಥ ಚಾಲಕ
- 2006: ಫಾರ್ಮ್ಯುಲಾ ಒನ್ ವಿಶ್ವ ಚಾಂಪಿಯನ್‌ಶಿಪ್ ವಿಲಿಯಮ್ಸ್ ಎಫ್1 ತಂಡ, ಪರೀಕ್ಷಾರ್ಥ ಚಾಲಕ
- 2005: ಫಾರ್ಮ್ಯುಲಾ ಒನ್ ವಿಶ್ವ ಚಾಂಪಿಯನ್‌ಶಿಪ್ ಜೋರ್ಡಾನ್, 18ನೇ (5ಅಂಕಗಳು)
- 2004: ಫಾರ್ಮ್ಯುಲಾ ನಿಸ್ಸಾನ್ ವಿಶ್ವ ಸರಣಿ (ನಿಸ್ಸಾನ್‌ನಿಂದ ವಿಶ್ವ ಸರಣಿ), 6ನೇ (ಟಾಟಾ ಆರ್‌ಸಿ ಮೋಟಾರ್‌ಸ್ಪೋರ್ಟ್)
- 2003: ಫಾರ್ಮ್ಯುಲಾ ನಿಸ್ಸಾನ್ ವಿಶ್ವ ಸರಣಿ (ಸೂಪರ್‌ಫಂಡ್ ವಿಶ್ವ ಸರಣಿ), 4ನೇ (ಕಾರ್ಲಿನ್ ಮೋಟಾರ್‌ಸ್ಪೋರ್ಟ್)
- 2002: ಫಾರ್ಮ್ಯುಲಾ ನಿಸ್ಸಾನ್ ವಿಶ್ವ ಸರಣಿ (ಟೆಲಿಫೋನಿಕಾ ವಿಶ್ವ ಸರಣಿ), 9ನೇ (ಟಾಟಾ ಆರ್‌ಸಿ ಮೋಟಾರ್‌ಸ್ಪೋರ್ಟ್)
- 2001: ಫಾರ್ಮ್ಯುಲಾ ನಿಪ್ಪೋನ್, 14ನೇ (ಟೀಮ್ ಇಂಪುಲ್)
- 2000: ಬ್ರಿಟಿಷ್ ಫಾರ್ಮ್ಯುಲಾ 3, 4ನೇ (ಸ್ಟೀವರ್ಟ್)
- 1999: ಬ್ರಿಟಿಷ್ ಫಾರ್ಮ್ಯುಲಾ 3, 6ನೇ (ಕಾರ್ಲಿನ್ ಮೋಟಾರ್‌ಸ್ಪೋರ್ಟ್)
- 1998: ಬ್ರಿಟಿಷ್ ಫಾರ್ಮ್ಯುಲಾ 3, 12ನೇ (ಕಾರ್ಲಿನ್ ಮೋಟಾರ್‌ಸ್ಪೋರ್ಟ್)
- 1997: ಬ್ರಿಟಿಷ್ ಫಾರ್ಮ್ಯುಲಾ ವಾಕ್ಸ್‌ಹಾಲ್, 8ನೇ
- 1996: ಫಾರ್ಮ್ಯುಲಾ ಏಷ್ಯಾ, ಚಾಂಪಿಯನ್
- 1995: ಫಾರ್ಮ್ಯುಲಾ ಏಷ್ಯಾ (4 ರೇಸ್‌ಗಳು)
- 1994: ಬ್ರಿಟಿಷ್ ಫಾರ್ಮ್ಯುಲಾ ಫೋರ್ಡ್ ವಿಂಟರ್ ಸರಣಿ, ಚಾಂಪಿಯನ್
- 1993: ಇಂಡಿಯನ್ ಫಾರ್ಮ್ಯುಲಾ ಮಾರುತಿ + ಬ್ರಿಟಿಷ್ ಫಾರ್ಮ್ಯುಲಾ ವಾಕ್ಸ್‌ಹಾಲ್ ಜೂನಿಯರ್
- 1992: ಇಎಲ್‌ಎಫ್ ವಿನ್‌ಫೀಲ್ಡ್ ರೇಸಿಂಗ್ ಸ್ಕೂಲ್, ಸರ್ಕ್ಯೂಟ್ ಪೌಲ್ ರಿಕಾರ್ಡ್, ಫಾರ್ಮ್ಯುಲಾ ರೆನಾಲ್ಟ್‌ಗಾಗಿ ಪಾದಾರ್ಪಣೆ ರೇಸ್ ಎಲ್ಫ್ ಸ್ಫರ್ಧೆಯನ್ನು ಫ್ರಾನ್ಸ್ ಗೆದ್ದುಕೊಂಡಿತು.
ಸಂಪೂರ್ಣ ಫಾರ್ಮ್ಯುಲಾ ಒನ್ ಫಲಿತಾಂಶಗಳು
[ಬದಲಾಯಿಸಿ](ಕೀ)
ವರ್ಷ | ಸ್ಪರ್ಧಾಳು | ಚಾಸಿ | ಇಂಜಿನ್ | 1 | 2 | 3 | 4 | 5 | 6 | 7 | 8 | 9 | 10 | 11 | ೧೨ | 13 | 14 | 15 | 16 | 17 | 18 | 19 | ಡಬ್ಲ್ಯೂಡಿಸಿ | ಅಂಕಗಳು |
---|---|---|---|---|---|---|---|---|---|---|---|---|---|---|---|---|---|---|---|---|---|---|---|---|
2005 | ಜೋರ್ಡಾನ್ ಗ್ರಾಂಡ್ ಪ್ರಿಕ್ಸ್ | ಜೋರ್ಡಾನ್ ಇಜೆ15 | ಟೊಯೋಟಾ ವಿ10 | AUS 15 |
MAL 11 |
BHR ನಿವೃತ್ತ |
SMR 12 |
ESP 13 |
MON ನಿವೃತ್ತ |
EUR 16 |
CAN ನಿವೃತ್ತ |
USA ೪ |
FRA 15 |
GBR ನಿವೃತ್ತ |
GER 16 |
HUN ೧೨ |
TUR 14 |
ITA ೨೦ |
18ನೇ | 5 | ||||
ಜೋರ್ಡಾನ್ ಇಜೆ15ಬಿ | BEL 11 |
BRA 15 |
JPN 15 |
CHN ನಿವೃತ್ತ |
ಸಂಪೂರ್ಣ ಎ1 ಗ್ರಾಂಡ್ ಪ್ರಿಕ್ಸ್ ಫಲಿತಾಂಶಗಳು
[ಬದಲಾಯಿಸಿ](ಕೀ) (ದಪ್ಪಕ್ಷರ ದಲ್ಲಿರುವ ರೇಸ್‌ಗಳು ಪೋಲ್ ಸ್ಥಿತಿಯನ್ನು ಸೂಚಿಸುತ್ತದೆ) (ಇಟಾಲಿಕ್ಸ್ ನಲ್ಲಿರುವ ರೇಸ್‌ಗಳು ಅತೀವೇಗದ ಲ್ಯಾಪ್ ಅನ್ನು ಸೂಚಿಸುತ್ತದೆ)
ವರ್ಷ | ಸ್ಪರ್ಧಾಳು | 1 | 2 | 3 | ೪ | 5 | 6 | 7 | 8 | 9 | 10 | 11 | ೧೨ | 13 | 14 | 15 | 16 | 17 | 18 | ೧೯ | ೨೦ | 21 | 22 | ಡಿಸಿ | ಅಂಕಗಳು |
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
2006–07 | ಭಾರತ | NED SPR |
NED FEA |
CZE SPR |
CZE FEA |
CHN SPR |
CHN FEA |
MYS SPR |
MYS FEA |
IDN SPR |
IDN FEA |
NZL SPR 10 |
NZL FEA 7 |
AUS SPR |
AUS FEA |
RSA SPR 15 |
RSA FEA 9 |
MEX SPR 11 |
MEX FEA 18 |
CHN SPR 7 |
CHN FEA 17 |
GBR SPR 7 |
GBR SPR ೪ |
16ನೆಯ | 13 |
2007–08 | NED SPR 10 |
NED FEA ನಿವೃತ್ತ |
CZE SPR 21 |
CZE FEA 9 |
MYS SPR 11 |
MYS FEA 6 |
CHN SPR 7 |
CHN FEA 1 |
NZL SPR 10 |
NZL FEA ನಿವೃತ್ತ |
AUS SPR 11 |
AUS FEA 11 |
RSA SPR |
RSA FEA |
MEX SPR 13 |
MEX FEA 9 |
CHN SPR 5 |
CHN FEA 7 |
GBR SPR 5 |
GBR SPR 1 |
10ನೆಯ | 61 | |||
2008–09 | NED SPR |
NED FEA |
CHN SPR 10 |
CHN FEA 10 |
MYS SPR ನಿವೃತ್ತ |
MYS FEA ನಿವೃತ್ತ |
NZL SPR 9 |
NZL FEA 7 |
RSA SPR 6 |
RSA FEA ೧೨ |
POR SPR 6 |
POR FEA 11 |
GBR SPR 2 |
GBR SPR ನಿವೃತ್ತ |
12ನೆಯ | 19 |
ಸೂಪರ್ ಲೀಗ್ ಫಾರ್ಮುಲಾ
[ಬದಲಾಯಿಸಿ](ಕೀ) (ದಪ್ಪಕ್ಷರ ದಲ್ಲಿರುವ ರೇಸ್‌ಗಳು ಪೋಲ್ ಸ್ಥಿತಿಯನ್ನು ಸೂಚಿಸುತ್ತದೆ) (ಇಟಾಲಿಕ್ಸ್ ನಲ್ಲಿರುವ ರೇಸ್‌ಗಳು ಅತಿ ವೇಗದ ಲ್ಯಾಪ್ ಅನ್ನು ಸೂಚಿಸುತ್ತದೆ)
ವರ್ಷ | ತಂಡ | ಆಪರೇಟರ್ | 1 | 2 | 3 | ೪ | 5 | 6 | 7 | 8 | 9 | 10 | 11 | ೧೨ | ಸ್ಥಾನಮಾನ | ಅಂಕಗಳು | ||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
2010 | ಪಿಎಸ್‌ವಿ ಎಂದೋವೆನ್ | ರೇಸಿಂಗ್ ಫಾರ್ ಹಾಲೆಂಡ್ | SIL |
ASS |
MAG |
JAR |
NÜR |
ZOL |
BRH |
ADR |
POR |
LOS |
TBA |
TBA |
18ನೆಯ* | 42* | ||||||||||||||||||||||||
12 | 15 | X | 13 | 9 | X |
ಚಿತ್ರಸಂಪುಟ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Narain Karthikeyan biography". Narainracing.com. 2007-11-16. Archived from the original on 2007-10-12.
- ↑ [೧] Archived 2011-04-20 ವೇಬ್ಯಾಕ್ ಮೆಷಿನ್ ನಲ್ಲಿ. narainracing.com, ವೃತ್ತಿಜೀವನ ಮುಖ್ಯಾಂಶಗಳು
- ↑ "Williams Confirms Narain Karthikeyan". NewsOnF1.com. 2006-01-27. Retrieved 2006-05-04.
- ↑ ""Williams retain Karthikeyan for 2007"". 2006-09-28. Archived from the original on 2019-08-21. Retrieved 2006-09-28.
{{cite news}}
: Cite has empty unknown parameter:|coauthors=
(help) - ↑ "Karthikeyan 'Blown away' by F1 contrast". F1racing.net. 2006-12-12. Retrieved 2006-10-24.
- ↑ Noble, Jonathan (2010-03-04). "Chandhok announced as HRT driver". autosport.com. Haymarket Publications. Retrieved 2010-03-04.
- ↑ "With change of heart, Narain says yes to A-1". Hindustan Times.com. 2007-01-16. Archived from the original on 2007-09-30. Retrieved 2007-01-17.
- ↑ "ಆರ್ಕೈವ್ ನಕಲು". Archived from the original on 2012-08-29. Retrieved 2010-12-15.
- ↑ "ಆರ್ಕೈವ್ ನಕಲು". Archived from the original on 2009-10-09. Retrieved 2021-08-10.
- ↑ "ಆರ್ಕೈವ್ ನಕಲು". Archived from the original on 2008-10-09. Retrieved 2021-08-10.
- ↑ http://f1.gpupdate.net/en/news/2009/03/04/karthikeyan-invited-to-kolles-le-mans-test/
- ↑ "ಆರ್ಕೈವ್ ನಕಲು". Archived from the original on 2009-09-17. Retrieved 2010-12-15.
- ↑ "ಆರ್ಕೈವ್ ನಕಲು". Archived from the original on 2012-01-27. Retrieved 2010-12-15.
- ↑ "ಆರ್ಕೈವ್ ನಕಲು". Archived from the original on 2011-05-26. Retrieved 2010-12-15.
- ↑ http://www.f1technical.net/news/12640
- "ಇಂಡಿಯನ್ ಏಸ್ ಕಾರ್ತಿಕೇಯನ್ ಔಟ್ ನೆಕ್ಸ್ಟ್ ಸೀಸನ್". (ನವೆಂಬರ್ 10, 2005). ನ್ಯೂ ಸ್ಟ್ರೇಟ್ಸ್ ಟೈಮ್ಸ್ , ಪು. 42.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ನರೇನ್ ಕಾರ್ತಿಕೇಯನ್ ಅವರಿಗಾಗಿನ ಅಧಿಕೃತ ವೆಬ್ಸೈಟ್ Archived 2021-01-26 ವೇಬ್ಯಾಕ್ ಮೆಷಿನ್ ನಲ್ಲಿ.
- ಜುಹೈನಲ್ಲಿ ಕಾರ್ತಿಕೇಯನ್ ಅವರು ಎ1ಜಿಪಿ ಜಯಗಳಿಸಿದರು Archived 2012-08-29 ವೇಬ್ಯಾಕ್ ಮೆಷಿನ್ ನಲ್ಲಿ.
- ನರೇನ್ ಕಾರ್ತಿಕೇಯನ್ ಬಗ್ಗೆ ಇತ್ತೀಚಿನ ಸುದ್ದಿ ನವೀಕರಣಗಳು Archived 2007-10-29 ವೇಬ್ಯಾಕ್ ಮೆಷಿನ್ ನಲ್ಲಿ.
- ನರೇನ್ ಕಾರ್ತಿಕೇಯನ್ ವ್ಯಕ್ತಿ ಪರಿಚಯ ಮತ್ತು ಅಂಕಿಅಂಶಗಳು Archived 2006-03-28 ವೇಬ್ಯಾಕ್ ಮೆಷಿನ್ ನಲ್ಲಿ.
- mad4f1.com ನಲ್ಲಿ ನರೇನ್ ಕಾರ್ತಿಕೇಯನ್ ಅವರ ವ್ಯಕ್ತಿ ಪರಿಚಯ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.
- ವೃತ್ತಿಜೀವನ ವಿವರಗಳು F1 ಗೂ ಮುನ್ನ ಮತ್ತು F1 ವೃತ್ತಿಜೀವನ
- ಸ್ಪೀಡ್: ಎನ್ಎಎಸ್ಸಿಎಆರ್ ಚಾಲಕ ನರೇನ್ ಕಾರ್ತಿಕೇಯನ್ ಅವರೊಂದಿಗೆ ರೇಸ್‌ಗಳಲ್ಲಿ ಒಂದು ದಿನ (ಇಂಡಿಯಾ ಕರೆಂಟ್ಸ್ ಮ್ಯಾಗಜೀನ್ನಲ್ಲಿ ರಂಜಿತ್ ಸೌರಿ ಅವರಿಂದ ವೃತ್ತಿ ಪರಿಚಯ)
- ನರೇನ್ ಕಾರ್ತಿಕೇಯನ್ ಬಗ್ಗೆ ಸ್ಪೋರ್ಟ್ಸ್ ಇಂಡಿಯಾ ಪುಟ Archived 2007-10-27 ವೇಬ್ಯಾಕ್ ಮೆಷಿನ್ ನಲ್ಲಿ.
- Uberdesi.com, ನರೇನ್ ಕಾರ್ತಿಕೇಯನ್ ಅವರನ್ನು ಅನುಸರಿಸುವ ಬ್ಲಾಗ್
- ನರೇನ್ ಕಾರ್ತಿಕೇಯನ್ ಬಗ್ಗೆ ಟಿಓಐ
- ಕಾರ್ತಿಕೇಯನ್ಗೆ ಗಾಯ
- ನರೇನ್ ಕಾರ್ತಿಕೇಯನ್ ಅವರಿಗೆ ೨೦೧೦ ರ ಪದ್ಮಶ್ರೀ ಪದವಿಯ ಗೌರವ Archived 2010-12-31 ವೇಬ್ಯಾಕ್ ಮೆಷಿನ್ ನಲ್ಲಿ.
- ಸ್ಪೈಸ್ ಎನರ್ಜಿ ಮತ್ತು ನರೇನ್ ಭಾರತಕ್ಕೆ ಮತ್ತೊಂದು F1 ತಂಡವನ್ನು ತರುವ ಸಂಭವ Archived 2008-07-03 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: empty unknown parameters
- Pages using infobox F1 driver with unknown parameters
- Articles with unsourced statements from August 2009
- Articles with invalid date parameter in template
- Commons link is on Wikidata
- Persondata templates without short description parameter
- 1977ರಲ್ಲಿ ಜನಿಸಿದವರು
- ಎ1 ಟೀಮ್ ಇಂಡಿಯಾ ಚಾಲಕರು
- ಬ್ರಿಟಿಷ್ ಫಾರ್ಮ್ಯುಲಾ ತ್ರೀ ಪಂದ್ಯಾವಳಿ ಚಾಲಕರು
- ಫಾರ್ಮ್ಯುಲಾ ಫೋರ್ಡ್ ಚಾಲಕರು
- ಫಾರ್ಮ್ಯುಲಾ ನಿಪ್ಪೋನ್ ಚಾಲಕರು
- ಇಂಡಿಯನ್ ಫಾರ್ಮ್ಯುಲಾ ಒನ್ ಚಾಲಕರು
- ಇಂಡಿಯನ್ ರೇಸ್ಕಾರ್ ಚಾಲಕರು
- ಬದುಕಿರುವ ವ್ಯಕ್ತಿಗಳು
- ಎನ್ಎಎಸ್ಸಿಎಆರ್ ಚಾಲಕರು
- ತಮಿಳು ಕ್ರೀಡಾಪಟುಗಳು
- ಲೇ ಮ್ಯಾನ್ಸ್ ಸಿರೀಸ್ ಚಾಲಕರು
- ಸೂಪರ್‌ಲೀಗ್ ಫಾರ್ಮ್ಯುಲಾ ಚಾಲಕರು
- ಭಾರತೀಯ ಹಿಂದೂಗಳು
- ಕೊಯಮತ್ತೂರಿನ ಜನರು
- ಕ್ರೀಡೆ
- ಕ್ರೀಡಾಪಟುಗಳು