ವಿಷಯಕ್ಕೆ ಹೋಗು

ಚಿನುವ ಅಚಿಬೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಚಿನುವ ಅಚಿಬೆ' (2008)

ಚಿನುವ ಅಚಿಬೆ (೧೯೩೦-೨೦೧೩) ನೈಜೀರಿಯ ದೇಶದ ಪ್ರಖ್ಯಾತ ಸಾಹಿತಿ. ಇವರು ಸಾಹಿತ್ಯದಲ್ಲಿ ಇಡೀ ಆಫ್ರಿಕ ಖಂಡವನ್ನೇ ಪ್ರತಿನಿಧಿಸುತ್ತಾರೆ. ಇವರ ಕೃತಿಗಳು ಮುಖ್ಯವಾಗಿ ಆಫ್ರಿಕ ದ ಜನಾಂಗಗಳ ಮೇಲೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಬೀರಿದ ಪರಿಣಾಮಗಳನ್ನು ವಿಶ್ಲೇಷಿಸುತ್ತವೆ. "ಥಿಂಗ್ಸ್ ಫಾಲ್ ಅಪಾರ್ಟ್"(೧೯೫೮)ಕೃತಿ ನೈಜೀರಿಯಆದಿವಾಸಿ ಜನಾಂಗ ದ ಜೀವನ ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಛಿದ್ರವಾಗುವ ಪರಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. "ಆರೋ ಆಫ್ ಗಾಡ್"(೧೯೬೪),"ನೋ ಲಾಂಗರ್ ಅಟ್ ಈಸ್"(೧೯೬೦), "ಎ ಮಾನ್ ಆಫ್ ದಿ ಪೀಪಲ್"(೧೯೬೬) ಮುಂತಾದವುಗಳು ಇವರ ಮುಖ್ಯ ಕೃತಿಗಳು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • [೧], ಚಿನುವ ಅಚಿಬೆ ಅವರೊಂದಿಗೆ ಯು.ಆರ್. ಅನಂತಮೂರ್ತಿಯವರ ಸಂದರ್ಶನ