ಚಾರ್ಲ್ಸ್ ಡಿಕನ್ಸ್
Charles Dickens | |
---|---|
ಜನನ | Charles John Huffam Dickens ೭ ಫೆಬ್ರವರಿ ೧೮೧೨ Landport, Portsmouth, England |
ಮರಣ | 9 June 1870 Gad's Hill Place, Higham, Kent, England | (aged 58)
ಅಂತ್ಯ ಸಂಸ್ಕಾರ ಸ್ಥಳ | Poets' Corner, Westminster Abbey |
ವೃತ್ತಿ | Novelist |
ಪ್ರಮುಖ ಕೆಲಸ(ಗಳು) | Sketches by Boz, The Old Curiosity Shop, Oliver Twist, Nicholas Nickleby, Barnaby Rudge, A Christmas Carol, Martin Chuzzlewit, A Tale of Two Cities, David Copperfield, Great Expectations, Bleak House, Little Dorrit, Hard Times, Our Mutual Friend, The Pickwick Papers |
ಸಹಿ |
ಚಾರ್ಲ್ಸ್ ಜಾನ್ ಹಫಾಮ್ ಡಿಕನ್ಸ್ , FRSA (pronounced /ˈtʃɑrlz ˈdɪkɪnz/; 7 ಫೆಬ್ರವರಿ 1812–9 ಜೂನ್ 1870), ಕಾವ್ಯನಾಮ "ಬೋಝ್", ವಿಕ್ಟೋರಿಯಾ ಯುಗದ ಅತ್ಯಂತ ಜನಪ್ರಿಯ ಇಂಗ್ಲಿಷ್ ಕಾದಂಬರಿಕಾರನಾಗಿದ್ದ ಮತ್ತು ಸಾರ್ವಕಾಲಿಕವಾಗಿರುವ ಅತ್ಯಂತ ಜನಪ್ರಿಯರ ಪೈಕಿ ಒಬ್ಬನಾಗಿದ್ದ. ಸಾಮಾಜಿಕ ಸುಧಾರಣೆಯ ವಸ್ತುವು ಆತನ ಕೃತಿಯಾದ್ಯಂತ ಪ್ರವಹಿಸುವುದರೊಂದಿಗೆ, ಸಾಹಿತ್ಯದ ಅತ್ಯಂತ ಸಾಂಪ್ರದಾಯಿಕ ಮಾದರಿ ಪಾತ್ರಗಳ ಪೈಕಿ ಕೆಲವೊಂದನ್ನು ಆತ ಸೃಷ್ಟಿಸಿದ. ಆತನ ಕಾದಂಬರಿಗಳು ಹಾಗೂ ಕಿರುಗತೆಗಳ ಜನಪ್ರಿಯತೆ ಎಷ್ಟಿದೆಯೆಂದರೆ, ಅವುಗಳ ಮುದ್ರಿತಪ್ರತಿ ಅಲಭ್ಯವಾಗಿದೆ ಎಂಬ ಪರಿಸ್ಥಿತಿ ಎಂದಿಗೂ ನಿರ್ಮಾಣಗೊಂಡಿದ್ದೇ ಇಲ್ಲ.[೧][೨]
ಆತನ ಕೃತಿಗಳಲ್ಲಿ ಬಹುಪಾಲು, ಆ ಸಮಯದಲ್ಲಿ ಕಾದಂಬರಿಯನ್ನು ಪ್ರಕಟಿಸುವುದರ ಒಂದು ಜನಪ್ರಿಯ ಮಾರ್ಗವಾಗಿದ್ದ, ಧಾರಾವಾಹಿಯಾಗಿರುವ ಸ್ವರೂಪದಲ್ಲಿ ನಿಯತಕಾಲಿಕಗಳು ಹಾಗೂ ಸಂಕೀರ್ಣ ಪತ್ರಿಕೆಗಳಲ್ಲಿ ಮೊದಲು ಕಾಣಿಸಿಕೊಂಡವು. ಧಾರಾವಾಹಿಯ ಪ್ರಕಟಣೆಯು ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ಸಂಪೂರ್ಣ ಕಾದಂಬರಿಯನ್ನು ಬರೆದು ಮುಗಿಸುವುದು ಇತರ ಲೇಖಕರ ಪರಿಪಾಠವಾಗಿದ್ದರೆ, ಡಿಕನ್ಸ್ ಅವನ್ನು ಭಾಗ ಭಾಗಗಳಾಗಿ, ಅವು ಯಾವ ಕ್ರಮದಲ್ಲಿ ಕಾಣಿಸಿಕೊಳ್ಳಬೇಕೋ ಹಾಗೆ ಬರೆಯುತ್ತಿದ್ದ. ಈ ಪರಿಪಾಠದಿಂದಾಗಿ ಆತನ ಕಥೆಗಳಿಗೆ ಒಂದು ನಿರ್ದಿಷ್ಟ ಸ್ವರೂಪದ ಲಯ ಸಿಕ್ಕಂತಾಗಿ ಒಂದು "ಕುತೂಹಲ ಘಟ್ಟ"ದಿಂದ ಮತ್ತೊಂದಕ್ಕೆ ಸಾಗುವಾಗ ಕೊಂಚ ವಿರಾಮವನ್ನು ನೀಡುತ್ತಿತ್ತು. ಇದರಿಂದಾಗಿ ಮುಂದಿನ ಕಂತು ಯಾವಾಗ ಬರುವುದೋ ಎಂದು ಓದುಗರು ತುದಿಗಾಲಲ್ಲಿ ನಿಲ್ಲುವಂತಾಗುತ್ತಿತ್ತು.[೩]
ಜಾರ್ಜ್ ಗಿಸ್ಸಿಂಗ್ ಮತ್ತು G. K. ಚೆಸ್ಟರ್‌ಟನ್‌ನಂಥ ಲೇಖಕರಿಂದ ಆತನ ಕೆಲಸವು ಹೊಗಳಿಕೆಗೆ ಪಾತ್ರವಾಗಿದೆ. ಕಾದಂಬರಿಯ ಗದ್ಯದ ನೈಪುಣ್ಯ, ಮತ್ತು ಅನನ್ಯ ವ್ಯಕ್ತಿತ್ವಗಳಿಂದ ಸಮೃದ್ಧವಾಗಿದ್ದ ಅದರ ವೇದಿಕೆ ಇತ್ಯಾದಿಗಳಿಂದಾಗಿ ಈ ಹೊಗಳಿಕೆಯು ಆತನಿಗೆ ದಕ್ಕುತ್ತಿತ್ತು. ಆದರೆ ಅವನ ಕಾದಂಬರಿಗಳ ಇದೇ ಗುಣಲಕ್ಷಣಗಳು, ಡಿಕನ್ಸ್‌ನನ್ನು ಆತನ ಅತಿಭಾವುಕತೆ ಮತ್ತು ಅಸಂಭಾವ್ಯತೆಗಾಗಿ ಹೆನ್ರಿ ಜೇಮ್ಸ್ ಮತ್ತು ವರ್ಜೀನಿಯಾ ವೂಲ್ಫ್‌ನಂಥ ಇತರರು ಟೀಕಿಸುವಂತೆ ಮಾಡಿವೆ.[೪]
ಜೀವನ
[ಬದಲಾಯಿಸಿ]ಆರಂಭಿಕ ವರ್ಷಗಳು
[ಬದಲಾಯಿಸಿ]ಆತನ ಆರಂಭಿಕ ವರ್ಷಗಳು ಒಂದು ಸಹಜ ಸುಂದರ ಅವಧಿಯಾಗಿತ್ತು ಎಂದು ತೋರುತ್ತದೆ. ಆದರೂ ಆತ ಆಗ ತನ್ನ ಕುರಿತಾಗಿ ಓರ್ವ "ಅತ್ಯಂತ ಚಿಕ್ಕ ಮತ್ತು ಹೆಚ್ಚು-ನಿರ್ದಿಷ್ಟವಾಗಿ-ಕಾಳಜಿಯನ್ನು-ತೆಗೆದುಕೊಳ್ಳದ ಹುಡುಗನಂತೆ" ಭಾವಿಸಿದ್ದ.[೫] ಆತ ಹೊರಾಂಗಣದಲ್ಲೇ ಕಾಲವನ್ನು ಕಳೆದನಾದರೂ, ಅಪಾರ ಆಸಕ್ತಿಯಿಂದ ಓದುವಿಕೆಯನ್ನೂ ಕೈಗೊಳ್ಳುತ್ತಿದ್ದ. ಟೋಬಿಯಾಸ್ ಸ್ಮೊಲೆಟ್ ಮತ್ತು ಹೆನ್ರಿ ಫೀಲ್ಡಿಂಗ್ ಬರೆದಿರುವ ತುಂಟರ ಕೃತ್ಯಗಳನ್ನು ಕುರಿತ ಕಾದಂಬರಿಗಳ ಕಡೆಗೆ ಅವನಿಗೆ ವಿಶೇಷವಾದ ಆಸಕ್ತಿಯಿತ್ತು. ತನ್ನ ಜೀವನದ ನಂತರದ ದಿನಗಳಲ್ಲಿ ತನ್ನ ಬಾಲ್ಯದ ಹೃದಯಸ್ಪರ್ಶಿಯಾದ ನೆನಪುಗಳ ಕುರಿತು, ಮತ್ತು ತನ್ನ ಕಾದಂಬರಿಗಳಿಗೆ ಜೀವ ತುಂಬಲು ಆತ ಬಳಸುತ್ತಿದ್ದ ಜನರು ಮತ್ತು ಘಟನೆಗಳ ಆತನ ಸನಿಹದ ಛಾಯಾಚಿತ್ರೀಯ ಸ್ಮೃತಿಯ ಕುರಿತು ಮಾತನಾಡಿದ. ನೌಕಾ ವೇತನದ ಕಚೇರಿಯಲ್ಲಿನ ಜಾನ್ ಡಿಕನ್ಸ್‌ನ ಹೇಳಿಕೊಳ್ಳುವಂತಿಲ್ಲದ ಏಳಿಗೆಯು ಚಾಥಮ್‌ನಲ್ಲಿನ ವಿಲಿಯಂ ಗಿಲ್ಸ್‌ನ ಶಾಲೆಯಲ್ಲಿ ಕಿರಿಯ ಚಾರ್ಲ್ಸ್‌ಗೆ ಕೆಲವೇ ವರ್ಷಗಳ ಖಾಸಗಿ ಶಿಕ್ಷಣವನ್ನು ಕೊಡಿಸಬಲ್ಲಷ್ಟು ಸಾಮರ್ಥ್ಯವನ್ನು ಹೊಂದಿತ್ತು.[೬] ತನ್ನ ಸಾಮಾಜಿಕ ಸ್ಥಾನಮಾನವನ್ನು ಬೆಳೆಸುವಲ್ಲಿ ಮತ್ತು ಇಲ್ಲವಾದರೆ ಉಳಿಸಿಕೊಂಡು ಹೋಗುವಲ್ಲಿ, ತನ್ನ ಗಳಿಕೆಗಿಂತ ಆಚೆಗಿನ ಮಟ್ಟಕ್ಕೆ ಜಾನ್ ಡಿಕನ್ಸ್ ಹಣವನ್ನು ಖರ್ಚುಮಾಡಿದ ನಂತರ, ಮತ್ತು ಮಾರ್ಷಲ್ ಕಾರಾಗೃಹದ ಸಾಲಗಾರನ ಸೆರೆಮನೆಯಲ್ಲಿ ಸೆರೆಯಾಳಾಗಿ ಇರಿಸಲ್ಪಟ್ಟ ನಂತರ ಈ ಅವಧಿಯು ಒಂದು ಹಠಾತ್ತಾದ ಅಂತ್ಯವನ್ನು ಕಂಡಿತು. ಇದಾದ ಕೆಲವೇ ದಿನಗಳ ನಂತರ, ಚಾರ್ಲ್ಸ್‌ನನ್ನು ಹೊರತುಪಡಿಸಿದ ಅತನ ಕುಟುಂಬದ ಉಳಿದ ಸದಸ್ಯರು ಮಾರ್ಷಲ್ ಕಾರಾಗೃಹದ (ಇದು ಲಂಡನ್‌ನಲ್ಲಿನ ಥೇಮ್ಸ್ ನದಿಯ ದಕ್ಷಿಣ ದಡದ ಮೇಲಿದೆ ) ಮನೆಯಲ್ಲಿ ಅವನನ್ನು ಸೇರಿಕೊಂಡರು. ಕ್ಯಾಮ್ಡನ್ ಪಟ್ಟಣದಲ್ಲಿನ ಎಲಿಜಬೆತ್ ರಾಯ್‌ಲ್ಯಾನ್ಸ್ ಎಂಬ ಕುಟುಂಬದ ಸ್ನೇಹಿತರ ಮನೆಯಲ್ಲಿ ಚಾರ್ಲ್ಸ್ ನೆಲೆಯನ್ನು ಕಂಡುಕೊಂಡ.[೭] ಭಾನುವಾರಗಳು ಬಂತೆಂದರೆ ಅದೊಂದು ವಿನೋದ ಕೂಟವಾಗಿಬಿಡುತ್ತಿತ್ತು. ರಾಯಲ್ ಅಕಾಡೆಮಿ ಆಫ್ ಮ್ಯೂಸಿಕ್‌ನಿಂದ ಹೊರಬರಲು ಅವಕಾಶ ಪಡೆದಿದ್ದ ತನ್ನ ಸೋದರಿ ಫ್ಯಾನಿಯೊಂದಿಗೆ ಮಾರ್ಷಲ್ ಕಾರಾಗೃಹದಲ್ಲಿ ತನ್ನ ದಿನವನ್ನು ಕಳೆಯುವ ಅವಕಾಶ ಸಿಕ್ಕಿದಾಗ ಇದು ಕಂಡುಬರುತ್ತಿತ್ತು.[೮] (ನಂತರದಲ್ಲಿ ಡಿಕನ್ಸ್ ಈ ಸೆರೆಮನೆಯನ್ನು ಲಿಟ್ಲ್ ಡೋರಿಟ್ ನಲ್ಲಿನ ಒಂದು ಸಂದರ್ಭವಾಗಿ ಬಳಸಿದ್ದಾನೆ.)
ತನ್ನ ತಂದೆಯ ಬಂಧನವಾಗುವುದಕ್ಕೆ ಸ್ವಲ್ಪವೇ ಮುಂಚಿತವಾಗಿ, 12-ವರ್ಷ-ವಯಸ್ಸಿನ ಡಿಕನ್ಸ್ ಕೆಲಸ ಮಾಡುವುದನ್ನು ಶುರುಮಾಡಿದ್ದ. ಈಗಿನ ಚಾರಿಂಗ್ ಕ್ರಾಸ್ ರೇಲ್ವೆ ಸ್ಟೇಷನ್ ಸಮೀಪವಿರುವ ಹಂಗರ್‌ಫೋರ್ಡ್ ಸ್ಟೇರ್ಸ್‌ನಲ್ಲಿರುವ ವಾರೆನ್‌ನ ಕಪ್ಪು ಪಾಲೀಷು ಮಾಡುವ ಕೋಠಿಯಲ್ಲಿ ಹತ್ತು-ಗಂಟೆಗಳ ದುಡಿತ ಮಾಡುವುದು ಅವನ ಪಾಲಿನ ಕೆಲಸವಾಗಿತ್ತು. ಷೂ ಪಾಲಿಷ್‌ನ ಜಾಡಿಗಳ ಮೇಲೆ ಹೆಸರಿನ ಪಟ್ಟಿಗಳನ್ನು ಅಂಟಿಸುವುದಕ್ಕಾಗಿ ಆತ ವಾರವೊಂದಕ್ಕೆ ಆರು ಷಿಲಿಂಗ್‌ಗಳನ್ನು ಸಂಪಾದಿಸುತ್ತಿದ್ದ. ಶ್ರೀಮತಿ ರಾಯ್‌ಲ್ಯಾನ್ಸ್ ಜೊತೆಯಲ್ಲಿನ ತನ್ನ ಹಂಗಾಮಿ ವಸತಿಗಾಗಿ ಈ ಹಣವು ಪಾವತಿಯಾಗುತ್ತಿತ್ತು ಮತ್ತು ತನ್ನ ಕುಟುಂಬಕ್ಕೆ ಆಧಾರವಾಗಿರಲು ನೆರವಾಗುತ್ತಿತ್ತು. ಡಿಕ್ನಸ್ ಈ ಕುರಿತು ನಂತರದಲ್ಲಿ ಬರೆಯುತ್ತಾ, ಶ್ರೀಮತಿ ರಾಯ್‌ಲ್ಯಾನ್ಸ್ "ಬಡತನಕ್ಕಿಳಿದಿದ್ದ ಓರ್ವ ವಯಸ್ಸಾದ ಮಹಿಳೆಯಾಗಿದ್ದು, ನಮ್ಮ ಕುಟುಂಬಕ್ಕೆ ಬಹಳ ದಿನಗಳಿಂದ ಪರಿಚಿತಳಾಗಿದ್ದಳು" ಎಂದು ತಿಳಿಸಿದ್ದಾನೆ. ಅಷ್ಟೇ ಅಲ್ಲ, ಡೊಂಬೆ & ಸನ್ ಕೃತಿಯಲ್ಲಿ "ಒಂದಷ್ಟು ಮಾರ್ಪಾಡುಗಳು ಹಾಗೂ ಸಿಂಗರಿಸುವಿಕೆಗಳೊಂದಿಗೆ" "ಶ್ರೀಮತಿ ಪಿಪ್‌ಚಿನ್" ಆಗಿ ರೂಪಿಸುವ ಮೂಲಕ ಆತ ಅಂತಿಮವಾಗಿ ಅವಳನ್ನು ಅಮರಗೊಳಿಸಿದ್ದಾನೆ.
ನಂತರದಲ್ಲಿ, ದಿವಾಳಿಗೆ ಸಂಬಂಧಿಸಿದ-ನ್ಯಾಯಾಲಯದ ಮಧ್ಯವರ್ತಿಯೊಬ್ಬನ ಮನೆಯಲ್ಲಿದ್ದ "ಹಿಂಭಾಗದ-ಮೇಲಟ್ಟದ ಕೋಣೆಯೊಂದರಲ್ಲಿ" ಅವನಿಗಾಗಿ ವಸತಿ ಸೌಕರ್ಯವನ್ನು ಹುಡುಕಲಾಯಿತು. ಈ ಮಧ್ಯವರ್ತಿಯು ಲಂಡನ್ನಿನ ಸೌತ್‌ವಾರ್ಕ್ ಮೊಹಲ್ಲದಲ್ಲಿನ ಲ್ಯಾಂಟ್ ಸ್ಟ್ರೀಟ್‌ನಲ್ಲಿ ವಾಸವಾಗಿದ್ದ. ತುಂಬಾ ದಪ್ಪಗಿದ್ದ ಆತ, ಉತ್ತಮ-ಸ್ವಭಾವದ, ದಯಾಪರನಾದ ವಯಸ್ಸಾದ ಸಂಭಾವಿತ ವ್ಯಕ್ತಿಯಾಗಿದ. ಅವನ ಹೆಂಡತಿ ತುಂಬಾ ಶಾಂತ ಸ್ವಭಾವದವಳಾಗಿದ್ದಳು. ಅವನಿಗೊಬ್ಬ ಬೆಳೆದ ಮುಗ್ಧ ಮಗನಿದ್ದ. ಈ ಮೂವರೂ ದಿ ಓಲ್ಡ್ ಕ್ಯೂರಿಯಾಸಿಟಿ ಷಾಪ್ ಕೃತಿಯಲ್ಲಿನ ಗಾರ್ಲ್ಯಾಂಡ್ ಕುಟುಂಬಕ್ಕೆ ಡಿಕನ್ಸ್‌ಗೆ ಸ್ಫೂರ್ತಿಯಾಗಿದ್ದರು.[೯] ಕಾರ್ಖಾನೆಯ ನೌಕರರ (ವಿಶೇಷವಾಗಿ ಮಕ್ಕಳ) ಬಹುತೇಕ ಅನಿಯಂತ್ರಿತವಾದ, ಶ್ರಮಸಾಧ್ಯವಾದ ಮತ್ತು ಅನೇಕ ವೇಳೆ ಕ್ರೂರವಾಗಿದ್ದ ಕೆಲಸದ ಪರಿಸ್ಥಿತಿಗಳು ಡಿಕನ್ಸ್ ಮೇಲೆ ಒಂದು ಆಳವಾದ ಮುದ್ರೆಯನ್ನು ಒತ್ತಿದವು. ಆತನ ಅನುಭವಗಳು ನಂತರದ ಕಾದಂಬರಿಗಳು ಹಾಗೂ ಪ್ರಬಂಧಗಳ ಮೇಲೆ ಪ್ರಭಾವ ಬೀರಿದವು, ಮತ್ತು ಸಮಾಜೋ-ಆರ್ಥಿಕ ಮತ್ತು ಕಾರ್ಮಿಕ ಸ್ಥಿತಿಗತಿಗಳ ಸುಧಾರಣೆಯಲ್ಲಿನ ಅವನ ಆಸಕ್ತಿಗೆ ಬುನಾದಿಯಾಗಿದ್ದವು. ಸಮಾಜೋ-ಆರ್ಥಿಕ ಮತ್ತು ಕಾರ್ಮಿಕ ಸ್ಥಿತಿಗತಿಗಳ ಉಗ್ರತೆಗಳನ್ನು ಬಡವರು ಅನ್ಯಾಯವಾಗಿ ಹೊರಬೇಕಾಗಿಬಂದಿತ್ತು ಎಂಬುದು ಅವನ ನಂಬಿಕೆಯಾಗಿತ್ತು. [ಸೂಕ್ತ ಉಲ್ಲೇಖನ ಬೇಕು]
ಜಾನ್ ಫಾರ್ಸ್ಟರ್‌ಗೆ ಅವನು ಹೇಳಿದ ಮಾತುಗಳು (ದಿ ಲೈಫ್ ಆಫ್ ಚಾರ್ಲ್ಸ್ ಡಿಕನ್ಸ್ ಕೃತಿಯಿಂದ ಆಯ್ದದ್ದು) ಹೀಗಿವೆ:
ಕಪ್ಪು ಪಾಲೀಷು ಹಾಕುವಿಕೆಯ-ಕೋಠಿಯು ಹಂಗರ್ಫೋರ್ಡ್ ಸ್ಟೇರ್ಸ್‌ನಲ್ಲಿನ ಮಾರ್ಗದ ಎಡಬದಿಯಲ್ಲಿನ ಕೊನೆಯ ಮನೆಯಾಗಿತ್ತು. ಅದೊಂದು ಅಭದ್ರವಾಗಿದ್ದ, ಶಿಥಿಲವಾಗಿದ್ದ ಹಳೆಯ ಮನೆಯಾಗಿದ್ದು, ನದಿಗೆ ಅಂಟಿಕೊಂಡಂತಿತ್ತು, ಮತ್ತು ಅಕ್ಷರಶಃ ಇಲಿಗಳ ದಾಳಿಗೆ ಈಡಾಗಿತ್ತು. ಹಲಗೆ ಹೊದಿಸಲಾದ ಅದರ ಕೋಣೆಗಳು, ಮತ್ತು ಅದರ ಕೊಳತುಹೋದ ನೆಲಗಳು ಹಾಗೂ ಪಾವಟಿಗೆಗಳು, ಮತ್ತು ನೆಲಮಾಳಿಗೆಗಳಲ್ಲಿ ತುಂಬಿಕೊಂಡಿದ್ದ ವಯಸ್ಸಾದ ಬೂದುಬಣ್ಣದ ಇಲಿಗಳು, ಮತ್ತು ಎಲ್ಲ ಸಮಯದಲ್ಲೂ ಮೇಲಕ್ಕೆ ತಲುಪುತ್ತಿದ್ದ ಅವುಗಳ ಕೀಚಲುಧ್ವನಿ ಮತ್ತು ಕಾದಾಡುವಿಕೆಯ ಗದ್ದಲದ ಧ್ವನಿ, ಮತ್ತು ಆ ಸ್ಥಳದ ಕೊಳಕು ಮತ್ತು ಶಿಥಿಲತೆ, ನನ್ನ ಮುಂದೆ ಗೋಚರಿಸುವಂತೆ ಎದ್ದುನಿಂತು, ನಾನು ಮತ್ತೊಮ್ಮೆ ಅಲ್ಲಿರುವಂತೆ ಅನ್ನಿಸಿತು. ಎಣಿಕೆಯ-ಮನೆಯು ಮೊದಲ ಮಹಡಿಯಲ್ಲಿದ್ದು, ಕಲ್ಲಿದ್ದಲ-ನೌಕಾಗೃಹ ಹಾಗೂ ನದಿಯ ಮೇಲ್ಭಾಗದಲ್ಲಿ ಕಾಣಿಸುವಂತಿತ್ತು. ಅದರಲ್ಲೊಂದು ಏಕಾಂತಸ್ಥಾನವಿತ್ತು, ಅದರಲ್ಲಿ ನಾನು ಕುಳಿತು ಕೆಲಸ ಮಾಡುತ್ತಿದ್ದೆ. ಕಪ್ಪು ಪಾಲೀಷಿನ-ಪೇಸ್ಟ್‌ನ ಕುಡಿಕೆಗಳನ್ನು ಮುಚ್ಚುವುದು ನನ್ನ ಕೆಲಸವಾಗಿತ್ತು; ಮೊದಲು ತೈಲಕಾಗದದ ಒಂದು ತುಣುಕಿನೊಂದಿಗೆ, ಮತ್ತು ನಂತರ ನೀಲಿ ಕಾಗದದ ಒಂದು ತುಣುಕಿನೊಂದಿಗೆ; ಒಂದು ದಾರದೊಂದಿಗೆ ಅವುಗಳನ್ನು ಸುತ್ತಲೂ ಕಟ್ಟುವುದು ಮತ್ತು ಔಷಧದ ಅಂಗಡಿಯಿಂದ ತಂದ ಒಂದು ಮುಲಾಮಿನ ಕುಡಿಕೆಯಂತೆ ಅದು ಕಾಣುವವರೆಗೂ ಕಾಗದವನ್ನು ಹತ್ತಿರಕ್ಕೆ ಮತ್ತು ಅಚ್ಚುಕಟ್ಟಾಗಿ ಕ್ಲಿಪ್‌ನಿಂದ ಭದ್ರಪಡಿಸುವುದು ಈ ಕೆಲಸದಲ್ಲಿ ಸೇರಿದ್ದವು. ಈ ತೆರನಾದ ನಿಖರತೆಗೆ ಒಂದು ನಿರ್ದಿಷ್ಟ ಸಂಖ್ಯೆಯ ಕುಡಿಕೆಗಳು ಸಿದ್ಧಗೊಂಡಾಗ, ಮುದ್ರಣಗೊಂಡ ಪಟ್ಟಿಯನ್ನು ಪ್ರತಿಯೊಂದಕ್ಕೂ ಅಂಟಿಸುವುದು, ಮತ್ತು ನಂತರ ಮತ್ತಷ್ಟು ಕುಡಿಕೆಗಳಿಗೆ ಇದೇ ರೀತಿಯಲ್ಲಿ ಮಾಡಿಕೊಂಡು ಹೋಗುವುದು ನನ್ನ ಕೆಲಸವಾಗಿತ್ತು. ಇದೇ ಮಟ್ಟದ ಮುಜೂರಿಗಳನ್ನು ನೀಡುವ ಮೂಲಕ ಎರಡು ಅಥವಾ ಮೂವರು ಹುಡುಗರನ್ನು ಇದೇ ರೀತಿಯ ಕೆಲಸಕ್ಕಾಗಿ ಕೆಳ-ಪಾವಟಿಗೆಗಳಲ್ಲಿ ಇಟ್ಟುಕೊಳ್ಳಲಾಗಿತ್ತು. ಮೊದಲ ಸೋಮವಾರದ ಬೆಳಗ್ಗೆ ಅವರಲ್ಲೊಬ್ಬ ಮೇಲೆ ಬಂದ. ಅವನ ಎದೆಹೊದಿಕೆ (ಏಪ್ರನ್) ಹರಿದಿತ್ತು, ಕಾಗದದ ಟೋಪಿಯೊಂದನ್ನು ಅವನು ಧರಿಸಿದ್ದ. ದಾರವನ್ನು ಬಳಸುವ ಹಾಗೂ ಗಂಟುಕಟ್ಟುವ ಚಾತುರ್ಯವನ್ನು ನನಗೆ ತೋರಿಸುವುದು ಅವನ ಉದ್ದೇಶವಾಗಿತ್ತು. ಬಾಬ್ ಫ್ಯಾಗಿನ್ ಎಂಬುದು ಅವನ ಹೆಸರಾಗಿತ್ತು; ಮತ್ತು ಬಹಳ ದಿನಗಳ ನಂತರ, ಆಲಿವರ‍್ ಟ್ವಿಸ್ಟ್‌ನಲ್ಲಿ ಅವನನ್ನು ಹೆಸರು ಹಿಡಿದು ಕರೆಯುವ ಸ್ವಾತಂತ್ರವನ್ನು ನಾನು ತೆಗೆದುಕೊಂಡೆ. [೯]
ಮಾರ್ಷಲ್ ಕಾರಾಗೃಹದಲ್ಲಿನ ಕೇವಲ ಕೆಲವೇ ತಿಂಗಳ ನಂತರ, ತನ್ನ ತಂದೆಯ ಕಡೆಯ ಅಜ್ಜಿಯ ಮರಣದ ಸುದ್ದಿಯನ್ನು ಜಾನ್ ಡಿಕನ್ಸ್‌ಗೆ ತಿಳಿಸಲಾಯಿತು. ಎಲಿಜಬೆತ್ ಡಿಕನ್ಸ್ ಎಂಬ ಹೆಸರಿನ ಈ ಅಜ್ಜಿಯು ಜಾನ್ ಡಿಕನ್ಸ್‌ಗಾಗಿ ತನ್ನ ಉಯಿಲಿನಲ್ಲಿ 450£ ಮೊತ್ತದಷ್ಟು ಹಣವನ್ನು ಬಿಟ್ಟುಹೋಗಿದ್ದಳು. ಈ ಉಯಿಲು ಹಣದ ನಿರೀಕ್ಷೆಯ ಮೇಲೆ ಡಿಕನ್ಸ್ ಬಿಡುಗಡೆಗಾಗಿ ಮನವಿಯನ್ನು ಸಲ್ಲಿಸಿದ, ಮತ್ತು ಇದಕ್ಕೆ ಅನುಮೋದನೆ ಸಿಕ್ಕಿ ಆತ ಸೆರೆಮನೆಯಿಂದ ಬಿಡುಗಡೆಯಾದ. ದಿವಾಳಿ ಸಾಲಗಾರರ ಕಾಯಿದೆಯ ಅಡಿಯಲ್ಲಿ, ತನ್ನ ಸಾಲದಾರರಿಗೆ ಮಾಡಬೇಕಾದ ಪಾವತಿಗಳಿಗಾಗಿ ಡಿಕನ್ಸ್ ವ್ಯವಸ್ಥೆ ಮಾಡಿದ, ಮತ್ತು ಶ್ರೀಮತಿ ರಾಯ್‌ಲ್ಯಾನ್ಸ್‌ಳ ಮನೆಯನ್ನು ಸೇರಿಕೊಳ್ಳಲು ತನ್ನ ಕುಟುಂಬದೊಂದಿಗೆ ಆತ ಮಾರ್ಷಲ್ ಕಾರಾಗೃಹವನ್ನು ಬಿಟ್ಟ.
ಉತ್ತರ ಲಂಡನ್‌ನಲ್ಲಿನ ವೆಲಿಂಗ್ಟನ್ ಹೌಸ್ ಅಕಾಡೆಮಿಯನ್ನು ಅಂತಿಮವಾಗಿ ಡಿಕನ್ಸ್ ಸೇರಿಕೊಂಡನಾದರೂ, ಬೂಟಿಗೆ-ಕಪ್ಪು ಪಾಲೀಷು ಹಾಕುವಿಕೆಯ ಕಾರ್ಖಾನೆಯಿಂದ ಅವನ ತಾಯಿ ತಕ್ಷಣವೇ ಅವನನ್ನು ಬಿಡಿಸಲಿಲ್ಲ. 'ತಂದೆಯಾದವನು ಕುಟುಂಬದ ಆಡಳಿತವನ್ನು ನಡೆಸಬೇಕು, ತಾಯಿಯಾದವಳು ತನ್ನ ಸೂಕ್ತ ಕಾರ್ಯಕ್ಷೇತ್ರವನ್ನು ಮನೆಯೊಳಗಡೆ ಕಂಡುಕೊಳ್ಳಬೇಕು ಎಂಬ ಡಿಕನ್ಸ್‌ನ ನಿಶ್ಚಿತ ದೃಷ್ಟಿಕೋನವನ್ನು ದೃಢೀಕರಿಸಲು ಈ ಘಟನೆಯು ಹೆಚ್ಚು ಕೊಡುಗೆಯನ್ನು ನೀಡಿತು ಎನಿಸುತ್ತದೆ. "ನನ್ನನ್ನು ವಾಪಸ್ ಕಳಿಸಿದ್ದರ ಹಿಂದೆ ಇದ್ದ ನನ್ನ ತಾಯಿಯ ಸಹಾನುಭೂತಿಯ ಅಥವಾ ಪ್ರೀತಿಪೂರ್ವಕ ಭಾವನೆಯನ್ನು ನಂತರದಲ್ಲಿ ನಾನೆಂದಿಗೂ ಮರೆಯಲಿಲ್ಲ, ನಾನು ಎಂದಿಗೂ ಮರೆಯುವುದಿಲ್ಲ, ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂಬುದು ಅವನ ಅಂತರಾಳದ ಮಾತಾಗಿತ್ತು. ಕಪ್ಪು ಪಾಲೀಷು ಹಾಕುವಿಕೆಯ ಕಾರ್ಖಾನೆಗೆ ಚಾರ್ಲ್ಸ್‌ನ ಮರಳುವಿಕೆಯ ಕುರಿತಾದ ಕೋರಿಕೊಳ್ಳುವಿಕೆಯಲ್ಲಿನ ತನ್ನ ತಾಯಿಯ ವೈಫಲ್ಯವು (ಅವನ ದೃಷ್ಟಿಯಲ್ಲಿ), ನಿಸ್ಸಂದೇಹವಾಗಿ ಬೆಳೆದ ಮನುಷ್ಯನ ಬೇಡಿಕೆಯಲ್ಲಿನ ಒಂದು ಅಂಶವಾಗಿತ್ತು ಮತ್ತು ಮಹಿಳೆಯರ ಕಡೆಗಿನ ಒಂದು ಅತೃಪ್ತಿಗೊಂಡ ನಡವಳಿಕೆಯಾಗಿತ್ತು.'[೧೦] ಅವನ ಪರಿಸ್ಥಿತಿ ಹಾಗೂ ಕಾರ್ಮಿಕ ವರ್ಗ ಜನರು ಬದುಕಿದ್ದ ಸ್ಥಿತಿಗತಿಗಳಿಂದ ಹೊರಹೊಮ್ಮಿದ ಅಸಮಾಧಾನವು ಅವನ ಕೃತಿಗಳ ಪ್ರಮುಖ ವಸ್ತು-ವಿಷಯಗಳಾಗಿ ಮಾರ್ಪಟ್ಟವು. ಆತನ ತಾರುಣ್ಯದ ದಿನಗಳಲ್ಲಿನ ಈ ಅಸಂತೋಷದ ಅವಧಿಯೇ ಆತನ ಅಚ್ಚುಮೆಚ್ಚಿನ, ಮತ್ತು ಹೆಚ್ಚಿನಂಶ 0}ಅತ್ಮಚರಿತ್ರೆಗೆ ಸಂಬಂಧಿಸಿದ, ಕಾದಂಬರಿಯಾದ ಡೇವಿಡ್ ಕಾಪರ್‌ಫೀಲ್ಡ್ ನಲ್ಲಿ[೧೧] ಪ್ರಾಸಂಗಿಕವಾಗಿ ಪ್ರಸ್ತಾಪಿಸಲ್ಪಟ್ಟಿದೆ: "ನನ್ನ ಮನಸ್ಸಿಗೆ ಕರೆದು ಹೇಳಬಹುದಾದ, ನಾನು ಆನಂದದಾಯಕ ಸ್ಥಿತಿಯನ್ನು ತಲುಪಬಹುದಾದ ಯಾವ ಥರದ ಸಲಹೆಯಾಗಲೀ, ಸಮಾಲೋಚನೆಯಾಗಲೀ, ಪ್ರೋತ್ಸಾಹವಾಗಲೀ, ಸಮಾಧಾನವಾಗಲೀ, ಸಹಾಯವಾಗಲೀ, ಬೆಂಬಲವಾಗಲೀ ಯಾರಿಂದಲೂ ನನಗೆ ಸಿಗಲಿಲ್ಲ." ವೆಲಿಂಗ್ಟನ್ ಹೌಸ್ ಅಕಾಡೆಮಿ ಎಂದು ಬದಲಾದ ಶಾಲೆಯು ಒಂದು ಉತ್ತಮ ಶಾಲೆಯಾಗಿರಲಿಲ್ಲ. 'ತಾಂಡವವಾಡುತ್ತಿರುವ ಅವ್ಯವಸ್ಥಿತ, ಕ್ರಮರಹಿತ ಬೋಧನಾಕ್ರಮ, ಮುಖ್ಯೋಪಾಧ್ಯಾಯರ ಹಿಂಸಾನಂದದ ಪಾಶವೀ ವರ್ತನೆಯಿಂದ ಪ್ರಾಶಸ್ತ್ಯ ಪಡೆದ ಕಳಪೆ ಶಿಸ್ತು, ಒಪ್ಪ ಓರಣವಿಲ್ಲದ ಸ್ವಾಗತಗಳು ಮತ್ತು ಸಾರ್ವತ್ರಿಕವಾಗಿ ಕುಸಿದಿರುವ ವಾತಾವರಣ- ಇವೆಲ್ಲವೂ ಡೇವಿಡ್ ಕಾಪರ್‌ಫೀಲ್ಡ್ ಕೃತಿಯಲ್ಲಿನ ಶ್ರೀಮಾನ್ ಕ್ರೀಕಲ್‌ನ ಸಂಸ್ಥೆಯಲ್ಲಿ ಮೈದಳೆದಿವೆ.'[೧೦]
1827ರ ಮೇ ತಿಂಗಳಲ್ಲಿ, ಹಾಲ್‌ಬರ್ನ್ ನ್ಯಾಯಾಲಯದ ನ್ಯಾಯವಾದಿಗಳಾದ ಎಲ್ಲಿಸ್ ಮತ್ತು ಬ್ಲಾಕ್‌ಮೋರ್‌ರವರ ಗ್ರೇ’ಸ್ ಇನ್ ಕಾನೂನು ಕಚೇರಿಯಲ್ಲಿ ಕಿರಿಯ ಗುಮಾಸ್ತನಾಗಿ ಕೆಲಸವನ್ನು ಪ್ರಾರಂಭಿಸಿದ. 1828ರ ನವೆಂಬರ್‌ವರೆಗೂ ಆತ ಅಲ್ಲಿ ಕಾರ್ಯನಿರ್ವಹಿಸಿದ. ನಂತರ, ತನ್ನ ಬಿಡುವಿನ ವೇಳೆಯಲ್ಲಿ ಕಷ್ಟಪಟ್ಟು ಕೆಲಸಮಾಡಿ ಶೀಘ್ರಪಿಲಿಗೆ ಸಂಬಂಧಿಸಿದ ಗರ್ನೆಯ ಪದ್ಧತಿಯನ್ನು ರೂಢಿಸಿಕೊಂಡು, ಸ್ವತಂತ್ರ ವರದಿಗಾರಿಕೆ ವೃತ್ತಿಯನ್ನು ಕೈಗೊಳ್ಳಲು ಆತ ತನ್ನ ಕೆಲಸವನ್ನು ಬಿಟ್ಟ. ಥಾಮಸ್ ಚಾರ್ಲ್‌ಟನ್ ಎಂಬ ಆತನ ಓರ್ವ ದೂರದ ಸಂಬಂಧಿ ಡಾಕ್ಟರ್’ಸ್ ಕಾಮನ್ಸ್‌ನಲ್ಲಿ ಓರ್ವ ಸ್ವತಂತ್ರ ವೃತ್ತಿಗ ವರದಿಗಾರನಾಗಿದ್ದ, ಮತ್ತು ಕಾನೂನು ಸಂಬಂಧಿ ನಡಾವಳಿಗಳನ್ನು ವರದಿ ಮಾಡಲು ಡಿಕನ್ಸ್ ಅಲ್ಲಿನ ಅವನ ಅಂಕಣವನ್ನು ಬಳಸಿಕೊಳ್ಳುವಲ್ಲಿ ಸಮರ್ಥನಾದ.[೧೨] ಇಲ್ಲಿನ ಸೇಂಟ್ ಪಾಲ್‌ನ ಸಮೀಪವಿದ್ದ ಒಂದು ನ್ಯಾಯಾಲಯದಲ್ಲಿ ಸರಿಸುಮಾರು ನಾಲ್ಕು ವರ್ಷಗಳ ಅಲೆದಾಟವನ್ನು ಒಳಗೊಂಡಿದ್ದ ಪ್ರಕರಣವನ್ನು ಆಲಿಸಬೇಕಿತ್ತು. ಈ ಶಿಕ್ಷಣವು ನಿಕೋಲಸ್ ನಿಕಲ್‌ಬೈ , ಡೊಂಬೆ ಅಂಡ್ ಸನ್ , ಮತ್ತು ವಿಶೇಷವಾಗಿ ಬ್ಲೀಕ್ ಹೌಸ್ ನಂಥ ಕೃತಿಗಳಿಗೆ ಮಾಹಿತಿಯನ್ನು ನೀಡಿದವು. ಇವುಗಳಲ್ಲಿ ಕಂಡುಬಂದ 19ನೇ-ಶತಮಾನದ ಮಧ್ಯಭಾಗದ ಬ್ರಿಟನ್‌ನ ಕಾನೂನು ವ್ಯವಸ್ಥೆಯ ಜಟಿಲಗೊಂಡ ತಂತ್ರಗಾರಿಕೆಗಳು, ಪ್ರಯಾಸಕರ ವ್ಯೂಹಗಾರಿಕೆಗಳು, ಮತ್ತು ದಮನಕಾರಕ ಅಧಿಕಾರಿಶಾಹಿ ಮನೋಭಾವದ ಎದ್ದುಕಾಣುವ ನಿರೂಪಣೆಯು ಸಾರ್ವಜನಿಕರಲ್ಲಿ ಹೆಚ್ಚಿನ ಪ್ರಮಾಣದ ಜಾಗ್ರತೆಯನ್ನು ಮೂಡಿಸುವಲ್ಲಿ ಸಮರ್ಥವಾದವು. ಅಷ್ಟೇ ಅಲ್ಲ, ಡಿಕನ್ಸ್‌ನ ಸ್ವಂತ ದೃಷ್ಟಿಕೋನಗಳನ್ನು, ಅದರಲ್ಲೂ ವಿಶೇಷವಾಗಿ "ಕಾನೂನಿಗೆ ಮೊರೆ ಹೋಗುವಂತೆ" ಸಂದರ್ಭಗಳಿಂದ ಒತ್ತಡಕ್ಕೀಡಾಗಿರುವ ಬಡವರ ಮೇಲಿನ ಅಧಿಕ ಹೊರೆಯ ಕುರಿತಾದ ಅವನ ದೃಷ್ಟಿಕೋನಗಳ ಹರಡುವಿಕೆಗಾಗಿರುವ ವಾಹಕಗಳಾಗಿಯೂ ಈ ಕೃತಿಗಳು ಕಾರ್ಯನಿರ್ವಹಿಸಿದವು.
1830ರಲ್ಲಿ, ತನ್ನ ಮೊದಲ ಪ್ರೇಮವಾದ ಮಾರಿಯಾ ಬೀಡ್‌ನೆಲ್‌ಳನ್ನು ಡಿಕನ್ಸ್ ಭೇಟಿಯಾದ. ಡೇವಿಡ್ ಕಾಪರ್‌ಫೀಲ್ಡ್ ಕೃತಿಯಲ್ಲಿ ಕಾಣಿಸಿಕೊಳ್ಳುವ ಡೋರಾ ಪಾತ್ರಕ್ಕೆ ಅವಳೇ ಮಾದರಿಯಾಗಿದ್ದಿರಬಹುದೆಂದು ಹೇಳಲಾಗುತ್ತದೆ. ಮಾರಿಯಾಳ ಹೆತ್ತವರು ಈ ಪ್ರೇಮಯಾಚನೆಯನ್ನು ಮಾನ್ಯಮಾಡಲಿಲ್ಲ ಮತ್ತು ಪ್ಯಾರಿಸ್‌ನಲ್ಲಿನ ಶಾಲೆಗೆ ಅವಳನ್ನು ಕಳಿಸುವ ಮೂಲಕ ಈ ಸಂಬಂಧವನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿದರು.
ಪತ್ರಿಕೋದ್ಯಮ ಮತ್ತು ಆರಂಭಿಕ ಕಾದಂಬರಿಗಳು
[ಬದಲಾಯಿಸಿ]1833ರಲ್ಲಿ, ತನ್ನ ಮೊಟ್ಟಮೊದಲ ಕಥೆಯಾದ ಎ ಡಿನ್ನರ‍್ ಅಟ್ ಪಾಪ್ಲರ‍್ ವಾಕ್ , ಮಂಥ್ಲಿ ಮ್ಯಾಗಝೀನ್ ಎಂಬ ಲಂಡನ್ ನಿಯತಕಾಲಿಕದಲ್ಲಿ ಪ್ರಕಟವಾಗುವಂತೆ ಮಾಡುವಲ್ಲಿ ಡಿಕನ್ಸ್ ಯಶಸ್ವಿಯಾದ. ನಮಥರದ ವರ್ಷದಲ್ಲಿ ಆತ ಫರ್ನಿವಾಲ್’ಸ್ ಇನ್‌ನಲ್ಲಿ ಕೋಣೆಗಳನ್ನು ಬಾಡಿಗೆ ಹಿಡಿದು ಓರ್ವ ರಾಜಕೀಯ ಪತ್ರಕರ್ತನಾಗಿ ಮಾರ್ಪಟ್ಟ. ಸಂಸದೀಯ ಚರ್ಚೆಗಳನ್ನು ವರದಿ ಮಾಡುವುದು ಹಾಗೂ ಮಜಲುಗಾಡಿಯ ಮೂಲಕ ಬ್ರಿಟನ್ ಆದ್ಯಂತ ಸಂಚರಿಸುತ್ತಾ ಮಾರ್ನಿಂಗ್ ಕ್ರಾನಿಕಲ್ ಪತ್ರಿಕೆಗಾಗಿ ಚುನಾವಣಾ ಪ್ರಚಾರಗಳ ಕುರಿತು ವರದಿಮಾಡುವುದು ಅವನ ಕಾರ್ಯವ್ಯಾಪ್ತಿಯಲ್ಲಿ ಸೇರಿತ್ತು. ನಿಯತಕಾಲಿಕಗಳಲ್ಲಿನ ಸ್ಥೂಲ ನಿರೂಪಣೆಗಳ ಸ್ವರೂಪಗಳಲ್ಲಿದ್ದ ಅವನ ಪತ್ರಿಕೋದ್ಯಮವು ಸ್ಕೆಚಸ್ ಬೈ ಬೋಝ್ ಎಂಬ ಹೆಸರಿನ ತುಣುಕಗಳ ಮೊದಲ ಸಂಗ್ರವಾಗಿ ರೂಪುಗೊಂಡಿತು. ಇದು 1836ರಲ್ಲಿ ಪ್ರಕಟಗೊಂಡಿತು ಹಾಗೂ ದಿ ಪಿಕ್‌ವಿಕ್ ಪೇಪರ್ಸ್ ಎಂಬ ಅವನ ಮೊದಲ ಕಾದಂಬರಿಯು 1836ರಲ್ಲಿ ಧಾರಾವಾಹಿಯ ರೂಪದಲ್ಲಿ ಪ್ರಕಟಗೊಳ್ಳಲು ಇದು ಕಾರಣೀಭೂತವಾಯಿತು. ತನ್ನ ನಂತರದ ಸಾಹಿತ್ಯಿಕ ವೃತ್ತಿಜೀವನದಲ್ಲಿ ಹೆಚ್ಚಿನ ಭಾಗವನ್ನು ನಿಯತ ಕಾಲಿಕಗಳಿಗೆ ಬರಹಗಳನ್ನು ನೀಡುವುದನ್ನು ಮತ್ತು ಸಂಪಾದನ ಕಾರ್ಯವನ್ನು ಮಾಡುವುದನ್ನು ಆತ ಮುಂದುವರೆಸಿದ. ತನ್ನ ತೀವ್ರವಾದ ಗ್ರಹಣಶಕ್ತಿ, ನಿಕಟ ಜ್ಞಾನ ಮತ್ತು ಜನರನ್ನು ಅರ್ಥಮಾಡಿಕೊಳ್ಳುವಿಕೆ, ಹಾಗೂ ಕಥೆ-ಹೆಣೆಯುವ ಸಹಜ ಸಾಮರ್ಥ್ಯಗಳಿಂದಾಗಿ ಆತ ವಿಶ್ವದೆಲ್ಲೆಡೆ ಶೀಘ್ರವಾಗಿ ಪ್ರಸಿದ್ಧಿ ಹಾಗೂ ಸಂಪತ್ತನ್ನು ಗಳಿಸುವಲ್ಲಿ ನೆರವಾದವು.
1836ರಲ್ಲಿ, ಬೆಂಟ್ಲೆ’ಸ್ ಮಿಸಲ್ಲೆನಿ ಪತ್ರಿಕೆಯ ಸಂಪಾದಕನ ಕೆಲಸ ಡಿಕನ್ಸ್‌ಗೆ ದಕ್ಕಿತು. ಈ ಸ್ಥಾನದಲ್ಲಿ ಆತ ಮೂರು ವರ್ಷಗಳವರೆಗೆ ಇದ್ದ. ಆದರೆ ಅದರ ಮಾಲೀಕನೊಂದಿಗೆ ಜಗಳವಾಡಿಕೊಂಡಿದ್ದರಿಂದ ಆ ಕೆಲಸವನ್ನು ಬಿಡಬೇಕಾಗಿ ಬಂತು. ಅದೇ ಸಮಯದಲ್ಲಿ ಓರ್ವ ಯಶಸ್ವೀ ಕಾದಂಬರಿಕಾರನಾಗಿ ಅವನ ಪ್ರಯಾಣವು ಮುಂದುವರೆಯಿತು. ಆಲಿವರ‍್ ಟ್ವಿಸ್ಟ್ (1837–39), ನಿಕೋಲಸ್ ನಿಕಲ್‌ಬೈ (1838–39), ದಿ ಓಲ್ಡ್ ಕ್ಯೂರಿಯಾಸಿಟಿ ಷಾಪ್ ಮತ್ತು, ಅಂತಿಮವಾಗಿ, ಮಾಸ್ಟರ‍್ ಹಂಫ್ರೆ’ಸ್ ಕ್ಲಾಕ್ ಸರಣಿಯ (1840–41) ಭಾಗವಾಗಿ ....Barnaby Rudge: A Tale of the Riots of 'Eighty ಕೃತಿ —ಈ ಎಲ್ಲವೂ ಪುಸ್ತಕಗಳಾಗಿ ಮುದ್ರಣಗೊಳ್ಳುವುದಕ್ಕೆ ಮುಂಚಿತವಾಗಿ ಮಾಸಿಕ ಕಂತುಗಳ ರೂಪದಲ್ಲಿ ಪ್ರಕಟಗೊಂಡವು. ಗ್ರಿಪ್ ಎಂಬ ಹೆಸರಿನ ಒಂದು ಪ್ರೀತಿಯ ಡೊಂಬಕಾಗೆಯನ್ನು ಡಿಕನ್ಸ್ ಹೊಂದಿದ್ದ. ಇದು 1841ರಲ್ಲಿ ಮರಣ ಹೊಂದಿದಾಗ, ಡಿಕನ್ಸ್ ಅದರೊಳಗೆ ಹುಲ್ಲುತುಂಬಿಸಿ ಇಟ್ಟುಕೊಂಡ (ಇದು ಈಗ ಫಿಲಡೆಲ್ಫಿಯಾದ ಉಚಿತ ಗ್ರಂಥಾಲಯದಲ್ಲಿದೆ).[೧೩]
1836ರ ಏಪ್ರಿಲ್ 2ರಂದು, ಆತ ಕ್ಯಾಥರೀನ್ ಥಾಮ್ಸನ್ ಹೊಗರ್ತ್‌ಳನ್ನು (1816 – 1879) ಮದುವೆಯಾದ. ಈಕೆ ಈವ್ನಿಂಗ್ ಕ್ರಾನಿಕಲ್ ಸಂಪಾದಕ ಜಾರ್ಜ್ ಹೊಗರ್ತ್‌ನ ಮಗಳು. ಕೆಂಟ್‌ನಲ್ಲಿನ ಚಾಕ್ ಎಂಬಲ್ಲಿ ಒಂದು ಸಂಕ್ಷಿಪ್ತ ಮಧುಚಂದ್ರವನ್ನು ನಡೆಸಿದ ನಂತರ, ಬ್ಲೂಮ್ಸ್‌ಬರಿಯಲ್ಲಿನ ಮನೆಯಲ್ಲಿ ಅವರು ನೆಲೆಗೊಂಡರು. ಅವರು ಹತ್ತು ಮಕ್ಕಳನ್ನು ಪಡೆದರು:[೧೪]
- ಚಾರ್ಲ್ಸ್ ಕಲ್ಲಿಫೋರ್ಡ್ ಬೋಝ್ ಡಿಕನ್ಸ್ C. C. B. ಡಿಕನ್ಸ್, ಈತ ನಂತರದಲ್ಲಿ ಚಾರ್ಲ್ಸ್ ಡಿಕನ್ಸ್, ಜೂನಿಯರ್ ಎಂದು ಹೆಸರಾದ. ಈತ ಆಲ್ ದಿ ಇಯರ‍್ ರೌಂಡ್ ನ ಸಂಪಾದಕನಾಗಿದ್ದ, ಡಿಕನ್ಸ್'ಸ್ ಡಿಕ್ಷ್‌ನರಿ ಆಫ್ ಲಂಡನ್ ನ (1879) ಲೇಖಕನಾಗಿದ್ದ.
- ಮೇರಿ ಡಿಕನ್ಸ್
- ಕೇಟ್ ಮ್ಯಾಕ್ರೀಡಿ ಡಿಕನ್ಸ್
- ವಾಲ್ಟರ್ ಲ್ಯಾಂಡರ್ ಡಿಕನ್ಸ್
- ಫ್ರಾನ್ಸಿಸ್ ಜೆಫ್ರಿ ಡಿಕನ್ಸ್
- ಆಲ್‌ಫ್ರೆಡ್ ಡಿ’ಓರ್ಸೆ ಟೆನ್ನಿಸನ್ ಡಿಕನ್ಸ್
- ಸಿಡ್ನಿ ಸ್ಮಿತ್ ಹಾಲ್ಡಿಮಾಂಡ್ ಡಿಕನ್ಸ್
- ಸರ್ ಹೆನ್ರಿ ಫೀಲ್ಡಿಂಗ್ ಡಿಕನ್ಸ್
- ಡೋರಾ ಆನ್ನಿ ಡಿಕನ್ಸ್
- ಎಡ್ವರ್ಡ್ ಡಿಕನ್ಸ್ ಆಸ್ಟ್ರೇಲಿಯಾಕ್ಕೆ ವಲಸೆ ಹೋದ.
1837ರ ಮಾರ್ಚ್ 25ರಂದು, ಲಂಡನ್‌ನಲ್ಲಿನ 48 ಡೌಟಿ ಸ್ಟ್ರೀಟ್ ಎಂಬಲ್ಲಿಗೆ ಡಿಕನ್ಸ್ ತನ್ನ ಕುಟುಂಬದೊಂದಿಗೆ ತೆರಳಿದ, (ವರ್ಷವೊಂದಕ್ಕೆ 80£ನಷ್ಟು ದರದಲ್ಲಿ ಮೂರು ವರ್ಷಗಳ ಅವಧಿಗೆ ಆತ ಆ ಮನೆಯನ್ನು ಭೋಗ್ಯಕ್ಕೆ ಪಡೆದುಕೊಂಡಿದ್ದ) ಅಲ್ಲಿ ಆತ 1839ರ ಡಿಸೆಂಬರ್‌ವರೆಗೆ ವಾಸವಾಗಿದ್ದ. ಡಿಕನ್ಸ್‌ನ ಕಿರಿಯ ಸೋದರನಾದ ಫ್ರೆಡ್‌ರಿಕ್, ಈ ಕುಟುಂಬಕ್ಕೆ ಒಂದು ಹೊಸ ಸೇರ್ಪಡೆಯಾಗಿದ್ದ. ಅಷ್ಟೇ ಅಲ್ಲ, ಕ್ಯಾಥರೀನ್‌ಳ 17 ವರ್ಷ ವಯಸ್ಸಿನ ಸೋದರಿಯಾದ ಮೇರಿ ಕೂಡಾ ಅವರೊಂದಿಗಿರಲು ಫರ್ನಿವಾಲ್’ಸ್ ಇನ್‌ನಿಂದ ಪಯಣಿಸಿದಳು. ಹೊಸದಾಗಿ ಮದುವೆಯಾಗಿರುವ ತನ್ನ ಅಕ್ಕ-ಭಾವನಿಗೆ ಬೆಂಬಲವಾಗಿ ನಿಲ್ಲುವುದು ಅವಳ ಉದ್ದೇಶವಾಗಿತ್ತು. ಮಹಿಳೆಯೋರ್ವಳ ಅವಿವಾಹಿತ ಸೋದರಿಯೊಬ್ಬಳು ಹೊಸದಾಗಿ ಮದುವೆಯಾದ ಜೋಡಿಯೊಂದಿಗೆ ವಾಸಿಸುವುದು, ಅವರಿಗೆ ನೆರವಾಗುವುದು ಅಂಥಾ ರೂಢಿಯಲ್ಲದ ವಿಷಯವೇನೂ ಆಗಿರಲಿಲ್ಲ. ಮೇರಿಯನ್ನು ಡಿಕನ್ಸ್ ತುಂಬಾ ಹಚ್ಚಿಕೊಂಡ, ಮತ್ತು ಒಂದು ಸಂಕ್ಷಿಪ್ತ ಕಾಯಿಲೆಗೆ ಈಡಾಗಿದ್ದ ಅವಳು ಡಿಕನ್ಸ್‌ನ ತೋಳುಗಳಲ್ಲಿ 1837ರಲ್ಲಿ ಅಸುನೀಗಿದಳು. ಆತನ ಅನೇಕ ಪುಸ್ತಕಗಳಲ್ಲಿ ಆಕೆಯು ಒಂದು ಪಾತ್ರವಾಗಿ ರೂಪುಗೊಂಡಿದ್ದಾಳೆ, ಮತ್ತು ಅವಳ ಸಾವನ್ನು ಲಿಟ್ಲ್ ನೆಲ್ ಪಾತ್ರದ ಸಾವಿನಂತೆ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.[೧೫]
ಅಮೆರಿಕಾಗೆ ನೀಡಿದ ಮೊದಲ ಭೇಟಿ
[ಬದಲಾಯಿಸಿ]1842ರಲ್ಲಿ, ತನ್ನ ಪತ್ನಿಯೊಂದಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಹಾಗೂ ಕೆನಡಾವನ್ನು ಸುತ್ತುವ ಮೂಲಕ, ಡಿಕನ್ಸ್ ಅಮೆರಿಕಾಗೆ ತನ್ನ ಮೊದಲ ಭೇಟಿಯನ್ನು ನೀಡಿದ. ಗುಲಾಮಗಿರಿಯ ರದ್ದತಿಯ ಕುರಿತಾದ ಅವನ ಬೆಂಬಲದ ಹೊರತಾಗಿಯೂ ಈ ಪ್ರಯಾಣವು ಯಶಸ್ವಿಯಾಗಿತ್ತು. ಅಮೆರಿಕನ್ ನೋಟ್ಸ್ ಫಾರ‍್ ಜನರಲ್ ಸರ್ಕ್ಯುಲೇಷನ್ ಎಂಬ ಕಿರು ಪ್ರವಾಸ ಕಥನದಲ್ಲಿ ಈ ಪ್ರವಾಸದ ಕುರಿತು ವಿವರಿಸಲಾಗಿದೆ ಮತ್ತು ಇದು ಮಾರ್ಟಿನ್ ಚಝಲ್‌ವಿಟ್ ನಲ್ಲಿನ ಕೆಲವೊಂದು ಸಂಚಿಕೆಗಳಿಗೆ ಆಧಾರವೂ ಆಗಿದೆ. ಗುಲಾಮಗಿರಿಯ[೧೬] ಕುರಿತಾದ ಒಂದು ಶಕ್ತಿಯುತ ಛೀಮಾರಿಯನ್ನು ಒಳಗೊಂಡಿರುವ ನೋಟ್ಸ್ ಎಂಬ ಕೃತಿಯಲ್ಲಿ, ತಾನು ಕಂಡ "ದುಷ್ಕೃತ್ಯಗಳ" ಒಂದು "ಯಥೇಷ್ಟ ಸಾಕ್ಷ್ಯ"ವನ್ನು ಡಿಕನ್ಸ್ ಸೇರಿಸಿದ್ದಾನೆ.[೧೭] ಅಧ್ಯಕ್ಷ ಜಾನ್ ಟೇಲರ್‌ನನ್ನು ಆತ ಶ್ವೇತ ಭವನದಲ್ಲಿ ಸಂಧಿಸಿದ.[೧೮]
ತನ್ನ ಭೇಟಿಯ ಅವಧಿಯಲ್ಲಿ, ಡಿಕನ್ಸ್ ನ್ಯೂಯಾರ್ಕ್ ನಗರದಲ್ಲಿ ಸಮಯವನ್ನು ಕಳೆದ. ಈ ಅವಧಿಯಲ್ಲಿ ಅಲ್ಲಿ ಆತ ಉಪನ್ಯಾಸಗಳನ್ನು ನೀಡಿದ, ಹಕ್ಕುಸ್ವಾಮ್ಯದ ಕಾನೂನುಗಳ ಕುರಿತಾಗಿ ಬೆಂಬಲವನ್ನು ಪಡೆದ, ಮತ್ತು ಅಮೆರಿಕಾ ಕುರಿತಾದ ತನ್ನ ಬಹಳಷ್ಟು ಅಭಿಪ್ರಾಯಗಳನ್ನು ದಾಖಲಿಸಿಕೊಂಡ. ನಗರದಲ್ಲಿ ಸುಮಾರು ಒಂದು ತಿಂಗಳವರೆಗೆ ಸಂಚರಿಸಿದ ಆತ, ವಾಷಿಂಗ್ಟನ್ ಇರ್ವಿಂಗ್ ಮತ್ತು ವಿಲಿಯಂ ಕಲ್ಲೆನ್ ಬ್ರೈಯಾಂಟ್‌ರಂಥ ಪ್ರಭಾವಶಾಲಿ ವ್ಯಕ್ತಿಗಳನ್ನು ಭೇಟಿಯಾದ. 1842ರ ಫೆಬ್ರವರಿ 14ರಂದು, ಅವನ ಗೌರವಾರ್ಥವಾಗಿ ಪಾರ್ಕ್ ಥಿಯೇಟರ್‌ನಲ್ಲಿ ಒಂದು ಬೋಝ್ ನರ್ತನಕೂಟವನ್ನು (ಅವನ ಕಲ್ಪಿತನಾಮವನ್ನು ಇದಕ್ಕೆ ಇಡಲಾಗಿತ್ತು) ಏರ್ಪಡಿಸಲಾಗಿತ್ತು. ಇದರಲ್ಲಿ ನ್ಯೂಯಾರ್ಕ್‌ನ 3,000 ಗಣ್ಯವ್ಯಕ್ತಿಗಳು ಪಾಲ್ಗೊಂಡಿದ್ದರು. ಆತನು ಭೇಟಿನೀಡಿದ ನೆರೆಹೊರೆಯ ತಾಣಗಳಲ್ಲಿ ಫೈವ್ ಪಾಯಿಂಟ್ಸ್, ವಾಲ್ ಸ್ಟ್ರೀಟ್, ದಿ ಬೊವೆರಿ, ಮತ್ತು ದಿ ಟಾಂಬ್ಸ್ ಎಂದು ಹೆಸರಾಗಿದ್ದ ಸೆರೆಮನೆ ಸೇರಿದ್ದವು.[೧೯] ಇದೇ ಸಮಯದಲ್ಲಿ ಕ್ಯಾಥರೀನ್‌ಳ ಮತ್ತೋರ್ವ ಸೋದರಿಯಾದ ಜಾರ್ಜಿಯಾನಾ ಹೊಗರ್ತ್ ಎಂಬಾಕೆಯು ಆಗ ಮೆರಿಲ್‌ಬೋನ್‌ನ ಡೆವನ್‌ಷೈರ‍್ ಟೆರೇಸ್‌ನಲ್ಲಿ ವಾಸಿಸುತ್ತಿದ್ದ ಡಿಕನ್ಸ್ ಕುಟುಂಬವನ್ನು ಸೇರಿಕೊಂಡಳು. ಅವರು ಬಿಟ್ಟುಹೋಗಿದ್ದ ಚಿಕ್ಕವರ ಕುಟುಂಬದ ನಿಗಾವಣೆ ನೋಡುವುದು ಅವಳ ಉದ್ದೇಶವಾಗಿತ್ತು.[೨೦] 1870ರಲ್ಲಿ ತನ್ನ ಭಾವನು ಸಾಯುವವರೆಗೂ, ಓರ್ವ ಮನೆವಾರ್ತೆಯವಳಾಗಿ, ಸಂಘಟಕಿಯಾಗಿ, ಸಲಹಾಗಾರ್ತಿಯಾಗಿ ಮತ್ತು ಸ್ನೇಹಿತೆಯಾಗಿ ಆಕೆ ಅವರೊಂದಿಗೆ ಇದ್ದುಕೊಂಡು ಕಾರ್ಯನಿರ್ವಹಿಸಿದಳು.
ಅದಾದ ಕೆಲವೇ ದಿನಗಳಲ್ಲಿ, ಏಕಮೂರ್ತಿವಾದದ ಕ್ರೈಸ್ತಧರ್ಮದಲ್ಲಿ ಆತ ಆಸಕ್ತಿಯನ್ನು ತೋರಿಸಲು ಪ್ರಾರಂಭಿಸಿದ. ಆದರೂ, ಕಡೇ ಪಕ್ಷ ನಾಮಮಾತ್ರವಾಗಿ, ತನ್ನ ಜೀವನದ ಉಳಿದ ಅವಧಿಗೆ ಆತ ಓರ್ವ ಆಂಗ್ಲ ಚರ್ಚಿನ ಅನುಯಾಯಿಯಾಗಿಯೇ ಉಳಿದ.[೨೧] ಡಿಕನ್ಸ್‌ನ ಕೃತಿಗಳು ಜನಪ್ರಿಯತೆಯನ್ನು ಪಡೆಯುತ್ತಲೇ ಹೋದವು. ಅದರಲ್ಲೂ ವಿಶೇಷವಾಗಿ, 1843ರಲ್ಲಿ ಬರೆದ ಎ ಕ್ರಿಸ್‌ಮಸ್ ಕರೋಲ್ ಎಂಬ ಅವನ ಕ್ರಿಸ್‌ಮಸ್ ಪುಸ್ತಕಗಳ ಪೈಕಿಯ ಮೊದಲ ಕೃತಿಯು ಹೆಚ್ಚು ಜನಪ್ರಿಯತೆಯನ್ನು ಗಳಿಸಿತು. ಜನಜನಿತವಾಗಿರುವಂತೆ ಇದೊಂದು ಉದರಪೋಷಕ ಕೃತಿಯಾಗಿದ್ದು, ತನ್ನ ಪತ್ನಿಯ ಐದನೇ ಬಸಿರಿನ ವೆಚ್ಚಗಳನ್ನು ಸರಿದೂಗಿಸಲು ಕೇವಲ ಕೆಲವೇ ವಾರಗಳಲ್ಲಿ ಇದು ಬರೆಯಲ್ಪಟ್ಟಿತ್ತು. ಹೊರದೇಶಗಳಾದ ಇಟಲಿ (1844) ಮತ್ತು ಸ್ವಿಜರ್‌ಲೆಂಡ್‌ನಲ್ಲಿ (1846) ಕೆಲಕಾಲ ಕಳೆದ ನಂತರ, ಡೊಂಬೆ ಅಂಡ್ ಸನ್ (1848) ಮತ್ತು ಡೇವಿಡ್ ಕಾಪರ್‌ಫೀಲ್ಡ್ (1849–50) ಕೃತಿಗಳೊಂದಿಗೆ ಡಿಕನ್ಸ್ ತನ್ನ ಯಶೋಗಾಥೆಯನ್ನು ಮುಂದುವರೆಸಿದ.
ಲೋಕೋಪಕಾರ
[ಬದಲಾಯಿಸಿ]1846ರ ಮೇ ತಿಂಗಳಲ್ಲಿ, ಕೌಟ್ಸ್‌ನ ಬ್ಯಾಂಕಿನ ಸಂಪತ್ತಿಗೆ ಶ್ರೀಮಂತ ಉತ್ತರಾಧಿಕಾರಿಯಾಗಿದ್ದ ಏಂಜೆಲಾ ಬರ್ಡೆಟ್ ಕೌಟ್ಸ್, "ಪತಿತೆಯರಾಗಿರುವ" ಮಹಿಳೆಯರ ವಿಮೋಚನೆಗಾಗಿ ಒಂದು ನೆಲೆಯನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಡಿಕನ್ಸ್‌ನನ್ನು ಭೇಟಿಯಾದಳು. ಇಂಥ ಮಹಿಳೆಯರಿಗೆ ಸಂಬಂಧಿಸಿ ಒಂದು ಬಿರುಸಾದ ಮತ್ತು ಶಿಕ್ಷಾರೂಪದ ಆಡಳಿತವನ್ನು ನಡೆಸುತ್ತಿದ್ದ ಇತರ ಸಂಘಟನೆಗಳಿಗಿಂತ ಭಿನ್ನವಾಗಿ ಒಂದು ವಿಭಿನ್ನವಾದ ಮಾರ್ಗವನ್ನು ಕಲ್ಪಿಸುವ ನೆಲೆಯೊಂದನ್ನು ಸ್ಥಾಪಿಸುವುದು ಕೌಟ್ಸ್‌ಳ ಆಲೋಚನೆಯಾಗಿತ್ತು. ಆದ್ದರಿಂದ ಅವರಿಗೆ ಒಂದು ಶಿಸ್ತುಬದ್ಧವಾದ ಆದರೆ ಒತ್ತಾಸೆಯಾಗಿ ನಿಲ್ಲುವ ಪರಿಸರವೊಂದನ್ನು ಒದಗಿಸಿ, ಅಲ್ಲಿ ಅವರು ಬರೆಯುವುದನ್ನು ಮತ್ತು ಓದುವುದನ್ನು ಕಲಿಯಲು ಅನುವುಮಾಡಿಕೊಡುವುದು, ಹಾಗೂ ಸಮಾಜದೊಳಗೆ ನಿಧಾನವಾಗಿ ಅವರು ಮತ್ತೊಮ್ಮೆ ಒಗ್ಗೂಡುವಂತೆ ಮಾಡಲು ನೆರವಾಗುವಲ್ಲಿ ಸ್ಥಳೀಯ ಗೃಹಕೃತ್ಯದ ಸಣ್ಣಪುಟ್ಟ ಕೆಲಸಗಳಲ್ಲಿ ಅವರು ಪರಿಣತಿಯನ್ನು ಗಳಿಸುವಂತೆ ಮಾಡುವುದು ಅವಳ ಉದ್ದೇಶವಾಗಿತ್ತು. ಆರಂಭದಲ್ಲಿನ ಪ್ರತಿರೋಧದ ನಂತರ, ಡಿಕನ್ಸ್ ಅಂತಿಮವಾಗಿ ಯುರೇನಿಯಾ ಕಾಟೇಜ್ ಎಂಬ ಹೆಸರಿನ ಸದರಿ ನೆಲೆಯನ್ನು ಷೆಪರ್ಡ್ಸ್ ಬುಷ್‌ನ ಲೈಮ್ ಗ್ರೋವ್ ವಿಭಾಗದಲ್ಲಿ ಸ್ಥಾಪಿಸಿದ. ಅದರ ದಿನವಹಿ ಕಾರ್ಯಚಟುವಟಿಕೆಗೆ ಸಂಬಂಧಿಸಿದಂತಿರುವ ಅನೇಕ ಮಗ್ಗಲುಗಳಲ್ಲಿ ಆತ ತನ್ನನ್ನು ತೊಡಗಿಸಿಕೊಂಡ. ಗೃಹದ ನಿಯಮಗಳನ್ನು ರೂಪಿಸುವುದು, ಲೆಕ್ಕಪತ್ರಗಳನ್ನು ಅವಲೋಕಿಸುವುದು ಮತ್ತು ಸಂಭವನೀಯ ನಿವಾಸಿಗಳ ಸಂದರ್ಶನವನ್ನು ನಡೆಸುವುದು ಅವನ ಕಾರ್ಯಚಟುವಟಿಕೆಯಲ್ಲಿ ಸೇರಿಹೋಯಿತು. ಇವರ ಪೈಕಿ ಕೆಲವೊಬ್ಬರು ಅವನ ಪುಸ್ತಕಗಳಲ್ಲಿ ಪಾತ್ರಗಳಾದರು. ಸಂಭವನೀಯ ಸೂಕ್ತ ಅಭ್ಯರ್ಥಿಗಳಿಗಾಗಿ ಆತ ಸೆರೆಮನೆಗಳು ಮತ್ತು ಅನಾಥಾಲಯಗಳನ್ನು ಹುಡುಕಿದ ಮತ್ತು ಮ್ಯಾಜಿಸ್ಟ್ರೇಟ್ ಜಾನ್ ಹಾರ್ಡ್‌ವಿಕ್‌ರಂಥ ಗೆಳೆಯರನ್ನು ಈ ಕುರಿತು ಅವಲಂಬಿಸಿದ. ಅವರನ್ನು ತನ್ನ ಗಮನಕ್ಕೆ ತಂದುಕೊಳ್ಳುವುದು ಅವನ ಉದ್ದೇಶವಾಗಿತ್ತು. ಒಮ್ಮೆ ಅಂಥವರು ಕಂಡುಬಂದಲ್ಲಿ, ಅಂಥ ಪ್ರತಿಯೊಬ್ಬ ಸಂಭವನೀಯ ಅಭ್ಯರ್ಥಿಗೆ ಡಿಕನ್ಸ್‌ನಿಂದ ಬರೆಯಲ್ಪಟ್ಟ ಒಂದು ಅನಾಮಿಕ ಮುದ್ರಿತ ಆಹ್ವಾನವನ್ನು ನೀಡಲಾಗುತ್ತಿತ್ತು. ’ಪತಿತೆಯರಾಗಿರುವ ಮಹಿಳೆಯರಿಗೆ ಒಂದು ಮನವಿ’ ಎಂಬ ಶೀರ್ಷಿಕೆಯ ಈ ಪತ್ರದಲ್ಲಿ ಆತ ಕೇವಲ ’ನಿಮ್ಮ ಸ್ನೇಹಿತ’ ಎಂದು ಸಹಿ ಮಾಡುತ್ತಿದ್ದ. ಒಂದು ವೇಳೆ ಮಹಿಳೆಯು ಆಹ್ವಾನವನ್ನು ಒಪ್ಪಿಕೊಂಡರೆ, ಡಿಕನ್ಸ್ ತಾನಾಗಿಯೇ ಅವಳನ್ನು ಸಂದರ್ಶನ ಮಾಡುತ್ತಿದ್ದ ಮತ್ತು ಅವಳನ್ನು ಗೃಹಕ್ಕೆ ಸೇರಿಸಿಕೊಳ್ಳಬಹುದೋ ಬೇಡವೋ ಎಣಬುದನ್ನು ನಿರ್ಧರಿಸುತ್ತಿದ್ದ.[೨೨][೨೩] ನವೆಂಬರ್ 1851ರ ನವೆಂಬರ್ ಅಂತ್ಯದಲ್ಲಿ, ಡಿಕನ್ಸ್ ಟವಿಸ್ಟಾಕ್ ಹೌಸ್‌ಗೆ[೨೪] ತೆರಳಿ, ಅಲ್ಲಿ ಬ್ಲೀಕ್ ಹೌಸ್ (1852–53), ಹಾರ್ಡ್ ಟೈಮ್ಸ್ (1854) ಮತ್ತು ಲಿಟ್ಲ್ ಡೋರಿಟ್ (1857) ಎಂಬ ಕೃತಿಗಳನ್ನು ರಚಿಸಿದ. ಇಲ್ಲಿಯೇ ಆತ ಹವ್ಯಾಸಿ ಪ್ರದರ್ಶನಗಳ ಹುಟ್ಟಿಗೆ ಕಾರಣನಾದ. ಇವು ಫಾರ್ಸ್ಟರ್‌ನ ಜೀವನದಲ್ಲಿ ಚಿತ್ರಿಸಲ್ಪಟ್ಟಿವೆ.
ಮಧ್ಯದ ವರ್ಷಗಳು
[ಬದಲಾಯಿಸಿ]1856ರಲ್ಲಿ, ಅವನ ಬರಹಗಳಿಂದ ಬಂದ ಆದಾಯವು ಆತನು ಗ್ಯಾಡ್’ಸ್ ಹಿಲ್ ಪ್ಲೇಸ್‌ನ್ನು ಕೊಳ್ಳಲು ಅನುವುಮಾಡಿಕೊಟ್ಟಿತು. ಕೆಂಟ್‌ನ ಹೈಯಾಮ್‌ನಲ್ಲಿದ್ದ ಈ ಬೃಹತ್ ಮನೆಯು ಡಿಕನ್ಸ್‌ಗೆ ಸಂಬಂಧಿಸಿದಂತೆ ಒಂದು ವಿಶೇಷ ಅರ್ಥವನ್ನು ಒಳಗೊಂಡಿತ್ತು. ಚಿಕ್ಕವನಾಗಿದ್ದಾಗ ಅದರ ಮುಂದೆ ಓಡಾಡುವಾಗ, ಈ ಮನೆಯಲ್ಲಿ ವಾಸಿಸುವುದರ ಕುರಿತು ಡಿಕನ್ಸ್ ಕನಸು ಕಂಡಿದ್ದುದೇ ಈ ವಿಶೇಷವಾಗಿತ್ತು. ಈ ಪ್ರದೇಶವು ಷೇಕ್ಸ್‌ಪಿಯರ್‌ನ ಹೆನ್ರಿ IV, ಪಾರ್ಟ್ 1 ನಲ್ಲಿ ಬರುವ ಕೆಲವೊಂದು ಘಟನೆಗಳ ದೃಶ್ಯವೂ ಆಗಿತ್ತು ಮತ್ತು ಈ ಸಾಹಿತ್ಯಿಕ ಸಂಬಂಧವು ಆತನಿಗೆ ಸಂತೋಷವನ್ನುಂಟುಮಾಡಿತು.
1857ರಲ್ಲಿ, ದಿ ಫ್ರೋಜನ್ ಡೀಪ್ ಎಂಬ ನಾಟಕದ ಸಾರ್ವಜನಿಕ ಪ್ರಧರ್ಶನಗಳಿಗೆ ಸಂಬಂಧಿಸಿದ ಸಿದ್ಧತೆಗಳನ್ನು ಮಾಡಿಕೊಳ್ಳುವಾಗ, ಮಹಿಳಾ ಪಾತ್ರಗಳನ್ನು ನಿರ್ವಹಿಸಲು ಡಿಕನ್ಸ್ ವೃತ್ತಿಪರ ನಟಿಯರ ಎರವಲು ಸೇವೆಯನ್ನು ಪಡೆದುಕೊಂಡ. ಈ ನಾಟಕಕ್ಕೆ ಆತನಿಗೆ ಆತನ ಆಶ್ರಿತನಾದ ವಿಕಿ ಕಾಲಿನ್ಸ್‌ನ ಸಹಯೋಗವಿತ್ತು. ಇವರ ಪೈಕಿ ಒಬ್ಬಳಾದ ಎಲೆನ್ ಟೆರ್ಮ್ಯಾನ್ ಎಂಬುವವಳೊಂದಿಗೆ ಡಿಕನ್ಸ್ ಒಂದು ಬಂಧವನ್ನು ರೂಪಿಸಿಕೊಂಡ. ಅದು ಅವನ ಜೀವನದ ಉಳಿದ ಅವಧಿಯವರೆಗೂ ಇತ್ತು. 1858ರಲ್ಲಿ ತನ್ನ ಪತ್ನಿ ಕ್ಯಾಥರೀನ್‌ನಿಂದ ಅವನು ಬೇರ್ಪಟ್ಟಾಗ, ವಿಚ್ಛೇದನವೆಂಬುದು, ವಿಶೇಷವಾಗಿ ಅವನಷ್ಟು ಪ್ರಸಿದ್ಧರಾಗಿದ್ದ ಯಾರಿಗೇ ಆದರೂ, ಯೋಚಿಸಲಾಗದ ವಿಷಯವಾಗಿತ್ತು. ಹೀಗಾಗಿ ಆತ ಅವಳಿಗೆ ನಂತರದ ಬಹಳ ಕಾಲದವರೆಗೂ ಹಣಕಾಸಿನ ಬೆಂಬಲವನ್ನು ನೀಡುತ್ತಾ ಬಂದ. ಆರಂಭದಲ್ಲಿ ಅವರಿಬ್ಬರೂ ಒಟ್ಟಾಗಿ ಸಂತೋಷವಾಗಿ ಇರುವಂತೆ ಕಂಡರೂ, ಡಿಕನ್ಸ್ ಹೊಂದಿದ್ದ ಜೀವನದೆಡೆಗಿನ ಅದೇ ಪ್ರಮಾಣದ ಸೀಮೆಯಿಲ್ಲದ ಶಕ್ತಿಯನ್ನು ಕ್ಯಾಥರೀನ್ ಹಂಚಿಕೊಂಡಂತೆ ಕಾಣಲಿಲ್ಲ. ಅದೇನೇ ಇದ್ದರೂ, ತಮ್ಮ ಹತ್ತು ಮಕ್ಕಳನ್ನು ನೋಡಿಕೊಳ್ಳಬೇಕಾದ ಅವಳ ಕೆಲಸ, ವಿಶ್ವ-ವಿಖ್ಯಾತ ಕಾದಂಬರಿಕಾರನೊಂದಿಗೆ ಜೀವಿಸಬೇಕಾದ ಒತ್ತಡ, ಮತ್ತು ಅವನಿಗಾಗಿ ಮನೆಯನ್ನು ಒಪ್ಪವಾಗಿರಿಸುವುದು ಯಾವ ರೀತಿಯಲ್ಲೂ ನೆರವಾಗಲಿಲ್ಲ. 1855ರಲ್ಲಿ ಆತ ತನ್ನ ಮೊದಲ ಪ್ರೇಮವಾದ ಮಾರಿಯಾ ಬೀಡ್‌ನೆಲ್‌ಳನ್ನು ಭೇಟಿಯಾಗಲು ಹೋದಾಗ, ಅವನ ವೈವಾಹಿಕ ಜೀವನದ ಅಸಂತೃಪ್ತಿಯ ಒಂದು ಸೂಚನೆಯನ್ನು ಕಾಣಬಹುದಾಗಿತ್ತು. ಅಷ್ಟು ಹೊತ್ತಿಗಾಗಲೇ ಮಾರಿಯಾಗೂ ಮದುವೆಯಾಗಿತ್ತಾರೂ, ಅವಳ ಕುರಿತಾದ ಡಿಕನ್ಸ್‌ನ ಪ್ರಣಯಪೂರ್ವಕ ನೆನಪಿನ ಕೊರತೆಯನ್ನು ಅನುಭವಿಸಿದವಳಂತೆ ಕಂಡುಬಂದಳು.
ಈ ಅವಧಿಯಲ್ಲಿ, ತನ್ನ ಸ್ವಂತದ ಪ್ರಯೋಜನಕ್ಕಾಗಿ ಸಾರ್ವಜನಿಕ ವಾಚನಗೋಷ್ಠಿಗಳಿಗೆ ಮುಂದಾಗುವ ಕುರಿತು ಆಲೋಚಿಸುತ್ತಿರುವ ಸಮಯದಲ್ಲೇ, ಒಂದು ಧರ್ಮಕಾರ್ಯದ ಮನವಿಯ ಮೂಲಕ ತನ್ನ ಮೊಟ್ಟಮೊದಲ ಪ್ರಮುಖ ಹಣಕಾಸು ಬಿಕ್ಕಟ್ಟಿನಿಂದ ಪಾರಾಗಿ ಉಳಿಯುವುದಕ್ಕೆ ನೆರವಾಗಬೇಕೆಂದು ಗ್ರೇಟ್ ಓರ್ಮಾಂಡ್ ಸ್ಟ್ರೀಟ್ ಹಾಸ್ಪಿಟಲ್ ಡಿಕನ್ಸ್‌ನನ್ನು ಕೇಳಿಕೊಂಡಿತು. ಲೋಕಪ್ರಿಸಿದ್ಧ ಲೋಕೋಪಕಾರಕ್ಕೆ ಹಸರುವಾಸಿಯಾಗಿದ್ದ ಡಿಕನ್ಸ್‌ನನ್ನು, ಆಸ್ಪತ್ರೆಯ ಸಂಸ್ಥಾಪಕ ಚಾರ್ಲ್ಸ್ ವೆಸ್ಟ್ ಎಂಬಾತನ ಜೊತೆಯಲ್ಲಿ ಕುಳಿತು ಅಧ್ಯಕ್ಷತೆ ವಹಿಸಲು ಕೇಳಿಕೊಳ್ಳಲಾಯಿತು. ಈ ಸಂಸ್ಥಾಪಕ ಡಿಕನ್ಸ್‌ನ ಓರ್ವ ಸ್ನೇಹಿತನಾಗಿದ್ದ. ಆತ ಈ ವಿಷಯಕ್ಕೆ ಸಂಬಂಧಿಸಿದಂತೆ ತನ್ನನ್ನು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ [೨೫] (ಬಹಳ ಜನಕ್ಕೆ ಗೊತ್ತಿರದ ವಿಷಯವೆಂದರೆ, ಕೆಟ್ಟದಾಗಿ ನಡೆಸಿಕೊಳ್ಳಲ್ಪಟ್ಟ ಮಕ್ಕಳಿಗೆ ನೆರವಾಗಲು 1849ರಲ್ಲಿ ದಿ ಎಕ್ಸಾಮಿನರ್ ಎಂಬ ಸಾಪ್ತಾಹಿಕದಲ್ಲಿ ಡಿಕನ್ಸ್ ಹೆಸರಿಲ್ಲದೆ ವರದಿ ಮಾಡಿದ್ದ ಮತ್ತು 1852ರಲ್ಲಿ ಆಸ್ಪತ್ರೆಯ ಪ್ರಾರಂಭೋತ್ಸವದ ಕುರಿತು ಜಾಹೀರು ಮಾಡಲು ಮತ್ತೊಂದು ಲೇಖನವನ್ನು ಬರೆದಿದ್ದ).[೨೬] 1858ರ ಫೆಬ್ರವರಿ 9ರಂದು, ಫ್ರೀಮಾಸನ್ಸ್' ಹಾಲ್‌ನಲ್ಲಿ ನಡೆದ ಆಸ್ಪತ್ರೆಯ ಮೊದಲ ವಾರ್ಷಿಕ ಉತ್ಸವದ ಔತಣಕೂಟದಲ್ಲಿ ಡಿಕನ್ಸ್ ಭಾಷಣ ಮಾಡಿದ ಮತ್ತು ನಂತರದಲ್ಲಿ ಸೇಂಟ್ ಮಾರ್ಟಿನ್-ಇನ್-ದಿ-ಫೀಲ್ಡ್ಸ್ ಚರ್ಚ್‌ನ ಸಭಾಂಗಣದಲ್ಲಿ ಎ ಕ್ರಿಸ್‌ಮಸ್ ಕರೋಲ್ ಕೃತಿಯ ಒಂದು ಸಾರ್ವಜನಿಕ ವಾಚನಗೋಷ್ಠಿಯನ್ನು ಮಾಡಿದ. ಈ ಘಟನೆಗಳಿಂದಾಗಿ ಸಾಕಷ್ಟು ಹಣವು ಸಂಗ್ರಹವಾಗಿ, No. 48 ಗ್ರೇಟ್ ಓರ್ಮಾಂಡ್ ಸ್ಟ್ರೀಟ್ ಎಂಬ ನೆರೆಯ ವಿಳಾಸದಲ್ಲಿದ್ದ ಮನೆಯನ್ನು ಆಸ್ಪತ್ರೆಯು ಖರೀದಿಸುವಲ್ಲಿ ಮತ್ತು ಹಾಸಿಗೆಯ ಸಂಖ್ಯೆಯನ್ನು 20ರಿಂದ 75ಕ್ಕೆ ಏರಿಸುವಲ್ಲಿ ಅದು ನೆರವಾಯಿತು.[೨೭]
1858ರ ವರ್ಷದ ಆ ಬೇಸಿಗೆಯಲ್ಲಿ, ತನ್ನ ಪತ್ನಿಯಿಂದ ಬೇರ್ಪಟ್ಟ ನಂತರ,[೨೮] ವೇತನದ ಆಧಾರದ ಮೇಲೆ ಲಂಡನ್‌ನಲ್ಲಿ ಸಾರ್ವಜನಿಕ ವಾಚನಗೋಷ್ಠಿಗಳ ಮೊದಲ ಸರಣಿಯನ್ನು ಡಿಕನ್ಸ್ ಕೈಗೊಂಡ. ಇದು ಜುಲೈ 22ರಂದು ಅಂತ್ಯಗೊಂಡಿತು. ಆದಾಗ್ಯೂ, ಕೇವಲ 10 ದಿನಗಳ ವಿಶ್ರಾಂತಿಯ ನಂತರ, ಒಂದು ತ್ರಾಸದಾಯಕ ಹಾಗೂ ಮಹತ್ವಾಕಾಂಕ್ಷೀ ಪ್ರವಾಸವನ್ನು ಆತ ಪ್ರಾರಂಭಿಸಿದ. ಈ ಪ್ರವಾಸವು ಆತನನ್ನು ಇಂಗ್ಲಿಷ್ ಪ್ರಾಂತ್ಯಗಳು, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಸ್ಥಳಗಳ ಮೂಲಕ ಕರೆದುಕೊಂಡು ಹೋಯಿತು. ಆಗಸ್ಟ್ 2ರಂದು ಕ್ಲಿಫ್ಟನ್‌ನಲ್ಲಿನ ಒಂದು ಪ್ರದರ್ಶನದೊಂದಿಗೆ ಇದು ಪ್ರಾರಂಭವಾಗಿ ಮೂರು ತಿಂಗಳಿಗೂ ಹೆಚ್ಚಿನ ಅವಧಿಯ ನಂತರ ನವೆಂಬರ್ 13ರಂದು ಬ್ರೈಟನ್‌ನಲ್ಲಿ ಮುಕ್ತಾಯಗೊಂಡಿತು. ಒಟ್ಟಾರೆಯಾಗಿ ಹೇಳುವುದಾದರೆ, ಎಂಬತ್ತೇಳುಬಾರಿ ವಾಚನಗೋಷ್ಠಿಯನ್ನು ನಡೆಸಲು ಅವನ ಕಾರ್ಯಸೂಚಿ ನಿಗದಿಯಾಗಿತ್ತು. ಕೆಲವೊಂದು ದಿನಗಳಂದು ಆತ ಒಂದು ಮಧ್ಯಾಹ್ನದ ಹಾಗೂ ಒಂದು ಸಂಜೆಯ ವಾಚನಗೋಷ್ಠಿಯನ್ನು ನಡೆಸಿದ್ದೂ ಉಂಟು.[೨೯]
ಎ ಟೇಲ್ ಆಫ್ ಟು ಸಿಟೀಸ್ (1859); ಮತ್ತು ಗ್ರೇಟ್ ಎಕ್ಸ್‌ಪೆಕ್ಟೇಷನ್ಸ್ (1861) ಎಂಬೆರಡು ಪ್ರಮುಖ ಕೃತಿಗಳು ಕೆಲವೇ ದಿನಗಳಲ್ಲಿ ಹೊರಬಂದವು ಹಾಗೂ ಆತನ ಟೀಕಾಕಾರರು ಮತ್ತು ಆತನ ಅಭಿಮಾನಿ ವಲಯಗಳೆರಡರೊಂದಿಗೂ ಜನಜನಿತವಾಗಿರುವ ಯಶಸ್ಸನ್ನು ದಾಖಲಿಸಿದವು. ಈ ಅವಧಿಯಲ್ಲಿ ಆತ ಹೌಸ್‌ಹೋಲ್ಡ್ ವರ್ಡ್ಸ್ (1850–1859) ಮತ್ತು ಆಲ್ ದಿ ಇಯರ‍್ ರೌಂಡ್ (1858–1870) ಎಂಬ ನಿಯತಕಾಲಿಕಗಳಿಗೆ ಆತ ಪ್ರಕಾಶಕ ಹಾಗೂ ಸಂಪಾದಕ, ಮತ್ತು ಓರ್ವ ಪ್ರಮುಖ ಲೇಖನದಾತನೂ ಆಗಿದ್ದ. ಈ ಪ್ರಕಟಣೆಗಳಿಗಾಗಿರುವ ವರದಿಗಾರಿಕೆ ಮತ್ತು ಆತನ ಕಾದಂಬರಿಗಾಗಿರುವ ಒಂದು ಪ್ರೇರಣೆ ಹೀಗೆ ಎರಡೂ ರೂಪದಲ್ಲಿನ ಡಿಕನ್ಸ್‌ನ ಬರಹದಲ್ಲಿನ ಒಂದು ಮರುಕಳಿಸುವ ವಿಷಯವು, ಉತ್ತರ ಧ್ರುವದ ಪರಿಶೋಧನೆಯಲ್ಲಿನ ಸಾರ್ವಜನಿಕರ ಆಸಕ್ತಿಯನ್ನು ಪ್ರತಿಬಿಂಬಿಸಿದವು: ಜಾನ್ ಫ್ರಾಂಕ್ಲಿನ್ ಮತ್ತು ಜಾನ್ ರಿಚರ್ಡ್‌ಸನ್ ಎಂಬ ಪರಿಶೋಧಕರ ನಡುವಿನ ವೀರೋಚಿತ ಸ್ನೇಹವು ಎ ಟೇಲ್ ಆಫ್ ಟು ಸಿಟೀಸ್ , ದಿ ರೆಕ್ ಆಫ್ ದಿ ಗೋಲ್ಡನ್ ಮೇರಿ ಕಾದಂಬರಿಗಳು ಮತ್ತು ದಿ ಫ್ರೋಜನ್ ಡೀಪ್ ಎಂಬ ನಾಟಕಕ್ಕೆ ಸಂಬಂಧಿಸಿದ ಚಿಂತನೆಗೆ ಗ್ರಾಸವನ್ನು ಒದಗಿಸಿದವು.[೩೦] 1860ರ ಸೆಪ್ಟೆಂಬರ್‌ನ ಆರಂಭದಲ್ಲಿ, ಗ್ಯಾಡ್ಸ್ ಹಿಲ್‌ನ ಹಿಂದಿರುವ ಒಂದು ಮೈದಾನದಲ್ಲಿ, ಡಿಕನ್ಸ್ ಹೆಚ್ಚೂಕಮ್ಮಿ ತನ್ನೆಲ್ಲಾ ಕಾಗದಪತ್ರಗಳನ್ನೂ ಸುಟ್ಟು ಭಸ್ಮಮಾಡಿದ. ವ್ಯವಹಾರ ಸಂಬಂಧಿ ಪತ್ರಗಳನ್ನು ಮಾತ್ರವೇ ಬಿಟ್ಟುಬಿಡಲಾಯಿತು. ಎಲೆನ್ ಟೆರ್ಮ್ಯಾನ್ ಅವನ ಪತ್ರಗಳನ್ನೆಲ್ಲಾ ಸುಟ್ಟುಹಾಕಿದ್ದರಿಂದಾಗಿ, ಡಿಕನ್ಸ್ ಅಂಡ್ ಡಾಟರ್ ಎಂಬ ಪುಸ್ತಕವು ಪ್ರಕಟವಾಗುವವರೆಗೂ ಅವರಿಬ್ಬರ ನಡುವಿನ ಪ್ರೇಮ ವ್ಯವಹಾರದ ಆಯಾಮಗಳು ತಿಳಿದಿರಲಿಲ್ಲ. 1939ರಲ್ಲಿ ಪ್ರಕಟಗೊಂಡ ಈ ಪುಸ್ತಕವು ತನ್ನ ಮಗಳಾದ ಕೇಟ್‌ಳೊಂದಿಗೆ ಡಿಕನ್ಸ್ ಹೊಂದಿದ್ದ ಸಂಬಂಧವನ್ನು ಕುರಿತುದಾಗಿತ್ತು. ಕೇಟ್ ಡಿಕನ್ಸ್ 1929ರಲ್ಲಿ ಮರಣಹೊಂದುವುದಕ್ಕೆ ಮುಂಚಿತವಾಗಿ ಈ ಪುಸ್ತಕದ ಕುರಿತು ಲೇಖಕ ಗ್ಳಾಡಿಸ್ ಸ್ಟೋರೆಯೊಂದಿಗೆ ಕೆಲಸ ಮಾಡಿದ್ದಳು. ಡಿಕನ್ಸ್ ಹಾಗೂ ಟೆರ್ನಾನ್ ಒಬ್ಬ ಮಗನನ್ನು ಹೊಂದಿದ್ದು, ಅವನು ಹಸುಳೆಯಾಗಿದ್ದಾಗಲೇ ತೀರಿಕೊಂಡಿದ್ದ ಎಂದು ಅವಳು ಆಪಾದಿಸಿದ್ದಳಾದರೂ, ಇದಕ್ಕೆ ಸಂಬಂಧಿಸಿದ ಯಾವುದೇ ಸಮಕಾಲೀನ ಸಾಕ್ಷ್ಯವು ಅಸ್ತಿತ್ವದಲ್ಲಿಲ್ಲ.[೩೧] ಅವನ ಮರಣದ ನಂತರ, ಟೆರ್ನಾನ್‌ಗೆ ಸಂಬಂಧಿಸಿ ಒಂದು ವರ್ಷಾಶನವನ್ನು ಡಿಕನ್ಸ್ ಇತ್ಯರ್ಥಗೊಳಿಸಿದ, ಇದರಿಂದಾಗಿ ಅವಳೋರ್ವ ಆರ್ಥಿಕವಾಗಿ ಸ್ವಾವಲಂಬಿಯಾದ ಮಹಿಳೆಯಾಗುವಂತಾಯಿತು. ಡಿಕನ್ಸ್ ತನ್ನ ಜೀವಿತಾವಧಿಯ ಕೊನೆಯ 13 ವರ್ಷಗಳಲ್ಲಿ ಟೆರ್ನಾನ್‌ಳೊಂದಿಗೆ ಗುಪ್ತವಾಗಿ ವಾಸಿಸಿದ್ದ ಎಂಬುದನ್ನು ಸಾಬೀತುಪಡಿಸಲು ಕ್ಲೇರ್ ಟೊಮಾಲಿನ್‌ನ ದಿ ಇನ್‌ವಿಸಿಬಲ್ ವುಮನ್ ಎಂಬ ಪುಸ್ತಕವು ಪ್ರಕಟಿಸಲ್ಪಟ್ಟಿತು, ಮತ್ತು ತರುವಾಯ ಸೈಮನ್ ಗ್ರೇ ಎಂಬಾತನಿಂದ ಇದು ಲಿಟ್ಲ್ ನೆಲ್ ಎಂಬ ನಾಟಕವಾಗಿ ರೂಪಾಂತರಿಸಲ್ಪಟ್ಟಿತು.
ಇದೇ ಅವಧಿಯಲ್ಲಿ, ಅಧಿಸಾಮಾನ್ಯ ವಿಷಯದಲ್ಲಿನ ತನ್ನ ಆಸಕ್ತಿಯನ್ನು ಡಿಕನ್ಸ್ ಮುಂದುವರಿಸಿದ. ಇದು ಎಷ್ಟರಮಟ್ಟಿಗಿತ್ತೆಂದರೆ, ಆತ ದಿ ಘೋಸ್ಟ್ ಕ್ಲಬ್ನ[೩೨] ಆರಂಭಿಕ ಸದಸ್ಯರಲ್ಲಿ ಒಬ್ಬನಾಗಿದ್ದ.
ಫ್ರಾಂಕ್ಲಿನ್ ಘಟನೆ
[ಬದಲಾಯಿಸಿ]ವಾಯವ್ಯ ಮಾರ್ಗವನ್ನು ಕಂಡುಹಿಡಿಯಲು ಕೈಗೊಳ್ಳಲಾಗಿದ್ದ ಒಂದು ವಿಶೇಷ ಕಾರ್ಯಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ವಿವರಿಸಲಾಗದ ಸಂದರ್ಭದಲ್ಲಿ ಫ್ರಾಂಕ್ಲಿನ್ ಮರಣಿಸಿದ ನಂತರ, ಹೌಸ್‌ಹೋಲ್ಡ್ ವರ್ಡ್ಸ್ ನಲ್ಲಿ ಒಂದು ತುಣುಕನ್ನು ಬರೆಯುವುದು ಡಿಕನ್ಸ್‌ಗೆ ಸಹಜವಾಗೇ ಇತ್ತು. 1854ರಲ್ಲಿ ಕೈಗೊಳ್ಳಲಾದ ಒಂದು ಪತ್ತೆ ಕಾರ್ಯದ ವಿರುದ್ಧ ತನ್ನ ನಾಯಕನನ್ನು ಸಮರ್ಥಿಸುವಂತಿದ್ದ ಈ ಲೇಖನವು ಶೋಧನಾಕಾರ್ಯವು ಪ್ರಾರಂಭವಾದ ಸುಮಾರು ನಾಲ್ಕು ವರ್ಷಗಳ ನಂತರ ಬಂತು. ಫ್ರಾಂಕ್ಲಿನ್‌ನ ಜತೆಗಿದ್ದ ಜನರು ತಮ್ಮ ಹತಾಶೆಯಲ್ಲಿ ನರಭಕ್ಷಣೆಗೆ ಮೊರೆಹೋಗಿದ್ದರ ಕುರಿತಾದ ಸಾಕ್ಷ್ಯವನ್ನು ಪತ್ತೆಹಚ್ಚಲು ಈ ಶೋಧನಾಕಾರ್ಯವನ್ನು ಕೈಗೊಳ್ಳಲಾಗಿತ್ತು.[೩೩] ಯಾವುದೇ ಪೂರಕ ಸಾಕ್ಷ್ಯವನ್ನು ಮಂಡಿಸದೆಯೇ ಅವನು ಊಹಿಸಿದ್ದೇನೆಂದರೆ, ಅವರವರ ನಡುವೆಯೇ ನರಭಕ್ಷಣೆಗೆ ಮೊರೆ ಹೋಗುವುದಕ್ಕೆ ಬದಲಾಗಿ, ವಿಶೇಷ ಕಾರ್ಯಯಾತ್ರೆಯ ಸದಸ್ಯರು ಪ್ರಾಯಶಃ "ಎಸ್ಕಿಮೋ ಜನಾಂಗದವರಿಂದ ಆಕ್ರಮಣಕ್ಕೊಳಗಾಗಿ, ಕೊಲ್ಲಲ್ಪಟ್ಟಿರಬಹುದು...ಪ್ರತಿಯೊಬ್ಬ ಕ್ರೂರಿಯೂ ಆಂತರ್ಯದಲ್ಲಿ ಅತ್ಯಾಸೆಯ, ನಂಬಿಕೆ ದ್ರೋಹದ, ಮತ್ತು ದಯೆಯಿಲ್ಲದವನಾಗಿರುತ್ತಾನೆ ಎಂದು ನಾವು ನಂಬಿರುತ್ತೇವೆ."[೩೩] ಫ್ರಾಂಕ್ಲಿನ್‌ನ ರಕ್ಷಣಾ ತಂಡದವರಲ್ಲಿ ಒಬ್ಬನಾಗಿದ್ದುಕೊಂಡು, ನರಭಕ್ಷಣೆಯಾಗಿದೆಯೆಂದು ಭಾವಿಸಲಾಗಿರುವ ಸ್ಥಳಕ್ಕೆ ವಾಸ್ತವವಾಗಿ ಭೇಟಿನೀಡಿದ್ದ ಜಾನ್ ರೇ ಎಂಬಾತನಿಂದ ಬರೆಯಲ್ಪಟ್ಟಿದ್ದ ಎಸ್ಕಿಮೋ ಜನಾಂಗದವರ ಕುರಿತಾದ ಒಂದು ಸಮರ್ಥನೆಯು ಹೌಸ್‌ಹೋಲ್ಡ್ ವರ್ಡ್ಸ್ ನ ಒಂದು ನಂತರದ ಸಂಚಿಕೆಯಲ್ಲಿ ಪ್ರಕಟವಾಗುತ್ತಿದ್ದರೂ, ತನ್ನ ದೃಷ್ಟಿಕೋನವನ್ನು ಮಾರ್ಪಡಿಸಿಕೊಳ್ಳಲು ಡಿಕನ್ಸ್ ನಿರಾಕರಿಸಿದ.[೩೪]
ಅಂತಿಮ ವರ್ಷಗಳು
[ಬದಲಾಯಿಸಿ]1865ರ ಜೂನ್ 9ರಂದು,[೩೫] ಟೆರ್ನಾನ್‌ನೊಂದಿಗೆ ಪ್ಯಾರಿಸ್‌ನಿಂದ ಹಿಂದಿರುಗುತ್ತಿರುವಾಗ, ಸ್ಟೇಪಲ್‌ಹರ್ಸ್ಟ್ ರೈಲು ಡಿಕ್ಕಿಯಲ್ಲಿ ಡಿಕನ್ಸ್ ಸಿಲುಕಿಕೊಂಡ. ಈ ದುರ್ಘಟನೆಯಲ್ಲಿ ರೈಲಿನ ಮೊದಲ ಏಳು ಡಬ್ಬಿಗಳು ದುರಸ್ತಿಯಾಗುತ್ತಿದ್ದ ಬೀಡುಕಬ್ಬಿಣದ ಸೇತುವೆಯೊಂದರಿಂದ ಆಚೆಗೆ ರಭಸದಿಂದ ನುಗ್ಗಿದವು. ಹಳಿಗಳ ಮೇಲೆ ಉಳಿಯುವಲ್ಲಿ ಯಶಸ್ವಿಯಾದ ಮೊದಲ-ದರ್ಜೆಯ ಏಕೈಕ ಡಬ್ಬಿಯೆಂದರೆ ಡಿಕನ್ಸ್ ಪ್ರಯಾಣಮಾಡುತ್ತಿದ್ದ ಡಬ್ಬಿಯಾಗಿತ್ತು. ರಕ್ಷಕರು ಬರುವುದಕ್ಕೆ ಮುಂಚಿತವಾಗಿ ಗಾಯಾಳುಗಳಿಗೆ ಮತ್ತು ಜೀವ ಕ್ಷೀಣಿಸುತ್ತಿರುವವರಿಗೆ ನೆರವಾಗಲು ಪ್ರಯತ್ನಿಸುವಲ್ಲಿ ಡಿಕನ್ಸ್ ಒಂದಷ್ಟು ಸಮಯ ಕಳೆದ. ಆ ಜಾಗವನ್ನು ಬಿಡುವುದಕ್ಕೆ ಮುಂಚೆ, ಅವರ‍್ ಮ್ಯೂಚುಯಲ್ ಫಂಡ್ ಗೆ ಸಂಬಂಧಿಸಿದ ಅಪೂರ್ಣ ಹಸ್ತಪ್ರತಿಯನ್ನು ಅವನು ನೆನಪಿಸಿಕೊಂಡ, ಮತ್ತು ಅದನ್ನು ಮರಳಿ ಪಡೆಯಲು ತಾನು ಪಯಣಿಸುತ್ತಿದ್ದ ಡಬ್ಬಿಗೆ ಬಂದ. ವಿಶಿಷ್ಟವೆನಿಸುವ ರೀತಿಯಲ್ಲಿ, ಈ ಅನುಭವವನ್ನು ತಾನು ಬರೆದ ದಿ ಸಿಗ್ನಲ್-ಮ್ಯಾನ್ ಎಂಬ ಸಣ್ಣಕಥೆಗೆ ಒಂದು ಮೂಲಸಾಮಗ್ರಿಯಾಗಿ ಡಿಕನ್ಸ್ ನಂತರ ಬಳಸಿದ. ಕಥೆಯ ಮುಖ್ಯಪಾತ್ರವು ರೈಲು ಡಿಕ್ಕಿಯೊಂದರಲ್ಲಿ ತನ್ನದೇ ಸಾವಿನ ಮುನ್ಸೂಚನೆಯನ್ನು ಹೊಂದುತ್ತದೆ. 1861ರಲ್ಲಿ ಸಂಭವಿಸಿದ ಕ್ಲೇಟನ್ ಸುರಂಗದ ರೈಲು ಡಿಕ್ಕಿಯಂಥ ಹಿಂದಿನ ಹಲವಾರು ರೈಲು ಅಪಘಾತಗಳ ಸುತ್ತ ಅವನು ಕಥೆಯನ್ನು ಹೆಣೆದಿದ್ದ.
ಸದರಿ ಡಿಕ್ಕಿಗೆ ಸಂಬಂಧಿಸಿದಂತೆ ನಡೆಯುವ ಪಂಚನಾಮೆಯಲ್ಲಿ ಕಾಣಿಸಿಕೊಳ್ಳುವಿಕೆಯಿಂದ ತಪ್ಪಿಸಿಕೊಳ್ಳುವಲ್ಲಿ ಡಿಕನ್ಸ್ ಯಶಸ್ವಿಯಾದ. ಹಾಗೆ ಕಾಣಿಸಿಕೊಂಡರೆ, ಆ ದಿನ ಅವನು ಟೆರ್ನಾನ್ ಮತ್ತು ಆಕೆಯ ತಾಯಿಯೊಂದಿಗೆ ಪಯಣಿಸುತ್ತಿದ್ದುದು ಎಲ್ಲರಿಗೂ ಗೊತ್ತಾಗಿ, ಅದು ಒಂದು ಹಗರಣವನ್ನು ಸೃಷ್ಟಿಸುವುದು ಸಾಧ್ಯವಿತ್ತು. ಸ್ಟೇಪಲ್‌ಹರ್ಸ್ಟ್ ಡಿಕ್ಕಿಯ ಘಟನೆಯಿಂದ ಡಿಕನ್ಸ್‌ಗೆ ದೈಹಿಕವಾಗಿ ಯಾವುದೇ ಹಾನಿಯಾಗದಿದ್ದರೂ, ಅದರ ಮಾನಸಿಕ ಆಘಾತದಿಂದ ಅವನೆಂದೂ ನಿಜವಾಗಿ ಚೇತರಿಸಿಕೊಳ್ಳಲಿಲ್ಲ, ಮತ್ತು ಸಾಮಾನ್ಯವಾಗಿ ಸಮೃದ್ಧವಾಗಿದ್ದ ಅವನ ಬರಹಗಾರಿಕೆಯು ಅವರ‍್ ಮ್ಯೂಚುಯಲ್ ಫಂಡ್ ಕೃತಿಯನ್ನು ಮುಗಿಸುವಲ್ಲಿಗೆ ಕುಸಿಯಿತು ಮತ್ತು ಪೂರ್ಣಗೊಳಿಸದ ದಿ ಮಿಸ್ಟರಿ ಆಫ್ ಎಡ್ವಿನ್ ಡ್ರೂಡ್ ಕೃತಿಯನ್ನು ಒಂದು ಸುದೀರ್ಘ ವಿರಾಮದ ನಂತರ ಶುರುಮಾಡುವಂತೆ ಮಾಡಿತು. ಅವನ ಬಹುಪಾಲು ಸಮಯವು ತಾನು ಹೆಚ್ಚು-ಪ್ರೀತಿಸಿದ ಕಾದಂಬರಿಗಳಿಂದ ಭಾಗಗಳನ್ನು ಸಾರ್ವಜನಿಕ ವಾಚನಗೋಷ್ಠಿಗಳಲ್ಲಿ ಓದುವುದರಲ್ಲೇ ಕಳೆದುಹೋಯಿತು. ರಂಗಭೂಮಿಯಿಂದ ಆಕರ್ಷಿತನಾದ ಡಿಕನ್ಸ್, ಪ್ರಪಂಚದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅದನ್ನು ಬಳಸಿಕೊಂಡ, ಮತ್ತು ಇದರಿಂದಾಗಿ ರಂಗಭೂಮಿಗಳು ಹಾಗೂ ರಂಗಭೂಮಿಗೆ ಸಂಬಂಧಿಸಿದ ಜನರು ಅವನ ನಿಕೋಲಸ್ ನಿಕಲ್‌ಬೈ ಕೃತಿಯಲ್ಲಿ ಕಾಣಿಸಿಕೊಳ್ಳುವಂತಾಯಿತು. ಪ್ರವಾಸ ಪ್ರದರ್ಶನಗಳು ಅತ್ಯಂತ ಜನಪ್ರಿಯವಾಗಿದ್ದವು. 1866ರಲ್ಲಿ, ಇಂಗ್ಲಂಡ್ ಮತ್ತು ಸ್ಕಾಟ್ಲೆಂಡ್‌ನಲ್ಲಿ ಸಾರ್ವಜನಿಕ ವಾಚನಗೋಷ್ಠಿಯ ಒಂದು ಸರಣಿಯನ್ನೇ ಕೈಗೊಳ್ಳಲಾಯಿತು. ನಂತರದ ವರ್ಷದಲ್ಲಿ ಇಂಗ್ಲಂಡ್ ಮತ್ತು ಐರ್ಲೆಂಡ್‌ನಲ್ಲಿ ಹೆಚ್ಚೆಚ್ಚು ವಾಚನಗೋಷ್ಠಿಗಳು ಕಂಡುಬಂದವು.
ಅಮೆರಿಕಾಗೆ ನೀಡಿದ ಎರಡನೇ ಭೇಟಿ
[ಬದಲಾಯಿಸಿ]1867ರ ನವೆಂಬರ‍್ 9ರಂದು, ಲಿವರ್‌ಪೂಲ್‌ನಿಂದ ಸಮುದ್ರಯಾನದ ಮೂಲಕ ಪ್ರಯಾಣ ಬೆಳೆಸಿದ ಡಿಕನ್ಸ್, ತನ್ಮೂಲಕ ಅಮೆರಿಕಾದಲ್ಲಿನ ತನ್ನ ಎರಡನೇ ಸುತ್ತಿನ ವಾಚನಗೋಷ್ಠಿಯನ್ನು ಪ್ರವರ್ತಿಸಿದ. ಇದು 1868ಕ್ಕೂ ಮುಂದುವರೆಯಿತು. ನವೆಂಬರ್ 19ರಂದು ಬಾಸ್ಟನ್‌ನಲ್ಲಿ ಇಳಿದ ಆತ, ತಿಂಗಳ ಉಳಿದ ಭಾಗವನ್ನು ಔತಣಕೂಟದ ಒಂದು ಸುತ್ತಿಗೆ ಮೀಸಲಾಗಿಟ್ಟ. ರಾಲ್ಫ್ ವಾಲ್ಡೊ ಎಮರ್ಸನ್, ಹೆನ್ರಿ ವಾಡ್ಸ್‌ವರ್ತ್ ಲಾಂಗ್‌ಫೆಲೊ ಮತ್ತು ಅವನ ಅಮೆರಿಕಾದ ಪ್ರಕಾಶಕನಾದ ಜೇಮ್ಸ್ ಥಾಮಸ್ ಫೀಲ್ಡ್ಸ್ ಮೊದಲಾದ ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು. ಡಿಸೆಂಬರ‍್ ಆರಂಭದಲ್ಲಿ, ವಾಚನಗೋಷ್ಠಿಗಳು ಆರಂಭವಾದವು ಮತ್ತು ಬಾಸ್ಟನ್ ಹಾಗೂ ನ್ಯೂಯಾರ್ಕ್ ನಡುವೆ ಓಡಾಡಿಕೊಂಡಿರುತ್ತಲೇ ಡಿಕನ್ಸ್ ತಿಂಗಳನ್ನು ಕಳೆದ. "ಅಮೆರಿಕಾದ ನಿಜವಾದ ಮೂಗಿನ ಲೋಳೆಪೊರೆಯ ಉರಿಯೂತ" ಎಂದು ಅವನಿಂದ ಕರೆಯಲ್ಪಟ್ಟ ಸಮಸ್ಯೆಯಿಂದ ನರಳಲು ಅವನು ಪ್ರಾರಂಭಿಸಿದ್ದರೂ, ಯುವಕರನ್ನೂ ನಾಚಿಸುವ-ಸವಾಲೆಸಯುವ ರೀತಿಯಲ್ಲಿ ಅವನು ನಿಗದಿತ ಕಾರ್ಯಸೂಚಿಗೆ ಅಂಟಿಕೊಂಡಿದ್ದ; ಸೆಂಟ್ರಲ್ ಪಾರ್ಕ್‌ನಲ್ಲಿನ ಸ್ಲೆಜ್ ಗಾಡಿಯಲ್ಲಿನ ಪ್ರಯಾಣದಲ್ಲಿ ತೂರಿಕೊಳ್ಳುವುದನ್ನೂ ನಿಭಾಯಿಸಬಲ್ಲವನಾಗಿದ್ದ. ನ್ಯೂಯಾರ್ಕ್‌ನಲ್ಲಿ, 1867ರ ಡಿಸೆಂಬರ‍್ ರಿಂದ 1868ರ ಏಪ್ರಿಲ್ 18ರ ನಡುವಣ ಅವಧಿಯಲ್ಲಿ ಸ್ಟೀನ್‌ವೇ ಹಾಲ್‌ನಲ್ಲಿ 22 ವಾಚನಗಳನ್ನು, ಮತ್ತು 1868ರ ಜನವರಿ 16ರಿಂದ ಯಿಂದ ಜನವರಿ 21ರವರೆಗೆ ಪಿಲಿಗ್ರಿಮ್ಸ್‌ನ ಪ್ಲೈಮೌತ್ ಚರ್ಚ್‌ನಲ್ಲಿ ನಾಲ್ಕು ವಾಚನಗಳನ್ನು ಆತ ನಡೆಸಿದ. ತನ್ನ ಪ್ರಯಾಣಗಳ ಅವಧಿಯಲ್ಲಿ, ಅಮೆರಿಕಾದ ಜನರು ಹಾಗೂ ಸನ್ನಿವೇಶಗಳಲ್ಲಿ ಒಂದು ಗಮಣಾರ್ಹವಾದ ಬದಲಾವಣೆಯನ್ನು ಅವನು ಕಂಡ. ಏಪ್ರಿಲ್ 18ರಂದು ಡೆಲ್ಮೋನಿಕೋಸ್‌ನಲ್ಲಿ ಅವನ ಗೌರವಾರ್ಥವಾಗಿ ಅಮೆರಿಕಾದ ಪತ್ರಿಕಾ ವಲಯವು ಹಮ್ಮಿಕೊಂಡಿದ್ದ ಒಂದು ಔತಣಕೂಟದಲ್ಲಿ ಅವನು ಕಾಣಿಸಿಕೊಂಡಿದ್ದೇ ಅಂತಿಮವಾಗಿತ್ತು. ಈ ಸಂದರ್ಭದಲ್ಲಿ ಅಮೆರಿಕಾವನ್ನು ಇನ್ನೆಂದೂ ಬಹಿರಂಗವಾಗಿ ಖಂಡಿಸುವುದಿಲ್ಲ ಎಂದು ಅವನು ಭರವಸೆ ನೀಡಿದ. ಪ್ರವಾಸದ ಅಂತ್ಯದ ವೇಳೆಗೆ, ಘನ ಆಹಾರವನ್ನು ಸೇವಿಸಲಾಗದ ಸ್ಥಿತಿಯನ್ನು ತಲುಪಿದ್ದ ಈ ಲೇಖಕ ಕೇವಲ ಷಾಂಪೇನ್ ಮತ್ತು ಷೆರಿಯಲ್ಲಿ ಜಜ್ಜಿದ ಮೊಟ್ಟೆಗಳಿಂದ ಹೊಟ್ಟೆಹೊರೆದುಕೊಂಡಿದ್ದ. ಏಪ್ರಿಲ್ 23ರಂದು, ಬ್ರಿಟನ್‌ಗೆ ಹಿಂದಿರುಗಲು ತನ್ನ ಹಡಗನ್ನು ಅವನು ಏರಿದ. ಇದು ಕೇವಲ ತನ್ನ ಉಪನ್ಯಾಸ ಪ್ರವಾಸದ ಮುಂಬರಿಕೆಗಳಿಗೆ ಪ್ರತಿಯಾಗಿರುವ ಒಂದು ಸಂಯುಕ್ತ ಸಂಸ್ಥಾನಗಳ ಸರ್ಕಾರದ ತೆರಿಗೆ ಹಕ್ಕಿನಿಂದ ತಪ್ಪಿಸಿಕೊಳ್ಳುವ ಒಂದು ಕ್ರಮವಾಗಿತ್ತು.[೧೯]
ವಿದಾಯದ ವಾಚನಗೋಷ್ಠಿಗಳು
[ಬದಲಾಯಿಸಿ]ಲಂಕಾಷೈರ್‌ನಲ್ಲಿನ ಪ್ರೆಸ್ಟನ್‌ನಲ್ಲಿ 1869ರ ಏಪ್ರಿಲ್ 22ರಂದು ಒಂದು ಲಘು ಲಕ್ವ ಸಮಸ್ಯೆಯನ್ನು ತೋರಿಸುತ್ತಿದ್ದ ಚಿಹ್ನೆಗಳಿಂದಾಗಿ ಅವನು ಕುಸಿಯುವವರೆಗೂ, 1868 ಮತ್ತು 1869ರ ನಡುವೆ ಇಂಗ್ಲಂಡ್, ಸ್ಕಾಟ್ಲೆಂಡ್, ಮತ್ತು ಐರ್ಲೆಂಡ್‌ನಲ್ಲಿ "ವಿದಾಯದ ವಾಚನಗೋಷ್ಠಿಗಳ" ಒಂದು ಸರಣಿಯನ್ನೇ ಡಿಕನ್ಸ್ ನೀಡಿದ.[೩೬] ನಂತರದ ಪ್ರಾಂತೀಯ ವಾಚನಗೋಷ್ಠಿಗಳು ರದ್ದಾದ ನಂತರ, ತನ್ನ ಅಂತಿಮ ಕಾದಂಬರಿಯಾದ ದಿ ಮಿಸ್ಟರಿ ಆಫ್ ಎಡ್ವಿನ್ ಡ್ರೂಡ್ ನ ಕಾರ್ಯವನ್ನು ಅವನು ಶುರುಮಾಡಿದ. ಷಾಡ್ವೆಲ್‌ನಲ್ಲಿನ ಅಫೀಮು ಕೋಣೆಯೊಂದರಲ್ಲಿ "ಓಪಿಯಂ ಸಾಲ್" ಎಂಬ ಓರ್ವ ಹಿರಿಯ ಮಾದಕವಸ್ತು ವ್ಯಾಪಾರಿಯನ್ನು ಆತ ಕಂಡ. ಈತನೇ ನಂತರದಲ್ಲಿ ಅವನ ನಿಗೂಢ ಕಾದಂಬರಿಯಲ್ಲಿ ಕಾಣಿಸಿಕೊಂಡ.
ಸಾಕಷ್ಟು ಬಲವನ್ನು ಆತ ಮರುಗಳಿಸಿಕೊಂಡಾಗ, ವೈದ್ಯಕೀಯ ಅನುಮೋದನೆಯೊಂದಿಗೆ ವಾಚನಾಗೋಷ್ಠಿಗಳ ಅಂತಿಮ ಸರಣಿಯೊಂದಕ್ಕೆ ಡಿಕನ್ಸ್ ವ್ಯವಸ್ಥೆಮಾಡಿದ. ತನ್ನ ಅನಾರೋಗ್ಯದ ಕಾರಣದಿಂದಾಗಿ ತನ್ನ ಪ್ರಾಯೋಜಕರಿಗೆ ಆದ ನಷ್ಟವನ್ನು ಸ್ವಲ್ಪಮಟ್ಟಿಗಾದರೂ ತುಂಬಿಕೊಡುವ ಉದ್ದೇಶ ಅವನದಾಗಿತ್ತು. ಅಲ್ಲಿ ಹನ್ನೆರಡು ಪ್ರದರ್ಶನಗಳು ವ್ಯವಸ್ಥೆಗೊಂಡಿದ್ದು, 1870ರ ಜನವರಿ 11 ಮತ್ತು ಮಾರ್ಚ್ 15ರ ನಡುವಣ ಇವು ನಡೆಯಬೇಕಾಗಿದ್ದವು. ಕೊನೆಯ ಪ್ರಸ್ತುತಿಯು ಲಂಡನ್‌ನಲ್ಲಿನ ಸೇಂಟ್ ಜೇಮ್ಸ್ ಹಾಲ್‌ನಲ್ಲಿ ರಾತ್ರಿ 8:00 ಗಂಟೆಗೆ ನಡೆಯುವುದಿತ್ತು. ಅಷ್ಟು ಹೊತ್ತಿಗಾಗಲೇ ಅವನ ಆರೋಗ್ಯಸ್ಥಿತಿಯು ವಿಷಮಗೊಂಡಿತ್ತಾದರೂ, ಎ ಕ್ರಿಸ್‌ಮಸ್ ಕರೋಲ್ ಮತ್ತು ದಿ ಟ್ರಯಲ್ ಫ್ರಂ ಪಿಕ್‌ವಿಕ್ ಕೃತಿಗಳನ್ನು ಅವನು ವಾಚನಮಾಡಿದ. ಮೇ 2ರಂದು, ರಾಜಕುಮಾರ ಮತ್ತು ವೇಲ್ಸ್‌ನ ರಾಜಕುಮಾರಿಯ ಸಮ್ಮುಖದಲ್ಲಿ ನಡೆದ ರಾಯಲ್ ಅಕಾಡೆಮಿಯ ಔತಣಕೂಟವೊಂದರಲ್ಲಿ ತನ್ನ ಕೊನೆಯ ಸಾರ್ವಜನಿಕ ದರ್ಶನವನ್ನು ಅವನು ಮಾಡಿದ. ತನ್ನ ಸ್ನೇಹಿತ, ಸಚಿತ್ರಕಾರ ಡೇನಿಯೆಲ್ ಮ್ಯಾಕ್ಲೈಸ್‌ನ ಅಗಲುವಿಕೆಗೆ ಈ ಮೂಲಕ ಒಂದು ವಿಶೇಷ ಗೌರವ ಕಾಣಿಕೆಯನ್ನು ಅವನು ಸಲ್ಲಿಸಿದ.[೩೭]
ಮರಣ
[ಬದಲಾಯಿಸಿ]1870ರ ಜೂನ್ 8ರಂದು, ಎಡ್ವಿನ್ ಡ್ರೂಡ್ ಗೆ ಸಂಬಂಧಿಸಿದ ಒಂದು ಸಂಪೂರ್ಣ ದಿನದ ಕೆಲಸದ ನಂತರ ಡಿಕನ್ಸ್ ತನ್ನ ಮನೆಯಲ್ಲಿ ಮತ್ತೊಂದು ಲಕ್ವಕ್ಕೆ ಈಡಾದ. ಮರುದಿನ, ಅಂದರೆ ಜೂನ್ 9ರಂದು, ಮತ್ತು ಸ್ಟೇಪಲ್‌ಹರ್ಸ್ಟ್ ಡಿಕ್ಕಿಯು ಸಂಭವಿಸಿದ ನಂತರದ ಐದು ವರ್ಷಗಳಾದ ದಿನದಂದು, ಮತ್ತೆಂದೂ ಪ್ರಜ್ಞೆಯನ್ನು ಮರಳಿ ಪಡೆಯದ ಸ್ಥಿತಿಯಲ್ಲಿ ಆತ ಗ್ಯಾಡ್’ಸ್ ಹಿಲ್ ಪ್ಲೇಸ್‌ನಲ್ಲಿ ಮರಣಹೊಂದಿದ. "ಒಂದು ಅಗ್ಗದ, ನಿರಾಡಂಬರದ, ಮತ್ತು ಕಟ್ಟುನಿಟ್ಟಾಗಿ ಖಾಸಗಿಯದಾಗಿರುವ ವಿಧಾನದಲ್ಲಿ" ರೋಚೆಸ್ಟರ್ ಕೆಥಡ್ರಲ್‌ನಲ್ಲಿ ತನ್ನ ಶವವನ್ನು ಸಮಾಧಿಮಾಡಬೇಕು ಎಂಬ ಅವನ ಇಚ್ಛೆಗೆ ವಿರುದ್ಧವಾಗಿ, ವೆಸ್ಟ್‌ಮಿನಿಸ್ಟರ್ ಅಬೆಯ ಪೊಯೆಟ್ಸ್’ ಕಾರ್ನರ್‌ನಲ್ಲಿ ಅವನನ್ನು ಚಿರವಿಶ್ರಾಂತಿಯ ಸ್ಥಿತಿಯಲ್ಲಿ ಇರಿಸಲಾಯಿತು. ಅವನ ಗೋರಿಯ ಮೇಲಿನ ಕೆತ್ತಿದ ಬರಹವು ಈ ರೀತಿ ಇದೆ: "CHARLES DICKENS ಹುಟ್ಟಿದ್ದು 7 ಫೆಬ್ರವರಿ 1812 ಮರಣ 9 ಜೂನ್ 1870."[೩೮] ಅವನ ಅಂತ್ಯಕ್ರಿಯೆಯ ಸಂದರ್ಭದಲ್ಲಿ ವಿತರಿಸಲಾದ ಒಂದು ಮುದ್ರಿತ ಸಮಾಧಿಲೇಖದಲ್ಲಿ ಹೀಗೆ ಬರೆಯಲಾಗಿತ್ತು: "1870ರ ಜೂನ್ 9ರಂದು ಕೆಂಟ್‌ನ ರೋಚೆಸ್ಟರ್ ಸಮೀಪದ ತನ್ನ ನಿವಾಸ ಹೈಯಾಮ್‌ನಲ್ಲಿ ಮರಣಿಸಿದ, 58 ವರ್ಷ ವಯಸ್ಸಿನ ಚಾರ್ಲ್ಸ್ ಡಿಕನ್ಸ್‌ನ (ಇಂಗ್ಲಂಡ್‌ನ ಅತ್ಯಂತ ಜನಪ್ರಿಯ ಲೇಖಕ) ನೆನಪಿಗಾಗಿ. ಬಡವರು, ನರಳುತ್ತಿರುವವರು, ಮತ್ತು ತುಳಿತಕ್ಕೊಳಗಾದವರೊಂದಿಗೆ ಅವನೊಬ್ಬ ಸಹಾನುಭೂತಿಯುಳ್ಳವನಾಗಿದ್ದ; ಅವನ ಸಾವಿನಿಂದಾಗಿ ವಿಶ್ವವು ಇಂಗ್ಲಂಡ್‌ನ ಮಹಾನ್ ಲೇಖಕರ ಪೈಕಿ ಒಬ್ಬನನ್ನು ಕಳೆದುಕೊಂಡಂತಾಗಿದೆ."[೩೯]
1870ರ ಜೂನ್ 19ರ ಭಾನುವಾರದಂದು, ಅಬೆಯಲ್ಲಿ ಡಿಕನ್ಸ್‌ನ ಶವವನ್ನು ದಫನುಮಾಡಿದ ಐದು ದಿನಗಳ ನಂತರ, ಉಸ್ತುವಾರಿ ಪಾದ್ರಿಯಾದ ಅರ್ಥರ‍್ ಪೆನ್ರಿನ್ ಸ್ಟಾನ್ಲೆ ಎಂಬಾತ ಒಂದು ಜ್ಞಾಪಕಾರ್ಥ ಶೋಕಗೀತೆಯನ್ನು ಸ್ತುತಿಸಿದ. ಅದು ಹೀಗಿತ್ತು: "ಅತ್ಯಂತ ಕರಾಳ ಸನ್ನಿವೇಶಗಳು ಹಾಗೂ ಅತ್ಯಂತ ಅವಮಾನಕರವಾಗಿಸಿದ ಪಾತ್ರಗಳೊಂದಿಗೆ ವ್ಯವಹರಿಸುವಾಗಲೂ, ಅಸಾಧಾರಣ ವ್ಯಕ್ತಿಗಳು ಪರಿಶುದ್ಧವಾಗಿರಲು ಸಾಧ್ಯವಿದೆ, ಮತ್ತು ಸಂತೋಷವು ಮುಗ್ಧವಾಗಿರಲು ಸಾಧ್ಯವಿದೆ" ಎಂಬುದನ್ನು ತನ್ನದೇ ಸ್ವಂತ ಉದಾಹರಣೆಯಿಂದ ತೋರಿಸಿಕೊಟ್ಟಿದ್ದಕ್ಕಾಗಿ, "ದಯಾಳುವಾದ ಮತ್ತು ಪ್ರೀತಿಸುವ ಹಾಸ್ಯಲೇಖಕನ ಕುರಿತು ಈಗ ನಾವು ಶೋಕವನ್ನಾಚರಿಸೋಣ". ಕಾದಂಬರಿಕಾರನ ಸಮಾಧಿಯನ್ನು ಅಲಂಕರಿಸಿರುವ ತಾಜಾ ಹೂವುಗಳೆಡೆಗೆ ತೋರಿಸುತ್ತಾ, ಅಲ್ಲಿ ಹಾಜರಿದ್ದವರಿಗೆ ಸ್ಟಾನ್ಲೆ ಈ ರೀತಿಯಲ್ಲಿ ಭರವಸೆಯನ್ನು ನೀಡಿದ: "ಕೇವಲ ಈ ದ್ವೀಪ ಮಾತ್ರವೇ ಅಲ್ಲದೇ ಇಂಗ್ಲಿಷ್ ಮಾತೃಭಾಷೆಯನ್ನು ಮಾತನಾಡುವ ಎಲ್ಲರ, ಸಾಹಿತ್ಯದ ಪ್ರತಿನಿಧಿಯಾಗಿರುವಂಥ ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚಗಳೆರಡಕ್ಕೂ ಈ ಸ್ಥಳವು ತರುವಾಯ ಒಂದು ಪವಿತ್ರ ಸ್ಥಳವಾಗಲಿದೆ."[೪೦]
ಡಿಕನ್ಸ್‌ನನ್ನು ಗೌರವಿಸಲು ಯಾವುದೇ ಸ್ಮಾರಕವನ್ನು ಕಟ್ಟಬಾರದು ಎಂದು ಅವನ ಉಯಿಲು ಷರತ್ತು ವಿಧಿಸಿತ್ತು. ಫ್ರಾನ್ಸಿಸ್ ಎಡ್ವಿನ್ ಎಲ್ವೆಲ್ ಎಂಬಾತನಿಂದ 1891ರಲ್ಲಿ ಎರಕ ಹೊಯ್ದು ತಯಾರಿಸಲ್ಪಟ್ಟಿದ್ದ ಸಹಜ ಗಾತ್ರದ ಡಿಕನ್ಸ್‌ನ ಕಂಚಿನ ಪ್ರತಿಮೆಯನ್ನು ಮಾತ್ರವೇ ಕ್ಲಾರ್ಕ್ ಪಾರ್ಕ್‌ನಲ್ಲಿ ಸ್ಥಾಪಿಸಲಾಗಿದೆ. ಇದು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದ ಸ್ಪ್ರೂಸ್ ಹಿಲ್ ನೆರೆಹೊರೆಯ ಪ್ರದೇಶದಲ್ಲಿದೆ.
ಸಾಹಿತ್ಯಿಕ ಶೈಲಿ
[ಬದಲಾಯಿಸಿ]18ನೇ ಶತಮಾನದ ಗಾತಿಕ್ ಶೈಲಿಯ ಪ್ರಣಯವು ಅಷ್ಟುಹೊತ್ತಿಗಾಗಲೇ ವಿಡಂಬನ ಬರಹಕ್ಕಾಗಿ ಇಟ್ಟುಕೊಳ್ಳಲಾಗಿದ್ದ ಒಂದು ಗುರಿಯಾಗಿತ್ತಾದರೂ, ಆ ಶೈಲಿಯನ್ನು ಡಿಕನ್ಸ್ ಇಷ್ಟಪಟ್ಟ. [ಸೂಕ್ತ ಉಲ್ಲೇಖನ ಬೇಕು] ಆತನ ಕಾದಂಬರಿಗಳಾದ್ಯಂತ ಎದ್ದುಕಾಣುವಂತೆ ಚಿತ್ರಿಸಲಾಗಿರುವ ಒಂದು "ಪಾತ್ರ" ಎಂದರೆ ಅದು ಸ್ವತಃ ಲಂಡನ್ ಆಗಿದೆ. ನಗರದ ಹೊರವಲಯದಲ್ಲಿರುವ ಸಾರೋಟು ಗೃಹಗಳಿಂದ ಪ್ರಾರಂಭಿಸಿ ಥೇಮ್ಸ್ ನದಿಯ ಕೆಳಭಾಗದ ವಿಸ್ತಾರದವರೆಗಿನ, ರಾಜಧಾನಿಯ ಎಲ್ಲ ಮಗ್ಗಲುಗಳೂ ಅವನ ಕೃತಿಯ ಕಾರ್ಯಚಟುವಟಿಕೆಯಾದ್ಯಂತ ವಿವರಿಸಲ್ಪಟ್ಟಿವೆ.
ಅವನ ಬರಹದ ಶೈಲಿಯು ಅತ್ಯಲಂಕಾರದ ಮತ್ತು ಕಾವ್ಯಾತ್ಮಕವಾಗಿದ್ದು, ಒಂದು ಪ್ರಬಲವಾದ ಹಾಸ್ಯದ ಸ್ಪರ್ಶವನ್ನು ಹೊಂದಿರುತ್ತದೆ. ಬ್ರಿಟಿಷ್ ವೈಭವದ ಒಣಪ್ರತಿಷ್ಠೆಯ ಕುರಿತಾದ ಅವನ ವಿಡಂಬನೆಗಳು ಹೆಚ್ಚು ಬಾರಿ ಜನಪ್ರಿಯವಾಗಿವೆ. ಒಂದು ಪಾತ್ರವನ್ನು ಆತ "ಕುಲೀನ ಶೀತಕಯಂತ್ರ" (ನೋಬಲ್ ರೆಫ್ರಿಜಿರೇಟರ್) ಎಂದು ಕರೆದಿರುವುದು ಇದಕ್ಕೊಂದು ನಿದರ್ಶನ. ಅನಾಥ ಮಕ್ಕಳನ್ನು ಸ್ಟಾಕ್‌ಗಳು ಮತ್ತು ಷೇರುಗಳಿಗೆ, ಜನರನ್ನು ಜಗ್ಗುದೋಣಿಗಳಿಗೆ, ಅಥವಾ ಔತಣಕೂಟದ ಅತಿಥಿಗಳನ್ನು ಪೀಠೋಪಕರಣಗಳಿಗೆ ಹೋಲಿಸುವುದು ಮೆಚ್ಚುಗೆ ಪಡೆದಿರುವ ಡಿಕನ್ಸ್‌ನ ಕಲ್ಪನಾಶಕ್ತಿಯ ಹಾರಾಟಗಳಿಗೆ ಕೇವಲ ಒಂದಷ್ಟು ಉದಾಹರಣೆಗಳಾಗಿವೆ. ಅವನ ಬಹುತೇಕ ಪಾತ್ರಗಳ ಹೆಸರುಗಳು ಕಥೆಯ ಎಳೆಯನ್ನು ಮುಂದುವರಿಸುವಲ್ಲಿನ ಪಾತ್ರಗಳಾಗಿ ಓದುಗರಿಗೆ ಒಂದು ಸುಳಿವನ್ನು ನೀಡುತ್ತವೆ. ಡೇವಿಡ್ ಕಾಪರ್‌ಫೀಲ್ಡ್ ಕಾದಂಬರಿಯಲ್ಲಿನ ಶ್ರೀಮಾನ್ ಮರ್ಡ್‌ಸ್ಟೋನ್ ಪಾತ್ರವನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ, ಅದು "ಮರ್ಡರ್" ಮತ್ತು ಕಲ್ಲಿನಂಥ (ಸ್ಟೋನಿ) ಶೀತಲತೆಯ ಒಂದು ಸ್ಪಷ್ಟ ಸಂಯೋಜನೆಯಾಗಿ ಕಾಣಿಸುತ್ತದೆ. ಅವನ ಸಾಹಿತ್ಯಿಕ ಶೈಲಿಯೂ ಕೂಡ ಕಲ್ಪನಾಶಕ್ತಿ ಮತ್ತು ಯಥಾರ್ತತೆಗಳ ಒಂದು ಮಿಶ್ರಣವಾಗಿದೆ.
ಪಾತ್ರಗಳು
[ಬದಲಾಯಿಸಿ]ಅನೇಕ ವಿಷಯಗಳಿಗೆ ಡಿಕನ್ಸ್ ಹೆಸರುವಾಸಿಯಾಗಿದ್ದಾನೆ. ಕಾರ್ಮಿಕ ವರ್ಗದ ಯಾತನೆಗಳನ್ನು ಆತ ಚಿತ್ರಿಸುವ ರೀತಿ, ಆತನ ಸಂಕೀರ್ಣವಾದ ಕಥಾವಸ್ತುಗಳು, ಆತನ ಹಾಸ್ಯಪ್ರಜ್ಞೆ ಇವೆಲ್ಲವೂ ಅವನ ಕೃತಿಗಳಲ್ಲಿ ಕಂಡುಬರುತ್ತವೆ. ಆದರೆ ಪ್ರಾಯಶಃ ಆತ ತಾನು ಸೃಷ್ಟಿಸಿದ ಪಾತ್ರಗಳಿಂದಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದಾನೆ ಎನಿಸುತ್ತದೆ. ಅವನ ಕಾದಂಬರಿಗಳು ಕಾಗದದ ಮೇಲೆ ಶ್ರೀಸಾಮಾನ್ಯನನ್ನು ಹಿಡಿದಿಡುವ ತಮ್ಮ ಸಾಮರ್ಥ್ಯದಿಂದಾಗಿ ಮತ್ತು ಈ ಮೂಲಕ ಒಂದು ಸ್ಮರಣಾರ್ಹ ಪಾತ್ರವನ್ನು ಸೃಷ್ಟಿಸುವುದರಿಂದಾಗಿ, ಅವನ ವೃತ್ತಿಜೀವನದಲ್ಲಿ ಮುಂಚಿತವಾಗಿಯೇ ಬರಮಾಡಿಕೊಳ್ಳಲ್ಪಟ್ಟವು. ಸದರಿ ಸ್ಮರಣಾರ್ಹ ಪಾತ್ರದೊಂದಿಗೆ ಓದುಗರು ತಮ್ಮನ್ನು ಸಂಬಂಧ ಕಲ್ಪಿಸುವ, ಮತ್ತು ಅದನ್ನು ಓರ್ವ ನಿಜವಾದ ವ್ಯಕ್ತಿಯಂತೆ ಚಿತ್ರಿಸಿಕೊಳ್ಳುವ ಸ್ಥಿತಿಯು ರೂಪುಗೊಳ್ಳುತ್ತಿದ್ದುದು ಅವನ ಬರಹದ ಗಟ್ಟಿತನವಾಗಿರುತ್ತಿತ್ತು. 1836ರಲ್ಲಿ ಪಿಕ್‌ವಿಕ್ ಪೇಪರ್ಸ್ ಕೃತಿಯೊಂದಿಗೆ ಪ್ರಾರಂಭಿಸಿ, ಡಿಕನ್ಸ್ ಅನೇಕ ಕಾದಂಬರಿಗಳನ್ನು ಬರೆದಿದ್ದಾನೆ. ಪ್ರತಿ ಕಾದಂಬರಿಯಲ್ಲೂ ನಂಬಲರ್ಹವಾದ ವ್ಯಕ್ತಿತ್ವಗಳು ಹಾಗೂ ಎದ್ದುಕಾಣುವ ಶಾರೀರಿಕ ವಿವರಗಳು ಅನನ್ಯವಾದ ರೀತಿಯಲ್ಲಿ ತುಂಬಿಕೊಂಡಿರುತ್ತಿದ್ದವು. ಡಿಕನ್ಸ್‌ನ ಸ್ನೇಹಿತ ಹಾಗೂ ಜೀವನಚರಿತ್ರೆಕಾರನಾದ ಜಾನ್ ಫಾರ್ಸ್ಟರ್ ಹೇಳಿರುವ ಪ್ರಕಾರ, "ಪಾತ್ರಗಳನ್ನು ವಿವರಿಸುವುದಕ್ಕೆ ಬದಲಾಗಿ, ಸ್ವತಃ ಅವುಗಳೇ ತಮ್ಮನ್ನು ವಿವರಿಸಿಕೊಳ್ಳಲು ಅನುವು ಮಾಡಿಕೊಡುವ ಮೂಲಕ, ಪಾತ್ರಗಳು ನಿಜವಾದ ಅಸ್ತಿತ್ವಗಳಾಗಿರುವಂತೆ" ಡಿಕನ್ಸ್ ಅವುಗಳನ್ನು ರೂಪಿಸಿದ.[೪೧]
ಡಿಕನ್ಸನ್ ಸೃಷ್ಟಿಸಿದ ಪಾತ್ರಗಳು —ಅದರಲ್ಲೂ ವಿಶೇಷವಾಗಿ, ಮಾದರಿಯಾಗಿ ವಿಲಕ್ಷಣವಾಗಿರುವ ಅವುಗಳ ಹೆಸರುಗಳು— ಇಂಗ್ಲಿಷ್ ಸಾಹಿತ್ಯದಲ್ಲಿನ ಅತ್ಯಂತ ಸ್ಮರಣಾರ್ಹವಾದವುಗಳ ಮಧ್ಯದಲ್ಲಿ ಸ್ಥಾನವನ್ನು ಪಡೆದಿವೆ. ಎಬೆನೇಜರ‍್ ಸ್ಕ್ರೂಗ್, ಟೈನಿ ಟಿಮ್, ಜಾಕೋಬ್ ಮಾರ್ಲೆ, ಬಾಬ್ ಕ್ರಾಟ್‌ಚಿಟ್, ಆಲಿವರ‍್ ಟ್ವಿಸ್ಟ್, ದಿ ಆರ್ಟ್‌ಫುಲ್ ಡಾಡ್ಜರ್, ಫ್ಯಾಗಿನ್, ಬಿಲ್ ಸೈಕ್ಸ್, ಪಿಪ್, ಮಿಸ್ ಹ್ಯಾವಿಶಾಂ, ಚಾರ್ಲ್ಸ್ ಡಾರ್ನೆ, ಡೇವಿಡ್ ಕಾಪರ್‌ಫೀಲ್ಡ್, ಶ್ರೀಮಾನ್ ಮಿಕಾಬರ್, ಅಬೆಲ್ ಮ್ಯಾಗ್‌ವಿಚ್, ಡೇನಿಯಲ್ ಕ್ವಿಲ್ಪ್, ಸ್ಯಾಮ್ಯುಯೆಲ್ ಪಿಕ್‌ವಿಕ್, ವ್ಯಾಕ್‌ಫೋರ್ಡ್ ಸ್ಕ್ವೀರ್ಸ್, ಉರಿಯಾಹ್ ಹೀಪ್ ಮತ್ತು ಇನ್ನೂ ಅನೇಕರ ಅಭಿರುಚಿಗಳು ತುಂಬಾ ಸುಪರಿಚಿತವಾಗಿವೆ ಮತ್ತು ಅವರ ಕಥೆಗಳು ಇತರ ಲೇಖಕರಿಂದ ಮುಂದುವರಿಸಲ್ಪಡುತ್ತಿವೆ ಎಂಬಂತೆ ಅವು ಕಾದಂಬರಿಗಳ ಆಚೆಗೆ ಒಂದು ಜೀವನವನ್ನು ನಡೆಸುತ್ತಿವೆ ಎಂದು ನಂಬುವಂಥವಾಗಿವೆ. [ಸೂಕ್ತ ಉಲ್ಲೇಖನ ಬೇಕು]
ಕೃತಿಯ ರಚನೆಯು ಪ್ರಾರಂಭವಾಗುವುದಕ್ಕೆ ಮೊದಲು ಅದರ ಕುರಿತಾದ ಒಟ್ಟಾರೆ ಸಾರಾಂಶವನ್ನು ಸಚಿತ್ರಕಾರರಿಗೆ ಒದಗಿಸುವ ಮೂಲಕ ಲೇಖಕ ಅತ್ಯಂತ ನಿಕಟವಾಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ತನ್ನ ಪಾತ್ರಗಳು ಹಾಗೂ ಸನ್ನಿವೇಶಗಳ ಕುರಿತಾದ ಅವನ ದೃಷ್ಟಿಕೋನವು ಅವರಿಗೆ ಸೂಕ್ತವಾಗಿ ತಲುಪುವಂತಾಗುತ್ತಿತ್ತು.[೪೨] ಪ್ರತಿ ತಿಂಗಳೂ ತಾನು ಒದಗಿಸುವ ಧಾರಾವಾಹಿ ಕಂತಿನ ಕುರಿತಾದ ಯೋಜನೆಗಳನ್ನು ಆತ ಸಚಿತ್ರಕಾರರಿಗೆ ವಿವರಿಸುತ್ತಿದ್ದ. ಹೀಗಾಗಿ ಆ ಕಂತುಗಳನ್ನು ಬರೆಯುವುದಕ್ಕೆ ಮುಂಚಿತವಾಗಿಯೇ ಎರಡು ವಿವರಣಾತ್ಮಕ ಚಿತ್ರಗಳು ಪ್ರಾರಂಭವಾಗಲು ಸಾಧ್ಯವಾಗುತ್ತಿತ್ತು. ಅವರ‍್ ಮ್ಯೂಚುಯಲ್ ಫಂಡ್‌ನ ಸಚಿತ್ರಕಾರನಾದ ಮರ್ಕಸ್ ಸ್ಟೋನ್ ಲೇಖಕನ ಕುರಿತಾಗಿ ನೆನಪಿಸಿಕೊಳ್ಳುತ್ತಾ, "ವ್ಯಕ್ತಿಗತ ಗುಣಲಕ್ಷಣಗಳ ಅತಿಚಿಕ್ಕ ವಿವರಗಳನ್ನು, ಮತ್ತು... ಆತನ ಕಾಲ್ಪನಿಕತೆಯ ಸೃಷ್ಟಿಗಳ ಜೀವನ ಚರಿತ್ರೆಯನ್ನು ವಿವರಿಸಲು ಆತ ಯಾವಾಗಲೂ ಸಿದ್ಧನಿರುತ್ತಿದ್ದ" ಎಂದು ಹೇಳಿದ್ದಾನೆ.[೨೯] ಹೀಗೆ ಸನಿಹದಲ್ಲಿ ಕೆಲಸ ಮಾಡುವಲ್ಲಿನ ಆತನ ಸಚಿತ್ರಕಾರರೊಂದಿಗಿನ ಸಂಬಂದವು ಡಿಕನ್ಸ್‌ನ ಇಂದಿನ ಓದುಗರಿಗೆ ಮುಖ್ಯವಾಗಿ ಕಂಡುಬರುತ್ತದೆ. ಸಚಿತ್ರಕಾರರಿಗೆ ಡಿಕನ್ಷ್ ಪಾತ್ರಗಳ ಕುರಿತು ವಿವರಿಸಿ, ಅದಕ್ಕೆ ಸಂಬಂಧಿಸಿದ ರೇಖಾಚಿತ್ರಗಳನ್ನು ಅನುಮೋದಿಸಿದ ರೀತಿಯಲ್ಲಿಯೇ ವಿವರಣಾತ್ಮಕ ಚಿತ್ರಗಳು ಪಾತ್ರಗಳ ಒಂದು ನಸುನೋಟವನ್ನು ನಮಗೆ ನೀಡುತ್ತವೆ. ಡಿಕನ್ಸ್‌ನ ಕೃತಿಗಳ ನಾಟಕೀಕರಣ ಅಥವಾ ದೃಶ್ಯರಚನೆಯ ಸಂದರ್ಭದಲ್ಲಿ ಚಲನಚಿತ್ರ ತಯಾರಕರು ಪಾತ್ರ ನಿರೂಪಣೆ, ವಸ್ತ್ರವಿನ್ಯಾಸ, ಹಾಗೂ ಸಜ್ಜಿಕೆಯ ವಿನ್ಯಾಸಕ್ಕೆ ಸಂಬಂಧಿಸಿದಂತೆ ವಿವರಣಾತ್ಮಕ ಚಿತ್ರಗಳನ್ನು ಒಂದು ಆಧಾರವಾಗಿ ಈಗಲೂ ಬಳಸುತ್ತಾರೆ.
ಈ ಪಾತ್ರಗಳು ಅನೇಕ ಬಾರಿ ಅವನಿಗೆ ಗೊತ್ತಿದ್ದ ಜನರನ್ನು ಆಧರಿಸಿರುತ್ತಿದ್ದವು. ಮೂಲದ ಮೇಲೆ ಅತ್ಯಂತ ಸನಿಹದಲ್ಲಿ ಪಾತ್ರವನ್ನು ಆಧರಿಸಿ ಡಿಕನ್ಸ್ ತೊಂದರೆಗೆ ಸಿಕ್ಕಿಕೊಂಡಿರುವ ಕೆಲವೊಂದು ನಿದರ್ಶನಗಳೂ ಇವೆ. ಬ್ಲೀಕ್ ಹೌಸ್ ನಲ್ಲಿನ ಹೆರಾಲ್ಡ್ ಸ್ಕಿಂಪೋಲ್ ಪಾತ್ರವು ಲೀಗ್ ಹಂಟ್‌ನ್ನು ಆಧರಿಸಿದ್ದರೆ, ಡೇವಿಡ್ ಕಾಪರ್‌ಫೀಲ್ಡ್ ನಲ್ಲಿನ ಮಿಸ್ ಮೌಚರ್ ಪಾತ್ರವು ಆತನ ಪತ್ನಿಯ ಕುಳ್ಳು ಕಾಲಿನ ವೈದ್ಯನನ್ನು ಆಧರಿಸಿದ್ದುದು ಇಂಥ ಒಂದೆರಡು ಉದಾಹರಣೆಗಳೆನ್ನಬಹುದು. ಇವು ಅತಿಯಾಗಿ ನಾಟಕೀಕರಣಗೊಂಡ ವಿಕಟಚಿತ್ರಣಗಳಲ್ಲದಿದ್ದರೂ, ನಾವು ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಎದುರಿಗೆ ಕಂಡುಬರಬಹುದಾದ ನಂಬಲರ್ಹ ಜನರಾಗಿರುತ್ತಾರೆ. ವಾಸ್ತವವಾಗಿ , ಡಿಕನ್ಸ್‌ನ ಕಾದಂಬರಿಯೊಂದನ್ನು ಓದುವಾಗ ಮಾಡಲಾಗುವ ಪರಿಚಯಗಳನ್ನು ಸುಲಭವಾಗಿ ಮರೆಯಲಾಗುವುದಿಲ್ಲ. ವರ್ಜೀನಿಯಾ ವೂಲ್ಫ್ ಎಂಬ ಲೇಖಕ ಸಮರ್ಥಿಸುವ ಪ್ರಕಾರ, "ನಾವು ಡಿಕನ್ಸ್‌ನ ಕಾದಂಬರಿಗಳನ್ನು ಓದುವಾಗ ನಮ್ಮ ಮಾನಸಿಕ ಲಕ್ಷಣಗಳನ್ನು ನಾವು ಮರುರೂಪಿಸುತ್ತೇವೆ. ಏಕೆಂದರೆ, ವಿವರವಾಗಿರದ, ಕರಾರುವಾಕ್ಕಾಗಿರದ ಅಥವಾ ಖಚಿತವಾಗಿರದ ಪಾತ್ರಗಳಿಗೆ ಬದಲಾಗಿ, ಸ್ವಚ್ಛಂದ ಪ್ರವೃತ್ತಿಯಿದ್ದೂ ಅಸಾಧಾರಣವಾದ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರ ಒಂದು ಗುಚ್ಛದಲ್ಲಿ ಸಮೃದ್ಧವಾಗಿರುವ ಪಾತ್ರಗಳನ್ನು ಅವನು ಸೃಷ್ಟಿಸುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗುತ್ತದೆ."[೪೩]
ಅತ್ಮಚರಿತ್ರೆಗೆ ಸಂಬಂಧಿಸಿದ ಅಂಶಗಳು
[ಬದಲಾಯಿಸಿ]ಅಲ್ಲಾ ಲೇಖಕರೂ ಸಹ ತಮ್ಮ ಕಾದಂಬರಿಗಳಲ್ಲಿ ಅತ್ಮಚರಿತ್ರೆಗೆ ಸಂಬಂಧಿಸಿದ ಅಂಶಗಳನ್ನು ಸಂಯೋಜಿಸಿರುತ್ತಾರಾದರೂ, ಡಿಕನ್ಸ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ ಇದು ಅತ್ಯಂತ ಗಮನಾರ್ಹವಾಗಿರುತ್ತದೆ. ಅತ್ಯಂತ ಅವಮಾನಕರ ಎಂದು ಆತ ಪರಿಗಣಿಸಿದ್ದ ತನ್ನ ಹಿಂದಿನ ದೀನಸ್ಥಿತಿಯನ್ನು ಮರೆಮಾಚಲು ಆತ ಸಾಕಷ್ಟು ಕಷ್ಟಪಟ್ಟಿದ್ದಾನಾದರೂ ಇದು ಗಮನಾರ್ಹವೆನಿಸುತ್ತದೆ. ಅತ್ಮಚರಿತ್ರೆಗೆ ಸಂಬಂಧಿಸಿದ ಶೈಲಿಯು ಸ್ಪಷ್ಟವಾಗಿರುವ ಕೃತಿಗಳ ಪೈಕಿ ಡೇವಿಡ್ ಕಾಪರ್‌ಫೀಲ್ಡ್ ಕೃತಿಯು ಒಂದಾಗಿದೆಯಾದರೂ, ಬ್ಲೀಕ್ ಹೌಸ್ ನಿಂದ ಪಡೆಯಲಾಗಿರುವ ಅಂತ್ಯವಿಲ್ಲದ ನ್ಯಾಯಾಲಯ ಪ್ರಕರಣಗಳು ಮತ್ತು ಕಾನೂನು ಸಂಬಂಧಿ ವಾದವಿವಾದಗಳ ದೃಶ್ಯಗಳನ್ನು, ಓರ್ವ ನ್ಯಾಯಾಲಯದ ವರದಿಗಾರನಾಗಿದ್ದ ಲೇಖಕನ ಸಂಕ್ಷಿಪ್ತ ವೃತ್ತಿಜೀವನದಿಂದ ಎತ್ತಿಕೊಳ್ಳಲಾಗಿದೆ ಎಂದು ಹೇಳಬಹುದು. ಋಣಭಾರದ ಕಾರಣಕ್ಕಾಗಿ ಡಿಕನ್ಸ್‌ನ ಸ್ವಂತ ತಂದೆಯನ್ನು ಸೆರೆಮನೆಗೆ ಕಳಿಸಲಾಯಿತು (ಅಲ್ಲಿ ಅವನೊಟ್ಟಿಗೆ ಅವನ ಹೆಂಡತಿ ಮತ್ತು ಮಕ್ಕಳು ಬಂದು ಸೇರಿದರು), ಮತ್ತು ಇದು ಅವನ ಅನೇಕ ಪುಸ್ತಕಗಳಲ್ಲಿ ಒಂದು ಸಾಮಾನ್ಯ ವಿಷಯವಾಗಿ ಮಾರ್ಪಟ್ಟಿತು. ಈ ಹಿನ್ನೆಲೆಯಲ್ಲಿ, ಲಿಟ್ಲ್ ಡೋರಿಟ್ ಕೃತಿಯಲ್ಲಿ ಕಂಡುಬರುವ ಮಾರ್ಷಲ್ ಕಾರಾಗೃಹದಲ್ಲಿನ ಜೀವನದ ಸವಿವರವಾದ ಚಿತ್ರಣವು, ಸ್ಥಾಪಿತ ನ್ಯಾಯಪದ್ಧತಿಯ ಡಿಕನ್ಸ್‌ನ ಸ್ವಂತದ ಅನುಭವಗಳಿಂದ ಹೊರಬಂದಿತು ಎನ್ನಬಹುದು. ದಿ ಓಲ್ಡ್ ಕ್ಯೂರಿಯಾಸಿಟಿ ಷಾಪ್ ಕೃತಿಯಲ್ಲಿ ಕಂಡುಬರುವ ಲಿಟ್ಲ್ ನೆಲ್ ಪಾತ್ರವು ಡಿಕನ್ಸ್‌ನ ಅತ್ತಿಗೆಯನ್ನು[ಸೂಕ್ತ ಉಲ್ಲೇಖನ ಬೇಕು] ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ನಿಕೋಲಸ್ ನಿಕಲ್‌ಬೈನ ತಂದೆಯಾದ ವಿಲಿಯಂ ಡೊರಿಟ್ ಹಾಗೂ ವಿಲ್ಕಿನ್ಸ್ ಮಿಕಾಬರ್ ಪಾತ್ರಗಳು ಖಂಡಿತವಾಗಿಯೂ ಡಿಕನ್ಸ್‌ನ ಸ್ವಂತ ತಂದೆಯ ವ್ಯಕ್ತಿತ್ವಕ್ಕೆ ಹತ್ತಿರವಾಗಿವೆ. ಅದೇ ರೀತಿಯಲ್ಲಿ ಶ್ರೀಮತಿ ನಿಕಲ್‌ಬೈ ಮತ್ತು ಶ್ರೀಮತಿ ಮಿಕಾಬರ್ ಪಾತ್ರಗಳು ಆತನ ತಾಯಿಯ ವ್ಯಕ್ತಿತ್ವವನ್ನು ಹೋಲುತ್ತವೆ.[ಸೂಕ್ತ ಉಲ್ಲೇಖನ ಬೇಕು] ಗ್ರೇಟ್ ಎಕ್ಸ್‌ಪೆಕ್ಟೇಷನ್ಸ್ ಕೃತಿಯಲ್ಲಿ ಬರುವ ಪಿಪ್‌ನ ದೊಡ್ಡಸ್ತಿಕೆಯ ಸ್ವಭಾವವು ಸ್ವತಃ ಲೇಖಕನ ಸ್ವಭಾವದೊಂದಿಗೆ ಹೋಲಿಕೆಯನ್ನು ಹೊಂದಿದೆ. ಆತನ ಅನೇಕ ಪುಸ್ತಕಗಳಲ್ಲಿ ಕಂಡುಬರುವ ಬಾಲ್ಯದ ಪ್ರೇಮಿಗಳು (ಡೇವಿಡ್ ಕಾಪರ್‌ಫೀಲ್ಡ್ ಕೃತಿಯಲ್ಲಿನ ಲಿಟ್ಲ್ ಎಮಿಲಿ ಪಾತ್ರದಂತೆ), ಬಾಲ್ಯದಲ್ಲಿ ಲೂಸಿ ಸ್ಟ್ರೌಹಿಲ್ ಜೊತೆಗೆ ಸ್ವತಃ ಡಿಕನ್ಸ್ ಹೊಂದಿದ್ದ ಮೋಹಪರವಶತೆಯನ್ನು ಆಧರಿಸಿರಬಹುದು.[೪೪] ಡಿಕನ್ಸ್ ತನ್ನ ಬಾಲ್ಯದ ಅನುಭವಗಳಿಂದ ಪ್ರೇರಣೆಯನ್ನು ಪಡೆದಿರಬಹುದಾದರೂ, ಅವುಗಳ ಕುರಿತು ಅವನಿಗೆ ಮುಜುಗರವಿತ್ತು ಮತ್ತು ಹೀಗಾಗಿಯೇ ಇವನ್ನು ತನ್ನ ಹೀನಾವಸ್ಥೆಯ ವಾಸ್ತವಿಕ ವರದಿಗಳಿಂದ ಒಟ್ಟುಗೂಡಿಸಿದ್ದು ಎಂದು ಆತ ಬಹಿರಂಗಪಡಿಸಿಲ್ಲ. ಅವನು ಸತ್ತು ಆರು ವರ್ಷಗಳಾಗುವವರೆಗೂ ಆತನ ಆರಂಭಿಕ ಜೀವನದ ಕುರಿತಾದ ವಿವರಗಳು ಬಹಳ ಜನಕ್ಕೆ ಗೊತ್ತಿರಲಿಲ್ಲ. ಡಿಕನ್ಸ್‌ನ ಸಹಯೋಗವನ್ನು ಹೊಂದಿದ್ದ ಜೀವನಚರಿತ್ರೆಯೊಂದನ್ನು ಜಾನ್ ಫಾರ್ಸ್ಟರ್ ಪ್ರಕಟಿಸಿದಾಗಷ್ಟೇ ಹೊರಗಿನ ಪ್ರಪಂಚಕ್ಕೆ ಇದು ಅರಿವಾಯಿತು. ವಿಕ್ಟೋರಿಯಾ ಕಾಲದ ಅವಧಿಯಲ್ಲಿನ ಒಂದು ಅವಮಾನಕರ ಭೂತಕಾಲವು, ಆತನ ಕೆಲವೊಂದು ಪಾತ್ರಗಳಿಗೆ ಮಾಡಿದಂತೆಯೇ, ಪ್ರಸಿದ್ಧಿಯನ್ನು ಕೊಳಕುಗೊಳಿಸಬಹುದಾಗಿತ್ತು. ಪ್ರಾಯಶಃ ಇದೇ ಡಿಕನ್ಸ್‌ನ ಭಯಕ್ಕೆ ಕಾರಣವಾಗಿತ್ತು ಎನಿಸುತ್ತದೆ.
ಬಿಡಿಬಿಡಿಯಾದ ಬರಹಗಾರಿಕೆ
[ಬದಲಾಯಿಸಿ]ಮೇಲೆ ಉಲ್ಲೇಖಿಸಲಾಗಿರುವಂತೆ, ಡಿಕನ್ಸ್‌ನ ಬಹುತೇಕ ಪ್ರಮುಖ ಕಾದಂಬರಿಗಳು ಮಾಸ್ಟರ‍್ ಹಂಫ್ರೆ’ಸ್ ಕ್ಲಾಕ್ ಮತ್ತು ಹೌಸ್‌ಹೋಲ್ಡ್ ವರ್ಡ್ಸ್ ನಂಥ ನಿಯತಕಾಲಿಕಗಳಲ್ಲಿನ ಮಾಸಿಕ ಅಥವಾ ಸಾಪ್ತಾಹಿಕ ಕಂತುಗಳಾಗಿ ಮೊದಲು ಬರೆಯಲ್ಪಟ್ಟು, ನಂತರ ಪುಸ್ತಕದ ಸ್ವರೂಪದಲ್ಲಿ ಮರುಮುದ್ರಣಗೊಂಡವು. ಈ ಕಂತುಗಳು ಕಥೆಯನ್ನು ಅಗ್ಗವಾಗಿ ಹಾಗೂ ಸುಲಭವಾಗಿ ಕೈಗೆಟುಕುವಂತೆ ಮಾಡಿದವು ಮತ್ತು ನಿಯತವಾದ ಕುತೂಹಲಕರ ಧಾರಾವಾಹಿಗಳ ಸರಣಿಗಳು ಪ್ರತಿ ಕಂತನ್ನೂ ತುದಿಗಾಲಲ್ಲಿದ್ದುಕೊಂಡು ನಿರೀಕ್ಷಿಸುವಂತೆ ಮಾಡುತ್ತಿದ್ದವು. ಅಮೆರಿಕಾದ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ನ್ಯೂಯಾರ್ಕ್‌ನಲ್ಲಿನ ಬಂದರುಕಟ್ಟೆಗಳಲ್ಲಿ ಕಾಯ್ದುಕೊಂಡು, ಒಳಬರುವ ಹಡಗುಗಳ ಸಿಬ್ಬಂದಿಯನ್ನು ಕೂಗಿ ಕರೆಯುತ್ತಾ, "ಲಿಟ್ಲ್ ನೆಲ್ ಸತ್ತಾಯಿತಾ?" ಎಂದು ಕೇಳುತ್ತಿದ್ದರು.[೪೫][೪೬][೪೭] ಈ ಬಿಡಿಬಿಡಿಯಾದ ಬರಹಗಾರಿಕೆ ಶೈಲಿಯನ್ನು ಒಟ್ಟುಗೂಡಿಸುವುದು ಅಥವಾ ಸಂಯೋಜಿಸುವುದು ಡಿಕನ್ಸ್‌ನ ಮಹಾನ್ ಪ್ರತಿಭೆಯ ಪಾಲಿನ ಕರ್ತವ್ಯವಾಗಿತ್ತಾದರೂ, ಅಂತ್ಯದಲ್ಲಿ ಅದು ಒಂದು ಪರಸ್ಪರ ಹೊಂದಾಣಿಕೆಯ ಕಾದಂಬರಿಯಾಗಿ ಅಂತ್ಯಗೊಳ್ಳುತ್ತಿತ್ತು. ಇತರವುಗಳ ಮಧ್ಯೆ ಮಾಸಿಕ ಕಂತುಗಳು "ಫಿಝ್"ನ (ಹ್ಯಾಬ್ಲಾಟ್ ಬ್ರೌನ್‌ಗಾಗಿದ್ದ ಒಂದು ಗುಪ್ತನಾಮ) ಚಿತ್ರಗಳನ್ನು ಒಳಗೊಂಡಿರುತ್ತಿದ್ದವು. ಅವನ ಅತ್ಯುತ್ತಮವೆನಿಸಿದ ಕೃತಿಗಳಲ್ಲಿ ಇವು ಸೇರಿವೆ: ಗ್ರೇಟ್ ಎಕ್ಸ್‌ಪೆಕ್ಟೇಷನ್ಸ್ , ಡೇವಿಡ್ ಕಾಪರ್‌ಫೀಲ್ಡ್ , ಆಲಿವರ‍್ ಟ್ವಿಸ್ಟ್ , ಎ ಟೇಲ್ ಆಫ್ ಟು ಸಿಟೀಸ್ , ಬ್ಲೀಕ್ ಹೌಸ್ , ನಿಕೋಲಸ್ ನಿಕಲ್‌ಬೈ , ದಿ ಪಿಕ್‌ವಿಕ್ ಪೇಪರ್ಸ್ , ಮತ್ತು ಎ ಕ್ರಿಸ್‌ಮಸ್ ಕರೋಲ್ .
ಮಾಸಿಕ ಅಥವಾ ಸಾಪ್ತಾಹಿಕ ಕಂತುಗಳಲ್ಲಿನ ಡಿಕನ್ಸ್‌ನ ಬರಹಗಾರಿಕೆಯ ತಂತ್ರವನ್ನು (ಕೆಲಸವನ್ನು ಅವಲಂಬಿಸಿ) ಸಚಿತ್ರಕಾರರೊಂದಿಗಿನ ಅವನ ಸಂಬಂಧವನ್ನು ವಿಶ್ಲೇಷಿಸುವ ಮೂಲಕ ಅರ್ಥಮಾಡಿಕೊಳ್ಳಬಹುದು. ಈ ಪಾತ್ರವನ್ನು ವಹಿಸಿದ ಹಲವಾರು ಕಲಾವಿದರು, ಸಾರ್ವಜನಿಕರ ಸಮ್ಮುಖದಲ್ಲಿದ್ದ ಡಿಕನ್ಸ್‌ನ ಕಂತುಗಳ ವಸ್ತು-ವಿಷಯಗಳಿಗೆ ಹಾಗೂ ಆಶಯಗಳಿಗೆ ಬಾಧ್ಯಸ್ಥರಾಗಿದ್ದರು. ಹೀಗಾಗಿ, ಲೇಖಕ ಮತ್ತು ಸಚಿತ್ರಕಾರನ ನಡುವಿನ ಈ ಹೊಂದಿಕೆಗಳನ್ನು ಓದುವ ಮೂಲಕ, ಡಿಕನ್ಸ್‌ನ ಕಾರ್ಯದ ಹಿಂದಿನ ಆಶಯಗಳನ್ನು ಉತ್ತಮವಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು. ಅವನ ಕಲೆಯಲ್ಲಿ ಏನು ಅಡಗಿತ್ತೋ ಅದು ಈ ಪತ್ರಗಳಲ್ಲಿ ಸರಳೀಕರಣಗೊಂಡಿದೆ. ಓದುಗ ಮತ್ತು ಲೇಖಕರ ಆಸಕ್ತಿಗಳು ಹೇಗೆ ತಾಳೆಯಾಗುವುದಿಲ್ಲ ಎಂಬುದನ್ನೂ ಇವು ಬಹಿರಂಗಪಡಿಸುತ್ತವೆ. ಅದರ ಒಂದು ಮಹಾನ್ ಉದಾಹರಣೆಯು ಆಲಿವರ‍್ ಟ್ವಿಸ್ಟ್ ಮಾಸಿಕ ಕಾದಂಬರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕೃತಿಯಲ್ಲಿನ ಒಂದು ಹಂತದಲ್ಲಿ, ಡಕಾಯಿತಿಯೊಂದರಲ್ಲಿ ಆಲಿವರ್ ಸಿಕ್ಕಿಬಿದ್ದಂತೆ ಡಿಕನ್ಸ್ ಚಿತ್ರಿಸಿದ್ದ. ಯುವಕ ಆಲಿವರ್ ಗುಂಡೇಟಿಗೆ ಗುರಿಯಾಗುವುದರೊಂದಿಗೆ ಆ ನಿರ್ದಿಷ್ಟ ಮಾಸಿಕ ಕಂತು ಮುಕ್ತಾಯಗೊಳ್ಳುತ್ತದೆ. ಈ ಗುಂಡೇಟಿನ ಪರಿಣಾಮ ಏನಾಗಬಹುದು ಎಂಬುದನ್ನು ಕಂಡುಕೊಳ್ಳಲು ತಾವು ಒತ್ತಾಯಪೂರ್ವಕವಾಗಿ ಕಾದುಕೊಂಡಿರಬೇಕಾಗುತ್ತದೆ ಎಂದು ಓದುಗರು ನಿರೀಕ್ಷಿಸಿದರು. ವಾಸ್ತವವಾಗಿ, ನಂತರದ ಕಂತಿನಲ್ಲಿ ಯುವಕ ಆಲಿವರ್‌ಗೆ ಏನಾಯಿತು ಎಂಬುದನ್ನು ಡಿಕನ್ಸ್ ಬಹಿರಂಗಪಡಿಸಲಿಲ್ಲ. ಅದರ ಬದಲಿಗೆ, ಆತ ಬದುಕಿದ್ದನೋ ಇಲ್ಲವೋ ಎಂಬುದನ್ನು ಪತ್ತೆಹಚ್ಚಲು ಅದನ್ನೋದುತ್ತಿದ್ದ ಜನರು ಎರಡು ತಿಂಗಳವರೆಗೆ ಒತ್ತಾಯಪೂರ್ವಕವಾಗಿ ಕಾಯಬೇಕಾಗಿ ಬಂತು.
ಡಿಕನ್ಸ್‌ನ ಬಿಡಿಬಿಡಿಯಾದ ಬರಹಗಾರಿಕೆಯ ಶೈಲಿಯ ಮತ್ತೊಂದು ಪ್ರಮುಖ ಪ್ರಭಾವವು, ತನ್ನ ಓದುಗರ ಅಭಿಪ್ರಾಯಗಳಿಗೆ ಆತ ಒಡ್ಡಿಕೊಂಡಿದ್ದರಿಂದ ಬಂತು. ಪ್ರಕಟಣೆಗಿಂತ ತುಂಬಾ ಮುಂದಿರುವ ಘಟ್ಟದ ಅಧ್ಯಾಯಗಳನ್ನು ಡಿಕನ್ಸ್ ಬರೆಯುತ್ತಿರಲಿಲ್ಲವಾದ್ದರಿಂದ, ಸಾರ್ವಜನಿಕರ ಪ್ರತಿಕ್ರಯೆಗಳನ್ನು ಅವಲೋಕಿಸಲು ಅವನಿಗೆ ಅವಕಾಶ ದೊರೆಯುತ್ತಿತ್ತು. ಇದರಿಂದಾಗಿ ಆ ಪ್ರತಿಕ್ರಿಯೆಗಳಿಗೆ ಅನುಸಾರವಾಗಿ ಕಥೆಯನ್ನು ಮಾರ್ಪಡಿಸಲು ಅವನಿಗೆ ಸಾಧ್ಯವಾಗುತ್ತಿತ್ತು. ದಿ ಓಲ್ಡ್ ಕ್ಯೂರಿಯಾಸಿಟಿ ಷಾಪ್ ಎಂಬ ಆತನ ಸಾಪ್ತಾಹಿಕ ಧಾರಾವಾಹಿಯಲ್ಲಿ ಈ ಪ್ರಕ್ರಿಯೆಯ ಒಂದು ಉತ್ತಮ ಉದಾಹರಣೆಯನ್ನು ಕಾಣಬಹುದು. ಇದೊಂದು ಬೇಟೆಯ ಕಥೆಯಾಗಿದೆ. ಈ ಕಾದಂಬರಿಯಲ್ಲಿ, ಖಳನಾಯಕ ಕ್ವಿಲ್ಪ್‌ನಿಂದ ತಪ್ಪಿಸಿಕೊಂಡು ಲಿಟ್ಲ್ ನೆಲ್ ಮತ್ತು ಆಕೆಯ ಅಜ್ಜ ಇಬ್ಬರೂ ಓಡಿಹೋಗುತ್ತಿರುತ್ತಾರೆ. ಆ ಬೆನ್ನಟ್ಟುವಿಕೆಯ ಹಂತಹಂತವಾದ ಯಶಸ್ಸನ್ನು ಕಾದಂಬರಿಯ ಪ್ರಗತಿಯು ಅನುಸರಿಸಿಕೊಂಡು ಹೋಗುತ್ತದೆ. ಸಾಪ್ತಾಹಿಕದ ಕಂತುಗಳನ್ನು ಡಿಕನ್ಸ್ ಬರೆದು ಪ್ರಕಟಿಸುತ್ತಿದ್ದಂತೆ, ಅವನ ಸ್ನೇಹಿತ ಜಾನ್ ಫಾರ್ಸ್ಟರ್ ಡಿಕನ್ಸ್‌ನನ್ನುದ್ದೇಶಿಸಿ ಹೇಳಿದ: "ಅವಳನ್ನು ಕೊಲ್ಲಲೆಂದು ನೀನು ಹೊರಟಿರುವೆ ಅಂತ ನಿನಗೆ ಗೊತ್ತು, ಹೌದಲ್ಲವಾ?". ಈ ರೀತಿಯ ಅಂತ್ಯ ಏಕೆ ಅಗತ್ಯವಾಗಿತ್ತು ಎಂಬುದನ್ನು, ಪರಸ್ಪರ ಎದುರಾಗಿರುವ ಒಂದು ಹಾಸ್ಯ ಮತ್ತು ಒಂದು ದುರಂತದ ಸ್ವರೂಪದ ನಡುವಿನ ವ್ಯತ್ಯಾಸವನ್ನು ವಿಶ್ಲೇಷಿಸುವುದರಿಂದ ವಿವರಿಸಬಹುದು. ಪ್ರಹಸನವೊಂದರಲ್ಲಿ, ಸನ್ನಿವೇಶವೊಂದನ್ನು ಚಲನೆಯು ಮುಚ್ಚಿಹಾಕುವಂತಿದ್ದು, ಅದು "ಅವರು ಸೋಲುತ್ತಾರೆ ಎಂದು ನೀನು ಯೋಚಿಸುವೆ, ಅವರು ಸೋಲುತ್ತಾರೆ ಎಂದು ನೀನು ಯೋಚಿಸುವೆ, ಅವರು ಗೆಲ್ಲುತ್ತಾರೆ" ಎಂಬ ಶೈಲಿಯಲ್ಲಿರುತ್ತದೆ. ದುರಂತದ ಪ್ರಸಂಗದಲ್ಲಿ ಅದು: "ಅವರು ಗೆಲ್ಲುತ್ತಾರೆ ಎಂದು ನೀನು ಯೋಚಿಸುವೆ, ಅವರು ಗೆಲ್ಲುತ್ತಾರೆ ಎಂದು ನೀನು ಯೋಚಿಸುವೆ, ಅವರು ಸೋತರು" ಎಂಬ ಶೈಲಿಯಲ್ಲಿರುತ್ತದೆ. ಕಥೆಯ ನಾಟಕೀಯ ತೀರ್ಮಾನವು ಕಾದಂಬರಿಯಾದ್ಯಂತ ಧ್ವನಿತವಾಗಿರುತ್ತದೆ. ಆದ್ದರಿಂದ, ದುರಂತ ಛಾಯೆಯ ಸ್ವರೂಪವೊಂದರಲ್ಲಿ ಡಿಕನ್ಸ್ ಕಾದಂಬರಿಯನ್ನು ಬರೆಯುತ್ತಿದ್ದಂತೆ, ಕಾದಂಬರಿಯ ವಿಷಾದಕರ ಫಲಿತಾಂಶವು ಒಂದು ಪೂರ್ವನಿರ್ಧಾರಿತ ತೀರ್ಮಾನವಾಗಿರುತ್ತಿತ್ತು. ಒಂದು ವೇಳೆ ನಾಯಕಿಗೆ ಅವನು ಸೋಲಾಗುವಂತೆ ಮಾಡದೇ ಇದ್ದಿದ್ದಲ್ಲಿ, ತನ್ನ ನಾಟಕೀಯ ಸ್ವರೂಪವನ್ನು ಆತ ಸಂಪೂರ್ಣಗೊಳಿಸಿದೆ ಬಿಟ್ಟಂತಾಗುತ್ತಿತ್ತು. ತನ್ನ ಸ್ನೇಹಿತ ಫಾರ್ಸ್ಟರ್ ಹೇಳಿದ್ದು ಸರಿಯಾಗಿತ್ತು ಎಂದು ಡಿಕನ್ಸ್ ಒಪ್ಪಿಕೊಂಡ ಮತ್ತು, ಅಂತ್ಯದಲ್ಲಿ ಲಿಟ್ಲ್ ನೆಲ್‌ಗೆ ಸಾವುಂಟಾಯಿತುd.[೪೮]
ಸಾಮಾಜಿಕ ವ್ಯಾಖ್ಯಾನ
[ಬದಲಾಯಿಸಿ]ಇತರ ವಿಷಯಗಳ ನಡುವೆಯೇ, ಡಿಕನ್ಸ್‌ನ ಕಾದಂಬರಿಗಳು ಸಾಮಾಜಿಕ ವ್ಯಾಖ್ಯಾನದ ಕೃತಿಗಳಾಗಿದ್ದವು. ಆತ ವಿಕ್ಟೋರಿಯಾ ಕಾಲದ ಸಮಾಜದ ಬಡತನ ಮತ್ತು ಸಾಮಾಜಿಕ ಶ್ರೇಣೀಕರಣದ ಓರ್ವ ಉಗ್ರ ಟೀಕಾಕಾರನಾಗಿದ್ದ. ಡಿಕನ್ಸ್‌ನ ಎರಡನೇ ಕಾದಂಬರಿಯಾದ ಆಲಿವರ‍್ ಟ್ವಿಸ್ಟ್ (1839), ಬಡತನ ಮತ್ತು ಅಪರಾಧದ ಕುರಿತಾದ ತನ್ನ ಚಿತ್ರಣಗಳಿಂದ ಓದುಗರನ್ನು ಬೆಚ್ಚಿಬೀಳಿಸಿತ್ತು ಹಾಗೂ ಕಥೆಗೆ ಮೂಲಾಧಾರವಾಗಿದ್ದ ಲಂಡನ್‌ನ ಕೊಳೆಗೇರಿ, ಜಾಕೋಬ್‌ನ ದ್ವೀಪ ಮೊದಲಾದವುಗಳ ತೆರವುಗೊಳಿಸುವಿಕೆಗೆ ಕಾರಣವಾಗಿತ್ತು. ಇದರ ಜೊತೆಗೆ, ಓದುವ ಸಾರ್ವಜನಿಕರಿಗಾಗಿ ನ್ಯಾನ್ಸಿ ಎಂಬ ದುರಂತ ವೈಶ್ಯೆಯ ಪಾತ್ರದೊಂದಿಗೆ, ಇಂಥ ಮಹಿಳೆಯರನ್ನು ಡಿಕನ್ಸ್ "ಮನುಷ್ಯರ ರೂಪದಲ್ಲಿ" ತೋರಿಸಿದ; ಈ ಮಹಿಳೆಯರನ್ನು ವಿಕ್ಟೋರಿಯಾ ವರ್ಗ/ಆರ್ಥಿಕ ವ್ಯವಸ್ಥೆಯ ಕಾಲದ ಮೂಲಭೂತವಾಗಿ ನೀತಿಗೆಟ್ಟ ವಿಪತ್ತುಗಳೆಂಬಂತೆ, "ನತದೃಷ್ಟ ವ್ಯಕ್ತಿಗಳು" ಎಂಬಂತೆ ಪರಿಗಣಿಸಲಾಗುತ್ತಿತ್ತು. ಬ್ಲೀಕ್ ಹೌಸ್ ಮತ್ತು ಲಿಟ್ಲ್ ಡೋರಿಟ್ ಕೃತಿಗಳು ವಿಕ್ಟೋರಿಯಾ ಕಾಲದ ಸಾಂಸ್ಥಿಕ ವ್ಯವಸ್ಥೆಯ ವಿಕಸನಶೀಲ ವಿಮರ್ಶಾತ್ಮಕ ವಿಶ್ಲೇಷಣೆಗಳನ್ನು ವಿವರಿಸಿದವು: ಜನರ ಜೀವಗಳನ್ನು ನಾಶಪಡಿಸಿದ ಚಾನ್ಸಲರನ ನ್ಯಾಯಸ್ಥಾನದ ಅಂತ್ಯವಿಲ್ಲದ ಮೊಕದ್ದಮೆಗಳು ಬ್ಲೀಕ್ ಹೌಸ್ ನಲ್ಲಿ ಕಂಡುಬರುವುದು ಮತ್ತು ಅದಕ್ಷ, ಭ್ರಷ್ಟ ಸ್ವಾಮ್ಯದ ಸನ್ನದು ಕೊಡುವ ಕಚೇರಿಗಳು ಹಾಗೂ ಮಾರುಕಟ್ಟೆಯ ಅನಿಯಂತ್ರಿತ ಸಟ್ಟಾ ಹೂಡಿಕೆಗಳ ಮೇಲೆ ಇಬ್ಬಗೆಯ ದಾಳಿಯೊಂದು ಲಿಟ್ಲ್ ಡೋರಿಟ್ ನಲ್ಲಿ ಕಂಡುಬರುವುದು ಇದಕ್ಕೆ ನಿದರ್ಶನಗಳಾಗಿವೆ.
ಸಾಹಿತ್ಯಿಕ ತಂತ್ರಗಳು
[ಬದಲಾಯಿಸಿ]ತನ್ನ ವಿಕಟಚಿತ್ರಣಗಳು ಹಾಗೂ ತಾನು ಬಹಿರಂಗಪಡಿಸುವ ಕುರೂಪಿ ಸಾಮಾಜಿಕ ಸತ್ಯಗಳಿಗೆ ತದ್ವಿರುದ್ಧವಾಗಿ, ’ಆದರ್ಶೀಕರಿಸಿದ’ ಪಾತ್ರಗಳು ಹಾಗೂ ಹೆಚ್ಚು ಭಾವನಾತ್ಮಕವಾಗಿರುವ ದೃಶ್ಯಗಳನ್ನು ಡಿಕನ್ಸ್ ಬಳಸುತ್ತಾನೆ ಎಂದು ಅನೇಕ ಬಾರಿ ನಿರೂಪಿಸಲ್ಪಟ್ಟಿದ್ದಾನೆ. ದಿ ಓಲ್ಡ್ ಕ್ಯೂರಿಯಾಸಿಟಿ ಷಾಪ್ (1841) ಕೃತಿಯಲ್ಲಿನ ನೆಲ್ ಟ್ರೆಂಟ್ ಕಥೆಯು ನಂಬಲಸಾಧ್ಯವಾದ ರೀತಿಯಲ್ಲಿ ಹೃದಯಸ್ಪರ್ಶಿಯಾಗಿದೆ ಎಂಬಂತೆ ಸಮಕಾಲೀನ ಓದುಗರಿಂದ ಸ್ವೀಕರಿಸಲ್ಪಟ್ಟಿತಾದರೂ, ಆಸ್ಕರ‍್ ವೈಲ್ಡ್‌ನ ದೃಷ್ಟಿಕೋನದಲ್ಲಿ ಅದು ಹಾಸ್ಯಾಸ್ಪದವಾಗಿ ಭಾವುಕವಾಗಿತ್ತು. ತನ್ನ ಸುಪ್ರಸಿದ್ಧ ಚಮತ್ಕಾರೋಕ್ತಿಗಳಲ್ಲೊಂದರಲ್ಲಿ ಆತ, "ನೀವು ಒಂದು ಕಲ್ಲಿನಂಥಾ ಹೃದಯವನ್ನು ಹೊಂದಿರುವುದು ಅಗತ್ಯವಾಗುತ್ತದೆಯೇ ಹೊರತು, ಲಿಟ್ಲ್ ನೆಲ್ ಸಾವಿಗೆ ನಗುವುದನ್ನಲ್ಲ"[೪೯] (ವಾಸ್ತವವಾಗಿ ಅವಳ ಸಾವು ರಂಗದಿಂದಾಚೆಗೆ ಸಂಭವಿಸುತ್ತದೆಯಾದರೂ) ಎಂದು ಆತ ಘೋಷಿಸಿದ. 1903ರಲ್ಲಿ G. K. ಚೆಸ್ಟರ್‌ಟನ್, "ನನ್ನ ಆಕ್ಷೇಪಣೆಯಿರುವುದು ಲಿಟ್ಲ್ ನೆಲ್ ಸಾವಿನ ಕುರಿತಾಗಿ ಅಲ್ಲ, ಲಿಟ್ಲ್ ನೆಲ್ ಜೀವನದ ಕುರಿತಾಗಿ" ಎಂದು ಹೇಳಿದ.[೫೦]
ಆಲಿವರ‍್ ಟ್ವಿಸ್ಟ್ ಕೃತಿಯಲ್ಲಿ, ಎಳೆಯ ಹುಡುಗನೊಬ್ಬನ ಒಂದು ಆದರ್ಶೀಕರಿಸಿದ ವಿಸ್ಪಷ್ಟ ವರ್ಣನೆಯನ್ನು ಡಿಕನ್ಸ್ ಓದುಗರಿಗೆ ಒದಗಿಸುತ್ತಾನೆ. ಅವನು ಅಂತರ್ಗತವಾಗಿ ಮತ್ತು ಅವಾಸ್ತವಿಕವಾಗಿ ಎಷ್ಟು 'ಉತ್ತಮವಾಗಿ' ಇರುತ್ತಾನೆಂದರೆ, ನಿರ್ದಯವಾದ ಅನಾಥಾಲಯಗಳಿಂದಾಗಲೀ ಅಥವಾ ಎಳೆಯ ಜೇಬುಗಳ್ಳರ ತಂಡವೊಂದರಲ್ಲಿನ ಬಲವಂತದ ತೊಡಗುವಿಕೆಯಿಂದಾಗಲೀ ಅವನ ಮೌಲ್ಯಗಳು ಎಂದಿಗೂ ಬುಡಮೇಲಾಗುವುದಿಲ್ಲ. ನಂತರದ ಕಾದಂಬರಿಗಳೂ ಸಹ ಆದರ್ಶೀಕರಿಸಿದ ಪಾತ್ರಗಳ ಮೇಲೆ ಕೇಂದ್ರೀಕರಿಸುತ್ತವೆಯಾದರೂ (ಬ್ಲೀಕ್ ಹೌಸ್ ನಲ್ಲಿನ ಎಸ್ತರ‍್ ಸಮ್ಮರ್‌ಸನ್ ಮತ್ತು ಲಿಟ್ಲ್ ಡೋರಿಟ್ ನಲ್ಲಿನ ಅಮಿ ಡೊರಿಟ್), ಹೃದಯಸ್ಪರ್ಶಿಯಾದ ಸಾಮಾಜಿಕ ವ್ಯಾಖ್ಯಾನದ ಕುರಿತಾದ ಡಿಕನ್ಸ್‌ನ ಗುರಿಯನ್ನು ಎದ್ದುಕಾಣುವಂತೆ ಮಾಡಲು ಮಾತ್ರವೇ ಈ ಆದರ್ಶೀಕರಣ ಪ್ರವೃತ್ತಿಯು ಪಾತ್ರವಹಿಸುತ್ತದೆ. ಅವನ ಬಹುತೇಕ ಕಾದಂಬರಿಗಳು ಸಾಮಾಜಿಕ ಯಥಾರ್ತತೆಯೊಂದಿಗೆ ಸಂಬಂಧವನ್ನು ಹೊಂದಿದ್ದು, ಜನರ ಜೀವನವನ್ನು ನಿರ್ದೇಶಿಸುವ ಸಾಮಾಜಿಕ ನಿಯಂತ್ರಣದ ಕಾರ್ಯವಿಧಾನಗಳ ಕಡೆಗೆ ಅವು ಗಮನಹರಿಸುತ್ತವೆ (ಹಾರ್ಡ್ ಟೈಮ್ಸ್ ನಲ್ಲಿನ ಕಾರ್ಖಾನೆಯ ಜಾಲಗಳು ಮತ್ತು ಅವರ‍್ ಮ್ಯೂಚುಯಲ್ ಫಂಡ್ ನಲ್ಲಿನ ಬೂಟಾಟಿಕೆಯ ಹೊರಗಿಡುವ ವರ್ಗಸಂಹಿತೆಗಳು ಇದಕ್ಕೆ ನಿದರ್ಶನವಾಗಿವೆ).[ಸೂಕ್ತ ಉಲ್ಲೇಖನ ಬೇಕು]ನಂಬಲಸಾಧ್ಯವಾದ ಕಾಕತಾಳೀಯತೆಗಳನ್ನೂ ಸಹ ಡಿಕನ್ಸ್ ತನ್ನ ಕೃತಿಗಳಲ್ಲಿ ಪ್ರಯೋಗಿಸುತ್ತಾನೆ (ಉದಾಹರಣೆಗೆ, ಜೇಬುಗಳ್ಳರ ತಂಡದ ಅಪಾಯಗಳಿಂದ ತನ್ನನ್ನು ಗೊತ್ತುಗುರಿಯಿಲ್ಲದೆ ರಕ್ಷಿಸುವ ಮೇಲ್ವರ್ಗದ ಕುಟುಂಬದ ಕಳೆದುಹೋದ ಸೋದರ ಸಂಬಂಧಿಯಾಗಿ ಆಲಿವರ‍್ ಟ್ವಿಸ್ಟ್ ಪರಿಣಮಿಸುತ್ತಾನೆ). ಇಂಥ ಕಾಕತಾಳೀಯತೆಗಳು, ಡಿಕನ್ಸ್ ತುಂಬಾ ಇಷ್ಟಪಡುತ್ತಿದ್ದ ಹೆನ್ರಿ ಫೀಲ್ಡಿಂಗ್‌ನ ಟಾಮ್ ಜೋನ್ಸ್ ನಂಥ ಹದಿನೆಂಟನೇ ಶತಮಾನದ ತುಂಟರ ಕೃತ್ಯಗಳನ್ನು ಕುರಿತ ಕಾದಂಬರಿಗಳ ಪ್ರಧಾನ ವಸ್ತುಗಳಾಗಿವೆ. ಆದರೆ, ಡಿಕನ್ಸ್‌ಗೆ ಇವು ಕೇವಲ ಕಥಾವಸ್ತುವಿನ ಸಾಧನಗಳಾಗುವ ಬದಲಿಗೆ ಬದಲಿಗೆ ಮಾನವ ಸಿದ್ಧಾಂತದ ಒಂದು ಸೂಚಿಯಾಗಿ ಕಂಡಿವೆ. ಅಂತ್ಯದಲ್ಲಿ ಒಳ್ಳೆಯದಕ್ಕೇ ಜಯವಾಗುತ್ತದೆ ಮತ್ತು ಆ ಜಯವು ಹಲವು ಬಾರಿ ಅನಿರೀಕ್ಷಿತ ವಿಧಾನಗಳಲ್ಲಿ ದೊರೆಯುತ್ತದೆ ಎಂದು ಅವನು ನಂಬಲು ಈ ಸೂಚಿಗಳು ಕಾರಣವಾಗಿದ್ದವು.[ಸೂಕ್ತ ಉಲ್ಲೇಖನ ಬೇಕು]
ಪರಂಪರೆ
[ಬದಲಾಯಿಸಿ]ಓರ್ವ ಸುಪ್ರಸಿದ್ಧ ವ್ಯಕ್ತಿಯಾಗಿದ್ದ ಅವನ ಕಾದಂಬರಿಗಳು ಅವನ ಜೀವಿತಾವಧಿಯಲ್ಲಿ ಅಪಾರವಾದ ಜನಪ್ರಿಯತೆಯನ್ನು ಸಾಬೀತು ಮಾಡಿದವು. ಅವನ ಮೊದಲ ಸಂಪೂರ್ಣ ಕಾದಂಬರಿಯಾದ, ದಿ ಪಿಕ್‌ವಿಕ್ ಪೇಪರ್ಸ್ (1837), ಅವನಿಗೆ ತ್ವರಿತವಾಗಿ ಕೀರ್ತಿಯನ್ನು ತಂದುಕೊಟ್ಟಿತು, ಮತ್ತು ಈ ಯಶಸ್ಸು ಅವನ ವೃತ್ತಿಜೀವನದಾದ್ಯಂತ ಮುಂದುವರಿದುಕೊಂಡು ಬಂದಿತು. ಎಲ್ಲವಾಗಲೂ ಒಂದು ರೀತಿಯ ಸಾಂಪ್ರದಾಯಿಕ ವಿಧಾನದವೊಂದರಲ್ಲಿ ಒಂದು ಮಹಾನ್ "ಕಥೆಯನ್ನು" ಬರೆಯುವ ತನ್ನ ವಿಶಿಷ್ಟವಾದ "ಡಿಕನ್ಸ್ ಶೈಲಿಯ" ವಿಧಾನದಿಂದ ಮಹತ್ತಾದ ರೀತಿಯಲ್ಲಿ ಅಪರೂಪಕ್ಕೆಂಬಂತೆ ಆತ ಹೊರಳುದಾರಿಯನ್ನು ತುಳಿಯುತ್ತಿದ್ದನಾದರೂ (ಬ್ಲೀಕ್ ಹೌಸ್ ಕೃತಿಯ ಇಬ್ಬಗೆಯ ನಿರೂಪಕರು ಇದಕ್ಕೊಂದು ಗಮನಾರ್ಹವಾದ ಅಪವಾದವಾಗಿದ್ದಾರೆ), ವೈವಿಧ್ಯಮಯ ವಸ್ತು-ವಿಷಯಗಳು, ಪಾತ್ರ ನಿರೂಪಣೆಗಳು, ಹಾಗೂ ಪ್ರಕಾರಗಳೊಂದಿಗೆ ಅವನು ಪ್ರಯೋಗಗಳನ್ನು ಮಾಡಿದ. ಇವುಗಳ ಪೈಕಿ ಕೆಲವೊಂದು ಪ್ರಯೋಗಗಳು ಇತರವುಗಳಿಗಿಂತ ಹೆಚ್ಚು ಜನಪ್ರಿಯತೆಯನ್ನು ಸಾಧಿಸಿದವು, ಮತ್ತು ಅವನ ಅನೇಕ ಕೃತಿಗಳೆಡೆಗಿನ ಸಾರ್ವಜನಿಕರ ಅಭಿರುಚಿ ಮತ್ತು ಮೆಚ್ಚುಗೆಯು ಕಾಲದಿಂದ ಕಾಲಕ್ಕೆ ಬದಲಾಗಿವೆ. ಸಾಮಾನ್ಯವಾಗಿ ತನ್ನ ಓದುಗರು ಏನನ್ನು ಬಯಸುತ್ತಾರೋ ಅದನ್ನು ನೀಡಲು ತೀವ್ರಾಸಕ್ತಿಯನ್ನು ತಳೆಯುತ್ತಿದ್ದ ಅವನ ಕೃತಿಗಳ ಮಾಸಿಕ ಅಥವಾ ಸಾಪ್ತಾಹಿಕ ಕಂತುಗಳಲ್ಲಿ ಬರುತ್ತಿದ್ದ ಪ್ರಕಟಣೆಯು, ಸಾರ್ವಜನಿಕರ ವಿಲಕ್ಷಣ ಕಲ್ಪನೆಯ ಅನುಸಾರ ಕಥೆಯು ಮುಂದುವರಿದಂತೆ ಪುಸ್ತಕಗಳು ಬದಲಾಗಬಹುದು ಎಂಬುದನ್ನು ಅರ್ಥೈಸುತ್ತಿದ್ದವು. ಮಾರ್ಟಿನ್ ಚಝಲ್‌ವಿಟ್ ನಲ್ಲಿನ ಅಮೆರಿಕಾದ ಕಂತುಗಳು ಇದಕ್ಕೆ ಉದಾಹರಣೆಗಳೆನ್ನಬಹುದು. ಮುಂಚಿನ ಅಧ್ಯಾಯಗಳ ಮಾಮೂಲಿಗಿಂತ ಕಡಿಮೆಯ ಮಟ್ಟದ ಮಾರಾಟಗಳಿಗೆ ಪ್ರತಿಕ್ರಿಯೆಯಾಗಿ ಡಿಕನ್ಸ್ ಈ ಕಂತುಗಳನ್ನು ಸೇರಿಸಿದ್ದ.
ಅವನ ಸಾವಿನ ನಂತರ, ಅವನ ಜನಪ್ರಿಯತೆಯು ಕೊಂಚವೇ ಎನ್ನಬಹುದಾದಷ್ಟು ಕುಗ್ಗಿದೆಯಾದರೂ, ಆತ ಈಗಲೂ ಅತ್ಯಂತ ಸುಪ್ರಸಿದ್ಧ ಹಾಗೂ ಹೆಚ್ಚು ಓದಲ್ಪಡುವ ಇಂಗ್ಲಿಷ್ ಲೇಖಕರ ಪೈಕಿ ಒಬ್ಬನಾಗಿದ್ದಾನೆ. ಡಿಕನ್ಸ್‌ನ ಕೃತಿಗಳನ್ನು ಆಧರಿಸಿದ ಕನಿಷ್ಟಪಕ್ಷ 180 ಚಲನಚಿತ್ರಗಳು ಹಾಗೂ TV ರೂಪಾಂತರಗಳು ವನ ಯಶಸ್ಸನ್ನು ಸಮರ್ಥಿಸುವಲ್ಲಿ ನೆರವಾಗಿವೆ.[೫೧] ಅವನ ಜೀವಿತಾವಧಿಯಲ್ಲೇ ಅವನ ಕೃತಿಗಳ ಪೈಕಿ ಅನೇಕವು ರಂಗಪ್ರಯೋಗವಾಗಿ ರೂಪಾಂತರಿಸಲ್ಪಟ್ಟವು ಮತ್ತು 1913ರಷ್ಟು ಮುಂಚೆಯೇ ದಿ ಪಿಕ್‌ವಿಕ್ ಪೇಪರ್ಸ್ ಕೃತಿಯನ್ನು ಆಧರಿಸಿದ ಒಂದು ಮೂಕಿ ಚಿತ್ರವು ತಯಾರಾಗಿತ್ತು. ಅವನು ಸೃಷ್ಟಿಸಿದ ಪಾತ್ರಗಳು ಹೆಚ್ಚುಬಾರಿ ಸ್ಮರಣೀಯವಾಗಿದ್ದು, ಅವನ ಪುಸ್ತಕಗಳಿಂದ ಆಚೆಗಿನ ತಮ್ಮದೇ ಆದ ಒಂದು ಜೀವನದ ಸ್ವರೂಪವನ್ನು ಅವು ತಳೆದವು. ಶ್ರೀಮತಿ ಗಂಪ್ ಪಾತ್ರದಿಂದ ಬಂದ ಗಂಪ್, ಛತ್ರಿಯೊಂದಕ್ಕಾಗಿರುವ ಒಂದು ಪರಿಭಾಷಾ ಅಭಿವ್ಯಕ್ತಿಯಾಗಿ ಮಾರ್ಪಟ್ಟಿತು. ಪಿಕ್‌ವಿಕಿಯನ್, ಪೆಕ್‌ಸ್ನಿಫಿಯನ್ ಮತ್ತು ಗ್ರಾಡ್‌ಗ್ರಿಂಡ್ ಇವೇ ಮೊದಲಾದ ಹೆಸರುಗಳು ಅಥವಾ ಪದಗಳೆಲ್ಲವೂ ಪದಕೋಶಗಳಲ್ಲಿ ಪ್ರವೇಶವನ್ನು ಪಡೆದವು. ಧ್ಯೇಯೋತ್ಸಾಹಿಯಾದ, ಬೂಟಾಟಿಕೆಯ, ಅಥವಾ ಭಾವರಹಿತವಾಗಿ ತಾರ್ಕಿಕವಾದ ಸ್ವಭಾವವನ್ನು ಹೊಂದಿರುವ ಇಂಥ ಪಾತ್ರಗಳು ಡಿಕನ್ಸ್‌ನ ಮೂಲ ವಿಸ್ಪಷ್ಟ ವರ್ಣನೆಯಿಂದಾಗಿ ಈ ಸ್ಥಾನವನ್ನು ಪಡೆದವು ಎಂದು ಹೇಳಬಹುದು. ದಿ ಪಿಕ್‌ವಿಕ್ ಪೇಪರ್ಸ್ ಕೃತಿಯಲ್ಲಿ ಬರುವ ಸ್ಯಾಮ್ ವೆಲ್ಲರ್ ಎಂಬ ಓರ್ವ ನಿರಾತಂಕದ ಮತ್ತು ಇತರರಿಗೆ ಅಗೌರವವನ್ನು ತೋರುವ ಪರಿಚಾರಕನು ಓರ್ವ ಆರಂಭಿಕ ಮಹಾತಾರೆಯಾಗಿದ್ದ. ಇನ್ನೂ ನಿಖರವಾಗಿ ಹೇಳಬೇಕೆಂದರೆ ತನ್ನನ್ನು ಸೃಷ್ಟಿಸಿದ ಲೇಖಕನಿಗಿಂತಲೂ ಆತ ಸುಪ್ರಸಿದ್ಧನಾಗಿದ್ದ ಎನ್ನಬಹುದು. ಎ ಕ್ರಿಸ್‌ಮಸ್ ಕರೋಲ್ ಕೃತಿಯ ಹೊಸ ಹೊಸ ರೂಪಾಂತರಗಳು ಪ್ರತಿವರ್ಷವೂ ಹೊರಬರುತ್ತಿರುವುದನ್ನು ನೋಡಿದರೆ, ಅದು ಅವನ ಪ್ರಸಿದ್ಧ ಕಥೆಯೆಂದು ತೋರುತ್ತದೆ. ಡಿಕನ್ಸ್‌ನ ಕಥೆಗಳ ಪೈಕಿ ಇದು ಹೆಚ್ಚು ಬಾರಿ ಚಲನಚಿತ್ರಕ್ಕೆ ಆಧಾರವಸ್ತುವಾಗಿದ್ದು, ಚಲನಚಿತ್ರದ ಆರಂಭಿಕ ವರ್ಷಗಳಿಂದ ಪ್ರಾರಂಭಗೊಂಡು ಇಂದಿನವರೆಗೂ ಅನೇಕ ರೂಪಾಂತರಗಳು ಬಂದಿವೆ. ಕರುಣರಸ ಹಾಗೂ ಇದರ ಪಾಪವಿಮೋಚಕ ವಸ್ತುಗಳೆರಡರೊಂದಿಗಿನ ಈ ಸರಳ ನೀತಿಬೋಧೆಯ ಕಥೆಯು ಕ್ರಿಸ್‌ಮಸ್‌ನ ನಿಜವಾದ ಅರ್ಥವನ್ನು (ಅನೇಕರಿಗಾಗಿ) ಸಾರಾಂಶವಾಗಿ ಹೇಳುತ್ತದೆ. ಕೇವಲ ಜನಪ್ರಿಯತೆಯಲ್ಲಿ ಮಾತ್ರವೇ ಅಲ್ಲದೇ, ಪಾಶ್ಚಿಮಾತ್ಯ ಸಾಂಸ್ಕೃತಿಕ ಪ್ರಜ್ಞೆಗೆ ಮೂಲಕಲ್ಪನೆಯ ಪ್ರತಿಕೃತಿಗಳನ್ನು (ಕ್ರಿಸ್‌ಮಸ್ ಪ್ರೇತಾತ್ಮಗಳಾದ ಸ್ಕ್ರೂಜ್, ಟೈನಿ ಟಿಮ್) ಸೇರಿಸುವಲ್ಲಿಯೂ ಇದು ಕ್ರಿಸ್ಮಸ್ ಹಬ್ಬದ ಇತರೆಲ್ಲಾ ಕಥೆಗಳನ್ನೂ ನಿಶ್ಚಿತವಾಗಿ ಮೀರಿಸುತ್ತದೆ. 'ಮೆರಿ ಕ್ರಿಸ್‌ಮಸ್' ಕಥೆಯಿಂದ ಬಂದ ಒಂದು ಪ್ರಸಿದ್ಧ ನುಡಿಗಟ್ಟು, ಸದರಿ ಕಥೆಯ ಪ್ರಕಟಣೆಯ ನಂತರ ಜನಪ್ರಿಯಗೊಳಿಸಲ್ಪಟ್ಟಿತು.[೫೨] ಸ್ಕ್ರೂಜ್ ಎಂಬ ಪದವು ಜಿಪುಣ ಎಂಬ ಪದಕ್ಕೆ ಪರ್ಯಾಯ ಪದವಾಗಿಬಿಟ್ಟಿತು. 'ಬಾಹ್! ಹಂಬಗ್!' ಎಂಬುದು ಉಲ್ಲಾಸಶೀಲತೆಯನ್ನು ಕೊನೆಗೊಳಿಸುವ ಪದವಾಗಿ ಬಳಕೆಗೆ ಬಂದಿತು.[೫೩] ವಿಲಿಯಂ ಮೇಕ್‌ಪೀಸ್ ಥ್ಯಾಕರೆ ಎಂಬ ಕಾದಂಬರಿಕಾರನು, ಈ ಪುಸ್ತಕವು "ಒಂದು ರಾಷ್ಟ್ರೀಯ ಪ್ರಯೋಜನದಂತೆಯೂ, ಮತ್ತು ಇದನ್ನೋದುವ ಪ್ರತಿ ಪುರುಷ ಹಾಗೂ ಮಹಿಳೆಗೆ ಇದೊಂದು ವೈಯಕ್ತಿಕ ಕರುಣೆಯಂತೆಯೂ" ಇದೆ ಎಂದು ಕರೆದಿದ್ದಾನೆ.[೫೪] ಈ ಪುಸ್ತಕವು ಕ್ರಿಸ್‌ಮಸ್‌ನ[೫೫][೫೬] "ಮನೋಧರ್ಮ" ಹಾಗೂ ಪ್ರಾಮುಖ್ಯತೆಯನ್ನು ಬೇರೆಯದೇ ಆದ ರೀತಿಯಲ್ಲಿ ಗಮನಾರ್ಹವಾಗಿ ನಿರೂಪಿಸಿದೆ ಎಂದು ಕೆಲವೊಂದು ಚರಿತ್ರೆಕಾರರು ಸಮರ್ಥಿಸುತ್ತಾರೆ ಮತ್ತು 17ನೇ ಶತಮಾನದ ಇಂಗ್ಲಂಡ್ ಮತ್ತು ಅಮೆರಿಕಾದಲ್ಲಿನ ಅತಿನೇಮಿಷ್ಠ ಅಥವಾ ಶುದ್ಧಸುಧಾರಕ ಪರಿಣಿತರು ರಜೆಯೊಂದಿಗೆ ಗುರುತಿಸಿಕೊಂಡಿದ್ದ ಅಧಾರ್ಮಿಕ ಮತಕ್ರಿಯಾವಿಧಿಗಳ ಆಚರಣೆಗಳನ್ನು ನಿಗ್ರಹಿಸಿದ ನಂತರ ಕಾಲೋಚಿತವಾದ ವಿನೋದದ ಮರುಹುಟ್ಟನ್ನು ಈ ಪುಸ್ತಕವು ಹುಟ್ಟುಹಾಕಿತು ಎಂಬುದು ಮತ್ತೊಂದು ಸಮರ್ಥನೆಯಾಗಿದೆ.[೫೭] ರೊನಾಲ್ಡ್ ಹಟನ್ ಎಂಬ ಚರಿತ್ರೆಕಾರನ ಪ್ರಕಾರ, ಪ್ರಸಸ್ತುತ ಕಂಡುಬರುತ್ತಿರುವ ಕ್ರಿಸ್‌ಮಸ್‌ನ ಆಚಾರವಿಧಿಯ ಸ್ಥಿತಿಯು, ಎ ಕ್ರಿಸ್‌ಮಸ್ ಕರೋಲ್ ಕೃತಿಯ ಪ್ರಭಾವದಿಂದ ಕಂಡುಬಂದ, ಮಧ್ಯ-ವಿಕ್ಟೋರಿಯಾ ಕಾಲದ ರಜೆಯ ಮರುಹುಟ್ಟೊಂದರ ಪರಿಣಾಮವಾಗಿ ಉಂಟಾಯಿತು. ಹಟನ್ ವಾದಿಸುವ ಪ್ರಕಾರ, ಹದಿನೆಂಟನೇ ಶತಮಾನದ ಅಂತ್ಯ ಹಾಗೂ ಹತ್ತೊಂಬತ್ತನೇ ಶತಮಾನದ ಆರಂಭದ ಅವಧಿಗಳಲ್ಲಿ ನಶಿಸಿಹೋಗಿದ್ದ ಸಮುದಾಯ-ಆಧಾರಿತ ಮತ್ತು ಚರ್ಚ್-ಕೇಂದ್ರಿತ ಆಚರಣೆಗೆ ಪ್ರತಿಯಾಗಿ ದಾನಶೀಲತೆಯ ಅಥವಾ ವಿಶಾಲ ಹೃದಯತೆಯ ಒಂದು ಕುಟುಂಬ-ಕೇಂದ್ರಿತ ಉತ್ಸವವಾಗಿ ಕ್ರಿಸ್‌ಮಸ್‌ನ್ನು ರೂಪಿಸಲು ಡಿಕನ್ಸ್ ಪ್ರಯತ್ನಿಸಿದ.[೫೮] ಪಾಶ್ಷಿಮಾತ್ಯ ರಾಷ್ಟ್ರಗಳಲ್ಲಿ ಇಂದು ಆಚರಿಸಲ್ಪಡುತ್ತಿರುವ ಕುಟುಂಬದ ಕೂಟಗಳು, ಕಾಲೋಚಿತ ಆಹಾರ ಮತ್ತು ಪಾನೀಯ, ನರ್ತಿಸುವಿಕೆ, ಆಟಗಳು, ಮತ್ತು ಒಂದು ಉಲ್ಲಾಸಶೀಲ ವಿಶಾಲಹೃದಯದ ಪ್ರವೃತ್ತಿ ಇವೇ ಮೊದಲಾದ ಕ್ರಿಸ್‌ಮಸ್‌ನ ಅನೇಕ ಅಂಶಗಳ ಮೇಲೆ ರಜೆಯ ಕುರಿತಾದ ತನ್ನ ಜಾತ್ಯತೀತ ದೃಷ್ಟಿಕೋನವನ್ನು ಮೇಲಿರಿಸುವ ಮೂಲಕ ಡಿಕನ್ಸ್ ಪ್ರಭಾವ ಬೀರಿದ.[೫೯] ಮಾರ್ಟಿನ್ ಚಝಲ್‌ವಿಟ್ ಕೃತಿಯ ಮಾರಾಟಗಳು ಕುಸಿದ ಪರಿಣಾಮವಾಗಿ ತಲೆದೋರಿದ ಹಣಕಾಸಿನ ಹಾನಿಯನ್ನು ತಡೆಗಟ್ಟುವ ಒಂದು ಪ್ರಯತ್ನದಲ್ಲಿ ಎ ಕ್ರಿಸ್‌ಮಸ್ ಕರೋಲ್ ಕೃತಿಯು ಡಿಕನ್ಸ್‌ನಿಂದ ಬರೆಯಲ್ಪಟ್ಟಿತು. ವರ್ಷಗಳ ನಂತರ ತನ್ನ ಭಾವನೆಯನ್ನು ಹಂಚಿಕೊಳ್ಳುತ್ತಾ, ಎ ಕ್ರಿಸ್‌ಮಸ್ ಕರೋಲ್ ಕೃತಿಯ ಬರಹಗಾರಿಕೆಯಲ್ಲಿ ತಾನು "ಆಳವಾಗಿ ಪ್ರಭಾವಿತನಾಗಿದ್ದೆ" ಎಂದು ಡಿಕನ್ಸ್ ತಿಳಿಸಿದ. ತನ್ನ ವೃತ್ತಿಜೀವನದಲ್ಲಿ ಓರ್ವ ಸುಪ್ರಸಿದ್ಧ ಲೇಖಕನಾಗಿ ಮರುಹುಟ್ಟು ಪಡೆಯಲು ಈ ಕಾದಂಬರಿಯು ಅವನಿಗೆ ನೆರವಾಯಿತು.
ಬ್ರಿಟನ್ ವಿಶ್ವದ ಪ್ರಮುಖ ಆರ್ಥಿಕ ಮತ್ತು ರಾಜಕೀಯ ಶಕ್ತಿಯಾಗಿದ್ದ ಒಂದು ಕಾಲದಲ್ಲಿ, ಉಪೇಕ್ಷೆಗೀಡಾಗಿದ್ದ ಬಡವರ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ಸಿಲುಕಿರುವವರ ಜೀವನವು ಬ್ರಿಟಿಷ್ ಸಾಮ್ರಾಜ್ಯದ ಗಮನಕ್ಕೆ ಬರುವಂತೆ ಡಿಕನ್ಸ್ ಎತ್ತಿ ತೋರಿಸಿದ. ತನ್ನ ಪತ್ರಿಕೋದ್ಯಮದ ಮೂಲಕ ಆತ ನಿರ್ಮಲೀಕರಣ ಮತ್ತು ಅನಾಥಾಲಯದಂಥ ನಿರ್ದಿಷ್ಟ ಸಮಸ್ಯೆಗಳ ಕುರಿತು ಪ್ರಚಾರ ಮಾಡಿದ. ಆದರೆ, ವರ್ಗ ಅಸಮಾನತೆಗಳಿಗೆ ಸಂಬಂಧಿಸಿದ ಸಾರ್ವಜನಿಕ ಅಭಿಪ್ರಾಯವನ್ನು ಬದಲಾಯಿಸುವಲ್ಲಿ ಅವನ ಕಾದಂಬರಿಯು ಪ್ರಾಯಶಃ ತನ್ನ ಮಹಾನ್ ಪರಿಣತಿಯನ್ನು ತೋರಿಸಿಕೊಟ್ಟಿತು. ಬಡವರ ಶೋಷಣೆ ಹಾಗೂ ದಮನಕಾರಿ ನೀತಿಯನ್ನು ಆತ ತನ್ನ ಕಾದಂಬರಿಯಲ್ಲಿ ಹಲವು ಬಾರಿ ಚಿತ್ರಿಸಿದ ಮತ್ತು ಇಂಥ ಕೆಟ್ಟಪದ್ಧತಿಗಳು ಅಸ್ತಿತ್ವದಲ್ಲಿರುವುದಕ್ಕಷ್ಟೇ ಅಲ್ಲದೇ ಅದು ಹುಲುಸಾಗಿ ಬೆಳೆಯಲು ಕಾರಣರಾದ ಸಾರ್ವಜನಿಕ ಅಧಿಕಾರಿಗಳನ್ನು ಮತ್ತು ಸಂಸ್ಥೆಗಳನ್ನು ಆತ ಕಟುವಾಗಿ ಖಂಡಿಸಿದ. ಕೈಗಾರಿಕಾ ಕಾರ್ಮಿಕ ವರ್ಗಕ್ಕೆ ಸಂಬಂಧಿಸಿದ ವಿಷಯವನ್ನು ಒಳಗೊಂಡ ಡಿಕನ್ಸ್‌ನ ಕಾದಂಬರಿ ಸ್ವರೂಪದ ಏಕೈಕ ಪ್ರಸ್ತುತಿಯಾದ ಹಾರ್ಡ್ ಟೈಮ್ಸ್ (1854) ಕೃತಿಯಲ್ಲಿ ಈ ಪರಿಸ್ಥಿತಿಯ ಕುರಿತಾದ ಅವನ ಅತ್ಯಂತ ಅತಿ ಗಟ್ಟಿಯಾದ ದೋಷಾರೋಪಣೆಯನ್ನು ಕಾಣಬಹುದು. ಈ ಕೃತಿಯಲ್ಲಿ, ಈ ಅಮುಖ್ಯೀಕರಿಸಿದ ಸಾಮಾಜಿಕ ಸ್ತರಶ್ರೇಣಿಯನ್ನು ಕಾರ್ಖಾನೆಯ ಮಾಲೀಕರು ಹೇಗೆ "ಕೈಗಳು" ಎಂದು ಹೆಸರಿಸಿದ್ದರು ಎಂಬುದನ್ನು ಚಿತ್ರಿಸಲು ಅವನು ಕಟುಟೀಕೆ ಹಾಗೂ ವಿಡಂಬನೆಗಳೆರಡನ್ನೂ ಬಳಸುತ್ತಾನೆ. ಅಂದರೆ, ಅವರನ್ನು ನಿಜವಾದ ಅರ್ಥದಲ್ಲಿ "ಜನರು" ಎಂದು ಪರಿಗಣಿಸದೆ ಕೇವಲ ಯಂತ್ರಗಳ ಉಪಾಂಗಗಳಾಗಿ ಅವರು ಭಾವಿಸಿದ್ದರು. ವರ್ಗ ದಬ್ಬಾಳಿಕೆಯ ಇಂಥ ಸಮಸ್ಯೆಗಳ ಕಡೆಗೆ ಗಮನಹರಿಸುವಲ್ಲಿ ಅವನ ಬರಹಗಾರಿಕೆಗಳು ಇತರರನ್ನು, ಅದರಲ್ಲೂ ನಿರ್ದಿಷ್ಟವಾಗಿ ಪತ್ರಕರ್ತರು ಹಾಗೂ ರಾಜಕೀಯ ವ್ಯಕ್ತಿಗಳನ್ನು ಪ್ರೇರೇಪಿಸಿದವು. ಉದಾಹರಣೆಗೆ, ದಿ ಪಿಕ್‌ವಿಕ್ ಪೇಪರ್ಸ್ ಕೃತಿಯಲ್ಲಿ ಸೆರೆಮನೆಯ ದೃಶ್ಯಗಳು ಫ್ಲೀಟ್ ಸೆರೆಮನೆಯನ್ನು ಮುಚ್ಚುವಲ್ಲಿ ತುಂಬಾ ಪ್ರಭಾವ ಬೀರಿವೆ ಎಂದು ಪ್ರತಿಪಾದಿಸಲಾಗಿದೆ. ಕಾರ್ಲ್ ಮಾರ್ಕ್ಸ್ ಹೇಳಿರುವ ಪ್ರಕಾರ, ಡಿಕನ್ಸ್, ವಿಕ್ಟೋರಿಯಾ ಕಾಲದ ಇಂಗ್ಲಂಡ್‌ನ ಇತರ ಕಾದಂಬರಿಕಾರರು, "...ಎಲ್ಲಾ ವೃತ್ತಿಪರ ರಾಜಕಾರಣಿಗಳು, ಪತ್ರಿಕೋದ್ಯಮಿಗಳು ಮತ್ತು ನೀತಿಬೋಧಕರನ್ನೂ ಒಟ್ಟಾಗಿ ಸೇರಿಸಿದರೆ ವ್ಯಕ್ತವಾಗುತ್ತಿದ್ದ ಸತ್ಯಗಳಿಗಿಂತ ಹೆಚ್ಚಿನ ಪ್ರಮಾಣದ ರಾಜಕೀಯ ಮತ್ತು ಸಾಮಾಜಿಕ ಸತ್ಯಗಳನ್ನು ಜಗತ್ತಿಗೆ ನೀಡಿದರು".[೬೦] ಅವನ ಕಾದಂಬರಿಗಳ ಅಸಾಧಾರಣ ಜನಪ್ರಿಯತೆಯು, ತಾವು ಹೊಂದಿದ್ದ ಸಾಮಾಜಿಕವಾಗಿ ವಿರೋಧಾತ್ಮಕ ವಿಷಯಗಳನ್ನು (ಬ್ಲೀಕ್ ಹೌಸ್ , 1853; ಲಿಟ್ಲ್ ಡೋರಿಟ್ , 1857; ಅವರ‍್ ಮ್ಯೂಚುಯಲ್ ಫಂಡ್ , 1865) ಹೊಂದಿಯೂ ಸಹ ಹೇಳಬೇಕಾದುದನ್ನು ಒತ್ತಿ ಹೇಳಿದವು. ಆಸಕ್ತಿ ಕೆರಳಿಸುವ ಕಥೆಯ ಎಳೆಗಳು ಹಾಗೂ ಮರೆಯಲಾಗದ ಪಾತ್ರಗಳನ್ನು ಸೃಷ್ಟಿಸಬಲ್ಲ ಅವನ ಬಹುಪಾಲು ಅಲೌಕಿಕವಾದ ಸಾಮರ್ಥ್ಯವನ್ನಷ್ಟೇ ಇದು ಒತ್ತಿಹೇಳದೆ, ಸಾಮಾನ್ಯವಾಗಿ ಉಪೇಕ್ಷೆಗೀಡಾಗಿದ್ದ ಸಾಮಾಜಿಕ ನ್ಯಾಯದ ಸಮಸ್ಯೆಗಳನ್ನು ವಿಕ್ಟೋರಿಯಾ ಕಾಲದ ಜನತೆಯು ಎದುರಿಸಿತು ಎಂಬುದನ್ನು ಕೂಡ ಇದು ಖಾತ್ರಿಪಡಿಸಿದೆ.
ಹತ್ತೊಂಬತ್ತನೇ ಶತಮಾನದ ಇಂಗ್ಲಂಡ್‌ನಲ್ಲಿನ ಜೀವನದ ಎದ್ದುಕಾಣುವ ವಿವರಗಳನ್ನು ಅನೇಕ ಬಾರಿ ಹೊಂದಿರುವ ಅವನ ಕಾದಂಬರಿಯು, ಒಂದು ಜಾಗತಿಕ ಮಟ್ಟದಲ್ಲಿ ವಿಕ್ಟೋರಿಯಾ ಕಾಲದ ಸಮಾಜವನ್ನು (1837 – 1901) ಏಕಪ್ರಕಾರವಾಗಿ "ಡಿಕನ್ಸಿಯನ್" ಸ್ವರೂಪದಲ್ಲಿ ಸಂಕೇತಿಸಲು ಕರಾರುವಾಕ್ಕಾಗಿಲ್ಲದ ಮತ್ತು ಕಾಲವಿರೋಧದ ಸ್ವರೂಪದಲ್ಲಿ ಬಂದಿದೆ. ಅವನ ಕಾದಂಬರಿಗಳ ಕಾಲಾವಧಿಯು ವಾಸ್ತವವಾಗಿ 1770ರ ದಶಕದಿಂದ 1860ರ ದಶಕದವರೆಗೆ ವ್ಯಾಪಿಸಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. 1870ರಲ್ಲಿ ಅವನ ಸಾವು ಸಂಭವಿಸಿದ ನಂತರದ ದಶಕದಲ್ಲಿ, ಸಾಮಾಜಿಕವಾಗಿ ಮತ್ತು ತಾತ್ತ್ವಿಕವಾಗಿ ನಿರಾಶಾವಾದದ ದೃಷ್ಟಿಕೋನಗಳ ಒಂದು ಹೆಚ್ಚು ತೀವ್ರವಾದ ಮಟ್ಟವು ಬ್ರಿಟಿಷ್ ಕಾದಂಬರಿಗೆ ಮಹತ್ವವನ್ನು ನೀಡಿತು; ಡಿಕನ್ಸ್‌ನ ಕಾದಂಬರಿಗಳ ನಿರಾಶಾದಯಕ ಅಂಶವನ್ನೂ ಸಹ ಅಂತ್ಯದಲ್ಲಿ ಒಟ್ಟಾಗಿ ಹಿಡಿದಿಟ್ಟುಕೊಂಡಿದ್ದ ಧಾರ್ಮಿಕ ನಂಬಿಕೆಗೆ ಇಂಥ ವಸ್ತುವಿಷಯಗಳು ಎದ್ದುಕಾಣುವ ತದ್ವಿರುದ್ಧವಾದ ರೀತಿಯಲ್ಲಿ ನಿಂತವು. ಥಾಮಸ್ ಹಾರ್ಡಿ ಮತ್ತು ಜಾರ್ಜ್ ಗಿಸ್ಸಿಂಗ್‌ರಂಥ, ನಂತರ ಬಂದ ವಿಕ್ಟೋರಿಯಾ ಕಾಲದ ಕಾದಂಬರಿಕಾರರ ಮೇಲೆ ಡಿಕನ್ಸ್ ನಿಚ್ಚಳವಾದ ಪ್ರಭಾವವನ್ನು ಬೀರಿದ; ಆದಾಗ್ಯೂ, ವಿಕ್ಟೋರಿಯಾ ಕಾಲದ ಧರ್ಮದ ಸ್ಥಾಪಿತ ಪದ್ಧತಿಯನ್ನು ಎದುರಿಸುವಲ್ಲಿನ ಮತ್ತು ಸವಾಲೆಸೆಯುವಲ್ಲಿನ ಒಂದು ಮಹಾನ್ ಸಮ್ಮತಿಯನ್ನು ಅವರ ಕೃತಿಗಳು ಪ್ರದರ್ಶಿಸುತ್ತವೆ. ಸಾಮಾಜಿಕ ಪ್ರಭಾವಗಳಿಂದ (ಮುಖ್ಯವಾಗಿ ಕೆಳವರ್ಗದ ಪರಿಸ್ಥಿತಿಗಳ ಮೂಲಕ) ಹಿಡಿಯಲ್ಪಟ್ಟಿರುವ ಪಾತ್ರಗಳನ್ನು ಕೂಡಾ ಅವು ಚಿತ್ರಿಸುತ್ತವೆ, ಆದರೆ ತಮ್ಮ ನಿಯಂತ್ರಣದ ಆಚೆಗೆ ಅವುಗಳನ್ನು ಸಾಮಾನ್ಯವಾಗಿ ದುಖಾಂತ್ಯಗಳೆಡೆಗೆ ಒಯ್ದಿವೆ.
ಕಾದಂಬರಿಕಾರರು ಅವನ ಪುಸ್ತಕಗಳಿಂದ ಪ್ರಭಾವವನ್ನು ಪಡೆಯುತ್ತಲೇ ಇದ್ದಾರೆ; ಉದಾಹರಣೆಗೆ, ಅನ್ನೆ ರೈಸ್, ಟಾಮ್ ವೋಲ್ಫ್, ಮತ್ತು ಜಾನ್ ಇರ್ವಿಂಗ್‌ನಂಥ ಸದ್ಯದ ಭಿನ್ನಜಾತಿಯ ಲೇಖಕರು ಡಿಕನ್ಸ್ ಶೈಲಿಯೊಂದಿಗೆ ಅಥವಾ ಅವನ ಪುಸ್ತಕಗಳೊಂದಿಗೆ ನೇರವಾದ ಪ್ರಭಾವವನ್ನು ಹೊಂದಿರುವುದರ ಸಾಕ್ಷಿಗಳಾಗಿದ್ದಾರೆ. ಜೇಮ್ಸ್ ಫಿನ್ ಗಾರ್ನರ್ ಎಂಬ ಹಾಸ್ಯಲೇಖಕ ಎ ಕ್ರಿಸ್‌ಮಸ್ ಕರೋಲ್ ಕೃತಿಯ "ರಾಜಕೀಯವಾಗಿ ಸರಿಯಾಗಿರುವ" ಒಂದು ಕುಹಕವಾದ ಆವೃತ್ತಿಯನ್ನು ಬರೆದ, ಮತ್ತು ಇತರ ಸೌಹಾರ್ದಯುಕ್ತ ವಿಡಂಬನ ಬರಹಗಳಲ್ಲಿ ಬ್ಲೀಕ್ ಎಕ್ಸ್‌ಪೆಕ್ಟೇಷನ್ಸ್ ಎಂಬ ರೇಡಿಯೋ 4 ಹಾಸ್ಯಕೃತಿಯು ಸೇರಿದೆ. ದಿ ಲಾಸ್ಟ್ ಡಿಕನ್ಸ್ ಎಂಬ ಮ್ಯಾಥ್ಯೂ ಪರ್ಲ್‌ನ ಕಾದಂಬರಿಯು ಎಡ್ವಿನ್ ಡ್ರೂಡ್‌ನನ್ನು ಚಾರ್ಲ್ಸ್ ಡಿಕನ್ಸ್ ಹೇಗೆ ಮುಗಿಸುತ್ತಿದ್ದ ಎಂಬುದರ ಕುರಿತಾದ ಒಂದು ರೋಮಾಂಚಕ ಕೃತಿಯಾಗಿದೆ.
ಡಿಕನ್ಸ್‌ನ ಜೀವನವು ಕಡೇಪಕ್ಷ ಎರಡು TV ಕಿರುಸರಣಿಗಳು ಹಾಗೂ ಎರಡು ಪ್ರಸಿದ್ಧ ಏಕ-ವ್ಯಕ್ತಿ ಪ್ರದರ್ಶನಗಳ ವಸ್ತುವಾಗಿದ್ದರೂ ಸಹ, ಹಾಲಿವುಡ್‌ನ "ದೊಡ್ಡ ತೆರೆಯ" ಜೀವನಚರಿತ್ರೆಯೊಂದಕ್ಕೆ ಅವನೆಂದೂ ವಸ್ತು-ವಿಷಯವಾಗಿಲ್ಲ.
ಯೆಹೂದಿ ದ್ವೇಷ ಮತ್ತು ವರ್ಣಭೇದ ನೀತಿಯ ಕುರಿತಾದ ಆರೋಪಗಳು
[ಬದಲಾಯಿಸಿ]ದಿ ಇಂಡಿಪೆಂಡೆಂಟ್ ನಲ್ಲಿ ಪಾಲ್ ವ್ಯಾಲ್ಲೆಲಿ ಎಂಬಾತ ಬರೆಯುತ್ತಾ, ಆಲಿವರ‍್ ಟ್ವಿಸ್ಟ್ ಕೃತಿಯಲ್ಲಿ ಡಿಕನ್ಸ್ ಸೃಷ್ಟಿಸಿರುವ -ಲಂಡನ್‌ನಲ್ಲಿ ಬಾಲ ಜೇಬುಗಳ್ಳರಿಗಾಗಿ ಒಂದು ಶಾಲೆಯನ್ನು ನಡೆಸುತ್ತಿರುವ- ಫ್ಯಾಗಿನ್ ಪಾತ್ರವನ್ನು ಇಂಗ್ಲಿಷ್ ಸಾಹಿತ್ಯದಲ್ಲಿ ಕಂಡುಬರುವ ಒಂದು ಅತ್ಯಂತ ವಿಕಟವಾದ ಯೆಹೂದಿಗಳ ಪೈಕಿ ಒಂದೆಂಬಂತೆ ವ್ಯಾಪಕವಾಗಿ ಕಾಣಲಾಗುತ್ತಿದೆ, ಮತ್ತು ಡಿಕನ್ಸ್ ಸೃಷ್ಟಿದ 989 ಪಾತ್ರಗಳ ಪೈಕಿ ಅತ್ಯಂತ ಎದ್ದು ಕಾಣುವ ಪಾತ್ರವಾಗಿ ಪರಿಗಣಿಸಲ್ಪಟ್ಟಿದೆ ಎಂದು ತಿಳಿಸಿದ್ದಾನೆ.[೬೧]
ಕಲ್ಲುಗಳ ಮೇಲೆ ಮಣ್ಣಿನ ದಪ್ಪ ಪದರ ರೂಪುಗೊಂಡಿತು, ಮತ್ತು ಬೀದಿಗಳಲ್ಲಿ ಒಂದು ಕಪ್ಪು ಮಂಜಿನ ಕಣವು ತೇಲಾಡಿತು; ಮಳೆಯು ನಿಧಾನವಾಗಿ ಕೆಳಗೆ ಬಿದ್ದಿರು, ಮತ್ತು ಸ್ಪರ್ಶಿಸಿದಾಗ ಎಲ್ಲವೂ ತಂಪಾದ ಮತ್ತು ತೇವವಾದ ಅನುಭುತಿಯನ್ನು ನೀಡಿದವು. ಯೆಹೂದಿಯು ಎಲ್ಲಕಡೆಗೂ ಹಬ್ಬುವ ರೀತಿಯಲ್ಲಿನ ಇಂಥ ಇದು ವಸ್ತುವೊಂದಕ್ಕೆ ಸರಿಹೊಂದಿದ ರಾತ್ರಿಯಂತೆ ಕಂಡಿತು. ಗೋಡೆಗಳು ಮತ್ತು ಬಾಗಿಲದಾರಿಗಳ ಆಸರೆಯ ಕೆಳಗೆ ಅವನು ತೆವಳುತ್ತಾ, ಗೊತ್ತಾಗದಂತೆ ಜಾರುತ್ತಿದ್ದಂತೆ, ಕೆಸರು ಮತ್ತು ಕತ್ತಲೆಯಲ್ಲಿ ಜನ್ಮತಳೆದ ಅಸಹ್ಯಕರ ಸರೀಸೃಪದಂತೆ ಕಾಣುತ್ತಿದ್ದ ಭಯಂಕರವಾಗಿದ್ದ ಮುದುಕನು ಕತ್ತಲೆಯಲ್ಲಿ ಸಾಗಿ, ಊಟವೊಂದಕ್ಕಾಗಿ ಒಂದಷ್ಟು ಸಮೃದ್ಧವಾದ ಕೆಟ್ಟಮಾಂಸವನ್ನು ಅರಸುತ್ತಾ ತೆವಳಿಕೊಂಡುಹೋದ.[೬೨]
ಲಂಡನ್‌ನಲ್ಲಿ 19ನೇ ಶತಮಾನದಲ್ಲಿದ್ದ ಓರ್ವ ಯೆಹೂದಿ ಅಪರಾಧಿಯಾದ ಇಕೆ ಸೊಲೊಮನ್‌ನ ಮೇಲೆ ಈ ಪಾತ್ರವು ಆಧರಿಸಿದೆ ಎಂದು ಭಾವಿಸಲಾಗಿದೆ. ಡಿಕನ್ಸ್ ಓರ್ವ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಈತನನ್ನು ಸಂದರ್ಶನ ಮಾಡಿದ್ದ.[೬೩] ಸಾಹಿತ್ಯದಲ್ಲಿ ಯೆಹೂದಿಗಳ ಚಿತ್ರಣವನ್ನು ಕುರಿತು ಬರೆಯುವ ನಾಡಿಯಾ ವಾಲ್ಡ್‌ಮನ್ ಎಂಬಾತ ವಾದಿಸುವ ಪ್ರಕಾರ, ಯೆಹೂದಿಯ ಅಂತರ್ಗತವಾಗಿರುವ ಕೆಟ್ಟತನದ ಒಂದು ಬಿಂಬವಾಗಿಸಿರುವ ಸ್ವರೂಪದಿಂದ ಫ್ಯಾಗಿನ್‌ನ ನಿರೂಪಣೆಯನ್ನು ಸೆಳೆಯಲಾಗಿದೆ. ಈ ಅಲಂಕಾರಿಕ ನಿರೂಪಣೆಯಲ್ಲಿ ಅವನೊಂದಿಗೆ ದೆವ್ವ ಮತ್ತು ಕ್ರೂರಮೃಗಗಳನ್ನು ಸೇರಿಸಲಾಗಿದೆ.[೬೪]
ಕಾದಂಬರಿಕಾರನು ಮೊದಲ 38 ಅಧ್ಯಾಯಗಳಲ್ಲಿ 257 ಬಾರಿ ಫ್ಯಾಗಿನ್‌ನನ್ನು "ಯೆಹೂದಿ" ಎಂದು ಉಲ್ಲೇಖಿಸುತ್ತಾನೆ. ಇತರ ಪಾತ್ರಗಳ ಜನಾಂಗೀಯತೆ ಅಥವಾ ಧರ್ಮವು ಇಲ್ಲಿ ನಮೂದಿಸಲ್ಪಟ್ಟಿಲ್ಲ.[೬೧] 1854ರಲ್ಲಿ, ಜ್ಯೂಯಿಷ್ ಕ್ರಾನಿಕಲ್ ನಿಯತಕಾಲಿಕವು, "ಈ ಮಹಾನ್ ಲೇಖಕನ ಮತ್ತು ತುಳಿತಕ್ಕೊಳಗಾದವರ ಶಕ್ತಿಯುತ ಸ್ನೇಹಿತನ ’ಸಹಾನುಭೂತಿಯ ಹೃದಯ’ದಿಂದ ಯೆಹೂದಿಗಳನ್ನು ಮಾತ್ರವೇ ಏಕೆ ಹೊರಗಿಡಬೇಕು" ಎಂದು ಪ್ರಶ್ನಿಸಿತು ಡಿಕನ್ಸ್ ತನ್ನ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದಾಗ ಅದನ್ನು 1860ರಲ್ಲಿ ಖರೀದಿಸಿದ್ದವನ ಹೆಂಡತಿಯಾದ ಎಲಿಝಾ ಡೇವಿಸ್ ಫ್ಯಾಗಿನ್‌ನ ಕುರಿತಾದ ಅವನ ನಿರೂಪಣೆಯನ್ನು ಪ್ರತಿಭಟಿಸಿ ಅವನಿಗೆ ಪತ್ರ ಬರೆದಿದ್ದಳು. "ಉಪೇಕ್ಷಿಸಲ್ಪಟ್ಟಿರುವ ಯೆಹೂದಿಯ ವಿರುದ್ಧ ಕೆಟ್ಟದಾದ ಪೂರ್ವಗ್ರಹವನ್ನು ಆತ ಪ್ರೋತ್ಸಾಹಿಸಿದ್ದಾನೆ", ಮತ್ತು ಈ ಮೂಲಕ ಯೆಹೂದಿ ಜನಾಂಗದೆಡೆಗೆ ಒಂದು ದೊಡ್ಡ ತಪ್ಪೆಸಗಿದ್ದಾನೆ ಎಂಬುದು ಅವಳ ವಾದವಾಗಿತ್ತು. ಅವಳ ಗಂಡನು ಓರ್ವ ಪ್ರಾಮಾಣಿಕ ಸಂಭಾವಿತ ವ್ಯಕ್ತಿ ಎಂದು ಬೇರೊಬ್ಬರಿಂದ ಡಿಕನ್ಸ್ ಅರಿತಿದ್ದನಾದರೂ, ಮಾರಾಟದ ಸಮಯದಲ್ಲಿ ಅವಳ ಗಂಡನನ್ನು ಡಿಕನ್ಸ್ ಓರ್ವ "ಯೆಹೂದಿ ಸಾಲದಾತ" ಎಂಬಂತೆ ವಿವರಿಸಿದ್ದ.
ಅವಳ ದೂರನ್ನು ಡಿಕನ್ಸ್ ಗಂಭೀರವಾಗಿ ಪರಿಗಣಿಸಿದ. ಆಲಿವರ‍್ ಟ್ವಿಸ್ಟ್ ಕೃತಿಯ ಮುದ್ರಣವನ್ನು ಆತ ತಡೆಹಿಡಿದ, ಮತ್ತು ಇನ್ನೂ ಜೋಡಣೆಯಾಗದ ಪುಸ್ತಕದ ಭಾಗಗಳಿಗಾಗಿದ್ದ ಪಠ್ಯವನ್ನು ಬದಲಾಯಿಸಿದ. ಮೊದಲ 38 ಅಧ್ಯಾಯಗಳಲ್ಲಿ 257 ಬಾರಿ ಫ್ಯಾಗಿನ್‌ನನ್ನು "ಯೆಹೂದಿ" ಎಂದು ಕರೆದಿದ್ದ ಭಾಗಗಳನ್ನು ಇದು ಒಳಗೊಂಡಿತ್ತು. ಆದರೆ ಅವನಿಗೆ ಸಂಬಂಧಿಸಿದ ನಂತರದ 179 ಉಲ್ಲೇಖಗಳ ಪೈಕಿ ಎಷ್ಟು ಬೇಕೋ ಅಷ್ಟನ್ನು ಬದಲಾಯಿಸಿದ. ಅವರ‍್ ಮ್ಯೂಚುಯಲ್ ಫಂಡ್ ಎಂಬ ಅವನ ಮುಂದಿನ ಕಾದಂಬರಿಯಲ್ಲಿ, ರಿಯಾಹ್ ಎಂಬ ಪಾತ್ರವನ್ನು ಅವನು ಸೃಷ್ಟಿಸಿದ (ಯೆಹೂದಿಯಲ್ಲಿ "ಸ್ನೇಹಿತ" ಎಂದು ಇದರರ್ಥ). ಈ ಕುರಿತು ವ್ಯಾಲ್ಲೆಲಿಯು ಬರೆಯುತ್ತಾ, ರಿಯಾಹ್‌ನ ಒಳ್ಳೆಯತನವು ಫ್ಯಾಗಿನ್‌ನ ಕೆಟ್ಟತನದಂತೆಯೇ ಹೆಚ್ಚೂಕಮ್ಮಿ ಪರಿಪೂರ್ಣವಾಗಿದೆ ಎಂದು ತಿಳಿಸಿದ್ದಾನೆ. ಕಾದಂಬರಿಯಲ್ಲಿ ರಿಯಾಹ್ ಹೀಗೆ ಹೇಳುತ್ತಾನೆ: "...'ಇದೊಂದು ಕೆಟ್ಟ ಗ್ರೀಕ್, ಆದರೆ ಒಳ್ಳೆಯ ಗ್ರೀಕರು ಇಲ್ಲಿದ್ದಾರೆ. ಇದೊಂದು ಕೆಟ್ಟ ತುರ್ಕ್ ದೇಶ, ಆದರೆ ಒಳ್ಳೆಯ ತುರ್ಕಿ ಜನರು ಇಲ್ಲಿದ್ದಾರೆ' ಎಂದು ಜನ ಹೇಳುತ್ತಾರೆ. ಆದರೆ ಯೆಹೂದಿಗಳಿಗೆ ಸಂಬಂಧಿಸಿ ಹೀಗೆ ಹೇಳುವುದಿಲ್ಲ ... ನಮ್ಮಲ್ಲಿನ ಅತ್ಯಂತ ಕೆಟ್ಟದನ್ನು ಅವರು ಉತ್ತಮವಾಗಿರುವುದರ ಮಾದರಿಗಳಂತೆ ತೆಗೆದುಕೊಳ್ಳುತ್ತಾರೆ ..." ಕೃತಜ್ಞತೆಯ ಕುರುಹಾಗಿ ಡೇವಿಸ್ ಡಿಕನ್ಸ್‌ಗೆ ಯೆಹೂದಿ ಬೈಬಲ್‌ನ ಒಂದು ಪ್ರತಿಯನ್ನು ಕಳಿಸಿದ.[೬೧]
ಉತ್ತರ ಅಮೆರಿಕಾದ ಎಸ್ಕಿಮೊಗಳ ಕುರಿತಾದ ಅವನ ದೃಷ್ಟಿಕೋನಗಳು ಮೇಲೆ ವಿವರಿಸಲಾದ ಫ್ರಾಂಕ್ಲಿನ್ ಇನ್ಸಿಡೆಂಟ್‌ನಲ್ಲಿ ವಿವರಿಸಲ್ಪಟ್ಟಿವೆ.
ದಿ ಪೆರಿಲ್ಸ್ ಆಫ್ ಸರ್ಟನ್ ಇಂಗ್ಲಿಷ್ ಪ್ರಿಸನರ್ಸ್ ಕೃತಿಯಲ್ಲಿ, ಭಾರತೀಯ ದಂಗೆಯ ಕುರಿತಾದ ಒಂದು ಅನ್ಯೋಕ್ತಿಯನ್ನು ಡಿಕನ್ಸ್ ನೀಡುತ್ತಾನೆ. ಭಾರತೀಯ ದಂಗೆಕೋರರ[೬೫] ಒಂದು ವಿಕೃತಗೊಂಡ ಮಾದರಿಯಾದ "ಸ್ಥಳೀಯ ಕಪ್ಪು ಮನುಷ್ಯ"ನು ಓರ್ವ "ಮಹಾಪಾಪದ ವಿಶ್ವಾಸಘಾತುಕ", ಮತ್ತು ಓರ್ವ ಅತ್ಯಂತ ಪೈಶಾಚಿಕಲ ಖಳನಾಯಕನಂತೆ ಚಿತ್ರಿಸಲ್ಪಟ್ಟಿದ್ದು, ಕಾನ್‌ಪೋರ್ ಹತ್ಯಾಕಾಂಡದ ಒಂದು ಪರೋಕ್ಷ ಸೂಚನೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಹತ್ಯಾಕಾಂಡದಲ್ಲಿ ಆತ ಪಾಲ್ಗೊಳ್ಳುತ್ತಾನೆ.[೬೬] ಬಂಡಾಯಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ಲೇಖಕರಿಂದ ಬಂದಿರುವ ಸಾಂಸ್ಕೃತಿಕ ಪ್ರತಿಕ್ರಿಯೆಯ ಮೇಲೆ ಪೆರಿಲ್ಸ್ ಕೃತಿಯು ಮಹತ್ತಾದ ಪ್ರಭಾವವನ್ನು ಬೀರಿದೆ. ತಪ್ಪಿತಸ್ಥ ಮನೋಭಾವವನ್ನು ಆರೋಪಿಸುವ ಮೂಲಕ ಸಾಮ್ರಾಜ್ಯವಾದಿ ಪ್ರಭಾವಿಗಳನ್ನು ಬಲಿಪಶುಗಳಾಗಿ, ಮತ್ತು ಪ್ರಬಲರನ್ನು ಖಳನಾಯಕರಾಗಿ ಚಿತ್ರಿಸಿರುವುದು ಇಲ್ಲಿನ ವೈಶಿಷ್ಟ್ಯ.[೬೫] ಪೆರಿಲ್ಸ್ ಕೃತಿಯ ಸಹ-ಬರಹಗಾರನಾದ ವಿಕಿ ಕಾಲಿನ್ಸ್, ಎರಡನೇ ಅಧ್ಯಾಯವನ್ನು ಒಂದು ಕಡಿಮೆ ಪೂರ್ವಗ್ರಹದ ದೃಷ್ಟಿಕೋನದಿಂದ ಬರೆಯುವ ಮೂಲಕ ಡಿಕನ್ಸ್‌ನ ಅತಿರೇಕತೆಯಿಂದ ಹೊರಳುದಾರಿಯನ್ನು ತುಳಿಯುತ್ತಾನೆ. "ಬ್ರಿಟಿಷ್ ವರ್ಣಭೇದನೀತಿಯನ್ನು ಪ್ರೋತ್ಸಾಹಿಸುವ ಬದಲು ಅದನ್ನು ವಿಡಂಬಿಸಿ ಬರೆಯುತ್ತಿದ್ದ" ಎಂಬ ಕಾರಣಕ್ಕೆ ಕವಿ ಜಯಾ ಮೆಹ್ತಾನನ್ನು ಈತ ಉಲ್ಲೇಖಿಸುತ್ತಾನೆ.[೬೭] "ಹುಚ್ಚುಚ್ಚಾಗಿ ಆಡುವ" ತನ್ನ ಓದುಗರು ಮತ್ತಷ್ಟು ಕೆರಳಬಹುದು ಎಂಬ ಕಾರಣಕ್ಕಾಗಿ ಘಟನೆಯ ಯಾವುದೇ ವಾಸ್ತವಿಕ-ಜೀವನದ ಚಿತ್ರಣವನ್ನು ದೂರವಿರಿಸಿದ್ದಕ್ಕಾಗಿ, ಮತ್ತು ಜನಾಂಗೀಯ ಅಥವಾ ಪ್ರಚಾರಕ ದ್ವೇಷವನ್ನು ಹೊಂದಿಲ್ಲದ" ಒಂದು ಪ್ರಣಯಪ್ರಧಾನ ಕಥೆಯ ಪರವಾಗಿ ಇದ್ದುದಕ್ಕಾಗಿ ಅರ್ಥರ‍್ ಕ್ವಿಲ್ಲರ‍್-ಕೌಚ್ ಎಂಬ ಸಮಕಾಲೀನ ಸಾಹಿತ್ಯಿಕ ವಿಮರ್ಶಕನು ಡಿಕನ್ಸ್‌ನನ್ನು ಹೊಗಳಿದ್ದಾನೆ.[೬೮] ಗೆದ್ದ ಜನರನ್ನು ತಪ್ಪಾಗಿ ಅರ್ಥೈಸಿಕೊಂಡ ಅರ್ಥಶೂನ್ಯ ಸಾಮ್ರಾಜ್ಯಷಾಹಿ ನಾಯಕರ ಅಧೀನದಲ್ಲಿರುವ ಭಾರತದಲ್ಲಿನ ಸೇನಾ ಸೇವೆಯಲ್ಲಿ ಆತನ ಮಗನು ಇದ್ದ ಸ್ಥಾನವು, ಪೆರಿಲ್ಸ್ ಕೃತಿಯನ್ನು ಭಾರತದ ಹಿನ್ನೆಲೆಯಲ್ಲಿ ಸೃಷ್ಟಿಸಲು ಅವನಿಗೆ ಮನಸ್ಸಿಲ್ಲದಿರುವಿಕೆಯ ಮೇಲೆ ಪ್ರಭಾವ ಬೀರಿರಬಹುದು. ಕೃತಿಯಲ್ಲಿನ ತನ್ನ ಟೀಕೆಗಳಿಂದಾಗಿ ತನ್ನ ಮಗನ ಹಿರಿಯ ಅಧಿಕಾರಿಗಳೊಂದಿಗೆ ವೈರವನ್ನು ಕಟ್ಟಿಕೊಳ್ಳಲು ಕಾರಣವಾಗಬಹುದು ಎಂಬ ಭಯದಿಂದಾಗಿ ಇದು ಕಂಡುಬಂದಿರಬಹುದು ಎಂಬ ಒಂದು ಆಧುನಿಕ ನಿರ್ಣಯವೂ ಚಾಲ್ತಿಯಲ್ಲಿದೆ.[೬೯]
ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ನೂರಕ್ಕಿಂತಲೂ ಹೆಚ್ಚು ಸೆರೆಯಾಳುಗಳು ಕೊಲೆಯಾದುದನ್ನು ಒಳಗೊಂಡ ಒಂದು ಕೃತ್ಯವೂ ಸೇರಿದಂತೆ ಭಾರತೀಯರಿಂದ ಮಾಡಲ್ಪಟ್ಟ ದುಷ್ಕೃತ್ಯಗಳ ಘಟನೆಗಳ ವರದಿಗಳಿಗೆ ಪ್ರತಿಕ್ರಿಯಿಸುತ್ತಾ,[೭೦]
ಬ್ಯಾರನ್ ಪದವಿಯಲ್ಲಿದ್ದ ಬರ್ಡೆಟ್-ಕೌಟ್ಸ್‌ಗೆ 1857ರ ಅಕ್ಟೋಬರ್ 4ರಂದು ಒಂದು ಖಾಸಗಿ ಪತ್ರವನ್ನು ಡಿಕನ್ಸ್ ಬರೆದ. ಅದರ ವಿವರ ಹೀಗಿತ್ತು:
ನಾನು ಭಾರತದಲ್ಲಿ ಪ್ರಧಾನ ದಂಡನಾಯಕನಾಗಿರಬೇಕಿತ್ತು ಅನ್ನಿಸಿತು... "ಕೊನೆಕೊನೆಯ ಕಟುಕತನಗಳ ಕಳಂಕವು ಯಾರ ಮೇಲೆ ಉಳಿಯಿತೋ ಆ ಜನಾಂಗವನ್ನು ಬೇರುಸಹಿತ ಕಿತ್ತುಹಾಕಲು... ಮಾನಕುಲದಿಂದ ಅದನ್ನು ಅಳಿಸಿಹಾಕಲು ಮತ್ತು ಭೂಮಿಯ ಮುಖದ ಮೇಲಿಂದ ಅದನ್ನು ತೊಡೆದುಹಾಕಲು ನಾನು ನನ್ನ ಶಕ್ತಿಮೀರಿ ಕೆಲಸ ಮಾಡಬೇಕು."[೭೧]
ಹೆಸರುಗಳು: 'ಡಿಕನ್ಸ್' ಮತ್ತು 'ಬೋಝ್'
[ಬದಲಾಯಿಸಿ]ಓರ್ವ ಸಮಕಾಲೀನ ವಿಮರ್ಶಕನು ಹೇಳುವಂತೆ, ಚಾರ್ಲ್ಸ್ ಡಿಕನ್ಸ್ ಒಂದು "ವಿಲಕ್ಷಣ ಹೆಸರನ್ನು" ಹೊಂದಿದ್ದ.[೭೨] "ವಾಟ್ ದಿ ಡಿಕನ್ಸ್!" ಎಂಬಂಥ ಭಾವಸೂಚಕಾವ್ಯಯದ ಉದ್ಗಾರಗಳಲ್ಲಿ ಡಿಕನ್ಸ್ ಎಂಬ ಹೆಸರನ್ನು "ದೆವ್ವ" ಎಂಬುದಕ್ಕಾಗಿರುವ ಒಂದು ಬದಲಿ ಪದವಾಗಿ ಬಳಸಲಾಗಿತ್ತು. ಇದು ಷೇಕ್ಸ್‌ಪಿಯರ್‌ನ ದಿ ಮೆರಿ ವೈವ್ಸ್ ಆಫ್ ವಿಂಡ್ಸರ್ ಕೃತಿಯಿಂದ ಜನ್ಯವಾಗಿದೆ ಎಂಬರ್ಥದಲ್ಲಿ ಇದನ್ನು OEDಯಲ್ಲಿ ದಾಖಲಿಸಲಾಗಿತ್ತು. "ಟು ಪ್ಲೇ ದಿ ಡಿಕನ್ಸ್" ಎಂಬ ಪದಗುಚ್ಛವನ್ನು "ಟು ಪ್ಲೇ ಹೆವಾಕ್/ಮಿಸ್ಚೀಫ್" ಎಂಬ ಅರ್ಥದಲ್ಲಿ ಬಳಸುವಂತೆ, "ಅನಿಷ್ಟ" ಎಂಬ ಪದಕ್ಕೆ ಒಂದು ಪರ್ಯಾಯ ಪದವಾಗಿಯೂ ಇದು ಬಳಸಲ್ಪಟ್ಟಿತು.[೭೩]
'ಬೋಝ್' ಎಂಬುದು ಡಿಕನ್ಸ್‌ನ ಸಾಂದರ್ಭಿಕ ಕಾವ್ಯನಾಮವಾಗಿತ್ತಾದರೂ, ಚಾರ್ಲ್ಸ್ ಓರ್ವ ಪ್ರಖ್ಯಾತ ಲೇಖಕನಾಗುವುದಕ್ಕೆ ಬಹಳ ಮುಂಚೆಯೇ ಡಿಕನ್ಸ್ ಪರಿವಾರದಲ್ಲಿ ಬಳಕೆಯಲ್ಲಿದ್ದ ಒಂದು ಸುಪರಿಚಿತ ಹೆಸರಾಗಿತ್ತು. ಆತನ ಅತ್ಯಂತ ಕಿರಿಯ ಸೋದರನಾದ ಅಗಸ್ಟಸ್ ಡಿಕನ್ಸ್‌ನ ಕುಟುಂಬದ ಉಪನಾಮವಾದ 'ಮೋಸೆಸ್'ನಿಂದ ವಾಸ್ತವವಾಗಿ ಇದನ್ನು ತೆಗೆದುಕೊಳ್ಳಲಾಗಿತ್ತು ಹಾಗೂ ದಿ ವಿಕರ‍್ ಆಫ್ ವೇಕ್‌ಫೀಲ್ಡ್ (19ನೇ ಶತಮಾನದ ಆರಂಭದ ಅವಧಿಯಲ್ಲಿ ಅತ್ಯಂತ ವ್ಯಾಪಕವಾಗಿ ಓದಲ್ಪಟ್ಟ ಕಾದಂಬರಿಗಳಲ್ಲೊಂದು) ಕೃತಿಯಲ್ಲಿನ ಸೋದರರಲ್ಲಿ ಒಬ್ಬನಾಗಿರುವ ಗೌರವಾರ್ಥವಾಗಿ ಅವನಿಗೆ ನೀಡಲಾಗಿತ್ತು. ತಮಾಷೆಯಾಗಿ ಇದನ್ನು ಮೂಗಿನ ಮೂಲಕ ಉಚ್ಚರಿಸಿದಾಗ 'ಮೋಸೆಸ್' ಎಂಬುದು 'ಬೋಸಸ್' ಆಗಿತ್ತು, ಮತ್ತು ನಂತರದಲ್ಲಿ ಅದನ್ನು 'ಬೋಝ್' ಎಂಬುದಾಗಿ ಸಂಕ್ಷಿಪ್ತಗೊಳಿಸಲಾಯಿತು - ಇದನ್ನು ಮೂಗಿನ ಮೂಲಕ 'o' ಎಂಬ ಒಂದು ಸುದೀರ್ಘ ಸ್ವರದೊಂದಿಗೆ ಉಚ್ಚರಿಸಲಾಯಿತು.[೭೪]
ಚಾರ್ಲ್ಸ್ ಡಿಕನ್ಸ್‌ನ ಒಡಹುಟ್ಟಿದವರು
[ಬದಲಾಯಿಸಿ]- ಫ್ರಾನ್ಸೆಸ್ (ಫ್ಯಾನಿ) ಎಲಿಜಬೆತ್ ಡಿಕನ್ಸ್ ಸುಮಾರು 1810 – 1847
- ಲೆಟಿಟಿಯಾ ಡಿಕನ್ಸ್ 1816 – 1893
- 1816ರ ನಂತರ ಹುಟ್ಟಿದ ಹ್ಯಾರಿಯೆಟ್ ಡಿಕನ್ಸ್
- ಫ್ರೆಡ್‌ರಿಕ್ ಡಿಕನ್ಸ್
- ಆಲ್‌ಫ್ರೆಡ್ ಲ್ಯಾಮರ್ಟ್ ಡಿಕನ್ಸ್
- ಅಗಸ್ಟಸ್ ನ್ಯೂನ್ಹ್ಯಾಂ ಡಿಕನ್ಸ್
ವಾಚನಗೋಷ್ಠಿಗಳ ರೂಪಾಂತರಗಳು
[ಬದಲಾಯಿಸಿ]ಎ ಕ್ರಿಸ್‌ಮಸ್ ಕರೋಲ್ ಕೃತಿಯ ಜಾನ್ ಮಾರ್ಟೈಮರ್ ರೂಪಾಂತರವನ್ನು ಪ್ರಸ್ತುತಪಡಿಸುತ್ತಿರುವ ಎಮ್ಲಿನ್ ವಿಲಿಯಮ್ಸ್, ಬ್ರಾನ್ಸ್‌ಬಿ ವಿಲಿಯಮ್ಸ್, ಕ್ಲೈವ್ ಫ್ರಾನ್ಸಿಸ್ ಮೊದಲಾದವರಿಂದ ಮಾಡಲಾದ ಡಿಕನ್ಸ್‌ನ ಕೃತಿಗಳ ವಾಚನಗಳ ಹಲವಾರು ಪ್ರಸ್ತುತಿಗಳ ದಾಖಲೆಗಳಿವೆ. ಅಷ್ಟೇ ಅಲ್ಲ, ಪೀಟರ್ ಅಕ್ರಾಯ್ಡ್ ರೂಪಾಂತರಿಸಿರುವ ಮಿಸ್ಟರಿ ಆಫ್ ಚಾರ್ಲ್ಸ್ ಡಿಕನ್ಸ್ ಕೃತಿಯಲ್ಲಿನ ಸೈಮನ್ ಕ್ಯಾಲೋನ ಪ್ರಸ್ತುತಿಯನ್ನೂ ಕಾಣಬಹುದು.
ವಸ್ತುಸಂಗ್ರಹಾಲಯಗಳು ಮತ್ತು ಉತ್ಸವಗಳು
[ಬದಲಾಯಿಸಿ]ಡಿಕನ್ಸ್ ಗುರುತಿಸಿಕೊಂಡಿದ್ದ ಅನೇಕ ಪಟ್ಟಣಗಳಲ್ಲಿ, ಅವನ ಜೀವನ ಮತ್ತು ಕೃತಿಗಳ ಕುರಿತಾದ ಆಚರಣೆಗಳನ್ನು ಮಾಡುವ ವಸ್ತುಸಂಗ್ರಹಾಲಯಗಳು ಮತ್ತು ಉತ್ಸವಗಳನ್ನು ಕಾಣಬಹುದು.
- ಚಾರ್ಲ್ಸ್ ಡಿಕನ್ಸ್ ವಸ್ತುಸಂಗ್ರಹಾಲಯ , ಇದು ಹಾಲ್‌ಬರ್ನ್‌ನ ಡೌಟಿ ಸ್ಟ್ರೀಟ್‌ನಲ್ಲಿದ್ದು, ಡಿಕನ್ಸ್‌ನ ಲಂಡನ್ ಗೃಹಗಳ ಪೈಕಿ ಇನ್ನೂ ಉಳಿದಿರುವ ಏಕೈಕ ನೆಲೆಯಾಗಿದೆ. ಆತ ಅಲ್ಲಿ ಕೇವಲ ಎರಡೇ ವರ್ಷಗಳಿದ್ದರೂ ಕೂಡ, ಆ ಅವಧಿಯಲ್ಲಿ ಆತ ದಿ ಪಿಕ್‌ವಿಕ್ ಪೇಪರ್ಸ್ , ಆಲಿವರ‍್ ಟ್ವಿಸ್ಟ್ ಮತ್ತು ನಿಕೋಲಸ್ ನಿಕಲ್‌ಬೈ ಕೃತಿಗಳನ್ನು ರಚಿಸಿದ. ಹಸ್ತಪ್ರತಿಗಳು, ಮೂಲ ಪೀಠೋಪಕರಣ ಮತ್ತು ಚಿರಸ್ಮರಣೀಯ ಗುರುತುಗಳ ಒಂದು ಪ್ರಮುಖ ಸಂಗ್ರಹವನ್ನು ಇದು ಒಳಗೊಂಡಿದೆ.
- ಚಾರ್ಲ್ಸ್ ಡಿಕನ್ಸ್ ಜನ್ಮಸ್ಥಳದ ವಸ್ತುಸಂಗ್ರಹಾಲಯ ವು ಪೋರ್ಟ್ಸ್‌ಮೌತ್‌ನಲ್ಲಿದ್ದು, ಇದು ಡಿಕನ್ಸ್ ಹುಟ್ಟಿದ ಮನೆಯಾಗಿದೆ. ಇದನ್ನು 1812ರ ಕಾಲದ ಶೈಲಿಯಲ್ಲಿ ಇದನ್ನು ಮರು-ಸಜ್ಜುಗೊಳಿಸಲಾಗಿದ್ದು, ಇದು ಡಿಕನ್ಸ್‌ನ ಚಿರಸ್ಮರಣೀಯ ಗುರುತುಗಳನ್ನು ಒಳಗೊಂಡಿದೆ.
- ದಿ ಡಿಕನ್ಸ್ ಹೌಸ್ ಮ್ಯೂಸಿಯಂ ಕೆಂಟ್‌ನ ಬ್ರಾಡ್‌ಸ್ಟೇರ್ಸ್‌ನಲ್ಲಿದ್ದು, ಇದು ಡೇವಿಡ್ ಕಾಪರ್‌ಫೀಲ್ಡ್ ಕೃತಿಯಲ್ಲಿನ ಮಿಸ್ ಬೆಸ್ಟೆ ಟ್ರಾಟ್‌ವುಡ್ ಪಾತ್ರದ ಸೃಷ್ಟಿಗೆ ಆಧಾರವಾದ ಮಿಸ್ ಮೇರಿ ಪಿಯರ್‌ಸನ್ ಸ್ಟ್ರಾಂಗ್‌ಳ ಮನೆಯಾಗಿದೆ. ಡೇವಿಡ್ ಕಾಪರ್‌ಫೀಲ್ಡ್ ಕೃತಿಯು ಬರೆಯಲ್ಪಟ್ಟ ಮೂಲ ಬ್ಲೀಕ್ ಹೌಸ್‌ನಿಂದ (2005ರವರೆಗೆ ಇದೊಂದು ಪ್ರಸಿದ್ಧ ವಸ್ತುಸಂಗ್ರಹಾಲಯವೂ ಆಗಿತ್ತು) ಕೊಲ್ಲಿಗೆ ಅಡ್ಡಲಾಗಿ ಇದು ಕಾಣಿಸುತ್ತದೆ. ಈ ವಸ್ತುಸಂಗ್ರಹಾಲಯವು ಚಿರಸ್ಮರಣೆಯ ಗುರುತುಗಳು, ರಾಣಿ ವಿಕ್ಟೋರಿಯಾ ಕಾಲದ ಸಾಮಾನುಗಳು ಮತ್ತು ಡಿಕನ್ಸ್‌ನ ಕೆಲವೊಂದು ಪತ್ರಗಳನ್ನು ಹೊಂದಿದೆ. 1937ರ ವರ್ಷದಿಂದಲೂ ಬ್ರಾಡ್‌ಸ್ಟೇರ್ಸ್ ಪ್ರತಿವರ್ಷವೂ ಡಿಕನ್ಸ್ ಉತ್ಸವ ವೊಂದನ್ನು ಆಚರಿಸಿಕೊಂಡು ಬಂದಿದ್ದ.
- ದಿ ಚಾರ್ಲ್ಸ್ ಡಿಕನ್ಸ್ ಸೆಂಟರ್ ರೋಚೆಸ್ಟರ್‌ನ ಈಸ್ಟ್‌ಗೇಟ್ ಹೌಸ್‌ನಲ್ಲಿದ್ದು 2004ರಲ್ಲಿ ಮುಚ್ಚಲ್ಪಟ್ಟಿತಾದರೂ, ಲೇಖಕನ ಸ್ವಿಸ್ ಮರದ ಮನೆಯನ್ನು ಒಳಗೋಂಡಿರುವ ಉದ್ಯಾನವು ಇನ್ನೂ ಅಸ್ತಿತ್ವದಲ್ಲಿದೆ. 16ನೇ ಶತಮಾನದ ಈ ಮನೆಯು, ದಿ ಪಿಕ್‌ವಿಕ್ ಪೇಪರ್ಸ್ ಕೃತಿಯಲ್ಲಿ ವೆಸ್ಟ್‌ಗೇಟ್ ಮನೆಯಾಗಿಯೂ, ಎಡ್ವಿನ್ ಡ್ರೂಡ್ ಕೃತಿಯಲ್ಲಿ ಕ್ರೈಸ್ತ ಸನ್ಯಾಸಿನಿಯ ಮನೆಯಾಗಿಯೂ ಕಾಣಿಸಿಕೊಂಡಿದ್ದು, ಈಗ ಇದನ್ನು ಒಂದು ವಿವಾಹತಾಣವಾಗಿ ಬಳಸಲಾಗುತ್ತಿದೆ.[೭೫] ನಗರದ ವಾರ್ಷಿಕ ಡಿಕನ್ಸ್ ಉತ್ಸವ (ಬೇಸಿಗೆ) ಮತ್ತು ಡಿಕನ್ಸಿಯನ್ ಕ್ರಿಸ್‌ಮಸ್ ಆಚರಣೆಗಳು ಈಗಲೂ ಅಬಾಧಿತವಾಗಿ ಮುಂದುವರಿದುಕೊಂಡು ಬಂದಿವೆ.
- ಡಿಕನ್ಸ್ ವರ್ಲ್ಡ್ ಒಂದು ಆಕರ್ಷಣೆಯ ತಾಣ. ಇದು ಒಂದು ಚಿತ್ರಮಂದಿರ ಹಾಗೂ ಉಪಹಾರ ಗೃಹಗಳನ್ನು ಒಳಗೊಂಡಿದೆ71,500 square feet (6,643 m2). ಇದು ಚಾಥಮ್‌ನಲ್ಲಿ 2007ರ ಮೇ 25ರಂದು ಪ್ರಾರಂಭವಾಯಿತು.[೭೬] ಹಿಂದಿನ ನೌಕಾ ಧಕ್ಕೆ ಪ್ರದೇಶದ ನಿವೇಶನದ ಒಂದು ಸಣ್ಣ ಭಾಗದ ಮೇಲೆ ಇದು ನಿಂತಿದೆ. ಈ ಜಾಗದಲ್ಲಿ ಡಿಕನ್ಸ್‌ನ ತಂದೆಯು ಒಮ್ಮೆ ನೌಕಾ ವೇತನ ಕಚೇರಿಯಲ್ಲಿ ಕೆಲಸ ಮಾಡಿದ್ದ.
- ಕೆಂಟ್‌ನ ರೋಚೆಸ್ಟರ್‌ನಲ್ಲಿ ನಡೆಯುವ ಡಿಕನ್ಸ್ ಉತ್ಸವ . ಸಮ್ಮರ್ ಡಿಕನ್ಸ್ ಉತ್ಸವವನ್ನು ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳ ಮೊದಲ ಕೆಲವು ದಿನಗಳಲ್ಲಿ ನಡೆಸಲಾಗುತ್ತದೆ. ಗುರುವಾರದಂದು ಕೇವಲ ಒಂದು ನೃತ್ಯಕೂಟವಿರುವ ಆಹ್ವಾನದೊಂದಿಗೆ ಇದು ಪ್ರಾರಂಭವಾಗುತ್ತದೆ ಮತ್ತು ನಂತರ ಬೀದಿಯ ಅನೇಕ ಮನರಂಜನೆಯೊಂದಿಗೆ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಅನೇಕ ವಿಭಿನ್ನ ವಸ್ತ್ರಗಳ ಪಾತ್ರಗಳೊಂದಿಗೆ ಮುಂದುವರಿಯುತ್ತದೆ. ಕ್ರಿಸ್‌ಮಸ್ ಡಿಕನ್ಸ್ ಎಂಬುದು ಒಂದು ಡಿಸೆಂಬರ್‌ನಲ್ಲಿನ ಮೊದಲ ವಾರಾಂತ್ಯವಾಗಿದ್ದು, ಶನಿವಾರ ಮತ್ತು ಭಾನುವಾರದಂದು ಮಾತ್ರವೇ ಇರುತ್ತದೆ.
ಡಿಕನ್ಸ್ ಉತ್ಸವಗಳನ್ನು ವಿಶ್ವಾದ್ಯಂತವೂ ಆಚರಿಸಲಾಗುತ್ತದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಅಂಥ ನಾಲ್ಕು ಗಮನಾರ್ಹ ಉತ್ಸವಗಳು ಹೀಗಿವೆ:
- ದಿ ರಿವರ್‌ಸೈಡ್ ಡಿಕನ್ಸ್ ಫೆಸ್ಟಿವಲ್ ಕ್ಯಾಲಿಫೋರ್ನಿಯಾದ ರಿವರ್‌ಸೈಡ್‌ನಲ್ಲಿ ಇದು ನಡೆಯುತ್ತದೆ. ಸಾಹಿತ್ಯಿಕ ಅಧ್ಯಯನಗಳಷ್ಟೇ ಅಲ್ಲದೇ ಮನರಂಜನೆಗಳನ್ನೂ ಇದು ಒಳಗೊಳ್ಳುತ್ತದೆ.
- ದಿ ಗ್ರೇಟ್ ಡಿಕನ್ಸ್ ಕ್ರಿಸ್‌ಮಸ್ ಫೇರ್ ಉತ್ಸವವನ್ನು <http://www.dickensfair.com/> ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ 1970ರ ದಶಕದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಕ್ರಿಸ್‌ಮಸ್‌ಗೆ ಮುಂಚಿನ ನಾಲ್ಕು ಅಥವಾ ಐದು ವಾರಾಂತ್ಯಗಳ ಅವಧಿಯಲ್ಲಿ, ವಿವಿಧ ವೇಷಭೂಷಣಗಳನ್ನು ಧರಿಸಿದ 500ಕ್ಕೂ ಹೆಚ್ಚಿನ ಪ್ರದರ್ಶಕರು ಒಬ್ಬರೊಡನೆ ಒಬ್ಬರು ಸೇರಿಕೊಂಡು ಸಾವಿರಾರು ಸಂದರ್ಶಕರನ್ನು ರಂಜಿಸುತ್ತಾರೆ. ....90,000 square feet (8,000 m2)ನಷ್ಟು ವಿಸ್ತೀರ್ಣದ ಸಾರ್ವಜನಿಕ ಪ್ರದೇಶದಲ್ಲಿನ ಮರುಸೃಷ್ಟಿಸಲಾದ ಡಿಕನ್ಸಿಯನ್ ಲಂಡನ್‌ನ ಸಂಪೂರ್ಣ-ಮಟ್ಟದ ಘಟಕಗಳಲ್ಲಿ ಅವರು ಈ ಪ್ರದರ್ಶನವನ್ನು ನೀಡುತ್ತಾರೆ. ಇದು ಇಂಗ್ಲಂಡ್ ಹೊರಗಡೆ ನಡೆಸಲಾಗುವ ಆಧುನಿಕ ಡಿಕನ್ಸ್ ಉತ್ಸವಗಳ ಪೈಕಿಯ ಹಳೆಯ, ಬೃಹತ್ತಾದ ಮತ್ತು ಅತ್ಯಂತ ಯಶಸ್ವೀ ಉತ್ಸವವಾಗಿದೆ. ಹಲವರು ಹೇಳುವ ಪ್ರಕಾರ (ರೋಚೆಸ್ಟರ್ ಉತ್ಸವದಲ್ಲಿ ನಟಿಸುವ ಮತ್ತು SFನಲ್ಲಿ ಪ್ರತಿವರ್ಷವೂ ಸ್ಕ್ರೂಜ್ ಪಾತ್ರದಲ್ಲಿ ನಟಿಸಲು ಲಂಡನ್‌ನಿಂದ ಹಾರಿ ಬರುವ ಮಾರ್ಟಿನ್ ಹ್ಯಾರಿಸ್‌ನನ್ನೂ ಒಳಗೊಂಡಂತೆ) ಇದು ವಿಶ್ವದಲ್ಲೇ ಅತ್ಯಂತ ಪ್ರಭಾವಪೂರ್ಣವಾದುದಾಗಿದೆ.
- ಡಿಕನ್ಸ್ ಆನ್ ದಿ ಸ್ಟಾಂಡ್ ಟೆಕ್ಸಾಸ್ನ ಗ್ಯಾಲ್ವೆಸ್ಟನ್ನಲ್ಲಿ ನಡೆಯುತ್ತದೆ. ಇದು 1974ರಿಂದಲೂ ಡಿಸೆಂಬರ್‌ನಲ್ಲಿನ ಮೊದಲ ವಾರಾಂತ್ಯದಲ್ಲಿ ಆಯೋಜಿಸಲಾಗುತ್ತಾ ಬಂದಿರುವ ಒಂದು ರಜೆಯ ಉತ್ಸವವಾಗಿದ್ದು, ಚಾರ್ಲ್ಸ್ ಡಿಕನ್ಸ್‌ನ ವಿಕ್ಟೋರಿಯಾ ಕಾಲದ ಲಂಡನ್‌ನ್ನು ಮರುಸೃಷ್ಟಿಸಲು ಬಾಬೀಗಳು, ಬೀಫೀಟರ್‌ಗಳು ಮತ್ತು ಸ್ವತಃ "ರಾಣಿಯೇ" ಅಲ್ಲಿ ಸೇರುತ್ತಾರೆ. ಉತ್ಸವದ ಅನೇಕ ಸ್ವಯಂಸೇವಕರು ಹಾಗೂ ಪಾಲ್ಗೊಳ್ಳುವವರು ವಿಕ್ಟೋರಿಯಾ ಕಾಲದ ವೇಷಭೂಷಣಗಳನ್ನು ಧರಿಸಿಕೊಂಡು ಡಿಕನ್ಸ್‌ನ ಪ್ರಪಂಚಕ್ಕೆ ಜೀವತುಂಬುತ್ತಾರೆ.
- ದಿ ಗ್ರೇಟರ‍್ ಪೋಟ್ ಜೆಫರ್‌ಸನ್-ನಾರ್ದರ್ನ್ ಬ್ರೂಕ್‌ಹ್ಯಾವನ್ ಆರ್ಟ್ಸ್ ಕೌನ್ಸಿಲ್ <http://www.gpjac.org> ಪ್ರತಿವರ್ಷವೂ ಪೋರ್ಟ್ ಜೆಫರ್‌ಸನ್, NYನ ಹಳ್ಳಿಯಲ್ಲಿ ಒಂದು ಡಿಕನ್ಸ್ ಉತ್ಸವವನ್ನು ಆಯೋಜಿಸುತ್ತದೆ. 2009ರಲ್ಲಿ, ಡಿಸೆಂಬರ‍್ 4, ಡಿಸೆಂಬರ‍್ 5 ಮತ್ತು ಡಿಸೆಂಬರ‍್ 6ರಂದು ಡಿಕನ್ಸ್ ಉತ್ಸವ ನಡೆಯಿತು. ಅನೇಕ ಕಾರ್ಯಕ್ರಮಗಳನ್ನು ಇದು ಒಳಗೊಳ್ಳುತ್ತದೆ. ಬೀದಿಯ ಪ್ರದರ್ಶಕರ ಒಂದು ತಂಡವು ಪಟ್ಟಣಕ್ಕೆ ಒಂದು ವಸ್ತುನಿಷ್ಠ ಡಿಕನ್ಸ್ ಶೈಲಿಯ ವಾತಾವರಣವನ್ನು ತಂದುಕೊಡುವುದು ಇದರಲ್ಲಿ ಸೇರಿರುತ್ತದೆ.
ಇತರ ಸ್ಮರಣಿಕೆಗಳು
[ಬದಲಾಯಿಸಿ]ಬ್ಯಾಂಕ್ ಆಫ್ ಇಂಗ್ಲಂಡ್‌ನಿಂದ ನೀಡಲ್ಪಟ್ಟ E £10 ಸರಣಿಯ ನೋಟಿನ ಮೇಲೆ ಚಾರ್ಲ್ಸ್ ಡಿಕನ್ಸ್‌ನನ್ನು ಚಿತ್ರಿಸಿ ಸ್ಮರಿಸಲಾಯಿತು. ಈ ನೋಟು UKಯಲ್ಲಿ 1992 ಮತ್ತು 2003ರ ನಡುವಣ ಅವಧಿಯಲ್ಲಿ ಚಾಲ್ತಿಯಲ್ಲಿತ್ತು. ನೋಟಿನ ಹಿಂಭಾಗದಲ್ಲಿ ಡಿಕನ್ಸ್ ಕಾಣಿಸಿಕೊಂಡಿದ್ದು, ಅವನೊಂದಿಗೆ ದಿ ಪಿಕ್‌ವಿಕ್ ಪೇಪರ್ಸ್ ನ ಒಂದು ದೃಶ್ಯವೂ ಇದೆ.[೭೭]
ಚಾರ್ಲ್ಸ್ ಡಿಕನ್ಸ್‌ನಿಂದ ಬಂದಿರುವ ಗಮನಾರ್ಹ ಕೃತಿಗಳು
[ಬದಲಾಯಿಸಿ]ಒಂದು ಡಜನ್‌ಗೂ ಹೆಚ್ಚಿನ ಕಾದಂಬರಿಗಳು, ಒಂದು ಬೃಹತ್ ಸಂಖ್ಯೆಯ ಸಣ್ಣಕಥೆಗಳು (ಕ್ರಿಸ್‌ಮಸ್-ವಿಷಯದ ಹಲವಾರು ಕಥೆಗಳೂ ಸೇರಿದಂತೆ), ಒಂದಷ್ಟು ನಾಟಕಗಳು, ಮತ್ತು ಹಲವಾರು ಹಲವಾರು ಅಕಲ್ಪಿತ ವಸ್ತುಕೃತಿ ಪುಸ್ತಕಗಳನ್ನು ಚಾರ್ಲ್ಸ್ ಡಿಕನ್ಸ್ ಪ್ರಕಟಿಸಿದ್ದಾನೆ. ಡಿಕನ್ಸ್‌ನ ಕಾದಂಬರಿಗಳು ಆರಂಭದಲ್ಲಿ ಸಾಪ್ತಾಹಿಕ ಮತ್ತು ಮಾಸಿಕ ಸಂಕೀರ್ಣ ಪತ್ರಿಕೆಗಳಲ್ಲಿ ಧಾರಾವಾಹಿಯಾದ ರೂಪದಲ್ಲಿ ಪ್ರಕಟಗೊಂಡು, ನಂತರ ಶಿಷ್ಟ ಪುಸ್ತಕದ ಸ್ವರೂಪದಲ್ಲಿ ಮುದ್ರಣಗೊಳ್ಳುತ್ತಿದ್ದವು.
ಕಾದಂಬರಿಗಳು
[ಬದಲಾಯಿಸಿ]valign="top" ಂ |
|
valign="top" ಂ |
|
ಸಣ್ಣಕಥೆ ಸಂಗ್ರಹಗಳು
[ಬದಲಾಯಿಸಿ]- ಸ್ಕೆಚಸ್ ಬೈ ಬೋಝ್ (1836)
- ಬೆಂಟ್ಲೆ’ಸ್ ಮಿಸಲ್ಲೆನಿ ನಿಯತಕಾಲಿಕದಲ್ಲಿನ ದಿ ಮಫ್ಡಾಗ್ ಪೇಪರ್ಸ್ (1837)
- ರಿಪ್ರಿಂಟೆಡ್ ಪೀಸಸ್ (1861)
- ದಿ ಅನ್ಕಮರ್ಷಿಯಲ್ ಟ್ರಾವೆಲರ್ (1860–1869)
valign="top" ಂ | ಹೌಸ್‌ಹೋಲ್ಡ್ ವರ್ಡ್ಸ್ ಸಂಕೀರ್ಣ ಪತ್ರಿಕೆಯ ಕ್ರಿಸ್‌ಮಸ್ ಕೃತಿಗಳು:
|
valign="top" ಂ | ಆಲ್ ದಿ ಇಯರ‍್ ರೌಂಡ್ ಸಂಕೀರ್ಣ ಪತ್ರಿಕೆಯ ಕ್ರಿಸ್‌ಮಸ್ ಕೃತಿಗಳು:
|
ಆಯ್ದ ಅಕಲ್ಪಿತ ವಸ್ತುಕೃತಿ, ಕವಿತೆ, ಹಾಗೂ ನಾಟಕಗಳು
[ಬದಲಾಯಿಸಿ]valign="top" ಂ |
|
valign="top" ಂ |
|
ಟಿಪ್ಪಣಿಗಳು
[ಬದಲಾಯಿಸಿ]- ↑ "ವಾಟ್ ದಿ ಡಿಕನ್ಸ್?", - ಸೈಮನ್ ಸ್ವಿಫ್ಟ್. ದಿ ಗಾರ್ಡಿಯನ್ , ಬುಧವಾರ 18 ಏಪ್ರಿಲ್ 2007. "ಡಿಕನ್ಸ್‌ನ ಪುಸ್ತಕಗಳ ಮುದ್ರಿತ ಪ್ರತಿಗಳು ಅಲಭ್ಯವಾಗಿವೆ ಎಂಬ ಸನ್ನಿವೇಶ ಎಂದಿಗೂ ಬಂದಿಲ್ಲ."
- ↑ "ವಿಕ್ಟೋರಿಯನ್ ಸ್ಕ್ವಾಲರ‍್ ಅಂಡ್ ಹೈ-ಟೆಕ್ ಗ್ಯಾಡ್ಗೆಟ್ರಿ: ಡಿಕನ್ಸ್ ವರ್ಲ್ಡ್ ಟು ಓಪನ್ ಇನ್ ಇಂಗ್ಲಂಡ್", ಬ್ಲೂಂಬರ್ಗ್ ನ್ಯೂಸ್, 23 ಮೇ 2007.
- ↑ ಸ್ಟೋನ್, ಹ್ಯಾರಿ. ಡಿಕನ್ಸ್' ವರ್ಕಿಂಗ್ ನೋಟ್ಸ್ ಫಾರ‍್ ಹಿಸ್ ನಾವೆಲ್ಸ್ , ಚಿಕಾಗೊ 1987
- ↑ ಹೆನ್ರಿ ಜೇಮ್ಸ್, "ಅವರ‍್ ಮ್ಯೂಚುಯಲ್ ಫಂಡ್", ದಿ ನೇಷನ್ , 21 ಡಿಸೆಂಬರ‍್ 1865.
- ↑ "John Forster, ''The Life of Charles Dickens'', Book 1, Chapter 1" (in (Japanese)). Lang.nagoya-u.ac.jp. Archived from the original on 2016-12-20. Retrieved 2009-07-24.
{{cite web}}
: CS1 maint: unrecognized language (link) - ↑ Jordan, John (2001). "Chronology". The Cambridge companion to Charles Dickens. Cambridge, England: Cambridge University Press. p. xvi. ISBN 0-521-66964-2.
- ↑ Pope-Hennessy, Una (1945). "The Family Background". Charles Dickens 1812–1870. London: Chatto and Windus. p. 11.
- ↑ ಆಂಗಸ್ ವಿಲ್ಸನ್, ದಿ ವರ್ಲ್ಡ್ ಆಫ್ ಚಾರ್ಲ್ಸ್ ಡಿಕನ್ಸ್ ಪುಟ 53
- ↑ ೯.೦ ೯.೧ ಪ್ರಾಜೆಕ್ಟ್ ಗುಟೆನ್‌ಬರ್ಗ್‌ನ ಲೈಫ್ ಆಫ್ ಚಾರ್ಲ್ಸ್ ಡಿಕನ್ಸ್ (ಜೇಮ್ಸ್ R. ಓಸ್ಗುಡ್ & ಕಂಪನಿ, 1875), - ಜಾನ್ ಫಾರ್ಸ್ಟರ್, ಸಂಪುಟ I, ಅಧ್ಯಾಯ II, 2 ಆಗಸ್ಟ್ 2008ರಂದು ಸಂಪರ್ಕಿಸಲಾಯಿತು
- ↑ ೧೦.೦ ೧೦.೧ ಆಂಗಸ್ ವಿಲ್ಸನ್ ದಿ ವರ್ಲ್ಡ್ ಆಫ್ ಚಾರ್ಲ್ಸ್ ಡಿಕನ್ಸ್ ISBN 0-14-003488-9
- ↑ ""Charles Dickens", accessed 15 November 2007". Enotes.com. Retrieved 2009-07-24.
- ↑ ಪೋಪ್-ಹೆನ್ನೆಸ್ಸಿ (1945: 18)
- ↑ RE: ಕ್ರೆಮೇನ್ಸ್ / ರಾವೆನ್ಸ್
- ↑ Myheritage.com ಡಿಕನ್ಸ್ ವಂಶವೃಕ್ಷದ ವೆಬ್‌ಸೈಟ್
- ↑ Victorianweb.org – ಮೇರಿ ಸ್ಕಾಟ್ ಹೊಗರ್ತ್, 1820–1837: ಡಿಕನ್ಸ್’ಸ್ ಬೆಲವೆಡ್ ಸಿಸ್ಟರ್-ಇನ್-ಲಾ ಅಂಡ್ ಇನ್ಸ್‌ಪಿರೇಷನ್
- ↑ Bowen, John (2004). Dickens's Black Atlantic. Farnham, England: Ashgate. p. 53. ISBN 978-0-7546-3412-6.
{{cite conference}}
: Cite has empty unknown parameter:|coauthors=
(help); Unknown parameter|booktitle=
ignored (help) - ↑ Dickens, Charles (1842). "Slavery". American Notes for General Circulation. London: Chapman and Hall. pp. 94–100. OCLC 41667089.
- ↑ ಡಿಕನ್ಸ್ (1842: 53–55)
- ↑ ೧೯.೦ ೧೯.೧ ಕೆನ್ನೆತ್ T. ಜಾಕ್ಸನ್: ದಿ ಎನ್‌ಸೈಕ್ಲೋಪೀಡಿಯಾ ಆಫ್ ನ್ಯೂಯಾರ್ಕ್ ಸಿಟಿ : ದಿ ನ್ಯೂಯಾರ್ಕ್ ಹಿಸ್ಟಾರಿಕಲ್ ಸೊಸೈಟಿ; ಯೇಲ್ ಯೂನಿವರ್ಸಿಟಿ ಪ್ರೆಸ್; 1995. ಪುಟ 333.
- ↑ Jones, Richard (2004). Walking Dickensian London. London: New Holland. p. 7. ISBN 9781843304838.
- ↑ "Charles Dickens". Uua.org. Archived from the original on 2007-01-24. Retrieved 2009-07-24.
- ↑ ಆಡಮ್ಸ್ ಹ್ಯಾಮಿಲ್ಟನ್ ಸಾಹಿತ್ಯಿಕ ಮತ್ತು ಐತಿಹಾಸಿಕ ಹಸ್ತಪ್ರತಿಗಳು, 2009
- ↑ 'ದಿ ಲೆಟರ್ಸ್ ಆಫ್ ಚಾರ್ಲ್ಸ್ ಡಿಕನ್ಸ್', ಪಿಲಿಗ್ರಿಮ್ ಎಡಿಷನ್, ಸಂಪುಟ VII, ಪುಟ 527.
- ↑ "Tavistock House | British History Online". British-history.ac.uk. 2003-06-22. Retrieved 2009-07-24.
- ↑ ಚಾರ್ಲ್ಸ್ ಡಿಕನ್ಸ್: ಫ್ಯಾಮಿಲಿ ಹಿಸ್ಟರಿ - ಸಂಪಾದಿಸಿದ್ದು ನಾರ್ಮನ್ ಪೇಜ್, ನಾಟಿಂಗ್‌ಹ್ಯಾಂ ವಿಶ್ವವಿದ್ಯಾಲಯ
- ↑ "ಚಾರ್ಲ್ಸ್ ಡಿಕನ್ಸ್' ವರ್ಕ್ ಟು ಹೆಲ್ಪ್ ಎಸ್ಟಾಬ್ಲಿಷ್ ಗ್ರೇಟ್ ಓರ್ಮಾಂಡ್ ಸ್ಟ್ರೀಟ್ ಹಾಸ್ಪಿಟಲ್, ಲಂಡನ್." -ಸರ್ ಹೋವರ್ಡ್ ಮಾರ್ಕೆಲ್, ದಿ ಲ್ಯಾನ್ಸೆಟ್, 21 ಆಗಸ್ಟ್, ಪುಟ 673.
- ↑ Sofii.org
- ↑ ಹೌಸ್‌ಹೋಲ್ಡ್ ವರ್ಡ್ಸ್ 12 ಜೂನ್ 1858
- ↑ ೨೯.೦ ೨೯.೧ ದಿ ನ್ಯೂಯಾರ್ಕ್ ಪಬ್ಲಿಕ್ ಲೈಬ್ರರಿ, ಬರ್ಗ್ ಕಲೆಕ್ಷನ್ ಆಫ್ ಇಂಗ್ಲಿಷ್ ಅಂಡ್ ಅಮೆರಿಕನ್ ಲಿಟರೇಚರ್
- ↑ Glancy, Ruth F (2006). "The Frozen Deep and other Biographical Influences". Charles Dickens's A Tale Of Two Cities: A Sourcebook. Abingdon, England: Routledge. p. 14. ISBN 0415287596.
- ↑ Tomalin (1995). "The Invisible Woman: The Story of Charles Dickens and Nelly Ternan" (PDF). Retrieved 2009-03-13.
- ↑ "History of the Ghost Club". Archived from the original on 2013-06-25. Retrieved 2009-07-30.
- ↑ ೩೩.೦ ೩೩.೧ Dickens, Charles (1854-12-02). "The Lost Arctic Voyagers". Household Words: A Weekly Journal. 10 (245). London: Charles Dickens: 361 et sec. Retrieved 2008-07-05.
{{cite journal}}
: Cite has empty unknown parameter:|coauthors=
(help) - ↑ Rae, John (1854-12-30). "Dr Rae's report". Household Words: A Weekly Journal. 10 (249). London: Charles Dickens: 457–458. Retrieved 2008-08-16.
- ↑ ಸ್ಲೇಟರ್ (2004)
- ↑ "New York Public Library / The Great Magician Vanishes". Nypl.org. Retrieved 2009-07-24.
- ↑ ದಿ ಬ್ರಿಟಿಷ್ ಅಕಾಡೆಮಿ/ದಿ ಪಿಲಿಗ್ರಿಮ್ ಎಡಿಷನ್ ಆಫ್ ದಿ ಲೆಟರ್ಸ್ ಆಫ್ ಚಾರ್ಲ್ಸ್ ಡಿಕನ್ಸ್: ಸಂಪುಟ 12: 1868–1870
- ↑ Staff writers (2007). "Charles Dickens". History. The Dean and Chapter of Westminster Abbey. Archived from the original on 12 ಆಗಸ್ಟ್ 2013. Retrieved 2009-07-12.
A small stone with a simple inscription marks the grave of this famous English novelist in Poets' Corner: 'Charles Dickens Born 7 February 1812 Died 9 June 1870'
- ↑ "J. H. ವುಡ್ಲೆಯ ಫ್ಯೂನರಲ್ ಟ್ಯಾಬ್ಲೆಟ್ ಆಫೀಸ್, 30 ಫೋರ್ ಸ್ಟ್ರೀಟ್, ಸಿಟಿ, ಲಂಡನ್" ಇಲ್ಲಿ ಮುದ್ರಿಸಲ್ಪಟ್ಟಿತು ಮತ್ತು ಪ್ಯಾಟಿ ಕಿರ್ಕ್‌ಪ್ಯಾಟ್ರಿಕ್, ಶಿಕ್ಷಣ ಇಲಾಖೆ, ಡಲ್ಲಾಸ್ ಥಿಯೇಟರ್ ಸೆಂಟರ್ ವತಿಯಿಂದ ಎ ಕ್ರಿಸ್‌ಮಸ್ ಕರೋಲ್ ಸ್ಟಡಿ ಗೈಡ್ Archived 2007-01-25 ವೇಬ್ಯಾಕ್ ಮೆಷಿನ್ ನಲ್ಲಿ. ನ ಪುಟ 4ರಲ್ಲಿ ಮತ್ತೆ ಸೃಷ್ಟಿಸಲಾಯಿತು.
- ↑ ನ್ಯೂಯಾರ್ಕ್ ಪಬ್ಲಿಕ್ ಲೈಬ್ರರಿ, ಬರ್ಗ್ ಕಲೆಕ್ಷನ್
- ↑ ಜಾನ್ ಫಾರ್ಸ್ಟರ್ ಬರೆದಿರುವ ದಿ ಲೈಫ್ ಆಫ್ ಚಾರ್ಲ್ಸ್ ಡಿಕನ್ಸ್ (ಮೊದಲ ಪ್ರಕಟಣೆ 1872–1874)
- ↑ ಜೇನ್ R. ಕೋಹೆನ್ ಬರೆದಿರುವ ಚಾರ್ಲ್ಸ್ ಡಿಕನ್ಸ್ ಅಂಡ್ ಹಿಸ್ ಒರಿಜಿನಲ್ ಇಲಸ್ಟ್ರೇಟರ್ಸ್. ಓಹಿಯೋ ಸ್ಟೇಟ್ ಯೂನಿವರ್ಸಿಟಿ ಪ್ರೆಸ್
- ↑ ದಿ ಎಸ್ಸೇಸ್ ಆಫ್ ವರ್ಜೀನಿಯಾ ವೂಲ್ಫ್ - ಆಂಡ್ರೂ ಮೆಕ್‌ನೆಲ್ಲೀಯಿಂದ ಸಂಪಾದಿತ. ಹೋಗರ್ತ್ ಪ್ರೆಸ್ 1986
- ↑ ಜಾರ್ಜ್ ನೆಲ್ವಿನ್ ಬರೆದಿರುವ ಎವೆರಿಬಡಿ ಇನ್ ಡಿಕನ್ಸ್
- ↑ HP-Time.com;Christopher Porterfield (1970-12-28). "Boz Will Be Boz – TIME". TIME<!. Archived from the original on 2009-10-04. Retrieved 2009-07-24.
{{cite web}}
: CS1 maint: multiple names: authors list (link) - ↑ "A Dickens of a fuss – theage.com.au". Theage.com.au. 2003-06-29. Retrieved 2009-07-24.
- ↑ ಅಂಡ್ ದೆ ಆಲ್ ಡೈಡ್ ಹ್ಯಾಪಿಲಿ ಎವರ್ ಆಫ್ಟರ್ – ನ್ಯೂಯಾರ್ಕ್ ಟೈಮ್ಸ್
- ↑ ಡಿಕನ್ಸ್, ಚಾರ್ಲ್ಸ್. ಹ್ಯಾರಿ ಸ್ಟೋನ್. ಡಿಕನ್ಸ್' ವರ್ಕಿಂಗ್ ನೋಟ್ಸ್ ಫಾರ‍್ ಹಿಸ್ ನಾವೆಲ್ಸ್ . ಯೂನಿವರ್ಸಿಟಿ ಆಫ್ ಚಿಕಾಗೊ ಪ್ರೆಸ್ ISBN 0-226-14590-5
- ↑ ಇನ್ ಕಾನ್ವರ್ಸೇಷನ್ ವಿತ್ ಅಡಾ ಲೆವೆರ್‌ಸನ್. ಕೋಟೆಡ್ ಇನ್ ರಿಚರ್ಡ್ ಎಲ್‌ಮನ್, ಆಸ್ಕರ‍್ ವೈಲ್ಡ್ (ನ್ಯೂಯಾರ್ಕ್: ಆಲ್‌ಫ್ರೆಡ್ A. ನಾಫ್, 1988), ಪುಟ 469.
- ↑ G. K. ಚೆಸ್ಟರ್‌ಟನ್, ಅಪ್ರಿಸಿಯೇಷನ್ಸ್ ಅಂಡ್ ಕ್ರಿಟಿಸಿಸಮ್ಸ್ ಆಫ್ ದಿ ವರ್ಕ್ಸ್ ಆಫ್ ಚಾರ್ಲ್ಸ್ ಡಿಕನ್ಸ್ , ಅಧ್ಯಾಯ 6: ಕ್ಯೂರಿಯಾಸಿಟಿ ಷಾಪ್ Archived 2008-11-20 ವೇಬ್ಯಾಕ್ ಮೆಷಿನ್ ನಲ್ಲಿ.
- ↑ IMDB ಎಂಟ್ರಿ ಫಾರ‍್ ಚಾರ್ಲ್ಸ್ ಡಿಕನ್ಸ್ ಆಸ್ ರೈಟರ್ ಸಂಪರ್ಕಿಸಲಾದ ದಿನಾಂಕ 2009-06-02
- ↑ ರಾಬರ್ಟ್‌ಸನ್ ಕೊಕ್ರೇನ್. ವರ್ಡ್‌ಪ್ಲೇ: ಆರಿಜಿನ್ಸ್, ಮೀನಿಂಗ್ಸ್, ಅಂಡ್ ಯೂಸೇಜ್ ಆಫ್ ದಿ ಇಂಗ್ಲಿಷ್ ಲಾಂಗ್ವೇಜ್. ಪುಟ 126 ಯೂನಿವರ್ಸಿಟಿ ಆಫ್ ಟೊರೊಂಟೋ ಪ್ರೆಸ್, 1996 ISBN 0-8020-7752-8
- ↑ ಜೋ L. ವೀಲರ್. ಕ್ರಿಸ್‌ಮಸ್ ಇನ್ ಮೈ ಹಾರ್ಟ್ , ಸಂಪುಟ 10. ಪುಟ 97. ರಿವ್ಯೂ ಅಂಡ್ ಹೆರಾಲ್ಡ್ ಪಬ್ಲಿಕ್ ಅಸೋಸಿಯೇಷನ್, 2001. ISBN 0-8280-1622-4
- ↑ ಉದ್ಧೃತ ಭಾಗವನ್ನು ಓದಿದವರು ವಿಲಿಯಂ ಮೇಕ್‌ಪೀಸ್ ಥ್ಯಾಕರೆ, ನ್ಯೂಯಾರ್ಕ್ ನಗರ (1852)
- ↑ ಮೈಕೇಲ್ ಪ್ಯಾಟ್ರಿಕ್ ಹೆರ್ನ್. ದಿ ಅನೋಟೇಟೆಡ್ ಕ್ರಿಸ್‌ಮಸ್ ಕರೋಲ್ . W.W. ನಾರ್ಟನ್ ಅಂಡ್ ಕಂ. ISBN 0-393-05158-7
- ↑ ಲೆಸ್ ಸ್ಟಾಂಡಿಫೋರ್ಡ್. ದಿ ಮ್ಯಾನ್ ಹೂ ಇನ್ವೆಂಟೆಡ್ ಕ್ರಿಸ್‌ಮಸ್: ಹೌ ಚಾರ್ಲ್ಸ್ ಡಿಕನ್ಸ್'ಸ್ ಎ ಕ್ರಿಸ್‌ಮಸ್ ಕರೋಲ್ ರೆಸ್ಕ್ಯೂಡ್ ಹಿಸ್ ಕೆರೀರ್ ಅಂಡ್ ರಿವೈವ್ಡ್ ಅವರ‍್ ಹಾಲಿಡೆ ಸ್ಪಿರಿಟ್ಸ್ , ಕ್ರೌನ್, 2008. ISBN 978-0-307-40578-4
- ↑ ರಿಚರ್ಡ್ ಮೈಕೇಲ್ ಕೆಲ್ಲಿ. ಎ ಕ್ರಿಸ್ಮಸ್ ಕ್ಯಾರಲ್ ಬ್ರಾಡ್‌ವ್ಯೂ ಪ್ರೆಸ್, 2003.
- ↑ ಸ್ಟೇಷನ್ಸ್ ಆಫ್ ದಿ ಸನ್: ದಿ ರಿಚುಯೆಲ್ ಇಯರ್ ಇನ್ ಇಂಗ್ಲಂಡ್ . ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಪ್ರೆಸ್. ISBN 0-19-285448-8.
- ↑ ರಿಚರ್ಡ್ ಮೈಕೇಲ್ ಕೆಲ್ಲಿ (ಸಂಪಾದಿತ) (2003), ಎ ಕ್ರಿಸ್‌ಮಸ್ ಕರೋಲ್.ಪುಟಗಳು 9,12 ಬ್ರಾಡ್‌ವೇ ಸಾಹಿತ್ಯಿಕ ಪುಟಗಳು, ನ್ಯೂಯಾರ್ಕ್: ಬ್ರಾಡ್‌ವ್ಯೂ ಪ್ರೆಸ್ ISBN 1-55111-476-3
- ↑ Marx, Karl (1 August 1954). "The English Middle Classes". New York Tribune. Marxists Internet Archive. Retrieved 2007-06-10.
- ↑ ೬೧.೦ ೬೧.೧ ೬೧.೨ ವ್ಯಾಲ್ಲೇಲಿ, ಪಾಲ್. ಡಿಕನ್ಸ್' ಗ್ರೇಟೆಸ್ಟ್ ವಿಲನ್: ದಿ ಫೇಸಸ್ ಆಫ್ ಫ್ಯಾಗಿನ್ Archived 2008-12-05 ವೇಬ್ಯಾಕ್ ಮೆಷಿನ್ ನಲ್ಲಿ., 7 ಅಕ್ಟೋಬರ್ 2005.
- ↑ ಆಲಿವರ‍್ ಟ್ವಿಸ್ಟ್ , ಹರ್ಡ್ ಮತ್ತು ಹೂಟನ್, 1867, ಅಧ್ಯಾಯ 19, ಪುಟಗಳು 221–222.
- ↑ ರಟ್ಲ್ಯಾಂಡ್, ಸುಝೇನ್ D. ದಿ ಜ್ಯೂಸ್ ಇನ್ ಆಸ್ಟ್ರೇಲಿಯಾ . ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್, 2005, ಪುಟ 19. ISBN 978-0-521-61285-2; ನ್ಯೂವೆ, ವಿನ್ಸೆಂಟ್. ದಿ ಸ್ಕ್ರಿಪ್ಚರ್ಸ್ ಆಫ್ ಚಾರ್ಲ್ಸ್ ಡಿಕನ್ಸ್ .
- ↑ ವಾಲ್ಡ್‌ಮನ್, ನಾಡಿಯಾ. ಆಂಟಿಸೆಮಿಟಿಸಂ, ಎ ಹಿಸ್ಟಾರಿಕಲ್ ಎನ್‌ಸೈಕ್ಲೋಪೀಡಿಯಾ ಆಫ್ ಪ್ರಿಜುಡೀಸ್ ಅಂಡ್ ಪರ್ಸೆಕ್ಯೂಷನ್ . ISBN 1-85109-439-3
- ↑ ೬೫.೦ ೬೫.೧ Stewart, Nicholas. ""The Perils of Certain English Prisoners": Dickens' Defensive Fantasy of Imperial Stability". School of English, Queens University of Belfast. Archived from the original on 2009-05-25. Retrieved 2009, 22 September.
{{cite web}}
: Check date values in:|accessdate=
(help); Unknown parameter|coauthors=
ignored (|author=
suggested) (help) - ↑ Pionke, Albert D. (2004). Plots of opportunity: Representing conspiracy in Victorian England. Columbus: The Ohio State University Press. p. 91.
{{cite book}}
: Cite has empty unknown parameter:|coauthors=
(help) - ↑ Harrison, Kimberly (2006). Victorian sensations: essays on a scandalous genre By Kimberly Harrison, Richard Fantina. p. 227.
{{cite book}}
: Unknown parameter|coauthors=
ignored (|author=
suggested) (help) - ↑ Quiller-Couch, Arthur (1925). Charles Dickens and Other Victorians. Cambridge, England: Cambridge University Press. pp. 10–11. OCLC 215059500.
- ↑ Allingham, Philip V. (2005-12-12). "The Imperial Context of "The Perils of Certain English Prisoners" (1857) by Charles Dickens and Wilkie Collins". The Victoria Web. Retrieved 2009-10-01.
{{cite web}}
: Unknown parameter|coauthors=
ignored (|author=
suggested) (help) - ↑ ಲೆಟರ್ಸ್ ಆಫ್ ಚಾರ್ಲ್ಸ್ ಡಿಕನ್ಸ್ ಸಂಪುಟ 8 1856–58 ಕ್ಲಾರೆಂಡನ್ ಪ್ರೆಸ್
- ↑ Schenker, Peter (1989). An Anthology of Chartist poetry: poetry of the British working class, 1830s – 1850s. p. 353.
{{cite book}}
: Cite has empty unknown parameter:|coauthors=
(help) - ↑ Unnamed writer (January 1849). "The Haunted Man review". Macphail's Edinburgh Ecclesiastical Journal. vi. Edinburgh: 423.
Mr Dickens, as if in revenge for his own queer name, does bestow still queerer ones upon his fictitious creations.
- ↑ ಜಾನ್ ಬೋವೆನ್ (2000) ಅದರ್ ಡಿಕನ್ಸ್: ಪಿಕ್‌ವಿಕ್ ಟು ಚಝಲ್‌ವಿಟ್ , ISBN 0-19-926140-7, ಪುಟ 36
- ↑ ದಿ ಚಿಕಾಗೊ ಹೆರಾಲ್ಡ್ ನಲ್ಲಿನ "ಅಗಸ್ಟಸ್ ಡಿಕನ್ಸ್", 19 ಫೆಬ್ರವರಿ 1895
- ↑ "Medway Council – Eastgate House". Medway.gov.uk. Archived from the original on 2009-01-14. Retrieved 2009-07-24.
- ↑ Hart, Christopher (20 May 2007). "What, the Dickens World?". The Sunday Times. London: Times Online. Archived from the original on 2008-07-05. Retrieved 2007-06-02.
- ↑ "Withdrawn banknotes reference guide". Bank of England. Archived from the original on 2011-06-10. Retrieved 2008-10-17.
- ↑ ಸೀರಿಯಲ್ ಪಬ್ಲಿಕೇಷನ್ ಡೇಟ್ಸ್ ಫ್ರಂ ಕ್ರೋನಾಲಜಿ ಆಫ್ ನಾವೆಲ್ಸ್ -E. D. H. ಜಾನ್ಸನ್, ಹೋಮ್ಸ್ ಪ್ರೋಫೆಸರ್ ಆಫ್ ಬೆಲ್ಲೆಸ್ ಲೆಟ್ರೆಸ್, ಪ್ರಿನ್ಸ್‌ಟನ್ ಯೂನಿವರ್ಸಿಟಿ. 11 ಜೂನ್ 2007ರಂದು ಮರು ಸಂಪಾದಿಸಲಾಯಿತು.
ಆಕರಗಳು
[ಬದಲಾಯಿಸಿ]- ಅಕ್ರೋಯ್ಡ್, ಪೀಟರ್, ಡಿಕನ್ಸ್ , (2002), ವಿಂಟೇಜ್, ISBN 0-09-943709-0
- ಡ್ರಾಬಲ್, ಮಾರ್ಗರೇಟ್ (ಸಂಪಾದಿತ), ದಿ ಆಕ್ಸ್‌ಫರ್ಡ್ ಕಂಪ್ಯಾನಿಯನ್ ಟು ಇಂಗ್ಲಿಷ್ ಲಿಟರೇಚರ್ , (1997), ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್
- ಗ್ಲಾವಿನ್, ಜಾನ್. (ಸಂಪಾದಿತ) ಡಿಕನ್ಸ್ ಆನ್ ಸ್ಕ್ರೀನ್ ,(2003), ನ್ಯೂಯಾರ್ಕ್: ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್.
- ಕಪ್ಲಾನ್, ಫ್ರೆಡ್. ಡಿಕನ್ಸ್: ಎ ಬಯಾಗ್ರಫಿ ವಿಲಿಯಂ ಮೊರೋಸ್, 1988
- ಲೂಯಿಸ್, ಪೀಟರ್ R. ಡಿಸಾಸ್ಟರ‍್ ಆನ್ ದಿ ಡೀ: ರಾಬರ್ಟ್ ಸ್ಟೀಫನ್‌ಸನ್ಸ್ ನೆಮೆಸಿಸ್ ಆಫ್ 1847 , ಟೆಂಪಸ್ (2007) - ಸ್ಟಾಪಲ್‌ಹರ್ಸ್ಟ್ ಅಪಘಾತ, ಹಾಗೂ ಡಿಕನ್ಸ್ ಮೇಲಿನ ಅದರ ಪ್ರಭಾವದ ಕುರಿತಾದ ಒಂದು ಚರ್ಚೆಗಾಗಿ.
- ಮೆಕಿಯರ್, ಜೆರೋಮ್. ಇನ್ನೊಸೆಂಟ್ ಅಬ್ರಾಡ್: ಚಾರ್ಲ್ಸ್ ಡಿಕನ್ಸ್’ ಅಮೆರಿಕನ್ ಎಂಗೇಜ್‌ಮೆಂಟ್ಸ್ ಯೂನಿವರ್ಸಿಟಿ ಪ್ರೆಸ್ ಆಫ್ ಕೆಂಟುಕಿ, 1990
- ಮೋಸ್, ಸಿಡ್ನಿ P. ಚಾರ್ಲ್ಸ್ ಡಿಕನ್ಸ್' ಕ್ವಾರೆಲ್ ವಿತ್ ಅಮೆರಿಕಾ (ನ್ಯೂಯಾರ್ಕ್: ವಿಟ್ಸನ್, 1984).
- ಪ್ಯಾಟನ್, ರಾಬರ್ಟ್ L. (ಸಂಪಾದಿತ) ದಿ ಪಿಕ್‌ವಿಕ್ ಪೇಪರ್ಸ್ (ಪೀಠಿಕೆ), (1978), ಪೆಂಗ್ವಿನ್ ಬುಕ್ಸ್.
- ಸ್ಲೇಟರ್, ಮೈಕೇಲ್. "ಡಿಕನ್ಸ್, ಚಾರ್ಲ್ಸ್ ಜಾನ್ ಹಫಾಮ್ (1812 – 1870)", ಆಕ್ಸ್‌ಫರ್ಡ್ ಡಿಕ್ಷ್‌ನರಿ ಆಫ್ ನ್ಯಾಷನಲ್ ಬಯಾಗ್ರಫಿ , ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ಸೆಪ್ಟೆಂಬರ‍್ 2004
- ಸ್ಲೇಟರ್, ಮೈಕೇಲ್. ಚಾರ್ಲ್ಸ್ ಡಿಕನ್ಸ್: ಎ ಲೈಫ್ ಡಿಫೈನ್ಡ್ ಬೈ ರೈಟಿಂಗ್ , 2009 ನ್ಯೂ ಹ್ಯಾವನ್/ಲಂಡನ್: ಯೇಲ್ ಯೂನಿವರ್ಸಿಟಿ ಪ್ರೆಸ್ ISBN 978-0-300-11207-8 [೧],
ಹೊರಗಿನ ಕೊಂಡಿಗಳು
[ಬದಲಾಯಿಸಿ]ಆನ್‌ಲೈನ್ ಕಾರ್ಯಗಳು
[ಬದಲಾಯಿಸಿ]- Works by Charles Dickens at Project Gutenberg, HTML ಮತ್ತು ಸರಳ ಪಠ್ಯದ ಆವೃತ್ತಿಗಳು.
- ಅಂತರ್ಜಾಲದ ಅಭಿಲೇಖಾಗಾರ ಮತ್ತು ಗೂಗಲ್ ಪುಸ್ತಕಗಳಲ್ಲಿ ಲಭ್ಯವಿರುವ ವರ್ಕ್ಸ್ ಬೈ ಆರ್ ಎಬೌಟ್ ಚಾರ್ಲ್ಸ್ ಡಿಕನ್ಸ್. ಸ್ಕ್ಯಾನ್ ಮಾಡಲಾದ ಪುಸ್ತಕಗಳು
- EveryAuthor, HTML ಆವೃತ್ತಿಗಳಲ್ಲಿ ಲಭ್ಯವಿರುವ ವರ್ಕ್ಸ್ ಬೈ ಚಾರ್ಲ್ಸ್ ಡಿಕನ್ಸ್ Archived 2014-03-28 ವೇಬ್ಯಾಕ್ ಮೆಷಿನ್ ನಲ್ಲಿ..
- ಡಿಕನ್ಸ್ ಲಿಟರೇಚರ್, HTML ಆವೃತ್ತಿಗಳಲ್ಲಿ ಲಭ್ಯವಿರುವ ವರ್ಕ್ಸ್ ಬೈ ಚಾರ್ಲ್ಸ್ ಡಿಕನ್ಸ್.
- ಪೆನ್ ಸ್ಟೇಟ್ ಯೂನಿವರ್ಸಿಟಿ ಇಲೆಕ್ಟ್ರಾನಿಕ್ ಕ್ಲಾಸಿಕ್ಸ್ ಸೀರೀಸ್, PDF ಆವೃತ್ತಿಗಳಲ್ಲಿ ಲಭ್ಯವಿರುವ ವರ್ಕ್ಸ್ ಬೈ ಚಾರ್ಲ್ಸ್ ಡಿಕನ್ಸ್ Archived 2014-09-25 ವೇಬ್ಯಾಕ್ ಮೆಷಿನ್ ನಲ್ಲಿ..
- ಬುಕ್ಸ್ ಇನ್ ಮೈ ಫೋನ್, ಸೆಲ್ ಫೋನ್ ಆವೃತ್ತಿಗಳಲ್ಲಿ ಲಭ್ಯವಿರುವ ವರ್ಕ್ಸ್ ಬೈ ಚಾರ್ಲ್ಸ್ ಡಿಕನ್ಸ್.
- ಅಮೆರಿಕನ್ ನೋಟ್ಸ್ Archived 2010-06-07 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಯೂನಿವರ್ಸಿಟ್ ಆಫ್ ವರ್ಜೀನಿಯಾದಲ್ಲಿನ ಅಮೆರಿಕನ್ ಸ್ಟಡೀಸ್ನಿಂದ ಪಡೆಯಲಾದ ಅವಲೋಕನಗಳು, ವಿವರಣಾತ್ಮಕ ಚಿತ್ರಗಳು, ಗ್ರಂಥಸೂಚಿ ಮತ್ತು ನಕಾಶೆಗಳೊಂದಿಗಿನ ಹೈಪರ್ಟೆಕ್ಸ್ಟ್.
ವೆಬ್‌ಸೈಟ್‌ಗಳು
[ಬದಲಾಯಿಸಿ]- ಚಾರ್ಲ್ಸ್ ಡಿಕನ್ಸ್ ಬಯಾಗ್ರಫಿ, ಕಂಟೆಕ್ಸ್ಟ್, ಇಂಟರಾಕ್ಟಿವ್ ಟೈಮ್ಲೈನ್ Archived 2010-01-13 ವೇಬ್ಯಾಕ್ ಮೆಷಿನ್ ನಲ್ಲಿ. – Crossref-it.info
- ಎ ಚಾರ್ಲ್ಸ್ ಡಿಕನ್ಸ್ ಜರ್ನಲ್ Archived 2019-04-02 ವೇಬ್ಯಾಕ್ ಮೆಷಿನ್ ನಲ್ಲಿ. ಟೈಮ್ಲೈನ್ ಆಫ್ ಡಿಕನ್ಸ್’ಸ್ ಲೈಫ್
- ಡೇವಿಡ್ ಪರ್ಡ್ಯೂನ ಚಾರ್ಲ್ಸ್ ಡಿಕನ್ಸ್ ಪುಟ
- ಡೇವಿಡ್ ಪರ್ಡ್ಯೂನ ಚಾರ್ಲ್ಸ್ ಡಿಕನ್ಸ್ ಪುಟ Archived 2013-01-23 ವೇಬ್ಯಾಕ್ ಮೆಷಿನ್ ನಲ್ಲಿ. – ಡಿಕನ್ಸ್‌ನ ಲಂಡನ್ (ಇಂಟರಾಕ್ಟಿವ್ ಭೂಪಟ)
- ಮೂಲ ಆವೃತ್ತಿಗಳ ಸಂಗ್ರಾಹಕರಿಗೆ ಸುಳಿವುಗಳು
- ದಿ ಡಿಕನ್ಸ್ ಫೆಲೋಷಿಪ್, ಡಿಕನ್ಸ್ ಮತ್ತು ಆತನ ಬರಹಗಳ ಅಧ್ಯಯನಕ್ಕಾಗಿ ಅರ್ಪಿಸಿಕೊಂಡಿರುವ ಒಂದು ಅಂತರರಾಷ್ಟ್ರೀಯ ಸಮಾಜ
- ಎ ಡಿಕನ್ಸ್ ವೆಬ್ ಪೇಜ್ ಮೂಲ ಹುರುಳು ಹಾಗೂ ಡಿಕನ್ಸ್‌ಗೆ ಸಂಬಂಧಿಸಿದ ಇತರ ಅನೇಕ ಪುಟಗಳಿಗಿರುವ ಕೊಂಡಿಗಳೊಂದಿಗೆ
- ದಿ ಡಿಕನ್ಸ್ ಪೇಜ್ Archived 2011-08-27 ವೇಬ್ಯಾಕ್ ಮೆಷಿನ್ ನಲ್ಲಿ., ಡಿಕನ್ಸ್ ಕುರಿತಾದ ಒಂದು ಸಮಗ್ರ ತಾಣ.
- ಚಾರ್ಲ್ಸ್ ಡಿಕನ್ಸ್ — ಗ್ಯಾಡ್ಸ್ ಹಿಲ್ ಪ್ಲೇಸ್ ಡಿಕನ್ಸ್ ಕುರಿತಾದ ದಿನವಹಿ ಮಾಹಿತಿ.
- ಚಾರ್ಲ್ಸ್ ಡಿಕನ್ಸ್: ಎ ಕಾಂಪ್ರಹೆನ್ಸಿವ್ ರಿಸೋರ್ಸ್, ಜೀವನ ಚರಿತ್ರೆ, ಜೀವನ ಮತ್ತು ಸಾಹಿತ್ಯ.
- ಚಾರ್ಲ್ಸ್ ಡಿಕನ್ಸ್ in libraries (WorldCat catalog)
ವಸ್ತು ಸಂಗ್ರಹಾಲಯಗಳು
[ಬದಲಾಯಿಸಿ]- ಡಿಕನ್ಸ್ ವಸ್ತುಸಂಗ್ರಹಾಲಯ ಹಿಂದಿನ ಡಿಕನ್ಸ್ ಹೌಸ್, 48 ಡೌಟಿ ಸ್ಟ್ರೀಟ್, ಲಂಡನ್, WC1 ಇಲ್ಲಿ ಸ್ಥಾಪಿಸಲ್ಪಟ್ಟಿದೆ
- ಡಿಕನ್ಸ್ ವಸ್ತುಸಂಗ್ರಹಾಲಯ Archived 2010-02-03 ವೇಬ್ಯಾಕ್ ಮೆಷಿನ್ ನಲ್ಲಿ. ವಸ್ತುತಃ ಪ್ರವಾಸ
- ಡಿಕನ್ಸ್ ಜನ್ಮಸ್ಥಳದ ವಸ್ತುಸಂಗ್ರಹಾಲಯ Archived 2011-07-09 ವೇಬ್ಯಾಕ್ ಮೆಷಿನ್ ನಲ್ಲಿ. ಓಲ್ಡ್ ಕಮರ್ಷಿಯಲ್ ರೋಡ್, ಪೋರ್ಟ್ಸ್ಮೌತ್
- Pages using the JsonConfig extension
- CS1 maint: unrecognized language
- CS1 errors: unsupported parameter
- CS1 errors: empty unknown parameters
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 maint: multiple names: authors list
- CS1 errors: dates
- Pages using ISBN magic links
- Pages using duplicate arguments in template calls
- Articles with unsourced statements from August 2008
- Pages containing citation needed template with deprecated parameters
- Articles with unsourced statements from June 2007
- Articles with unsourced statements from March 2009
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hatnote templates targeting a nonexistent page
- Commons link is locally defined
- ಚಾರ್ಲ್ಸ್ ಡಿಕನ್ಸ್
- 1812ರಲ್ಲಿ ಜನಿಸಿದವರು
- 1870ರಲ್ಲಿ ಮರಣ ಹೊಂದಿದವರು
- 19ನೇ-ಶತಮಾನದ ಇಂಗ್ಲಿಷ್ ಜನರು
- ಬ್ರಿಟಿಷ್ ವೃತ್ತಪತ್ರಿಕೆಗಳ ಸ್ಥಾಪಕರು
- ವೆಸ್ಟ್ಮಿನ್ಸ್ಟರ್ ಆಬೆಯಲ್ಲಿನ ಶವಸಂಸ್ಕಾರಗಳು
- ಇಂಗ್ಲಿಷ್ ಆಂಗ್ಲಿಕನ್ನರು
- ಇಂಗ್ಲಿಷ್ ಕಾದಂಬರಿಕಾರರು
- ಇಂಗ್ಲಿಷ್ ಸಣ್ಣಕಥಾ ಲೇಖಕರು
- ಇಂಗ್ಲಿಷ್ ಪತ್ರಕರ್ತರು
- ಇಂಗ್ಲಿಷ್ ಐತಿಹಾಸಿಕ ಕಾದಂಬರಿಕಾರರು
- ರಾಯಲ್ ಸೊಸೈಟಿ ಆಫ್ ಆರ್ಟ್ಸ್ನ ಶಿಕ್ಷಣಾರ್ಥಿಗಳು
- ಸಾಹಿತ್ಯಿಕ ಸಹವರ್ತಿಗಳು
- ಕಾಮ್ಡೆನ್ನಿಂದ ಬಂದ ಜನ
- ಪೋರ್ಟ್ಸ್ಮೌತ್ನಿಂದ ಬಂದ ಜನ
- ಚಾಥಮ್ನಿಂದ ಬಂದ ಜನ
- ಸ್ಟರ್ಲಿಂಗ್ ಬ್ಯಾಂಕ್ನೋಟುಗಳಲ್ಲಿ ಚಿತ್ರಿಸಲ್ಪಟ್ಟ ವ್ಯಕ್ತಿಗಳು
- ವಿಕ್ಟೋರಿಯಾ ಕಾಲದ ಕಾದಂಬರಿಕಾರರು
- ಇಂಗ್ಲಿಷ್ ಸೆರೆಯಾಳುಗಳು ಮತ್ತು ಬಂಧನದಲ್ಲಿರುವವರು
- ಸಾಹಿತಿಗಳು
- ಕಾದಂಬರಿಕಾರರು