ವಿಷಯಕ್ಕೆ ಹೋಗು

ಗಿಡುಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಿಡುಗ
European Black Kite,
Milvus migrans migrans
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
M. migrans
Binomial name
Milvus migrans
(Boddaert, 1783)
Black and Yellow-billed Kite ranges.
Orange: summer only
Green: all year
Blue: winter only
ಫಾಲ್ಕನ್
Milvus migrans

ಫಾಲ್ಕನಿಫಾರ್ಮೀಸ್ ಗಣದ ಫಾಲ್ಕನಿಡೀ ಕುಟುಂಬಕ್ಕೆ ಸೇರಿದ ಒಂದು ಹಿಂಸ್ರಪಕ್ಷಿ (ಫಾಲ್ಕನ್, ಹಾಕ್). ಡೇಗೆ ಇದರ ಪರ್ಯಾಯ ನಾಮ. ಹದ್ದು, ರಣಹದ್ದು, ಗರುಡ, ಆಸ್ಪ್ರೆ ಮುಂತಾದ ಹಕ್ಕಿಗಳಿಗೆ ಬಲು ಹತ್ತಿರದ ಸಂಬಂಧಿ. ಕ್ಯಾರಕ್ಯಾರ, ಫಾಲ್ಕೊ, ಮೈಕ್ರೊಹೀರ್ಯಾಕ್ಸ್ ಮುಂತಾದ ಜಾತಿಗಳಿಗೆ ಸೇರಿದ ಪ್ರಭೇದಗಳಿಗೆಲ್ಲ ಗಿಡುಗ ಎಂಬ ಹೆಸರೇ ಅನ್ವಯವಾಗುತ್ತದೆ. ಗಿಡುಗಗಳ ಗಾತ್ರಗಳಲ್ಲಿ ಭಿನ್ನತೆ ಉಂಟು. ಕೆಲವು ಕೇವಲ 16 ಸೆಂಮೀ ಉದ್ದವಿದ್ದರೆ (ಫಾಲ್ಕೊನೆಟ್ಸ್) ಇನ್ನು ಕೆಲವು 60 ಸೆಂಮೀ ಉದ್ದವಿರುವುದುಂಟು (ಉದಾಹರಣೆಗೆ ಉತ್ತರ ಮೇರುವಿನ ತಂಡ್ರಾ ಪ್ರದೇಶದಲ್ಲಿರುವ ಜರ್ಫಾಲ್ಕನ್). ಎಲ್ಲ ಗಿಡುಗಗಳೂ ಹಗಲಿನಲ್ಲಿ ಮಾತ್ರ ಬೇಟೆಯಾಡುತ್ತವೆ.

ಬಾಹ್ಯ ಲಕ್ಷಣ

[ಬದಲಾಯಿಸಿ]
Milvus migrans' head
  • ಇವುಗಳ ಕೊಕ್ಕು ಚೂಪಾಗಿ, ಬಲವಾಗಿ ಕೊಕ್ಕೆಯಂತೆ ಬಾಗಿದೆ. ಕೊಕ್ಕಿನ ಬುಡದಲ್ಲಿ ಮೇಲೆ ಮಾಂಸಲವಾದ ಸೆರೆ ಎಂಬ ಸಂವೇದನೀಯ ಚರ್ಮವಿದೆ. ನಾಸಿಕ ರಂಧ್ರಗಳು ಹೊರಕ್ಕೆ ತೆರೆಯುವುದು ಇದರ ಮೇಲೆಯೇ. ರೆಕ್ಕೆಗಳು ಬಲಯುತವಾಗಿಯೂ ದೇಹದ ಗಾತ್ರಕ್ಕೆ ಹೋಲಿಸಿದರೆ ಉದ್ದವಾಗಿಯೂ ಇವೆ. ಇವುಗಳ ತುದಿ ಬಲು ಚೂಪು. ಕಾಲಿನ ಹರಡು ಭಾಗದಲ್ಲಿ ಗರಿಗಳಿಲ್ಲ.
  • ತೊಡೆಯ ಭಾಗ ಮಾತ್ರ ಸಡಿಲವಾದ ಗರಿಗಳಿಂದ ಆವೃತವಾಗಿದ್ದು ಒಂದು ರೀತಿಯ ಬಿಗಿಚಡ್ಡಿ ಧರಿಸಿದಂತೆ ಕಾಣುತ್ತದೆ. ರೆಂಬೆಗಳನ್ನು ಹಿಡಿಯಲು ಅನುಕೂಲವಾಗುವಂತೆ ಕಾಲಿನ ಬೆರಳು ಹಿಂದಕ್ಕೆ ತಿರುಗಿದೆ. ಬೆರಳುಗಳಲ್ಲಿ ಉದ್ದವಾದ ನಖಗಳಿವೆ. ಅತ್ಯಂತ ಬಲಯುತವಾದ ಹಾಗೂ ವೇಗವಾದ ಹಾರಾಟಕ್ಕೆ ಗಿಡುಗ ಪ್ರಸಿದ್ಧವಾಗಿದೆ.

ಬೇಟೆಯ ಹಾರಾಟ

[ಬದಲಾಯಿಸಿ]
In flight, Victoria Australia

ಹೀಗೆ ಹಾರಾಡುತ್ತಿರುವಾಗ ಅದರ ಚುರುಕು ದೃಷ್ಟಿಗೆ ಆಹಾರ ಪ್ರಾಣಿಯೇನಾದರೂ ಕಂಡರೆ ರಿವ್ವನೆ ಶರವೇಗದಿಂದ ಅದರ ಮೇಲೆರಗಿ ತನ್ನ ಅತ್ಯಂತ ಹರಿತವಾದ ನಖಗಳಿಂದ ಒಂದೇ ಏಟಿಗೆ ಅದನ್ನು ಹೊಡೆದು ಸಾಯಿಸುತ್ತದೆ. ಸತ್ತ ಪ್ರಾಣಿ ನೆಲಕ್ಕೆ ಬಿದ್ದಮೇಲೆ ಮತ್ತೊಮ್ಮೆ ಸುತ್ತುಹಾಕಿ ಕೆಳಕ್ಕಿಳಿದು ಅದನ್ನು ವಿರಾಮವಾಗಿ ತಿನ್ನುತ್ತದೆ. ಪ್ರಾಣಿಗಳ ಮೇಲೆ ಎರಗುವಾಗ ಇದರ ಹಾರಾಟದ ವೇಗ ಗಂಟೆಗೆ ಸು. 280 ಕಿಮೀ ಇರುತ್ತದೆ ಎಂದು ಅಂದಾಜು ಮಾಡಲಾಗಿದೆ.

ಜೀವನ ಕ್ರಮ

[ಬದಲಾಯಿಸಿ]
Details
  • ಗಿಡುಗವೊಂದು ತನ್ನ ಎರೆಯ ಮೇಲೆ ಎರಗುವ ದೃಶ್ಯ ಪ್ರಕೃತಿಯಲ್ಲಿನ ಅತ್ಯಂತ ರೋಮಾಂಚಕ ನೋಟಗಳಲ್ಲೊಂದು. ಗಿಡುಗಗಳು ಗೂಡುಗಳನ್ನು ಕಟ್ಟುವುದಿಲ್ಲ. ಕೆಲವು ನೆಲದ ಮೇಲೆಯೆ ಮೊಟ್ಟೆಗಳನ್ನಿಡುವುದಾದರೆ ಇನ್ನು ಕೆಲವು ಬೆಟ್ಟಗಳ ಪ್ರಪಾತಗಳ ಚಾಚುಗಳಲ್ಲಿ ಮೊಟ್ಟೆಯಿಡುತ್ತವೆ. ಅನೇಕ ಸಲ ಕಾಗೆ, ಹದ್ದು ಮುಂತಾದವು ತ್ಯಜಿಸಿದ ಹಳೆಯ ಗೂಡುಗಳನ್ನು ಇವು ಬಳಸುತ್ತವೆ.
  • ಮೊಟ್ಟೆಗಳ ಸಂಖ್ಯೆ 2-5 ರ ವರೆಗೆ ವ್ಯತ್ಯಾಸವಾಗುತ್ತದೆ. ಕಾವು ಕೂಡುವ ಅವಧಿ ಸುಮಾರು 4 ವಾರಗಳು. ಕಾವು ಕೂಡುವ ಕೆಲಸ ಹೆಣ್ಣಿನದು. ಅಪರೂಪ ವಾಗಿ ಗಂಡು ಗಿಡುಗವೂ ಕಾವು ಕೂಡಬಹುದು. ಮರಿ ಗಿಡುಗಗಳು 4-6 ವಾರಗಳ ಅನಂತರ ಸ್ವತಂತ್ರ ಜೀವನ ನಡೆಸಲು ಸಮರ್ಥವಾಗುತ್ತವೆ.
  • ಗಿಡುಗಗಳನ್ನು ಸಾಕಿ, ಶಿಕ್ಷಣ ಕೊಟ್ಟು ಜಿಂಕೆ, ಗೆಜೆ಼ಲ್ ಮುಂತಾದ ಪ್ರಾಣಿಗಳ ಮತ್ತು ಕೆಲವು ಬಗೆಯ ಹಕ್ಕಿಗಳ ಬೇಟೆಗೆ ಬಳಸುವುದು ಹಿಂದಿನ ಕಾಲದಲ್ಲಿ ಜನಪ್ರಿಯ ವಿಹಾರವಾಗಿತ್ತು. ಇದರ ವಿವರಗಳಿಗೆ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿಡುಗ ಸಾಕಣೆ ಗಿಡುಗ ಸಾಕಣೆ
  • ಗಿಡುಗದ ಬೇಟೆ-ವಿಡಿಯೊ:[[೧]]

ಗಿಡುಗಗಳಲ್ಲಿ ಮುಖ್ಯವಾದ ಬಗೆಗಳು

[ಬದಲಾಯಿಸಿ]
Milvus migrans migrans

ಫಾಲ್ಕೊ ಬಯರ್ಮಿಕಸ್ ಜಗರ್ (ಲಗರ್ ಫಾಲ್ಕನ್)

[ಬದಲಾಯಿಸಿ]

ಭಾರತದಲ್ಲಿ ಕಾಣಬರುವ ಗಿಡುಗ ಇದು. ಕಾಡುಕಾಗೆಯ ಗಾತ್ರಕ್ಕಿದೆ. ಇದರ ದೇಹದ ಬಣ್ಣ ಬೂದಿಮಿಶ್ರಿತ ಕಂದು. ಹೊಟ್ಟೆಯ ಭಾಗದಲ್ಲಿ ಕಂದುಮಚ್ಚೆಗಳುಳ್ಳ ಬಿಳಿಯ ಬಣ್ಣ ಉಂಟು. ಬಯಲು ಭೂಮಿಯಲ್ಲಿ ಕೃಷಿ ಭೂಮಿಯ ಬಳಿ ಇದರ ವಾಸ. ಪಾರಿವಾಳಗಳೇ ಇದರ ಪ್ರಮುಖ ಆಹಾರ. ಇಲಿ, ಓತಿಕೇತ, ಮಿಡತೆ, ಕೊಡತಿ ಕೀಟ ಮುಂತಾದವನ್ನೂ ತಿನ್ನುತ್ತದೆ. ಮರಗಳ ಮೇಲೆ ಇಲ್ಲವೆ ಪ್ರಪಾತಗಳ ಸಂದುಗಳಲ್ಲಿ ಗೂಡುಕಟ್ಟಿ ಮೊಟ್ಟೆಯಿಡುತ್ತದೆ. ಗೂಡು ಕಟ್ಟುವ ಕಾಲ ಜನವರಿಯಿಂದ ಏಪ್ರಿಲ್ವರೆಗೆ.

ಫಾಲ್ಕೊ ಚಿಕ್ವೇರ (ರೆಡ್ ಹೆಡೆಡ್ಮರ್ಲಿನ್)

[ಬದಲಾಯಿಸಿ]

ಭಾರತದಲ್ಲಿನ ಇನ್ನೊಂದು ಬಗೆಯ ಗಿಡುಗ. ಗಾತ್ರ ಪಾರಿವಾಳದಷ್ಟು. ಇದರ ದೇಹದ ಬೆನ್ನು ಭಾಗ ನೀಲಿಮಿಶ್ರಿತ ಬೂದು ಬಣ್ಣಕ್ಕೂ ಉದರಭಾಗ ಬೆಳ್ಳಗೂ ಇವೆ. ಪಕ್ಕಗಳಲ್ಲಿ ಕರಿಯಬಣ್ಣದ ಪಟ್ಟಿಗಳಿವೆ. ತಲೆ ಮಾತ್ರ ಕಗ್ಗಂದು ಬಣ್ಣದ್ದು. ಇದು ಕೂಡ ಬಯಲು ಪ್ರದೇಶಗಳ ನಿವಾಸಿ. ಗಂಡು ಹೆಣ್ಣುಗಳೆರಡೂ ಜೊತೆಯಾಗಿ ಆಹಾರವನ್ನು ಬೇಟೆಯಾಡುತ್ತವೆ. ಸಣ್ಣ ಪುಟ್ಟ ಹಕ್ಕಿಗಳು, ಇಲಿ, ಓತಿಕೇತ ಮುಂತಾದವು ಇದರ ಆಹಾರ. ದೊಡ್ಡ ಮರಗಳಲ್ಲಿ ಒರಟು ರೀತಿಯ ಗೂಡುಕಟ್ಟುತ್ತದೆ. ಇದು ಬರ್ಮ, ಶ್ರೀಲಂಕಾ ಮತ್ತು ಪಾಕಿಸ್ತಾನಗಳಲ್ಲೂ ಕಂಡುಬರುತ್ತದೆ.

ಫಾಲ್ಕೊ ಟಿನನ್ಕ್ಯುಲಸ್ (ಕೆಸ್ಟ್ರೆಲ್)

[ಬದಲಾಯಿಸಿ]
  • ಭಾರತದಲ್ಲಿ ಕಾಣಬರುವ ಮತ್ತೊಂದು ಗಿಡುಗ. ದೇಹದ ಬಣ್ಣ ಇಟ್ಟಿಗೆಗೆಂಪು , ತಲೆ ಮಾತ್ರ ಬೂದಿ ಬಣ್ಣಕ್ಕಿದೆ. ಹೊಟ್ಟೆಯಮೇಲೆ ಕಂದುಬಣ್ಣದ ಮಚ್ಚೆಗಳಿವೆ. ಹಿಮಾಲಯ ಪರ್ವತಗಳಲ್ಲಿ ವಾಸಿಸುವ ಇದು ಚಳಿಗಾಲದಲ್ಲಿ ಬಯಲು ಪ್ರದೇಶಗಳಿಗೆ ಬರುತ್ತದೆ. ಇದರ ಬೇಟೆಯ ರೀತಿ ವಿಶಿಷ್ಟವಾಗಿದೆ.
  • ಹಾರಾಡುತ್ತಿರುವಾಗ ಆಗಿಂದಾಗ್ಗೆ ಅಂತರಿಕ್ಷದಲ್ಲಿ ಹಲವಾರು ಸೆಕೆಂಡುಗಳ ಕಾಲ ನಿಶ್ಚಲವಾಗಿ ನಿಂತಿದ್ದು ನೆಲದ ಮೇಲೆ ತನ್ನ ತೀಕ್ಷ್ಣ ದೃಷ್ಟಿಯನ್ನು ಹರಿಸುತ್ತದೆ. ಇಲಿ, ಹಲ್ಲಿ ಮುಂತಾದ ಆಹಾರ ಪ್ರಾಣಿಗಳೇನಾದರೂ ಕಣ್ಣಿಗೆ ಬಿದ್ದರೆ ಕ್ಷಣಾರ್ಧದಲ್ಲಿ ಅವುಗಳ ಮೇಲೆ ಸದ್ದುಮಾಡದೆ ಎರಗಿ ತನ್ನ ಚೂಪುನಖಗಳಿಂದ ಹಿಡಿದು ಹಾರಿಹೋಗುತ್ತದೆ. ಇದು ಪ್ರಪಾತಗಳ ಸಂದುಗಳಲ್ಲಿ ಕಡ್ಡಿ, ಹಳೆಬಟ್ಟೆ ಮುಂತಾದವನ್ನು ಬಳಸಿ ಒರಟುಗೂಡು ಕಟ್ಟುತ್ತದೆ.

ಆಕ್ಸಿಪಿಟರ್ ಬೇಡಿಯಸ್ (ಶಿಕ್ರ)

[ಬದಲಾಯಿಸಿ]

ಇದು ಕೂಡ ಭಾರತದಲ್ಲಿ ವಾಸಿಸುವಂಥದು. ಗಾತ್ರದಲ್ಲಿ ಪಾರಿವಾಳದಷ್ಟಿದೆ. ದೇಹದ ಬೆನ್ನುಭಾಗ ಬೂದುಮಿಶ್ರಿತ ನೀಲಿ. ಹೊಟ್ಟೆಭಾಗ ಬಿಳಿ. ಕಂದು ಬಣ್ಣದ ಪಟ್ಟೆಗಳಿವೆ. ಬಯಲು ಪ್ರದೇಶಗಳ ನಿವಾಸಿ ಇದು. ಸಾಮಾನ್ಯವಾಗಿ ಅಲ್ಲಿನ ದೊಡ್ಡ ಮರಗಳ ರೆಂಬೆಗಳಲ್ಲಿ ಅಡಗಿದ್ದು ಎರೆಪ್ರಾಣಿಗಳು ಕಂಡರೆ ಅವುಗಳ ಮೇಲೆರಗಿ ಕೊಲ್ಲುತ್ತದೆ. ಮಾವಿನ ಮರ ಮುಂತಾದ ದೊಡ್ಡ ಗಾತ್ರದ ಮರಗಳಲ್ಲಿ ಒರಟು ರೀತಿಯ ಗೂಡು ಕಟ್ಟಿ ಮೊಟ್ಟೆಯಿಡುತ್ತದೆ.

ಫಾಲ್ಕೊ ಪೆರಿಗ್ರಿನಸ್ (ಪೆರಿಗ್ರಿನ್ ಫಾಲ್ಕನ್)

[ಬದಲಾಯಿಸಿ]

ನ್ಯೂಜ಼ಿಲೆಂಡ್ ಬಿಟ್ಟು ಪ್ರಪಂಚದ ಉಳಿದ ದೇಶಗಳಲ್ಲೆಲ್ಲ ಇರುವ ಗಿಡುಗ ಇದು. ತನ್ನ ಗಾಂಭೀರ್ಯಕ್ಕೂ ಬೇಟೆಯಾಡುವ ಕುಶಲತೆಗೂ ಹೆಸರಾಗಿದೆ. ಗಿಡುಗ ಸಾಕಣೆಯಲ್ಲಿ ಬಳಸಲಾಗುವ ಗಿಡುಗಗಳಲ್ಲಿ ಇದು ಅತ್ಯಂತ ಮುಖ್ಯವಾದುದು.

ಫಾಲ್ಕೊ ರಸ್ಟಿಕಾಲಸ್ (ಜರ್ಫಾಲ್ಕನ್)

[ಬದಲಾಯಿಸಿ]

ಉತ್ತರ ಮೇರು ಪ್ರದೇಶಗಳ ನಿವಾಸಿ. ಗಿಡುಗಗಳಲ್ಲೆಲ್ಲ ಅತ್ಯಂತ ದೊಡ್ಡಗಾತ್ರದ್ದು, ರಾಜಮಹಾರಾಜರುಗಳು ಸಾಕುತ್ತಿದ್ದ ಗಿಡುಗಗಳಲ್ಲೊಂದು.