ವಿಷಯಕ್ಕೆ ಹೋಗು

ಕೆಂಪುದಾಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಂಪುದಾಳೆ
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
S. urens
Binomial name
Sterculia urens
Roxb.[]
Synonyms[]
  • Cavallium urens Schott & Endl.
  • Clompanus urens Kuntze
  • Kavalama urens Rafin.

ಕೆಂಪುದಾಳೆ ಸ್ಟಕ್ರ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ಮಧ್ಯಮ ಗಾತ್ರದ ಪರ್ಣಪಾತಿ ಮರ.

ವೈಜ್ಞಾನಿಕ ಹೆಸರು

[ಬದಲಾಯಿಸಿ]

ಸ್ಟಕ್ರ್ಯೂಲಿಯ ಯುರೆನ್ಸ್ ಎಂಬುದು ಇದರ ಶಾಸ್ತ್ರೀಯನಾಮ.

ಭೌಗೋಳಿಕ ಹರಡುವಿಕೆ

[ಬದಲಾಯಿಸಿ]

ಭಾರತದಲ್ಲಿ ಇದು ಕರ್ಣಾಟಕ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಉತ್ತರಪ್ರದೇಶಗಳ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಕಲ್ಲುಬಂಡೆ ಹೆಚ್ಚಾಗಿರುವ ಬೆಟ್ಟಗಳೂ ಬಯಲು ಕಾಡುಗಳೂ ಇದರ ಸಮೃದ್ಧ ಬೆಳೆವಣಿಗೆಗೆ ಉತ್ತಮ ಸ್ಥಳಗಳು.ಸುಮಾರು 400 and 800 metres (1,300 and 2,600 ft) ಎತ್ತರದಲ್ಲಿ ಬೆಳೆಯುತ್ತದೆ.[]

ಲಕ್ಷಣಗಳು

[ಬದಲಾಯಿಸಿ]

ಈ ಮರದ ವೈಶಿಷ್ಟ್ಯವೆಂದರೆ ಇದರ ಹಳದಿ ಮಿಶ್ರಿತ ಬೂದು ಬಣ್ಣದ ತೊಗಟೆ ತೆಳ್ಳನೆಯ ಕಾಗದದಂತೆ ಸುಲಿದು ಬರುವುದು. ನವೆಂಬರ್-ಮೇ ತಿಂಗಳವರೆಗೆ ಎಲೆ ಇಲ್ಲದೆ ಬಿಳಿಯ ಬಣ್ಣದ ಕಾಂಡ, ರೆಂಬೆಗಳು ಮಾತ್ರ ಪ್ರಮುಖವಾಗಿ ಕಾಣುತ್ತವೆ.

ಉಪಯೋಗಗಳು

[ಬದಲಾಯಿಸಿ]

ಈ ಮರದಿಂದ ಔಷಧಿಗೆ ಉಪಯುಕ್ತವಾದ ಕಟೀರಾ ಎಂಬ ಅಂಟು ಸಿಗುತ್ತದೆ. ಇದನ್ನು ಸಿಹಿತಿಂಡಿಗಳ ತಯಾರಿಕೆಯಲ್ಲಿ ಬಳಸುವುದುಂಟು. ಒಳ ತೊಗಟೆಯಿಂದ ಹಗ್ಗ ಮಾಡಲು ಬಳಸುವ ಒಳ್ಳೆಯ ನಾರು ಸಿಗುತ್ತದೆ. ಕೆಂಪುದಾಳೆಯ ಚೌಬೀನೆಯನ್ನು ಆಟದ ಸಾಮಾನುಗಳ ತಯಾರಿಕೆಗೆ ಬಳಸುತ್ತಾರೆ. ಅಭಾವ ಕಾಲದಲ್ಲಿ ಇದರ ಎಲೆಯನ್ನು ದನಗಳ ಮೇವಾಗಿ ಉಪಯೋಗಿಸುವುದಿದೆ. ಈ ಹೂವು ಸುಂದರವಾಗಿದೆ . ಇದು ಬಿಳಿ ಬಣ್ಣದ ದಳಗಳನ್ನು ಹೊಂದಿದೆ .

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Sterculia urens Roxb". Catalogue of Life: 2014 Annual Checklist. ITIS. Retrieved 2015-01-24.
  2. "''Sterculia urens: Gum karaya". India biodiversity portal. Biodiversity India. Retrieved 2015-01-24.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: