ಕಾಂಬೋಡಿಯ
ಕಾಂಬೋಡಿಯ ರಾಜ್ಯ (ಮುಂಚೆ ಕಾಂಪೂಚಿಯ ಎಂದು ಕರೆಯಲ್ಪಡುತ್ತಿತ್ತು, ಖಮೇರ್ ಭಾಷೆಯಲ್ಲಿ: ಪ್ರಿಆಹ್ ರೀಅಚೇಅನಚಾಕ್ರ್ ಕಾಂಪೂಚಿಯ) ಆಗ್ನೇಯ ಏಷ್ಯಾದ ಒಂದು ದೇಶ.. ೧೧ರಿಂದ ೧೪ನೇ ಶತಮಾನದ ಮಧ್ಯದಲ್ಲಿ ಇಂಡೋಚೀನ ಪ್ರದೇಶವನ್ನು ಆಳುತ್ತಿದ್ದ ಪ್ರಬಲ ಹಿಂದೂ ಮತ್ತು ಭೌದ್ಧ ಧಾರ್ಮಿಕ ಖಮೇರ್ ಸಾಮ್ರಾಜ್ಯದ ಉತ್ತರಾಧಿಕಾರಿ ರಾಷ್ಟ್ರ ಇದು.
ಕಾಂಬೋಡಿಯವು ಇಂಡೋ-ಚೀನ ಪರ್ಯಾಯ ದ್ವೀಪದಲ್ಲಿದೆ. ಉತ್ತರದಲ್ಲಿ ಲಾವೋಸ್, ಪೂರ್ವ ಆಗ್ನೇಯಗಳಲ್ಲಿ ದಕ್ಷಿಣ ವಿಯೆಟ್ನಾಂ, ಆಗ್ನೇಯದಲ್ಲಿ ಸೈಯಾಂ ಖಾರಿ ಮತ್ತು ಪಶ್ಷಿಮೋತ್ತರಗಳಲ್ಲಿ ಥೈಲೆಂಡ್ ಇವೆ. ವಿಸ್ತೀರ್ಣ 69,866 ಚ.ಮೈ. ರಾಜಧಾನಿ ನೋಮ್ ಫೆನ್ .
ಕಾಂಬೋಡಿಯ ರಾಜ್ಯ | |
---|---|
Motto: "ದೇಶ, ಧರ್ಮ, ರಾಜ" | |
Anthem: Nokoreach | |
Capital | ಫ್ನೊಮ್ ಪೆನ್ |
Largest city | ರಾಜಧಾನಿ |
Official languages | ಖಮೇರ್ |
Demonym(s) | Cambodian |
Government | ಪ್ರಜಾತಾಂತ್ರಿಕ ಸಾಂವಿಧಾನಿಕ ದೊರೆತನ |
• ರಾಜ | ನರೊಡೊಮ್ ಸಿಹಮೊನಿ |
• ಪ್ರಧಾನ ಮಂತ್ರಿ | ಹುನ್ ಸೇನ್ |
ಸ್ವಾತಂತ್ರ್ಯ | |
• ಫ್ರಾನ್ಸ್ನಿಂದ | ೧೯೫೩ |
• Water (%) | ೨.೫ |
Population | |
• ಜುಲೈ ೨೦೦೬ estimate | 13,971,000 (63rd) |
• ೧೯೯೮ census | 11,437,656 |
GDP (PPP) | ೨೦೦೬ estimate |
• Total | $36.82 billion (೮೯ನೇ) |
• Per capita | $2,600 (೧೩೩ನೇ) |
HDI (೨೦೦೪) | 0.583 Error: Invalid HDI value · ೧೨೯ನೇ |
Currency | ರಿಎಲ್ (៛)1 (KHR) |
Time zone | UTC+7 |
• Summer (DST) | UTC+7 |
Calling code | 855 |
Internet TLD | .kh |
|
ಮೇಲ್ಮೈ ಲಕ್ಷಣ, ವಾಯುಗುಣ
[ಬದಲಾಯಿಸಿ]ಕಾಂಬೋಡಿಯ ಮುಖ್ಯವಾಗಿ ಮೈದಾನ, ಒಮ್ಮೆ ಸಮುದ್ರದ ಖಾರಿಯಾಗಿದ್ದ ಈ ದೇಶದ ಬಹುಭಾಗ ಅವನತ ಪ್ರದೇಶ. ಮೇಕಾಂಗ್ ನದಿ ತಂದು ಹಾಕಿದ ಮಣ್ಣಿನಿಂದಾಗಿ ಇದು ಸಮುದ್ರದಿಂದ ಪ್ರತ್ಯೇಕಗೊಂಡು ಭೂಪ್ರದೇಶವಾಗಿ ಮಾರ್ಪಟ್ಟಿದೆ. ಉತ್ತರದಲ್ಲಿ ಥೈಲೆಂಡ್ ಗಡಿಯ ಅಂಚಿನಲ್ಲಿರುವ ಮರಳುಗಲ್ಲಿನ ಡಾಂಗ್ರೆಕ್ ಪರ್ವತಗಳು ಮಧಕಾಂಬೋಡಿಯದ ತಗ್ಗು ಪ್ರದೇಶಗಳಲ್ಲಿ ತೊಡಗತ್ತವೆ. ಈ ಪ್ರದೇಶಗಳ ವಾಯವ್ಯ ಭಾಗದಲ್ಲಿ ಕಟ್ಟಡಗಲ್ಲಿನ ಕಾರ್ಡಮಂ ಪರ್ವತಗಳು 4,900' ಎತ್ತರಕ್ಕೆ ಹೋಗಿವೆ. ಸುಣ್ಣಕಲ್ಲಿನ ಎಲಿಫೆಂಟ ಶ್ರೇಣಿ ಕಾರ್ಡಮಂ ಪರ್ವತದಿಂದ ದಕ್ಷಿಣ ಹಾಗೂ ಆಗ್ನೇಯಕ್ಕೆ ಸಾಗಿ ತಗ್ಗುಪ್ರದೇಶದ ಬಹುಭಾಗವನ್ನು ತೀರದಿಂದ ಪ್ರತ್ಯೇಕಿಸುತ್ತದೆ. ಕಡಲ ತೀರದಲ್ಲಿ ಅನೇಕ ಕಿರುದ್ವೀಪಗಳು ಅಂಚುಗಟ್ಟಿ ನಿಂತಿವೆ. ಟಾನ್ಲೇಸ್ಯಾಪ್ ಅಥವಾ ಮಹಾಸರೋವರದ ಸುತ್ತಣ ಇಳುಕಲು ನಾಡಿನ ಎರಡು ಪಾಶ್ರ್ವಗಳಲ್ಲು ಪರ್ವತಗಳಿವೆ. ಮೇಕಾಂಗ್ ನದಿಯಾಚೆ, ದಕ್ಷಿಣ ವಿಯೆಟ್ನಾಂ ಕಡೆ ಎತ್ತರವಾದ ಭೂಪ್ರದೇಶಗಳುಂಟು. ಈಶಾನ್ಯದ ಕಟ್ಟಕಡೆಯಲ್ಲಿ, ಸ್ಟಂಗ್-ಟ್ರೆಂಗ್ ಬಳಿ, ಸೆ ಕಾಂಗ್ ಮತ್ತು ಸ್ರೆಪೊಕ್ ನದಿಗಳ ಜಲನಯನ ಭೂಮಿಗಳೂ ಮೇಕಾಂಗ್ ಜಲಾನಯನ ಭೂಮಿಯೂ ಒಮ್ಮುಖವಾಗುತ್ತವೆ. ಟಾನ್ಲೇ ಸ್ಯಾಪ್ ಪ್ರಾಚೀನ ಖಾರಿಯ ಅವಶೇಷ. ಸುತ್ತಣ ಮೇಲ್ಯಾಡುಗಳಲ್ಲಿ ಹರಿಯುವ ನದಿಗಳು ಈ ಸರೋವರಕ್ಕೆ ಬಂದು ಬೀಳುತ್ತವೆ. ಒಣ ಋತುವಿನಲ್ಲಿ ಇದರ ಆಳ ಎಲ್ಲೂ 6'ಗಿಂತ ಹೆಚ್ಚಾಗಿರುವುದಿಲ್ಲ. ಆಗ ಮಹಾನಾಲೆಯ ಮೂಲಕ ಅದರ ನೀರು ಮೇಕಾಂಗ್ ನದಿಗೆ ಹರಿಯುತ್ತದೆ; ಆದರೆ ಜೂನ್ ತಿಂಗಳಲ್ಲಿ ಮೇಕಾಂಗ್ ನದಿಯ ನೀರು 40-45 ಅಡಿಗಳಿಗೆ ಏರಿ ಅದೇ ನಾಲೆಯ ಮೂಲಕ ತನ್ನ ಪ್ರವಾಹವನ್ನು ಸರೋವರಕ್ಕೆ ಹರಿಸುತ್ತದೆ. ಆಗ ಟಾನ್ಲೇ ಸ್ಯಾಪಿನ ನೀರಿನ ಮಟ್ಟ 45-48 ಅಡಿಗಳಿಗೆ ಏರಿ ಅದು ಸುತ್ತಮುತ್ತಣ ಜೌಗು ಪ್ರದೇಶಗಳು, ಅರಣ್ಯಗಳು ಹಾಗೂ ವ್ಯವಾಸಾಯದ ಭೂಮಿಗಳನ್ನೆಲ್ಲ ಆವರಿಸುತ್ತದೆ. ಕಾಂಬೋಡಿಯದ್ದು ಉಷ್ಣವಲಯದ ವಾಯುಗುಣ, ಮಾನ್ಸೂನ್ ಪ್ರಭಾವದಿಂದ ಮಳೆಯಾಗುತ್ತದೆ (ಸರಾಸರಿ 57.5"). ಪರಮಾವಧಿ ಮಳೆ ಸೆಪ್ಟೆಂಬರಿನಲ್ಲಿ. ಉಷ್ಣತೆಯ ಅಂತರ 68 ಫ್ಯಾ-97 ಫ್ಯಾ. (20 ಸೆಂ.-36ಸೆಂ.) ಪನಾಂ-ಪೆನ್ನಲ್ಲಿ ಸರಾಸರಿ ಉಷ್ಣತೆ 81 ಫ್ಯಾ. (27 ಸೆಂ).
ಜನಜೀವನ
[ಬದಲಾಯಿಸಿ]ಕಾಂಬೋಡಿಯದ ಜನಸಂಖ್ಯೆ 57,37,853 (1962) ಜನಸಂಖ್ಯೆಯಲ್ಲಿ ಶೇಕಡಾ 87 ಮಂದಿ ಖ್ಮರ್ ಅಥವಾ ಕಾಂಬೋಡಿಯನರು. ಉಳಿದವರು ವಿಯಟ್ನಾಂ, ಥೈ ಮತ್ತು ಲಾವೋಸ್ ಜನ. ಈ ರಾಜ್ಯದಲ್ಲಿ ಚೀನಿಯರು ಅಲ್ಪಸಂಖ್ಯಾತರಾಗಿದ್ದಾರೆ. ಕಾಂಬೋಡಿಯನರು ಕಂದು ಬಣ್ಣದ ಜನ. ಅವರ ಭಾಷೆ ದಕ್ಷಿಣ ಬರ್ಮದ ಮಾನ್ ಭಾಷೆಗೆ ಸಂಬಂಧಪಟ್ಟದ್ಧಾಗಿದೆ. ಜನರಲ್ಲಿ ಸೇಕಡ 33ರಷ್ಟು ಮಂದಿ ಅಕ್ಷರಸ್ಥರು. ಅಲ್ಲಿ 3,600 ಪ್ರಾಥಮಿಕ ಶಾಲೆಗಳಿವೆ. ಕಾಂಬೋಡಿಯದ ವೃತ್ತಪತ್ರಿಕೆಗಳು ಚೀನೀ, ಖ್ಮರ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಹೊರಡುತ್ತವೆ. ಪ್ರಾರಂಭದಲ್ಲಿ ಅಲ್ಲಿ ಹಿಂದೂಧರ್ಮದ ಪ್ರಭಾವವಿದ್ದರೂ ಈಗ ಥೇರವಾದ ಬೌದ್ಧಮತ ಪ್ರಚಾರದಲ್ಲಿದೆ. ಜನ ಹೆಚ್ಚಾಗಿ ವ್ಯವಸಾಯದಲ್ಲಿ ನಿರತರಾಗಿದ್ದಾರೆ. ಬತ್ತ, ಮುಸುಕಿನ ಜೋಳ, ನೆಲಗಡಲೆ, ರಬ್ಬರ್ ಇವು ಮುಖ್ಯ ಬೆಳೆಗಳು. ಮೀನುಗಾರಿಕೆ ಒಂದು ಮುಖ್ಯ ಕಸಬು. ಕಾಂಬೋಡಿಯದಿಂದ ರಫ್ತಾಗುವ ಸರಕುಗಳು ರಬ್ಬರ್, ಅಕ್ಕಿ, ಮೆಕ್ಕೆಜೋಳ, ಅರಣ್ಯ ಮೃಗಗಳು, ಮೆಣಸು, ಚೌಬೀನೆ ಮತ್ತು ಮೀನು. ಇವು ಮುಖ್ಯವಾಗಿ ಫ್ರಾನ್ಸ್, ಅಮೆರಿಕ, ಹಾಂಗ್ ಕಾಂಗ್, ಮಲಯ, ಜಪಾನ್, ಚೀನ ಮತ್ತು ಜರ್ಮನಿಗಳಿಗೆ ರಫ್ತಾಗುತ್ತವೆ. ಹತ್ತಿಬಟ್ಟೆ, ಕಬ್ಬಿಣ-ಉಕ್ಕು ಯಂತ್ರೋಪಕರಣ, ವಿದ್ಯುತ್ಯಂತ್ರಗಳು ಹಾಗೂ ಸಲಕರಣೆಗಳು, ಔಷಧ, ರಾಸಯನಿಕ, ಕಾಗದ, ಪೆಟ್ರೋಲಿಯಂ, ಸಿಮೆಂಟ್ ಹಾಗೂ ಹೈನ ಉತ್ಪಾದನೆಗಳುಇವು ಆಮದುಗಳು. ಇಲ್ಲಿಯ ಅರಣ್ಯಗಳಲ್ಲಿ ಸಾಮಾನ್ಯವಾಗಿ ದಕ್ಷಿಣ ಏಷ್ಯದ ಮೃಗಗಳೇ ಇವೆ. ಆನೆಗಳು ಹಿಂಡು ಹಿಂಡಾಗಿವೆ.
ರಾಜಧಾನಿ ಪನಾಂ-ಪೆನ್. ಅದರ ಜನಸಂಖ್ಯೆ 3,94,000 (1962), ಅಲ್ಲಿಂದ ಸೈಗಾನಿಗೂ ಬಾಟ್ಟಂಬಾಂಗ್ ಮತ್ತು ಸಿಸೊಫಾನ್ ಮೂಲಕ ಬಾಂಕಾಕಿಗೂ ರೈಲು ಮಾರ್ಗಗಳುಂಟು, ಮುಖ್ಯವಾದ ಹೆದ್ದಾರಿಗಳಲ್ಲಿ ಮೂರು ಸೈಗಾನಿನಿಂದ ಕಾಂಬೋಡಿಯದ ಮೂಲಕ ಹಾದುಹೋಗುತ್ತವೆ. ಕಾಂಬೋಡಿಯಕ್ಕೆ ಬಾಂಕಾಕ್, ಸೈಗಾನ್ ಮತ್ತು ಹಾಂಗ್ ಕಾಂಗ್ಗಳಿಂದ ವಿಮಾನ ಸಂಪರ್ಕವುಂಟು.
ಪ್ರಾಚೀನ ಖ್ಮರ್ ಚಕ್ರಾಧಿಪತ್ಯದ ಸ್ಮಾರಕಗಳು ಕಾಂಬೋಡಿಯಕ್ಕೆ ಪ್ರವಾಸಿಗಳನ್ನು ಅಧಿಕ ಸಂಖ್ಯೆಯಲ್ಲಿ ಆಕರ್ಷಿಸುತ್ತವೆ. ಹಿಂದೂ ಪುರಾಣಗಳ ಮತ್ತು ರಾಜಾಸ್ಥಾನಗಳ ಚಿತ್ರಗಳನ್ನೂಳಗೊಂಡ ಭವ್ಯ ಆಂಗ್ಕೋರ್ವಾಟ್ ದೇವಾಲಯವ್ಯೂಹ ವಿಶ್ವದ ಶಿಲ್ಪಕೌತುಕಗಳಲ್ಲೊಂದು. (ನೋಡಿ- ಅಂಗ್ಕೋರ್ವಾಟ್) ಕಾಂಬೋಡಿಯದ ಆದ್ಯಂತ ಹಳ್ಳಿಗಳಲ್ಲಿ ಸಂಗೀತ ನೃತ್ಯಗಳನ್ನೊಳಗೊಂಡ ಹಲವಾರು ಹಬ್ಬಗಳು ಆಚರಣೆಯಲ್ಲಿವೆ. ಪ್ರಾಚೀನ ಪುರಾಣಗಳ ಸನ್ನಿವೇಶಗಳನ್ನು ಚಿತ್ರಿಸುವ ಸಂಗೀತ ನೃತ್ಯನಾಟಕಗಳನ್ನು ಪಟ್ಟಣಗಳಲ್ಲಿ ಅಭಿನಯಿಸುತ್ತಾರೆ.
ಕಾಂಬೋಡಿಯದ ನಾಣ್ಯ ರಿಯೆಲ್. 100ಸೆನ್=1 ರಿಯೆಲ್, ವಿನಿಮಯದರ: 1ಪೌಂ, ಸ್ಟರ್ಲಿಂಗಿಗೆ 84.0 ರಿಯೆಲ್ ಸಮ. 1 ಅಮೆರಿಕನ್ ಡಾಲರಿಗೆ 35 ರಿಯೆಲ್ ಸಮ.
ಕಾಂಬೋಡಿಯದ ಇತಿಹಾಸ
[ಬದಲಾಯಿಸಿ]ಕಾಂಬೋಡಿಯದ ಪ್ರಾಚೀನ ಇತಿಹಾಸ ಭವ್ಯವಾದದ್ದು. ಖ್ಮರ್ ಸಾಮ್ರಜ್ಯದ ವೈಭವದ ಕಾಲದಲ್ಲಿಯಂತೂ (9ನೆಯ ಶತಮಾನದಿಂದ 15ನೆಯ ಶಾತಮಾನದ ವರೆಗೆ) ಇದು ಕಲೆ ಸಂಸ್ಕøತಿಗಳಿಗೆ ಸಲ್ಲಿಸಿದ ಕಾಣಿಕೆ ಹಿರಿದು. ಆ ಕಾಲದ ಇತಿಹಾಸ ಕಲೆ ಸಂಸ್ಕøತಿಗಳ ಪರಿಚಯುಕ್ಕೆ ಕಂಬುಜವನ್ನು ಕುರಿತ ಲೇಖನಗಳನ್ನು ನೋಡಿ. ಅಲ್ಲಿಂದ ಮುಂದಣ ಇತಿಹಾಸವನ್ನು ಇಲ್ಲಿ ಕೊಟ್ಟಿದೆ.
1340ರ ವರೆಗೆ ಖ್ಮರ್ ದೊರೆಗಳ ಹೆಸರುಗಳು ವರ್ಮ ಎಂದು ಕೊನೆಗೊಳ್ಳುತ್ತಿದ್ದುವು. ಅಲ್ಲಿಂದೀಚೆಗೆ ಬದಲಾವಣೆ ಕಂಡುಬರುತ್ತದೆ. 8ನೆಯ ಜಯವರ್ಮನ ಕಾಲದ (1243-95) ವೇಳೆಗಾಗಲೇ ಖ್ಮರ್ ಸಾಮ್ರಜ್ಯದ ಅವನತಿಯ ಲಕ್ಷಣಗಳು ಕಂಡುಬಂದಿದ್ದುವು. ಥೈಲೆಂಡಿನ ಸುಖೋಥಾಯ್ನ ರಾಜ ರಾಮಾಕಂಹೇಂಗ ಕಾಂಬೋಡಿಯದ ಅನೇಕ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದ. ರಾಜ್ಯದಲ್ಲಿ ಒಗ್ಗಟ್ಟೂ ಇರಲಿಲ್ಲ ಥೈ ಜನರ ಆಕ್ರಮಣವನ್ನು ತಡೆಗಟ್ಟುವುದು ಅಸಾಧ್ಯವಾಗಿತ್ತು. 8ನೆಯ ಜಯುವರ್ಮ ಶೈವಮತವನ್ನು ಪುನರುಜ್ಜೀವನಗೊಳಿಸಲು ಮಾಡಿದ ಪ್ರಯತ್ನದಿಂದಾಗಿ ಬೌದ್ಧರು ದಂಗೆ ಎದ್ದರು. ರಾಜ ಬಂದಿಯಾದ. ಅವನ ಅಳಿಯ 1295ರಲ್ಲಿ ಅವನ್ನು ಕೊಲೆ ಮಾಡಿದ. ಬೌದ್ಧ ಮತ ಕ್ರಮೇಣ ಪ್ರಬಲವಾಯಿತು. 1350ರ ಅನಂತರ ಖ್ಮರ್ ಸಾಮ್ರಜ್ಯ, ಥೈಲೆಂಡಿನ ಅಯುತ್ತಿಯ ರಾಜ್ಯದ ಪೂರ್ವದಲ್ಲಿ ತಲೆಯೆತ್ತುತ್ತಿದ್ದ ವಿಯಟ್ನಾಮೀಯರ ಆಕ್ರಮಣವನ್ನು ಎದುರಿಸಬೇಕಾಯಿತು. 1431ರಲ್ಲಿ ಥೈಲೆಂಡಿನ ದಾಳಿಯನ್ನು ಎದುರಿಸಲಾರದೆ ರಾಜಧಾನಿಯನ್ನು ಆಂಗ್ಕೋರ್ ನಿಂದ ಈಗಿನ ಪನಾಂ-ಪೆನ್ ಪ್ರದೇಶಕ್ಕೆ ಬದಲಾಯಿಸಲಾಯಿತು. ಇದರೊಂದಿಗೆ ಖ್ಮರ್ ಚಕ್ರಾಧಿಪತ್ಯದ ವೈಭವವೂ ಅದರ ಶಿಲ್ಪಕಲಾ ಸಿದ್ಧಿಯೂ ಕೊನೆಗೊಂಡುವೆನ್ನಬಹುದು. ವ್ಯವಸಾಯದಿಂದ ಸಮೃದ್ದಿಯಾಗಿದ್ದ ಉತ್ತರದ ಪ್ರದೇಶಗಳು ಹಾಳುಬಿದ್ದುವು. 1473 ರಲ್ಲಿ ಥೈಲೆಂಡಿನವರು ಕೋರಟ್ ಮತ್ತು ಆಂಗ್ಕೋರ್ಗಳ ಮೇಲೆ ಆಕ್ರಮಣ ನಡೆಸಿದರು. ದೊರೆ ಬಂದಿಯಾದ. ಅವನನ್ನು ಅವನ ಸಂಸಾರದೊಂದಿಗೆ ಬಾಂಕಾಕಿಗೆ ರವಾನಿಸಲಾಯಿತು. ಅಲ್ಲಿ ಅವನಿಗೆ ಹುಟ್ಟ್ಟಿದ ಮಗನನ್ನು ಥೈಲೆಂಡಿನವರು ಅನಂತರ ಪಣವಾಗಿಟ್ಟುಕೊಂಡು ಕಾಂಬೋಡಿಯದ ಆಕ್ರಮಣ ಕಾರ್ಯವನ್ನು ಬಲಗೊಳಿಸಿಕೊಂಡರು. ಕಾಂಬೋಡಿಯನರಿಗೂ ಸೈಯಾಮಿಗಳಿಗೂ ಪದೇ ಪದೇ ಯುದ್ಧಸಂಭವಿಸುತ್ತಿತ್ತು. 16ನೆಯ ಶತಮಾನದಲ್ಲಿ ಬರ್ಮೀಯರು ಥೈಲೆಂಡನ್ನು ಮುತ್ತಿದ್ದರಿಂದ ಕಾಂಬೋಡಿಯ 1560ರಿಂದ 1590ರ ವರೆಗೆ ಸ್ವಲ್ಪ ಚೇತರಿಸಿಕೊಂಡಿತು. ಆ ಶತಮಾನದ ನಡುಗಾಲದಲ್ಲಿ ದೊರೆ ಅಂಗ್-ಚಾನ್ ಥೈಲೆಂಡನ್ನು ಸೋಲಿಸಿದ. ಶಾಂತಿ ನೆಲೆಗೊಂಡಿತು. ಆದರೆ ಇದು ಬಹುಕಾಲ ಉಳಿಯಲಿಲ್ಲ. ಥೈಲೆಂಡಿನ ಕಿರುಕುಳ ಮುಂದುವರಿಯಿತು. 1593ರಲ್ಲಿ ಅದು ಗಳಿಸಿದ ಜಯದಿಂದ ಕಾಂಬೋಡಿಯದ ಬೆನ್ನು ಮೂಳೆಯೇ ಮುರಿದು ಬಿದ್ದಂತಾಯಿತು. ಅನಂತರದ ಕಾಲ ಆಂತರಿಕ ಕ್ಷೋಭೆ, ಪಿತೂರಿ ಕೊಲೆಗಳಿಂದ ಕೂಡಿದ್ದು. ಇತ್ತ ಥೈಲೆಂಡೂ ಅತ್ತ ವಿಯೆಟ್ನಾಮೂ ಕಾಂಬೋಡಿಯವನ್ನು ಕಾಡಿಸುತ್ತಿದ್ದುವು. ಕ್ರಮಕ್ರಮವಾಗಿ ಕಾಂಬೋಡಿಯದ ಸ್ವಾತಂತ್ರ್ಯ ನಶಿಸಿಹೋಯಿತು. 19ನೆಯ ಶತಮಾನದಲ್ಲಿ ಫ್ರೆಂಚರು ಕಾಂಬೋಡಿಯನ್ನು ವಶಪಡಿಸಿಕೊಳ್ಳುವ ವರೆಗೆ ಖ್ಮರ್ ಸಾಮ್ರಾಜ್ಯ ದಿನೇ ದಿನೇ ಕ್ಷೀಣವಾಗುತ್ತಸಾಗಿತು. ಕಾಂಬೋಡಿಯನರು ಪೂರ್ವದಲ್ಲಿದ್ದ ವಿಯಟ್ನಾಮೀಯರ ಅಥವಾ ಪಶ್ಚಿಮದಲ್ಲಿದ್ದ ಥೈ ಜನಾಂಗದವರ ಅಥವಾ ಅವರಿಬ್ಬರ ಅಧೀನದಲ್ಲಿ ಬಾಳ ಬೇಕಾಯಿತು. ಪರಾಧೀನವಾದ ಕಾಂಬೋಡಿಯ ಮತ್ತೆ ಗತಕಾಲದ ವೈಭವವನ್ನು ಕಾಣಲಿಲ್ಲ. 18ನೆಯ ಶತಮಾನದಲ್ಲಿ ಥೈಲೆಂಡ್ ಕಾಂಬೋಡಿಯದ ಮೂರು ಪ್ರಾಂತ್ಯಗಳನ್ನು ಆಕ್ರಮಿಸಿಕೊಂಡಿತು ವಿಯಟ್ನಾಮೀಯರು ಕೊಚಿನ್-ಚೀನ ಪ್ರದೇಶವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು.
19ನೆಯ ಶತಮಾನದಲ್ಲಿ ಫ್ರೆಂಚರು ಇಂಡೋಚೀನ ಪ್ರದೇಶದಲ್ಲಿ ತಮ್ಮ ಸಾಮಾನ್ಯವಾಹಿ ನೀತಿಯಿಂದ ಒಂದು ಪ್ರಬಲವಾದ ವಸಾಹತನ್ನು ಸ್ಥಾಪಿಸಿದರು. ಥೈಲೆಂಡ್ ಮತ್ತು ವಿಯಟ್ನಾಮೀಯರ ದಾಳಿಯನ್ನು ಸಹಿಸಲಾರದೆ ಕಾಂಬೋಡಿಯ ಫ್ರೆಂಚರ ಸಹಾಯವನ್ನು ಬೇಡಿತು. ಫ್ರೆಂಚರು ಆ ಅವಕಾಶವನ್ನು ಉಪಯೋಗಿಸಿಕೊಂಡು ಕಾಂಬೋಡಿಯದ ರಾಜನಿಗೆ ಸಹಾಯ ಮಾಡಿ 1863ರಲ್ಲಿ ಆ ದೇಶವನ್ನು ತಮ್ಮ ನಿಯಂತ್ರಣಕ್ಕೆ ಒಳಪಡಿಸಿಕೊಂಡರು. ಅನಂತರ ಈ ದೇಶ ಫ್ರೆಂಚ್ ಇಂಡೋಚೀನದ ಒಂದು ಭಾಗವಾಯಿತು. 1907ರಲ್ಲಿ ಸೈಯಾಂ (ಥೈಲೆಂಡಿನ ಆಗಿನ ಹೆಸರು) ಕಾಂಬೋಡಿಯದ ಪ್ರದೇಶಗಳನ್ನು ಹಿಂದಿರುಗಿಸಿತು.
1930ರ ದಶಕದಲ್ಲಿ ಫ್ರೆಂಚರ ವಿರುದ್ಧ ದೇಶೀಯ ಚಳವಳಿಗಳು ನಡೆದುವು. ಆ ಕಾಲದಲ್ಲೇ ರಾಷ್ಟ್ರೀಯತೆಯ ಭಾವನೆ ಬೆಳೆಯಿತು. ಎರಡನೆಯ ಮಹಾಯುದ್ದದ ಕಾಲದಲ್ಲಿ ಫ್ರೆಂಚ್ ಸರ್ಕಾರ ಜಪಾನಿನ ಬೇಡಿಕೆಗಳಿಗೆ ಒಪ್ಪಿಗೆ ನೀಡಿ ಕಾಂಬೋಡಿಯದಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸಲು ಅನುಮತಿ ಕೊಟ್ಟಿತ್ತು. ಸ್ವಲ್ಪಕಾಲ ಜಪಾನರ ಪಕ್ಷ ಸೇರಿದ ಥೈಲೆಂಡ್ ಕಾಂಬೋಡಿಯದ ಪ್ರದೇಶಗಳನ್ನು ಆಕ್ರಮಿಸಿಕೊಂಡಿತು. ಈ ಘಟನೆಗಳಿಂದಾಗಿ ದೇಶದಲ್ಲಿ ಫ್ರೆಂಚರ ವಿರುದ್ಧ ಭಾವನೆಗಳು ತಲೆ ಎತ್ತಿದುವು. 1941ರಲ್ಲಿ ಜಪಾನ್ ಕಾಂಬೋಡಿಯದಲ್ಲಿದ್ದ ಫ್ರೆಂಚರ ಆಡಳಿತವನ್ನು ಕೊನೆಗೊಳಿಸಿತು. ತನ್ನ 18ನೆಯ ವರ್ಷದಲ್ಲಿ, ಪಟ್ಟಕ್ಕೆ ಬಂದಿದ್ದ ದೊರೆ ನರೋದಮ್ ಸಿಹಾನೌಕ್ ಫ್ರಾನ್ಸಿನೊಡನೆ ಇದ್ದ ಎಲ್ಲ ಒಪ್ಪಂದಗಳನ್ನೂ ಕೊನೆಗೊಳಿಸಿದ.
ಎರಡನೆಯ ಮಹಾಯುದ್ದದಲ್ಲಿ ಜಪಾನ್ ಸೋತ ಮೇಲೆ, ಫ್ರೆಂಚರು ಪುನಃ ತಮ್ಮ ಅಧಿಕಾರವನ್ನು ಕಾಂಬೋಡಿಯದ ಮೇಲೆ ಸ್ಥಾಪಿಸಿದರು. ಆದರೆ ಕಾಂಬೋಡಿಯ ಒಳಾಡಳಿತದಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಪಡೆಯಿತು. 1947ರಲ್ಲಿ ಅದು ಸಂವಿಧಾನಬದ್ಧ ರಾಜ್ಯವೆಂದು ಘೋಷಿತವಾಯಿತು. 1949ರಲ್ಲಿ ಕಾಂಬೋಡಿಯಾ ಫ್ರೆಂಚ್ ಒಕ್ಕೂಟದ ಒಂದು ಅಂಗವಾಯಿತು. 1953ರಲ್ಲಿ ಫ್ರೆಂಚ್ ಇಂಡೋಚೀನದ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಹಾನೌಕ್ ಸಂಪೂರ್ಣ ಮಿಲಿಟರಿ ಅಧಿಕಾರ ಪಡೆದ. 1950ರಲ್ಲಿ ಉತ್ತರ ವಿಯೆಟ್ನಾಂ ಯುದ್ಧಕಾರ್ಯಾಚರಣೆಯಿಂದಾಗಿ ಕಾಂಬೋಡಿಯದಲ್ಲಿ ಆಂತರಿಕ ಶಾಂತಿಗೆ ಧಕ್ಕೆ ಬಂತು. 1954ರ ವೇಳೆಗೆ ಇಡೀ ಇಂಡೋ-ಚೀನದಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದುದರಿಂದ 1954ರಲ್ಲಿ ಜಿನೀವ ಸಮ್ಮೇಳನ ನಡೆಯಿತು. ವಿಶ್ವದ ಅಗ್ರ ರಾಷ್ಟ್ರಗಳು ಕಾಂಬೋಡಿಯದ ತಟಸ್ಥ ನೀತಿಯನ್ನೂ ರಾಜ್ಯದ ಮೇರೆಗಳನ್ನೂ ರಕ್ಷಿಸುವ ಭರವಸೆ ನೀಡಿದುವು. 1955ರಲ್ಲಿ ಸಿಹಾನೌಕ್ ಸಿಂಹಾಸನವನ್ನು ತನ್ನ ತಂದೆಗೆ ಬಿಟ್ಟುಕೊಟ್ಟು ಸಮಾಜವಾದಿ ಪ್ರಜಾಸಮುದಾಯ ಪಕ್ಷ ಸ್ಥಾಪಿಸಿ, ಚುನಾವಣೆಗೆ ನಿಂತು ಗೆದ್ದು ಪ್ರಧಾನಿಯಾದ. ಆ ವರ್ಷವೇ ಫ್ರೆಂಚ್ ಒಕ್ಕೂಟದಿಂದ ಕಾಂಬೋಡಿಯ ಹೊರಬಂದು, ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿತು. 1960ರಲ್ಲಿ ತನ್ನ ತಂದೆ ಗತಿಸಿದುದರಿಂದ ಸಿಹಾನೌಕ್ ದೇಶದ ನಾಯಕನಾಗಿ ನೇಮಕ ಹೊಂದಿದ.
1960 ರಿಂದ 1979ರ ಮೊದಲ ಭಾಗದ ವರೆಗೆ ಸಿಹಾನೌಕ್ ಕಾಂಬೋಡಿಯದ ಅಧ್ಯಕ್ಷನಾಗಿದ್ದ. 1960ರಲ್ಲಿ ಆ ದೇಶದ ಆರ್ಥಿಕ ಅಭಿವೃದ್ಧಿ ಸಾಧನೆಗೆ ಮೊದಲ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಲಾಯಿತು. ಸರ್ಕಾರ ತಟಸ್ಥ ನೀತಿಯನ್ನು ಪಾಲಿಸುತ್ತಿತ್ತಾದರೂ ಉತ್ತರ ದಕ್ಷಿಣ ವಿಯೆಟ್ನಾಂ ಯುದ್ಧದ ಪರಿಣಾಮವಾಗಿ ಅದರ ಸ್ಥಿತಿ ಕಠಿಣವಾಯಿತು. ಕಮ್ಯೂನಿಸ್ಟ್ ಚೀನದೊಡನೆ ರಾಜತಾಂತ್ರಿಕ ಸಂಬಂಧ ಬೆಳೆಯಿತು. ಅಮೆರಿಕ ಕೊಡುತ್ತಿದ್ದ ಮಿಲಿಟರಿ ಮತ್ತು ಆರ್ಥಿಕ ನೆರವುಗಳನ್ನು ಕಾಂಬೋಡಿಯ 1963ರಲ್ಲಿ ತಿರಸ್ಕರಿಸಿತಲ್ಲದೆ 1965ರಲ್ಲಿ ಅಮೆರಿಕದೊಡನೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿದು ಕೊಂಡಿತು. ಜೂನ್ 1967ರಲ್ಲಿ ಸೋವಿಯತ್ ರಷ್ಯ ಮತ್ತು ಇತರ ಕಮ್ಯೂನಿಸ್ಟ್ ದೇಶಗಳು ಕಾಂಬೋಡಿಯದ ಮೇರೆಗಳನ್ನು ಒಪ್ಪಿದುವು 1968ರ ಮೊದಲ ಭಾಗದಲ್ಲಿ ದೇಶದಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆದಿತ್ತು. ಇದು ಹೊಸ ವಿದೇಶಾಂಗನೀತಿಯ ಸಂಕೇತವಾಗುವಂತೆ ಕಾಣುತ್ತಿತ್ತು. ವಿಯಟ್ಕಾಂಗರು ದಕ್ಷಿಣ ವಿಯೆಟ್ನಾಂ ವಿರುದ್ಧ ಹೋರಾಟದಲ್ಲಿ ಕಾಂಬೋಡಿಯ ಪ್ರದೇಶ ಬಳಸಿಕೊಳ್ಳಲಾರಂಭಿಸಿದರು. ಅಂಥವನ್ನು ನೆಲೆಗಳನ್ನು ನಾಶಮಾಡಲು ಅಮೆರಿಕನ್ ಮತ್ತು ವಿಯಟ್ನಾಂ ಸೈನಿಕರು ಹಲವಾರು ಬಾರಿ ಕಾಂಬೋಡಿಯಕ್ಕೆ ಸೇರಿದ ಪ್ರದೇಶಗಳಿಗೆ ಅನಧಿಕೃತವಾಗಿ ಪ್ರವೇಶ ಮಾಡಿದರು. ಸಿಹಾನೌಕ್ ಈ ಬಣಗಳ ಮಧ್ಯೆ ತನ್ನ ತಟಸ್ಥ ನೀತಿಯನ್ನು ಪಾಲಿಸಲು ಅಸಾಧ್ಯವೇ ಆಯಿತೆನ್ನಬಹುದು.
ಇದಲ್ಲದೆ ಕಾಂಬೋಡಿಯದ ಆಂತರಿಕ ವಿಷಯಗಳಲ್ಲಿ ಸಿಹಾನೌಕನ ಧೋರಣೆ ಅನೇಕರಿಗೆ ಹಿಡಿಸಲಿಲ್ಲ. ಯುದ್ಧ ವಾತಾವರಣದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಸಿಹಾನೌಕ್ ಪ್ಯಾರಿಸಿಗೆ ಹೋಗಿದ್ದ ಸಮಯದಲ್ಲಿ 1970ರ ಮಾರ್ಚಿಯಲ್ಲಿ ಸೈನ್ಯಾಧಿಕಾರಿ ಲೋನ್ ನಾಲ್ ಸಿಹಾನೌಕನನ್ನು ಪದಚ್ಯುತನನ್ನಾಗಿ ಮಾಡಿದ. ಸಿಹಾನೌಕನಿಗೆ ಚೀನದ ಬೆಂಬಲ ದೊರಕಿತು. ಕಾಂಬೋಡಿಯ ಅಂತರ್ಯುದ್ಧಕ್ಕೆ ಒಳಗಾಯಿತು. ಲೋನ್ ನಾಲ್ ಕಾಂಬೋಡಿಯವನ್ನು ಗಣರಾಜ್ಯವೆಂದು ಘೋಷಿಸಿ ರಾಜಪ್ರಭುತ್ವವನ್ನು ಕೊನೆಗೊಳಿಸಿದ. ಸಿಹಾನೌಕನ ಬೆಂಬಲಿಗರಾದ ಉತ್ತರ ವಿಯಟ್ನಾಮೀಯರು ಕಾಂಬೋಡಿಯದ ಮೇಲೆ ದಾಳಿ ನಡೆಸಿದರು. ಅಮೆರಿಕನ್ನರು ಹಲವಾರು ವಾರಗಳ ಕಾಲ ಮಧ್ಯೆ ಪ್ರವೇಶಿಸಿ ಲೋನ್ನಾಲನಿಗೆ ಬೆಂಬಲ ನೀಡಿ, ಅನಂತರ ಸೈನ್ಯವನ್ನು ವಾಪಸು ಕರೆಸಿಕೊಂಡರು.