ಕರ್ನಾಟಕದ ಜಿಲ್ಲೆಗಳು
ಹಿನ್ನೆಲೆ
[ಬದಲಾಯಿಸಿ]ನಮ್ಮ ಕರ್ನಾಟಕ ರಾಜ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಅವರ ಸುಗಮ ಆಡಳಿತದ ಕಾರಣಕ್ಕಾಗಿ ವಿವಿಧ ಜಿಲ್ಲೆಗಳನ್ನು Archived 2023-05-24 ವೇಬ್ಯಾಕ್ ಮೆಷಿನ್ ನಲ್ಲಿ. ರಚಿಸಲಾಯಿತು. ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಕೇಂದ್ರಗಳು ಬದಲಾಗಿವೆ. ಕೆಲವು ಜಿಲ್ಲೆಗಳು ಚಿಕ್ಕದಾಗಿದ್ದು, ಕೆಲವು ವಿಸ್ತಾರಗೊಂಡಿವೆ. ಕೆಲವೊಂದು ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಎರಡು ಜಿಲ್ಲೆಗಳನ್ನು ರಚಿಸಲಾಗಿದೆ. ಈ ಜಿಲ್ಲೆಗಳ ಆಡಳಿತವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೋಡಿಕೊಳ್ಳುತ್ತಾರೆ. ನಮ್ಮ ರಾಜ್ಯ ಸರ್ಕಾರದ ಆಡಳಿತದ ಅನುಕೂಲಕ್ಕಾಗಿ ಇರುವ ಮೂವತ್ತೊಂದು ಜಿಲ್ಲೆಗಳು ನಾಲ್ಕು ಕಂದಾಯ ವಿಭಾಗಗಳ ಅಡಿಯಲ್ಲಿ ಬರುವಂತೆ ರೂಪಿಸಲಾಗಿದೆ, ಅವು ಈ ಕೆಳಗಿನಂತೆ ಇವೆ:
1. ಬೆಂಗಳೂರು ವಿಭಾಗ
[ಬದಲಾಯಿಸಿ]ಕರ್ನಾಟಕದ ರಾಜಧಾನಿ ಬೆಂಗಳೂರು ಆಗಿದೆ. ಇದು ಒಂದು ಆಡಳಿತ ಕಂದಾಯ ವಿಭಾಗವಾಗಿದೆ. ಈ ವಿಭಾಗದಲ್ಲಿ ಒಂಭತ್ತು ಜಿಲ್ಲೆಗಳಿವೆ. ಅವು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ. ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ಇವು ನೆಲೆಗೊಂಡಿವೆ.
2. ಮೈಸೂರು ವಿಭಾಗ
[ಬದಲಾಯಿಸಿ]ನಮ್ಮ ರಾಜ್ಯದ ಮತ್ತೊಂದು ಆಡಳಿತ ವಿಭಾಗವೆಂದರೆ ಮೈಸೂರು ವಿಭಾಗ. ಮೈಸೂರು ಆರಂಭದಲ್ಲಿ ಒಡೆಯರ್ ವಂಶಸ್ಥರ ರಾಜಧಾನಿಯಾಗಿತ್ತು. ಈ ವಿಭಾಗದಲ್ಲಿರುವ ಎಂಟು ಜಿಲ್ಲೆಗಳೆಂದರೆ: ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ಕೊಡಗು. ಕರ್ನಾಟಕದ ಅನೇಕ ಶ್ರೀಮಂತ ಜಿಲ್ಲೆಗಳು ಈ ವಿಭಾಗದಲ್ಲಿವೆ. ಈ ವಿಭಾಗವು ನದಿಗಳಿಗೆ, ಪರ್ವತ ಶ್ರೇಣಿಗಳಿಗೆ, ಅರಣ್ಯಗಳಿಗೆ, ಕಾಡು ಪ್ರಾಣಿಗಳಿಗೆ, ಕಾಫಿ ತೋಟಗಳಿಗೆ, ಕರಾವಳಿಗೆ, ಬಂದರುಗಳಿಗೆ ಪ್ರಸಿದ್ಧವಾಗಿದೆ.
3. ಬೆಳಗಾವಿ ವಿಭಾಗ
[ಬದಲಾಯಿಸಿ]ಈ ವಿಭಾಗದ ನಾಲ್ಕು ಜಿಲ್ಲೆಗಳು 1956ರವರೆಗೆ ಬಾಂಬೆ ಪ್ರಾಂತ್ಯದಲ್ಲಿ ಇದ್ದವು. ನಂತರ ಕರ್ನಾಟಕ ರಾಜ್ಯದಲ್ಲಿ ಸೇರ್ಪಡೆಯಾದವು. ಈ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟ ಮತ್ತು ಉತ್ತರ ಕನ್ನಡ. ಇವುಗಳಲ್ಲಿ ಉತ್ತರ ಕನ್ನಡ ಮತ್ತು ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಾಗಿವೆ.
4. ಕಲಬುರ್ಗಿ ವಿಭಾಗ
[ಬದಲಾಯಿಸಿ]ಕಲಬುರ್ಗಿ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಕಲಬುರ್ಗಿ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಹೊಸದಾಗಿ ಉದಯವಾದ ವಿಜಯನಗರ. ದುರದೃಷ್ಟವಶಾತ್ ಈ ಜಿಲ್ಲೆಗಳು ಸಾಕ್ಷರತಾ ಪ್ರಮಾಣ, ತಲಾ ಆದಾಯ, ಕೃಷಿ, ಜೀವಿತಾವಧಿ ಮುಂತಾದ ವಿಷಯಗಳಲ್ಲಿ ಸಾಕಷ್ಟು ಹಿಂದುಳಿದಿವೆ. ಅದಕ್ಕಾಗಿ ಕರ್ನಾಟಕ ಸರ್ಕಾರವು 2000ರಲ್ಲಿ ಡಾ. ಡಿ. ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ತೀರಾ ಇತ್ತೀಚೆಗೆ ಭಾರತ ಸರ್ಕಾರ ಈ ಜಿಲ್ಲೆಗಳ ಅಭಿವೃದ್ಧಿಗಾಗಿ ಸಂವಿಧಾನದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ.
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕೃತ ಪಟ್ಟಿ
[ಬದಲಾಯಿಸಿ]ವಿವರಣೆ | |
---|---|
ಬೆಂಗಳೂರು ವಿಭಾಗ | |
ಮೈಸೂರು ವಿಭಾಗ | |
ಬೆಳಗಾವಿ ವಿಭಾಗ | |
ಕಲಬುರ್ಗಿ ವಿಭಾಗ |
ಸಂಕೇತ[೧] | ಜಿಲ್ಲೆ | ಜಿಲ್ಲಾ ಕೇಂದ್ರ[೨] | ಸ್ಥಾಪನೆ[೩][೪] | ತಾಲೂಕುಗಳು | ಜನಸಂಖ್ಯೆ[೫](2011ರ ಜನಗಣತಿಯ ಪ್ರಕಾರ) | ವಿಸ್ತೀರ್ಣ[೨] | ಜನಸಾಂದ್ರತೆ[೫](2011ರ ಜನಗಣತಿಯ ಪ್ರಕಾರ) | ನಕ್ಷೆ |
---|---|---|---|---|---|---|---|---|
BK | ಬಾಗಲಕೋಟ | ಬಾಗಲಕೋಟ | 15 ಆಗಸ್ಟ್ 1997[೬] | 1,889,752 | 6,575 km2 (2,539 sq mi) | 288/km2 (750/sq mi) | ||
BN | ಬೆಂಗಳೂರು ನಗರ | ಬೆಂಗಳೂರು | 1 ನವೆಂಬರ್ 1956 | 9,621,551 | 2,190 km2 (850 sq mi) | 4,393/km2 (11,380/sq mi) | ||
BR | ಬೆಂಗಳೂರು ಗ್ರಾಮಾಂತರ | ಬೆಂಗಳೂರು | 15 ಆಗಸ್ಟ್ 1986[೭] | 990,923 | 2,259 km2 (872 sq mi) | 431/km2 (1,120/sq mi) | ||
BG | ಬೆಳಗಾವಿ | ಬೆಳಗಾವಿ | 1 ನವೆಂಬರ್ 1956 | 4,779,661 | 13,415 km2 (5,180 sq mi) | 356/km2 (920/sq mi) | ||
BL | ಬಳ್ಳಾರಿ | ಬಳ್ಳಾರಿ | 1 ನವೆಂಬರ್ 1956 | 2,452,595 | 8,450 km2 (3,260 sq mi) | 290/km2 (750/sq mi) | ||
BD | ಬೀದರ್ | ಬೀದರ್ | 1 ನವೆಂಬರ್ 1956 | 1,703,300 | 5,448 km2 (2,103 sq mi) | 313/km2 (810/sq mi) | ||
BJ | ವಿಜಯಪುರ | ವಿಜಯಪುರ | 1 ನವೆಂಬರ್ 1956 | 2,177,331 | 10,494 km2 (4,052 sq mi) | 207/km2 (540/sq mi) | ||
CJ | ಚಾಮರಾಜನಗರ | ಚಾಮರಾಜನಗರ | 15 ಆಗಸ್ಟ್ 1997[೬] | 1,020,791 | 5,101 km2 (1,970 sq mi) | 181/km2 (470/sq mi) | ||
CB | ಚಿಕ್ಕಬಳ್ಳಾಪುರ | ಚಿಕ್ಕಬಳ್ಳಾಪುರ | 10 ಸೆಪ್ಟೆಂಬರ್ 2007[೬] | 1,255,104 | 4,524 km2 (1,747 sq mi)[೮] | 296/km2 (770/sq mi) | ||
CK | ಚಿಕ್ಕಮಗಳೂರು | ಚಿಕ್ಕಮಗಳೂರು | 1 ನವೆಂಬರ್ 1956 | 1,137,961 | 7,201 km2 (2,780 sq mi) | 158/km2 (410/sq mi) | ||
CT | ಚಿತ್ರದುರ್ಗ | ಚಿತ್ರದುರ್ಗ | 1 ನವೆಂಬರ್ 1956 | 1,659,456 | 8,440 km2 (3,260 sq mi) | 197/km2 (510/sq mi) | ||
DK | ದಕ್ಷಿಣ ಕನ್ನಡ | ಮಂಗಳೂರು | 1 ನವೆಂಬರ್ 1956 | 2,089,649 | 4,560 km2 (1,760 sq mi) | 430/km2 (1,100/sq mi) | ||
DA | ದಾವಣಗೆರೆ | ದಾವಣಗೆರೆ | 15 ಆಗಸ್ಟ್ 1997[೬] | 1,945,497 | 5,924 km2 (2,287 sq mi) | 328/km2 (850/sq mi) | ||
DH | ಧಾರವಾಡ | ಧಾರವಾಡ | 1 ನವೆಂಬರ್ 1956 | 1,847,023 | 4,260 km2 (1,640 sq mi) | 434/km2 (1,120/sq mi) | ||
GA | ಗದಗ | ಗದಗ | 24 ಆಗಸ್ಟ್ 1997[೬] | 1,064,570 | 4,656 km2 (1,798 sq mi) | 229/km2 (590/sq mi) | ||
GU | ಕಲಬುರ್ಗಿ | ಕಲಬುರ್ಗಿ | 1 ನವೆಂಬರ್ 1956 | 2,566,326 | 10,951 km2 (4,228 sq mi) | 234/km2 (610/sq mi) | ||
HS | ಹಾಸನ | ಹಾಸನ | 1 ನವೆಂಬರ್ 1956 | 1,776,421 | 6,814 km2 (2,631 sq mi) | 261/km2 (680/sq mi) | ||
HV | ಹಾವೇರಿ | ಹಾವೇರಿ | 24 ಆಗಸ್ಟ್ 1997[೬] | 1,597,668 | 4,823 km2 (1,862 sq mi) | 331/km2 (860/sq mi) | ||
KD | ಕೊಡಗು | ಮಡಿಕೇರಿ | 1 ನವೆಂಬರ್ 1956 | 554,519 | 4,102 km2 (1,584 sq mi) | 135/km2 (350/sq mi) | ||
KL | ಕೋಲಾರ | ಕೋಲಾರ | 1 ನವೆಂಬರ್ 1956 | 1,536,401 | 3,969 km2 (1,532 sq mi)[೯] | 386/km2 (1,000/sq mi) | ||
KP | ಕೊಪ್ಪಳ | ಕೊಪ್ಪಳ | 24 ಆಗಸ್ಟ್ 1997[೬] | 1,389,920 | 7,189 km2 (2,776 sq mi) | 250/km2 (650/sq mi) | ||
MA | ಮಂಡ್ಯ | ಮಂಡ್ಯ | 1 ನವೆಂಬರ್ 1956 (29 ಆಗಸ್ಟ್ 1939)[೧೦][೧೧] |
1,805,769 | 4,961 km2 (1,915 sq mi) | 364/km2 (940/sq mi) | ||
MY | ಮೈಸೂರು | ಮೈಸೂರು | 1 ನವೆಂಬರ್ 1956 | 3,001,127 | 6,854 km2 (2,646 sq mi) | 476/km2 (1,230/sq mi) | ||
RA | ರಾಯಚೂರು | ರಾಯಚೂರು | 1 ನವೆಂಬರ್ 1956 | 1,928,812 | 6,827 km2 (2,636 sq mi) | 228/km2 (590/sq mi) | ||
RM | ರಾಮನಗರ | ರಾಮನಗರ | 10 ಸೆಪ್ಟೆಂಬರ್ 2007[೬] | 1,082,636 | 3,556 km2 (1,373 sq mi) | 308/km2 (800/sq mi) | ||
SH | ಶಿವಮೊಗ್ಗ | ಶಿವಮೊಗ್ಗ | 1 ನವೆಂಬರ್ 1956 | 1,752,753 | 8,477 km2 (3,273 sq mi) | 207/km2 (540/sq mi) | ||
TU | ತುಮಕೂರು | ತುಮಕೂರು | 1 ನವೆಂಬರ್ 1956 | 2,678,980 | 10,597 km2 (4,092 sq mi) | 253/km2 (660/sq mi) | ||
UD | ಉಡುಪಿ | ಉಡುಪಿ | 25 ಆಗಸ್ಟ್ 1997[೬] | 1,177,361 | 3,880 km2 (1,500 sq mi) | 329/km2 (850/sq mi) | ||
UK | ಉತ್ತರ ಕನ್ನಡ | ಕಾರವಾರ | 1 ನವೆಂಬರ್ 1956 | 1,437,169 | 10,291 km2 (3,973 sq mi) | 140/km2 (360/sq mi) | ||
VN | ವಿಜಯನಗರ | ಹೊಸಪೇಟೆ | 18 ನವೆಂಬರ್ 2020 | 1,353,628 | 5,644 km2 (2,179 sq mi) | |||
ಯಾದಗಿರಿ | ಯಾದಗಿರಿ | 30 ಡಿಸೆಂಬರ್ 2009[೧೨] | 1,174,271 | 5,273 km2 (2,036 sq mi) | 223/km2 (580/sq mi) |
ಉಲ್ಲೇಖಗಳು
[ಬದಲಾಯಿಸಿ]- ↑ "NIC Policy on format of e-mail Address: Appendix (2): Districts Abbreviations as per ISO 3166–2" (PDF). Ministry Of Communications and Information Technology, Government of India. 2004-08-18. pp. 5–10. Archived from the original (PDF) on 2008-09-11. Retrieved 2008-11-24.
- ↑ ೨.೦ ೨.೧ "Know India — Districts of Karnataka". Government of India portal. Retrieved 16 November 2010.
- ↑ ಇಲ್ಲಿ 'ಸ್ಥಾಪನೆ' ಎಂದರೆ ಆ ಜಿಲ್ಲೆಯು ಕರ್ನಾಟಕದಲ್ಲಿ ಜಿಲ್ಲೆಯಾಗಿ ಸ್ಥಾಪನೆಯಾದ ವರ್ಷವನ್ನು ಸೂಚಿಸುತ್ತದೆ. ಒಂದು ವೇಳೆ ಆ ಜಿಲ್ಲೆಯು ಕರ್ನಾಟಕದ ಒಳಗೆ ಜಿಲ್ಲೆಯಾಗಿ ಸೇರ್ಪಡೆಯಾಗುವ ಮೊದಲೇ ಸ್ಥಾಪಿತವಾಗಿದ್ದರೆ ೧ ನವೆಂಬರ್ ೧೯೫೬ರನ್ನು ಜಿಲ್ಲಾ ಸ್ಥಾಪನೆಯ ದಿನ ಎಂದು ಪರಿಗಣಿಸಲಾಗುತ್ತದೆ.
- ↑ "STATES REORGANISATION ACT 1956 - Formation of a new Mysore State". Archived from the original on 16 May 2008. Retrieved 17 November 2010.
- ↑ ೫.೦ ೫.೧ http://www.census2011.co.in/census/state/districtlist/karnataka.html
- ↑ ೬.೦ ೬.೧ ೬.೨ ೬.೩ ೬.೪ ೬.೫ ೬.೬ ೬.೭ ೬.೮ "A Handbook of Karnataka — Administration" (PDF). Government of Karnataka. pp. 354, 355. Archived from the original (pdf) on 8 October 2011. Retrieved 16 November 2010.
- ↑ "District Profile". Archived from the original on 29 November 2010. Retrieved 18 November 2010.
- ↑ "District Profile — Area and population". Archived from the original on 25 November 2010. Retrieved 18 November 2010.
- ↑ "Kolar district at a glance" (PDF). Archived from the original (pdf) on 12 March 2011. Retrieved 18 November 2010.
- ↑ ವಿಶೇಷ ಮಾಹಿತಿ: ಈ ತಾರೀಕು ಜಿಲ್ಲೆ ಸ್ಥಾಪನೆಯಾದ ದಿನವನ್ನು ಸೂಚಿಸುತ್ತದೆ. 1956ರ ನವೆಂಬರ್ 1ರ ಮುಂಚೆಯೇ ಈ ಜಿಲ್ಲೆ ಮೈಸೂರು ರಾಜ್ಯದ ಭಾಗವಾಗಿತ್ತು
- ↑ "Formation of Mandya district". Archived from the original on 2 ಆಗಸ್ಟ್ 2010. Retrieved 18 November 2010.
- ↑ ಉಲ್ಲೇಖ ದೋಷ: Invalid
<ref>
tag; no text was provided for refs namednewdistrict