ಐಸೊನಿಯಾಜಿಡ್
Systematic (IUPAC) name | |
---|---|
isonicotinohydrazide | |
Clinical data | |
Trade names | Hydra, Isovit, Laniazid, Nydrazid |
AHFS/Drugs.com | Monograph |
ಮೆಡ್ಲೈನ್ ಪ್ಲಸ್ | a682401 |
ಗರ್ಭಧಾರಣೆಯ ವರ್ಗ | C |
ಕಾನೂನು ಸ್ಥಿತಿ | prescription only (US) |
Routes | oral, intramuscular, intravenous |
Pharmacokinetic data | |
Protein binding | Very low (0-10%) |
ಚಯಾಪಚಯ | liver; CYP450: 2C19, 3A4 inhibitor |
Half-life | 0.5-1.6h (fast acetylators), 2-5h (slow acetylators) |
ವಿಸರ್ಜನೆ | urine (primarily), feces |
Identifiers | |
CAS ಸಂಖ್ಯೆ | 54-85-3 |
ATC ಕೋಡ್ | J04AC01 |
ಪಬ್‌ಕೆಮ್ | CID 3767 |
ಡ್ರಗ್ ಬ್ಯಾಂಕ್ | DB00951 |
ಕೆಮ್‌ಸ್ಪೈಡರ್ | 3635 |
UNII | V83O1VOZ8L |
KEGG | D00346ಟೆಂಪ್ಲೇಟು:Keggcite |
ChEBI | CHEBI:6030 |
ChEMBL | CHEMBL64 |
NIAID ChemDB | 007657 |
Chemical data | |
ರಾಸಾಯನಿಕ ಸೂತ್ರ | C6H7N3O |
Mol. mass | 137.139 g/mol |
| |
| |
(what is this?) (verify) |
ಐಸೊನಿಯಾಜಿಡ್ ಮತ್ತು ಇಪ್ರೊನಿಯಾಜಿಡ್: ಕ್ಷಯ ರೋಗಾಣುಗಳ ನಾಶಕ್ಕೆ ನಿಯೋಜಿತವಾದ ಮದ್ದುಗಳು. ಇತರ ರೋಗಾಣುಗಳ ವಿರುದ್ಧ ಅವು ಕೆಲಸ ಮಾಡುವುದಿಲ್ಲ. ಮಾನವರಲ್ಲಿ ಕ್ಷಯರೋಗ ಚಿಕಿತ್ಸೆಗೆ ಇಪ್ರೊನಿಯಾಜಿûಡಿನ ಬಳಕೆ ಈಗ ಇಲ್ಲ. ಅದರ ದೀರ್ಘ ಉಪಯೋಗದಿಂದ ನಂಜುದೋಷ ಉಂಟಾಗುವುದೇ ಇದರ ಕಾರಣ. ಮಾನೊ ಅಮೀನ್ ಆಕ್ಸಿಡೇಸ್ ಎಂಬ ಕಿಣ್ವವನ್ನು ಇದು ನಿಷ್ಕ್ರಿಯಗೊಳಿಸುವುದರಿಂದ ಹೀಗಾಗಬಹುದೆಂದು ತರ್ಕಿಸಲಾಗಿದೆ. ಆದರೆ ಐಸೊನಿಯಾಜಿûಡಿಗೆ ಈ ದುರ್ಗುಣವಿಲ್ಲ. ಆದ್ದರಿಂದ ಅದು ಮಾತ್ರ ಕ್ಷಯರೋಗ ಚಿಕಿತ್ಸೆಯಲ್ಲಿ ಉಪಯೋಗವಾಗುತ್ತಿದೆ. ಸಾಮಾನ್ಯವಾಗಿ ಪ್ಯಾರಾಅಮೈನೋ ಸ್ಯಾಲಿನಿಕಾಮ್ಲ ಮತ್ತು ಸ್ಟ್ರೆಪ್ಟೊಮೈಸಿನುಗಳೊಂದಿಗೆ ಐಸೊನಿಯಾಜಿಡನ್ನು ಕೂಡಿಸಿ ಪ್ರಯೋಗಿಸುವುದು ಪದ್ಧತಿ. ಖಿನ್ನತೆ, ವಿಷಣ್ಣತೆ, ಅಕಾರಣ ಭಯ ಮೊದಲಾದ ಮನೋವಿಕಾರಗಳಿಗೆ ತುತ್ತಾದ ರೋಗಿಗಳನ್ನು ಉಪಚರಿಸಲು, ಉತ್ತೇಜಕವಾಗಿ ಇಪ್ರೊನಿಯಾಜಿಡನ್ನು ಪ್ರಯೋಗಿಸುವುದು ಇತ್ತೀಚೆಗೆ ರೂಢಿಯಾಗಿದೆ. ಬಿ ವರ್ಗದ ಜೀವಾತುಗಳಲ್ಲಿ ಒಂದಾದ ನಿಕೋಟಿನ್ ಅಮೈಡು ಕ್ಷಯರೋಗಾಣುವಿನ ಉತ್ಪತ್ತಿ ಮತ್ತು ಬೆಳೆವಣಿಗೆಯನ್ನು ಪರಿಣಾಮಕಾರಿಯಾಗಿ ತಡೆಯಬಲ್ಲದು ಎಂಬ ಮಹತ್ತ್ವದ ಶೋಧವಾದದ್ದು 1944ರಲ್ಲಿ. ರಚನೆಯಲ್ಲಿ ನಿಕೊಟಿನ್ ಅಮೈಡನ್ನು ಹೋಲುವ ಇತರ ಸಂಯುಕ್ತಗಳಿಗೂ ಇಂಥ ರೋಗನಿರೋಧಕ ಗುಣವಿರಬಹುದು ಎಂಬ ಭಾವನೆಯಿಂದ ಪ್ರೇರಿತರಾದ ಸಂಶೋಧಕರು ಸದೃಶ ರಾಸಾಯನಿಕಗಳ ಶೋಧದಲ್ಲಿ ತೊಡಗಿದರು. ಈ ಯತ್ನದ ಫಲವಾಗಿ ಐಸೊನಿಯಾಜಿಡ್ (ಐಸೊನಿಕೋಟಿನ್ ಆಮ್ಲದ ಹೈಡ್ರಜೈಡ್) ಮತ್ತು ಇಪ್ರೊನಿಯಾಜಿಡ್ (ಅದರ ಐಸೊಪ್ರೊಪೈಲ್ ಎಸ್ಟರ್) ರೂಪುಗೊಂಡವು. ಇವನ್ನು ಕ್ಷಯ ರೋಗಾಣುಗಳ ವಿರುದ್ಧ ಉಪಯೋಗಿಸಿದಾಗ ಫಲಿತಾಂಶ ತೃಪ್ತಿಕರವಾಗಿತ್ತು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Core Curriculum on Tuberculosis (2000) Division of Tuberculosis Elimination, Centers for Disease Control and Prevention
- See Chapter 6, Treatment of LTBI Regimens - Isoniazid::
See Chapter 7 - Treatment of TB Disease Monitoring - Adverse Reactions to First-line TB Drugs - Isoniazid::
See Table 5 First-Line Anti-TB Medications
- Isoniazid Overdose: Recognition and Management Archived 2011-11-01 ವೇಬ್ಯಾಕ್ ಮೆಷಿನ್ ನಲ್ಲಿ. American Family Physician 1998 Feb 15