ಆಯ್‌ಸ್ ಯು ಲೈಕ್
ಆಸ್ ಯು ಲೈಕ್ ಇಟ್ ಎನ್ನುವುದು ಗ್ರಾಮೀಣ ಸೊಗಡಿನ ಕ್ರೈಸ್ತ ಧರ್ಮಗುರುಗಳ ಪತ್ರ ವ್ಯವಹಾರದ ಕುರಿತಾದ ಒಂದು ಹಾಸ್ಯ ಪ್ರಹಸನ.ಇದನ್ನು ವಿಲಿಯಮ್ ಶೆಕ್ಸ್ ಪಿಯರ್ ಸುಮಾರು ೧೫೯೯ ಅಥವಾ ೧೬೦೦ರ ಆರಂಭದಲ್ಲಿ ಬರೆದ ಎಂದು ನಂಬಲಾಗಿದೆ.೧೬೨೩ರಲ್ಲಿ ಇದು ಪ್ರಕಟನೆಯ ಬೆಳಕು ಕಂಡಿತು.
ಈ ಕೃತಿಯು ಥಾಮಸ್ ಲೊಜ್ ಅವರ ರೊಸಾಲಿಂಡೆ ಎಂಬ ರೊಮಾಂಚಕ ಗದ್ಯವನ್ನು ಆಧರಿಸಿದೆ. ಈ ಹಾಸ್ಯ ನಾಟಕದ ಪ್ರದರ್ಶನವು ಮೊದಮೊದಲು ಅನಿಶ್ಚಿತವಾಗಿತ್ತು.ಆದರೂ ೧೬೦೩ರಲ್ಲಿ ವಿಲ್ಟನ್ ಹೌಸ್ ನಲ್ಲಿ ಇದರ ಸಂಭವನೀಯ ಪ್ರದರ್ಶನ ಸಾಧ್ಯವಾಯಿತೆನ್ನಬಹುದು. ಆಸ್ ಯು ಲೈಕ್ ಇಟ್ ನ ನಾಯಿಕಿ ರೊಸಾಲಿಂಡ್ ತನ್ನ ಚಿಕ್ಕಪ್ಪನ ಆಸ್ಥಾನದಲ್ಲಿನ ಕಾಟದಿಂದ ತಪ್ಪಿಸಿಕೊಂಡು ತನ್ನ ಸಂಬಂಧಿ ಸಿಲೈ ಮತ್ತು ಅಲ್ಲಿರುವ ಹಾಸ್ಯಗಾರ ಪ್ರವೃತ್ತಿಯ ಟಚ್ ಸ್ಟೊನ್ ಅವರೊಂದಿಗೆ ಪರಾರಿಯಾಗುತ್ತಾಳೆ.ಮುಂದೆ ಕ್ರಮೇಣ ಫಾರೆಸ್ಟ್ ಆಫ್ ಅರ್ಡೆನ್ ನಲ್ಲಿ ಪ್ರೇಮಪಾಶಕ್ಕೆ ಸಿಲುಕುತ್ತಾಳೆ. ಐತಿಹಾಸಿಕವಾಗಿ ಈ ನಾಟಕಕ್ಕೆ ಹಲವೆಡೆಯಿಂದ ವಿಭಿನ್ನ ಟೀಕೆಗಳು ಬಂದಿವೆ,ಇದು ಅತ್ಯಂತ ಕಡಿಮೆ ಗುಣಮಟ್ಟದ್ದಾಗಿದ್ದು ಇನ್ನುಳಿದ ಶೆಕ್ಸ್ ಪಿಯರ್ ನ ಕೃತಿಗಳಿಗೆ ಹೋಲಿಸಿದರೆ ಅಂತಹ ಉತ್ತಮ ಅಲ್ಲ ಎಂದು ಹೇಳಿದರೆ ಇನ್ನು ಕೆಲವರು ಇದು ಅತ್ಯುತ್ತಮ ಗುಣಮಟ್ಟದೆಂದೂ ಹೇಳುತ್ತಾರೆ.
"ಈ ನಾಟಕದಲ್ಲಿ ಶೆಕ್ಸ್ ಪಿಯರ್ ನ ಪ್ರಸಿದ್ದ ಹೇಳಿಕೆ ಮತ್ತು ಪದೇ ಪದೇ ಮರುಕಳಿಸಿದ ಹೇಳಿಕೆ "ಆಲ್ ದಿ ವರ್ಲ್ಡ್ ಇಸ್ ಎ ಸ್ಟೇಜ್ "ಇದು ಮೂಲ ಘೋಷವಾಕ್ಯ "ಟೂ ಮಚ್ ಆಫ್ ಎ ಗುಡ್ ಥಿಂಗ್ "ದಿಂದ ಎತ್ತಿಕೊಳ್ಳಲಾಗಿದೆ. ಇದು ಎಲ್ಲಾ ವರ್ಗದ ಪ್ರೇಕ್ಷಕರನ್ನು ಆಕರ್ಷಿಸಿದೆ.ರೇಡಿಯೊ,ಚಲನಚಿತ್ರ ಮತ್ತು ಸಂಗೀತ ನಾಟಕಗಳಿಗೆ ಕಥೆಯಾಗಿದೆ.
ಪಾತ್ರಗಳು
[ಬದಲಾಯಿಸಿ]
ದಿ ಕೋರ್ಟ್ ಆಫ್ ಡ್ಯುಕ್ ಫ್ರೆಡ್ರಿಕ್:
ಫಾರೆಸ್ಟ್ ಆಫ್ ಅರ್ಡೆನ್ ನಲ್ಲಿ ಡ್ಯುಕ್ ಸೆನಿಯರ್ ಅಜ್ಞಾತ ಆಸ್ಥಾನ:
ದಿವಂಗತ ಸರ್ ರೊಲಾಂಡ್ ಡೆ ಬಾಯ್ಸ್ ನ ಮನೆವಾಸದ ತಾಣ:
|
ಫಾರೆಸ್ಟ್ ಆಫ್ ಅರ್ಡೆನ್ ನಲ್ಲಿನ ಹಳ್ಳಿಗರು:
ಇನ್ನುಳಿದ ಪಾತ್ರಗಳು:
|
ಸಾರಾಂಶ
[ಬದಲಾಯಿಸಿ]'ಫ್ರಾನ್ಸನಲ್ಲಿನ ಡಚಿ ಳ ಆಳ್ವಿಕೆಯ ಪ್ರದೇಶದಲ್ಲಿ ಈ ನಾಟಕ ರೂಪುಗೊಂಡಿದೆ.ಆದರೆ ಈ ನಾಟಕದ ಬಹುತೇಕ ಸನ್ನಿವೇಶಗಳು 'ಫಾರೆಸ್ಟ್ ಆಫ್ ಆರ್ಡೆನ್ 'ಎಂಬ ಪ್ರದೇಶದಲ್ಲಿ ಜರುಗುತ್ತದೆ.
ಫ್ರೆಡ್ರಿಕ್ ಡಚಿಯನ್ನು ಕಿತ್ತುಕೊಂಡನಲ್ಲದೇ ಆತನ ಹಿರಿಯ ಸಹೋದರ ಡ್ಯುಕ್ ಸೆನಿಯರ್ ನನ್ನು ಅಜ್ಞಾತವಾಸಕ್ಕೆ ಅಟ್ಟಿದ. ಆದರೆ ಡ್ಯುಕ್ ನ ಪುತ್ರಿ ರೊಸಾಲಿಂಡಾಳನ್ನು ಆಸ್ಥಾನದಲ್ಲಿರಲು ಅನುಮತಿ ನೀಡಲಾಯಿತು;ಯಾಕೆಂದರೆ ಅವಳು ಅತ್ಯಂತ ನಿಕಟ ಸ್ನೇಹಿತೆ ಮತ್ತು ಫ್ರೆಡ್ರಿಕ್ ನ್ ಒಬ್ಬಳೇ ಪುತ್ರ ಸೈಲಾನ ಹತ್ತಿರದವಳಾಗಿದ್ದಳು. ಒರ್ಲಾಂಡೊ ಆ ರಾಜ್ಯದ ಸಭ್ಯ ಯುವಕ ಮೊದಲ ನೋಟದಲ್ಲೇ ರೊಸಾಲಿಂಡ್ ಳ ಪ್ರೇಮಪಾಶಕ್ಕೆ ಬಿದ್ದ.ಆದರೆ ಆತ ತನ್ನ ಹಿರಿಯಣ್ಣ ಆಲಿವರ್ ನ ಕಿರಿಕಿರಿಯಿಂದ ಮನೆಯನ್ನು ತೊರೆಯಬೇಕಾಯಿತು. ಫ್ರೆಡ್ರಿಕ್ ಕೋಪಗೊಂಡು ರೊಸಾಲಿಂಡಾಳನ್ನು ಆಸ್ಥಾನದ ಪ್ರವೇಶದಿಂದ ವಂಚಿಸುತ್ತಾನೆ. ಸೆಲಿಯಾ ಮತ್ತು ರೊಸಾಲಿಂಡಾ ಇಬ್ಬರೂ ಒಟ್ಟಿಗೆ ಓಡಿಹೋಗಲು ನಿರ್ಧರಿಸುತ್ತಾರೆ,ಇವರೊಂದಿಗೆ ವಿದೂಷಕ ಟಚ್ ಸ್ಟೋನ್ ಕೂಡಾ ಜೊತೆಯಾಗುತ್ತಾನೆ.ಇಲ್ಲಿ ರೊಸಾಲಿಂಡಳು ಓರ್ವ ಯುವಕನ ವೇಷ ಧರಿಸಿ ಅಲ್ಲಿಂದ ಪರಾರಿಯಾಗುತ್ತಾಳೆ. ರೊಸಾಲಿಂಡಾಳು ಈಗ ಗನ್ನಿಮೆಡೆಯಾಗಿ ವೇಷ ಧರಿಸಿರುತ್ತಾಳೆ ("ಜೊವ್ ನ ದ್ವಾರಪಾಲಕನಂತೆ")ಸೆಲಿಯಾನು ಅಲೈನಾ ಲ್ಯಾಟಿನ್ ನಂತೆ ಒಬ್ಬ "ಅಪರಿಚಿತ"ನಂತೆ ವರ್ತಿಸುತ್ತಾನೆ,ಅವರೆಲ್ಲರೂ ಫಾರೆಸ್ಟ್ ಆಫ್ ಅರ್ಡೆನ್ ನ ಅರ್ಕಾಡಿಯನ್ ಗೆ ಬೋರುತ್ತಾರೆ.ಅಲ್ಲಿ ಅಜ್ಞಾತವಾಸದಲ್ಲಿರುವ ಡ್ಯುಕ್ ಕೆಲವು ಬೆಂಬಲಿಗರೊಂದಿಗೆ ಅಲ್ಲಿ ವಾಸವಾಗಿರುತ್ತಾನೆ.ಅಲ್ಲಿ "ಖೇದದಿಂದ ಜಿಂಕೆಯೊಂದನ್ನು ಕತ್ತರಿಸಿದ್ದರಿಂದಾಗಿ ದುಖಿಸುತ್ತಿದ್ದ ಜಾಕ್ವಿಸ್ ನಮ್ಮನ್ನು ಪರಿಚಯಿಸುತ್ತಾನೆ," "ಗೆನ್ನಿಮೆಡೆ" ಮತ್ತು "ಅಲೈನಾ" ಹಠಾತ್ ನೆ ಡ್ಯುಕ್ ಹಾಗು ಆತನ ಬೆಂಬಲಿಗರ ಮೇಲೆ ಬೀಳುವದಿಲ್ಲಏದ್ದ ಬಡ ಬಾಡಿಗೆದಾರ ಎನಿಸಿದ್ದ ಕೊರಿನ್ ನನ್ನು ಭೇಟಿಯಾಗಿ ಆತನ ಮಾಲಿಕನ ಕಳಪೆ ಕಾಟೇಜ್ ನ್ನು ಖರೀದಿ ಮಾದುವುದಾಗಿ ಹೇಳುತ್ತಾರೆ.
ಒರ್ಲ್ಯಾಂಡೊ ಮತ್ತು ಆತನ ಸೇವಕ ಅಡಮ್ (ಈ ಪಾತ್ರವನ್ನು ಸ್ವತ: ಶೆಕ್ಸ್ ಪಿಯರ್ ಮಾದಿರಬಹುದು,ಯಾಕೆಂದರೆ ಈ ಕಥೆಯು [೧]ನಕಲಿಯಾಗಿದೆ.)ಇದೇ ಸಂದರ್ಭದಲ್ಲಿ ಡ್ಯುಕ್ ಮತ್ತು ಅವರ ಹಿಂಬಾಲಕರು ರೊಸಾಲಿಂಡಾಗಾಗಿ ಮರಗಳ ಮೇಲೆಲ್ಲಾ ಪ್ರೇಮ ಕವಿತೆಗಳನ್ನು ಬರೆಯಲು ತೊಡಗಿದ್ದರೆಂದು ಹೇಳಬಹುದು. ರೊಸಾಲಿಂಡಾ ಕೂಡಾ ಒರ್ಲ್ಯಾಂಡೊ ಜೊತೆಗೆ ಪ್ರೀತಿ ಮಾಡುತ್ತಿರುತ್ತಾಳೆ;ಆತನನ್ನು ಗೆನ್ನಿಮೆಡಾ ಆಗಿ ಭೇಟಿ ಮಾಡಿ ಆತನ ಪ್ರೇಮದ ರೋಗವನ್ನು ತಾನು ವಾಸಿ ಮಾಡುವುದಾಗಿ ನಾಟಕವಾಡುತ್ತಾಳೆ. ಗೆನ್ನಿಮೆಡಾ ಹೇಳುವಂತೆ "ಆತ" ರೊಸಾಲಿಂಡಾಳ ಜಾಗೆಗೆ ಕರೆದೊಯುವುದಾಗಿ ಹೇಳಿದಲ್ಲ್ಲದೇ "ಆತ" ಮತ್ತು ಒರ್ಲ್ಯಾಂಡೊ ಸೇರಿ ಅವರ ಸಂಬಂಧಗಳನ್ನು ಬೆಸೆಯುವುದಾಗಿ ತಿಳಿಸುತ್ತಾನೆ. ಇದೇ ಸಂದರ್ಭದಲ್ಲಿ ಕುರಿಕಾಯುವವಳಾಗಿದ್ದ ಫೆಬೆ ತನ್ನ ಪ್ರಿಯಕರ ಸಿಲ್ವಿಯುಸ್ ನನ್ನು ಬಿಟ್ಟು ಗೆನ್ನಿಮೆಡೆಯೊಂದಿಗೆ ಪ್ರೇಮ ಮಾಡಲು ಆರಂಭಿಸುತ್ತಾಳೆ.(ಇಲ್ಲಿ ನಿಜವಾಗಿಯೂ ರೊಸಾಲಿಂಡಾ ಇರುತ್ತಾಳೆ.)ಇಲ್ಲಿ "ಗೆನ್ನಿಮೆಡೆ" "ಆತನ"ಗೆ ಫೆಬೆಯಲ್ಲಿ ಆಸಕ್ತಿಯಿಲ್ಲ ಎಂದು ಪದೇ ಪದೇ ಹೇಳಿದರೂ ಅದು ಫಲಿಸುವುದಿಲ್ಲ. ಆದರೆ ಸಣ್ಣ ಮನಸ್ಸಿನ ಟಚ್ ಸ್ಟೊನ್ ಆಡುಗಳ ಹಿಂಡಿನ ಹುಡುಗಿ ಔಡ್ರಿಯೆಡೆಗೆ ತನ್ನ ಒಲವನ್ನು ತೋರಿಸಿ ಮದುವೆಯಾಗಲು ಯತ್ನಿಸುತ್ತಾನೆ.ಆದರೆ ಜಕ್ವೆಸ್ ಈತನ ಕನಸುಗಳನ್ನು ನುಚ್ಚು ನೂರು ಮಾಡಲು ಮುಂದಾಗುತ್ತಾನೆ. ಕೊನೆಯಲ್ಲಿ ಸಿಲ್ವಿಯಸ್ ,ಫೆಬೆ,ಗೆನ್ನಿಮೆಡೆ ಮತ್ತು ಒರ್ಲ್ಯಾಂಡೊ ಅವರುಗಳು ಯಾರನ್ನು ಯಾರು ಪಡೆಯಬೇಕೆಂಬುದರ ಬಗ್ಗೆ ನಿರ್ಧಾರಕ್ಕೆ ಬರುತ್ತಾರೆ. ಗೆನ್ನಿಮೆಡೆ ತಾನ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳುತ್ತಾನೆ.ಒರ್ಲ್ಯಾಂಡೊ ಕೊನೆಗೆ ರೊಸಾಲಿಂಡಾಳನ್ನು ಮದುವೆಯಾಗಲು ಭರವಸೆ ನೀಡುತ್ತಾನೆ.ತಾನು ಗೆನ್ನಿಮೆಡೆಯನ್ನು ಮದುವೆಯಾಗದಿದ್ದರೆ ಸಿಲ್ವಿಯಸ್ ನನ್ನು ಮದುವೆಯಾಗುವುದಾಗಿ ಫೆಬೆ ಹೇಳುತ್ತಾಳೆ. ಮರುದಿನ ಗೆನ್ನಿಮೆಡೆಯು ತಾನು ರೊಸಾಲಿಂಡಾ ಎಂದು ಬಹಿರಂಗಪಡಿಸಿದಾಗ ಫೆಬೆಗೆ ತನ್ನ ಸುಳ್ಳು ಪ್ರೇಮದ ಅರಿವಾಗಿ ಸಿಲ್ವಿಯಸ್ ನೊಂದಿಗೆ ಒಂದಾಗುತ್ತಾಳೆ. ಒರ್ಲ್ಯಾಂಡೊ,ಆಲಿವರ್ ನನ್ನು ಅರಣ್ಯದಲ್ಲಿ ನೋಡುತ್ತಾನೆ.ಅಲ್ಲಿ ಆತನನ್ನು ಹೆಣ್ಣು ಸಿಂಹದ ಬಾಯಿಯಿಂದ ರಕ್ಷಿಸುತ್ತಾನೆ.ಇದರಿಂದಾಗಿ ಒರ್ಲ್ಯಾಂಡೊನನ್ನು ನಿರ್ಲಕ್ಷ ಮಾಡಿದ್ದ ಬಗ್ಗೆ ಪಶ್ಚಾತ್ತಾಪ ಪಡುತ್ತಾನೆ.(ಹಲವಾರು ನಿರ್ದೇಶಕರು ಇದನ್ನು ನೈಜ ಘಟನೆಗಿಂತ ಕಥೆಯೆಂದೇ ತಿಳಿಯುತ್ತಾರೆ.) ಒಲಿವರ್ ಅಲೈನಾಳನ್ನು ಭೇಟಿ ಮಾಡುತ್ತಾನೆ.(ಸೆಲಿಯಾನ ನಕಲಿ ವೇಷ ಇದಾಗಿತ್ತು.)ನಂತರ ಅವಳೊಂದಿಗೆ ಪ್ರೇಮ ಪಾಶದಲ್ಲಿ ಬೀಳುತ್ತಾನೆ. ಒರ್ಲ್ಯಾಂಡೊ ಮತ್ತು ರೊಸಾಲಿಂಡ್ ,ಆಲಿವರ್ ಮತ್ತು ಸೆಲಿಯಾ,ಸಿಲ್ವಿಯಸ್ ಮತ್ತು ಫೆಬೆ ಮತ್ತು ಟಚ್ ಸ್ಟೋನ್ ಮತ್ತು ಔಡ್ರೆಯೆ ಎಲ್ಲರೂ ಕೊನೆಯ ದೃಶ್ಯದಲ್ಲಿ ಮದುವೆಯಾಗುತ್ತಾರೆ.ನಂತರ ಫ್ರೆಡ್ರಿಕ್ ಕೂಡಾ ತನ್ನ ತಪ್ಪುಗಳಿಗಾಗಿ ಪಶ್ಚಾತ್ತಾಪವಾಗಿದೆ ಎಂಬುದನ್ನು ಎಲ್ಲರೂ ಮನಗಂಡರು.ಅಲ್ಲದೇ ಆತನ ಖಾಸಾ ಸಹೋದರ ಡ್ಯುಕ್ ಡಾಮ್ ನನ್ನು ಸೇರಿದಂತೆ ಎಲ್ಲರೂ ಉತ್ತಮ ಧಾರ್ಮಿಕ ಬದುಕು ನಡೆಸಲು ಅಣಿಯಾದರು. ಜಾಕ್ವೆಸ್ ಕೂಡಾ ತನ್ನ ವಿಷಣ್ಣತೆಯನ್ನು ಮರೆತನಲ್ಲದೇ ಇವರ ಆಹ್ವಾನವನ್ನು ಮನ್ನಿಸಿ ತನ್ನ ಅರಣ್ಯ ಜೀವನಕ್ಕೆ ವಿದಾಯ ಹೇಳಿ ಆಸ್ಥಾನಕ್ಕೆ ಮರಳಿದ.ಮತ್ತೆ ಧಾರ್ಮಿಕ ಬದುಕು ನಡೆಯಿಸಲು ನಿರ್ಧರಿಸಿದ.
ದಿನಾಂಕ ಮತ್ತು ವಸ್ತು ವಿಷಯ
[ಬದಲಾಯಿಸಿ]ಈ ನಾಟಕವು ಸ್ಟೇಶನರಿ ಕಂಪನಿಯ ನೊಂದಣಿಯಲ್ಲಿ ಆಗಷ್ಟ್ ೪,೧೬೦೦ರಲ್ಲಿ ಸೇರಿಕೊಂಡಿತು.ಆದರೆ ಅದು ತನ್ನ ಮೊದಲ ಖಾತಾ ಪುಟಗಳಲ್ಲಿ ಸೇರಿದ ನಂತರ ೧೬೨೩ರಲ್ಲಿ ಪ್ರಕಟಗೊಂಡಿತು.
ಸನ್ನಿವೇಶ
[ಬದಲಾಯಿಸಿ]ಅರ್ಡೆನ್ ಎನ್ನುವುದು ಶೆಕ್ಸ್ ಪಿಯರ್ ನ ಸ್ವಂತ ಊರಿಗೆ ಸಮೀಪದಲ್ಲಿನ ಸ್ಟ್ರಾಟ್ ಫೊರ್ಡ್ ಅಪಾನ್ -ಅವಾನ್ ಎಂಬುದನ್ನು ಈ ಕಾಡು ಪ್ರದೇಶವನ್ನು ಈ ನಾಟಕದಲ್ಲಿ ಬಳಸಲಾಗಿದೆ. ಆದರೆ ಆಕ್ಸ್ ಫರ್ಡ್ ಶೆಕ್ಸ್ ಪಿಯರ್ ನ ಸಂಪುಟವು 'ಆರ್ಡೆನ್ 'ಎನ್ನುವ ಭೌಗೊಳಿಕ ಪ್ರದೇಶವು ನಂತರ ಇಂಗ್ಲೀಷಿಕರಣಗೊಂಡಿರಬಹುದು.ಆದರೆ ಆರ್ಡೆನ್ನೆಸ್ ಎಂಬ ಅರಣ್ಯ ಪ್ರದೇಶವು ಫ್ರಾನ್ಸ್ ನಲ್ಲಿದ್ದು ಇದು ನಂತರ ಉಚ್ಚಾರಣೆ ಹಾಗು ಪದ ಜೋಡನೆಯಿಂದ ಹೀಗಾಗಿರಬಹುದು ಎಂದೂ [೨]ಹೇಳಲಾಗುತ್ತಿದೆ. ಇನ್ನುಳಿದ ಸಂಪುಟಗಳು ಶೆಕ್ಸ್ ಪಿಯರ್ ನ 'ಆರ್ಡೈನ್ 'ಪದ ಗುಚ್ಚವನ್ನು ಕ್ರಿಶ್ಚಯನ್ ಧರ್ಮ ಗುರುಗಳ ಪುಸ್ತಕ ಹಾಗು ಅವರ ಅಭಿವ್ಯಕ್ತಿಯನ್ನು ತೋರಿಸುತ್ತವೆ.ಇದು ಅದ್ಭುತ ಜಗತ್ತನ್ನು ತೋರಿಸುವ ವೇಳೆ ಪ್ರಾದೇಶಿಕ ವರ್ಣನೆಯ ಬಗ್ಗೆ ಮಹತ್ವ ಕೊಡುವದಿಲ್ಲ. ಶೆಕ್ಸಪಿಯರ್ ನ ಆರ್ಡೆನ್ ಸಂಪುಟದಲ್ಲಿ ಆದರೆ ಇದು ವಿಶೇಷ ಪ್ರಾದೇಶಿಕತೆಯನ್ನು ಅಂದರೆ ಆರ್ಕೇಡ್ ಪ್ರದೇಶ ಮತ್ತು ಬೈಬಲ್ ನ ಗಾರ್ಡನ್ ಆಫ್ ಈಡನ್ ಮತ್ತು ಅಲ್ಲಿನ ಕ್ರಿಶ್ಚಿಯನ್ ನಂಬುಗೆಯ ಪದ್ದತಿಗಳು ಇದನ್ನು ಅನುಸರಿಸುತ್ತಿದೆ. ಇನ್ನೂ ಹೆಚ್ಚೆಂದರೆ ಶೆಕ್ಸ್ ಪಿಯರ್ ನ ತಾಯಿಯ ಹೆಸರು ಕೂಡಾ ಮೇರಿ ಆರ್ಡೆನ್ ,ಇಲ್ಲಿ ಆ ಕಾಡು ಪ್ರದೇಶದ ಹೆಸರೂ ಅದಕ್ಕೆ ಹೊಂದಾಣಿಕೆಯಾಗುವುದನ್ನು ನೋಡಿದರೆ ಕಾಕತಾಳೀಯ [ಸೂಕ್ತ ಉಲ್ಲೇಖನ ಬೇಕು]ಎನಿಸುತ್ತದೆ.
ನಿರ್ವಹಣೆ
[ಬದಲಾಯಿಸಿ]ಈ ನಾಟಕವನ್ನು ಕಾಯ್ದಿಡುವ ಮುಂಚೆ ಬಹುಶ: ಯಾವುದೇ ರಂಗಪ್ರಯೋಗಗಳಾಗಿರಲಿಲ್ಲ ಎಂದು ಹೇಳಲಾಗುತ್ತದೆ. ವಿಲ್ಟ್ಸ್ ಶೈರ್ ನಲ್ಲಿನ ವಿಲ್ಟನ್ ಹೌಸ್ ನಲ್ಲಿ ಒಂದು ಪ್ರಯೋಗವಾದ ಬಗ್ಗೆ ಸಂಭವವಿದೆ.ಇದು ಅರ್ಲ್ಸ್ ನ ಪೆಂಬ್ರೊಕೆ ಯ ಅಧಿಕಾರ ಗದ್ದುಗೆ. ಪೆಂಬ್ರೊಕೆಯ ಮೂರನೆಯ ಆಡಳಿತಗಾರ ವಿಲಿಯಮ್ ಹರ್ಬರ್ಟ್ ಜೇಮ್ಸ್ I ನನ್ನು ತನ್ನ ಅತಿಥಿಯನ್ನಾಗಿ ಆಹ್ವಾನಿಸಿದ್ದ.ಸುಮಾರು ೧೬೦೩ರ ಆಕ್ಟೊಬರ್ ದಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ಆತ ತನ್ನ ಅತಿಥಿ ಸತ್ಕಾರ ಮಾಡಿದ.ಇದೇ ಸಂದರ್ಭದಲ್ಲಿ ಲಂಡನ್ ನ ಜಾಕೊಬಿಯನ್ ಬುಬೊನಿಕ್ ತೀವ್ರ ಪ್ಲೇಗ ನಿಂದ ಬಳಲುತ್ತಿದ್ದ. ಆಗ ರಾಜನ ಅನುಯಾಯಿಗಳು £೩೦ನ್ನು ನೀಡಿ ವಿಲ್ಟನ್ ಹೌಸ್ ಗೆ ಬಂದು ಇದನ್ನು ಅಭಿನಯಿಸಿ ತೋರಿಸುವಂತೆ ಡಿಸೆಂಬರ್ ೨, ೧೬೦೩ರಲ್ಲಿ ಮನವಿ ಮಾಡಿದ್ದರು. ಹೆರ್ಬರ್ಟ್ ಕುಟುಂಬದ ಮೂಲದ ಪ್ರಕಾರ ಆ ರಾತ್ರಿ ಆಸ್ ಯು ಲೈಕ್ ಇಟ್ ನಾಟಕವನ್ನು ಅಂದು [೩]ಅಭಿನಯಿಸಿದ್ದರು. ಇಂಗ್ಲಿಷ್ ಕಾಯ್ದಿಡುವ ಅವಧಿಯು ಸಂದರ್ಭದಲ್ಲಿ ರಾಜನ ಪರಿಚಾರಕರು ರಾಜನ ಸಮರ್ಥನೆಯ ಮೇರೆಗೆ ೧೬೬೯ರಲ್ಲಿ ಇದನ್ನು ಆಡಲಾಯಿತೆಂದು ಹೇಳಲಾಗುತ್ತದೆ. ಇದನ್ನು ೧೭೨೩ರಲ್ಲಿ ಡ್ರುರಿ ಲೇನ್ ನಲ್ಲಿ ಇದನ್ನು ಆಡಲಾಯಿತು.ಇದನ್ನು ಲೌ ಇನ್ ಅ ಫಾರೆಸ್ಟ್ ,ಕೊಲ್ಲಿ ಕಿಬ್ಬರ್ ನಲ್ಲಿ ಜಾಕ್ವೆಸ್ ಇದರ ಮೂಲ ಪ್ರವರ್ತಕ ಎನ್ನಲಾಗಿದೆ. ಮತ್ತೊಂದು ಡುರ್ರಿ ಲೇನ್ ಪ್ರಾಡಕ್ಷನ್ ಹದಿನೇಳು ವರ್ಷಗಳ ನಂತರ (೧೭೪೦)ರಲ್ಲಿ ಶೆಕ್ಸ್ ಪಿಯರನ್ ಗದ್ಯವನ್ನು [೪]ಮರುಪ್ರಕಟಿಸಲಾಯಿತು. ಇತ್ತೀಚಿನ ಆಸ್ ಯು ಲೈಕ್ ಇಟ್ ನ ನಿರ್ಮಾಣಗಳೆಂದರೆ ಒಲ್ಡ್ ವಿಸಿ ಥೆಯೆಟರ್ ನಿರ್ಮಾಣದಲ್ಲಿ ಎಡಿತ್ ಇವಾನ್ಸ್ ಪಾತ್ರ ಮಾಡಿದ್ದು ೧೯೩೬ರಲ್ಲಿ,ನಂತರ ೧೯೬೧ರಲ್ಲಿ ಶೆಕ್ಸ್ ಪಿಯರ್ ಸ್ಮಾರಕ ಥೆಯೆಟರ್ ನ ನಿರ್ಮಾಣದಲ್ಲಿ ವೆನೆಸ್ಸಾ ರೆಡ್ ಗ್ರೆವ್ ಅವರ ಪಾತ್ರವಿದೆ. ಅತಿ ದೀರ್ಘಕಾಲದ ವರೆಗೆ ನಡೆದ ಬ್ರಾಡ್ ವೆ ನಿರ್ಮಾಪಕರ ನಿರ್ಮಾಣದಲ್ಲಿ ಕಾತ್ ರಿನ್ ಹೆಪ್ ಬರ್ನ್ ರೊಸಾಲಿಂಡಾಳ ಪಾತ್ರ,ಕ್ಲೊರಿಸ್ ಲೀಚ್ ಮನ್ ಸೆಲಿಯಾನ ಪಾತ್ರ,ವಿಲಿಯಮ್ ಪ್ರಿನ್ಸ್ ಒರ್ಲ್ಯಾಂಡೊ ಆಗಿ ಮತ್ತು ಅರ್ನೆಸ್ಟ್ ಥೆಸಿಗರ್ ಜಾಕ್ವೆಸ್ ಅಗಿ ಇದರಲ್ಲಿ ಪಾತ್ರ ನಿರ್ವಹಿದ್ದರು.ಮೈಕೆಲ್ ಬೆಂಟಾಲ್ ಇದನ್ನು ನಿರ್ದೇಶಿಸಿದ್ದರು. ಇದು ೧೯೫೦ರಲ್ಲಿ ೧೪೫ ಪ್ರಯೋಗಗಳನ್ನು ಕಂಡಿತು. ಇನ್ನೊಂದು ಜನಪ್ರಿಯ ನಿರ್ಮಾಪಕರೆಂದರೆ ಸ್ಟ್ರಾಟ್ ಫೊರ್ಡ್ ಒಂಟರಿಯೊದಲ್ಲಿನ ಸ್ಟ್ರಾಟ್ ಫೊರ್ಡ್ ಫೆಸ್ಟಿವಲ್ ೨೦೦೫ರಲ್ಲಿ ಹೆಸರಾಗಿತ್ತು.ಇದು ೧೯೬೦ರಲ್ಲಿ ಆರಂಭಗೊಂಡದ್ದು ಶೆಕ್ಸ್ ಪಿಯರ್ ನ ಗೀತ ರಚನೆಗಳನ್ನು ಬಾರೆನ್ ಕೆಡ್ ಲೇಡೀಸ್ ಬರೆದಿದ್ದರು,ನಂತರ ಇದನ್ನು ಸಂಗೀತಕ್ಕೆ ಅಳವಡಿಸಲಾಯಿತು.
ವಿಮರ್ಶಾತ್ಮಕ ಪ್ರತಿಕ್ರಿಯೆ
[ಬದಲಾಯಿಸಿ]ಪರಿಣತರು ಈ ನಾಟಕದ ಹಲವಾರು ಗುಣಗಳ ಬಗ್ಗೆ ತಮ್ಮ ಅಸಮ್ಮತಿ ತೋರಿದ್ದರು. ಸ್ಯಾಮ್ಯುವಲ್ ಜಾನ್ ಸನ್ ನನ್ನುನ್ ಹಿಡಿದು ಜಾರ್ಜ್ ಬರ್ನಾರ್ಡ್ ಶಾ ನವರೆಗಿನ ವಿಮರ್ಶಕರು ಆಸ್ ಯು ಲೈಕ್ ಇಟ್ ಶೆಕ್ಸ್ ಪಿಯರ್ ನ ಗುಣಮಟ್ಟಕ್ಕೆ ತಕ್ಕುದಾದದಲ್ಲ ಎಂದು ಟೀಕಿಸಿದರು.ಯಾಕೆಂದರೆ ಶೆಕ್ಸ್ ಪಿಯರ್ ಗೆ ಇರುವ ಕಲಾವಂತಿಕೆಯ ಸೊಗಡು ಇದರಲ್ಲಿಲ್ಲ. ಇದು ಕೇವಲ ಜನಸಮೂಹವನ್ನು ಅಕರ್ಷಿಸಲು ಶೆಕ್ಸ್ ಪಿಯರ್ ಇದನ್ನು ಬರೆದಿರಬಹುದೆಂದು ಶಾ ಅಲೋಚಿಸಿದರು.ಈ ಕೃತಿಯು ಕೇವಲ ಒಂದು ಹೇಳಿಕೆಯಂತಿದ್ದು ಅದನ್ನು ಅವರು ತಮಾಷೆಗಾಗಿ ಆಸ್ ಯು ಲೈಕ್ ಇಟ್ ಕಥೆಯು ನಾಟಕಕ್ಕೆ ಹೊಂದಲಾರದೆಂದು ಅವರ ಅಭಿಪ್ರಾಯವಾಗಿತ್ತು. ಈ ನಾಟಕದಲ್ಲಿನ ಪಾತ್ರಗಳ ಅನೈತಿಕತೆಯನ್ನು ಟೊಲ್ ಸ್ಟಾಯ್ ಆಕ್ಷೇಪಿಸಿದರಲ್ಲದೇ ಟಚ್ ಸ್ಟೊನ್ ಪಾತ್ರದ ನಿರಂತರ ವಿದೂಷಕತೆಯನ್ನುಟೀಕಿಸ್ದರು. ಇನ್ನುಳಿದ ವಿಮರ್ಶಕರ ಪ್ರಕಾರಮ್ ಇದರಲ್ಲಿ ಅತ್ಯುತ್ತಮ ಸಾಹಿತ್ಯದ ಮೌಲ್ಯ ಇದರಲ್ಲಿದೆ. ಹಾರೊಲ್ಡ್ ಬ್ಲೂಮ್ ಅವರ ಪ್ರಕಾರ ರೊಸಾಲಿಂಡಾ ಪಾತ್ರವು ಶೆಕ್ಸ್ ಪಿಯರ್ ನ ಅತ್ಯಂತ ಮೆಚ್ಚುಗೆಯ ಮಹಿಳಾ ಪಾತ್ರವಾಗಿದೆ. ಹಲವಾರು ಟೀಕೆಗಳ ಮಧ್ಯೆಯೂ ಈ ಹಾಸ್ಯ ಪ್ರಧಾನ ನಾಟಕವು ಶೆಕ್ಸ್ ಪಿಯರ್ ನ ಅತ್ಯಂತ ಹೆಚ್ಚು ಪ್ರಯೋಗ ಕಾಣುವ ನಾಟಕಗಳಲ್ಲಿ ಒಂದಾಗಿದೆ. ಈ ನಾಟಕಗಳಲ್ಲಿ ಮಹಿಳಾ-ಪುರುಷ ಪಾತ್ರಗಳ ಅದಲು ಬದಲು ಸನ್ನಿವೇಶಗಳು ಆಧುನಿಕ ನಾಟಕಗಳಲ್ಲಿ ಹೊಸ ಆಸಕ್ತಿಯನ್ನು ಹುಟ್ಟಿಸುತ್ತದೆ.ಇದು ಲಿಂಗ ಭೇದದ ಅಧ್ಯಯನಗಳದ ಬಗ್ಗೆ ಬೆಳಕು ಚೆಲ್ಲಿತು. ನಾಟಕದ ನಾಲ್ಕು ಸನ್ನಿವೇಶಗಳಲ್ಲಿ ರೊಸಾಲಿಂಡಾ ಯುವಕನ ಹಾಗೆ ವೇಷ ತೊಟ್ಟದ್ದು ಹಾಗು ಫೆಬೆ (ಈ ಪಾತ್ರವೂ ಹುಡಗನೊಬ್ಬನಿಂದ ಮಾಡಲ್ಪಟ್ಟಿದೆ.)ಹೀಗೆ ಈ ಪಾತ್ರವು "ಗೆನ್ನಿಮೆಡೆ"ಯೊಂದಿಗೆ ತನ್ನ ಪ್ರೇಮ ವನ್ನು ಪ್ರಕಟಿಸುತ್ತದೆ.ಇದನ್ನು ಸಲಿಂಗ ಪ್ರೇಮ ಎಂದೂ ನಾಟಕದ ಮೂಲಕ ವ್ಯಾಖ್ಯಾನಿಸಲಾಗಿದೆ. ಈ ನಾಟಕದಲ್ಲಿನ ಉಪಸಂಹಾರದ ಭಾಗವು ರೊಸಾಲಿಂಡಾಳಿಂದ ಕೊನೆಗಳಿಸಲ್ಪಡುತ್ತದೆ.(ಅಥವಾ ಈ ಪಾತ್ರ ಮಾಡುವತ್ತಿದ್ದವನೊಬ್ಬ ಪುರುಷ) ಎಂಬುದನ್ನು ಪ್ರೇಕ್ಷಕರಿಗೆ ಸಾರಿ ಹೇಳುತ್ತದೆ.
ವಿಷಯಗಳು
[ಬದಲಾಯಿಸಿ]ಧಾರ್ಮಿಕ ಅನ್ಯೋಕ್ತಿ
[ಬದಲಾಯಿಸಿ]ಯುನ್ವರ್ಸಿಟಿ ಆಫ್ ವಿಸ್ಕೊನ್ ಸಿನ್ ನ ಪ್ರೊಫೆಸ್ಸರ್ ರಿಚರ್ಡ್ ನೊವೆಲ್ಸ್ ,೧೯೭೭ರ ನಿವ್ ವೇರಿಯೊರಮ್ ಸಂಚಿಕೆಯ ಸಂಪಾದಕರೂ ಆಗಿದ್ದ ಅವರು ಈ ನಾಟಕವು ಹೇಗೆ ಪೌರಾಣಿಕತೆಯನ್ನು ಆಧರಿಸಿದೆ."ಇದರಲ್ಲಿನ ಮಿಥ್ಯ ಮತ್ತು ಪ್ರಕಾರವು ಆಸ್ ಯು ಲೈಕ್ [೫]ಇಟ್ "ನಲ್ಲಿ ಹಲವಾರು ಪೌರಾಣಿಕ ಉದಾಹರಣೆಗಳನ್ನು ತೆಗೆದುಕೊಂಡಿದೆ.ವಿಶೇಷವಾಗಿ ಈಡನ್ ,ಹರ್ಕ್ಯುಲಸ್ ಮತ್ತು ಕ್ರಿಸ್ತನನ್ನು ಇಲ್ಲಿ ಪರೋಕ್ಷವಾಗಿ ಉಲ್ಲೇಖಿಸಲಾಗಿದೆ. ಹೇಗೆಯಾದರೂ ಇದ್ರಲ್ಲಿನ ಯಾವುದಒ ಧಾರ್ಮಿಕ ಉಕ್ತಿಗಳನ್ನು ಹುಡುಕಲು ಆತ ಅಸಮರ್ಥನಾದರೂ ಇದು ಪೂರ್ಣವಾದ ಧಾರ್ಮಿಕ ಉಕ್ತಿಗಳ ಉಲ್ಲೇಖವಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಇನ್ನುಳಿದ ಕೆಲವರು ಈ ನಾಟಕದಲ್ಲಿ ದೈವಿಕತೆ ಮತ್ತು ಧಾರ್ಮಿಕತೆ ಬಗ್ಗೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸುತ್ತಾರೆ.ಇದನ್ನು ಸೂಕ್ತವಾಗಿ ಭಾಷಾಂತರಿಸಿ ಅದರಲ್ಲಿನ ಮಹತ್ವದ ಅಂಶಗಳನ್ನು ನೋಡುವಂತೆ ಹೇಳಿದ್ದಾರೆ.
ಭಾಷೆ
[ಬದಲಾಯಿಸಿ]ದೃಶ್ಯII,ಸನ್ನಿವೇಶ ೭,ರಲ್ಲಿ ಶೆಕ್ಸ್ ಪಿಯರ್ ನ ಅತ್ಯಂತ ಮೆಚ್ಚ್ಕಿನ ಪ್ರಸಿದ್ದ ಆತ್ಮಗತ ಏಕಾಲಾಪಗಳು ಸಾರುತ್ತವೆ.
- "ಇಡೀ ಜಗತ್ತೇ ಒಂದು ನಾಟಕರಂಗಮಂಚ
- ಮತ್ತು ಎಲ್ಲಾ ಮಹಿಳೆಯರು ಮತ್ತು ಪುರುಷರು ಕೇವಲ ಪಾತ್ರಧಾರಿಗಳು;
- ಅವರವರಿಗೆ ಅವರವರದೇ ಆದ ಹೊರಹೋಗುವ ಮತ್ತು ಪ್ರವೇಶಿಸುವ ಅವಕಾಶಗಳಿವೆ,
- ಮತ್ತು ಒಬ್ಬ ಮನುಷ್ಯ ತನ್ನ ಕಾಲಾವಧಿಯಲ್ಲಿ ಹಲವಾರು ಪಾತ್ರಗಳನ್ನು ಮಾಡುತ್ತಾನೆ,
- "ಆತ ತನ್ನ ಏಳು ಜನ್ಮಗಳಂತೆ ನಾಟಕ ಮಾಡುತ್ತಾನೆ
- ಮತ್ತು ಒಬ್ಬ ಮನುಷ್ಯ ತನ್ನ ಕಾಲಾವಧಿಯಲ್ಲಿ ಹಲವಾರು ಪಾತ್ರಗಳನ್ನು ಮಾಡುತ್ತಾನೆ,
- ಅವರವರಿಗೆ ಅವರವರದೇ ಆದ ಹೊರಹೋಗುವ ಮತ್ತು ಪ್ರವೇಶಿಸುವ ಅವಕಾಶಗಳಿವೆ,
- ಮತ್ತು ಎಲ್ಲಾ ಮಹಿಳೆಯರು ಮತ್ತು ಪುರುಷರು ಕೇವಲ ಪಾತ್ರಧಾರಿಗಳು;
ಇಂತಹ ಪ್ರಸಿದ್ದ ಅನ್ಯೋಕ್ತಿಯು ಜಾಕ್ವೆಸ್ ನಿಂದ ಹೇಳಿಸಲ್ಪಟ್ಟಿದೆ. ಇದು ಕಾಲ್ಪನಿಕ ಮತ್ತು ಆಯಾ ಸಂದರ್ಭಗಳ ಮೂರ್ತತೆಯನ್ನು ಕೇಂದ್ರದ ಉಪಮೆಯಾಗಿ ಕಾಣಿಸುತ್ತದೆ.ಮನುಷ್ಯನ ಜೀವಿತವು ಆತನ ಏಳು ಜನ್ಮಗಳ ಪಾತ್ರಗಳ ವಿಶ್ಲೇಷಣೆಯಾಗಿದೆ. "ಈ ಪಾತ್ರಗಳಲ್ಲಿ "ಸೆನ್ ಏಜಿಸ್ ""ಮಗುವೊಂದು ನರ್ಸ್ ಒಬ್ಬಳ ಬಗಲಲ್ಲಿ ಅಂಟಿಕೊಂಡಿರುವುದು" ಇದನ್ನು ವಿವಿಧ ಆರು ವರ್ಣ ಭಿತ್ತಿಯಲ್ಲಿ ಒಡಮೂಡಿಸಿದ್ದುಹೀಗೆ ಇದು "ಎರಡನೆಯ ಬಾಲ್ಯಾವಸ್ಥೆ ಮತ್ತು ಕೇವಲ ಒಂದು ನೆಪವಾಗಿ ಜನ್ಮದ ಗುರುತು ಇಲಿದ್ದು ದಂತಗಳು,ಕಣ್ಣುಗಳು,ರುಚಿ,ಹಾಗು ಎಲ್ಲವನ್ನೂ ವರ್ಜಿಸುತ್ತಿರುವುದು ಇಲ್ಲಿನ ಉಪಮೆಯಾಗಿದೆ".
ಧಾರ್ಮಿಕ ವಾಡಿಕೆ
[ಬದಲಾಯಿಸಿ]ಈ ಹಾಸ್ಯಭರಿತನಾಟಕದಲ್ಲಿನ ಎಲ್ಲಾ ಪಾತ್ರಗಳು ಗ್ರಾಮೀಣ ಸೊಗಡಿನ ಪ್ರೀತಿ ಉಕ್ಕಿಸಿವೆ.ರೊಸಾಲಿಂಡಾಳ ಪ್ರೀತಿಯು ಒರ್ಲ್ಯಾಂಡೊ ಬಗೆಗಿನ ಪ್ರೇಮಕ್ಕೆ ಸಾಕ್ಷಿಯಾಗಿದೆ.ನಗರ ಹಾಗು ಗ್ರಾಮೀಣರ ಮಧ್ಯದ ಒಲವು ಬೆಸೆವ ಅಜ್ಞಾತವಾಸವನ್ನು ತೋರಿಸುವ ಅರಣ್ಯದ ಸನ್ನಿವೇಶಗಳು ಕಾಲ್ಪನಿಕ ಎನಿಸಿದರೂ ವಾಸ್ತವವನ್ನು ವ್ಯಾಪಿಸಿವೆ.ಇಲ್ಲಿ ಹಾಸ್ಯವೇ ಪ್ರಧಾನವಾಗಿದ್ದರಿಂದ ಯಾವುದೇ ಪಾತ್ರದ ಬೆಳವಣಿಗೆ ಒಂದನ್ನೊಂದು ಹಿಂಬಾಲಿಸುವ ಅಗತ್ಯವಿಲ್ಲ ಎನಿಸುತ್ತದೆ. ಇದರ ಪ್ರಮುಖ ಅಂಶವೆಂದರೆ ಇದು ಒಂದು ಕುಸ್ತಿ ಪಂದ್ಯವನ್ನು ನೆನಪಿಗೆ ತರುತ್ತದೆ,ಈ ಪಂದ್ಯವನ್ನು ಯಾವಾಗಲೂ ಹಾಡೊಂದು ಬಂದು ಅಡತಡೆಯೊಡ್ಡುತ್ತದೆ. ಕೊನೆಯಲ್ಲಿ ವಿವಾಹ ದೇವತೆಯೇ ಅಲ್ಲಿಗೆ ಆಗಮಿಸಿ ಅಲ್ಲಿನ ಮದುವೆಯ ಘಟನಾವಳಿಗಳಿಗೆ ಆಶೀರ್ವಾದ ಮಾಡುತ್ತಾನೆ.
ವಿಲಿಯಮ್ ಶೆಕ್ಸ್ ಪಿಯರ್ ನ ಆಸ್ ಯು ಲೈಕ್ ಇಟ್ ಸ್ಪಷ್ಟವಾಗಿ ವಿದೂಷಕ ರೊಮಾನ್ಸ್ ನ ಹಾದಿಯಲ್ಲಿ ಸಾಗುತ್ತದೆ;ಆದರೆ ಶೆಕ್ಸ್ ಪಿಯರ್ ಇದನ್ನು ಸಾಮಾನ್ಯವಾಗಿ ಬೆಳವಣಿಗೆಯಾಗಿ ಪರಿಗಣಿಸುವದಿಲ್ಲ. ಇಂತಹ ಆಸ್ ಯು ಲೈಕ್ ಇಟ್ ಹಾಸ್ಯಭರಿತ ವಿದೂಷಕ ನಾಟಕಗಳಲ್ಲಿ ಶೆಕ್ಸ್ ಪಿಯರ್ ಸಾಮಾಜಿಕ ಸಂದೇಶವೊಂದನ್ನು ನೀಡಲು ಯತ್ನಿಸಿದ್ದಾನೆ.ಸಮಾಜದಲ್ಲಿ ಬೇರು ಬಿಟ್ಟಿರುವ ಅನ್ಯಾಯ ಮತ್ತು ಅತೃಪ್ತಿಯು ಸದ್ಯದ ಪರಿಸ್ಥಿತಿಗೆ ಕನ್ನಡಿ ಹಿಡಿದಿದ್ದಾನೆ.ಸಮಾಜದ್ರೋಹಿಗಳ ಪರಿಹಾಸ್ಯ ಮಾಡಲು,ಮೂರ್ಖತನವನ್ನು ಹೊರಗೆಳೆಯಲು,ಸ್ವಯಂ ನಾಶದ ಪ್ರವೃತ್ತಿಯನ್ನು ಹೊಡೆದೊಡಿಸಲು ಇಲ್ಲಿಪ್ರಯತ್ನಿಸಲಾಗಿದೆ.ಸಾಂಪ್ರದಾಯಿಕ ರೊಮಾಂಟಿಕ್ ಕವಿ ಪೆಟ್ರಾರ್ಕ್ ಇಲ್ಲಿ ಸಾಂಕೇತಿಕವಾಗಿ ನೆನಪಿಗೆ [೬]ಬರುತ್ತಾನೆ.
ಈ ತೆರನಾದ ಹಗುರ ಗುಣಮಟ್ಟದ ಪಾತ್ರಗಳ ಸೃಷ್ಟಿಗೆ ಶೆಕ್ಸ್ ಪಿಯರ್ ಮತ್ತು ಆತನ ವೀಕ್ಷಕರು ಹೊಂದಿಕೊಂಡು ಬಿಟ್ಟಿದ್ದಾರೆ.ಇದೊಂದು ಅತಿ ಸರಳ ಹಾಸ್ಯ ಪ್ರಸಂಗವಾದರೂ ಇದರ ಗದ್ಯದ ಆಳದಲ್ಲಿ ಅತ್ಯುತ್ತಮ ಗುಣಲಕ್ಷಣಗಳಿವೆ.ಈ ಅನ್ಯೋಕ್ತಿಯ ಕೊನೆಯು ಸಾಮಾಜಿಕ ಕಾಳಜಿಯ ಪ್ರತೀಕವಾಗಿದೆ. ಇಲ್ಲಿ ರೊಸಾಲಿಂಡಾಳ ಆಶಾವಾದಿತ್ವವು ಜಾಕ್ವೆಸ್ ನ ಮಹಿಳಾದ್ವೇಶಿ ವಿಷಣ್ಣತೆಗೆ ವ್ಯತಿರಿಕ್ತವಾಗಿ ನಿಲ್ಲುತ್ತದೆ. ಶೆಕ್ಸ್ ಪಿಯರ್ ಕೆಲವು ನಾಟಕದ ಗದ್ಯಗಳಲ್ಲಿ ತೀವ್ರವಾದ ಗಂಭೀರತೆ ಇದೆ,ನಂತರದ ಆತನ ಬರಹಗಳಲ್ಲಿ ಡ್ಯುಕ್ ಮತ್ತು ಡ್ಯುಕ್ ನ ಅಜ್ಞಾತವಾಸಗಳು ಮೀಜರ್ ಫಾರ್ ಮೀಜರ್ ಮತ್ತು ದಿ ಟೆಂಪೆಸ್ಟ್ ಗಳಿಗೆ ಮುಖ್ಯ ಕಥಾವಸ್ತಾಗಿತ್ತು. ಈ ನಾಟಕದಲ್ಲಿ ಹಲವಾರು ಆಕಸ್ಮಿಕ ವ್ಯಾಜ್ಯಗಳು ಮತ್ತು ಪ್ರೀತಿ ಪ್ರೇಮದ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತವೆ.ಇಲ್ಲಿ ಹಾಸ್ಯದ ಹೊನಲನ್ನು ಹರಿಸುವ ಸನ್ನಿವೇಶಗಳು ನಡೆಯುತ್ತವೆ.ಇಂತಹ ಸನ್ನಿವೇಶಗಳನ್ನು ಉದ್ಯಾನ ವನ ಅಥವಾ ತೆರೆದ ಮೈದಾನದಲ್ಲಿ ಪ್ರಯೋಗಿಸಬಹುದು.
ರೂಪಾಂತರಗಳು
[ಬದಲಾಯಿಸಿ]ಸಂಗೀತ
[ಬದಲಾಯಿಸಿ]ಡೊನೊವಾನ್ ನ್ನು "ದಿ ಗ್ರೀನ್ ವುಡ್ ಟ್ರೀ" ಅಡಿಯಲ್ಲಿ ಸಂಗೀತ ಸಂಕಲನವನ್ನೂ ಮಾಡಲಾಯಿತು.೧೯೬೮ರಲ್ಲಿ ಇದನ್ನು ಎ ಗಿಫ್ಟ್ ಫ್ರಾಮ್ ಎ ಫ್ಲಾವರ್ ಟು ಎ ಗಾರ್ಡನ್ ಎಂದು ಹೇಳಲಾಗುತ್ತದೆ. ಥಾಮಸ್ ಮೊರ್ಲಿ (ಸಿ.೧೫೫೭-೧೬೦೨) "ಇಟ್ ವಾಜ್ ಎ ಲವರ್ ಅಂಡ್ ಹೀಸ್ ಲಾಸ್ "ಗಾಗಿ ಸಂಗೀತ ಸಂಯೋಜನೆ ಮಾಡಿದ.ಆತ ಶೆಕ್ಸ್ ಪಿಯರ್ ನ ತರಹ ಬದುಕನ್ನು ಸಾಗಿಸಿದ.ಅದೇ ಸಂದರ್ಭದಲ್ಲಿ ಶೆಕ್ಸಪಿಯರ್ ನ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ.
ರೇಡಿಯೋ
[ಬದಲಾಯಿಸಿ]ಇತಿಹಾಸದ ಪ್ರಕಾರ ರೇಡಿಯೊ ಕೇಂದ್ರ U.S. stateನಲ್ಲಿದ್ದ ಮಿನ್ನೆಸೊಟಾ WCAL,ಆಸ್ ಯು ಲೈಕ್ ಇಟ್ ನಾಟಕವು ಮೊದಲ ಬಾರಿಗೆ ರೇಡಿಯೊ ಮೂಲಕ ಪ್ರಸಾರವಾಯಿತೆನ್ನಲಾಗಿದೆ. ಸುಮಾರು ೧೯೨೨ರಲ್ಲಿ ಇಡೀ ರೇಡಿಯೊ ಕೇಂದ್ರಗಳಲ್ಲಿ ಪ್ರಸಾರಗೊಂಡಿತು.
ಚಲನಚಿತ್ರ
[ಬದಲಾಯಿಸಿ]ಲಾರೆನ್ಸ್ ಆಲಿವರ್ ನ ಮೊಟ್ಟಮೊದಲ ಶೆಕ್ಸ್ ಪಿಯರ್ ನ ಚಿತ್ರ ಆಸ್ ಯು ಲೈಕ್ ಇಟ್ ತೆರೆ ಕಂಡಿತು.ಅದನ್ನು ನಿರ್ಮಾಣ ಮತ್ತು ನೆರ್ದೇಶನ ಮಾಡುವುದಕ್ಕಿಂತ ಹೆಚ್ಚಾಗಿ ಅದರಲಿ ತಾನೇ ನಟಿಸಿದ. ಇದನ್ನು UKನಲ್ಲಿ ತಯಾರಿಸಿ ೧೯೩೬ರಲ್ಲಿ ಬಿಡುಗಡೆ ಮಾಡಲಾಯಿತು.ಇದರ್ಫಲ್ಲಿ ನಿರ್ದೇಶಕ ಪೌಲ್ ಜಿನ್ನರ್ ನ ಪತ್ನಿ ಎಲಿಜಾಬೆತ್ ಬೆರ್ಗರ್ನರ್ ರೊಸಾಲಿಂಡಾಳ ಪಾತ್ರವನ್ನು ಜರ್ಮನ್ ಸಂಸ್ಕೃತಿಯನ್ನು ಗಾಢವಾಗಿ ಮೈಗೂಡಿಸಿಕೊಂಡಿದ್ದಳು. ಇದು "ಹಾಲಿವುಡ್ "ಚಿತ್ರಗಳಿಗಿಂತ ಕಡಿಮೆ ಎನಿಸಿದರೂ ಅದೇ ವೇಳೆಯಲ್ಲಿ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಮತ್ತು ರೊಮಿಯೊ ಮತ್ತು ಜೂಲಿಯಟ್ ಗಳನ್ನು ಆಗ ನಿರ್ಮಿಸಲಾಯಿತು.ಇದರಲ್ಲಿ ಶೆಕ್ಸ್ ಪಿಯರ್ ನ ಕಲಾವಿದರೇ ಹೆಚ್ಚ್ಕಾಗಿ ಅಭಿನಯಿಸಿದ್ದರು.ಆದರೆ ಇದು ಆಲಿವರ್ ಗಾಗಲಿ ಇಲ್ಲವೇ ವಿಮರ್ಶಕರಿಗಾಗಲೀ ಯಾವುದೇ ಯಶಸ್ವು ತರಲಿಲ್ಲ. [೭]ಸುಮಾರು 1978 BBC ವಿಡಿಯೊ ಟೇಪ್ಡ್ ಆವೃತ್ತಿಯ ಆಸ್ ಯು ಲೈಕ್ ಇಟ್ ನಲ್ಲಿ ಹೆಲೆನ್ ಮಿರ್ರೆನ್ ರೊಸಿಲ್ಯಾಂಡ್ ಳ ಪಾತ್ರ ನಿರ್ವಹಿಸಿದಳು.ಇದನ್ನು ಬ್ಯಾಸಿಲ್ ಕೊಲೆಮನ್ [೮]ನಿರ್ದೇಶಿಸಿದರು. ಕ್ರಿಸ್ಟೈನ್ ಎಡ್ಜರ್ಡ್ ೧೯೯೨ರಲ್ಲಿ ಈ ನಾಟಕದ ಅಂಶಗಳನ್ನು ಯಥಾವತ್ತುಗೊಳಿಸಿ ಚಿತ್ರ ನಿರ್ಮಿಸಲಾಯಿತು. ಇದರಲ್ಲಿ ಜೇಮ್ಸ್ ಫಾಕ್ಸ್ ,ಸಿರಿಯಲ್ ಕುಸೆಕ್ ,ಆಂಡ್ರೆವ್ ಟೆರ್ನಾನ್ ,ಗ್ರಿಫ್ ರಿಸ್ ಜೋನ್ಸ್ ಮತ್ತು ಎವಾನ್ ಬ್ರೆಮ್ನರ್ ಅವರುಗಳು ಅಭಿನಯಿಸಿದ್ದರು. ಇದರಲ್ಲಿನ ಕ್ರಿಯೆಗಳು ಆಧುನಿಕ ಮತ್ತು ಮಂದ ನಗರಾಭಿವೃದ್ಧಿ ವಿಶ್ವದಲ್ಲಿ ಹೊಸತನ ಮೂಡಿಸಿತು. ಆಸ್ ಯು ಲೈಕ್ ಇಟ್ ನ ಒಂದು ಆವೃತ್ತಿಯು ೧೯ನೆಯ ಶತಮಾನದಲ್ಲಿ ಜಪಾನ್ ನಲ್ಲಿ ೨೦೦೬ರಲ್ಲಿ ಇದರ ಬಿಡುಗಡೆಯಾಯಿತು.ಇದನ್ನು ಕೆನ್ನೆಥ್ ಬ್ರನಘ್ ನಿರ್ದೇಶಿಸಿದ್ದಾರೆ. ಇದರಲ್ಲಿ ಬ್ರೆಸ್ ಡಾಲ್ಲಾಸ್ ಹಾವರ್ಡ್ ,ಡೆವಿಡ್ ಒವೆಲೊವೊ,ರೊಮೊಲಾ ಗರೈ,ಆಲ್ಫ್ರೆಡ್ ಮೊಲಿನಾ,ಕೆವಿನ್ ಕ್ಲೈನ್ ಮತ್ತು ಬ್ರೇನ್ ಬ್ಲೆಸ್ಸಡ್ ಅಭಿನಯಿಸಿದ್ದರು. ಇದು ಕೇವಲ ಸಸಿನೆಮಾಗಳಿಗಾಗಿ ಮಾಡಲಾಗಿತ್ತು.iಇದು ಕೇವಲ ಯುರೊಪ್ ನ ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಯಿತು.ಅದೂ ಅಲ್ಲದೇ HBOನ U.S.ಪ್ರಿಮಿಯರ್ ನಲ್ಲಿ ೨೦೦೭ರಲ್ಲಿ ಪ್ರಸಾರ ಕಂಡಿತು.
ಸಂಗೀತ ರಂಗಮಂದಿರ
[ಬದಲಾಯಿಸಿ]ಡೇನಿಯಲ್ ಅಕ್ವಿಸಿಟೊ ಮತ್ತು ಸಾಮ್ಮಿ ಬಕ್ ಇಬ್ಬರು ೮೦ರ ದಶಕಗಳಲ್ಲಿ "ಲೈಕ್ ಯು ಲೈಕ್ ಇಟ್ "ಎಂಬ ಸಂಗೀತ ನಾಟಕವನ್ನು ಪ್ರಚುರಪಡಿಸಿದರು. [೯]
ವರ್ಣಚಿತ್ರದ ಕಾದಂಬರಿ
[ಬದಲಾಯಿಸಿ]ಒಂದು(ಜಪಾನಿ ಶೈಲಿಯ ಕಾಮಿಕ್ ) ಮಾಂಗಾ-ಶೈಲಿಯ ವರ್ಣಚಿತ್ರದ ಕಾದಂಬರಿಯನ್ನು ೨೦೦೯ರಲ್ಲಿ ಬಿಡುಗಡೆಯಾಯಿತು.ಇದನ್ನು ಸೆಲ್ಫ್ -ಮೇಡ್ ಹಿರೊ ಪ್ರಕಾಶಕರು ಪರಕಟಿಸಿದರು.ಇದರಲ್ಲಿನ ಫಾರೆಸ್ಟ್ ಆಫ್ ಆರ್ಡೆನ್ ನ ಪರಿಕಲ್ಪನೆಯು ಆಧುನಿಕ ಚೀನಾಕ್ಕೆ ರವಾನೆಯಾಯಿತು. ರಿಚರ್ಡ್ ಆಪ್ಪಿಗ್ನಾನೆಸ್ ಅವರಿಂದ ಕಥೆ ಎರವಲು ಪಡೆಯಲ್ಪಟ್ಟಿತು.ಚೆ ಕುತ್ಸುವಾಡಾ ದ ವಿವರ ವರ್ಣಚಿತ್ರ ಆಗ ಹೊರಬಂತು.
ಆಕರಗಳು
[ಬದಲಾಯಿಸಿ]- ↑ ಡೊಲೊನ್ , ಫ್ರಾನ್ಸಿಸ್ E. "ಇಂಟ್ರಡಕ್ಷನ್" in ಶೆಕ್ಸ್ ಪಿಯರ್, ಆಸ್ ಯು ಲೈಕ್ ಇಟ್ . ನ್ಯುಯಾರ್ಕ್ : ಪೆಂಗ್ವಿನ್ ಬುಕ್ಸ್, ೨೦೦೦.
- ↑ Bate, Jonathan (2008). Soul of the Age: the life, mind and world of William Shakespeare. London: Viking. p. 37. ISBN 978-0-670-91482-1.
- ↑ ಎಫ್. ಇ. ಹ್ಯಾಲ್ಲಿಡೇ , ಎ ಶೆಕ್ಸ್ ಪಿಯರ್ ಕಂಪಾನಿಯನ್ ೧೫೬೪–೧೯೬೪, ಬಾಲ್ಟಿಮೊರೆ, ಪೆಂಗ್ವಿನ್, ೧೯೬೪; p. ೫೩೧.
- ↑ ಹ್ಯಾಲ್ಲಿ ಡೇ,ಶೆಕ್ಸ್ ಪಿಯರ್ ಕಂಪಾನಿಯನ್, p. ೪೦.
- ↑ ELH , volume ೩೩, March (೧೯೬೬) pp ೧-೨೨
- ↑ Sarah Clough. "As You Like It: Pastoral Comedy, The Roots and History of Pastoral Romance". Sheffield Theatres. Archived from the original on 2008-10-11. Retrieved 2008-08-10.
- ↑ ಆಸ್ ಯು ಲೈಕ್ ಇಟ್ (೧೯೭೮) at the ಇಂಟರ್ ನೆಟ್ ಮೂವಿಸ್ ಡಾಟಾಬೇಸ್, http://www.imdb.com/title/tt0077180/
- ↑ ಆಸ್ ಯು ಲೈಕ್ ಇಟ್ (1978) at the ಇಂಟರ್ ನೆಟ್ ಮೂವಿಸ್ ಡಾಟಾಬೇಸ್, http://www.imdb.com/title/tt0077180/
- ↑ "Sammy Buck". Sammy Buck. 2007-05-29. Archived from the original on 2011-06-02. Retrieved 2009-04-23.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಆಯ್‌ಸ್ ಯು ಲೈಕ್ at the Internet Broadway Database
- ಆಯ್‌ಸ್ ಯು ಲೈಕ್ at the Internet off-Broadway Database
- ಆಯ್‌ಸ್ ಯು ಲೈಕ್ @ ಐ ಎಮ್ ಡಿ ಬಿ
- ಆಸ್ ಯು ಲೈಕ್ ಇಟ್ Archived 2010-05-26 ವೇಬ್ಯಾಕ್ ಮೆಷಿನ್ ನಲ್ಲಿ. - searchable e-text
- ಆಸ್ ಯು ಲೈಕ್ ಇಟ್ - HTML ಈ ಶೀರ್ಷಿಕೆಯ ಆವೃತ್ತಿ.
- ಆಸ್ ಯು ಲೈಕ್ ಇಟ್ Archived 2008-08-29 ವೇಬ್ಯಾಕ್ ಮೆಷಿನ್ ನಲ್ಲಿ. - ಸರಳ ವನ್ನಿಲಾ ಟೆಕ್ಸ್ಟ್ ಪ್ರೊಜೆಕ್ಟ್ ಗುಟೆನ್ ಬರ್ಗ್ನಿಂದ
- MaximumEdge.com - scene-indexed, searchable version of the play
- "ಕ್ಯಾರಕ್ಟರ್ ಆಫ್ ಲೈಫ್" ಆಸ್ ಯು ಲೈಕ್ ಇಟ್ ನಲ್ಲಿ ಹುಮನ್ ಸೈನ್ಸ್ ವಿಕಿಯಾದಲ್ಲಿ
- ಲೆಸ್ಸನ್ ಪ್ಲಾನ್ಸ್ ಫಾರ್ ಆಸ್ ಯು ಲೈಕ್ ಇಟ್ at Web English Teacher
- ಪ್ರೀತಿಯ ಪರಿಕಲ್ಪನೆಯ ಮೇಲಿನ ಹಲವಾರು ವಿಭಿನ್ನತೆಗಳು Archived 2005-04-05 ವೇಬ್ಯಾಕ್ ಮೆಷಿನ್ ನಲ್ಲಿ."ನಾಟಕ್ಕಕ್ಕೊಂದು ಪರಿಚಯದ ಸೂತ್ರ ಮತ್ತು ಆಯಾ ಕಾಲದ ಧಾರ್ಮಿಕತೆಯ ಕುರಿತ ಹಾಸ್ಯದ ತಿಳಿವು
- Articles with hatnote templates targeting a nonexistent page
- Articles with unsourced statements from November 2009
- Articles with invalid date parameter in template
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Commons link is locally defined
- Commons category with page title different than on Wikidata
- IMDb template with no id set
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- 1600 ನಾಟಕಗಳು
- ಇಂಗಿಷ್ ರೆನೇಸ್ಸನ್ಸ್ ನಾಟಕಗಳು
- ಶೆಕ್ಸ್ ಪಿಯರಿನ್ ಕಾಮಿಡೀಸ್
- ಕ್ರೈಸ್ತ ಧರ್ಮ
- ನಾಟಕ ಸಾಹಿತ್ಯ