ಆಲಿವ್ ಎಣ್ಣೆ
ಗೋಚರ
ಆಲಿವ್ ಎಣ್ಣೆಯು ಮೆಡಿಟರೇನಿಯನ್ ಜಲಾನಯನ ಪ್ರದೇಶದ ಒಂದು ಸಾಂಪ್ರದಾಯಿಕ ಮರ ಬೆಳೆಯಾದ ಆಲಿವ್‍ನಿಂದ (ಓಲಿಯಾ ಎವ್ರೊಪೇಯಾದ ಹಣ್ಣು; ಓಲಿಯೇಸಿಯಿ ಕುಟುಂಬ) ಪಡೆಯಲಾದ ಒಂದು ಕೊಬ್ಬು. ಈ ಎಣ್ಣೆಯನ್ನು ಇಡಿಯಾದ ಆಲಿವ್‍ಗಳನ್ನು ಒತ್ತಿ ಉತ್ಪಾದಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಅಡುಗೆ, ಸೌಂದರ್ಯವರ್ಧಕಗಳು, ಔಷಧ ವಸ್ತುಗಳು, ಮತ್ತು ಸಾಬೂನುಗಳಲ್ಲಿ, ಹಾಗೂ ಸಾಂಪ್ರದಾಯಿಕ ಎಣ್ಣೆ ದೀಪಗಳಿಗಾಗಿ ಒಂದು ಇಂಧನವಾಗಿ ಬಳಸಲಾಗುತ್ತದೆ. ಆಲಿವ್ ಎಣ್ಣೆಯನ್ನು ವಿಶ್ವದಾದ್ಯಂತ ಬಳಸಲಾಗುತ್ತದೆ ಮತ್ತು ಹಲವುವೇಳೆ ಇದನ್ನು ಮೆಡಿಟರೇನಿಯನ್ ದೇಶಗಳಿಗೆ ಸಂಬಂಧಿಸಲಾಗುತ್ತದೆ.