ವಿಷಯಕ್ಕೆ ಹೋಗು

ಆಫ್ರಿಕದ ಭಾಷೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಪಂಚದ ಸುಮಾರು ಎರಡು ಸಾವಿರದ ಎಂಟುನೂರು ಭಾಷೆಗಳಲ್ಲಿ ಆಫ್ರಿಕ ಖಂಡವೊಂದರಲ್ಲಿ ಬಳಕೆಯಲ್ಲಿರುವ ಭಾಷೆಗಳ ಸಂಖ್ಯೆ ಆರುನೂರಕ್ಕೂ ಹೆಚ್ಚು. ಇದರಿಂದ ಅಲ್ಲಿಯ ಭಾಷಾ ವೈವಿಧ್ಯ ಎದ್ದು ಕಾಣುತ್ತದೆ. ನೈಜೀರಿಯದ ಚಾಜಿ ಪ್ರಸ್ಥಭೂಮಿಯಂಥ ಕೆಲವು ಚಿಕ್ಕ ಪ್ರದೇಶಗಳಲ್ಲಿ ಅನೇಕ ಬೇರೆ ಬೇರೆ ಭಾಷೆಗಳು ಕಿಕ್ಕಿರಿದಿವೆ. ಅನೇಕ ಲಕ್ಷ ಸಂಖ್ಯೆಯ ಜನ ಆಡುವ ದೊಡ್ಡ ಭಾಷೆಗಳೂ ಆಫ್ರಿಕದಲ್ಲುಂಟು. ಉದಾಹರಣೆಗೆ ಪೂರ್ವ ಆಫ್ರಿಕದ ಸ್ವಹಿಲಿ (8 ದಶಲಕ್ಷ ), ಪಶ್ಚಿಮ ಆಫ್ರಿಕದ ಹೌಸ (13 ದಶಲಕ್ಷ), ಉತ್ತರ ಆಫ್ರಿಕದ ಅರಬ್ಬೀ (ಅರೇಬಿಯ, ಇರಾಕ್, ಪಾಲೆಸ್ತೈನ್ ಮತ್ತು ಸಿರಿಯಗಳನ್ನು ಸೇರಿಸಿಕೊಂಡರೆ 75 ದಶಲಕ್ಷ), ಆದರೂ ಆಫ್ರಿಕದ ಭಾಷೆಗಳ ಬಗ್ಗೆ ಸರಿಯಾದ ಕೆಲಸ ಆಗಬೇಕಾಗಿದೆ ಎಂದೇ ಹೇಳಬೇಕು.ಅಲ್ಲಿನ ಭಾಷೆಗಳ ಸಂಖ್ಯೆಯೂ ನಿರ್ಧಾರವಾಗಿಲ್ಲ. ಆ ಭಾಷೆಗಳ ವರ್ಗೀಕರಣವೂ ಸಮರ್ಪಕವಾಗಿಲ್ಲ.[]

ಆಫ್ರಿಕದ ಭಾಷೆಗಳನ್ನು ಐದು ವಂಶಗಳಿಗೆ ಹಂಚಬಹುದು

[ಬದಲಾಯಿಸಿ]

ಸ್ಥೂಲವಾಗಿ ನೋಡುವುದಾದರೆ ಆಫ್ರಿಕದ ಭಾಷೆಗಳನ್ನು ಐದು ವಂಶಗಳಿಗೆ ಹಂಚಬಹುದು. 1 ಹೆಮಿಟೊ-ಸಿಮಿಟಿಕ್ : ಹೆಚ್ಚು ಕಡಿಮೆ ಆಫ್ರಿಕದ ಉತ್ತರದ ಉದ್ದಗಲದಲ್ಲಿ; 2 ಮಧ್ಯ ಸಹರನ್ : ಮಧ್ಯ ಆಫ್ರಿಕದ ಚಾದ್ ಪ್ರದೇಶದಲ್ಲಿ; 3 ನೈಜರ್ ಕಾಂಗೊ : ಸಹರ ಮರುಭೂಮಿಗೆ ಇಡೀ ದಕ್ಷಿಣ ಆಫ್ರಿಕ ಪ್ರದೇಶದಲ್ಲಿ; 4 ಮ್ಯಾಕ್ರೊ ಸುಡಾನಿಕ್ : ಸೂಡಾನ್ ಪ್ರದೇಶದಲ್ಲಿ; 5 ಕ್ಲಿಕ್ : ದಕ್ಷಿಣ ಆಫ್ರಿಕದ ಪಶ್ಚಿಮ ತೀರದಲ್ಲಿ.ಈ ಒಂದೊಂದು ವಂಶದಲ್ಲೂ ಉಪವರ್ಗಗಳನ್ನು ವಿದ್ವಾಂಸರು ಗುರುತಿಸಿದ್ದಾರೆ.[]

ಹೆಮಿಟೊ-ಸಿಮಿಟಿಕ್ ಭಾಷೆಗಳು

[ಬದಲಾಯಿಸಿ]

ಈ ವಂಶವನ್ನು ಕೆಲವರು ಆಫ್ರೊ-ಏಷಿಯಾಟಿಕ್ ಎಂದೂ ಕರೆದಿರುವುದುಂಟು. ಇದಕ್ಕೆ ಕಾರಣ ಉತ್ತರ ಆಫ್ರಿಕದಲ್ಲಿ ಮಾತ್ರವಲ್ಲದೆ ಅದರ ಪಕ್ಕದ ಪಶ್ಚಿಮ ಏಷ್ಯದಲ್ಲೂ ಈ ವಂಶದ ಭಾಷೆಗಳು ಹಬ್ಬಿರುವುದು. ಕೆಲವರು ಹೆಮಿಟೊ ಮತ್ತು ಸಿಮಿಟಿಕ್‍ಗಳನ್ನು ಪ್ರತ್ಯೇಕವೆಂದು ಭಾವಿಸಿದರೂ ಅವೆರಡೂ ಒಂದು ದೊಡ್ಡ ವಂಶದ ಎರಡು ಗುಂಪುಗಳೆಂದು ಹೇಳಬೇಕಾಗುತ್ತದೆ. ಅವೆರಡನ್ನೂ ಒಂದು ಸೇರಿಸಿ ಒಂದು ಹೆಸರಿನಿಂದ ಕರೆಯುವ ರೂಢಿ ಈಗಾಗಲೇ ಬಂದುಬಿಟ್ಟಿದೆ. ಈ ವಂಶದಲ್ಲಿ ಐದು ಶಾಖೆಗಳನ್ನು ಗುರುತಿಸಬಹುದು. 1 ಬರ್ಬರ್--ಈಗ ಬಹುಮಟ್ಟಿಗೆ ಮೊರಾಕೊ, ಆಲ್ಜೀರಿಯ ಮತ್ತು ಸಹರದ ಕೆಲವು ಭಾಗಗಳಲ್ಲಿ ಪ್ರಚಾರದಲ್ಲಿದೆ. 2 ಪ್ರಾಚೀನ ಈಜಿಪ್ಟಿಯನ್-ಇದರ ಈಚಿನ ರೂಪವಾದ ಕಾಪ್ಟಿಕ್ ಎಂಬುದು ಈಜಿಪ್ಟಿನ ಕ್ರೈಸ್ತ ಜನಾಂಗದ ಪೂಜಾ ಸಮಯದ ಭಾಷೆಯಾಗಿ ಮಾತ್ರ ಉಳಿದಿದೆ. ಆಡುಮಾತಿನಲ್ಲಿ ಇದರ ಸ್ಥಾನವನ್ನು ಅರಬ್ಬೀ ಆಕ್ರಮಿಸಿಕೊಂಡಿದೆ. 3 ಸಿಮಿಟಿಕ್--ಅರಬ್ಬೀ ಭಾಷೆಯನ್ನೊಳಗೊಳ್ಳುವ ಈ ಗುಂಪಿನ ಭಾಷೆಗಳು ಉತ್ತರ ಆಫ್ರಿಕದ ತುಂಬ ವ್ಯಾಪಿಸಿವೆ. ಈ ಗುಂಪಿನ ಅರಬ್ಬೀ ಹಿಬ್ರೂ ಭಾಷೆಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ್ದಾರೆ. ಇಥಿಯೋಪಿಯನ್ ಸಿಮಿಟಿಕ್ಕನ್ನು ಉತ್ತರದ ಒಳಗುಂಪೆಂದು (ಟೈಗ್ರೆ ಮತ್ತು ಟೈಗ್ರಿನ್ಯ ಭಾಷೆಗಳು) ದಕ್ಷಿಣದ ಒಳಗುಂಪೆಂದು (ಅಮ್ಹರಿಕ್, ಗಫತ್, ಹರರಿ ಇತ್ಯಾದಿ) ಮತ್ತೆ ವಿಂಗಡಣೆ ಮಾಡುತ್ತಾರೆ. 4 ಇಥಿಯೋಪಿಯ ಮತ್ತು ಅದರ ಅಕ್ಕಪಕ್ಕಗಳಲ್ಲಿ ಆಡುವ ಕುಷ್ಟಿಕ್ ಭಾಷೆಗಳು. ಇದರ ವ್ಯಾಪ್ತಿಗೆ ಬರುವ ಸೊಮಾಲಿ ಗಲ್ಲ ಮತ್ತು ಬೇಜ ಭಾಷೆಗಳನ್ನು ಆಡುವ ಜನರ ಸಂಖ್ಯೆ ಬಹುವಾಗಿದೆ. 5 ಉತ್ತರ ನೈಜೀರಿಯ ಮತ್ತು ಅದರ ಸುತ್ತಮುತ್ತಣ ಪ್ರದೇಶದಲ್ಲಿ ಆಡುವ ಚಾದ್ ಭಾಷೆಗಳು. ಈ ಗುಂಪಿನ ಅನೇಕ ಭಾಷೆಗಳ ವಿಷಯ ಚೆನ್ನಾಗಿ ತಿಳಿದಿಲ್ಲ. ಕೆಲವು ಭಾಷೆಗಳನ್ನಾಡುವ ಜನರ ಸಂಖ್ಯೆಯಂತೂ ತೀರಾ ಕಡಿಮೆ. ಆದರೆ ಈ ಗುಂಪಿಗೆ ಸೇರುವ ಹೌಸ ಮಾತ್ರ ಆಫ್ರಿಕದ ಅತಿ ಮುಖ್ಯ ಭಾಷೆಗಳಲ್ಲೊಂದು. ಇದು ಬಹುಸಂಖ್ಯಾತರ ಪ್ರಥಮ ಭಾಷೆಯಾಗಿರುವುದು ಮಾತ್ರವಲ್ಲದೆ ಪಶ್ಚಿಮ ಆಫ್ರಿಕದ ವಿಸ್ತಾರವಾದ ಪ್ರದೇಶದ ವ್ಯಾಪಾರದ ಭಾಷೆಯೂ ಆಗಿದೆ. ಅಂಗಸ್, ಬುದುಮ ಮತ್ತು ಲೊಗೊನೆ ಮುಂತಾದ ಕೊತೊಕೊ ಭಾಷೆಗಳು, ಬತ ಭಾಷೆಗಳು, ಮಂದರ, ಸೊಮ್ರೈ, ಸೊಕೊರ, ತುಬುರಿ ಮತ್ತು ಮುಬಿಗಳು ತಕ್ಕಮಟ್ಟಿಗೆ ಸುಪ್ರಸಿದ್ಧವಾಗಿರುವ ಭಾಷೆಗಳು.

ಹೆಮಿಟೊ-ಸಿಮಿಟಿಕ್ ವರ್ಗದ ಭಾಷೆಗಳ ಪ್ರಮುಖ ಲಕ್ಷಣ

[ಬದಲಾಯಿಸಿ]

ಹೆಮಿಟೊ-ಸಿಮಿಟಿಕ್ ವರ್ಗದ ಭಾಷೆಗಳ ಪ್ರಮುಖ ಲಕ್ಷಣವೆಂದರೆ ಮೂರು ವ್ಯಂಜನಗಳುಳ್ಳ ಪದ- ಪ್ರಕೃತಿಗಳು ಬೇರೆ ಬೇರೆ ಸ್ವರಗಳು ಅವುಗಳ ಅರ್ಥವನ್ನು ಮಾರ್ಪಡಿಸುತ್ತವೆ. ಉದಾಹರಣೆಗೆ ಅರಬ್ಬೀ ಪ್ರಕೃತಿ ಞ-ಣ-b `ಬರೆ ( ಞಚಿಣಚಿbಚಿ ಅವನು ಬರೆದಿದ್ದಾನೆ ಞuಣibಚಿ ಅದು ಬರೆಯಲ್ಪಟ್ಟಿದೆ ಥಿಚಿಞಣubu ಅವನು ಬರೆಯುತ್ತಾನೆ ಞiಣಚಿbuಟಿ ಬರಹ, ಪುಸ್ತಕ

ಮಧ್ಯ ಸಹರನ್ ವಂಶ

[ಬದಲಾಯಿಸಿ]

ಚಾದ್ ಸರೋವರದ ಉತ್ತರಕ್ಕೆ ಮತ್ತು ಪೂರ್ವಕ್ಕೆ ಸೇರಿದ ಭಾಗಗಳಲ್ಲಿ ಈ ವಂಶಕ್ಕೆ ಸೇರಿದ ಭಾಷೆಗಳು ಬಳಕೆಯಲ್ಲಿವೆ. ಇವುಗಳಲ್ಲಿ ಬಹುಮುಖ್ಯವಾದುದೆಂದರೆ ಕನೂರಿ ಭಾಷೆ. ಉತ್ತರ ನೈಜೀರಿಯದ ಚಾದ್ ಸರೋವರದ ಅಂಚಿನಲ್ಲಿರುವ ಬೋರ್ನು ರಾಜ್ಯದ ಪ್ರಮುಖ ಭಾಷೆಯಿದು. ಮಧ್ಯ ಸಹರದ ಪರ್ವತಮಯವಾದ ತಿಬೆಸ್ತಿಯದ ತೆಬು ಭಾಷೆ : ಇನ್ನೂ ಪೂರ್ವ ಭಾಗಗಳಲ್ಲಿ ಆಡುವ ಸóಘವ ಮತ್ತು ಬೆರ್ತಿ ಭಾಷೆಗಳು ಇದೇ ವಂಶಕ್ಕೆ ಸೇರಿದ ಇನ್ನೂ ಕೆಲವು ಭಾಷೆಗಳು. ಈ ಭಾಷೆಗಳಲ್ಲಿ ಸ್ವರಭಾರದ (ಟೋನ್) ಬಳಕೆ ಬಹು ಮಟ್ಟಿಗೆ ಇದೆ. ನೈಜರ್ ಕಾಂಗೊವಂಶ : ಆಫ್ರಿಕದ ಅತಿಮುಖ್ಯ ವರ್ಗವಾದ ಈ ವಂಶದ ಭಾಷೆಗಳು ಸಹರ ಮರುಭೂಮಿಯ ಪಶ್ಚಿಮ ಭಾಗ ಮತ್ತು ದಕ್ಷಿಣ ಭಾಗಗಳ ಇಥಿಯೋಪಿಯದ ಪಶ್ಚಿಮದ ವಿಸ್ತಾರವಾದ ಪ್ರದೇಶದಲ್ಲಿ ನಿಬಿಡವಾಗಿ ಬಳಕೆಯಲ್ಲಿವೆ. ಇವುಗಳ ಉಪವರ್ಗೀಕರಣ ಇನ್ನೂ ಒಂದು ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ಕೆಲವು ಪ್ರಮುಖ ಉಪವರ್ಗಗಳು ಮತ್ತು ಭಾಷೆಗಳು ಹೀಗಿವೆ : 1 ತೀರ ಪಶ್ಚಿಮದಲ್ಲಿ ಪಶ್ಚಿಮ ಅಟ್ಲಾಂಟಿಕ್ ಭಾಷೆಗಳಿವೆ. ಅವುಗಳ ಹರಹು ಲೈಬೀರಿಯದ ಸಮುದ್ರ ತೀರದಿಂದ ಸೆನೆಗಲ್‍ವರೆಗೆ. ಸಿಯಾರ ಲಿಯೋನಿನ ತೆಮ್ನೆ ಮತ್ತು ಬುಲೊಮ್ ಭಾಷೆಗಳು, ಸೆನೆಗಲ್ಲಿನ ವೊಲೆಫ್ ಹೆಚ್ಚು ಪ್ರಸಿದ್ಧವಾಗಿರುವ ಭಾಷೆಗಳು. ಈ ವರ್ಗದ ಅತಿ ಸುಪ್ರಸಿದ್ಧ ಭಾಷೆ ಫುಲನಿಯನ್ನು ಸೆನೆಗಲ್ಲಿನಿಂದ ಕ್ಯಾಮೆರೂನ್ಸ್‍ವರೆಗೆ ಹರಡಿರುವ ಫುಲ ಜನಾಂಗದ ಜನರು ಆಡುತ್ತಾರೆ. 2 ಎರಡನೆಯ ಉಪವರ್ಗವೆಂದರೆ ಮಂದಿಂಗೊ ಭಾಷೆಗಳು. ಕೆಳ ನೈಜರ್ ಕಣಿವೆ ಪ್ರದೇಶದಲ್ಲಿ ಲೈಬೀರಿಯ ಮತ್ತು ಸಿಯಾರ ಬಹು ಭಾಗಗಳಲ್ಲಿ ಈ ಭಾಷೆಗಳು ಬಳಕೆಯಲ್ಲಿವೆ. ಈ ವರ್ಗದ ಮಲಿಂಕೆ ಮತ್ತು ಬಂಬರ ಭಾಷೆಗಳು ತಕ್ಕಮಟ್ಟಿಗೆ ಪ್ರಸಿದ್ಧವಾಗಿವೆ. 3 ಕ್ವ ಉಪವರ್ಗದ ಭಾಷೆಗಳನ್ನು ಲೈಬೀರಿಯದಿಂದ ಕ್ಯಾಮರೂನ್‍ವರೆಗೆ ಆಡುತ್ತಾರೆ. ಘಾನದ ಅಕನ್, ಐವರಿಕೋಸ್ಟಿನ ಬವೌಲೆ, ನೈಜೀರಿಯದ ಯೊರುಬ, ಇಬೊ ಮತ್ತು ನುಪೆಗಳು ಗಮನಾರ್ಹ ಭಾಷೆಗಳು. 4 ಈ ಭಾಷೆಗಳ ಉತ್ತರಕ್ಕೆ ಗುರ್ ಉಪವರ್ಗದ ಭಾಷೆಗಳಿವೆ. ಮೊಸ್ಸಿ ಇವುಗಳಲ್ಲೊಂದು. 5 ಕಾಂಗೊ ಜಲಾನಯನ ಭೂಮಿಯ ವಿಸ್ತಾರವಾದ ಪ್ರದೇಶಗಳಲ್ಲಿ, ಅಂಗೋಲ, ಮೊಸಾಂಬಿಕ್ ಮತ್ತು ದಕ್ಷಿಣ ಆಫ್ರಿಕದ ಬಹುಭಾಗದಲ್ಲಿ ಆಡುವ ಮಧ್ಯವರ್ಗದಲ್ಲಿ ಬಂಟು ಒಂದು ಮುಖ್ಯವಾದ ಉಪವರ್ಗ. ಬಂಟು ವರ್ಗ ಒಳಗೊಳ್ಳುವ ಭಾಷೆಗಳ ಸಂಖ್ಯೆ ಅಂಥ ಯಾವುದೇ ಇನ್ನೊಂದು ವರ್ಗದ ಭಾಷೆಗಳ ಸಂಖ್ಯೆಯನ್ನೂ ಮೀರಿಸುತ್ತದೆ. ಇವುಗಳಲ್ಲಿ ಬಹುಮುಖ್ಯವಾದುದು ಸ್ವಹಿಲಿ. ಪೂರ್ವ ಆಫ್ರಿಕದ ಉದ್ದಗಲಕ್ಕೂ ಕಾಂಗೊದ ಪೂರ್ವಕ್ಕೆ ಈ ಭಾಷೆಯ ವ್ಯಾಪ್ತಿಯಿದೆ. ಕಾಂಗೊದಲ್ಲಿ ಕೊಂಗೊ, ಲುಬ ಮತ್ತು ನ್ಗಲಗಳು ಕ್ರಮವಾಗಿ ಪೂರ್ವ, ದಕ್ಷಿಣ ಮತ್ತು ಉತ್ತರಗಳಲ್ಲಿ ಬಳಕೆಯಲ್ಲಿರುವ ಭಾಷೆಗಳು. ಉಗಾಂಡದ ಗಂಡ, ಕೆನ್ಯದ ಕಿಕುಯು ಮತ್ತು ಕಂಬ, ತಾಂಗನೀಕದ ಜಾಗ, ಅಂಗೋಲದ, ಲುಂಬುಂಡು ಮತ್ತು ಕಿಂಬುಂಡು, ದಕ್ಷಿಣ ಆಫ್ರಿಕದ ಜûುಲು, ಸ್ವಸಿó, ದಕ್ಷಿಣ ಸೋಠೊ, ಉತ್ತರ ಸೋಠೊ ಇವು ಹೆಸರಿಸಬಹುದಾದ ಇನ್ನಿತರ ಭಾಷೆಗಳು.

ನೈಜರ್-ಕಾಂಗೊ ಭಾಷೆಗಳು

[ಬದಲಾಯಿಸಿ]

ನೈಜರ್-ಕಾಂಗೊ ಭಾಷೆಗಳು, ಎಲ್ಲೊ ಕೆಲವು ಅಪವಾದಗಳನ್ನು ಬಿಟ್ಟರೆ, ಸ್ವರಭಾರವುಳ್ಳುವಾಗಿವೆ. ಈ ಭಾಷೆಗಳಲ್ಲಿ ನಾಮಪದಗಳನ್ನು ಬೇರೆ ಬೇರೆ ವರ್ಗಗಳನ್ನಾಗಿ ವಿಂಗಡಿಸುತ್ತಾರೆ. ಈ ವರ್ಗಗಳನ್ನು ಏಕವಚನ ಮತ್ತು ಬಹುವಚನಗಳನ್ನು ಸೂಚಿಸುವ ಪ್ರತ್ಯಯಗಳ ಜೋಡಿಯಿಂದ ಗುರುತಿಸಬಹುದು. ಮನುಷ್ಯರು ಲಿಂಗ ಭೇದವಿಲ್ಲದೆ ಒಂದು ವರ್ಗಕ್ಕೆ ಸೇರುತ್ತಾರೆ, ದ್ರವಗಳು ಇನ್ನೊಂದು ವರ್ಗಕ್ಕೆ ಸೇರುತ್ತವೆ-ಇತ್ಯಾದಿ. ಸ್ವಹಿಲಿಯಿಂದ ಒಂದು ನಿದರ್ಶನವನ್ನು ಕೊಡಬಹುದು. Su ಎಂದರೆ ಕತ್ತಿ. ಇದರ ವರ್ಗವನ್ನು ಏಕವಚನದಲ್ಲಿ ಏi-ಎನ್ನುವ ಪೂರ್ವ ಪ್ರತ್ಯಯ ಸೂಚಿಸುತ್ತದೆ ಔಟಿe shಚಿಡಿಠಿ ಞಟಿiಜಿe hಚಿs beeಟಿ ಟosಣ ಎಂಬುದನ್ನು ಹೇಳುವ ಸ್ವಹಿಲಿ ವಾಕ್ಯ ಹೀಗಿರುತ್ತದೆ : ಏi-Su ಏi-ಏಚಿಟi ಏi-moರಿಚಿ ಏi-me-ಠಿoಣeಚಿ. ಅಕ್ಷರಶಃ ಇದು-ಏಟಿiಜಿe shಚಿಡಿಠಿ oಟಿe hಚಿs-beeಟಿ-ಟosಣ ಎಂದಾಗುತ್ತದೆ. ನಾಮಪದದ ಲಿಂಗ ವಚನಗಳನ್ನು ಗುಣವಚನ, ಕ್ರಿಯಾಪದಗಳು ಅನುಸರಿಸಬೇಕು. ಏi-ಗೆ ಸಂವಾದಿಯಾದ ಬಹುವಚನ ಪೂರ್ವ ಪ್ರತ್ಯಯ ಗಿi- ಗಿi-Su ಗಿi-ಏಚಿಟi ಗಿi-ಟಿಚಿಟಿe ಗಿi-me-ಠಿoಣeಚಿ ಇighಣ shಚಿಡಿಠಿ ಞಟಿives hಚಿve beeಟಿ ಟosಣ.

ಮ್ಯಾಕ್ರೊ ಸೂಡಾನಿಕ್

[ಬದಲಾಯಿಸಿ]

ಈ ವಂಶದ ಭಾಷೆಗಳನ್ನು ಪೂರ್ವ ಆಫ್ರಿಕ, ನೈಲ್ ಕಣಿವೆಯ ಮೇಲ್ಭಾಗದಲ್ಲಿ ಇನ್ನೂ ಪೂರ್ವಕ್ಕೆ ಚಾದ್ ಸರೋವರದವರೆಗಿನ ಪ್ರದೇಶದಲ್ಲಿ ಆಡುತ್ತಾರೆ. ಪೂರ್ವ ಸೂಡಾನಿಕ್ ಉಪವರ್ಗಕ್ಕೆ ಸೇರುವ ನುಬಿಯನ್ ಭಾಷೆಗಳು, ತಬಿ ಮುಂತಾದ ಭಾಷೆಗಳು ಗಮನಾರ್ಹವಾದುವು. ಅತಿಮುಖ್ಯ ಶಾಖೆಯೆಂದರೆ ದಕ್ಷಿಣದ್ದು. ಈ ದಕ್ಷಿಣ ಶಾಖೆಯಲ್ಲಿ ಷಿಲ್ಲುಕ್, ದಿಂಕ, ಲಂಗೊ, ಮಸೈ, ಬರಿ ಮುಂತಾದುವು ಮುಖ್ಯವಾದುವು. ಮಧ್ಯ ಸೂಡಾನಿಕ್‍ನಲ್ಲಿ ಬಗಿರ್ಮಿ ಮತ್ತು ಮೊರುಗಳು ಮುಖ್ಯವಾದುವು.ಈ ಭಾಷೆಗಳೂ ನಮಗೆ ತಿಳಿದ ಮಟ್ಟಿಗೆ ಸ್ವರಭಾರವುಳ್ಳುವಾಗಿವೆ. ನಾಮಪದಗಳಿಗೆ ಸಂಕೀರ್ಣವಾದ ಬಹುವಚನ ರೂಪಗಳಿದ್ದರೂ ಅವುಗಳನ್ನು ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಿಲ್ಲ.

ಕ್ಲಿಕ್‍ವಂಶ

[ಬದಲಾಯಿಸಿ]

ಇದರಲ್ಲಿ ಮೂರು ಉಪವರ್ಗಗಳನ್ನು ಗುರುತಿಸಬಹುದು. 1 ದಕ್ಷಿಣ-ಪಶ್ಚಿಮ ಆಫ್ರಿಕದ ಬುಷ್‍ಮೆನ್ ಮತ್ತು ಹಾಟೆನ್‍ಟಾಟ್ ಜನ ಆಡುವ ಬೊಯಿಸನ್ ಭಾಷೆಗಳು. 2 ಪೂರ್ವ ಆಫ್ರಿಕದ ತಾಂಗನೀಕದಲ್ಲಿ ಆಡುವ ಸಂದವೆ. 3 ಪೂರ್ವ ಆಫ್ರಿಕದ ಹದó್ಸಪಿ.ಹೆಸರೇ ಹೇಳುವಂತೆ ಈ ವಂಶದ ಭಾಷೆಗಳ ಪ್ರಮುಖ ಲಕ್ಷಣವೆಂದರೆ ಕ್ಲಿಕ್ ಧ್ವನಿಗಳು. ಈ ಕ್ಲಿಕ್ ಧ್ವನಿಗಳನ್ನು ಆಫ್ರಿಕದಲ್ಲಿ ಬಿಟ್ಟರೆ ಪ್ರಪಂಚದ ಬೇರಾವುದೇ ಭಾಷೆಯಲ್ಲಿಯೂ ಬಳಸುವುದಿಲ್ಲ. ಕೆಲವು ಬಂಟು ಭಾಷೆಗಳು ಈ ಧ್ವನಿಯನ್ನು ಸ್ವೀಕರಿಸಿವೆ.ಈ ಐದು ಪ್ರಮುಖ ವಂಶಗಳಲ್ಲದೆ ಇನ್ನೂ ಹಲವು ಅಷ್ಟೊಂದು ಪ್ರಮುಖವಲ್ಲದ ವಂಶಗಳೂ ಅವುಗಳಿಗೆ ಸೇರಿದ ಭಾಷೆಗಳೂ ಆಫ್ರಿಕದಲ್ಲಿವೆ. ಉದಾಹರಣೆಗೆ ಸೂಡಾನಿನಲ್ಲಿ ಕೋರ್ಡೊಫಾನಿನ ನೂಬಾ ಬೆಟ್ಟಗಳಲ್ಲಿ ಆಡುವ ಭಾಷೆಗಳು ಕೋರ್ಡೊಫಾನಿಯನ್ ವಂಶಕ್ಕೆ ಸೇರಿವೆ. ಮಲಗಸಿ ಗಣರಾಜ್ಯದಲ್ಲಿ (ಮಡಗಾಸ್ಕರ ದ್ವೀಪ) ಮಲಯೊಪಾಲಿನೇಷಿಯನ್ ವಂಶಕ್ಕೆ ಸೇರಿದ ಭಾಷೆಗಳಿವೆ. ಇವುಗಳಿಗೂ ಇಂಡೊನೇಷಿಯನ್ ಭಾಷೆಗಳಿಗೂ ಹತ್ತಿರದ ಸಂಬಂಧವಿದೆ. ಈ ಅಪ್ರಮುಖ ವಂಶಗಳ ಬಗ್ಗೆ ಇನ್ನೂ ಹೆಚ್ಚಿನ ಕೆಲಸ ನಡೆದು, ಅವುಗಳ ಶಾಸ್ತ್ರೀಯವಾದ ವರ್ಗೀಕರಣ ಕಾರ್ಯ ನಡೆಯಬೇಕಾಗಿದೆ. ನಾವು ಇಲ್ಲಿಯವರೆಗೆ ಐದು ಪರಸ್ಪರ ಭಿನ್ನ ವಂಶಗಳನ್ನೂ ಅವುಗಳಿಗೆ ಸೇರಿದ ಭಾಷೆಗಳನ್ನೂ ನೋಡಿದ್ದೇವೆ. ಆದರೂ ಆಫ್ರಿಕದ ಭಾಷೆಗಳಿಗೆ ಕೆಲವು ಸಾಮಾನ್ಯ ಲಕ್ಷಣಗಳಿವೆ. ಸ್ವರಭಾರ, ನಾಮಪದಗಳ ವರ್ಗೀಕರಣಗಳ ಸಂಗತಿಯನ್ನಾಗಲೇ ನೋಡಿದ್ದೇವೆ. ಬಹುಭಾಗದ ಪ್ರದೇಶದ ಭಾಷೆಗಳಲ್ಲಿ ಓಷ್ಠ್ಯಕಂಠ್ಯ ವ್ಯಂಜನಗಳು (ಉದಾ : ಞಠಿ; gb) ಬಳಕೆಯಾಗುತ್ತವೆ. ಪ್ರಪಂಚದ ಬೇರೆ ಭಾಗದ ಭಾಷೆಗಳಲ್ಲಿ ವಿರಳವಾಗಿ ಕಂಡುಬರುವ ಉಚ್ಛ್ವಾಸ ವ್ಯಂಜನಗಳು ಸಾಕಷ್ಟು ಸಂಖ್ಯೆಯ ಭಾಷೆಗಳಲ್ಲಿವೆ.

ವಸಾಹತು ಭಾಷೆ

[ಬದಲಾಯಿಸಿ]

ಈ ಆಫ್ರಿಕದ ಭಾಷೆಗಳ ಜೊತೆಗೆ ವಸಾಹತು ಭಾಷೆಗಳನ್ನೂ ನಾವು ಇಲ್ಲಿ ಗಮನಿಸಬೇಕಾಗುತ್ತದೆ. ದಕ್ಷಿಣ ಆಫ್ರಿಕದಲ್ಲಿ ಇಂಗ್ಲಿಷಿನ ಸ್ಥಾನ ಬಹಳ ಭದ್ರವಾದುದು. ಇಲ್ಲಿ ಇದು ಮತ್ತು ಆಫ್ರಿಕಾನ್ಸ್ ಭಾಷೆ (ಡಚ್ ಭಾಷೆಯ ರೂಪಾಂತರ) ರಾಷ್ಟ್ರ ಭಾಷೆಗಳಾಗಿವೆ. ಜೊತೆಗೆ ಇಂಗ್ಲಿಷ್ ಘಾನ, ಕೆನ್ಯ, ಲೈಬೀರಿಯ, ನ್ಯಾಸಾಲ್ಯಾಂಡ್, ತಾಂಗನೀಕ ಮುಂತಾದ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆಲ್ಜೀರಿಯ, ಕ್ಯಾಮೆರೂನ್ಸ್, ಟ್ಯುನೀಸಿಯ ಮುಂತಾದ ದೇಶಗಳಲ್ಲಿ ಫ್ರೆಂಚ್ ಕಾಣಿಸಿಕೊಳ್ಳುತ್ತದೆ. ಲಿಬಿಯ, ಇಥಿಯೋಪಿಯ ಮುಂತಾದ ಕಡೆಗಳಲ್ಲಿ ಇಟಾಲಿಯನ್ ಬಳಕೆಯಲ್ಲಿದೆ. ಅಂಗೋಲ, ಮೊಸಾಂಬಿಕ್‍ಗಳಲ್ಲಿ ಪೋರ್ಚುಗೀಸ್ ಕಾಣಿಸಿಕೊಳ್ಳುತ್ತದೆ. ಮೊರಾಕೊ, ಸ್ಪ್ಯಾನಿಷ್ ಸಹರ, ಗಿನಿಗಳಲ್ಲಿ ಸ್ಪ್ಯಾನಿಷ್ ಭಾಷೆಯನ್ನಾಡುವವರಿದ್ದಾರೆ. ಮೊದಲ ಮಹಾಯುದ್ಧಕ್ಕಿಂತ ಮುಂಚೆ ಜರ್ಮನಿಯ ವಸಾಹತುಗಳಾಗಿದ್ದ ಕ್ಯಾಮೆರೂನ್ಸ್, ಟೋಗೋ, ನ್ಯಾಸಾಲ್ಯಾಂಡ್ ಮುಂತಾದ ಕಡೆಗಳಲ್ಲಿ ವಿರಳವಾಗಿ ಜರ್ಮನ್ ಭಾಷೆ ಕಂಡುಬರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]