ಆಕ್ಸಿಟೆಟ್ರಸೈಕ್ಲೀನ್
Systematic (IUPAC) name | |
---|---|
(4S,4aR,5S,5aR,6S,12aS) -4-(dimethylamino)-3,5,6,10,11,12a-hexahydroxy -6-methyl-1,12-dioxo-1,4,4a,5,5a,6,12,12a-octahydrotetracene -2-carboxamide | |
Clinical data | |
ಗರ್ಭಧಾರಣೆಯ ವರ್ಗ | D (AU) D (US) |
ಕಾನೂನು ಸ್ಥಿತಿ | Prescription only |
Routes | Oral, Ophthalmic |
Pharmacokinetic data | |
Half-life | 6-8 hours |
ವಿಸರ್ಜನೆ | Renal |
Identifiers | |
CAS ಸಂಖ್ಯೆ | 79-57-2 |
ATC ಕೋಡ್ | D06AA03 |
ಪಬ್‌ಕೆಮ್ | CID 5353856 |
ಡ್ರಗ್ ಬ್ಯಾಂಕ್ | DB00595 |
ಕೆಮ್‌ಸ್ಪೈಡರ್ | 10482174 |
UNII | SLF0D9077S |
KEGG | D00205 |
ChEBI | CHEBI:27701 |
ChEMBL | CHEMBL1517 |
PDB ligand ID | OAQ (PDBe, RCSB PDB) |
Chemical data | |
ರಾಸಾಯನಿಕ ಸೂತ್ರ | C22H24N2O9 |
Mol. mass | 460.434 g/mol |
| |
(what is this?) (verify) |
ಆಕ್ಸಿಟೆಟ್ರಸೈಕ್ಲೀನ್ ಅಗಲರೋಹಿತ ಜೀವಿವಿರೋಧಕಗಳ (ಬ್ರಾಡ್ - ಸ್ಪೆಕ್ಟ್ರಂ ಆಂಟಿಬಯೋಟಿಕ್ಸ್) ಗುಂಪಿನ ಮದ್ದುಗಳಲ್ಲಿ ಒಂದು.
ತಯಾರಿಕೆ
[ಬದಲಾಯಿಸಿ]ಮೊಟ್ಟಮೊದಲು (1950) ಫಿಂಡ್ಲೆ ಮತ್ತು ಸಂಗಡಿಗರು ತಯಾರಿಸಿದರು.[೧] ಮದ್ದು ತಯಾರಕರ ವ್ಯಾಪಾರದ ಹೆಸರು ಟೆರೆಮೈಸಿಸ್. ಮೊದಲಿಗೆ ಇದನ್ನು ಮಣ್ಣಲ್ಲಿರುವ ಕಿರಣಣಬೆ ಸ್ಟ್ರೆಪ್ಟೊಮೈಸಿಸ್ ರೈಮೋಸಸನ್ನು ತಳಿಯೆಬ್ಬಿಸಿ ಬಂದ ರಸದಿಂದ ಹರಳುಗಳಾಗಿ ತಯಾರಿಸಿದ್ದರೂ ಈಗ ಇದು ಕೃತಕವಾಗೂ ತಯಾರಾಗುತ್ತಿದೆ.
ವೈದ್ಯಕೀಯ ಉಪಯೋಗಗಳು
[ಬದಲಾಯಿಸಿ]ಇದರ ಹೈಡ್ರೊಕ್ಲೋರೈಡು, ಹೈಡ್ರೇಟು ಲವಣಗಳಿಂದ ಗ್ರಾಂ ಬಣ್ಣವೇರದ, ಗ್ರಾಂ ಬಣ್ಣವೇರುವ (ಗ್ರಾಂ-ನೆಗೆಟಿವ್, ಗ್ರಾಂ-ಪಾಸಿಟಿವ್) ಏಕಾಣುಜೀವಿಗಳು, ರಿಕೆಟ್ಸ್ ರೋಗಾಣುಗಳು (ರಿಕೆಟ್ಸಿಯಾಸ್), ಕೆಲವು ದೊಡ್ಡ ವಿಷಕಣಗಳು, ಕೆಲವು ಮುಂಜೀವಿ ಪರಪಿಂಡಿಗಳೂ ಸಾಯುತ್ತವೆ. ಇಲ್ಲವೇ ಗುಣಿತವಾಗುವುದನ್ನು ಅಣಗಿಸುತ್ತವೆ. ಚಲ್ಕಣದ (ಅಮೀಬಿಕ್) ರಕ್ತಭೇದಿ, ವಿಷಮಶೀತ ಜ್ವರಗಳಲ್ಲೂ ಕೊಡುವುದುಂಟು. ಕ್ಷಯ, ಕುಷ್ಠ, ಬೂಷ್ಟಿನ (ಅಣಬೆ) ರೋಗಗಳಲ್ಲಿ ಕೆಲಸಕ್ಕೆ ಬರದು. ಬಾಯಿ ಮೂಲಕ ಕೊಡುವುದು ಸಾಮಾನ್ಯ; ರಕ್ತನಾಳಾಂತರವಾಗೂ, ಒಂದೆಡೆ ಹಚ್ಚುವ ದ್ರಾವಣವಾಗೂ ಕೊಡಬಹುದು.
ಪಾರ್ಶ್ವ ಪರಿಣಾಮಗಳು
[ಬದಲಾಯಿಸಿ]ಯಾವಾಗಲೂ ಕರುಳಲ್ಲಿ ಇದ್ದೇ ಇರುವ ಏಕಾಣುಜೀವಿಗಳನ್ನು ಇದು ಹಾಳುಮಾಡಿ ತೊಂದರೆ ಕೊಡಬಹುದು. ಮಜ್ಜಿಗೆ ಸೇವನೆಯಿಂದ ಇದು ಸರಿಹೋಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Fischer J, Ganellin CR (2006). Analogue-based Drug Discovery (in ಇಂಗ್ಲಿಷ್). John Wiley & Sons. p. 489. ISBN 9783527607495.