ಲಿಂಪ್ ಬಿಜ್ಕಿಟ್
Limp Bizkit | |
---|---|
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | Jacksonville, Florida, United States |
ಸಂಗೀತ ಶೈಲಿ | Nu metal, rap metal, alternative rock |
ಸಕ್ರಿಯ ವರ್ಷಗಳು | 1995–present |
Labels | Flip, Interscope, Geffen |
Associated acts | Black Light Burns, House of Pain, La Coka Nostra |
ಅಧೀಕೃತ ಜಾಲತಾಣ | www.limpbizkit.com |
ಸಧ್ಯದ ಸದಸ್ಯರು | Fred Durst Wes Borland Sam Rivers DJ Lethal John Otto |
ಮಾಜಿ ಸದಸ್ಯರು | Mike Smith |
ಲಿಂಪ್ ಬಿಜ್ಕಿಟ್ ಅಮೆರಿಕಾ ದೇಶದ ಒಂದು ರಾಕ್ ಸಂಗೀತ ವಾದ್ಯತಂಡ. ಇದರ ಮೂಲಸ್ಥಾನ ಫ್ಲಾರಿಡಾ ರಾಜ್ಯದ ಜ್ಯಾಕ್ಸನ್ವಿಲ್. ಫ್ರೆಡ್ ಡರ್ಸ್ಟ್ (ಪ್ರಮುಖ ಗಾಯನ), ವೆಸ್ ಬೊರ್ಲೆಂಡ್ (ಗಿಟಾರ್), ಸ್ಯಾಮ್ ರಿವರ್ಸ್ (ಬಾಸ್), ಜಾನ್ ಒಟ್ಟೊ (ಡ್ರಮ್ಸ್) ಹಾಗೂ DJ ಲೀತಲ್ ಈ ವಾದ್ಯತಂಡದ ಸದಸ್ಯರು.
ಲಿಂಪ್ ಬಿಜ್ಕಿಟ್ ಮೂರು ಗ್ರ್ಯಾಮಿ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನ ಗಳಿಸಿತಲ್ಲದೆ, ಹಲವು ಇತರೆ ಪ್ರಸಿದ್ಧ ಪ್ರಶಸ್ತಿಗಳನ್ನು ಗಳಿಸಿದೆ. ಈ ವಾದ್ಯತಂಡದ್ದು ವಿಶ್ವಾದ್ಯಂತ ಸುಮಾರು 35 ದಶಲಕ್ಷ ಆಲ್ಬಮ್‌ಗಳು ಮಾರಾಟವಾಗಿವೆಯೆಂದು ಅಂದಾಜಿಸಲಾಗಿದೆ.[೧]
ಇಸವಿ 1995ರಲ್ಲಿ ರಚನೆಯಾದ ಈ ವಾದ್ಯತಂಡವು, 1999ರಲ್ಲಿ ಬಿಡುಗಡೆಯಾದ ತಮ್ಮ ಎರಡನೆಯ ಸ್ಟುಡಿಯೊ ಆಲ್ಬಮ್ ಸಿಗ್ನಿಫಿಕೆಂಟ್ ಅದರ್ ಒಂದಿಗೆ ಮುಖ್ಯವಾಹಿನಿಯಲ್ಲಿಯೇ ಯಶಸ್ಸು ಗಳಿಸಿತು. ವಾದ್ಯತಂಡದ ಮೂರನೆಯ ಸ್ಟುಡಿಯೊ ಆಲ್ಬಮ್ ಚಾಕೊಲೇಟ್ ಸ್ಟಾರ್ಫಿಷ್ ಅಂಡ್ ದಿ ಹಾಟ್ ಡಾಗ್ ಫ್ಲೇವರ್ಡ್ ವಾಟರ್ , 2000ದಲ್ಲಿ ಬಿಡುಗಡೆಯಾಗಿ ಅದರ ಯಶಸ್ಸಿನ ಅಭಿಯಾನವನ್ನು ಮುಂದುವರೆಸಿತು. ಅದರ ಮೊದಲ ವಾರದಲ್ಲಿ, ಆಲ್ಬಮ್‌ನ 1.05 ದಶಲಕ್ಷ ಪ್ರತಿಗಳು ಮಾರಾಟವಾದವು. ರಾಕ್ ಆಲ್ಬಮ್ ಇತಿಹಾಸದಲ್ಲಿ ಅತಿ-ವೇಗವಾಗಿ ಮಾರಾಟವಾದ ಅಲ್ಬಮ್ ಎಂಬ ಕೀರ್ತಿ ಗಳಿಸಿತು. ಸತತ ಏಳು ವರ್ಷಗಳ ಕಾಲ ದಾಖಲೆಯಾಗಿ ಉಳಿದಿದ್ದ ಪರ್ಲ್ ಜ್ಯಾಮ್‌ನ Vs. ನ್ನು ಇದು ಹಿಂದಿಕ್ಕಿತು.[೨]
ಇಸವಿ 2001ರಲ್ಲಿ ವೆಸ್ ಬೊರ್ಲೆಂಡ್ ವಾದ್ಯತಂಡವನ್ನು ತೊರೆದರು. ಆನಂತರ, 2003ರಲ್ಲಿ ಬಿಡುಗಡೆಯಾದ ನಾಲ್ಕನೆಯ ಸ್ಟುಡಿಯೊ ಆಲ್ಬಮ್ ರಿಸಲ್ಟ್ಸ್ ಮೇ ವೇರಿ ಗಾಗಿ ಬೊರ್ಲೆಂಡ್ ಸ್ಥಾನವನ್ನು ತುಂಬಲು ಮೈಕ್ ಸ್ಮಿತ್‌ರನ್ನು ಸೇರಿಸಿಕೊಳ್ಳಲಾಯಿತು. ಮುಂಚಿನ ಎರಡು ಆಲ್ಬಮ್‌ಗಳಷ್ಟು ಯಶಸ್ಸನ್ನು ಈ ಆಲ್ಬಮ್ ಗಳಿಸಲಿಲ್ಲ. ಇಸವಿ 2005ರಲ್ಲಿ ವೆಸ್ ಬೊರ್ಲೆಂಡ್ ವಾದ್ಯತಂಡಕ್ಕೆ ಪುನಃ ಸೇರ್ಪಡೆಯಾದರು. ದಿ ಅನ್‌ಕ್ವೆಷ್ಚನಬಲ್ ಟ್ರೂತ್ (ಪಾರ್ಟ್ 1) ಎಂಬ EP ಬಿಡುಗಡೆಯಾಯಿತು. ಇದರ ನಂತರ ಬೊರ್ಲೆಂಡ್ ಪುನಃ ತಂಡವನ್ನು ಅಗಲಿ, ಫೆಬ್ರವರಿ 2009ರಲ್ಲಿ ಸೇರ್ಪಡೆಯಾದರು. ಲಿಂಪ್ ಬಿಜ್ಕಿಟ್‌ನ ಮೂಲತಃ ಸದಸ್ಯರನ್ನೊಳಗೊಂಡು ರಚನೆಯಾದ, ಏಳು ವರ್ಷಗಳಲ್ಲಿ ಇದೇ ಮೊದಲ ಸಂಪೂರ್ಣಾವಧಿಯ ಆಲ್ಬಮ್ ಗೋಲ್ಡ್ ಕೋಬ್ರಾ 2010ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.[೩]
ಇತಿಹಾಸ
[ಬದಲಾಯಿಸಿ]ಆರಂಭಿಕ ವರ್ಷಗಳು
[ಬದಲಾಯಿಸಿ]ಫ್ರೆಡ್ ಡರ್ಸ್ಟ್ ಸ್ಯಾಮ್ ರಿವರ್ಸ್‌ರನ್ನು ಭೇಟಿಯಾದ ನಂತರ ಲಿಂಪ್ ಬಿಜ್ಕಿಟ್ ವಾದ್ಯತಂಡವು 1995ರಲ್ಲಿ ಜ್ಯಾಕ್ಸನ್ವಿಲ್‌ನಲ್ಲಿ ಸಂಘಟಿತವಾಯಿತು.
ಸ್ಯಾಮ್ ರಿವರ್ಸ್ ಫ್ರೆಡ್ ಡರ್ಸ್ಟ್‌ರನ್ನು, ತಮ್ಮ ಸೋದರಸಂಬಂಧಿ, FL (ಫ್ಲಾರಿಡಾ)ದ ಕೀಯ್ಸ್ಟೋನ್ ಹೈಟ್ಸ್ ನಿವಾಸಿ, ಡ್ರಮ್ಮರ್ ಜಾನ್ ಒಟ್ಟೊಗೆ ಪರಿಚಯಿಸಿಕೊಟ್ಟರು. ಈ ಮೂವರೂ ಸಹ, ಸಮಯಸ್ಫೂರ್ತಿಯ ವಾದ್ಯಗೋಷ್ಠಿಗಾಗಿ ಒಗ್ಗೂಡಿ, ಆನಂತರವೇ ವಾದ್ಯತಂಡದ ಮೊದಲ ಆವೃತ್ತಿಯನ್ನು ಆರಂಭಿಸಿದರು. ಈ ಮೂವರು ರಾಬ್ ವಾಟರ್ಸ್ ಎಂಬ ಗಿಟಾರ್ ವಾದಕರನ್ನು ಸೇರಿಸಿಕೊಳ್ಳುವುದರೊಂದಿಗೆ ಲಿಂಪ್ ಬಿಜ್ಕಿಟ್ ವಾದ್ಯತಂಡವು ಸಂಘಟಿತವಾಯಿತು.[೪] ಲಿಂಪ್ ಬಿಜ್ಕಿಟ್ ವಾದ್ಯತಂಡದ ಮೊದಲ ನಾಲ್ಕು-ಧ್ವನಿಪಥಗಳ ಪ್ರದರ್ಶನಾತ್ಮಕ ಕೃತಿ ಮೆಂಟಲ್ ಅಕ್ವಾಡಕ್ಟ್ಸ್ (ಫ್ರೆಡ್‌ರ ಮುಂಚಿನ ವಾದ್ಯತಂಡಗಳಾದ ಸ್ಪ್ಲಿಟ್ 26 ಮತ್ತು 10Ft ಷಿಂಡಿಗ್‌ನಲ್ಲಿ ಬರೆಯಲಾದ ಹಾಡುಗಳ ಮರುನಿರ್ಮಾಣವಾಗಿತ್ತು.) ರಾಬ್ ವಾಟರ್ಸ್‌ರೊಂದಿಗೆ ಧ್ವನಿಮುದ್ರಣ ಮಾಡಲಾಗಿತ್ತು. ಆದರೆ, ಇದಾದ ಕೂಡಲೆ ರಾಬ್ ವಾದ್ಯತಂಡವನ್ನು ತೊರೆದರು. ಇದೀಗ ಖಾಲಿಬಿದ್ದ ಹುದ್ದೆಗಾಗಿ ಒಟ್ಟೊ ತಮ್ಮ ಶಾಲಾ ಸಹಪಾಠಿ ವೆಸ್ ಬೊರ್ಲೆಂಡ್‌ರ ಹೆಸರನ್ನು ಶಿಫಾರಸು ಮಾಡಿದರು. ಬೊರ್ಲೆಂಡ್ ಕ್ಲಬ್‌ಗಳಲ್ಲಿ ವಾದ್ಯ ನುಡಿಸುತ್ತಿರುವುದನ್ನು ಡರ್ಸ್ಟ್ ಗಮನಿಸಿ, ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಬಯಸಿದರು. ಡರ್ಸ್ಟ್ ಫಿಲಡೆಲ್ಫಿಯಾಗೆ ತೆರಳಿ, ವೆಸ್‌ರೊಂದಿಗೆ ಮಾತುಕತೆ ನಡೆಸಿ, ವಾದ್ಯತಂಡ ಸೇರಬಹುದೇ ಎಂಬುದನ್ನು ನಿರ್ಣಯಿಸಲು ಅವರ ಇತರೆ ಸದಸ್ಯರಿಗೆ ಸೂಚನೆ ನೀಡಿದರು. ವೆಸ್ ಲಿಂಪ್ ಬಿಜ್ಕಿಟ್ ತಂಡಕ್ಕೆ ಸೇರಲು ಒಪ್ಪಿಕೊಂಡರು. ಅದೇ ರಾತ್ರಿ ಫ್ರೆಡ್ ಜ್ಯಾಕ್ಸನ್ವಿಲ್‌ನಿಂದ ಮರಳಿಬಂದಾಗ ಒಂದು ಕಾರ್ಯಕ್ರಮ ನಿಗದಿಯಾಗಿತ್ತು. ಫ್ರೆಡ್ ಮತ್ತು ವೆಸ್ ಮೊದಲ ಬಾರಿಗೆ ಭೇಟಿಯಾಗಿ, ಅರ್ಧ ತಾಸು ಅಭ್ಯಾಸ ನಡೆಸಿ, ಕಾರ್ಯಕ್ರಮದಲ್ಲಿ ತಮ್ಮ ವಾದ್ಯಗಳನ್ನು ನುಡಿಸಿದರು.
ವಾದ್ಯತಂಡವು ವಿವಿಧ ನಗರಗಳಲ್ಲಿ ಸಂಗೀತ ಗೋಷ್ಠಿಗಳನ್ನು ಮುಂದುವರೆಸಿತು, ಇವುಗಳಲ್ಲಿ ಜ್ಯಾಕ್ಸನ್ವಿಲ್‌ನಲ್ಲಿರುವ ಮಿಲ್ಕ್‌ಬಾರ್ ಅತ್ಯಂತ ಜನಪ್ರಿಯ ಸ್ಥಳವಾಗಿತ್ತು. ಇಸವಿ 1995ರಲ್ಲಿ, ಸಂಗೀತ ಗೋಷ್ಠಿ ನಡೆಸಲು ಜ್ಯಾಕ್ಸನ್ವಿಲ್‌ಗೆ ಬಂದಿದ್ದ ಕೊರ್ನ್ ವಾದ್ಯತಂಡದವರೊಂದಿಗೆ ಫ್ರೆಡ್ ಡರ್ಸ್ಟ್ ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದರು. ಹಚ್ಚೆ (ಟ್ಯಾಟೂ) ಕಲಾವಿದರೂ ಆಗಿದ್ದ ಡರ್ಸ್ಟ್, ಕೊರ್ನ್ ತಂಡದ ಬ್ಯಾಸಿಸ್ಟ್ ರೆಜಿನಾಲ್ಡ್ 'ಫೀಲ್ಡಿ' ಆರ್ವಿಜುರಿಗೆ ಹಲವು ಹಚ್ಚೆ ಕಲೆ ನೀಡಿ, ಅವರಿಬ್ಬರೂ ಸ್ನೇಹಿತರಾದರು. ರಾಬ್ ವಾಟರ್ಸ್‌ರೊಂದಿಗಿನ ತಮ್ಮ ವಾದ್ಯತಂಡದ ಮೊದಲ ಡೆಮೊ ಧ್ವನಿಸುರುಳಿಯನ್ನು ಡರ್ಸ್ಟ್ ಕೊರ್ನ್ ತಂಡಕ್ಕೆ ನೀಡಿದರು. ಇದರಲ್ಲಿ ಏನೂ ವಿಶೇಷವಿಲ್ಲ ಎಂದು ಕೊರ್ನ್ ತಂಡವು ಅಭಿಪ್ರಾಯಪಟ್ಟಿತು. ಆನಂತರ, ವೆಸ್ ಬೊರ್ಲೆಂಡ್‌ರೊಂದಿಗೆ ಎರಡನೆಯ ಡೆಮೊ ಧ್ವನಿಮುದ್ರಣವಾಯಿತು. ಈ ಬಾರಿ ಕೊರ್ನ್ ತಂಡವು ತನ್ನ ಮೆಚ್ಚುಗೆ ಸೂಚಿಸಿತು. ಈ ಡೆಮೊದಲ್ಲಿ 'ಕೌಂಟರ್ಫೀಟ್', 'ಸ್ಟಕ್', 'ಸ್ಟೇಲ್ಮೇಟ್' ಹಾಗೂ 'ಪೊಲ್ಯುಷನ್' ಎಂಬ ಹಾಡುಗಳನ್ನು ಹೊಂದಿದ್ದವು. ಇವೆಲ್ಲವೂ ಮುಂದೆ ಲಿಂಪ್ ಬಿಜ್ಕಿಟ್ ವಾದ್ಯತಂಡದ ಮೊಟ್ಟಮೊದಲ ಆಲ್ಬಮ್ ತ್ರೀ ಡಾಲರ್ ಬಿಲ್, ಯಾಲ್$ ನಲ್ಲಿ ಸೇರಿಸಲಾಗಿದ್ದವು. ಈ ಡೆಮೊ ಧ್ವನಿಸುರುಳಿಯನ್ನು ಕೊರ್ನ್ ತಂಡದ ನಿರ್ಮಾಪಕ ರಾಸ್ ರಾಬಿನ್ಸನ್‌ರಿಗೆ ನೀಡಲಾಯಿತು. ಅವರೂ ಸಹ ಈ ಹಾಡುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಸ್ ಲಿಂಪ್ ಬಿಜ್ಕಿಟ್ ತಂಡದವರನ್ನು ಸಂಪರ್ಕಿಸಿ, ಈ ವಾದ್ಯತಂಡಕ್ಕಾಗಿ ನಿರ್ಮಾಣ ಮಾಡುವ ತಮ್ಮ ಇಂಗಿತ ವ್ಯಕ್ತಪಡಿಸಿದರು. 'ಗಾರ್ಬೇಜ್' ಸಂಗೀತಗೋಷ್ಠಿಯೊಂದರಲ್ಲಿ ಡರ್ಸ್ಟ್ ಜೊರ್ಡಾನ್ ಸ್ಕುರ್‌ನ್ನು ಭೇಟಿಯಾಗಿ, ಸ್ಕುರ್‌ರ ಕಾರ್‌ನಲ್ಲಿ ಡರ್ಸ್ಟ್ ತಮ್ಮ ಡೆಮೊ ಸುರುಳಿಯನ್ನು ನುಡಿಸಿದರು. ಸ್ಕುರ್ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿ, ತಮ್ಮ ಫ್ಲಿಪ್ ರೆಕಾರ್ಡ್ಸ್ ಸಂಸ್ಥೆಗೆ ಲಿಂಪ್ ಬಿಜ್ಕಿಟ್ ವಾದ್ಯತಂಡವನ್ನು ಸೇರಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದರು. ಇದೇ ಸಮಯದಲ್ಲಿ, ಲಿಂಪ್ ಬಿಜ್ಕಿಟ್ ವಾದ್ಯತಂಡವು ಡೆಫ್ಟೋನ್ಸ್ ಮತ್ತು ಹೌಸ್ ಆಫ್ ಪೇನ್ ವಾದ್ಯತಂಡಗಳೊಂದಿಗೆ ಸಂಗೀತ-ಪ್ರವಾಸ ನಿಶ್ಚಿತವಾಗಿತ್ತು. ಹೌಸ್ ಆಫ್ ಪೇನ್ ತಂಡದೊಂದಿಗಿದ್ದ DJ ಲೀತಲ್ ಅನಂತರ ಲಿಂಪ್ ಬಿಜ್ಕಿಟ್ ತಂಡ ಸೇರಿದರು.[೪] ಆನಂತರ, ಲಿಂಪ್ ಬಿಜ್ಕಿಟ್ ಮೊಜೊ ರೆಕಾರ್ಡ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಆದರೆ ಸ್ಕುರ್ ಇದನ್ನು ಕೊಂಡ ಮೇಲೆ, ತಂಡವು ಫ್ಲಿಪ್ ರೆಕಾರ್ಡ್ಸ್ ಸಂಸ್ಥೆಯೊಂದಿಗೆ ಸಹಿ ಹಾಕಿತು.
ತ್ರೀ ಡಾಲರ್ ಬಿಲ್, ಯ್'ಆಲ್$ (1997–1998)
[ಬದಲಾಯಿಸಿ]ಲಿಂಪ್ ಬಿಜ್ಕಿಟ್ ವಾದ್ಯತಂಡದ ಮೊದಲ ಪೂರ್ಣ ಧ್ವನಿಮುದ್ರಣ, ತ್ರೀ ಡಾಲರ್ ಬಿಲ್, ಯ್‌ಅಲ್$ 1997ರಲ್ಲಿ ಇಂಟರ್ಸ್ಕೋಪ್‌ನಲ್ಲಿ ಬಿಡುಗಡೆಯಾಯಿತು. ಬಿಡುಗಡೆಯ ಸಮಯ ಈ ಆಲ್ಬಮ್ ಬಿಲ್ಬೋರ್ಡ್ 200 ಪಟ್ಟಿಯಲ್ಲಿ ಕಳಪೆ ಪ್ರದರ್ಶನ ನೀಡಿತು. ಆದರೆ, ತಂಡದ ಸಾಕಷ್ಟು ಪ್ರವಾಸಗಳಲ್ಲಿ ನಿಧಾನವಾಗಿ ಜನಪ್ರಿಯತೆ ಗಳಿಸಿದ ಈ ಆಲ್ಬಮ್ ತನ್ನ ಮಾರಾಟ ಹೆಚ್ಚಿಸಿಕೊಂಡಿತು. ಫ್ಯಾಮಿಲಿ ವ್ಯಾಲ್ಯೂಸ್ ಟೂರ್, ಟ್ರೇಲ್ ಆಫ್ ಟಿಯರ್ಸ್ ಹಾಗೂ ಒಜ್‌ಫೆಸ್ಟ್ ನಂತರವೇ ಈ ಆಲ್ಬಮ್ ಪಟ್ಟಿಯಲ್ಲಿ 22ನೆಯ ಸ್ಥಾನಕ್ಕೆ ಏರಲು ಸಹಾಯವಾಯಿತು. ವಿಶೇಷವೆಂದರೆ, ಒಜ್‌ಫೆಸ್ಟ್‌ನಲ್ಲಿ ವಾದ್ಯತಂಡವು ಪ್ರೇಕ್ಷಕರ ಮೇಲೆ ಮರೆಯಲಾಗದ ಪ್ರಭಾವ ಬೀರಿತ್ತು. ಏಕೆಂದರೆ ತಂಡವು, ದೊಡ್ಡ ಗಾತ್ರದ ಶೌಚಾಲಯವನ್ನು ಒಳಗೊಂಡ ನೈಜ ವೇದಿಕೆಯಲ್ಲಿ ತನ್ನ ಗೋಷ್ಠಿ ನಡೆಸಿತ್ತು. ಕಾರ್ಯಕ್ರಮದ ಆರಂಭದಲ್ಲಿ, ತಂಡವು ಈ ಶೌಚಾಲಯದಿಂದ ಹೊರಬರುತ್ತಾ, ಕಾರ್ಯಕ್ರಮದುದ್ದಕ್ಕೂ ಸದಸ್ಯ ಡರ್ಸ್ಟ್ ಆಗಾಗ್ಗೆ "We're coming straight to you from the sewer" ಹಾಗೂ "I am a piece of shit, and my band is a piece of shit" ಎನ್ನುತ್ತಲಿದ್ದರು. ಬೊರ್ಲೆಂಡ್‌ರ ತೀರಾ ವಿಚಿತ್ರವಾದ ವೇಷಭೂಷಣವು ಪ್ರೇಕ್ಷಕರ ಮನದಲ್ಲೂ ಮನೆ ಮಾಡಲಾರಂಭಿಸಿತು. ಬಿಡುಗಡೆಯಾದ ತಂಡದ ಮೊದಲ ಏಕಗೀತೆ ಕೌಂಟರ್ಫೀಟ್ ಆಗಿದ್ದರೂ ಸಹ, ಜಾರ್ಜ್ ಮೈಕಲ್ರ ಫೇಯ್ತ್ ರಕ್ಷಾಪುಟದ ಮೂಲಕ ಲಿಂಪ್ ಬಿಜ್ಕಿಟ್‌ಗೆ ಖ್ಯಾತಿ ದೊರಕಿತು. ಇಸವಿ 1998ರಲ್ಲಿ ಬಿಡುಗಡೆಯಾದ, ಪೀಟರ್ ಬರ್ಗ್‌ರ ಚಲನಚಿತ್ರ ವೆರಿ ಬ್ಯಾಡ್ ಥಿಂಗ್ಸ್ ನ ಧ್ವನಿಪಥದಲ್ಲಿ ಈ ಹಾಡು ಕೇಳಿಬಂದಿತು. ಈ ಚಲನಚಿತ್ರದಲ್ಲಿ ಕ್ಯಾಮೆರಾನ್ ಡಯಾಜ್, ಕ್ರಿಶ್ಚಿಯನ್ ಸ್ಲೇಟರ್ ಮತ್ತು ಜೆರಮಿ ಪಿವೆನ್ ಅಭಿನಯಿಸಿದ್ದರು.[೫] ಅದೇ ವರ್ಷದ ಅಪರಾರ್ಧದಲ್ಲಿ, ಕೊರ್ನ್ ತಂಡದ ಮೂರನೆಯ ಆಲ್ಬಮ್‌ನಲ್ಲಿ ಫ್ರೆಡ್ ಆಲ್ ಇನ್ ದಿ ಫ್ಯಾಮಿಲಿ ಹಾಡನ್ನು ಹಾಡಿದರು. ಇದು ಒಂದು ರೀತಿಯ ರ್‌ಯಾಪ್ ಶೈಲಿಯ ಹಾಡಾಗಿತ್ತು. ಈ ಆಲ್ಬಮ್‌ನ ಎರಡನೆಯ ಡಿಸ್ಕ್ ಆ ಹಾಡಿನ ನಾಲ್ಕು ರಿಮಿಕ್ಸ್ ಆವೃತ್ತಿಗಳನ್ನು ಹೊಂದಿತ್ತು. ಜೊತೆಗೆ, ಡರ್ಸ್ಟ್, ಬೊರ್ಲೆಂಡ್ ಮತ್ತು ಕೊರ್ನ್ ತಂಡದ ಇತರೆ ಸದಸ್ಯರ ನಡುವೆ ಸಂದರ್ಶನಗಳನ್ನು ಸಹ ಒಳಗೊಂಡಿತ್ತು.
ಲೇಡೀಸ್ ನೈಟ್ ಇನ್ ಕ್ಯಾಂಬೊಡಿಯಾ ಪ್ರವಾಸವು ಲಿಂಪ್ ಬಿಜ್ಕಿಟ್ ವಾದ್ಯತಂಡದ ಇನ್ನೊಂದು ಅಪೂರ್ವ ಕಲ್ಪನೆಯಾಗಿತ್ತು. ತಮ್ಮ ತಂಡದ ಕಾರ್ಯಕ್ರಮಗಳಿಗೆ ಹಾಜರಾದವರಲ್ಲಿ ಬಹುಪಾಲು ಯುವಕರೇ ಇದ್ದದ್ದನ್ನು ಫ್ರೆಡ್ ಗಮನಿಸಿದ್ದರು. ಇದರ ಫಲವಾಗಿ, ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮಹಿಳೆಯರು ಬರಲೆಂದು ಈ ಪ್ರವಾಸಕ್ಕೆ ಮಹಿಳೆಯರಿಗೆ ಉಚಿತ ಪ್ರವೇಶ ನೀಡಲಾಯಿತು. ಈ ಪ್ರವಾಸವು ಭಾರೀ ಯಶಸ್ಸು ಗಳಿಸಿತು. ಲಿಂಪ್ ಬಿಜ್ಕಿಟ್ ವಾದ್ಯತಂಡದ ಮುಂದಿನ ಕಾರ್ಯಕ್ರಮಗಳಿಗೆ ಸ್ತ್ರೀಯರೂ ಸಹ ಹೆಚ್ಚು ಸಂಖ್ಯೆಗಳಲ್ಲಿ ಹಾಜರಾಗುವವರಿದ್ದರು.
ಇದಾದ ಶೀಘ್ರದಲ್ಲಿಯೇ, ರಾಬ್ ವಾಟರ್ಸ್ ತಾವು ಸಹ-ಗೀತ ರಚನೆ ಮಾಡಿದ ಹಾಡುಗಳನ್ನು ತಂಡವು ಉಪಯೋಗಿಸಿತೆಂದು ಆರೋಪಿಸಿ ಲಿಂಪ್ ಬಿಜ್ಕಿಟ್ ವಿರುದ್ಧ ಮೊಕದ್ದಮೆ ಹೂಡಿದರು. ವಾಟರ್ಸ್ ಈ ಮೊಕದ್ದಮೆಯನ್ನು ಗೆದ್ದು, ಅವರಿಗೆ ಆರಂಕಿ ಮೊತ್ತದ ಪರಿಹಾರವೂ ದೊರಕಿತು. [ಸೂಕ್ತ ಉಲ್ಲೇಖನ ಬೇಕು] (ಕೋಲ್ಡ್ ಮತ್ತು ಇವಾನೆಸೆನ್ಸ್) ಹಾಡುಗಳನ್ನು ರಚಿಸುವಲ್ಲಿ ನೆರವಾದ ಟೆರಿ ಬಾಲ್ಸಮೊ [ಸೂಕ್ತ ಉಲ್ಲೇಖನ ಬೇಕು] ಮೊಕದ್ದಮೆ ಹೂಡುವ ಇಂಗಿತ ವ್ಯಕ್ತಪಡಿಸಲಿಲ್ಲ.
ಸಿಗ್ನಿಫಿಕೆಂಟ್ ಅದರ್ (1999–2000)
[ಬದಲಾಯಿಸಿ]ಇಸವಿ 1999ರಲ್ಲಿ, ಲಿಂಪ್ ಬಿಜ್ಕಿಟ್ ತಂಡವು ತನ್ನ ಎರಡನೆಯ ಆಲ್ಬಮ್ ಸಿಗ್ನಿಫಿಕೆಂಟ್ ಅದರ್ ಒಂದಿಗೆ ವಿಶ್ವಾದ್ಯಂತ ಯಶಸ್ಸು ಕಂಡಿತು. ಇದು ಬಿಲ್ಬೊರ್ಡ್ 200ರ ಪಟ್ಟಿಯಲ್ಲಿ ಸೇರಿದೊಡನೆಯೇ ಅಗ್ರಸ್ಥಾನಕ್ಕೇರಿತು. ಈ ಆಲ್ಬಮ್‌ಗೆ ಹೆಚ್ಚಾಗಿ ಸಕಾರಾತ್ಮಕ ವಿಮರ್ಶೆಗಳು ದೊರೆತವು. ಮೊದಲ ವಾರದಲ್ಲೇ ಈ ಆಲ್ಬಮ್‌ನ 834,000 ಪ್ರತಿಗಳು ಮಾರಾಟವಾದವು. ಇದುವರೆಗೂ ವಿಶ್ವಾದ್ಯಂತ 16 ದಶಲಕ್ಷ ಪ್ರತಿಗಳು ಮಾರಾಟವಾಗಿವೆ. ಮೊದಲ ಏಕಗೀತ 'ನೂಕೀ' ರಾಕ್ ರೇಡಿಯೊದಲ್ಲಿ ಅಪಾರ ಯಶಸ್ಸು ಗಳಿಸಿ, ರಾಕ್ ಮತ್ತು ರ್‌ಯಾಪ್ ಪಟ್ಟಿಗಳೆರಡರಲ್ಲೂ ಟಾಪ್ 10 ತಲುಪಿತು. ಈ ಏಕಗೀತದ ನಂತರ, ವಾದ್ಯತಂಡವು "ಬ್ರೇಕ್ ಸ್ಟಫ್", "ರಿ-ಅರೇಂಜ್ಡ್" ಹಾಗೂ, ಹಿಪ್-ಹಾಪ್ ಕಲಾವಿದ ಮೆಥಡ್ ಮ್ಯಾನ್ ಒಳಗೊಂಡ "N 2 ಗೆದರ್ ನೌ" ಒಟ್ಟಿಗೆ ಬಿಡುಗಡೆ ಮಾಡಿತು. "N 2 ಗೆದರ್ ನೌ" ಏಕಗೀತೆಯು, ರಾಕ್ ಮತ್ತು ಹಿಪ್-ಹಾಪ್ ಸಂಗೀತ ಶೈಲಿಗಳ ನಡುವಿನ ಪೈಪೋಟಿಯ ಬದಲಿಗೆ, ಒಗ್ಗೂಡಿಸಲು ಫ್ರೆಡ್ ಡರ್ಸ್ಟ್‌ರ ಯತ್ನವೆಂದು ಹೇಳಲಾಗಿದೆ.[೬] ಕೊರ್ನ್ ತಂಡದ ಜೊನಾಥನ್ ಡೇವಿಸ್ ಮತ್ತು ಸ್ಟೋನ್ ಟೆಂಪ್ಲ್ ಪೈಲಟ್ಸ್ ತಂಡದ ಸ್ಕಾಟ್ ವೇಲೆಂಡ್ ಹಾಡಿದ "ನೊಬಡಿ ಲೈಕ್ ಯು", ಹಾಗೂ ಸ್ಟೆಯಿಂಡ್ ತಂಡದ ಆರೊನ್ ಲೂಯಿಸ್ ಹಾಡಿದ "ನೊ ಸೆಕ್ಸ್" ಗೀತೆಗಳು ಈ ಆಲ್ಬಮ್‌ನಲ್ಲಿದ್ದವು.
ವಿವಾದಗಳು
[ಬದಲಾಯಿಸಿ]ಇಸವಿ 1999ರಲ್ಲಿ, ಲಿಂಪ್ ಬಿಜ್ಕಿಟ್ ಬಹಳ ನಿರೀಕ್ಷೆ ಹೊತ್ತ ವುಡ್‌ಸ್ಟಾಕ್'99 ಕಾರ್ಯಕ್ರಮದಲ್ಲಿ, ಸುಮಾರು 200,000 ಪ್ರೇಕ್ಷಕರ ಮುಂದೆ ಸಂಗೀತಗೋಷ್ಠಿ ನೀಡಿತು. ಕಾರ್ಯಕ್ರಮ ನಡೆಯುವ ಮತ್ತು ಆನಂತರದ ಸಮಯದಲ್ಲಿ, ಹಿಂಸಾತ್ಮಕ ಕೃತ್ಯಗಳು ಆರಂಭವಾದವು. 'ಬ್ರೇಕ್ ಸ್ಟಫ್' ಎಂಬ ಹಾಡನ್ನು ಹಾಡುವ ಸಮಯದಲ್ಲಿ, ಅಭಿಮಾನಿಗಳು ಗೋಡೆಗಳಿಂದ ಪದರಹಲಗೆಗಳನ್ನು ಕಿತ್ತಿಹಾಕುತ್ತಿದ್ದರು. ಈ ಕಾರ್ಯಕ್ರಮ ನಡೆದ ಕೆಲವು ದಿನಗಳ ಕಾಲ, ಬಲಾತ್ಕಾರವೂ ಸೇರಿದಂತೆ ಹಲವು ರೀತಿಯ ಲೈಂಗಿಕ ಅತ್ಯಾಚಾರಗಳು ನಡೆದುದರ ಕುರಿತು ವರದಿಗಳು ಕೇಳಿಬಂದವು. ಕೆಲವನ್ನು ರೆಕಾರ್ಡ್ ಸಹ ಮಾಡಲಾಗಿತ್ತಂತೆ.[೭] ಇದರ ಪರಿಣಾಮವಾಗಿ, ಮಾರನೆಯ ದಿನ ರೆಡ್ ಹಾಟ್ ಚಿಲಿ ಪೆಪರ್ಸ್ ತಂಡವು ಕಾರ್ಯಕ್ರಮ ನಡೆಸುತ್ತಿದ್ದಾಗ, ಬೇಕೆಂತಲೇ ಹಚ್ಚಲಾದ ಬೆಂಕಿ ಮತ್ತು ಲೂಟಿ ಕೃತ್ಯಗಳ ನಡೆದವು. ಈ ಹಿಂಸಾಘಟನೆಗಳಿಗೆ ಲಿಂಪ್ ಬಿಜ್ಕಿಟ್ ತಂಡವೇ ಕಾರಣ ಎಂದು ಕೆಲವರು ಹೇಳಿದ್ದಾರೆ. ಆದರೂ, ತಾವು ಕಾರ್ಯಕ್ರಮ ನಡೆಯುತ್ತಿದ್ದಾಗ ವರ್ತಿಸಿದ್ದು ಜನರನ್ನು ಉದ್ವಿಗ್ನಗೊಳಿಸಲು ಅಲ್ಲ, ಎಂದು ಡರ್ಸ್ಟ್ ಹೇಳಿಕೊಂಡಿದ್ದರು.
ಈ ಘಟನೆಯೊಂದಿಗೆ, ವಾದ್ಯತಂಡದ ಸದಸ್ಯರನ್ನೂ ಒಳಗೊಂಡ ವಿವಾದಗಳು ಹುಟ್ಟಿದವು. ವಿಶೇಷವಾಗಿ, ಮೆಟಲ್ ಸಂಗೀತ ಶೈಲಿಯ ವಾದ್ಯತಂಡ ಸ್ಲಿಪ್‌ನಾಟ್, ಒಜಿ ಒಸ್ಬೊರ್ನ್ ತಂಡದ ಗಿಟಾರ್ ವಾದಕ ಜಾಕ್ ವೈಲ್ಡ್‌ರೊಂದಿಗೆ ವಾಗ್ವಾದಕ್ಕಿಳಿದರಲ್ಲದೆ, ಕ್ರೀಡ್ ತಂಡದ ಮುಂದಾಳು ಸ್ಕಾಟ್ ಸ್ಟ್ಯಾಪ್‌ರೊಂದಿಗೆ ಡರ್ಸ್ಟ್ ಹೊಡೆದಾಟಕ್ಕಿಳಿದಿದ್ದರು. ಲಿಂಪ್ ಬಿಜ್ಕಿಟ್ ವಾದ್ಯತಂಡವು ಖ್ಯಾತ ರ್‌ಯಾಪರ್‌ಗಳಾದ ಎಮಿನೆಮ್ ಮತ್ತು ಎವರ್ಲಾಸ್ಟ್‌ರೊಂದಿಗೂ ಜಗಳವಾಡಿತ್ತು. ಟ್ಯಾಪ್‌ರೂಟ್ ತಂಡವು ತನ್ನ ಅಂತರಜಾಲತಾಣದಲ್ಲಿ, ತನ್ನ ಉತ್ತರ-ನೀಡುವ ಯಂತ್ರದಲ್ಲಿ ಡರ್ಸ್ಟ್ ಬಿಟ್ಟುಹೋಗಿದ್ದ ಸಂದೇಶದಲ್ಲಿ 'ಸೇಡು' ವ್ಯಕ್ತಪಡಿಸಿದ್ದರು, ಎನ್ನಲಾಗಿದೆ. ಇದಕ್ಕೆ ಕಾರಣ, ಅವರ ರೆಕಾರ್ಡ್ ಲೇಬಲ್‌ನೊಂದಿಗೆ ಸಂಸ್ಥೆ ಗುತ್ತಿಗೆಯನ್ನು ಅಂತ್ಯಗೊಳಸಿದ್ದದ್ದು.
ಚಾಕೊಲೇಟ್ ಸ್ಟಾರ್ಫಿಷ್ (2000–2001)
[ಬದಲಾಯಿಸಿ]ಹದಿನೈದು ತಿಂಗಳುಗಳ ನಂತರ, ಚಾಕೊಲೇಟ್ ಸ್ಟಾರ್ಫಿಷ್ ಅಂಡ್ ದಿ ಹಾಟ್ ಡಾಗ್ ಫ್ಲೇವರ್ಡ್ ವಾಟರ್, 17 ಅಕ್ಟೋಬರ್ 2000ದಂದು ಬಿಡುಗಡೆಯಾಯಿತು. ಗಿಟಾರ್ ವರ್ಲ್ಡ್ ನೊಂದಿಗಿನ ಸಂದರ್ಶನದಲ್ಲಿ, ಆಲ್ಬಮ್‌ನ ವಿಲಕ್ಷಣ ಶೀರ್ಷಿಕೆಯ ಅರ್ಥವನ್ನು ಗಿಟಾರ್ ವಾದಕ ವೆಸ್ ಬೊರ್ಲೆಂಡ್ ವಿವರಿಸಿದರು. ಫ್ರೆಡ್ ಒಬ್ಬ ಮುಟ್ಠಾಳ, ಒಬ್ಬ ಚಾಕೊಲೇಟ್ ಸ್ಟಾರ್ಫಿಷ್ (ಚಾಕೊಲೇಟ್ ರೂಪದ ನಕ್ಷತ್ರಮೀನು) ಎಂದು ನಿರೂಪಿಸಲಾಗಿತ್ತು, ಹಾಟ್ ಡಾಗ್ ಫ್ಲೇವರ್ಡ್ ವಾಟರ್ ಎಂಬುದು, 'ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ವಾಹನ ಇಂಧನ ತುಂಬುವ ಕೇಂದ್ರದಲ್ಲಿನ ನೀರು ಹಾಟ್ ಡಾಗ್ ಹೊರತುಪಡಿಸಿ, ಎಲ್ಲಾ ತರಹದ ರುಚಿಗಳನ್ನೂ ಹೊಂದಿತ್ತು' ಎಂಬ ಹಾಸ್ಯ ಸ್ವಾರಸ್ಯದ ಮೂಲಕ ಬಂದಿತ್ತು. ಈ ಆಲ್ಬಮ್ ಬಿಡುಗಡೆಯಾದ ಮೊದಲ ವಾರದಲ್ಲೇ, U.S.ನಲ್ಲಿ ಅತಿ ಹೆಚ್ಚು ಪ್ರತಿಗಳು (ಸುಮಾರು ಒಂದು ದಶಲಕ್ಷ) ಮಾರಾಟವಾದ ರಾಕ್ ಆಲ್ಬಮ್ ಎಂಬ ದಾಖಲೆ ಸೃಷ್ಟಿಸಿತು. 'ಚಾಕೊಲೇಟ್ ಸ್ಟಾರ್ಫಿಷ್ ಅಂಡ್ ದಿ ಹಾಟ್ ಡಾಗ್ ಫ್ಲೇವರ್ಡ್ ವಾಟರ್' ಗೋಲ್ಡ್, ಪ್ಲ್ಯಾಟಿನಮ್ ಪ್ರಮಾಣಿತವಾಗಿದ್ದಲ್ಲದೆ, ಆರು ಬಾರಿ ಮಲ್ಟಿ ಪ್ಲಾಟಿನಮ್ ಪ್ರಮಾಣಿತವಾಯಿತು.[೮] ಮೊದಲ ಎರಡು ಏಕಗೀತೆಗಳಾದ 'ಮೈ ಜೆನರೇಷನ್' ಮತ್ತು 'ರೊಲಿನ್' (ಏರ್ ರೇಯ್ಡ್ ವೆಹಿಕಲ್)' ಈ ಆಲ್ಬಮ್ ಉತ್ತೇಜನಾ ಸಮಾರಂಭದಲ್ಲಿ ಬಿಡುಗಡೆಯಾದವು. 'ಟೇಕ್ ಎ ಲುಕ್ ಅರೌಂಡ್' ಹಾಡನ್ನು ಚಲನಚಿತ್ರದ ಶೀರ್ಷಿಕೆ ಗೀತೆಯ ರೂಪದಲ್ಲಿ ಪಟ್ಟಿಗೆ ಸೇರಿಸಿಕೊಳ್ಳಲಾಯಿತು. Mission: Impossible 2 ಮೆಥಡ್ ಮ್ಯಾನ್, ರೆಡ್‌ಮ್ಯಾನ್ ಮತ್ತು DMX ಇವರನ್ನು ಒಳಗೊಂಡ "ರೊಲಿನ್' (ಅರ್ಬನ್ ಅಸಾಲ್ಟ್ ವೆಹಿಕಲ್)" ಎಂಬ ರೀಮಿಕ್ಸ್ ಅಲ್ಪಪ್ರಮಾಣ ಯಶಸ್ಸು ಕಂಡುಕೊಂಡಿತು. ದಿ ಫಾಸ್ಟ್ ಅಂಡ್ ದಿ ಪ್ಯೂರಿಯಸ್ ಎಂಬ ಚಲನಚಿತ್ರದಲ್ಲಿ ಇದನ್ನು ಸೇರಿಸಲಾಯಿತು. ನಾಲ್ಕನೆಯ ಏಕಗೀತ ಮೈ ವೇ ಯನ್ನು ವರ್ಲ್ಡ್ ರೆಸ್ಲಿಂಗ್ ಎಂಟರ್ಟೇನ್ಮೆಂಟ್‌ನ ರೆಸ್ಲ್‌ಮ್ಯಾನಿಯಾ ಎಕ್ಸ್-ಸೆವೆನ್‌ನ ಆರಂಭಿಕ ಶೀರ್ಷಿಕೆಯಾಗಿ ಸೇರಿಸಿಕೊಳ್ಳಲಾಯಿತು. ಈ ಆಲ್ಬಮ್ ಹಲವು ವಿಮರ್ಶಕರಿಂದ 'ಕಳಪೆ' ಎಂಬ ಟೀಕೆ-ಟಿಪ್ಪಣಿಗೆ ಗುರಿಯಾಯಿತು.[೯]
ವಿವಾದಗಳು
[ಬದಲಾಯಿಸಿ]ಇಸವಿ 2001ರಲ್ಲಿ ಆಸ್ಟ್ರೇಲಿಯಾ ಪ್ರವಾಸದಂದು, ಬಿಗ್ ಡೇ ಔಟ್ ಉತ್ಸವದಲ್ಲಿ ಒಂದು ಸಾವು ಸಂಭವಿಸುವುದರೊಂದಿಗೆ ಈ ವಿವಾದವು ಮುಂದುವರೆಯಿತು. ಮೊಷ್ ಪಿಟ್‌ನಲ್ಲಿನ ವೇದಿಕೆಗೆ ಅಭಿಮಾನಿಗಳು ಮುನ್ನುಗ್ಗಿದಾಗ ಹದಿಹರೆಯದ ಯುವತಿ ಜೆಸಿಕಾ ಮಿಚಲಿಕ್‌ಎಂಬಾಕೆ ಉಸಿರು ಕಟ್ಟಿದ ಕಾರಣ ಮೃತಳಾದಳು. ಪ್ರೆಡ್ ಡರ್ಸ್ಟ್ ಜನರನ್ನು ಪ್ರಚೋದಿಸುತ್ತಿದ್ದರು, ಘಟನೆ ಸಂಭವಿಸಿದ ನಂತರ ಫ್ರೆಡ್ ಜನರನ್ನು ಶಾಂತಗೊಳಿಸುವಲ್ಲಿ ವಿಫಲರಾದರು, ಎಂದು ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಸಾಕ್ಷಿಗಳು ಹೇಳಿಕೊಂಡರು. ಮಿಚಾಲಿಕ್‌ಳನ್ನು ಸಿಡ್ನಿಯ ಕಾಂಕಾರ್ಡ್ ಹಾಸ್ಪಿಟಲ್‌ಗೆ ಸಾಗಿಸಲಾಯಿತು. ಐದು ದಿನಗಳ ನಂತರ ಆಕೆ ಅಲ್ಲಿ ಮೃತಳಾದಳು.
ಡರ್ಸ್ಟ್ ನ್ಯಾಯಾಲಯಗಳಲ್ಲಿ ಸಾಕ್ಷ್ಯ ಹೇಳಿದರು. ವಿಚಾರಣೆಯಲ್ಲಿ, ಅವರು U.S.ನಿಂದ ವೀಡಿಯೊ ಸಮ್ಮೇಳನದ ಮೂಲಕ ಹೇಳಿಕೊಂಡಿದ್ದೇನೆಂದರೆ, ಕಾರ್ಯಕ್ರಮದ ಆಯೋಜಕರಾದ ಆರೊನ್ ಜ್ಯಾಕ್ಸನ್, ವಿಲ್ ಪಿಯರ್ಸ್ ಮತ್ತು ಅಮರ್ ಟೇಲರ್ ಮತ್ತು ಪ್ರವರ್ತಕ ವಿವಿಯನ್ ಲೀಸ್‌ರಿಗೆ ಬಹಳ ಕಡಿಮೆ ಭದ್ರತಾ ವ್ಯವಸ್ಥೆಯ ಅಪಾಯಗಳ ಕುರಿತು ಅವರು ಎಚ್ಚರಿಸಿದ್ದು,[೧೦] ಈ ಭದ್ರತಾ ವಿವಾದವನ್ನು ಬಗೆಹರಿಸದಿದ್ದಲ್ಲಿ ಲಿಂಪ್ ಬಿಜ್ಕಿಟ್ ತಂಡವು ಪ್ರವಾಸವನ್ನು ಮೊಟಕುಗೊಳಿಸುವ ಸಾಧ್ಯತೆಯಿದೆಯೆಂದು ಹೇಳಿದ್ದರು. ಗಲಾಟೆಯ ಸುದ್ದಿ ತಲುಪಿದ ಮೇಲೂ ಸಹ ವಾದ್ಯತಂಡವು ತನ್ನ ಪ್ರದರ್ಶನವನ್ನು ನಿಲ್ಲಿಸಲಿಲ್ಲವೆಂದು ಬಿಗ್ ಡೇ ಔಟ್ ಪರ ವಕೀಲರು ಲಿಂಪ್ ಬಿಜ್ಕಿಟ್ ತಂಡದ ಮೇಲೆ ದೂರಿತ್ತರು.
ಗಿಟಾರ್, ಡ್ರಮ್ ಮತ್ತು ಬಾಸ್‌ಗಳ ವಾದ್ಯ ನಿಂತ ಮೇಲೂ, DJ ಲೀತಲ್ ಮೆಲ್ಲನೆ ಕಂಪ್ಯೂಟರ್-ನಿರ್ಮಿತ ಆವರ್ತನವನ್ನು ನುಡಿಸುತ್ತಿದ್ದರಂತೆ. ಈ ಅಂತರವಾದನವನ್ನು (ವಿರಾಮದ ಅಂಕದಲ್ಲಿ)ನುಡಿಸುವ ಜವಾಬ್ದಾರಿಯನ್ನು ಲೀತಲ್ ಹೊತ್ತಿದ್ದರು, ಎಂದು ಡರ್ಸ್ಟ್ ಒಪ್ಪಿಕೊಂಡರೂ, ಈ ಮೆಲ್ಲನೆಯ ಮಧುರ ಸಂಗೀತವು ಪ್ರೇಕ್ಷಕರ ಮೇಲೆ ಸ್ತಬ್ದಗೊಳಿಸುವ ಪ್ರಭಾವ ಬೀರಿತೆಂದು ಹೇಳಿಕೊಂಡರು.
ಈ ದುರ್ಘಟನೆಯ ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ, ಒಂದೆಡೆ ವಾದ್ಯತಂಡ ಆ ಹುಡುಗಿಯ ನೆರವಿಗೆ ಹೋಗುವಲ್ಲಿ ಇನ್ನಷ್ಟು ಕಾಳಜಿ ವಹಿಸಬಹುದಾಗಿತ್ತು ಎಂದರೂ, ಆ ಗೋಷ್ಟಿಯ ಆಯೋಜಕರಾದ ಕ್ರಿಯೇಟಿವ್ ಎಂಟರ್ಟೇನ್ಮೆಂಟ್ ಆಸ್ಟ್ರೇಲಿಯಾ ದೂರಿನ ಹೆಚ್ಚು ಪಾಲು ಹೊರಬೇಕಾಯಿತು. ವೀಡಿಯೊ ಚಿತ್ರೀಕರಣಗಳನ್ನು ವೀಕ್ಷಿಸಿ, ಸಾಕ್ಷ್ಯಗಳನ್ನೆಲ್ಲ ಪರಿಗಣಿಸಿದ ನಂತರ, 'ಲಿಂಪ್ ಬಿಜ್ಕಿಟ್ ವಾದ್ಯತಂಡವು ವೇದಿಕೆಗೆ ಬಂದಾಗ ಪ್ರೇಕ್ಷಕರ ಸಾಂದ್ರತೆ ಬಹಳ ಹೆಚ್ಚಾಗಿತ್ತು, ಆದ್ದರಿಂದ ತಂಡದ ಸುತ್ತಲೂ ಪಂಜರವೊಂದನ್ನು ನಿರ್ಮಿಸಬೇಕಾಯಿತು' ಎಂದು ಆ ಘಟನೆಯ ವಿಚಾರಣಾ ನ್ಯಾಯಾಧೀಶ ಮಿಲೆಜ್ ಹೇಳಿದರು.[೧೧]
ಬೊರ್ಲೆಂಡ್‌ರ ಮೊದಲ ವಿದಾಯ
[ಬದಲಾಯಿಸಿ]ಇಸವಿ 2001ರ ಶರತ್ಕಾಲದಲ್ಲಿ, ವೆಸ್ ಬೊರ್ಲೆಂಡ್ ಮೊದಲ ಬಾರಿಗೆ ಲಿಂಪ್ ಬಿಜ್ಕಿಟ್ ತಂಡಕ್ಕೆ ವಿದಾಯ ಹೇಳಿದರು. ಡರ್ಸ್ಟ್‌ರೊಂದಿಗಿನ ಅವರ ಸಂಬಂಧ ಕೆಟ್ಟಿರುವುದು ಈ ನಿರ್ಧಾರಕ್ಕೆ ಕಾರಣವಾಯಿತು. ಬೊರ್ಲೆಂಡ್ ವಿದಾಯವು ವಾದ್ಯತಂಡಕ್ಕೆ ದೊಡ್ಡ ಆಘಾತ; ಎಂದು ಅಭಿಮಾನಿಗಳು ಮತ್ತು ಟೀಕಾಕಾರರು ಅಭಿಪ್ರಾಯಪಟ್ಟರು. ಅವರ ವಿಶಿಷ್ಟ, ವ್ಯಾಪಕ ಸೃಜನತೆಯ ಕಾರಣ, ಈ ವಾದ್ಯತಂಡದಲ್ಲಿ ಅವರು ಒಬ್ಬ ಪ್ರಮುಖ ರಚನಾತ್ಮಕ ಅಂಶ ಎಂದು ಉಲ್ಲೇಖಿತರಾಗಿದ್ದರು. ವೆಸ್ ಬೊರ್ಲೆಂಡ್‌ರೊಂದಿಗೆ ವಾದ್ಯತಂಡ ರಚಿಸುತ್ತಿದ್ದ ಕೊನೆಯ ಗೀತೆ 'ರಿಲ್ಯಾಕ್ಸ್' ಇದು ಫ್ರಾಂಕೀ ಗೋಸ್ ಟು ಹಾಲಿವುಡ್‌ನ ಹಾಡಿನ ಕುರಿತಾಗಿತ್ತು. ಇದು ಝೂಲ್ಯಾಂಡರ್ ಧ್ವನಿಪಥದಲ್ಲಿರುವ ನಿರೀಕ್ಷೆಯಿತ್ತು.
ರಿಸಲ್ಟ್ಸ್ ಮೇ ವೇರಿ (2002–2004)
[ಬದಲಾಯಿಸಿ]ಬೊರ್ಲೆಂಡ್‌ರ ಅನುಪಸ್ಥಿತಿಯಲ್ಲಿ, ಲಿಂಪ್ ಬಿಜ್ಕಿಟ್ ಒಬ್ಬ ಹೊಸ ಗಿಟಾರ್ ವಾದಕರಿಗಾಗಿ 2002ರಲ್ಲಿ ರಾಷ್ಟ್ರಾದ್ಯಂತ ಪುಟ್ ಯುವರ್ ಗಿಟಾರ್ ವೇರ್ ಯುವರ್ ಮೌತ್ ಈಸ್ ವಾದಕ-ಪರೀಕ್ಷೆ ನಡೆಸಿತು.[೧೨] ವಾದ್ಯತಂಡದಲ್ಲಿ ಒಬ್ಬ ಮಹಿಳೆ ಅಥವಾ ಒಬ್ಬರಿಗಿಂತಲೂ ಹೆಚ್ಚು ಸದಸ್ಯರನ್ನು ಸೇರಿಸಿಕೊಳ್ಳುವ ಇಂಗಿತವನ್ನು ಡರ್ಸ್ಟ್ ವ್ಯಕ್ತ ಪಡಿಸಿದರು. ಸಾವಿರಾರು ಆಕಾಂಕ್ಷಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಆಕಾಂಕ್ಷಿಗಳು ತಾವು ಯಾವುದೇ ಗಿಟಾರ್ ಗೀತಭಾಗಗಳನ್ನು ನುಡಿಸಿದರೂ, ಲಿಂಪ್ ಬಿಜ್ಕಿಟ್ ಅದರ ಸಂಪೂರ್ಣ ಸ್ವಾಮ್ಯ ಹೊಂದುತ್ತದೆ, ಎಂಬ ಕರಾರಿಗೆ ಸ್ಪರ್ಧಾರ್ಥಿಗಳು ಸಹಿ ಹಾಕಬೇಕು; ಎಂಬ ವದಂತಿ ಹಬ್ಬಿದಾಗ ವಿವಾದ ತಲೆಯೆತ್ತಿತು. ಮೊದಲ ಸುತ್ತಿನಲ್ಲಿ ಪ್ರತಿಯೊಬ್ಬ ಸ್ಪರ್ಧಾರ್ಥಿಗೂ ಕೇವಲ ಅರವತ್ತು ಸೆಕೆಂಡ್‌ಗಳ ಅವಕಾಶವಿತ್ತು. ಕ್ಯಾಲಿಫೊರ್ನಿಯಾದ ಫ್ರೆಸ್ನೊ ಮೂಲದ ಮೊಂಟ್ ಪಿಟ್ಮನ್, ಅನೂಷ್ ಸಬೊಕ್ಟಕಿನ್ ಮತ್ತು ಜೊನಾಸ್ ಆಂಡರ್ಸನ್ ಅಂತಿಮ ಸುತ್ತಿಗೆ ಬಂದ ಸ್ಪರ್ಧಾರ್ಥಿಗಳಾಗಿದ್ದರು.
ದಿನಾಂಕ 30 ಮಾರ್ಚ್ 2003ರಂದು, ಲಿಂಪ್ ಬಿಜ್ಕಿಟ್ ತಂಡವು ವರ್ಲ್ಡ್ ರೆಸ್ಲಿಂಗ್ ಎಂಟರ್ಟೇನ್ಮೆಂಟ್‌ನ ರೆಸ್ಲ್‌ಮ್ಯಾನಿಯಾ XIXದಲ್ಲಿ ನೇರ ಸಂಗೀತಗೋಷ್ಠಿ ನೀಡಿತು. ಎರಡು ವರ್ಷಗಳ ನಂತರ ಈ ವಾದ್ಯತಂಡದ ಮೊದಲ ಕಾರ್ಯಕ್ರಮ ಇದಾಗಿತ್ತು. ಈ ಕಾರ್ಯಕ್ರಮದಲ್ಲಿ ವಾದ್ಯತಂಡವು 'ಕ್ರ್ಯಾಕ್ ಅಡಿಕ್ಟ್' ಮತ್ತು 'ರೊಲಿನ್' (ಅಂಡರ್ಟೇಕರ್‌ನ ಶೀರ್ಷಿಕೆ ಗೀತೆ) ಗೀತೆಗಳನ್ನು ನುಡಿಸಿತು.[೧೩] ಗಿಟಾರ್ ವಾದಕರ ಕೊರತೆಯಿದ್ದರೂ ಸಹ, ತಂಡವು ಹಲವು ಸಂಗೀತಗೋಷ್ಠಿ ಪ್ರವಾಸಗಳಿಗೆ ಹೋಗಲು ಅನುವಾಯಿತು. ರೆಸ್ಲ್‌ಮ್ಯಾನಿಯಾ ಕಾರ್ಯಕ್ರಮದಲ್ಲಿ ಗಿಟಾರ್ ನುಡಿಸಿದವರು ಕೊರ್ನ್ ತಂಡದ ಹೆಡ್ ಹಾಗೂ ಸ್ನಾಟ್ ತಂಡದ ಮೈಕ್ ಸ್ಮಿತ್ ಎಂದು ಆನಂತರ ತಿಳಿದುಬಂದಿತು.
ಈ ಸಮಯದಲ್ಲಿ, ಗಿಟಾರ್ ವಾದಕರೊಂದಿಗೆ ಹಲವು ಜಂಟಿ-ವ್ಯವಸ್ಥೆಗಳ ಕುರಿತು ಡರ್ಸ್ಟ್ ಮಾತನಾಡಿದರು. ಅಲ್ಬಮ್‌ಗಾಗಿ ಕೆಲವು ರ್‌ಯಾಪ್ ಸಂಗೀತಗಾರರನ್ನೂ ಸಹ ಒಳಗೊಳ್ಳುವ ಇಂಗಿತವಿತ್ತು. ಇವರಲ್ಲಿ ವೀಜರ್‌ನ ರಿವರ್ಸ್ ಕುವೊಮೊ, ಹೆಲ್ಮೆಟ್‌ನ ಪೇಜ್ ಹ್ಯಾಮಿಲ್ಟನ್, ಮಿನಿಸ್ಟ್ರಿಯ ಆಲ್ ಜೊರ್ಗೆನ್ಸೆನ್, ಹೆಡ್ ಆಫ್ ಕೊರ್ನ್ ಹಾಗೂ ಜೇ-ಝಡ್, ಬುಬ್ಬಾ ಸ್ಪಾರ್ಕ್ಸ್ ಮತ್ತು ಸ್ನೂಪ್ ಡಾಗ್ ಸೇರಿದ್ದರು. ವೆಲ್ಚ್ ಬರೆದ 'ಬಿಲ್ಡ್ ಎ ಬ್ರಿಡ್ಜ್' ಹಾಗೂ ಸ್ನೂಪ್ ಡಾಗ್ ನುಡಿಸಿದ್ದ 'ರೆಡ್ ಲೈಟ್ - ಗ್ರೀನ್ ಲೈಟ್' ಹೊರತುಪಡಿಸಿ, ಮೇಲೆ ತಿಳಿಸಲಾದ ಗಿಟಾರ್ ವಾದಕರುಗಳನ್ನೊಳಗೊಂಡ ಯಾವುದೇ ಹಾಡೂ ಆಲ್ಬಮ್‌ನಲ್ಲಿ ಸೇರಿಸಲಾಗಲಿಲ್ಲ.
'ಪುಟ್ ಯುವರ್ ಗಿಟಾರ್ ವೇರ್ ಯುವರ್ ಮೌತ್ ಈಸ್' ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಬಂದವರ ಬದಲಿಗೆ, ಮುಂಚೆ ಸ್ನಾಟ್ ತಂಡದಲ್ಲಿ ಗಿಟಾರ್ ನುಡಿಸುತ್ತಿದ್ದ ಮೈಕ್ ಸ್ಮಿತ್‌ರನ್ನು ಸೇರಿಸಿಕೊಳ್ಳಲಾಯಿತು. ತಮ್ಮ ಶೈಲಿಯಲ್ಲಿನ ಬದಲಾವಣೆಯನ್ನು ಉತ್ತೇಜಿಸಲು, ವಾದ್ಯತಂಡವು ತನ್ನ ಲೊಗೊವನ್ನು 'ಲಿಂಪ್ಬಿಜ್ಕಿಟ್' ಗೆ ಪರಿವರ್ತಿಸಿತು.
ಮುಂಬರುವ ಬಿಡುಗಡೆಯೊಂದಕ್ಕಾಗಿ ವಾದ್ಯತಂಡವು ಒಂದು ಆಲ್ಬಮ್ ಹಿಡಿಸುವಷ್ಟು ಗೀತೆಗಳನ್ನು ಆಗಲೇ ಧ್ವನಿಮುದ್ರಣ ಮಾಡಿಯಾಗಿತ್ತು. ಆದರೆ, ಈಗ ಮೈಕ್ ಸ್ಮಿತ್ ವಾದ್ಯತಂಡದಕ್ಕೆ ಸೇರ್ಪಡೆಯಾಗುವುದರೊಂದಿಗೆ, ಮುಂದಿನ ಆಲ್ಬಮ್ ಹಿಡಿಸುವಷ್ಟು ಹಾಡುಗಳನ್ನು ಸ್ಟುಡಿಯೊದಲ್ಲಿಯೇ ಸಂಯೋಜಿಸುವುದೆಂದು ನಿರ್ಧರಿಸಲಾಯಿತು. ಇದರಲ್ಲಿ ಆಯ್ದುಕೊಳ್ಳಲಾಗುವ ಅತ್ಯುತ್ತಮ ಧ್ವನಿಪಥಗಳನ್ನು ಅಂತಿಮ ಬಿಡುಗಡೆಗೆ ಬಳಸಲಾಗುವುದಿತ್ತು. ಆಲ್ಬಮ್‌ಗೆ ಆಯ್ಕೆಯಾಗದ ಹಾಡುಗಳನ್ನು 'ಆಫ್ ದಿ ರೆಕಾರ್ಡ್' ಹಾಡುಗಳೆಂದು ಫ್ರೆಡ್ ಉಲ್ಲೇಖಿಸುವರು; ಅವುಗಳದ್ದೇ ಒಂದು ಪ್ರತ್ಯೇಕ ಆಲ್ಬಮ್ ಮಾಡಬಹುದು ಎಂದು ಹೇಳುತ್ತಿದ್ದರು.
ಕಳೆದ 23 ಸೆಪ್ಟೆಂಬರ್ 2003ರಂದು, ತಂಡದ ನಾಲ್ಕನೆಯ ಆಲ್ಬಮ್ 'ರಿಸಲ್ಟ್ಸ್ ಮೇ ವೇರಿ ' 320,000 ಪ್ರತಿಗಳು ಮಾರಾಟವಾಗಿ ಮೂರನೆಯ ಸ್ಥಾನ ಗಿಟ್ಟಿಸಿಕೊಳ್ಳುವುದರೊಂದಿಗೆ, ಬಹಳ ದಿವಸಗಳಿಂದ ಬಿಲ್ಬೋರ್ಡ್ 200 ಪಟ್ಟಿಯಲ್ಲಿ ತಂಡದ 'ಅಗ್ರಸ್ಥಾನ ಸಾಮ್ರಾಜ್ಯ' ಕೊನೆಯಾಯಿತು. ಇದು ಬಿಡುಗಡೆಯಾಗಿ ಐದು ವರ್ಷಗಳ ನಂತರ, 2008ರಲ್ಲಿ ಅಮೆರಿಕಾ ಸಂಯುಕ್ಥ ಸಂಸ್ಥಾನದಲ್ಲಿ ಒಂದು ದಶಲಕ್ಷ ಪ್ರತಿಗಳು ಮಾರಾಟವಾಗಿ, ಪ್ಲ್ಯಾಟಿನಮ್ ಪ್ರಮಾಣಪತ್ರ ಗಳಿಸಿತು. ಇದಕ್ಕೆ ಹೋಲಿಸಿದರೆ, ತಂಡದ ಮುಂಚಿನ ಸಂಯೋಜನೆ ಚಾಕೊಲೇಟ್ ಸ್ಟಾರ್ಫಿಷ್ ಅಂಡ್ ದಿ ಹಾಟ್ ದಾಗ್ ಫ್ಲೇವರ್ಡ್ ವಾಟರ್ ತನ್ನ ಮೊದಲ ವಾರದಲ್ಲಿ ಒಂದು ದಶಲಕ್ಷಕ್ಕಿಂತಲೂ ಹೆಚ್ಚು ಆಲ್ಬಮ್‌ಗಳ ಮಾರಾಟವಾಗಿತ್ತು.
ಈ ಆಲ್ಬಮ್ ವಿಮರ್ಶಕರಿಂದ ಬಹುಶಃ ಹೆಚ್ಚಿನ ಪಾಲು ಟೀಕೆಯನ್ನೇ ಪಡೆಯಿತು.[೧೪] ರೊಲಿಂಗ್ ಸ್ಟೋನ್ಸ್ ವಿಮರ್ಶೆಯು 5ರಲ್ಲಿ ಮೂರು ಅಂಕಿಗಳನ್ನು ಗಳಿಸಿತಾದರೂ, 'ಪ್ಲೇಲೌಡರ್ ತೀರಾ ಅಧ್ವಾನ' [೧೫] ಎಂದು ಜರಿಯಿತು. ಯಾಹೂ! ಲಾಂಚ್ '21ನೆಯ ಶತಮಾನದ ಸಂಸ್ಕೃತಿಯ ಶೂನ್ಯಸ್ಥಿತಿಯೊಳಗೆ ಒಂದು ಭಯಾನಕ ಇಣುಕುನೋಟವನ್ನು ನೀಡುತ್ತದೆ' ಎಂದು ಟಿಪ್ಪಣಿ ಮಾಡಿತು.[೧೬] ಆದೇನೇ ಇರಲಿ, ದಿ ಹೂ ತಂಡದ 'ಬಿಹೈಂಡ್ ಬ್ಲೂ ಐಯ್ಸ್' ಮುಖ್ಯವಾಹಿನಿ ರೇಡಿಯೊದಲ್ಲಿ ಸಾಧಾರಣ ಮಟ್ಟದ ಯಶಸ್ಸು ಕಂಡಿತು. ಹಾಲಿವುಡ್‌ನ ಪ್ರಸಿದ್ಧ ನಟಿ ಹ್ಯಾಲೆ ಬೆರಿ ಇದರ ವೀಡಿಯೊದಲ್ಲಿ ಕಾಣಿಸಿಕೊಂಡರು. ಈ ಆಲ್ಬಮ್‌ನಿಂದ ಆಯ್ದುಕೊಳ್ಳಲಾದ ಮೊದಲ ಏಕಗೀತೆಯಾಗಿ 'ಈಟ್ ಯು ಅಲೈವ್' ಬಿಡುಗಡೆಯಾಗಿತ್ತು.ಇದು ಈ ಹಾಡು ಅಮೆರಿಕಾದ ಎರಡೂ ರಾಕ್ ಶೈಲಿಯ ಗೀತೆಗಳ 20 ಸರ್ವೋತ್ತಮ ಪಟ್ಟಿಗಳಲ್ಲಿ ಸ್ಥಾನ ಗಳಿಸಿತು. ಇದರ ವೀಡಿಯೊದಲ್ಲಿ ನಟಿ ಥೊರಾ ಬಿರ್ಚ್ ಬೈಗುಳಗಳಿಗೆ ಈಡಾಗುವ ಹುಡುಗಿಯಾಗಿ ನಟಿಸಿದ್ದರೆ, ಆ ಹುಡುಗಿಯ ಅಪ್ಪನ ಪಾತ್ರದಲ್ಲಿ ನಟ ಬಿಲ್ ಪ್ಯಾಕ್ಸ್ಟನ್ ನಟಿಸಿದ್ದಾರೆ. ಆಲ್ಬಮ್‌ನ ಕಿರುಗೀತೆ ಬಿಲ್ಡ್ ಎ ಬ್ರಿಡ್ಜ್, ನವೆಂಬರ್ 2003ರಲ್ಲಿ ತೆರೆಕಂಡ WWEದ ಸರ್ವೈವರ್ ಸೀರೀಸ್ ಪೇ-ಪರ್-ವ್ಯೂ ನ ಅಧಿಕೃತ ಹಾಡಾಯಿತು. ಮೈಕ್ ಸ್ಮಿತ್ ತೊರೆದುಹೋದ ಹಾರಣ ಈ ಅಲ್ಬಮ್‌ನ್ನು ಅಧಿಕೃತ ಏಕಗೀತೆಯಾಗಿ ಬಿಡುಗಡೆಯಾಗಲಿಲ್ಲ. ಆಲ್ಬಮ್ 'ಆಲ್ಮೊಸ್ಟ್ ಒವರ್'ನಿಂದ ಹಾಡೊಂದು ರಾಕ್ ಟಾಪ್ 40 ಪಟ್ಟಿಯಲ್ಲಿ ಸ್ಥಾನ ಗಳಿಸಿತು. ಆದರೂ ಅದನ್ನು ಏಕಗೀತೆಯ ರೂಪದಲ್ಲಾಗಲೀ ಅಥವಾ ವೀಡಿಯೊ ರೂಪದಲ್ಲಾಗಲೀ ಬಿಡುಗಡೆಯಾಗಿರಲಿಲ್ಲ.
ಇಸವಿ 2003ರಲ್ಲಿ, ಮೆಟಲಿಕಾ 2003 ತಂಡದ ಸೇಂಟ್ ಆಂಗರ್ ಬಿಡುಗಡೆ ಉತ್ತೇಜನಕ್ಕಾಗಿ ಲಿಂಪ್ ಬಿಜ್ಕಿಟ್ ತಂಡವು ಪ್ರಮುಖ ತಂಡ ಮೆಟಲಿಕಾ, ಲಿಂಕಿನ್ ಪಾರ್ಕ್, ಡೆಫ್ಟೋನ್ಸ್ ಹಾಗೂ ಮಡ್ವೇಯ್ನ್ ತಂಡಗಳೊಂದಿಗೆ ಪ್ರವಾಸ ಕೈಗೊಂಡಿತು. IL (ಇಲಿನಾಯ್ ರಾಜ್ಯ)ದ ಶಿಕಾಗೊ ನಗರದ ಕಾರ್ಯಕ್ರಮವೊಂದರಲ್ಲಿ ಡರ್ಸ್ಟ್ ವೇದಿಕೆಯ ಮೇಲೆ ಬಂದಾಗೆಲ್ಲ ಪ್ರೇಕ್ಷಕರು ಅವರತ್ತ ಕೈಗೆ ಸಿಕ್ಕ ಸಾಮಾನುಗಳನ್ನೆಲ್ಲ ಎಸೆದು, ಚುಡಾಯಿಸಿದರು. ಪ್ರೇಕ್ಷಕರು ಅಶ್ಲೀಲವಾಗಿ 'ಫಕ್ ಫ್ರೆಡ್ ಹರ್ಸ್ಟ್' ಎಂದು ಕಿರುಚಿ ಅವರನ್ನು ಚುಡಾಯಿಸುತ್ತಲೇ ಇದ್ದರು. ಇದಕ್ಕೆ ಪ್ರತಿಯಾಗಿ, ಆರು ಹಾಡುಗಳನ್ನು ನುಡಿಸಿದ್ದ ಹರ್ಸ್ಟ್, ಧ್ವನಿಪ್ರೇಷಕವನ್ನು ಕೆಳಕ್ಕೆಸೆದು, ಪ್ರೇಕ್ಷಕರನ್ನು ಚುಡಾಯಿಸಿ, ವೇದಿಕೆಯಿಂದ ಆಚೆ ಹೋದರು.[೧೭]
ಬೊರ್ಲೆಂಡ್‌ರ ಎರಡನೆಯ ವಿದಾಯ ಮತ್ತು ವಿರಾಮ (2004–2008)
[ಬದಲಾಯಿಸಿ]ಜುಲೈ 2004ರುದ್ದಕ್ಕೂ, ವೆಸ್ ಬೊರ್ಲೆಂಡ್ ಲಿಂಪ್ ಬಿಜ್ಕಿಟ್ ವಾದ್ಯತಂಡದೊಂದಿಗೆ ಕಾರ್ಯನಿರತರಾಗಿದ್ದಾರೆಂದು ವದಂತಿಗಳು ಹರಿಯುತ್ತಿದ್ದವು. ಬೊರ್ಲೆಂಡ್ ವಾದ್ಯತಂಡದೊಂದಿಗೆ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ, ಎಂದು ವಾದ್ಯತಂಡದ ಅಭಿಮಾನಿಗಳ ಜಾಲಪುಟವು 8 ಜುಲೈ 2004ರಂದು ಅಧಿಕೃತ ಹೇಳಿಕೆ ನೀಡಿತು. ವೆಸ್ ಬೊರ್ಲೆಂಡ್ ಲಿಂಪ್ ಬಿಜ್ಕಿಟ್ ವಾದ್ಯತಂಡದೊಂದಿಗೆ ಕಾರ್ಯನಿರತರಾಗಿರುವ ಛಾಯಾಚಿತ್ರಗಳು ವಾದ್ಯತಂಡದ ಅಧಿಕೃತ ಜಾಲತಾಣದಲ್ಲಿ ಪ್ರಕಟಿತವಾದವು. ತಂಡದವರು 'ದಿ ಟ್ರೂತ್' ಎಂಬ ಹೊಸ ಹಾಡನ್ನು ನುಡಿಸುತ್ತಿರುವ ಲೈವ್ ವೀಡಿಯೊವನ್ನು ಅಂತರಜಾಲತಾಣದಲ್ಲಿ ಬಿತ್ತರಿಸಲಾಗಿತ್ತು.
ಬೊರ್ಲೆಂಡ್ ಪುನರಾಗಮನದ ಕುರಿತು ಡರ್ಸ್ಟ್ ಹೇಳಿದ್ದು ಹೀಗೆ: ಮೈಕ್ ತೊರೆದದ್ದು ನಮಗೆ ಸರಿಯೆನಿಸಿದೆ. ನಮ್ಮ ಕುಟುಂಬ ಮತ್ತು ಮೂಲ ಸ್ವಭಾವ ಪ್ರವೃತ್ತಿಗಳಿಗೆ ಬದ್ಧರಾಗಿರುವ ಜನರು ನಾವು, ಇಡಿಯಾಗಿ ನೇರ ಅರಿವಿನ ಮೇಲೆ ನಾವು ಕಾರ್ಯಪ್ರವೃತ್ತರಾಗುವೆವು. ಮೈಕ್ ಅಂತಹ ಮನುಷ್ಯನಾಗಿರಲಿಲ್ಲ. ಆತನೊಂದಿಗೆ ಕೆಲಸ ಮಾಡುವಲ್ಲಿ ಮಜಾ ಎನಿಸಿದರೂ, ಮಾನಸಿಕವಾಗಿ ಆತನು ನಮಗೆ ಬೇಕಾಗಿದ್ದ ಸಮಯದಲ್ಲಿ ಅಲ್ಲಿ ಇರಲೇ ಇಲ್ಲ [೧೮] ಈ ಹಂತದಲ್ಲಿ, ವಾದ್ಯತಂಡವು ತನ್ನ ಮುಂಚಿನ ಲಾಂಛನವನ್ನು ಪುನಃ ಬಳಸಲು ಅನುವಾಯಿತು.
ನಿರ್ಮಾಪಕ ರಾಸ್ ರಾಬಿನ್ಸನ್‌ರೊಂದಿಗೆ ವಾದ್ಯತಂಡವು ಸ್ಟುಡಿಯೊಗೆ ಮರಳಿತು. ಥ್ರೀ ಡಾಲರ್ ಬಿಲ್ ಯ್‌ಆಲ್$ ಆಲ್ಬಮ್ ರಚನೆಯಲ್ಲಿ ರಾಬಿನ್ಸನ್ ಹಿಂದೆ ಈ ತಂಡಕ್ಕೆ ಸಹಯೋಗಿತ್ವ ನೀಡಿದ್ದರು. ಈ ಬಾರಿ ಅವರು ತಂಡದ ಏಳು-ಧ್ವನಿಪಥವುಳ್ಳ EP ದಿ ಅನ್‌ಕ್ವೆಷ್ಚನಬಲ್ ಟ್ರೂತ್ (ಪಾರ್ಟ್ 1) ನಿರ್ಮಾಪಕರಾದರು. ತಂಡದ ಡ್ರಮರ್ ಜಾನ್ ಒಟ್ಟೊ ವೈಯಕ್ತಿಕ ಸಮಸ್ಯೆಗಳ ಕಾರಣ, ಕೇವಲ ಒಂದು ಹಾಡಿಗಾಗಿ ಮಾತ್ರ ಡ್ರಮ್ಸ್ ನುಡಿಸಲು ಸಾಧ್ಯವಾಯಿತು. ಉಳಿದ ಎಲ್ಲಾ ಹಾಡುಗಳಿಗೆ ಸ್ಯಾಮಿ ಸೀಗ್ಲರ್ ಡ್ರಮ್ಸ್ ನುಡಿಸಿದರು. ತಂಡದ ಮೊದಲ ಆಲ್ಬಮ್‌ನ ಒರಟಾದ ಲಕ್ಷಣವನ್ನು ಇದರಲ್ಲಿಯೂ ಉಂಟು ಎಂದು ಡರ್ಸ್ಟ್ ಅಭಿಮಾನಿಗಳಿಗೆ ಭರವಸೆ ನೀಡಿದರು. [ಸೂಕ್ತ ಉಲ್ಲೇಖನ ಬೇಕು]
ದಿನಾಂಕ 3 ಮೇ 2005ರಂದು ದಿ ಅನ್‌ಕ್ವೆಷ್ಚನಬಲ್ ಟ್ರೂತ್ (ಪಾರ್ಟ್ 1) ಏಳು ಧ್ವನಿಪಥಗಳುಳ್ಳ EP ಅವೃತ್ತಿಯಲ್ಲಿ, ಯಾವುದೇ ಅದ್ಧೂರಿ ಚಟುವಟಿಕೆಗಳಿಲ್ಲದೆ ಬಿಡುಗಡೆಯಾಯಿತು. ಇದು ಬಿಲ್ಬೋರ್ಡ್ 200 ಪಟ್ಟಿಯಲ್ಲಿ 24ನೆಯ ಸ್ಥಾನ ಗಳಿಸಿತು. ಮೊದಲ ವಾರದಲ್ಲಿ ಇದು ಕೇವಲ 37,000 ಪ್ರತಿಗಳ ಮಾರಾಟವಾಯಿತು. USನಲ್ಲಿ ಇದು 100,000ಕ್ಕಿಂತಲೂ ತುಸು ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿದೆ.[೧೯] ಇದು ಬಹುಮಟ್ಟಿಗೆ ಕಳಪೆ ವಿಮರ್ಶೆಗಳನ್ನು ಪಡೆಯಿತು. ಡರ್ಸ್ಟ್ ರೇಜ್ ಎಗೇನ್ಸ್ಟ್ ದಿ ಮೆಷಿನ್ ವಾದ್ಯತಂಡದ ಪ್ರಮುಖ ಗಾಯಕ ಝಾಕ್ ಡಿ ಲಾ ರೊಚಾರನ್ನು ಅನುಕರಿಸಲು ಹೊರಟಿದ್ದಾರೆ; ಎಂದು ಕೆಲವು ಟೀಕಾಕಾರರು ಅಭಿಪ್ರಾಯಪಟ್ಟರು.[೨೦]
ಲಿಂಪ್ ಬಿಜ್ಕಿಟ್ ತಂಡದ ಅತಿ ಜನಪ್ರಿಯ ಗೀತೆಗಳ ಮೊದಲ ಸಂಕಲನ ಗ್ರೇಟೆಸ್ಟ್ ಹಿಟ್ಸ್ 8 ನವೆಂಬರ್ 2005ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ವಾದ್ಯ ತಂಡದ ಮೊದಲ ನಾಲ್ಕು ಆಲ್ಬಮ್‌ಗಳಿಂದ ಆಯ್ದ ಗೀತೆಗಳಿವೆ. ಇದರ ಬಿಡುಗಡೆಯೊಂದಿಗೆ, ಹೆಚ್ಚುವರಿ DVDಯೊಂದನ್ನೂ ಬಿಡುಗಡೆಗೊಳಿಸಲಾಯಿತು. ವಾದ್ಯತಂಡದ ಛಾಪಿರುವ ಕಾರಣಕ್ಕೆ ಆಲ್ಬಮ್ ಮತ್ತು DVD ಉತ್ತೇಜಿತವಾಗಿತ್ತು. ತಮಗೆ ಉತ್ಸಾಹವಿಲ್ಲದ ಸಂಕಲನದ ಕುರಿತು ಸಂಸರ್ಶನಗಳನ್ನು ಬಲವಂತಕ್ಕೆ ನೀಡುತ್ತಿರುವೆನು ಎಂದು ಡರ್ಸ್ಟ್ ಅಭಿಪ್ರಾಯಪಟ್ಟಿದ್ದರು.[೨೧] ಈ ಉತ್ತೇಜನ ಫಲಕಾರಿಯಾಗದೆ, ಆಲ್ಬಮ್ ಕೇವಲ 47ನೆಯ ಸ್ಥಾನದಲ್ಲಿತ್ತು. 'ಈ ಬಿಡುಗಡೆ ಸುಮ್ಮನೆ ಕೆಲಸಕ್ಕೆ ಬಾರದ್ದು, ದುಂದು ವೆಚ್ಚ' ಎಂದು ವೆಸ್ ಬೊರ್ಲೆಂಡ್ ಕಡ್ಡಿ ಮುರಿದಂತೆ ಹೇಳಿಕೆ ನೀಡಿದರು.
ಗ್ರೇಟೆಸ್ಟ್ ಹಿಟ್ಸ್ ಬಿಡುಗಡೆಯ ನಂತರ, ವೆಸ್ ಬೊರ್ಲೆಂಡ್ ತಂಡವನ್ನು ತೊರೆದರು. ಇದರೊಂದಿಗೆ ಲಿಂಪ್ ಬಿಜ್ಕಿಟ್ ಅನಧಿಕೃತವಾಗಿ ವಿರಾಮಸ್ಥಿತಿಗೆ ಹೋಯಿತು. ಡರ್ಸ್ಟ್ ಪಾಪುಲೇಷನ್ 436 ಹಾಗೂ ದಿ ಲಾಂಗ್‌ಷಾಟ್ಸ್ ನಂತಹ ಚಲನಚಿತ್ರಗಳಲ್ಲಿ ನಟಿಸಿ ನಿರ್ದೇಶಿಸತೊಡಗಿದರು. ಒಟ್ಟೊ ಪುನಶ್ಚೇತನಾ ಚಿಕಿತ್ಸೆ ಪಡೆದು, ಇತರೆ ವಾದ್ಯತಂಡಗಳು ಮತ್ತು ಕಲಾವಿದರೊಂದಿಗೆ ಸಹಯೋಗಿತ್ವ ನಡೆಸಿದರು. ಇದೇ ರೀತಿ ವಾದ್ಯತಂಡದ ಇತರೆ ಸದಸ್ಯರಾದ ರಿವರ್ಸ್ ಮತ್ತು ಲೀತಲ್ ಸಹ ಇತರೆ ತಂಡಗಳೊಂದಿಗೆ ಸಹಯೋಗಿತ್ವ ಮಾಡಿಕೊಂಡರು.
ರಾಕ್ ಇಮ್ ಪಾರ್ಕ್ 2001 31 ಮಾರ್ಚ್ 2008ರಂದು ಬಿಡುಗಡೆಯಾಯಿತು. ಇಸವಿ 2001ರಲ್ಲಿ ತಂಡವು ನಡೆಸಿದ ರಾಕ್ ಇಮ್ ಪಾರ್ಕ್ ಕಾರ್ಯಕ್ರಮವನ್ನು ಆಲ್ಬಮ್ ಮತ್ತು DVD ದಾಖಲಿಸಿಕೊಂಡಿತು. ಜನಪ್ರಿಯತೆಯ ಉತ್ತುಂಗದಲ್ಲಿದ್ದ ವಾದ್ಯತಂಡದ ಕುರಿತು ಮಾಹಿತಿ ಹೊಂದಿತ್ತು.
ಪುನರ್ ಮಿಲನ, ಯುನಿಕಾರ್ನ್ ಎನ್ ರೇನ್ಬೊಸ್ ಪ್ರವಾಸ ಮತ್ತು ಹೊಸ ಆಲ್ಬಮ್ (2008–2009)
[ಬದಲಾಯಿಸಿ]ಇಸವಿ 2008ರ ಮಧ್ಯದಲ್ಲಿ, ಲಿಂಪ್ ಬಿಜ್ಕಿಟ್ ತಂಡವು ಪುನರಾಗಮನದ ಪ್ರವಾಸವನ್ನು ಕೈಗೊಳ್ಳುವುದೆಂಬ ವದಂತಿಗಳು ಹಬ್ಬತೊಡಗಿದವು. ಈ ವದಂತಿಗಳು ಆನಂತರ ನಿಜವಾದವು. ವಾದ್ಯತಂಡದ ವಿವಿಧ ಸದಸ್ಯರೊಂದಿಗಿನ ಸಂದರ್ಶನಗಳ ಪ್ರಕಾರ, ಟೆರಿ ಬಾಲ್ಸಮೊ ವೆಸ್ ಬೊರ್ಲೆಂಡ್ ಸ್ಥಾನವನ್ನು ತುಂಬುವವರಿದ್ದರು. ಆದರೆ ಬಾಲ್ಸಮೊ ಲಿಖಿತ ಗುತ್ತಿಗೆಗಾಗಿ ಒತ್ತಾಯಪಡಿಸುತ್ತಿದ್ದರು. ವಾದ್ಯವೃಂದವು ಇದನ್ನು ನೀಡಲು ಒಪ್ಪುತ್ತಿರಲಿಲ್ಲ. ವಾದ್ಯತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬರದಿದ್ದರೂ, ವೆಸ್, DJ ಲೀತಲ್ ಸೇರಿದಂತೆ ಲಿಂಪ್ ಬಿಜ್ಕಿಟ್ ವಾದ್ಯತಂಡದ ಸದಸ್ಯರು ಟ್ವಿಟರ್‌ನಲ್ಲಿ ದಾಖಲಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳತೊಡಗಿದ್ದರು. ಇದರಿಂದಾಗಿ ವದಂತಿಗಳಿಗೆ ಬಲವಾದ ಅಧಾರ ಸಿಕ್ಕಿದಂತಾಯಿತು, ಬೊರ್ಲೆಂಡ್ ಪುನರಾಗಮನದ ವಿಚಾರವು ಕೇವಲ ವದಂತಿಯಲ್ಲ, ಎಂಬುದು ಖಚಿತವಾಯಿತು. ಇಸವಿ 2008ರ ಅಪರಾರ್ಧದಲ್ಲಿ, ತಂಡವು ಮೊದಲ ಪರಿಪೂರ್ಣ ಆಲ್ಬಮ್‌ಗಾಗಿ ಹೊಸ ಗೀತೆಯನ್ನು ರಚಿಸುವಲ್ಲಿ ಮಗ್ನರಾಗಿದ್ದಾರೆಂದು ಬಾಸ್ ಗಿಟಾರ್ ವಾದಕ ಸ್ಯಾಮ್ ರಿವರ್ಸ್ ಹೇಳಿದರು. ಆರು ವರ್ಷಗಳಲ್ಲಿ ತಂಡವು ಪರಿಪೂರ್ಣ ಆಲ್ಬಮ್‌ನ್ನು ಹೊರತರುತ್ತಿರುವುದು ಇದೇ ಮೊದಲು.
ದಿನಾಂಕ 11 ಫೆಬ್ರವರಿ 2009ರಂದು, ಡರ್ಸ್ಟ್ ತಮ್ಮ ಟ್ವಿಟರ್ ಖಾತೆಯಲ್ಲಿ, '1am pacific time- limpbizkit.com tonight' ಎಂದು ನಮೂದಿಸಿದ್ದರು. ಈ ಅಂತರಜಾಲತಾಣವು ಹಲವು ವರ್ಷಗಳ ನಂತರ ಲಭ್ಯವಾದದ್ದು ಇದೇ ಮೊದಲ ಬಾರಿ. ಇದು ವೆಸ್‌ರ ಪುನರಾಗಮನವನ್ನು ಸಹ ಖಚಿತಪಡಿಸಿತು. ಮುಖಪುಟದಲ್ಲಿನ ಒಂದು ಬ್ಲಾಗ್‌ನಲ್ಲಿ ಫ್ರೆಡ್ ಡರ್ಸ್ಟ್ ಮತ್ತು ವೆಸ್ ಬೊರ್ಲೆಂಡ್ ಜಂಟಿ ಹೇಳಿಕೆ ನೀಡಿದರು.
“ | We decided we were more disgusted and bored with the state of heavy popular music than we were with each other. Regardless of where our separate paths have taken us, we recognize there is a powerful and unique energy with this particular group of people we have not found anywhere else. This is why Limp Bizkit is back.[೨೨] | ” |
ಎಂಟು ವರ್ಷಗಳ ನಂತರ, ದಿನಾಂಕ 20 ಮೇ 2009ರಂದು ಮೊಟ್ಟಮೊದಲ ಬಾರಿಗೆ ಲಾಟ್ವಿಯಾದಲ್ಲಿ ಲಿಂಪ್ ಬಿಜ್ಕಿಟ್ ತಂಡದ ಮೂಲ ತಂಡವು ಒಟ್ಟಿಗೆ ಸಂಗೀತ ಕಾರ್ಯಕ್ರಮ ನೀಡಿತು. ಆನಂತರ, ವಾದ್ಯತಂಡವು ಯುನಿಕಾರ್ನ್ ಎನ್ ರೇನ್ಬೊಸ್ ಟೂರ್ ಎಂಬ ಯುರೋಪಿನಾದ್ಯಂತ ಪ್ರವಾಸ ಕೈಗೊಂಡು ಕಾರ್ಯಕ್ರಮಗಳನ್ನು ನೀಡಿತು. ಜರ್ಮನ್ ಉತ್ಸವಗಳಾದ ರಾಕ್ ಇಮ್ ಪಾರ್ಕ್ ಮತ್ತು ರಾಕ್ ಆಮ್ ರಿಂಗ್‌ನಲ್ಲಿಯೂ ಸಹ ಕಾರ್ಯಕ್ರಮಗಳನ್ನು ಕ್ರಮವಾಗಿ 5 ಜೂನ್ ಮತ್ತು 7 ಜೂನ್‌ರಂದು ನಡೆಸಿದರು. ಐದು ದಿನಗಳ ನಂತರ, ವಾದ್ಯತಂಡವು UK ತಲುಪಿ, ಡೌನ್ಲೋಡ್ ಫೆಸ್ಟಿವಲ್‌ನಲ್ಲಿ ಕಾರ್ಯಕ್ರಮ ನಡೆಸಿತು. ದಿನಾಂಕ 1 ಆಗಸ್ಟ್‌ರಂದು, ಕೆರ್ರಾಂಗ್ಸ್ ವೀಕ್ ಆಫ್ ರಾಕ್ ಅಂಗವಾಗಿ, ಲಂಡನ್‌ನ HMV ಫೊರಮ್‌ನಲ್ಲಿ ಜನ ಕಿಕ್ಕಿರಿದು ಸೇರಿದ್ದ ಕಾರ್ಯಕ್ರಮವೊಂದರಲ್ಲಿ ವಾದ್ಯತಂಡವು ವೇದಿಕೆಯೇರಿತು. ಲಿಂಪ್ ಬಿಜ್ಕಿಟ್ ತಂಡವನ್ನು ಅಧಿಕೃತವಾಗಿ ಕೆರ್ರಾಂಗ್‌ನಲ್ಲಿ ಸೇರಿಸಿಕೊಳ್ಳಲಾಯಿತು. ಕೆರ್ರಾಂಗ್‌ನಲ್ಲಿರುವ ಹಾಲ್ ಆಫ್ ಫೇಮ್‌ನಲ್ಲಿಯೂ ಸಹ ವಾದ್ಯತಂಡವನ್ನು ಸೇರಿಸಿಕೊಳ್ಳಲಾಯಿತು. ಅವಾರ್ಡ್ಸ್; ಮಾರನೆಯ ದಿನ ವಾದ್ಯತಂಡವು ಸೊನಿಸ್ಫಿಯರ್ ಉತ್ಸವದಲ್ಲಿ ಕಾರ್ಯಕ್ರಮ ನೀಡಿತು. ಈ ತಂಡವು ಮೆಷಿನ್ ಹೆಡ್ ಹಾಗೂ ನೈನ್ ಇಂಚ್ ನೇಯ್ಲ್ಸ್ ತಂಡಗಳ ಕಾರ್ಯಕ್ರಮಗಳ ನಡುವೆ ತನ್ನ ಕಾರ್ಯಕ್ರಮ ನಡೆಸಿತು. ಆನಂತರ, ಎರಡು ವಾರಗಳೊಳಗೆ, ಲಿಂಪ್ ಬಿಜ್ಕಿಟ್ ನೈನ್ ಇಂಚ್ ನೇಯ್ಲ್ಸ್ ತಂಡದೊಡನೆ ಕಾರ್ಯಕ್ರಮ ನೀಡುವುದಷ್ಟೇ ಅಲ್ಲ, 15 ಆಗಸ್ಟ್‌ರಂದು ಕೊರಿಯಾದ ETPFestನಲ್ಲಿ ಕೀನ್ ತಂಡದೊಡನೆಯೂ ಪ್ರದರ್ಶನ ನೀಡಿತ್ತು.
ದಿನಾಂಕ 24 ಆಗಸ್ಟ್ 2009ರಂದು, ಇಡೀ ತಂಡವು ಹೊಸ ಆಲ್ಬಮ್ ಧ್ವನಿಮುದ್ರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಇಸವಿ 2000ದ ನಂತರ ಎಲ್ಲಾ ಸದಸ್ಯರು ಉಪಸ್ಥಿತರಿದ್ದದ್ದು ಇದೇ ಮೊದಲ ಬಾರಿ. (ವೆಸ್ ಬೊರ್ಲೆಂಡ್ ಇಲ್ಲದೆ ರಿಸಲ್ಟ್ಸ್ ಮೇ ವೇರಿ , ಜಾನ್ ಒಟ್ಟೊ ಇಲ್ಲದೆ ದಿ ಅನ್‌ಕ್ವೆಷ್ಚನಬಲ್ ಟ್ರೂತ್ ಪಾರ್ಟ್ 1
ಗೋಲ್ಡ್ ಕೋಬ್ರಾ ಹಾಗೂ ಇತ್ತೀಚೆಗಿನ ಘಟನೆಗಳು (2010–ಇಂದಿನವರೆಗೆ)
[ಬದಲಾಯಿಸಿ]ಹೊಸ ಆಲ್ಬಮ್‌ನ ಹೆಸರು ಗೋಲ್ಡ್ ಕೋಬ್ರಾ , ಹಾಗೂ ಈ ಆಲ್ಬಮ್ 2010ರ ಬೇಸಿಗೆಯಲ್ಲಿ ಪಾಲಿಡರ್ / ಇಂಟರ್ಸ್ಕೋಪ್ ಧ್ವನಿಮುದ್ರಣಾ ಸಂಸ್ಥೆಯ ಮೂಲಕ ಬಿಡುಗಡೆಗೊಳಿಸಲಾಗುವುದು ಎಂದು ಡರ್ಸ್ಟ್ 30 ನವೆಂಬರ್‌ರಂದು ಕೆರ್ರಾಂಗ್ ಲೇಖನವೊಂದರಲ್ಲಿ ತಿಳಿಸಿದರು.[೨೩] ಆಲ್ಬಮ್ ಹತ್ತು ಹಾಡುಗಳನ್ನು ಹೊಂದಿದ್ದು, ಹಾಡುಗಳ ನಡುವೆ ಮಧ್ಯಂತರದ ಗೀತೆಗಳನ್ನು ಹೊಂದಿರುತ್ತವೆ, ಎಂದು ಡರ್ಸ್ಟ್ ಡಿಸೆಂಬರ್ 2009ರಲ್ಲಿ ಕೆರ್ರಾಂಗ್ ಮ್ಯಾಗಜೀನ್ ಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದರು. ಗೋಲ್ಡ್ ಕೋಬ್ರಾ ಎಂಬ ಆಲ್ಬಮ್ ಶಿರೋನಾಮೆಯನ್ನು ಸೂಚಿಸಿದ್ದು ವೆಸ್ ಬೊರ್ಲೆಂಡ್ ಎಂದು ಫ್ರೆಡ್ ರೇಡಿಯೊ ಸಂದರ್ಶನಗಳ ಸರಣಿಯಲ್ಲಿ ತಿಳಿಸಿದರು.[೨೪] ವಾದ್ಯತಂಡವು ಸಂಗೀತ ವೀಡಿಯೊ ಚಿತ್ರೀಕರಣ ನಡೆಸುವುದಲ್ಲದೆ, ಏಕಗೀತೆಯ ಬದಲಿಗೆ, ಮೂರು ಗೀತೆಗಳನ್ನು ಒಮ್ಮೆಗೇ ಬಿಡುಗಡೆಗೊಳಿಸುವ ಇಂಗಿತ ಹೊತ್ತಿದೆ. ಇಸವಿ 2010ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಬೇಕಾದದ್ದು ವಿಳಂಬವಾಗಿ ಮೇ ತಿಂಗಳಲ್ಲಿ ಬಿಡುಗಡೆಯ ಪ್ರಸಂಗ ಉಂಟಾಯಿತು.[೨೫] ಹದಿನೆಂಟು ಗೀತೆಗಳ ಧ್ವನಿಮುದ್ರಣ ಮುಗಿದಿದ್ದು, ಮಿಶ್ರಣಕಾರ್ಯ ನಡೆಯುತ್ತಿದೆ; ಆದರೆ ಎಲ್ಲ ಹಾಡುಗಳೂ ಆಲ್ಬಮ್‌ಗೆ ಸೇರ್ಪಡೆಯಾಗದು, ಎಂದು ಡರ್ಸ್ಟ್ 29 ಮಾರ್ಚ್‌ರಂದು ತಿಳಿಸಿದರು.[೨೬] ಈ ಆಲ್ಬಮ್‌ನಲ್ಲಿ ಮ್ಯಾಥಮ್ಯಾಟಿಕ್ಸ್, ರೇಕ್ವೊನ್ (ವು-ಟ್ಯಾಂಗ್ ಕ್ಲ್ಯಾನ್), ಜೀನ್ ಸಿಮನ್ಸ್, ಆರೊನ್ ಲ್ಯೂಯಿಸ್ ಹಾಗೂ ಪಾಲ್ ವಾಲ್ ಸೇರಿದಂತೆ 'ಅತಿಥಿ ಕಲಾವಿದರು' ಗೀತೆ ನುಡಿಸುವರೆಂದು ವದಂತಿಗಳಿವೆ.
ಗೋಲ್ಡ್ ಕೋಬ್ರಾ ಧ್ವನಿಮುದ್ರಣದ ನಂತರ, 98 ರಾಕ್ ಫೆಸ್ಟ್, ರಾಕ್ ಆನ್ ದಿ ರೇಂಜ್, ಬೀಲ್ ಸ್ಟ್ರೀಟ್ ಮ್ಯೂಸಿಕ್ ಫೆಸ್ಟಿವಲ್, ಎಡ್ಜ್‌ಫೆಸ್ಟ್ 20 ಮತ್ತು ಬಝ್‌ಫೆಸ್ಟ್ ಸೇರಿದಂತೆ, ಲಿಂಪ್ ಬಿಜ್ಕಿಟ್ U.S.ನಲ್ಲಿ ಹಲವೆಡೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಲಿದೆ. ಈ ಉತ್ಸವ ಕಾರ್ಯಕ್ರಮಗಳ ನಂತರ, ಜೂನ್ ತಿಂಗಳಲ್ಲಿ ಪೂರ್ಣಪ್ರಮಾಣದ U.S. ಪ್ರವಾಸವನ್ನು ಡರ್ಸ್ಟ್ ಖಚಿತಪಡಿಸಿದ್ದಾರೆ.[೨೭] ಲ್ಯಾಟೀನ್ ಅಮೆರಿಕಾ ಪ್ರವಾಸವನ್ನು ಕೈಗೊಳ್ಳುವುದೆಂಬ ವದಂತಿಯೂ ಉಂಟು, ಆದರೆ ಮೆಕ್ಸಿಕೋದಲ್ಲಿ [೨೮] ಕೇವಲ ಒಂದೇ ಒಂದು ಕಾರ್ಯಕ್ರಮವನ್ನು ಇದುವರೆಗೆ ಖಚಿತಪಡಿಸಲಾಗಿದೆ. ಆಗಸ್ಟ್‌ನಲ್ಲಿ ಆರಂಭಗೊಂಡು ಶರತ್ಕಾಲದ ವರೆಗೂ, ವಾದ್ಯತಂಡವು ಪೂರ್ಣಪ್ರಮಾಣದ ಯುರೋಪಿಯನ್ ಪ್ರವಾಸ ಕಾರ್ಯಕ್ರಮ ನೀಡಲಿದೆ.
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
[ಬದಲಾಯಿಸಿ]ವರ್ಷ | ಸಂಘಟನೆ | ನಾಮನಿರ್ದೇಶಿತ ಕೃತಿ | ಪ್ರಶಸ್ತಿ | ಫಲಿತಾಂಶ |
---|---|---|---|---|
1998 | ಬಿಲ್ಬೋರ್ಡ್ ಸಂಗೀತ ವೀಡಿಯೊ ಪ್ರಶಸ್ತಿ | "ನೂಕಿ" | ಮ್ಯಾಕ್ಸಿಮಮ್ ವಿಷನ್ ಅವಾರ್ಡ್[೨೯] | ಪ್ರಶಸ್ತಿ ಗಳಿಕೆ |
1999 | ಅಮೆರಿಕನ್ ಸಂಗೀತ ಪ್ರಶಸ್ತಿಗಳು | ಲಿಂಪ್ ಬಿಜ್ಕಿಟ್ (ವಾದ್ಯತಂಡ) | ಫೇವರೀಟ್ ಆಲ್ಟರ್ನೇಟಿವ್ ಗ್ರೂಪ್ | ನಾಮನಿರ್ದೇಶಿತ |
1999 | MTV ಮ್ಯೂಸಿಕ್ ವೀಡಿಯೊ ಪ್ರಶಸ್ತಿಗಳು | "ನೂಕಿ" | ಅತ್ಯುತ್ತಮ ವಾದ್ಯತಂಡದ ವೀಡಿಯೊ[೩೦] | ನಾಮನಿರ್ದೇಶಿತ |
1999 | MTV ಮ್ಯೂಸಿಕ್ ವೀಡಿಯೊ ಪ್ರಶಸ್ತಿಗಳು | "ನೂಕಿ" | ಅತ್ಯುತ್ತಮ ಹಾರ್ಡ್ ರಾಕ್ ವೀಡಿಯೊ[೩೦] | ನಾಮನಿರ್ದೇಶಿತ |
2000 | MTV ಮ್ಯೂಸಿಕ್ ವೀಡಿಯೊ ಪ್ರಶಸ್ತಿಗಳು | "ಎನ್ 2 ಗೆದರ್ ನೌ" | ಅತ್ಯುತ್ತಮ ಹಿಪ್-ಹಾಪ್ ವೀಡಿಯೊ[೩೧] | ನಾಮನಿರ್ದೇಶಿತ |
2000 | ಗ್ರ್ಯಾಮ್ಮಿ ಪ್ರಶಸ್ತಿಗಳು | "ನೂಕಿ" | ಹಾರ್ಡ್ ರಾಕ್ ಸಂಗೀತ ಪ್ರದರ್ಶನ[೩೧] | ನಾಮನಿರ್ದೇಶಿತ |
2000 | ಗ್ರ್ಯಾಮ್ಮಿ ಪ್ರಶಸ್ತಿಗಳು | ಸಿಗ್ನಿಫಿಕೆಂಟ್ ಅದರ್ | ರಾಕ್ ಆಲ್ಬಮ್[೩೧] | ನಾಮನಿರ್ದೇಶಿತ |
2000 | ಅಮೆರಿಕನ್ ಸಂಗೀತ ಪ್ರಶಸ್ತಿಗಳು | ಲಿಂಪ್ ಬಿಜ್ಕಿಟ್ (ವಾದ್ಯತಂಡ) | ಫೇವರೀಟ್ ಆಲ್ಟರ್ನೇಟಿವ್ ಗ್ರೂಪ್[೩೨] | ನಾಮನಿರ್ದೇಶಿತ |
2000 | MTV ಮ್ಯೂಸಿಕ್ ವೀಡಿಯೊ ಪ್ರಶಸ್ತಿಗಳು | "ಬ್ರೇಕ್ ಸ್ಟಫ್" | ಅತ್ಯುತ್ತಮ ರಾಕ್ ವೀಡಿಯೊ[೩೧] | ಪ್ರಶಸ್ತಿ ಗಳಿಕೆ |
2000 | ಬ್ಲಾಕ್ಬಸ್ಟರ್ ಪ್ರಶಸ್ತಿಗಳು | "ಲಿಂಪ್ ಬಿಜ್ಕಿಟ್ (ವಾದ್ಯತಂಡ) | ಫೇವರೀಟ್ ಗ್ರೂಪ್ (ರಾಕ್)[೩೩] | ಪ್ರಶಸ್ತಿ ಗಳಿಕೆ |
2000 | ಮಚ್‌ಮ್ಯೂಸಿಕ್ ಪ್ರಶಸ್ತಿಗಳು | "ಬ್ರೇಕ್ ಸ್ಟಫ್" | ಅತ್ಯುತ್ತಮ ಅಂತರರಾಷ್ಟ್ರೀಯ ವೀಡಿಯೊ[೩೪] | ಪ್ರಶಸ್ತಿ ಗಳಿಕೆ |
2000 | ಮಚ್‌ಮ್ಯೂಸಿಕ್ ಪ್ರಶಸ್ತಿಗಳು | ಲಿಂಪ್ ಬಿಜ್ಕಿಟ್ (ವಾದ್ಯತಂಡ) | ಪೀಪಲ್ಸ್ ಚಾಯ್ಸ್ ಫೇವರೀಟ್ ಇಂಟ್. ಗ್ರೂಪ್ [೩೪] | ನಾಮನಿರ್ದೇಶಿತ |
2000 | ಬಿಲ್ಬೋರ್ಡ್ ಸಂಗೀತ ಪ್ರಶಸ್ತಿಗಳು | ಲಿಂಪ್ ಬಿಜ್ಕಿಟ್ (ವಾದ್ಯತಂಡ) | ಅತ್ಯುತ್ತಮ ರಾಕ್ ವಾದ್ಯತಂಡ | ಪ್ರಶಸ್ತಿ ಗಳಿಕೆ |
2000 | ಆರ್ವಿಲ್ ಜೆ. ಜಿಬ್ಸನ್ ಪ್ರಶಸ್ತಿ | ಸ್ಯಾಮ್ ರಿವರ್ಸ್ (ಬಾಸಿಸ್ಟ್) | ಅತ್ಯುತ್ತಮ ಬಾಸ್ ವಾದಕ | ಪ್ರಶಸ್ತಿ ಗಳಿಕೆ |
2001 | ECHO ಪ್ರಶಸ್ತಿಗಳು | ಲಿಂಪ್ ಬಿಜ್ಕಿಟ್ (ವಾದ್ಯತಂಡ) | ಅತ್ಯುತ್ತಮ ಅಂತರರಾಷ್ಟ್ರೀಯ ಮೆಟಲ್‌ಬ್ಯಾಂಡ್[೩೫] | ಪ್ರಶಸ್ತಿ ಗಳಿಕೆ |
2001 | MTV ಯುರೋಪ್ ಸಂಗೀತ ಪ್ರಶಸ್ತಿಗಳು | ಚಾಕೊಲೇಟ್ ಸ್ಟಾರ್ಫಿಷ್ ಅಂಡ್ ದಿ ಹಾಟ್ ಡಾಗ್ ಫ್ಲೇವರ್ಡ್ ವಾಟರ್ | ಅತ್ಯುತ್ತಮ ಆಲ್ಬಮ್[೩೧] | ಪ್ರಶಸ್ತಿ ಗಳಿಕೆ |
2001 | MTV ಯುರೋಪ್ ಸಂಗೀತ ಪ್ರಶಸ್ತಿಗಳು | ಲಿಂಪ್ ಬಿಜ್ಕಿಟ್ (ವಾದ್ಯತಂಡ) | ಅತ್ಯುತ್ತಮ ಸಂಗೀತ ವಾದ್ಯಸಮೂಹ[೩೧] | ಪ್ರಶಸ್ತಿ ಗಳಿಕೆ |
2001 | MTV ಯುರೋಪ್ ಸಂಗೀತ ಪ್ರಶಸ್ತಿಗಳು | ಲಿಂಪ್ ಬಿಜ್ಕಿಟ್ (ವಾದ್ಯತಂಡ) | ಅತ್ಯುತ್ತಮ ರಾಕ್ ಪ್ರದರ್ಶನ[೩೧] | ನಾಮನಿರ್ದೇಶಿತ |
2001 | MTV ಯುರೋಪ್ ಸಂಗೀತ ಪ್ರಶಸ್ತಿಗಳು | ಲಿಂಪ್ ಬಿಜ್ಕಿಟ್ (ವಾದ್ಯತಂಡ) | ವೆಬ್ ಅವಾರ್ಡ್[೩೧] | ಪ್ರಶಸ್ತಿ ಗಳಿಕೆ |
2001 | ಗ್ರ್ಯಾಮ್ಮಿ ಪ್ರಶಸ್ತಿಗಳು | "ಟೇಕ್ ಎ ಲುಕ್ ಅರೌಂಡ್" | ಅತ್ಯುತ್ತಮ ಹಾರ್ಡ್ ರಾಕ್ ಪ್ರದರ್ಶನ[೩೬] | ನಾಮನಿರ್ದೇಶಿತ |
2001 | ಬಿಲ್ಬೋರ್ಡ್ ಸಂಗೀತ ವೀಡಿಯೊ ಪ್ರಶಸ್ತಿಗಳು | "ರೊಲಿನ್' (ಏರ್ ರೇಯ್ಡ್ ವೆಹಿಕಲ್)" | ವರ್ಷದ ಅತ್ಯುತ್ತಮ ಹಾರ್ಡ್ ರಾಕ್ ವೀಡಿಯೊ ಚಿತ್ರ[೩೭] | ನಾಮನಿರ್ದೇಶಿತ |
2001 | ಅಮೆರಿಕನ್ ಸಂಗೀತ ಪ್ರಶಸ್ತಿಗಳು | ಲಿಂಪ್ ಬಿಜ್ಕಿಟ್ (ವಾದ್ಯತಂಡ) | ಫೇವರೀಟ್ ಆಲ್ಟರ್ನೇಟಿವ್ ಗ್ರೂಪ್[೩೮] | ಪ್ರಶಸ್ತಿ ಗಳಿಕೆ |
2001 | MTV ಮ್ಯೂಸಿಕ್ ವೀಡಿಯೊ ಪ್ರಶಸ್ತಿಗಳು | "ರೊಲಿನ್' (ಏರ್ ರೇಯ್ಡ್ ವೆಹಿಕಲ್)" | ಅತ್ಯುತ್ತಮ ರಾಕ್ ವೀಡಿಯೊ[೩೧] | ಪ್ರಶಸ್ತಿ ಗಳಿಕೆ |
2001 | MTV ಮ್ಯೂಸಿಕ್ ವೀಡಿಯೊ ಪ್ರಶಸ್ತಿಗಳು | "ಮೈ ವೇ" | ವಿವರ್ಸ್ ಚಾಯ್ಸ್[೩೧] | ನಾಮನಿರ್ದೇಶಿತ |
2001 | ಬ್ಲಾಕ್ಬಸ್ಟರ್ ಪ್ರಶಸ್ತಿಗಳು | ಲಿಂಪ್ ಬಿಜ್ಕಿಟ್ (ವಾದ್ಯತಂಡ) | ಅತ್ಯುತ್ತಮ ಗ್ರೂಪ್(ರಾಕ್)[೩೯] | ಪ್ರಶಸ್ತಿ ಗಳಿಕೆ |
2002 | ಜೂನೊ ಪ್ರಶಸ್ತಿಗಳು | ಚಾಕೊಲೇಟ್ ಸ್ಟಾರ್ಫಿಷ್ ಅಂಡ್ ದಿ ಹಾಟ್ ಡಾಗ್ ಫ್ಲೇವರ್ಡ್ ವಾಟರ್ | ಅತ್ಯುತ್ತಮ ಮಾರಾಟದ ಆಲ್ಬಮ್[೪೦] | ನಾಮನಿರ್ದೇಶಿತ |
2002 | BRIT ಪ್ರಶಸ್ತಿಗಳು | ಲಿಂಪ್ ಬಿಜ್ಕಿಟ್ (ವಾದ್ಯತಂಡ) | ಅತ್ಯುತ್ತಮ ಅಂತರರಾಷ್ಟ್ರೀಯ ವಾದ್ಯಸಮೂಹ[೪೧] | ನಾಮನಿರ್ದೇಶಿತ |
2003 | The K-ರಾಕ್ ಪ್ರಶಸ್ತಿಗಳು | "ಬಿಹೈಂಡ್ ಬ್ಲೂ ಐಯ್ಸ್" | ಬೆಸ್ಟ್ ಕವರ್ ಆಫ್ ದಿ ಇಯರ್ | ಪ್ರಶಸ್ತಿ ಗಳಿಕೆ |
2009 | ಕೆರ್ರಾಂಗ್! ಪ್ರಶಸ್ತಿಗಳು | ಲಿಂಪ್ ಬಿಜ್ಕಿಟ್ (ವಾದ್ಯತಂಡ) | ಹಾಲ್ ಆಫ್ ಫೇಮ್[೪೨] | ಪ್ರಶಸ್ತಿ ಗಳಿಕೆ |
- MTVಯ TRL
ವಾದ್ಯತಂಡದ ಗಳಿಕೆ ಮತ್ತು ಜನಪ್ರಿಯತೆಗಳಿಗಿಂತಲೂ ಹೆಚ್ಚಿಗೆ, ಲಿಂಪ್ ಬಿಜ್ಕಿಟ್ ತಂಡವು 26 ಮೇ 2001ರಲ್ಲಿ MTVಯ TRL 'ಹಾಲ್ ಆಫ್ ಫೇಮ್'ನಲ್ಲಿ ಸೇರ್ಪಡೆಯಾಗುವ ಮೊದಲ ವಾದ್ಯತಂಡವಾಯಿತು.[೪೩] ಏಳು ಪೂರ್ಣಪ್ರಮಾಣದ ಸಂಗೀತ ವೀಡಿಯೊಗಳೊಂದಿಗೆ ವಾದ್ಯತಂಡವು ಇದನ್ನು ಪಡೆದು'ನಿವೃತ್ತ' ಸ್ಥಿತಿಗೆ ಒಯ್ಯಿತು. ನಿವೃತ್ತ ಸ್ಥಿತಿಗೆ ಅರ್ಹವಾಗಲು, ಕಾರ್ಯಕ್ರಮದಲ್ಲಿ ಅಭಿಮಾನಿಗಳು ವೀಡಿಯೊ ಒಂದಕ್ಕೆ ಸತತ 65 ದಿನಗಳ ಮತ ಹಾಕಿರಬೇಕು. ಕೆಳಕಂಡ ವೀಡಿಯೊಗಳ ಪ್ರಸಾರ ಮುಕ್ತಾಯಗೊಂಡಿದೆ:
- "ಫೇಯ್ತ್"(24 ಫೆಬ್ರವರಿ 1999)
- "[[ನೂಕಿ ]]" (26 ಆಗಸ್ಟ್ 1999)
- "ರಿ-ಅರೇಂಜ್ಡ್" (30 ಅಕ್ಟೋಬರ್ 1999)
- "ಎನ್ 2 ಗೆದರ್ ನೌ" (18 ಜನವರಿ 2000)
- "ಮೈ ಜೆನರೇಷನ್" (3 ಅಕ್ಟೋಬರ್ 2000)
- "ರೊಲಿನ್' (ಏರ್ ರೇಯ್ಡ್ ವೆಹಿಕಲ್)" (17 ಜನವರಿ 2001)
- "ಮೈ ವೇ" (10 ಮೇ 2001)
ವಾದ್ಯತಂಡದ ಸದಸ್ಯರು
[ಬದಲಾಯಿಸಿ]- ಹಾಲಿ ಸದಸ್ಯರು
- ಫ್ರೆಡ್ ಡರ್ಸ್ಟ್ – ಪ್ರಮುಖ ಗಾಯನ
- ವೆಸ್ ಬೊರ್ಲೆಂಡ್ – ಗಿಟಾರ್
- ಸ್ಯಾಮ್ ರಿವರ್ಸ್ – ಬಾಸ್
- ಜಾನ್ ಒಟ್ಟೊ – ಡ್ರಮ್ಸ್, ತಾಳವಾದ್ಯ
- DJ ಲೀತಲ್ – ಟರ್ನ್ಟೇಬಲ್ಸ್, ಕೀಬೋರ್ಡ್ಗಳು, ಸ್ಯಾಂಪಲ್ಗಳು, ಪ್ರೊಗ್ರಾಮಿಂಗ್, ಧ್ವನಿ ವಿನ್ಯಾಸ
- ಮಾಜಿ ಸದಸ್ಯರು
- ಮೈಕ್ ಸ್ಮಿತ್ – ಗಿಟಾರ್ಗಳು
- ಅವಧಿವಾರು ಸದಸ್ಯರು
- ಸ್ಕಾಟ್ ಬೊರ್ಲೆಂಡ್ – ಕೀಬೋರ್ಡ್ಗಳು (1995–2000)
- 'ಹೆಡ್' ವೆಲ್ಚ್ – ಗಿಟಾರ್ಗಳು (2002–2003)
- ಸ್ಯಾಮ್ಮಿ ಸೀಗ್ಲರ್ – ಡ್ರಮ್ಗಳು, ತಾಳವಾದ್ಯ (2005)
ಟೈಮ್ ಲೈನ್
[ಬದಲಾಯಿಸಿ]ಧ್ವನಿಮುದ್ರಿಕೆ ಪಟ್ಟಿ
[ಬದಲಾಯಿಸಿ]- ಸ್ಟುಡಿಯೊ ಆಲ್ಬಮ್‌ಗಳು
- ತ್ರೀ ಡಾಲರ್ ಬಿಲ್, ಯ್‌ಆಲ್$ (1997)
- ಸಿಗ್ನಿಫಿಕೆಂಟ್ ಅದರ್ (1999)
- ಚಾಕಲೇಟ್ ಸ್ಟಾರ್ಫಿಷ್ ಅಂಡ್ ದಿ ಹಾಟ್ ಡಾಗ್ ಫ್ಲೇವರ್ಡ್ ವಾಟರ್ (2000)
- ರಿಸಲ್ಟ್ಸ್ ಮೇ ವೇರಿ (2003)
- ಗೋಲ್ಡ್ ಕೋಬ್ರಾ (2010)
ಆಕರಗಳು
[ಬದಲಾಯಿಸಿ]- ↑ http://www.ultimate-guitar.com/news/upcoming_releases/limp_bizkit_ready_first_album_in_over_5_years.html[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on ಜೂನ್ 18, 2010. Retrieved ಜೂನ್ 10, 2010.
- ↑ "ಆರ್ಕೈವ್ ನಕಲು". Archived from the original on ಜೂನ್ 7, 2011. Retrieved ಜೂನ್ 10, 2010.
- ↑ ೪.೦ ೪.೧ Bush, John (2006). "Limp Bizkit – Biography". Allmusic. Retrieved ಜನವರಿ 27, 2008.
- ↑ "ಲಿಂಪ್ ಬಿಜ್ಕಿಟ್ ಪೇಯ್ಸ್ ಫಾರ್ 'ಕೌಂಟರ್ಫೀಟ್' ಪ್ಲೇ" Archived May 25, 2009[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.. MTV ನ್ಯೂಸ್, 1 ಜುಲೈ 1998; 31 ಮೇ 2006ರಂದು ಪುನರ್ಪಡೆದದ್ದು.
- ↑ "ರ‌್ಯಾಂಡಿ ಡೆವೆನ್ಪೋರ್ಟ್, "ಬಿಜ್ಕಿಟ್ ಈಸ್ ಬ್ಯಾಕ್", ದಿ ಒರಿಯಾನ್ , 25 ಫೆಬ್ರವರಿ 2009". Archived from the original on ಫೆಬ್ರವರಿ 28, 2009. Retrieved ಜೂನ್ 10, 2010.
- ↑ http://www.washingtonpost.com/wp-srv/national/daily/july99/woodstock29.htm
- ↑ "ಲಿಂಪ್ ಬಿಜ್ಕಿಟ್ ಟಾಪ್ಸ್ ದಿ ಬಿಲ್ಬೋರ್ಡ್ ಆಲ್ಬಮ್ ಚಾರ್ಟ್ | ಚಾಕೊಲೇಟ್ ಸ್ಟಾರ್ಫಿಷ್ ಅಂಡ್ ದಿ ಹಾಟ್ ಡಾಗ್ ಫ್ಲೇವರ್ಡ್ ವಾಟರ್ | ಮ್ಯೂಸಿಕ್ ನ್ಯೂಸ್ | ಮ್ಯೂಸಿಕ್ | ಎಂಟರ್ಟೇನ್ಮೆಂಟ್ ವೀಕ್ಲಿ". Archived from the original on ಜೂನ್ 7, 2011. Retrieved ಜೂನ್ 10, 2010.
- ↑ "ಆರ್ಕೈವ್ ನಕಲು". Archived from the original on ಜೂನ್ 29, 2010. Retrieved ಜೂನ್ 10, 2010.
- ↑ "Limp Bizkit 'devastated' by fan death". BBC News. ಫೆಬ್ರವರಿ 1, 2001. Retrieved ಏಪ್ರಿಲ್ 4, 2010.
- ↑ "ಆರ್ಗನೈಸರ್ಸ್ ಬ್ಲೇಮ್ಡ್ ಇನ್ ಲಿಂಪ್ ಬಿಜ್ಕಿಟ್ ಮೊಷ್-ಪಿಟ್ ಡೆತ್" Archived February 21, 2008[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.. MTV ನ್ಯೂಸ್ 8 ನವೆಂಬರ್ 2002; 31 ಮೇ 2006ರಂದು ಪುನರ್ಪಡೆಯಲಾಯಿತು.
- ↑ "ಲಿಂಪ್ ಬಿಜ್ಕಿಟ್ ಸ್ಕೋರಿಂಗ್ 99 - ತಂಡವು 100 ನಗರಗಳಿಗೆ ಹೋಗದಿರಲು, ನ್ಯೂ ಗಿಟಾರಿಸ್ಟ್‌ಗಾಗಿ ಅವು ಬಹಳ ಸೊಂಬೇರಿ ನಗರಗಳಾಗಿದ್ದವು ಎಂಬುದು ಕಾರಣ." Archived August 23, 2007[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.. MTV ನ್ಯೂಸ್, 21 ಡಿಸೆಂಬರ್ 2001; 31 ಮೇ 2006ರಂದು ಪುನರ್ಪಡೆದದ್ದು.
- ↑ "ರೆಸ್ಲ್‌ಮ್ಯಾನಿಯಾ XIX ದಿಸ್ ಸಂಡೇ" Archived May 1, 2009[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.. ವರ್ಲ್ಡ್ ರೆಸ್ಲಿಂಗ್ ಎಂಟರ್ಟೇನ್ಮೆಂಟ್ ಸುದ್ದಿ ಬಿಡುಗಡೆ, 28 ಮಾರ್ಚ್ 2003; 31 ಮೇ 2006ರಂದು ಪುನರ್ಪಡೆದದ್ದು.
- ↑ "ಆರ್ಕೈವ್ ನಕಲು". Archived from the original on ಏಪ್ರಿಲ್ 28, 2012. Retrieved ಜೂನ್ 10, 2010.
- ↑ "http://www.playlouder.com/review/+resultsmayvary/". Archived from the original on ಫೆಬ್ರವರಿ 20, 2007. Retrieved ಜೂನ್ 10, 2010.
{{cite web}}
: External link in
(help)|title=
- ↑ "ಆರ್ಕೈವ್ ನಕಲು". Archived from the original on ಜುಲೈ 18, 2011. Retrieved ಜೂನ್ 10, 2010.
- ↑ "ಆರ್ಕೈವ್ ನಕಲು". Archived from the original on ಫೆಬ್ರವರಿ 10, 2010. Retrieved ಜೂನ್ 10, 2010.
- ↑ "ಎಕ್ಸ್‌ಕ್ಲೂಸಿವ್: ಫ್ರೆಡ್ ಡರ್ಸ್ಟ್ ಇಂಟರ್ವ್ಯೂ" Archived January 7, 2007[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.. thearmpit.net 15 ಆಗಸ್ಟ್ 2004; 31 ಮೇ 2006ರಂದು ಪುನರ್ಪಡೆದದ್ದು.
- ↑ ಮಾಸ್, ಕೊರಿ. "ಲಿಂಪ್ ಬಿಜ್ಕಿಟ್: ವಾಟ್ ಹ್ಯಾಪೆನ್ಡ್?" Archived May 25, 2005[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.. MTV ನ್ಯೂಸ್; 31 ಮೇ 2006ರಂದು ಪುನರ್ಪಡೆದದ್ದು.
- ↑ http://www.rollingstone.com/artists/limpbizkit/albums/album/7285846/review/7313493/the_unquestionable_truth_part_1[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on ಫೆಬ್ರವರಿ 9, 2006. Retrieved ಜೂನ್ 10, 2010.
- ↑ http://www.limpbizkit.com/
- ↑ Simon (ನವೆಂಬರ್ 30, 2009). "World exclusive! Limp Bizkit name new album". Kerrang.com. Bauer Performance. Archived from the original on ಡಿಸೆಂಬರ್ 3, 2009. Retrieved ನವೆಂಬರ್ 30, 2009.
- ↑ Radio1067.com
- ↑ wxeg.com Podcast
- ↑ http://twitter.com/freddurst/status/11274981308
- ↑ www.kdge.com media player
- ↑ http://twitter.com/freddurst/statuses/10704436336
- ↑ http://www.allbusiness.com/retail-trade/miscellaneous-retail-retail-stores-not/4386696-1.html
- ↑ ೩೦.೦ ೩೦.೧ ೩೦.೨ "MuchMusic.com". Archived from the original on ಜುಲೈ 18, 2009. Retrieved ಜೂನ್ 10, 2010.
- ↑ ೩೧.೦೦ ೩೧.೦೧ ೩೧.೦೨ ೩೧.೦೩ ೩೧.೦೪ ೩೧.೦೫ ೩೧.೦೬ ೩೧.೦೭ ೩೧.೦೮ ೩೧.೦೯ "ಆರ್ಕೈವ್ ನಕಲು". Archived from the original on ಜುಲೈ 14, 2011. Retrieved ಜೂನ್ 10, 2010.
- ↑ "ಆರ್ಕೈವ್ ನಕಲು". Archived from the original on ಜೂನ್ 14, 2010. Retrieved ಜೂನ್ 10, 2010.
- ↑ "ಆರ್ಕೈವ್ ನಕಲು". Archived from the original on ಏಪ್ರಿಲ್ 3, 2003. Retrieved ಜೂನ್ 10, 2010.
- ↑ ೩೪.೦ ೩೪.೧ http://www.allbusiness.com/retail-trade/miscellaneous-retail-retail-stores-not/4610680-1.html
- ↑ http://www.allbusiness.com/services/amusement-recreation-services/4718088-1.html[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on ಜೂನ್ 30, 2013. Retrieved ಜೂನ್ 10, 2010.
- ↑ "ಆರ್ಕೈವ್ ನಕಲು". Archived from the original on ಜುಲೈ 14, 2011. Retrieved ಜೂನ್ 10, 2010.
- ↑ "ಆರ್ಕೈವ್ ನಕಲು". Archived from the original on ಜುಲೈ 8, 2009. Retrieved ಜೂನ್ 10, 2010.
- ↑ http://www.prnewswire.com/cgi-bin/stories.pl?ACCT=104&STORY=/www/story/04-10-2001/0001466747&EDATE=
- ↑ "ಆರ್ಕೈವ್ ನಕಲು". Archived from the original on ಮೇ 19, 2011. Retrieved ಜೂನ್ 10, 2010.
- ↑ "ಆರ್ಕೈವ್ ನಕಲು". Archived from the original on ಆಗಸ್ಟ್ 10, 2009. Retrieved ಜೂನ್ 10, 2010.
- ↑ "ಆರ್ಕೈವ್ ನಕಲು". Archived from the original on ಆಗಸ್ಟ್ 6, 2009. Retrieved ಜೂನ್ 10, 2010.
- ↑ http://www.angelfire.com/my/trldailydose/archives/halloffame.html
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ಜಾಲತಾಣ
- ದಿ ಆರ್ಮ್ಪಿಟ್ Archived June 11, 2010[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.
- 'ದಿ ಆರ್ಮ್ಪಿಟ್' ವೇದಿಕೆ
- ಬ್ಲ್ಯಾಕ್ ಲೈಟ್ ಬರ್ನ್ಸ್ ಅಧಿಕೃತ ಅಂತರಜಾಲತಾಣ Archived March 19, 2017[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.
- Pages using the EasyTimeline extension
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: external links
- Use mdy dates
- Articles with hCards
- Articles with unsourced statements from January 2010
- Articles with invalid date parameter in template
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from February 2007
- Articles with hatnote templates targeting a nonexistent page
- Articles needing cleanup from April 2010
- Articles needing link rot cleanup from April 2010
- All articles needing link rot cleanup
- Articles covered by WikiProject Wikify from April 2010
- All articles covered by WikiProject Wikify
- ಇಸವಿ 1995ರಲ್ಲಿ ರಚನೆಯಾದ ಸಂಗೀತ ಸಮೂಹಗಳು
- ಸಂಗೀತ ಪಂಚಮೇಳಗಾರರು
- ಫ್ಲಾರಿಡಾ ರಾಜ್ಯದ ಜ್ಯಾಕ್ಸನ್ವಿಲ್ ಮೂಲದ ಸಂಗೀತ ಸಮೂಹಗಳು
- ಅಮೆರಿಕಾದ ನ್ಯು ಮೆಟಲ್ ಸಂಗೀತ ಸಮೂಹಗಳು
- ಫ್ಲಾರಿಡಾದ ಹೆವಿ ಮೆಟಲ್ ಸಂಗೀತ ಸಮೂಹಗಳು
- ರ್‌ಯಾಪ್ ಮೆಟಲ್ ಸಂಗೀತದ ತಂಡಗಳು
- ರ್‌ಯಾಪ್ ರಾಕ್ ಸಂಗೀತ ಸಮೂಹಗಳು
- ರ್ಯಾಪ್ಕೋರ್ ಸಮೂಹಗಳು
- MTV ವೀಡಿಯೊ ಸಂಗೀತ ಪ್ರಶಸ್ತಿ ವಿಜೇತರು
- MTV ಯುರೋಪ್ ಸಂಗೀತ ಪ್ರಶಸ್ತಿ ವಿಜೇತರು.
- ಕೆರ್ಯಾಂಗ್! ಪ್ರಶಸ್ತಿ ವಿಜೇತರು
- 1990ರ ಸಂಗೀತ ತಂಡಗಳು
- 2000ದ ಸಂಗೀತ ತಂಡಗಳು
- 2010ರ ಸಂಗೀತ ತಂಡಗಳು