ವಿಷಯಕ್ಕೆ ಹೋಗು

ಭೂವೈಜ್ಞಾನಿಕ ಕಾಲ -ಕಲ್ಪಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

Geologic Clock with events and periods

ಕಲ್ಪ - ವೈಜ್ಞಾನಿಕ ಸಿದ್ಧಾಂತ: ಭೂ ವಿಜ್ಞಾನದಲ್ಲಿ ಕಾಲವನ್ನು ಅಳೆಯುವ ಒಂದು ಮಾನಕ (ಇಪಕ್). ಭೂಮಿಯ ಗತಕಾಲವನ್ನು ಭೂ ವೈಜ್ಞಾನಿಕ ಕಾಲಮಾನದಲ್ಲಿ ಆಯಾ ಕಾಲದ ಭಿನ್ನ ಲಕ್ಷಣಗಳನ್ನು ಆಧರಿಸಿ ಐದು ಪ್ರಧಾನ ಕಲ್ಪಗಳಾಗಿ ವಿಂಗಡಿಸಿದ್ದಾರೆ. ಪ್ರೊಟಿರೋಜೋಯಿಕ್, ಪೇಲಿಯೋಜೋಯಿಕ್, ಮೀಸೋಜೋಯಿಕ್, ಟರ್ಷಿಯರಿ, ಕ್ವಾಟರ್ನರಿ. ಈ ಒಂದೊಂದು ಕಲ್ಪವನ್ನೂ ಹಲವಾರು ಕಲ್ಪಗಳಾಗಿ ವಿಭಾಗಿಸಿದ್ದಾರೆ. ಉದಾಹರಣೆಗೆ ಪೇಲಿಯೋಜೋಯಿಕ್ ಕಲ್ಪದ ವ್ಯಾಪ್ತಿ ೬೦೦ ದಶಲಕ್ಷ ವರ್ಷ ಪ್ರಾಚೀನದಿಂದ ೨೨೫ ದಶಲಕ್ಷ ವರ್ಷ ಪ್ರಾಚೀನದವರೆಗೆ ಇದೆ. ಇದರಲ್ಲಿನ ಯುಗಗಳ ವಿಂಗಡಣೆ ಹೀಗಿದೆ:[]

  • ೬೦೦-೫೦೦ ದಶಲಕ್ಷ ವರ್ಷ ಪ್ರಾಚೀನ ಕೇಂಬ್ರಿಯನ್
  • ೫೦೦-೪೪೦ “ “ “ ಆರ್ಡೊವಿಶಿಯನ್
  • ೪೪೦-೪೦೦ “ “ “ ಸೈಲೂರಿಯನ್
  • ೪೦೦-೩೫೦ “ “ “ ಡಿವೋನಿಯನ್
  • ೩೫೦-೨೮೦ “ “ “ ಕಾರ್ಬಾನಿಫೆರಸ್
  • ೨೮೦-೨೨೫ “ “ “ ಪರ್ಮಿಯನ್

ಭೂಮಿಯ ಸಮಸ್ತ ಲಕ್ಷಣಗಳ (ಜೀವಿಗಳ ವಿಕಾಸ, ಅಜೀವ ವಸ್ತುಗಳಲ್ಲಿ ಉಂಟಾಗಿರುವ ಬದಲಾವಣೆಗಳು ಮತ್ತು ಪರಿವರ್ತನೆಗಳು ಮುಂತಾದುವು) ಅಭ್ಯಾಸದಿಂದ ಮೇಲೆ ಹೇಳಿರುವ ನಿರ್ದಿಷ್ಟ ವರ್ಗೀಕರಣ ಮಾಡಿದ್ದಾರೆ.

ವಿವರ

ಆರಂಭದ ಸೂರ್ಯ ಮಂಡಲ- ಒಂದು ಪ್ರೊಟೊಪ್ಲಾನಟರಿ ಡಿಸ್ಕ್- ಕಲಾವಿದನೊಬ್ಬ ಊಹೆ
  • ಭೂವೈಜ್ಞಾನಿಕ ಕಾಲ ಭೂಮಿ ಪ್ರತ್ಯೇಕ ಗ್ರಹವಾಗಿ ರೂಪುಗೊಂಡಂದನಿಂದ ಲಿಖಿತೇತಿಹಾಸದ ಪ್ರಾರಂಭದ ತನಕ ಭೂವಿಜ್ಙಾನದ ವಿಶದಪಡಿಸುವ ಕಾಲಾವಧಿ (ಜಿಯೊಲಾಜಿಕಲ್ ಟೈಮ್). ಇದರ ಪರಿಕಲ್ಪನೆ ಸಂಚಿತ ಶಿಲೆಗಳ ಸ್ತರಗಳನ್ನು ಆಧರಿಸಿ ಬಂದಿರುವಂಥದು. ಬೇರೆ ಬೇರೆ ಪ್ರದೇಶಗಳಲ್ಲಿ ಸಮಾಂತರವಾಗಿ ಶೇಖರವಾಗಿರುವ ಶಿಲಾಸ್ತರಗಳನ್ನು ಒಂದರೊಡನೊಂದನ್ನು ತುಲನೆ ಮಾಡುವುದರ ಮೂಲಕ ಭೂವೈe್ಞÁನಿಕ ಕಾಲವನ್ನು ನಿಗದಿ ಮಾಡಿದೆ. ಶಿಲಾಸ್ತರಗಳು ವಕ್ರಗೊಂಡಿದ್ದಲ್ಲಿ ಇಲ್ಲವೆ ಬೇರಾವುದೇ ರೀತಿಯಲ್ಲಿ ಭಂಗಗೊಂಡಿದ್ದಲ್ಲಿ ಅವನ್ನು ಮೊದಲಿನ ಸಮಾಂತರ ಸ್ಥಿತಿಗೆ ಮಾರ್ಪಡಿಸಿಕೊಂಡು ಕಾಲವನ್ನು ಗೊತ್ತುಮಾಡುವುದಿದೆ. ನಿರ್ದಿಷ್ಟ ಶಿಲಾಸಮುದಾಯದ ಸ್ತರಗಳು ಶಿಲಾರಚನೆಯಲ್ಲಿ ಪರಸ್ಪರ ಹೋಲುತ್ತಿದ್ದಲ್ಲಿ ಅವನ್ನು ಒಂದು ಗುಂಪಾಗಿಸಿ ಅಂಥವನ್ನು ಸ್ತೋಮ (ಫಾರ್ಮೇಷನ್) ಎಂದು ಕರೆಯುತ್ತಾರೆ. ಉದಾಹರಣೆಗೆ ಸುಣ್ಣಕಲ್ಲು ಮತ್ತು ಶೇಲ್‍ಸ್ತರಗಳು ಅನುಕ್ರಮವಾಗಿ ಜೋಡಣೆಗೊಂಡಿರುವ ಇಲ್ಲವೆ ದಪ್ಪನೆಯ ಡಾಲೊಮೈಟ್ ಸ್ತರಗಳಿಂದ ಕೂಡಿದ ಸ್ತೋಮ. ಯಾವುದೇ ಪ್ರದೇಶ ಭೂಚರಿತ್ರೆಯನ್ನು ಅಲ್ಲಿಯ ಶಿಲಾಸ್ತೋಮಗಳನ್ನು ಗುರುತಿಸಿಯೇ ವಿವರಿಸಬೇಕಾಗುತ್ತದೆ. ಇಂಥ ಶಿಲಾಸ್ತೋಮಗಳ ಹೆಸರನ್ನು ಅವು ಸಮೃದ್ಧವಾಗಿ ಕಂಡುಬರುವ ಪ್ರದೇಶದ ಹೆಸರಿನೊಂದಿಗೆ ಸೇರಿಸಿ ಕರೆಯುವುದಿದೆ.
  • ಶಿಲಾಸ್ತೋಮಗಳ ಹಾಗೂ ಭೂವೈಜ್ಞಾನಿಕ ವಿದ್ಯಮಾನಗಳ ಪರಸ್ಪರ ಕಾಲ ಅಳೆಯುವ ವಿಧಾನಕ್ಕೆ ಅವಸಾದನ ಸಹಸಂಬಂಧ (ಸ್ಟ್ರ್ಯಾಟಿಗ್ರಫಿಕ್ ಕಾರಿಲೇಷನ್) ಎಂದು ಹೆಸರು. ಇದನ್ನು ನಿಗದಿಪಡಿಸಲು ಮೂರು ಕ್ಲಿಷ್ಟ ನಿರ್ಣಯಾತ್ಮಕ ವಿಧಾನಗಳನ್ನು ಅನುಸರಿಸುವುದಿದೆ:
  • 1 ಶಿಲಾಸ್ತರಗಳಲ್ಲಿಯ ಪಳೆಯುಳಿಕೆಗಳನ್ನು ಗುರುತಿಸುವುದು;
  • 2 ಜಲಜಶಿಲೆಗಳ ಬಗ್ಗೆ ಅಭ್ಯಾಸ ಹಾಗೂ ಅವು ಸೂಚಿಸುವ ಪ್ರಾಚೀನ ಭೌಗೋಳಿಕ ವಾತಾವರಣದ ಸ್ಥಿತಿಗತಿಗಳನ್ನು ಗುರುತಿಸುವುದು;
  • 3. ಅಂಥ ಶಿಲೆಗಳ ರಚನಾವಿನ್ಯಾಸ ಹಾಗೂ ಸ್ತರಭಂಗಗಳಂಥ ಮುಖ್ಯ ಘಟನೆಗಳನ್ನು ಗುರುತಿಸುವುದು.
  • ಭೂವಿಜ್ಙಾನ ಕಾಲದ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಇವೆಲ್ಲ ಮುಖ್ಯ ಪಾತ್ರವಹಿಸುತ್ತವೆ. ಭೂ ಚರಿತ್ರೆಯನ್ನು ಸಂಗ್ರಹಿಸುವಲ್ಲಿ ಭೂ ಚರಿತ್ರೆಯನ್ನು ವಿವಿಧ ಕಲ್ಪ ಮತ್ತು ಯುಗಗಳಾಗಿ ವಿಂಗಡಿಸಲಾಗಿದೆ. ಮುಖ್ಯವಾಗಿ ಜೀವ್ಯವಶೇಷಗಳ ಇರುವಿಕೆ ಮತ್ತು ಗುಣಲಕ್ಷಣಗಳನ್ನು ಅನುಸರಿಸಿ ಭೂ ಚರಿತ್ರೆಯ ರಚನೆ ಆಗಿದೆ. ಯೂರೋಪ್ ಖಂಡದ ಶಿಲಾಸ್ತೋಮಗಳನ್ನು ಆಧರಿಸಿ ರಚಿಸಲಾಗಿರುವ ಭೂ ಚರಿತ್ರೆಯನ್ನೇ ಪ್ರಮಾಣವೆಂದು ಈಗ ಪರಿಗಣಿಸಿದೆ. ಬೇರೆ ಬೇರೆ ಭೂವೈe್ಞÁನಿಕ ಅವಧಿಗಳು ಮತ್ತು ನಿರಪೇಕ್ಷ ಕಾಲ ಅವಧಿಗಳ ಸಾಪೇಕ್ಷಪ್ರಾಯಗಳ ಬಗ್ಗೆ ತಿಳಿಯ ಹೇಳುವ ಭೂ ವೈಜ್ಞಾನಿಕ ಕಾಲಮಾನಕವನ್ನು (ಜಿಯೊಲಾಜಿಕ್ ಟೈಮ್ ಸ್ಕೇಲ್) ರಚಿಸಲಾಗಿದೆ (ಪುಟ 916).
  • ಭೂಮಿ ಸುಮಾರು 4500 ದಶಲಕ್ಷ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದರೂ ಜೀವಿಗಳು ಬಹಳಷ್ಟು ಕಾಲದತನಕ ಅದರ ಮೇಲೆ ವಾಸಿಸಲಾಗಲಿಲ್ಲ. ಹವೆ ಹಾಗೂ ಪರಿಸರದ ವಾತಾವರಣ ಗುಣವಿಶೇಷಗಳಿಂದಾಗಿ ಭೂಮಿ ಜೀವಯೋಗ್ಯವಾಗುವುದಕ್ಕೆ ಬಹಳಷ್ಟು ಕಾಲವೇ ಹಿಡಿಯಿತು. ಆದಿಜೀವಿಗಳ ಅಸ್ಪಷ್ಟ ಕುರುಹುಗಳು ಸುಮಾರು 1000-1200 ದಶಲಕ್ಷ ವರ್ಷಗಳಷ್ಟು ಪ್ರಾಚೀನದ ಶಿಲೆಗಳಲ್ಲಿ ಕಂಡುಬಂದಿವೆ. ಇದರಿಂದ ಭೂಚರಿತ್ರೆಯ ಮುಕ್ಕಾಲು ಭಾಗದಷ್ಟು ಕಾಲದುದ್ದಕ್ಕೂ ಜೀವಿಗಳು ಇರಲಿಲ್ಲವೆಂಬುದು ಸ್ಪಷ್ಟ..
  • ಆರ್ಷೇಯ_ಯುಗ ಕಲ್ಪ: ಈ ಕಾಲದಲ್ಲಿ ಶೇಖರಣೆಗೊಂಡ ಶಿಲೆಗಳು ಭೂಮಿಯ ಪ್ರತಿಯೊಂದು ಖಂಡದಲ್ಲೂ ಇವೆ. ಭಾರತದ ಪರ್ಯಾಯದ್ವೀಪ ಪ್ರದೇಶವೆಲ್ಲ ಇಂಥ ಶಿಲೆಗಳಿಂದ ಕೂಡಿದೆ. ಈ ಯುಗದ ಶಿಲಾಸ್ತೋಮ ಅಗ್ನಿಶಿಲೆಗಳು, ಜಲಜಶಿಲೆಗಳು ಮತ್ತು ರೂಪಾಂತರಿತ ಶಿಲಾವರ್ಗಗಳಿಗೆ ಸೇರಿದ ಮೂರು ಬಗೆಯ ಶಿಲೆಗಳಿಂದಲೂ ಕೂಡಿದೆ. ಮುಖ್ಯವಾಗಿ ಈ ಸ್ತೋಮದಲ್ಲಿ ಗ್ರ್ಯಾನೈಟ್, ನೈಸ್, ಷಿಸ್ಟ್ ಮತ್ತು ಕ್ಷಾರಯುಕ್ತ ಲಾವಾಶಿಲೆಗಳೂ ಜೇಡಿಕಲ್ಲು, ಸ್ಫಟಿಕಶಿಲೆ, ಸುಣ್ಣಕಲ್ಲು ಇತ್ಯಾದಿ ಶಿಲೆಗಳೂ ಕಂಡುಬರುತ್ತವೆ. ಇವು ಬಲು ಪುರಾತನ ಕಾಲದಲ್ಲಿ ರೂಪುಗೊಂಡದ್ದರಿಂದ ಇವುಗಳಲ್ಲಿ ಅನೇಕ ಏರುಪೇರುಗಳು ಆಗಿವೆ. ಅಂತೆಯೇ ಇವುಗಳ ರಚನೆ ಸಹ ಬಲು ತೊಡಕಿನದೇ. ಈ ಶಿಲೆಗಳಲ್ಲಿ ಜೀವ್ಯವಶೇಷಗಳಿರುವುದಿಲ್ಲ. ಈ ಕಾರಣದಿಂದಲೇ ಆರ್ಷೇಯ ಕಲ್ಪವನ್ನು ನಿರ್ಜೀವ ಕಲ್ಪವೆಂದೂ ಕರೆದಿದೆ. ಭಾರತದ ಬಹುಪಾಲು ಖನಿಜಸಂಪತ್ತು ಈ ಸ್ತೋಮಗಳಲ್ಲೇ ಅಡಕವಾಗಿದೆ.

ಕಾಲಸೂಚಿ ಪಟ್ಟಿ

ಮೈ.ವಿ.ಕೋ. ಲೆಕ್ಕಕ್ಕೂ ವಿಕಿಯ ಆಧುನಿಕ ಲೆಕ್ಕಕ್ಕೂ ಸ್ವಲ್ಪ ವ್ಯತ್ಯಾಸವಿದೆ.

ಯುಗ (ಪ್ರಾಚೀನ)

  • Geologic time scale
  • Cenozoic Era
  • ಭೂವಿಜ್ಙಾನದ ಕಾಲಮಾನಕ ನವಜೀವಿ ಯುಗ (ಕೈನೊಜೋಯಿಕ್ ಇರಾ)/ ಸಿಯೋಜೆನಿಕ್ ಇರಾ.
  • 1. ಹೋಲೊಸೀನ್
  • 2. ಪ್ಲೀಸ್ಟೊಸೀನ್
  • 7. ಪ್ಲಿಯೊಸೀನ್
  • 26 ಮಯೊಸೀನ್
  • 38 ಆಲಿಗೊಸೀನ್
  • 54 ಇಯೊಸೀನ್
  • 65 ಪೇಲಿಯೊಸೀನ್
  • 135 ಕ್ರಿಟೇಷಸ್ (70)

ಮಧ್ಯಜೀವಿಯಗ (ಮೀಸೊಜೋಯಿಕ್ ಇರಾ)

  • 195 ಜ್ಯುರಾಸಿಕ್ (60)
  • 225 ಟ್ರಯಾಸಿಕ್ (30)

ಪ್ರಾಚೀನ ಜೀವಿಯುಗ

  • 280 ಪರ್ಮಿಯನ್ (55)
  • 345 ಕಾರ್ಬಾನಿಫೆರಸ್ ಕಲ್ಪ (65)
  • 395 ಡಿವೋನಿಯನ್ (50)
  • 435 ಸೈಲೂರಿಯನ್ (40)
  • 500 ಆರ್ಡೋವೀಷಿಯನ್ ಕಲ್ಪ (65)
  • 600 ಕ್ರೇಂಬಿಯನ್ (100)
  • 1200 ಆದಿಜೀವಿ ಕಲ್ಪ (ಪ್ರೀ ಕೇಂಬಿಯನ್ ಅಥವಾ ಪ್ರೊಟಿರೋಜೋಯಿಕ್)
  • 4500 ಆರ್ಷೇಯ (ಆರ್ಕೀಯನ್)

ಆದಿಜೀವಿ ಕಲ್ಪ

  • ಈ ಕಲ್ಪದ ಶಿಲೆಗಳು ಆರ್ಷೇಯ ಶಿಲೆಗಳ ಮೇಲೆ ಶೇಖರವಾಗಿವೆ. ಇವೆರಡರ ನಡುವೆ ಸ್ಪಷ್ಟ ಅನನುರೂಪತೆ ಕಾಣಬರುವುದು. ಇವುಗಳಲ್ಲಿ ಜೇಡಿಕಲ್ಲು, ಉರುಟುಕಲ್ಲು, ಸುಣ್ಣಕಲ್ಲು ಮುಂತಾದ ಜಲಜಶಿಲೆಗಳು ಯಥೇಚ್ಛವಾಗಿ ಕಂಡುಬರುತ್ತವೆ. ದಕ್ಷಿಣ ಭಾರತದಲ್ಲಿಯ ಕಡಪ, ಕರ್ನೂಲು ಮತ್ತು ಉತ್ತರ ಕರ್ನಾಟಕದಲ್ಲಿಯ ಕಲಾದಿ ಶಿಲಾಸ್ತರಗಳು ಈ ಕಲ್ಪದವು. ಇವುಗಳಲ್ಲಿ ಕೆಲವು ಕಡೆ ಅಲ್ಲೇ ಸಸ್ಯಜೀವಿಯ ಅವಶೇಷಗಳು ಕಂಡುಬಂದಿವೆ.

ಪ್ರಾಚೀನ ಜೀವಿಯುಗ

  • ಈ ಯುಗದ ಶಿಲಾಸ್ತೋಮಗಳಲ್ಲಿ ಪ್ರಾಚೀನ ಜೀವಿಗಳ ಉಳಿಕೆಗಳು ಯಥೇಚ್ಛವಾಗಿವೆ. ಯೂರೋಪ್ ಖಂಡದಲ್ಲಿ ಇವನ್ನು ಆರು ವಿಭಾಗಗಳಾಗಿ ವಿಂಗಡಿಸಿದೆ. ಇವುಗಳಲ್ಲಿಯ ಕೇಂಬ್ರಿಯನ್ ಪದರಗಳು ಅತ್ಯಂತ ಹಳೆಯವು. ಪರ್ಮಿಯನ್ ಪದರಗಳು ಅತ್ಯಂತ ನೂತನದವು. ಈ ಕಲ್ಪದ ಆದಿಯಲ್ಲಿ ಅಂದರೆ ಕೇಂಬ್ರಿಯನ್ ಕಲ್ಪದಲ್ಲಿ ಎಲ್ಲ ಬಗೆಯ ಅಕಶೇರುಕಗಳೂ ಇದ್ದುವೆಂದು ಅವುಗಳ ಅವಶೇಷಗಳಿಂದ ಗೊತ್ತಾಗಿದೆ. ಇವುಗಳಲ್ಲಿ ಪ್ರಮುಖವಾಗಿ ಟ್ರೈಲೊಬೈಟ್ ಪ್ರಾಣಿಗಳೇ ಅಧಿಕವಾಗಿದ್ದುವೆಂದು ತಿಳಿದುಬಂದಿದೆ. ಯುಗದ ಮಧ್ಯ ಭಾಗದಲ್ಲಿ ಕಶೇರುಕಗಳ ಉಗಮ ಆಯಿತೆಂದೂ ತಿಳಿಯುತ್ತದೆ. ಯುಗಾಂತ್ಯದಲ್ಲಿ ನೆಲದ ಮೇಲೆ ಓಡಾಡುವ ಪ್ರಾಣಿಗಳು ಕಂಡು ಬಂದುವು. ಯುಗದ ಭೂ ಮತ್ತು ಜಲವಿನ್ಯಾಸಗಳು ಈಗಿರುವಂತೆ ಇರಲಿಲ್ಲ. ಈಗ ನೆಲವಾಗಿರುವ ಮತ್ತು ಅನೇಕ ಕಡೆಗಳಲ್ಲಿ ಪರ್ವತ ಪ್ರದೇಶಗಳಾಗಿರುವ ಸ್ಥಳಗಳು ಒಂದು ಕಾಲಕ್ಕೆ ಸಮುದ್ರದ ತಳವಾಗಿದ್ದಿರಬಹುದೆಂದು ಜೀವ್ಯವಶೇಷಗಳ ಅಧ್ಯಯನದಿಂದ ಗೊತ್ತಾಗಿದೆ. ಉದಾಹರಣೆಗೆ ಎವೆರೆಸ್ಟ್ ಶಿಖರ ಆಗ ಸಮುದ್ರದ ತಳದಲ್ಲಿತ್ತೆಂಬ ಸಂಗತಿ ಅದರಲ್ಲಿಯ ಪ್ರೊಡಕ್ಟಸ್ ಸುಣ್ಣಕಲ್ಲಿನ ಅಧ್ಯಯನದಿಂದ ತಿಳಿದುಬಂದಿದೆ.

ಮಧ್ಯಜೀವಿಯುಗ:

  • ಈ ಯುಗದಲ್ಲಿ ರೂಪುಗೊಂಡ ಶಿಲೆಗಳು ಅನೇಕ ಕಡೆ ಆದಿಜೀವಿಕಲ್ಪದ ಶಿಲೆಗಳ ಮೇಲೆ ಅನನುರೂಪವಾಗಿ ಪ್ರೇರಣೆಗೊಂಡಂಥವು. ಆದ್ದರಿಂದ ಈ ಎರಡು ಅವಧಿಗಳ ನಡುವೆ ಎಷ್ಟೊ ಕಾಲ ಕಳೆದು ಹೋಗಿರಬಹುದು. ಈ ಯುಗದ ಶಿಲೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಿದೆ: ಟ್ರಯಾಸಿಕ್, ಜ್ಯುರಾಸಿಕ್, ಕ್ರಿಟೇಷವಸ್. ಈ ಶಿಲೆಗಳು ಹೇಳುವ ಕಾಲದಲ್ಲಿ ಜೀವಿಗಳು ಹೆಚ್ಚು ವಿಕಾಸಗೊಂಡಿದ್ದು ನೆಲ ಮತ್ತು ಜಲವನ್ನು ಸಮಾನವಾಗಿ ಆಕ್ರಮಿಸಿಕೊಂಡಿದ್ದುವು. ಇಲ್ಲಿಯ ಪ್ರಾಣಿಗಳ ಪೈಕಿ ಡೈನೊಸಾರ್ ಎಂಬ ಹೆಗೌಳಿ ಪ್ರಮುಖ. ಸಸ್ಯಗಳ ಪೈಕಿ ತಾಳೆ ಜಾತಿಯ ಮರಗಳು ಹೆಚ್ಚಾಗಿದ್ದುವು. ನೆಲಭಾಗ ಎರಡು ಖಂಡಗಳಾಗಿ ಪ್ರತ್ಯೇಕಗೊಂಡಿತ್ತು. ಉತ್ತರದಲ್ಲಿ ಅಂಗಾರ ಮತ್ತು ದಕ್ಷಿಣದಲ್ಲಿ ಗೊಂಡ್ವಾನ ಎಂಬ ಭೂಪ್ರದೇಶಗಳಿದ್ದುವು. ಇವೆರಡರ ಮಧ್ಯೆ ಆಳದ ಟೆಥಿಸ್ ಸಾಗರ ಇತ್ತು. ಅದರ ಅವಶೇಷವೇ ಈಗ ಮೆಡಿಟರೇನಿಯನ್ ಸಮುದ್ರ (ಭೂಮಧ್ಯಸಮುದ್ರ) ಎಂದಾಗಿರುವುದು. ಈ ಯುಗಾಂತ್ಯದಲ್ಲಿ ಭೂಮಿ ಮತ್ತು ಸಮುದ್ರಗಳ ವಿನ್ಯಾಸದಲ್ಲಿ ಅಧಿಕ ಬದಲಾವಣೆಗಳು ಉಂಟಾಗಿ ಪ್ರಕೃತದ ವಿನ್ಯಾಸಕ್ಕೆ ಕಾರಣವಾಯಿತೆಂದು ಹೇಳಲಾಗಿದೆ. ಇದಲ್ಲದೆ ಪ್ರಾಣಿಗಳೂ ಸಸ್ಯಗಳೂ ಕ್ರಮೇಣ ವಿಕಾಸಗೊಂಡು ಆಧುನಿಕ ರೂಪಗಳನ್ನು ಹೊಂದಿದುವು.

ನವಜೀವಿಯುಗ:

  • ಈ ಯುಗದ ಶಿಲೆಗಳು ಪುನಃ ಅನನುರೂಪವಾಗಿ ಮಧ್ಯಜೀವಿಕಲ್ಪದ ಶಿಲೆಗಳ ಮೇಲೆ ಪ್ರೇರಣೆಗೊಂಡಿವೆ. ಉಳಿದ ಎಲ್ಲ ಯುಗಗಳಿಗಿಂತಲೂ ಹ್ರಸ್ವವಾಗಿರುವ ಇದರ ಅವಧಿ ಸುಮಾರು 65 ದಶಲಕ್ಷವರ್ಷಗಳು. ಈ ಶಿಲೆಗಳಲ್ಲಿಯ ಜೀವಿಗಳು ಆಧುನಿಕ ಪ್ರಾಣಿಗಳ ಗುಣದವಾಗಿದ್ದು ಈಗಿರುವ ಅನೇಕ ಪ್ರಾಣಿಗಳನ್ನೂ ಸಸ್ಯಗಳನ್ನೂ ಹೋಲುತ್ತಿದ್ದುವು. ಈ ಅವಧಿಯಲ್ಲಿ ಅನೇಕ ಸಸ್ತನಿಗಳೂ ಹೂಬಿಡುವ ಸಸ್ಯಗಳೂ ಪ್ರಾಮುಖ್ಯ ಪಡೆದುವು. ಅಲ್ಲದೆ ಈಗ ಕಾಣುವ ಎಲ್ಲ ಖಂಡಗಳೂ ಮಹಾಸಾಗರಗಳೂ ಭೂಮಿಯ ಮೇಲ್ಮೈಯಲ್ಲಿ ರೂಪುತಳೆದುವು. ಭೂಮಿಯ ಮೇಲಿನ ಅತಿ ಎತ್ತರದ ಹಿಮಾಲಯ ಪರ್ವತಗಳೂ ಈ ಯುಗದಲ್ಲಿಯೇ ರೂಪುಗೊಂಡಂಥವು. ಈ ಯುಗಕ್ಕಿಂತ ಒಂದು ದಶಲಕ್ಷವರ್ಷ ಪ್ರಾಚೀನದಲ್ಲೇ ಉತ್ತರ ಧ್ರುವದಲ್ಲಿಯ ಮಂಜು ಮತ್ತಷ್ಟು ವ್ಯಾಪಿಸಿಕೊಂಡು ಉತ್ತರ ರಷ್ಯ ಮತ್ತು ಭೂಮಿಯ ಉತ್ತರ ಭಾಗದ ಉತ್ತರ ಅಮೆರಿಕದ ಭಾಗಗಳು ಮಂಜುಗಡ್ಡೆಯಿಂದ ಆವೃತವಾದುದೆಂದು ತಿಳಿಯುತ್ತದೆ. ಎಂದೇ ಈ ಯುಗವನ್ನು ಮಹಾಮಂಜುಗೆಡ್ಡೆ ಯುಗ (ದಿ ಗ್ರೇಟ್ ಐಸ್‍ಏಜ್) ಎಂದು ಕರೆದಿದ್ದಾರೆ. ಹವೆಯ ವೈಪರೀತ್ಯದ ಅವಧಿಯಲ್ಲೇ ಮಾನವನ ವಿಕಾಸವೂ ಆಯಿತೆಂದು ತಿಳಿದುಬಂದಿದೆ. ಹೀಗೆ ಜಲಜಶಿಲೆಗಳು ಮತ್ತು ಅವುಗಳಲ್ಲಿ ಶೇಖರಗೊಂಡಿರುವ ಜೀವ್ಯವಶೇಷಗಳ ಅಧ್ಯಯನದಿಂದ ಭೂವಿe್ಞÁನಿಗಳು ಭೂಇತಿಹಾಸವನ್ನು ರಚಿಸಲು ಸಾಧ್ಯವಾಗಿದೆ.

ಪಳೆಯುಳಿಕೆಗಳಿಂದ ಭೂವೈಜ್ಞಾನಿಕ ಕಾಲದ ನಿರ್ಧರಣೆ:

  • ಪ್ರಾಗ್ಜೀವಿ ವಿe್ಞÁನದ (ಪೇಲಿಯಂಟಾಲಜಿ) ಪಿತನೆಂದು ಖ್ಯಾತನಾಗಿರುವ ಕುವಿಯರ್ ಎಂಬ ವಿe್ಞÁನಿ ನಿರೂಪಿಸಿದ ಪಳೆಯುಳಿಕೆಗಳ ವಿಕಾಸ ಬದಲಾವಣೆ ಕಾಲಾವಲಂಬಿ ಎಂಬ ಹೇಳಿಕೆಯಿಂದ ಇಲ್ಲವೇ ಪಳೆಯುಳಿಕೆಗಳು ಪುರಾತನವಾದಂತೆ ಅವು ಇಂದಿನ ಜೀವಿಗಳಿಗಿಂತ ತೀರ ಭಿನ್ನವಾಗಿರುತ್ತವೆ ಎಂಬ ಸಿದ್ಧಾಂತದಿಂದ ಭೂವಿe್ಞÁನದ ಪ್ರಗತಿಗೆ ಒಂದು ಆಯಾಮ ಲಭಿಸಿತು. ಈ ಕ್ರಮವನ್ನು ಅನುಸರಿಸಿ ಜೀವರಾಶಿಯನ್ನು ವಂಶಜಾತಿ ಇತ್ಯಾದಿ ವರ್ಗಗಳಾಗಿ ವಿಂಗಡಿಸಲಾಗಿದೆ. ಕುವಿಯರ್, ಬ್ರಾಂಗ್ನಿಯರ್ಟ್, ಸ್ಮಿತ್ ಮೊದಲಾದ ವಿe್ಞÁನಿಗಳು ಹೆಚ್ಚು ವ್ಯತ್ಯಾಸವಿಲ್ಲದ ಮತ್ತು ಒಂದೇ ವಂಶಕ್ಕೆ ಸೇರಿದ ಹೆಚ್ಚಿನ ಜೀವ್ಯವಶೇಷಗಳು ನಿರ್ದಿಷ್ಟ ಹಾಗೂ ಕಿರಿದಾದ ಸ್ತರಗಳ ಮಧ್ಯದಲ್ಲೇ ಅಡಗಿರುತ್ತವೆ ಎಂಬ ವಿಚಾರವನ್ನು ಹೊರಗೆಡವಿದರು. ಇಂಥ ಸ್ತರಸ್ತೋಮಗಳು ಭೌಗೋಳಿಕವಾಗಿ ವ್ಯಾಪಿಸಿದ್ದು ಪರಸ್ಪರ ಸಹಸಂಬಂಧಕ್ಕೆ ಸಿಲುಕುವಂತಾಗಿವೆ. ಅಂತೆಯೇ ನಿರ್ದಿಷ್ಟ ಜೀವ್ಯವಶೇಷಗಳು ಇರುವ ಶಿಲಾಸ್ತರಗಳು ನಿರ್ದಿಷ್ಟ ಕಾಲವನ್ನೂ ಸೂಚಿಸುತ್ತವೆ ಎಂಬ ತೀರ್ಮಾನಕ್ಕೂ ಬರಬಹುದಾಗಿದೆ. ಈ ತೀರ್ಮಾನವನ್ನು ಆಧರಿಸಿಯೇ ಭೂವೈe್ಞÁನಿಕ ಕಾಲವನ್ನು ನಿರ್ಧರಿಸಲಾಗಿದೆ.

ಸಾಗರಜಲದಲ್ಲಿ ನಿಕ್ಷೇಪಗೊಂಡಿರುವ ಲವಣ ಪ್ರಮಾಣದಲ್ಲಿ ಭೂವೈಜ್ಞಾನಿಕ ಕಾಲದ ಗಣನೆ:

  • ಸಾಗರಜಲದಲ್ಲಿ ವಿಲೀನವಾಗಿರುವ ಸೋಡಿಯಮ್ ಕ್ಯಾಲ್ಸೈಟ್ ಲವಣಗಳನ್ನು ನಿರ್ಧರಿಸಿ, ಭೂಮಿಯ ವಯಸ್ಸು 120 ದಶಲಕ್ಷ ವರ್ಷಗಳು ಎಂದು ಅಂದಾಜು ಮಾಡಲಾಗಿದೆ. ಸಮುದ್ರದ ನೀರು ಆದಿಯಲ್ಲಿ ಲವಣರಹಿತವಾಗಿತ್ತೆಂದು ಊಹಿಸಿ ಅನಂತರದಲ್ಲಿ ನದೀ ಕಾಲುವೆಗಳ ಭೂಕೊರೆತದಿಂದಾಗಿ ಅದರಲ್ಲಿಯ ಲವಣಗಳು ಲೀನಗೊಂಡು ಅಂತ್ಯದಲ್ಲಿ ಸಾಗರ ಸೇರಿ ಲವಣಾಂಶವನ್ನು ಹೆಚ್ಚುಸುತ್ತ ಹೋದುವು ಎಂದು ತಿಳಿಯಬಹುದು. ಸಾಗರದಲ್ಲಿಯ ಲವಣ ಪ್ರಮಾಣದ ಆದಿಯಲ್ಲಿ ಎಷ್ಟಿತ್ತು, ಈಗ ಎಷ್ಟಿದೆ ಎಂಬುದನ್ನು ನಿರ್ಧರಿಸುವುದಕ್ಕಿಂತಲೂ ಭೂ ಮೇಲ್ಮೈಯಿಂದ ಹರಿದು ಬರುವ ನೀರಿನಿಂದ ವಾರ್ಷಿಕವಾಗಿ ಸಾಗರ ಜಲಕ್ಕೆ ಸೇರುವ ಲವಣ ಪ್ರಮಾಣವನ್ನು ನಿರ್ಧರಿಸುವುದು ಒಂದು ವಿಧಾನ. ಸಾಗರ ಜಲದ ಪ್ರಮಾಣವನ್ನು ಮತ್ತು ಜಲಪ್ರಮಾಣದ ನಿಷ್ಕøಷ್ಟ ಅಂಶದಲ್ಲಿರುವ ಲವಣಗಳ ಪ್ರಮಾಣವನ್ನು ಅಳೆಯುವುದರ ಮೂಲಕ ಇಂದಿನ ಸಾಗರಜಲದಲ್ಲಿರುವ ಲವಣಪ್ರಮಾಣ ಏನು ಎಂಬುದು ತಿಳಿಯುತ್ತದೆ. ವಾರ್ಷಿಕವಾಗಿ ನದಿಗಳಿಂದ ಸಾಗರ ಜಲವನ್ನು ಸೇರುವ ಲವಣ ಪ್ರಮಾಣವನ್ನು ಪ್ರಾಯೋಗಿಕ ಅವಲೋಕನದಿಂದಲೂ ತಿಳಿಯಬಹುದು.
  • ಮೂಲಭೂತವಾಗಿ ಈ ರೀತಿಯ ಲವಣಪ್ರಮಾಣ ಗಣನೆಯೇ ದೋಷಯುಕ್ತವಾದ್ದು. ಭೂಮೇಲ್ಮೈಯಲ್ಲಿಯ ಸಾಗರಗಳು ರೂಪುಗೊಳ್ಳುವುದಕ್ಕೆ ಮೊದಲೇ ಭೂಮಿ ರೂಪಿತವಾಗಿದ್ದು ಅದರ ಲವಣ ಪ್ರಮಾಣಗಣನೆಯಿಂದ ಭೂಮಿಯ ವಯೋಮಾನ ಗಣನೆ ಆಗುವುದಿದೆ. ಜೊತೆಗೆ ವರ್ಷಂಪ್ರತಿ ಸಾಗರಜಲದಲ್ಲಿ ಲೀನಗೊಳ್ಳುವ ಲವಣಪ್ರಮಾಣ ಏಕರೀತಿಯದಾಗಿರುವುದಿಲ್ಲ. ಅಲ್ಲದೆ, ಸಾಗರಜಲದಲ್ಲಿ ನಿಕ್ಷೇಪಗೊಳ್ಳುವ ಲವಣ ಪ್ರಮಾಣ ಗಣನೆಯೊಂದಿಗೆ ಬಾಷ್ಪೀಭವನವಾಗುವಾಗ ನಶಿಸಿಹೋಗುವ ಲವಣಗಳ ಪ್ರಮಾಣವನ್ನೂ ಗಣನೆಗೆ ತೆಗೆದುಕೊಂಡಿರುವುದಿಲ್ಲವಾದ್ದರಿಂದ ಭೂಮಿಯ ವಯೋಮಾನದ ಗಣನೆ ಕರಾರುವಾಕ್ಕಾಗಿ ಆಗುವುದಿಲ್ಲ.
  • ವಿಶಿಷ್ಟ ಖನಿಜಗಳ ವಿಕಿರಣಪಟುತ್ವ ಕ್ಷಯಗೊಳ್ಳುವುದನ್ನು ಅಳೆಯುವ ವಿಧಾನದಿಂದ ಭೂವೈe್ಞÁನಿಕ ಕಾಲದ ಗಣನೆ: ಶಿಲೆಗಳ ಮತ್ತು ಖನಿಜಗಳ ವಯೋಮಾನವನ್ನು ಅವುಗಳಲ್ಲಿಯ ವಿಕಿರಣಪಟುತ್ವ ಕ್ಷಯಿಸುವ ದರ ಮತ್ತು ಇದರ ಪರಿಣಾಮವಾಗಿ ಉಂಟಾಗುವ ನೂತನ ಧಾತುಗಳ ಪರಿಮಾಣಗಳನ್ನು ಅಳೆಯುವ ಮೂಲಕವೂ ತಿಳಿಯಬಹುದು. ಪರಮಾಣು ವಿಕಿರಣಪಟುತ್ವ ಕ್ಷಯ ಎಂಬುದು ಕೆಲವು ಖನಿಜಗಳಲ್ಲಿ ಜರಗುವ ನೈಸರ್ಗಿಕ ಕ್ರಿಯೆ. ಅಸ್ಥಿರವೆನಿಸುವ ಕೆಲವೊಂದು ಧಾತುಗಳು ಒಡೆದು ನಿರ್ದಿಷ್ಟ ದರದಲ್ಲಿ ವಿದಳನಗೊಂಡು ಬೇರೆ ಧಾತುಗಳು ಉಂಟಾಗುವುದು ಈ ಕ್ರಿಯೆಯ ಪರಿಣಾಮ. ಆಸ್ಥಿರವು ವಿದಳನಕ್ಕೆ ಒಳಪಡುವಂಥದೂ ಆದ ಧಾತುಗಳ ಪೈಕಿ ಯುರೇನಿಯಮ್ ಪೊಟ್ಯಾಸಿಯಮ್ ಮತ್ತು ರುಬಿಡಿಯಮ್ ಮುಖ್ಯ. ವಿಕಿರಣಪಟುತ್ವ ಕ್ಷಯದಿಂದ ಅಂತಿಮವಾಗಿ ಜಡವಸ್ತುಗಳ ಎನಿಸುವ ಸೀಸ, ಆರ್ಗಾನ್ ಮತ್ತು ಸ್ಟ್ರಾಂಷಿಯಮ್ ಉಂಟಾಗುತ್ತವೆ. ಈ ಧಾತುಗಳು ಉಂಟಾಗಲು ತೆಗೆದುಕೊಳ್ಳುವ ಕಾಲವನ್ನು ಮೂಲಧಾತುವಿನ ವಿದಳನದರವನ್ನು ಆಧರಿಸಿ ಅಳೆಯಬಹುದು. ಹೆಚ್ಚಿನ ಶಿಲೆಗಳಲ್ಲಿ ಕ್ಯಾಲ್ಸಿಯಮ್ ಧಾತು ಅಧಿಕವಾಗಿರುವುದರಿಂದ ಪೊಟ್ಯಾಸಿಯಮ್‍ನಿಂದ ವಿದಳನಗೊಂಡ ಅಲ್ಪ ಮೊತ್ತದ ಕ್ಯಾಲ್ಸಿಯಮ್ ಮೊತ್ತವನ್ನು ಅಳೆಯುವುದು ಕಷ್ಟಸಾಧ್ಯ. ಆದ್ದರಿಂದ ಪೊಟ್ಯಾಸಿಯಮ್ ಆರ್ಗಾನ್ ವಿಧಾನವನ್ನು ಬಳಸಿ ಶಿಲಾಖನಿಜಗಳ ವಯಸ್ಸನ್ನು ನಿರ್ಧರಿಸಲಾಗುತ್ತದೆ. ಆರ್ಷೇಯ ಕಲ್ಪದ ಶಿಲೆಗಳಲ್ಲಿ ಸಂಚಯನಗೊಂಡಿರುವ ಯುರಾನಿ ನೈಟುಗಳಲ್ಲಿ ಶೇಕಡಾ 10-15 ಸೀಸ ಸಂಚಯನವಾಗುವುದು ಗೊತ್ತಾಗಿದೆ. ಶಿಲೆಗಳಲ್ಲಿರುವ ಯುರಾನಿ ನೈಟನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿ, ಅವುಗಳ ಸಮಗ್ರ ವಯೋಮಾನ ನಿರ್ಧರಿಸಬಹುದು. ಹಲವಾರು ಖಂಡಗಳ ಪೀಠ (ಷೀಲ್ಡ್) ಪ್ರದೇಶಗಳಲ್ಲಿಯ ಆರ್ಷೇಯ ಕಲ್ಪದ ಶಿಲೆಗಳನ್ನು ಅವುಗಳಲ್ಲಿಯ ಖನಿಜಗಳ ವಿಕಿರಣಪಟುತ್ವದ ಕ್ಷಯಿಕೆಯಿಂದ ಉಂಟಾದ ಅಂತ್ಯಧಾತುಗಳನ್ನು ನಿಖರವಾಗಿ ಅಳೆದು ಅವು ಸುಮಾರು 3400 ದಶಲಕ್ಷ ವರ್ಷಗಳ ಪ್ರಾಚೀನದ್ದೆಂದು ನಿರ್ಧರಿಸಲಾಗಿದೆ. (ಸಿ.ಎನ್.)[]

ನೋಡಿ

ಉಲ್ಲೇಖ

  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
  2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭೂವೈಜ್ಞಾನಿಕ ಕಾಲ