ವಿಷಯಕ್ಕೆ ಹೋಗು

ಪೀಟರ್ ಸೆಲ್ಲರ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.
ಪೀಟರ್ ಸೆಲ್ಲರ್ಸ್
ಆರ್ಡರ್ ಆಫ್ ಬ್ರಿಟಿಷ್ ಎಂಪೈರ್
ಪೀಟರ್ ಸೆಲ್ಲರ್ಸ್
ಪೀಟರ್ ಸೆಲ್ಲರ್ಸ್
ಪರಿಚಯ
Born
ರಿಚರ್ಡ್ ಹೆನ್ರಿ ಸೆಲ್ಲರ್ಸ್

(೧೯೨೫-೦೯-೦೮)೮ ಸೆಪ್ಟೆಂಬರ್ ೧೯೨೫
ಪೋರ್ಟ್ಸ್‍ಮೌತ್
Died24 July 1980(1980-07-24) (aged 54)
ಲಂಡನ್
Occupation(s)ಬಾಫ್ಟಾ ಪ್ರಶಸ್ತಿ ವಿಜೇತ ಚಿತ್ರನಟ, ರೇಡಿಯೋ ಕಲಾವಿದ, ಹಾಸ್ಯಕಲಾವಿದ, ಗಾಯಕ
Years active೧೯೪೮-೮೦
Known forಸಮಯಸ್ಪೂರ್ತಿ

ಪೀಟರ್ ಸೆಲ್ಲರ್ಸ್ , CBE (ಜನನ ರಿಚರ್ಡ್ ಹೆನ್ರಿ ಸೆಲ್ಲರ್ಸ್ ; ೮ ಸೆಪ್ಟೆಂಬರ್ ೧೯೨೫ - ೨೪ ಜುಲೈ ೧೯೮೦) ಪ್ರಸಿದ್ಧ ಇಂಗ್ಲಿಷ್ ಚಲನಚಿತ್ರ ನಟ, ಹಾಸ್ಯನಟ ಮತ್ತು ಗಾಯಕ. ಅವರು ಬಿಬಿಸಿ ರೇಡಿಯೊ ಕಾಮಿಡಿ ಸರಣಿಯಲ್ಲಿ ದಿ ಗುಯನ್ ಶೋನಲ್ಲಿ ಪ್ರದರ್ಶನ ನೀಡಿದ್ದಾರೆ.ಹಲವಾರು ಹಾಸ್ಯಮಯ ಹಾಡುಗಳ ಮೂಲಕ ಬ್ರಿಟನ್‍ನ ಅಭಿಮಾನಿಗಳಲ್ಲಿ ಹೆಸರಾಗಿದ್ದಾರೆ ಮತ್ತು ವಿಶ್ವದಾದ್ಯಂತ ಅನೇಕ ಪ್ರೇಕ್ಷಕರಿಗೆ ಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದಾರೆ, ಅವರಲ್ಲಿ ದಿ ಪಿಂಕ್ ಪ್ಯಾಂಥರ್ ಸರಣಿಯ ಚಲನಚಿತ್ರಗಳಲ್ಲಿ ಮುಖ್ಯ ಇನ್ಸ್ಪೆಕ್ಟರ್ ಕ್ಲೆಶೌ .
[]

ಪೋರ್ಟ್ಸ್ಮೌತ್‍ನಲ್ಲಿ ಜನಿಸಿದ ಸೆಲ್ಲರ್ಸ್ ಅವರು ಎರಡು ವಾರದ ಹಸುಳೆಯಾಗಿರುವಾಗಲೆಯೇ ದಕ್ಷಿಣದ ಕಿಂಗ್ಸ್ ಥಿಯೇಟರ್ನಲ್ಲಿ ತಮ್ಮ ಪ್ರಥಮ ರಂಗಪ್ರವೇಶವನ್ನು ಮಾಡಿದರು. ಅವರು ಪ್ರಾಂತೀಯ ಚಿತ್ರಮಂದಿರಗಳಲ್ಲಿ ಪ್ರವಾಸ ಮಾಡಿದ ವೈವಿಧ್ಯಮಯ ಕಾರ್ಯದಲ್ಲಿ ನಟಿಸುತ್ತಿದ್ದ, ತಮ್ಮ ಪೋಷಕರ ಜೊತೆಗೂಡಿ ನಟನೆಯ ವೃತ್ತಿ ಆರಂಭಿಸಿದರು.

ರೇಡಿಯೋ ಕಲಾವಿದ

ಪೀಟರ್ ಸೆಲ್ಲರ್ಸ್ ಅವರು ಮೊದಲಿಗೆ ಡ್ರಮ್ಮರ್ ಆಗಿ ಕೆಲಸ ಮಾಡಿದರು ಮತ್ತು ಎಂಟರ್ಟೈನ್ಮೆಂಟ್ ನ್ಯಾಷನಲ್ ಸರ್ವೀಸ್ ಅಸೋಸಿಯೇಷನ್ (ಇಎನ್ಎಸ್ಎ) ಸದಸ್ಯರಾಗಿ ಇಂಗ್ಲೆಂಡ್‍ನ ಉದ್ದಕ್ಕೂ ಪ್ರವಾಸ ಮಾಡಿದರು. ಅವರು ರಾಲ್ಫ್ ರೀಡರ್ ನಡೆಸುತ್ತಿದ್ದ ದ್ವಿತೀಯ ವಿಶ್ವಯುದ್ಧಕಾಲದ ಗ್ಯಾಂಗ್ ಷೋ ಮನರಂಜನಾ ಗುಂಪಿನ ಭಾಗವಾಗಿ, ಬ್ರಿಟನ್ ಮತ್ತು ಆಗ್ನೇಯ ಎಷ್ಯಾ ಪ್ರವಾಸಕ್ಕೆ ತೆರಳಿ, ತಮ್ಮ ಮಿಮಿಕ್ರಿ ಮತ್ತು ನಟನಾ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡರು. ಯುದ್ಧದ ನಂತರ, ಸೆಲ್ಲರ್ಸ್ ಷೋಟೈಮ್ ಎಂಬ ಕಾರ್ಯಕ್ರಮದಲ್ಲಿ ತನ್ನ ಚೊಚ್ಚಲ ರೇಡಿಯೊ ಕಾರ್ಯಕ್ರಮವನ್ನು ಮಾಡಿದರು. ಹಂತಹಂತವಾಗಿ, ವಿವಿಧ ಬಿ.ಬಿ.ಸಿ ರೇಡಿಯೊ ಪ್ರದರ್ಶನಗಳಲ್ಲಿ ನಿಯಮಿತವಾಗಿ ಪ್ರದರ್ಶಕರಾದರು. ೧೯೫೦ ರ ದಶಕದ ಆರಂಭದಲ್ಲಿ, ಸೆಲ್ಲರ್ಸ್, ಸ್ಪೈಕ್ ಮಿಲ್ಲಿಗನ್ , ಹ್ಯಾರಿ ಸೆಕೊಂಬೆ ಮತ್ತು ಮೈಕೆಲ್ ಬೆಂಟೈನ್ ಜೊತೆಯಲ್ಲಿ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದರು. ಹಲವು ವರ್ಷ ನಡೆದು, ೧೯೬೦ ರಲ್ಲಿ ಕೊನೆಗೊಂಡ ದಿ ಗುಯನ್ ಷೋ ಎಂಬ ಯಶಸ್ವೀ ರೇಡಿಯೊ ಸರಣಿಯಲ್ಲಿ ಭಾಗವಹಿಸಿದರು.[]


ಚಿತ್ರ ಬದುಕು

ಸೆಲ್ಲರ್ಸ್ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ೧೯೫೦ ರ ದಶಕದಲ್ಲಿ ಪ್ರಾರಂಭಿಸಿದರು. ಅವರ ಕೆಲಸದ ಬಹುಪಾಲು ಹಾಸ್ಯಮಯವಾಗಿದ್ದರೂ, ಮಿಲಿಟರಿ ಅಧಿಕಾರಿಗಳು ಅಥವಾ ಪೋಲಿಸರಂತಹ ಅಧಿಕಾರದ ಪಾತ್ರಗಳನ್ನು ಸಾಮಾನ್ಯವಾಗಿ ವಿಡಂಬನೆ ಮಾಡಲಾಗಿದ್ದರೂ ಸಹ, ಅವರು ಇತರ ಚಲನಚಿತ್ರ ಪ್ರಕಾರಗಳಲ್ಲಿ ಮತ್ತು ಪಾತ್ರಗಳಲ್ಲಿ ಅಭಿನಯಿಸಿದರು. []ಐಯಾಮ್ ಆಲ್ ರೈಟ್ ಜ್ಯಾಕ್ (೧೯೫೯), ಸ್ಟಾನ್ಲಿ ಕುಬ್ರಿಕ್‍ನ ಲೋಲಿತ (೧೯೬೨) ಮತ್ತು ಡಾ. ಸ್ಟ್ರಾಂಜೆಲೊವ್ (೧೯೬೪), ವಾಟ್ಸ್ ನ್ಯೂ, ಪುಸ್ಸಿಕ್ಯಾಟ್? (೧೯೬೫), ಕ್ಯಾಸಿನೊ ರಾಯೇಲ್ (೧೯೬೭), ದ ಪಾರ್ಟಿ (೧೯೬೮), ಬೀಯಿಂಗ್ ದೇರ್ (೧೯೭೯) ಮತ್ತು ಪಿಂಕ್ ಪ್ಯಾಂಥರ್ ಸರಣಿಯ ಐದೂ ಚಿತ್ರಗಳು (೧೯೬೩-೭೮) ಇವು ಸೆಲ್ಲರ್ಸ್ ನಟಿಸಿದ ಜನಪ್ರಿಯ ಚಿತ್ರಗಳು. ಸೆಲ್ಲರ್ಸ್ ಬುದ್ಧಿ ಸಾಮರ್ಥ್ಯವು ವಿವಿಧ ಸ್ತರಗಳು ಮತ್ತು ವಿಡಂಬನೆಯ ಮೂಲಕ ವ್ಯಾಪಕ ಶ್ರೇಣಿಯ ಕಾಮಿಕ್ ಪಾತ್ರಗಳನ್ನು ಚಿತ್ರಿಸಲು ಶಕ್ತಗೊಳಿಸಿತು. ಅವರು ಅನೇಕವೇಳೆ ಒಂದೇ ಚಿತ್ರದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದೂ ಉಂಟು. ಆಗಾಗ್ಗೆ ವ್ಯತಿರಿಕ್ತವಾದ ಮನೋಧರ್ಮ ಮತ್ತು ಶೈಲಿಗಳೊಂದಿಗೆ ನಟಿಸುವ , ಮೋಸ ಮತ್ತು ವಿಡಂಬನಾತ್ಮಕ ಹಾಸ್ಯವು ಅವರ ಅನೇಕ ಚಲನಚಿತ್ರಗಳ ಪ್ರಮುಖ ಲಕ್ಷಣಗಳಾಗಿವೆ. ಅವರ ಅಭಿನಯವು ಅನೇಕ ನಂತರದ ಹಾಸ್ಯಗಾರರ ಮೇಲೆ ಪ್ರಭಾವ ಬೀರಿತು. ಸೆಲ್ಲರ್ಸ್ ಮೂರು ಬಾರಿ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.[] ಡಾ. ಸ್ಟ್ರಾಂಜೆಲೊವ್ ಮತ್ತು ಬೀಯಿಂಗ್ ದೇರ್ ಅವರ ಅಭಿನಯಕ್ಕಾಗಿ ಎರಡು ಬಾರಿ ಅತ್ಯುತ್ತಮ ನಟನೆಗೆ ಅಕಾಡೆಮಿ ಪ್ರಶಸ್ತಿಗೆ ಮತ್ತು ಒಮ್ಮೆ ರನ್ನಿಂಗ್ ಜಂಪಿಂಗ್ & ಸ್ಥಾಯಿ ಸ್ಟಿಲ್ ಚಿತ್ರಕ್ಕೆ ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗೆ ೧೯೫೯).[] [] ಐ ಆಮ್ ಆಲ್ ರೈಟ್ ಜ್ಯಾಕ್ ಮತ್ತು ಮೂಲ ಪಿಂಕ್ ಪ್ಯಾಂಥರ್ ಚಿತ್ರ, ದ ಪಿಂಕ್ ಪ್ಯಾಂಥರ್ (೧೯೬೩) ಗಾಗಿ ಅವರು ಎರಡು ಬಾರಿ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿರುವ ಬಾಫ್ಟಾ ಪ್ರಶಸ್ತಿಯನ್ನು ಗೆದ್ದುಕೊಂಡರು[] ಮತ್ತು ಅತ್ಯುತ್ತಮ ನಟನಾಗಿ ಮೂರು ಬಾರಿ ನಾಮನಿರ್ದೇಶನಗೊಂಡರು. ೧೯೮೦ ರಲ್ಲಿ ಬೀಯಿಂಗ್ ದೇರ್ನಲ್ಲಿ ಅವರ ಪಾತ್ರಕ್ಕಾಗಿ ಮೋಷನ್ ಪಿಕ್ಚರ್ ಮ್ಯೂಸಿಕಲ್ ಆರ್ ಕಾಮಿಡಿಗಾಗಿ ಅತ್ಯುತ್ತಮ ನಟನಿಗಾಗಿರುವ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದರು ಮತ್ತು ಹಿಂದೆ ಅದೇ ವಿಭಾಗದಲ್ಲಿ ಮೂರು ಬಾರಿ ನಾಮನಿರ್ದೇಶನಗೊಂಡಿದ್ದರು. []ಟರ್ನರ್ ಕ್ಲಾಸಿಕ್ ಮೂವೀಸ್ ಪತ್ರಿಕೆಯು ಸೆಲ್ಲರ್ಸ್ ರನ್ನು "೨೦ ನೇ ಶತಮಾನದ ಅಂತ್ಯದ ಅತ್ಯಂತ ನಿಪುಣ ಹಾಸ್ಯ ನಟರಲ್ಲಿ ಒಬ್ಬರು" ಎಂದು ಬಣ್ಣಿಸಿದೆ.

ಅವರ ವೈಯಕ್ತಿಕ ಜೀವನದಲ್ಲಿ, ಸೆಲ್ಲರ್ಸ್ ಖಿನ್ನತೆ ಮತ್ತು ಅಭದ್ರತೆಗಳೊಂದಿಗೆ ಹೋರಾಡಿದರು. ಒಂದು ನಿಗೂಢ ವ್ಯಕ್ತಿ, ಅವರು ಪಾತ್ರವಹಿಸಿದ ಪಾತ್ರಗಳ ಹೊರಗೆ ಯಾವುದೇ ಗುರುತನ್ನು ಹೊಂದಿಲ್ಲವೆಂದು, ಅವರು ಪ್ರತಿಪಾದಿಸಿದರು. ಅವರ ನಡವಳಿಕೆಯು ಅನೇಕ ವೇಳೆ ಅನಿಯಮಿತ ಮತ್ತು ಕಂಪಲ್ಸಿವ್ ಆಗಿತ್ತು. ಸೆಲ್ಲರ್ಸ್ ತನ್ನ ನಿರ್ದೇಶಕರು ಮತ್ತು ಸಹ-ನಟರೊಂದಿಗೆ ಆಗಾಗ ಸಂಘರ್ಷಕ್ಕೊಳಗಾಗಿ ಚಿತ್ರೀಕರಣದಲ್ಲಿ ತೀಮ್ದರೆ ಉಂಟು ಮಾಡುತ್ತಿದ್ದರು.ವಿಶೇಷವಾಗಿ 1970 ರ ದಶಕದ ಮಧ್ಯಭಾಗದಲ್ಲಿ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ, ಅವರ ಕುಡಿತ ಮತ್ತು ಮಾದಕವಸ್ತು ಸಮಸ್ಯೆಗಳಿಂದಾಗಿ ಅವರ ಕೆಡುಕು ಎದುರಿಸಬೇಕಾಯಿತು. ಸೆಲ್ಲರ್ಸ್ ನಾಲ್ಕು ಬಾರಿ ಮದುವೆಯಾದರು. ಅವರ ಮೊದಲ ಎರಡು ಮದುವೆಗಳಿಂದ, ಅವರಿಗೆ ಮೂರು ಮಕ್ಕಳಿದ್ದರು. ೧೯೮೦ ರಲ್ಲಿ ೫೪ ವರ್ಷದ ಸೆಲ್ಲರ್ಸ್, ಹೃದಯಾಘಾತದಿಂದ ಮೃತಪಟ್ಟರು. ಇಂಗ್ಲಿಷ್ ಚಿತ್ರನಿರ್ಮಾಪಕರಾದ ಬೌಲಿಂಗ್ ಸಹೋದರರು ಸೆಲ್ಲರ್ಸ್‍ರನ್ನು " ಚಾರ್ಲ್ಸ್ ಚಾಪ್ಲಿನ್ ನಂತರ ಈ ದೇಶವು ನಿರ್ಮಿಸಿದ ಮಹಾನ್ ಕಾಮಿಕ್ ಪ್ರತಿಭೆ" ಎಂದು ವಿವರಿಸಿದರು. []

[೧೦]

[೧೧]



ಉಲ್ಲೇಖಗಳು

  1. "Peter-Sellers". "www.tcm.com". 3 April 2018. Retrieved 30 May 2018.
  2. "wiki". "en.wikipedia.org". 3 April 2018. Retrieved 30 May 2018.
  3. "wiki". "en.wikipedia.org". 3 April 2018. Retrieved 30 May 2018.
  4. "The-Great-McGonagall". "movies.nytimes.com". 3 April 2018. Retrieved 30 May 2018.
  5. "ceremonies". "www.oscars.org". 3 April 2018. Retrieved 30 May 2018.
  6. "ceremonies". "www.oscars.org". 3 April 2018. Retrieved 30 May 2018.
  7. "bafta". "www.bafta.org". 3 April 2018. Retrieved 30 May 2018.
  8. "year". "archive.is". 3 April 2018. Archived from the original on 14 ಏಪ್ರಿಲ್ 2013. Retrieved 30 May 2018.{{cite web}}: CS1 maint: bot: original URL status unknown (link)
  9. "doc". "www.highbeam.com". 3 April 2018. Archived from the original on 7 ನವೆಂಬರ್ 2012. Retrieved 30 May 2018.
  10. "wiki". "en.wikipedia.org". 3 April 2018. Retrieved 30 May 2018.
  11. "awards". "web.archive.org". 3 April 2018. Archived from the original on 12 ಸೆಪ್ಟೆಂಬರ್ 2012. Retrieved 30 May 2018.{{cite web}}: CS1 maint: bot: original URL status unknown (link)