ವಿಷಯಕ್ಕೆ ಹೋಗು

ಡಿ.ಕೆ ಶಿವಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಿ. ಕೆ. ಶಿವಕುಮಾರ್

ಡಿ. ಕೆ. ಶಿವಕುಮಾರ್
ದೊಡ್ಡನಹಳ್ಳಿ ಕೆಂಪೇಗೌಡ ಶಿವಕುಮಾರ್
ಡಿ. ಕೆ. ಶಿವಕುಮಾರ್ ೨೦೧೧ರಲ್ಲಿ

ಕರ್ನಾಟಕ ಸರ್ಕಾರದಲ್ಲಿ ಜಲ ಸಂಪನ್ಮೂಲ and ವೈದ್ಯಕೀಯ ಶಿಕ್ಷಣ, ಸಚಿವ
ಹಾಲಿ
ಅಧಿಕಾರ ಸ್ವೀಕಾರ 
6 June 2018
Chief Minister H. D. Kumaraswamy
ಪೂರ್ವಾಧಿಕಾರಿ M. B. Patil

ಹಾಲಿ
ಅಧಿಕಾರ ಸ್ವೀಕಾರ 
May 2008
ಪೂರ್ವಾಧಿಕಾರಿ P. G. R. Sindhia
ಮತಕ್ಷೇತ್ರ Kanakapura
ಅಧಿಕಾರ ಅವಧಿ
November 1989 – May 2008
ಪೂರ್ವಾಧಿಕಾರಿ K. L. Shivalingegowda
ಉತ್ತರಾಧಿಕಾರಿ Constituency abolished
ಮತಕ್ಷೇತ್ರ Sathanur
ವೈಯಕ್ತಿಕ ಮಾಹಿತಿ
ಜನನ Doddalahalli Kempegowda Shivakumar
(1962-05-15) ೧೫ ಮೇ ೧೯೬೨ (ವಯಸ್ಸು ೬೨)
Kanakapura, Mysore State (now Karnataka), India
ರಾಷ್ಟ್ರೀಯತೆ Indian
ರಾಜಕೀಯ ಪಕ್ಷ Indian National Congress
ಸಂಗಾತಿ(ಗಳು) Usha

ಕರ್ನಾಟಕ ರಾಜ್ಯದ ಪ್ರಭಾವಿ ರಾಜಕಾರಣಿ. ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ.

ಜೀವನ

ಡಿ.ಕೆ. ಶಿವಕುಮಾರ್ ಅವರು ೧೯೬೧ ಮೇ ೧೫ರಂದು ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡ ಆಲಹಳ್ಳಿಯಲ್ಲಿಜನಿಸಿದರು. ಇವರ ತಂದೆ ಕೆಂಪೇಗೌಡ ತಾಯಿ ಗೌರಮ್ಮ. ಇವರ ಸಹೋದರರು ಡಿ.ಕೆ.ಸುರೇಶ್.

ಶಿಕ್ಷಣ

ಡಿ.ಕೆ.ಶಿವಕುಮಾರ್ ಅವರು ಕನಕಪುರದಲ್ಲಿ ಕರಿಯಪ್ಪ ಅವರ ವಿದ್ಯಾಸಂಸ್ಥೆಯಲ್ಲಿ ಶಾಲ ಶಿಕ್ಷಣವನ್ನು ಪೊರೈಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿಎಂ ಪದವಿಯನ್ನು ಮುಗಿಸಿದ್ದರು. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರಕ್ಕೆ ಎಂಎ ಪದವಿಯನ್ನು ಪಡೆದಿದ್ದಾರೆ.

ರಾಜಕೀಯ ಪ್ರವೇಶ

ಮೊದಲ ಬಾರಿಗೆ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದರು. ನಂತರ ಜಿಲ್ಲಾ ಪಂಚಾಯಿತಿ ಸದಸ್ಯ, ಶಾಸಕ, ಸಚಿವರಾಗಿ ಬೆಳೆದಿದ್ದು ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಸಾಧನೆ

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ

ಮೊದಲ ಬಾರಿಗೆ 1985ರಲ್ಲಿ ಡಿ.ಕೆ.ಶಿವಕುಮಾರ್ ಚುನಾವಣೆ ಎದುರಿಸಿದರು. [] ಜನತಾ ಪಕ್ಷದ ಎಚ್.ಡಿ.ದೇವೇಗೌಡ ವಿರುದ್ಧ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು.

1987ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದರು. 1989ರಲ್ಲಿ ಸಾತನೂರು ಕ್ಷೇತ್ರದಲ್ಲಿ ಪುನಃ ಚುನಾವಣೆಗೆ ಸ್ಪರ್ಧಿ 10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

2004ರಲ್ಲಿಯೂ ಸಾತನೂರು ಕ್ಷೇತ್ರದಲ್ಲಿ ಗೆಲುವು ದಾಖಲಿಸಿದರು. ಕ್ಷೇತ್ರ ಪುನರ್‌ ವಿಂಗಡನೆ ಬಳಿಕ ಸಾತನೂರು ಕನಕಪುರ ಕ್ಷೇತ್ರದಲ್ಲಿ ವಿಲೀನಗೊಂಡಿತು. 2008ರಲ್ಲಿ ಕನಕಪುರದಿಂದ 7,600, 2013ರ ಚುನಾವಣೆಯಲ್ಲಿ ಜೆಡಿಎಸ್‌ ನಾಯಕ ಪಿ.ಜಿ.ಆರ್.ಸಿಂಧ್ಯಾ ವಿರುದ್ಧ 31,487 ಮತಗಳ ಅಂತರದಿಂದ ಗೆದ್ದಿದ್ದಾರೆ.

  • ಎಸ್.ಬಂಗಾರಪ್ಪ ಮತ್ತು ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಮೊದಲ ಬಾರಿಗೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.
  • ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದರು.
  • ಬಂಧಿಖಾನೆ, ಸಹಕಾರ, ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ.
  • ೧೯೮೫ರಿಂದ ೨೦೦೧ರ ತನಕ ಕೆಸಿಸಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
  • ೨೦೦೧ರಲ್ಲಿ ಎಐಸಿಸಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
  • 2013ರ ಚುನಾವಣೆಯಲ್ಲಿ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರು.
  • 2018ರ ವಿಧಾನಸಭೆ ಚುನಾವಣೆಗೆ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರು. []
  • ಪ್ರಸ್ತುತ ೨೦೧೮ರಲ್ಲಿ ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾರೆ.

ಉಲ್ಲೇಖಗಳು