ವಿಷಯಕ್ಕೆ ಹೋಗು

ಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೬:೧೧, ೨೭ ಡಿಸೆಂಬರ್ ೨೦೧೦ ರಂತೆ Raaghavam (ಚರ್ಚೆ | ಕಾಣಿಕೆಗಳು) ಇವರಿಂದ (Translated from http://en.wikipedia.org/wiki/Lal_Bagh (revision: 398379416) using http://translate.google.com/toolkit with about 97% human translations.)
ಮಂಗಳೂರಿನಲ್ಲಿರುವ, ಲಾಲ್‌ಬಾಗ್‌ಗಾಗಿ ಲಾಲ್‌ಬಾಗ್, ಮಂಗಳೂರು ನೋಡಿ.
ಬಾಂಗ್ಲಾದೇಶಢಾಕಾದಲ್ಲಿರುವ ಮೊಘಲ್ ಕೋಟೆಗಾಗಿ, ಲಾಲ್‌ಬಾಗ್ ಕೋಟೆ ನೋಡಿ.
ಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರು
Lal Bagh
neighborhood

ಲಾಲ್‌ಬಾಗ್' (ಕನ್ನಡ: ಲಾಲ್‌ಬಾಗ್) ಅಥವಾ ಲಾಲ್‌ಬಾಗ್ ಸಸ್ಯೋದ್ಯಾನ' , ಇಂಗ್ಲೀಶ್‌ಗೆ ಶಬ್ದಶಃ ಅನುವಾದಿಸಿದಾಗ; "ದ ರೆಡ್ ಗಾರ್ಡನ್" ಎಂದಾಗುತ್ತದೆ. ಪ್ರಸಿದ್ಧವಾದ ಈ ಸಸ್ಯೋದ್ಯಾನ ಭಾರತಬೆಂಗಳೂರಿನಲ್ಲಿದೆ. ಈ ಉದ್ಯಾನವನವನ್ನು ನಿರ್ಮಿಸಲು ಮೈಸೂರಿನ ಆಡಳಿತ ನಡೆಸುತ್ತಿದ್ದ ಹೈದರಾಲಿ ಸೂಚಿಸಿದ್ದನು. ಇದು ಪ್ರಸಿದ್ಧ ಗಾಜಿನ ಮನೆಯನ್ನು ಹೊಂದಿದ್ದು ಪ್ರತಿ ವರ್ಷ ಇಲ್ಲಿ ಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತದೆ. ಇದಲ್ಲದೇ ಮತ್ಸ್ಯಾಗಾರ ಮತ್ತು ಕೆರೆಯನ್ನು ಹೊಂದಿದ್ದು ಬೆಂಗಳೂರಿನಲ್ಲಿರುವ ಒಂದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ.[]

ಇತಿಹಾಸ

ರಾತ್ರಿ ಸಮಯದಲ್ಲಿ ಲಾಲ್‌ಬಾಗ್‌ನ ಗಾಜಿನ ಮನೆ

1760ರಲ್ಲಿ ಹೈದರಾಲಿಯು ಈ ಸಸ್ಯೋದ್ಯಾನವನ್ನು ನಿರ್ಮಿಸಲು ಸೂಚಿಸಿದ್ದನು, ಆದರೆ ಇದನ್ನು ಈತನ ಮಗ ಟಿಪ್ಪು ಸುಲ್ತಾನ್ ಪೂರ್ಣಗೊಳಿಸಿದನು. ಹೈದರಾಲಿಯು ಆತನ ಅಧಿಕಾರಾವಧಿಯಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದ ಮೊಘಲ್ ಉದ್ಯಾನಗಳ ಮಾದರಿಯಲ್ಲಿ ಈ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಿದ್ದನು. ಹೈದರಾಲಿ ಈ ಪ್ರಸಿದ್ಧ ಸಸ್ಯೋದ್ಯಾನಗಳ ಯೋಜನೆಯನ್ನು ನಿರ್ಮಿಸುವ ಯೋಜನೆ ಹಮ್ಮಿಕೊಂಡಿದ್ದನು, ಮತ್ತು ಇವನ ಮಗ ಹಲವಾರು ದೇಶಗಳಿಂದ ಸಸ್ಯಗಳು ಮತ್ತು ಮರಗಳನ್ನು ಆಮದು ಮಾಡಿಕೊಂಡು ತೋಟಗಾರಿಕೆಯ ಸಂಪತ್ತನ್ನು ಹೆಚ್ಚಿಸಿದನು. ಹೈದರಾಲಿಯು ತೋಟಗಾಗಿಕೆಯಲ್ಲಿ ಉತ್ತಮ ತಿಳುವಳಿಕೆ ಹೊಂದಿದ್ದ ತಿಗಳ ಸಮುದಾಯದ ಜನರನ್ನು ಈ ಕೆಲಸಕ್ಕಾಗಿ ನೇಮಿಸಿದ್ದನು. 18ನೇಯ ಶತಮಾನದಿಂದ ಲಾಲ್‌ಬಾಗ್ ಉದ್ಯಾನವನ್ನು ನಿರ್ಮಿಸಲು ಪ್ರಾರಂಭಿಸಲಾಗಿತ್ತು ಮತ್ತು ವರ್ಷಗಳ ನಂತರ ಭಾರತದ ಮೊದಲ ಹುಲ್ಲಿನ-ಗಡಿಯಾರ ಮತ್ತು ಈ ಉಪಖಂಡಗಳಲ್ಲಿದ್ದಂತಹ ಅಪರೂಪದ ಮರಗಳ ದೊಡ್ಡದಾದ ಸಂಗ್ರಹವನ್ನು ಹೊಂದಿತು.

1874ರಲ್ಲಿ, ಲಾಲ್‌ಬಾಗ್ 45 acres (180,000 m2) ಪ್ರದೇಶವನ್ನು ಹೊಂದಿತ್ತು. 1889ರಲ್ಲಿ, ಪೂರ್ವ ಭಾಗಕ್ಕೆ 30 ಎಕರೆ ಸೇರ್ಪಡೆಯಾಯ್ತು, 1891ರಲ್ಲಿ ಕೆಂಪೆಗೌಡ ಗೋಪುರ ಹೊಂದಿರುವ ಬಂಡೆಯ ಜೊತೆಗೆ 13 ಎಕರೆ ಮತ್ತು 1894ರಲ್ಲಿ ಹೆಚ್ಚುವರಿಯಾಗಿ ಪೂರ್ವದ ಬಂಡೆಯ ಕೆಳಗಿನ 94 ಎಕರೆ ಸೇರಿಕೊಂಡು ಒಟ್ಟು 188 188 acres (760,000 m2) ಹೊಂದಿತ್ತು.[] ಗಾಜಿನ ಮನೆ ನಿರ್ಮಾಣಕ್ಕೆ ಲಂಡನ್ನಿನ ಕ್ರಿಸ್ಟಲ್ ಪ್ಯಾಲೇಸ್ ಮಾದರಿಯಾಗಿದ್ದು, ಇದಕ್ಕೆ ನವೆಂಬರ್ 30 1898ರಂದು ರಾಜಕುಮಾರ ಅಲ್ಬರ್ಟ್ ವಿಕ್ಟರ್ ಅಡಿಗಲ್ಲು ಹಾಕಿದರು, ಲಾಲ್‌ಬಾಗಿನ ನಂತರದ ಮೇಲ್ವಿಚಾರಕ ಜೇಮ್ಸ್ ಕ್ಯಾಮರಾನ್ ಇದನ್ನು ನಿರ್ಮಿಸಿದರು.[]

ಸ್ಥೂಲ ನೋಟ

ಲಾಲ್‌ಬಾಗ್‌ನಲ್ಲಿನ ಗಾಜಿನ ಮನೆ

ಲಾಲ್‌ಬಾಗ್ 240 ಎಕರೆ ಪ್ರದೇಶವನ್ನು ಹೊಂದಿರುವ (971,000 ಚದರ ಅಡಿ. - ಸುಮಾರು 1 ಕಿಮೀ².) ಉದ್ಯಾನವಾಗಿದ್ದು ದಕ್ಷಿಣ ಬೆಂಗಳೂರಿನಲ್ಲಿದೆ. ಹಲವಾರು ಸಂಖ್ಯೆಯಲ್ಲಿ ಪುಷ್ಪ ಪ್ರದರ್ಶನ ನಡೆಸುತ್ತಿದ್ದು, ಗಣರಾಜ್ಯ ದಿನದಂದು (ಜನವರಿ 26) ವಿಶೇಷ ಪ್ರದರ್ಶನವಿರುತ್ತದೆ. ಈ ಉದ್ಯಾನವು 1,000ಕ್ಕಿಂತ ಹೆಚ್ಚಿನ ಫ್ಲೋರಾ ಜಾತಿಯ ಗಿಡಗಳನ್ನು ಹೊಂದಿದೆ. ಇದಲ್ಲದೇ ಉದ್ಯಾನವು 100ಕ್ಕಿಂತ ಹೆಚ್ಚು ವರ್ಷ ವಯಸ್ಸಾದ ಮರಗಳನ್ನು ಹೊಂದಿದೆ.[][]

ಉದ್ಯಾನವು ಬೆಂಗಳೂರಿನ ನಿರ್ಮಾತೃ ಕೆಂಪೆಗೌಡರ ಪ್ರತಿಮೆಯನ್ನು ಹೊಂದಿದೆ. ಉದ್ಯಾನವು ಪರ್ಷಿಯಾ, ಅಫಘಾನಿಸ್ತಾನ ಮತ್ತು ಫ್ರಾನ್ಸ್‌ನಿಂದ ತರಿಸಲ್ಪಟ್ಟ ಅಪರೂಪದ ಹಲವಾರು ಸಸ್ಯಗಳ ಜಾತಿಗಳನ್ನು ಹೊಂದಿದೆ. ನೀರಾವರಿಗಾಗಿ ಅನೇಕ ವಿಧವಾದ ವ್ಯವಸ್ಥೆ ಹೊಂದಿದ್ದು, ಉದ್ಯಾನವನ್ನು ಹುಲ್ಲುಹಾಸುಗಳು, ಹೂವಿನ ಪಾತಿಗಳು, ಕಮಲದ ಕೆರೆ ಮತ್ತು ಕಾರಂಜಿಗಳಿಂದ ತುಂಬಾ ಸದಭಿರುಚಿಯಿಂದ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಎಲ್ಲಾ ದೇಶಗಳ ಹಳೆಯದಾದ ಮರಗಳನ್ನು ಗುರುತಿಸಲು ಸುಲಭವಾಗುವಂತೆ ಲೇಬಲ್‌ಗಳನ್ನು ಅಂಟಿಸಲಾಗಿದೆ. ಲಾಲ್‌ಬಾಗ್ ಬಂಡೆಯು 3000 ವರ್ಷ ಹಳೆಯದಾದ ಭೂಮಿಯ ಮೇಲಿರುವ ಬಂಡೆಯಾಗಿದೆ, ಇದು ಕೂಡ ಜನರಿಗೆ ಆಕರ್ಷಣೆಯ ತಾಣವಾಗಿದೆ.[]

ಲಾಲ್‌ಬಾಗ್ ಉದ್ಯಾನದ ಮಾದರಿಗೆ ಮೂಲ

ಕರ್ನಾಟಕದ ತೂಮಕೂರಿನ ಎನ್‌ಎಚ್4 ಸಮೀಪದ ಶಿರಾದಲ್ಲಿದ್ದ ಮೊಘಲ್ ಉದ್ಯಾನವೇ ಲಾಲ್‌ಬಾಗ್ ಉದ್ಯಾನದ ವಿನ್ಯಾಸಕ್ಕೆ ಮೂಲವಾಗಿದ್ದು ಶಿರಾವು ಬೆಂಗಳೂರಿನಿಂದ 120 ಕಿಲೋ ಮೀಟರ್ ದೂರದಲ್ಲಿದೆ. ಇದನ್ನು ಎ‌ಎಸ್‌ಐ (ಭಾರತೀಯ ಪುರಾತತ್ವ ಇಲಾಖೆ)ಮತ್ತು ಇತರೆ ಐತಿಹಾಸಿಕ ದಾಖಲೆಗಳು ಬೆಂಬಲಿಸಿವೆ. ಬ್ರಿಟೀಷ್ ರಾಜ್‌ಗಿಂತ ಮೊದಲಿನ ಸಮಯದಲ್ಲಿ ದಕ್ಖನ್ ಪ್ರಸ್ಥ ಭೂಮಿಯ ದಕ್ಷಿಣ ಭಾಗದಲ್ಲಿರುವ ಶಿರಾವು ಯುದ್ಧ ತಾಂತ್ರಿಕವಾಗಿ ಮೊಘಲ್ ಸಾಮ್ರಾಜ್ಯದ ಪ್ರಮುಖ "ಸುಬಾ" (ಪ್ರಾಂತ್ಯ) ಆಗಿತ್ತು.[]

ಪ್ರವಾಸೋದ್ಯಮ ಮತ್ತು ಪರಿಸರ ಅಭಿವೃದ್ಧಿ

ಲಾಲ್‌ಬಾಗ್‌ನಲ್ಲಿರುವ ಕೆರೆಯ ದೃಶ್ಯ.

ಲಾಲ್‌ಬಾಗ್ ವರ್ಷಪೂರ್ತಿ ಪ್ರತಿದಿನ ಬೆಳಿಗ್ಗೆ 6 ಘಂಟೆಯಿಂದ ಸಂಜೆ 7.00 ಘಂಟೆಯವರೆಗೆ ತೆರೆದಿರುತ್ತದೆ. ವಾಯುವಿಹಾರಕ್ಕೆ ಬರುವವರಿಗೆ, ಪ್ರವಾಸಿಗರಿಗೆ, ಮತ್ತು ದೇಹಾರೋಗ್ಯ ಕಾಪಾಡಿಕೊಳ್ಳ ಬಯಸುವರಿಗೆ ಬೆಳಿಗ್ಗೆ 6 ರಿಂದ 9ರವರೆಗೆ ಮತ್ತು ಸಂಜೆ 6ರಿಂದ 7ರವರೆಗೆ ಉಚಿತ ಅವಕಾಶವಿದ್ದು ಉಳಿದ ಅವಧಿಯಲ್ಲಿ ರೂ. 10/- ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ ಮಕ್ಕಳಿಗೆ ಮತ್ತು ಅಂಗವಿಕಲರಿಗೆ ದಿನ ಪೂರ್ತಿ ಉಚಿತ ಪ್ರವೇಶವಿದೆ.[]

ಜನರಲ್ಲಿ ವಿವಿಧ ಬಗೆಯ ಹೂವುಗಳ ಬಗ್ಗೆ ಪರಿಚಯಿಸಲು ಮತ್ತು ಸಸ್ಯ ಸಂರಕ್ಷಣೆಗೆ ಮತ್ತು ಗಿಡ ಬೆಳಸಲು ಸಾರ್ವಜನಿಕರಲ್ಲಿ ಆಸಕ್ತಿ ಉಂಟು ಮಾಡಲು ಪ್ರತಿವರ್ಷ ಪುಷ್ಫ ಪ್ರದರ್ಶನ ಏರ್ಪಡಿಸಲಾಗುತ್ತದೆ .[].

ಪ್ರತಿ ತಿಂಗಳ ಎರಡನೇಯ ಮತ್ತು ನಾಲ್ಕನೇಯ ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ)" ಜನಪದ ಜಾತ್ರೆ"ಯನ್ನು ನಡೆಸಲಾಗುತ್ತದೆ, ಇದನ್ನ ಕರ್ನಾಟಕ ಸರ್ಕಾರವು ಆಯೋಜಿಸುತ್ತದೆ. ಜನಪದ ಜಾತ್ರೆಯಲ್ಲಿ ಕರ್ನಾಟಕದ ಎಲ್ಲಾ ಭಾಗಗಳಿಂದಲು ಬಂದ ತಂಡಗಳು ಮುಖ್ಯವಾಗಿ ಜಾನಪದ ನೃತ್ಯ, ಹಾಡು ಮತ್ತು ನಾಟಕಗಳನ್ನು ಪ್ರದರ್ಶಿಸುತ್ತಾರೆ. ಮುಖ್ಯವಾಗಿ ಈ ಪ್ರದರ್ಶನವು ಕರ್ನಾಟಕದ ಸಾಂಸ್ಕೃತಿಕ ಜಾನಪದ, ಸಾಂಪ್ರದಾಯಿಕ ತೊಡುಗೆಗಳು ಮತ್ತು ಸಂಗೀತ ವಾದ್ಯಗಳನ್ನು ಪ್ರದರ್ಶಿಸಲಾಗುತ್ತದೆ.[][]

‌ಲಾಲ್‌ಬಾಗ್‌ನಲ್ಲಿರುವ ಕೆಂಪೆಗೌಡ ಗೋಪುರ

ಉದ್ಯಾನದಲ್ಲಿರುವ ಪೆನಿನ್ಸುಲಾರ್ ನೈಸ್ ರಚನೆಯಾಗಿರುವ ಭೌಗೋಳಿಕ ಸ್ಮಾರಕವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಸ್ಮಾರಕವನ್ನು ಭಾರತೀಯ ಸರ್ವೇಕ್ಷಣಾ ಇಲಾಖೆಯು ಲಾಲ್‌ಬಾಗ್ ಬೆಟ್ಟದಲ್ಲಿ 3000 ಸಾವಿರ ಮಿಲಿಯನ್ ವರ್ಷ ಹಳೆಯ ಪೆನಿನ್ಸುಲರ್ ನೈಸ್ ಬಂಡೆಯ ಮೇಲೆ ನಿರ್ಮಿಸಿದೆ. IIನೇಯ ಕೆಂಪೆಗೌಡರ ನಾಲ್ಕು ಪ್ರತಿಮೆಯಲ್ಲಿ ಇದು ಒಂದಾಗಿದೆ,ಇದು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ, ಮೇಲಿನ ಚಿತ್ರದಲ್ಲಿ ಇದನ್ನು ಕಾಣಬಹುದು. ಈ ಗೋಪುರದ ತುದಿಯಿಂದ ಬೆಂಗಳೂರಿನ ಪೂರ್ತಿ ಚಿತ್ರಣ ಕಂಡುಬರುತ್ತದೆ.[].[]

ಕೆಂಪೆಗೌಡ ಗೋಪುರದ ದೃಶ್ಯ

ಲಾಲ್‌ಬಾಗ್ ಉಳಿಸಿ ಆಂದೋಲನ

ಬೆಂಗಳೂರು ಮೆಟ್ರೋ ರೈಲಿಗಾಗಿ ನಡೆಯುತ್ತಿರುವ ಕಾರ್ಯದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್)ವು ಲಾಲ್‌ಬಾಗಿನ ಒಂದು ಭಾಗದಲ್ಲಿ ಸುಮಾರು 1,135 ಮೀಟರ್2 ವಶಪಡಿಸಿಕೊಂಡು ಅಲ್ಲಿನ ಮರಗಳನ್ನು ಕಡಿದಿದೆ. ಏಪ್ರಿಲ್ 13 ಮತ್ತು 14, 2009ರಂದು, ಲಾಲ್‌ಬಾಗ್‌ನ 500 ಮೀಟರ್ ಗೋಡೆಯನ್ನು ಕೆಡಹಿ ಹಲವಾರು ನೀಲಗಿರಿ ಮರಗಳನ್ನು ಕಡಿಯಲಾಗಿದೆ.

ನಾಗರಿಕರು ತಕ್ಷಣವೆ ಇದನ್ನು ವಿರೋಧಿಸಿದರು ಮತ್ತು ಆಂದೋಲನವು ಸುಮಾರು ವಾರಕ್ಕೊಮ್ಮೆಯಂತೆ ಮುಂದುವರೆಯುತ್ತಿದೆ.ಸರ್ಕಾರವು ಬೆಂಗಳೂರಿನ ಹಸಿರು ಮತ್ತು ಸಾರ್ವಜನಿಕ ಉದ್ಯಾನ ಸ್ಥಳಗಳ ಸಂರಕ್ಷಣೆಗೆ ಇರುವ ಯಾವುದೇ ಕಾನೂನಿಗೂ ಗಮನ ಹರಿಸದೆ ಭೂಮಿ ವಶ ಪಡಿಸಿಕೊಂಡಿರುವುದು ಮತ್ತು ಅಕ್ರಮವಾಗಿ ಮರ ಕಡಿಯುವುದರ ವಿರುದ್ಧ ಆಂದೋಲನ ನಡೆಯುತ್ತಿದೆ.

ಸಂಪರ್ಕಶೀಲತೆ

ಮೆಜೆಸ್ಟಿಕ್ ಮತ್ತು ಶಿವಾಜಿನಗರದಿಂದ ಹಲವಾರು ಬಿಎಂಟಿಸಿ ಬಸ್ಸುಗಳ ಸಂಪರ್ಕವಿದೆ. ಜಯನಗರ ಮತ್ತು ಬನಶಂಕರಿಗೆ ಹೋಗುವ ಎಲ್ಲಾ ಬಸ್ಸುಗಳು ಲಾಲ್‌ಬಾಗ್‌ನ ನಾಲ್ಕು ದ್ವಾರಗಳಲ್ಲಿ ಯಾವುದಾದರೂ ಒಂದರ ಮೂಲಕ ಹಾದು ಹೋಗುತ್ತವೆ.

ಉಲ್ಲೇಖಗಳು

  1. ೧.೦ ೧.೧ ೧.೨ ೧.೩ ೧.೪ "Lal Bagh website". Retrieved 1-3-2009. {{cite web}}: Check date values in: |accessdate= (help); Text "http://www.lalbaghgardens.com" ignored (help)
  2. ೨.೦ ೨.೧ "A jewel in Lalbagh's crown". Deccan Herald. Retrieved 23 November 2010.
  3. ಬೊ, ಪ್ಯಾಟ್ರಿಕ್ (2002) ಚಾರ್ಲ್ಸ್ : ಉದ್ಯಾನ Superintendent to Two Indian Maharajas. ಗಾರ್ಡನ್ ಹಿಸ್ಟರಿ 30(1):84-94
  4. Benjamin Rice, Lewis (1897). Mysore: A Gazetteer Compiled for the Government, Volume I, Mysore In General, 1897a. Westminster: Archibald Constable and Company. p. 834.
  5. "Lal Bagh Flower Show 2008 Ticket Booking". Retrieved 1-3-2009. {{cite web}}: Check date values in: |accessdate= (help)
  6. "Mysore Horticulturtal Society, Bangalore". Retrieved 1-3-2009. {{cite web}}: Check date values in: |accessdate= (help)
  7. "Peninsular Gneiss". Geological Survey of India. Retrieved 27-2-2009. {{cite web}}: Check date values in: |accessdate= (help)
  8. National Geological Monuments, pages 96, Peninsular Gneiss,page29-32. Geological Survey of India,27, Jawaharlal Nehru Road, Kolkatta-700016. 2001. ISSN 0254-0436.


ಬಾಹ್ಯ ಕೊಂಡಿಗಳು