ವಿಷಯಕ್ಕೆ ಹೋಗು

ದುರ್ಯೋಧನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೨೦:೦೯, ೧೮ ಅಕ್ಟೋಬರ್ ೨೦೨೪ ರಂತೆ Pavanaja (ಚರ್ಚೆ | ಕಾಣಿಕೆಗಳು) ಇವರಿಂದ (Reverted edit by 103.100.151.2 (talk) to last revision by Liona Fernandes)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ದುರ್ಯೋಧನ
ಯುವರಾಜ ದುರ್ಯೋಧನ
ಚಿತ್ರ:Duryodhana showing his army to Drona.jpg
ಗುರು ದ್ರೋಣಾಚಾರ್ಯರೊಂದಿಗೆ ದುರ್ಯೋಧನ
ಪೂರ್ವಾಧಿಕಾರಿ ಯುಧಿಷ್ಠಿರ
ರಾಣಿ ಭಾನುಮತಿ ಮತ್ತು ಮಯೂರಿ
ಸಂತಾನ
ಲಕ್ಷಣ ಕುಮಾರ ,ಇತರರು...
ರಾಜ ವಂಶ ಕುರು
ತಂದೆ ಧೃತರಾಷ್ಟ್ರ
ತಾಯಿ ಗಾಂಧಾರಿ
ಜನನ ಹಸ್ತಿನಾಪುರ
ಮರಣ ಕುರುಕ್ಷೇತ್ರ
ಧರ್ಮ ಹಿಂದೂ, ಕ್ಷತ್ರಿಯ

ದುರ್ಯೋಧನ (ಸಂಸ್ಕೃತ:दुर्योधन)ಮಹಾಭಾರತ ಕಥಾನಕದಲ್ಲಿ ಒಂದು ಪ್ರಮುಖ ಪಾತ್ರ.ಧೃತರಾಷ್ಟ್ರ ಮತ್ತು ಗಾಂಧಾರಿಯಿಂದ ನೂರು ಜನ ಪುತ್ರರು ಒಬ್ಬಳು ಪುತ್ರಿ. ಇವರೇ ಕೌರವರು ಎಂದು ಪ್ರಸಿದ್ಧರಾದವರು. ಮಗಳು ದುಶ್ಶಲೆ . ಇವರಲ್ಲಿ ದುರ್ಯೋಧನ ಮತ್ತು ದುಶ್ಶಾಸನ ಮೊದಲಿಬ್ಬರು.

  • ದುರ್ಯೋಧನ ದೃತರಾಷ್ಟ್ರ ಹಾಗು ಗಾಂಧಾರಿಯರಿಗೆ ಜನಿಸಿದ ನೂರು ಪುತ್ರರಲ್ಲಿ ಹಿರಿಯವನು. ಹಸ್ತಿನಾಪುರದ ಕಾರ್ಯಕಾರಿ ಮಹಾರಾಜನ (ದೃತರಾಷ್ಟ್ರನ) ಹಿರಿಯ ಮಗನಾದರೂ, ಕಾಡಿನ ವಾಸದಿಂದ ಹಿಂದಿರುಗಿದ ಪಾಂಡವರ ಕಾರಣದಿಂದ ಯುವರಾಜನಾಗುವ ಅವಕಾಶ ಕೈ ತಪ್ಪಿ ಹೋಗುತ್ತದೆ. ಈ ಕಾರಣದಿಂದ ದುರ್ಯೋಧನ ಮನದಲ್ಲಿ ಪಾಂಡವರ ವಿರುದ್ಧ ದ್ವೇಷದ ಬೀಜ ಮೊಳಕೆ ಒಡೆಯುತ್ತದೆ. ಕರ್ಣನು ದುರ್ಯೋಧನನ ಆಪ್ತಮಿತ್ರ. ಪಾಂಡವರನ್ನು ವನವಾಸಕ್ಕೆ ಅಟ್ಟಿದ ನಂತರ ದುರ್ಯೋಧನ, ಕರ್ಣನ ಗಮನಾರ್ಹ ನೆರವಿನೊಂದಿಗೆ, ವಿಶ್ವದ ಎಲ್ಲ ದಿಕ್ಕಿನ ಎಲ್ಲ ರಾಜರನ್ನು ಮಣಿಸಿ, ದಿಗ್ವಿಜಯ ಯಾತ್ರೆ ನಡೆಸಿ, ಚಕ್ರವರ್ತಿಯಾಗುತ್ತಾನೆ.